Tag: CRISIL

  • ಒಂದೇ ವಾರದಲ್ಲಿ 6 ಬಾರಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ..!

    ಒಂದೇ ವಾರದಲ್ಲಿ 6 ಬಾರಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ..!

    ನವದೆಹಲಿ: ಪೆಟ್ರೋಲ್, ಡಿಸೇಲ್ ದರ ಸತತ 6ನೇ ದಿನವೂ ಏರಿಕೆಯಾಗಿದ್ದು, ಈ ಮೂಲಕ ಕಳೆದ ಒಂದೇ ವಾರದಲ್ಲಿ 6ನೇ ಬಾರಿಗೆ ಏರಿಕೆಯಾಗಿದೆ. ಸೋಮವಾರವೂ ಪ್ರತಿ ಲೀಟರ್ ಪೆಟ್ರೋಲ್‌ಗೆ 30 ಪೈಸೆ, ಡೀಸೆಲ್ 35 ಪೈಸೆ ಏರಿಕೆಯಾಗಿದ್ದು, ಒಂದು ವಾರದಲ್ಲಿ 4.40ರೂ. ನಷ್ಟು ಏರಿಕೆಯಾಗಿರುವುದು ಕಂಡುಬಂದಿದೆ.

    petrol

    ಕಳೆದ ನಾಲ್ಕೂವರೆ ತಿಂಗಳ ಸುದೀರ್ಘ ವಿರಾಮದ ನಂತರ ಮಾರ್ಚ್ 22ರಂದು ಪೆಟ್ರೋಲ್ ಬೆಲೆ ಏರಿಕೆ ಕಂಡಿದ್ದು ಒಂದೇ ವಾರಕ್ಕೆ ೬ನೇ ಬಾರಿ ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 104.76ರೂ. ಆಗಿದ್ದರೆ ಡೀಸೆಲ್ ಬೆಲೆ 89 ರೂ. ತಲುಪಿದೆ. ಇದನ್ನೂ ಓದಿ: ವಿಮಾನದ ಇಂಧನಕ್ಕಿಂತಲೂ ದುಬಾರಿ ಆಯ್ತು ಪೆಟ್ರೋಲ್‌ ಬೆಲೆ

    ದೆಹಲಿಯಲ್ಲಿ 99.11ರೂ. ಇದ್ದ ಪೆಟ್ರೋಲ್ ದರವು 99.41 ರೂ., 90.42 ರೂ. ಇದ್ದ ಡೀಸೆಲ್ ಬೆಲೆ 35 ಪೈಸೆ ಏರಿಕೆಯಿಂದ 90.77 ರೂ.ಗೆ ಮಾರಾಟವಾಗುತ್ತಿದೆ. ಮೊದಲ 4 ದಿನಗಳಲ್ಲಿ 80- 84 ಪೈಸೆಗೆ ಎರಿಕೆಯಾಗಿದ್ದ ದರ, ಸೋಮವಾರ 30 – 35 ಪೈಸೆಗೆ ಏರಿಕೆಯಾಗಿದೆ. ಇದರಿಂದ ಪೆಟ್ರೋಲ್ ಬೆಲೆ ೪ ರೂ. ಹಾಗೂ ಡೀಸೆಲ್ ಬೆಲೆ ೪.೧೦ ರೂ. ಹೆಚ್ಚಾಗಿರುವುದು ಕಂಡುಬಂದಿದೆ.

    petrol

    ಪಂಚರಾಜ್ಯ ಚುನಾವಣಾ ವೇಳೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗುವುದನ್ನು ತಡೆಹಿಡಿಯಲಾಗಿದ್ದು, ಚಿಲ್ಲರೆ ವ್ಯಾಪಾರಿಗಳು ಒಟ್ಟಾಗಿ 2.25 ಶತಕೋಟಿ (19,000 ಕೋಟಿ ರೂ.) ಆದಾಯ ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ಪೆಟ್ರೋಲ್ ಬೆಲೆ ಏರಿಕೆ ಮಾಡುವುದು ಅವಶ್ಯಕವಾಗಿದೆ. ಅಲ್ಲದೆ ಪ್ರತಿ ಬ್ಯಾರಲ್‌ನ ಕಚ್ಚಾತೈಲ ದರ 100 ರಿಂದ 110 ಡಾಲರ್‌ಗೆ ಏರಿಕೆಯಾದರೆ ಪ್ರತಿ ಲೀಟರ್‌ಗೆ 15 ರಿಂದ 20 ರೂ. ಹೆಚ್ಚಳವಾಗಲಿದೆ. ಹಾಗೆಯೇ ಚಿಲ್ಲರೆ ವ್ಯಾಪಾರಿಗಳ ದರದಲ್ಲಿ ಲೀಟರ್‌ಗೆ 9 ರಿಂದ 12 ರೂ. ಹೆಚ್ಚಾಗಲಿದೆ ಎಂದು ಸಿಆರ್‌ಐಎಸ್‌ಐಎಲ್ ಸಂಶೋಧನೆ ಹೇಳಿದೆ. ಇದನ್ನೂ ಓದಿ: ಮುಂದಿನ 2 ವರ್ಷದಲ್ಲಿ ಎಲೆಕ್ಟ್ರಿಕ್‌ ವಾಹನಗಳ ಬೆಲೆ ಪೆಟ್ರೋಲ್‌ ವಾಹನದಷ್ಟೇ ಆಗಲಿದೆ: ಗಡ್ಕರಿ