Tag: crime

  • ಮುಲಾಜಿಲ್ಲದೇ ಗೂಂಡಾ ಕಾಯ್ದೆ ಹಾಕಿ ಕ್ರಮ ಕೈಗೊಳ್ಳಿ: ಪೊಲೀಸರಿಗೆ ಸಿಎಂ ಸೂಚನೆ

    ಮುಲಾಜಿಲ್ಲದೇ ಗೂಂಡಾ ಕಾಯ್ದೆ ಹಾಕಿ ಕ್ರಮ ಕೈಗೊಳ್ಳಿ: ಪೊಲೀಸರಿಗೆ ಸಿಎಂ ಸೂಚನೆ

    ಬೆಂಗಳೂರು: ಕಾನೂನು ಸುವ್ಯವಸ್ಥೆ ಕುಸಿಯುತ್ತಿರುವ ಆರೋಪದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳ  ಜೊತೆ  ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಲ್ಲಿ ಸಭೆ ನಡೆಸಿದ್ದಾರೆ.

    ಕೋಮುವಾದಿಗಳು ಯಾವುದೇ ಸಂಘಟನೆಯವರೇ ಆದ್ರೂ ಮುಲಾಜಿಲ್ಲದೇ ಗೂಂಡಾ ಕಾಯ್ದೆ ಹಾಕಿ ಕ್ರಮ ಕೈಗೊಳ್ಳಿ ಪೊಲೀಸ್ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಸಂದೇಶ ಹರಡುವವರ ವಿರುದ್ಧ ಮುಲಾಜಿಲ್ಲದೆ ಕ್ರಮಕೈಗೊಳ್ಳಿ ಎಂದಿದ್ದಾರೆ.

    ಚುನಾವಣೆ ನಡೆಯುವ ಮುಂದಿನ ಮೂರು ತಿಂಗಳು ಸವಾಲು ಆಗಿದೆ. ಹೀಗಾಗಿ ಕಾನೂನು ಸುವ್ಯವಸ್ಥೆ ಬಗ್ಗೆ ಎಚ್ಚರವಹಿಸಿ ಅಂತ ಖಡಕ್ ವಾರ್ನಿಂಗ್ ನೀಡಿದ್ದಾರೆ. ಸಂಘಟನೆಗಳ ಬಗ್ಗೆ ಗುಪ್ತಚರ ಇಲಾಖೆ ಮೊದಲೇ ಎಚ್ಚರ ವಹಿಸಿದ್ರೆ ಇವತ್ತು ದೀಪಕ್ ರಾವ್ ಮತ್ತು ಬಶೀರ್ ಹತ್ಯೆ ಆಗುತ್ತಿರಲಿಲ್ಲ ಎಂದು  ಸಿದ್ದರಾಮಯ್ಯ ಹೇಳಿದ್ರು.

    ಸಿಎಂ ಸಿಟ್ಟು: ಸಿಎಂ ಸಿದ್ದರಾಮಯ್ಯ ಡಿಜಿ ಕಚೇರಿಯ ಪೇದೆ ಮೇಲೆ ಸುದ್ದಿಗೋಷ್ಟಿ ವೇಳೆ ಸಿಡುಕಿದ ಘಟನೆ ನಡೀತು. ನಾರ್ಮಲ್ ಟೀ ಕೊಡದೇ ಗ್ರೀನ್ ಟೀ ತಂದು ಕೊಟ್ಟಿದ್ದಕ್ಕೆ ಸಿಎಂ ಗರಂ ಆದ್ರು. ನಾರ್ಮಲ್ ಟೀ ತಗೆದುಕೊಂಡ ಬಾ. ಇದು ಯಾವ ಟೀ ತಂದಿದಿಯಾ ಎಂದು ಸಿಎಂ ಸಿದ್ದರಾಮಯ್ಯ ತಮ್ಮ ಎಂದಿನ ಶೈಲಿಯಲ್ಲಿ ಕೋಪಗೊಂಡ್ರು. ಇದ್ರಿಂದ ಟೀ ತಂದ ಸಿಬ್ಬಂದಿ ಕಕ್ಕಾಬಿಕ್ಕಿಯಾದರು.

    ಏನಿದು ಗೂಂಡಾ ಕಾಯ್ದೆ?
    ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಗಳಾಗಿದ್ದ ಸಮಯದಲ್ಲಿ ಬೆಂಗಳೂರಿನಲ್ಲಿ ರೌಡಿಗಳ ಹಾವಳಿ ಮೀತಿ ಮೀರಿತ್ತು. ಈ ರೌಡಿಗಳನ್ನು ಮಟ್ಟ ಹಾಕಲು 1985ರಲ್ಲಿ ಜನತಾ ಸರ್ಕಾರ ಗೂಂಡಾ ಕಾಯ್ದೆಯನ್ನು ಕರ್ನಾಟಕದಲ್ಲಿ ಜಾರಿಗೆ ತಂದಿತು.

    ಯಾರ ವಿರುದ್ಧ ಕ್ರಮ ಕೈಗೊಳ್ಳಬಹುದು?
    ತಿದ್ದು ಪಡಿಯಾದ ಕಾಯ್ದೆ ವ್ಯಾಪ್ತಿಗೆ ಆಸಿಡ್ ದಾಳಿಕೋರರು, ಅಕ್ರಮ ಮರಳು ಗಣಿಗಾರಿಕೆ ಸೇರಿದಂತೆ ಪರಿಸರಕ್ಕೆ ಹಾನಿ ಮಾಡುವವರು, ಡಿಜಿಟಲ್ ಮೀಡಿಯಾದಲ್ಲಿ (ವೆಬ್‍ಸೈಟ್) ವಂಚಿಸುವವರು, ಮಹಿಳೆ ಮತ್ತು ಮಕ್ಕಳ ಮೇಲೆ ದೌರ್ಜನ್ಯ ಎಸಗುವವರು, ಕಾನೂನು ಬಾಹಿರ ಹಣಕಾಸು ವ್ಯವಹಾರ ನಡೆಸುವವರನ್ನು ಸೇರಿಸಲಾಗಿದೆ.

    ನೇರವಾಗಿ ಜೈಲಿಗೆ:
    ಈ ಕಾಯ್ದೆಯಲ್ಲಿ ಬಂಧನಕ್ಕೆ ಒಳಗಾದ ಆರೋಪಿಯನ್ನು ಇತರ ಪ್ರಕರಣಗಳ ಮಾದರಿಯಲ್ಲಿ 24 ಗಂಟೆಗಳ ಒಳಗೆ ನ್ಯಾಯಾಧೀಶರ ಎದುರು ಹಾಜರುಪಡಿಸಬೇಕಾದ ಅಗತ್ಯ ಇಲ್ಲ. ಪೊಲೀಸ್ ಕಸ್ಟಡಿ ಅಥವಾ ನ್ಯಾಯಾಂಗ ಬಂಧನವನ್ನು ಪದೇ ಪದೇ ವಿಸ್ತರಿಸಿಕೊಳ್ಳುವ ಪ್ರಕ್ರಿಯೆಯ ಅಗತ್ಯವೂ ಇಲ್ಲದೇ ನೇರವಾಗಿ ಜೈಲಿಗೆ ಕಳುಹಿಸಬಹುದಾಗಿದೆ. ಈ ಕಾಯ್ದೆಯ ಅಡಿ ಬಂಧನಕ್ಕೆ ಒಳಗಾದರೆ ಒಂದು ವರ್ಷ ಜಾಮೀನು ಸಿಗುವುದಿಲ್ಲ. ಮುನ್ನಚ್ಚರಿಕಾ ಕ್ರಮವಾಗಿ ಬಂಧಿಸಿ ಗಡೀಪಾರು ಆದೇಶವನ್ನೂ ಹೊರಡಿಸಲು ಅವಕಾಶವಿದೆ.

    ಯಾವ ರಾಜ್ಯದಲ್ಲಿದೆ?
    ಸ್ವಾತಂತ್ರ್ಯಾ ನಂತರ ರಾಜಸ್ತಾನ (1975), ಉತ್ತರ ಪ್ರದೇಶ (1971), ತಮಿಳುನಾಡು (1982), ಕೇರಳಗ(2007) ಗೂಂಡಾ ಕಾಯ್ದೆಯನ್ನು ಜಾರಿಗೊಳಿಸಿವೆ. ಡಿಜಿಟಲ್ ಅಪರಾಧ, ಸೈಬರ್ ಅಪರಾಧಗಳನ್ನು ಗೂಂಡಾ ಕಾಯ್ದೆಯಡಿ ತಮಿಳುನಾಡು ಮೊದಲ ಬಾರಿಗೆ 2004ರಲ್ಲಿ ತಂದಿತ್ತು.

    ಸಿಎಂ ಫೇಸ್ ಬುಕ್ ನಲ್ಲಿ ಪ್ರಕಟವಾಗಿರುವ ಸ್ಟೇಟಸ್ ಯಥಾವತ್ ಕಾಪಿಯನ್ನು ಇಲ್ಲಿ ನೀಡಲಾಗಿದೆ.
    ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಾಕಾರಿ ಬರಹಗಳನ್ನು ಪ್ರಕಟಿಸಿ ಕೋಮು ಭಾವನೆ ಕೆರಳಿಸುವ ಹಾಗೂ ಸಮಾಜದಲ್ಲಿ ಶಾಂತಿ ಕದಡುವ ಕೆಲಸವನ್ನು ಯಾರೇ ಮಾಡಿದರೂ, ಅವರು ಯಾವುದೇ ಧರ್ಮದ ಸಂಘಟನೆಗೆ ಸೇರಿದವರಾಗಿದ್ದರೂ ಸ್ವಯಂಪ್ರೇರಿತಯವಾಗಿ, ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ.

    ಇತ್ತೀಚಿನ ದಿನಗಳಲ್ಲಿ ಮೂಲಭೂತವಾದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ಪ್ರಚೋದನಾಕಾರಿ ಬರಹಗಳ ಮೂಲಕ ಅವರು ಕೋಮು ಭಾವನೆ ಕೆರಳಿಸುವ ಹಾಗೂ ಶಾಂತಿ ಕದಡುವ ಕೆಲಸಕ್ಕೆ ಕೈ ಹಾಕಿದ್ದಾರೆ. ಅಂತಹವರ ಬಗ್ಗೆ ವಿಶೇಷವಾಗಿ ನಿಗಾ ಇರಿಸುವುದರ ಜೊತೆಗೆ ಸ್ವಯಂಪ್ರೇರಿತವಾಗಿ ಕ್ರಮ ಕೈಗೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.

    ಮಾದಕ ವಸ್ತುಗಳ ಮಾರಾಟ ಜಾಲದಿಂದಾಗಿ ಯುವ ಜನಾಂಗ ದಿಕ್ಕು ತಪ್ಪುತ್ತಿರುವುದು ಕಳವಳಕಾರಿ ಸಂಗತಿ. ಹೀಗಾಗಿ ಮಾದಕ ವಸ್ತುಗಳ ಮಾರಾಟ ಜಾಲವನ್ನು ಮಟ್ಟ ಹಾಕುವುದರ ಜೊತೆಗೆ ಆ ಜಾಲದ ಹಿಂದೆ ಇರುವ ವ್ಯಕ್ತಿಗಳು ಎಷ್ಟೇ ಪ್ರಭಾವಶಾಲಿಗಳಾಗಿದ್ದರೂ ಕಾನೂನಿನ ಚೌಕಟ್ಟಿಗೆ ತಂದು ಕಠಿಣ ಕ್ರಮ ಕೈಗೊಳ್ಳುವಂತೆಯೂ ಸೂಚಿಸಿದ್ದೇನೆ.

    ಕೋಮು ಭಾವನೆ ಕೆರಳಿಸುವುದೇ ಮೂಲಭೂತವಾದಿಗಳ ಕೆಲಸ. ಅಂತಹವರನ್ನು ಪತ್ತೆ ಮಾಡಿ. ಅಗತ್ಯವೆನಿಸಿದರೆ ಗೂಂಡಾ ಕಾಯಿದೆಯಲ್ಲಿ ಕೇಸು ದಾಖಲು ಮಾಡಿ, ಗಡಿಪಾರು ಮಾಡಿ ಎಂದು ಹೇಳಿದ್ದೇನೆ. ಮಂಗಳೂರಿನಲ್ಲಿ ಇತ್ತೀಚೆಗೆ ದೀಪಕರಾವ್ ಹಾಗೂ ಬಶೀರ್ ಎಂಬುವರ ಹತ್ಯೆ ಆಗಿದೆ. ಪೊಲೀಸರು ಮುಂಜಾಗ್ರತೆ ವಹಿಸಿದ್ದರೆ ಎರಡೂ ಹತ್ಯೆ ತಪ್ಪಿಸಬಹುದಿತ್ತು.  2017ರಲ್ಲಿ ಅಪರಾಧಗಳ ಸಂಖ್ಯೆ ಕೊಂಚ ಇಳಿಮುಖವಾಗಿದೆ. ಆದರೆ, ಗಣನೀಯವಾಗಿ ಇಳಿಕೆಯಾಗಬೇಕು.ಮಹಿಳೆಯರು, ಮಕ್ಕಳು ಅದರಲ್ಲಿಯೂ ವಿದ್ಯಾರ್ಥಿಗಳ ಸುರಕ್ಷತೆ ಕುರಿತು ಹೆಚ್ಚಿನ ಗಮನ ಹರಿಸುವಂತೆ ಸೂಚಿಸಿದ್ದೇನೆ.

    ಗುಪ್ತದಳವನ್ನು ಹೆಚ್ಚು ಕ್ರಿಯಾಶೀಲ ಮಾಡಬೇಕು. ಅದಕ್ಕಾಗಿಯೇ ಗುಪ್ತದಳಕ್ಕೆ ಸಿಬ್ಬಂದಿಯನ್ನು ಪ್ರತ್ಯೇಕವಾಗಿ ನೇಮಕ ಮಾಡಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ. ಈಗ ಸಂದರ್ಶನ ಪ್ರಕ್ರಿಯೆ ನಡೆಯುತ್ತಿದೆ. ನೇಮಕ ಪ್ರಕ್ರಿಯೆ ಸಹ ವಿಶೇಷವಾಗಿ ನಡೆಯುತ್ತದೆ. ನೇಮಕಗೊಳ್ಳುವ ಸಿಬ್ಬಂದಿ ಅಲ್ಲಿಯೇ ಕಾಯಂ ಆಗಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ಬೇರೆ ವಿಭಾಗಗಳಿಗೆ ಹೋಗುವಂತಿಲ್ಲ. ಗುಪ್ತದಳದಲ್ಲಿ ಕಾರ್ಯನಿರ್ವಹಿಸುವುದು ಶಿಕ್ಷೆ ರೂಪದಲ್ಲಿ ಮಾಡುವ ಕೆಲಸ ಅಥವಾ ವರ್ಗಾವಣೆ ಎಂಬ ಮನೋಭಾವ ಇದೆ. ಹೀಗಾಗಿ ವಿಶೇಷವಾಗಿ ಮತ್ತು ಪ್ರತ್ಯೇಕವಾಗಿ ಸಿಬ್ಬಂದಿ ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದೆ.

    ಅಪರಾಧ ನಡೆದ ಬಳಿಕ ಕಾನೂನು ರೀತ್ಯ ಕ್ರಮ ಕೈಗೊಳ್ಳುವುದು,ಆರೋಪ ಪಟ್ಟಿ ದಾಖಲು ಮಾಡುವುದು ಬೇರೆ ವಿಚಾರ. ಆದರೆ ಅಪರಾಧಗಳೇ ನಡೆಯದಂತೆ ಮುಂಜಾಗ್ರತೆ ವಹಿಸುವುದು ಮುಖ್ಯ.ದರೋಡೆಗಳು, ಕಳ್ಳತನ, ಸರ ಕಳ್ಳತನ, ಮತೀಯವಾದ, ಗೂಂಡಾಗಿರಿಗೆ ಕಾರಣರಾಗುವ ವ್ಯಕ್ತಿಗಳನ್ನು ಮೊದಲೇ ಪತ್ತೆ ಹಚ್ಚಿ ಮುಂಜಾಗ್ರತೆ ವಹಿಸಿದರೆ ಒಳ್ಳೆಯದು. ಇದು ಆಯಾ ಪೊಲೀಸ್ ಠಾಣೆ ಅಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳ ಜವಾಬ್ದಾರಿ.

    ಮಾದಕ ವಸ್ತುಗಳ ಮಾರಾಟ ವಿದ್ಯಾರ್ಥಿಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮಾದಕ ವಸ್ತುಗಳು ಎಲ್ಲಿ ಮಾರಾಟವಾಗುತ್ತದೆ. ಅದು ಎಲ್ಲಿಂದ ಸರಬರಾಜು ಆಗುತ್ತದೆ ಎಂಬುದರ ಬಗ್ಗೆ ನಿಗಾ ಇರಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದ್ದೇನೆ. ವಿದ್ಯಾರ್ಥಿಗಳು ಹಾಗೂ ಯುವಕರ ಕೈಗೆ ಮಾದಕ ವಸ್ತುಗಳು ಸಿಗದಂತೆ ನೋಡಿಕೊಳ್ಳಬೇಕು. ಮಾರಾಟ ಜಾಲ ಪತ್ತೆ ಹಚ್ಚಿ ಕಡಿವಾಣ ಹಾಕಬೇಕು.

    ವಿಧಾನಸಭೆಗೆ ಚುನಾವಣೆ ಸಮೀಪಿಸುತ್ತಿದೆ. ರಾಜ್ಯದಲ್ಲಿ 56 ಸಾವಿರಕ್ಕೂ ಹೆಚ್ಚು ಮತಗಟ್ಟೆಗಳಿವೆ. ಅಲ್ಲಿ ಸರಿಯಾದ ರೀತಿಯಲ್ಲಿ ಬಂದೋಬಸ್ತ್ ಮಾಡಬೇಕು. ಮತದಾರರು ನಿರ್ಭಯವಾಗಿ ಮತ ಚಲಾವಣೆ ಮಾಡಲು ವ್ಯವಸ್ಥೆ ಮಾಡಬೇಕು. ಅಂತಹ ವಾತಾವರಣ ನಿರ್ಮಿಸಬೇಕು. ಸೂಕ್ಷ್ಮ ಮತಗಟ್ಟೆಗಳ ಕಡೆ ವಿಶೇಷ ಗಮನ ಹರಿಸಬೇಕು.

    ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಪ್ರತಿಪಕ್ಷಗಳು ಆರೋಪ ಮಾಡುತ್ತವೆ. ಅದು ರಾಜಕೀಯ ಪ್ರೇರಿತ. ಕಾಮಾಲೆ ಕಣ್ಣಿನವರಿಗೆ ಕಾಣುವುದೆಲ್ಲ ಹಳದಿಯೇ. ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆಯಲ್ಲಿ ಪ್ರಗತಿ ಕಂಡು ಬಂದಿದೆ. ಅದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲು ಸಾಧ್ಯವಿಲ್ಲ.

    ಪೊಲೀಸ್ ಸಿಬ್ಬಂದಿಯ ವೇತನ, ಭತ್ಯೆ ಹೆಚ್ಚಳಕ್ಕೂ ಸರ್ಕಾರ ಕ್ರಮ ಕೈಗೊಂಡಿದೆ. ಇದೇ ಮೊದಲ ಬಾರಿಗೆ ಭಾರಿ ಪ್ರಮಾಣದಲ್ಲಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ನಡೆದಿದೆ. ಖಾಲಿ ಇರುವ 42 ಸಾವಿರ ಹುದ್ದೆಗಳ ಪೈಕಿ 32 ಸಾವಿರ ಹುದ್ದೆಗಳನ್ನು ಈಗಾಗಲೇ ತುಂಬಲಾಗಿದೆ. ರೂ.2,272 ಕೋಟಿ ವೆಚ್ಚದಲ್ಲಿ ಸಿಬ್ಬಂದಿಗೆ ವಸತಿಗೃಹಗಳನ್ನು ನಿರ್ಮಿಸಲಾಗುತ್ತಿದೆ. ಜೊತೆಗೆ 12 ಸಾವಿರ ಮಂದಿಗೆ ಏಕ ಕಾಲದಲ್ಲಿ ಬಡ್ತಿಯನ್ನೂ ನೀಡಲಾಗಿದೆ. ಇಂತಹ ಕಾರ್ಯ ಈ ಹಿಂದೆ ಎಂದೂ ನಡೆದಿರಲಿಲ್ಲ. ಪೊಲೀಸರು, ವೈದ್ಯರು ಹಾಗೂ ಶಿಕ್ಷಕರ ನೇಮಕ ವಿಚಾರದಲ್ಲಿ ಆರ್ಥಿಕ ಮಿತಿ ನಿರ್ಬಂಧ ಹೇರದಂತೆ ಸೂಚನೆಯನ್ನೂ ಕೊಟ್ಟಿದ್ದೇನೆ. ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 62 ವರ್ಷಕ್ಕೆ ಏರಿಸುವ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ.

  • ಡೇಂಜರ್ ಸೆಕ್ಸ್ ಗೇಮ್: ಚಿತ್ರಹಿಂಸೆ ನೀಡಿ ದಂಪತಿಯಿಂದ ಮಹಿಳೆಯ ಕೊಲೆ

    ಡೇಂಜರ್ ಸೆಕ್ಸ್ ಗೇಮ್: ಚಿತ್ರಹಿಂಸೆ ನೀಡಿ ದಂಪತಿಯಿಂದ ಮಹಿಳೆಯ ಕೊಲೆ

    ಬರ್ಲಿನ್: ಸೆಕ್ಸ್ ಗೆ ಅಂತಾ ವೈಶ್ಯ ಮಹಿಳೆಯೊಬ್ಬರನ್ನು ಕರೆಸಿಕೊಂಡು ಚಿತ್ರಹಿಂಸೆ ನೀಡಿ ಕೊಲೆ ಮಾಡಿರುವ ಘಟನೆ ಜರ್ಮನಿ ರಾಜಧಾನಿ ಬರ್ಲಿನ್ ನಗರದಲ್ಲಿ ನಡೆದಿದೆ.

    55 ವರ್ಷದ ಮೇರಿಯಾಬ್ ಎಂ. ಕೊಲೆಯಾದ ಮಹಿಳೆ. ಮಹಿಳೆಯನ್ನು ಕರೆಸಿಕೊಂಡು ವಿಲಕ್ಷಣ, ಅಸಹಜ ಸೆಕ್ಸ್ ಗೆ ಸಹಕರಿಸುವಂತೆ ಒತ್ತಾಯಿಸಿದ್ದಾರೆ. ಈ ವೇಳೆ ಇಬ್ಬರೂ ಸೇರಿಕೊಂಡು ಮಹಿಳೆಯನ್ನು ಕೊಲೆ ಮಾಡಿದ್ದಾರೆ. 36 ವರ್ಷದ ಟೈಫುನ್ ಎಸ್. ಮತ್ತು 27 ವರ್ಷದ ಜಾಸ್ಮೀನ್ ಪಿ. ಎಂಬವರೇ ಮಹಿಳೆಯನ್ನು ಕೊಲೆಗೈದ ದಂಪತಿ.

    ಟೈಫುನ್ ಮತ್ತು ಜಾಸ್ಮೀನ್ ಇಬ್ಬರೂ ವಿಲಕ್ಷಣ ಸೆಕ್ಸ್ ಆನ್‍ಲೈನ್ ಪೇಜಿನಲ್ಲಿ ಮೇರಿಯಾನ್‍ಳನ್ನು ಪರಿಚಯಿಸಿಕೊಂಡಿದ್ದಾರೆ. ಪರಿಚಯವಾದ ಬಳಿಕ ದಂಪತಿ, ಮೇರಿಯಾಳನ್ನು ತಾವು ವಾಸವಾಗಿರುವ ಅಪಾರ್ಟ್ ಮೆಂಟ್‍ಗೆ ಕರೆಸಿಕೊಂಡಿದ್ದಾರೆ. ಮೇರಿಯಾನ್ ಜೊತೆ ಅಸಹಜ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾಗ ಆಕೆಯನ್ನು ಕೊಲೆ ಮಾಡಿದ್ದಾರೆ. ಮೇರಿಯಾನ್ ಕೊಲೆಗೂ ಮುನ್ನ ಆಕೆಗೆ ಸುಮಾರು ಎರಡು ಗಂಟೆಗಳ ಕಾಲ ಲೈಂಗಿಕ ಕಿರುಕುಳ ನೀಡಿದ್ದಾರೆ ಅಂತಾ ಸ್ಥಳೀಯ ಮಾಧ್ಯಮಗಳು ತಿಳಿಸಿವೆ.

    ಮೇರಿಯಾನ್ ಶವವನ್ನು ಬ್ಲಾಂಕೇಟ್ ನಲ್ಲಿ ಸುತ್ತಿ ತ್ಯಾಜ್ಯ ಹಾಕುವ ಸ್ಥಳದಲ್ಲಿ ಎಸೆದು ಪರಾರಿಯಾಗಿದ್ದಾರೆ. ಡಿಸೆಂಬರ್ 23ರಂದು ದಾರಿಹೋಕರಿಗೆ ಮೇರಿಯಾನ್ ಶವ ಕಾಣಿಸಿಕೊಂಡಾಗ ಪ್ರಕರಣ ಬೆಳಕಿಗೆ ಬಂದಿದೆ.

    ಮೇರಿಯಾನ್ ಕೊಲೆ ಬಳಿಕ ನಾಪತ್ತೆಯಾಗಿದ್ದ ಟೈಫುನ್ ಮತ್ತು ಜಾಸ್ಮೀನ್ ಇಬ್ಬರನ್ನೂ ಡಿಸೆಂಬರ್ 29ರಂದು ಬರ್ಲಿನ್ ನಗರದ ಸ್ಕೊನೆಫೆಲ್ಡ್ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ದಂಪತಿ ಜರ್ಮನ್ ದೇಶ ತೊರೆದು ಟರ್ಕಿಯಲ್ಲಿ ವಾಸವಾಗಲು ತೆರಳುತ್ತಿದ್ದರು. ಬಂಧಿತ ದಂಪತಿಯ ಮೇಲೆ ಈ ಹಿಂದೆಯೇ ಹಲವಾರು ಕ್ರಿಮಿನಲ್ ಕೇಸ್ ಗಳು ದಾಖಲಾಗಿದ್ದವು. ಟೈಫುನ್ ಮೇಲೆ ಡ್ರಗ್ಸ್ ಸಾಗಾಟ, ಮಾರಣಾಂತಿಕ ಹಲ್ಲೆ, ಮಾರಕಾಸ್ತ್ರಗಳ ಸಾಗಾಟ ಮತ್ತು ಕಳ್ಳತನದ ಪ್ರಕರಣಗಳಿವೆ ಎಂದು ಪತ್ರಿಕೆಗಳು ಪ್ರಕಟಿಸಿವೆ.

    ಇನ್ನೂ ಜಾಸ್ಮೀನ್ ಮೇಲೆಯೂ ಕಳ್ಳತನದ ಪ್ರಕರಣಗಳು ದಾಖಲಾಗಿವೆ. ಈ ಸಂಬಂಧ ಪೊಲೀಸರು ದಂಪತಿಯನ್ನು ತಮ್ಮ ವಶದಲ್ಲಿರಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

     

  • ದೀಪಕ್ ಬರ್ಬರ ಹತ್ಯೆಗೈದ ನಾಲ್ವರು ಅರೆಸ್ಟ್: ಪೊಲೀಸರ ಮೇಲೆ ತಲ್ವಾರ್ ಬೀಸಿದ್ದ ಆರೋಪಿಗಳು

    ದೀಪಕ್ ಬರ್ಬರ ಹತ್ಯೆಗೈದ ನಾಲ್ವರು ಅರೆಸ್ಟ್: ಪೊಲೀಸರ ಮೇಲೆ ತಲ್ವಾರ್ ಬೀಸಿದ್ದ ಆರೋಪಿಗಳು

    ಮಂಗಳೂರು: ಬಜರಂಗದಳ ಕಾರ್ಯಕರ್ತ ದೀಪಕ್ ರಾವ್ ಬರ್ಬರ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ನೌಶಾದ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

    ನೌಶಾದ್, ರಿಜ್ವಾನ್, ಪಿಂಕಿ ನವಾಜ್, ನಿರ್ಷಾನ್ ಬಂಧಿತ ಆರೋಪಿಗಳು. ಪರಾರಿಯಾಗಲು ಯತ್ನಿಸಿದ್ದ ವೇಳೇ ರಿಜ್ವಾನ್, ಪಿಂಕಿ ನವಾಜ್ ಮೇಲೆ ಪೊಲೀಸರು ಫೈರಿಂಗ್ ನಡೆಸಿದ್ದು ಇಬ್ಬರನ್ನು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.

    ಟಾರ್ಗೆಟ್ ಗ್ಯಾಂಗ್ ಲೀಡರ್ ಸಫ್ವಾನ್ ಸಹಚರನಾಗಿರುವ ರಿಜ್ವಾನ್ ಮೇಲೆ ಕೊಲೆ, ಕೊಲೆಯತ್ನ, ದರೋಡೆ, ಸುಲಿಗೆ, ಸರಕಳ್ಳತನ ಮತ್ತಿತರ ಕೇಸ್ ಸೇರಿದಂತೆ 15ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದೆ ಎನ್ನುವ ಪ್ರಾಥಮಿಕ ಮಾಹಿತಿ ಈಗ ಲಭ್ಯವಾಗಿದೆ.

    ವಶಕ್ಕೆ ಪಡೆದು ಮೂಡುಬಿದಿರೆಯ ಮಿಜಾರಿನಿಂದ ಮಂಗಳೂರಿಗೆ ಆರೋಪಿಗಳನ್ನು ಕರೆತರುವಾಗ  ಪೊಲೀಸರ ಕೈಯಿಂದ ತಪ್ಪಿಸಲು ಯತ್ನಿಸಿದ್ದಾರೆ. ಅಷ್ಟೇ ಅಲ್ಲದೇ ಪೊಲೀಸರ ಮೇಲೆ ಆರೋಪಿಗಳು ತಲ್ವಾರ್ ನಿಂದ ಹಲ್ಲೆಗೆ ಯತ್ನಿಸಿದ್ದಾರೆ. ಬಂಧಿಸಿದ ಆರೋಪಿಗಳನ್ನು ಪೊಲೀಸರು ಈಗ ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.

    ಗುರುವಾರ ಬಂದ್: ದೀಪಕ್ ಕೊಲೆ ಹಿನ್ನೆಲೆಯಲ್ಲಿ ಗುರುವಾರ ಸುರತ್ಕಲ್, ಕಾಟಿಪಳ್ಳ ಪ್ರದೇಶದಲ್ಲಿ ಬಂದ್ ನಡೆಸಲು ಹಿಂದೂ ಜಾಗರಣ ವೇದಿಕೆ, ಬಜರಂಗದಳ ಕರೆ ನೀಡಿದೆ.

    ನಿರ್ಬಂಧಕಾಜ್ಞೆ: ದೀಪಕ್ ರಾವ್ ಹತ್ಯೆ ಹಿನ್ನೆಲೆಯಲ್ಲಿ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ 10 ಗಂಟೆಯಿಂದ ಗುರುವಾರ ರಾತ್ರಿ 10 ಗಂಟೆಯವರೆಗೆ ನಿರ್ಬಂಧಕಾಜ್ಞೆಯನ್ನು ವಿಧಿಸಲಾಗಿದೆ. ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ಆದೇಶ ಹೊರಡಿಸಿದ್ದು, ಮೆರವಣಿಗೆ, ಜಾಥಾ, ಧರಣಿ, ಸಭೆ ನಡೆಸುವುದಕ್ಕೆ ನಿಷೇಧ ಹೇರಲಾಗಿದೆ.

    ಏನಿದು ಪ್ರಕರಣ?
    ಡೊಕೊಮೊ ಮೊಬೈಲ್ ಕಂಪನಿಯಲ್ಲಿ ಕರೆನ್ಸಿ ಡಿಸ್ಟ್ರಿಬ್ಯೂಟರ್ ಆಗಿದ್ದ ಕೃಷ್ಣಾಪುರದ ಗಣೇಶ್ ಪುರ ನಿವಾಸಿ ದೀಪಕ್ ಅವರನ್ನು ಕಾಟಿಪಳ್ಳದಲ್ಲಿ ಬೈಕಿನಲ್ಲಿ ಹೋಗುತ್ತಿದ್ದಾಗ ಅಡ್ಡಗಟ್ಟಿದ ಕಾರಿನಲ್ಲಿ ಬಂದ ನಾಲ್ವರ ತಂಡ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿತ್ತು. ಕಲೆಕ್ಷನ್ ಹಣವನ್ನು ಅಂಗಡಿಗೆ ಕೊಟ್ಟು ಮನೆಗೆ ವಾಪಸ್ ಆಗುತ್ತಿದ್ದ ವೇಳೆ ಸ್ವಿಫ್ಟ್ ಕಾರಿನಲ್ಲಿ ಬಂದವರು ಬೈಕನ್ನು ಅಡ್ಡಗಟ್ಟಿ ಮೂಡಾಯಿಕೋಡಿ ಎಂಬಲ್ಲಿ ಅಡ್ಡಗಟ್ಟಿ ಈ ಕೃತ್ಯ ಎಸಗಿದ್ದರು.

    ಕೊಲೆ ಮಾಡಿ ಸ್ವಿಫ್ಟ್ ಕಾರಿನಲ್ಲಿ ಮೂಡುಬಿದಿರೆ ಮೂಲಕ ಪರಾರಿಯಾಗುತ್ತಿದ್ದ ಆರೋಪಿಗಳನ್ನು ಮೂಲ್ಕಿ ಸಬ್ ಇನ್ಸ್ ಪೆಕ್ಟರ್ ಶೀತಲ್ ಕುಮಾರ್ ಸಿನಿಮೀಯ ರೀತಿ ಬೆನ್ನಟ್ಟಿ ಮಿಜಾರು ಎಂಬಲ್ಲಿ ಅಡ್ಡಗಟ್ಟಿ ಬಂಧಿಸಿದ್ದಾರೆ.  ಪೂರ್ವ ದ್ವೇಷದಿಂದ ಕೃತ್ಯ ನಡೆದಿರುವ ಶಂಕೆಯಿದೆ ಎಂದು ಪೊಲೀಸ್ ಆಯುಕ್ತ ಟಿ.ಆರ್ ಸುರೇಶ್ ಹೇಳಿಕೆ ನೀಡಿದ್ದಾರೆ. ಕೊಲೆ ನಡೆದ ಬಳಿಕ ಸುರತ್ಕಲ್‍ನಲ್ಲಿ ಕಿಡಿಗೇಡಿಗಳು ಖಾಸಗಿ ಬಸ್ ಮೇಲೆ ಕಲ್ಲು ಎಸೆದಿದ್ದು, ಬಸ್ಸಿನ ಮುಂದಿನ ಗಾಜು ಪುಡಿಪುಡಿಯಾಗಿದೆ.

  • ಸಿನಿಮೀಯ ರೀತಿ ಕಾರ್ ಚೇಸಿಂಗ್- ಬಜರಂಗದಳ ಕಾರ್ಯಕರ್ತ ದೀಪಕ್ ಹತ್ಯೆಗೈದ ಶಂಕಿತರು ವಶಕ್ಕೆ

    ಸಿನಿಮೀಯ ರೀತಿ ಕಾರ್ ಚೇಸಿಂಗ್- ಬಜರಂಗದಳ ಕಾರ್ಯಕರ್ತ ದೀಪಕ್ ಹತ್ಯೆಗೈದ ಶಂಕಿತರು ವಶಕ್ಕೆ

    ಮಂಗಳೂರು: ಸುರತ್ಕಲ್ ಬಳಿಯ ಕಾಟಿಪಳ್ಳದಲ್ಲಿ ಬಜರಂಗದಳದ ಕಾಯಕರ್ತ ದೀಪಕ್ ರಾವ್(32) ಹತ್ಯೆಗೈದ ಆರೋಪದ ಹಿನ್ನೆಲೆಯಲ್ಲಿ ನಾಲ್ವರು ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಕೊಲೆ ಕೃತ್ಯದ ಬಳಿಕ ಪರಾರಿಯಾಗುತ್ತಿದ್ದ ನಾಲ್ವರು ಶಂಕಿತ ಆರೋಪಿಗಳನ್ನು ಸುರತ್ಕಲ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೂಡುಬಿದಿರೆ ಮೂಲಕ ಪರಾರಿಯಾಗುತ್ತಿದ್ದ ಸ್ವಿಫ್ಟ್ ಕಾರನ್ನು ಮುಲ್ಕಿ ಸಬ್ ಇನ್ಸ್ ಪೆಕ್ಟರ್ ಶೀತಲ್ ಕುಮಾರ್ ಬೆನ್ನಟ್ಟಿದ್ದು ಮಿಜಾರು ಎಂಬಲ್ಲಿ ಫೈರಿಂಗ್ ಮಾಡಿ ಅಡ್ಡಗಟ್ಟಿದ್ದಾರೆ. ಆ ಬಳಿಕ ಅದರಲ್ಲಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಪೂರ್ವ ದ್ವೇಷದಿಂದ ಕೃತ್ಯ ನಡೆದಿರುವ ಶಂಕೆಯಿದೆ ಎಂದು ಪೊಲೀಸ್ ಆಯುಕ್ತ ಟಿ.ಆರ್ ಸುರೇಶ್ ಹೇಳಿಕೆ ನೀಡಿದ್ದಾರೆ. ಕೊಲೆ ನಡೆದ ಬಳಿಕ ಸುರತ್ಕಲ್‍ನಲ್ಲಿ ಕಿಡಿಗೇಡಿಗಳು ಖಾಸಗಿ ಬಸ್ ಮೇಲೆ ಕಲ್ಲು ಎಸೆದಿದ್ದು, ಬಸ್ಸಿನ ಮುಂದಿನ ಗಾಜು ಪುಡಿಪುಡಿಯಾಗಿದೆ.

    ಸುರತ್ಕಲ್, ಕಾಟಿಪಳ್ಳ, ಕೃಷ್ಣಾಪುರದಲ್ಲಿ  ಬಂದ್ ಆಗಿದ್ದು,  ಮಾಲೀಕರು ಸ್ವಯಂಪ್ರೇರಿತವಾಗಿ ಅಂಗಡಿಗಳನ್ನು ಮುಚ್ಚುತ್ತಿದ್ದಾರೆ. ಸುರತ್ಕಲ್ ನಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.

    ಡೊಕೊಮೊ ಮೊಬೈಲ್ ಕಂಪನಿಯಲ್ಲಿ ಕರೆನ್ಸಿ ಡಿಸ್ಟ್ರಿಬ್ಯೂಟರ್ ಆಗಿದ್ದ ಕೃಷ್ಣಾಪುರದ ಗಣೇಶ್ ಪುರ ನಿವಾಸಿ ದೀಪಕ್ ಅವರನ್ನು ಕಾಟಿಪಳ್ಳದಲ್ಲಿ ಬೈಕಿನಲ್ಲಿ ಹೋಗುತ್ತಿದ್ದಾಗ ಅಡ್ಡಗಟ್ಟಿದ ಕಾರಿನಲ್ಲಿ ಬಂದ ನಾಲ್ವರ ತಂಡ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿತ್ತು. ಅಷ್ಟರಲ್ಲಿ ತೀವ್ರ ಗಾಯಗೊಂಡಿದ್ದ ದೀಪಕ್ ಸ್ಥಳದಲ್ಲೇ ಸಾವು ಕಂಡಿದ್ದಾರೆ.

    ಕಲೆಕ್ಷನ್ ಹಣವನ್ನು ಅಂಗಡಿಗೆ ಕೊಟ್ಟು ಮನೆಗೆ ವಾಪಸ್ ಆಗುತ್ತಿದ್ದ  ವೇಳೆ ಸ್ವಿಫ್ಟ್ ಕಾರಿನಲ್ಲಿ ಬಂದವರು ಬೈಕನ್ನು ಅಡ್ಡಗಟ್ಟಿ ಮೂಡಾಯಿಕೋಡಿ ಎಂಬಲ್ಲಿ ಅಡ್ಡಗಟ್ಟಿ ಕೊಲೆ ಮಾಡಿದ್ದಾರೆ. ಈ ಕೃತ್ಯ ಎಸಗುತ್ತಿದ್ದಾಗ ಅಲ್ಲಿದ್ದ ಕೆಲ ಮುಸ್ಲಿಮರು ಕಲ್ಲನ್ನು ದುಷ್ಕರ್ಮಿಗಳ ಮೇಲೆ ಎಸೆದಿದ್ದಾರೆ. ಸುರತ್ಕಲ್ ಮತ್ತು ಮಂಗಳೂರಿನ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ.

  • ಶಾಕಿಂಗ್: ಕಬ್ಬಿಣದ ರಾಡ್‍ನಿಂದ 2 ಗಂಟೆಯಲ್ಲಿ 6 ಕೊಲೆ ಮಾಡ್ದ!

    ಶಾಕಿಂಗ್: ಕಬ್ಬಿಣದ ರಾಡ್‍ನಿಂದ 2 ಗಂಟೆಯಲ್ಲಿ 6 ಕೊಲೆ ಮಾಡ್ದ!

    -7ನೇ ಕೊಲೆ ಮಾಡಲು ಹೋಗಿ ಸಿಕ್ಕಿ ಬಿದ್ದ

    ಚಂಡೀಗಢ: ಹರಿಯಾಣ ರಾಜ್ಯದಲ್ಲಿ ವ್ಯಕ್ತಿಯೊಬ್ಬ ಎರಡು ಗಂಟೆಯಲ್ಲಿ ಬರೋಬ್ಬರಿ 6 ಕೊಲೆಗಳನ್ನು ಮಾಡಿರುವ ಶಾಕಿಂಗ್ ಘಟನೆಯೊಂದು ನಡೆದಿದೆ. ಇಂದು ಬೆಳಗಿನ ಜಾವ ಈ ಆರು ಕೊಲೆಗಳು ನಡೆದಿರುವುದು ವಿಶೇಷ.

    ಇಂದು ಬೆಳಗಿನ ಜಾವ 2 ರಿಂದ 4 ಗಂಟೆಯಲ್ಲಿ ಪಲ್ವಾನ್ ನಗರದ ಬೇರೆ ಬೇರೆ ಸ್ಥಳಗಳಲ್ಲಿ ಕಬ್ಬಿಣದ ರಾಡ್ ಬಳಸಿ ವ್ಯಕ್ತಿಯೊಬ್ಬ 6 ಕೊಲೆಗಳನ್ನು ಮಾಡಿದ್ದಾನೆ. ಇಷ್ಟಕ್ಕೆ ಸುಮ್ಮನಾಗದ ಆರೋಪಿ 7ನೇ ಸಲ ಪೊಲೀಸ್ ಅಧಿಕಾರಿಯೊಬ್ಬರನ್ನು ಕೊಲೆ ಮಾಡಲು ಹೋಗಿ ಸಿಕ್ಕಿ ಬಿದ್ದಿದ್ದಾನೆ.

    ಯಾರು ಆ ಹಂತಕ?: ಅಂದಾಜು 40 ರಿಂದ 45 ವಯಸ್ಸಿನ ನರೇಶ್ ಎಂಬಾತನೇ 6 ಕೊಲೆಗೈದ ಆರೋಪಿ. ನರೇಶ್ ಮಾಜಿ ಸೈನಿಕ ಎಂಬುದು ಆತನ ಬಳಿಯಿದ್ದ ಐಡಿ ಕಾರ್ಡ್ ನಿಂದ ತಿಳಿದು ಬಂದಿದೆ. ಸದ್ಯ ಆರೋಪಿ ನರೇಶ್ ನನ್ನು ಪೊಲೀಸರು ಬಂಧಿಸಿದ್ದಾರೆ.

    ನರೇಶ್ ಒಬ್ಬ ಮಾನಸಿಕ ಅಸ್ವಸ್ಥನೆಂದು ಹೇಳಲಾಗುತ್ತಿದ್ದು, ಬಂಧನದ ನಂತರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ನರೇಶ್ ಕೊಲೆ ಮಾಡಲು ಕಬ್ಬಿಣದ ರಾಡ್ ಬಳಸಿದ್ದು, ಪಲ್ವಾನ್ ನಗರದ ಬೀದಿಗಳಲ್ಲಿ ನಡೆಯುತ್ತಿದ್ದವರನ್ನು ಕೊಲೆ ಮಾಡುತ್ತಾ ಮುಂದೆ ಹೋಗಿದ್ದಾನೆ ಅಂತಾ ಪಲ್ವಾನ್ ನಗರ ಠಾಣೆಯ ಎಸ್‍ಪಿ ಸಲೋಚನಾ ಗಜರಾಜ್ ತಿಳಿಸಿದ್ದಾರೆ.

    ಕೊಲೆಗಳು ನಡೆದಿದ್ದು ಹೇಗೆ?: ಈ ಆರು ಕೊಲೆಗಳು ನಗರದ ಬೇರೆ ಬೇರೆ ಬೀದಿಗಳಲ್ಲಿ ನಡೆದಿವೆ. ಬೆಳಗಿನ ಜಾವ ಸುಮಾರು 2.30ಕ್ಕೆ ಪಲ್ವಾನ್ ಆಸ್ಪತ್ರೆಯಲ್ಲಿ ಅಂಜುಮ್ ಎಂಬ ಮಹಿಳೆಯನ್ನು ಕೊಲೆ ಮಾಡಿದ್ದಾನೆ. ಕೊಲೆಯ ನಂತರ ಅಂಜುಮ್ ಮೃತ ದೇಹವನ್ನು ವಾಶ್ ರೂಮಿನಲ್ಲಿ ಬಚ್ಚಿಟ್ಟು, ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಕೈ ಯಲ್ಲಿ ಕಬ್ಬಿಣದ ರಾಡ್ ಹಿಡಿದು ಹೊರ ಬಂದವನೇ ಒಟ್ಟು 4 ಕೊಲೆಗಳನ್ನು ಮಾಡಿದ್ದಾನೆ. ಪಲ್ವಾನ್ ನಗರದ ಆಗ್ರಾ ರೋಡ್ ಮತ್ತು ಮಿನಾರ್ ಗೇಟ್ ಬೀದಿಯಲ್ಲಿ ನಾಲ್ಕು ಜನರನ್ನು ಕೊಂದಿದ್ದಾನೆ. ನಗರದ ಮಾರುಕಟ್ಟೆ ಬಳಿಕ ಎಂಜಿನಿಯರಿಂಗ್ ವರ್ಕ್ ಶಾಪ್ ನ ವಾಚ್ ಮ್ಯಾನ್ ಕೊನೆಯದಾಗಿ ಕೊಲೆಯಾಗಿದ್ದಾನೆ.

    6 ಕೊಲೆ ಮಾಡಿ ಆದರ್ಶ ಕಾಲೋನಿಯಲ್ಲಿ ಹೋಗುತ್ತಿದ್ದ ವೇಳೆ ಪೊಲೀಸ್ ಅಧಿಕಾರಿಯೊಬ್ಬರು ಎದುರಾಗಿದ್ದು, ಅವರನ್ನು ಕೊಲೆ ಮಾಡಲು ಮುಂದಾಗಿದ್ದಾನೆ. ಈ ವೇಳೆ ಪೊಲೀಸ್ ಅಧಿಕಾರಿ ತಮ್ಮ ಚಾಣಾಕ್ಷತೆಯಿಂದ ನರೇಶ್‍ನನ್ನು ಬಂಧಿಸಿದ್ದಾರೆ.

    ನರೇಶ್‍ನನ್ನು ಬಂಧಿಸಿದ ನಂತರ ಆತನನ್ನು ಪಲ್ವಾನ್ ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೊನೆಗೆ ವೈದ್ಯರ ಸಲಹೆ ಮೇರೆಗೆ ಫರೀದಾಬಾದ್ ನ ಆಸ್ಪತ್ರೆಗೆ ನರೇಶ್ ನನ್ನು ರವಾನಿಸಲಾಗಿದೆ.

    https://www.youtube.com/watch?v=xE_HlevalBQ

  • Exclusive: ಮದ್ವೆ ಮನೆಯಲ್ಲಿ ಊಟ ಮಾಡಿ ಸಿಎಂ ಕೊಟ್ಟ ಆದೇಶದಿಂದ ಬೆಳಗೆರೆ ಅರೆಸ್ಟ್!

    Exclusive: ಮದ್ವೆ ಮನೆಯಲ್ಲಿ ಊಟ ಮಾಡಿ ಸಿಎಂ ಕೊಟ್ಟ ಆದೇಶದಿಂದ ಬೆಳಗೆರೆ ಅರೆಸ್ಟ್!

    ಬೆಂಗಳೂರು: ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ಕೊಟ್ಟ ಪ್ರಕರಣದಲ್ಲಿ ರವಿ ಬೆಳಗೆರೆ ಬಂಧನವಾಗಿದೆ. ಆದರೆ ರವಿ ಬೆಳಗೆರೆ ಬಂಧನಕ್ಕೆ ಏನೆಲ್ಲ ಕಸರತ್ತು ನಡೆದಿದೆ ಎನ್ನುವ ಮಾಹಿತಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಸಿಕ್ಕಿದೆ.

    ಹೌದು, ರವಿ ಬೆಳಗರೆ ಕರ್ನಾಟಕದ ಖ್ಯಾತ ಪತ್ರಕರ್ತರಾದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸುವುದು ಹೇಗೆ ಎಂದು ಪೊಲೀಸರು ಚಿಂತೆಯಲ್ಲಿದ್ದಾಗ ಸಿಎಂ ಸಿದ್ದರಾಮಯ್ಯ ಪೊಲೀಸರಿಗೆ ಸಂಪೂರ್ಣ ಬೆಂಬಲ ನೀಡಿದ್ದರು. ಸಿಎಂ ಬೆನ್ನಿಗೆ ನಿಲ್ಲದೇ ಇದ್ದಲ್ಲಿ ಬಂಧನ ಕಷ್ಟವಾಗುತಿತ್ತು ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.

    ಗೌರಿ ಲಂಕೇಶ್ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಆರಂಭದಲ್ಲಿ ನಾಡ ಪಿಸ್ತೂಲ್ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ತಾಹೀರ್ ಹುಸೇನ್ ಅನೂಪ್ ಗೌಡನನ್ನು ವಶಕ್ಕೆ ಪಡೆದಿದ್ದರು. ಯಲಹಂಕದಲ್ಲರುವ ಆತನ ಮನೆಯನ್ನು ಪರಿಶೀಲನೆ ನಡೆಸುತ್ತಿದ್ದಾಗ ಒನಿಡಾ ಟಿವಿಯ ಹಿಂದುಗಡೆ ಮೂರು ಪಿಸ್ತೂಲ್ ಇರುವುದನ್ನು ನೋಡಿ ಪೊಲೀಸರು ಒಮ್ಮೆ ಬೆಚ್ಚಿ ಬಿದ್ದಿದ್ದರು.

    ಪಿಸ್ತೂಲ್ ಸಿಕ್ಕಿದ ಹಿನ್ನೆಲೆಯಲ್ಲಿ ಗೌರಿ ಹತ್ಯೆಯ ಬಗ್ಗೆ ಪೊಲೀಸರು ಪ್ರಶ್ನಿಸಿದ್ದಾರೆ. ಈ ವೇಳೆ ಆತ ಗೌರಿ ಹತ್ಯೆಯ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಆದರೆ ಪತ್ರಕರ್ತ ರವಿ ಬೆಳಗೆರೆ ಬಗ್ಗೆ ನನಗೆ ಗೊತ್ತಿದೆ ಎಂದಿದ್ದಾನೆ. ಪಿಸ್ತೂಲ್ ಸಿಕ್ಕಿದ ಹಿನ್ನೆಲೆಯಲ್ಲಿ ಮತ್ತಷ್ಟು ವಿಚಾರಗಳನ್ನು ಕೆದಕಿದಾಗ ಆತ ನಾನು ಪಿಸ್ತೂಲ್ ಮಾರಾಟ ಮಾಡುತ್ತಿದ್ದು, ವಿಜಯಪುರ ಜಿಲ್ಲೆಯ ಶಶಿಧರ್ ರಾಮಚಂದ್ರ ಮುಂಡೆವಾಡಿಗೆ ನಾಡ ಪಿಸ್ತೂಲ್ ಮತ್ತು 02 ಜೀವಂತ ಗುಂಡುಗಳನ್ನು ನೀಡಿದ್ದೆ ಎಂದು ತಿಳಿಸಿದ್ದಾನೆ.

    ಈ ಮಾಹಿತಿ ಆಧಾರದಲ್ಲಿ ಶಶಿಧರ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಇವರಿಬ್ಬರು ಸುನೀಲ್ ಹತ್ಯೆಗೆ ಬೆಳಗೆರೆ ಸುಪಾರಿ ನೀಡಿದ್ದಾರೆ ಎನ್ನುವುದನ್ನು ಬಾಯಿ ಬಿಟ್ಟಿದ್ದಾರೆ. 2017ರ ಆಗಸ್ಟ್ 26ಕ್ಕೆ ಸುನೀಲ್ ಹೆಗ್ಗರವಳ್ಳಿ ಹತ್ಯೆ ನಡೆಯಬೇಕಿತ್ತು. ಆದರೆ ಸುನೀಲ್ ಮನೆಯಲ್ಲಿ ಇಲ್ಲದ ಕಾರಣ ಹತ್ಯೆ ನಡೆಸಲು ಸಾಧ್ಯವಾಗಲಿಲ್ಲ. ಅಷ್ಟೇ ಅಲ್ಲದೇ ಸುನೀಲ್ ಮನೆ ಮುಂದೆ ಸಿಸಿಟಿವಿ ಇದೆ ಎಂದು ಬೆಳಗೆರೆಗೆ ತಿಳಿಸಿದ್ದೆವು. ಈ ವಿಚಾರ ತಿಳಿದು ರವಿ ಬೆಳಗೆರೆ ಕೆಂಡಾಮಂಡಲಗೊಂಡು ಇನ್ನು ಒಂದು ತಿಂಗಳು ಈ ಕಡೆ ಬರುವುದೇ ಬೇಡ, ಒಂದು ತಿಂಗಳ ಕಾಲ ಡಿವಿಆರ್ ನಲ್ಲಿ ಡೇಟಾ ಸೇವ್ ಆಗಿರುತ್ತದೆ. ಹೀಗಾಗಿ ಈ ಕಡೆ ತಲೆಹಾಕಬೇಡಿ. ಒಂದು ತಿಂಗಳು ಬಿಟ್ಟು ಆತನನ್ನು ಮುಗಿಸಿ ಎಂದಿದ್ದರು ಎಂದು ಇವರಿಬ್ಬರು ತಿಳಿಸಿದ್ದಾರೆ.

    ರವಿ ಬೆಳಗೆರೆ ಸಾರಥ್ಯದಲ್ಲಿ ಹತ್ಯೆಗೆ ಸುಪಾರಿ ನೀಡಲಾಗಿದೆ ಎಂದು ತಿಳಿಯುತ್ತಿದ್ದಂತೆ ಖಾಕಿಗಳು ಒಮ್ಮೆ ಶಾಕ್ ಆಗಿದ್ದಾರೆ. ಪ್ರಭಾವಿ ಪತ್ರಕರ್ತನಾಗಿರುವ ಬೆಳಗೆರೆಯನ್ನು ಮುಟ್ಟುವುದು ಅಷ್ಟು ಸುಲಭವಲ್ಲ ಎನ್ನುವುದು ಗೊತ್ತಾಗಿ ಡಿಜಿಪಿ ನೀಲಮಣಿ ರಾಜು ಅವರನ್ನು ಭೇಟಿ ಮಾಡಿ ಸ್ಫೋಟಕ ಸುದ್ದಿಯನ್ನು ತನಿಖಾ ಅಧಿಕಾರಿಗಳು ನೀಡಿದ್ದಾರೆ. ಬೆಳಗೆರೆ ಹೆಸರನ್ನು ಕೇಳಿ ನೀಲಮಣಿ ರಾಜು ಅವರು ಕ್ಷಣ ಬೆಚ್ಚಿ ಬಿದ್ದು ಬಂಧನ ನಿರ್ಧಾರ ಕೈಗೊಳ್ಳುವುದರ ಬಗ್ಗೆ ಗೃಹ ಇಲಾಖೆಯ ಸಲಹೆಗಾರ ಕೆಂಪಯ್ಯಗೆ ಮಾಹಿತಿಯನ್ನು ರವಾನಿಸುತ್ತಾರೆ. ಇದನ್ನೂ ಓದಿ: ಗಂಡ ರಣಭೂಮಿಯಲ್ಲಿ ಇರುವಾಗ ಶತ್ರುವಿನ ತೊಡೆ ಮೇಲೆ ಕುಳಿತರೆ ಅದು ಪಾತಿವ್ರತ್ಯೆಯೇ: ಬೆಳಗೆರೆ ಪೋಸ್ಟ್ ಸುತ್ತ ಅನುಮಾನದ ಹುತ್ತ

    ಕೆಂಪಯ್ಯ ಈ ವಿಚಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ತಿಳಿಸಲು ಮುಂದಾಗುತ್ತಾರೆ. ಈ ವೇಳೆ ಸಿಎಂ ತಮ್ಮನ ಮಗನ ಮದುವೆಗಾಗಿ ಮೈಸೂರಿಗೆ ತೆರಳಿದ್ದರು. ಪ್ರಕರಣ ಗಂಭೀರವಾಗಿರುವ ಇರುವ ಕಾರಣ ಕೆಂಪಯ್ಯ ಈ ವಿಚಾರವನ್ನು ಫೋನಿನಲ್ಲಿ ಹೇಳಲು ಇಚ್ಚಿಸದೇ ನೇರವಾಗಿ ಸಿಎಂ ಭೇಟಿಯಾಗಲು ನವೆಂಬರ್ 28 ರಂದು ಮೈಸೂರಿಗೆ ತೆರಳುತ್ತಾರೆ.

    ಕೆಂಪಯ್ಯ ಮೈಸೂರಿಗೆ ಭೇಟಿ ನೀಡಿದಾಗ ಸಹೋದರನ ಮದುವೆಯಲ್ಲಿ ಊಟ ಮಾಡುತ್ತಾ ಸಿಎಂ ಕುಳಿದ್ದರು. ಊಟದ ಬಳಿಕ ಕೆಂಪಯ್ಯ ಬೆಳಗೆರೆ ಸುಪಾರಿ ನೀಡಿರುವ ವಿಚಾರವನ್ನು ತಿಳಿಸುತ್ತಾರೆ. “ಹೌದಾ. ಇದು ನಿಜವೇ ಏನು ಹೇಳುತ್ತಿದ್ದೀರಿ?” ಎಂದು ಸಿಎಂ ಕೆಂಪಯ್ಯ ಅವರನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಮುಂದೆ ಏನು ಮಾಡುವುದು ಎಂದು ಕೆಂಪಯ್ಯ ಸಿಎಂ ಅವರಲ್ಲಿ ಕೇಳಿದ್ದಾರೆ. ಕೆಲ ನಿಮಿಷ ಯೋಚಿಸಿ ಸಿಎಂ, ಮುಂದೆ ಹೋಗಿ ಪೊಲೀಸರು ಕರ್ತವ್ಯ ನಿರ್ವಹಿಸಲಿ ಎಂದು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಎಲ್ಲ ಸಾಕ್ಷ್ಯಗಳನ್ನು ಸಂಗ್ರಹಿಸಿ ನಂತರ ಬಂಧಿಸಿ ಎಂದು ಸೂಚನೆ ಕೊಟ್ಟಿದ್ದಾರೆ.

    ಸಿಎಂ ಗ್ರೀನ್ ಸಿಗ್ನಲ್ ಕೊಟ್ಟ ಬಳಿಕ ಚುರುಕೊಂಡ ಪೊಲೀಸರು ಎಲ್ಲ ಸಾಕ್ಷ್ಯಗಳನ್ನು ಸಂಗ್ರಹಿಸಿ ಗುರುವಾರ ಶಶಿಧರ್ ರಾಮಚಂದ್ರ ಮುಂಡೆವಾಡಿಯನ್ನು ಬಂಧಿಸಿ ಶುಕ್ರವಾರ ರವಿ ಬೆಳಗೆರೆಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಯಾಕ್ ನೀವ್ ರಿಸ್ಕ್ ತೆಗೆದುಕೊಳ್ತೀರಿ: ಪೊಲೀಸರಿಗೆ ರವಿ ಬೆಳಗೆರೆ ಬುದ್ಧಿವಾದ

    ಒಟ್ಟಿನಲ್ಲಿ ಗೌರಿ ಹತ್ಯೆಯ ತನಿಖೆಯ ವೇಳೆ ಮತ್ತೊಂದು ಹತ್ಯೆಗೆ ಸುಪಾರಿ ನೀಡಿರುವ ವಿಚಾರ ಬೆಳಕಿಗೆ ಬಂದಿದೆ. ರವಿ ಬೆಳಗೆರೆ ಕ್ರೈಂ ಪತ್ರಕರ್ತರಾಗಿರುವ ಕಾರಣ ಅವರಿಗೆ ಮತ್ತಷ್ಟು ಸುಪಾರಿ ಕಿಲ್ಲರ್ಸ್ ಗಳ ಬಗ್ಗೆ ಮಾಹಿತಿ ಇರಬಹುದು ಎನ್ನುವ ಅನುಮಾನ ಈಗ ಪೊಲೀಸರದ್ದು. ಹೀಗಾಗಿ ಅವರನ್ನು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.

     

  • ಬಸ್ ಇಳಿದು ಹೋಗುತ್ತಿದ್ದ ಯುವತಿಯನ್ನು ಬಿಗಿದಪ್ಪಿ ರೇಪ್ ಮಾಡಲು ಯತ್ನಿಸಿದವ ಜೈಲು ಸೇರಿದ!

    ಬಸ್ ಇಳಿದು ಹೋಗುತ್ತಿದ್ದ ಯುವತಿಯನ್ನು ಬಿಗಿದಪ್ಪಿ ರೇಪ್ ಮಾಡಲು ಯತ್ನಿಸಿದವ ಜೈಲು ಸೇರಿದ!

    ಮಂಗಳೂರು: ಯುವತಿಯ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದಡಿ 40 ವರ್ಷದ ವ್ಯಕ್ತಿಯೊಬ್ಬನನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡಿರುವ ದೆಹಲಿ ಮೂಲದ ಮೊಹಮ್ಮದ್ ಇಫ್ತಿಕಾರ್(40) ಬಂಧಿತ ಆರೋಪಿ.

    ಮಂಗಳೂರು ನಗರದ ಮಾಲ್ ನಲ್ಲಿ ಕೆಲಸ ಮಾಡುತ್ತಿದ್ದ 27 ವರ್ಷದ ಯುವತಿ ಎಂದಿನಂತೆ ಕೆಲಸ ಮುಗಿಸಿ ರಾತ್ರಿ 9.30ರ ವೇಳೆಗೆ ಬಸ್ ಹತ್ತಿ ಮನೆಗೆ ಹೊರಟಿದ್ದಳು. ಇದೇ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಆರೋಪಿ ಈ ದುಷ್ಕೃತ್ಯ ಎಸಗಿದ್ದಾನೆ. ಯುವತಿ ಬಿಕರ್ನಕಟ್ಟೆ ಕೈಕಂಬದಲ್ಲಿ ಇಳಿದು ಮನೆ ಕಡೆ ಹೋಗುತ್ತಿದ್ದಾಗ ಆಕೆಯನ್ನು ಹಿಂಬಾಲಿಸಿಕೊಂಡು ಹೋಗಿದ್ದಾನೆ. ಅಲ್ಲದೆ ಹಿಂಭಾಗದಿಂದ ಏಕಾಏಕಿ ಮುನ್ನುಗ್ಗಿ ಯುವತಿಯ ಮಾನಭಂಗಕ್ಕೆ ಯತ್ನಿಸಿದ್ದಾನೆ.

    ತಕ್ಷಣ ಯುವತಿ ಕಿರುಚಾಡಿದ್ದಾಳೆ. ಇದರಿಂದ ಎಚ್ಚೆತ್ತ ಸಾರ್ವಜನಿಕರು ತಕ್ಷಣ ಯುವತಿಯ ಸಹಾಯಕ್ಕೆ ಧಾವಿಸಿದ್ದಾರೆ. ಆರೋಪಿಯನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಬಳಿಕ ಪೊಲೀಸರಿಗೊಪ್ಪಿಸಿದ್ದಾರೆ. ಆರೋಪಿ ಇಫ್ತಿಕಾರ್ ವಿರುದ್ಧ ಕದ್ರಿ ಠಾಣೆಯಲ್ಲಿ ಅತ್ಯಾಚಾರ ಯತ್ನ ಪ್ರಕರಣ ದಾಖಲಾಗಿದೆ.

    ಇದನ್ನೂ ಓದಿ: ತಮ್ಮನ ಎದುರೇ 13ರ ಬಾಲಕಿಯನ್ನು ರೇಪ್ ಮಾಡಿ ಕೊಲೆಗೈದ!

  • ಡೆಂಘೀಯಿಂದ ಸುಸ್ತಾಗಿದ್ದ ಪತ್ನಿ ‘ಮಿಲನ’ಕ್ಕೆ ಬಿಡಲಿಲ್ಲ ಎಂದು ಕೊಂದೇ ಬಿಟ್ಟ ಪತಿ

    ಡೆಂಘೀಯಿಂದ ಸುಸ್ತಾಗಿದ್ದ ಪತ್ನಿ ‘ಮಿಲನ’ಕ್ಕೆ ಬಿಡಲಿಲ್ಲ ಎಂದು ಕೊಂದೇ ಬಿಟ್ಟ ಪತಿ

    ಚಂಡೀಗಢ: ಪತ್ನಿ ಸೆಕ್ಸ್ ಗೆ ಸಹಕರಿಸಲಿಲ್ಲ ಎಂದು ವ್ಯಕ್ತಿಯೊಬ್ಬ ಪತ್ನಿಯನ್ನು ಉಸಿರುಗಟ್ಟಿಸಿ ಸಾಯಿಸಿದ ಘಟನೆ ಹರ್ಯಾಣದ ಕುರುಕ್ಷೇತ್ರ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಜೋಗ್ನಾ ಖೇರಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕಾಮುಕ ಪತಿರಾಯನನ್ನು ಪೊಲೀಸರು ಬಂಧಿಸಿದ್ದಾರೆ.

    ಏನಾಗಿತ್ತು?: 10 ವರ್ಷದ ಹಿಂದೆ ಸಂಜೀವ್ ಕುಮಾರ್ ಎಂಬಾತನಿಗೆ ಸುಮನ್ ಎಂಬಾಕೆಯ ಜೊತೆ ಮದುವೆಯಾಗಿತ್ತು. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ವೃತ್ತಿಯಲ್ಲಿ ಪೈಂಟರ್ ಆಗಿದ್ದ ಸಂಜೀವ್ ಕಳೆದ ಮಂಗಳವಾರ ಕೆಲಸ ಮುಗಿಸಿ ಮನೆಗೆ ಬಂದಿದ್ದಾನೆ.

    ಆದರೆ ಕೆಲ ದಿನಗಳಿಂದ ಪತ್ನಿ ಸುಮನ್ ಗೆ ಹುಷಾರಿರಲಿಲ್ಲ. ವೈದ್ಯರ ಬಳಿ ಪರಿಶೀಲನೆ ಮಾಡಿದಾಗ ಆಕೆಗೆ ಡೆಂಘೀ ಜ್ವರ ಬಂದಿರುವುದು ಖಚಿತವಾಗಿತ್ತು. ಸಹಜವಾಗಿಯೇ ಇದರಿಂದಾಗಿ ಸುಮನ್ ತೀವ್ರ ಸುಸ್ತಿನಿಂದ ಬಳಲುತ್ತಿದ್ದರು. ಆದರೆ ಮಂಗಳವಾರ ರಾತ್ರಿ ಮನೆಗೆ ಬಂದ ಸಂಜೀವ್ ಪತ್ನಿಯ ಮುಂದೆ ತನ್ನ ಕಾಮ ಬಯಕೆ ಮುಂದಿಟ್ಟಿದ್ದಾನೆ. ಆದರೆ ಡೆಂಘೀಯಿಂದ ಬಳಲುತ್ತಿದ್ದ ಸುಮನ್ ಇದಕ್ಕೆ ನಿರಾಕರಿಸಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಇದರಿಂದ ರೊಚ್ಚಿಗೆದ್ದ ಪತಿ ಸಂಜೀವ್ ಕುಮಾರ್ ಸುಮನ್ ಕತ್ತು ಹಿಸುಕಿದ್ದಾನೆ. ಆತನ ಹಿಡಿತ ಬಿಗಿಯಾಗುತ್ತಿದ್ದಂತೆಯೇ ಸುಮನ್ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.

    ಸೋದರಿಯ ಸಾವಿನ ವಿಚಾರ ಗೊತ್ತಾಗುತ್ತಿದ್ದಂತೆಯೇ ಸುಮನ್ ಸೋದರ ಕುರುಕ್ಷೇತ್ರ ವಿವಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ವೇಳೆ ಸಂಜೀವ್ ಕುಮಾರ್ ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ವಿಚಾರಣೆ ವೇಳೆ ಸಂಜೀವ್ ತಾನು ನಡೆಸಿದ ಕೃತ್ಯದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಸಂಜೀವ್ ಕುಮಾರ್ ಹಾಗೂ ಆತನ ಕುಟುಂಬದ 6 ಮಂದಿಯನ್ನು ಬಂಧಿಸಿದ್ದಾರೆ.

    ಇದನ್ನೂ ಓದಿ: ಪ್ರೇಮಿಗಳ ಮಿಲನದ ವಿಡಿಯೋ ಇಟ್ಕೊಂಡು ಬ್ಲಾಕ್‍ಮೇಲ್: ಕೊನೆಗೆ ಯುವತಿ ಮೇಲೆ ಗ್ಯಾಂಗ್ ರೇಪ್

  • 50ಕ್ಕೂ ಹೆಚ್ಚು ಮಹಿಳೆಯರ ಮೇಲೆ ರೇಪ್: ಬೆಂಗ್ಳೂರು ಟೆಕ್ ಕಂಪೆನಿಯ ಮಾಜಿ ಉದ್ಯೋಗಿ ಅರೆಸ್ಟ್

    50ಕ್ಕೂ ಹೆಚ್ಚು ಮಹಿಳೆಯರ ಮೇಲೆ ರೇಪ್: ಬೆಂಗ್ಳೂರು ಟೆಕ್ ಕಂಪೆನಿಯ ಮಾಜಿ ಉದ್ಯೋಗಿ ಅರೆಸ್ಟ್

    ಚೆನ್ನೈ: 50ಕ್ಕೂ ಹೆಚ್ಚು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದ ವ್ಯಕ್ತಿಯೊಬ್ಬನನ್ನು ಗುರುವಾರ ತಮಿಳುನಾಡಿನ ಚೆನ್ನೈ ಪೊಲೀಸರು ಬಂಧಿಸಿದ್ದಾರೆ.

    ಮದನ್ ಅರಿವಲಗನ್(28) ಬಂಧಿತ ಆರೋಪಿ. ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ ವಿಡಿಯೋ ಮಾಡಿ ಅವರನ್ನು ಬೆದರಿಸುತ್ತಿದ್ದ ವಿಚಾರವೂ ಈಗ ಬೆಳಕಿಗೆ ಬಂದಿದೆ.

    ಕೃಷ್ಣಗಿರಿ ಜಿಲ್ಲೆಯ ಮತ್ತೂರ್ ಮೂಲದ ಮದನ್ ಬಂಧಿಸಿ ಮೊಬೈಲ್ ವಶಪಡಿಸಿಕೊಂಡು ಪರಿಶೀಲಿಸಿದಾಗ ಅದರಲ್ಲಿರುವ ಹಲವು ರೇಪ್ ವಿಡಿಯೋಗಳನ್ನು ನೋಡಿ ಪೊಲೀಸರು ಶಾಕ್ ಆಗಿದ್ದಾರೆ.

    ಕೃತ್ಯ ಹೀಗೆ ಎಸಗುತ್ತಿದ್ದ:
    ಒಬ್ಬಂಟಿಯಾಗಿ ನೆಲೆಸಿರುವ ಮಹಿಳೆಯರನ್ನು ಪತ್ತೆ ಮಾಡಿ ಕಳ್ಳತನ ಮಾಡುತ್ತಿದ್ದ. ಬಳಿಕ ಬೆದರಿಸಿ ಅವರ ಮೇಲೆ ಅತ್ಯಾಚಾರ ಎಸಗುತ್ತಿದ್ದ. ಈ ವೇಳೆ ತನ್ನ ಕೃತ್ಯವನ್ನು ವಿಡಿಯೋ ಮಾಡುತ್ತಿದ್ದ. ಬಳಿಕ ಈ ವಿಡಿಯೋವನ್ನು ಇಟ್ಟುಕೊಂಡು ಮಹಿಳೆಯರ ಮೇಲೆ ದೌರ್ಜನ್ಯ ಎಸಗುತ್ತಿದ್ದ.

    ಸಿಕ್ಕಿಬಿದ್ದಿದ್ದು ಹೇಗೆ?
    ಕೆಲ ದಿನಗಳ ಹಿಂದೆ ಸಾಫ್ಟ್ ವೇರ್ ಎಂಜಿನಿಯರ್ ಒಬ್ಬರು ವ್ಯಕ್ತಿಯೊಬ್ಬ ಚಾಕು ತೋರಿಸಿ 8,500 ರೂ. ಹಣವನ್ನು ದೋಚಿದ್ದಾರೆ ಎಂದು ಎಂದು ದೂರು ನೀಡಿದ್ದರು. ಪ್ರಕರಣ ದಾಖಲಿಸಿದ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ಮದನ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಎಲ್ಲ ಕೃತ್ಯ ಬೆಳಕಿಗೆ ಬಂದಿದೆ.

    ರೇಪ್ ಎಸಗ್ತಿದ್ದಿದ್ದು ಯಾಕೆ?
    ಒಂದು ಬಾರಿ ಮನೆಗೆ ನುಗ್ಗಿ ಕಳ್ಳತನ ಮಾಡಿದ್ದ. ಈ ವೇಳೆಗೆ ಮಹಿಳೆಯನ್ನು ಬೆದರಿಸಿ ರೇಪ್ ಮಾಡಿದ್ದ. ನಂತರ ಕಳ್ಳತನ ಎಸಗಲು ಹೋಗಿ ಬೆದರಿಸಿ ರೇಪ್ ಮಾಡುವ ಕೆಟ್ಟ ಹವ್ಯಾಸವನ್ನು ಆರಂಭಿಸಿದ್ದ. ಈತನಿಂದ ಅತ್ಯಾಚಾರಕ್ಕೆ ಒಳಗಾದ ಮಹಿಳೆಯರು ಯಾರೂ ದೂರು ನೀಡದೇ ಇದ್ದ ಕಾರಣ ಕೃತ್ಯ ಬೆಳಕಿಗೆ ಬಂದಿರಲಿಲ್ಲ.

    ಬಿಎಸ್‍ಸಿ ಪದವಿಧರ:
    ಕೃಷ್ಣಗಿರಿ ಕಾಲೇಜಿನಲ್ಲಿ ಬಿಎಸ್‍ಸಿ(ಗಣಿತ) ಪದವಿ ಓದಿದ ಬಳಿಕ ಬೆಂಗಳೂರಿನ ಸಾಫ್ಟ್ ವೇರ್ ಕಂಪೆನಿಯಲ್ಲಿ ಉದೋಗ್ಯದಲ್ಲಿದ್ದ. 2015ರಲ್ಲಿ ಚೆನ್ನೈಗೆ ಬಂದಿದ್ದ ಈತ ಉದ್ಯೋಗ ಹುಡುಕುತ್ತಿದ್ದ. ಈ ವೇಳೆ ಈತನಿಗೆ ಸರಿಯಾದ ಉದ್ಯೋಗ ಸಿಗದೇ ಇದ್ದ ಕಾರಣ ಕಳ್ಳತನ ವೃತ್ತಿಗೆ ಇಳಿದು ತನ್ನ ಕಾಮ ಕೃತ್ಯವನ್ನು ಮುಂದುವರಿಸಿದ್ದ.

    ವಿಚಾರಣೆಯ ವೇಳೆ ನಾನು ಹಲವು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದೇನೆ ಎಂಬುದನ್ನು ಮದನ್ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಇದನ್ನೂ ಓದಿ: ಪಿಯು ವಿದ್ಯಾರ್ಥಿನಿಯನ್ನು ಅಪಹರಿಸಿ ಲಾಡ್ಜ್ ಗೆ ಕರೆದೊಯ್ದು 4 ಜನರಿಂದ 10 ದಿನಗಳ ಕಾಲ ನಿರಂತರ ಅತ್ಯಾಚಾರ

    ಇದನ್ನೂ ಓದಿ: ಅಪ್ರಾಪ್ತೆಯ ಮೇಲೆ ಅತ್ಯಾಚಾರಗೈದ ಕಾಮಿಯನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಿದ್ರು

     

  • ಕಟ್ಟಿಕೊಂಡವನು 4 ವರ್ಷದಿಂದ ಮಲಗದ್ದಕ್ಕೆ ಕೊಲೆ ಮಾಡ್ಸಿದ್ಳು!

    ಕಟ್ಟಿಕೊಂಡವನು 4 ವರ್ಷದಿಂದ ಮಲಗದ್ದಕ್ಕೆ ಕೊಲೆ ಮಾಡ್ಸಿದ್ಳು!

    ಬೆಂಗಳೂರು: ಮದುವೆಯಾದ ಗಂಡ ತನ್ನ ಜೊತೆಗೆ 4 ವರ್ಷದಿಂದ ಮಲಗದೇ ಇದ್ದಿದ್ದಕ್ಕೆ ಆತನನ್ನೇ ಕೊಲೆ ಮಾಡಿದ್ದ ಪತ್ನಿ ಈಗ ಅರೆಸ್ಟ್ ಆಗಿದ್ದಾಳೆ.

    ಪತಿ ಮಧುಸೂಧನ್ ಕೊಲೆ ಮಾಡಿದ್ದ ಆರೋಪದ ಹಿನ್ನೆಲೆಯಲ್ಲಿ ಪತ್ನಿ ನೀಲಾಳನ್ನು ರಾಜಗೋಪಾಲನಗರ ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಈ ಕೃತ್ಯಕ್ಕೆ ಸಹಕಾರ ನೀಡಿದ ಆರೋಪದಡಿ ಪ್ರದೀಪ್, ರಂಜಿತ್, ಹರಿಪ್ರಸಾದ್ ರನ್ನು ಪೊಲೀಸರು ಬಂಧಿಸಿದ್ದಾರೆ.

    ಏನಿದು ಪ್ರಕರಣ?
    ನೀಲಾಳಿಗೆ ಪ್ರದೀಪ್ ಎಂಬಾತನ ಜೊತೆ ಅಕ್ರಮ ಸಂಬಂಧವಿತ್ತು. ಹೀಗಾಗಿ ಗಂಡ ಮಧುಸೂಧನ್ ಮುಗಿಸಿಲು ಪ್ಲಾನ್ ಮಾಡಿದ್ದಳು. ಅದರಂತೆ ಅಕ್ಟೋಬರ್ 12 ರ ರಾತ್ರಿ ಮಧುಸೂಧನ್ ನನ್ನ ಕ್ಯಾಂಟರ್ ನಲ್ಲಿ ಪ್ರದೀಪ್ ಕರೆದೊಯ್ದಿದ್ದ. ದಾರಿ ಮಧ್ಯೆ ಸ್ನೇಹಿತರಾದ ರಂಜಿತ್ ಮತ್ತು ಹರಿಪ್ರಸಾದನನ್ನು ಕ್ಯಾಂಟರ್ ಗೆ ಹತ್ತಿಸಿಕೊಂಡಿದ್ದ ಪ್ರದೀಪ್ ಮಧುಸೂಧನ್ ಗೆ ಚೆನ್ನಾಗಿ ಮದ್ಯ ಕುಡಿಸಿದ್ದ.

    ರಾಜ್ ಕುಮಾರ್ ಸಮಾಧಿ ಬಳಿ ಕ್ಯಾಂಟರ್ ನಿಲ್ಲಿಸಿ ಪ್ರದೀಪ್ ಎಲ್ಲರ ಜೊತೆ ಮಲಗೋಣ ಎಂದು ಹೇಳಿದ್ದಾನೆ. ಮಧುಸೂಧನ್ ಮಲಗುತ್ತಿದ್ದ ಹಾಗೆ ಆರೋಪಿಗಳು ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಬಳಿಕ ಕೆಂಗೇರಿ ಬಳಿಯ ರಾಜಕಾಲುವೆಗೆ ಶವ ಎಸೆದು ಪರಾರಿಯಾಗಿದ್ದರು.

    ಪ್ರಿಯತಮೆ ನೀಲಾಳಿಗೆ ಪ್ರದೀಪ್ ನಿನ್ನ ಗಂಡನನ್ನು ಕೊಲೆ ಮಾಡಿದ್ದೇವೆ ಎಂದು ಕರೆ ಮಾಡಿ ವಿಚಾರ ತಿಳಿಸಿದ್ದ. ಮರುದಿನ ರಾಜಗೋಪಾಲನಗರ ಪೊಲೀಸ್ ಠಾಣೆಗೆ ಹೋಗಿದ್ದ ನೀಲಾ ಗಂಡ ಕಾಣಿಸುತ್ತಿಲ್ಲ ಎಂದು ನಾಪತ್ತೆ ದೂರು ನೀಡಿದ್ದಳು. ಆರೋಪಿಗಳ ಜಾಡು ಹಿಡಿದ ಪೊಲೀಸರು ಈಗ ನಾಲ್ವರನ್ನು ಬಂಧಿಸಿದ್ದಾರೆ.

    ವಿಚಾರಣೆ ವೇಳೆ ನನ್ನ ಗಂಡ ನಾಲ್ಕು ವರ್ಷದಿಂದ ಜೊತೆಯಲ್ಲಿ ಮಲಗುತ್ತಿರಲಿಲ್ಲ. ಹೀಗಾಗಿ ಕೊಲೆ ಮಾಡಿಸಿದ್ದೇನೆ ಎಂದು ನೀಲಾ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾಳೆ.