Tag: crime

  • ಹಿಂದೂ ಹುಡುಗಿಯರು ಎಚ್ಚರಿಕೆಯಿಂದ ಡೇಟಿಂಗ್ ಮಾಡಿ – ಪ್ರಮೋದ್ ಮುತಾಲಿಕ್

    ಹಿಂದೂ ಹುಡುಗಿಯರು ಎಚ್ಚರಿಕೆಯಿಂದ ಡೇಟಿಂಗ್ ಮಾಡಿ – ಪ್ರಮೋದ್ ಮುತಾಲಿಕ್

    ಧಾರವಾಡ: ಇತ್ತೀಚೆಗೆ ದೆಹಲಿಯಲ್ಲಿ (NewDelihi) ನಡೆದ ಭೀಕರ ಘಟನೆ ತಾಲಿಬಾನ್ (Taliban) ಕೃತ್ಯಕ್ಕಿಂತಲೂ ಕೆಟ್ಟದಾಗಿದೆ. ಆದ್ದರಿಂದ ಹಿಂದೂ ಹುಡುಗಿಯರು ಎಚ್ಚರಿಕೆಯಿಂದ ಪಾಠ ಕಲಿಯಬೇಕು. ಪ್ರೀತಿ (Love) ಮಾಡುವಾಗ, ಡೇಟಿಂಗ್ (Dating) ಮಾಡುವಾಗ ವಿಚಾರ ಮಾಡಿ ಮಾಡಬೇಕು ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Muthalik) ಸಲಹೆ ನೀಡಿದ್ದಾರೆ.

    ಧಾರವಾಡದಲ್ಲಿಂದು (Darwad) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ದೆಹಲಿಯಲ್ಲಿ ಲಿವಿಂಗ್ ಟುಗೆದರ್‌ನಲ್ಲಿದ್ದ (Live In RelationShip) ಗೆಳತಿಯನ್ನು 35 ಪೀಸ್‌ಗಳಾಗಿ ಮಾಡಿ ಹತ್ಯೆಮಾಡಿರುವ ಘಟನೆ ತಾಲಿಬಾನಿಗಳ (Taliban) ಕೃತ್ಯಕ್ಕಿಂತೂ ಕೆಟ್ಟದಾದದ್ದು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪೆನ್ನಾರ್ ನದಿ ನೀರು ಹಂಚಿಕೆ ವಿವಾದ – ನ್ಯಾಯಧಿಕರಣ ರಚನೆಗೆ ಕೇಂದ್ರದ ಒಲವು

    ಲವ್ ಜಿಹಾದ್‌ಗೆ (Love Jihad) ಬಲಿಯಾಗುವ ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೆ ನಾನು 15 ವರ್ಷಗಳಿಂದಲೂ ಎಚ್ಚರಿಕೆ ಕೊಡುತ್ತಲೇ ಬಂದಿದ್ದೇನೆ. ಇಷ್ಟೆಲ್ಲಾ ಎಚ್ಚರಿಕೆ ಕೊಟ್ಟರೂ ದೆಹಲಿಯಲ್ಲಿ ನಡೆದ ಇದೊಂದು ಘಟನೆ ದೊಡ್ಡ ದುರಂತವೇ ಸರಿ ಎಂದಿದ್ದಾರೆ. ಇದನ್ನೂ ಓದಿ: ಅಫ್ತಾಬ್‌ಗೆ ಮಂಪರು ಪರೀಕ್ಷೆ – ಪೊಲೀಸರಿಗೆ ಕೋರ್ಟ್‌ ಅನುಮತಿ

    ಹಿಂದೂ ಹುಡುಗಿಯರು ಇದರಿಂದ ಎಚ್ಚರಿಕೆಯ ಪಾಠ ಕಲಿಯಬೇಕು, ಯಾರ ಜೊತೆ ಪ್ರೀತಿ ಮಾಡುತ್ತಿದ್ದೇನೆ, ಯಾರ ಜೊತೆ ಡೇಟಿಂಗ್ ಮಾಡುತ್ತಿದ್ದೇನೆ ಎಂಬ ಅರಿವಿರಬೇಕು. ದೆಹಲಿಯ ಘಟನೆಯ ನಂತರ ಆ ಯುವಕ ಮತ್ತೆ ನಾಲ್ಕು ಜನ ಹಿಂದೂ ಹುಡುಗಿಯರ ಜೊತೆ ಸುತ್ತಾಡಿದ್ದಾನೆ. ಅವನಿಗೆ ಗಲ್ಲು ಶಿಕ್ಷೆಯೇ ಅಂತಿಮ, ಕೋರ್ಟ್ ಸಹ ವಿಳಂಬ ಮಾಡದೆ, ಒಂದೇ ತಿಂಗಳಲ್ಲಿ ಈ ಪ್ರಕ್ರಿಯೆ ಮುಗಿಸಿ ಆತನಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದ್ದಾರೆ.

    ಹುಬ್ಬಳ್ಳಿಯಲ್ಲಿ ಮೇಲಿಂದ ಮೇಲೆ ಮತಾಂತರ ಪ್ರಕ್ರಿಯೆ ನಡೆಯುತ್ತಿದೆ. ಈ ಹಿಂದೆ ಎರಡು ಪ್ರಕರಣಗಳು ನಡೆದಿದ್ದವು. ಇದೀಗ ಚಿಕ್ಕಲಗೇರಿ ಎನ್ನುವ ಸಣ್ಣ ಬಡ ಕುಟುಂಬದ ಮೇಲೆ ಮತಾಂತರ ಆಗಿದೆ. ಪತಿ, ಪತ್ನಿಯರಿಗೆ ಜಗಳ ಹಚ್ಚಿ ಪತ್ನಿಯನ್ನು ಮತಾಂತರ ಮಾಡಿದ್ದಾರೆ. ಪತ್ನಿಯ ಮೂಲಕ ಗಂಡನಿಗೆ ಒತ್ತಾಯ ಮಾಡುವ ಪ್ರಕ್ರಿಯೆ ನಡೆದಿದೆ. ಈ ಜಗಳ ವಿಕೋಪಕ್ಕೆ ಹೋಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಉಕ್ರೇನ್ ವಿರುದ್ಧ ಮತ್ತೆ ಸಮರ ಸಾರಿದ ರಷ್ಯಾ – ಒಂದೇ ಬಾರಿಗೆ 100 ಕ್ಷಿಪಣಿ ಉಡಾವಣೆ

    ಮತಾಂತರ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಈ ರೀತಿ ನಡೆಯುತ್ತಲೇ ಇದೆ. ಈ ನಿರ್ಲಕ್ಷ್ಯ ಸರ್ಕಾರದ್ದು, ಕೇವಲ ಕಾನೂನು ಮಾಡುವುದಲ್ಲ, ಅದನ್ನು ಜಾರಿ ಮಾಡಬೇಕು. ಕ್ರಿಶ್ಚಿಯನ್ ಮತಾಂತರ ಎನ್ನುವುದು ಬಹಳ ದೊಡ್ಡ ಗಂಡಾಂತರ, ಇದನ್ನು ತಡೆಯದೇ ಇದ್ದರೆ ದೇಶಕ್ಕೆ ದೊಡ್ಡ ಅಪಾಯ ಉಂಟಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಲವ್ ಜಿಹಾದ್‌ಗೆ ಬಲಿಯಾದ್ರೆ ಇದೇ ಗತಿ – ಹೊಸ ಆಯಾಮದಲ್ಲಿ ತನಿಖೆ ನಡೆಸುವಂತೆ VHP ಮನವಿ

    ಲವ್ ಜಿಹಾದ್‌ಗೆ ಬಲಿಯಾದ್ರೆ ಇದೇ ಗತಿ – ಹೊಸ ಆಯಾಮದಲ್ಲಿ ತನಿಖೆ ನಡೆಸುವಂತೆ VHP ಮನವಿ

    ನವದೆಹಲಿ: ದೆಹಲಿಯ ಭೀಕರ ಹತ್ಯೆ ಪ್ರಕರಣವನ್ನು ಲವ್ ಜಿಹಾದ್ (Love Jihad) ಆಯಾಮದಲ್ಲಿ ತನಿಖೆ ನಡೆಸುವಂತೆ ವಿಶ್ವಹಿಂದೂ ಪರಿಷತ್ (VHP) ಪೊಲೀಸರಿಗೆ (Delhi Police) ಮನವಿ ಮಾಡಿದೆ.

    ಹಿಂದೂ ಸಂಘಟನೆಗಳು (Hindu Organization) ಈ ಬಗ್ಗೆ ಧ್ವನಿ ಎತ್ತಿದ್ದು, ಲವ್ ಜಿಹಾದ್‌ಗೆ (Love Jihad) ಶ್ರದ್ಧಾ ಬಲಿಯಾಗಿದ್ದಾಳೆ ಎಂದು ವಾದಿಸುತ್ತಿವೆ. ಈ ಬೆನ್ನಲ್ಲೇ ವಿಶ್ವಹಿಂದೂ ಪರಿಷತ್ ಲವ್ ಜಿಹಾದ್ ಆಯಾಮದಲ್ಲಿ ತನಿಖೆ ಮಾಡುವಂತೆ ದೆಹಲಿ ಪೊಲೀಸರಿಗೆ (Delhi Police) ಮನವಿ ಮಾಡಿದೆ. ಅಲ್ಲದೇ ಲವ್ ಜಿಹಾದ್‌ಗೆ ಬಲಿಯಾದ್ರೇ ಇದೇ ಗತಿ ಅಂತಾನೂ ಪೋಸ್ಟ್ಗಳನ್ನು ಹಾಕುತ್ತಿವೆ. ಇದನ್ನೂ ಓದಿ: ಮನೆಯಲ್ಲಿ ಶ್ರದ್ಧಾಳ ದೇಹದ ಪೀಸ್‍ಗಳಿದ್ರೂ ಬೇರೆ ಯುವತಿಯನ್ನು ಮನೆಗೆ ಕರೆದು ಸೆಕ್ಸ್ ಮಾಡ್ತಿದ್ದ!

    ಅಫ್ತಾಬ್‌ಗೆ ಹಿಂದಿ ಗೊತ್ತಿಲ್ಲ:
    ಪೊಲೀಸರ ಬಳಿ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿರುವ ಆರೋಪಿ ಅಫ್ತಾಬ್ ತನಗೆ ಇಂಗ್ಲಿಷ್ ಭಾಷೆ (English Language) ಮಾತ್ರ ಬರುತ್ತದೆ. ಹಿಂದಿ ಭಾಷೆ (Hindi Language) ಬರೋದಿಲ್ಲ ಎಂದು ಹೇಳಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: 7,600 ಶಾಲಾ ಕೊಠಡಿಗಳ ಮುಂದೆ ವಿವೇಕಾನಂದ ಭಾವಚಿತ್ರ ಮುದ್ರಿಸಲು ಸರ್ಕಾರ ಪ್ಲ್ಯಾನ್‌

    ರಾಷ್ಟ್ರ ರಾಜಧಾನಿಯಲ್ಲಿ ತನ್ನೊಂದಿಗೆ ಲಿವ್ ಇನ್ ರಿಲೇಶನ್‌ಶಿಪ್‌ (live In Relationship) ನಲ್ಲಿದ್ದ ಗೆಳತಿಯ ಹತ್ಯೆ ಮಾಡಿ, ದೇಹವನ್ನು 35 ತುಂಡುಗಳನ್ನಾಗಿ ಮಾಡಿ, ಅದನ್ನು ಫ್ರಿಡ್ಜ್‌ನಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿ ಇದೀಗ ಅನೇಕ ಭಯಾನಕ ಸಂಗತಿಗಳು ಹೊರಬಿದ್ದಿವೆ. ಆರೋಪಿ ಅಫ್ತಾಬ್ ಹಾಗೂ ಶ್ರದ್ಧಾ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಆದರೆ ಮೇ 18ರಂದು ಜಗಳವಾದಾಗ ಶ್ರದ್ಧಾಳ ಎದೆಯ ಮೇಲೆ ಕುಳಿತು ಆಕೆಯ ಕತ್ತುಹಿಸುಕಿ ಸಾಯಿಸಿದ್ದಾನೆ.

    ಬಳಿಕ ದೇಹವನ್ನು ಕತ್ತರಿಸೋದು ಹೇಗೆ? ಅದನ್ನು ಡಿಎನ್‌ಎಗಳ ಸಾಕ್ಷ್ಯಾಧಾರವೂ ಸಿಗದಂತೆ ದೇಹವನ್ನ ವಿಲೇವಾರಿ ಮಾಡೋದು ಹೇಗೆ ಎಂಬ ಮಾಹಿತಿಗಳ ಬಗ್ಗೆ ಗೂಗಲ್‌ನಲ್ಲಿ ಹುಡುಕಾಡಿದ್ದಾನೆ. ನಂತರ ದೇಹವನ್ನು 35 ಪೀಸ್‌ಗಳಾಗಿ ತಂಡು ಮಾಡಿದ್ದು, ಅದನ್ನು ಸಂಗ್ರಹಿಸಲು 300 ಲೀಟರ್ ಸಾಮರ್ಥ್ಯದ ಹೊಸ ಫ್ರಿಡ್ಜ್ ಸಹ ಖರೀದಿಸಿದ್ದಾನೆ. ದೇಹದ ಮಾಂಸದ ವಾಸನೆ ಹರಡಬಾರದೆಂದು ದಿನವೂ ಅಗರಬತ್ತಿ ಹಚ್ಚಿಡುತ್ತಿದ್ದ. ಈ ನಡುವೆ ಶ್ರದ್ಧಾಳನ್ನು ಕೊಲೆ ಮಾಡಿ ಕೆಲ ದಿನಗಳ ನಂತರ ಮತ್ತೊಬ್ಬ ಮಹಿಳೆಯನ್ನು ತನ್ನ ಅಪಾರ್ಟ್ಮೆಂಟ್‌ಗೆ ಕರೆದು ಸೆಕ್ಸ್ ಮಾಡ್ತಿದ್ದ ಎಂಬ ವಿಷಯ ಬೆಳಕಿಗೆ ಬಂದಿದೆ.

    Live Tv
    [brid partner=56869869 player=32851 video=960834 autoplay=true]

  • ಪ್ರಿಯಕರನೊಂದಿಗೆ ಲವ್ವಿ-ಡವ್ವಿ – ಗಂಡನನ್ನ ಗುಂಡಿಟ್ಟು ಕೊಂದು, ಕತ್ತರಿಸಿ ಮನೆಯಲ್ಲೇ ಹೂತಿದ್ದ ಪತ್ನಿ

    ಪ್ರಿಯಕರನೊಂದಿಗೆ ಲವ್ವಿ-ಡವ್ವಿ – ಗಂಡನನ್ನ ಗುಂಡಿಟ್ಟು ಕೊಂದು, ಕತ್ತರಿಸಿ ಮನೆಯಲ್ಲೇ ಹೂತಿದ್ದ ಪತ್ನಿ

    ಲಕ್ನೋ: ರಾಷ್ಟ್ರರಾಜಧಾನಿಯಲ್ಲಿಂದು ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದೆ. ತನ್ನೊಂದಿಗೆ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ (Live In Relationship) ಗೆಳತಿಯನ್ನ ಕೊಂದು 35 ತುಂಡುಗಳಾಗಿ ಕತ್ತರಿಸಿ, ವಿವಿಧ ಅರಣ್ಯ ಪ್ರದೇಶದಲ್ಲಿ ಎಸೆದಿದ್ದ ಘಟನೆ ಬೆಳಕಿಗೆ ಬಂದಿದೆ. ಇದರ ಬೆನ್ನಲ್ಲೇ ಉತ್ತರ ಪ್ರದೇಶದ (Uttar Pradesh) ಗಾಜಿಯಾಬಾದ್‌ನಲ್ಲಿ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಲೆ ಮಾಡಿ ಮನೆಯೊಳಗೆ ಹೂತು ಹಾಕಿದ್ದ ಮಹಿಳೆಯನ್ನು ಗಾಜಿಯಾಬಾದ್ ಪೊಲೀಸರು (Ghaziabad Police) ಬಂಧಿಸಿರುವ ಘಟನೆಯೂ ಬೆಳಕಿಗೆ ಬಂದಿದೆ.

    ನಾಲ್ಕು ವರ್ಷಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದ್ದು, ಸೋಮವಾರ ಆರೋಪಿ ಸವಿತಾ ಹಾಗೂ ಪ್ರಿಯಕರ ಅರುಣ್ ಇಬ್ಬರನ್ನು ಬಂಧಿಸಲಾಗಿದೆ. ಇದನ್ನೂ ಓದಿ: ದೆಹಲಿಯ ಭಯಾನಕ ಕೃತ್ಯಕ್ಕೆ ಅಮೆರಿಕದ ಥ್ರಿಲ್ಲರ್ `ಡೆಕ್ಸ್ಟರ್‌’ ಸ್ಫೂರ್ತಿ – ರೋಚಕ ಸತ್ಯ ಬಯಲು

    ಏನಿದು ಮರ್ಡರ್ ಮಿಸ್ಟ್ರಿ?
    ಕಳೆದ ನಾಲ್ಕು ವರ್ಷಗಳ ಹಿಂದೆ ಆರೋಪಿ ಸವಿತಾ ತನ್ನ ಪ್ರಿಯಕರ ಅರುಣ್ ಜೊತೆ ಸೇರಿಕೊಂಡು ಪತಿ ಚಂದ್ರವೀರ್ ಮೇಲೆ ಗುಂಡು ಹಾರಿಸಿ ಕೊಂದಿದ್ದಾಳೆ. ಬಳಿಕ ತುಂಡುತುಂಡಾಗಿ ಕತ್ತರಿಸಿ ಶವವನ್ನು ಚಂದ್ರವೀರ್‌ನ ಮನೆಯೊಳಗೆ 7 ಅಡಿ ಗುಂಡಿ ತೋಡಿ ಹೂತು ಹಾಕಲಾಗಿತ್ತು. ಶವದ ಕೊಳೆತ ದುರ್ವಾಸನೆ ಬರಬಾರದು ಎಂದು 7 ಅಡಿ ಗುಂಡು ತೆಗೆದು ಹೂತು ಹಾಕಿದ್ದರು. ಆದರೂ ಏನೂ ಆಗಿಲ್ಲವೆಂಬಂತೆ ಅದೇ ಮನೆಯಲ್ಲಿ ವಾಸವಾಗಿದ್ದರು.

    ಕೃತ್ಯ ಎಸಗುವುದಕ್ಕೂ ಮುನ್ನ ಚಂದ್ರವೀರ್ ಮನೆಯಲ್ಲಿ ಏಳು ಅಡಿಯ ಗುಂಡಿ ತೋಡಲಾಗಿತ್ತು. ಬಳಿಕ ಗಂಡನನ್ನು ಅಪಹರಣ ಮಾಡಿ ಗುಂಡಿಕ್ಕಿ ಕೊಲೆ ಮಾಡಿ, ಹೂತು ಹಾಕಿದ್ದಾರೆ. ಬಳಿಕ ಸವಿತಾ ಈ ಕೃತ್ಯವನ್ನು ತನ್ನ ಸಹೋದರನ ಮೇಲೆ ಹೊರಿಸಿದ್ದಳು. ಇದನ್ನೂ ಓದಿ: ಕಾಮೋತ್ತೇಜಕ ಮಾತ್ರೆ ಸೇವಿಸಿ ರೇಪ್ – ವಿಪರೀತ ರಕ್ತಸ್ರಾವದಿಂದ ಗೆಳತಿ ಸಾವು

    ಇದೀಗ 4 ವರ್ಷಗಳ ಬಳಿಕ ಪ್ರಕರಣ ಬಯಲಾಗಿದ್ದು, ಹೂತು ಹಾಕಿದ್ದ ಜಾಗದಿಂದ ಪೊಲೀಸರು (Police) ಮೃತದೇಹವನ್ನು ಹೊರತೆಗೆದಿದ್ದಾರೆ. ಕೃತ್ಯಕ್ಕೆ ಬಳಸಲಾಗಿದ್ದ ಆಯುಧಗಳನ್ನು ಮುಟ್ಟುಗೋಲು ಹಾಕಲಾಗಿದೆ. ಒಂದು ಪಿಸ್ತೂಲು ಹಾಗೂ ಕೊಡಲಿಯನ್ನು ವಶಪಡಿಸಿಕೊಳ್ಳಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಮನೆ ಮಂಜೂರು ಮಾಡಲು 20 ಸಾವಿರ ಲಂಚ – ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ PDO

    ಮನೆ ಮಂಜೂರು ಮಾಡಲು 20 ಸಾವಿರ ಲಂಚ – ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ PDO

    ಹಾವೇರಿ: ಮನೆ ನಿರ್ಮಾಣಕ್ಕೆ ವರ್ಕ್ ಆರ್ಡರ್ ನೀಡಲು 20 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ ಪಿಡಿಒ (PDO) ಲೋಕಾಯುಕ್ತ (Karnataka Lokayukta) ಬಲೆಗೆ ಬಿದ್ದಿರುವ ಘಟನೆ ಹಾವೇರಿ (Haveri) ಜಿಲ್ಲೆಯಲ್ಲಿ ನಡೆದಿದೆ.

    ಶಿಗ್ಗಾಂವಿ ತಾಲ್ಲೂಕಿನ ನಾರಾಯಣಪುರದ ಗ್ರಾಮ ಪಂಚಾಯಿತಿ ಪಿಡಿಒ (PDO) ಈರಣ್ಣ ಗಾಣಿಗಿ, ಪಂಚಾಯಿತಿ ವ್ಯಾಪ್ತಿಯ ಮುನವಳ್ಳಿ ಗ್ರಾಮದ ಸಂಗಪ್ಪ ಕಿವುಡನ ಅವರಿಂದ ಹಣ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದಿದ್ದಾರೆ. ಇದನ್ನೂ ಓದಿ: ದೆಹಲಿಯ ಭಯಾನಕ ಕೃತ್ಯಕ್ಕೆ ಅಮೆರಿಕದ ಥ್ರಿಲ್ಲರ್ `ಡೆಕ್ಸ್ಟರ್‌’ ಸ್ಫೂರ್ತಿ – ರೋಚಕ ಸತ್ಯ ಬಯಲು

    ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಅತಿಯಾದ ಮಳೆಯಿಂದ (RainFall) ಸಂಗಪ್ಪ ಅವರ ಮನೆ ಹಾನಿಗೊಳಗಾಗಿತ್ತು. ಮನೆ ಹಾನಿಗೆ ಪರಿಹಾರ ನೀಡುವಂತೆ ಅರ್ಜಿ ಸಲ್ಲಿಸಿದ್ದ ಸಂಗಪ್ಪ ಅವರನ್ನು ಫಲಾನುಭವಿಯಾಗಿ ಆಯ್ಕೆ ಮಾಡಲಾಗಿತ್ತು. ಆದರೆ ಮನೆ ನಿರ್ಮಾಣಕ್ಕೆ ವರ್ಕ್ ಆರ್ಡರ್ ನೀಡಲು ಒಟ್ಟು 50 ಸಾವಿರ ರೂ.ಗೆ ಬೇಡಿಕೆಯಿಟ್ಟಿದ್ದರು. ನವಂಬರ್ 10 ರಂದು ಮುಂಗಡ ಹಣವಾಗಿ 20 ಸಾವಿರ ರೂ. ಗಣ ಪಿಡಿಒ ಪಡೆದ್ದರು. ಇದನ್ನೂ ಓದಿ: ಕಾಮೋತ್ತೇಜಕ ಮಾತ್ರೆ ಸೇವಿಸಿ ರೇಪ್ – ವಿಪರೀತ ರಕ್ತಸ್ರಾವದಿಂದ ಗೆಳತಿ ಸಾವು

    ಇಂದು ಇನ್ನೂ 20 ಸಾವಿರ ಹಣ ಪಡೆಯುತ್ತಿದ್ದ ವೇಳೆ ಪಿಡಿಒ (PDO) ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಹಾವೇರಿ ಲೋಕಾಯುಕ್ತ ಪೊಲೀಸರು (Lokayukta Police) ಪ್ರಕರಣ ದಾಖಲಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ದೆಹಲಿಯ ಭಯಾನಕ ಕೃತ್ಯಕ್ಕೆ ಅಮೆರಿಕದ ಥ್ರಿಲ್ಲರ್ `ಡೆಕ್ಸ್ಟರ್‌’ ಸ್ಫೂರ್ತಿ – ರೋಚಕ ಸತ್ಯ ಬಯಲು

    ದೆಹಲಿಯ ಭಯಾನಕ ಕೃತ್ಯಕ್ಕೆ ಅಮೆರಿಕದ ಥ್ರಿಲ್ಲರ್ `ಡೆಕ್ಸ್ಟರ್‌’ ಸ್ಫೂರ್ತಿ – ರೋಚಕ ಸತ್ಯ ಬಯಲು

    ನವದೆಹಲಿ: ಸಿನಿಮಾ (Cinema) ಜಗತ್ತು ಮಾಯಾವಿ ಇದ್ದಂತೆ, ಅದರಲ್ಲೂ ವಿದೇಶ ಸಿನಿಮಾಗಳು ಹೆಚ್ಚಾಗಿ ಅಪರಾಧ (Crime) ಕೃತ್ಯಗಳ ಆಧಾರಿವೇ ಆಗಿರುತ್ತವೆ. ಆದರೆ ಸಿನಿಮಾದ ಕೆಲವು ಥ್ರಿಲ್ಲರ್ ಸನ್ನಿವೇಶಗಳು ನೋಡುಗರ ಮೇಲೆ ಪ್ರಭಾವ ಬೀರುತ್ತವೆ. ದೆಹಲಿಯಲ್ಲಿ ನಡೆದಿರುವ ಕೊಲೆಗೂ ಅಂತಹದ್ದೇ ಸಿನಿಮಾವೊಂದು ಸ್ಫೂರ್ತಿಯಾಗಿದೆ ಅನ್ನೋದು ತನಿಖಾಧಿಕಾರಿಗಳಿಂದ (Police Investigation Officer) ತಿಳಿದುಬಂದಿದೆ.

    ಹೌದು. ಅಮೆರಿಕದಲ್ಲಿ ತೆರೆಕಂಡಿದ್ದ ಕಾಲ್ಪನಿಕ ಕಥೆಗಳ ಆಧರಿತ ಸಿನಿಮಾ `ಡೆಕ್ಸ್ಟರ್‌’ (Dexter Movie) ಭಾರೀ ಸದ್ದು ಮಾಡಿತ್ತು. ಈ ಚಿತ್ರದಲ್ಲಿ ನಾಯಕ ವಿಧಿವಿಜ್ಞಾನ (Forensics Expert) ತಜ್ಞನಾಗಿರುತ್ತಾನೆ. ಚಾಣಾಕ್ಷನಾಗಿ ಸರಣಿ ಕೊಲೆಗಳನ್ನು ಮಾಡುತ್ತಾ, ಮತ್ತೊಂದೆಡೆ ಸಾಮಾನ್ಯನಾಗಿ ಜೀವನ ನಡೆಸುತ್ತಿರುತ್ತಾನೆ. ದೆಹಲಿಯ ಕೊಲೆ ಕೇಸ್‌ನಲ್ಲೂ ಇದೇ ರೀತಿಯಾಗಿದೆ. ಆರೋಪಿ ಅಫ್ತಾಬ್ ಬಾಣಸಿಗನಾಗಿದ್ದರಿಂದ ಮಾಂಸ ಕತ್ತರಿಸುವ ಕತ್ತಿ ಬಳಸುವಲ್ಲಿ ನಿಪುಣನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಗೆಳತಿಯ ದೇಹವನ್ನು 35 ಪೀಸ್ ಮಾಡಿ, ದೆಹಲಿಯಾದ್ಯಂತ ಕಾಡುಗಳಲ್ಲಿ ಹೂತು ಹಾಕಿದ!

    ದುರ್ವಾಸನೆ ತೆಡೆಯಲು ಅಗರಬತ್ತಿ ಹಚ್ಚುತ್ತಿದ್ದ: ಘಟನೆ ಬಳಿಕ ಮೈ ಜುಮ್ಮೆನ್ನಿಸುವ ಅನೇಕ ರೋಚಕ ಸತ್ಯಗಳು ಬೆಳಕಿಗೆ ಬರುತ್ತಿವೆ. ಕೊಲೆ ಆರೋಪಿ ಅಫ್ತಾಬ್ ಅಮೀನ್ ಪೂನವಾಲಾ, ತನ್ನ ಗೆಳತಿಯನ್ನು ಕೊಂದ ಬಳಿಕ ಆಕೆಯ ದೇಹದ ದುರ್ವಾಸನೆ ಹೊರಗೆ ಬಾರದಂತೆ ತಡೆಯಲು ಯಾವಾಗಲೂ ಅಗರಬತ್ತಿ (ಗಂಧದಕಡ್ಡಿ) ಹಚ್ಚಿಡುತ್ತಿದ್ದ. ಆಕೆಯ ದೇಹವನ್ನು 35 ಪೀಸ್‌ಗಳಾಗಿ ಕತ್ತರಿ, ಅದನ್ನಿಡಲು 300 ಲೀಟರ್ ಸಾಮರ್ಥ್ಯದ ಹೊಸ ಫ್ರಿಡ್ಜ್ ಸಹ ಖರೀದಿಸಿದ್ದ. ಮುಖ್ಯವಾಗಿ ಕೊಲೆ ಮಾಡಲು ಇದೇ ರೀತಿ ಕೃತ್ಯಗಳನ್ನು ಎಸಗುವ ಅಮೆರಿಕದ ಡೆಕ್ಸ್ಟರ್‌ ಸಿನಿಮಾ ನೋಡಿ ಪ್ರೇರಣೆಗೊಂಡಿದ್ದ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಶಿಕ್ಷಕಿ ಬೈದಿದ್ದಕ್ಕೆ ಡೆತ್‍ನೋಟ್ ಬರೆದಿಟ್ಟು ವಿದ್ಯಾರ್ಥಿನಿ ಆತ್ಮಹತ್ಯೆ

    ತನ್ನೊಂದಿಗೆ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ (Live in Relationship) ಗೆಳತಿಯ ಹತ್ಯೆ ನಡೆಸಿ, ದೇಹವನ್ನು 35 ತುಂಡುಗಳನ್ನಾಗಿ ಮಾಡಿ, ಬೇರೆ ಬೇರೆ ಪ್ರದೇಶಗಳಲ್ಲಿ ದೇಹದ ಭಾಗಗಳನ್ನು ಹೂತು ಹಾಕಿರುವ ಭಯಾನಕ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಈ ಅಮಾನುಷ ಕೃತ್ಯ ಎಸಗಿದ 5 ತಿಂಗಳ ಬಳಿಕ ಕೊಲೆಗಡುಕನನ್ನು ಪೊಲೀಸರು ಬಂಧಿಸಿದ್ದಾರೆ.

    ಆರೋಪಿ ವಿರುದ್ಧ ಪ್ರಕರಣ (FIR) ದಾಖಲಿಸಲಾಗಿದ್ದು, ಐದು ದಿನ ಪೊಲೀಸ್ (Police) ವಿಚಾರಣೆಗೆ ಒಳಪಡಿಸಿದ್ದಾರೆ. ಕೊಲೆ ಆರೋಪಿ ವಿವಿಧ ಕಾಡುಗಳಲ್ಲಿ ಹೂತಿಟ್ಟಿದ್ದ ದೇಹದ ಕೆಲ ಭಾಗಗಳನ್ನು ಸಂಗ್ರಹಿಸಿದ್ದಾರೆ. ಆದರೆ ಅವು ಇದೇ ಯುವತಿಯ ದೇಹದ ಭಾಗವೆಂದು ಖಚಿತವಾಗಿ ಹೇಳಿಲ್ಲ. ಕೊಲೆಗೆ ಬಳಸಿದ್ದ ಕತ್ತಿ ಸಹ ಇನ್ನೂ ಪತ್ತೆಯಾಗಿಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ.

    Live Tv
    [brid partner=56869869 player=32851 video=960834 autoplay=true]

  • ಕಾಮೋತ್ತೇಜಕ ಮಾತ್ರೆ ಸೇವಿಸಿ ರೇಪ್ – ವಿಪರೀತ ರಕ್ತಸ್ರಾವದಿಂದ ಗೆಳತಿ ಸಾವು

    ಕಾಮೋತ್ತೇಜಕ ಮಾತ್ರೆ ಸೇವಿಸಿ ರೇಪ್ – ವಿಪರೀತ ರಕ್ತಸ್ರಾವದಿಂದ ಗೆಳತಿ ಸಾವು

    ಲಕ್ನೋ: 25ರ ವರ್ಷದ ಯುವಕನೊಬ್ಬ ತನ್ನ ಗೆಳೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ಬಳಿಕ ಆಕೆಯ ಖಾಸಗಿ ಭಾಗದಿಂದ ರಕ್ತಸ್ರಾವವಾಗಿದ್ದು, ಮರುದಿನವೇ ಹುಡುಗಿ ಶವವಾಗಿ ಪತ್ತೆಯಾಗಿರುವ ಘಟನೆ ಉತ್ತರಪ್ರದೇಶದಲ್ಲಿ (UttarPradesh) ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಕೊಲೆ ಹಾಗೂ ಅತ್ಯಾಚಾರ ಆರೋಪದ ಅಡಿಯಲ್ಲಿ 25ರ ಯುವಕನನ್ನು ಬಂಧಿಸಲಾಗಿದೆ.

    ಆರೋಪಿ ರಾಜ್ ಗೌತಮ್ ಯುವತಿಯೊಂದಿಗೆ ಸಂಬಂಧ ಹೊಂದಿದ್ದು, ರಾತ್ರಿ ಮೃತ ಹುಡುಗಿಯ (Girl) ಮನೆಗೆ ಬರುವ ಮುನ್ನ ಎನರ್ಜಿ ಬೂಸ್ಟರ್ ಮಾತ್ರೆ (Energy Booster Pills) ಸೇವಿಸಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಇದನ್ನೂ ಓದಿ: ಹೆರಿಗೆಗೆಂದು ಪತ್ನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದ ವ್ಯಕ್ತಿಯಿಂದ ಮಹಿಳಾ ಸಿಬ್ಬಂದಿಗೆ ಕಿರುಕುಳ

    ಪೊಲೀಸರ (Police) ಮಾಹಿತಿ ಪ್ರಕಾರ, ಕಳೆದ ಒಂದು ವರ್ಷದ ಹಿಂದೆ ಇಬ್ಬರು ಸಾಮಾಜಿಕ ಜಾಲತಾಣದಲ್ಲಿ (Social Media) ಪರಿಚಯವಾಗಿದ್ದರು. ಅವರ ನಡುವೆ ಅನೇಕ ಸಂದೇಶಗಳು ವಿನಿಮಯವಾಗಿದ್ದವು. ಕೆಲ ದಿನಗಳು ಕಳೆದ ನಂತರ ಯುವಕ ಹುಡುಗಿಯನ್ನು ಬರುವಂತೆ ಕೇಳಿದ್ದಾನೆ. ಮೊದಲು ನಿರಾಕರಿಸಿದ ಆಕೆ ನಂತರ ಬರುವುದಾಗಿ ಒಪ್ಪಿಕೊಂಡಿದ್ದಾಳೆ. ಇದನ್ನೂ ಓದಿ: ಗೆಳತಿಯ ದೇಹವನ್ನು 35 ಪೀಸ್ ಮಾಡಿ, ದೆಹಲಿಯಾದ್ಯಂತ ಕಾಡುಗಳಲ್ಲಿ ಹೂತು ಹಾಕಿದ!

    ಸಿನಿಮಾವನ್ನೂ ಮೀರಿಸುವ ಥ್ರಿಲ್ಲರ್ ಕಹಾನಿ: ಇದೇ ತಿಂಗಳ ನವೆಂಬರ್ 9ರಂದು ಘಟನೆ ನಡೆದಿದೆ. ಅಂದು ಆರೋಪಿ ಯುವಕ ರಾಜ್ ಬೆಳಗ್ಗೆ 11:32ರ ವೇಳೆಗೆ ತನ್ನ ಹಾಸ್ಟೆಲ್‌ನಿಂದ ಹೊರಟು 11:47ಕ್ಕೆ ಹುಡುಗಿ ಮನೆಗೆ ಬಂದಿದ್ದಾನೆ. ಬರುವ ವೇಳೆ ತನ್ನ ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ಎನರ್ಜಿ ಬೂಸ್ಟರ್ ಮಾತ್ರೆ (Energy Booster Pills) ಸೇವಿಸಿದ್ದಾನೆ. ನಂತರ ಹುಡುಗಿ ಮನೆಗೆ ಬಂದವನೇ ಆಕೆಯೊಂದಿಗೆ ಲೈಂಗಿಕ ಕ್ರಿಯೆಗೆ ಮುಂದಾಗಿದ್ದಾನೆ. ಹುಡುಗಿ ಪ್ರತಿಭಟನೆಯ ಹೊರತಾಗಿಯೂ ಮೃಗೀಯವಾಗಿ ವರ್ತಿಸಿದ್ದು, ಆಕೆ ಮೂರ್ಛೆ ಹೋಗುವವರೆಗೂ ಅತ್ಯಾಚಾರ ಮಾಡಿದ್ದಾನೆ. ಇದರಿಂದ ಆಕೆಯ ಖಾಸಗಿ ಭಾಗದಲ್ಲಿ ರಕ್ತಸ್ರಾವವಾಗಿದೆ. ಇದನ್ನು ನೋಡಿದ ರಾಜ್ ಹೆದರಿ ಅಲ್ಲಿಂದ ಓಡಿಹೋಗಿದ್ದಾನೆ. ಅತಿಯಾದ ರಕ್ತಸ್ರಾವದಿಂದ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದ ಹುಡುಗಿ ಮಧ್ಯಾಹ್ನ 1 ಗಂಟೆ ಸುಮಾರಿಗೆ ಸಾವನ್ನಪ್ಪಿದ್ದಾಳೆ.

    ಆಕೆಯ ಕಿರಿ ಸಹೋದರಿ ಮನೆಗೆ ಹಿಂತಿರುಗಿದಾಗ ಸಂತ್ರಸ್ತೆ ಹಾಸಿಗೆ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡಿದ್ದಾಳೆ. ನಂತರ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯರು ತಪಾಸಣೆ ನಡೆಸಿದ ಬಳಿಕ ಆಕೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲಿ ಅತ್ಯಾಚಾರ ದೃಢಪಟ್ಟಿದೆ. ಅಲ್ಲದೆ ಆಕೆಯ ಖಾಸಗಿ ಭಾಗಗಳಲ್ಲಿ ಉಂಟಾಗಿದ್ದ ಗಂಭೀರ ಗಾಯಗಳಿಂದಲೇ ಅತಿಯಾದ ರಕ್ತಸ್ರಾವವಾಗಿ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಶಿಕ್ಷಕಿ ಬೈದಿದ್ದಕ್ಕೆ ಡೆತ್‍ನೋಟ್ ಬರೆದಿಟ್ಟು ವಿದ್ಯಾರ್ಥಿನಿ ಆತ್ಮಹತ್ಯೆ

    ಇದಾದ ನಂತರ ಸಂತ್ರಸ್ತ ಹುಡುಗಿಯ ಕುಟುಂಬವು, ನೆರೆಹೊರೆಯವರು ಹಾಗೂ 65 ವರ್ಷದ ಮಹಿಳೆಯೊಬ್ಬರು ಕೊಲೆಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ, ಲಿಖಿತ ದೂರು ನೀಡಿದ್ದರು. ದೂರನ್ನು ಆಧರಿಸಿ ಪೊಲೀಸ್ ನೆರೆಹೊರೆಯವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಆದರೆ ಹುಡುಗಿಯ ಮೊಬೈಲ್ ಡೇಟಾ ಪರಿಶೀಲಿಸಿದಾಗ ಕೊಲೆಗೆ ರಾಜ್ ಕಾರಣ ಎಂಬುದು ಪತ್ತೆಯಾಗಿದೆ. ಬಳಿಕ ಪೊಲೀಸರು ಆರೋಪಿಯನ್ನು ಹಾಸ್ಟೆಲ್‌ನಿಂದ ಕರೆದುಕೊಂಡುಬಂದಿದ್ದಾರೆ.

    CRIME (1)

    ರಾಜ್ ರಹಸ್ಯವೇನು?
    ಆರೋಪಿ ರಾಜ್ ಬರನ್ ಅಲಿಯಾಸ್ ರಾಜ್ ಗೌತಮ್ ಪೊಲೀಸರು ಬಂಧಿಸಿದ ಬಳಿಕ, ತಾನು ಮೃತ ಹುಡುಗಿಯನ್ನು ಪ್ರೀತಿಸುತ್ತಿದ್ದು, ಇಬ್ಬರ ನಡುವೆ ಸಂಬಂಧವಿತ್ತೆಂದು ಒಪ್ಪಿಕೊಂಡಿದ್ದಾನೆ. ಆಕೆ ಒಬ್ಬಳೆ ಇದ್ದಾಳೆ ಎಂದು ತಿಳಿಸಿದ ಬಳಿಕವೇ ನಾನು ಆಕೆಯ ಮನೆಗೆ ಹೋದೆ. ನಂತರ ಲೈಂಗಿಕ ಕ್ರಿಯೆಗೆ ಮುಂದಾದೆವು. ಆದರೆ ಸಂಭೋಗದ ಸಮಯದಲ್ಲೇ ಹುಡುಗಿಗೆ ವಿಪರೀತ ರಕ್ತಸ್ರಾವ ಪ್ರಾರಂಭವಾಯಿತು. ಆಕೆ ಪ್ರಜ್ಞೆ ಕಳೆದುಕೊಂಡಳು. ನಂತರ ಆಕೆಗೆ ಔಷಧ ಪಡೆಯಲು ಮೆಡಿಕಲ್ ಶಾಪ್‌ಗೆ ಹೋದೆನು. ಆದರೆ ಅವರು ರೋಗ ನಿರ್ಣಯಕ್ಕಾಗಿ ಆಕೆಯನ್ನು ಕರೆತರಲೇಬೇಕು ಎಂದು ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    crime

    ರಾಜ್ ಮೊಬೈಲ್ ಪರಿಶೀಲನೆ ಮಾಡಿದಾಗ ಮೃತ ಹುಡುಗಿಯ ಹೊರತಾಗಿ ಇತರ ಹುಡುಗಿಯರೊಂದಿಗೂ ಚಾಟ್ ಮಾಡಿರುವುದು ಪತ್ತೆಯಾಗಿವೆ. ನಾವು ಎಲ್ಲಾ ಸಾಂದರ್ಭಿಕ ಸಾಕ್ಷ್ಯಗಳನ್ನು ತನಿಖೆ ಮಾಡುತ್ತಿದ್ದೇವೆ ಎಂದು ಪೊಲೀಸರು ಹೇಳಿದರು.

    ಕುಟುಂಬದ ಆರೋಪ ಏನು?
    ವರದಿಗಳ ಪ್ರಕಾರ, ಅತ್ಯಾಚಾರವೇ ಸಾವಿಗೆ ಕಾರಣ ಅನ್ನೋದನ್ನ ಒಪ್ಪುವುದಿಲ್ಲ. ಆರೋಪಿ ಅತ್ಯಾಚಾರದ ಬಳಿಕ ಆಕೆಯ ಖಾಸಗಿ ಭಾಗಗಳಿಗೆ ಚಾಕುವಿನಿಂದ ಇರಿದಿದ್ದಾನೆ. ಸತ್ಯಾಂಶ ತಿಳಿಯಲು ವಿಧಿವಿಜ್ಞಾನಗಳ ತನಿಖೆಗೆ ಮತ್ತು ಶವ ಪರೀಕ್ಷೆ ನಡೆಸಬೇಕು ಎಂದು ಯುವತಿ ತಂದೆ ಒತ್ತಾಯಿಸಿದ್ದಾರೆ.

    ವೈದ್ಯರು ಹೇಳಿದ್ದೇನು?
    ಸಾಮಾನ್ಯವಾಗಿ ಮಿತಿ ಮೀರಿದ ಔಷಧ ಸೇವನೆಗಳಿಂದ ಗುಪ್ತಾಂಗಗಳಲ್ಲಿ ಗಾಯ ಉಂಟಾಗಬಹುದು. ಇದರಿಂದ ರಕ್ತಸ್ರಾವವಾಗಲಿ, ರಕ್ತ ಹೆಪ್ಪುಗಟ್ಟುವಿಕೆಯಾಗಲಿ ಆಗುವುದಿಲ್ಲ. ಆದರೆ ಈ ಪ್ರಕರಣದಲ್ಲಿ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಕಂಡುಬಂದಿರುವ ಗಾಯಗಳು ರಾಡ್‌ಗಳ ಪ್ರಯೋಗಗಳಿಂದ ಸಂಭವಿಸಬಹುದು ಎಂದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ತನ್ನ ಹೆಂಡತಿಯನ್ನ ಭಾರೀ ಮೊತ್ತಕ್ಕೆ ಮಾರಾಟ ಮಾಡಿದ ಗಂಡ – ಮದುವೆನೂ ಮಾಡಿಸಿದ

    ತನ್ನ ಹೆಂಡತಿಯನ್ನ ಭಾರೀ ಮೊತ್ತಕ್ಕೆ ಮಾರಾಟ ಮಾಡಿದ ಗಂಡ – ಮದುವೆನೂ ಮಾಡಿಸಿದ

    ಭುವನೇಶ್ವರ್: ದೆಹಲಿ (NewDelhi) ಮೂಲದ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನ ಭಾರೀ ಮೊತ್ತಕ್ಕೆ ಮಾರಾಟ ಮಾಡಿರುವ ಆತಂಕಕಾರಿ ಘಟನೆ ಒಡಿಶಾದ (Odisha) ಕಲಹಂಡಿ ಜಿಲ್ಲೆಯಲ್ಲಿ ನಡೆದಿದೆ.

    ಪತ್ನಿಯನ್ನು ಮತ್ತೊಬ್ಬ ವ್ಯಕ್ತಿಗೆ ಮಾರಾಟ ಮಾಡಿದ ಬಳಿಕ ಬಲವಂತವಾಗಿ ಮದುವೆಯನ್ನೂ (Marriage) ಮಾಡಿಸಿದ್ದಾನೆ. ಇದನ್ನೂ ಓದಿ: ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆ – ಖಾಸಗಿ ವಾಹನದಲ್ಲಿ EVM ಸಾಗಾಟ: ಕಾಂಗ್ರೆಸ್ ದೂರು

    ಖೀರಾ ಬೆರುಕ್ ಎಂಬಾತ ತನ್ನ ಪತ್ನಿ ಪೂರ್ಣಿಮಾ ಭೋಯ್ ಜೊತೆ ಕೆಲಸಕ್ಕೆಂದು ಅಕ್ಟೋಬರ್ 30 ರಂದು ದೆಹಲಿಗೆ ಹೊರಟಿದ್ದನು. ದೆಹಲಿಗೆ ಹೋದ ಎರಡೇ ದಿನಗಳಲ್ಲಿ ಹಣಕ್ಕಾಗಿ ತನ್ನ ಪತ್ನಿಯನ್ನು ಮತ್ತೊಬ್ಬ ವ್ಯಕ್ತಿಗೆ ಮಾರಾಟ ಮಾಡಿದ್ದಾನೆ. ಭಾರೀ ಮೊತ್ತದ ಹಣ ಪಡೆದ ಬಳಿಕ ಪತ್ನಿಯನ್ನು ಆತನೊಂದಿಗೆ ಮದುವೆ ಸಹ ಮಾಡಿಸಿದ್ದಾನೆ. ಇದನ್ನೂ ಓದಿ: ಇಸ್ಲಾಮಿಕ್ ಶಿಕ್ಷಣ ಕೇಂದ್ರದಲ್ಲಿ ಸಂಸ್ಕೃತ, ಉಪನಿಷತ್ ಕಲಿಕೆ- ಕೇಂದ್ರದ ನಡೆಗೆ ನೆಟ್ಟಿಗರ ಮೆಚ್ಚುಗೆ

    ನವೆಂಬರ್ 6ರಂದು ತನ್ನ ತಂದೆ ಕುಲಮಣಿ ಭೋಯ್‌ಗೆ ಕರೆ ಮಾಡಿದ ಪೂರ್ಣಿಮಾ ಭೋಯ್, ತನ್ನ ಗಂಡನ ಕೃತ್ಯವನ್ನು ಹೇಳಿದ್ದಾಳೆ. ಮಗಳ ಕಷ್ಟ ಕೇಳಿದ ತಂದೆ ತಕ್ಷಣ ಬೆರುಕ್ ವಿರುದ್ಧ ನಾರ್ಲಾ ಪೊಲೀಸ್ ಠಾಣೆಯಲ್ಲಿ (Narla Police Station) ದೂರು ನೀಡಿದ್ದಾರೆ. ನಂತರ ಪ್ರಕರಣ (FIR) ದಾಖಲಿಸಿಕೊಂಡಿದ್ದ ನಾರ್ಲಾ ಪೊಲೀಸರು ಬೆರುಕ್‌ನನ್ನು ಬಂಧಿಸಿ, ನ್ಯಾಯಾಲಯದ (Court) ಮುಂದೆ ಹಾಜರುಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪತಿಯನ್ನು ಕೊಲೆ ಮಾಡಿದ್ರೆ ಮಾತ್ರ ನನ್ನೊಂದಿಗೆ ಮಲಗು- ಗಂಡಸ್ತನಕ್ಕೆ ಸವಾಲ್ ಹಾಕಿ ಗಂಡನನ್ನೇ ಕೊಲ್ಲಿಸಿದ್ಳು!

    ಪತಿಯನ್ನು ಕೊಲೆ ಮಾಡಿದ್ರೆ ಮಾತ್ರ ನನ್ನೊಂದಿಗೆ ಮಲಗು- ಗಂಡಸ್ತನಕ್ಕೆ ಸವಾಲ್ ಹಾಕಿ ಗಂಡನನ್ನೇ ಕೊಲ್ಲಿಸಿದ್ಳು!

    ಬೆಂಗಳೂರು: ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಲೆ ಮಾಡಿರುವ ಘಟನೆ ನಿನ್ನೆ(ನವೆಂಬರ್ 12) ಬೆಂಗಳೂರಿನ (Bengaluru) ವಿದ್ಯಾರಣ್ಯಪುರಂ ಪೊಲೀಸ್ ಠಾಣಾ (Vidyaranyapura Police Station) ವ್ಯಾಪ್ತಿಯಲ್ಲಿ ನಡೆದಿದೆ.

    ಘಟನೆ ನಂತರ ರೋಚಕ ಸತ್ಯಗಳು ಬಯಲಾಗಿದೆ. ತನ್ನ ಪತಿಯನ್ನು(Husband) ಕೊಲೆ ಮಾಡುವುದಕ್ಕಾಗಿಯೇ ಪ್ರಿಯಕರನನ್ನು 9 ದಿನ ಸ್ಟೋರ್ ರೂಮಿನಲ್ಲಿ ಬಚ್ಚಿಟ್ಟಿದ್ದಳು. ನಂತರ ಪತಿಗೆ ಮದ್ಯ ಕುಡಿಸಿ, ಚಿಕನ್ ಕಬಾಬ್ ತಿನ್ನಿಸಿ, ಮತ್ತಿನಲ್ಲಿದ್ದಾಗ ಉಸಿರುಗಟ್ಟಿಸಿ ಸಾಯಿಸಿದ್ದಾರೆ. ಇದನ್ನೂ ಓದಿ: ಪ್ರಿಯಕರನ ಜೊತೆ ಸೇರಿ ಗಂಡನನ್ನೇ ಕೊಂದ ಬೆಂಗ್ಳೂರಿನ ಖತರ್ನಾಕ್ ಲೇಡಿ

    ಪಶ್ಚಿಮ ಬಂಗಾಳ (WestBengal) ಮೂಲದ ದೇವಿ ತೋಮಾಂಗ್ (46) ಮತ್ತು ಅಸ್ಸಾಂ ಮೂಲದ ಪ್ರಿಯಕರ ಜೈನುಲ್ ಅಲಿಬಾಬು (28) ಆರೋಪಿಗಳು ಇದೀಗ ಪೊಲೀಸರಿಗೆ (Police) ಅತಿಥಿಯಾಗಿದ್ದಾರೆ. ಆರೋಪಿಗಳಿಬ್ಬರು ನವೆಂಬರ್ 6ರಂದು ವಡೇರಹಳ್ಳಿಯಲ್ಲಿ ರಾಕೇಶ್ ತೋಮಾಂಗ್ (52)ನನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದರು. ಇದನ್ನೂ ಓದಿ: ದ್ರೌಪದಿ ಮುರ್ಮು ನೋಡಲು ಹೇಗಿದ್ದಾರೆ ಗೊತ್ತಲ್ಲ- ವಿವಾದವಾಗ್ತಿದ್ದಂತೆ ಟಿಎಂಸಿ ಸಚಿವ ಕ್ಷಮೆ

    ಪತಿಗೆ ಲೈಂಗಿಕ ಆಸಕ್ತಿ ಕಡಿಮೆ:
    ಕೊಲೆಯಾದ ರಾಕೇಶ್‌ಗೆ ಮದ್ಯ ಸೇವಿಸುವ ಚಟವಿತ್ತು. ಲೈಂಗಿಕ ಆಸಕ್ತಿ ಕಡಿಮೆ ಇತ್ತು. ಇದರಿಂದಾಗಿ 28 ವರ್ಷದ ಜೈನುಲ್ ಜೊತೆ ದೇವಿ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು. ರಾಕೇಶ್ ಆಗಾಗ ಮದ್ಯ ಸೇವಿಸಿ ಹಲ್ಲೆ ನಡೆಸುತ್ತಿದ್ದ. ಇದರಿಂದ ಬೇಸತ್ತಿದ್ದ ದೇವಿ ರಾಕೇಶ್ ಕೊಲೆಗೆ ಪ್ರಿಯಕರನಿಗೆ ಸುಪಾರಿ ನೀಡಿದ್ದಳು. ಅದರಂತೆ ನವೆಂಬರ್ 5ರ ರಾತ್ರಿ ರಾಕೇಶ್ ಮನೆಗೆ ಬಂದಾಗ ಕಂಠಪೂರ್ತಿ ಕುಡಿಸಿ (Drinks), ಕಬಾಬ್ ತಿನ್ನಿಸಿದ್ದಳು. ನಂತರ ಇಬ್ಬರೂ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದರು. ಮಾರನೇ ದಿನ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ನಾಟಕವಾಡಿದ್ದ ದೇವಿ ರಹಸ್ಯ ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಯಿತು.

    ಗಂಡಸ್ತನಕ್ಕೆ ಸವಾಲ್:
    ಅಕ್ರಮಕ್ಕೆ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿ ರಾಕೇಶ್‌ನನ್ನು ಕೊಲೆ ಮಾಡಿದರೆ ಮಾತ್ರ ನನ್ನ ಜೊತೆ ಮಲಗಲು ಅವಕಾಶ ನೀಡುತ್ತೇನೆ. ನೀನು ಗಂಡಸಾಗಿದ್ರೆ ಅವನನ್ನು ಕೊಲೆ ಮಾಡು ಎಂದು ದೇವಿ ಪ್ರಿಯಕರನಿಗೇ ಸವಾಲ್ ಹಾಕಿದ್ದಳು ಎಂಬುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

    KILLING CRIME

    ಪತಿಯ ಹಣ ಪ್ರಿಯಕರನಿಗೆ ವರ್ಗ:
    ಪತಿ ಕೊಲೆಯಾದ ಮಾರನೇ ದಿನ ರಾಕೇಶ್ ಫೋನ್‌ಪೇಯಿಂದ ಪ್ರಿಯಕರ ಜೈನುಲ್‌ಗೆ 50 ಸಾವಿರ ಹಣ ಕಳಿಸಿದ್ದಳು. ಅಷ್ಟೇ ಅಲ್ಲದೇ ತನ್ನದೇ ಹೆಸರಿನಲ್ಲಿ ಹೊಸ ಸಿಮ್ ಕಾರ್ಡ್ ಖರೀದಿಸಿ ಪ್ರಿಯಕರನಿಗೆ ಕೊಟ್ಟಿದ್ದಳು. ಬಳಿಕ ದೇವಿ ಫೋನ್‌ಕಾಲ್ಸ್ ಮತ್ತು ಬ್ಯಾಂಕ್ ಅಕೌಂಟ್ ಮಾಹಿತಿ ಪಡೆದು ಪರಿಶೀಲಿಸಿದಾಗ ಆರೋಪಿ ಜೈನುಲ್ ಬಗ್ಗೆ ಮಾಹಿತಿ ಸಿಕ್ಕಿದೆ. ಈಗ ಇಬ್ಬರೂ ಅಂದರ್ ಆಗಿದ್ದಾರೆ.

    ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ (Vidyaranyapura Police Station) ಕೇಸ್ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

    Live Tv
    [brid partner=56869869 player=32851 video=960834 autoplay=true]

  • ಡೇರ್ ಡೆವಿಲ್ ಸ್ಟಂಟ್ ಮಾಡಿದ ನಟ ಪವನ್ – ಕೇಸ್ ದಾಖಲಿಸಿದ ಪೊಲೀಸರು

    ಡೇರ್ ಡೆವಿಲ್ ಸ್ಟಂಟ್ ಮಾಡಿದ ನಟ ಪವನ್ – ಕೇಸ್ ದಾಖಲಿಸಿದ ಪೊಲೀಸರು

    ಹೈದರಾಬಾದ್: ಕಾರಿನ ರೂಫ್‌ನಲ್ಲಿ ಡೇರ್ ಡೆವಿಲ್ ಸ್ಟಂಟ್ (Car dare Devil Stunt) ಮಾಡಿದ್ದ ನಟ ಪವನ್ ಕಲ್ಯಾಣ್ ವಿರುದ್ಧ ಪೊಲೀಸರು ಕೇಸ್ (Police Case) ದಾಖಲಿಸಿದ್ದಾರೆ. ಅತಿವೇಗದ ಕಾರು ಚಾಲನೆ ಮತ್ತು ಇತರರ ಜೀವ ಹಾಗೂ ವೈಯಕ್ತಿಕ ಸುರಕ್ಷತೆಗೆ ಅಪಾಯ ತಂದೊಡ್ಡಿದ್ದ ಆರೋಪದ ಮೇಲೆ ಪವನ್ ಕಲ್ಯಾಣ್ (Pawan Kalyan) ವಿರುದ್ಧ ಎಫ್‌ಐಆರ್ (FIR) ದಾಖಲಿಸಲಾಗಿದೆ.

    ಕಳೆದ ವಾರ ಪವನ್ ಕಲ್ಯಾಣ್ ವೇಗವಾಗಿ ಚಲಿಸುತ್ತಿದ್ದ ಕಾರಿನ ರೂಫ್ ಮೇಲೆ ಕುಳಿತಿದ್ದರು. ಅದೇ ಕಾರಿನಲ್ಲಿ ಅಕ್ಕಪಕ್ಕ ಐದಾರು ಜನ ಡೋರ್ ಹಿಡಿದು ನಿಂತಿದ್ದರು. ಈ ವೀಡಿಯೋ ಜಾಲತಾಣದಲ್ಲಿ (Social Media) ವೈರಲ್ ಆಗಿತ್ತು. ಇದನ್ನೂ ಓದಿ: ಡ್ಯಾನ್ಸ್ ಮಾಡ್ಬೇಕು ಸಾಂಗ್ ಹಾಕಿ ಅಂದಿದ್ದೆ ತಪ್ಪಾ? – ದಲಿತ ಯುವಕನನ್ನು ಕಂಬಕ್ಕೆ ಕಟ್ಟಿ ಥಳಿಸಿದ ಗ್ರಾಮಸ್ಥರು

    ಈ ವೇಳೆ ಬೈಕ್ ಸವಾರನೊಬ್ಬ ನಿಯಂತ್ರಣತಪ್ಪಿ ಬಿದ್ದಿದ್ದಾನೆ ಎಂದು ದೂರುದಾರ ಪಿ.ಶಿವಕುಮಾರ್ ಎಂಬವರು ದೂರು ನೀಡಿದ್ದಾರೆ. ಡೇರ್ ಡೆವಿಲ್ ಸ್ಟಂಟ್‌ನಲ್ಲಿ ಭಾಗಿಯಾಗಿದ್ದ ಪವನ್ ಕಲ್ಯಾಣ್ ಮತ್ತು ಇತರರ ವಿರುದ್ಧ ಪೊಲೀಸ್ ಕ್ರಮಕ್ಕೆ ಅವರು ಒತ್ತಾಯಿಸಿದ್ದಾರೆ. ಶಿವಕುಮಾರ್ ದೂರಿನ ಮೇರೆಗೆ ಕೇಸ್ ದಾಖಲಾಗಿದೆ. ಇದನ್ನೂ ಓದಿ: ‘ಬಿಗ್ ಬಾಸ್’ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ: ಅಚ್ಚರಿಯ ಮತ್ತೊಂದು ಹೆಸರು

    ಪವನ್ ಕಲ್ಯಾಣ್ ಅವರು ಕಾರಿನ ರೂಫ್‌ನಲ್ಲಿ ಕುಳಿತಿದ್ದರೂ ಚಾಲಕ ಅದನ್ನು ಲೆಕ್ಕಿಸಿದೇ ಮಿತಿ ಮೀರಿದ ವೇಗದಲ್ಲಿ ಚಲಿಸುತ್ತಿದ್ದ. ಅಲ್ಲದೇ ಇತರ ಬೆಂಗಾವಲು ವಾಹನಗಳೂ ಇದೇ ವೇಗದಲ್ಲಿ ಅವರನ್ನು ಹಿಂಬಾಲಿಸಿದ್ದವು.

    ಜನಸೇನಾ ಪಕ್ಷದ (Jana Sena Party) ಅಧ್ಯಕ್ಷರಾಗಿರುವ ಪವನ್ ಕಲ್ಯಾಣ್ ಕಳೆದ ವಾರ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಇಪ್ಪಟ್ಟಂ ಗ್ರಾಮಕ್ಕೆ ಭೇಟಿ ನೀಡಿದ್ದರು. ಅಲ್ಲಿ ರಸ್ತೆ ಅಗಲೀಕರಣ ಮಾಡುವುದಕ್ಕಾಗಿ ಮನೆಗಳನ್ನು ಕೆಡವಲಾಗಿದೆ ಎಂಬ ಅರೋಪ ಕೇಳಿ ಬಂದಿದ್ದರಿಂದ ಸ್ಥಳೀಯರನ್ನು ಭೇಟಿ ಮಾಡಲು ತೆರಳಿದ್ದರು.

    Live Tv
    [brid partner=56869869 player=32851 video=960834 autoplay=true]

  • ಪ್ರಿಯಕರನ ಜೊತೆ ಸೇರಿ ಗಂಡನನ್ನೇ ಕೊಂದ ಬೆಂಗ್ಳೂರಿನ ಖತರ್ನಾಕ್ ಲೇಡಿ

    ಪ್ರಿಯಕರನ ಜೊತೆ ಸೇರಿ ಗಂಡನನ್ನೇ ಕೊಂದ ಬೆಂಗ್ಳೂರಿನ ಖತರ್ನಾಕ್ ಲೇಡಿ

    ಬೆಂಗಳೂರು: ಪ್ರಿಯಕರನ ಜೊತೆ ಸೇರಿಕೊಂಡು ಗಂಡನನ್ನೇ ಕೊಲೆ (Murder) ಮಾಡಿರುವ ಘಟನೆ ಬೆಂಗಳೂರಿನ ವಿದ್ಯಾರಣ್ಯಪುರಂ ಪೊಲೀಸ್ ಠಾಣಾ (Vidyaranyapura Police Station) ವ್ಯಾಪ್ತಿಯಲ್ಲಿ ನಡೆದಿದ್ದು, ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

    ಪತ್ನಿ ದೇಬಿತಂಬಾಗ್ ಹಾಗೂ ಆಕೆಯ ಪ್ರಿಯಕರ ಬಾಬು ಅಲಿ ಬಂಧಿತ ಆರೋಪಿಗಳು (Accused). ಇದೇ ತಿಂಗಳ ನವೆಂಬರ್ 6ರಂದು ಪತಿ ರಾಕೇಶ್ ತೋಮಂಗನನ್ನು ಕೊಲೆ ಮಾಡಲಾಗಿತ್ತು. ಇದನ್ನೂ ಓದಿ: ದೇವರ ಪೂಜೆಗೆ ಎರಡು ಗುಂಪುಗಳ ನಡುವೆ ಗಲಾಟೆ – ಬೀಗ ಮುರಿದು ಪೂಜೆ ಮಾಡಿದ ಪೊಲೀಸರು

    ಪತ್ನಿ ದೇಬಿತಂಬಾಗ್ ಹಾಗೂ ಆಕೆಯ ಪ್ರಿಯಕರ ಬಾಬು ಅಲಿ ನಡುವೆ ಅನೈತಿಕ ಸಂಬಂಧ ಇತ್ತು. ಈ ವಿಚಾರ ತಿಳಿದ ರಾಕೇಶ್ ತೋಮಂಗ ಪ್ರಶ್ನೆ ಮಾಡಿದ್ದ. ಈ ವೇಳೆ ಪತ್ನಿ ಮತ್ತು ಪ್ರಿಯಕರ ಸೇರಿ ತೋಮಂಗನನ್ನು ಕೊಲೆ ಮಾಡಿದ್ದಾರೆ. ಇದನ್ನೂ ಓದಿ: ಡ್ಯಾನ್ಸ್ ಮಾಡ್ಬೇಕು ಸಾಂಗ್ ಹಾಕಿ ಅಂದಿದ್ದೆ ತಪ್ಪಾ? – ದಲಿತ ಯುವಕನನ್ನು ಕಂಬಕ್ಕೆ ಕಟ್ಟಿ ಥಳಿಸಿದ ಗ್ರಾಮಸ್ಥರು

    ಸದ್ಯ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ (FIR) ದಾಖಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]