Tag: crime

  • ಎರಡು ಮಕ್ಕಳೊಂದಿಗೆ ತಾಯಿ ಸಾವು – ಗಂಡ, ಕುಟುಂಬಸ್ಥರ ಬಂಧನ ಆಗೋವರೆಗೂ ಶವಸಂಸ್ಕಾರ ಮಾಡೋಲ್ಲ

    ಎರಡು ಮಕ್ಕಳೊಂದಿಗೆ ತಾಯಿ ಸಾವು – ಗಂಡ, ಕುಟುಂಬಸ್ಥರ ಬಂಧನ ಆಗೋವರೆಗೂ ಶವಸಂಸ್ಕಾರ ಮಾಡೋಲ್ಲ

    ಬೆಳಗಾವಿ: ಎರಡು ಮಕ್ಕಳೊಂದಿಗೆ ತಾಯಿ ಸಾವು ಪ್ರಕರಣ ಗಂಡ ಮತ್ತು ಕುಟುಂಬಸ್ಥರ ಬಂಧನ ಆಗುವವರೆಗೂ ಶವಸಂಸ್ಕಾರ ಮಾಡುವುದಿಲ್ಲ ಎಂದು ಮೃತ ಮಹಿಳೆಯ ಕುಟುಂಬಸ್ಥರು ಪಟ್ಟು ಹಿಡಿದು ಕುಳಿತಿದ್ದಾರೆ.

    ನಗರದ ಬೀಮ್ಸ್ ಆಸ್ಪತ್ರೆಯ ಶವಗಾರದ ಬಳಿ ಬಂದ ಮೃತ ಕೃಷಾ ಕುಟುಂಬಸ್ಥರು ಆಕೆಯ ಗಂಡ ಮತ್ತು ಆತನ ಕುಟುಂಬಸ್ಥರ ವಿರುದ್ಧ ಕೊಲೆ ಆರೋಪ ಮಾಡಿದ್ದಾರೆ. ಅಲ್ಲದೇ ಗಂಡ ಮತ್ತು ಕುಟುಂಬಸ್ಥರ ಬಂಧನ ಆಗುವವರೆಗೂ ಶವ ಪಡೆಯುವುದಿಲ್ಲ ಎಂದು ಪಟ್ಟುಹಿಡಿದ್ದಾರೆ. ಹೀಗಾಗಿ ಮೂರು ದಿನಗಳಿಂದ ಬಿಮ್ಸ್ ಶವಗಾರದಲ್ಲೇ ತಾಯಿ ಮತ್ತು ಕಂದಮ್ಮಗಳ ಮೃತ ದೇಹ ಇದ್ದು ನಿನ್ನೆ ದಿನ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಮೃತಳ ಕುಟುಂಬಸ್ಥರು ದೂರು ನೀಡಿದ್ದಾರೆ. ಇದಲ್ಲದೇ ದೂರು ನೀಡದಂತೆ, ಶವಗಳನ್ನು ತೆಗೆದುಕೊಂಡು ಹೋಗುವಂತೆ ಕೆಲವರಿಂದ ನಮ್ಮ ಮೇಲೆ ಒತ್ತಡ ಹೇರಲಾಗುತ್ತಿದೆ. ಹೀಗಾಗಿ ನ್ಯಾಯ ಕೊಡಿಸುವಂತೆ ಮೃತ ಕೃಷಾ ಕುಟುಂಬಸ್ಥರು ಇಂದು ಬಿಮ್ಸ್ ಆಸ್ಪತ್ರೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವೇಳೆ ಕೊಲೆ ಆರೋಪಿಗಳನ್ನು ಬಂಧಿಸಿ ನಮಗೆ ನ್ಯಾಯ ಕೊಡಿಸಿ ಅಂತ ಘೋಷಣೆ ಕೂಗಿದ್ದಾರೆ. ಇದನ್ನೂ ಓದಿ: ಆಸ್ತಿ ವಿವಾದ – ಗರ್ಭಿಣಿ ಸೇರಿದಂತೆ ಮೂವರನ್ನು ಬೆಂಕಿಗೆ ಹಾಕಿದ ದುರುಳರು

    ಪ್ರಕರಣದ ಹಿನ್ನೆಲೆ
    ಫೆಬ್ರವರಿ 11ರಂದು ಬೆಳಗಾವಿಯ ಹಿಂಡಲಗಾ ಗಣಪತಿ ದೇವಸ್ಥಾನ ಕೆರೆಯಲ್ಲಿ ಎರಡು ಮಕ್ಕಳೊಂದಿಗೆ ತಾಯಿಯ ಮೃತದೇಹ ಕೆರೆಯಲ್ಲಿ ಪತ್ತೆ ಆಗಿತ್ತು. ತಾಯಿ ಕೃಷಾ(36), ಮಕ್ಕಳಾದ ವಿರೇನ್(7), ಭಾವೀರ್(4) ಕೆರೆಯಲ್ಲಿ ಶವ ಪತ್ತೆಯಾಗಿದ್ದವು. ಈ ವೇಳೆ ಹೆಂಡತಿ ಮಕ್ಕಳ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಗಂಡ ಮತ್ತು ಕುಟುಂಬಸ್ಥರು ಎಸ್ಕೇಪ್ ಆಗಿದ್ದಾರೆ. ಇದನ್ನೂ ಓದಿ: ಮಕ್ಕಳ ಜೊತೆ ಕೆರೆಗೆ ಹಾರಿದ ತಾಯಿ – ಶವವಾಗಿ ಪತ್ತೆ!

  • ಚಲಿಸುತ್ತಿದ್ದ ರೈಲಿಗೆ ನೂಕಿ ಮಹಿಳೆಯ ಹತ್ಯೆ – ನಾನು ದೇವರು ಎಂದ ಆರೋಪಿ

    ಚಲಿಸುತ್ತಿದ್ದ ರೈಲಿಗೆ ನೂಕಿ ಮಹಿಳೆಯ ಹತ್ಯೆ – ನಾನು ದೇವರು ಎಂದ ಆರೋಪಿ

    ವಾಷಿಂಗ್ಟನ್: ಚಲಿಸುತ್ತಿದ್ದ ರೈಲಿನ ಮುಂಭಾಗಕ್ಕೆ ಮಹಿಳೆಯೊಬ್ಬರನ್ನು ನೂಕಿದ್ದ ಕಾರಣ ಆಕೆ ಸಾವನ್ನಪ್ಪಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ನಾನು ದೇವರು. ನಾನು ಇದನ್ನು ಮಾಡಬಹುದು ಎಂಬ ಹೇಳಿಕೆ ನೀಡಿದ್ದು, ಮಾನಸಿಕ ಅಸ್ವಸ್ಥನೆಂದು ಹೇಳಲಾಗುತ್ತಿದೆ.

    ಶನಿವಾರ ನ್ಯೂಯಾರ್ಕ್ನ ಟೈಮ್ಸ್ ಸ್ಕ್ವೇರ್ ಸುರಂಗಮಾರ್ಗ ರೈಲು ನಿಲ್ದಾಣದಲ್ಲಿ ಚಲಿಸುತ್ತಿದ್ದ ರೈಲಿನ ಎದುರು 40 ವರ್ಷದ ಏಷ್ಯನ್ ಮಹಿಳೆಯನ್ನು ಸೈಮನ್ ಮಾರ್ಷಲ್ ಎಂಬ ವ್ಯಕ್ತಿ ತಳ್ಳಿದ್ದ. ಇದರಿಂದ ಮಹಿಳೆ ರೈಲಿಗೆ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಳು. ಇದನ್ನೂ ಓದಿ: ಮೆಟ್ರೋ ರೈಲ್ವೆ ಹಳಿಗೆ ತಳ್ಳಿದ ವ್ಯಕ್ತಿ – ಕೂದಲೆಳೆ ಅಂತರದಲ್ಲಿ ಮಹಿಳೆ ಪಾರು

    ಕೊಲೆಯ ಸ್ಥಳದಿಂದ ವ್ಯಕ್ತಿ ಪಲಾಯನಗೈದಿದ್ದು, ನಂತರ ಒಂದು ಗಂಟೆಯ ಬಳಿಕ ಪೊಲೀಸರು ಆತನನ್ನು ಬಂಧಿಸಿದ್ದರು. ವರದಿಗಳ ಪ್ರಕಾರ ಆರೋಪಿ, ಮಾನಸಿಕ ಅಸ್ವಸ್ಥ ಎಂದು ತಿಳಿದು ಬಂದಿದೆ. ಈ ಹಿಂದೆಯೂ ಆತ ದರೋಡೆ ಪ್ರಕರಣದಲ್ಲಿ 2 ವರ್ಷಗಳ ಜೈಲು ಶಿಕ್ಷೆ ಅನುಭವಿಸಿದ್ದ. ನಂತರ 2021ರ ಆಗಸ್ಟ್‌ನಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದ ಎನ್ನಲಾಗಿದೆ. ಇದನ್ನೂ ಓದಿ: ಅಬುಧಾಬಿ ವಿಮಾನ ನಿಲ್ದಾಣದ ಮೇಲೆ ಡ್ರೋನ್ ದಾಳಿ – ಇಬ್ಬರು ಭಾರತೀಯರು ಸಾವು

    ಪೊಲೀಸರು ಆರೋಪಿಯನ್ನು ಪ್ರಶ್ನಿಸಿದಾಗ ಆತ ನಾನು ದೇವರು. ನಾನು ಇದನ್ನು ಮಾಡಬಲ್ಲೆ ಎಂದು ಉತ್ತರಿಸಿದ್ದಾನೆ.

  • ಕೆಲಸಕ್ಕಿದ್ದ ಅಂಗಡಿಯಲ್ಲೇ 30 ಲಕ್ಷ ದೋಚಿದ ಖತರ್ನಾಕ್‌ – ಮಾಲೀಕನಿಗೆ ಪಂಗನಾಮ

    ಕೆಲಸಕ್ಕಿದ್ದ ಅಂಗಡಿಯಲ್ಲೇ 30 ಲಕ್ಷ ದೋಚಿದ ಖತರ್ನಾಕ್‌ – ಮಾಲೀಕನಿಗೆ ಪಂಗನಾಮ

    ಬೆಂಗಳೂರು: ಕೆಲಸಕ್ಕೆ ಇದ್ದ ಅಂಗಡಿಯಲ್ಲೇ 30 ಲಕ್ಷ ರೂಪಾಯಿ ದೋಚಿ ಕೆಲಸಗಾರ ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ರಾಜಸ್ಥಾನ ಮೂಲದ ಗಣೇಶ್ ಹಣದೊಂದಿಗೆ ಪರಾರಿಯಾದ ವ್ಯಕ್ತಿಯಾಗಿದ್ದಾನೆ. ಎಲೆಕ್ಟ್ರಿಕಲ್ ಅಂಗಡಿಯಲ್ಲಿ ಕೆಲಸಕ್ಕಿದ್ದ ಹೊರರಾಜ್ಯದ ಈತ, ಮಾಲೀಕ ಇಲ್ಲದ ಸಮಯದಲ್ಲಿ ಅಂಗಡಿಯಲ್ಲಿದ್ದ 30 ಲಕ್ಷ ರೂ. ಹಣವನ್ನು ಕದ್ದು ಪರಾರಿಯಾಗಿದ್ದಾನೆ.

    MONEY

    ಅಂಗಡಿ ಮಾಲೀಕ ಜಯಚಂದ್ರ ಅವರು ಹೇಳುವ ಪ್ರಕಾರ, ಬಿವಿಕೆ ಐಯ್ಯಂಗಾರ್ ರಸ್ತೆಯ ಮುರುದಾರ್ ಎಲೆಕ್ಟ್ರಿಕಲ್ ಅಂಗಡಿಯಲ್ಲಿ ಆರೋಪಿ ಗಣೇಶ್ ಕಳೆದ ಆರೇಳು ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದ. ಕೆಲವು ದಿನಗಳಿಂದ ಗಣೇಶ್ ಕಾಣಿಸುತ್ತಿರಲಿಲ್ಲ.  ನಾನು ಆತ ವಾಪಸ್ ಬರಬಹುದು ಎಂದು ನೋಡಿದೆ. ಆದರೆ ಒಂದು ವಾರದಿಂದ ಆತ ಪತ್ತೆಯಾಗಿಲ್ಲ, ಸಂಪರ್ಕಕ್ಕೂ ಸಿಗಲಿಲ್ಲ. ಆಗ ಅನುಮಾನಗೊಂಡು ಅಂಗಡಿಯಲ್ಲಿ ಇಟ್ಟಿದ್ದ ಹಣವನ್ನು ನೋಡಿದೆ, ಹಣ ಕಾಣಿಸಲಿಲ್ಲ. ನಾನು ಅಂಗಡಿಯಲ್ಲಿ ಇಟ್ಟಿದ್ದ 30 ಲಕ್ಷ ರೂಪಾಯಿ ನಗದನ್ನು ಡಿ.21ರಂದು ನಾನು ಇಲ್ಲದ ಸಮಯವನ್ನು ನೋಡಿ ಕದ್ದು ಪರಾರಿಯಾಗಿದ್ದಾನೆ ಎಂದು ದೂರಿದ್ದಾರೆ.

    ಎಲೆಕ್ಟ್ರಿಕಲ್ ಅಂಗಡಿ ಮಾಲೀಕ ಜಯಚಂದ್ರ ನೀಡಿದ ದೂರಿನ ಮೇರೆಗೆ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ. ಒಂದು ತಂಡ ಆರೋಪಿಯ ಜಾಡು ಹಿಡಿದು ರಾಜಸ್ಥಾನಕ್ಕೆ ಹೋಗಿದೆ. ಆರೋಪಿಯ ಪತ್ತೆಗೆ ಶೋಧಕಾರ್ಯ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿದ್ದಾರೆ.

  • ಜೆಸಿಬಿಗೆ ಬಲಿಯಾದ ಮೂರು ವರ್ಷದ ಮಗು

    ಜೆಸಿಬಿಗೆ ಬಲಿಯಾದ ಮೂರು ವರ್ಷದ ಮಗು

    ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದ ಕೆಲಸದ ವೇಳೆ ಜೆಸಿಬಿಗೆ ಮೂರು ವರ್ಷದ ಮಗು ಬಲಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಸಿಮಿಯಾನ್(3) ಮೃತನಾಗಿದ್ದಾನೆ. ನಿರ್ಮಾಣ ಹಂತದ ಕಟ್ಟಡದ ಕೆಲಸದ ವೇಳೆ ಜೆಸಿಬಿ ಚಾಲಕನ ಅಚಾತುರ್ಯದಿಂದಾಗಿ ಈ ಅವಘಡ ಸಂಭವಿಸಿದೆ.

    ಮುಂಜಾನೆ 5 ಗಂಟೆ ಸುಮಾರಿಗೆ ತಂದೆ ಡೇವಿಡ್ ಮೂರು ವರ್ಷದ ಮಗು ಸಿಮಿಯಾನ್ ಕರೆದುಕೊಂಡು ಹೋಗುತ್ತಿದ್ದರು. ಹಿಂಬದಿ ಇಂದ ಜೆಸಿಬಿ ಚಾಲನೆ ಮಾಡಿಕೊಂಡು ಬಂದಿರುವ ಚಾಲಕ ಮಗವಿನ ಮೇಲೆ ಹತ್ತಿಸಿದ್ದಾನೆ. ಈ ಘಟನೆ ಉಪ್ಪಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಜೆಸಿಬಿ ಚಾಲಕ ಶಂಕರ್ ನಾಯಕ್ ನನ್ನ ವಶಕ್ಕೆ ಪಡೆದ್ದಿದ್ದಾರೆ.

  • ತಾಯಿ ಮೇಲೆ ಹಲ್ಲೆ ಮಾಡಿದನೆಂದು  ಸಂಬಂಧಿಯನ್ನೇ  ಕೊಂದ ಬಾಲಕಿಯರು!

    ತಾಯಿ ಮೇಲೆ ಹಲ್ಲೆ ಮಾಡಿದನೆಂದು  ಸಂಬಂಧಿಯನ್ನೇ  ಕೊಂದ ಬಾಲಕಿಯರು!

    ತಿರುವನಂತಪುರಂ: ತಮ್ಮ ತಾಯಿಯ ಮೇಲೆ ಹಲ್ಲೆಗೆ ಯತ್ನಿಸಿದ 70 ವರ್ಷದ ವ್ಯಕ್ತಿಯನ್ನು ಬಾಲಕಿಯರು ಕೊಲೆ ಮಾಡಿದ ಘಟನೆ ಕೇರಳದ ವಯನಾಡ್ ಜಿಲ್ಲೆಯ ಅಂಬಲವಾಯಲ್ ಪ್ರದೇಶದಲ್ಲಿ ನಡೆದಿದೆ.

    ಮಹಮ್ಮದ್ ಕೋಯಾ (70) ಮೃತ ದುರ್ದೈವಿ. ತಮ್ಮ ತಾಯಿಗೆ ಹೊಡೆಯಲು ಬಂದಾಗ ಬಾಲಕಿಯರು ಮೊದಲಿಗೆ ತಡೆಯಲು ಮುಂದಾಗಿದ್ದಾರೆ. ತಡೆಯಲು ಎಷ್ಟೇ ಪ್ರಯತ್ನಿಸಿದರೂ ವ್ಯಕ್ತಿ ಹೊಡೆಯುವುದನ್ನು ನಿಲ್ಲಿಸಿರಲಿಲ್ಲ. ಇದರಿಂದ ಕೋಪಗೊಂಡ ಹುಡುಗಿಯರು ಕೋಯಾನನ್ನು ಕೊಡಲಿಯಿಂದ ಹೊಡೆದು ಕೊಂದು ಶವವನ್ನು ಬಾವಿಗೆ ಎಸೆದಿದ್ದಾರೆ.  ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಮಹಡಿಯಿಂದ ಬಿದ್ದ ಎಂಬಿಬಿಎಸ್ ವಿದ್ಯಾರ್ಥಿ!

    ಘಟನೆಯ ಬಳಿಕ ಬಾಲಕಿಯರು ವ್ಯಕ್ತಿಯನ್ನು ಕೊಂದಿರುವುದಾಗಿ ಪೊಲೀಸರ ಬಳಿ ಶರಣಾಗಿದ್ದಾರೆ. ನಂತರ ಶವವನ್ನು ಬಾವಿಯಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಎರಡೂ ಕುಟುಂಬದವರು ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ಮನೆಯಲ್ಲಿ ಪ್ರತಿದಿನವೂ ಜಗಳ ನಡೆಯುತ್ತಿತ್ತು ಎಂದು ನೆರೆಹೊರೆಯವರು ಹೇಳಿದ್ದಾರೆ. ಈ  ಸಂಬಂಧ  ವಯನಾಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: 6 ದಿನದ ಹೆಣ್ಣು ಮಗುವನ್ನು ಗುಟ್ಟಾಗಿ ಸಮಾಧಿ ಮಾಡಿ ದಂಪತಿ ಎಸ್ಕೇಪ್!

  • ತಾಯಿಯ ಸಮಾಧಿಯನ್ನು ಅಗೆದು ಶವವನ್ನು ಮನೆಯಲ್ಲಿಟ್ಟ ಮಗ ಅರೆಸ್ಟ್

    ತಾಯಿಯ ಸಮಾಧಿಯನ್ನು ಅಗೆದು ಶವವನ್ನು ಮನೆಯಲ್ಲಿಟ್ಟ ಮಗ ಅರೆಸ್ಟ್

    ಚೆನ್ನೈ: ತಾಯಿಯ ಸಮಾಧಿಯನ್ನು ಅಗೆದು ಶವವನ್ನು ಮನೆಯಲ್ಲಿಟ್ಟಿದ್ದ ಮಗನನ್ನು ಕುನ್ನಂ ಪೊಲೀಸರು ಬಂಧಿಸಿದ್ದಾರೆ.

    ವಿ ಬಾಲಮುರುಗನ್ (38)  ಕುನ್ನಂ ಸಮೀಪದ ಪರವೈ ಗ್ರಾಮದ ನಿವಾಸಿಯಾಗಿದ್ದು, ತನ್ನ ತಾಯಿಯ ಸಮಾಧಿಯನ್ನು ರಹಸ್ಯವಾಗಿ ಅಗೆದು ಆಕೆಯ ಶವವನ್ನು ಮನೆಗೆ ತಂದು ರಕ್ಷಿಸಿದ್ದಾನೆ ಎಂದು ವರದಿಯಾಗಿದೆ. ಇದನ್ನೂ ಓದಿ: ನಾನು ದೊಡ್ಡ ದೊಡ್ಡ ಪೋಲಿ ಆಟವನ್ನು ಆಡಿ ಬಂದವನು: ಹಂಸಲೇಖ

    ಬಾಲಮುರುಗನ್ ತಾಯಿ ದೀರ್ಘಕಾಲದ ಅನಾರೋಗ್ಯದಿಂದ ಹತ್ತು ತಿಂಗಳ ಹಿಂದೆ ನಿಧನರಾಗಿದ್ದರೆ ತಂದೆ ಹತ್ತು ವರ್ಷಗಳ ಹಿಂದೆ ನಿಧನರಾಗಿದ್ದರು.

    ಮುರುಗನ್ ಅವಿವಾಹಿತ ಮತ್ತು ನಿರುದ್ಯೋಗಿಯಾಗಿರುವುದರಿಂದ ಅವನ ಪೋಷಕರು ಅವನನ್ನು ನೋಡಿಕೊಳ್ಳುತ್ತಿದ್ದರು. ಪೋಷಕರ ನಿಧನದ ನಂತರ ಅವನು ಆಗಾಗ ಗ್ರಾಮದಲ್ಲಿರುವ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಸಮಾಧಿಯೊಂದಿಗೆ ಮಾತನಾಡುತ್ತಿದ್ದನು ಎಂದು ಗ್ರಾಮಸ್ಥರು ಹೇಳಿದ್ದಾರೆ.

    ಮಾನಸಿಕವಾಗಿ ಅಸ್ವಸ್ಥನಾಗಿರುವ ಮುರುಗನ್ ಅವನು ಈ ಹಿಂದೆ ತನ್ನ ತಾಯಿಯ ಶವವನ್ನು ಹೊರತೆಗೆಯಲು ಪ್ರಯತ್ನಿಸಿದ್ದ. ಆದರೆ ಸ್ಥಳೀಯರು ಮಧ್ಯಪ್ರವೇಶಿಸಿ ಅವನನ್ನು ಸಮಾಧಿ ಸ್ಥಳದಲ್ಲಿ ತಡೆದಿದ್ದರು. ಇದನ್ನೂ ಓದಿ:  ಡಿಸೆಂಬರ್ 31ರ ಕರ್ನಾಟಕ ಬಂದ್ ಗೆ ಬೆಳಗಾವಿಯಲ್ಲೇ ಬೆಂಬಲ ಇಲ್ಲ: ಅಶೋಕ್ ಚಂದರಗಿ 

    ಈಗ ಆತನ ಸಂಬಂಧಿಕರೊಬ್ಬರು ರಾತ್ರಿ ಊಟಕ್ಕೆ ಊಟ ಕೊಡಲು ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಅವನ ಮನೆಯಿಂದ ದುರ್ವಾಸನೆ ಬರುತ್ತಿದ್ದಂತೆ ಸಂಬಂಧಿಕರಿಗೆ ಅನುಮಾನ ಬಂದಿದ್ದು ಕುನ್ನಂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಾವು ಈ ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಕುನ್ನಂ ಪೊಲೀಸರು ತಿಳಿಸಿದ್ದಾರೆ.

  • ಆದಿತ್ಯಾ ಠಾಕ್ರೆಗೆ ಬೆದರಿಕೆ – ಬೆಂಗಳೂರು ವ್ಯಕ್ತಿ ಬಂಧನ

    ಆದಿತ್ಯಾ ಠಾಕ್ರೆಗೆ ಬೆದರಿಕೆ – ಬೆಂಗಳೂರು ವ್ಯಕ್ತಿ ಬಂಧನ

    ಮುಂಬೈ: ಮಹಾರಾಷ್ಟ್ರ ಕ್ಯಾಬಿನೆಟ್ ಸಚಿವ ಆದಿತ್ಯಾ ಠಾಕ್ರೆಗೆ ಬೆದರಿಕೆ ಹಾಕಿದ ವ್ಯಕ್ತಿಯನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ.

    ಜೈ ಸಿಂಗ್ ರಜಪೂತ್ ಬಂಧಿತ ಆರೋಪಿ. ಡಿಸೆಂಬರ್ 18 ರಂದು ಆ ಆರೋಪಿಯನ್ನು ಬಂಧಿಸಿ ಮುಂಬೈಗೆ ಕರೆ ತಂದಿದ್ದೇವೆ ಎಂದು ಮುಂಬೈ ಅಪರಾಧ ವಿಭಾಗದ ಸೈಬರ್ ತಂಡ ತಿಳಿಸಿದೆ. ಇದನ್ನೂ ಓದಿ: ರಾಜ್ಯದಲ್ಲಿ ಮುಂದುವರಿದ ಓಮಿಕ್ರಾನ್‌ ಸ್ಫೋಟ – ಇಂದು ಒಂದೇ ದಿನ 12 ಪ್ರಕರಣ ದೃಢ

    ಮಹಾರಾಷ್ಟ್ರ ಕ್ಯಾಬಿನೆಟ್ ಮಂತ್ರಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಮುಂಬೈ ಪೊಲೀಸರು ಆ ವ್ಯಕ್ತಿಯನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಡಿಸೆಂಬರ್ 23 ರಂದು ತಿಳಿಸಿದ್ದಾರೆ.

    ಆದಿತ್ಯಾ ಠಾಕ್ರೆ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆಯವರ ಮಗನಾಗಿದ್ದು, ಆರೋಪಿಯು ಡಿಸೆಂಬರ್ 8 ರಂದು ಆದಿತ್ಯ ಠಾಕ್ರೆಗೆ ಕರೆ ಮಾಡಿದ್ದಾನೆ. ಆದರೆ ಆ ಕರೆಯನ್ನು ಅವರು ತೆಗೆದಿಲ್ಲ. ನಂತರದಲ್ಲಿ ಆರೋಪಿಯು ಸಚಿವರಿಗೆ ಬೆದರಿಕೆಯ ಸಂದೇಶಗಳನ್ನು ಕಳುಹಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ರಾಷ್ಟಮಟ್ಟದ ಸ್ಕೇಟಿಂಗ್ – ಏಕಾಂಶ್ ಕುಮಾರ್‌ಗೆ 1 ಬೆಳ್ಳಿ, 1 ಕಂಚಿನ ಪದಕ

    ಸೈಬರ್ ಪೊಲೀಸ್ ತಂಡವು ತನಿಖೆ ನಡೆಸಿದಾಗ ಆರೋಪಿಯು ಬೆಂಗಳೂರಿನಿಂದ ಕರೆ ಮಾಡಿರುವುದು ಗೊತ್ತಾಗಿದೆ. ಈ ಆಧಾರದಲ್ಲಿ ಜಾಡು ಹಿಡಿದು ಬೆಂಗಳೂರಿನಲ್ಲಿ ಬಂಧಿಸಿದಾರೆ. ಆ ವ್ಯಕ್ತಿಯನ್ನು ಹುಡುಕಿಕೊಂಡು ಪೊಲೀಸರು ಬೆಂಗಳೂರಿಗೆ ಬಂದಿದ್ದಾರೆ ಎಂದರು.

    ಆರೋಪಿಯನ್ನು ಕೋರ್ಟ್ ಪೊಲೀಸ್ ಕಸ್ಟಡಿಗೆ ನೀಡಿದೆ. ವಿಚಾರಣೆಯ ಸಮಯದಲ್ಲಿ ಆರೋಪಿಯು ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ರವರ ಅಭಿಮಾನಿಯಾಗಿರುವ ವಿಚಾರ ತಿಳಿದು ಬಂದಿದೆ.

  • ಪತ್ನಿ ಜೊತೆಗಿನ ಜೀವನ ನರಕವಾಗಿದೆ, ನಾನು ಜೈಲಲ್ಲೇ ಇರ್ತೀನಿ- ಪೊಲೀಸರಿಗೆ ವ್ಯಕ್ತಿ ಮನವಿ

    ಪತ್ನಿ ಜೊತೆಗಿನ ಜೀವನ ನರಕವಾಗಿದೆ, ನಾನು ಜೈಲಲ್ಲೇ ಇರ್ತೀನಿ- ಪೊಲೀಸರಿಗೆ ವ್ಯಕ್ತಿ ಮನವಿ

    ರೋಮ್: ಈ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಹೆಣ್ಣಿನ ಮೇಲೆ ಒಂದಿಲ್ಲೊಂದು ದೌರ್ಜನ್ಯಗಳಾಗುತ್ತಿರುತ್ತವೆ. ಹೆಣ್ಣಿನ ಮೇಲೆ ಪುರುಷ ತಮ್ಮ ಪ್ರಾಬಲ್ಯ ಸಾಧಿಸುತ್ತಿದ್ದಾನೆ. ಮನೆಯಲ್ಲೂ ಸಹ ಆಕೆಯನ್ನು ಹೆದರಿಸಿ, ಬೆದರಿಸಿ ಹದ್ದುಬಸ್ತಿನಲ್ಲಿಟ್ಟಿರುತ್ತಾನೆ. ತಾನು ಹಾಕಿದ ಗೆರೆ ದಾಟುವಂತಿಲ್ಲ ಎಂಬ ಷರತ್ತುಗಳನ್ನೂ ವಿಧಿಸುತ್ತಾನೆ ಎಂಬುದು ವಾಡಿಕೆ. ಆದರೆ ಇದಕ್ಕೆ ಅಪವಾದವೆಂಬಂತೆ ಇಟಲಿಯಲ್ಲಿ ಒಂದು ಅಚ್ಚರಿ ಘಟನೆ ನಡೆದಿದೆ.

    HUSBAND WIFE FIGHT

    ಡ್ರಗ್ಸ್ ಸಂಬಂಧಿಸಿದ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಇಟಲಿಯ ವ್ಯಕ್ತಿಯೊಬ್ಬ ಈಗ ತಾನು ಮನೆಗೆ ಹೋಗಲು ನಿರಾಕರಿಸಿದ್ದಾನೆ. “ನನ್ನನ್ನು ಜೈಲಿನಲ್ಲೇ ಬಂಧಿಸಿ, ಮನೆಗೆ ಕಳುಹಿಸಬೇಡಿ” ಎಂದು ಪೊಲೀಸರಿಗೆ ದುಂಬಾಲು ಬಿದ್ದಿದ್ದಾನೆ. ಪೊಲೀಸರು ಹಲವು ಬಾರಿ ಮನವರಿಕೆ ಮಾಡಿದರೂ ಪ್ರಯೋಜನವಾಗಿಲ್ಲ. ಇದನ್ನೂ ಓದಿ: ನಟಿಯರಿಗೆ ಸಂಕಷ್ಟ: ಎಫ್‌ಎಸ್‌ಎಲ್‌ ವರದಿಯಲ್ಲಿ ಡ್ರಗ್ಸ್‌ ಸೇವನೆ ಸಾಬೀತು

    ನನ್ನ ಪತ್ನಿಯೊಂದಿಗೆ ಮನೆಯಲ್ಲಿ ಇರಲು ಇಷ್ಟ ಇಲ್ಲ. ನಾನು ಜೈಲಿನಲ್ಲೇ ಇರುತ್ತೇನೆ ಎಂದು ವ್ಯಕ್ತಿ ಹಠ ಹಿಡಿದಿದ್ದಾನೆ. ಆತನ ಮನವಿ ಪೊಲೀಸರಲ್ಲಿ ಅಚ್ಚರಿ ಮೂಡಿಸಿದೆ.

    ಗೈಡೋನಿಯಾ ಮಾಂಟೆಸೆಲಿಯೊದಲ್ಲಿ ವಾಸವಾಗಿರುವ 30 ವರ್ಷದ ಅಲ್ಬೇನಿಯನ್ ಎಂಬ ವ್ಯಕ್ತಿ ಇದೇ ಶನಿವಾರ (ಅ.23) ರಂದು ಪೊಲೀಸ್ ಠಾಣೆಗೆ ಆಗಮಿಸಿ, “ಇನ್ನು ಮುಂದೆ ನನ್ನ ಹೆಂಡತಿಯೊಂದಿಗೆ ಗೃಹ ಬಂಧನದಲ್ಲಿ ಇರುವುದಿಲ್ಲ. ಹೆಂಡತಿಯೊಂದಿಗೆ ಬಲವಂತದ ಜೀವನ ನಡೆಸಲು ಸಾಧ್ಯವಿಲ್ಲ” ಎಂದು ಮನವಿ ಮಾಡಿದ್ದಾನೆ ಎಂದು ಕ್ಯಾರಾಬಿನಿಯೇರಿ ಪೊಲೀಸರು ತಿಳಿಸಿದ್ದಾರೆ.

    DRUGS

    “ಈ ವ್ಯಕ್ತಿ ಮಾದಕ ವಸ್ತುಗಳಿಗೆ ಸಂಬಂಧಿಸಿದ ಅಪರಾಧ ಪ್ರಕರಣಗಳಲ್ಲಿ ಗೃಹಬಂಧನದಲ್ಲಿದ್ದನು. ಅವನ ಶಿಕ್ಷೆಯ ಅವಧಿ ಇನ್ನೂ ಮುಗಿದಿಲ್ಲ” ಎಂದು ಟಿವೊಲಿ ಕ್ಯಾರಾಬಿನಿಯೇರಿಯ ಕ್ಯಾಪ್ಟನ್ ಫ್ರಾನ್ಸಿಸ್ಕೊ ಜಿಯಾಕೊಮೊ ಫೆರಾಂಟೆ ಹೇಳಿದ್ದಾರೆ. ಇದನ್ನೂ ಓದಿ: ಪೆಗಾಸಸ್ ಮೂಲಕ ಗೂಢಚರ್ಯೆ ಆರೋಪ – ತನಿಖೆಗೆ ಸಮಿತಿ ರಚಿಸಿದ ಸುಪ್ರೀಂಕೋರ್ಟ್

    “ನನ್ನ ಮನೆ ಜೀವನ ನರಕವಾಗಿದೆ. ನಾನು ಅಲ್ಲಿಗೆ ಹೋಗಲು ಬಯಸುವುದಿಲ್ಲ. ನಾನು ಜೈಲಿಗೆ ಹೋಗುತ್ತೇನೆ” ಎಂದು ಪೊಲೀಸರಲ್ಲಿ ಆ ವ್ಯಕ್ತಿ ಮನವಿ ಮಾಡಿದ್ದಾನೆ.

    ಮನೆಗೆ ಹೋಗುವುದನ್ನು ನಿರಾಕರಿಸಿ ಗೃಹಬಂಧನದ ನಿಯಮಗಳನ್ನು ಉಲ್ಲಂಘಿಸಿದ್ದರಿಂದ, ಆ ವ್ಯಕ್ತಿಯ ಮನವಿ ಕಾರ್ಯಗತವಾಯಿತು. ಮಾದಕ ವಸ್ತು ಅಪರಾಧಿಯನ್ನು ಜೈಲಿಗೆ ವರ್ಗಾಯಿಸುವಂತೆ ಸ್ಥಳೀಯ ಪೊಲೀಸರಿಗೆ ನ್ಯಾಯಾಲಯ ಆದೇಶ ಹೊರಡಿಸಿದೆ ಎಂದು ರಾಷ್ಟ್ರೀಯ ಪತ್ರಿಕೆಯೊಂದು ವರದಿ ಮಾಡಿದೆ.

  • ಸ್ವಿಗ್ಗಿ ಮೂಲಕ ಗಾಂಜಾ ಸಪ್ಲೈ – 7 ಮಂದಿ ಬಂಧನ

    ಸ್ವಿಗ್ಗಿ ಮೂಲಕ ಗಾಂಜಾ ಸಪ್ಲೈ – 7 ಮಂದಿ ಬಂಧನ

    ಬೆಂಗಳೂರು: ಲಾಕ್‍ಡೌನ್ ನಂತಹ ಕಷ್ಟದ ಪರಿಸ್ಥಿತಿಯಲ್ಲೂ, ಸ್ಚಿಗ್ಗಿ ಡೆಲಿವರಿಗೆ ಸರ್ಕಾರ ಅವಕಾಶ ಮಾಡಿಕೊಟ್ಟಿತು. ಆದರೆ ಇದನ್ನೇ ದುರುಪಯೋಗ ಮಾಡ್ಕೊಂಡ ಕೆಲವರು, ಸ್ವಿಗ್ಗಿ ಮೂಲಕವೇ ಗಾಂಜಾ ಸಪ್ಲೈ ಮಾಡುತ್ತಿದ್ರು ಅನ್ನೋ ಶಾಕಿಂಗ್ ವಿಚಾರ ಬೆಳಕಿಗೆ ಬಂದಿದೆ.

    ಬೆಂಗಳೂರಿನ ಎನ್‍ಸಿಬಿ ಅಧಿಕಾರಿಗಳು ಇಂತದ್ದೊಂದು ಕಾರ್ಯಾಚರಣೆ ನಡೆಸಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಸ್ವಿಗ್ಗಿ  ಬಾಕ್ಸ್‌ಗಳಲ್ಲಿ ಊಟದ ಜೊತೆಗೆ ಗಾಂಜಾ ಸಪ್ಲೈ ಮಾಡುತ್ತಿದ್ದ ಇಬ್ಬರು ಎನ್‍ಸಿಬಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದರು. ಆ ಇಬ್ಬರನ್ನು ತೀವ್ರ ವಿಚಾರಣೆ ನಡೆಸಿದ ಅಧಿಕಾರಿಗಳಿಗೆ ಮತ್ತೆ ಐವರು ಇದೇ ರೀತಿ ಸ್ವಿಗ್ಗಿ ಮೂಲಕ ಡ್ರಗ್ಸ್ ಸಪ್ಲೈ ಮಾಡುತ್ತಿರೋದು ಪತ್ತೆಯಾಗಿತ್ತು.

    ಬೆಂಗಳೂರಿನ ಪ್ರತಿಷ್ಠಿತ ಅಪಾರ್ಟ್ಮೆಂಟ್, ಪ್ರತಿಷ್ಠಿತ ಕಾಲೇಜುಗಳು, ಮನೆಗಳಿಗೆ ಪುಡ್ ಡೆಲಿವರಿ ಮಾಡುವ ನೆಪದಲ್ಲಿ ಬೇರೆ ಬೇರೆ ರೀತಿಯ ಡ್ರಗ್ಸ್ ಸರಬರಾಜು ಮಾಡುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ಈ ಹಿಂದೆಯೂ ಕೂಡ ಸಾಕಷ್ಟು ಆರೋಪಗಳು ಕೇಳಿಬಂದಿದ್ದವು. ಇದನ್ನೂ ಓದಿ:  ಈ ಶತಮಾನದ ರಾಕ್ಷಸಿ ಕೃತ್ಯ ಎಸಗಿರೋ ತಾಲಿಬಾನ್ ಜೊತೆ RSS ಹೋಲಿಕೆ ಸರಿಯಲ್ಲ: ಶ್ರೀನಿವಾಸ್ ಪ್ರಸಾದ್

    ಇಂದು ಏಳು ಜನರನ್ನು ಬಂಧಿಸಿರುವ ಅಧಿಕಾರಿಗಳು, ಬರೋಬ್ಬರಿ 142 ಕೆಜಿ ಹೈಡ್ರೋ ಗಾಂಜಾ ವಶಕ್ಕೆ ಪಡೆದಿದ್ದಾರೆ. ಈ ಗಾಂಜಾ ಎಲ್ಲಿಂದ ಬರುತ್ತಿತ್ತು, ಇದರ ಮೂಲ ಎಲ್ಲಿ ಅನ್ನೋದರ ಬಗ್ಗೆ ತನಿಖೆ ಮುಂದುವರಿದಿದ್ದು, ಇನ್ನಷ್ಟೇ ಹೆಚ್ಚಿನ ಮಾಹಿತಿ ಸಿಗಬೇಕಿದೆ.

    ಅಗತ್ಯ ಸೇವೆಗಳಿಗೆ ಸರ್ಕಾರ ಕೊಟ್ಟಿರುವ ಅವಕಾಶ ವನ್ನು ಈ ರೀತಿ ದುರುಪಯೋಗ ಮಾಡ್ಕೊಂಡಿರುವ ಬಗ್ಗೆ ಪೊಲೀಸರು ಕೂಡ ಗಮನ ಹರಿಸಿದ್ದು, ಬರೇ ಡ್ರಗ್ಸ್ ಅಲ್ದೇ, ಮದ್ಯ ಸೇರಿದಂತೆ ಬೇರೆ ಬೇರೆ ರೀತಿಯ ಅಕ್ರಮ ವಸ್ತುಗಳ ಸಾಗಾಟ ಮಾಡುತ್ತಿರುವುದು ಕೂಡ ಅಧಿಕಾರಿಗಳ ತನಿಖೆ ವೇಳೆ ಬಹಿರಂಗವಾಗಿದೆ.

  • ದೇಶದ ರಾಜಧಾನಿಯಲ್ಲಿ 5 ಗಂಟೆಗೊಂದು ರೇಪ್, 19 ಗಂಟೆಗೊಂದು ಕೊಲೆ

    ದೇಶದ ರಾಜಧಾನಿಯಲ್ಲಿ 5 ಗಂಟೆಗೊಂದು ರೇಪ್, 19 ಗಂಟೆಗೊಂದು ಕೊಲೆ

    – ಅಪರಾಧ ಸಂಖ್ಯೆಯಲ್ಲಿ ಇಳಿಕೆ

    ನವದೆಹಲಿ: ರಾಜಧಾನಿ ದೆಹಲಿಯಲ್ಲಿ 5 ಗಂಟೆಗೊಂದು ರೇಪ್ ಮತ್ತು 19 ಗಂಟೆಗೊಂದು ಕೊಲೆಯಾಗುತ್ತಿದೆ ಎಂದು ಪೊಲೀಸ್ ಆಯುಕ್ತ ಎನ್.ಎಸ್. ಶ್ರೀವಾಸ್ತವ ತಿಳಿಸಿದ್ದಾರೆ.

    ಕಳೆದ ಮಾರ್ಚ್ ನಿಂದ ಲಾಕ್‍ಡೌನ್ ಜಾರಿಯಲ್ಲಿ ಇರುವ ಕಾರಣದಿಂದಾಗಿ ಅಪರಾಧ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಕೊಲೆ ಸರಗಳ್ಳತನ, ರೇಪ್ ನಡೆಯುತ್ತಿರುವ ಕುರಿತಾಗಿ ಪೊಲೀಸರು ಅಂಕಿ-ಅಂಶಗಳ ಸಹಿತವಾಗಿ ಪ್ರಕಟಿಸಿದ್ದಾರೆ.

    2019ರಲ್ಲಿ ನಾಲ್ಕು ಗಂಟೆಗೊಂದು ಅತ್ಯಾಚಾರ ನಡೆಯುತ್ತಿತ್ತು. ಅತ್ಯಾಚಾರ ಪ್ರಕರಣದಲ್ಲಿ ಶೇ.2ರಷ್ಟರಲ್ಲಿ ಮಾತ್ರ ಆರೋಪಿಗಳು ಸಂತ್ರಸ್ತರಿಗೆ ಅಪರಿಚಿತರಾಗಿದ್ದಾರೆ. 17 ಗಂಟೆಗೊಂದು ಹತ್ಯೆ, 12 ನಿಮಿಷಕ್ಕೊಂದು ವಾಹನ ಕಳವು ನಡೆಯುತ್ತಿತ್ತು. ಸರಗಳ್ಳತನಕ್ಕೆ ಸಂಬಂಧಿಸಿದಂತೆ ದಿನಕ್ಕೆ 17 ಪ್ರಕರಣಗಳು ನಡೆಯುತ್ತಿದ್ದವು. ಈಗ 24 ಎಂದು ಪೊಲೀಸರು ತಿಳಿಸಿದ್ದಾರೆ.

    ರಾಜಧಾನಿಯಲ್ಲಿ 2020ರಲ್ಲಿ ಅಪರಾಧಗಳ ಸಂಖ್ಯೆ ಹಿಂದಿನ ವರ್ಷಕ್ಕೆ ಹೋಲಿಸಿದರೆ ಕಡಿವೆಯಾಗಿದೆ. 1,699 ರೇಪ್, 2,186 ಲೈಂಗಿಕ ಕಿರುಕುಳ ಪ್ರಕರಣ, 65 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. 2019ರಲ್ಲಿ 2,168 ರೇಪ್, 2,921 ಲೈಂಗಿಕ ಕಿರುಕುಳ, 109 ಫೋಕ್ಸೋ ಕಾಯ್ದೆ ಅಡಿಯಲ್ಲಿ ಲೈಂಗಿಕ ಕಿರುಕುಳ ಪ್ರಕರಣಗಳು ದಾಖಲಾಗಿದ್ದವು ಎಂದು ಹೇಳಿದ್ದಾರೆ.