Tag: crime

  • ಪಾಕಿಸ್ತಾನದಲ್ಲಿ ಹಿಂದೂ ಮಹಿಳೆ, ಬಾಲಕಿಯರ ಕಿಡ್ನಾಪ್- ಬಲವಂತವಾಗಿ ಇಸ್ಲಾಂಗೆ ಮತಾಂತರಿಸಿ ಮದುವೆ

    ಪಾಕಿಸ್ತಾನದಲ್ಲಿ ಹಿಂದೂ ಮಹಿಳೆ, ಬಾಲಕಿಯರ ಕಿಡ್ನಾಪ್- ಬಲವಂತವಾಗಿ ಇಸ್ಲಾಂಗೆ ಮತಾಂತರಿಸಿ ಮದುವೆ

    ಇಸ್ಲಾಮಾಬಾದ್: ಅಲ್ಪಸಂಖ್ಯಾತ ಹಿಂದೂಗಳ (Hindu Community) ಮೇಲೆ ಪಾಕಿಸ್ತಾನದಲ್ಲಿ (Pakistan) ನಿರಂತರ ದೌರ್ಜನ್ಯ ಮುಂದುವರಿದಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಮತ್ತೊಂದು ಘಟನೆ ನಡೆದಿದೆ.

    ಸಿಂಧ್ ಪ್ರಾಂತ್ಯದಲ್ಲಿ ಹಿಂದೂ ಮಹಿಳೆ (Hindu Women) ಮತ್ತು ಇಬ್ಬರು ಬಾಲಕಿಯರನ್ನು ಕಿಡ್ನ್ಯಾಪ್‌ (Kidnap) ಮಾಡಲಾಗಿದ್ದು, ಅವರಲ್ಲಿ ಇಬ್ಬರನ್ನು ಬಲವಂತವಾಗಿ ಇಸ್ಲಾಂಗೆ (Islam) ಮತಾಂತರಿಸಿ, ಮದುವೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಊಹಾಪೋಹಗಳಿಗೆ ಕಿವಿಗೊಡದಂತೆ SMK ನಿವಾಸದಿಂದ ಸಂದೇಶ

    ಮೀನಾ ಮೇಘವಾರ್ (14) ಎಂಬ ಹಿಂದೂ ಬಾಲಕಿಯನ್ನು ನಾಸರ್‌ಪುರ ಪ್ರದೇಶದಿಂದ ಅಪಹರಿಸಲಾಗಿದೆ. ಮೀರ್‌ಪುರ್‌ಖಾಸ್ ಪಟ್ಟಣದ ಮಾರುಕಟ್ಟೆಯಿಂದ ಮನೆಗೆ ಹಿಂದಿರುಗುತ್ತಿದ್ದ ಮತ್ತೊಬ್ಬ ಬಾಲಕಿಯನ್ನೂ ಅಪಹರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಫ್ರೆಂಡ್ಸ್ ಜೊತೆ ಪಾರ್ಟಿಗೆ ಬಂದಿದ್ದ ಮಹಿಳೆ ಬಟ್ಟೆ ಹರಿದು ಬೌನ್ಸರ್ಸ್‍ನಿಂದ ಹಲ್ಲೆ

    ಮತ್ತೊಂದೆಡೆ ವಿವಾಹಿತ ಹಿಂದೂ ಮಹಿಳೆಯೊಬ್ಬರು ಮೀರ್‌ಪುರ್‌ಖಾಸ್‌ನಿಂದ ಕಾಣೆಯಾಗಿದ್ದು, ಇಸ್ಲಾಂಗೆ ಮತಾಂತರಗೊಂಡಿದ್ದಾರೆ. ನಂತರ ಅವರು ಮುಸ್ಲಿಂ (Muslim) ವ್ಯಕ್ತಿಯನ್ನು ವಿವಾಹವಾಗಿದ್ದಾರೆ. ಮಹಿಳೆಗೆ ಮೂರು ಮಕ್ಕಳಿದ್ದಾರೆ ಎಂದು ಹೇಳಲಾಗಿದೆ. ಈ ಸಂಬಂಧ ಮಹಿಳೆಯ ಪತಿ ರವಿ ಕುರ್ಮಿ ಅವರು ದೂರು ನೀಡಿದ್ದು, ಎಫ್‌ಐಆರ್ (FIR) ದಾಖಲಿಸಲು ಪೊಲೀಸರು (Police) ನಿರಾಕರಿಸಿದ್ದಾರೆ ಎನ್ನಲಾಗಿದೆ. ನೆರೆಯ ಅಹ್ಮದ್ ಚಾಂಡಿಯೊ ಎಂಬಾತ ತನ್ನ ಪತ್ನಿಗೆ ಹಿಂಸೆ ನೀಡುತ್ತಿದ್ದ. ಬಲವಂತವಾಗಿ ಅಪಹರಿಸಿ ಇಸ್ಲಾಂಗೆ ಮತಾಂತರಿಸಿದ್ದಾನೆ ಎಂದು ರವಿ ಆರೋಪಿಸಿದ್ದಾರೆ.

    ಆದರೆ ವಿವಾಹಿತ ಮಹಿಳೆ ರಾಖಿ ತನ್ನ ಸ್ವಂತ ಇಚ್ಛೆಯ ಮೇರೆಗೆ ಮತಾಂತರಗೊಂಡಿರುವುದಾಗಿಯೂ, ಮುಸ್ಲಿಂ ಪುರುಷನನ್ನು ಮದುವೆಯಾಗಿರುವುದಾಗಿಯೂ ಹೇಳಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

    ಮೂರೂ ಪ್ರಕರಣಗಳನ್ನೂ ತನಿಖೆ ಮಾಡಲಾಗುತ್ತಿದೆ ಎಂದು ಮೀರ್‌ಪುರ್‌ಖಾಸ್ ಪೊಲೀಸರು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನನ್ನನ್ನು ವೇಶ್ಯಾವಾಟಿಕೆಗೆ ಒತ್ತಾಯಿಸ್ತಿದ್ರು- ಅಂಕಿತಾ ಭಂಡಾರಿ ವಾಟ್ಸಾಪ್ ಸಂದೇಶ ವೈರಲ್

    ನನ್ನನ್ನು ವೇಶ್ಯಾವಾಟಿಕೆಗೆ ಒತ್ತಾಯಿಸ್ತಿದ್ರು- ಅಂಕಿತಾ ಭಂಡಾರಿ ವಾಟ್ಸಾಪ್ ಸಂದೇಶ ವೈರಲ್

    ಡೆಹ್ರಾಡೂನ್: ಇತ್ತೀಚೆಗಷ್ಟೇ ನಾಪತ್ತೆಯಾಗಿ ತಾನು ಕೆಲಸ ಮಾಡುತ್ತಿದ್ದ ರೆಸಾರ್ಟ್‌ನಲ್ಲಿಯೇ (Resort) ಶವವಾಗಿ ಪತ್ತೆಯಾಗಿದ್ದ ಉತ್ತರಾಖಂಡದ (Uttarakhand) ಯುವತಿ (Young Women) ಅಂಕಿತಾ ಭಂಡಾರಿ ಸಾವಿಗೂ ಮುನ್ನ ತನ್ನ ಸ್ನೇಹಿತರಿಗೆ ಕಳುಹಿಸಿದ್ದ ವಾಟ್ಸಾಪ್ ಸಂದೇಶಗಳು (WhatsApp Message) ಬಹಿರಂಗಗೊಂಡಿವೆ.

    ಹೌದು.. ಹತ್ಯೆಗೀಡಾದ ಉತ್ತರಾಖಂಡದ (Uttarakhand Murder) ಯುವತಿ `ನನ್ನನ್ನು ವೇಶ್ಯಾವಾಟಿಕೆ (Prostitute) ಮಾಡುವಂತೆ ಒತ್ತಾಯಿಸುತ್ತಿದ್ದಾರೆ, ಎಲ್ಲರೂ ನನ್ನನ್ನು ವೇಶ್ಯೆಯಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ’ ಎಂದು ಸಾಯುವ ಮುನ್ನ ಸ್ನೇಹಿತರಿಗೆ ಕಳುಹಿಸಿದ್ದ ಸಂದೇಶಗಳು ಬೆಳಕಿಗೆ ಬಂದಿವೆ. ಈ ಸಂದೇಶಗಳು ಆರೋಪವನ್ನು ಬಲವಾಗಿ ದೃಢಪಡಿಸುವಂತೆ ಸೂಚಿಸುತ್ತಿವೆ.

    ಯುವತಿ ಸಂದೇಶ ಏನಿತ್ತು?
    ಸಾಯವ ಮುನ್ನ ಯುವತಿ `10 ಸಾವಿರ ಹಣ ನೀಡಿ ನನ್ನನ್ನು ವೇಶ್ಯಾವಾಟಿಕೆ ಮಾಡುವಂತೆ ಒತ್ತಾಯಿಸುತ್ತಿದ್ದಾರೆ, ವ್ಯಕ್ತಿಯೊಬ್ಬ ಅನುಚಿತವಾಗಿ ಸ್ಪರ್ಶಿಸುತ್ತಿದ್ದಾನೆ ಎಂಬುದಾಗಿ ವಾಟ್ಸಾಪ್ (WhatsApp Message) ಮಾಡಿದ್ದಾಳೆ. ಸಂತ್ರಸ್ತೆಯ ವಾಟ್ಸಾಪ್‌ ಸಂದೇಶದ ಸ್ಕ್ರೀನ್‌ಶಾಟ್‌ಗಳು ಜಾಲತಾಣದಲ್ಲಿ ಹರಿದಾಡುತ್ತಿವೆ. ಈ ಸಂದೇಶಗಳು ಸಾಯುವ ಮುನ್ನ ಮೃತ ಯುವತಿಯಿಂದಲೇ ಬಂದಿವೆ ಎಂಬುದನ್ನು ಪ್ರಾಥಮಿಕ ತನಿಖೆ ದೃಢಪಡಿಸಿದೆ. ಅದರ ಹೊರತಾಗಿಯೂ ವಿಧಿ ವಿಜ್ಞಾನ (Forensic Investigation) ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು (Police) ತಿಳಿಸಿದ್ದಾರೆ.

    ಸಂತ್ರಸ್ತ ಮಹಿಳೆಯಿಂದ ರೆಸಾರ್ಟ್ ಉದ್ಯೋಗಿಯೊಬ್ಬರಿಗೆ ಕರೆ ಮಾಡಿದ ಕಾಲ್ ರೆಕಾರ್ಡ್ ಕ್ಲಿಪ್ ಸಹ ಪೊಲೀಸರಿಗೆ ಲಭ್ಯವಾಗಿದೆ. ರೆಸಾರ್ಟ್ ಅತಿಥಿಗಳಿಗೆ ವಿಶೇಷ ಲೈಂಗಿಕ ಸೇವೆ ಒದಗಿಸುವಂತೆ ರೆಸಾರ್ಟ್ ಮಾಲೀಕ ಒತ್ತಡ ಹೇರುತ್ತಿದ್ದರು ಎಂಬ ಸ್ಫೋಟಕ ಸತ್ಯ ಆಡಿಯೋನಲ್ಲಿ ಕೇಳಿಬಂದಿದೆ ಎಂದು ಉತ್ತರಾಖಂಡದ ಉನ್ನತ ಪೊಲೀಸ್ ಅಶೋಕ್ ಕುಮಾರ್ ಹೇಳಿದ್ದಾರೆ.

    ಏನಿದು ಪ್ರಕರಣ?
    ಇತ್ತೀಚೆಗೆ ಉತ್ತರಾಖಂಡದ ಬಿಜೆಪಿ ಮುಖಂಡನ ಮಾಲೀಕತ್ವದಲ್ಲಿದ್ದ ರೆಸಾರ್ಟ್‌ನಲ್ಲಿ ಅಂಕಿತಾ ಭಂಡಾರಿ (19) ಯುವತಿ ಶವವಾಗಿ ಪತ್ತೆಯಾಗಿದ್ದಳು. ಈ ಕುರಿತು ತನಿಖೆ ಕೈಗೊಂಡಿರುವ ಪೊಲೀಸರು ಬಿಜೆಪಿ ಮುಖಂಡ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಮಹಿಳೆಯರು ಸುರಕ್ಷಿತವಾಗಿದ್ದರೆ ಮಾತ್ರ ಭಾರತದ ಪ್ರಗತಿ ಸಾಧ್ಯ – ರಾಹುಲ್ ಗಾಂಧಿ

    ಮಹಿಳೆಯರು ಸುರಕ್ಷಿತವಾಗಿದ್ದರೆ ಮಾತ್ರ ಭಾರತದ ಪ್ರಗತಿ ಸಾಧ್ಯ – ರಾಹುಲ್ ಗಾಂಧಿ

    ನವದೆಹಲಿ: ಉತ್ತರಪ್ರದೇಶದ (UttarPradesh) ಮೊರದಾಬಾದ್ ಅತ್ಯಾಚಾರ ಪ್ರಕರಣ ಹಾಗೂ ಉತ್ತರಾಖಂಡದ ಪೌರಿ ಜಿಲ್ಲೆಯಲ್ಲಿ ಯುವತಿ ಹತ್ಯೆ ಪ್ರಕರಣಗಳ ಬಗ್ಗೆ ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ಆತಂಕ ವ್ಯಕ್ತಪಡಿಸಿದ್ದಾರೆ. ಮಹಿಳೆಯರು ಸುರಕ್ಷಿತವಾಗಿ ಇದ್ದರೆ ಮಾತ್ರವೇ ಭಾರತ ಪ್ರಗತಿ ಹೊಂದುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

    ಘಟನೆಗೆ ಟ್ವೀಟ್ (Twitter) ಮೂಲಕ ಆಕ್ಷೇಪ ವ್ಯಕ್ತಪಡಿಸಿರುವ ರಾಹುಲ್ ಗಾಂಧಿ, `ಮೊರಾದಾಬಾದ್ ಮತ್ತು ಉತ್ತರಾಖಂಡದಲ್ಲಿ ನಡೆದ ಘಟನೆಗಳು ಎಲ್ಲರನ್ನೂ ಬೆಚ್ಚಿಬೀಳಿಸಿವೆ. ಭಾರತ್ ಜೋಡೋ (Bharath Jodo Yatra) ಯಾತ್ರೆಯಲ್ಲಿ ಅನೇಕ ಪ್ರತಿಭಾವಂತ ಮಹಿಳೆಯರು ಹಾಗೂ ಯುವತಿಯರನ್ನು ಭೇಟಿಯಾಗುತ್ತಿದ್ದೇನೆ. ಅವರೊಂದಿಗೆ ಸಂವಾದ ನಡೆಸುತ್ತಿದ್ದೇನೆ. ಆದರೆ ಒಂದು ವಿಷಯ ಸ್ಪಷ್ಟವಾಗಿದೆ. ದೇಶದಲ್ಲಿ ಮಹಿಳೆಯರು ಸುರಕ್ಷಿತವಾಗಿ ಇದ್ದಾಗ ಮಾತ್ರವೇ ನಮ್ಮ ಭಾರತ ಪ್ರಗತಿಯಾಗುತ್ತದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಏನಿದು ಘಟನೆ?
    ಇದೇ ಸೆಪ್ಟೆಂಬರ್ 1 ರಂದು ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ 15ರ ಹುಡುಗಿಯನ್ನು ಕಾಡಿಗೆ ಎಳೆದೊಯ್ದು ಗ್ಯಾಂಗ್ ರೇಪ್ (Gang Rape) ನಡೆಸಲಾಗಿತ್ತು. ಹುಡುಗಿ ಕಾಡಿನಿಂದ ತಪ್ಪಿಸಿಕೊಂಡು ಬೆತ್ತಲಾಗಿಯೇ ಓಡಿಬಂದಿದ್ದರು. ಸಿಸಿಟಿವಿಯಲ್ಲಿ (CCTV) ಸೆರೆಯಾದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆಕೆ ಪೋಷಕರೊಡನೆ ಘಟನೆ ಹೇಳಿಕೊಂಡ ಬಳಿಕ ಪೊಲೀಸ್ ಠಾಣೆಗೆ (Police Station) ಕರೆದೊಯ್ದು ದೂರು ದಾಖಲಿಸಲಾಯಿತು. ಇದಾದ 13 ದಿನಗಳ ನಂತರ ಪೊಲೀಸರು ಮೊದಲ ಆರೋಪಿಯನ್ನಷ್ಟೇ ಬಂಧಿಸಿದ್ದಾರೆ. ಈ ಘಟನೆ ನಿನ್ನೆಯಷ್ಟೇ ಬೆಳಕಿಗೆ ಬಂದಿದೆ.

    ಉತ್ತರಾಖಂಡದ ಪೌರಿ ಜಿಲ್ಲೆಯಲ್ಲಿ ಅಂಕಿತಾ ಭಂಡಾರಿ ಎಂಬ ಯುವತಿ ತಾನು ಕೆಲಸ ಮಾಡುತ್ತಿದ್ದ ಲಕ್ಷ್ಮಣ್ ಜುಲಾ ಪ್ರದೇಶದ ಖಾಸಗಿ ರೆಸಾರ್ಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ರೆಸಾರ್ಟ್ ಮಾಲೀಕ, ಮ್ಯಾನೇಜರ್ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ. ಇದರಲ್ಲಿ ಬಿಜೆಪಿ ಮುಖಂಡನೊಬ್ಬ ಇದ್ದಾನೆ.

    Live Tv
    [brid partner=56869869 player=32851 video=960834 autoplay=true]

  • ಮದುವೆ ಭರವಸೆ – ಹುಡುಗಿ ಸ್ನಾನದ ವೀಡಿಯೋ ಕಳಿಸಿಕೊಂಡು ಬ್ಲ್ಯಾಕ್‌ಮೇಲ್‌

    ಮದುವೆ ಭರವಸೆ – ಹುಡುಗಿ ಸ್ನಾನದ ವೀಡಿಯೋ ಕಳಿಸಿಕೊಂಡು ಬ್ಲ್ಯಾಕ್‌ಮೇಲ್‌

    ಡೆಹ್ರಾಡೂನ್: ಫೇಸ್‌ಬುಕ್‌ನಲ್ಲಿ (FaceBook) ಪರಿಚಯವಾದ ಯುವಕನೊಬ್ಬ ಅಪ್ರಾಪ್ತೆಯನ್ನು ಮದುವೆಯಾಗುವುದಾಗಿ (Marriage) ಭರವಸೆ ನೀಡಿ, ಆಕೆಯಿಂದ ಖಾಸಗಿ ವೀಡಿಯೋಗಳನ್ನು (Private Video) ಕಳಿಸಿಕೊಂಡ ನಂತರ ತನ್ನ ಸ್ನೇಹಿತರೊಂದಿಗೂ ದೈಹಿಕ ಸಂಪರ್ಕ ಬೆಳೆಸುವಂತೆ ಕಿರುಕುಳ ನೀಡಿರುವ ಘಟನೆ ಉತ್ತರಾಖಂಡದ ಉಧಮ್ ಸಿಂಗ್ ನಗರದಲ್ಲಿ ನಡೆದಿದೆ.

    ಯುವಕ ತನ್ನೊಂದಿಗೆ ಅಕ್ರಮ ಸಂಬಂಧ ಹೊಂದಿರುವುದಾಗಿ ಹುಡುಗಿ ನೀಡಿದ ದೂರಿನ ಮೇರೆಗೆ ದಿನೇಶಪುರ ಪೊಲೀಸ್ (Uttarakhand Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಐಪಿಸಿ ಸೆಕ್ಷನ್ ((IPC Section) 376 (ಬಲವಂತದ ಸಂಭೋಗ), 304 (ಕೊಲೆ ಎಂದು ಪರಿಗಣಿಸಲಾದ ಆಪರಾಧಿಕ ಮಾನವ ಹತ್ಯೆ) ಮತ್ತು 306 (ಆತ್ಮಹತ್ಯೆಗೆ ಪ್ರಚೋದನೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

    ಏನಿದು ಫೇಸ್‌ಬುಕ್ ಪ್ರೇಮ ಪರಿಚಯ?
    3 ವರ್ಷಗಳ ಹಿಂದೆ ಫೇಸ್‌ಬುಕ್‌ನಲ್ಲಿ (FaceBook) ಯುವಕ ಹಾಗೂ ಹುಡುಗಿಯ ಪರಿಚಯವಾಗಿದೆ. ನಂತರ ಸ್ನೇಹ ಪ್ರೀತಿಗೆ ತಿರುಗಿದೆ. ಇದೇ ವೇಳೆ ಯುವಕ ತನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡಿ, ಆಕೆ ಸ್ನಾನ ಗೃಹದಲ್ಲಿ ನಿಂತು ಖಾಸಗಿ ವೀಡಿಯೋ ಹಾಗೂ ಫೋಟೋಗಳನ್ನು ಕಳುಹಿಸುವಂತೆ ಕೇಳಿಕೊಂಡಿದ್ದಾನೆ. ಆಕೆ ಎಂಎಂಎಸ್ (MMS) ನಲ್ಲಿ ಫೋಟೋ ವೀಡಿಯೋಗಳನ್ನು ಕಳುಹಿಸಿದ ನಂತರ ಬ್ಲಾಕ್ ಮೇಲ್ (Blackmail) ಮಾಡಲು ಶುರು ಮಾಡಿದ್ದಾನೆ. ಅಲ್ಲದೇ ಮದುವೆ (Marriage) ಪ್ರಸ್ತಾಪ ನಿರಾಕರಿಸಿ ತನ್ನ ಸ್ನೇಹಿತರ ಜೊತೆ ದೈಹಿಕ ಸಂಪರ್ಕ ಬೆಳೆಸುವಂತೆ ಒತ್ತಡ ಹೇರಲು ಮುಂದಾಗಿದ್ದಾನೆ. ಇದಕ್ಕೆ ಹುಡುಗಿ ಒಪ್ಪದೇ ಇದ್ದರಿಂದ ಆಕೆಯ ಖಾಸಗಿ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ (Social Media) ಹರಿಯಬಿಟ್ಟಿದ್ದಾನೆ. ಇದರಿಂದ ಮನನೊಂದ ಹುಡುಗಿ ಪೋಷಕರಿಗೆ ವಿಷಯ ತಿಳಿಸಿ ದೂರು ದಾಖಲಿಸಿದ್ದಾಳೆ.

    ಉತ್ತರಾಖಂಡದ ಉಧಮ್ ಸಿಂಗ್ ನಗರದ ದಿನೇಶಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

    Live Tv
    [brid partner=56869869 player=32851 video=960834 autoplay=true]

  • ಕರಾಟೆ ಕ್ಲಾಸ್‌ನಲ್ಲಿ ನಡೀತಿತ್ತು PFI ಉಗ್ರ ಚಟುವಟಿಕೆಯ ರಣತಂತ್ರ – NIA ದಾಳಿಗೂ ಅದೇ ಕಾರಣ

    ಕರಾಟೆ ಕ್ಲಾಸ್‌ನಲ್ಲಿ ನಡೀತಿತ್ತು PFI ಉಗ್ರ ಚಟುವಟಿಕೆಯ ರಣತಂತ್ರ – NIA ದಾಳಿಗೂ ಅದೇ ಕಾರಣ

    ಬೆಂಗಳೂರು: ದೇಶಾದ್ಯಂತ ಪಿಎಫ್‌ಐ (PFI) ವಿರುದ್ಧ ನಡೆದ ಎನ್‌ಐಎ (NIA) ದಾಳಿಗೆ ತೆಲಂಗಾಣದ ಆಟೋನಗರ್‌ನಲ್ಲಿ ನಡೆಯುತ್ತಿದ್ದ ಕರಾಟೆ ಕ್ಲಾಸ್ (Karate Class) ಕಾರಣ ಎನ್ನುವ ಸ್ಫೋಟಕ ಸತ್ಯ ಬಯಲಾಗಿದೆ.

    ತೆಲಾಂಗಣದ (Talangana) ಆಟೋನಗರ್ ನಲ್ಲಿ ಅಬ್ದುಲ್ ಖಾದರ್ ಎಂಬಾತ ನಡೆಸುತ್ತಿದ್ದ ಕರಾಟೆ ಕ್ಲಾಸ್ (Karate Class) ಇದಕ್ಕೆಲ್ಲಾ ಕಾರಣ. ಕರಾಟೆ ಕ್ಲಾಸ್ ನೆಪದಲ್ಲಿ ಪಿಎಫ್‌ಐ ಸದಸ್ಯರಿಗೆ ಇಲ್ಲಿ ಉಗ್ರ ಚಟುವಟಿಕೆಯ ಬಗ್ಗೆ ತರಬೇತಿ ನೀಡಲಾಗುತ್ತಿತ್ತು. ಈ ಬಗ್ಗೆ ಹೈದರಾಬಾದ್‌ನ (Hyderabad) ಎನ್‌ಐಎನಲ್ಲಿ ಪ್ರಕರಣ ದಾಖಲಾಗಿತ್ತು ಎಂದು ತಿಳಿದುಬಂದಿದೆ.

    ಹೈದರಾಬಾದ್ ಎನ್‌ಐಎನಲ್ಲಿ ಆರೋಪಿ ಅಬ್ದುಲ್ ಖಾದರ್ ಸೇರಿ 27 ಜನರ ವಿರುದ್ಧ ಎಫ್‌ಐಆರ್ (FIR) ದಾಖಲಾಗಿತ್ತು. ಇದರಲ್ಲಿ ಹಲವರನ್ನು ಎನ್ಐ‌ಎ ಧಿಕಾರಿಗಳು (NIA Officers) ಬಂಧಿಸಿದ್ದರು. ಕರಾಟೆ ಕ್ಲಾಸ್‌ನಲ್ಲಿದ್ದವರನ್ನು ವಿಚಾರಣೆ ನಡೆಸುತ್ತಿದ್ದ ವೇಳೆ ವಿಧ್ವಂಸಕ ಕೃತ್ಯಗಳ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿದೆ. ಆರೋಪಿಗಳು ದೇಶಾದ್ಯಂತ ಇದೇ ರೀತಿ ಸಂಚು ಮಾಡುತ್ತಿರುವುದರ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟಿದ್ದಾರೆ.

    ಈ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿದ ಎನ್‌ಐಎ ಅಧಿಕಾರಿಗಳ ತಂಡ ಏಕಕಾಲಕ್ಕೆ ದೇಶದ 15 ರಾಜ್ಯಗಳಲ್ಲಿ 93 ಕಡೆ ದಾಳಿ ಮಾಡಿದೆ ಎಂದು ಹೈದರಾಬಾದ್ ಎನ್‌ಐಎ ಅಧಿಕಾರಿಗಳು ದಾಖಲಿಸಿದ್ದ ಎಫ್‌ಐಆರ್ ಮಾಹಿತಿ ಬಹಿರಂಗಗೊಂಡಿದೆ.

    Live Tv
    [brid partner=56869869 player=32851 video=960834 autoplay=true]

  • ಗಾಂಜಾ ದಂಧೆಕೋರರಿಂದಲೇ ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ – ICUನಲ್ಲಿ ಸಿಪಿಐ

    ಗಾಂಜಾ ದಂಧೆಕೋರರಿಂದಲೇ ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ – ICUನಲ್ಲಿ ಸಿಪಿಐ

    ಕಲಬುರಗಿ: ಗಾಂಜಾ ದಂಧೆ ಪ್ರಕರಣದ ಕಾರ್ಯಾಚರಣೆಗೆ ತೆರಳಿದ್ದ ಸಿಪಿಐ (CPI) ಇಲ್ಲಾಳ ನೇತೃತ್ವದ ಪೊಲೀಸರ (Kalaburagi Police) ತಂಡದ ಮೇಲೆ ಗಾಂಜಾ ದಂಧೆಕೋರರು ಪೊಲೀಸರ ಮೇಲೆಯೇ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

    ಕರ್ನಾಟಕ ಮಹಾರಾಷ್ಟ್ರ ಗಡಿಯಂಚಿನಲ್ಲಿರುವ (Karnataka Maharashtra Border) ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಭೋಸಗಾ ಗ್ರಾಮದಲ್ಲಿ ಹಲ್ಲೆ ನಡೆದಿದೆ. ಆ ಗ್ರಾಮದಲ್ಲಿಯೇ ಮಹಾರಾಷ್ಟ್ರ ಮೂಲದ ಕೆಲ ವ್ಯಕ್ತಿಗಳು ಗಾಂಜಾ ಬೆಳೆದಿದ್ದರು ಎಂದು ಹೇಳಲಾಗಿದೆ.

    ದಂಧೆಕೋರರು ಕಲಬುರಗಿ ಜಿಲ್ಲಾ ಗ್ರಾಮೀಣ ಠಾಣೆ ಸಿಪಿಐ ಶ್ರೀಮಂತ ಇಲ್ಲಾಳ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಅವರನ್ನು ಕಲಬುರಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ತಲೆ, ಮುಖ, ಹೊಟ್ಟೆ ಭಾಗಗಳಲ್ಲಿ ಗಂಭೀರ ಗಾಯಗೊಂಡಿರುವ ಇಲ್ಲಾಳ ಅವರೀಗ ಪ್ರಜ್ಞಾಹೀನ ಸ್ಥಿತಿಯಲ್ಲಿ ಐಸಿಯು (ICU)ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಏನಿದು ಗಾಂಜಾ ಕೇಸ್?
    ಗಾಂಜಾ ದಂಧೆ ಕೇಸ್‌ನಲ್ಲಿ ಕಾರ್ಯಾಚರಣೆಗೆ ಹೋಗಿದ್ದ ಇಲ್ಲಾಳ ನೇತೃತ್ವದ ಪೊಲೀಸ್ ತಂಡ, ಕಳೆದ 2-3 ದಿನಗಳ ಹಿಂದೆ ಆರೋಪಿ ಸಂತೋಷ ಸೇರಿದಂತೆ ಅನೇಕ ಗಾಂಜಾ ದಂಧೆಕೋರರನ್ನೂ ಬಂಧಿಸಲಾಗಿತ್ತು. ನಿನ್ನೆ ಮಧ್ಯಾಹ್ನವು ಸಹ ಗಾಂಜಾ ದಂಧೆ ಬೇಧಿಸಲು ಸಿಪಿಐ (CPI) ಶ್ರೀಮಂತ ಇಲ್ಲಾಳ ನೇತೃತ್ವದಲ್ಲಿ 10 ಜನರ ಪೊಲೀಸ್ ತಂಡ ಮಹಾರಾಷ್ಟ್ರಕ್ಕೆ (Maharashtra) ಹೋಗಿತ್ತು. ಇದನ್ನೂ ಓದಿ: ನನ್ನ ಸ್ಫೋಟಕ ಬ್ಯಾಟಿಂಗ್ ಕಂಡು ನಾನೇ ಶಾಕ್ – ಪಂದ್ಯ ಗೆದ್ದರೂ ಹೀಗೇಕೆ ಅಂದ್ರು ಹಿಟ್‌ಮ್ಯಾನ್‌?

    ಗಾಂಜಾ ಬೆಳೆಯುವ ಹೊಲಗಳಿಗೆ (Ganja Plant) ಹೋಗಿದ್ದ ಪೊಲೀಸರ ಮೇಲೆ ರಾತ್ರಿ 9:30ರ ವೇಳೆಗೆ ಸುಮಾರು 30-40 ಮಂದಿ ಗಾಂಜಾ ದಂಧೆಕೋರರು ಕಟ್ಟಿಗೆಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ದಾಳಿ ಮಾಡುತ್ತಿದ್ದಂತೆ ಸಿಪಿಐ ಶ್ರೀಮಂತ ಇಲ್ಲಾಳ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆದರೂ ಗಾಂಜಾ ದಂಧೆಕೋರರು ಪೊಲೀಸರನ್ನೆ ಅಟ್ಟಾಡಿಸಿದ್ದಾರೆ. ಕೊನೆಗೆ ಪ್ರಾಣ ಉಳಿಸಿಕೊಳ್ಳಲು ಪೊಲೀಸರು ಚೆಲ್ಲಾಪಿಲ್ಲಿಯಾಗಿ ಓಡಿಹೋಗಿದ್ದಾರೆ. ಗಂಭೀರ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸಿಪಿಐ ಇಲ್ಲಾಳ ಅವರನ್ನ ಮಧ್ಯರಾತ್ರಿ 2:30ರ ವೇಳೆಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಸದ್ಯ ಕಲಬುರಗಿಯ ಖಾಸಗಿ ಆಸ್ಪತ್ರೆಗೆ (Private Hospital) ಎಸ್ಪಿ ಈಶಾ ಪಂತ್ ಭೇಟಿ ನೀಡಿದ್ದು, ಶ್ರೀಮಂತ ಇಲ್ಲಾಳ ಆರೋಗ್ಯದ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದಿದ್ದಾರೆ. ಕಲಬುರಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಶ್ರೀಮಂತ್ ಇಲ್ಲಾಳಗೆ ಡಾ.ಸುದರ್ಶನ್ ಲಾಖೆ, ಡಾ.ರಾಕೇಶ್ ನೇತೃತ್ವದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: Bigg Boss Special- ಈ ಬಾರಿ ಬಿಗ್ ಬಾಸ್ 9 ಮನೆ ಪ್ರವೇಶ ಮಾಡಿರುವ ಖ್ಯಾತ ಕಿರುತೆರೆ ನಟಿಯರಿವರು

    ಈ ಕುರಿತು ಮಾಹಿತಿ ನೀಡಿರುವ ವೈದ್ಯ (Doctor) ಡಾ.ಸುದರ್ಶನ, ಶ್ರೀಮಂತ ಇಲ್ಲಾಳ್ ಅವರ ಸ್ಥಿತಿ ಗಂಭೀರವಾಗಿದೆ. ದೇಹದ ವಿವಿಧ ಭಾಗಗಳಲ್ಲಿ ಗಾಯಗಳಾಗಿವೆ. ಪಕ್ಕೆಲುಬು, ಮುಖದ ಎಲುಬುಗಳು ಮುರಿದಿವೆ. ಮೆದುಳಿನ ಭಾಗಕ್ಕೂ ಗಾಯಗಳಾಗಿದ್ದು, ಮೆದುಳಿನಲ್ಲಿ ರಕ್ತಸ್ರಾವವಾಗಿದೆ. ಮುಂಜಾನೆ 4 ಗಂಟೆಗೆ ಆಸ್ಪತ್ರೆಗೆ ದಾಖಲಿಸಿದ್ದು, ಆರೋಗ್ಯ ಸುಧಾರಣೆಗೆ ಎಲ್ಲಾ ರೀತಿಯಲ್ಲೂ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಅವರು ICU (ತೀವ್ರ ನಿಗಾ ಘಟಕ)ನಲ್ಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

    ಬಸವಕಲ್ಯಾಣ ಮಂಠಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

    Live Tv
    [brid partner=56869869 player=32851 video=960834 autoplay=true]

  • ಹಾಸ್ಟೆಲ್ ವಿದ್ಯಾರ್ಥಿನಿಯರ ಸ್ನಾನದ ವೀಡಿಯೋ ಸೆರೆ – ಮೆಸ್ ಸಿಬ್ಬಂದಿಯಿಂದಲೇ ಕೃತ್ಯ

    ಹಾಸ್ಟೆಲ್ ವಿದ್ಯಾರ್ಥಿನಿಯರ ಸ್ನಾನದ ವೀಡಿಯೋ ಸೆರೆ – ಮೆಸ್ ಸಿಬ್ಬಂದಿಯಿಂದಲೇ ಕೃತ್ಯ

    ಗಾಂಧಿನಗರ: ಮೊಹಾಲಿಯಲ್ಲಿರುವ ಚಂಡೀಗಢ ವಿವಿಯಲ್ಲಿ (Chandigarh University) ವಿದ್ಯಾರ್ಥಿನಿಯರ ಖಾಸಗಿ ವೀಡಿಯೋ ಲೀಕ್ ಆದ ಪ್ರಕರಣ (FIR) ತನಿಖೆಯಲ್ಲಿರುವಾಗಲೇ ಅಂತಹದ್ದೇ ಮತ್ತೊಂದು ಪ್ರಕರಣ ಗುಜರಾತ್‌ನ ಸರ್ಕಾರಿ ವಸತಿ ಶಾಲೆಯಲ್ಲಿ (Gujarat Government Residential School) ನಡೆದಿದೆ.

    ದಕ್ಷಿಣ ಗುಜರಾತ್‌ (South Gujarat) ನಲ್ಲಿರುವ ಏಕಲವ್ಯ ಕನ್ಯಾ ಸಾಕ್ಷರತಾ ನಿವಾಸ ಶಾಲೆಯಲ್ಲಿ ಹಾಸ್ಟೆಲ್ ಮೆಸ್ (Hostel Mess) ಸಿಬ್ಬಂದಿಯೇ ಹಾಸ್ಟೆಲ್ ವಿದ್ಯಾರ್ಥಿನಿಯರ ಸ್ನಾನದ ವೀಡಿಯೋ (Private Video) ಚಿತ್ರೀಕರಿಸಿದ್ದಾರೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ. 

    ವಿದ್ಯಾರ್ಥಿಗಳ ಆರೋಪವನ್ನು ಗಂಭೀರವಾಗಿ ಪರಿಗಣಿಸಿರುವ ಗುಜರಾತ್ ಪೊಲೀಸರು (Gujarat Police) ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ವಿದ್ಯಾರ್ಥಿನಿಯರು ಶಾಲೆಯ ಪ್ರಾಂಶುಪಾಲರಿಗೆ ಹಾಗೂ ಪೊಲೀಸರಿಗೆ ಲಿಖಿತ ಅರ್ಜಿ ಮೂಲಕ ದೂರು ನೀಡಿದ್ದಾರೆ. ಯಾರಾದರೂ ಇಂತಹ ವಿಷಯದಲ್ಲಿ ಭಾಗಿಯಾಗಿದ್ದರೆ, ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ವಲ್ಸಾದ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜ್‌ದೀಪ್‌ಸಿನ್ಹ ಝಲಾ ತಿಳಿಸಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿನಿಯರ ಸ್ನಾನದ ವೀಡಿಯೋ ಲೀಕ್ ಪ್ರಕರಣ – ಬಾಯ್‌ಫ್ರೆಂಡ್‌ಗೆ ಹೆದರಿ ವೀಡಿಯೋ ಮಾಡಿದ್ಲು ಸಹಪಾಠಿ

    ಏನಿದು ಘಟನೆ?
    ಇಲ್ಲಿನ ಹಾಸ್ಟೆಲ್ ವಿದ್ಯಾರ್ಥಿನಿಯರಿಗೆ (Hostel Girl Students) ಕಳಪೆ ಗುಣಮಟ್ಟದ ಆಹಾರ (Food) ಪೂರೈಕೆ ಮಾಡುತ್ತಿದ್ದಾರೆ. ಅಡುಗೆಯವರು ಹೆಣ್ಣುಮಕ್ಕಳಿಗೆ ಕಿರುಕುಳ ನೀಡುತ್ತಿದ್ದಾರೆ. ಬುಡಕಟ್ಟು ಹೆಣ್ಣುಮಕ್ಕಳ ವಿರುದ್ಧ ತಾರತಮ್ಯ ಮಾಡುತ್ತಿದ್ದಾರೆ. ಈಗ ವಿದ್ಯಾರ್ಥಿನಿರು ಸ್ನಾನ ಮಾಡುತ್ತಿರುವುದನ್ನು ವೀಡಿಯೋ ಮಾಡಿದ್ದಾರೆ ಮಾಡಿದ್ದಾರೆ ಎಂದು ಹಾಸ್ಟೆಲ್ ವಿದ್ಯಾರ್ಥಿನಿಯರು ಲಿಖಿತ ದೂರಿನಲ್ಲಿ ಆರೋಪಿಸಿದ್ದಾರೆ. ಆದರೆ ನಾಲ್ವರು ಪುರುಷರು ಅಡುಗೆಯವರಿದ್ದು, ಈ ಪೈಕಿ ಒಬ್ಬನ ಬಳಿ ಮಾತ್ರ ಆಂಡ್ರಾಯ್ಡ್ ಫೋನ್ ಇದೆ. ಮೊಬೈಲ್ ಫೋನ್‌ (Mobile Phone) ಅನ್ನು ಪೊಲೀಸರು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿನಿಯರ ಸ್ನಾನದ ವೀಡಿಯೋ ಲೀಕ್‌ ಕೇಸ್‌ – ಹುಡುಗಿಯ ಬಾಯ್‌ಫ್ರೆಂಡ್‌ ಸಹ ಅರೆಸ್ಟ್‌ 

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಶಾಲೆಯ ಪ್ರಾಂಶುಪಾಲರಾದ ನೀತಾ ಚೌಧರಿ, ಕಳಪೆ ಗುಣಮಟ್ಟದ ಆಹಾರ ಪೂರೈಕೆ ಮಾಡಲಾಗುತ್ತಿದೆ ಅನ್ನೋದು ವಿದ್ಯಾರ್ಥಿಗಳ ಪ್ರಾಥಮಿಕ ದೂರು. ಅಲ್ಲದೇ ಅವರು ಮಹಿಳಾ ಅಡುಗೆ ಸಿಬ್ಬಂದಿಯನ್ನೇ ನೇಮಕ ಮಾಡುವಂತೆ ಬೇಡಿಕೆಯಿಟ್ಟಿದ್ದರು ಎಂದು ತಿಳಿಸಿದ್ದಾರೆ. ತನಿಖೆ ಮುಂದುವರಿದಿದೆ.

    Live Tv
    [brid partner=56869869 player=32851 video=960834 autoplay=true]

  • ಕಾಡಿನಲ್ಲಿ ಗ್ಯಾಂಗ್‌ರೇಪ್ – ಬೆತ್ತಲಾಗಿ ಓಡಿಬಂದ ಹುಡುಗಿಗೆ ಹುಚ್ಚಿಯೆಂದು ಕಲ್ಲೆಸೆದ ಜನ

    ಕಾಡಿನಲ್ಲಿ ಗ್ಯಾಂಗ್‌ರೇಪ್ – ಬೆತ್ತಲಾಗಿ ಓಡಿಬಂದ ಹುಡುಗಿಗೆ ಹುಚ್ಚಿಯೆಂದು ಕಲ್ಲೆಸೆದ ಜನ

    ಲಕ್ನೋ: ದಟ್ಟಕಾಡಿನಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ (Gang Rape) ಒಳಗಾದ 15ರ ಹುಡುಗಿ ತಪ್ಪಿಸಿಕೊಂಡು ಬೆತ್ತಲಾಗಿಯೇ ಓಡಿ ಬಂದಿರುವ ಘಟನೆ ಉತ್ತರಪ್ರದೇಶದ (Uttar Pradesh) ಮೊರಾದಾಬಾದ್ ಬೆಳಕಿಗೆ ಬಂದಿದೆ.

    ಹುಡುಗಿ (Girl) ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ. ಯೋಗಿತಾ ಭಯನಾ ಎಂಬವರು ತಮ್ಮ ಟ್ವೀಟ್ (Twitter) ಖಾತೆಯಲ್ಲಿ ವೀಡಿಯೋ ಹಂಚಿಕೊಂಡಿದ್ದು, ಸುಮಾರು 12 ಲಕ್ಷ ಮಂದಿ ವೀಡಿಯೋ ನೋಡಿದ್ದಾರೆ. ಇದನ್ನೂ ಓದಿ: ಇರಾನ್‌ನಲ್ಲಿ ಹಿಜಬ್ ಹೋರಾಟ- ವಾಟ್ಸಪ್, ಇನ್‌ಸ್ಟಾಗ್ರಾಮ್ ಬಳಕೆ ಸ್ಥಗಿತ

    ಇದೇ ಸೆಪ್ಟೆಂಬರ್ 1ರಂದು ಹುಡುಗಿ ಮೇಲೆ ಅತ್ಯಾಚಾರ ನಡೆದಿತ್ತು. ಸೆಪ್ಟೆಂಬರ್ 7ರಂದು ದೂರು ದಾಖಲಾದ 13 ದಿನಗಳ ನಂತರ ಪೊಲೀಸರು (Bojpuri District Police) ಮೊದಲ ಆರೋಪಿಯನ್ನಷ್ಟೇ ಬಂಧಿಸಿದ್ದಾರೆ.

    ಆರೋಪಿಗಳನ್ನು ನಿತಿನ್, ಕಪಿಲ್, ಅಜಯ್, ಇಮ್ರಾನ್, ನೌಶ ಅಲಿ ಎಂದು ಗುರುತಿಸಲಾಗಿದೆ. ಅದರಲ್ಲಿ ನೌಶ ಅಲಿ ಬಂಧಿತನಾಗಿದ್ದು, ಉಳಿದ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಇದನ್ನೂ ಓದಿ: NIA ಮಿಡ್‌ನೈಟ್ ಆಪರೇಷನ್- ಬೆಂಗ್ಳೂರಿನಲ್ಲಿ ಶಂಕಿತ ಉಗ್ರ ಯಾಸಿರ್ ಅರೆಸ್ಟ್

    ಏನಿದು ಘಟನೆ?
    ಇದೇ ತಿಂಗಳ ಸೆ.1ರಂದು ಹುಡುಗಿ ತನ್ನ ನೆರೆ ಊರಿನ ಜಾತ್ರೆ ನೋಡಲು ಸ್ನೇಹಿತೆಯೊಟ್ಟಿಗೆ ಹೋಗಿದ್ದಳು. ಸಂಜೆ 8 ಗಂಟೆ ಹೊತ್ತಿಗೆ ಆಕೆ ಒಬ್ಬಳೇ ವಾಪಸ್ ಮನೆಗೆ ಹೋಗುತ್ತಿದ್ದಾಗ, 2 ಬೈಕ್‌ಗಳಲ್ಲಿ (Bike) ಬಂದ ಐವರು ಕಾಮುಕರು ಹುಡುಗಿಯನ್ನು ಅಪಹರಣ (Kidnap) ಮಾಡಿಕೊಂಡು, ಸೈಯದ್‌ಪುರ್ ಖಾದರ್ ಏರಿಯಾದಲ್ಲಿರುವ ದಟ್ಟ ಕಾಡಿಗೆ (Forest) ಎಳೆದೊಯ್ದು ಅತ್ಯಾಚಾರ ಎಸಗಿದ್ದಾರೆ. ಬಳಿಕ ಬಟ್ಟೆ ಹರಿದು ಬೆತ್ತಲುಗೊಳಿಸಿದ್ದಾರೆ. ತೀವ್ರ ರಕ್ತಸ್ರಾವ ಆಗುತ್ತಿದ್ದ ಆಕೆ ಹೇಗೋ ತಪ್ಪಿಸಿಕೊಂಡು ಬೆತ್ತಲೆ ಸ್ಥಿತಿಯಲ್ಲೇ ಓಡಿ ಬಂದಿದ್ದಾಳೆ. ಹಾಗೇ ಅವಳು ಬೆತ್ತಲಾಗಿ ರಸ್ತೆ ಮೇಲೆ ಬರುತ್ತಿದ್ದಾಗ ಅನೇಕರು ಅವಳೊಬ್ಬ ಹುಚ್ಚಿ ಎಂದು ಭಾವಿಸಿ ಕಲ್ಲು ಎಸೆದಿದ್ದಾರೆ ಎಂದ ಹುಡುಗಿಯ ಚಿಕ್ಕಪ್ಪ ಪೊಲೀಸರಿಗೆ ದೂರು ನೀಡಿದ್ದಾರೆ.

    STOP RAPE

    ಮನೆಗೆ ಬೆತ್ತಲಾಗಿಯೇ ಓಡಿಬಂದ ಯುವತಿ ತನ್ನ ಅಕ್ಕನ ಬಳಿ ವಿಷಯ ಹೇಳಿಕೊಂಡಿದ್ದಾಳೆ. ಅದಾದ 6 ದಿನಗಳ ನಂತರ ಹುಡುಗಿ ಚಿಕ್ಕಪ್ಪ ರಾಮ್ ಅವತಾರ್ ಭೋಜ್‌ಪುರ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಬ್ರೇಕ್‍ಅಪ್ ಮಾಡಿದ್ದಕ್ಕೆ ಪ್ರಿಯತಮೆಯ ನಗ್ನ ಫೋಟೋ ಲೀಕ್ ಮಾಡ್ದ

    ಸದ್ಯ ಈ ಕುರಿತು ಮಾಹಿತಿ ನೀಡಿದ ಪೊಲೀಸರು, ಹುಡುಗಿ ಸ್ವಲ್ಪಮಟ್ಟಿಗೆ ಮಾನಸಿಕ ಅಸ್ವಸ್ಥೆ. ಆಕೆಯನ್ನು ವೈದ್ಯಕೀಯ ತಪಾಸಣಿಗೆ ಒಳಪಡಿಸಲಾಗಿದೆ. ಆದರೆ ಇನ್ನೂ ವರದಿ ಬಂದಿಲ್ಲ, ಅತ್ಯಾಚಾರ ಆಗಿದ್ದು ದೃಢಪಟ್ಟಿಲ್ಲ. ಹಾಗಿದ್ದಾಗ್ಯೂ ಒಬ್ಬಾತನನ್ನು ಅರೆಸ್ಟ್ ಮಾಡಿದ್ದೇವೆ. ಹೆಚ್ಚಿನ ತನಿಖೆ ನಡೆಯುತ್ತಿದೆ. ವೈದ್ಯಕೀಯ ತಪಾಸಣೆ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ವಿದ್ಯಾರ್ಥಿಯೊಂದಿಗೆ ಶಾಲೆಯಲ್ಲೇ ಪಿಟಿ ಟೀಚರ್ ಸೆಕ್ಸ್ – `ಟೀಚರ್ ಆಫ್‌ದಿ ಇಯರ್’ ಗೆದ್ದವಳು ಅರೆಸ್ಟ್

    ವಿದ್ಯಾರ್ಥಿಯೊಂದಿಗೆ ಶಾಲೆಯಲ್ಲೇ ಪಿಟಿ ಟೀಚರ್ ಸೆಕ್ಸ್ – `ಟೀಚರ್ ಆಫ್‌ದಿ ಇಯರ್’ ಗೆದ್ದವಳು ಅರೆಸ್ಟ್

    ವಾಷಿಂಗ್ಟನ್: ವರ್ಷದ ಉತ್ತಮ ಶಿಕ್ಷಕಿ (Teacher of The Year) ಪ್ರಶಸ್ತಿ ಪಡೆದಿದ್ದ ಪಿಟಿ ಶಿಕ್ಷಕಿಯೊಬ್ಬಳು 17 ವರ್ಷದ ವಿದ್ಯಾರ್ಥಿಯೊಂದಿಗೆ (Student) ಲೈಂಗಿಕ ಸಂಬಂಧ ಹೊಂದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಶಿಕ್ಷಕಿಯನ್ನು ಪೊಲೀಸರು (Police) ಬಂಧಿಸಿದ್ದಾರೆ.

    ಅಮೆರಿಕದ ಜೆಂಟ್ರಿ ಇಂಟರ್ ಮೀಡಿಯೇಟ್ ಶಾಲೆಯ (Gentry Intermediate School) ಶಿಕ್ಷಕಿಯಾಗಿರುವ ಲಿಯಾ ಕ್ವೀನ್(43) (Leah Queen) 17ರ ವಿದ್ಯಾರ್ಥಿಯೊಂದಿಗೆ ತಮ್ಮ ಕಚೇರಿಯಲ್ಲೇ ಲೈಂಗಿಕ ಕ್ರಿಯೆ ನಡೆಸಿದ್ದಳು ಎಂದು ಆರೋಪಿಸಲಾಗಿದ್ದು, ಇದೇ ಸೆಪ್ಟೆಂಬರ್ 15ರಂದು ಬಂಧಿಸಿದ್ದಾರೆ. ಡ್ರಗ್ಸ್ (Drug) ಸೇವಿಸಿದ ಆರೋಪವೂ ಅವಳ ಮೇಲಿದೆ. 12 ವರ್ಷಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. 40 ಲಕ್ಷ ರೂ.ಗಳನ್ನು ಪಾವತಿಸಿದ ನಂತರ, ಲಿಯಾಳನ್ನು ಸೆಪ್ಟೆಂಬರ್ 17 ರಂದು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಇದನ್ನೂ ಓದಿ: 3 ದಿನಗಳ ಹಿಂದೆ ಸಭೆ – 6 ಕಂಟ್ರೋಲ್‌ ರೂಂ ಓಪನ್‌ – PFI, SDPI ಮೇಲೆ NIA, ED ದಾಳಿಯ ಇನ್‌ಸೈಡ್‌ ನ್ಯೂಸ್‌

    ಜೆಂಟ್ರಿ ಪೊಲೀಸರು (Police) ಹೇಳುವಂತೆ, 2010ರ ಘಟನೆಯ ಮೇಲೆ ಲಿಯಾಳನ್ನು ಬಂಧಿಸಲಾಯಿತು. ಆಗ ಈಕೆ 17 ವರ್ಷದ ವಿದ್ಯಾರ್ಥಿಯೊಂದಿಗೆ ಲೈಂಗಿಕ ಸಂಬಂಧ ಬೆಳೆಸಿ, ಲೈಂಗಿಕ ಕ್ರಿಯೆಯನ್ನೂ ನಡೆಸಿದ್ದರು ಎನ್ನಲಾಗಿದ್ದು, ಇದೀಗ ಈ ವಿಷಯ ಬಹಿರಂಗವಾಗಿದೆ. ಇದನ್ನೂ ಓದಿ: ಜನಪ್ರಿಯ ಬಲೂನ್ ಆಕ್ಟ್ ಕಲಾವಿದ ಶರವಣ ಧನಪಾಲ್ ನಿಧನ

    ಲಿಯಾ ಕ್ವೀನ್ (Leah Queen) ಕಳೆದ 20 ವರ್ಷಗಳಿಂದಲೂ ಜೆಂಟ್ರಿ ಶಾಲೆಯಲ್ಲಿ ಕೆಲಸ ಮಾಡಿದ್ದ ಲಿಯಾ ಟೀಚರ್ ಆಫ್ ದಿ ಇಯರ್ ಪ್ರಶಸ್ತಿಯನ್ನೂ ಪಡೆದಿದ್ದಳು. ಸದ್ಯ ಆಕೆಯನ್ನು ಕೆಲಸದಿಂದ ಅಮಾನತು ಮಾಡಲಾಗಿದೆ.

    ಏನಿದು ಪಿಟಿ ಟೀಚರ್ ಆಟ?
    ಬಾಸ್ಕೆಟ್ ಬಾಲದ ಆಟದ ಮೂಲಕ ವಿದ್ಯಾರ್ಥಿಯೊಂದಿಗೆ ಲಿಯಾ ಸ್ನೇಹ ಬೆಳೆಸಿದ್ದಳು. ಆ ಸಮಯದಲ್ಲಿ ಹುಡುಗನಿಗೆ 17 ವರ್ಷ ವಯಸ್ಸಾಗಿತ್ತು. ನಂತರ ಲಿಯಾ ಮತ್ತು ಹುಡುಗ ಶಾಲೆ ಬಿಟ್ಟ ನಂತರ ಹೊರಗಡೆಯೂ ಕಾಣಿಸಿಕೊಂಡಿದ್ದರು. ಸಾಮಾಜಿಕ ಮಾಧ್ಯಮಗಳ ಮೂಲಕ ಸಂವಹನ ನಡೆಸಿದ್ದರು. 2010ರ ಬೇಸಿಗೆ ಸಂದರ್ಭದಲ್ಲಿ ವಿದ್ಯಾರ್ಥಿಯನ್ನು ಲೈಂಗಿಕವಾಗಿ ಅವರು ಬಳಸಿಕೊಂಡಿದ್ದಳು. 17 ವರ್ಷದ ವಿದ್ಯಾರ್ಥಿಯನ್ನು ಲಿಯಾ ತಮ್ಮ ಶಾಲಾ ಕಚೇರಿಯ ಬಾತ್‌ರೂಮ್‌ನಲ್ಲಿ ಲೈಂಗಿಕ ಚಟುವಟಿಕೆಗಾಗಿ ಬಳಸಿಕೊಂಡಿದ್ದಳು ಎಂಬುದು ತನಿಖೆ ವೇಳೆ ತಿಳಿದುಬಂದಿದೆ.

    Live Tv
    [brid partner=56869869 player=32851 video=960834 autoplay=true]

  • ಪ್ರಿಯತಮೆಯಿಂದಲೇ ವೈದ್ಯನ ಬರ್ಬರ ಕೊಲೆ- ಸಂಧಾನಕ್ಕೆ ಕರೆದು ಸಾಯಿಸಿದ್ಳು

    ಪ್ರಿಯತಮೆಯಿಂದಲೇ ವೈದ್ಯನ ಬರ್ಬರ ಕೊಲೆ- ಸಂಧಾನಕ್ಕೆ ಕರೆದು ಸಾಯಿಸಿದ್ಳು

    ಬೆಂಗಳೂರು: ಚೆನ್ನೈ ಮೂಲದ ವೈದ್ಯನೊಬ್ಬ (Doctor) ಬೆಂಗಳೂರಿನಲ್ಲಿ (Bengaluru) ಬರ್ಬರವಾಗಿ ಕೊಲೆ (Murder) ಯಾಗಿದ್ದಾನೆ. ಆ ಕೊಲೆ ಮಾಡಿದ್ದು ಬೇರೆ ಯಾರೋ ಅಪರಿಚಿತರಲ್ಲ, ಕೊಲೆಯಾದ ವೈದ್ಯನನ್ನು ಮದುವೆಯಾಗಬೇಕಿದ್ದ (Marriage) ಬಾವಿ ಪತ್ನಿ ಮತ್ತವಳ ಮೂವರು ಸ್ನೇಹಿತರು.

    ಪ್ರಿಯತಮೆಯಿಂದಲೇ (Lover) ಕೊಲೆಯಾದ ಪ್ರಿಯಕರನನ್ನು ವಿಕಾಸ್ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಬಿಜೆಪಿಯವರದ್ದು ಮೊಟ್ಟೆಯ ಕಮಿಷನ್‍ನಂತೆ, ಶಾಲಾ ಬಟ್ಟೆಯಲ್ಲೂ ಕಮಿಷನ್ ಲೂಟಿಯೇ?: ಕಾಂಗ್ರೆಸ್

    ಏನಿದು ಡಾಕ್ಟರ್ ಲವ್ ಮಿಸ್ಟ್ರಿ?
    ತಮಿಳುನಾಡಿನ (Tamilnadu) ಚೆನ್ನೈ ಮೂಲದ ಡಾ.ವಿಕಾಸ್, ಉಕ್ರೇನ್ ನಲ್ಲಿ ಎಮ್‌ಬಿಬಿಎಸ್ (MBBS) ಮಾಡ್ಕೊಂಡು, ಬೆಂಗಳೂರಿನಲ್ಲಿ ವೈದ್ಯನಾಗಿ ಅಭ್ಯಾಸ ಮಾಡ್ತಿದ್ದ. ಇದೇ ವೇಳೆ ಅರ್ಕೆಟಿಕ್ಟ್ ಆಗಿದ್ದ ಪ್ರತಿಭಾ ಅನ್ನೋ ಯುವತಿಯ ಪರಿಚಯವಾಗಿ, ಪರಿಚಯ ಪ್ರೀತಿಯಾಗಿತ್ತು. ನಂತರ ಇಬ್ಬರು ಮದುವೆ ಆಗಬೇಕು ಅಂತಾ ನಿರ್ಧರಿಸಿ ಎರಡು ಕುಟುಂಬಗಳು ಮಾತಾಡಿ ಇನ್ನೇನು ಮೂರು ತಿಂಗಳಲ್ಲಿ ಮದುವೆ ಕೂಡ ಫಿಕ್ಸ್ ಆಗಿತ್ತು.

    ಈ ನಡುವೆ ಅದೊಂದು ದಿನ ಪ್ರತಿಭಾ ಮತ್ತು ವಿಕಾಸ್ (Vikas) ದೈಹಿಕ ಸಂಬಂಧದ ವೇಳೆ ಒಂದಷ್ಟು ನಗ್ನ ಫೋಟೋಗಳನ್ನು ತೆಗೆದುಕೊಂಡಿದ್ರು. ಬರೀ ಇಷ್ಟೇ ಆಗಿದ್ರೆ, ಇವತ್ತು ಡಾಕ್ಟರ್ ವಿಕಾಸ್ ಕೊಲೆಯಾಗ್ತಾ ಇರಲಿಲ್ಲ. ಡಾಕ್ಟರ್ ವಿಕಾಸ್, ಪ್ರಿಯತಮೆ ಜೊತೆಗಿನ ನಗ್ನ ವೀಡಿಯೋವನ್ನು ಸೋಷಿಯಲ್ ಮೀಡಿಯಾದ ಕ್ಲೋಸ್ ಫ್ರೆಂಡ್ಸ್ ಗ್ರೂಪ್ ಗೆ ಶೇರ್ ಮಾಡ್ಕೊಂಡಿದ್ದ.

    ಸಂಧಾನಕ್ಕೆ ಕರೆದು ಕೊಲೆ:
    ಯಾವಾಗ ಪ್ರತಿಭಾಳಿಗೆ ಈ ವಿಚಾರ ಗೊತ್ತಾಯ್ತೋ, ವಿಕಾಸ್ ಬಳಿ ಜಗಳ ಮಾಡಿದಳು. ಡಾಕ್ಟರ್ ವಿಕಾಸ್ ಎಲ್ಲವನ್ನೂ ಡಿಲೀಟ್ ಮಾಡಿ, ಪ್ರಿಯತಮೆಗೆ ಸಾರಿ ಕೂಡ ಕೇಳಿದ್ದ. ಆದರೆ ಇಷ್ಟಕ್ಕೆ ಸುಮ್ಮನಾಗದ ಪ್ರತಿಭಾ, ತನ್ನ ಕ್ಲಾಸ್ ಮೆಟ್‌ಗಳಾದ ಸುಶೀಲ್, ಸೂರ್ಯ, ಗೌತಮ್ ಅನ್ನೋರ ಜೊತೆಗೆ ಪ್ರಿಯಕರ ವಿಕಾಸ್ ನನ್ನು ಮಾತುಕತೆಗೆ ಕರೆಸಿಕೊಂಡಿದ್ರು. ಅದಕ್ಕೆ ಒಪ್ಪಿ ವಿಕಾಸ್ ಕೂಡ ಬಂದಿದ್ದ. ಮಾತಾಡುತ್ತಿದ್ದ ವೇಳೆ ಮಾತಿಗೆ ಮಾತು ಬೆಳೆದು, ಯುವತಿ ಪ್ರತಿಭಾ ಸೇರಿದಂತೆ ನಾಲ್ವರು ಡಾಕ್ಟರ್ ವಿಕಾಸ್‌ಗೆ ಮನೆಯಲ್ಲೇ ಹಿಗ್ಗಾಮುಗ್ಗ ಥಳಿಸಿದ್ರು. ರಾತ್ರಿ ಹತ್ತು ಗಂಟೆಗೆ ಶುರುವಾದ ಗಲಾಟೆ ಮಧ್ಯರಾತ್ರಿ ಒಂದು ಗಂಟೆ ತನಕ ನಡೆದಿತ್ತು. ಕೊನೆಗೆ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ವಿಕಾಸ್ ಸಾವನ್ನಪ್ಪಿದ್ದ.

    ವಿಕಾಸ್ ಸತ್ತುಬಿದ್ದಿರೋದನ್ನು ಲೆಕ್ಕಿಸದ ಪ್ರತಿಭಾ, ಸುಶೀಲ್, ಸೂರ್ಯ, ಗೌತಮ್, ತುಂಬಾ ಹೊಟ್ಟೆ ಹಸಿತಿದೆ ಅಂತಾ ಒಟ್ಟಿಗೆ ಕೂತು ಊಟ ಮಾಡಿದ್ರು. ನಂತರ ಬೆಳಗ್ಗಿನ ಜಾವದ ಹೊತ್ತಿಗೆ ಪ್ರಿಯತಮೆ ಪ್ರತಿಭಾ ಸೆಂಟ್ ಜಾನ್ ಆಸ್ಪತ್ರೆಗೆ ದಾಖಲಿಸೋಕೆ ಮುಂದಾದ ವೇಳೆ ಡಾಕ್ಟರ್ ವಿಕಾಸ್ ಸಾವನ್ನಪ್ಪಿರೋದು ಖಚಿತವಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಬೇಗೂರು ಪೊಲೀಸರು ಪ್ರತಿಭಾ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ. ಮತ್ತೋರ್ವ ಆರೋಪಿಯಾಗಿರುವ ಸೂರ್ಯ ನಾಪತ್ತೆಯಾಗಿದ್ದು, ಪೊಲೀಸರು ಶೋಧ ನಡೆಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]