Tag: Criminal defamation case

  • ಬುರುಡೆ ಕೇಸಲ್ಲಿ ಸೆಂಥಿಲ್ ಹೆಸರು – ಶಾಸಕ ಜನಾರ್ದನ ರೆಡ್ಡಿ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲು

    ಬುರುಡೆ ಕೇಸಲ್ಲಿ ಸೆಂಥಿಲ್ ಹೆಸರು – ಶಾಸಕ ಜನಾರ್ದನ ರೆಡ್ಡಿ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲು

    – ಬರುಡೆ ಎಲ್ಲಿಂದ ಬಂತು ನನಗೆ ಗೊತ್ತಿಲ್ಲ, ಆದ್ರೂ ನನ್ನ ಹೆಸರು ತಗೊಂಡಿದ್ದಾರೆ
    – ಜನಾರ್ದನ ರೆಡ್ಡಿ ಕೋರ್ಟಲ್ಲಿ ಉತ್ತರಿಸಲಿ ಎಂದ ಸಂಸದ ಸೆಂಥಿಲ್‌

    ಬೆಂಗಳೂರು/ನವದೆಹಲಿ: ಗಂಗಾವತಿ ಶಾಸಕ ಜನಾರ್ದನ ರೆಡ್ಡಿ (Janardhana Reddy) ವಿರುದ್ಧ ತಮಿಳುನಾಡಿನ ಕಾಂಗ್ರೆಸ್‌ ಸಂಸದ ಸಸಿಕಾಂತ್ ಸೆಂಥಿಲ್ ಕ್ರಿಮಿನಲ್‌ ಮಾನನಷ್ಟ ಮೊಕದ್ದಮೆ (Criminal Defamation Case) ಹೂಡಿದ್ದಾರೆ.

    ಧರ್ಮಸ್ಥಳ ʻಬುರುಡೆʼಪ್ರಕರಣದಲ್ಲಿ ತಮ್ಮ ಹೆಸರು ಪ್ರಸ್ತಾಪಿಸಿ ಆರೋಪ ಮಾಡಿದ್ದಕ್ಕಾಗಿ ಕ್ರಿಮಿನಲ್‌ ಮಾನನಷ್ಟ ಮೊಕದ್ದಮೆ ಹೂಡಿರುವುದಾಗಿ ಸೆಂಥಿಲ್‌ (Sasikanth Senthil) ಹೇಳಿದ್ದಾರೆ. 42 ಎಸಿಎಂ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಪಿಸಿಆರ್ ಫೈಲ್‌ ಮಾಡಿದ್ದು, ಸೆಪ್ಟೆಂಬರ್‌ 11ಕ್ಕೆ ವಿಚಾರಣೆ ನಡೆಯಲಿದೆ. ಇದನ್ನೂ ಓದಿ: ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣ – ʻಕೈʼ ಸಂಸದ ಸಸಿಕಾಂತ್ ಸೆಂಥಿಲ್ ಫಸ್ಟ್‌ ರಿಯಾಕ್ಷನ್‌

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಸೆಂಥಿಲ್‌, ಬುರುಡೆ ಕೇಸ್‌ನಲ್ಲಿ (Dharmasthala Case) ನನ್ನ ಹೆಸರು ತಗೊಂಡಿದ್ದಾರೆ. ಆದ್ದರಿಂದ ಮೊಕದ್ದಮೆ ಹೂಡಿದ್ದೇನೆ. ಅವರು ಕೋರ್ಟ್‌ನಲ್ಲಿ ಉತ್ತರಿಸಲಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬುರುಡೆ ಕೇಸ್‌ ಹಿಂದೆ ಕೈ ಸಂಸದ ಶಶಿಕಾಂತ್‌ ಸೆಂಥಿಲ್‌ ಇದ್ದಾರೆ: ಯಶ್‌ಪಾಲ್‌ ಸುವರ್ಣ

    ಈ ಹ್ಯಾಂಗಲ್‌ನಲ್ಲಿ ಯಾರು ಸ್ಟೋರಿ ತಗೊಂಡು ಬಿಲ್ಡ್ ಮಾಡ್ತಿದ್ದಾರೆ ಅವರನ್ನು ಕೂಡ ತಗೊಳ್ತಿನಿ. ಈ ಕೇಸಲ್ಲಿ ನನ್ನ ಹೆಸರು ಯಾಕೆ ಬಂತು, ಗೊತ್ತಿಲ್ಲ. ನನ್ನ ಹೆಸರನ್ನ ತಮಿಳುನಾಡಿನ ಮಾಜಿ ಪೊಲೀಸ್ ಅಧಿಕಾರಿ ಅಲ್ಲಿ ತಗೊಂಡಿದ್ದಾರೆ. ಇದು ಹೀಗೆ ಬಿಟ್ಟರೆ, ಒಂದು ಸ್ಟೋರಿ ಕ್ರಿಯೇಟ್‌ ಆಗುತ್ತೆ. ನಾನು ಲೀಗಲ್‌ ಸಿಸ್ಟಮ್‌ನಲ್ಲಿ ಹೋಗ್ತೀದ್ದೀನಿ. ಸತ್ಯ ಏನಿದೆ ತನಿಖೆಯಿಂದ ಹೊರ ಬರಲಿ ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಮಾಸ್ಕ್‌ಮ್ಯಾನ್‌ಗೆ ಬುರುಡೆ ಕೊಟ್ಟಿದ್ದೇ ಕೈ ಸಂಸದ ಸಸಿಕಾಂತ್‌ ಸೆಂಥಿಲ್: ಜನಾರ್ದನ ರೆಡ್ಡಿ

    Janardhana Reddy

    ಮುಂದುವರಿದು… ಧಾರ್ಮಿಕ ವಿಚಾರ ಪೊಲಿಟಿಕಲಿ ತಗೊಳ್ತಿದ್ದಾರೆ. ಯಾರೋ ಒಬ್ಬರು ಸೆಂಥಿಲ್ ಕ್ರಿಶ್ಚಿಯನ್ ಅಂತಾ ಹೇಳಿದ್ದಾರೆ. ನಾನು ಇವರನ್ನು ಲಾಸ್ಟ್ ನೋಡಿದ್ದು, ಬಳ್ಳಾರಿಯಲ್ಲಿ. ನನ್ನ ಮೊದಲ ದಿನವೇ ಇವರು ಅರೆಸ್ಟ್ ಆಗಿದ್ದರು. ಅನಂತರ ಇವರ ರಾಯಾಲ್ಟಿಯನ್ನ ತಡೆದಿದ್ದೆ. ಕರ್ನಾಟಕ ಪ್ರಾಪರ್ಟಿ ಲೂಟಿ ಮಾಡಿದ ವ್ಯಕ್ತಿ. ಜಡ್ಜ್‌ಗಳನ್ನೂ ಬಿಟ್ಟಿಲ್ಲ. ಅವರಿಗೆ ಬೇರೆ ಯಾರೋ ಹೇಳಿರಬಹುದು. ತಮಿಳುನಾಡಿನ ಪಾಲಿಟಿಕ್ಸ್‌ಗೆ ಇವರನ್ನ ಸೇರಿಸಲೂ ಇರಬಹುದು. ಆದ್ರೆ ಕರ್ನಾಟಕ ಜನ ಬುದ್ದಿವಂತರು ಇದ್ದಾರೆ. ಅವರಿಗೆ ಎಲ್ಲಾ ಗೊತ್ತಿದೆ ಎಂದಿದ್ದಾರೆ ಸೆಂಥಿಲ್. ಇದನ್ನೂ ಓದಿ: ನಮಗೆ ಬುರುಡೆ ಕೊಟ್ಟಿದ್ದು ಗಿರೀಶ್‌ ಮಟ್ಟಣ್ಣನವರ್‌: ಎಸ್‌ಐಟಿ ಮುಂದೆ ಜಯಂತ್‌ ಹೇಳಿಕೆ

    ಬುರುಡೆ ಎಲ್ಲಿಂದ ಬಂತು ನನಗೆ ಗೊತ್ತಿಲ್ಲ:
    ಕರ್ನಾಟಕದ ಸಂಪತ್ತು ಲೂಟಿ ಮಾಡಿ ಜೈಲು ಶಿಕ್ಷೆ ಅನುಭವಿಸಿರೊ ವ್ಯಕ್ತಿ ನನ್ನ ಮೇಲೆ ಆಧಾರ ರಹಿತ ಆರೋಪ ಮಾಡಿದ್ದಾರೆ. ಅವರ ವಿರುದ್ಧ ಕೋರ್ಟ್‌ನಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹಾಕಿದ್ದೇನೆ. ರೈಟ್ ವಿಂಗ್ ಪಾಲಿಟಿಕ್ಸ್ ವಿರೋಧ ಮಾಡಿಕೊಂಡು ಬಂದವನು ಆ ವ್ಯಕ್ತಿ. ಹೀಗಾಗಿ ನನ್ನನ್ನ ಟಾರ್ಗೆಟ್ ಮಾಡಿ ಆರೋಪ ಮಾಡಲಾಗಿದೆ. ಆರಂಭದಲ್ಲಿ ಸಿಂಪಲ್ ವಿಚಾರ ಮಾತನಾಡಬಾರದು ಅಂದುಕೊಂಡಿದ್ದೆ, ಆದ್ರೆ ದಿನೇ ದಿನೇ ನನ್ನ ಹೆಸರು ಕೆಡಿಸುವ ಕೆಲಸ ಆಗ್ತಿದೆ. ಆದ್ದರಿಂದ ಕೇಸ್‌ ದಾಖಲಿಸಿದ್ದೇನೆ. ದೆಹಲಿಯಲ್ಲಿ ನನಗೆ ಇನ್ನೂ ಮನೆ ಕೊಟ್ಟಿಲ್ಲ ಈ ಸರ್ಕಾರ. ಆ ಬರುಡೆ ಎಲ್ಲಿಂದ ಬಂತು, ಎಲ್ಲಿ ಸಿಗ್ತು ಅಂತಾನೂ ನನಗೆ ಗೊತ್ತಿಲ್ಲ ಎಂದಿದ್ದಾರೆ.

    ಜನಾರ್ಧನ ರೆಡ್ಡಿ ಆರೋಪ ಏನು?
    ಮಾಜಿ ಐಎಎಸ್‌ ಅಧಿಕಾರಿ, ತಮಿಳುನಾಡಿನ ಕಾಂಗ್ರೆಸ್‌ ಸಂಸದ ಸಸಿಕಾಂತ್‌ ಸೆಂಥಿಲ್ ಮಾಸ್ಕ್‌ಮ್ಯಾನ್‌ಗೆ ಬುರುಡೆ ಕೊಟ್ಟು ಕಳುಹಿಸಿದ್ದಾರೆ ಎಂದು ಜನಾರ್ದನ ರೆಡ್ಡಿ ಗಂಭೀರ ಆರೋಪಿಸಿದ್ದರು. ಇದನ್ನೂ ಓದಿ: ಹೆಗ್ಗಡೆ ವಿರುದ್ಧ ಅಪಪ್ರಚಾರಕ್ಕೆ ಕೊಡಗಿನಲ್ಲೂ ನಡೆದಿತ್ತು ಹುನ್ನಾರ – ರೆಡಿಮೇಡ್ ದೂರಿನ ಪ್ರತಿ ನೀಡಿದ್ದ ಬುರುಡೆ ಗ್ಯಾಂಗ್‌

  • ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ದ ಗುತ್ತಿಗೆದಾರ ಕೆಂಪಣ್ಣ ಅರೆಸ್ಟ್

    ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ದ ಗುತ್ತಿಗೆದಾರ ಕೆಂಪಣ್ಣ ಅರೆಸ್ಟ್

    ಬೆಂಗಳೂರು: ಬಿಜೆಪಿ (BJP) ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ (40 Percent Commission) ಆರೋಪ ಮಾಡಿದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ (ಕೆಂಪೇಗೌಡ) (Kempanna) ಅವರನ್ನು ಬೆಂಗಳೂರಿನ (Bengaluru) ವೈಯಾಲಿಕಾವಲ್ ಪೊಲೀಸರು (Police) ಬಂಧಿಸಿದ್ದಾರೆ.

    ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿರುವ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಹಾಗೂ ಇತರ 18 ಮಂದಿ ಗುತ್ತಿಗೆದಾರರ ವಿರುದ್ಧ ಸಚಿವ ಮುನಿರತ್ನ (Munirathna) 50 ಕೋಟಿ ಮಾನಷ್ಟ ಮೊಕದ್ದಮೆ ದಾಖಲಿಸಿದ್ದರು. ಈ ಸಂಬಂಧ ಎಫ್‌ಐಆರ್ (FIR) ದಾಖಲಾಗಿತ್ತು. ಡಿಸೆಂಬರ್ 23 ರಂದು ಕೆಂಪಣ್ಣನಿಗೆ ಕೋರ್ಟ್ ಸಮನ್ಸ್ ಜಾರಿಗೊಳಿಸಿತ್ತು. ಈ ಸಂಬಂಧ ಯಾವುದೇ ಉತ್ತರ ನೀಡದೇ ಇರುವುದರಿಂದ ಇಂದು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಗುತ್ತಿಗೆದಾರರ ಸಂಘ, ಕೆಂಪಣ್ಣ ವಿರುದ್ಧ 50 ಕೋಟಿ ಮಾನನಷ್ಟ ಮೊಕದ್ದಮೆ: ಮುನಿರತ್ನ

    ಸಚಿವ ಮುನಿರತ್ನ ಈ ಹಿಂದೆಯೇ ನನ್ನ ವಿರುದ್ಧ ಮಾಡಿದ ಆರೋಪವು ಸೇರಿದಂತೆ 40 ಪರ್ಸೆಂಟ್‌ ಕಮಿಷನ್ ಆರೋಪಕ್ಕೆ ದಾಖಲೆ ಕೊಡಿ ಎಂದು ದಾವೆ ಹೂಡಿದ್ದೇನೆ. 50 ಕೋಟಿ ಮಾನನಷ್ಟ ಪ್ರಕರಣವನ್ನು 4 ತಿಂಗಳ ಒಳಗಡೆ ಇತ್ಯರ್ಥ ಮಾಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಇದನ್ನೂ ಓದಿ; ಕ್ಷಮೆ ಕೇಳದ ಕೆಂಪಣ್ಣ ಸೇರಿ 18 ಮಂದಿ ಮೇಲೆ 50 ಕೋಟಿ ಮಾನನಷ್ಟ ಕೇಸ್‌, ಶೀಘ್ರವೇ ಎಫ್‌ಐಆರ್‌: ಮುನಿರತ್ನ

    ಕೆಂಪಣ್ಣ ನನ್ನ ಮೇಲೆ ಆಧಾರ ರಹಿತ ಆರೋಪ ಮಾಡಿದ್ದಾರೆ. ಆಧಾರ ರಹಿತ ಆರೋಪ ಮಾಡಿದ್ದಕ್ಕೆ ನಾನು 7 ದಿನಗಳ ಒಳಗಡೆ ಕ್ಷಮೆ ಕೇಳುವಂತೆ ಸೂಚಿಸಿದ್ದೆ. ಆದರೆ ಅವರು ಕ್ಷಮೆ ಕೇಳದ ಹಿನ್ನೆಲೆಯಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದೇನೆ. ಚುನಾವಣೆ ನಡೆಯುವ ಮುನ್ನ ಇತ್ಯರ್ಥ ಆಗಬೇಕಾಗಿರುವುದರಿಂದ 4 ತಿಂಗಳ ಒಳಗಡೆ ಪ್ರಕರಣವನ್ನು ಮುಗಿಸುವಂತೆ ಸೆಕ್ಷನ್ 227 ಅನ್ವಯ ರಿಟ್ ಅರ್ಜಿ ಹಾಕುತ್ತಿದ್ದೇವೆ. ಪ್ರಕರಣದ ಆರೋಪಿಗಳು ಯಾವುದೇ ಆಸ್ತಿ ಪರಭಾರೆ ಮಾಡುವಂತಿಲ್ಲ. ಯಾವುದೇ ಇಲಾಖೆಯಲ್ಲಿ ಯಾವುದೇ ಕಾಮಗಾರಿ ಮಾಡಿದ್ದರೆ ಅದರ ಬಿಲ್ ಬಿಡುಗಡೆ ಆಗಬಾರದು. ಅವರ ಕುಟುಂಬದಲ್ಲಿ ಯಾವುದೇ ವಿಲ್ ಮಾಡುವಂತಿಲ್ಲ. ಎಲ್ಲದಕ್ಕೂ ತಡೆಯಾಜ್ಞೆ ತರಲಾಗಿದ್ದು, ಎಲ್ಲಾ 18 ಮಂದಿಗೂ ಇದು ಅನ್ವಯವಾಗಲಿದೆ ಎಂದು ಹೇಳಿದ್ದರು.

    Live Tv
    [brid partner=56869869 player=32851 video=960834 autoplay=true]

  • ಐಎಎಸ್ ಅಧಿಕಾರಿಗೆ 1 ರೂ.ದಂಡ ವಿಧಿಸಿದ ಕೋರ್ಟ್

    ಐಎಎಸ್ ಅಧಿಕಾರಿಗೆ 1 ರೂ.ದಂಡ ವಿಧಿಸಿದ ಕೋರ್ಟ್

    ಶಿವಮೊಗ್ಗ: ನ್ಯಾಯಾಲಯಗಳಲ್ಲಿ ಸಾಮಾನ್ಯವಾಗಿ ಹಲವಾರು ಪ್ರಕರಣಗಳನ್ನು ನೋಡಿರುತ್ತೇವೆ, ಕೇಳಿರುತ್ತೇವೆ. ಒಂದೊಂದು ಪ್ರಕರಣಗಳು ಒಂದೊಂದು ರೀತಿಯಲ್ಲಿ ಇರುತ್ತವೆ. ಕೆಲವೊಂದು ಪ್ರಕರಣಗಳು ವಿಶೇಷವಾದರೆ, ಇನ್ನು ಕೆಲವು ಪ್ರಕರಣಗಳು ಎಲ್ಲರ ಗಮನ ಸೆಳೆಯುತ್ತವೆ. ಅಂತಹುದೇ ಪ್ರಕರಣವೊಂದರ ಸಂಬಂಧ ಶಿವಮೊಗ್ಗ ನ್ಯಾಯಾಲಯ ತೀರ್ಪು ನೀಡಿದೆ.

    ನಿವೃತ್ತ ಕಂದಾಯ ಅಧಿಕಾರಿ ಶಿವಪ್ಪ ಅವರು ಈ ಹಿಂದೆ ಶಿವಮೊಗ್ಗದಲ್ಲಿ ಜಿಲ್ಲಾಧಿಕಾರಿಯಾಗಿದ್ದ ವಿ.ಪೊನ್ನುರಾಜ್ ವಿರುದ್ಧದ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಕೇವಲ 1 ರೂ.ಗೆ ಮಾನನಷ್ಟ ಕೋರಿ ದಾಖಲಿಸಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೋರ್ಟ್ ತೀರ್ಪು ನೀಡಿದೆ.

    ಮಾನನಷ್ಟ ಮೊಕದ್ದಮೆ ದಾಖಲಿಸಿದ್ದ ನಿವೃತ್ತ ಕಂದಾಯ ಅಧಿಕಾರಿ ಶಿವಪ್ಪ

    2014ರಲ್ಲಿ ನಿವೃತ್ತ ಕಂದಾಯ ಅಧಿಕಾರಿ ಶಿವಪ್ಪ ಅವರು ಪ್ರಸ್ತುತ ಕೆಪಿಸಿಎಲ್‍ನಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿರುವ ಪೊನ್ನುರಾಜ್ ಅವರ ವಿರುದ್ಧ ಶಿವಮೊಗ್ಗ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದ 3ನೇ ಹೆಚ್ಚುವರಿ ನ್ಯಾಯಾಲಯವು ತೀರ್ಪು ಪ್ರಕಟಿಸಿದ್ದು,  ಪ್ರಕರಣದಲ್ಲಿ ಅಧಿಕಾರಿ ಪೊನ್ನುರಾಜ್ ಅವರಿಗೆ ಹಿನ್ನೆಡೆಯಾಗಿದೆ.

    ಏನಿದು ಪ್ರಕರಣ?:
    ಕಂದಾಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿಯಾಗಿದ್ದ ವಿನೋಬನಗರ ನಿವಾಸಿ ಕೆ.ಶಿವಪ್ಪ ಅವರು ಐಎಎಸ್ ಅಧಿಕಾರಿ ಪೊನ್ನುರಾಜ್ ವಿರುದ್ಧ 1 ರೂ. ಮಾನನಷ್ಟ ಮೊಕದ್ದಮೆ ಹೂಡಿ ರಾಜ್ಯದ ಗಮನ ಸೆಳೆದಿದ್ದರು. 6 ವರ್ಷಗಳ ಸುದೀರ್ಘ ವಿಚಾರಣೆ ಬಳಿಕ ಪೊನ್ನುರಾಜ್ ವಿರುದ್ಧ ನ್ಯಾಯಾಲಯ ತೀರ್ಪು ನೀಡಿದೆ. ಹೀಗಾಗಿ ಪೊನ್ನುರಾಜ್ ಅವರು ತಮ್ಮ ವಿರುದ್ಧ ಮಾನನಷ್ಟ ದಾವೆ ಹೂಡಿದ್ದ ಕೆ. ಶಿವಪ್ಪರಿಗೆ ಪೊನ್ನುರಾಜ್ 1 ರೂ. ಪರಿಹಾರ ನೀಡಬೇಕಾಗಿದೆ.

    ಕೆ. ಶಿವಪ್ಪ ವಿರುದ್ಧ 2011ರ ಏಪ್ರಿಲ್ 5ರಂದು ಶಿವಮೊಗ್ಗದವರೇ ಆದ ಎ.ಎಂ.ಮಹದೇವಪ್ಪ ಎಂಬವರು ಅಂದಿನ ಜಿಲ್ಲಾಧಿಕಾರಿ ಪೊನ್ನುರಾಜ್ ಅವರಿಗೆ ದೂರು ನೀಡಿದ್ದರು. ಕೆ.ಶಿವಪ್ಪ ಅವರು ನಿವೃತ್ತರಾಗಿದ್ದರೂ ಕಂದಾಯ ಇಲಾಖೆಯಲ್ಲಿ ಕಾಣಿಸಿಕೊಂಡು ಸಾರ್ವಜನಿಕ ವ್ಯವಹಾರಕ್ಕೆ ಹಸ್ತಕ್ಷೇಪ ನಡೆಸುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು.

    ಪೊನ್ನುರಾಜ್ ಅವರು ಈ ದೂರಿನ ಬಗ್ಗೆ ವಿಚಾರಣೆ ನಡೆಸದೇ ಶಿವಪ್ಪ ಅವರಿಗೆ ಯಾವುದೇ ನೋಟಿಸ್ ಜಾರಿಗೊಳಿಸದೇ ಆದೇಶವೊಂದನ್ನು ಹೊರಡಿಸಿದ್ದರು. ಅದರ ಪ್ರಕಾರ, ಶಿವಪ್ಪ ಅವರು ಯಾವುದೇ ಇಲಾಖೆಗಳಿಗೆ ಹೋಗಬಾರದೆಂದು ನಿರ್ಬಂಧಿಸಲಾಗಿತ್ತು. ಆದೇಶ ಪ್ರತಿಗಳನ್ನು ಆಯಾ ಇಲಾಖೆ ನೋಟಿಸ್ ಬೋರ್ಡ್ ಗಳಲ್ಲಿಯೂ ಪ್ರಕಟಿಸಲಾಗಿತ್ತು. ತಮ್ಮ ಅರಿವಿಗೆ ಬಾರದೇ ಸುತ್ತೋಲೆ ಹೊರಡಿಸಿ ನಿರ್ಬಂಧಿಸಿದ್ದರ ವಿರುದ್ಧ ಕೆ.ಶಿವಪ್ಪ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಆಗ ಪ್ರತಿವಾದ ಮಾಡುವ ಬದಲಾಗಿ ತಮ್ಮ ಸುತ್ತೋಲೆಯನ್ನು ಬೇಷರತ್ ಆಗಿ ಪೊನ್ನುರಾಜ್ ಹಿಂಪಡೆದಿದ್ದರು. ಈ ಸುತ್ತೋಲೆ ಹಿನ್ನೆಲೆಯಲ್ಲಿ ತಮಗೆ ಮಾನನಷ್ಟವಾಗಿದೆ. ಅಲ್ಲದೇ ಸುತ್ತೋಲೆ ಪರಿಣಾಮ ತಮ್ಮ ವ್ಯವಹಾರಿಕ ಬದುಕಿನ ಮೇಲೆ ಸುಮಾರು 25 ಲಕ್ಷ ರೂ.ಗಳಿಗೂ ಅಧಿಕ ನಷ್ಟವಾಗಿದೆ ಎಂದು ಶಿವಪ್ಪ ಅವರು ಹೇಳಿದ್ದರು. ಆದರೆ ಅವರು 25 ಲಕ್ಷ ರೂ.ಗೆ ಬದಲಾಗಿ ಕೇವಲ 1 ರೂ.ಗೆ ಸೀಮಿತಗೊಳಿಸಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

    ಈ ಹಿನ್ನೆಲೆಯನ್ನು ಆಧಾರವಾಗಿಟ್ಟುಕೊಂಡ ಮಾನ್ಯ 3ನೇ ಜೆಎಂಎಫ್‍ಸಿ ನ್ಯಾಯಾಲಯವು, ಪೊನ್ನುರಾಜ್ ಅವರು ಮಾನನಷ್ಟ ಮೊಕದ್ದಮೆ ಹೂಡಿದ್ದ ಶಿವಪ್ಪ ಅವರಿಗೆ 60 ದಿನದ ಒಳಗೆ 1 ರೂ. ಪರಿಹಾರ ನೀಡಬೇಕು ಎಂದು ಆದೇಶ ನೀಡಿದೆ.

  • ಜೆ.ಕೆ.ವೆಂಕಟಶಿವಾರೆಡ್ಡಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ರಮೇಶ್ ಕುಮಾರ್

    ಜೆ.ಕೆ.ವೆಂಕಟಶಿವಾರೆಡ್ಡಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ರಮೇಶ್ ಕುಮಾರ್

    ಕೋಲಾರ: ರಾಯಲಸೀಮ ಶ್ರೀನಿವಾಸಪುರದಲ್ಲಿ ಮತ್ತೆ ಸಂಪ್ರದಾಯ ಬದ್ಧ ವೈರಿಗಳ ಕಾಳಗ ಶುರುವಾಗಿದೆ. ಜೆಡಿಎಸ್‍ನ ಮಾಜಿ ಶಾಸಕ ಜೆ.ಕೆ.ವೆಂಕಟಶಿವಾರೆಡ್ಡಿ ವಿರುದ್ಧ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮಾನನಷ್ಟ ಮೊಕದ್ದಮೆ ದೂರು ದಾಖಲಿಸಿದ್ದಾರೆ.

    ವಿಧಾನಸೌಧದಲ್ಲಿ ಒಂದು ತಿಂಗಳ ಹಿಂದಯೆ ಸುದ್ದಿಗೋಷ್ಠಿ ನಡೆಸಿದ್ದ ಜೆ.ಕೆ.ವೆಂಕಟಶಿವಾರೆಡ್ಡಿ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿದ್ದ ರಮೇಶ್ ಕುಮಾರ್ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಿದ್ದರು. ಹೀಗಾಗಿ ರಮೇಶ್ ಕುಮಾರ್ ಅವರು ಶ್ರೀನಿವಾಸಪುರದ ಜೆಎಂಎಫ್‍ಸಿ ಕೋರ್ಟಿನಲ್ಲಿ ಮಾನನಷ್ಟ ಮೊಕದ್ದಮೆ ದೂರು ದಾಖಲಿಸಿದ್ದಾರೆ.

    ವಕೀಲರಾದ ಶಂಕರಪ್ಪ ಹಾಗೂ ಸುಂದರ್ ಅವರೊಂದಿಗೆ ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಶ್ರೀನಿವಾಸಪುರದ ಜೆಎಂಎಫ್‍ಸಿ ಕೋರ್ಟ್ ಗೆ  ಆಗಮಿಸಿದ ರಮೇಶ್ ಕುಮಾರ್ ಅವರು ಮಾನನಷ್ಟ ಮೊಕದ್ದಮೆ ದಾಖಲು ಮಾಡಿದ್ದಾರೆ. ವಿಶೇಷವೆಂದರೆ ಜೆಡಿಎಸ್‍ನ ಮಾಜಿ ಶಾಸಕ ವೆಂಕಟಶಿವಾರೆಡ್ಡಿ ಹಾಗೂ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕಳೆದ 40 ವರ್ಷಗಳಿಂದ ರಾಜಕೀಯವಾಗಿ ಸಾಂಪ್ರದಾಯಿಕ ಎದುರಾಳಿಗಲಾಗಿದ್ದಾರೆ.