Tag: criminal cases

  • ಡಿಕೆಶಿ ಬೆಂಬಲಿಗರ ಮೇಲಿನ 12 ಪ್ರಕರಣ ಸೇರಿ 62 ಕ್ರಿಮಿನಲ್‌ ಕೇಸ್‌ ವಾಪಸ್ ಪಡೆದ ಸರ್ಕಾರ

    ಡಿಕೆಶಿ ಬೆಂಬಲಿಗರ ಮೇಲಿನ 12 ಪ್ರಕರಣ ಸೇರಿ 62 ಕ್ರಿಮಿನಲ್‌ ಕೇಸ್‌ ವಾಪಸ್ ಪಡೆದ ಸರ್ಕಾರ

    – ಪೊಲೀಸ್, ಕಾನೂನು ಇಲಾಖೆಗಳ ವಿರೋಧದ ನಡುವೆಯೂ ಕೇಸ್‌ ವಾಪಸ್‌

    ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಅವರ ಬೆಂಬಲಿಗರ ವಿರುದ್ಧದ 12 ಪ್ರಕರಣವೂ ಸೇರಿ ಒಟ್ಟು 62 ಕ್ರಿಮಿನಲ್‌ ಪ್ರಕರಣಗಳನ್ನು ವಾಪಸ್ ಪಡೆಯಲು ರಾಜ್ಯ ಸಚಿವ ಸಂಪುಟ ಸಮಿತಿ (Congress Cabinet) ಒಪ್ಪಿಗೆ ಸೂಚಿಸಿದೆ.

    ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು 2019 ರಲ್ಲಿ ಡಿಕೆಶಿವಕುಮಾರ್‌ ಅವರನ್ನು ಬಂಧಿಸಿದಾಗ ದಾಂಧಲೆ ನಡೆಸಿದ ಬೆಂಗಲಿಗರ ವಿರುದ್ಧ ಸಾತನೂರು, ಕೋಡಿಹಳ್ಳಿಸೇರಿ ರಾಮನಗರ ಜಿಲ್ಲೆಯ ನಾನಾ ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಿದ್ದ ಕ್ರಿಮಿನಲ್‌ ಪ್ರಕರಣ, ರೈತ ಮುಖಂಡರು, ನಾನಾ ಸಂಘಟನೆಗಳ ಮುಖಂಡರ ವಿರುದ್ಧದ ಮೊಕದ್ದಮೆಗಳನ್ನು ಕೈಬಿಡುವ ನಿರ್ಣಯವನ್ನು ಸಿಎಂ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಕ್ಯಾಬಿನೆಟ್‌ ತೆಗೆದುಕೊಂಡಿತು.

    ಇದರೊಂದಿಗೆ ಬೇರೆ ಬೇರೆ 62 ಕ್ರಿಮಿನಲ್ ಪ್ರಕರಣಗಳನ್ನು ವಾಪಸ್ ಪಡೆಯಲು ಗುರುವಾರದ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಇದನ್ನೂ ಓದಿ: ಕರ್ನಾಟಕದಲ್ಲಿ‌ ಬ್ಯಾಲೆಟ್ ಪೇಪರ್ ಎಲೆಕ್ಷನ್: ಕಾನೂನು ತರಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ

    ಕೇಸ್‌ ವಾಪಸ್‌ಗೆ ಪೊಲೀಸ್ ಇಲಾಖೆ, ಕಾನೂನು ಇಲಾಖೆ ವಿರೋಧ ವ್ಯಕ್ತಪಡಿಸಿವೆ. ಸಂಪುಟ ಸಭೆಯ ಟಿಪ್ಪಣಿಯಲ್ಲಿ ಎರಡೂ ಇಲಾಖೆಗಳ ಅಭಿಪ್ರಾಯ ಕೇಳಲಾಗಿತ್ತು. ಈ ವೇಳೆ ಇವು ವಾಪಸ್ ಪಡೆಯಲು ಅರ್ಹವಾದ ಪ್ರಕರಣಗಳಲ್ಲ ಎಂದು ಡಿಜಿ ಮತ್ತು ಐಜಿಪಿ ಅಭಿಪ್ರಾಯ ಪಟ್ಟರೆ, ಸಾರ್ವಜನಿಕ ಹಿತಾಸಕ್ತಿ ಇಲ್ಲ, ಕೇಸ್ ಹಿಂದಕ್ಕೆ ಪಡೆಯಲು ಸೂಕ್ತ ಅಲ್ಲ ಎಂದು ಕಾನೂನು ಇಲಾಖೆ ಅಭಿಪ್ರಾಯ ಪಟ್ಟಿದೆ. ಆದಾಗ್ಯೂ ಎರಡೂ ಇಲಾಖೆಯ ಅಭಿಪ್ರಾಯ ಬದಿಗೊತ್ತಿ ಸಂಪುಟ ಸಭೆಯಲ್ಲಿ ಕೇಸ್ ವಾಪಸ್‌ಗೆ ಗ್ರೀನ್‌ ಸಿಗ್ನಲ್‌ ನೀಡಲಾಗಿದೆ.  ಇದನ್ನೂ ಓದಿ: ಸಮೀರ್‌ ವಿಡಿಯೋದಲ್ಲಿ ಬಳಸಿದ್ದ ಒಂದು ಪದಕ್ಕೆ ಸಂಬಂಧಿಸಿದ್ದಂತೆ ಪೊಲೀಸರು ಜಪ್ತಿ ಮಾಡಿದ್ದಾರೆ: ಮಟ್ಟಣ್ಣನವರ್‌

  • ಖಲಿಸ್ತಾನಿ ನಾಯಕರಿಗೆ ISI ಜೊತೆ ಲಿಂಕ್‌ ಇದೆ – ಪಂಬಾಜ್‌ ಪೊಲೀಸರಿಂದ ಸ್ಫೋಟಕ ಮಾಹಿತಿ

    ಖಲಿಸ್ತಾನಿ ನಾಯಕರಿಗೆ ISI ಜೊತೆ ಲಿಂಕ್‌ ಇದೆ – ಪಂಬಾಜ್‌ ಪೊಲೀಸರಿಂದ ಸ್ಫೋಟಕ ಮಾಹಿತಿ

    ಚಂಡೀಗಢ: ವಾರಿಸ್ ಪಂಜಾಬ್ ದೆ ಮುಖ್ಯಸ್ಥ ಅಮೃತ್‌ ಪಾಲ್‌ ಸಿಂಗ್‌ (Amritpal Singh) ಸೇರಿ ಇತರರು ಪಾಕಿಸ್ತಾನದ ಐಎಸ್‌ಐ (Pakistan ISI) ಜೊತೆಗೆ ಲಿಂಕ್‌ ಹೊಂದಿರುವ ಶಂಕೆಯಿದೆ ಎಂದು ಪಂಜಾಬ್‌ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

    ಅಮೃತ್‌ಪಾಲ್‌ ಸಿಂಗ್‌ನನ್ನ ಬಂಧಿಸುವ ಕಾರ್ಯಾಚರಣೆ 3ನೇ ದಿನಕ್ಕೆ ಕಾಲಿಟ್ಟಿದ್ದು, ಪಂಜಾಬ್‌ ಐಜಿಪಿ ಸುಖಚೈನ್ ಸಿಂಗ್ ಗಿಲ್, ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಇಂಟರ್‌ ಸರ್ವೀಸಸ್‌ ಇಂಟಲಿಜೆನ್ಸ್‌ (ISI) ಈ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಅನುಮಾನ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಮಾತನಾಡಿರುವ ಸುಖಚೈನ್ ಸಿಂಗ್ ಗಿಲ್, ಐಎಸ್‌ಐ ಜೊತೆಗಿನ ದೃಷ್ಟಿಕೋನದಿಂದಲೂ ಈ ಪ್ರಕರಣವನ್ನ ತನಿಖೆ ನಡೆಸಲಾಗುತ್ತಿದ್ದು, ಇದುವರೆಗೆ ಕಂಡುಬಂದಿರುವ ಅಂಶಗಳ ಪ್ರಕಾರ ಐಎಸ್‌ಐ ಸಹ ಇದರಲ್ಲಿ ಭಾಗಿಯಾಗಿರುವ ಶಂಕೆಯಿದೆ. ಜೊತೆಗೆ ವಿದೇಶಿ ನಿಧಿ ಬಳಕೆಯಾಗಿರುವ ಬಗ್ಗೆಯೂ ಅನುಮಾನವಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಖಲಿಸ್ತಾನಿ ಹೋರಾಟಗಾರ ಅಮೃತ್‌ಪಾಲ್‌ ಸಿಂಗ್‌ ಪರಾರಿ – ಪಂಜಾಬ್‌ ಹಲವೆಡೆ ಇಂಟರ್‌ನೆಟ್‌ ಸ್ಥಗಿತ

    ಸದ್ಯ ರಾಜ್ಯದಲ್ಲಿ ಪರಿಸ್ಥಿತಿ ಸ್ಥಿರವಾಗಿದೆ. ಶಾಂತಿ, ಸೌಹಾರ್ದತೆಗೆ ಭಂಗ ತರುವ ಪ್ರಯತ್ನ ಮಾಡಿದ್ದ 114 ಜನರನ್ನ ಬಂಧಿಸಲಾಗಿದೆ. ಮೊದಲ ದಿನ 78 ಮಂದಿ, 2ನೇ ದಿನ 34 ಮಂದಿ ಹಾಗೂ 3ನೇ ದಿನ ಇಬ್ಬರನ್ನ ಬಂಧಿಸಿದ್ದು, ಶಸ್ತ್ರಾಸ್ತ್ರಗಳನ್ನ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಖಲಿಸ್ತಾನಿ ನಾಯಕರು ಮಾನವ ಬಾಂಬರ್‌ಗಳನ್ನ ರೂಪಿಸುತ್ತಿದ್ದಾರೆ – ಗುಪ್ತಚರ ಇಲಾಖೆ ಮಾಹಿತಿ

    ಗುಪ್ತಚರ ಇಲಾಖೆ ಹೇಳಿದ್ದೇನು?
    ಅಮೃತ್‌ಪಾಲ್‌ ಸಿಂಗ್‌ ವ್ಯಸನಮುಕ್ತ ಕೇಂದ್ರಗಳು ಮತ್ತು ಗುರುದ್ವಾರದಲ್ಲಿ ಶಸ್ತ್ರಾಸ್ತ್ರಗಳ ಸಂಗ್ರಹ ಮಾಡುತ್ತಿದ್ದಾನೆ. ಅಲ್ಲದೇ ಯುವಕರನ್ನ ಆತ್ಮಾಹುತಿ ದಾಳಿಗೆ ತಯಾರಿಸುತ್ತಿದ್ದಾನೆ ಎಂದು ಗುಪ್ತಚರ ಇಲಾಖೆ ಈಗಾಗಲೇ ಮಾಹಿತಿ ನೀಡಿದೆ. ಈ ಬೆನ್ನಲ್ಲೇ ಭದ್ರತಾ ಪಡೆ ಎಚ್ಚೆತ್ತುಕೊಂಡಿದೆ. ಕಳೆದ ವರ್ಷ ಸಿಂಗ್‌ ದುಬೈನಿಂದ ಬಂದಿದ್ದ ಪಾಕಿಸ್ತಾನದ ಐಎಸ್‌ಐ ಮತ್ತು ಖಲಿಸ್ತಾನ್ ಪರ ಸಹಾನುಭೂತಿ ಹೊಂದಿರುವ ಅಮೃತ್‌ಪಾಲ್‌ ಸಿಂಗ್‌, ಯುವಕರನ್ನ ಮಾನವ ಬಾಂಬರ್‌ಗಳಾಗಲೂ ಮನವೊಲಿಸುವ ಕಾರ್ಯ ಮಾಡುತ್ತಿದ್ದಾನೆ ಎಂದು ಗುಪ್ತಚರ ಇಲಾಖೆ ತಿಳಿಸಿತ್ತು.

  • ಹಾಸನದಲ್ಲಿ 13 ಆರೋಪಿಗಳು ಅರೆಸ್ಟ್ – 47 ಲಕ್ಷದ ಚಿನ್ನಾಭರಣ ವಶ

    ಹಾಸನದಲ್ಲಿ 13 ಆರೋಪಿಗಳು ಅರೆಸ್ಟ್ – 47 ಲಕ್ಷದ ಚಿನ್ನಾಭರಣ ವಶ

    ಹಾಸನ: ಜಿಲ್ಲೆಯ ವಿವಿಧೆಡೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಮೂಲಕ ಸುಮಾರು 47 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

    ವಿವಿಧ ಪೊಲೀಸ್ ಠಾಣೆಗಳ ಒಟ್ಟು ಆರು ಪ್ರಕರಣಗಳನ್ನು ಬೇಧಿಸಿರುವ ಪೊಲೀಸರು ಆರೋಪಿಗಳನ್ನು ಜೈಲಿಗಟ್ಟಿದ್ದಾರೆ. ಹಳೇಬೀಡು ಪೊಲೀಸ್ ಠಾಣೆಯ 2, ಹೊಳೆನರಸೀಪುರ ಪೊಲೀಸ್ ಠಾಣೆಯ 1, ಚನ್ನರಾಯಪಟ್ಟಣ ಪೊಲೀಸ್ ಠಾಣೆಯ 1, ಕೊಣನೂರು ಪೊಲೀಸ್ ಠಾಣೆಯ 1, ಆಲೂರು ಪೊಲೀಸ್ ಠಾಣೆಯ 1 ಪ್ರಕರಣ ಸೇರಿದಂತೆ ಒಟ್ಟು ಆರು ಪ್ರಕರಣಗಳನ್ನು ಪೊಲೀಸರು ಬೇಧಿಸಿದ್ದಾರೆ. ಇದನ್ನೂ ಓದಿ: ನಮ್ಮ ಸರ್ಕಾರದಲ್ಲಿ ಬಿಜೆಪಿಗೆ ನಾಯಕರಿಗೆ ಕಳಚಲಾಗದ ‘ಪ್ಯಾಂಟ್ ಭಾಗ್ಯ’ ನೀಡ್ತೇವೆ – ಕಾಂಗ್ರೆಸ್

    ಆರು ಪ್ರಕರಣಗಳಿಂದ ಒಟ್ಟು 13 ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 303 ಗ್ರಾಂ ಚಿನ್ನ, 300 ಗ್ರಾಂ ಬೆಳ್ಳಿ, ಎರಡು ಲಾರಿ, 100 ಲೀಟರ್ ಡೀಸೆಲ್, ನಾಲ್ಕು ಬೈಕ್, ಒಂದು ಪಿಕಪ್ ವಾಹನ, ಲ್ಯಾಪ್ ಟ್ಯಾಪ್ ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ನಮ್ಮ‌ ಕ್ಷೇತ್ರದಲ್ಲಿ ನಾವು ಗಂಡಸರಲ್ವಾ…? ಹೊರಗಿನವರಿಗೆ ಟಿಕೆಟ್ ಕೊಟ್ರೆ ನಾವು ಕೆಲಸ ಮಾಡಲ್ಲ: ಮನೋಹರ್ ತಹಶೀಲ್ದಾರ್

    ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳು ನಡೆಯದಂತೆ ಪೊಲೀಸರು ಹೆಚ್ಚಿನ ನಿಗವಹಿಸಿದ್ದಾರೆ. ಜಿಲ್ಲೆಯ ವಿವಿಧೆಡೆ ನಡೆದ ಅಪರಾಧ ಪ್ರಕರಣ ಪತ್ತೆಹಚ್ಚಿ ಆರೋಪಿಗಳನ್ನು ಬಂಧಿಸಿದ ಪೊಲೀಸರನ್ನು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ್ ಗೌಡ ಅಭಿನಂದಿಸಿದ್ದಾರೆ.

  • ಅಪರಾಧಗಳ ಕಡಿವಾಣಕ್ಕೆ ಪೊಲೀಸರ ಹೊಸ ತಂತ್ರ: ಗುಂಪು ಕಟ್ಟುವ ಯುವಕರಿಗೆ ಕ್ಲಾಸ್

    ಅಪರಾಧಗಳ ಕಡಿವಾಣಕ್ಕೆ ಪೊಲೀಸರ ಹೊಸ ತಂತ್ರ: ಗುಂಪು ಕಟ್ಟುವ ಯುವಕರಿಗೆ ಕ್ಲಾಸ್

    ನೆಲಮಂಗಲ: ನಗರದ ಹೊರವಲಯದಲ್ಲಿ ಎರಡು ರಾಷ್ಟ್ರೀಯ ಹೆದ್ದಾರಿಗಳಿದ್ದು, ಅಪರಾಧ ಮಾಡಿ ಕ್ಷಣಾರ್ಧದಲ್ಲಿ ಆರೋಪಿಗಳು ನಾಪತ್ತೆಯಾಗುತ್ತಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಅಪರಾಧಗಳ ಕಡಿವಾಣಕ್ಕೆ ಹೊಸ ತಂತ್ರ ಮಾಡಿದ್ದಾರೆ.

    ಇತ್ತೀಚೆಗೆ ನೆಲಮಂಗಲ ನಗರದಲ್ಲಿ ಯುವಕರ ಗುಂಪುಗಳ ನಡುವೆ ಗಲಾಟೆ ನಡೆಯುತ್ತಿತ್ತು. ಇದಕ್ಕಾಗಿ ನೆಲಮಂಗಲ ಟೌನ್ ಪೊಲೀಸರು ವಿಶೇಷವಾದ ಕಾರ್ಯಾಚರಣೆ ನಡೆಸಿದ್ದಾರೆ. ಕತ್ತಲು ಆವರಿಸುತ್ತಿದ್ದ ಹಾಗೆ ಯುವಕರ ಗುಂಪು ಟೀ ಅಂಗಡಿ, ವೈನ್ ಶಾಪ್, ಇನ್ನಿತರ ಕಡೆ ಸೇರುತ್ತಾರೆ. ಇಂತಹ ಯುವಕರಿಗೆ ವಾರ್ನ್ ಮಾಡುವ ಮೂಲಕ ಪೊಲೀಸರು ಹೊಸ ರೀತಿಯ ನೈಟ್ ರೌಂಡ್ಸ್ ಶುರು ಮಾಡಿದ್ದಾರೆ.ಇದನ್ನೂ ಓದಿ: ಕುರಿಗಾಹಿ ಮೇಲೆ ಹಲ್ಲೆ ನಡೆಸಿ ಕುರಿ ಕದ್ದ ಖದೀಮರು

    ಇನ್ನೂ ಖಾಸಗಿ ವಾಹನದಲ್ಲಿ ತೆರಳಿದ ನೆಲಮಂಗಲ ಟೌನ್ ಇನ್ಸ್ಪೆಕ್ಟರ್ ಕುಮಾರ್ ನೇತೃತ್ವದ ಪೊಲೀಸರ ತಂಡ, ಅನವಶ್ಯಕವಾಗಿ ರಸ್ತೆಯಲ್ಲಿ ತಿರುಗಾಡೋರಿಗೂ ವಾನಿರ್ಂಗ್ ನೀಡಿದ್ದಾರೆ. ಹೆಚ್ಚು ಅನುಮಾನ ಕಂಡುಬಂದ ಯುವಕರನ್ನು ವಶಕ್ಕೆ ಪಡೆದು, ಯುವಕರ ಸಂಜೆಯ ಮೋಜು-ಮಸ್ತಿಗೆ ಬ್ರೇಕ್ ಹಾಕಿದ್ದಾರೆ. ಇದನ್ನೂ ಓದಿ: ಗದಗಿಗೆ ಸಿಎಂ ಬಾರ್ತಾರೆಂದು ತರಾತುರಿಯಲ್ಲಿ ರಸ್ತೆ ದುರಸ್ತಿ

    ಅಪರಾಧ ಪ್ರಕರಣಗಳು ಹೆಚ್ಚದಂತೆ ನಗರದಲ್ಲಿ ಶಾಂತಿ ಕಾಪಾಡಲು ಪೊಲೀಸರು ಹೈ ಅಲರ್ಟ್ ಆಗಿದ್ದು, ಯಾವುದೇ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವನ್ನು ಅನುಸರಿಸಿದ್ದಾರೆ.

  • ರೌಡಿಗಳು ಲಾಂಗ್ ಹಿಡಿದು ಓಡಾಡ್ತಿದ್ದಾರೆ: ಮತ್ತೆ ಪೊಲೀಸರ ಮೇಲೆ ಈಶ್ವರಪ್ಪ ಗರಂ

    ರೌಡಿಗಳು ಲಾಂಗ್ ಹಿಡಿದು ಓಡಾಡ್ತಿದ್ದಾರೆ: ಮತ್ತೆ ಪೊಲೀಸರ ಮೇಲೆ ಈಶ್ವರಪ್ಪ ಗರಂ

    ಶಿವಮೊಗ್ಗ: ಶಾಂತವಾಗಿದ್ದ ಮಲೆನಾಡಿನ ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಪೊಲೀಸರನ್ನು ಕಂಡರೆ ಕಳ್ಳ-ಕಾಕರಿಗೆ, ಕೊಲೆಗಾರರಿಗೆ ಭಯವೇ ಇಲ್ಲದಂತಾಗಿದೆ. ಅಪರಾಧ ತಡೆಗಟ್ಟುವಲ್ಲಿ ಪೊಲೀಸರ ವೈಫಲ್ಯ ಎದ್ದು ಕಾಣುತ್ತಿದೆ ಎಂದು ಆರೋಪಿಸಿರುವ ಸಚಿವ ಈಶ್ವರಪ್ಪ ಪೊಲೀಸರ ವಿರುದ್ಧ ಇಂದು ಮತ್ತೆ ವಾಗ್ದಾಳಿ ಮುಂದುವರಿಸಿದ್ದಾರೆ.

    ಶಿವಮೊಗ್ಗ ನಗರದ ಕುವೆಂಪುನಗರ ಬಡಾವಣೆಗೆ ಭೇಟಿ ನೀಡಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ನಂತರ ಮಾತನಾಡಿದ ಸಚಿವರು, ಈ ಹಿಂದೆ ಆನಂದರಾಯರು ಶಿವಮೊಗ್ಗ ಕ್ಷೇತ್ರದ ಶಾಸಕರಾಗಿದ್ದ ವೇಳೆ ಅಪರಾಧ ಪ್ರಕರಣಗಳು ಹೆಚ್ಚಾಗಿದ್ದವು. ನಂತರದ ದಿನಗಳಲ್ಲಿ ಅಪರಾಧ ಪ್ರಕರಣಗಳ ಕಡಿಮೆ ಆಗಿದ್ದವು. ಆದರೆ ಇದೀಗ ಮತ್ತೆ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

    ಶಿವಮೊಗ್ಗ ನಗರದಲ್ಲಿ ರೌಡಿಗಳು ಮಚ್ಚು, ಲಾಂಗ್ ಹಿಡಿದುಕೊಂಡು ಓಡಾಡುತ್ತಿದ್ದಾರೆ. ಕೊಲೆ, ಸುಲಿಗೆ ಪ್ರಕರಣಗಳು ಹೆಚ್ಚಾಗುತ್ತಿವೆ. ಗಾಂಜಾ, ಹುಕ್ಕಾ ಸೇವನೆ ಹೆಚ್ಚಾಗಿರುವ ಜೊತೆಗೆ ಮನೆಯ ಮುಂದೆ ನಿಲ್ಲಿಸಿದ್ದ ವಾಹನಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚುತ್ತಿದ್ದಾರೆ. ಹೀಗಿದ್ದರೂ ಪೊಲೀಸರು ಅಪರಾಧ ತಡೆಗಟ್ಟಲು, ಯಾವುದೇ ಕ್ರಮ ಕೈಗೊಳ್ಳಲು ಮುಂದಾಗಿಲ್ಲ. ಇರದಿಂದಾಗಿ ಪೊಲೀಸರ ವೈಫಲ್ಯ ಎದ್ದು ಕಾಣುತ್ತಿದೆ. ಪೊಲೀಸರು ಕೆಲಸ ಮಾಡುತ್ತಿದ್ದಾರಾ, ಮಲಗಿದ್ದೀರಾ ಎಂಬುದು ಗೊತ್ತಾಗುತ್ತಿಲ್ಲ. ನಿಮ್ಮ ಧೋರಣೆ ಹೀಗೆ ಮುಂದುವರಿದರೆ ಜನರೇ ಕ್ರಮ ಕೈಗೊಳ್ಳಲು ಮುಂದಾಗುತ್ತಾರೆ ಎಂದು ಗುಡುಗಿದರು.

    ನಾಗರಿಕರು ದೂರು ನೀಡಲು ಠಾಣೆಗೆ ಹೋದರೆ ವಿನಾಃ ಕಾರಣ ಕಾಯಿಸುತ್ತಾರೆ ಎಂಬ ಆರೋಪ ಸಹ ಪೊಲೀಸರ ಮೇಲಿದೆ. ಪೊಲೀಸರು ಇನ್ನಾದರೂ ಎಚ್ಚೆತ್ತುಕೊಂಡು ಕೆಲಸ ಮಾಡಬೇಕಿದೆ. ನಿಮ್ಮ ಇಲಾಖೆ ಬಗ್ಗೆ ಪ್ರತ್ಯೇಕ ಸಭೆ ನಡೆಸುತ್ತೇನೆ. ನಿಮ್ಮಿಂದ ಹೇಗೆ ಕೆಲಸ ಮಾಡಿಸಬೇಕು ಎಂಬುದು ನನಗೆ ಗೊತ್ತಿದೆ ಎಂದು ಸಚಿವ ಈಶ್ವರಪ್ಪ ಎಚ್ಚರಿಕೆ ನೀಡಿದ್ದಾರೆ.

  • ಸಂಚಾರಿ ನಿಯಮಗಳ ಕುರಿತು ಜಾಗೃತಿ – ಪೊಲೀಸರಿಂದ ಬೈಕ್ ರ‍್ಯಾಲಿ

    ಸಂಚಾರಿ ನಿಯಮಗಳ ಕುರಿತು ಜಾಗೃತಿ – ಪೊಲೀಸರಿಂದ ಬೈಕ್ ರ‍್ಯಾಲಿ

    ಬೆಂಗಳೂರು: ಹೆಚ್ಚುತ್ತಿರುವ ರಸ್ತೆ ಅಪಘಾತ ಪ್ರಕರಣಗಳಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಬೆಂಗಳೂರು ಹೊರವಲಯದ ನೆಲಮಂಗಲ ಟೌನ್ ಪೊಲೀಸರು ಬೈಕ್ ರ‍್ಯಾಲಿ ಮೂಲಕ ಸಾರ್ವಜನಿಕ ಜಾಗೃತಿಗೆ ಮೂಡಿಸಿದ್ದಾರೆ.

    ಬೆಂಗಳೂರು ಗ್ರಾಮಾಂತರ ಅಪರ ಪೊಲೀಸ್ ಅಧೀಕ್ಷಕ ಸಜೀತ್ ಅವರು ಬೈಕ್ ರ‍್ಯಾಲಿಗೆ ಚಾಲನೆ ನೀಡಿದರು. ಉಪವಿಭಾಗದ ಪೊಲೀಸ್ ಸಿಬ್ಬಂದಿ ಜೊತೆ ಕೈಜೋಡಿಸಿದ ಸಾರ್ವಜನಿಕರು, ನೆಲಮಂಗಲ ಪಟ್ಟಣದ ವಿವಿಧ ಬಡಾವಣೆ, ಹೊರವಲಯದಲ್ಲಿ ಸಂಚಾರಿ ನಿಯಮಗಳ ಕುರಿತು ಮಾಹಿತಿ ಇರುವ ಭಿತ್ತಿ ಪತ್ರಗಳನ್ನು ನೀಡಿ ಜಾಗೃತಿ ಮೂಡಿಸಿದರು. ಪೊಲೀಸ್ ಇಲಾಖೆ ಜನರೊಂದಿಗೆ ಬೆರೆತು ಕೆಲಸ ಮಾಡಲು ಹಾಗೂ ಅಪರಾಧ ಪ್ರಕರಣಗಳನ್ನು ತಡೆಯಲು ಪೊಲೀಸರ ಜೊತೆ ಕೈಜೋಡಿಸಿ. ಜೊತೆಗೆ ಸಂಚಾರಿ ನಿಯಮಗಳನ್ನು ಪಾಲಿಸಿ ಎಂದು ಮನವಿ ಮಾಡಿದರು.

    ಅನುಮಾನಾಸ್ಪದ ವ್ಯಕ್ತಿಗಳು ಹಾಗೂ ವಸ್ತುಗಳು ಕಂಡರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಎಂದು ಬೈಕ್ ರ‍್ಯಾಲಿ ಮೂಲಕ ಜನರಿಗೆ ಅರಿವು ಮೂಡಿಸಿದರು. ಈ ವೇಳೆ ಡಿವೈಎಸ್ಪಿ ಮೋಹನ್ ಕುಮಾರ್, ಸಿಪಿಐ ಶಿವಣ್ಣ, ಟ್ರಾಫಿಕ್ ಸಿಪಿಐ ವೀರೇಂದ್ರ ಪ್ರಸಾದ್, ನೆಲಮಂಗಲ ಟೌನ್ ಪಿಎಸ್‍ಐ ಮಂಜುನಾಥ್, ಮೋಹನ್ ಕುಮಾರ್, ಪೊಲೀಸ್ ಸಿಬ್ಬಂದಿ ಬೈಕ್ ರ‍್ಯಾಲಿಯಲ್ಲಿ ಭಾಗವಹಿಸಿದ್ದರು.

  • ಬಿಜೆಪಿ ಅಭ್ಯರ್ಥಿ ವಿರುದ್ಧ 204 ಕ್ರಿಮಿನಲ್ ಪ್ರಕರಣ ದಾಖಲು

    ಬಿಜೆಪಿ ಅಭ್ಯರ್ಥಿ ವಿರುದ್ಧ 204 ಕ್ರಿಮಿನಲ್ ಪ್ರಕರಣ ದಾಖಲು

    – ಪತ್ರಿಕೆಯಲ್ಲಿ ಮಾಹಿತಿ ಪಬ್ಲಿಷ್ ಮಾಡಲು 60 ಲಕ್ಷ ರೂ. ವೆಚ್ಚ

    ತಿರುವನಂತಪುರಂ: ಬಿಜೆಪಿ ಅಭ್ಯರ್ಥಿಯೊಬ್ಬರ ವಿರುದ್ಧ ದಾಖಲಾಗಿರುವ ಪ್ರಕರಣಗಳ ವಿವರಣೆಯನ್ನು ಪತ್ರಿಕೆಯೊಂದರ ನಾಲ್ಕು ಪುಟಗಳಲ್ಲಿ ಮುದ್ರಿಸಲಾಗಿದೆ. ಇದು ಪತ್ರಿಕೆ ತೆರೆದು ನೋಡಿದ ಓದುಗರಲ್ಲಿ ಅಚ್ಚರಿ ಮೂಡಿಸಿದೆ.

    ಕೇರಳದ ಪಥನಂತಿಟ್ಟಿಯ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಸುರೇಂದ್ರನ್ ಅವರ ವಿರುದ್ಧ 204 ಕ್ರಿಮಿನಲ್ ಕೇಸ್ ದಾಖಲಾಗಿವೆ. ಈ ಕುರಿತು ಅವರು ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದ್ದಾರೆ.

    ಮತದಾರರ ಜಾಗೃತಿ ಉದ್ದೇಶದಿಂದ ಚುನಾವಣಾ ಆಯೋಗವು ಮೂರು ಮುದ್ರಣ ಮಾಧ್ಯಮಗಳಲ್ಲಿ ಅಭ್ಯರ್ಥಿಯ ವಿರುದ್ಧ ಇರುವ ಪ್ರಕರಣಗಳ ಕುರಿತು ಜಾಹೀರಾತು ನೀಡಬೇಕು. ಹೀಗಾಗಿ ಪ್ರತಿಕೆಯೊಂದರ ಪಥನಂತಿಟ್ಟಿಯ ಆವೃತ್ತಿಯಲ್ಲಿ ಕೆ.ಸುರೇಂದ್ರನ್ ಅವರು ಎದುರಿಸುತ್ತಿರುವ ಕ್ರಿಮಿನಲ್ ಕೇಸ್‍ಗಳ ಕುರಿತು ಜಾಹೀರಾತು ನೀಡಲಾಗಿತ್ತು. ಇದನ್ನು ಮುದ್ರಿಸಲು ಬರೋಬ್ಬರಿ ನಾಲ್ಕು ಪುಟಗಳೇ ಬೇಕಾಯಿತು. ಗುರುವಾರ ಪತ್ರಿಕೆ ತೆರೆದು ನೋಡಿದ ಓದುಗರು ಯಾವುದೋ ಟೆಂಡರ್, ಕಾಮಗಾರಿ ಮಾಹಿತಿ ಎಂದು ತಿಳಿದಿದ್ದರು. ಬಳಿಕ ಅಭ್ಯರ್ಥಿಯ ವಿರುದ್ಧ ಇರುವ ಪ್ರಕರಣಗಳ ಮಾಹಿತಿ ಎಂದು ತಿಳಿದಾಗ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

    ಬಿಜೆಪಿ ಅಭ್ಯರ್ಥಿ ಕೆ.ಸುರೇಂದ್ರನ್ ಅವರ ವಿರುದ್ಧ ಇರುವ ಪ್ರಕರಣಗಳಲ್ಲಿ ಶೇ.90 ರಷ್ಟು ಶಬರಿಮಲೆ ಹೋರಾಟಕ್ಕೆ ಸಂಬಂಧಿಸಿವೆ. ಪ್ರತಿಕೆಯಲ್ಲಿ ಪಬ್ಲಿಷ್ ಆಗಿರುವ ನಾಲ್ಕು ಪುಟಗಳ ಜಾಹೀರಾತಿಗೆ 20 ಲಕ್ಷ ರೂ. ವೆಚ್ಚ ಮಾಡಲಾಗಿದೆ. ಚುನಾವಣಾ ಆಯೋಗದ ಮಾರ್ಗಸೂಚಿಯ ಪ್ರಕಾರ ಕನಿಷ್ಠ ಮೂರು ಪತ್ರಿಕೆಗಳಲ್ಲಿ ಅಭ್ಯರ್ಥಿಗಳ ವಿರುದ್ಧ ಇರುವ ಪ್ರಕರಣಗಳ ಕುರಿತು ಪಬ್ಲಿಷ್ ಮಾಡಬೇಕು. ಈ ಮೂಲಕ ಮೂರು ಪತ್ರಿಕೆಗಳಿಗೆ ಜಾಹೀರಾತು ನೀಡಿದ ವೆಚ್ಚ 60 ಲಕ್ಷ ರೂ. ಆಗಿದೆ.