Tag: Criminal Mind

  • Kolkata Horror | ಆರ್‌.ಜಿ ಕರ್‌ ಕಾಲೇಜಿನ ಮಾಜಿ ಪ್ರಾಂಶುಪಾಲನ ಮನೆ ಸೇರಿ 7 ಕಡೆ ಇಡಿ ದಾಳಿ!

    Kolkata Horror | ಆರ್‌.ಜಿ ಕರ್‌ ಕಾಲೇಜಿನ ಮಾಜಿ ಪ್ರಾಂಶುಪಾಲನ ಮನೆ ಸೇರಿ 7 ಕಡೆ ಇಡಿ ದಾಳಿ!

    ಕೋಲ್ಕತ್ತಾ: ಇಲ್ಲಿನ ಆರ್‌.ಜಿ ಕರ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಸಂದೀಪ್‌ ಘೋಷ್‌ (Sandip Ghosh) ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ED) ಶುಕ್ರವಾರ ಬೆಳ್ಳಂಬೆಳಗ್ಗೆ ದಾಳಿ ನಡೆಸಿದೆ.

    ಸಂದೀಪ್‌ ಘೋಷ್‌ ಮನೆ ಮಾತ್ರವಲ್ಲದೇ ಅವರ ನಿಕಟವರ್ತಿಗಳ ಮನೆ ಮೇಲೂ ದಾಳಿ ನಡೆಯುತ್ತಿದೆ. ಕೋಲ್ಕತ್ತಾ (Kolkata) ಮತ್ತು ಹೌರಾದ ಒಟ್ಟು 7 ಕಡೆಗಳಲ್ಲಿ ಇಡಿ ತಂಡ ದಾಳಿ ನಡೆಸುತ್ತಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಟಿಫಿನ್ ಬಾಕ್ಸ್‌ನಲ್ಲಿ ಬಿರಿಯಾನಿ ತಂದಿದ್ದಕ್ಕೆ ವಿದ್ಯಾರ್ಥಿಯನ್ನು ಶಾಲೆಯಿಂದ ಹೊರಹಾಕಿದ ಪ್ರಾಂಶುಪಾಲ

    ಆರ್‌.ಜಿ ಕರ್‌ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ (RG Kar MCH) ನಡೆದ ಹಣಕಾಸು ಅಕ್ರಮಗಳಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಇತ್ತೀಚೆಗಷ್ಟೇ ಸಂದೀಪ್‌ ಘೋಷ್‌ ಅವರನ್ನ ಸಿಬಿಐ ಬಂಧಿಸಿದೆ. ಸತತ 2 ವಾರಗಳ ಕಾಲ ನಡೆದ ವಿಚಾರಣೆಯ ಬಳಿಕ ಮಾಜಿ ಪ್ರಾಂಶುಪಾಲನ ಬಂಧನವಾಗಿತ್ತು. ಇದನ್ನೂ ಓದಿ: Kolkata Horror | ಟ್ರೈನಿ ವೈದ್ಯೆ ʻಹತ್ಯಾʼಚಾರ ನಡೆದಿದ್ದ ವೈದ್ಯಕೀಯ ಕಾಲೇಜಿನ ಮಾಜಿ ಪ್ರಾಂಶುಪಾಲ ಸಂದೀಪ್‌ ಘೋಷ್‌ ಅರೆಸ್ಟ್‌

    ವೈದ್ಯಕೀಯ ಕಾಲೇಜಿನಲ್ಲಿ ನಡೆದ ಹಣಕಾಸು ಅವ್ಯವಹಾರಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 7ರ ಜೊತೆಗೆ ಕ್ರಿಮಿನಲ್ ಪಿತೂರಿ, ವಂಚನೆ ಮತ್ತು ಅಪ್ರಾಮಾಣಿಕತೆ ಸೆಕ್ಷನ್‌ ಅಡಿಯಲ್ಲಿ ಪ್ರಕರಣ ದಾಖಲಿಸಿದೆ. ಅಲ್ಲದೇ ಪ್ರಕರಣ ಜಾಮೀನು ರಹಿತ ಸ್ವರೂಪದ್ದಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದರು. ಇದನ್ನೂ ಓದಿ: ಮದುವೆಯಾಗ್ತೀನಿ ಅಂತಾ ಎಣ್ಣೆ ಕುಡಿಸಿ ರಸ್ತೆಯಲ್ಲೇ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ದುರುಳ

    ಸಂದೀಪ್‌ ಘೋಷ್‌, 2021ರ ಫೆಬ್ರವರಿಯಿಂದ 2023ರ ಸೆಪ್ಟೆಂಬರ್‌ ವರೆಗೆ RG ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದರು. ಅಕ್ಟೋಬರ್ 2023 ರಲ್ಲಿ ವರ್ಗಾವಣೆಯಾಗಿದ್ದರು. ಇದಾದ ಒಂದೇ ತಿಂಗಳಲ್ಲಿ ಮತ್ತೆ ಅದೇ ಕಾಲೇಜಿನಲ್ಲಿ ಕರ್ತವ್ಯಕ್ಕೆ ಹಾಜರಾದರು. ಕಳೆದ ತಿಂಗಳು ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ನಡೆಯುವ ದಿನದವರೆಗೂ ಅವರು ಹುದ್ದೆಯಲ್ಲಿದ್ದರು. ಆಗಸ್ಟ್ 9 ರಂದು ಟ್ರೈನಿ ವೈದ್ಯೆಯ ಮೃತ ದೇಹವು ಅರೆನಗ್ನ ಸ್ಥಿತಿಯಲ್ಲಿ ಪತ್ತೆಯಾದ ಬಳಿಕ ಬಂಗಾಳ ಸೇರಿದಂತೆ ರಾಷ್ಟ್ರವ್ಯಾಪಿ ಪ್ರತಿಭಟನೆಗಳು ಭುಗಿಲೆದ್ದಿತು. ಬೆನ್ನಲ್ಲೇ ಸಂದೀಪ್‌ ಘೋಷ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದರು. ಇದಾದ ಬಳಿಕ ಈ ಬೆನ್ನಲ್ಲೇ ಭಾರತೀಯ ವೈದ್ಯಕೀಯ ಸಂಘವು ಡಾ.ಸಂದೀಪ್ ಘೋಷ್ ಅವರ ಸದಸ್ಯತ್ವವನ್ನು ಅಮಾನತುಗೊಳಿಸಿತು.

  • Kolkata Horror | ಟ್ರೈನಿ ವೈದ್ಯೆ ʻಹತ್ಯಾʼಚಾರ ನಡೆದಿದ್ದ ವೈದ್ಯಕೀಯ ಕಾಲೇಜಿನ ಮಾಜಿ ಪ್ರಾಂಶುಪಾಲ ಸಂದೀಪ್‌ ಘೋಷ್‌ ಅರೆಸ್ಟ್‌

    Kolkata Horror | ಟ್ರೈನಿ ವೈದ್ಯೆ ʻಹತ್ಯಾʼಚಾರ ನಡೆದಿದ್ದ ವೈದ್ಯಕೀಯ ಕಾಲೇಜಿನ ಮಾಜಿ ಪ್ರಾಂಶುಪಾಲ ಸಂದೀಪ್‌ ಘೋಷ್‌ ಅರೆಸ್ಟ್‌

    ಕೋಲ್ಕತ್ತಾ: ಕಳೆದ ತಿಂಗಳು ಟ್ರೈನಿ ವೈದ್ಯೆ ಮೇಲೆ ಅತ್ಯಾಚಾರ ಮತ್ತು ಕೊಲೆ ನಡೆದಿದ್ದ ಆರ್.ಜಿ ಕರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ (Kolkata’s RG Kar hospital) ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್‌ನನ್ನ (Sandip Ghosh) ಕೇಂದ್ರೀಯ ತನಿಖಾ ದಳ (CBI) ಸೋಮವಾರ ಬಂಧಿಸಿದೆ.

    ಆರ್‌.ಜಿ ಕರ್‌ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಡೆದ ಹಣಕಾಸು ಅಕ್ರಮಗಳಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಸಿಬಿಐ ಸಂದೀಪ್‌ ಘೋಷ್‌ ಅವರನ್ನ ಸೋಮವಾರ (ಇಂದು ಸಂಜೆ) ಬಂಧಿಸಿದೆ. ಸತತ 2 ವಾರಗಳ ಕಾಲ ನಡೆದ ವಿಚಾರಣೆಯ ಬಳಿಕ ಮಾಜಿ ಪ್ರಾಂಶುಪಾಲರ ಬಂಧನವಾಗಿದೆ. ಇದನ್ನೂ ಓದಿ: Kolkata Horror | ಕ್ರಿಮಿನಲ್‌ ಮನಸ್ಥಿತಿ ಬರೋದು ಏಕೆ? ಮನೋವಿಜ್ಞಾನಿಗಳು ಏನ್‌ ಹೇಳ್ತಾರೆ?

    ವೈದ್ಯಕೀಯ ಕಾಲೇಜಿನಲ್ಲಿ ನಡೆದ ಹಣಕಾಸು ಅವ್ಯವಹಾರಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 7ರ ಜೊತೆಗೆ ಕ್ರಿಮಿನಲ್ ಪಿತೂರಿ, ವಂಚನೆ ಮತ್ತು ಅಪ್ರಾಮಾಣಿಕತೆ ಸೆಕ್ಷನ್‌ ಅಡಿಯಲ್ಲಿ ಪ್ರಕರಣ ದಾಖಲಿಸಿದೆ. ಅಲ್ಲದೇ ಪ್ರಕರಣ ಜಾಮೀನು ರಹಿತ ಸ್ವರೂಪದ್ದಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: Kolkata Horror | ಕಿರಿಯ ವೈದ್ಯರಿಗೆ ನಾನು ಎಂದಿಗೂ ಬೆದರಿಕೆ ಹಾಕಿಲ್ಲ: ಮಮತಾ ಬ್ಯಾನರ್ಜಿ

    ಕೋಲ್ಕತ್ತಾ ಹೈಕೋರ್ಟ್‌ನ ನಿರ್ದೇಶನದ ಮೇರೆಗೆ ಕೋಲ್ಕತ್ತಾ ಪೊಲೀಸರ ವಿಶೇಷ ತನಿಖಾ ತಂಡದಿಂದ ಸಿಬಿಐ ತನಿಖೆ ಹೊಣೆ ವಹಿಸಿಕೊಂಡಿತ್ತು. ಬಳಿಕ ಎಫ್‌ಐಆರ್‌ ದಾಖಲಿಸಿದ್ದ ಸಿಬಿಐ ಕಳೆದ 2 ವಾರಗಳಿಂದ 150ಕ್ಕೂ ಹೆಚ್ಚುಗಂಟೆಗಳ ಕಾಲ ವಿಚಾರಣೆ ನಡೆಸಿತ್ತು.

    ಸಂದೀಪ್‌ ಘೋಷ್‌, 2021ರ ಫೆಬ್ರವರಿಯಿಂದ 2023ರ ಸೆಪ್ಟೆಂಬರ್‌ ವರೆಗೆ RG ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು. ಅಕ್ಟೋಬರ್ 2023 ರಲ್ಲಿ ವರ್ಗಾವಣೆಯಾಗಿದ್ದರು. ಇದಾದ ಒಂದೇ ತಿಂಗಳಲ್ಲಿ ಮತ್ತೆ ಅದೇ ಕಾಲೇಜಿನಲ್ಲಿ ಕರ್ತವ್ಯಕ್ಕೆ ಹಾಜರಾದರು. ಕಳೆದ ತಿಂಗಳು ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ನಡೆಯುವ ದಿನದವರೆಗೂ ಅವರು ಹುದ್ದೆಯಲ್ಲಿದ್ದರು. ಆಗಸ್ಟ್ 9 ರಂದು ಟ್ರೈನಿ ವೈದ್ಯೆಯ ಮೃತ ದೇಹವು ಅರೆನಗ್ನ ಸ್ಥಿತಿಯಲ್ಲಿ ಪತ್ತೆಯಾದ ಬಳಿಕ ಬಂಗಾಳ ಸೇರಿದಂತೆ ರಾಷ್ಟ್ರವ್ಯಾಪಿ ಪ್ರತಿಭಟನೆಗಳು ಭುಗಿಲೆದ್ದಿತು.

    ಈ ಬೆನ್ನಲ್ಲೇ ಸಂದೀಪ್‌ ಘೋಷ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದರು. ಇದಾದ ಬಳಿಕ ಈ ಬೆನ್ನಲ್ಲೇ ಭಾರತೀಯ ವೈದ್ಯಕೀಯ ಸಂಘವು ಡಾ.ಸಂದೀಪ್ ಘೋಷ್ ಅವರ ಸದಸ್ಯತ್ವವನ್ನು ಅಮಾನತುಗೊಳಿಸಿತು. ಇದನ್ನೂ ಓದಿ: Kolkata Horror | 36 ಗಂಟೆಗಳ ಅಮಾನುಷ ಶಿಫ್ಟ್ ಸರಿಯಲ್ಲ ಎಂದ ಸುಪ್ರೀಂ – ಸುಳ್ಳುಪತ್ತೆ ಪರೀಕ್ಷೆಗೆ ಅಸ್ತು!

  • Kolkata Horror | ಕ್ರಿಮಿನಲ್‌ ಮನಸ್ಥಿತಿ ಬರೋದು ಏಕೆ? ಮನೋವಿಜ್ಞಾನಿಗಳು ಏನ್‌ ಹೇಳ್ತಾರೆ?

    Kolkata Horror | ಕ್ರಿಮಿನಲ್‌ ಮನಸ್ಥಿತಿ ಬರೋದು ಏಕೆ? ಮನೋವಿಜ್ಞಾನಿಗಳು ಏನ್‌ ಹೇಳ್ತಾರೆ?

    ಇಡೀ ದೇಶವನ್ನೇ ತಲ್ಲಣಗೊಳಿಸಿರುವ ಕೋಲ್ಕತ್ತಾ ತರಬೇತಿ ವೈದ್ಯೆ ಮೇಲಿನ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ತನಿಖೆ (Kolkata Case Investigation) ಹೊಸ ಹೊಸ ಆಯಾಮಗಳಲ್ಲಿ ನಡೆಯುತ್ತಿದ್ದು, ಹೊಸ ಹೊಸ ಸಾಕ್ಷ್ಯಗಳು ಬೆಳಕಿಗೆ ಬರುತ್ತಿವೆ.

    ಕೋಲ್ಕತ್ತಾ (Kolkata) ಟ್ರೈನಿ ವೈದ್ಯೆ ರೇಪ್‌ & ಮರ್ಡರ್‌ ಕೇಸ್‌ನ ಆರೋಪಿ ಮದ್ಯ ಸೇವಿಸಿ ಆಗಾಗ್ಗೆ ಜಗಳವಾಡುತ್ತಿದ್ದ, ಸೆಕ್ಸ್‌ ವೀಡಿಯೋ ನೋಡುವ ಚಟ ಹೊಂದಿದ್ದ ಎಂಬ ಅಂಶಗಳು ತನಿಖೆಯಲ್ಲಿ ಬಯಲಾಗಿವೆ. ಆದ್ರೆ ಅದಕ್ಕಿಂತಲೂ ಕ್ರೂರವಾದ ಪ್ರಕರಣಗಳು ಉತ್ತರ ಪ್ರದೇಶದ ಬರೇಲಿಯಲ್ಲಿ ಬೆಳಕಿಗೆ ಬಂದಿತ್ತು. ಸೀರಿಯಲ್‌ ಕಿಲ್ಲರ್‌ವೊಬ್ಬ 40ಕ್ಕೂ ಹೆಚ್ಚು ವಯಸ್ಕ ಮಹಿಳೆಯರನ್ನು ಕೊಂದು ರುಂಡ-ಮುಂಡಗಳನ್ನು ಕತ್ತರಿಸಿ ಬಿಸಾಡಿದ್ದ. ಈ ಪ್ರಕರಣಗಳನ್ನು ಗಮನಿಸಿದಾಗ ಕೊಲೆಗಾರನ ಮನಸ್ಸು ಎಷ್ಟು ವಿಕೃತವಾಗಿತ್ತು ಎಂಬುದು ತಿಳಿಯುತ್ತದೆ. ಕೆಲ ಸಿನಿಮಾ, ವೆಬ್‌ಸಿರೀಸ್‌ಗಳಲ್ಲೂ (Web Series) ಇಂತಹ ಸೈಕೋ ಕಿಲ್ಲರ್‌ಗಳ ಬಗ್ಗೆ ಕಥೆ ಎಣೆಯಲಾಗಿದೆ. ಇಂತಹ ʻಕ್ರಿಮಿನಲ್‌ ಮೈಂಡ್‌ʼ (Criminal Mind) ಇರುವ ವ್ಯಕ್ತಿಗಳ ಬಗ್ಗೆ ಮನೋವಿಜ್ಞಾನಿಗಳು ಏನಂತಾರೆ ನೋಡೋಣ…

    ವಿಜ್ಞಾನದಲ್ಲಿ ಎಲ್ಲದಕ್ಕೂ ಉತ್ತರವಿಲ್ಲ

    ವಿಜ್ಞಾನ (Science) ಲೋಕವೆಂಬುದು ಕುತೂಹಲ, ಬಗೆದಷ್ಟು ಆಳ. ಇಲ್ಲಿ ಎಲ್ಲದಕ್ಕೂ ಉತ್ತರ ಸಿಗುವುದಿಲ್ಲ. ಕೆಲವೊಂದು ಅನುಭವಕ್ಕೆ ಬಂದಾಗಷ್ಟೇ ನಂಬಬೇಕಾಗುತ್ತದೆ, ಇಲ್ಲದಿದ್ದರೆ ಅನುಭವಕ್ಕಾಗಿ ಕಾಯಬೇಕಾಗುತ್ತೆ. ಆದಾಗ್ಯೂ ಕೆಲ ಮನೋವಿಜ್ಞಾನಿಗಳು ಮನುಷ್ಯನಲ್ಲಿ ಮಾನಸಿಕ ವಿಕೃತಿಗಳನ್ನು ಕಂಡಾಗ ಅವುಗಳನ್ನು ʻಕ್ರಿಮಿನಲ್‌ ಮೈಂಡ್‌ʼ ಅನ್ನೋ ಪದಗಳಲ್ಲಿ ಗುರುತಿಸಿ ಅಭಿಪ್ರಾಯಗಳನ್ನು ಪ್ರಕಟಿಸಿದ್ದಾರೆ. ʻಕ್ರಿಮಿನಲ್‌ ಮೈಂಡ್‌ʼ ಎಂಬ ಪದವನ್ನು ಮೊದಲಬಾರಿಗೆ 1928ರಲ್ಲಿ ಪರಿಚಯಿಸಲಾಯಿತು. ʻಜರ್ನಲ್‌ ಆಫ್‌ ಅಬ್ನಾರ್ಮಲ್‌ ಅಂಡ್‌ ಸೋಶಿಯಲ್‌ ಸೈಕಾಲಜಿʼ ಎಂಬ ಜರ್ನಲ್‌ನಲ್ಲಿ ಲೇಖನವೂ ಪ್ರಕಟವಾಯಿತು. ʻಕ್ರಿಮಿನಲ್‌ ಮೈಂಡ್‌ʼ ವ್ಯಕ್ತಿಗಳು ಕೇವಲ ಒಬ್ಬಿಬ್ಬರಿಗೆ ಮಾತ್ರವಲ್ಲ ಇಡೀ ಮಾನವ ಕುಲಕ್ಕೆ ಅಪಾಯಕಾರಿ ಎಂದು ಹೇಳಿದ್ದರು. ʻಕ್ರಿಮಿನಲ್‌ ಮೈಂಡ್‌ʼ ಎಂಬ ಪದವು ಸುಮಾರು ನೂರು ವರ್ಷಗಳ ಹಿಂದೆಯೇ ಅಸ್ತಿತ್ವಕ್ಕೆ ಬಂದಿದ್ದರೂ, ಇಂತಹ ಕೇಸ್‌ಗಳು ವಿಜ್ಞಾನ ಲೋಕಕ್ಕೆ ಹಾಗೂ ವಿಜ್ಞಾನಿಗಳಿಗೆ ಸವಾಲಿನದ್ದಾಗಿಯೇ ಇದೆ. ಕೆಲ ವಿಜ್ಞಾನಿಗಳು ಇಂತಹ ಮಾನಸಿಕ ಸ್ಥಿತಿಯುಳ್ಳ ವ್ಯಕ್ತಿಗಳನ್ನು ಮುಂಚಿತವಾಗಿಯೇ ಗುರುತಿಸಬಹುದಾ ಅನ್ನೋ ಪ್ರಯತ್ನಕ್ಕೂ ಮುಂದಾಗಿದ್ದಾರೆ. ಅದಕ್ಕಾಗಿ ಮೆದುಳಿನ ಸ್ಕ್ಯಾನರ್‌ಗಳ ಮೊರೆ ಹೋಗಿದ್ದಾರೆ.

    ತಜ್ಞರ ಪ್ರಕಾರ, ಕೆಲವೇ ಕೆಲವು ಲಕ್ಷಣಗಳನ್ನು ನೋಡಿ ಭವಿಷ್ಯದಲ್ಲಿ ಯಾರೂ ಭಯಾನಕ ಕೊಲೆಗಾರನಾಗಬಹುದು ಅಂತ ನಿರ್ಧರಿಸಲು ಸಾಧ್ಯವಿಲ್ಲ. ಏಕೆಂದರೆ ಅನೇಕ ಸನ್ನಿವೇಶಗಳಲ್ಲಿ ಒಬ್ಬ ವ್ಯಕ್ತಿ ಪ್ರಚೋದನೆಯಿಂದಾಗಿ ತಪ್ಪು ಮಾಡಿರುತ್ತಾನೆ. ಆ ತಪ್ಪನ್ನು ಮುಚ್ಚಿಹಾಕಲು ಮತ್ತೆ ಮತ್ತೆ ತಪ್ಪು ಮಾಡುತ್ತಲೇ ಇರುತ್ತಾನೆ. ಇದನ್ನು ʻಕೋಲ್ಡ್‌ ಬ್ಲಡ್‌ʼ ಎಂದೂ ಸಹ ಕರೆಯುತ್ತಾರೆ ಎಂಬುದಾಗಿ ತಜ್ಞರು ತಿಳಿಸಿದ್ದಾರೆ.

    ಕೋಲ್ಡ್‌ ಬ್ಲಡ್‌ ಹಿಂದಿನ ಕಥೆ ಏನು?

    ಸಾಮಾನ್ಯವಾಗಿ ಮನೋವಿಜ್ಞಾನಿಗಳು ಹೇಳುವ ಪ್ರಕಾರ, ಕೊಲೆಗಾರನ ಮನಸ್ಥಿತಿ ಹೊಂದಿರುವ ವ್ಯಕ್ತಿಗಳಲ್ಲಿ ಮೆದುಳಿನ ಕಾರ್ಟೆಕ್ಸ್‌ ಎಂಬ ಭಾಗವು ಸಾಮಾನ್ಯ ಸ್ಥಿತಿಗಿಂತ ಕೊಂಚ ಕುಗ್ಗಿರುತ್ತದೆ. ಇದಕ್ಕೆ ಉದಾಹರಣೆಯೂ ಇದೆ. 90ರ ದಶಕದಲ್ಲಿ ನ್ಯೂರೋ ಕ್ರಿಮಿನಾಲಜಿಸ್ಟ್‌ ಅಡ್ರಿಯನ್‌ ರಯಾನ್‌ ಅವರು ಕೋಲ್ಡ್‌-ಬ್ಲಡ್‌ ಕೊಲೆಗಾರರ ಬಗ್ಗೆ ಅಧ್ಯಯನಕ್ಕೆ ಮುಂದಾಗಿದ್ದರು. ಅದಕ್ಕಾಗಿ ಅಮೆರಿಕನ್‌ ಜೈಲುಗಳಿಗೆ ತೆರಳಿದ್ದರು. ಆಗ ಕ್ಯಾಲಿಫೋರ್ನಿಯಾ ಇಂತಹ ಕೊಲೆ ಪ್ರಕಣಗಳಿಂದ ಕುಖ್ಯಾತಿಯಾಗಿತ್ತು. ಆದ್ದರಿಂದ ರಯಾನ್‌ ಅವರು ಇಂತಹವರ ಮೆದುಳಿನಲ್ಲಿರುವ ಜೀವರಾಸಾಯನಿಕ ಕ್ರಿಯೆಗಳನ್ನು ಅರ್ಥಮಾಡಿಕೊಳ್ಳಲು 40ಕ್ಕೂ ಹೆಚ್ಚು ಕೈದಿಗಳ ʻಪಾಸಿಟ್ರಾನ್‌ ಎಮಿಷನ್‌ ಟೊಮೊಗ್ರಫಿʼ (ಪಿಇಟಿ) ಟೆಸ್ಟ್‌ ಕೂಡ ನಡೆಸಿದ್ದರು. ಈ ವೇಳೆ ಮೆದುಳಿನ ಹಲವು ಭಾಗಗಳು ಕುಗ್ಗಿರುವುದು ಸ್ಕ್ಯಾನ್‌ನಲ್ಲಿ ಕಂಡುಬಂದಿತು. ರಯಾನ್‌ ತಮ್ಮ ಅಧ್ಯಯನ ವರದಿ ಬಿಡುಗಡೆ ಮಾಡಿದಾಗ ಜನರು ಆತನನ್ನು ಹುಚ್ಚ ಎಂದು ಕರೆಯಲು ಶುರು ಮಾಡಿದರು. ಕಾಲಾನಂತರದಲ್ಲಿ ಅದನ್ನು ಜನ ನಂಬತೊಡಗಿದರು. ಇದಾದ ಸ್ವಲ್ಪ ಸಮಯದ ನಂತರ ʻದಿ ಅನ್ಯಾಟಮಿ ಆಫ್‌ ವಯಲೆನ್ಸ್‌ʼ ಎಂಬ ಪುಸ್ತಕವನ್ನು ಹೊರತಂದರು, ಅದರಲ್ಲಿ ಡಾ.ರಯಾನ್‌ ಅಪರಾಧಿಗಳ ಮನಸ್ಸಿನಲ್ಲಿ ತಮ್ಮ 35 ವರ್ಷಗಳ ಅನುಭವವನ್ನು ದಾಖಲಿಸಿದರು.

    ಪ್ರಿಫ್ರಂಟಲ್‌ ಕಾರ್ಟೆಕ್ಸ್‌ನಲ್ಲಿ ಈ ಕುಗ್ಗುವಿಕೆ ಏಕೆ ಆಗುತ್ತದೆ?

    ವಿಜ್ಞಾನಿಗಳ ಪ್ರಕಾರ, ಇದಕ್ಕೆ ಹಲವು ಕಾರಣಗಳಿರಬಹುದು. ಆನುವಂಶಿಕವು ಆಗಿರಬಹುದು, ಕೆಲವೊಮ್ಮೆ ತಲೆಗೆ ಆಳವಾದ ಪೆಟ್ಟಾಗುವುದರಿಂದ, ಬಾಲ್ಯದಲ್ಲಿ ದೌರ್ಜನ್ಯಕ್ಕೆ ಒಳಗಾದವರು, ಕಷ್ಟದಿಂದ ಜೀವನ ನಡೆಸಿದವರಿಗೂ ಈ ರೀತಿ ಸಂಭವಿಸಬಹುದು. ಆದ್ರೆ ಸರಣಿ ಕೊಲೆಗಾರರ ಸ್ಥಿತಿ ಕೊಂಚ ವ್ಯತ್ಯಾಸ ಇರುತ್ತದೆ. ಅದರೂ ಅವರ ಆಲೋಚನೆ, ತಿಳಿವಳಿಕೆ ಹಾಗೂ ಒತ್ತಡಕ್ಕೆ ಒಳಗಾದ ಸನ್ನಿವೇಶಗಳು ಇವೆಲ್ಲವೂ ಅವರ ಮನಸ್ಥಿತಿಗೆ ಕಾರಣವಾಗಿರುತ್ತದೆ. ಅಂತಹವರು ತಮ್ಮ ಬಗ್ಗೆ ಬಿಟ್ಟು ಯಾರೊಬ್ಬರ ಬಗ್ಗೆಯೂ ಚಿಂತಿಸುವುದಿಲ್ಲ. ಒಂದು ವೇಳೆ ತಮ್ಮ ಮಾನಸಿಕ ಸ್ಥಿತಿಗೆ ತೊಂದರೆಯಾದ್ರೆ, ಪ್ಲ್ಯಾನ್‌ ಮಾಡಿ ಕೊಲೆ ಮಾಡುತ್ತಾರೆ. ಜೊತೆಗೆ ಕೊಲೆಯ ಪಶ್ಚಾತಾಪವೂ ಅವರಿಗೆ ಕಾಡುವುದಿಲ್ಲ, ಕೊಲೆ ಮಾಡಿರುವುದಾಗಿ ತಾವೇ ಒಪ್ಪಿಕೊಳ್ಳುತ್ತಾರೆ. ಇದೇ ರೀತಿ ಕೋಲ್ಕತ್ತಾ ಟ್ರೈನಿ ವೈದ್ಯೆ ರೇಪ್‌ & ಮರ್ಡರ್‌ ಆರೋಪಿ ಸಂಜಯ್‌ ರಾಯ್‌ ಪ್ರಕರಣದಲ್ಲೂ ಆಗಿದೆ ಎಂದು ಹೇಳಲಾಗಿದೆ.

    ಪಾಲಿಗ್ರಾಫ್‌ ಟೆಸ್ಟ್‌ ಏಕೆ ಬೇಕು?

    ಸುಳ್ಳುಪತ್ತೆ ಮಾಡುವಲ್ಲಿ ಎಷ್ಟರಮಟ್ಟಿಗೆ ಯಶಸ್ಸು ಕಾಣುತ್ತೆ ಎನ್ನುವ ಬಗ್ಗೆ ಇಲ್ಲಿ ಒಂದಿಷ್ಟು ಮಾಹಿತಿ ನೀಡಲಾಗಿದೆ. ಈ ಪರೀಕ್ಷೆಯನ್ನು ಸಾಮಾನ್ಯವಾಗಿ, ಅಪರಾಧ ಪ್ರಕರಣದಲ್ಲಿ ಆರೋಪಿಗಳ ಮೇಲೆ ಮಾಡಲಾಗುತ್ತದೆ. ಆರೋಪಿ ಪದೇ ಪದೇ ತನ್ನ ಹೇಳಿಕೆಗಳನ್ನು ಬದಲಾಯಿಸುತ್ತಿದ್ದರೆ, ಆತನ ಮೇಲೆ ಸಿಕ್ಕಾಪಟ್ಟೆ ಡೌಟ್​ ಇದ್ದಾಗ ಇಂಥ ಪರೀಕ್ಷೆಯನ್ನು ನಡೆಸಲಾಗುತ್ತದೆ. ಹಾಗೆಂದು ಎಲ್ಲಾ ಆರೋಪಿಗಳ ಪರೀಕ್ಷೆಗಳನ್ನು ನಡೆಸಲು ಸಾಧ್ಯವಿಲ್ಲ. ಏಕೆಂದರೆ, ಸುಪ್ರೀಂ ಕೋರ್ಟ್​ ತೀರ್ಪಿನ ಅನ್ವಯ ಇಂಥ ಪರೀಕ್ಷೆಗೆ ಒಳಪಡುವ ಮೊದಲು ಆರೋಪಿ ಇದಕ್ಕೆ ಒಪ್ಪಿಗೆ ಸೂಚಿಸುವುದು ಕಡ್ಡಾಯ. ಒಂದು ವೇಳೆ ಆರೋಪಿ ಈ ಪರೀಕ್ಷೆಗೆ ಒಳಗಾಗಲು ಒಪ್ಪಿಗೆ ಸೂಚಿಸದೇ ಹೋದರೆ, ಆಗಲೂ ಪರೀಕ್ಷೆ ಮಾಡಿದರೆ, ಭಾರತೀಯ ಸಂವಿಧಾನದ ಆರ್ಟಿಕಲ್ 20(3) ಪ್ರಕಾರ ಅದು ಕಾನೂನು ವಿರೋಧಿ ಆಗುತ್ತದೆ.