Tag: Criminal.

  • ನಿಶ್ಚಿತಾರ್ಥದ ದಿನವೇ ಪ್ರಿಯಕರನೊಂದಿಗೆ ಮದ್ವೆಯಾದ ಮೈಸೂರು ಯುವತಿ

    ನಿಶ್ಚಿತಾರ್ಥದ ದಿನವೇ ಪ್ರಿಯಕರನೊಂದಿಗೆ ಮದ್ವೆಯಾದ ಮೈಸೂರು ಯುವತಿ

    ಮೈಸೂರು: ನಿಶ್ಚಿತಾರ್ಥದ ದಿನವೇ ಯುವತಿ ತನ್ನ ಪ್ರಿಯಕರನ ಬಾಳಸಂಗಾತಿಯಾದ ಪ್ರಕರಣ ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ನಡೆದಿದೆ.

    ನಂಜನಗೂಡಿನ ಹುಲ್ಲಹಳ್ಳಿ ಹೋಬಳಿಯ ಕುರಿಹುಂಡಿ ಗ್ರಾಮದ ಚೈತ್ರ(21) ಹಾಗೂ ಕೃಷ್ಣಮೂರ್ತಿ(20) ಮದುವೆಯಾದ ಪ್ರೇಮಿಗಳು. ಇವರಿಬ್ಬರು ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದ್ರೆ ಹುಡುಗ ಬಡ ಕುಟುಂಬದಿಂದ ಬಂದವನೆಂದು ಹೇಳಿ ಪೋಷಕರು ಇವರಿಬ್ಬರ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದರು.

    ಬೇರೆ ಹುಡುಗನೊಂದಿಗೆ ಮಗಳನ್ನು ನಿಶ್ಚಿತಾರ್ಥ ಮಾಡಲು ಯುವತಿ ಪೋಷಕರು ಮುಂದಾಗಿದ್ದರು. ಇದೀಗ ಹೆತ್ತವರ ನಿರ್ಧಾರವನ್ನು ತಿರಸ್ಕರಿಸಿ ಯುವತಿ ಪ್ರಿಯತಮನೊಂದಿಗೆ ನಂಜನಗೂಡಿನ ಪರಶುರಾಮ ದೇವಸ್ಥಾನದಲ್ಲಿ ವಿವಾಹವಾಗಿದ್ದಾರೆ.

    ಹುಡುಗನ ಕುಟುಂಬ ಬಡತನದಲ್ಲಿದ್ದ ಕಾರಣ ಚೈತ್ರ ಮನೆಯವರಿಂದ ಮದುವೆಗೆ ವಿರೋಧವಿತ್ತು. ಹೀಗಾಗಿ ಕ್ರಿಮಿನಲ್ ಪ್ರಕರಣ ಎದುರಿಸುತ್ತಿರುವ ಕಂದೇಗಾಲ ಗ್ರಾಮದ ಆನಂದ್ ಎಂಬಾತನೊಂದಿಗೆ ಚೈತ್ರಳ ನಿಶ್ಚಿತಾರ್ಥ ನಿಗದಿಪಡಿಸಿದ್ದರು. ಇದೀಗ ಮನೆಯವರ ನಿರ್ಧಾರವನ್ನು ಧಿಕ್ಕರಿಸಿದ ಚೈತ್ರ, ನಿಶ್ಚಿತಾರ್ಥವನ್ನು ಬದಿಗೊತ್ತಿ ಪ್ರಿಯಕರ ಕೃಷ್ಣಮೂರ್ತಿ ಕೈ ಹಿಡಿದ್ದಾರೆ.

     

  • ಗುಜರಾತ್ ಚುನಾವಣೆ: ಯಾವ ಪಕ್ಷದಲ್ಲಿ ಎಷ್ಟು ಮಂದಿ ಅಭ್ಯರ್ಥಿಗಳ ಮೇಲೆ ಕ್ರಿಮಿನಲ್ ಕೇಸ್ ದಾಖಲಾಗಿದೆ?

    ಗುಜರಾತ್ ಚುನಾವಣೆ: ಯಾವ ಪಕ್ಷದಲ್ಲಿ ಎಷ್ಟು ಮಂದಿ ಅಭ್ಯರ್ಥಿಗಳ ಮೇಲೆ ಕ್ರಿಮಿನಲ್ ಕೇಸ್ ದಾಖಲಾಗಿದೆ?

    ಅಹಮದಾಬಾದ್: ಗುಜರಾತ್ ವಿಧಾನಸಭಾ ಚುನಾವಣೆಯ 89 ಕ್ಷೇತ್ರಗಳಿಗೆ ಮೊದಲ ಹಂತದ ಚುನಾವಣೆ ಡಿಸೆಂಬರ್ 9 ರಂದು ನಡೆಯಲಿದ್ದು, ಒಟ್ಟು 923 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇವರ ಪೈಕಿ 137 ಅಭ್ಯರ್ಥಿಗಳು ಅಂದರೆ ಶೇ.15ರಷ್ಟು ಅಭ್ಯರ್ಥಿಗಳು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.

    ಚುನಾವಣೆಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಹಿನ್ನೆಲೆಗಳ ಬಗ್ಗೆ ಅಸೋಸಿಯೇಷನ್ ಆಫ್ ಡೆಮಾಕ್ರಾಟಿಕ್ ರಿಫಾರ್ಮಾಸ್ ಮತ್ತು ಗುಜರಾತ್ ಎಲೆಕ್ಷನ್ ವಾಚ್ ಎನ್‍ಜಿಒ ಸಂಸ್ಥೆ ವರದಿ ಬಿಡುಗಡೆ ಮಾಡಿದೆ.

    ಈ ವರದಿಯಲ್ಲಿ ಮೊದಲ ಹಂತದ ಚುನಾವಣೆಯಲ್ಲಿ ಕಣದಲ್ಲಿರುವ ಅಭ್ಯರ್ಥಿಗಳಲ್ಲಿ ಎಷ್ಟು ಜನರ ಮೇಲೆ ಕ್ರಿಮಿನಲ್ ಕೇಸ್ ಇದೆ? ಎಷ್ಟು ಜನ ಕೋಟ್ಯಾಧಿಪಿತಿಗಳು ಎನ್ನುವ ಮಾಹಿತಿ ಬಹಿರಂಗವಾಗಿದೆ.

    ಚುನಾವಣಾ ಕಣದಲ್ಲಿರುವ 137 ಅಭ್ಯರ್ಥಿಗಳ ಪೈಕಿ 78 ಮಂದಿ ಮೇಲೆ ಕ್ರಿಮಿನಲ್ ಕೇಸ್ ದಾಖಲಾಗಿದೆ. ಇದರಲ್ಲಿ ಕೊಲೆ, ಅಪಹರಣ, ಅತ್ಯಾಚಾರದಂತಹ ಗಂಭೀರ ಆರೋಪಗಳು ಸೇರಿದೆ.

    ಪಕ್ಷಗಳ ಹಿನ್ನೆಲೆಯಲ್ಲಿ ನೋಡುವುದಾದರೆ ಬಿಜೆಪಿ 89 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದು ಅದರಲ್ಲಿ 10 ಅಭ್ಯರ್ಥಿಗಳ ಮೇಲೆ ಗಂಭೀರ ಕ್ರಿಮಿನಲ್ ಕೇಸ್ ಗಳಿದ್ದರೆ, ಕಾಂಗ್ರೆಸ್ ಪೈಕಿ 20 ಮಂದಿಯ ಮೇಲೆ ಕ್ರಿಮಿನಲ್ ಕೇಸ್ ದಾಖಲಾಗಿದೆ. ಬಿಎಸ್‍ಪಿಯಲ್ಲಿ 8 ಮಂದಿ ಮೇಲೆ, ಎನ್‍ಸಿಪಿಯಲ್ಲಿ 3, ಆಪ್ ನಲ್ಲಿ ಒಬ್ಬರ ಮೇಲೆ ಕ್ರಿಮಿನಲ್ ಕೇಸ್ ದಾಖಲಾಗಿದೆ.

    ಒಟ್ಟಾರೆ 89 ವಿಧಾನಸಭಾ ಸ್ಥಾನಗಳಿಗೆ 977 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಇದರಲ್ಲಿ 54 ಅಭ್ಯರ್ಥಿಗಳ ಅರ್ಜಿಗಳು ತಿರಸ್ಕರಗೊಂಡಿವೆ ಎಂದು ಗುಜರಾತ್ ಎಲೆಕ್ಷನ್ ವಾಚ್ ಮಾಹಿತಿ ನೀಡಿದೆ. ಚುನಾವಣಾ ಸಮಿತಿಗೆ ನೀಡಿರುವ ಮಾಹಿತಿಯಲ್ಲಿ 137 ಅಭ್ಯರ್ಥಿಗಳು ತಮ್ಮ ಮೇಲಿನ ಕ್ರಿಮಿನಲ್ ದೂರುಗಳ ಬಗ್ಗೆ ಮಾಹಿತಿ ಬಹಿರಂಗ ಪಡಿಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

    ಪ್ರಮುಖವಾಗಿ ಮಾಜಿ ಜೆಡಿ(ಯು) ಶಾಸಕ ಛೋಟು ವಾಸಾವ ಅವರ ಮಗ ಮಹೇಶ್ ವಾಸಾವ ಅವರ ಮೇಲೆ ಬರೋಬರಿ 24 ಕ್ರಿಮಿನಲ್ ಕೇಸ್ ಇದ್ದು ಅದರಲ್ಲಿ ಕೊಲೆ, ದರೋಡೆ ಆರೋಪಗಳಿವೆ.

  • ಜಾಮೀನಿನ ಮೇಲೆ ಜೈಲಿನಿಂದ ಹೊರಬಂದ ಆರೋಪಿಗೆ ಅದ್ಧೂರಿ ಮೆರವಣಿಗೆ

    ಜಾಮೀನಿನ ಮೇಲೆ ಜೈಲಿನಿಂದ ಹೊರಬಂದ ಆರೋಪಿಗೆ ಅದ್ಧೂರಿ ಮೆರವಣಿಗೆ

    ಬಾಗಲಕೋಟೆ: ಜಾಮೀನು ಮೇಲೆ ಜೈಲಿನಿಂದ ಹೊರಬಂದ ಎಂಐಎಂ ಮುಖಂಡರಿಗೆ ಬಾಗಲಕೋಟೆಯಲ್ಲಿ ಅದ್ಧೂರಿ ಮೆರವಣಿಗೆ ಮೂಲಕ ಸ್ವಾಗತ ಮಾಡಿಕೊಂಡಿದ್ದಾರೆ.

    ಟಿಪ್ಪು ಜಯಂತಿ ಅಂಗವಾಗಿ ನಿಷೇಧಾಜ್ಞೆ ನಡುವೆಯೂ ನವಂಬರ್ 3 ರಂದು ಇಳಕಲ್ ಪಟ್ಟಣದಲ್ಲಿ ಕೆಲ ಮುಖಂಡರು ಮೆರವಣಿಗೆ ಅನುಮತಿ ನೀಡುವಂತೆ ಸಭೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ನಗರದಲ್ಲಿ ಪೊಲೀಸರ ಮೇಲೆ ಕೆಲವರು ಕಲ್ಲೂತೂರಾಟ ನಡೆಸಿದ್ದರು. ಈ ವೇಳೆ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದರು. ಇದರಿಂದ ಪಟ್ಟಣದಲ್ಲಿ ಬಿಗುವಿನ ವಾತಾವರಣಕ್ಕೆ ಕಾರಣವಾಗಿತ್ತು.

    ಆ ಘಟನೆಗೆ ಸಂಬಂಧಿಸಿ ಎಂಐಎಂ ಮುಖಂಡ ಉಸ್ಮಾನಗಣಿ ಉಮನಾಬಾದ್, ಜೆಡಿಎಸ್ ಮುಖಂಡ ಜಬ್ಬರ ಕಲಬುರ್ಗಿ ಸೇರಿದಂತೆ 13 ಜನರ ಮೇಲೆ ದೂರು ದಾಖಲಾಗಿ ಜೈಲಿಗೆ ಕಳುಹಿಸಲಾಗಿತ್ತು. ಆದರೆ ಸೋಮವಾರ ಜಾಮೀನಿನ ಮೇಲೆ ಹೊರಬಂದವರಿಗೆ ಮೆರವಣಿಗೆ ಮೂಲಕ ಸ್ವಾಗತ ಮಾಡಿಕೊಳ್ಳಲಾಗಿದೆ.

    ಇದನ್ನೂ ಓದಿ: ಬೇಲ್ ಮೇಲೆ ಬಿಡುಗಡೆಯಾದ ಅತ್ಯಾಚಾರ ಆರೋಪಿಗೆ ರಾಜಮರ್ಯಾದೆ- 500 ಬೈಕ್, ಕಾರ್‍ಗಳ ಜೊತೆ ಮೆರವಣಿಗೆ