Tag: Criminal.

  • ದಿನಕ್ಕೆ 5 ಬಾರಿ ನಮಾಜ್, 2 ಸಸಿ ನೆಡಬೇಕು – ಅಪರಾಧಿಗೆ ವಿಭಿನ್ನ ಶಿಕ್ಷೆ ನೀಡಿದ ಕೋರ್ಟ್

    ದಿನಕ್ಕೆ 5 ಬಾರಿ ನಮಾಜ್, 2 ಸಸಿ ನೆಡಬೇಕು – ಅಪರಾಧಿಗೆ ವಿಭಿನ್ನ ಶಿಕ್ಷೆ ನೀಡಿದ ಕೋರ್ಟ್

    ಮುಂಬೈ: ರಸ್ತೆ ಅಪಘಾತದ ಗಲಾಟೆ ಪ್ರಕರಣದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬನನ್ನು ಅಪರಾಧಿ (Criminal) ಎಂದು ಘೋಷಿಸಿದ ಮಹಾರಾಷ್ಟ್ರದ (Maharashtra) ಮಾಲೆಗಾಂವ್‌ನ (Malegaon) ಮ್ಯಾಜಿಸ್ಟ್ರೇಟ್ ಕೋರ್ಟ್ (Court) ಜೈಲು ಶಿಕ್ಷೆಗೆ ಬದಲಾಗಿ 21 ದಿನಗಳ ಕಾಲ ದಿನಕ್ಕೆ 5 ಬಾರಿ ನಮಾಜ್ (Namaz) ಮಾಡುವಂತೆ ಮತ್ತು ನಿತ್ಯ 2 ಸಸಿಗಳನ್ನು ನೆಟ್ಟು (Planting) ಪೊಷಿಸುವಂತೆ ಸೂಚಿಸಿ ವಿಭಿನ್ನ ಆದೇಶ ಹೊರಡಿಸಿದೆ.

    1958ರ ಅಪರಾಧಿಗಳ ಪ್ರೊಬೇಶನ್ ಆಕ್ಟ್‌ನ ಸೆಕ್ಷನ್ 3 ಅಪರಾಧವನ್ನು ಪುನರಾವರ್ತಿಸದಂತೆ ಎಚ್ಚರಿಕೆ ನೀಡಿ ಅಪರಾಧಿಯನ್ನು ಬಿಡುಗಡೆ ಮಾಡಲು ಮ್ಯಾಜಿಸ್ಟ್ರೇಟ್‌ಗೆ ಅಧಿಕಾರವನ್ನು ನೀಡುತ್ತದೆ ಇದರ ಅಡಿಯಲ್ಲಿ ಶಿಕ್ಷೆಯನ್ನು ಪ್ರಕಟಿಸಲಾಗಿದೆ ಎಂದು ಮ್ಯಾಜಿಸ್ಟ್ರೇಟ್ ತೇಜ್ವಂತ್ ಸಿಂಗ್ ಸಂಧು ಆದೇಶದಲ್ಲಿ ಹೇಳಿದ್ದಾರೆ.

    ಕೇವಲ ಎಚ್ಚರಿಕೆ ಸಾಕಾಗುವುದಿಲ್ಲ ಮತ್ತು ಅಪರಾಧಿಯು ತನ್ನ ಕೃತ್ಯಗಳನ್ನು ಪುನರಾವರ್ತಿಸದಂತೆ ಎಚ್ಚರಿಕೆಯನ್ನು ಮತ್ತು ಅವನ ಅಪರಾಧವನ್ನು ನೆನಪಿಸಿಕೊಳ್ಳುವುದು ಮುಖ್ಯವಾಗಿದೆ. ಈ ಹಿನ್ನೆಲೆ ಮುಸ್ಲಿಂ ಧರ್ಮ ಆಚರಿಸುವ ವ್ಯಕ್ತಿಗೆ ನಮಾಜ್ ಮಾಡುವ ಹಾಗೂ ಸಸಿ ನಡುವೆ ಜವಬ್ದಾರಿ ನೀಡಿದೆ. ಇದರಿಂದ ಪ್ರತಿ ದಿನವೂ ಆತನಿಗೆ ತನ್ನ ತಪ್ಪಿನ ಅರಿವಾಗಲಿದೆ ಎಂದು ಮ್ಯಾಜಿಸ್ಟ್ರೇಟ್ ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ರಾಪರ್ ಆಗಲು ಕದ್ದ- ತನಿಖೆ ವೇಳೆ ರಾಪ್ ಸಾಂಗ್ ಹಾಡಿದ!

    ವಿಚಾರಣೆ ವೇಳೆ ಅಪರಾಧಿಯೂ ಇಸ್ಲಾಮಿಕ್ ನಂಬಿಕೆಯನ್ನು ಅನುಸರಿಸುವ ವ್ಯಕ್ತಿಯಾಗಿದ್ದರೂ, ಧಾರ್ಮಿಕ ಗ್ರಂಥಗಳಲ್ಲಿ ಸೂಚಿಸಿದಂತೆ ತಾನು ನಿಯಮಿತವಾಗಿ ನಮಾಜ್ ಮಾಡುತ್ತಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾನೆ. ಇದೇ ಕಾರಣಕ್ಕೆ ಮುಂದಿನ 21 ದಿನಗಳ ಕಾಲ 5 ಹೊತ್ತಿನ ನಮಾಜ್ ಮಾಡಲು ಹಾಗೂ ಅಪರಾಧ ಎಸಗಿದ ಸೋನಾಪುರ ಮಸೀದಿಯ ಆವರಣದಲ್ಲಿ 2 ಮರಗಳನ್ನು ನೆಡಲು ಆದೇಶಿಸಿದೆ.

    ಅಪರಾಧಿ 2010 ರಲ್ಲಿ ಅಪಘಾತ ಪ್ರಕರಣವೊಂದರಲ್ಲಿ ಗಲಾಟೆ ಮಾಡಿದ್ದ. ವ್ಯಕ್ತಿಯೊರ್ವನ ಮೇಲೆ ಹಲ್ಲೆ ಮಾಡಿದ್ದು, ಆತನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು), 325 (ಸ್ವಯಂಪ್ರೇರಿತವಾಗಿ ಘೋರವಾದ ಗಾಯವನ್ನು ಉಂಟುಮಾಡುವುದು), 504 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶಪೂರ್ವಕ ಅವಮಾನ) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಸೆಕ್ಷನ್ 323 ರ ಅಡಿಯಲ್ಲಿ ಆರೋಪಿ ತಪ್ಪಿತಸ್ಥ ಎಂದು ಮ್ಯಾಜಿಸ್ಟ್ರೇಟ್ ಪರಿಗಣಿಸಿದ ಹಿನ್ನೆಲೆ ಉಳಿದ ಅಪರಾಧಗಳಿಂದ ಆತನನನ್ನು ಖುಲಾಸೆಗೊಳಿಸಲಾಯಿತು. ಇದನ್ನೂ ಓದಿ: ಐಷಾರಾಮಿ ಕಾರಲ್ಲಿ ಬಂದು ಜಿ20 ಕಾರ್ಯಕ್ರಮಕ್ಕಾಗಿ ಇಟ್ಟಿದ್ದ ಹೂಕುಂಡ ಕದ್ದೊಯ್ದ ಕಳ್ಳ ಅರೆಸ್ಟ್‌

  • 5 ವರ್ಷದಲ್ಲಿ 166 ಕ್ರಿಮಿನಲ್‌ಗಳ ಎನ್‌ಕೌಂಟರ್‌, 4453 ಮಂದಿಗೆ ಗಾಯ: ಯೋಗಿ ಆದಿತ್ಯನಾಥ್‌

    5 ವರ್ಷದಲ್ಲಿ 166 ಕ್ರಿಮಿನಲ್‌ಗಳ ಎನ್‌ಕೌಂಟರ್‌, 4453 ಮಂದಿಗೆ ಗಾಯ: ಯೋಗಿ ಆದಿತ್ಯನಾಥ್‌

    ಲಕ್ನೋ: ಕಳೆದ ಐದು ವರ್ಷದಲ್ಲಿ 166 ಕ್ರಿಮಿನಲ್‌ಗಳನ್ನು(Criminals) ಎನ್‌ಕೌಂಟರ್‌(Encounter) ಮಾಡಿದ್ದು, 4,453 ಮಂದಿ ಗಾಯಗೊಂಡಿದ್ದಾರೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್(UP CM Yogi Adityanath) ಹೇಳಿದ್ದಾರೆ

    ಅಪರಾಧಿಗಳ ವಿರುದ್ಧ ತಮ್ಮ ಸರ್ಕಾರದ “ಶೂನ್ಯ ಸಹಿಷ್ಣುತೆಯನ್ನು” ಪಾಲಿಸುತ್ತದೆ. ನಮ್ಮ ರಾಜ್ಯದಲ್ಲಿ ಅಪರಾಧಿಗಳನ್ನು ಮುಕ್ತವಾಗಿ ಸಂಚರಿಸಲು ಬಿಡುವುದಿಲ್ಲ. ಒಂದೋ ಅಪರಾಧಿಗಳು ಜೈಲಿನಲ್ಲಿ ಇರುತ್ತಾರೋ ಅಥವಾ ಸಾಯುತ್ತಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮನೆ ಮುಂದೆ ಬುಲ್ಡೋಜರ್ ಪ್ರತ್ಯಕ್ಷ – ಪರಾರಿಯಾಗಿದ್ದ ಯುಪಿ ರೇಪ್ ಆರೋಪಿ ಶರಣು

    ಪೊಲೀಸ್ ಸ್ಮಾರಕ ದಿನದ ಪರೇಡ್ ಅನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ ಐದು ವರ್ಷಗಳಲ್ಲಿ 13 ಪೊಲೀಸ್(Police) ಸಿಬ್ಬಂದಿಯೂ ಹುತಾತ್ಮರಾಗಿದ್ದಾರೆ ಮತ್ತು ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿ ಪಾಲನೆಯಾಗುವಲ್ಲಿ ಶ್ರಮ ವಹಿಸುತ್ತಿರುವ ಪೊಲೀಸರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಯೋಗಿಜೀ ಇನ್ನು ಮುಂದೆ ತಪ್ಪು ಮಾಡಲ್ಲ, ಪ್ಲೀಸ್ ಕ್ಷಮಿಸಿ ಬಿಡಿ: ಗೋಳಾಡಿದ ಆರೋಪಿ

    ಹುತಾತ್ಮರಾದ ಪೊಲೀಸರ ಕುಟುಂಬಗಳ ಕಲ್ಯಾಣ ಮತ್ತು ಅವರ ಅಗತ್ಯಗಳನ್ನು ಪೂರೈಸಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಮತ್ತು ಇದನ್ನು ಮುಂದುವರಿಸಲಾಗುತ್ತದೆ ಎಂದು ಈ ವೇಳೆ ಭರವಸೆ ನೀಡಿದರು. ಇದನ್ನೂ ಓದಿ: ಯೋಗಿ 2.0 ಆಡಳಿತ: 2 ಎನ್‍ಕೌಂಟರ್ – ಪರಾರಿಯಾಗಿದ್ದ 50ಕ್ಕೂ ಹೆಚ್ಚು ಅಪರಾಧಿಗಳು ಶರಣು

    ದರೋಡೆಕೋರರ ಕಾಯ್ದೆಯ ಅಡಿ 58,648 ಅಪರಾಧಿಗಳ ವಿರುದ್ಧ ಕ್ರಮ ಕೈಗೊಂಡರೆ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ 807 ಮಂದಿ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಕ್ರಿಮಿನಗಳ 4,400 ಕೋಟಿ ರೂ ಮೌಲ್ಯ ಆಸ್ತಿಯನ್ನು ನಾಶ ಮಾಡಿದ್ದೇವೆ ಅಥವಾ ವಶಪಡಿಸಿಕೊಂಡಿದ್ದೇವೆ. ಈ ಜಾಗದಲ್ಲಿ ಬಾಲಕಿಯರಿಗೆ ಶಾಲೆ ಮತ್ತು ಬಡವರಿಗೆ ಮನೆಯನ್ನು ನಿರ್ಮಿಸಿದ್ದೇವೆ ಎಂದು ಯೋಗಿ ತಿಳಿಸಿದರು.

    Live Tv
    [brid partner=56869869 player=32851 video=960834 autoplay=true]

  • ಜೈಲಿನಲ್ಲಿ ಅಪರಾಧಿಯಿಂದ ಭರ್ಜರಿ ಹುಟ್ಟುಹಬ್ಬ ಆಚರಣೆ

    ಜೈಲಿನಲ್ಲಿ ಅಪರಾಧಿಯಿಂದ ಭರ್ಜರಿ ಹುಟ್ಟುಹಬ್ಬ ಆಚರಣೆ

    – ಮಟನ್ ಸಾರು ಸವಿದ ಕೈದಿಗಳು

    ಪಾಟ್ನಾ: ಕೊಲೆ ಅಪರಾಧಿಯೊಬ್ಬ ಬಿಹಾರದ ಜೈಲಿನೊಳಗೆ ಕೇಕ್ ಕಟ್ ಮಾಡಿ ಭರ್ಜರಿಯಾಗಿ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾನೆ. ಇದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಪಿಂಟು ತಿವಾರಿ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಅಪರಾಧಿಯಾಗಿದ್ದು, ಈತ 2015ರಲ್ಲಿ ಇಬ್ಬರು ಎಂಜಿನಿಯರ್ ಗಳನ್ನು ಕೊಲೆ ಮಾಡಿ ಜೈಲು ಸೇರಿದ್ದಾನೆ. ಇತ್ತೀಚೆಗೆ ಪಿಂಟು ಬಿಹಾರ ಜೈಲಿನಲ್ಲಿ ಕೇಕ್ ಕಟ್ ಮಾಡಿ ತನ್ನ ಬರ್ತ್ ಡೇಯನ್ನು ಆಚರಿಸಿಕೊಂಡಿದ್ದಾನೆ. ಜೈಲಿನಲ್ಲಿರುವ ಇತರರಿಂದ ಗಿಫ್ಟ್ ಸಹ ಪಡೆದುಕೊಂಡಿದ್ದಾನೆ. ಈತ ಕೇಕ್ ಕಟ್ ಮಾಡುವಾಗ ಉಳಿದ ಕೈದಿಗಳು ಪಿಂಟುಗೆ ಹ್ಯಾಪಿ ಬರ್ತ್ ಡೇ ಎಂದು ಹಾಡು ಹಾಡಿರುವುದನ್ನು ವಿಡಿಯೋದಲ್ಲಿ ಗಮನಿಸಬಹುದಾಗಿದೆ.

    ಮತ್ತೊಂದು ವಿಡಿಯೋದಲ್ಲಿ, ಸುಮಾರು 12ಕ್ಕೂ ಹೆಚ್ಚು ಮಂದಿ ನೆಲದ ಮೇಲೆ ಕುಳಿತುಕೊಂಡು ಅನ್ನ ಹಾಗೂ ಮಟನ್ ಸಾರು ಸವಿದಿದ್ದಾರೆ. ಪಾರ್ಟಿಯ ಬಳಿಕ ಇತರ ಕೈದಿಗಳಿಗೆ ಪಿಂಟು ಸಿಹಿ ಹಂಚುವ ಮೂಲಕ ಬರ್ತ್ ಡೇಯನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾನೆ. ಅಲ್ಲದೆ ಹುಟ್ಟುಹಬ್ಬದ ಪ್ರಯುಕ್ತ ಊಟದ ವ್ಯವಸ್ಥೆಗಾಗಿ ಕ್ಯಾಟರಿಂಗ್ ಅವರನ್ನು ಜೈಲಿನ ಆವರಣದೊಳಗೆ ಕರೆಸಲಾಗಿದೆ. ಈ ಎಲ್ಲಾ ಘಟನೆಗಳು ವಿಡಿಯೋದಲ್ಲಿ ಸೆರೆಯಾಗಿದೆ. ಇಡೀ ಹುಟ್ಟುಹಬ್ಬದ ಆಚರಣೆಯನ್ನು ಮೊಬೈಲ್ ಫೋನ್ ನಲ್ಲಿ ವಿಡಿಯೋ ಮಾಡಿರುವುದರಿಂದ ಜೈಲಿನೊಳಗೆ ಮೊಬೈಲ್ ಬಳಕೆಗೆ ಅವಕಾಶ ಮಾಡಿಕೊಡಲಾಗಿದೆ ಎಂಬುದನ್ನು ಗಮನಿಸಬಹುದು.

    ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋ ಪೊಲೀಸ್ ಇಲಾಖೆಯೊಳಗೆ ಭಾರೀ ಕೊಲಾಹಲಕ್ಕೆ ಕಾರಣವಾಗಿದೆ. ಐಜಿ ಮಿಥಿಲೇಶ್ ಮಿಶ್ರಾ ಅವರು ಈ ಘಟನೆಯ ತನಿಖೆಗೆ ಆದೇಶಿಸಿ ಜಿಲ್ಲಾ ಹಾಗೂ ಜೈಲು ಆಡಳಿತದಿಂದ ವರದಿ ಕೋರಿದ್ದಾರೆ. ಜೈಲಿನೊಳಗೆ ಮೊಬೈಲ್ ಬಳಕೆ ಮಾಡಿರುವುದು ಗಂಭೀರ ವಿಚಾರವಾಗಿದ್ದು, ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಐಜಿ ತಿಳಿಸಿದ್ದಾರೆ.

    ಪ್ರಕರಣ ಸಂಬಂಧ ಈಗಾಗಲೇ ಜೈಲಿನ ನಾಲ್ವರು ಗಾರ್ಡ್ ಗಳನ್ನು ಅಮಾನತುಗೊಳಿಸಲಾಗಿದೆ ಎಂಬುದಾಗಿ ವರದಿಯಾಗಿದೆ.

  • ಯುಪಿ ಪೊಲೀಸರಿಗೆ ಹೆದರಿ 12,291 ಕ್ರಿಮಿನಲ್‍ಗಳು ಶರಣು

    ಯುಪಿ ಪೊಲೀಸರಿಗೆ ಹೆದರಿ 12,291 ಕ್ರಿಮಿನಲ್‍ಗಳು ಶರಣು

    ಲಕ್ನೋ: ಕ್ರಿಮಿನಲ್ ಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿರುವ ಪೊಲೀಸರಿಗೆ ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ಸಂಪೂರ್ಣ ಬೆಂಬಲ ನೀಡಿದ್ದು, ಪರಿಣಾಮವಾಗಿ ಇದುವರೆಗೂ 12 ಸಾವಿರದ 291 ಕ್ರಿಮಿನಲ್ ಗಳು ಶರಣಾಗಿದ್ದಾರೆ ಎಂದು ಯುಪಿ ಡಿಜಿಪಿ ಒಪಿ ಸಿಂಗ್ ತಿಳಿಸಿದ್ದಾರೆ.

    ಖಾಸಗಿ ಮಾಧ್ಯಮವೊಂದಕ್ಕೆ ಮಾಹಿತಿ ನೀಡಿರುವ ಡಿಜಿಪಿ, ಕ್ರಿಮಿನಲ್ ಚಟುವಟಿಕೆಯಲ್ಲಿ ಭಾಗಿಯಾಗಿರುವವರಿಗೆ ಭಯ ಆರಂಭವಾಗಿದ್ದು, ಸ್ವತಃ ಅವರೇ ತಮ್ಮ ಜಾಮೀನು ರದ್ದು ಮಾಡಿ ಜೈಲಿನಲ್ಲೇ ಉಳಿದುಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.

    ಆಗ್ರಾ ಪೊಲೀಸರು ಸೈಬರ್ ಕ್ರೈಂ ವಿಭಾಗವನ್ನು ಕೂಡ ಆರಂಭಿಸಿದ್ದು, ಇದರಿಂದ ಅಪರಾಧ ಪ್ರಕರಣಗಳನ್ನು ತಡೆಯಲು ಸಹಕಾರಿ ಆಗಲಿದೆ. ಆಗ್ರಾ ಐತಿಹಾಸಿಕ ನಗರ ಆಗಿರುವುದರಿಂದ ಪ್ರವಾಸಿ ತಾಣವಾಗಿದೆ. ವಿಶ್ವದ ಬೇರೆ ಬೇರೆ ಭಾಗದಿಂದ ಇಲ್ಲಿಗೆ ಪ್ರವಾಸಿಗರು ಆಗಮಿಸುತ್ತಾರೆ. ಆದರೆ ಇಂತಹ ಕ್ರಿಮಿನಲ್ ಗಳಿಂದ ಆಗ್ರಾ ನಗರಕ್ಕೆ ಕಪ್ಪು ಚುಕ್ಕೆ ಬರುತ್ತಿತ್ತು. ಅದ್ದರಿಂದ ತಪ್ಪು ಮಾಡಿದವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದ್ದೇವೆ ಎಂದು ಆಗ್ರಾ ಎಸ್‍ಎಸ್‍ಪಿ ಅಮಿತ್ ಪಾಠಕ್ ತಿಳಿಸಿದ್ದಾರೆ.

    ಪ್ರತಿ ಪೊಲೀಸ್ ಠಾಣೆಯಲ್ಲಿ ನಡೆಯುವ ಕ್ರಿಮಿನಲ್ ಅಪರಾಧಗಳು ಸೇರಿದಂತೆ, ಟ್ರಾಫಿಕ್ ಸಮಸ್ಯೆಗೆ ಆಯಾ ಪ್ರದೇಶದ ಠಾಣೆಗಳನ್ನೇ ಹೊಣೆ ಮಾಡಲಾಗುತ್ತಿದೆ. ಇತ್ತೀಚೆಗೆ ಕರ್ತವ್ಯಲೋಪ ಆರೋಪ ಮಾಡಿದ ಮೇರೆಗೆ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಅಲ್ಲದೇ ಪೊಲೀಸರಿಗೆ ಎನ್‍ಜಿಒಗಳು ಕೂಡ ಸಹಕಾರ ನೀಡುತ್ತಿವೆ ಎಂದರು.

    ಕೆಲ ದಿನಗಳ ಹಿಂದೆ ನಡೆದ ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಪ್ರಮುಖ 3 ರಾಜ್ಯಗಳನ್ನು ಕಳೆದುಕೊಂಡ್ರೂ ಸಿಎಂ ಯೋಗಿ ಆದಿತ್ಯನಾಥ್ ಅವರು ರಾಜ್ಯದಲ್ಲಿ ಕ್ರಿಮಿನಲ್ ಚಟುವಟಿಕೆ ನಿಯಂತ್ರಣಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ. ಇದರಂತೆ ಕ್ರಿಮಿನಲ್ ಮೇಲೆ ಕಠಿಣ ಕ್ರಮಕ್ಕೆ ಮುಂದಾಗಿರುವ ಉತ್ತರ ಪ್ರದೇಶ ಡಿಜಿಪಿ ಎಲ್ಲಾ ಪೊಲೀಸ್ ಠಾಣೆಗಳು ಕ್ರಿಮಿನಲ್ ವಿರುದ್ಧ ಕಠಿಣ ಕ್ರಮಕ್ಕೆ ಸೂಚನೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದರೋಡೆಗೆ ಯತ್ನಿಸಿ ಕಾಮಿಡಿಯಾದ ದರೋಡೆಕೋರ: ವಿಡಿಯೋ ನೋಡಿದ್ರೆ ಬಿದ್ದು ಬಿದ್ದು ನಗ್ತೀರಿ

    ದರೋಡೆಗೆ ಯತ್ನಿಸಿ ಕಾಮಿಡಿಯಾದ ದರೋಡೆಕೋರ: ವಿಡಿಯೋ ನೋಡಿದ್ರೆ ಬಿದ್ದು ಬಿದ್ದು ನಗ್ತೀರಿ

    ವಾಷಿಂಗ್ಟನ್: ದರೋಡೆಗೆ ಯತ್ನಿಸಿ ಸಿಸಿಟಿವಿ ಕ್ಯಾಮೆರಾದ ಕಣ್ಣಿಗೆ ಸಿಕ್ಕ ಕೆಲವು ದೃಶ್ಯಗಳನ್ನು ಅಮೆರಿಕದ ಕೊಲಾರಾಡೋ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದ್ದು, ಅದರಲ್ಲಿ ಒಂದು ವಿಡಿಯೋ ಭಾರೀ ವೈರಲ್ ಆಗಿದೆ.

    ಕೊಲಾರಾಡೋ ರಾಜ್ಯದ ಅರೋರಾ ನಗರದ ಇ-ಸಿಗರೇಟ್ ಅಂಗಡಿ ದರೋಡೆಗೆ ವ್ಯಕ್ತಿಯೊಬ್ಬ ಯತ್ನಿಸಿದ್ದಾನೆ. ಆದರೆ ಬೆದರಿಕೆ ಒಡ್ಡಲು ತೆಗೆದ ಗನ್ ಕೆಳಗೆ ಬೀಳುತ್ತಿದ್ದಂತೆ ಗಾಬರಿಗೊಂಡು, ಪರದಾಡಿದ ವಿಡಿಯೋ ವೀಕ್ಷಕರಲ್ಲಿ ಭಾರೀ ನಗೆ ತರಿಸುವಂತಿದೆ.

    ವಿಡಿಯೋದಲ್ಲಿ ಏನಿದೆ?
    ಕೆಂಪು ಟೋಪಿ, ಕಪ್ಪು ಕನ್ನಡಕ, ನೀಲಿ ಟಿ-ಶರ್ಟ್ ಹಾಕಿಕೊಂಡು ವ್ಯಕ್ತಿಯೊಬ್ಬ ಅಂಗಡಿಯ ಮುಂದೆ ಸ್ವಲ್ಪ ಹೊತ್ತು ನಡೆದಾಡಿದ್ದಾನೆ. ಅಲ್ಲಿಂದಲೇ ಅಂಗಡಿಯಲ್ಲಿ ಯಾರು ಇದ್ದಾರೆ ಎಂದು ಖಚಿತಪಡಿಸಿಕೊಂಡಿದ್ದ. ಬಳಿಕ ಗ್ರಾಹಕನಂತೆ ಅಂಗಡಿಯ ಒಳಗೆ ನುಗ್ಗಿ, ತನ್ನ ಪ್ಯಾಂಟ್‍ನಲ್ಲಿ ಇದ್ದ ಗನ್ ಹೊರತೆಗೆದಿದ್ದಾನೆ. ಕೌಂಟರ್ ಸಮೀಪಕ್ಕೆ ಬರುತ್ತಿದ್ದಂತೆ ಮಹಿಳಾ ಸಿಬ್ಬಂದಿಗೆ ಬೆದರಿಕೆ ಒಡ್ಡಲು ಹೋಗಿ, ಕೈ ಜಾರಿ ಗನ್ ಕೌಂಟರ್ ದಾಟಿ ಕೆಳಗೆ ಬಿದ್ದಿದ್ದರಿಂದ ದರೋಡೆಕೋರ ಗಾಬರಿಗೊಂಡಿದ್ದಾನೆ. ತಕ್ಷಣವೇ ಕೌಂಟರ್ ಹತ್ತಿ ಗನ್ ತೆಗೆದುಕೊಳ್ಳಲು ಪ್ರಯತ್ನಿಸಿ, ವಿಫಲನಾಗಿ ಅಲ್ಲಿಂದ ಕಾಲ್ಕಿತ್ತಿದ್ದಾನೆ.

    ದರೋಡೆಕೋರ ಬಾಗಿಲಿನಿಂದ ಹೊರಗೆ ಹೋಗುತ್ತಿದ್ದಂತೆ ಪ್ಯಾಂಟ್ ಜಾರತೊಡಗಿದೆ. ಓಡುತ್ತಲೇ ಪ್ಯಾಂಟ್ ಸರಿ ಮಾಡಿಕೊಂಡು ಪರಾರಿಯಾಗಿದ್ದಾನೆ. ಬಳಿಕ ಮಹಿಳಾ ಸಿಬ್ಬಂದಿ ಗನ್ ಹಿಡಿದು ಆತನ ಹುಡುಕಾಟಕ್ಕೆ ಕೌಂಟರ್ ನಿಂದ ಹೊರ ಬರುತ್ತಾರೆ. ಆದರೆ ದರೋಡೆಕೋರ ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ಅರಿತು, ಯಾರಿಗೋ ಫೋನ್ ಕರೆ ಮಾಡಿ, ಮಾಹಿತಿ ನೀಡುತ್ತಾರೆ. ಈ ಎಲ್ಲ ದೃಶ್ಯಗಳು ಅಂಗಡಿಯಲ್ಲಿ ಇರುವ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.facebook.com/AuroraCOPD/videos/303518700424956

  • ಕ್ರಿಮಿನಲ್‍ಗಳಿಗೆ ಖೆಡ್ಡಾ ತೋಡಲು ಪೊಲೀಸರಿಂದ ಮಾಸ್ಟರ್ ಪ್ಲಾನ್

    ಕ್ರಿಮಿನಲ್‍ಗಳಿಗೆ ಖೆಡ್ಡಾ ತೋಡಲು ಪೊಲೀಸರಿಂದ ಮಾಸ್ಟರ್ ಪ್ಲಾನ್

    ಬೆಂಗಳೂರು: ಪೊಲೀಸರ ಕೈಯಿಂದ ಇನ್ನು ಮುಂದೆ ಕ್ರಿಮಿನಲ್‍ಗಳು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಯಾಕೆಂದರೆ ಸಿಲಿಕಾನ್ ಸಿಟಿಯಲ್ಲಿ ಕ್ರಿಮಿನಲ್‍ಗಳನ್ನು ಮಟ್ಟಹಾಕಲು ಪೊಲೀಸರು ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ.

    ಕ್ರಿಮಿನಲ್‍ಗಳನ್ನು ಮಟ್ಟಹಾಕಲು ಅವರನ್ನು ಖೆಡ್ಡಾಕೆ ಬೀಳಿಸಲು `ಫೇಷಿಯಲ್ ರೆಕಗ್ನೇಷನ್ ಸಿಸ್ಟಮ್’ ಪರಿಚಯಿಸಿದ್ದು, ಪ್ರಾಯೋಗಿಕವಾಗಿ ನಗರದ 7 ಕಡೆ ಜಾರಿ ಮಾಡಿದ್ದಾರೆ. ಯಶವಂತಪುರ ರೈಲ್ವೆ ಸ್ಟೇಷನ್, ಮೆಜೆಸ್ಟಿಕ್, ಒರಿಯಾನ್ ಮಾಲ್, ಮಂತ್ರಿಮಾಲ್, ಬನಶಂಕರಿ ಬಸ್ ಸ್ಟಾಪ್‍ಗಳಲ್ಲಿ ಕ್ಯಾಮೆರಾ ಅಳವಡಿಸಿದ್ದಾರೆ.

    ಅಪರಾಧವೆಸಗಿ ತಪ್ಪಿಸಿಕೊಂಡು ಓಡಾಡುವ ಕ್ರಿಮಿನಲ್‍ಗಳ ಚಹರೆಯನ್ನ ಕ್ಯಾಪ್ಚರ್ ಮಾಡುವ ಈ ಕ್ಯಾಮೆರಾ ಪೊಲೀಸ್ ಕಂಟ್ರೋಲ್ ರೂಂಗೆ ಮಾಹಿತಿ ನೀಡುತ್ತದೆ. 10 ವರ್ಷ ಹಳೆಯ ಪ್ರಕರಣದ ಆರೋಪಿಗಳನ್ನು ಈ ಕ್ಯಾಮೆರಾ ಕಂಡುಹಿಡಿಯುತ್ತದೆ.

    `ಫೇಷಿಯಲ್ ರೆಕಗ್ನೇಷನ್ ಸಿಸ್ಟಮ್’ ಅಂತ ನಗರದಲ್ಲಿ 7 ಕ್ಯಾಮೆರಾವನ್ನು ಅಳವಡಿಸಿದ್ದೇವೆ. ತಪ್ಪಿಸಿಕೊಂಡು ಓಡಾಡುವ ಕ್ರಿಮಿನಲ್‍ಗಳ ಚಹರೆಯನ್ನ ಕ್ಯಾಪ್ಚರ್ ಮಾಡಿ ನಮಗೆ ಅದು ಎಚ್ಚರಿಕೆ ಕೊಡುತ್ತದೆ. ಬಳಿಕ ನಾವು ಆತನನ್ನು ಬಂಧಿಸುತ್ತೇವೆ. ಆದ್ದರಿಂದ ಈ ವ್ಯವಸ್ಥೆಯನ್ನು ಪ್ರಯೋಗಿಕವಾಗಿ ಮಾಡುತ್ತಿದ್ದೇವೆ ಎಂದು ಪೊಲೀಸ್ ಕಮಿಷನರ್ ಸುನೀಲ್ ಕುಮಾರ್ ಅವರು ಹೇಳಿದ್ದಾರೆ.

    ಈ `ಫೇಷಿಯಲ್ ರೆಕಗ್ನೇಷನ್ ಸಿಸ್ಟಮ್’ ಯುಕೆ ಮತ್ತು ಯುಎಸ್‍ಎನಲ್ಲಿ ಇದ್ದು, ಆ ಮಾದರಿಯಂತೆ ಅಳವಡಿಸಲು ನಗರದ ಪೊಲೀಸರು ಮುಂದಾಗಿದ್ದಾರೆ. ಈ ಕ್ಯಾಮೆರಾ ಪೊಲೀಸರ ಬಳಿ ಇರುವ ಅಪರಾದಿಗಳ ಡಾಟ ಕಲೆಕ್ಟ್ ಮಾಡಿ ಆರೋಪಿಯ ಮಾಹಿತಿಯನ್ನು ಕಂಟ್ರೋಲ್ ರೂಂಗೆ ರವಾನೆ ಮಾಡುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಫಲಾನುಭವಿಗಳ ಹಣವನ್ನು ತಂದೆ-ಸಹೋದರನ ಖಾತೆಗೆ ಹಾಕಿದ ಡಾಟಾ ಎಂಟ್ರಿ ಆಪರೇಟರ್!

    ಫಲಾನುಭವಿಗಳ ಹಣವನ್ನು ತಂದೆ-ಸಹೋದರನ ಖಾತೆಗೆ ಹಾಕಿದ ಡಾಟಾ ಎಂಟ್ರಿ ಆಪರೇಟರ್!

    ಮೈಸೂರು: ಜನರಿಗೆ ನೀಡಬೇಕಿದ್ದ ಸ್ವಚ್ಛಭಾರತ್ ಮಿಷನ್ ಯೋಜನೆಯ ಹಣವನ್ನು ಡಾಟಾ ಎಂಟ್ರಿ ಆಪರೇಟರ್, ತನ್ನ ತಂದೆ ಹಾಗೂ ಸಹೋದರನ ಖಾತೆಗೆ ಜಮಾ ಮಾಡಿರುವ ಪ್ರಕರಣ ಮೈಸೂರು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

    ನಂಜನಗೂಡು ತಾಲೂಕಿನ ವರುಣಾ ಕ್ಷೇತ್ರ ವ್ಯಾಪ್ತಿಯ ಹೊರಳವಾಡಿ ಗ್ರಾಮ ಪಂಚಾಯಿತಿಯಲ್ಲಿ ಅಕ್ರಮ ನಡೆದಿದೆ. ಗ್ರಾಮ ಪಂಚಾಯಿತಿಯ ಡಾಟಾ ಎಂಟ್ರಿ ಆಪರೇಟರ್ ಚಾಂದಿನಿ, ಫಲಾನುಭವಿಗಳಿಗೆ ತಲುಪಬೇಕಾದ ಪ್ರೋತ್ಸಾಹ ಧನವನ್ನು ತನ್ನ ತಂದೆ ಹಾಗೂ ಸಹೋದರನ ಖಾತೆಗೆ ವರ್ಗಾಯಿಸಿದ್ದಾರೆ. ಚಾಂದಿನಿ ಇದುವರೆಗೂ ತನ್ನ ತಂದೆ ಖಾತೆಗೆ 27 ಸಾವಿರ ಹಾಗೂ ಸಹೋದರನ ಖಾತೆಗೆ 36 ಸಾವಿರ ಹಣ ವರ್ಗಾವಣೆ ಮಾಡಿದ್ದಾರೆ.

    ಈ ಸಂಬಂಧ ಡಾಟಾ ಆಪರೇಟರ್ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಓ) ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಒಟ್ಟು 63 ಸಾವಿರ ಹಣ ದುರುಪಯೋಗ ಆಗಿರುವುದು ಬೆಳಕಿಗೆ ಬಂದಿದೆ.

  • 30 ಅಡಿ ಎತ್ತರದ ತೆಂಗಿನ ಮರದಿಂದ ನೋಡ ನೋಡುತ್ತಿದ್ದಂತೆಯೇ ಕೆಳಗೆ ಬಿದ್ದ ಕೈದಿ ಸಾವು!

    30 ಅಡಿ ಎತ್ತರದ ತೆಂಗಿನ ಮರದಿಂದ ನೋಡ ನೋಡುತ್ತಿದ್ದಂತೆಯೇ ಕೆಳಗೆ ಬಿದ್ದ ಕೈದಿ ಸಾವು!

    ದಾವಣಗೆರೆ: ಕೈದಿಯೊಬ್ಬ ತೆಂಗಿನಮರ ಏರಿ ಕೆಳಗೆ ಬಿದ್ದು ಸಾವನ್ನಪ್ಪಿದ ಘಟನೆ ದಾವಣಗೆರೆಯ ಜಿಲ್ಲಾ ಕಾರಾಗೃಹದಲ್ಲಿ ನಡೆದಿದೆ.

    ನಿಂಗಪ್ಪ ಇಂದು ಬೆಳಗ್ಗೆ ಮರವೇರಿ ಕುಳಿತ ಕೈದಿ. ಈತ ಕಾರಾಗೃಹದ ಆವರಣದಲ್ಲಿದ್ದ ಮೂವತ್ತು ಅಡಿ ಎತ್ತರದ ತೆಂಗಿನ ಮರವೇರಿ ಕುಳಿತಿದ್ದು, ಕೆಳಗೆ ಇಳಿಸಲು ಎಷ್ಟು ಪ್ರಯತ್ನ ಪಟ್ಟರೂ ಇಳಿಯಲು ಒಪ್ಪುತ್ತಿರಲಿಲ್ಲ. ಅಲ್ಲದೇ ಯಾವ ಕಾರಣಕ್ಕೆ ಮರವೇರಿ ಕುಳಿತಿದ್ದಾನೆ ಎಂದು ತಿಳಿದುಬಂದಿಲ್ಲ.

    ಕೈದಿ ಹನುಮಂತ ಬೆಳಗ್ಗೆಯಿಂದ ಮರದಲ್ಲೇ ಕುಳಿತಿದ್ದು, ಆತನನ್ನು ಮರದಿಂದ ಕೆಳಗಿಳಿಸಲು ಪೊಲೀಸರು ಹರಸಾಹಸ ಪಟ್ಟರು. ಕೈದಿ ಹನುಮಂತನನ್ನು ಕೆಳಗಿಳಿಸಲು ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿದ್ದರು. ಕೈದಿ ಬೆಳಗ್ಗೆಯಿಂದ ತೆಂಗಿನಮರ ಏರಿ ಕುಳಿತಿದ್ದನು. ಮರವೇರಿದ ಕೈದಿ ನಂತರ ಕಾಲು ಜಾರಿ ಕೆಳಗೆ ಬಿದ್ದಿದ್ದಾನೆ. ಕೂಡಲೇ ಕೈದಿ ನಿಂಗಪ್ಪನನ್ನು ಪೊಲೀಸರು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದರು.

    ಸದ್ಯ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಕೈದಿ ನಿಂಗಪ್ಪ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಕಾಲು ಜಾರಿ ಕೆಳಗೆ ಬಿದ್ದಿದ್ದ ನಿಂಗಪ್ಪ ಬಲೆ ಇದ್ದರೂ ತಲೆ ನೆಲಕ್ಕೆ ಬಡಿದು ಪೆಟ್ಟು ಬಿದ್ದು, ಗಂಭೀರ ಗಾಯಗೊಂಡಿದ್ದನು.

  • ಪೆರೋಲ್ ಮೇಲೆ ಹೊರಬಂದವ 11 ವರ್ಷದ ನಂತ್ರ ಸೆರೆಸಿಕ್ಕ!

    ಪೆರೋಲ್ ಮೇಲೆ ಹೊರಬಂದವ 11 ವರ್ಷದ ನಂತ್ರ ಸೆರೆಸಿಕ್ಕ!

    ಚಿಕ್ಕಮಗಳೂರು: ಪೆರೋಲ್ ಮೇಲೆ ಹೊರಬಂದು 11 ವರ್ಷಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿಕೊಂಡು ಮರುಮದುವೆಯಾಗಿ ಮೂರು ಮಕ್ಕಳ ತಂದೆಯಾಗಿದ್ದ ಅಪರಾಧಿಯನ್ನು ಇದೀಗ ಬಂಧಿಸುವಲ್ಲಿ ಚಿಕ್ಕಮಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.

    2007ರಲ್ಲಿ ಹೆಂಡತಿಯನ್ನು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆಗೈದ ಆರೋಪದಡಿ ಶಿವಮೊಗ್ಗ ಸಾಗರ ಮೂಲದ ಅಬ್ದಲ್ ಘನಿ ಪೆರೋಲ್ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದನು. ಆ ನಂತ್ರ ಆತ ಪೆರೋಲ್ ಮೇಲೆ ಹೊರಬಂದಿದ್ದ. ಬಂದವನು ವಾಪಸ್ ಹೋಗದೆ ತನ್ನ ಇತಿಹಾಸವನ್ನೆಲ್ಲಾ ಬದಲಿಸಿಕೊಂಡು, ಮದುವೆಯಾಗಿ ಮೂರು ಮಕ್ಕಳ ತಂದೆಯಾಗಿ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಬೈಕಿನ ಲೈಸನ್ಸ್ ಎಲ್ಲವನ್ನೂ ಮಾಡಿಸಿಕೊಂಡು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾಸವಿದ್ದನು. ಆದರೆ ಈತ ತನ್ನ ದ್ವಿಚಕ್ರವನ್ನು ಸ್ನೇಹಿತನಿಗೆ ನೀಡಿದ್ದನು.

    ಕುರಿ ಕದ್ದು ಸಿಕ್ಕಿಬಿದ್ದ:
    ಕುರಿ ಕದಿಯುವಾಗ ಸಿಕ್ಕಿಬಿದ್ದ ಅಬ್ದುಲ್ ಘನಿ, ದಕ್ಷಿಣ ಕನ್ನಡದ ಕಡಬ ಠಾಣೆ ಮೆಟ್ಟಿಲೇರಿದ್ದ. ಅಲ್ಲಿನ ಪೊಲೀಸರು ಈತನ ಫಿಂಗರ್ ಪ್ರಿಂಟ್ ಅನ್ನು ಪೊಲೀಸ್ ಇಲಾಖೆಯ ಕ್ರೈಂ ವಿಭಾಗದ ಡಾಟಾಸ್‍ಗೆ ಅಪ್‍ಲೋಡ್ ಮಾಡಿದ್ದಾರೆ. 11 ವರ್ಷದ ಹಿಂದೆ ಇದೇ ಅಬ್ದುಲ್ ಘನಿ ನೀಡಿದ್ದ ಫಿಂಗರ್ ಪ್ರಿಂಟ್ ಮ್ಯಾಚ್ ಆಗಿ ಪೂರ್ವಪರ ಕೆದಕಿದಾಗ ಸಿಕ್ಕಿ ಬಿದ್ದಿದ್ದಾನೆ.

    ಜಾಮೀನು ಫೋರ್ಜರಿ:
    ಈತನ ಮೂಲ ಶಿವಮೊಗ್ಗ. ಪೆರೋಲ್ ಮೇಲೆ ಬಂದವನು ತನ್ನ ಜೀವನದ ಸತ್ಯವನ್ನೆಲ್ಲಾ ಬದಲಿಸಿಕೊಂಡು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾಸವಿದ್ದನು. ಆದ್ರೆ ಇದೀಗ ಈತನನ್ನು ಬಂಧಿಸಿದ್ದು ಮಾತ್ರ ಚಿಕ್ಕಮಗಳೂರಿನ ಪೊಲೀಸರು. ಯಾಕಂದ್ರೆ ಈತ 2007ರಲ್ಲಿ ಪೆರೋಲ್ ಮೇಲೆ ಹೊರಬರುವಾಗ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಅಜ್ಜಂಪುರ ಹೋಬಳಿಯ ಸೊಲ್ಲಾಪುರ ಗ್ರಾಮ ಪಂಚಾಯತಿಯ ಅಧ್ಯಕ್ಷ ಪೆರೋಲ್ ಗೆ ಜಾಮೀನಾಗಿದ್ದನು. ಆದರೆ ಈತ ಜೈಲಿಗೆ ವಾಪಸ್ ಬರದಾಗ ಪೊಲೀಸರು ತನಿಖೆ ನಡೆಸಿದ್ದಾರೆ. ಈ ವೇಳೆ ಜಾಮೀನು ಫೋರ್ಜರಿ ಎಂದು ತಿಳಿದು ಪೊಲೀಸರು ಕೈಚೆಲ್ಲಿದ್ರು. ಆದರೆ ಸದ್ಯ ಅಪರಾಧಿಯ ಫಿಂಗರ್ ಪ್ರಿಂಟ್ ಬರೋಬ್ಬರಿ 11 ವರ್ಷಗಳ ಬಳಿಕ ಈತನನ್ನು ಬಂಧಿಸುವಲ್ಲಿ ಸಹಾಯ ಮಾಡಿದೆ.