Tag: crime

  • ಫೋಟೋ ಕಳುಹಿಸುವಂತೆ ಪ್ರಿಯಕರನ ಕಾಟ – ಬೇಸತ್ತು ವಿದ್ಯಾರ್ಥಿನಿ ಆತ್ಮಹತ್ಯೆ

    ಫೋಟೋ ಕಳುಹಿಸುವಂತೆ ಪ್ರಿಯಕರನ ಕಾಟ – ಬೇಸತ್ತು ವಿದ್ಯಾರ್ಥಿನಿ ಆತ್ಮಹತ್ಯೆ

    ಲಕ್ನೋ: ಪದೇ ಪದೇ ತನ್ನ ಫೋಟೋ ಕಳುಹಿಸುವಂತೆ ಒತ್ತಾಯಿಸುತ್ತಿದ್ದ ಪ್ರಿಯಕರನ ಕಾಟ ತಾಳಲಾರದೇ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಇಜ್ಜತ್ ನಜರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

    ಉತ್ತರ ಪ್ರದೇಶದ ಬರೇಲಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಬ್ಯಾಂಕ್ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು ಎಂದು ಹೇಳಲಾಗಿದೆ. ಇದನ್ನೂ ಓದಿ: 1.30 ಲಕ್ಷಕ್ಕೆ ಮಾರಾಟವಾಗಿದ್ದ ಬಾಲಕ – ಚಿಕ್ಕಮ್ಮ ಅರೆಸ್ಟ್

    ಏನಿದು ಪ್ರೇಮ್‌ ಕಹಾನಿ?
    ಬರೇಲಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಬ್ಯಾಂಕ್ ಉದ್ಯೋಗಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಪ್ರತಿದಿನ ಇಬ್ಬರೂ ಗಂಟೆಗಟ್ಟಲೇ ಫೋನ್‌ನಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಪ್ರೇಮಿಯು ವಾಟ್ಸಾಪ್‌ನಲ್ಲಿ ಹುಡುಗಿಯ ಫೋಟೋ ಕಳಿಸುವಂತೆ ಕೇಳಿದ್ದಾನೆ. ಪದೇ ಪದೇ ಒತ್ತಾಯಿಸಿದ್ದಾನೆ. ಆದರೂ ಆಕೆ ಫೋಟೋ ಕಳುಹಿಸಲು ನಿರಾಕರಿಸಿದ್ದಾಳೆ. ನಂತರ ವೀಡಿಯೋ ಕಾಲ್‌ನಲ್ಲಿ ಮಾತನಾಡುವುದಕ್ಕೂ ಆಕೆ ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ಪ್ರಿಯಕರ ರೈಲಿಗೆ ಸಿಕ್ಕಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ದೂರವಾಣಿ ಕರೆ ಮೂಲಕ ಬೆದರಿಕೆ ಹಾಕಿದ್ದಾನೆ. ಆಗ ಫೋನ್ ಕರೆ ಕಟ್ ಮಾಡಿದ್ದ ಗೆಳತಿ ಮತ್ತೆ ಅವನಿಗೆ ನಿರಂತರವಾಗಿ ಕರೆ ಮಾಡಿದ್ದಾಳೆ. ಸುಮಾರು 40 ಬಾರಿ ಕರೆ ಮಾಡಿದರೂ ಪ್ರೇಮಿ ತೆಗೆಯದಿದ್ದರಿಂದ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    ತನ್ನ ಪ್ರೇಮಿ ನಿಜವಾಗಿಯೂ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಆಕೆ ಭಾವಿಸಿ ತಾನೂ ವಿಷ ಸೇವಿಸಿದ್ದಾಳೆ. ಕೆಲ ಸಮಯ ಕಳೆದ ಬಳಿಕ ವಿಷಯ ತಿಳಿದ ಕುಟುಂಬಸ್ಥರು ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲೇ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ. ಇದನ್ನೂ ಓದಿ: ಮಹಿಳಾ ಸಹೋದ್ಯೋಗಿ ಮೇಲೆ ಗುಂಡು ಹಾರಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡ ಇನ್ಸ್‌ಪೆಕ್ಟರ್

    ಇದೇ ವೇಳೆಗೆ `ನಿನಗೇನಾದರೂ ಆಯಿತೆಂದರೆ ನಿನ್ನ ಕುಟುಂಬದವರನ್ನು ಸಾಯಿಸುತ್ತೇನೆ’ ಎಂದು ಯುವಕ ಸಂದೇಶ ಕಳುಹಿಸಿದ್ದಾನೆ. ಈ ಸಂಬಂಧ ಕುಟುಂಬಸ್ಥರು ಬ್ಯಾಂಕ್ ಉದ್ಯೋಗಿ ಸಂಚಿತ್ ಅರೋರಾ ಅವರ ಪ್ರಚೋದನೆಯೇ ಆತ್ಮಹತ್ಯೆಗೆ ಕಾರಣವಾಗಿದೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ.

    ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಇಜ್ಜತ್ ನಜರ್ ಪೊಲೀಸರು ಆರೋಪಿ ಸಂಚಿತ್ ಅರೋರಾ ಅವರ ಹುಡುಕಾಟಕ್ಕೆ ಬಲೆ ಬೀಸಿದ್ದಾರೆ.

    Live Tv

  • ಪತ್ನಿ ಕತ್ತು ಬಿಗಿದು, ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ ಪತಿ

    ಪತ್ನಿ ಕತ್ತು ಬಿಗಿದು, ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ ಪತಿ

    ಬಾಗಲಕೋಟೆ: ಪತಿಯೊಬ್ಬ ಪತ್ನಿಯ ಕತ್ತನ್ನು ಹಗ್ಗದಿಂದ ಬಿಗಿದು, ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಗ್ರಾಮದಲ್ಲಿ ನಡೆದಿದೆ.

    ಸಾವಿತ್ರಿ ವಡ್ಡರ್(32) ಕೊಲೆಯಾದ ದುರ್ದೈವಿ. ಹೂವಿನಹಳ್ಳಿ ಗ್ರಾಮದ ನಿವಾಸಿ ಮುತ್ತಪ್ಪ ವಡ್ಡರ್ ತನ್ನ ಪತ್ನಿ ಸಾವಿತ್ರಿ ವಡ್ಡರ್‌ಗೆ  ಅನೈತಿಕ ಸಂಬಂಧ ಇದೆ ಎಂದು ಶಂಕಿಸಿ ಜಗಳ ಪ್ರಾರಂಭಿಸಿದ್ದಾನೆ. ಇದು ಅತಿರೇಕಕ್ಕೆ ಹೋಗಿ ಮುತ್ತಪ್ಪ, ಸಾವಿತ್ರಿ ಕತ್ತನ್ನು ಹಗ್ಗದಿಂದ ಬಿಗಿದು, ಮಾರಕಾಸ್ತ್ರದಲ್ಲಿ ಕೊಚ್ಚಿ ಕೊಲೆ ಮಾಡಿದ್ದಾನೆ. ಇದನ್ನೂ ಓದಿ:  ಒಂಟಿ ಮಹಿಳೆಯನ್ನ ಭೀಕರವಾಗಿ ಹತ್ಯೆಗೈದು ಪರಾರಿಯಾದ ಪಾಪಿಗಳು 

    ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಮೀನಗಢ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಘಟನೆ ನಿನ್ನೆ(ಬುಧವಾರ) ರಾತ್ರಿ ನಡೆದಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

    Live Tv

  • ಪೊಲೀಸ್ ಠಾಣೆ ಮೆಟ್ಟಿಲೇರಿದ ಸ್ಯಾಂಡಲ್‌ವುಡ್‌ ಕ್ವೀನ್ ರಮ್ಯಾ

    ಪೊಲೀಸ್ ಠಾಣೆ ಮೆಟ್ಟಿಲೇರಿದ ಸ್ಯಾಂಡಲ್‌ವುಡ್‌ ಕ್ವೀನ್ ರಮ್ಯಾ

    ಚಂದನವನದ ರಾಣಿ ರಮ್ಯಾ ಇತ್ತೀಚಿನ ದಿನಗಳಲ್ಲಿ ಹೆಚ್ಚೆಚ್ಚು ಸಿನಿಮಾ ಕಾರ್ಯಕ್ರಮಗಳಲ್ಲಿ ಮತ್ತು ಸೋಷಿಯಲ್ ಮೀಡಿಯಾದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದಾರೆ. ತೀರಾ ರಾಜಕೀಯವಾಗಿ ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳದೇ ಇದ್ದರೂ, ಸಿನಿಮಾಗಳ ಕಾರ್ಯಕ್ರಮಗಳು, ಟ್ರೈಲರ್, ಟೀಸರ್ ಹೀಗೆ ಒಂದಿಲ್ಲೊಂದು ವಿಷಯವನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಳ್ಳುತ್ತಾರೆ.

    ಹೆಚ್ಚೆಚ್ಚು ಸೋಷಿಯಲ್ ಮೀಡಿಯಾದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು, ಅಭಿಮಾನಿಗಳಿಗೆ ಹೊಸ ಹೊಸ ವಿಷಯಗಳನ್ನು ಕೊಡುವ ರಮ್ಯಾ ಅವರಿಗೆ ಕಿಡಿಗೇಡಿಯೊಬ್ಬ ಇನ್ಸ್ಟಾದಲ್ಲಿ ನಿಂದನೆ ಮಾಡಿದ್ದಾನಂತೆ. ಹಾಗಾಗಿ ಅವರು ಹಲಸೂರು ಗೇಟ್ ಪೊಲೀಸ್ ಠಾಣೆ ಬಳಿ ಇರುವ ಕೇಂದ್ರ ವಿಭಾಗದ ಸಿಇಎನ್ ಠಾಣೆಯಲ್ಲಿ ಆ ವ್ಯಕ್ತಿಯ ವಿರುದ್ಧ ದೂರು ದಾಖಲಿಸಿದ್ದಾರಂತೆ. ಇದನ್ನೂ ಓದಿ: ಶ್ರದ್ಧಾ ಶ್ರೀನಾಥ್ ಗುಡ್ ಬೈ ಹೇಳಿದ್ದು ಯಾಕೆ.?

    ತಮಗೆ ಇನ್ಸ್ಟಾಗ್ರಾಮ್‌ನಲ್ಲಿ ವ್ಯಕ್ತಿಯೊಬ್ಬ ನಿಂದನೆ ಮಾಡಿದ್ದು, ಅವನ ವಿರುದ್ಧ ಸೂಕ್ತ ಕ್ರಮ ತಗೆದುಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ. ದೂರು ಸ್ವೀಕರಿಸಿರುವ ಸಿಇಎನ್ ಠಾಣಾಧಿಕಾರಿಗಳು ಸೂಕ್ತ ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರಂತೆ.

  • ಮೂರು ಬೈಕ್‌ಗಳು ಡಿಕ್ಕಿ – ನಾಲ್ವರು ಸಾವು

    ಮೂರು ಬೈಕ್‌ಗಳು ಡಿಕ್ಕಿ – ನಾಲ್ವರು ಸಾವು

    ತುಮಕೂರು: ಇಲ್ಲಿನ ತುರುವೆಕೆರೆ ತಾಲೂಕಿನ ಶೆಟ್ಟಿಗೊಂಡನಹಳ್ಳಿ ಸಮೀಪ 3 ಬೈಕ್‌ಗಳು ಡಿಕ್ಕಿ ಹೊಡೆದು ನಾಲ್ವರು ಮೃತಪಟ್ಟಿದ್ದಾರೆ.

    ಕುಣಿಗಲ್ ತಾಲೂಕಿನ ಜಲಧಿಗೆರೆ ಕಡೆಯಿಂದ ಕಾರ್ಯಕ್ರಮವೊಂದನ್ನು ಮುಗಿಸಿಕೊಂಡು ಕಲ್ಲೂರು ಕಡೆಗೆ ಬೈಕ್‌ಗಳಲ್ಲಿ ಈ ನಾಲ್ವರು ತೆರಳುತ್ತಿದ್ದರು. ಇದೇ ವೇಳೆ ಕಲ್ಲೂರು ಕಡೆಯಿಂದ ಸ್ಪ್ಲೆಂಡರ್ ಬೈಕ್‌ನಲ್ಲಿ ಇಬ್ಬರು ಬರುತ್ತಿದ್ದರು. ಇದನ್ನೂ ಓದಿ: ಶ್ರೀಲಂಕಾದಲ್ಲಿ ಸರ್ಕಾರಿ ಕಚೇರಿ, ಶಾಲೆ – ಕಾಲೇಜುಗಳು ಬಂದ್‌

    BIKe (1)c

    ಈ ಮೂರು ಬೈಕ್‌ಗಳ ನಡುವೆ ಅಪಘತ ಸಂಭವಿಸಿ ನಾಲ್ವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮಾಯಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಅಪ್ರಾಪ್ತ ಹುಡುಗಿ ಮೇಲೆ ನಿರಂತರ ಅತ್ಯಾಚಾರ- 7 ಮಂದಿ ಕಾಮುಕರ ಬಂಧನ

    ಬೆಂಗಳೂರು: 16 ವರ್ಷದ ಹುಡುಗಿಯ ಮೇಲೆ 8 ಜನ ಕಾಮುಕರು ನಿರಂತರ ಅತ್ಯಾಚಾರ ಎಸಗುತ್ತಿದ್ದ ಘಟನೆ ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.

    ಮೊದಲು ವೀಡಿಯೋ ರೆಕಾರ್ಡ್ ಮಾಡಿಕೊಂಡು ಲೈಂಗಿಕ ದೌರ್ಜನ್ಯ ನಡೆಸಿದ್ದ ಪ್ರಮುಖ ಆರೋಪಿ ವಿಚಾರ ಹೊರಗೆ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾನೆ. ನಂತರ ವೀಡಿಯೋ ತೋರಿಸಿ ತನ್ನ ಸ್ನೇಹಿತರ ಜೊತೆಗೂ ಸಹಕರಿಸುವಂತೆ ಒತ್ತಾಯಿಸಿದ್ದಾನೆ. ಹುಡುಗಿಯನ್ನು ಮತ್ತಷ್ಟು ಹೆದರಿಸಿ 8 ಮಂದಿಯೂ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ನಂತರ ವೀಡಿಯೋ ಮಾಡಿ ನಿರಂತರ ಕೃತ್ಯ ಎಸಗಲು ಮುಂದಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಆಕ್ಸಿಜನ್ ಇಲ್ಲದಿದ್ರೂ ಚಿಕಿತ್ಸೆಗೆ ಕರೆದೊಯ್ದ ಚಾಲಕ: ಉಸಿರಾಟದ ಕೊರತೆಯಿಂದ ನವಜಾತ ಶಿಶು ಸಾವು

    crime

    ಮನೆಗೆ ಬಂದ ಮಗಳು ಅಳುತ್ತಿದ್ದುದ್ದನ್ನು ಕಂಡು ಪೋಷಕರು ಕೇಳಿದ್ದಾರೆ. ಮೊದಲೇ ಹೆದರಿಕೊಂಡಿದ್ದ ಹುಡುಗಿ, ಕಬಾಬ್ ಖಾರ ಇತ್ತು ಅದಕ್ಕೆ ಕಣ್ಣೀರು ಬರುತ್ತಿದೆ ಎಂದು ಸಂಬಾಳಿಸಲು ಮುಂದಾಗಿದ್ದಾಳೆ. ನಂತರ ಆಕೆಯಿಂದ ವಿಚಾರ ತಿಳಿದು ಗಾಬರಿಗೊಂಡ ಮನೆಯವರು 8 ಜನರ ವಿರುದ್ಧ ಯಲಹಂಕ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೋಕ್ಸೋ, ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣವೇ ಕಾರ್ಯಾಚರಣೆ ನಡೆಸಿ 7 ಆರೋಪಿಗಳನ್ನು ಬಂಧಿಸಿದ್ದಾರೆ. ಓರ್ವ ಪರಾರಿಯಾಗಿದ್ದು, ಶೋಧಕಾರ್ಯ ಮುಂದುವರಿಸಿದ್ದಾರೆ.

  • ಗಿಫ್ಟ್ ಕೊಟ್ಟಿದ್ದ ಮೊಬೈಲ್ ವಾಪಸ್ ಕೊಡದ ಪ್ರೇಯಸಿಯ ಕತ್ತು ಸೀಳಿ ಕೊಲೆ

    ಗಿಫ್ಟ್ ಕೊಟ್ಟಿದ್ದ ಮೊಬೈಲ್ ವಾಪಸ್ ಕೊಡದ ಪ್ರೇಯಸಿಯ ಕತ್ತು ಸೀಳಿ ಕೊಲೆ

    ರಾಂಚಿ: ಗಿಫ್ಟ್ ಕೊಡಿಸಿದ್ದ ಮೊಬೈಲ್ ವಾಪಸ್ ಕೊಡದ ಪ್ರೇಯಸಿಯ ಕತ್ತು ಸೀಳಿ ಕೊಂದಿರುವ ಘಟನೆ ಜಾರ್ಖಂಡ್‌ನ ಪಾಕುರ್‌ನಲ್ಲಿ ನಡೆದಿದೆ.

    ಮೃತ ಯುವತಿ ಮಹೇಶ್‍ಪುರ ಪೊಲೀಸ್ ಠಾಣೆಯ ವ್ಯಾಪ್ತಿಯ ನಿವಾಸಿಯಾಗಿದ್ದಾಳೆ. ಈ ಜೋಡಿಗಳ ಮಧ್ಯೆ ಮೊಬೈಲ್ ವಿಚಾರವಾಗಿ ನಡೆದ ಗಲಾಟೆ ಸಾವಿನಲ್ಲಿ ಅಂತ್ಯವಾಗಿದೆ. ಇದನ್ನೂ ಓದಿ : ಪಾವನಾ ನಾಯಕಿಯಾಗಿ ನಟಿಸಿದ ‘ಇನ್’ ಚಿತ್ರದ ಟೀಸರ್ ರಿಲೀಸ್ ಮಾಡಿದ ಕಿಚ್ಚ

    ನಡೆದಿದ್ದೇನು?: ಉಪವಿಭಾಗದ ಪೊಲೀಸ್ ಅಧಿಕಾರಿ ಹೇಳುವ ಪ್ರಕಾರ, ಆರೋಪಿಯು ಆಕೆಯೊಂದಿಗೆ ಕಳೆದ ಎರಡು ವರ್ಷಗಳಿಂದ ಸಂಬಂಧ ಹೊಂದಿದ್ದ ಎಂದು ಯುವತಿಯ ಚಿಕ್ಕಪ್ಪ ತಿಳಿಸಿದ್ದಾರೆ. ಅವನು ಆಗಾಗ ಯುವತಿಯ ಮನೆಗೆ ಬರುತ್ತಿದ್ದನು. ಅವಳ ಮನೆಯಲ್ಲೇ ಕೆಲವು ರಾತ್ರಿಗಳನ್ನು ಕಳೆದಿದ್ದ. ಆದರೆ ಆರೋಪಿಯ ಮದುವೆಯನ್ನು ಆತನ ಮನೆಯವರು ಬೇರೊಬ್ಬರೊಂದಿಗೆ ನಿಶ್ಚಯಿಸಿದ್ದರು. ಹೀಗಾಗಿ ಆತ ತಾನು ತನ್ನ ಹಳೇ ಪ್ರೇಯಸಿಗೆ ಉಡುಗೊರೆಯಾಗಿ ನೀಡಿದ್ದ ಸ್ಮಾರ್ಟ್‍ಫೋನ್ ವಾಪಸ್ ಪಡೆಯಲು ಬಯಸಿದ್ದ. ಆದರೆ ಆಕೆ ಅದನ್ನು ವಾಪಸ್ ಕೊಡಲು  ಒಪ್ಪಿರಲಿಲ್ಲ. ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಧ್ಯೆ ವಿದ್ಯುತ್ ಶಾಕ್ – ಯೂನಿಟ್‍ಗೆ 35 ಪೈಸೆ ಹೆಚ್ಚಳ

    ಈ ವಿಚಾರವಾಗಿ ಜಗಳವಾಡಿ ನಂತರ ಅವರಿಬ್ಬರೂ ಫುಟ್ಬಾಲ್ ಪಂದ್ಯ ವೀಕ್ಷಿಸಲು ತೆರಳಿದ್ದರು. ಮಫಸಿಲ್ ಪೊಲೀಸ್ ಠಾಣೆ ವ್ಯಾಪ್ತಿಯ ಕಂಕರಬೋನಾದಿಂದ ಬಂಧಿತ ಆರೋಪಿ, ಪಂದ್ಯ ಮುಗಿಸಿ ಹಿಂತಿರುಗುವಾಗ ಆಕೆ ಮೊಬೈಲ್ ಹಿಂದಿರುಗಿಸಲು ನಿರಾಕರಿಸಿದ್ದಾಳೆ. ಚೂಪಾದ ವಸ್ತುವಿನಿಂದ ಆಕೆಯ ಕತ್ತು ಸೀಳಿ ಕೊಲೆ ಮಾಡಿದ್ದಾನೆ.

    ಆಕೆಯನ್ನು ಕೊಲೆ ಮಾಡಿದ ನಂತರ ಆತ ಮೊಬೈಲ್ ಫೋನ್‍ನೊಂದಿಗೆ ಆ ಸ್ಥಳದಿಂದ ಪರಾರಿಯಾಗಿದ್ದಾನೆ. ಯುವತಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸದರ್ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  • ಗರ್ಭಿಣಿ ಮೇಕೆ ಮೇಲೆ ರೇಪ್‍ಗೈದು ಕೊಲೆ ಮಾಡಿದ ವಿಕೃತಕಾಮಿಗಳು

    ಗರ್ಭಿಣಿ ಮೇಕೆ ಮೇಲೆ ರೇಪ್‍ಗೈದು ಕೊಲೆ ಮಾಡಿದ ವಿಕೃತಕಾಮಿಗಳು

    ತಿರುವನಂತಪುರಂ: ತುಂಬು ಗರ್ಭಿಣಿ ಮೇಕೆ ಮೇಲೆ ಮೂರು ಮಂದಿ ವಿಕೃತಕಾಮಿಗಳು ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಘಟನೆ ಕೇರಳದ ಕಾಞಂಗಾಡು ಪೇಟೆಯಲ್ಲಿ ನಡೆದಿದೆ.

    ಮೂವರು ವಿಕೃತಕಾಮಿಗಳು ಮೇಕೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಂದು ಹಾಕಿದ್ದಾರೆ. ಕೊಟ್ಟಚೇರಿಯ ಎಲೈಟ್ ಹೋಟೆಲ್‍ಗೆ ಸೇರಿದ ಈ ಮೇಕೆ ನಾಲ್ಕು ತಿಂಗಳ ಗರ್ಭಿಣಿಯಾಗಿತ್ತು. ಈ ಸಂಬಂಧ ಹೋಟೆಲ್ ಉದ್ಯೋಗಿ ಸೆಂಥಿಲ್‍ನನ್ನು ಬಂಧಿಸಿದ್ದೇವೆ. ಇತರ ಇಬ್ಬರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ರಾಜ್ಯ ಸರ್ಕಾರ ಹಿಜಬ್, ಹಲಾಲ್, ವ್ಯಾಪಾರ ನಿಷೇಧದ ಭಜನೆ ಮಾಡುತ್ತಿದ್ದು, ಬಿಜೆಪಿಯವರು ಧರ್ಮದ್ರೋಹಿಗಳು: ದಿನೇಶ್ ಗುಂಡೂರಾವ್

    ನಡೆದಿದ್ದೇನು?: ನಸುಕಿನ ಜಾವ 1.30ರ ಸುಮಾರಿಗೆ ಮೇಕೆ ಸದ್ದು ಕೇಳಿಬಂದಿದೆ. ಹೊಟೇಲ್‍ನ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಬಂದು ನೋಡಿದ್ದಾರೆ. ಆಗ ಮೂವರು ಪುರುಷರು ಗೋಡೆ ಹಾರಿ ಪರಾರಿಯಾಗಿದ್ದಾರೆ. ಈ ವೇಳೆ ಒಬ್ಬ ಆರೋಪಿ ಸೆಂಥಿಲ್‍ನನ್ನು ಹಿಡಿದಿದ್ದಾರೆ.

    ಮೇಕೆ ಸತ್ತಿರುವುದು ಅವರ ಗಮನಕ್ಕೆ ಬಂದಿದೆ. ಅಲ್ಲದೆ ಮೇಕೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ಕಂಡುಬಂದಿದೆ. ತಮಿಳುನಾಡು ಮೂಲದ ಸೆಂಥಿಲ್ ಮೂರೂವರೆ ತಿಂಗಳ ಹಿಂದೆ ಕೆಲಸ ಅರಸಿ ಬಂದಿದ್ದ ಎಂದು ಹೋಟೆಲ್ ಮಾಲೀಕರು ತಿಳಿಸಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಸೆಂಥಿಲ್‍ನನ್ನು ವಶಕ್ಕೆ ಪಡೆದಿದ್ದಾರೆ.

  • ಪತಿ ಶಂಕರಣ್ಣ ಸಾವಿಗೆ ಅತ್ತೆಯೇ ಕಾರಣ: ಪತ್ನಿ ಮೇಘನಾ ಆರೋಪ

    ಪತಿ ಶಂಕರಣ್ಣ ಸಾವಿಗೆ ಅತ್ತೆಯೇ ಕಾರಣ: ಪತ್ನಿ ಮೇಘನಾ ಆರೋಪ

    ತುಮಕೂರು: ನಾನೇನು ತಪ್ಪು ಮಾಡಿಲ್ಲ, ನನ್ನ ಪತಿ ಸಾವಿಗೆ ಅತ್ತೆಯೇ ಕಾರಣವಾಗಿದ್ದಾರೆ. ನಮ್ಮ ಅತ್ತೆ ಹೋಗಿ ಸಾಯಿ ಎಂದು ನನ್ನ ಪತಿಗೆ ಹೇಳಿದ್ರು, ನನ್ನ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತ ಶಂಕರಣ್ಣ ಪತ್ನಿ ಮೇಘನಾ ಗಂಭೀರ ಆರೋಪ ಮಾಡಿದ್ದಾರೆ.

    ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಮೇಘನಾ, ರಾತ್ರಿ ನೇಣಿಗೆ ಶರಣಾಗಿದ್ದಾರೆ. ನಮಗೆ ಬೆಳಗ್ಗೆ ಗೊತ್ತಾಗಿದೆ. ಅತ್ತೆ, ಸೊಸೆ ಜಗಳದಿಂದ ನನ್ನ ಪತಿ ಸಾವನ್ನಪ್ಪಿದ್ದಾರೆ ಎಂದು ಹೇಳುತ್ತಿದ್ದಾರೆ. ಇದು ಸುಳ್ಳು. ನನಗೆ ಬೆಂಗಳೂರಿಗೆ ಹೋಗಿ ಜೀವನ ನಡೆಸಬೇಕು ಎನ್ನುವ ಉದ್ದೇಶ ಇರಲಿಲ್ಲ. ಹಾಗಿದ್ದರೆ ನಾನು ಯಾಕೆ ಇವರನ್ನು ಮದುವೆಯಾಗುತ್ತಿದ್ದೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ:  ಅತ್ತೆ-ಸೊಸೆ ಜಗಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ್ರಾ ಶಂಕರಣ್ಣ..?

    ನನ್ನ ಪತಿ ಸಹೋದರಿ ಪಾತ್ರೆ ತೊಳೆಯುತ್ತಿದ್ದರು. ನಾನು ಸುಮ್ಮನೆ ಕುಳಿತಿದ್ದೆ. ಆಗ ನಮ್ಮ ಅತ್ತೆ ಬಂದು ನನಗೆ ಬೈದಿದ್ದರು. ಇದರಿಂದ ಬೇಜಾರಾಗಿ ನಾನು ಕಣ್ಣೀರು ಹಾಕುತ್ತಾ ಮಲಗಿದ್ದೆ. ಆಗ ನನ್ನ ಪತಿ ಬಂದು ವಿಚಾರಿಸಿದರು. ಆಗಿನಿಂದ ನಮ್ಮ ಮನೆಯಲ್ಲಿ ಜಗಳ ಪ್ರಾರಂಭವಾಯಿತು. ನಿನ್ನ ಹೆಂಡತಿ ನಮ್ಮನ್ನು ಹೊಡೆಯಲು ಬಂದಿದ್ದಾಳೆ ಎಂದು ಪತಿ ಮುಂದೆ ನನ್ನನ್ನು ದೂರುತ್ತಾ ಅತ್ತೆ ಜಗಳ ಮಾಡುತ್ತಲೇ ಇದ್ದರು ಎಂದರು. ಇದನ್ನೂ ಓದಿ: ಶಂಕರಣ್ಣನ ಬಳಿ ಹೋಗಿ ಮದುವೆ ಆಗ್ತೀರಾ ಎಂದು ಕೇಳಿದ್ದ ಮೇಘನಾ

    ಒಂದು ದಿನ ಕಟ್ಟಿರುವ ನಾಯಿಯನ್ನು ನಾನು ಬಿಟ್ಟಿದ್ದೆ. ಆಗ ನಮ್ಮ ಅತ್ತೆ ನಿನ್ನ ಪತ್ನಿ ನಾಯಿ ಬಿಟ್ಟಳು. ನಾನು ಸಾಕಿದ್ದ ನಾಯಿಯನ್ನು ಅವಳು ಯಾಕೆ ಬಿಡಬೇಕು ಎಂದು ನಮ್ಮ ಅತ್ತೆ ಮತ್ತೆ ಗಲಾಟೆ ಮಾಡಲು ಪ್ರಾರಂಭಿಸಿದ್ದರು. ಆಗ ಪತಿ, ನಿಮ್ಮ ಇಬ್ಬರಲ್ಲಿ ಯಾರಿಗೂ ಬುದ್ಧಿ ಹೇಳಲು ನನಗೆ ಸಾಧ್ಯವಿಲ್ಲ ಎಂದು ಹೇಳಿದ್ದರು. ನಮ್ಮ ಅತ್ತೆ ಹೋಗಿ ನೀನು ಸಾಯಿ ಎಂದು ನನ್ನ ಪತಿಗೆ ಹೇಳಿದರು. ನಾನು ಸತ್ತರೆ ನೆಮ್ಮದಿಯಾಗಿ ಇರುತ್ತೀಯೆಂದು ನನ್ನ ಪತಿ ಹೇಳಿ ಹೊರಟು ಹೋದವರೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

  • ಕೊಚ್ಚಿ ಕೊಲೆ ಮಾಡಲು ಯತ್ನಿಸಿದ ಪತಿ- ಪತ್ನಿಯಿಂದ ಲವ್ ಜಿಹಾದ್ ಆರೋಪ

    ಕೊಚ್ಚಿ ಕೊಲೆ ಮಾಡಲು ಯತ್ನಿಸಿದ ಪತಿ- ಪತ್ನಿಯಿಂದ ಲವ್ ಜಿಹಾದ್ ಆರೋಪ

    ಹುಬ್ಬಳ್ಳಿ: ಪತ್ನಿಯನ್ನು ಪತಿಯೇ ಮನಬಂದಂತೆ ಕೊಚ್ಚಿ ಕೊಲೆ ಮಾಡಲು ಯತ್ನ ಮಾಡಿರುವ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಲವ್ ಜಿಹಾದ್ ಆಗಿದ್ದೇನೆ ಎಂದು ಪತ್ನಿಯೇ, ಪತಿ ವಿರುದ್ಧ ಆರೋಪ ಮಾಡಿದ್ದಾಳೆ.

    ಸದ್ಯ ಹುಬ್ಬಳ್ಳಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಿತ್ತಿರುವ ಅಪೂರ್ವ ಚೇತರಿಸಿಕೊಳ್ಳುತ್ತಿದ್ದಾರೆ. ಅನ್ಯಧರ್ಮದ ವ್ಯಕ್ತಿಯನ್ನು ಮದುವೆಯಾಗಿರುವ ಹಿಂದೆ ಲವ್ ಜಿಹಾದ್ ಉದ್ದೇಶ ಅಡಗಿತ್ತೆಂಬ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ಸ್ಕೂಟಿ ಕಲಿಯಲು ಹೋದ ಪತ್ನಿಯನ್ನು ಕೊಲ್ಲಲು ಮುಂದಾದ ಪತಿ

    ಅಪೂರ್ವ ಪುರಾಣಿಕ ಅಲಿಯಾಸ್ ಆರ್ಫಾ ಬಾನು ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ್ದು, ಸರ್ಕಾರಕ್ಕೆ ಕೈಮುಗಿದು ಮನವಿ ಮಾಡಿಕೊಳ್ಳುತ್ತಿನಿ ದಯವಿಟ್ಟು ರಾಜ್ಯದಲ್ಲಿ ಲವ್‍ ಜಿಹಾದ್‍ಗೆ ಕಠಿಣ ಕಾನೂನು ತನ್ನಿ. ಎಷ್ಟೋ ಅಮಾಯಕ ಹೆಣ್ಣು ಮಕ್ಕಳು ಪ್ರೀತಿ ಹೆಸರಿನಲ್ಲಿ ಮೋಸ ಹೋಗುತ್ತಿದ್ದಾರೆ ಎಂದು ಲವ್ ಜಿಹಾದ್‍ಗೆ ಒಳಗಾಗಿ ಹಲ್ಲೆಗೊಳ್ಳಗಾದ ಅಪೂರ್ವ ಅಳಲು ತೋಡಿಕೊಂಡಿದ್ದಾರೆ.

    ವಿದ್ಯಾಭ್ಯಾಸಕ್ಕೆಂದು ನಾನು ಆಗಾಗ ಇಜಾಜ್ ಆಟೋದಲ್ಲಿ ಹೋಗುತ್ತಿದ್ದೆ. ಇದನ್ನು ದುರುಪಯೋಗ ಪಡಿಸಿಕೊಂಡು ಆತ ನನ್ನ ಮೇಲೆ ಅತ್ಯಾಚಾರ ಎಸಗಿದ ಅತ್ಯಾಚಾರದ ವೀಡಿಯೋ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡೋಕೆ ಶುರು ಮಾಡಿದ್ದನು ಎಂದಿದ್ದಾರೆ.

    ತಾಯಿ ಮತ್ತಿತರರಿಗೆ ಹೇಳಿ ವೀಡಿಯೋ ಬಹಿರಂಗಪಡಿಸೋದಾಗಿ ಎಚ್ಚರಿಸಿದ್ದನು. ಅನಿವಾರ್ಯವಾಗಿ ನಾನು ಮದುವೆಯಾಗೋಕೆ ಒಪ್ಪಿಕೊಂಡೆ ಬಳಿಕ ಆತ ನನಗೆ ನರಕ ತೋರಿಸಿದ್ದಾನೆ ಎಂದು ಹೇಳುತ್ತಾ ಕಣ್ಣೀರು ಹಾಕಿದ್ದಾರೆ.

  • ಮೊಬೈಲ್ ಬುಕ್ ಮಾಡಿದವನಿಗೆ ಬಂದಿದ್ದು ಸೋನ್ ಪಪ್ಪಡಿ ಪಾಕೆಟ್

    ಮೊಬೈಲ್ ಬುಕ್ ಮಾಡಿದವನಿಗೆ ಬಂದಿದ್ದು ಸೋನ್ ಪಪ್ಪಡಿ ಪಾಕೆಟ್

    ಚಿಕ್ಕಬಳ್ಳಾಪುರ: ಆನ್‍ಲೈನ್ ಮೂಲಕ ಮೊಬೈಲ್ ಬುಕ್ ಮಾಡಿದ ಗ್ರಾಹಕನಿಗೆ ಸೋನ್ ಪಪ್ಪಡಿ ಪಾಕೆಟ್ ಪಾರ್ಸೆಲ್ ಬಂದಿರುವ ಘಟನೆ ಚಿಕ್ಕಬಳ್ಳಾಪುರ ನಗರದಲ್ಲಿ ನಡೆದಿದೆ.

    ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಕಾಂಡಿಮೆಂಟ್ಸ್ ಮಾಲೀಕನಾಗಿರುವ ಮಂಜುನಾಥ್ ಅವರಿಗೆ ದೂರವಾಣಿ ಕರೆಯೊಂದು ಬಂದಿದೆ. ಆನ್‍ಲೈನ್ ನಂಬರಿನಿಂದ ಕರೆ ಮಾಡಿರುವ ಯುವತಿ ಲಕ್ಕಿ ಡಿಪ್‍ನಲ್ಲಿ ನಿಮ್ಮ ಮೊಬೈಲ್ ನಂಬರ್‍ಗೆ ಲಾಟರಿ ಹೊಡೆದಿದೆ. 8000 ಮೌಲ್ಯದ ಮೊಬೈಲ್ 1800ಗೆ ಕೊಡುತ್ತೇವೆ ಎಂದು ಹೇಳಿದ್ದಾರೆ. ನಿಜ ಅಂತ ನಂಬಿದ ಮಂಜುನಾಥ್ ಮೊಬೈಲ್ ಅರ್ಡರ್ ಮಾಡಿದ್ದಾರೆ. ಇದನ್ನೂ ಓದಿ:  ಹರ್ಷನ ಒಂದೊಂದು ರಕ್ತದ ಹನಿಯೂ ವ್ಯರ್ಥವಾಗದಂತೆ ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಶಪಥ ಮಾಡ್ತೇವೆ: ಪ್ರಮೋದ್ ಮುತಾಲಿಕ್

    ಒಂದು ಅಂಚೆ ಕಚೇರಿ ಮೂಲಕ ಪಾರ್ಸೆಲ್ ಬಂದಿದೆ. 1800 ರೂಪಾಯಿ ಕೊಟ್ಟು ಪಾರ್ಸೆಲ್ ಪಡೆದು ಓಪನ್ ಮಾಡಿದಾಗ ಅದರಲ್ಲಿ ಸೋನ್ ಪಪ್ಪಡಿ ಪಾಕೆಟ್ ಇದೆ. ಜೊತೆಗೆ ಎರಡು ಚೈನ್‍ಗಳಿವೆ. ಪಾರ್ಸೆಲ್ ಮೇಲೆ ಅಕ್ಷತಾ ಮಾರ್ಕೆಟಿಂಗ್ ಕಂಪನಿ ಅಂತ ಪ್ರಿಂಟ್ ಮಾಡಲಾಗಿದೆ. ಅದೇ ಯುವತಿಗೆ ಕರೆ ಮಾಡಿ ಮೊಬೈಲ್ ಬದಲು ಸೋನ್ ಪಪ್ಪಡಿ ಕಳಿಸಿರುವ ದೋಖಾ ಕಂಪನಿ ವಿರುದ್ಧ ದೂರು ದಾಖಲಿಸುವ ಎಚ್ಚರಿಕೆ ನೀಡಲಾಗಿದೆ.

    ಎಚ್ಚರಿಕೆ ನಂತರ ದುಡ್ಡು ವಾಪಾಸ್ ಮಾಡುವ ಭರವಸೆ ನೀಡಿದ್ದಾಳೆ. ಆದರೆ ಇದೇ ರೀತಿ ಪ್ರತಿನಿತ್ಯ ಗ್ರಾಹಕರಿಗೆ ಕರೆ ಮಾಡಿ ಮೋಸ ಮಾಡುವ ಜಾಲವೇ ಇದ್ದು ಗ್ರಾಹಕರು ಯುವತಿಯರ ನಯವಂವಚನೆಯ ಮಾತಿಗಳಿಗೆ ಮರುಳಾಗಬೇಡಿ ಮೋಸ ಹೋಗದಿರಿ.