Tag: Criminal Law

  • ಪಶ್ಚಿಮ ಬಂಗಾಳದ ʼಅಪರಾಜಿತ ಬಿಲ್‌ʼ ಪೋಕ್ಸೊಗಿಂತ ಭಿನ್ನ ಹೇಗೆ?

    ಪಶ್ಚಿಮ ಬಂಗಾಳದ ʼಅಪರಾಜಿತ ಬಿಲ್‌ʼ ಪೋಕ್ಸೊಗಿಂತ ಭಿನ್ನ ಹೇಗೆ?

    ಕೋಲ್ಕತ್ತಾ ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಮಮತಾ ಬ್ಯಾನರ್ಜಿ (Mamata Banerjee) ಸರ್ಕಾರ ಅತ್ಯಾಚಾರಿಗಳಿಗೆ ಅತ್ಯಂತ ಕಠಿಣ ಶಿಕ್ಷೆ ವಿಧಿಸಲು ಮುಂದಾಗಿದೆ. ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯವನ್ನು ತಡೆಯುವ ಮತ್ತು ಇಂತಹ ಪ್ರಕರಣಗಳಲ್ಲಿ ಅಪರಾಧಿಗಳಿಗೆ ಶೀಘ್ರ, ಕಠಿಣ ಶಿಕ್ಷೆ ನೀಡುವ ನಿಟ್ಟಿನಲ್ಲಿ ಅತ್ಯಾಚಾರ ತಡೆ ವಿಧೇಯಕಕ್ಕೆ ಪಶ್ಚಿಮ ಬಂಗಾಳ (West Bengal) ಸರ್ಕಾರ ಅನುಮೋದನೆ ನೀಡಿದೆ. ಈ ಸಂಬಂಧ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದುಕೊಂಡಿದ್ದ ಸರ್ಕಾರ ಇದಕ್ಕಾಗಿ ಸೆ.2ರಿಂದ ವಿಶೇಷ ಅಧಿವೇಶನ ನಡೆಸಿ ಮಂಗಳವಾರ ʼ ಅತ್ಯಾಚಾರ ತಡೆʼ ಕಾಯ್ದೆಗೆ (Aparajita Bill) ಅನುಮೋದನೆ ನೀಡಿದೆ. ಹಾಗಿದ್ರೆ ‘ಅತ್ಯಾಚಾರ ತಡೆ ಬಿಲ್‌’ ಹಾಗೂ ಪೋಕ್ಸೊ ಕಾಯ್ದೆಗೆ (POCSO Act) ಇರುವ ವ್ಯತ್ಯಾಸವೇನು? ಅಪರಾಜಿತ ಕಾಯ್ದೆಯಲ್ಲಿ ಅಪರಾಧಿಗಳಿಗೆ ಶಿಕ್ಷೆ ಹೇಗೆ ಎಂಬ ಕುರಿತು ಇಲ್ಲಿ ವಿವರಿಸಲಾಗಿದೆ. 

    ಈ ಮಸೂದೆಯು ಭಾರತೀಯ ನ್ಯಾಯ ಸಂಹಿತಾ 2023, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ, 2023 ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ 2012 ರ ಅಡಿಯಲ್ಲಿ ಅಸ್ತಿತ್ವದಲ್ಲಿರುವ ನಿಬಂಧನೆಗಳನ್ನು ತಿದ್ದುಪಡಿ ಮಾಡುವ ಗುರಿಯನ್ನು ಹೊಂದಿದೆ. ಮಹಿಳೆಯರು ಹಾಗೂ ಮಕ್ಕಳ ರಕ್ಷಣೆ ನಿಟ್ಟಿನಲ್ಲಿ ಅಪರಾಧಗಳಿಗೆ ಸದ್ಯ ಇರುವ ಶಿಕ್ಷೆಯ ಪ್ರಮಾಣ ಹೆಚ್ಚಳ (ಕಠಿಣ) ಮಾಡುವುದು ಹಾಗೂ ವೇಗವಾಗಿ ವಿಚಾರಣೆ ನಡೆಸಿ ಶಿಕ್ಷೆ ಒಳಡಿಸುವುದು ಈ ಮಸೂದೆಯ ಉದ್ದೇಶವಾಗಿದೆ. ಸದ್ಯ ವಿಧಾನಸಭೆಯಲ್ಲಿ ಮಂಡನೆಯಾಗಿದ್ದು, ಸೆಪ್ಟೆಂಬರ್‌ 5 ರಂದು ವಿಧಾನ ಪರಿಷತ್ತಿನಲ್ಲಿ ಮಂಡನೆಯಾಗಲಿದೆ. ಆ ದಿನವೇ ರಾಜ್ಯಪಾಲರು ಅಂಕಿತ ಹಾಕಿ ವಿಧೇಯಕ ಜಾರಿಗೆ ಬರುವ ಸಾಧ್ಯತೆ ಇದೆ.

    ಬಂಗಾಳ ಅತ್ಯಾಚಾರ ತಡೆ ಕಾಯ್ದೆಯಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ ವ್ಯಕ್ತಿಗೆ ಕನಿಷ್ಟ ಶಿಕ್ಷೆಯನ್ನು 3 ವರ್ಷಗಳಿಂದ 7 ವರ್ಷಗಳಿಗೆ ಹೆಚ್ಚಿಸಲಾಗಿದೆ. ಹೊಸ ಕಾಯ್ದೆಯ ಪ್ರಕಾರ, ಲೈಂಗಿಕ ದೌರ್ಜನ್ಯದ ಶಿಕ್ಷೆ ಕನಿಷ್ಟ ಏಳು ವರ್ಷಗಳಾಗಿದ್ದು, ದಂಡದೊಂದಿಗೆ 10 ವರ್ಷಗಳವರೆಗೆ ವಿಸ್ತರಿಸಬಹುದು.

    POCSO ಕಾಯ್ದೆಯ ಸೆಕ್ಷನ್ 8ರ ಪ್ರಕಾರ, ಲೈಂಗಿಕ ದೌರ್ಜನ್ಯ ಎಸಗುವವರಿಗೆ ಕನಿಷ್ಟ ಮೂರು ವರ್ಷ ಹಾಗೂ ಐದು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ ಮತ್ತು ದಂಡ ಕೂಡ ಕಟ್ಟಬೇಕಾಗುತ್ತದೆ. 

    ಅಪರಾಜಿತ ಮಸೂದೆಯಲ್ಲಿ ,ಅಪರಾಧ ನಡೆದ 7 ದಿನಗಳ ಒಳಗಾಗಿ ಮಗುವಿನ ಅಥವಾ ಬಾಲಕಿಯ ಸಾಕ್ಷ್ಯವನ್ನು ಕಡ್ಡಾಯವಾಗಿ ದಾಖಲಿಸಬೇಕು. ಆದರೆ ಪೋಕ್ಸೊ ಕಾಯ್ದೆಯಡಿಯಲ್ಲಿ ವಿಶೇಷ ನ್ಯಾಯಾಲಯವು ಅಪರಾಧವನ್ನು ಗುರುತಿಸಿದ 30 ದಿನಗಳೊಳಗೆ ಮಗುವಿನ ಸಾಕ್ಷ್ಯವನ್ನು ದಾಖಲಿಸಬೇಕು ಮತ್ತು ಯಾವುದೇ ವಿಳಂಬಕ್ಕೆ ಕಾರಣಗಳನ್ನು ನ್ಯಾಯಾಲಯವು ದಾಖಲಿಸಬೇಕು ಎಂದು ಕಾಯ್ದೆ ಹೇಳುತ್ತದೆ.

    ಬಂಗಾಳದ ಅತ್ಯಾಚಾರ ತಡೆ ಬಿಲ್‌ ಪ್ರಕಾರ, ಅಪರಾಧ ನಡೆದ 30 ದಿನಗಳಲ್ಲಿ ವಿಶೇಷ ನ್ಯಾಯಾಲಯವು ವಿಚಾರಣೆಯನ್ನು ಪೂರ್ಣಗೊಳಿಸಬೇಕು. ಪೋಕ್ಸೊ ಕಾಯ್ದೆಯಲ್ಲಿ ವಿಶೇಷ ನ್ಯಾಯಾಲಯವು ಅಪರಾಧ ನಡೆದ ದಿನಾಂಕದಿಂದ ಒಂದು ವರ್ಷದೊಳಗೆ ವಿಚಾರಣೆಯನ್ನು ಪೂರ್ಣಗೊಳಿಸಬೇಕು.

    ಅತ್ಯಾಚಾರ ತಡೆ ಕಾಯ್ದೆಯ ಪ್ರಕಾರ ಆರೋಪಿಗೆ ವಿಧಿಸುವ ದಂಡವು ವಿಶೇಷ ನ್ಯಾಯಾಲಯ ನಿರ್ಧರಿಸಿದಂತೆ ಸಂತ್ರಸ್ತೆಯ ಸಂಬಂಧಕರಿಗೆ ಅಥವಾ ಕುಟುಂಬಸ್ಥರಿಗೆ ಪರಿಹಾರವನ್ನು ಒಳಗೊಂಡಿರುತ್ತದೆ. POCSO ಕಾಯ್ದೆಯ ಪ್ರಕಾರ ದಂಡವು ಸಂತ್ರಸ್ತರ ವೈದ್ಯಕೀಯ ವೆಚ್ಚಗಳು ಮತ್ತು ಪುನರ್ವಸತಿಯನ್ನು ಒಳಗೊಂಡಿರುತ್ತದೆ.

    ಶಿಕ್ಷೆ ಏನು?
    ಅತ್ಯಾಚಾರ ಆರೋಪ ಸಾಬೀತಾದ 10 ದಿನದಲ್ಲಿ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ,ಜೀವಾವಧಿ ಶಿಕ್ಷೆ ವಿಧಿಸಲು ವಿಧೇಯಕದಲ್ಲಿ ಅನುಮತಿ ಇದೆ. ಈ ಶಿಕ್ಷೆ ಸಂದರ್ಭದಲ್ಲಿ ಅಪರಾಧಿಗೆ ಪರೋಲ್‌ ನೀಡಲಾಗುವುದಿಲ್ಲ. ಆರೋಪ ಸಾಬೀತಾದ 10 ದಿನದಲ್ಲಿ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ಈ ಬಿಲ್‌ನಲ್ಲಿ ಅನುಮತಿ ಇದೆ. ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸುವ ಕಾನೂನು ಭಾರತದಲ್ಲಿ ಇದೇ ಮೊದಲು ಪಶ್ಚಿಮ ಬಂಗಾಳ ಜಾರಿಗೆ ಬಂದಿದೆ ಎನ್ನಲಾಗಿದೆ.

    ಸಾಮೂಹಿಕ ಅತ್ಯಾಚಾರದ ಶಿಕ್ಷೆಯು ಕನಿಷ್ಠ 20 ವರ್ಷಗಳ ಕಠಿಣ ಸೆರೆವಾಸವನ್ನು ಒಳಗೊಂಡಿರುತ್ತದೆ, ಇದು ವಿತ್ತೀಯ ದಂಡದ ಜೊತೆಗೆ ಜೀವಾವಧಿ ಶಿಕ್ಷೆಗೆ ವಿಸ್ತರಿಸಬಹುದು.

    16 ವರ್ಷದೊಳಗಿನ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದರೆ ಬಂಗಾಳದ ಅತ್ಯಾಚಾರ-ವಿರೋಧಿ ಕಾಯ್ದೆಯಲ್ಲಿ ಅತಿ ಕಠಿಣ ಶಿಕ್ಷೆಯನ್ನು ನೀಡಲಾಗುತ್ತದೆ. ಈ ಶಿಕ್ಷೆಯು ಕಠಿಣ ಸೆರೆವಾಸ, ಜೀವಾವಧಿ ಮತ್ತು ದಂಡ ಅಥವ ಮರಣದಂಡನೆಯನ್ನು ಒಳಗೊಂಡಿರುತ್ತದೆ. POCSO ಕಾಯ್ದೆಯ ಪ್ರಕಾರ  ಹದಿನಾರು ವರ್ಷದ ಒಳಗಿನ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದರೆ ಕನಿಷ್ಟ 20 ವರ್ಷ ಜೈಲು ಶಿಕ್ಷೆಗೆ ಗುರಿಪಡಿಸಲಾಗುತ್ತದೆ.  ಈ ಶಿಕ್ಷೆಯನ್ನು ಜೀವಾವಧಿಯವರೆಗೆ ವಿಸ್ತರಿಸಬಹುದು. ಇದರೊಂದಿಗೆ ದಂಡ ಕೂಡ ಕಟ್ಟಬೇಕಾಗುತ್ತದೆ. 

    ರೇಪ್ ಮಾಡಿದವರಿಗೆ ಮರಣದಂಡನೆ ವಿಧಿಸುವ ಅವಕಾಶವನ್ನು ಇದು ಕಲ್ಪಿಸುತ್ತದೆ. ಚಾರ್ಜ್‌ಶೀಟ್ ಸಲ್ಲಿಸಿದ 36 ದಿನದಲ್ಲಿ ಮರಣಶಿಕ್ಷೆ ನೀಡುವ ನಿಬಂಧನೆಯನ್ನು ಈ ಮಸೂದೆ ಒಳಗೊಂಡಿದೆ. ಆಸಿಡ್ ದಾಳಿಯನ್ನು ತೀವ್ರ ಸ್ವರೂಪದ ಅಪರಾಧ ಎಂದು ಪರಿಗಣಿಸಲಾಗಿದ್ದು, ಜೀವಾವಧಿ ಶಿಕ್ಷೆ ನೀಡುವ ನಿಬಂಧನೆ ಈ ಮಸೂದೆಯಲ್ಲಿದೆ.

    ವಿಶೇಷ ಕಾರ್ಯಪಡೆ:
    ಉಪ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಜಿಲ್ಲಾ ಮಟ್ಟದಲ್ಲಿ ‘ಅಪರಾಜಿತಾ ಕಾರ್ಯಪಡೆ’ ಸ್ಥಾಪಿಸಲಾಗುವುದು. ಅತ್ಯಾಚಾರ ಮತ್ತು ಲೈಂಗಿಕ ಅಪರಾಧಗಳ ತನಿಖೆಯನ್ನು ಈ ಕಾರ್ಯಪಡೆ ನಡೆಸುತ್ತದೆ. 

    ವಿಶೇಷ ಮತ್ತು ತ್ವರಿತ ನ್ಯಾಯಾಲಯಗಳು:
    ತನಿಖಾ ತಂಡಗಳನ್ನು ಸಮರ್ಥವಾಗಿ ನಿರ್ವಹಿಸಲು ಮತ್ತು ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಅತ್ಯಾಚಾರ ಮತ್ತು ಲೈಂಗಿಕ ಅಪರಾಧಗಳ ಪ್ರಕರಣಗಳನ್ನು ಸಮರ್ಥವಾಗಿ ಮೇಲ್ವಿಚಾರಣೆ ಮಾಡಲು 52 ವಿಶೇಷ ನ್ಯಾಯಾಲಯಗಳನ್ನು ರಚಿಸಲು ಮಸೂದೆಯು ಪ್ರಸ್ತಾಪಿಸುತ್ತದೆ.

    ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದ ನ್ಯಾಯಾಲಯದ ವಿಚಾರಣೆಗಳನ್ನು ಅನಧಿಕೃತವಾಗಿ ಮುದ್ರಿಸುವುದು ಅಥವಾ ಪ್ರಕಟಿಸಲು ಮಸೂದೆಯು ದಂಡ ವಿಧಿಸುತ್ತದೆ. ಈ ಮಸೂದೆಯ ಪ್ರಕಾರ ಅಪರಾಧಿಗಳು 3 ರಿಂದ 5 ವರ್ಷಗಳ ಜೈಲು ಶಿಕ್ಷೆ ಮತ್ತು ದಂಡವನ್ನು ಎದುರಿಸಬೇಕಾಗುತ್ತದೆ.

  • ಕಾನ್‌ಸ್ಟೇಬಲ್‌ನಿಂದ ಹಿಡಿದು ಅಧಿಕಾರಿಗಳವರೆಗೂ ಹೊಸ ಕಾನೂನಿನ ಬಗ್ಗೆ ತರಬೇತಿ ನೀಡಿದ್ದೇವೆ: ಪರಮೇಶ್ವರ್‌

    ಕಾನ್‌ಸ್ಟೇಬಲ್‌ನಿಂದ ಹಿಡಿದು ಅಧಿಕಾರಿಗಳವರೆಗೂ ಹೊಸ ಕಾನೂನಿನ ಬಗ್ಗೆ ತರಬೇತಿ ನೀಡಿದ್ದೇವೆ: ಪರಮೇಶ್ವರ್‌

    ಬೆಂಗಳೂರು: ಕಾನ್‌ಸ್ಟೇಬಲ್‌ನಿಂದ (Constable) ಹಿಡಿದು ಅಧಿಕಾರಿಗಳವರೆಗೂ ಹೊಸ ಅಪರಾಧ ಕಾನೂನಿನ (New Criminal Laws) ಬಗ್ಗೆ ತರಬೇತಿ ನೀಡಿದ್ದೇವೆ ಎಂದು ಗೃಹ ಸಚಿವ ಪರಮೇಶ್ವರ್‌ (Parameshwara) ಹೇಳಿದ್ದಾರೆ.

    ಇಂದಿನಿಂದ 3 ದೇಶಿ ಕಾನೂನು ಜಾರಿ ಆಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಹೊಸ ಕಾನೂನುಗಳ ಜಾರಿ ಬಗ್ಗೆ ಎಲ್ಲರಿಗೂ ತರಬೇತಿ ಕೊಟ್ಟಿದ್ದೇವೆ. ಇದಕ್ಕಾಗಿ ಪೊಲೀಸರಿಗೆ ಅಪ್ಲಿಕೇಶನ್‌ ಸಿದ್ಧಪಡಿಸಿದ್ದೇವೆ. ಪೊಲೀಸರಿಗೆ ಹೊಂದಾಣಿಕೆ ಆಗುವವರೆಗೂ ಈ ಅಪ್ಲಿಕೇಶನ್‌ ನೋಡಿಕೊಂಡು ಕೆಲಸ ಮಾಡಬಹುದು ಎಂದು ತಿಳಿಸಿದರು. ಇದನ್ನೂ ಓದಿ: ಭಾರತೀಯ ನ್ಯಾಯ ಸಂಹಿತೆಯಡಿ ದೆಹಲಿಯಲ್ಲಿ ಮೊದಲ FIR ದಾಖಲು

     

    ಇದು ಒಂದು ರೀತಿಯಲ್ಲಿ ಟೆಸ್ಟಿಂಗ್ ಸಮಯ. ಇಡೀ ದೇಶದಲ್ಲಿ ಜಾರಿಯಾಗಿದೆ. ಪ್ರತಿಕ್ರಿಯೆ ನೋಡಿಕೊಂಡು ಸರ್ಕಾರ ಮುಂದೆ ಕೆಲ ಪರಿಷ್ಕರಣೆ ಮಾಡಬಹುದು. ಇವತ್ತಿನಿಂದ ಯಾವೆಲ್ಲ ಪ್ರಕರಣಗಳು ದಾಖಲಾಗುತ್ತದೋ ಅವೆಲ್ಲವೂ ಈ ಹೊಸ ಕಾನೂನಿನ ಅಡಿ ದಾಖಲಾಗಲಿದೆ ಎಂದು ಹೇಳಿದರು. ಇದನ್ನೂ ಓದಿ: ಬ್ರಿಟಿಷರ ಕಾಲದ ಕ್ರಿಮಿನಲ್‌ ಕಾನೂನುಗಳಿಗೆ ಗುಡ್‌ಬೈ – ಇಂದಿನಿಂದ 3 ದೇಶಿ ಕಾನೂನು ಜಾರಿ

    ಹೊಸ ಕಾನೂನುಗಳ ಪರಿಣಾಮ ಏನು ಎನ್ನುವುದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಸ್ವಲ್ಪ ದಿನಗಳ ನಂತರ ಇದರ ಸಕ್ಸಸ್ ಬಗ್ಗೆ ಗೊತ್ತಾಗಲಿದೆ ಎಂದರು.

  • ಭಾರತೀಯ ನ್ಯಾಯ ಸಂಹಿತೆಯಡಿ ದೆಹಲಿಯಲ್ಲಿ ಮೊದಲ FIR ದಾಖಲು

    ಭಾರತೀಯ ನ್ಯಾಯ ಸಂಹಿತೆಯಡಿ ದೆಹಲಿಯಲ್ಲಿ ಮೊದಲ FIR ದಾಖಲು

    ನವದೆಹಲಿ: ಕೇಂದ್ರ ಸರ್ಕಾರ ಇಂದಿನಿಂದ ದೇಶದಲ್ಲಿ ನೂತನ ಕಾನೂನನ್ನು ಜಾರಿ ಮಾಡಿದ್ದು, ಭಾರತೀಯ ನ್ಯಾಯ ಸಂಹಿತೆ 2023ರ (Bharatiya Nyaya Sanhita) ಅಡಿ ಮೊದಲ ಎಫ್‌ಐಆರ್ (FIR) ದಾಖಲಾಗಿದೆ.

    ದೆಹಲಿಯ ಕಮಲಾ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್‌ನ (BNS) ಮೊದಲ ಎಫ್‌ಐಆರ್ ದಾಖಲಿಸಲಾಗಿದೆ. ನಿಯಮ ಬಾಹಿರವಾಗಿ ದೆಹಲಿ ರೈಲ್ವೇ ಮೇಲ್ಸೇತುವೆಯಲ್ಲಿ ವ್ಯಾಪಾರ ನಡೆಸಿದ್ದಕ್ಕಾಗಿ ಬೀದಿಬದಿ ವ್ಯಾಪಾರಿಯೊಬ್ಬನ ಮೇಲೆ ಬಿಎನ್‌ಎಸ್ ಸೆಕ್ಷನ್ 285ರ ಅಡಿ ಪ್ರಕರಣ ದಾಖಲಿಸಲಾಗಿದೆ. ಇನ್ನುಮುಂದೆ ಎಲ್ಲಾ ಎಫ್‌ಐಆರ್‌ಗಳನ್ನು ಬಿಎನ್‌ಎಸ್ ಅಡಿಯಲ್ಲಿ ದಾಖಲಿಸಲಾಗುತ್ತದೆ. ಇದನ್ನೂ ಓದಿ: ಬಳ್ಳಾರಿ ಗ್ರಾಹಕರ ಜೇಬಿಗೆ ಕತ್ತರಿ – KMFನಿಂದ ಒಂದು ದರ, ಮಾರಾಟಕ್ಕೆ ಮತ್ತೊಂದು ದರ

    ಭಾರತೀಯ ನ್ಯಾಯ ಸಂಹಿತೆಯು 358 ಸೆಕ್ಷನ್ ಒಳಗೊಂಡಿದೆ. 20 ಹೊಸ ಅಪರಾಧಗಳು ಸೇರಿಸಲ್ಪಟ್ಟಿವೆ, 33 ಅಪರಾಧಗಳ ಶಿಕ್ಷೆ ಅವಧಿ ಹೆಚ್ಚಿಸಲಾಗಿದೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 531 ಸೆಕ್ಷನ್ ಒಳಗೊಂಡಿದೆ. 177 ಕಲಂಗಳನ್ನು ಬದಲಿಸಲಾಗಿದೆ. ಭಾರತೀಯ ಸಾಕ್ಷ್ಯ ಅಧಿನಿಯಮ 170 ಸೆಕ್ಷನ್ ಒಳಗೊಂಡಿದೆ. ಇದನ್ನೂ ಓದಿ: ಬ್ರಿಟಿಷರ ಕಾಲದ ಕ್ರಿಮಿನಲ್‌ ಕಾನೂನುಗಳಿಗೆ ಗುಡ್‌ಬೈ – ಇಂದಿನಿಂದ 3 ದೇಶಿ ಕಾನೂನು ಜಾರಿ

    ಜುಲೈ 1 ರ ಮೊದಲು ದಾಖಲಾಗಿರುವ ಪ್ರಕರಣಗಳನ್ನು ಭಾರತೀಯ ದಂಡ ಸಂಹಿತೆ (IPC), ಕ್ರಿಮಿನಲ್ ಪ್ರೊಸೀಜರ್ ಕೋಡ್ (CRPC) ಹಾಗೂ ಇಂಡಿಯನ್ ಎವಿಡೆನ್ಸ್ ಆ್ಯಕ್ಟ್ ಅಡಿಯಲ್ಲಿ ವಿಚಾರಣೆಯನ್ನು ಮುಂದುವರಿಸಲಾಗುತ್ತದೆ. ಇದನ್ನೂ ಓದಿ: ಗುಜರಾತ್‌ನಲ್ಲಿ ಭಾರೀ ಮಳೆಗೆ ಕುಸಿದ ರಸ್ತೆ – ಮೋದಿ ತವರಲ್ಲಿ ಇದೆಂಥಾ ಘಟನೆ ಅಂತ ಕಾಂಗ್ರೆಸ್‌ ತೀವ್ರ ತರಾಟೆ

  • ವಿವಾಹಪೂರ್ವ ಸೆಕ್ಸ್ ಮಾಡಿದ್ರೆ 1 ವರ್ಷ ಜೈಲು – ಹೊಸ ಕಾನೂನು ಜಾರಿಗೆ ಇಂಡೋನೇಷ್ಯಾ ಸಜ್ಜು

    ವಿವಾಹಪೂರ್ವ ಸೆಕ್ಸ್ ಮಾಡಿದ್ರೆ 1 ವರ್ಷ ಜೈಲು – ಹೊಸ ಕಾನೂನು ಜಾರಿಗೆ ಇಂಡೋನೇಷ್ಯಾ ಸಜ್ಜು

    ಜಕಾರ್ತ: ವಿವಾಹಪೂರ್ವ ಸೆಕ್ಸ್ ತಡೆಯಲು ಇಂಡೋನೇಷ್ಯಾ ಸರ್ಕಾರ (Indonesia Government) ಹೊಸ ಕ್ರಿಮಿನಲ್ ಕಾನೂನು (Criminal Law) ಜಾರಿಗೆ ತರಲು ಸಜ್ಜಾಗಿದೆ. ಅದಕ್ಕಾಗಿ ಕರಡನ್ನೂ ಸಿದ್ಧಪಡಿಸಿದೆ.

    ಹೊಸ ಕ್ರಿಮಿನಲ್ ಕಾನೂನು (Criminal Law) ಪ್ರಕಾರ ವಿವಾಹ (Marriage) ಪೂರ್ವ ಸೆಕ್ಸ್ ಮಾಡಿದ್ರೆ ಅಂತಹವರಿಗೆ 1 ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಬಹುದು ಎಂದು ಸರ್ಕಾರ ಹೇಳಿದೆ. ಇದನ್ನೂ ಓದಿ: ಕ್ಯಾಂಪಸ್‌ನಲ್ಲಿ ಲವ್‌ಜಿಹಾದ್‌ಗೆ ಉತ್ತೇಜನ, ಸೇನೆಗೆ ಅಪಮಾನ – 6 ಶಿಕ್ಷಕರಿಗೆ ಪಾಠ ಮಾಡದಂತೆ ಸೂಚನೆ

    ಇಂಡೋನೇಷ್ಯಾ ತನ್ನ ದೇಶದ ಮೌಲ್ಯಗಳಿಗೆ ತಕ್ಕಂತೆ ಕ್ರಿಮಿನಲ್ ಕಾನೂನು ರೂಪಿಸಿರುವುದು ನಮ್ಮ ಹೆಮ್ಮೆ. ಮುಂದಿನ ಸಂಸತ್ತಿನಲ್ಲಿ ಹೊಸ ಶಾಸನವಾಗಿ ಈ ಕ್ರಿಮಿನಲ್ ಕೋಡ್ ಅಂಗೀಕಾರವಾಗುವ ನಿರೀಕ್ಷೆಯಿದೆ ಎಂದು ಉಪ ಕಾನೂನು ಮಂತ್ರಿ ಎಡ್ವರ್ಡ್ ಒಮರ್ ಷರೀಫ್ ಹೇಳಿದ್ದಾರೆ. ಇದನ್ನೂ ಓದಿ: ಜನಾರ್ದನ ರೆಡ್ಡಿ ಮೊಮ್ಮಗಳ ನಾಮಕರಣ ಸಮಾರಂಭದಲ್ಲಿ ಬಿಎಸ್‌ವೈ ಭಾಗಿ

    ಈ ಕಾನೂನು ವಿಶ್ವದ ಮುಸ್ಲಿಂ (Muslims Nation) ಬಹುಸಂಖ್ಯಾತ ದೇಶದ ಜನರ ಮೇಲೆ ಪರಿಣಾಮ ಬೀರಬಹುದು. ದಂಪತಿ ವಿವಾಹಪೂರ್ವವಾಗಿ ಅಕ್ರಮ ಸಂಬಂಧ ಹೊಂದಿದ್ದರೆ ಜೈಲು ಶಿಕ್ಷೆ ಎದುರಿಸಬೇಕಾಗುತ್ತದೆ. ಆದರೆ ಇಂಡೋನೇಷ್ಯಾದಲ್ಲಿ ಸಲಿಂಗ ಕಾಮ ಅನುಮತಿಸಿದ ಕಾರಣ, ಆಗ್ನೇಯ ಏಷ್ಯಾದ ರಾಷ್ಟ್ರದ ಸಣ್ಣ LGBT (ಲೆಸ್ಬಿಯನ್, ಗೇ ಸೇಕ್ಸ್ ಮಾಡುವರು) ಗುಂಪುಗಳನ್ನು ಶಿಕ್ಷಿಸಬಹುದೆಂಬ ಆತಂಕ ವ್ಯಕ್ತಪಡಿಸಿದೆ.

    ಪತಿ ಅಥವಾ ಪತ್ನಿ ಸಂಬಂಧ ಇಲ್ಲದವರೊಂದಿಗೆ ಸಂಭೋಗಿಸಿದರೆ, ಅದನ್ನು ವ್ಯಬಿಚಾರವೆಂದು ಪರಿಗಣಿಸಿ ಆರ್ಟಿಕಲ್ 413ರಲ್ಲಿ ಉಲ್ಲೇಖಿಸಿ ಗರಿಷ್ಠ 1 ವರ್ಷ ಜೈಲು ಶಿಕ್ಷೆ ಅಥವಾ ಗರಿಷ್ಠ ದಂಡವನ್ನು ವಿಧಿಸಲಾಗುತ್ತದೆ ಎಂದು ಇಂಡೋನೇಷ್ಯಾ ಸರ್ಕಾರ ತಿಳಿಸಿದೆ.

    Live Tv
    [brid partner=56869869 player=32851 video=960834 autoplay=true]