Tag: crime

  • 132 ಕೃತ್ಯಗಳಲ್ಲಿ ಭಾಗಿಯಾಗಿದ್ದ ಬೆಳಗಾವಿಯ 12 ಆರೋಪಿಗಳು ಗಡಿಪಾರು

    132 ಕೃತ್ಯಗಳಲ್ಲಿ ಭಾಗಿಯಾಗಿದ್ದ ಬೆಳಗಾವಿಯ 12 ಆರೋಪಿಗಳು ಗಡಿಪಾರು

    ಬೆಳಗಾವಿ: 132 ಸಮಾಜ ಘಾತುಕ ಕೃತ್ಯಗಳಲ್ಲಿ (Crime) ಭಾಗಿಯಾಗಿದ್ದ 12 ಜನ ಆರೋಪಿಗಳನ್ನ (Accused) ಬೆಳಗಾವಿ (Belagavi) ಎಸ್ಪಿ ಡಾ.ಸಂಜೀವ್ ಪಾಟೀಲ್ ಗಡಿಪಾರು ಮಾಡಿದ್ದಾರೆ.

    ಬೆಳಗಾವಿ ಜಿಲ್ಲೆಯ ಅಥಣಿ ಉಪವಿಭಾಗದಲ್ಲಿ ಮದಬಾವಿ ಗ್ರಾಮದ ಮೀರಸಾಬ್ ಬಾಗಡಿ, ರಡ್ಡೇರಹಟ್ಟಿ ಗ್ರಾಮದ ಸದಾಶಿವ ಗೊಡಮಾಲೆ, ಉಗಾರ ಬಿ.ಕೆ.ಗ್ರಾಮದ ಮಹಾದೇವ ಕಾಂಬಳೆ, ಕೋಹಳಿ ಗ್ರಾಮದ ರವಿ ಶಿಂಗೆ, ಹಾಲಳ್ಳಿ ಗ್ರಾಮದ ಕಾಶಪ್ಪ ಕಾರಿಕೊಳ್ಳ, ಕಮರಿ ಗ್ರಾಮದ ಪ್ರದೀಪ್ ಕರಡಿ, ಕುಡಚಿ ಗ್ರಾಮದ ಅಲಿಮುರ್ತುಜಾ ಚಮನಮಲೀಕ್, ಸಾಹೇಬ್‌ಹುಸೇನ್ ಚಮನಮಲೀಕ್, ನಜೀರ್ ಹುಸೇನ್ ತಾಂಬೋಳಿ, ಮೊರಬ ಗ್ರಾಮದ ಬಾಬಾಸಾಬ್ ನದಾಫ್, ಚಿಂಚಲಿ ಗ್ರಾಮದ ಲಕ್ಷ್ಮಣ ಪೋಳ, ಅಲ್ತಾಫ್ ಹುಸೇನ್ ಮೇವಗಾರ ಎಂಬ ಆರೋಪಿಗಳನ್ನು ಗಡಿಪಾರು ಮಾಡಲಾಗಿದೆ. ಇದನ್ನೂ ಓದಿ: ಗೆಹ್ಲೋಟ್‌ ಹೊಗಳಿದ ಮೋದಿ – ಲಘುವಾಗಿ ಪರಿಗಣಿಸಬಾರದು ಎಂದು ಎಚ್ಚರಿಸಿದ ಪೈಲಟ್‌

    ಈ 12 ಜನರು 132 ಕೃತ್ಯಗಳಲ್ಲಿ ಭಾಗಿಯಾಗಿದ್ದರು ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಗೋಮಾಂಸ ಮಾರಾಟ ಮಾಡ್ತಿದ್ದ ಇಬ್ಬರನ್ನು ವಿವಸ್ತ್ರಗೊಳಿಸಿ ಹಲ್ಲೆ – ವೀಡಿಯೋ ವೈರಲ್

    ಗೋಮಾಂಸ ಮಾರಾಟ ಮಾಡ್ತಿದ್ದ ಇಬ್ಬರನ್ನು ವಿವಸ್ತ್ರಗೊಳಿಸಿ ಹಲ್ಲೆ – ವೀಡಿಯೋ ವೈರಲ್

    ರಾಯಪುರ: ದನದ ಮಾಂಸ (Beef Meat) ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ನಡುರಸ್ತೆಯಲ್ಲೇ ವಿವಸ್ತ್ರಗೊಳಿಸಿ ಥಳಿಸಿರುವ ಆಘಾತಕಾರಿ ಘಟನೆ ಛತ್ತಿಸ್‌ಗಢದ (Chhattisgarh) ಬಿಸ್ಲಾಪುರದಲ್ಲಿ ನಡೆದಿದೆ.

    ದನದ ಮಾಂಸ ಮಾರಾಟ ಮಾಡುತ್ತಿದ್ದ ಇಬ್ಬರನ್ನು ವಿವಸ್ತ್ರಗೊಳಿಸಿ ರಸ್ತೆಯಲ್ಲಿ ಮೆರವಣಿಗೆ ಮಾಡುತ್ತಿದ್ದಂತೆ ಹಿಂಬದಿಯಿಂದ ಥಳಿಸಲು ಪ್ರಾರಂಭಿಸಿದ್ದಾರೆ. ಹಲವರು ಇದನ್ನು ತಮ್ಮ ಮೊಬೈಲ್ (Mobile) ಫೋನ್‌ಗಳಲ್ಲಿ ಸೆರೆಹಿಡಿದಿದ್ದಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ಹರಿದಾಡುತ್ತಿದೆ. ಇದನ್ನೂ ಓದಿ: ದಕ್ಷಿಣ ಕೊರಿಯಾದ ಹ್ಯಾಲೋವೀನ್ ದುರಂತದಲ್ಲಿ ಖ್ಯಾತ ನಟ, ಗಾಯಕ ಸಾವು

    ಘಟನೆಗೆ ಸಂಬಂಧಿಸಿದಂತೆ ನರಸಿಂಗ್ ದಾಸ್ (50) ಮತ್ತು ರಾಮನಿವಾಸ್ ಮೆಹರ್ (52) ಆರೋಪಿಗಳಿಂದ 33 ಕೆಜಿ ಗೋ ಮಾಂಸ ವಶಪಡಿಸಿಕೊಂಡಿರುವುದಾಗಿ ಪೊಲೀಸರು (Police) ತಿಳಿಸಿದ್ದಾರೆ. ಬಳಿಕ ಇಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಪಶುವೈದ್ಯರಿಂದ ಮಾಂಸ ಪರೀಕ್ಷೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಬುರ್ಖಾ ಹಾಕಿಲ್ಲ ಅಂತ ಅಫ್ಘನ್ ವಿವಿ ಹೊರಗಡೆ ವಿದ್ಯಾರ್ಥಿನಿಯರ ಮೇಲೆ ತಾಲಿಬಾನ್ ದಾಳಿ

    ಆರೋಪಿಗಳಿಬ್ಬರು ಗೋಣಿಚೀಲದಲ್ಲಿ ವಸ್ತುಗಳನ್ನು ತುಂಬಿಕೊಂಡು ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದರು. ಈ ವೇಳೆ ಸ್ಥಳೀಯರು ಅನುಮಾನಗೊಂಡು ಪರಿಶೀಲಿಸಿದಾಗ ಗೋಮಾಂಸ ಇರುವುದು ಪತ್ತೆಯಾಗಿದೆ. ಇದರಿಂದ ಆಕ್ರೋಶಗೊಂಡ ಕೆಲವರು ಅವರನ್ನು ವಿವಸ್ತ್ರಗೊಳಿಸಿ, ರಸ್ತೆಯಲ್ಲೇ ಬೆಲ್ಟ್ನಿಂದ ಥಳಿಸಲು ಪ್ರಾರಂಭಿಸಿದ್ದಾರೆ. ನಂತರ ಪೊಲೀಸರಿಗೆ (Chhattisgarh Police) ಮಾಹಿತಿ ನೀಡಲಾಗಿದ್ದು, ಇಬ್ಬರು ಆರೋಪಿಗಳೊಂದಿಗೆ 33 ಕೆಜಿ ಗೋಮಾಂಸವನ್ನೂ ವಶಪಡಿಸಿಕೊಂಡಿದ್ದಾರೆ.

    CRIME

    ಪಶುವೈದ್ಯರಿಂದ ಇನ್ನೂ ವರದಿ ಬಂದಿಲ್ಲವಾದ್ದರಿಂದ ಆರೋಪಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಪೊಲೀಸ್ ಅಧಿಕಾರಿಗಳೂ ಪ್ರತಿಕ್ರಿಯೆ ನೀಡಿಲ್ಲ.

    Live Tv
    [brid partner=56869869 player=32851 video=960834 autoplay=true]

  • ನಿನ್ನ ಹೆಂಡ್ತಿನ ಗರ್ಭಿಣಿ ಮಾಡಿದ್ದು ನಾನೇ – ಯುವತಿಯ ಗಂಡನೆದುರೇ ಸತ್ಯ ಬಾಯ್ಬಿಟ್ಟ ಆರೋಪಿ

    ನಿನ್ನ ಹೆಂಡ್ತಿನ ಗರ್ಭಿಣಿ ಮಾಡಿದ್ದು ನಾನೇ – ಯುವತಿಯ ಗಂಡನೆದುರೇ ಸತ್ಯ ಬಾಯ್ಬಿಟ್ಟ ಆರೋಪಿ

    ಲಕ್ನೋ: ಉತ್ತರ ಪ್ರದೇಶದ (Uttar Pradesh) ಕಾನ್ಪುರದಲ್ಲಿ ಅತ್ಯಾಚಾರ (Accused) ಆರೋಪಿ ಯುವತಿಯೊಬ್ಬಳ ಜೀವನದಲ್ಲಿ ಚೆಲ್ಲಾಟವಾಡಿದ್ದಲ್ಲದೇ ಯುವತಿಯ ಗಂಡನಿಗೆ ಸಿನಿಮೀಯ ರೀತಿಯಲ್ಲಿ ಸತ್ಯ ಹೇಳಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಅತ್ಯಾಚಾರ ಆರೋಪಿಯನ್ನು ಸೂರಜ್ ಎಂದು ಗುರುತಿಸಲಾಗಿದೆ. ಈತ ಎರಡು ವರ್ಷಗಳ ಹಿಂದೆ ಸಂತ್ರಸ್ತ ಮಹಿಳೆ ಮನೆಗೆ ನುಗ್ಗಿ ಅತ್ಯಾಚಾರವೆಸಗಿದ್ದ. ಯುವತಿ (Girl) ಪೋಷಕರೊಂದಿಗೆ ದೂರು ದಾಖಲಿಸಲು ಮುಂದಾದಾಗ ಆರೋಪಿ ಸೂರಜ್ ಯುವತಿಯನ್ನು ಮದುವೆಯಾಗುವುದಾಗಿ ಆಕೆಯ ತಾಯಿಗೆ ಭರವಸೆ ನೀಡಿದ್ದ. ಅದಾದ 2 ತಿಂಗಳ ಬಳಿಕ ಮದುವೆಯಾಗಲು ನಿರಾಕರಿಸಿದ್ದಾನೆ. ಅಷ್ಟರಲ್ಲಾಗಲೇ ಸಂತ್ರಸ್ತ ಯುವತಿ ಗರ್ಭಿಣಿಯಾಗಿದ್ದಳು (Pregnant). ಹೇಗೋ ಯುವತಿಯ ತಂದೆ ಬೇರೊಬ್ಬ ಹುಡುಗನಿಗೆ ಮದುವೆ ಮಾಡಿಸಿದ್ದರು. ಇದನ್ನೂ ಓದಿ: ಬಂಡೇ ಮಠ ಶ್ರೀ ಆತ್ಮಹತ್ಯೆ ಪ್ರಕರಣ – ಮತ್ತೊಂದು ಪ್ರಭಾವಿ ಮಠದ ಶ್ರೀ ಭಾಗಿ?

    ಯುವತಿ ಮದುವೆಯಾದ (Marriage) ನಂತರ ತವರು ಮನೆಗೆ ಬಂದಿದ್ದಳು. ಈ ವೇಳೆ ಆರೋಪಿ ಸೂರಜ್ ಮತ್ತೆ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ಯುವತಿ ಪ್ರತಿಭಟಿಸಿದ್ದಾಳೆ. ಇದರಿಂದ ಕೋಪಗೊಂಡ ಆರೋಪಿ ಯುವತಿಯ ಪತಿಗೆ `ನಿನ್ನ ಹೆಂಡತಿಯನ್ನು ಗರ್ಭಿಣಿ (Pregnant) ಮಾಡಿದ್ದೇನೆ, ಆಕೆಯ ಹೊಟ್ಟೆಯಲ್ಲಿ ನನ್ನ ಗುರುತು ಇದೆ’ ಎಂದು ಹೇಳಿದ್ದಾನೆ. ಇದರಿಂದ ಕೋಪಗೊಂಡ ಪತಿ ಅದೇ ದಿನ ಪತ್ನಿಯನ್ನು ಬಿಟ್ಟು ಹೋಗಿದ್ದಾನೆ. ಕೆಲವು ತಿಂಗಳ ನಂತರ ಸಂತ್ರಸ್ತ ಯುವತಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಇದನ್ನೂ ಓದಿ: ಮೋರ್ಬಿ ತೂಗು ಸೇತುವೆ ದುರಂತಕ್ಕೆ 135 ಬಲಿ – ಸಂತ್ರಸ್ತರಿಗೆ ಪ್ರಧಾನಿ ಮೋದಿ ಸಾಂತ್ವನ

    CRIME

    ಕಳೆದ ಸೆಪ್ಟೆಂಬರ್ 25 ರಂದು ಸೂರಜ್ ಮತ್ತೆ ಯುವತಿ ಮೇಲೆ ಅತ್ಯಾಚಾರವೆಸಗಿದ್ದಾನೆ. ಯುವತಿ ಎಫ್‌ಐಆರ್ (FIR) ದಾಖಲಿಸಲು ಹೋದಾಗ ಸೂರಜ್ ಒತ್ತಡಕ್ಕೆ ಮಣಿದು ಪೊಲೀಸ್ ಠಾಣೆಯಲ್ಲಿ (Police Station) ಎಫ್‌ಐಆರ್ ದಾಖಲಿಸಿಲ್ಲ. ಆದರೆ ಅಕ್ಟೋಬರ್ 8ರಂದು ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಸಂತ್ರಸ್ತ ಯುವತಿಯ ಪರವಾಗಿ ಶಿವರಾಜಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಆದರೆ ಇಲ್ಲಿಯವರೆಗೆ ಆರೋಪಿ ಸೂರಜ್‌ನನ್ನು ಪೊಲೀಸರು ಬಂಧಿಸಿಲ್ಲ.

    ಡಿಎನ್‌ಎ ವರದಿ ಬರುವಷ್ಟರಲ್ಲೇ ಕೊಲ್ಲುತ್ತೇನೆ: ಡಿಎನ್‌ಎ (DNA) ವರದಿ ಬಂದ ಬಳಿಕ ಆರೋಪಿ ಸೂರಜ್‌ನನ್ನು ಬಂಧಿಸಲಾಗುವುದು ಎಂದು ಕಾನ್ಪುರದ ಪೊಲೀಸರು ತಿಳಿಸಿದ್ದಾರೆ. ಅದಕ್ಕಾಗಿ ಡಿಎನ್‌ಎ ಪರೀಕ್ಷೆ ಮಾಡಲು ಅನುಮತಿ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಈ ವೇಳೆ ಡಿಎನ್‌ಎ ವರದಿ ಬರುವ ಮುನ್ನವೇ ನಿನ್ನನ್ನು ಸಾಯಿಸುತ್ತೇನೆ ಎಂದು ಆರೋಪಿ ಸೂರಜ್ ಬೆದರಿಕೆ ಹಾಕಿದ್ದಾನೆ.

    Live Tv
    [brid partner=56869869 player=32851 video=960834 autoplay=true]

  • ಕ್ರೈಸ್ತ ಧರ್ಮಕ್ಕೆ ಮತಾಂತರವಾಗುವಂತೆ ಒತ್ತಾಯ – 9 ಮಂದಿ ವಿರುದ್ಧ ಕೇಸ್, ಮೂವರು ಅರೆಸ್ಟ್

    ಕ್ರೈಸ್ತ ಧರ್ಮಕ್ಕೆ ಮತಾಂತರವಾಗುವಂತೆ ಒತ್ತಾಯ – 9 ಮಂದಿ ವಿರುದ್ಧ ಕೇಸ್, ಮೂವರು ಅರೆಸ್ಟ್

    ಲಕ್ನೋ: ಲಾಕ್‌ಡೌನ್ (LockDown) ಸಂದರ್ಭದಲ್ಲಿ ಮಾಡಿದ ಸಹಾಯಕ್ಕಾಗಿ ಉತ್ತರಪ್ರದೇಶ (UttarPradesh) ಮೀರತ್‌ನಲ್ಲಿ ಕೆಲವರಿಗೆ ಮತಾಂತರಗೊಳ್ಳುವಂತೆ (Religious Conversion) ಒತ್ತಡ ಹೇರಲಾಗುತ್ತಿದೆ ಎನ್ನುವ ಆರೋಪದ ಮೇಲೆ ಮೂವರು ಮಹಿಳೆಯರು ಸೇರಿದಂತೆ 9 ಮಂದಿ ವಿರುದ್ಧ ಕೇಸ್ (FIR) ದಾಖಲಿಸಲಾಗಿದೆ.

    ಮೀರತ್‌ನ ಬ್ರಹ್ಮಪುರಿ ಪೊಲೀಸ್ (Police) ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಆರೋಪಿಗಳನ್ನು ಛಬಿಲಿ ಅಲಿಯಾಸ್ ಶಿವ, ಬಿನ್ವಾ, ಅನಿಲ್, ಸರ್ದಾರ್, ನಿಕ್ಕು, ಬಸಂತ್, ಪ್ರೇಮಾ, ತಿತ್ಲಿ ಮತ್ತು ರೀನಾ ಎಂದು ಗುರುತಿಸಲಾಗಿದೆ. ಅವರ ವಿರುದ್ಧ ಮತಾಂತರ ನಿಷೇಧ ಕಾಯ್ದೆಯ (Religious Conversion Act) ಸೆಕ್ಷನ್ 3, 5(1) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈಗಾಗಲೇ ಮೂವರನ್ನು ಬಂಧಿಸಲಾಗಿದ್ದು, ಉಳಿದ 6 ಮಂದಿಗಾಗಿ ಬಲೆ ಬೀಸಲಾಗಿದೆ ಎಂದು ಮೀರತ್ ಎಸ್ಪಿ ಪಿಯೂಷ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ಇದನ್ನೂ ಓದಿ: ಪುನೀತ್ ಜೀವನ ಪಠ್ಯಪುಸ್ತಕಕ್ಕೆ ಸೇರಿಸಿ ಬೇಡಿಕೆಗೆ ಸಚಿವ ಆರ್.ಅಶೋಕ್ ಪ್ರತಿಕ್ರಿಯೆ

    ಪ್ರಾಥಮಿಕ ತನಿಖಾ ವರದಿಯ ಪ್ರಕಾರ, ಆರೋಪಿಗಳು ಈ ಪ್ರದೇಶ ವ್ಯಾಪ್ತಿಯಲ್ಲಿರುವ ಬಡವರಿಗೆ ಕೋವಿಡ್ (Covid) ಸಂದರ್ಭದಲ್ಲಿ ಆಹಾರ (Food) ಹಾಗೂ ಆರ್ಥಿಕ ನೆರವು ನೀಡಿದ್ದರು. ಅದಕ್ಕೆ ಪ್ರತಿಯಾಗಿ ಅವರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಾಯಿಸುತ್ತಿದ್ದರು. ಅಷ್ಟೇ ಅಲ್ಲದೇ ಕಾಲೋನಿ ಜನರ ಮನೆಗಳಲ್ಲಿರುವ ಹಿಂದೂ ದೇವರ ಫೋಟೋಗಳನ್ನು ಕಿತ್ತೆಸೆಯುತ್ತಿದ್ದರು. ಘಟನೆ ಬಗ್ಗೆ ಪೊಲೀಸರಿಗೆ ತಿಳಿಸಿದ್ರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ರೋಹಿತ್ ಸಿಂಗ್ ಸಜ್ವಾನ್ ಹೇಳಿದ್ದಾರೆ. ಇದನ್ನೂ ಓದಿ: ನಾನ್‍ ಸ್ಟ್ರೈಕರ್ ರನೌಟ್‍ನಿಂದ ಪಾರಾಗಲು ಹೊಸ ಐಡಿಯ ಹುಡುಕಿದ ಗ್ಲೆನ್ ಫಿಲಿಪ್ಸ್

    ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ (BJP) ನಾಯಕ ದೀಪಕ್ ಶರ್ಮಾ, ಇಲ್ಲಿನ 100ಕ್ಕೂ ಹೆಚ್ಚು ಜನರನ್ನು ಮತಾಂತರ ಮಾಡಲಾಗಿದೆ. ಕಳೆದ 3 ವರ್ಷಗಳಿಂದಲೂ ಇದು ನಡೆಯುತ್ತಲೇ ಇದೆ. ಅವರು ಮತಾಂತರಗೊಳ್ಳಲಿ ಅಂತಲೇ ಜನರಿಗೆ ಪಡಿತರ ಹಾಗೂ ಹಣದ ಸಹಾಯ ನೀಡಲಾಗಿದೆ. ನಂತರ ಮತಾಂತರಕ್ಕೆ ಒತ್ತಾಯಿಸಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಂಡೇ ಮಠದ ಸ್ವಾಮೀಜಿ ಆತ್ಮಹತ್ಯೆ ಹಿಂದೆ ಲೋಕಲ್ ಸ್ವಾಮೀಜಿ ಕೈವಾಡ!

    ಬಂಡೇ ಮಠದ ಸ್ವಾಮೀಜಿ ಆತ್ಮಹತ್ಯೆ ಹಿಂದೆ ಲೋಕಲ್ ಸ್ವಾಮೀಜಿ ಕೈವಾಡ!

    ರಾಮನಗರ: ಮಾಗಡಿ ತಾಲೂಕಿನ ಬಂಡೇ ಮಠದ (Bande Mutt) ಬಸವಲಿಂಗ ಶ್ರೀಗಳ (Basavalinga Swamiji) ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಮತ್ತೊಂದು ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.

    ಬಂಡೆ ಮಠದ ಶ್ರೀಗಳ ಆತಹತ್ಯೆ ಹಿಂದೆ ಸ್ಥಳೀಯ ಸ್ವಾಮೀಜಿಯ ಕೈವಾಡ ಇತ್ತು ಅನ್ನೋ ಮಾಹಿತಿಯೊಂದು ಪಬ್ಲಿಕ್ ಟಿವಿಗೆ (Public TV) ಲಭ್ಯವಾಗಿದೆ. ಇದನ್ನೂ ಓದಿ: ಬಸವಲಿಂಗ ಶ್ರೀ ವೀಡಿಯೋ ಕಾಲ್ ವೈರಲ್- ಮೂವರು ಮಹಿಳೆಯರ ಪ್ರತ್ಯೇಕ ವಿಚಾರಣೆ

    ಹೌದು. ಸ್ಥಳೀಯ ಸ್ವಾಮೀಜಿ ಹಾಗೂ ಇತರ ಏಳೆಂಟು ಮಂದಿಯಿಂದ ಕಿರುಕುಳ ಎದುರಾಗ್ತಿದೆ. ಮಠದ ವಿಚಾರದಲ್ಲಿ ಆಗ್ಗಾಗ್ಗೆ ತೊಂದರೆ ಉಂಟು ಮಾಡ್ತಿದ್ದಾರೆ. ನನ್ನ ಸಾವಿಗೆ ಗೊತ್ತಿಲ್ಲದಿರುವ ಆ ಮಹಿಳೆಯೇ ಕಾರಣ ಎಂದು ಸಾವಿಗೂ ಮುನ್ನ ಡೆತ್ ನೋಟ್‌ನಲ್ಲಿ (Death Note) ಬರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಶ್ರೀಗಳ ಆತ್ಮಹತ್ಯೆ ಹಿಂದೆ ಲೋಕಲ್ ಸ್ವಾಮೀಜಿಯೊಬ್ಬರ ಕೈವಾಡ ಇರೋದು ತನಿಖೆ (Investigation) ವೇಳೆ ಕನ್ಫರ್ಮ್ ಆಗಿದೆ. ಅಲ್ಲದೇ ಸ್ಥಳೀಯ ಸ್ವಾಮೀಜಿಯೊಂದಿಗೆ ಏಳೆಂಟು ಮಂದಿ ಸಹ ಕೈ ಜೋಡಿಸಿರುವ ಮಾಹಿತಿ ಇದೆ ಅನ್ನೋದು ಪೊಲೀಸರ ಗುಮಾನಿ. ಇದನ್ನೂ ಓದಿ: ಬಂಡೇ ಮಠದ ಶ್ರೀ ಬರೆದಿದ್ದು ಒಟ್ಟು 6 ಪುಟಗಳ ಡೆತ್‍ನೋಟ್ – ಈಗಾಗಲೇ 20 ಮಂದಿಯ ವಿಚಾರಣೆ

    ಮಹಿಳೆ ಮೊಬೈಲ್ ಸಂಖ್ಯೆ ಪತ್ತೆ: ಆತ್ಮಹತ್ಯೆ (Suicide) ದಿನ ಶ್ರೀಗಳ ಮೊಬೈಲ್ (Mobile) ಸೀಜ್ ಮಾಡಿ ಎಫ್‌ಎಸ್‌ಎಲ್‌ಗೆ ಕಳಿಸಿದ್ದ ಪೊಲೀಸರು ಇದೀಗ ಮೊಬೈಲ್‌ನ ಸಂಪೂರ್ಣ ಡೀಟೈಲ್ಸ್ ಕಲೆಹಾಕಿದ್ದಾರೆ. ಒಟ್ಟು ಮೂರು ವೀಡಿಯೋಗಳನ್ನ ಸ್ವಾಮೀಜಿಗೆ ಮೊಬೈಲ್‌ನಲ್ಲಿ ಕಳುಹಿಸಲಾಗಿದೆ. ಅದರಲ್ಲಿ ಮಹಿಳೆಯ ಮುಖ ಕಾಣದಂತೆ ಎಡಿಟ್ ಮಾಡಲಾಗಿದೆ. ಇದೀಗ ಸ್ವಾಮೀಜಿಗೆ ವೀಡಿಯೊ ಕಾಲ್ ರೆಕಾರ್ಡ್ ಕಳಿಸಿರೊ ಆ ಮಹಿಳೆಯ ಮೊಬೈಲ್ ನಂಬರ್ ಪತ್ತೆ ಮಾಡಲಾಗಿದೆ. ಮಹಿಳೆಯ ಬಂಧನಕ್ಕೆ ಬಲೆ ಬೀಸಿರುವ ಪೊಲೀಸರು ಇಂದು ಅಥವಾ ನಾಳೆ ಒಳಗಾಗಿ ಅರೆಸ್ಟ್ ಮಾಡುವ ಸಾಧ್ಯತೆ ಇದೆ. ಮಹಿಳೆ ವಿಚಾರಣೆ ಬಳಿಕ ಮಹಿಳೆ ಹಿಂದಿರುವ ಕಾಣದ ಕೈಗಳು ಸಹ ಹೊರಗೆ ಬರುವ ಸಾಧ್ಯತೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬೆಂಕಿ ಕಟ್ಟಿಂಗ್ – ತಲೆ ಸುಟ್ಕೊಂಡು ಆಸ್ಪತ್ರೆ ಸೇರಿದ

    ಬೆಂಕಿ ಕಟ್ಟಿಂಗ್ – ತಲೆ ಸುಟ್ಕೊಂಡು ಆಸ್ಪತ್ರೆ ಸೇರಿದ

    ಗಾಂಧಿನಗರ: ಬೆಂಕಿ ಹೇರ್‌ಕಟ್ಟಿಂಗ್‌ (Fire Haircut) ಮಾಡಿಸಿಕೊಳ್ಳಲು ಹೋಗಿ ನಿಜವಾಗಿಯೂ ಬೆಂಕಿ ಹೊತ್ತಿಕೊಂಡು, 18 ವರ್ಷದ ಹುಡುಗನೊಬ್ಬ ತಲೆ ಸುಟ್ಟುಕೊಂಡು ಆಸ್ಪತ್ರೆ (Hospital) ಸೇರಿರುವ ಘಟನೆ ಗುಜರಾತಿನ ವಲ್ಸಾದ್ ಜಿಲ್ಲೆಯ ವಾಪಿ ಪಟ್ಟಣದ ಸಲೂನ್‌ನಲ್ಲಿ ನಡೆದಿದೆ.

    ಬೆಂಕಿ ಕಟ್ಟಿಂಗ್‌ ಅಂದ್ರೆ ಕ್ಷೌರಿಕ ಅಥವಾ ಕೇಶ ವಿನ್ಯಾಸಕರು ಗ್ರಾಹಕನ ತಲೆಕೂದಲಿನ ಮೇಲೆ ಬೆಂಕಿಯನ್ನು ಬಳಸಿ ಅದನ್ನು ಒಂದು ಶೈಲಿಗೆ ಹೊಂದಿಸುವ ಪ್ರಕ್ರಿಯೆಯಾಗಿದೆ. ಇದನ್ನೂ ಓದಿ: JDS ಅಧಿಕಾರಕ್ಕೆ ಬಂದ್ರೆ ಉಚಿತ ಶಿಕ್ಷಣ, ಉದ್ಯೋಗ, ಕುಟುಂಬಕ್ಕೊಂದು ಮನೆ- HDK ಆಶ್ವಾಸನೆ

    ಈ ಕಟ್ಟಿಂಗ್‌ ಮಾಡುವಾಗ 18 ವರ್ಷದ ಯುವಕನ ತಲೆಗೆ ನಿಜವಾಗಿಯೂ ಬೆಂಕಿ (Fire) ತಗುಲಿದೆ. ಬಳಿಕ ವ್ಯಕ್ತಿಯ ಕುತ್ತಿಗೆ, ಎದೆಯ ಭಾಗಕ್ಕೆ ತೀವ್ರವಾಗಿ ಬೆಂಕಿ ಹೊತ್ತಿಕೊಂಡಿದ್ದು, ಸುಟ್ಟ ಗಾಯಗಳಾಗಿವೆ. ತಕ್ಷಣ ಯುವಕನನ್ನು ವಲ್ಸಾದ ಸರ್ಕಾರಿ ಆಸ್ಪತ್ರೆಗೆ (Government Hospital) ದಾಖಲಿಸಲಾಯಿತು. ಹೆಚ್ಚುವರಿ ಚಿಕಿತ್ಸೆಗಾಗಿ ಅಲ್ಲಿಂದ ಅವರನ್ನು ಸೂರತ್‌ನ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ವಾಪಿ ಪಟ್ಟಣದ ಪೊಲೀಸ್ (Police) ಅಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: ವಿಧಾನಸಭೆ ಚುನಾವಣೆ – ನವೆಂಬರ್ ಅಂತ್ಯಕ್ಕೆ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ?

    ಮಾಹಿತಿ ಪ್ರಕಾರ, ಬೆಂಕಿ ಕ್ಷೌರಕ್ಕಾಗಿ ತಲೆಯ ಮೇಲೆ ಕೆಲವು ರೀತಿಯ ರಾಸಾಯನಿಗಳನ್ನು (chemical) ಸಿಂಪಡಿಸಿದ್ದ, ಹಾಗಾಗಿ ತಲೆಗೆ ಬೆಂಕಿ ಹೊತ್ತಿಸಿದ ತಕ್ಷಣ ಅದು ಕುತ್ತಿಗೆ ಹಾಗೂ ಎದೆಯ ಭಾಗಕ್ಕೂ ವ್ಯಾಪಿಸಿದೆ.

    ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವ ಪೊಲೀಸರು, ಬೆಂಕಿ ಕ್ಷೌರಕ್ಕೆ ಯಾವ ರಾಸಾಯನಿಕ ಬಳಸಲಾಗಿದೆ ಎಂಬುದನ್ನು ಕಂಡುಹಿಡಿಯಲು ತನಿಖೆ ನಡೆಸುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಹಿಳೆಯರನ್ನು ಐಟಂ ಎಂದು ಕರೆಯುವಂತಿಲ್ಲ- ರೋಡ್ ರೋಮಿಯೋಗಳಿಗೆ ಕೋರ್ಟ್ ಖಡಕ್ ಎಚ್ಚರಿಕೆ

    ಮಹಿಳೆಯರನ್ನು ಐಟಂ ಎಂದು ಕರೆಯುವಂತಿಲ್ಲ- ರೋಡ್ ರೋಮಿಯೋಗಳಿಗೆ ಕೋರ್ಟ್ ಖಡಕ್ ಎಚ್ಚರಿಕೆ

    ಮುಂಬೈ: ಅಪ್ರಾಪ್ತ ಬಾಲಕಿಯನ್ನು `ಐಟಂ’ ಎಂದು ಕರೆದು ಲೈಂಗಿಕವಾಗಿ ಕಿರುಕುಳ ನೀಡಿದ 25 ವರ್ಷದ ಉದ್ಯಮಿಯೊಬ್ಬನಿಗೆ 7 ವರ್ಷಗಳ ಬಳಿಕ 1.5 ವರ್ಷ ಜೈಲು ಶಿಕ್ಷೆ ವಿಧಿಸಿರುವ ಮುಂಬೈ ಕೋರ್ಟ್ (Mumbai Court), ಮಹಿಳೆಯರನ್ನು ಐಟಂ ಎಂದು ಕರೆಯುವಂತಿಲ್ಲ ಎಂದು ರೋಡ್ ರೋಮಿಯೋಗಳಿಗೆ ಖಡಕ್ ಎಚ್ಚರಿಕೆ ನೀಡಿದೆ.

    ಮುಂಬೈನ ದಿಂಡೋಶಿಯಲ್ಲಿರುವ ಸೆಷನ್ಸ್ ಕೋರ್ಟ್‌ನ (Sessions Court) ವಿಶೇಷ ನ್ಯಾಯಾಧೀಶರಾದ ಎಸ್.ಜೆ ಅನ್ಸಾರಿ ಅವರ ನೇತೃತ್ವದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಯಿತು. ಈ ವೇಳೆ `ಐಟಂ’ ಎಂಬ ಪದವು ಮಹಿಳೆಯರನ್ನು ಲೈಂಗಿಕ ರೀತಿಯಲ್ಲಿ ಆಕ್ಷೇಪಿಸುತ್ತದೆ. ಇದು ಐಪಿಸಿ (IPC) ಸೆಕ್ಷನ್ 354ರ ಅತಿರೇಖದ ವರ್ತನೆಯನ್ನು ಸೂಚಿಸುವ ಅಪರಾಧವಾಗಿದೆ ಎಂದು ಪರಿಗಣಿಸಿದೆ. ಇದನ್ನೂ ಓದಿ: ಮಹಿಳೆಯರ ನಗ್ನ ವೀಡಿಯೋ ಇಟ್ಕೊಂಡು ಬ್ಲಾಕ್‌ಮೇಲ್ ಮಾಡ್ತಿದ್ದ ಆರೋಪಿ ಅರೆಸ್ಟ್

    ಹಾಗಾಗಿ ಅಪ್ರಾಪ್ತ ಬಾಲಕಿಯನ್ನು ಐಟಂ ಎಂದು ಕರೆದ ಉದ್ಯಮಿಯನ್ನು ಐಪಿಸಿ (IPC) ಸೆಕ್ಷನ್ 354 ಹಾಗೂ ಲೈಂಗಿಕ ಅಪರಾಧಗಳು ಹಾಗೂ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಅಪರಾಧಿ ಎಂದು ಘೋಷಿಸಿ, 1.5 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಅಲ್ಲದೇ ಮಹಿಳೆಯರನ್ನು (Womens) ರಕ್ಷಿಸಲು ಇಂತಹ ಕಠಿಣ ಅಪರಾಧ ಕ್ರಮಗಳನ್ನು ಕೈಗೊಳ್ಳುವುದು ಸೂಕ್ತವಾಗಿದೆ ಎಂದು ನ್ಯಾಯಾಧೀಶರು ಒತ್ತಿ ಹೇಳಿದ್ದಾರೆ. ಇದನ್ನೂ ಓದಿ: ನಿಷೇಧದ ನಡುವೆಯೂ ಪಟಾಕಿ ಸದ್ದು- ಅತಿಯಾದ ವಾಯುಮಾಲಿನ್ಯದಿಂದ ಉಸಿರಾಟಕ್ಕೂ ತೊಂದರೆ

    Law

    ಆರೋಪಿಯು `ಐಟಂ’ ಎಂಬ ಪದವನ್ನು ಬಳಸುವ ಮೂಲಕ ಆಕೆಯನ್ನು ಸಂಬೋಧಿಸಿದ್ದಾನೆ. ಇದು ಹುಡುಗಿಯರನ್ನು ಅವಹೇಳನಕಾರಿ ಶೈಲಿ ಸಂಬೋಧಿಸುವ ಸಾಮಾನ್ಯ ಪದವಾಗಿದೆ, ಜೊತೆಗೆ ಅತಿರೇಕದ ವರ್ತನೆಯನ್ನು ತೋರುತ್ತದೆ. ಇಂತಹ ಅಪರಾಧಗಳನ್ನು ಕಠಿಣ ಕ್ರಮಗಳ ಮೂಲಕ ನಿಭಾಯಿಸಬೇಕಿದೆ. ಜೊತೆಗೆ ರೋಡ್ ರೋಮಿಯೋಗಳಿಗೆ ತಕ್ಕಪಾಠ ಕಲಿಸುವ ಜೊತೆಗೆ ಮಹುಳೆಯರನ್ನು ರಕ್ಷಿಸಬೇಕಾಗಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಮೇಲಿನ ಎಲ್ಲ ಅಂಶಗಳನ್ನು ಪರಿಗಣಿಸಿ ಆರೋಪಿಗೆ 1.5 ವರ್ಷ ಜೈಲು ಶಿಕ್ಷೆ ವಿಧಿಸಿದೆ.

    ಮುಂಬೈನ ದಿಂಡೋಶಿಯಲ್ಲಿರುವ ಸೆಷನ್ಸ್ ಕೋರ್ಟ್ 2015ರಲ್ಲಿ ನಡೆದ ಘಟನೆಗೆ ಈಗ ಶಿಕ್ಷೆ ವಿಧಿಸಿದೆ. 2015ರಂದು ಅಪ್ರಾಪ್ತ ಬಾಲಕಿ ಶಾಲೆಯಿಂದ ಹಿಂದಿರುಗುತ್ತಿದ್ದಾಗ ಉದ್ಯಮಿಯೊಬ್ಬ ಬಾಲಕಿಯನ್ನು ಐಟಂ ಎಂದು ಸಂಬೋಧಿಸಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿತ್ತು, ಇದೀಗ ಕೋರ್ಟ್ ಶಿಕ್ಷೆ ವಿಧಿಸಿದೆ.

    Live Tv
    [brid partner=56869869 player=32851 video=960834 autoplay=true]

  • ತಂಗಿಯ Love Marriage ಬಗ್ಗೆ ವ್ಯಂಗ್ಯವಾಡ್ತಿದ್ದ ಸ್ನೇಹಿತನನ್ನ 30 ಬಾರಿ ಇರಿದು ಕೊಂದ ಸಹೋದರ

    ತಂಗಿಯ Love Marriage ಬಗ್ಗೆ ವ್ಯಂಗ್ಯವಾಡ್ತಿದ್ದ ಸ್ನೇಹಿತನನ್ನ 30 ಬಾರಿ ಇರಿದು ಕೊಂದ ಸಹೋದರ

    ನವದೆಹಲಿ: ತನ್ನ ತಂಗಿಯ ಪ್ರೇಮ ವಿವಾಹದ (Love Marriage) ಬಗ್ಗೆ ವ್ಯಂಗ್ಯ ಮಾಡುತ್ತಿದ್ದ ಸ್ನೇಹಿತನನ್ನು (Friend) ಯುವತಿಯ ಸಹೋದರ 30 ಬಾರಿ ಚಾಕುವಿನಿಂದ ಇರಿದು ಕೊಂದಿರುವ ಘಟನೆ ದೆಹಲಿಯ (NewDelhi) ಜಹಾಂಗೀರ್‌ಪುರದಲ್ಲಿ ನಡೆದಿದೆ.

    ಹೌದು. ದೆಹಲಿಯಲ್ಲಿ ಪೊಲೀಸರ ಕಠಿಣ ಕ್ರಮಗಳ ಹೊರತಾಗಿಯೂ ದಿನದಿಂದ ದಿನಕ್ಕೆ ಅಪರಾಧ ಪ್ರಕರಣಗಳು ಹೆಚ್ಚುತ್ತಲೇ ಇವೆ. ಹಾಗೆಯೇ ತನ್ನ ತಂಗಿಯ ಪ್ರೇಮ ವಿವಾಹವನ್ನು ವ್ಯಂಗ್ಯ ಮಾಡಿದ್ದಕ್ಕಾಗಿ ಯುವತಿಯ ಸಹೋದರ ಚಿರಾಗ್, ರಾಹುಲ್ (30) ಎಂಬಾತನನ್ನು 30 ಬಾರಿ ಇರಿದು ಕೊಂದಿರುವ ಘಟನೆ ಬೆಳಕಿಗೆ ಬಂದಿದೆ. ಇದನ್ನೂ ಓದಿ: RSS ಸಾಧನದಂತೆ ರಾಜ್ಯಪಾಲರು ಕಾರ್ಯ ನಿರ್ವಹಿಸ್ತಿದ್ದಾರೆ: ಪಿಣರಾಯಿ ವಾಗ್ದಾಳಿ

    ಅಷ್ಟಕ್ಕೂ ನಡೆದಿದ್ದೇನು?
    ಜಹಾಂಗೀರ್‌ಪುರದಲ್ಲಿ ವಾಸವಿದ್ದ ಚಿರಾಗ್ ತಂಗಿ ಕೆಲ ತಿಂಗಳ ಹಿಂದೆ ಪ್ರೇಮ ವಿವಾಹವಾಗಿದ್ದರು. ರಾಹುಲ್ ಕೂಡ ಇದರಲ್ಲಿ ಭಾಗಿಯಾಗಿದ್ದನು. ಆದರೆ ರಾಹುಲ್ ಆಗಾಗ್ಗೆ ತನ್ನ ತಂಗಿಯ ಪ್ರೇಮ ವಿವಾಹದ ಬಗ್ಗೆ ಹೀಯಾಳಿಸುತ್ತಿದ್ದ. ಈ ವಿಚಾರದಲ್ಲಿ ಇಬ್ಬರ ನಡುವೆ ವಾಗ್ವಾದ ನಡೆದಿತ್ತು. ಬಳಿಕ ಅದು ವಿಕೋಪಕ್ಕೆ ತಿರುಗಿ ಈಬ್ಬರ ನಡುವೆ ಜಗಳ ನಡೆದಿತ್ತು. ಈ ವೇಳೆ ಚಿರಾಗ್ 30 ಬಾರಿ ಚಾಕುವಿನಿಂದ ಇರಿದಿದ್ದ. ಅಷ್ಟರಲ್ಲಿ ಜಗಳ ಬಿಡಿಸಿದ ಸಹಚರರು ರಾಹುಲ್‌ನನ್ನು ಗಾಯಗೊಂಡ ಸ್ಥಿತಿಯಲ್ಲಿ ಬಿಜೆಆರ್‌ಎಂ ಆಸ್ಪತ್ರೆಗೆ ಕರೆದೊಯ್ದರು, ಅಷ್ಟರಲ್ಲಾಗಲೇ ರಾಹುಲ್ ಮೃತಪಟ್ಟಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

    ಸದ್ಯ ಕೇಸ್ (FIR) ದಾಖಲಿಸಿ ತನಿಖೆ ನಡೆಸುತ್ತಿರುವ ಪೊಲೀಸರು (Delhi Police), ಘಟನೆಗೆ ಸಂಬಂಧಿಸಿದಂತೆ ನಾಲ್ವರು ಅಪ್ರಾಪ್ತರನ್ನು ಬಂಧಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • 16ರ ಬಾಲಕಿ ಮೇಲೆ ಗ್ಯಾಂಗ್ ರೇಪ್- ಓರ್ವ ಮಹಿಳೆ ಸೇರಿ ಮೂವರು ಅರೆಸ್ಟ್

    16ರ ಬಾಲಕಿ ಮೇಲೆ ಗ್ಯಾಂಗ್ ರೇಪ್- ಓರ್ವ ಮಹಿಳೆ ಸೇರಿ ಮೂವರು ಅರೆಸ್ಟ್

    ಅಗರ್ತಲಾ: ತ್ರಿಪುರಾದ (Tripura) ಉನಕೋಟಿ ಜಿಲ್ಲೆಯಲ್ಲಿ 16 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಆರೋಪದ ಮೇಲೆ ಓರ್ವ ಮಹಿಳೆ (Women) ಸೇರಿದಂತೆ ಮೂವರನ್ನು ಬಂಧಿಸಲಾಗಿದೆ.

    ಘಟನೆಯಲ್ಲಿ ಸಿಪಿಐ(ಎಂ) (CPI) ಸಚಿವರ ಪುತ್ರನ ಕೈವಾಡವಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್ (Congress) ಆರೋಪಿಸಿದೆ. ಆದರೆ ಬಿಜೆಪಿ (BJP) ಆರೋಪವನ್ನು ತಳ್ಳಿಹಾಕಿದೆ. ಇದನ್ನೂ ಓದಿ: 5 ಬಾರಿ ಗರ್ಭಪಾತ, ಮೂರನೇ ಪತ್ನಿಯಾಗಿರುವಂತೆ ಒತ್ತಡ- ಸಿಪಿಐ ವಿರುದ್ಧ ರೇಪ್ ಕೇಸ್!

    ಇದೇ ತಿಂಗಳ ಅಕ್ಟೋಬರ್ 19ರಂದು ಕುಮಾರಘಾಟ್‌ನ 3 ಅಂತಸ್ತಿನ ಕಟ್ಟಡದಲ್ಲಿ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ನೆರೆಯ ಮಹಿಳೆಯೊಬ್ಬಳೇ ಬಾಲಕಿಯನ್ನು ಕರೆದೊಯ್ದು ಅತ್ಯಾಚಾರ ಎಸಗುವಂತೆ ಮಾಡಿದ್ದಾಳೆ. ಈ ಸಂಬಂಧ ಸಂತ್ರಸ್ತೆ ತಾಯಿ ನೀಡಿದ ದೂರಿನ ಮೇರೆಗೆ ಕೇಸ್ ದಾಖಲಿಸಿ, ಮೂವರನ್ನು ಬಂಧಿಸಲಾಗಿದೆ. ಇನ್ನೂ ಹಲವರಿಗಾಗಿ ಬಲೆ ಬೀಸಲಾಗಿದೆ ಎಂದು ಪೊಲೀಸರು (Tripura Police) ತಿಳಿಸಿದ್ದಾರೆ.

    ಪ್ರಕರಣದಲ್ಲಿ (FIR) ಸಚಿವರೊಬ್ಬರ ಪುತ್ರನ ಹೆಸರು ಕೇಳಿಬಂದಿದೆ. ಆದ್ದರಿಂದ ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಿ ಬಂಧಿಸುವ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗುತ್ತದೆ ಎಂದು ಕಾಂಗ್ರೆಸ್ ಮಾಜಿ ಶಾಸಕ ಆಶಿಶ್ ಸಹಾ ತಿಳಿಸಿದ್ದಾರೆ. ಇದನ್ನೂ ಓದಿ: ನರ್ಸ್‍ನ್ನು ಕಟ್ಟಿ ಹಾಕಿ ಆಕೆ ಮೇಲೆ ಸಾಮೂಹಿಕ ಅತ್ಯಾಚಾರ

    ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಜಿತೇಂದ್ರ ಚೌಧರಿ ಮಾತನಾಡಿ, ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಚಿವರೊಬ್ಬರ ಪುತ್ರನ ಹೆಸರು ಕೇಳಿಬಂದಿರುವುದು ಬೇಸರ ತಂದಿದೆ. ನಾವು ಅವರ ವಿರುದ್ಧ ತನಿಖೆಗೆ ಒತ್ತಾಯಿಸುತ್ತೇವೆ. ಒಂದು ವೇಳೆ ಆರೋಪ ಸಾಬೀತಾದರೆ ಕಠಿಣ ಶಿಕ್ಷೆ ಕೈಗೊಳ್ಳಲಿ ಎಂದು ಹೇಳಿದ್ದಾರೆ.

    CRIME COURT

    ಆರೋಪ ತಳ್ಳಿಹಾಕಿರುವ ಬಿಜೆಪಿ, ಅಕ್ಟೋಬರ್ 19ರಂದು ಸಚಿವರ ಪುತ್ರ ಅಗರ್ತಲಾದಲ್ಲಿದ್ದ ಕಾರಣ ಆರೋಪಗಳು ಸಂಪೂರ್ಣವಾಗಿ ಆಧಾರ ರಹಿತ ಹಾಗೂ ರಾಜಕೀಯ ಪ್ರೇರಿತವಾಗಿದೆ ಎಂದು ಹೇಳಿದೆ.

    Live Tv
    [brid partner=56869869 player=32851 video=960834 autoplay=true]

  • ಗ್ಯಾಂಗ್ ರೇಪ್ ಕಥೆ ಕಟ್ಟಿದ್ದ ಮಹಿಳೆ ಅರೆಸ್ಟ್ – 420 ಕೇಸ್ ದಾಖಲು

    ಗ್ಯಾಂಗ್ ರೇಪ್ ಕಥೆ ಕಟ್ಟಿದ್ದ ಮಹಿಳೆ ಅರೆಸ್ಟ್ – 420 ಕೇಸ್ ದಾಖಲು

    ನವದೆಹಲಿ/ಲಕ್ನೋ: ಆಸ್ತಿ ದೋಚುವ ಸಲುವಾಗಿ ಉತ್ತರಪ್ರದೇಶದ ಗಾಜಿಯಾಬಾದ್‌ನಲ್ಲಿ ಗ್ಯಾಂಗ್‌ರೇಪ್ (Ghaziabad Gang Rape) ನಡೆದಿರುವುದಾಗಿ ಕಥೆ ಕಟ್ಟಿದ್ದ ಮಹಿಳೆ ಹಾಗೂ ಮೂವರು ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ.

    ದೆಹಲಿ ಮಹಿಳೆ (Delhi Women) ಐವರು ಪುರುಷರು ತನ್ನನ್ನು ಎರಡು ದಿನಗಳ ಕಾಲ ಅಪಹರಿಸಿ ಅತ್ಯಾಚಾರವೆಸಗಿದ್ದಾರೆ ಎಂದು ಹೇಳಿಕೊಂಡಿದ್ದಳು. ಕೊನೆಗೂ ಸತ್ಯ ಬಯಲಾಗಿದ್ದು, ಮಹಿಳೆ ಹಾಗೂ ಆಕೆಯ ಸಹಚರರಾದ ಆಜಾದ್, ಅಫ್ಜಲ್ ಮತ್ತು ಗೌರವ್ ಮೂವರನ್ನು ಬಂಧಿಸಿ, ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಯಿತು. ನಂತರ ನ್ಯಾಯಾಲಯವು (Court) ಮಹಿಳೆಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ಗಾಜಿಯಾಬಾದ್ ಎಸ್ಪಿ ನಿಪುನ್ ಅಗರ್ವಾಲ್ ಹೇಳಿದ್ದಾರೆ.

    ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ (IPC) 420 (ವಂಚನೆ ಮತ್ತು ಅಪ್ರಾಮಾಣಿಕವಾಗಿ ಆಸ್ತಿ ವಿತರಣೆಗೆ ಪ್ರೇರೇಪಿಸುವುದು), 467 (ಮೌಲ್ಯಯುತ ಭದ್ರತೆಯ ಖೋಟಾ), 468 (ವಂಚನೆಯ ಉದ್ದೇಶಕ್ಕಾಗಿ ನಕಲು ಮಾಡೋದು) ಮತ್ತು 471 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಎಂದು ಪೊಲೀಸರು ತಿಳಿಸಿದ್ದಾರೆ.

    ಏನಿದು ಘಟನೆ?
    ಗಾಜಿಯಾಬಾದ್‌ನ ಪುರುಷರ ಗುಂಪೊಂದು ದೆಹಲಿ ಮೂಲದ 38 ವರ್ಷದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಮಹಿಳೆ ಮೇಲೆ ಅಮಾನುಷವಾಗಿ ಹಲ್ಲೆಯನ್ನೂ ನಡೆಸಿ, ಬಳಿಕ ಆರೋಪಿಗಳು ಮಹಿಳೆಯನ್ನು ರಸ್ತೆ ಬದಿಯಲ್ಲಿ ತಳ್ಳಿ ಹೋಗಿದ್ದರು. ಅ.18 ರಂದು ಮುಂಜಾನೆ 3:30ರ ವೇಳೆಗೆ ನಂದಗ್ರಾಮ್ ಪೊಲೀಸ್ ಠಾಣೆಯ ಆಶ್ರಮದ ರಸ್ತೆ ಬಳಿ ಸಂತ್ರಸ್ತ ಮಹಿಳೆ ಪತ್ತೆಯಾಗಿದ್ದರು. ಮಹಿಳೆ ನೆಲದ ಮೇಲೆ ಬಿದ್ದಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ, ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದರು. ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ್ದಲ್ಲದೇ ಕ್ರೂರವಾಗಿ ಚಿತ್ರಹಿಂಸೆ ನೀಡಲಾಗಿರುವ ಆರೋಪ ಕೇಳಿಬಂದಿತ್ತು. ಈ ಬಗ್ಗೆ ತನಿಖೆ ಆರಂಭಿಸಿದ ಪೊಲೀಸರು, ಸಂತ್ರಸ್ತ ಮಹಿಳೆ ಸುಳ್ಳು ಆರೋಪ ಮಾಡಿರುವ ಸತ್ಯ ಬಯಲಾಗಿದೆ.

    ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಮೀರತ್‌ನ ಐಜಿ ಪ್ರವೀಣ್ ಕುಮಾರ್, ಮಹಿಳೆ ಆಸ್ತಿ ವಿವಾದದಲ್ಲಿ ಆರೋಪಿಯನ್ನು ಸಿಲುಕಿಸಲು ಆಜಾದ್ ಎಂಬಾತನೊಂದಿಗೆ ಸೇರಿಕೊಂಡು ಸುಳ್ಳು ಆರೋಪ ಹೊರಿಸಿರುವುದು ತನಿಖೆ ವೇಳೆ ತಿಳಿದು ಬಂದಿದೆ. ಆರೋಪಿ ಮತ್ತು ಮಹಿಳೆ ನಡುವೆ ಆಸ್ತಿ ವಿವಾದವೊಂದಿದೆ. ಹಾಗಾಗಿ ಆಜಾದ್ ಎಂಬಾತನೊಂದಿಗೆ ಸೇರಿಕೊಂಡು ಪ್ಲ್ಯಾನ್‌ ಮಾಡಿ ಈ ರೀತಿ ಕಥೆ ಕಟ್ಟಿದ್ದಾರೆ. ಹಾಗಾಗಿ ಆಜಾದ್ ಮತ್ತು ಆತನ ಸಹಚರರಾದ ಗೌರವ್ ಮತ್ತು ಅಫ್ಜಲ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಕೃತ್ಯಕ್ಕೆ ಬಳಸಿದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]