Tag: crime

  • 9ರ ಬಾಲಕನ ಮೇಲೆ 16ರ ಬಾಲಕನಿಂದ ಲೈಂಗಿಕ ದೌರ್ಜನ್ಯ!

    9ರ ಬಾಲಕನ ಮೇಲೆ 16ರ ಬಾಲಕನಿಂದ ಲೈಂಗಿಕ ದೌರ್ಜನ್ಯ!

    ಬೆಂಗಳೂರು: 9 ವರ್ಷದ ಬಾಲಕನ ಮೇಲೆ 16 ವರ್ಷದ ಹುಡುಗನೊಬ್ಬ ಲೈಂಗಿಕ ದೌರ್ಜನ್ಯ ಎಸಗಿರುವ ಅಮಾನವೀಯ ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ.

    ಆರ್.ಟಿ.ನಗರದ ಪೊಲೀಸ್ ಠಾಣೆ ವ್ಯಾಪ್ತಿಯ ಚಾಮುಂಡಿನಗರದಲ್ಲಿ ಹುಡುಗನೊಬ್ಬ ಈ ಕೃತ್ಯ ಎಸಗಿದ್ದು, 20 ದಿನಗಳ ನಂತರ ಕೃತ್ಯ ಬೆಳಕಿಗೆ ಬಂದಿದೆ.

    ಚಾಮುಂಡಿನಗರದ ಸಂಬಂಧಿಕರ ಮನೆಗೆ 16 ವರ್ಷದ ಹುಡುಗ ಬಂದಿದ್ದ. ಮನೆಯವರೆಲ್ಲಾ ಆಸ್ಪತ್ರೆಗೆ ತೆರಳಿದ್ದಾಗ ಬಾಲಕನ ಮೇಲೆ ದೌರ್ಜನ್ಯ ಎಸಗಿದ್ದಾನೆ. ಅಷ್ಟೇ ಅಲ್ಲದೇ ನಂತರ ಈ ವಿಚಾರವನ್ನು ತಂದೆ, ತಾಯಿಗೆ ಹೇಳಿದರೆ ಅವರನ್ನ ಕೊಲೆ ಮಾಡುವ ಬೆದರಿಕೆ ಹಾಕಿದ್ದಾನೆ.

    ಘಟನೆಯ ನಂತರ ಬಾಲಕನ ಚಲನವಲನದಲ್ಲಿ ಬದಲಾವಣೆಯಾಗಿದ್ದು, ಮಗನ ವರ್ತನೆಯಿಂದ ಪೋಷಕರು ಆತಂಕಗೊಂಡಿದ್ದಾನೆ. ನಂತರ ಬಾಲಕನನ್ನು ಅಜ್ಜಿಯ ಮನೆಗೆ ಕಳುಹಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

    ಈ ಸಂಬಂಧ ಆರ್.ಟಿ.ನಗರ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಅಡಿ ಪ್ರಕರಣ ದಾಖಲಾಗಿದ್ದು, ಈಗ ಬೆಂಗಳೂರು ಪೂರ್ವ ತಾಲೂಕು ಬಿದರಹಳ್ಳಿಯ ಬಾಲಾರೋಪಿಯನ್ನು ಆರ್.ಟಿ.ನಗರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    ಘಟನೆ ಸಂಬಂಧ ವೈದ್ಯಕೀಯ ಪರೀಕ್ಷೆ ನಡೆಸಬೇಕು ಮತ್ತು ಆರೋಪಿ ಬಾಲಕನಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಸಂತ್ರಸ್ತ  ಬಾಲಕನ ಪೋಷಕರು  ಆಗ್ರಹಿಸಿದ್ದಾರೆ.

     

     

  • ಕೊಪ್ಪಳದಲ್ಲಿ ಡೋಂಗಿ ಬಾಬಾ ಅರೆಸ್ಟ್: 56 ಲಕ್ಷ ರೂ. ಚಿನ್ನಾಭರಣ ವಶ

    ಕೊಪ್ಪಳದಲ್ಲಿ ಡೋಂಗಿ ಬಾಬಾ ಅರೆಸ್ಟ್: 56 ಲಕ್ಷ ರೂ. ಚಿನ್ನಾಭರಣ ವಶ

    ಕೊಪ್ಪಳ: ಅಮಾಯಕ ಜನರಿಗೆ ಮಂಕುಬೂದಿ ಎರಚಿ ವಂಚಿಸುತ್ತಿದ್ದ ಡೋಂಗಿ ಬಾಬಾನನ್ನ ಕೊಪ್ಪಳ ಪೊಲೀಸರು ಬಂಧಿಸಿದ್ದಾರೆ.

    ಯಾರಬ್ ಬಂಧಿತ ಆರೋಪಿ. ಬಂಧಿತನಿಂದ ಪೊಲೀಸರು 56 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ನಿಮ್ಮ ಮನೆಯಲ್ಲಿ ನಿಧಿಯಿದ್ದು ಪೂಜೆ ಮಾಡಿ ತೆಗೆದು ಕೊಡುವುದಾಗಿ ಹೇಳಿ ಈತ ವಂಚನೆ ಮಾಡುತ್ತಿದ್ದ.

    ಗಂಗಾವತಿಯ ಹಿರೇಜಂತಕಲ್ ನಿವಾಸಿ ಜಾಮಿದ್ ಪಾಷಾ ಅವರಿಂದ ಈತ 13 ತೊಲೆ ಬಂಗಾರ ಪಡೆದು ವಂಚಿಸಿದ್ದ. ಜಾಮಿದ್ ಪಾಷಾ ದೂರಿನ ಅನ್ವಯ ಪೊಲೀಸರು ಈಗ ಬಾಬಾನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

    ಬಂಧಿತ ಬಾಬಾನಿಂದ 1484 ಗ್ರಾಂ ಚಿನ್ನಾಭರಣ, ಕೃತ್ಯಕ್ಕೆ ಬಳಸುತ್ತಿದ್ದ ಇನ್ನೋವಾ ಕಾರು, ಎರಡು ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ರಾಜ್ಯದ ಕೊಲಾರ, ಬಳ್ಳಾರಿ, ಬೆಂಗಳೂರು ಯಲಹಂಕ, ಬಂಗಾರಪೇಟೆ, ಹೊಸಪೇಟೆ ಭಾಗಗಳಲ್ಲಿ ಡೋಂಗಿ ಬಾಬಾ ವಂಚನೆ ಎಸಗಿದ್ದಾನೆ ಎಂದು ಕೊಪ್ಪಳ ಎಸ್ಪಿ ಅನೂಪ್ ಶೆಟ್ಟಿ ತಿಳಿಸಿದ್ದಾರೆ.

     

     

  • ಹೆಂಡತಿ ಸ್ನಾನ ಮಾಡ್ಬೇಕಾದ್ರೆ 6 ವರ್ಷದ ಬಾಲಕ ಇಣುಕಿ ನೋಡ್ತಿದ್ನಂತೆ – ಸಿಟ್ಟಾಗಿ ಕೊಂದೇ ಬಿಟ್ಟ ಪತಿ!

    ಹೆಂಡತಿ ಸ್ನಾನ ಮಾಡ್ಬೇಕಾದ್ರೆ 6 ವರ್ಷದ ಬಾಲಕ ಇಣುಕಿ ನೋಡ್ತಿದ್ನಂತೆ – ಸಿಟ್ಟಾಗಿ ಕೊಂದೇ ಬಿಟ್ಟ ಪತಿ!

    ನವದೆಹಲಿ: ಕಳೆದ 2 ದಿನಗಳಿಂದ ನಾಪತ್ತೆಯಾಗಿದ್ದ ಬಾಲಕನ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಕಾಣೆಯಾಗಿದ್ದ ಬಾಲಕ ಕೊಲೆಯಾಗಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ 19 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ನನ್ನ ಪತ್ನಿ ಸ್ನಾನ ಮಾಡುತ್ತಿದ್ದ ವೇಳೆ 6 ವರ್ಷದ ಬಾಲಕ ಇಣುಕಿ ನೋಡುತ್ತಿದ್ದ ಎಂದು ಬಂಧಿತ ಆರೋಪಿ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ.

    ದೆಹಲಿಯ ಓಖ್ಲಾ 2ನೇ ಹಂತದಲ್ಲಿ ಬುಧವಾರ ಸಂಜೆ ಆಟವಾಡುತ್ತಿದ್ದ ಜೀವನ್ ಜ್ಯೋತಿ ರಾಜೀವ್ ಕ್ಯಾಂಪ್ ನ ಬಾಲಕ ಮನೆಗೆ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು.

    ಆದರೆ ಶುಕ್ರವಾರ ಬೆಳಗ್ಗೆ ಓಖ್ಲಾ 2ನೇ ಹಂತದ ಮನೆಯೊಂದರಿಂದ ದುರ್ವಾಸನೆ ಬರುತ್ತಿತ್ತು. ಇದನ್ನು ಗಮನಿಸಿದ ನೆರೆಹೊರೆಯವರು ದುರ್ವಾಸನೆ ಬರುತ್ತಿದ್ದ ಕೊಠಡಿಯ ಬಾಗಿಲು ತೆಗೆದಿದ್ದಾರೆ. ನಾವು ಇಲಿ ಸತ್ತಿರಬೇಕು ಎಂದು ಭಾವಿಸಿ ಬಾಗಿಲು ತೆಗೆದೆವು. ಆದರೆ ಕೊಠಡಿಯಲ್ಲಿದ್ದ ಬೆಡ್ ಬಾಕ್ಸ್ ನಲ್ಲಿ ಗೋಣಿ ಚೀಲವಿತ್ತು. ಅಲ್ಲೇ ಬಾಲಕನ ತಲೆ ಮತ್ತು ಕೈ ಕಾಣಿಸುತ್ತಿತ್ತು. ಬಾಲಕನ ಮುಖವನ್ನು ಕಪ್ಪು ಬಣ್ಣದ ಬಟ್ಟೆಯಿಂದ ಕಟ್ಟಿಹಾಕಿದ್ದರು ಎಂದು ಪ್ರತ್ಯಕ್ಷದರ್ಶಿ ರಾಧಾ ಹೇಳಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ 19 ವರ್ಷದ ರೋಹಿತ್ ಎಂಬಾತನನ್ನು ಬಂಧಿಸಿದ್ದೇವೆ. ವಿಚಾರಣೆ ವೇಳೆ ರೋಹಿತ್, ನನ್ನ ಪತ್ನಿ ಸ್ನಾನ ಮಾಡುತ್ತಿದ್ದಾಗ 6 ವರ್ಷದ ಬಾಲಕ ಇಣುಕಿ ನೋಡುತ್ತಿದ್ದ ಹಾಗೂ ಅಸಭ್ಯವಾಗಿ ಕಮೆಂಟ್ ಮಾಡಿದ್ದ. ಇದರಿಂದ ಸಿಟ್ಟಿಗೆದ್ದು ನಾನು ಆತನ ಮೇಲೆ ದಾಳಿ ಮಾಡಿದೆ. ಈ ವೇಳೆ ಮಂಚಕ್ಕೆ ಬಾಲಕನ ತಲೆ ಬಡಿಯಿತು. ರಕ್ತಸ್ರಾವ ಆರಂಭವಾಗಿತ್ತು. ರಕ್ತ ಸೋರಿಕೆಯಾಗದಂತೆ ಕಪ್ಪು ಬಣ್ಣದ ಬಟ್ಟೆಯನ್ನು ಸುತ್ತಿದ್ದೇನೆ ಎಂದು ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಡಿಸಿಪಿ ರೋಮಿಲ್ ಬಾನಿಯಾ ಹೇಳಿದ್ದಾರೆ.

    ಆದರೆ ನನ್ನ ಮಗ ಹಾಗೇನೂ ಮಾಡಿಲ್ಲ. ಅಕ್ಕಪಕ್ಕದ ಮನೆಯವರಿಗೂ ನನ್ನ ಮಗನ ಬಗ್ಗೆ ಯಾವುದೇ ದೂರುಗಳಿಲ್ಲ ಎಂದು ಮೃತ ಬಾಲಕನ ತಂದೆ ಹೇಳಿದ್ದಾರೆ.

     

  • ಬೆಕ್ಕು ರಕ್ಷಣೆಗೆಂದು ಮನೆಗೆ ಕರೆಸಿ ಯುವಕನ ಮೇಲೆ  ಹಲ್ಲೆ

    ಬೆಕ್ಕು ರಕ್ಷಣೆಗೆಂದು ಮನೆಗೆ ಕರೆಸಿ ಯುವಕನ ಮೇಲೆ ಹಲ್ಲೆ

    ಬೆಂಗಳೂರು: ಬೆಕ್ಕು ರಕ್ಷಣೆಗೆಂದು ಮನೆಗೆ ಕರೆಸಿ ಯುವಕನ ಮೇಲೆ ಯುವತಿಯ ಕಡೆಯವರು ಹಲ್ಲೆ ನಡೆಸಿದ ಘಟನೆ ನಗರದ ಸಾರಕ್ಕಿ ಬಳಿ ಇಲಿಯಾಸ್ ನಗರದಲ್ಲಿ ನಡೆದಿದೆ.

    ಪ್ರಾಣಿದಯಾ ಸಂಘದ ಸದಸ್ಯ ಉಸ್ಮಾನ್(24) ಹಲ್ಲೆಗೆ ಒಳಗಾದ ವ್ಯಕ್ತಿ. ಯುವತಿಯು ಸಾರಕ್ಕಿ ಬಳಿ ಬೆಕ್ಕು ರಕ್ಷಣೆ ಮಾಡಬೇಕಿದೆ ಎಂದು ಉಸ್ಮಾನ್ ಅವರನ್ನು ಕರೆಸಿಕೊಂಡಿದ್ದಾಳೆ. ಉಸ್ಮಾನ್ ಯುವತಿ ಮನೆ ಬಳಿ ಬಂದಾಗ ಮನೆ ಎದುರಿದ್ದ ನಾಲ್ವರು ಯುವಕರಿಂದ ಹಲ್ಲೆ ನಡೆದಿದೆ. ಹುಡುಗಿಯ ವಿಚಾರಕ್ಕೆ ಉಸ್ಮನ್ ಮೇಲೆ ಯುವಕರು ಹಲ್ಲೆ ಮಾಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

    ಘಟನೆ ಸಂಬಂಧ ಈಗ ಉಸ್ಮಾನ್ ಬನಶಂಕರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

     

     

     

     

  • ಹೂ ಮಾರುವವನ ಜೊತೆ ಶುರುವಾಗಿತ್ತು ಪ್ರೀತಿ – 10 ವರ್ಷದ ಬಳಿಕ ಬರ್ಬರವಾಗಿ ಹತ್ಯೆ ಮಾಡಿದ್ಳು!

    ಹೂ ಮಾರುವವನ ಜೊತೆ ಶುರುವಾಗಿತ್ತು ಪ್ರೀತಿ – 10 ವರ್ಷದ ಬಳಿಕ ಬರ್ಬರವಾಗಿ ಹತ್ಯೆ ಮಾಡಿದ್ಳು!

    ಚೆನ್ನೈ: 10 ವರ್ಷಗಳಿಂದ ಪ್ರೀತಿಸಿದ್ದ ಬಳಿಕ ಪ್ರಿಯತಮೆಯೊಬ್ಬಳು ಪ್ರಿಯಕರನನ್ನೇ ತನ್ನ ಗೆಳೆಯನ ಜೊತೆ ಸೇರಿ ಕೊಲೆ ಮಾಡಿದ ಘಟನೆ ಚೆನ್ನೈನ ಗೌರಿಪೇಟೆಯಲ್ಲಿ ನಡೆದಿದೆ.

    ಸುಂದರಂ (38) ಕೊಲೆಯಾದ ವ್ಯಕ್ತಿ. ಕೊಲೆ ಎಸಗಿದ ಆರೋಪದ ಅಡಿ ಯುವತಿ ಅಮುದಾಳನ್ನು ಪೊಲೀಸರು ಬಂಧಿಸಿ ವಿಚಾರಣೆ ಮುಂದುವರೆಸಿದ್ದಾರೆ.

    ಸೆಪ್ಟೆಂಬರ್ 2ರಂದು ಸುಂದರಂ ಯಾರೊಂದಿಗೋ ಫೋನಲ್ಲಿ ಮಾತನಾಡುತ್ತಾ ಮನೆಯಿಂದ ಹೊರಗೆ ಹೋದವನು ಮತ್ತೆ ಹಿಂತಿರುಗಲಿಲ್ಲ. ಮಗ ಮನೆಗೆ ಮರಳದ ಹಿನ್ನೆಲೆಯಲ್ಲಿ ತಾಯಿ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿ, ಮಗನನ್ನು ಪತ್ತೆ ಹಚ್ಚಿ ಕೊಡಿ ಎಂದು ಪೊಲೀಸರಿಗೆ ಮನವಿ ಮಾಡಿದ್ದರು.

    ಕೊಲೆ ಮಾಡಿದ್ದು ಯಾಕೆ?: ಹೂ ಮಾರಾಟ ಮಾಡುತ್ತಿದ್ದ ಸುಂದರಮ್ ಗಾಂಜಾ ಸೇವಿಸಿದ ಮತ್ತಿನಲ್ಲಿ ಅಮುದಾಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದನು. ಇದ್ದರಿಂದ ಬೇಸತ್ತ ಅಮುದಾ ತನ್ನ ಪಕ್ಕದ ಮನೆಯಲ್ಲಿರುವ ಆಟೋ ಡ್ರೈವರ್ ದಿವಾನ್ ಮೊಹಮ್ಮದ್ ಜೊತೆ ಸ್ನೇಹ ಬೆಳಸಿ ಸುಂದರಮ್ ಬಗ್ಗೆ ಹೇಳಿದ್ದಳು. ಗೆಳೆತನ ಗಾಢವಾಗುತ್ತಿದ್ದಂತೆ ಇಬ್ಬರೂ ಸೇರಿ ಸುಂದರಂ ಕೊಲೆಗೆ ಸ್ಕೆಚ್ ಹಾಕಿದ್ದಾರೆ.

    ಸಪ್ಟೆಂಬರ್ 2 ರಂದು ಅಮುದಾ ಹಾಗೂ ಆಕೆಯ ಅತ್ತಿಗೆ ಇಬ್ಬರು ಸೇರಿ ಸುಂದರಂನನ್ನು ಆಟೋ ಡ್ರೈವರ್ ಮೊಹಮ್ಮದ್ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಸುಂದರಂ ಮೇಲೆ ಅಡುಗೆಗೆ ಬಳಸುವ ಚಾಕುವಿನಿಂದ ಇರಿದಿದ್ದಾರೆ. ಇದಾದ ಬಳಿಕ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ್ದಾರೆ. ನಂತರ ಮೊಹಮ್ಮದ್ ಮನೆಯ ಹಿಂದೆ ಸುಂದರಮ್ ದೇಹವನ್ನು ಹೂತಿದ್ದರು.

    ಬೆಳಕಿಗೆ ಬಂದಿದ್ದು ಹೇಗೆ?: ಕೊಲೆ ಪ್ರಕರಣದಲ್ಲಿ ಮಗ ಮೊಹಮ್ಮದ್ ಆತಂಕಗೊಂಡಿರುವುದನ್ನು ತಾಯಿ ಪೊಲೀಸರಿಗೆ ತಿಳಿಸಿದ್ದರು. ವಿಚಾರಣೆ ವೇಳೆಯಲ್ಲಿ ಅಮುದಾ ತಾನು ಕೊಲೆ ಮಾಡಿದ್ದು ಯಾಕೆ ಮತ್ತು ಈ ಕೃತ್ಯಕ್ಕೆ ಸಹಕಾರ ನೀಡಿದವರು ಯಾರು ಎನ್ನುವುದನ್ನು ಹೇಳಿದಾಗ ಪ್ರಕರಣದ ರಹಸ್ಯ ಬೆಳಕಿಗೆ ಬಂದಿದೆ. ಈಗ ಮೊಹಮ್ಮದ್ ನಾಪತ್ತೆಯಾಗಿದ್ದು ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

  • ನೀಚ ಟೆಕ್ಕಿಗೆ ಪತ್ನಿಯೇ ಬೆಡ್ ಕಾಫಿ: ವಿಕೃತಕಾಮಿಗೆ ದಿನವೆಲ್ಲ ಸೆಕ್ಸ್ ಬೇಕೇ ಬೇಕಂತೆ!

    ನೀಚ ಟೆಕ್ಕಿಗೆ ಪತ್ನಿಯೇ ಬೆಡ್ ಕಾಫಿ: ವಿಕೃತಕಾಮಿಗೆ ದಿನವೆಲ್ಲ ಸೆಕ್ಸ್ ಬೇಕೇ ಬೇಕಂತೆ!

    ಬೆಂಗಳೂರು: ಎಲ್ಲರಿಗೂ ಬೆಳಗ್ಗೆ ಎದ್ದ ಕೂಡಲೇ ಬೆಡ್ ಕಾಫಿ, ಬೆಡ್ ಟೀ ಕುಡಿಯುವ ಚಟ ಇರುತ್ತೆ, ಆದರೆ ನಗರದ ಟೆಕ್ಕಿಯೊಬ್ಬನಿಗೆ ಪತ್ನಿಯೇ ಬೆಡ್ ಕಾಫಿ ಆಗಿದ್ದು, ಈಗ ತನ್ನ ನೀಚ ಪತಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಟೆಕ್ಕಿ ಪತಿ ವಿರುದ್ಧ ಪತ್ನಿ ಈಗ ಬೈಯಪ್ಪನ ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ. ಈತ ಕೃತ್ಯಕ್ಕೆ ಸಹಕಾರ ನೀಡಿದ ಆರೋಪದ ಅಡಿ ಅತ್ತೆ, ಮಾವ, ಪತಿಯ ತಂಗಿ ವಿರುದ್ಧ ದೂರು ದಾಖಲಾಗಿದೆ.

    ಏನಿದು ಪ್ರಕರಣ?
    2008ರ ಜನವರಿ ತಿಂಗಳಿನಲ್ಲಿ ದಂಪತಿ ಸಂಪ್ರದಾಯದಂತೆ ಮದುವೆಯಾಗಿ ಥಣೀಸಂದ್ರದಲ್ಲಿ ನೆಲೆಸಿದ್ದರು. 2 ವರ್ಷ ಚೆನ್ನಾಗಿದ್ದ ಪತಿರಾಯ 2010ರಿಂದ ಕಿರುಕುಳ ನೀಡಲು ಆರಂಭಿಸಿದ್ದಾನೆ. ಬೆಳಗ್ಗೆ ಹಾಸಿಗೆಯಿಂದ ಎದ್ದ ಕೂಡಲೆ ಸೆಕ್ಸ್ ಗೆ ಕರೆಯುತ್ತಾನೆ. ಬೆಳಗ್ಗೆ ಸೆಕ್ಸ್ ಮುಗಿಸಿ ಕೆಲಸಕ್ಕೆ ರೆಡಿಯಾಗುತ್ತಿದ್ದರೆ ತಿಂಡಿ ತಿನ್ನುವ ಮೊದಲು ಮತ್ತೊಮ್ಮೆ ಸುಖ ನೀಡುವಂತೆ ಪೀಡಿಸುತ್ತಾನೆ. ಸಂಜೆ ಕೆಲಸ ಮುಗಿದ ಮನೆಗೆ ಬಂದ ಮೇಲೆಯೂ ಸೆಕ್ಸ್ ಸಹಕರಿಸುವಂತೆ ಹೇಳುತ್ತಾನೆ. ಇದಾದ ಬಳಿಕ ರಾತ್ರಿ ಊಟಕ್ಕೆ ಮೊದಲು ಸುಖ ನೀಡಬೇಕೆಂದು ಹೇಳುತ್ತಾನೆ.

    ಇಷ್ಟೆಲ್ಲ ಆದ ಮೇಲೆ ರಾತ್ರಿಯಿಡಿ ಪತ್ನಿಯನ್ನು ನಿದ್ದೆ ಮಾಡಲು ಬಿಡದೇ 5, 6 ಬಾರಿ ಮತ್ತೆ ಸೆಕ್ಸ್ ಗೆ ಕರಿಯುತ್ತಾನೆ. ಪತ್ನಿ ಸಹಕರಿಸಿದರೂ ನೀನು ನನ್ನನ್ನು ತೃಪ್ತಿ ಪಡಿಸಲ್ಲ. ಸಹಕರಿಸಿಲ್ಲ ಎಂದು ಹೇಳಿ ಪ್ರತಿ ದಿನ ಕಿರುಕುಳ ನೀಡುತ್ತಾನೆ. ಈಗ ಕಾಮುಕ ಪತಿ ಸೆಕ್ಸ್ ಚಟಕ್ಕೆ ರೋಸಿ ಹೋಗಿರುವ ಪತ್ನಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

    https://www.youtube.com/watch?v=h38lnbFj4AY

  • ಸಹೋದರನ ಜೊತೆ ಅತ್ತಿಗೆಯನ್ನು ಕೊಂದ ಅಪ್ರಾಪ್ತ ನಾದಿನಿ ಅರೆಸ್ಟ್: ಈಗ ಪೊಲೀಸರ ವಿರುದ್ಧ ದೂರು

    ಸಹೋದರನ ಜೊತೆ ಅತ್ತಿಗೆಯನ್ನು ಕೊಂದ ಅಪ್ರಾಪ್ತ ನಾದಿನಿ ಅರೆಸ್ಟ್: ಈಗ ಪೊಲೀಸರ ವಿರುದ್ಧ ದೂರು

    ಲಕ್ನೋ: ಸಹೋದರನ ಜೊತೆ ಸೇರಿಕೊಂಡು ಅತ್ತಿಗೆಯನ್ನು ಕೊಲೆ ಮಾಡಿರುವ ಆರೋಪದಲ್ಲಿ ಸಹೋದರಿಯನ್ನು ಉತ್ತರಪ್ರದೇಶದ ಪೊಲೀಸರು ಬಂಧಿಸಿದ್ದಾರೆ. ಆದರೆ ಈಗ ಈ ಪ್ರಕರಣದಲ್ಲಿ ಪೊಲೀಸರ ವಿರುದ್ಧವೇ ದೂರು ದಾಖಲಾಗಿದೆ.

    ಬಂಧನಕ್ಕೆ ಒಳಗಾದವಳು ಈಗ ಅಪ್ರಾಪ್ತೆ ಹೌದೋ ಅಲ್ಲವೋ ಎನ್ನುವ ಬಗ್ಗೆ ವಿವಾದ ಎದ್ದಿದ್ದು ಪೊಲೀಸರು ಆಕೆ ಅಪ್ರಾಪ್ತೆಯಲ್ಲ ಎಂದು ಹೇಳಿದರೆ, ಆರ್‍ಟಿಐ ಕಾರ್ಯಕರ್ತರೊಬ್ಬರು ಆಕೆ ಅಪ್ರಾಪ್ತೆ ಎಂದು ಹೇಳಿ ಪೊಲೀಸರ ವಿರುದ್ಧವೇ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆ.

    ಏನಿದು ಪ್ರಕರಣ?
    ವರದಕ್ಷಿಣೆ ಕಿರುಕುಳ ನೀಡಿ ಮಗಳನ್ನು ಬೆಂಕಿ ಹಚ್ಚಿ ಹತ್ಯೆ ಮಾಡಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತಳ ಪೋಷಕರು ಪತಿ ಮತ್ತು ಆತನ ಸಹೋದರಿಯ ವಿರುದ್ಧ ದೂರು ನೀಡಿದ್ದರು. ಈ ದೂರಿನ ಆಧಾರದಲ್ಲಿ ಪೊಲೀಸರು ಇಬ್ಬರನ್ನು ಬಂಧಿಸಿದ್ದರು. ಬಂಧಿಸಿದ ಬಳಿಕ ಪತಿಯ ಸಹೋದರಿಯನ್ನು ಪೊಲೀಸರು 12 ದಿನಗಳ ಕಾಲ ತಮ್ಮ ವಶದಲ್ಲಿ ಇಟ್ಟುಕೊಂಡು ಸೋಮವಾರ ಕೋರ್ಟ್ ಗೆ ಹಾಜರು ಪಡಿಸಿ ಜೈಲಿಗೆ ಅಟ್ಟಿದ್ದಾರೆ.

    ವಿವಾದ ಆಗಿದ್ದು ಯಾಕೆ?
    ಅಪ್ರಾಪ್ತ ವಯಸ್ಸಿನವರು ಅಪರಾಧಗಳನ್ನು ಎಸಗಿದರೆ ಅವರನ್ನು ಪೊಲೀಸರು 24 ಗಂಟೆಗಿಂತ ಹೆಚ್ಚು ಹೊತ್ತು ಲಾಕಪ್ ನಲ್ಲಿ ಇರಿಸುವಂತಿಲ್ಲ. ಬಾಲನ್ಯಾಯ ಕಾಯ್ದೆಯ ಪ್ರಕಾರ ಅಪ್ರಾಪ್ತರನ್ನು ಬಂಧಿಸಿ ಅವರನ್ನು ಬಾಲಾಪರಾಧಿ ಪುನರ್ ವಸತಿ ಕೇಂದ್ರಕ್ಕೆ ಕಳುಹಿಸಬೇಕು. ಅದರಲ್ಲೂ ಬಾಲಕಿ ಆಗಿದ್ದರೆ, ಆಕೆಯನ್ನು ನಾರಿ ನಿಕೇತನ್ ಕೇಂದ್ರಕ್ಕೆ ಕಳುಹಿಸಬೇಕು. ಆದರೆ ಪೊಲೀಸರು ಅಪ್ರಾಪ್ತೆಯನ್ನು ತಮ್ಮ ವಶದಲ್ಲಿ 12 ದಿನಗಳ ಕಾಲ ಇಟ್ಟುಕೊಂಡು ಈಗ ಜೈಲಿಗೆ ಕಳುಹಿಸಿದ್ದಾರೆ ಎಂದು ಆರ್‍ಟಿಐ ಕಾರ್ಯಕರ್ತರೊಬ್ಬರು ಆರೋಪಿಸಿದ್ದಾರೆ.

    ಬಂಧನಕ್ಕೆ ಒಳಗಾದ ಬಾಲಕಿಗೆ 15 ವರ್ಷವಾಗಿದ್ದು ಆಕೆಯನ್ನು ಪೊಲೀಸರು ತಮ್ಮ ವಶದಲ್ಲಿ ಇಟ್ಟುಕೊಂಡಿರುವುದು ಬಾಲನ್ಯಾಯ ಕಾಯ್ದೆಯ ಪ್ರಕಾರ ಅಪರಾಧ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ವಕೀಲ ಮತ್ತು ಆರ್‍ಟಿಐ ಕಾರ್ಯಕರ್ತ ಪ್ರತೀಕ್ ಚೌಧರಿ ಎಂಬವರು ಕೇಂದ್ರ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆ.

    ಪೊಲೀಸರು ಹೇಳೋದು ಏನು?
    ಆಕೆಗೆ 15 ವರ್ಷವಲ್ಲ, ಪ್ರಾಪ್ತ ವಯಸ್ಸಾಗಿದ್ದು ನಾವು ಯಾವುದೇ ಲೋಪ ಎಸಗಿಲ್ಲ. ಪ್ರಾಪ್ತಳಾಗಿರುವ ಕಾರಣ ಆಕೆಯನ್ನು ನಾವು ಜೈಲಿಗೆ ಕಳುಹಿಸಿದ್ದೇವೆ. ಒಂದು ವೇಳೆ ಆಕೆ ಅಪ್ರಾಪ್ತಳು ಎಂದು ಕೋರ್ಟ್ ನಲ್ಲಿ ಸಾಬೀತಾದರೆ ಆಕೆ ಕಾನೂನಿನ ಲಾಭವನ್ನು ಪಡೆದುಕೊಳ್ಳುತ್ತಾಳೆ ಎಂದು ಗಂಗೇರಿ ಪೊಲೀಸ್ ಠಾಣೆಯ ಸ್ಟೇಷನ್ ಅಧಿಕಾರಿ ರಾಮ್ ವಲ್ಲಭ ಶರ್ಮಾ ಹೇಳಿದ್ದಾರೆ.

    ಬೆಳಕಿಗೆ ಬಂದಿದ್ದು ಹೇಗೆ?
    ಭಾನುವಾರ ಸಂಜೆ ಠಾಣೆಯಲ್ಲಿ ಆಕೆ ಅಳುತ್ತಾ ಕುಳಿತ್ತಿದ್ದನ್ನು ಕೆಲ ಮಾಧ್ಯಮ ಪ್ರತಿನಿಧಿಗಳು ಗಮನಕ್ಕೆ ಬಂದ ಬಳಿಕ ಆಕೆ ಅಪ್ರಾಪ್ತಳು ಎನ್ನುವ ವಿಚಾರ ಬಳಕಿಗೆ ಬಂದಿದೆ. ಈ ವಿಚಾರ ಸುದ್ದಿಯಾಗುತ್ತಿದ್ದಂತೆ ಸ್ಮಾರ್ಟ್ ವಿಲೇಜ್ ಫೌಂಡೇಶನ್ ಹೆಸರಿನ ಸಂಘಟನೆಯೊಂದು ಆಕೆಯ ಸಹಾಯಕ್ಕೆ ಬಂದಿದ್ದು ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ದೂರು ನೀಡಿದೆ.

  • ಹೆತ್ತ ತಾಯಿಯೇ 9 ವರ್ಷದ ಮಗಳನ್ನು ಎರಡನೇ ಮಹಡಿಯಿಂದ ಎಸೆದು ಕೊಲೆ ಮಾಡಿದ್ಳು!

    ಹೆತ್ತ ತಾಯಿಯೇ 9 ವರ್ಷದ ಮಗಳನ್ನು ಎರಡನೇ ಮಹಡಿಯಿಂದ ಎಸೆದು ಕೊಲೆ ಮಾಡಿದ್ಳು!

    ಬೆಂಗಳೂರು: ಹೆತ್ತ ತಾಯಿಯೇ 9 ವರ್ಷ ಮಗಳನ್ನು ಕಟ್ಟಡದ ಎರಡನೇ ಮಹಡಿಯಿಂದ ಎಸೆದು ಕೊಲೆ ಮಾಡಿರುವ ಶಾಕಿಂಗ್ ಘಟನೆ ಭಾನುವಾರ ಮಧ್ಯಾಹ್ನ ಜೆಪಿ ನಗರದಲ್ಲಿ ನಡೆದಿದೆ.

    ಶ್ರೇಯಾ(9) ಕೊಲೆಯಾದ ಬಾಲಕಿ. ಮಗಳನ್ನು ತಳ್ಳಿದ ಆರೋಪದ ಅಡಿ ತಾಯಿ ಸ್ವಾತಿಯನ್ನು ಪುಟ್ಟೇನಹಳ್ಳಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    ಬೆಂಗಳೂರಿನ ಜೆಪಿ ನಗರದ ಜರಗನಹಳ್ಳಿಯಲ್ಲಿ ಕೋಲ್ಕತ್ತಾ ಮೂಲದ ಸರ್ಕಾರ್ ಮತ್ತು ಸ್ವಾತಿ ನೆಲೆಸಿದ್ದರು. ಪತಿ ಸರ್ಕಾರ್ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರೆ, ಶಿಕ್ಷಕಿಯಾಗಿದ್ದ ಸ್ವಾತಿ ಎರಡು ವರ್ಷಗಳಿಂದ ಮನೆಯಲ್ಲಿದ್ದಳು. ಕಳೆದ ಒಂದು ವರ್ಷದಿಂದ ಸರ್ಕಾರ್ ಬೇರೆ ಕಡೆ ನೆಲೆಸಿದ್ದರು.

    ಇಂದು ಏನಾಯ್ತು?
    ಮಧ್ಯಾಹ್ನ 3.30ರ ವೇಳೆಗೆ ಮನೆಯ 3 ಮಹಡಿಯಿಂದ ಸ್ವಾತಿ ಶ್ರೇಯಾಳನ್ನು ಎಸೆದಿದ್ದಾಳೆ. ನಂತರ ಕೆಳಗೆ ಬಂದು ನೋಡಿದಾಗ ಸ್ವಾತಿ ಜೀವಂತ ಇರುವುದನ್ನು ನೋಡಿದ್ದಾಳೆ. ಪುನಃ ಮಗುವನ್ನು ಎತ್ತಿಕೊಂಡು ಅದೇ ಜಾಗಕ್ಕೆ ಹೋಗಿ ಎರಡನೇ ಬಾರಿ ಮೇಲಿನಿಂದ ಕೆಳಗಡೆ ಎಸೆದಿದ್ದಾಳೆ.

    ಗೊತ್ತಾಗಿದ್ದು ಹೇಗೆ?
    ಸ್ವಾತಿ ಎರಡನೇ ಬಾರಿ ಬಂದು ಮಗುವನ್ನು ಎತ್ತಿಕೊಂಡು ಹೋಗಿ ಮೇಲಿನಿಂದ ಎಸೆದಿರುವುದನ್ನು ಅಲ್ಲಿದ್ದ ಪ್ರತ್ಯಕ್ಷದರ್ಶಿಗಳು ನೋಡಿದ್ದಾರೆ. ಮಗಳನ್ನು ಎಸೆಯುವುದನ್ನು ನೋಡಿದ ನಂತರ ಆಕೆಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಪೊಲೀಸರಿಗೆ ತಿಳಿಸಿದ್ದಾರೆ.

    ಸ್ವಾತಿ ಮಾನಸಿಕ ಅಸ್ವಸ್ಥೆ ಎನ್ನುವ ಶಂಕೆ ವ್ಯಕ್ತವಾಗಿದೆ. 9 ವರ್ಷದ ಶ್ರೇಯಾಗೆ ಮಾತು ಬರುತ್ತಿರಲಿಲ್ಲ ಎನ್ನುವ ಲಭ್ಯವಾಗಿದೆ. ಪೊಲೀಸರು ಈಗ ಸ್ವಾತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    ಪ್ರತ್ಯಕ್ಷದರ್ಶಿಗಳು ವಿವರಿಸಿದ್ದು ಹೀಗೆ:
    ಶ್ರೇಯಾ ಬಿದ್ದದ್ದನ್ನು ಗಮನಿಸಿ ನನ್ನ ಮಗಳು ಮನೆಗೆ ಬಂದು ಅಮ್ಮ ಮಗು ಮೇಲಿನಿಂದ ಬಿದ್ದಿದ್ದಾಳೆ ಎಂದು ಹೇಳಿದಳು. ಕೂಡಲೇ ನಾನು ಮನೆಯ ಹೊರಗಡೆ ಬಂದೆ. ಆಗ ಆಕೆ ಮಗಳನ್ನು ಎತ್ತಿಕೊಂಡು ಮೇಲಕ್ಕೆ ಹೋಗುತ್ತಿದ್ದಳು. ಆಕೆಯನ್ನು ನಾನು ಹಿಂಬಾಲಿಸಿ ಹೋದೆ. ಅಷ್ಟರಲ್ಲಿ ಆಕೆ ಮೇಲುಗಡೆಗೆ ಹೋಗಿ ಮಗಳನ್ನು ಎಸೆದೇ ಬಿಟ್ಟಳು. ಶ್ರೇಯಾ ಕೆಳಗಡೆ ಬಿದ್ದ ಕೂಡಲೇ ನಮ್ಮ ಯಜಮಾನರಿಗೆ ಗೊತ್ತಾಯಿತು. ಅವರು ನೋಡಿದಾಗ ಆಕೆ ಮೃತಪಟ್ಟಿರುವುದು ಗೊತ್ತಾಯಿತು. 15 ನಿಮಿಷ ಆದ ಬಳಿಕ ಆಕೆ ನೈಟಿಯನ್ನು ಬದಲಾಯಿಸಿ ಚೂಡಿಧಾರ್ ಧರಿಸಿ ಮನೆಯಿಂದ ಕೆಳಗಡೆ ಇಳಿದಳು. ಮಗಳಿಗೆ ಸರಿಯಾಗಿ ಮಾತು ಬರುತ್ತಿರಲಿಲ್ಲ. ಪ್ರತಿದಿನ ಮಗಳ ಜೊತೆ ಸ್ವಾತಿ ಆಟವಾಡುತ್ತಿದ್ದಳು. ಆದರೆ ಇಂದು ಏನಾಯ್ತು ಗೊತ್ತಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.

  • ಹುಬ್ಬಳ್ಳಿಯ ರೈಲ್ವೇ ಪೊಲೀಸ್ ಅಧಿಕಾರಿ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ

    ಹುಬ್ಬಳ್ಳಿಯ ರೈಲ್ವೇ ಪೊಲೀಸ್ ಅಧಿಕಾರಿ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ

    ಧಾರವಾಡ: ಅಕ್ರಮ ಆಸ್ತಿ ಗಳಿಕೆ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ರೈಲ್ವೇ ಪೊಲೀಸ್ ಠಾಣೆಯ ಸಬ್‍ಇನ್ಸ್ ಪೆಕ್ಟರ್ ಕೆ.ಮಲ್ಲೇಶ್ ಅವರ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.

    ಹುಬ್ಬಳ್ಳಿಯ ರೈಲ್ವೇ ಪೊಲೀಸ್ ಠಾಣೆಯ ಕ್ರೈಂ ವಿಭಾಗದಲ್ಲಿ ಸಬ್‍ಇನ್ಸ್ ಪೆಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಕೆ. ಮಲ್ಲೇಶ್ ಮೂಲತಃ ರಾಮನಗರ ಜಿಲ್ಲೆಯ ಚನ್ನಪಟ್ಟಣದ ನಿವಾಸಿ ಆಗಿದ್ದು, ಬೆಂಗಳೂರು, ಮೈಸೂರು ಸೇರಿದಂತೆ ಚನ್ನಪಟ್ಟಣದಲ್ಲಿ ಅಕ್ರಮವಾಗಿ ಆಸ್ತಿ ಮಾಡಿದ್ದಾರೆ ಎನ್ನಲಾಗುತ್ತಿದೆ.

    ಸೂಕ್ತ ಮಾಹಿತಿ ಮೇರೆಗೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ದಾಖಲೆಗಳನ್ನ ಪರಿಶೀಲನೆ ಮಾಡುತಿದ್ದಾರೆ. ಈ ಹಿಂದೆ ಬೆಂಗಳೂರಿನ ರೈಲ್ವೇ ಪೊಲೀಸ್ ಠಾಣೆಯ ಕ್ರೈಂ ವಿಭಾಗದ ಸಬ್‍ಇನ್ಸ್ ಪೆಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ ಅವರನ್ನು ಏಪ್ರಿಲ್ 21 ರಂದು ಹುಬ್ಬಳ್ಳಿಗೆ ವರ್ಗಾವಣೆ ಮಾಡಲಾಗಿತ್ತು.

    ಇದೇ ತಿಂಗಳು 30 ರಂದು ಕೆ.ಮಲ್ಲೇಶ್ ಅವರು ಕೆಲಸದಿಂದ ನಿವೃತ್ತಿಯಾಗಲಿದ್ದು, ಅವರು ಕೆಲಸ ಮಾಡಿದ ಬೆಂಗಳೂರು ಮತ್ತು ಹುಬ್ಬಳ್ಳಿ ಕಚೇರಿಯಲ್ಲಿ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ.

  • ಗಂಡನ ಮರ್ಮಾಂಗ ಕತ್ತರಿಸಿ ಪರ್ಸಲ್ಲಿ ಹಾಕಿ ತವರು ಮನೆಗೆ ಹೋಗ್ತಿದ್ದ ಪತ್ನಿ!

    ಗಂಡನ ಮರ್ಮಾಂಗ ಕತ್ತರಿಸಿ ಪರ್ಸಲ್ಲಿ ಹಾಕಿ ತವರು ಮನೆಗೆ ಹೋಗ್ತಿದ್ದ ಪತ್ನಿ!

    ವೆಲ್ಲೂರು: ಪತಿಯ ಅಕ್ರಮ ಸಂಬಂಧ ಆರೋಪದಿಂದ ಬೇಸತ್ತ ಪತ್ನಿಯೊಬ್ಬಳು ಪತಿಯ ಮರ್ಮಾಂಗವನ್ನೇ ಕತ್ತರಿಸಿದ ಘಟನೆ ತಮಿಳುನಾಡಿನ ಗುಡಿಯಾಟ್ಟಂ ಎಂಬಲ್ಲಿ ನಡೆದಿದೆ.

    ಪತ್ನಿ ಸರಸುವನ್ನು ಪೊಲೀಸರು ಬಂಧಿಸಿದ್ದಾರೆ. ಇದೇ ವೇಳೆ ಆಕೆಯ ಪರ್ಸ್ ನಲ್ಲಿ ಪತಿಯ ಕಟ್ ಆಗಿದ್ದ ಮರ್ಮಾಂಗ ಪತ್ತೆಯಾಗಿದೆ. ಘಟನೆ ಬಳಿಕ ಸರಸು ತನ್ನ ತವರು ಮನೆಗೆ ಹೊರಟಿದ್ದಳು. ಆದರೆ ಮಾರ್ಗ ಮಧ್ಯೆಯೇ ಪೊಲೀಸರು ಅವರನ್ನು ಬಂಧಿಸಿದ್ದಾರೆ ಎಂದು ಇನ್ಸ್ ಪೆಕ್ಟರ್ ಎಂ.ಟಿ.ಇರುಧ್ಯರಾಜ್ ಹೇಳಿದ್ದಾರೆ.

    ಏನಿದು ಘಟನೆ?: ವಾಣಿಯಾರ್ ಪಂಗಡಕ್ಕೆ ಸೇರಿದ ಸರಸು ಎಸ್.ಸಿ ಸಮುದಾಯದ ಜಗದೀಶನ್ ಎಂಬಾತನ ಜೊತೆ 14 ವರ್ಷದ ಹಿಂದೆ ಮದುವೆಯಾಗಿತ್ತು. ಇವರಿಬ್ಬರಿಗೂ ಗುಡಿಯಾಟ್ಟಂನಲ್ಲಿ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುವ ವೇಳೆ ಲವ್ ಆಗಿತ್ತು. ಇವರಿಗೆ ಓರ್ವ ಪುತ್ರ ಹಾಗೂ ಮೂವರು ಪುತ್ರಿಯರಿದ್ದಾರೆ.

    ಆದರೆ ಕಳೆದ ವರ್ಷ ಪತಿ ಪತ್ನಿ ನಡುವೆ ಜಗಳವಾಗಿದೆ. ಬಳಿಕ ಸರಸು ತನ್ನ ತವರು ಮನೆ ಸೇರಿದ್ದಳು. ಆದರೆ ಜುಲೈ 17ರಂದು ತನ್ನ ಬರ್ತ್ ಡೇಗೆ ಬರುವಂತೆ ಹಿರಿಯ ಪುತ್ರ ಸರಸುಗೆ ಮನವಿ ಮಾಡಿದ್ದ. ಈ ಬೇಡಿಕೆಗೊಪ್ಪಿ ಆಕೆ ಮನೆಗೆ ಬಂದಿದ್ದಳು. ಇದಾದ ಬಳಿಕ ಬುಧವಾರ ಕುಡಿದು ಮನೆಗೆ ಬಂದಿದ್ದ ಜಗದೀಶನ್ ಸರಸು ಜೊತೆ ವಿನಾಕಾರಣ ಜಗಳ ಶುರು ಮಾಡಿದ್ದ. ಈ ವೇಳೆ ಆತ ಆಕೆಯ ಶೀಲ ಶಂಕಿಸಿ ಮಾತನಾಡಿದ್ದ. ತವರು ಮನೆಯಲ್ಲಿದ್ದ ವೇಳೆ ಯಾವುದಾದರೂ ಸಂಬಂಧವಿಟ್ಟುಕೊಂಡಿದ್ದೀಯಾ ಎಂದು ಕೇಳಿದ್ದಾನೆ. ಜೊತೆಗೆ ನಿನಗೀಗ ವಯಸ್ಸಾಗಿದೆ. ಹೀಗಾಗಿ ನಾನು ಬೇರೊಬ್ಬಳನ್ನು ಮದುವೆಯಾಗುತ್ತೇನೆ ಎಂದು ಹೇಳಿದ್ದಾನೆ ಎಂದು ಆಕೆ ಹೇಳಿಕೆ ನೀಡಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.

    ಇದರಿಂದ ಸಿಟ್ಟಿಗೆದ್ದ ಸರಸು ಗಂಡನಿಗೆ ಎದುರುತ್ತರ ಕೊಟ್ಟಿದ್ದಾಳೆ. ನಾನಿಲ್ಲದ ವೇಳೆ ಈ ಮನೆಯಲ್ಲಿ ನೀನು ಅಕ್ರಮ ಸಂಬಂಧವಿಟ್ಟುಕೊಂಡಿದ್ದೀಯಾ ಎಂದು ಹೇಳಿದ್ದಾಳೆ. ಈ ಗಲಾಟೆ ರಾತ್ರಿ ಸುಮಾರು 2 ಗಂಟೆಯವರೆಗೆ ಮುಂದುವರೆದಿದೆ. ಗುರುವಾರ ಬೆಳಗಿನ ಜಾವ 3 ಗಂಟೆ ವೇಳೆಗೆ ಸರಸು ಅಡುಗೆ ಕೋಣೆಯಲ್ಲಿದ್ದ ಹರಿತವಾದ ಚಾಕುವನ್ನು ತಂದು ಮರ್ಮಾಂಗವನ್ನು ಕಟ್ ಮಾಡಿದ್ದಾಳೆ. ಈ ಕೃತ್ಯ ನಡೆಸಿದ ತಕ್ಷಣ ಆಕೆ ಅಲ್ಲಿಂದ ಪರಾರಿಯಾಗಿದ್ದಾಳೆ. ಜೊತೆಗೆ ಗಂಡನ ಕತ್ತರಿಸಿದ ಮರ್ಮಾಂಗವನ್ನು ಆಕೆಯ ಪರ್ಸ್ ನಲ್ಲಿಟ್ಟುಕೊಂಡಿದ್ದಳು ಎಂದು ಸಬ್ ಇನ್ಸ್ ಪೆಕ್ಟರ್ ಎ.ಕೃಷ್ಣಮೂರ್ತಿ ಹೇಳಿದ್ದಾರೆ.

    ಜಗದೀಶ್ ಕಿರುಚಾಟ ಕೇಳಿಸಿಕೊಂಡ ನೆರೆ ಮನೆಯವರು ಹಾಗೂ ಸ್ಥಳೀಯರು ಗುಡಿಯಾಟ್ಟಂ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ. ಅಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಆತನನ್ನು ವೆಲ್ಲೂರು ಮೆಡಿಕಲ್ ಕಾಲೇಜಿಗೆ ದಾಖಲಿಸಿ ಆಪರೇಷನ್ ಮಾಡಿದ್ದಾರೆ. ಸತ್ಯ ಜಗದೀಶ್ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬಂಧಿತ ಸರಸುವಿಗೆ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ.