Tag: Criminals

  • ಅಕ್ರಮ ವಲಸಿಗರ ಬಗ್ಗೆ ಮೃದು ಧೋರಣೆ ತೋರುವ ಸಮಯ ಮುಗಿದಿದೆ: ಕನ್ನಡಿಗನ ಹತ್ಯೆ ಬಗ್ಗೆ ಟ್ರಂಪ್‌ ರಿಯಾಕ್ಷನ್‌

    ಅಕ್ರಮ ವಲಸಿಗರ ಬಗ್ಗೆ ಮೃದು ಧೋರಣೆ ತೋರುವ ಸಮಯ ಮುಗಿದಿದೆ: ಕನ್ನಡಿಗನ ಹತ್ಯೆ ಬಗ್ಗೆ ಟ್ರಂಪ್‌ ರಿಯಾಕ್ಷನ್‌

    ವಾಷಿಂಗ್ಟನ್‌: ಅಕ್ರಮ ವಲಸಿಗ ಅಪರಾಧಿಗಳ (illegal immigrant criminals) ಬಗ್ಗೆ ಮೃದು ಧೋರಣೆ ತೋರುವ ಸಮಯ ನಮ್ಮ ಆಡಳಿಯದಲ್ಲಿ ಮುಗಿದಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಹೇಳಿದ್ದಾರೆ.

    ಇತ್ತೀಚೆಗೆ ಡಲ್ಲಾಸ್‌ ನಗರದಲ್ಲಿ (Dallas City) ನಡೆದ ಕರ್ನಾಟಕ ಮೂಲದ ಚಂದ್ರ ನಾಗಮಯ್ಯಲ್ಲಯ್ಯ ಶಿರಚ್ಛೇದದ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ತಮ್ಮ ಸೋಷಿಯಲ್‌ ಮೀಡಿಯಾ ವೇದಿಕೆ ಟ್ರುತ್‌ ಸೋಷಿಯಲ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ. ಪ್ರಕರಣದ ಆರೋಪಿಯ ಮೇಲೆ ಫಸ್ಟ್‌ ಗ್ರೇಡ್‌ನ ಕೊಲೆ ಆರೋಪ ಹೊರಿಸಲಾಗುವುದು. ಜೊತೆಗೆ ಕಾನೂನಿನ ಪೂರ್ಣ ಪ್ರಮಾಣದಲ್ಲಿ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಮೆರಿಕದಲ್ಲಿ ಪತ್ನಿ, ಮಗನ ಮುಂದೆ ಕರ್ನಾಟಕದ ವ್ಯಕ್ತಿಯ ಶಿರಚ್ಛೇದ – ಮೈ ನಡುಗಿಸುವ ವಿಡಿಯೋ ವೈರಲ್‌

    US Motel 2

    ಟೆಕ್ಸಾಸ್‌ನ ಡಲ್ಲಾಸ್‌ನಲ್ಲಿ ಚಂದ್ರ ನಾಯಮಲ್ಲಯ್ಯ ಅವರ ಹತ್ಯೆಯ ಕುರಿತಾದ ಭಯಾನಕ ವರದಿಗಳ ಬಗ್ಗೆ ನನಗೆ ತಿಳಿದಿದೆ. ಕ್ಯೂಬಾದ ಅನ್ಯಕೋಮಿನ ವ್ಯಕ್ತಿಯೊಬ್ಬ ನಾಗಮಲ್ಲಯ್ಯ ಅವರ ಪತ್ನಿ ಮತ್ತು ಮಗನ ಮುಂದೆಯೇ ಕ್ರೂರವಾಗಿ ಶಿರಚ್ಛೇದ ಮಾಡಿದ್ದಾನೆ. ಅವನು ನಮ್ಮ ದೇಶದಲ್ಲಿ ಎಂದಿಗೂ ಇರಬಾರದು ಎಂದಿದ್ದಾರೆ. ಇದನ್ನೂ ಓದಿ: 50% ತೆರಿಗೆ ಹಾಕುವುದು ಸುಲಭವಾಗಿರಲಿಲ್ಲ, ಇದರಿಂದಾಗಿಯೇ ಭಾರತದ ಜೊತೆ ಭಿನ್ನಾಭಿಪ್ರಾಯ ಶುರುವಾಯ್ತು: ಟ್ರಂಪ್‌

    ಅಲ್ಲದೇ ಕ್ಯೂಬನ್‌ ಪ್ರಜೆಯಾದ ದುಷ್ಟನನ್ನ ಕ್ಯೂಬಾ ದೇಶವೇ ತನ್ನಲ್ಲಿ ಇರಿಸಿಕೊಳ್ಳಲು ಬಯಲಿಲ್ಲ. ಹಾಗಾಗಿ ಈ ಹಿಂದೆ ಅಸಮರ್ಥ ಜೋ ಬೈಡನ್‌ ಅವರ ಅಡಿಯಲ್ಲಿ ನಮ್ಮ ದೇಶಕ್ಕೆ ಬಿಡುಗಡೆ ಮಾಡಿದರು. ಆದ್ರೆ ಈ ಅಕ್ರಮ ವಲಸೆ ಅಪರಾಧಿಗಳ ಬಗ್ಗೆ ಮೃದುವಾಗಿ ವರ್ತಿಸುವ ಸಮಯ ನನ್ನ ಮೃದು ಧೋರಣೆ ಈಗ ಮುಗಿದಿದೆ. ಬಂಧನದಲ್ಲಿರುವ ಈ ಅಪರಾಧಿಗೆ ಕಾನೂನಿನ ಅನ್ವಯ ಪೂರ್ಣ ಪ್ರಮಾಣದಲ್ಲಿ ವಿಚಾರಣೆಗೆ ಒಳಪಡಿಸುತ್ತೇವೆ. ಫಸ್ಟ್‌ ಗ್ರೇಡ್‌ ಕೊಲೆ ಆರೋಪದ ಮೇಲೆ ಕಠಿಣ ಶಿಕ್ಷೆ ವಿಧಿಸುವಂತೆ ಮಾಡುವುದಾಗಿಯೂ ಟ್ರಂಪ್‌ ಭರವಸೆ ನೀಡಿದ್ದಾರೆ.

    ಏನಿದು ತಲೆ ತುಂಡಾದ ಪ್ರಕರಣ?
    ಟೆಕ್ಸಾಸ್‌ನಲ್ಲಿ ಮೊಟೆಲ್‌ ಮ್ಯಾನೇಜರ್‌ ಆಗಿದ್ದ ಚಂದ್ರಮೌಳಿ ಬಾಬ್‌ ನಾಗಮಲ್ಲಯ್ಯ ಅವರನ್ನ ಕ್ಯೂಬನ್‌ ಪ್ರಜೆ ಕೊಬೋಸ್‌ ಮಾರ್ಟಿನೆಜ್‌ ಎಂಬಾತ ಭೀಕರವಾಗಿ ಹತ್ಯೆಗೈದಿದ್ದ ವಾಷಿಂಗ್‌ಮಿಷನ್‌ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ತಲೆ ತುಂಡು ಮಾಡಿ ಬಳಿಕ ಅದನ್ನುಕಸದ ಬುಟ್ಟಿಗೆ ಎಸೆದುಬಂದಿದ್ದ. ಇದು ಸ್ಥಳೀಯರನ್ನೂ ಬೆಚ್ಚಿ ಬೀಳುವಂತೆ ಮಾಡಿತ್ತು. ಇದನ್ನೂ ಓದಿ: ವಲಸೆ ವಿರೋಧಿಸಿ 1 ಲಕ್ಷಕ್ಕೂ ಅಧಿಕ ಜನರಿಂದ ಲಂಡನ್​ನಲ್ಲಿ ಮೆರವಣಿಗೆ – ಪ್ರತಿಭಟನೆ ಪೊಲೀಸರ ಮೇಲೆ ಹಲ್ಲೆ

  • ಯೋಗಿ 2.0 ಆಡಳಿತ: 2 ಎನ್‍ಕೌಂಟರ್ – ಪರಾರಿಯಾಗಿದ್ದ 50ಕ್ಕೂ ಹೆಚ್ಚು ಅಪರಾಧಿಗಳು ಶರಣು

    ಯೋಗಿ 2.0 ಆಡಳಿತ: 2 ಎನ್‍ಕೌಂಟರ್ – ಪರಾರಿಯಾಗಿದ್ದ 50ಕ್ಕೂ ಹೆಚ್ಚು ಅಪರಾಧಿಗಳು ಶರಣು

    ಲಕ್ನೋ: ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ 2ನೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದೇ ತಡ, ರಾಜ್ಯದಲ್ಲಿ 50 ಕ್ಕೂ ಹೆಚ್ಚು ಅಪರಾಧಿಗಳು ಪೊಲೀಸರಿಗೆ ಶರಣಾಗಿದ್ದಾರೆ ಅಂತ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ.

    ಇಬ್ಬರು ಅಪರಾಧಿಗಳನ್ನು ಎನ್‍ಕೌಂಟರ್ ಮಾಡಿ ಹತ್ಯೆ ಮಾಡಲಾಗಿದೆ. ಹಲವು ಅಪರಾಧಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: 89 ಜನರಿಗೆ ಕೊರೊನಾ, 85 ಜನ ಡಿಸ್ಚಾರ್ಜ್ – 4 ಸಾವು

    ತಲೆಮರೆಸಿಕೊಂಡಿದ್ದ ಅನೇಕ ಕ್ರಿಮಿನಲ್‍ಗಳು ನಾನು ಶರಣಾಗುತ್ತಿದ್ದೇನೆ. ದಯವಿಟ್ಟು ನನ್ನನ್ನು ಶೂಟ್ ಮಾಡಬೇಡಿ ಎಂಬ ಸಂದೇಶಗಳಿರುವ ಫಲಕಗಳನ್ನು ಕುತ್ತಿಗೆಗೆ ನೇತುಹಾಕಿಕೊಂಡು ಪೊಲೀಸ್ ಠಾಣೆಗೆ ಹಿಂತಿರುಗುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

    ಕಳೆದ ವಾರ ರೈಲ್ವೆ ನಿಲ್ದಾಣದ ಬಳಿಯ ಶೌಚಾಲಯದಲ್ಲಿ ಮಹಿಳೆಯ ಮೇಲೆ ಆರೋಪಿ ಅತ್ಯಾಚಾರ ಎಸಗಿ ಪರಾರಿಯಾಗಿದ್ದ ಆರೋಪಿ ಪತ್ತೆ ಕಾರ್ಯ ಕಷ್ಟವಾಗಿತ್ತು. ಹೀಗಾಗಿ ಆರೋಪಿಯ ಮನೆ ಮುಂದೆ ಬುಲ್ಡೋಜರ್ ನಿಲ್ಲಿಸಲಾಗಿತ್ತು. 24 ಗಂಟೆಯ ಒಳಗಡೆ ಶರಣಾಗದೇ ಇದ್ದರೆ ಮನೆಯನ್ನು ಕೆಡವಲಾಗುತ್ತದೆ ಎಂದು ಸಂದೇಶವನ್ನು ಅಧಿಕಾರಿಗಳು ರವಾನೆ ಮಾಡಿದ್ದರು. ಈ ವಿಚಾರ ತಿಳಿದಿದ್ದೇ ತಡ ಆರೋಪಿ ಠಾಣೆಗೆ ಬಂದು ಶರಣಾಗಿದ್ದ.

     

    ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೆ ಏರಿದ ಯೋಗಿ ಆದಿತ್ಯನಾಥ್ ಸರ್ಕಾರ ಅಕ್ರಮ ಕಟ್ಟಡಗಳೆಂದು ಬಹಳಷ್ಟು ಕಟ್ಟಡಗಳನ್ನು ಕೆಡವಿ ಹಾಕಿತ್ತು. ಯೋಗಿ ಈ ತೆರವು ಕ್ರಮಗಳನ್ನು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಟೀಕಿಸಿ ಬುಲ್ಡೋಜರ್ ಬಾಬಾ ಎಂದು ವ್ಯಂಗ್ಯವಾಡಿದ್ದರು. ಇದನ್ನೂ ಓದಿ: ವುಹಾನ್‌ ನಂತರ ಚೀನಾದಲ್ಲಿ ಅತಿದೊಡ್ಡ ಲಾಕ್‌ಡೌನ್: 2.6 ಕೋಟಿ ಜನ ಮನೆಯಲ್ಲೇ ಲಾಕ್

    ಯೋಗಿ ಆದಿತ್ಯನಾಥ್ ಬುಲ್ಡೋಜರ್ ಅನ್ನು ಅಭಿವೃದ್ಧಿ ಹಾಗೂ ಶಕ್ತಿಯ ಸಂಕೇತ ಎಂದು ಬಿಂಬಿಸಿದ್ದರು. ಬಿಜೆಪಿ ತನ್ನ ಚುನಾವಣಾ ಪ್ರಚಾರದಲ್ಲಿ ಅನಧಿಕೃತ, ಅಕ್ರಮ ಕಟ್ಟಡಗಳನ್ನು ಕೆಡವುವ ಮೂಲಕ ಭೂಮಾಫಿಯಾಗೆ ಬಿಸಿ ಮುಟ್ಟಿಸುವ ಹಾಗೂ ಎಕ್ಸ್‌ಪ್ರೆಸ್ ಹೈವೇಗಳನ್ನು ಕಟ್ಟುವ ಸಾಧನವಾಗಿ ಅದನ್ನು ಬಿಂಬಿಸಿತ್ತು.

     

  • ಕ್ರಿಕೆಟ್ ಆಡುವಾಗ ಹೊಟ್ಟೆ, ಎದೆಗೆ ಚಾಕು ಇರಿದು ಕೊಲೆ – 12 ಮಂದಿಗೆ ಜೀವಾವಧಿ ಶಿಕ್ಷೆ

    ಕ್ರಿಕೆಟ್ ಆಡುವಾಗ ಹೊಟ್ಟೆ, ಎದೆಗೆ ಚಾಕು ಇರಿದು ಕೊಲೆ – 12 ಮಂದಿಗೆ ಜೀವಾವಧಿ ಶಿಕ್ಷೆ

    ಹುಬ್ಬಳ್ಳಿ: ಆರು ವರ್ಷದ ಹಿಂದೆ ಕ್ರಿಕೆಟ್ ಆಟದ ಸಂದರ್ಭದಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ 12 ಮಂದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ 6.65 ಲಕ್ಷ ರೂಪಾಯಿ ದಂಡ ವಿಧಿಸಿ ಹುಬ್ಬಳ್ಳಿಯ 5ನೇ ಹೆಚ್ಚುವರಿ ಜಿಲ್ಲಾ ಸ್ಪೇಷನ್ ಕೋರ್ಟ್ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದೆ.

    ಹುಬ್ಬಳ್ಳಿಯ ನಿವಾಸಿಗಳಾದ ಕಲ್ಲಪ್ಪ ಶಿರಕೋಳ, ಸಿದ್ಧಾರೂಡ ಶಿರಕೋಳ, ಅಯ್ಯಪ್ಪ ಶಿರಕೋಳ, ನಿಂಗಪ್ಪ ಶಿಂಧೆ, ಅಯ್ಯಪ್ಪ ಲಕ್ಕುಂಡಿ, ಮಂಜುನಾಥ್ ಉಪ್ಪಾರ, ಶ್ರೀಪಾದ ಪೂಜಾರಿ, ವಿಶಾಲ್ ಜಾಧವ್, ಅಜಯ್ ಗುತ್ತಲ, ಮಂಜುನಾಥ್ ಗೋಕಾಕ್, ಸಂತೋಷ್ ಸುನಾಯಿ, ಅನಿಲ್ ಸಾವಂತ ಈ 12 ಮಂದಿ ಜೀವಾವಧಿ ಶಿಕ್ಷೆಗೆ ಗುರಿಯಾದ ಅಪರಾಧಿಗಳಾಗಿದ್ದಾರೆ.

    ಏನಿದು ಪ್ರಕರಣ?
    2013ರ ಜೂನ್ 16ರಂದು ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಕ್ರಿಕೆಟ್ ಆಡುವ ವೇಳೆ ಯಲ್ಲಾಪುರ ಓಣಿಯ ನಜೀರ್ ಮುದಗಲ್ ಜೊತೆ ಅಪರಾಧಿಗಳು ಜಗಳ ತೆಗೆದು ಹಲ್ಲೆ ನಡೆಸಿದ್ದರು. ನಂತರ ಚಿಟಗುಪ್ಪಿ ವೃತ್ತದಲ್ಲಿ ಹೊಟ್ಟೆ ಹಾಗೂ ಎದೆ ಭಾಗಕ್ಕೆ ಚಾಕು ಇರಿದು ಕೊಲೆಗೆ ಯತ್ನಿಸಿದ್ದರು. ಘಟನೆಯ ವೇಳೆ ಗಾಯಗೊಂಡು ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ನಜೀರ್, ಚಿಕಿತ್ಸೆ ಫಲಕಾರಿಯಾಗಿದೇ ಮೃತಪಟ್ಟಿದ್ದನು. ಈ ಕೊಲೆ ಪ್ರಕರಣದ ಬಗ್ಗೆ ಹುಬ್ಬಳ್ಳಿಯ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

    ಈ ಘಟನೆಯ ಕುರಿತು ಸುದೀರ್ಘ ವಿಚಾರಣೆ ವಾದ-ವಿವಾದ ಆಲಿಸಿದ್ದ ನ್ಯಾಯಾಲಯ ಡಿಸೆಂಬರ್ 23ರಂದು ಅಂತಿಮ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿತ್ತು. ನ್ಯಾಯಾಧೀಶರಾದ ಕೆ.ಎನ್ ಗಂಗಾಧರ್ ಅವರು ಇದೀಗ ಆರೋಪಿಗಳನ್ನು ಅಪರಾಧಿಗಳೆಂದು ಘೋಷಣೆ ಮಾಡಿ, ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.

  • ಅಪ್ರಾಪ್ತೆಯ ಗ್ಯಾಂಗ್ ರೇಪ್: ಮೂವರು ಕಾಮುಕರಿಗೆ 20 ವರ್ಷ ಜೈಲು

    ಅಪ್ರಾಪ್ತೆಯ ಗ್ಯಾಂಗ್ ರೇಪ್: ಮೂವರು ಕಾಮುಕರಿಗೆ 20 ವರ್ಷ ಜೈಲು

    ದಾವಣಗೆರೆ: ಸ್ನೇಹಿತರ ಜೊತೆಗೂಡಿ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದ ಪ್ರಿಯಕರ ಸೇರಿದಂತೆ ಮೂವರು ಅಪರಾಧಿಗಳಿಗೆ 20 ವರ್ಷ ಶಿಕ್ಷೆ, ತಲಾ 25 ಸಾವಿರ ರೂ. ದಂಡವಿಧಿಸಿ ದಾವಣಗೆರೆ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರನ್ಯಾಯಾಲಯ ತೀರ್ಪು ನೀಡಿದೆ.

    ಭದ್ರಾವತಿ ತಾಲೂಕಿನ ರಂಗಾಪುರ ಗ್ರಾಮದ ಪ್ರಿಯಕರ ರಮೇಶ್, ವಿಜಯ್ ಹಾಗೂ ಅರುಣ ಜೈಲು ಶಿಕ್ಷೆಗೆ ಗುರಿಯಾದ ಅಪರಾಧಿಗಳು. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಅಮ್ಮನಗುಡ್ಡದಲ್ಲಿ ಕಾಮುಕರು ಅತ್ಯಾಚಾರ ಎಸಗಿದ್ದರು. ಕಳೆದ ಒಂದುವರೆ ವರ್ಷದಿಂದ ವಿಚಾರಣೆ ಕೋರ್ಟ್ ನಲ್ಲಿ ವಿಚಾರಣೆ ನಡೆದಿತ್ತು. ಈ ಪ್ರಕರಣದ ಕುರಿತು ನ್ಯಾಯಾಧೀಶರಾದ ನಾಗಶ್ರೀ ಅವರು ವಿಚಾರಣೆ ನಡೆಸಿ ಇಂದು ತೀರ್ಪು ನೀಡಿದ್ದಾರೆ.

    ಪ್ರೀತಿ ನಾಟಕ:
    ರಂಗಾಪುರ ಗ್ರಾಮದ ರಮೇಶ್ ಮತ್ತು ಅಪ್ರಾಪ್ತೆಯ ಪ್ರೀತಿ ಎರಡು ವರ್ಷದ ಹಿಂದೆ ಬ್ರೇಕ್ ಅಪ್ ಆಗಿತ್ತು. ರಮೇಶ್ ಪುನಃ ಪ್ರೀತಿಸುತ್ತೇನೆಂದು ಹೇಳಿ ಬಾಲಕಿಯನ್ನ 2017, ಜೂ.2 ರಂದು ಜೋಳದಾಳು ಅಮ್ಮನ ಗುಡ್ಡಕ್ಕೆ ಕರೆತಂದಿದ್ದ. ರಮೇಶ್ ಜೊತೆ ವಿಜಯ್, ಅರುಣ್ ಕೂಡ ಬಂದಿದ್ದು, ಮೂವರು ಸೇರಿ ಬಾಲಕಿಯನ್ನ ಹೆದರಿಸಿ ಅತ್ಯಾಚಾರ ಮಾಡಿದ್ದಾರೆ.

    ಮೂವರು ಕಾಮುಕರಿಂದ ತಪ್ಪಿಸಿಕೊಂಡು ಹೋದ ಬಾಲಕಿ ಶಿವಮೊಗ್ಗದ ಆಸ್ಪತ್ರೆಗೆ ದಾಖಲಾಗಿದ್ದಳು. ಶಿವಮೊಗ್ಗ ಆಸ್ಪತ್ರೆಯವರು ಈ ಬಗ್ಗೆ ಅಲ್ಲಿನ ಎಸ್‍ಪಿಗೆ ಮಾಹಿತಿ ನೀಡಿದ್ದರು. ನಂತರ ಚನ್ನಗಿರಿ ಪೊಲೀಸರು ಪ್ರಿಯಕರ ರಮೇಶನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ ವಿಜಯ್ ಹಾಗೂ ಅರುಣ್ ತಲೆಮರೆಸಿಕೊಂಡಿದ್ದರು. ಚನ್ನಗಿರಿ ಪಿಸಿಐ ಆರ್.ಆರ್.ಪಾಟೀಲ್ ಅವರ ನೇತೃತ್ವದ ತಂಡವು ಎಲ್ಲರನ್ನು ಬಂಧಿಸಿ ಕೋರ್ಟ್ ಗೆ ಹಾಜರು ಪಡಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಯೋಗಿ ಸರ್ಕಾರದ ಎನ್‍ಕೌಂಟರ್ ಎಫೆಕ್ಟ್- ಸೈಕಲ್ ಶಾಪ್, ಹಣ್ಣಿನ ವ್ಯಾಪಾರ, ರಿಕ್ಷಾ ಚಾಲನೆ ಆರಂಭಿಸಿದ ರೌಡಿಶೀಟರ್ ಗಳು

    ಯೋಗಿ ಸರ್ಕಾರದ ಎನ್‍ಕೌಂಟರ್ ಎಫೆಕ್ಟ್- ಸೈಕಲ್ ಶಾಪ್, ಹಣ್ಣಿನ ವ್ಯಾಪಾರ, ರಿಕ್ಷಾ ಚಾಲನೆ ಆರಂಭಿಸಿದ ರೌಡಿಶೀಟರ್ ಗಳು

    ಲಕ್ನೋ: ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ಬಂದ ನಂತರ ರೌಡಿಶೀಟರ್ ಗಳು ಹಾಗೂ ಕ್ರಿಮಿನಲ್‍ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ ಪರಿಣಾಮ ಎನ್‍ಕೌಂಟರ್ ಗೆ ಹೆದರಿ ರೌಡಿಗಳು ಈಗ ತಮ್ಮ ಜೀವನವನ್ನ ಬದಲಾಯಿಸಿಕೊಳ್ಳುತ್ತಿದ್ದಾರೆ. ಕೆಲವರು ಸೈಕಲ್ ರಿಪೇರಿ ಅಂಗಡಿ, ಇನ್ನೂ ಕೆಲವರು ಹಣ್ಣಿನ ವ್ಯಾಪಾರ ನಡೆಸುತ್ತಿದ್ದರೆ ಮತ್ತೂ ಕೆಲವರು ಆಟೋ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ.

    ಲಿಸಾದಿ ಗೇಟ್ ಪೊಲೀಸ್ ಠಾಣೆಯಲ್ಲಿ ಅಖೀಲ್(35) ನ ರೌಡಿಶೀಟ್ ನಂಬರ್ 58ಎ. ಹಲವು ಕ್ರಿಮಿನಲ್ ಪ್ರಕರಣಗಳು ದಾಖಲಾಗಿರುವುದರ ಜೊತೆಗೆ ಈತನ ವಿರುದ್ಧ ಗೂಂಡಾ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗಿದೆ. ಆದ್ರೆ ಇತ್ತೀಚೆಗೆ ಕೆಲವು ತಿಂಗಳಿನಿಂದ ಈತ ತನ್ನ ಮನೆಯ ಬಳಿಯೇ ಪುಟ್ಟದೊಂದು ಸೈಕಲ್ ರಿಪೇರಿ ಅಂಗಡಿ ತೆರೆದಿದ್ದು, ಬೆಳಗ್ಗಿನಿಂದ ಸಂಜೆವರೆಗೆ ಅಂಗಡಿಯಲ್ಲಿ ದುಡಿಯುತ್ತಾನೆ.

    ತನ್ನ ಏರಿಯಾದಲ್ಲಿ ಕುಖ್ಯಾತ ರೌಡಿಯಾಗಿದ್ದ ಉಮರ್ ದರಜ್ ಎಂಬಾತ ಈಗ ಹಣ್ಣಿನ ವ್ಯಾಪಾರ ಮಾಡುತ್ತಿದ್ದಾನೆ. ಕೆಲವು ತಿಂಗಳ ಹಿಂದೆ ಜೀವನ ತುಂಬಾ ಕಷ್ಟಕರವಾಗಿತ್ತು. ನನ್ನ ಜೀವ ಉಳಿಸಿಕೊಳ್ಳಲು ಒಂದು ಕಡೆಯಿಂದ ಮತ್ತೊಂದು ಕಡೆಗೆ ಓಡುತ್ತಿದ್ದೆ. ಆದ್ರೆ ನನ್ನನ್ನು ಎನ್‍ಕೌಂಟರ್ ನಲ್ಲಿ ಸಾಯಿಸುವುದಿಲ್ಲ ಎಂದು ಪೊಲೀಸರು ಭರವಸೆ ನೀಡಿದ ನಂತರ, ಹಣ್ಣಿನ ವ್ಯಾಪಾರ ಮಾಡಲು ನಿರ್ಧರಿಸಿದೆ ಎಂದು ಉಮರ್ ಪತ್ರಿಕೆಯೊಂದಕ್ಕೆ ಹೇಳಿದ್ದಾನೆ.

    ಇದೇ ರೀತಿ ಇಮ್ರಾನ್ ಎಂಬಾತ ಈಗ ಗುಜರಿ ಡೀಲರ್ ಆಗಿದ್ದಾನೆ. ರವಿ ಹಾಗೂ ಹೇಮಂತ್ ಆಟೋ ರಿಕ್ಷಾ ಚಾಲಕರಾಗಿದ್ದಾರೆ. ಇನ್ನೂ ಅನೇಕ ರೌಡಿಗಳು ಅಪರಾಧಗಳನ್ನ ಬಿಟ್ಟು ಬೇರೆ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ.

    ಪೊಲೀಸರು ಹೇಳುವ ಪ್ರಕಾರ ರೌಡಿಶೀಟರ್ ಗಳ ಈ ಮನಃಪರಿವರ್ತನೆಗೆ ಕಾರಣವೆಂದರೆ ಯೋಗಿ ಸರ್ಕಾರ ರಚನೆಯಾದ ನಂತರ ಪೊಲೀಸರು ಅಳವಡಿಸಿಕೊಂಡಿರುವ ಎನ್‍ಕೌಂಟರ್ ನಂತಹ ಕಠಿಣ ಕ್ರಮಗಳು. ಇದನ್ನೂ ಓದಿ: ನನ್ನ ಅರೆಸ್ಟ್ ಮಾಡಿ, ಎನ್‍ಕೌಂಟರ್ ನಲ್ಲಿ ಸಾಯಲು ಇಷ್ಟವಿಲ್ಲ- ಯುಪಿ ಪೊಲೀಸರಿಗೆ ಕೊಲೆ ಆರೋಪಿ ಶರಣು

    ಕಳೆದ ವರ್ಷ ಮಾರ್ಚ್‍ನಲ್ಲಿ ಯೋಗಿ ಆದಿತ್ಯನಾಥ್ ಸಿಎಂ ಆಗಿ ಅಧಿಕಾರ ವಹಿಸಿಕೊಂಡಾಗಿನಿಂದ ಉತ್ತರಪ್ರದೇಶದಲ್ಲಿ 1100ಕ್ಕೂ ಹೆಚ್ಚು ಎನ್‍ಕೌಂಟರ್ ಗಳು ನಡೆದಿದ್ದು, ಅವುಗಳಲ್ಲಿ  ಸುಮಾರು 40ಕ್ಕೂ ಹೆಚ್ಚು ಅಪರಾಧಿಗಳು ಗುಂಡೇಟಿನಿಂದು ಸಾವನ್ನಪ್ಪಿದ್ದಾರೆ. ಹಾಗೇ 2770 ಆರೋಪಿಗಳ ಬಂಧನವಾಗಿದ್ದು, 260 ಆರೋಪಿಗಳು ಗಾಯಗೊಂಡಿದ್ದಾರೆ. ಜೊತೆಗೆ ಎನ್‍ಕೌಂಟರ್ ಗಳಲ್ಲಿ ನಾಲ್ವರು ಪೊಲೀಸ್ ಅಧಿಕಾರಿಗಳು ಸಾವನ್ನಪ್ಪಿದ್ದು, 277 ಸಿಬ್ಬಂದಿ ಗಾಯಗೊಂಡಿದ್ದಾರೆ.

    ಸುಧರ್ ಜಾವೋ ಯಾ ಊಪರ್ ಜಾವೊ: ಐಡಿಯಾ ತುಂಬಾನೇ ಸರಳವಾಗಿತ್ತು: ಸುಧರ್ ಜಾವೋ ಯಾ ಊಪರ್ ಜಾವೊ (ಸರಿ ದಾರಿಗೆ ಬನ್ನಿ ಅಥವಾ ಸಾಯಲು ತಯಾರಾಗಿ). ನಾವು ತುಂಬಾ ಸರಳವಾದ ಆಫರ್ ನೀಡಿದೆವು. ಅಪರಾಧ ಚಟುವಟಿಕೆಗಳನ್ನ ಬಿಟ್ಟು ಜೀವನಾಧಾರಕ್ಕಾಗಿ ಹಣ ಸಂಪಾದಿಸಲು ಓಳ್ಳೆ ದಾರಿಯನ್ನ ಆರಿಸಿಕೊಳ್ಳಿ. ನಿಮಗೆ ನೆರವಾಗಲು ನಾವಿದ್ದೇವೆ ಹಾಗೂ ಅದಕ್ಕೆ ಪ್ರತಿಯಾಗಿ ನೀವು ಯಾವುದೇ ಭಯವಿಲ್ಲದೆ ಘನತೆಯಿಂದ ಜೀವನ ನಡೆಸಬಹುದು ಎಂದು ರೌಡಿಶೀಟರ್ ಗಳಿಗೆ ಹೇಳಿದ್ದಾಗಿ ಮೀರತ್‍ನ ಎಸ್‍ಪಿ ಮನ್ ಸಿಂಗ್ ಚೌಹಾನ್ ಹೇಳಿದ್ದಾರೆ. ಇದನ್ನೂ ಓದಿ:ಜಾಮೀನು ಸಿಕ್ಕರೂ 5,500 ಕ್ರಿಮಿನಲ್‍ಗಳು ಯುಪಿ ಜೈಲಿನಿಂದ ಹೊರಬರುತ್ತಿಲ್ಲ!

    ಕೆಲವರ ವಿರುದ್ಧ ಸುಮಾರು 20 ವರ್ಷಗಳಿಂದ ಪ್ರಕರಣಗಳು ಬಾಕಿ ಇವೆ. ಕೆಲವು ಗಂಭೀರ ಪ್ರಕರಣಗಳಾಗಿದ್ದರೆ ಇನ್ನೂ ಕೆಲವು ಸಣ್ಣ ಪುಟ್ಟ ಪ್ರಕರಣಗಳು. ದೀರ್ಘ ಸಮಯದಿಂದ ಪ್ರಕರಣಗಳು ಬಾಕಿ ಇರುವ ಹಿನ್ನಲೆಯಲ್ಲಿ ಅವರು ಜೀವನದಲ್ಲಿ ನೆಲೆ ಕಂಡುಕೊಳ್ಳಲು ಸಾಧ್ಯವಾಗಿರಲಿಲ್ಲ. ಕಾನೂನಿನ ಭಯ ಹಾಗೂ ಜೀವನ ನಡೆಸಲು ಅಪರಾಧ ಚಟುವಟಿಕೆ ಮುಂದುವರಿಸದೇ ಬೇರೆ ದಾರಿ ಇಲ್ಲ ಎಂಬ ವಿಷಮ ಪರಿಸ್ಥಿತಿ ಇದಕ್ಕೆ ಕಾರಣವಾಗಿತ್ತು ಎಂದು ಚೌಹಾನ್ ವಿವರಿಸಿದ್ದಾರೆ.

    ಹೀಗಾಗಿ ಮಾಧ್ಯಮಗಳು ಹಾಗೂ ಇತರೆ ಮುಲಗಳಿಂದ ಪೊಲೀಸರು ರೌಡಿಗಳು ಸಮಾಜದ ಮುಖ್ಯವಾಹಿನಿಗೆ ಹಿಂದಿರುಗುವಂತೆ ಸಂದೇಶ ರವಾನಿಸಿದ್ದರು. ಮೊದಲಿಗೆ ಸುಮಾರು 16 ಮಂದಿ ನಮ್ಮ ಬಳಿ ಬಂದರು. ಅವರ ಚಟುವಟಿಕೆಗಳ ಮೇಲೆ ಎರಡು ತಿಂಗಳವರೆಗೆ ಕಣ್ಣಿಟ್ಟ ನಂತರ ನೇರವಾಗಿ ಭೇಟಿಯಾಗುವಂತೆ ಆಹ್ವಾನಿಸಿದೆವು ಎಂದು ಚೌಹಾನ್ ತಿಳಿಸಿದ್ದಾರೆ.

    ಕೆಲವು ದಿನಗಳ ಹಿಂದೆ ಲಿಸಾದಿ ಗೇಟ್ ಪೊಲೀಸ್ ಠಾಣೆಯಲ್ಲಿ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ರೌಡಿಗಳು ತಮ್ಮ ಹಿಂದಿನ ದಾರಿಯನ್ನ ಹಿಡಿಯದಂತೆ ಪ್ರಮಾಣ ಮಾಡಿಸಿ ಹಣ್ಣು ಹಾಗೂ ಸಿಹಿ ನೀಡಿ ಸನ್ಮಾನಿಸಲಾಯಿತು ಎಂದು ವರದಿಯಾಗಿದೆ.

    ಮುಂದೆಯೂ ಅವರ ಮೇಲೆ ನಾವು ಕಣ್ಣಿಟ್ಟಿರುತ್ತೇವೆ. ಅದರ ಜೊತೆಗೆ ರೌಡಿಶೀಟರ್ ಪಟ್ಟಿಯಿಂದ ಅವರ ಹೆಸರನ್ನ ತೆಗೆಯಬಹುದೆಂಬ ಉದ್ದೇಶದಿಂದ ಇತ್ಯರ್ಥವಾಗದೆ ಉಳಿದ ಪ್ರಕರಣಗಳನ್ನ ತೆಗೆದುಹಾಕಲು ಎಲ್ಲಾ ರೀತಿಯ ಸಹಾಯ ಮಾಡುವ ಭರವಸೆ ನೀಡಿದ್ದೇವೆ ಎಂದು ಚೌಹಾನ್ ಹೇಳಿದ್ದಾರೆ.

  • ಜಾಮೀನು ಸಿಕ್ಕರೂ 5,500 ಕ್ರಿಮಿನಲ್‍ಗಳು ಯುಪಿ ಜೈಲಿನಿಂದ ಹೊರಬರುತ್ತಿಲ್ಲ!

    ಜಾಮೀನು ಸಿಕ್ಕರೂ 5,500 ಕ್ರಿಮಿನಲ್‍ಗಳು ಯುಪಿ ಜೈಲಿನಿಂದ ಹೊರಬರುತ್ತಿಲ್ಲ!

    ಆಗ್ರಾ: ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಅಂದ್ರೆ 10 ತಿಂಗಳಲ್ಲಿ ಜೈಲುಪಾಲಾದ ಸುಮಾರು 5,500 ಕ್ರಿಮಿನಲ್ ಗಳಿಗೆ ಜಾಮೀನು ಸಿಕ್ಕರೂ ಹೊರಬರಲು ಹಿಂಜರಿಯುತ್ತಾರೆ ಎಂಬ ಅಚ್ಚರಿಯ ಅಂಶವೊಂದನ್ನು ಅಲ್ಲಿನ ಡಿಜಿಪಿ ಓಂಪ್ರಕಾಶ್ ಸಿಂಗ್ ಬಹಿರಂಗಪಡಿಸಿದ್ದಾರೆ.

    ಅಪರಾಧ ಕೃತ್ಯಗಳ ಪರಾಮರ್ಶನಾ ಸಭೆಯಲ್ಲಿ ಭಾಗವಹಿಸಿದ್ದ ಅವರು ಈ ಮಾಹಿತಿಯನ್ನು ನೀಡಿದ್ದಾರೆ. ಪೊಲೀಸರ ವಿಶೇಷ ಕಾರ್ಯಾಚಣೆ ಪಡೆ(ಎಸ್‍ಟಿಎಫ್)ಯ ಕಠಿಣ ಪರಿಶ್ರಮದಿಂದಾಗಿ ರಾಜ್ಯದಲ್ಲಿ ಅಪರಾಧ ಸಂಖ್ಯೆಗಳ ಪ್ರಮಾಣ ಕುಗ್ಗಿಸುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದ್ದಾರೆ.

    2017ರ ಮಾರ್ಚ್‍ನಿಂದ 2018ರ ಜನವರಿ ವರೆಗಿನ 10 ತಿಂಗಳ ಅವಧಿಯಲ್ಲಿ, ರಾಜ್ಯದ ಪೊಲೀಸರು 1,331 ಎನ್ ಕೌಂಟರ್‍ಗಳನ್ನು ನಡೆಸಿದ್ದಾರೆ. ಈ ಎನ್‍ಕೌಂಟರ್ ಮೂಲಕ 3,091 ಕ್ರಿಮಿನಲ್ ಗಳನ್ನು ಬಂಧಿಸಿದ್ದರೆ, ಗುಂಡೇಟಿಗೆ 43 ಮಂದಿ ಬಲಿಯಾಗಿದ್ದಾರೆ. ಇದನ್ನೂ ಓದಿ: ನನ್ನ ಅರೆಸ್ಟ್ ಮಾಡಿ, ಎನ್‍ಕೌಂಟರ್ ನಲ್ಲಿ ಸಾಯಲು ಇಷ್ಟವಿಲ್ಲ- ಯುಪಿ ಪೊಲೀಸರಿಗೆ ಕೊಲೆ ಆರೋಪಿ ಶರಣು

    ಎನ್‍ಕೌಂಟರ್ ಬಲಿಯಾದವರು ಮತ್ತು ಬಂಧನಕ್ಕೆ ಒಳಗಾದ 50% ರಷ್ಟು ಕ್ರಿಮಿನಲ್ ಗಳ ತಲೆಗೆ ಬಹುಮಾನ ಘೋಷಿಸಲಾಗಿತ್ತು. ಇದರಲ್ಲಿ ಹಲವರು ಹೆಚ್ಚು ಸಮಯ ತಲೆಮರೆಸಿಕೊಂಡಿದ್ದರು. ಬಳಿಕ ಎನ್‍ಕೌಂಟರ್ ಭೀತಿಯಿಂದ ಕಳೆದ 10 ತಿಂಗಳಲ್ಲಿ 5,409 ಕ್ರಿಮಿನಲ್‍ಗಳು ತಮಗೆ ದೊರೆತ ಜಾಮೀನು ರದ್ದುಪಡಿಸಿ ಕೋರ್ಟಿಗೆ ಶರಣಾಗಿದ್ದಾರೆ ಅಂತ ಅವರು ವಿವರಿಸಿದರು.

    2013ರಿಂದ ಪ್ರತೀವರ್ಷ ಹೋಳಿ ವೇಳೆ ಸುಮಾರು 60 ಗಲಭೆಗಳು ನಡೆಯುತ್ತಿದ್ದವು. ಆದರೆ ಈ ಬಾರಿ ಹೋಳಿಯಂದು ಸುಮಾರು 14 ಗುಂಪು ಘರ್ಷಣೆ ಪ್ರಕರಣಗಳು ನಡೆದಿದ್ದು, ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿದೆ ಎಂದು ಅವರು ವಿವರಿಸಿದ್ರು.

    ಇದೇ ವೇಳೆ ಮಹಿಳೆಯರ ಮೇಲಿನ ಅಪರಾಧ ಪ್ರಕರಣದ ಕುರಿತು ಮಾಹಿತಿ ನೀಡಿದ ಅವರು, ರಾಜ್ಯದಲ್ಲಿ ಒಟ್ಟು 3,400 ಪ್ರಕರಣಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕ ಪ್ರದೇಶಗಳಲ್ಲಿ ಮಹಿಳೆಯರಿಗೆ ಚುಡಾಯಿಸುವಿಕೆ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣಗಳು ನಡೆಯದಂತೆ ಆ್ಯಂಟಿ ರೋಮಿಯೋ ಪಡೆಯನ್ನು ನಿಯೋಜಿಸಲಾಗಿದ್ದು, ಇದರ ಸಕ್ರೀಯ ಕಾರ್ಯಚರಣೆಯಿಂದ 10 ತಿಂಗಳಲ್ಲಿ ಸುಮಾರು 26 ಲಕ್ಷಕ್ಕೂ ಅಧಿಕ ಜನರಿಗೆ ಎಚ್ಚರಿಕೆ ನೀಡಿದೆ. ಇಷ್ಟು ಮಾತ್ರವಲ್ಲದೇ ಮಹಿಳೆಯರ ಸುರಕ್ಷತೆಗಾಗಿ ರಾಜ್ಯ ಪೊಲೀಸ್ ಇಲಾಖೆಯ ತುರ್ತು ಸೇವಾ ಘಟಕ (ಯುಪಿ 100) ಆರಂಭಿಸಿದ್ದು, ಮಹತ್ವದ ಪಾತ್ರವಹಿಸಿದೆ ಎಂದು ಡಿಜಿಪಿ ವಿವರಿಸಿದ್ದಾರೆ.

    ಗ್ಯಾಂಗ್‍ಸ್ಟರ್ ಮತ್ತು ಸಮಾಜ ವಿರೋಧಿ ಚಟುವಟಿಕೆಗಳ ನಿಗ್ರಹ ಕಾಯ್ದೆಯಡಿ ಈವರೆಗೆ ಸುಮಾರು 13,624 ಕೇಸುಗಳನ್ನು ದಾಖಲಿಸಿಕೊಳ್ಳಲಾಗಿದೆ. ಇದರಲ್ಲಿ 12,600 ಕೇಸ್ ಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೇ ಸುಮಾರು 94 ಕೋಟಿ ರೂ. ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ವಾಹನ ಕಳವು ಪ್ರಕರಣದಲ್ಲೂ ಗಣನೀಯವಾಗಿ ಇಳಿಕೆಯಾಗಿದ್ದು, ಸುಮಾರು 7,000 ದ್ವಿಚಕ್ರ ಹಾಗೂ 900 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂಬುದಾಗಿ ಅವರು ಮಾಹಿತಿ ನೀಡಿದ್ದಾರೆ.

    ರೌಡಿಗಳ ಕಾಟ ಜಾಸ್ತಿಯಾಗಿದ್ದ ಹಿನ್ನೆಲೆಯಲ್ಲಿ ಯೋಗಿ ಅದಿತ್ಯನಾಥ್ ಅವರು ಪೊಲೀಸರಿಗೆ, ಪಿಸ್ತೂಲ್ ಪಾಕೆಟ್ ನಲ್ಲಿ ಇಡಲು ಕೊಟ್ಟಿರುವುದಲ್ಲ. ಗೂಂಡಾಗಳನ್ನು ಎನ್‍ಕೌಂಟರ್ ಮಾಡಲು ಕೊಡಲಾಗಿದೆ. ಹೀಗಾಗಿ ನಿಮಗೆ ಕೊಟ್ಟಿರುವ ಅಧಿಕಾರವನ್ನು ಚಲಾಯಿಸಿ ರೌಡಿಗಳನ್ನು ಮಟ್ಟ ಹಾಕಿ ಎಂದು ಸೂಚಿಸಿದ್ದರು.

  • ಎನ್‍ಕೌಂಟರ್ ವೇಳೆ ಪೊಲೀಸರು, ಆರೋಪಿಗಳ ಮಧ್ಯೆ ಗುಂಡಿನ ಚಕಮಕಿ- ತಲೆಗೆ ಗುಂಡೇಟು ಬಿದ್ದು 8 ವರ್ಷದ ಬಾಲಕ ಸಾವು

    ಎನ್‍ಕೌಂಟರ್ ವೇಳೆ ಪೊಲೀಸರು, ಆರೋಪಿಗಳ ಮಧ್ಯೆ ಗುಂಡಿನ ಚಕಮಕಿ- ತಲೆಗೆ ಗುಂಡೇಟು ಬಿದ್ದು 8 ವರ್ಷದ ಬಾಲಕ ಸಾವು

    ಮಥುರಾ: ಕ್ರಿಮಿನಲ್‍ಗಳು ಹಾಗೂ ಪೊಲೀಸರ ಮಧ್ಯೆ ನಡೆದ ಗುಂಡಿನ ಚಕಮಕಿಯಲ್ಲಿ 8 ವರ್ಷದ ಬಾಲಕನಿಗೆ ಗುಂಡೇಟು ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ಉತ್ತರಪ್ರದೇಶದ ಮಥುರಾದಲ್ಲಿ ಬುಧವಾರ ಸಂಜೆ ನಡೆದಿದೆ.

    ಮಾಧವ್ ಭಾರದ್ವಾಜ್ ಸಾವನ್ನಪ್ಪಿದ ಬಾಲಕ. ರಾಜ್ಯ ರಾಜಧಾನಿ ಲಕ್ನೋದಿಂದ 450 ಕಿ.ಮೀ ದೂರದ ಗ್ರಾಮದಲ್ಲಿ ದರೋಡೆಯಲ್ಲಿ ಭಾಗಿಯಾಗಿದ್ದ ಗ್ಯಾಂಗ್‍ಸ್ಟರ್‍ಗಳು ಅಡಗಿಕೊಂಡಿದ್ದರು. ಪೊಲೀಸರು ಹಾಗೂ ಗ್ಯಾಂಗ್‍ಸ್ಟರ್‍ಗಳ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಈ ವೇಳೆ ಮಾಧವ್‍ನ ತಲೆಗೆ ಗುಂಡೇಟು ಬಿದ್ದು ಸಾವನ್ನಪ್ಪಿದ್ದಾನೆ. ಆದ್ರೆ ಮಾಧವ್‍ಗೆ ಗುಂಡೇಟು ಬಿದ್ದಿದ್ದು ಪೊಲೀಸರಿಂದಲೋ ಅಥವಾ ಆರೋಪಿತ ಗ್ಯಾಂಗ್‍ಸ್ಟರ್‍ಗಳಿಂದಲೋ ಎಂಬುದು ಸ್ಪಷ್ಟವಾಗಿಲ್ಲ.

    ದರೋಡೆಕೋರರು ಗ್ರಾಮದಲ್ಲಿ ಅಡಗಿದ್ದಾರೆಂಬ ಮಾಹಿತಿಯ ಆಧಾರದ ಮೇಲೆ ನಮ್ಮ ತಂಡ ಅಲ್ಲಿಗೆ ಹೋಗಿತ್ತು. ಆರೋಪಿಗಳಿಗೆ ಶರಣಾಗುವಂತೆ ಹೇಳಿದ್ದರು. ಆದ್ರೆ ಅವರು ಗುಂಡಿನ ದಾಳಿ ಆರಂಭಿಸಿದ್ರು ಎಂದು ಪೊಲೀಸರು ಹೇಳಿದ್ದಾರೆ.

    ಆದ್ರೆ ಪೊಲೀಸರೇ ಆರೋಪಿಗಳಿಗೆ ಒಂದು ಕಡೆ ಸೇರಲು ಹೇಳಿ ಗುಂಡಿನ ದಾಳಿ ಶುರುಮಾಡಿದ್ರು ಎಂದು ಗ್ರಾಮಸ್ಥರು ಹೇಳಿದ್ದಾಗಿ ವರದಿಯಾಗಿದೆ. ಅಧಿಕಾರಿಗಳು ಇದನ್ನ ನಿರಾಕರಿಸಿದ್ದಾರೆ. ಆರೋಪಿಗಳು ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆಂದು ವರದಿಯಾಗಿದೆ.

    ಬುಲೆಟ್ ತಾಗಿದ ವೇಳೆ ಬಾಲಕ ತನ್ನ ಸ್ನೇಹಿತರೊಂದಿಗೆ ಮನೆಯ ಬಳಿ ಆಟವಾಡುತ್ತಿದ್ದ. ಗ್ರಾಮಸ್ಥರು ಆಸ್ಪತ್ರೆಗೆ ಕರೆದೊಯ್ದರು. ಆದ್ರೆ ಕೆಲವೇ ನಿಮಿಷಗಳಲ್ಲಿ ಆತ ಸಾವನ್ನಪ್ಪಿದ ಎಂದು ಬಾಲಕನ ಕುಟುಂಬಸ್ಥರು ಹೇಳಿದ್ದಾರೆ.

    ಕುಟುಂಬಸ್ಥರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಬಾಲಕನ ಕುಟುಂಬಕ್ಕೆ ಪೊಲೀಸರು 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

    ಇದೊಂದು ದುರದೃಷ್ಟಕರ ಘಟನೆ. ಕುಟುಂಬಕ್ಕೆ ನನ್ನ ಬೆಂಬಲವಿದೆ. ಡಿಸಿಪಿ ಈ ಬಗ್ಗೆ ತನಿಖೆ ನಡೆಸಲಿದ್ದಾರೆ. ಇದರಲ್ಲಿ ಪೊಲೀಸರ ನಿರ್ಲಕ್ಷ್ಯವಿತ್ತಾ ಎಂಬುದನ್ನ ಪತ್ತೆ ಮಾಡಲಿದ್ದಾರೆ. ಮರಣೊತ್ತರ ಪರೀಕ್ಷೆಯ ವರದಿ ಬಂದ ನಂತರ ಯಾರ ಗುಂಡಿನಿಂದ ಬಾಲಕ ಮೃತಪಟ್ಟಿದ್ದಾನೆ ಎಂಬುದು ಗೊತ್ತಾಗಲಿದೆ ಅಂತ ಪೊಲೀಸ್ ಅಧಿಕಾರಿ ಸ್ವಪ್ನಿಲ್ ಹೇಳಿದ್ದಾರೆ.

  • ಸಾಮಾನ್ಯ ಕೈದಿಗಳಿಗೆ ನೀಡೋ ಆಹಾರವನ್ನೇ ಡಾನ್‍ಗಳಿಗೂ ನೀಡಿ: ಯೋಗಿ ಆದಿತ್ಯನಾಥ್

    ಸಾಮಾನ್ಯ ಕೈದಿಗಳಿಗೆ ನೀಡೋ ಆಹಾರವನ್ನೇ ಡಾನ್‍ಗಳಿಗೂ ನೀಡಿ: ಯೋಗಿ ಆದಿತ್ಯನಾಥ್

    ಲಕ್ನೋ: ಉತ್ತರ ಪ್ರದೇಶದ ಜೈಲಿನಲ್ಲಿ ಸಾಮಾನ್ಯ ಕೈದಿಗಳಿಗೆ ನೀಡುವ ಆಹಾರವನ್ನೇ ರಾಜಕೀಯ ನಾಯಕರ ಜೊತೆ ನಂಟುಹೊಂದಿರುವ ಡಾನ್‍ಗಳಿಗೂ ನೀಡಬೇಕೆಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೃಹ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

    ಗೃಹ ಇಲಾಖೆಯ ಅಧಿಕಾರಿಗಳ ಜೊತೆ ಬುಧವಾರ ರಾತ್ರಿ ಯೋಗಿ ಸಭೆ ನಡೆಸಿದರು. ಈ ವೇಳೆ, ಎಲ್ಲ ದೋಷಿಗಳನ್ನು ಈಗ ಹೇಗೆ ಜೈಲಿನಲ್ಲಿ ನೋಡಿಕೊಳ್ಳಲಾಗುತ್ತದೋ ಅದೇ ರೀತಿಯಾಗಿ ಡಾನ್‍ಗಳನ್ನು ನೋಡಿಕೊಳ್ಳಬೇಕು. ಡಾನ್‍ಗಳಿಗೆ ಪ್ರತ್ಯೇಕ ಆಹಾರ, ವಿಶೇಷ ಸೌಲಭ್ಯಗಳನ್ನು ನೀಡಕೂಡದು ಎಂದು ಆದೇಶಿಸಿದ್ದಾರೆ.

    ಕೈದಿಗಳ ಕೈಗೆ ಮೊಬೈಲ್ ಫೋನ್ ನೀಡಬಾರದು, ಎಲ್ಲ ಜೈಲುಗಳಲ್ಲಿ ಫೋನ್ ಜಾಮರ್ ಗಳನ್ನು ಅಳವಡಿಸಬೇಕು. ವೈದ್ಯಕೀಯ ಚಿಕಿತ್ಸೆಯ ನೆಪದಲ್ಲಿ ಕೈದಿಗಳು ನಿಯಮವನ್ನು ಉಲ್ಲಂಘಿಸಿದ್ದು ಕಂಡು ಬಂದಲ್ಲಿ ಜೈಲಿನ ಅಧಿಕಾರಿಗಳ ಮೇಲೆ ಕಠಿಣ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಯೋಗಿ ಎಚ್ಚರಿಕೆ ನೀಡಿದ್ದಾರೆ.

    ಇದೇ ವೇಳೆ ಪೊಲೀಸ್ ಇಲಾಖೆಯಲ್ಲಿ ಕ್ರಿಮಿನಲ್ ಹಿನ್ನೆಲೆ ಹೊಂದಿರುವ ವ್ಯಕ್ತಿಗಳ ಜೊತೆ ನಂಟು ಹೊಂದಿರುವ ಮತ್ತು ಭ್ರಷ್ಟಾಚಾರದಲ್ಲಿ ಭಾಗಿಯಾಗುತ್ತಿರುವ ಸಿಬ್ಬಂದಿಯನ್ನು ಪತ್ತೆ ಹಚ್ಚುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

    ಇದನ್ನೂ ಓದಿ: ಗ್ರಾಮಗಳಲ್ಲಿ 18 ಗಂಟೆ, ಜಿಲ್ಲಾ ಕೇಂದ್ರಗಳಲ್ಲಿ 24 ಗಂಟೆ ವಿದ್ಯುತ್: ಯೋಗಿ ಆದೇಶ

    ಇದನ್ನೂ ಓದಿ: ಇನ್ಮುಂದೆ ಶ್ರೇಷ್ಠ ವ್ಯಕ್ತಿಗಳ ಜಯಂತಿಯಂದು ಶಾಲೆಗಳಿಗೆ ರಜೆ ಇಲ್ಲ: ಯೋಗಿ ಆದಿತ್ಯನಾಥ್