ಬೆಂಗಳೂರು: ಇಂದು ಬೆಳ್ಳಂಬೆಳಗ್ಗೆ ಕಾರ್ಯಾಚರಣೆ ನಡೆಸಿದ ಖಾಕಿ ಪಡೆ 86 ರೌಡಿಶೀಟರ್‌ಗಳ ಮನೆ ಮೇಲೆ ದಾಳಿ ನಡೆಸಿದ್ದು, 30 ರೌಡಿ ಶೀಟರ್‌ಗಳನ್ನ ಸಿಸಿಬಿ (CCB Police) ಕಚೇರಿಗೆ ಕರೆತಂದಿದ್ದಾರೆ.
ಐವರು ಎಸಿಪಿ (ACP), 30 ಇನ್ಸ್ಪೆಕ್ಟರ್‌ಗಳ ನೇತೃತ್ವದ ತಂಡ ದಾಳಿ ನಡೆಸಿದೆ. ನಂತರ ಸಿಸಿಬಿ ಕಚೇರಿಗೆ ಕರೆತಂದು ಸಿಸಿಬಿ ಎಸಿಪಿ ಧರ್ಮೆಂದ್ರ ನೇತೃತ್ವದಲ್ಲಿ ಫುಲ್ ಕ್ಲಾಸ್ ಮಾಡಿದ್ದಾರೆ. ಅಪರಾಧ ಕೃತ್ಯಗಳಲ್ಲಿ ತೊಡಗುವುದು ಕಂಡುಬಂದರೆ ತಕ್ಕ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದೂ ವಾರ್ನಿಂಗ್ ನೀಡಲಾಗಿದೆ. ಇದನ್ನೂ ಓದಿ: ಸಾವು-ಬದುಕಿನ ನಡುವೆ ಶಂಕಿತ ಉಗ್ರ ಶಾರೀಕ್ ನರಳಾಟ- ಪೊಲೀಸರಲ್ಲಿ ಆತಂಕ
ಸೈಕಲ್ ರವಿ, ವಿಲ್ಸನ್ ಗಾರ್ಡನ್ ನಾಗ ಸೇರಿ ಕುಖ್ಯಾತ ರೌಡಿ ಶೀಟರ್‌ಗಳ ಮನೆ ಮೇಲೆ ದಾಳಿ ನಡೆದಿದೆ. ಈ ವೇಳೆ 30 ರೌಡಿಗಳನ್ನ ವಶಕ್ಕೆ ಪಡೆದಿದ್ದು, ದಾಳಿ ವೇಳೆ ಸೈಕಲ್ ರವಿ, ವಿಲ್ಸನ್ ಗಾರ್ಡನ್ ನಾಗ ಸೇರಿದಂತೆ ಹಲವರು ಮನೆಯಿಂದ ಎಸ್ಕೇಪ್ ಆಗಿರುವುದು ಕಂಡುಬಂದಿದೆ. ಇದನ್ನೂ ಓದಿ: ಚಿಲುಮೆ ಬಳಿಕ ಧಾರವಾಡದಲ್ಲೂ ವೋಟರ್ ಸ್ಕ್ಯಾಮ್- ಮತದಾರರ ಕ್ಷೇತ್ರ ವರ್ಗಾವಣೆ ಆರೋಪ
ದಾಳಿ ವೇಳೆ ವಿಲ್ಸನ್‌ಗಾರ್ಡನ್ (Wilson Garden) ನಾಗ ತಮಿಳುನಾಡಿನಲ್ಲಿ ಇರುವುದು ಬೆಳಕಿಗೆ ಬಂದಿದ್ದು, ಕೋತಿರಾಮ, ಆರ್.ಟಿ ನಗರ ವೆಂಕಟೇಶ, ಟಾಮಿ ಸೇರಿ 30 ಮಂದಿ ಸಿಕ್ಕಿಬಿದ್ದಿದ್ದಾರೆ. ವಿಜಯನಗರದ ರೌಡಿಶೀಟರ್ ರಾಘವೇಂದ್ರ ಪ್ರಸಾದ್ ಮನೆಯಲ್ಲಿ ಎರಡು ಲಾಂಗ್‌ಗಳು ಪತ್ತೆಯಾಗಿವೆ.
Live Tv
[brid partner=56869869 player=32851 video=960834 autoplay=true]
ಲಕ್ನೋ: ಅನ್ಯಜಾತಿಯವನನ್ನು ಮದುವೆಯಾಗಿದ್ದಲ್ಲದೇ (Marriage), ತಡರಾತ್ರಿಯವರೆಗೂ ಹೊರಗೆ ಹೋಗುತ್ತಿದ್ದಳು ಅನ್ನೋ ಕೋಪದಿಂದ ರೊಚ್ಚಿಗೆದ್ದ ತಂದೆ, ತನ್ನ ಮಗಳನ್ನು ಗುಂಡಿಕ್ಕಿ ಕೊಂದು, ಸೂಟ್‌ಕೇಸ್‌ನಲ್ಲಿ ತುಂಬಿ ಉತ್ತರಪ್ರದೇಶದ (UttarPradesh) ಯಮುನಾ ಎಕ್ಸ್‌ಪ್ರೆಸ್‌ವೇ (Yamuna Expressway) ಬಳಿ ಎಸೆದಿರುವ ಆಘಾತಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ವಾರ ಉತ್ತರ ಪ್ರದೇಶದ ಮಥುರಾದ ಯಮುನಾ ಎಕ್ಸ್‌ಪ್ರೆಸ್‌ವೇ (Yamuna Expressway) ಬಳಿ ಸೂಟ್‌ಕೇಸ್‌ನಲ್ಲಿ ಶವವಾಗಿ ಪತ್ತೆಯಾದ ದೆಹಲಿ ಮೂಲದ 22 ವರ್ಷದ ಯುವತಿಯನ್ನ ಆಕೆಯ ತಂದೆಯೇ ಕೊಂದಿದ್ದಾರೆ ಎಂಬುದು ತಿಳಿದುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಆಯುಷಿ ಚೌದರಿ (22) ತಂದೆ ನಿತೇಶ್ ಯಾದವ್‌ನನ್ನ ಬಂಧಿಸಲಾಗಿದೆ ಎಂದು ಉತ್ತಪ್ರದೇಶದ ಮಥುರಾ ಎಸ್ಪಿ ತಿಳಿಸಿದ್ದಾರೆ. ಇದನ್ನೂ ಓದಿ: 25 ಬೌಂಡರಿ, 15 ಸಿಕ್ಸರ್ – 277 ರನ್ ಸಿಡಿಸಿ ವಿಶ್ವದಾಖಲೆ ಬರೆದ ಜಗದೀಶನ್ – ಹಿಟ್‌ಮ್ಯಾನ್ ದಾಖಲೆಯೂ ಉಡೀಸ್
ಮರ್ಡರ್ ಮಿಸ್ಟ್ರಿ ರೋಚಕ: ದೆಹಲಿ ಮೂಲದ ಆಯುಷಿ ಚೌದರಿ ತನ್ನ ಮನೆಯವರಿಗೆ ಹೇಳದೆ ಬೇರೆ ಜಾತಿಯ ಛತ್ರಪಾಲ್ ಎಂಬ ವ್ಯಕ್ತಿಯನ್ನು ಮದುವೆಯಾಗಿದ್ದಳು. ಆಕೆಯ ಪೋಷಕರು ತೀವ್ರವಾಗಿ ವಿರೋಧಿಸಿದ್ದರೂ ಆಕೆಯ ಹಠಮಾರಿ ತನದಿಂದ ಒಪ್ಪಿಕೊಂಡಿದ್ದರು. ಈ ಬಗ್ಗೆ ಪೋಷಕರಿಗೆ ಅಸಮಾಧಾನವಿತ್ತು. ಈ ನಡುವೆಯೂ ಮಗಳು ದಿನ ತಡರಾತ್ರಿವರೆಗೂ ಹೊರಗಡೆ ಹೋಗಿಬರುತ್ತಿದ್ದಳು. ಈ ಕೋಪದಿಂದ ತಂದೆ-ಮಗಳ ನಡುವೆ ಜಗಳ ನಡೆದಿದೆ. ಬಳಿಕ ಮಾತಿಗೆ ಮಾತು ಬೆಳೆದಿದು, ರೊಚ್ಚಿಗೆದ್ದ ತಂದೆ ತಾನು ಲೈಸೆನ್ಸ್ ಪಡೆದಿದ್ದ ಗನ್‌ನಿಂದ (Gun) ಗುಂಡು ಹಾರಿಸಿ ಕೊಂದಿದ್ದಾನೆ. ಬಳಿಕ ಪ್ಲಾಸ್ಟಿಕ್‌ನಲ್ಲಿ ಸುತ್ತಿ, ಸೂಟ್‌ಕೇಸ್‌ನಲ್ಲಿ ತುಂಬಿಕೊಂಡು ಮಥುರಾದ ಯಮುನಾ ಎಕ್ಸ್‌ಪ್ರೆಸ್ ವೇ ಬಳಿ ಎಸೆದು ಬಂದಿದ್ದಾನೆ. ಇದನ್ನೂ ಓದಿ: ಒಡಿಶಾದಲ್ಲಿ ಹಳಿ ತಪ್ಪಿ, ನಿಲ್ದಾಣಕ್ಕೆ ಡಿಕ್ಕಿ ಹೊಡೆದ ಗೂಡ್ಸ್ ರೈಲು – 3 ಸಾವು, ಹಲವರಿಗೆ ಗಾಯ
ಇದಾದ ಒಂದು ವಾರದ ನಂತರ ಸ್ಥಳೀಯ ಕಾರ್ಮಿಕರು ರಕ್ತದ ಮಡುವಿನಲ್ಲಿದ್ದ ಸೂಟ್‌ಕೇಸ್ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಯುವತಿಯ ಶವ ಪತ್ತೆಯಾಗಿದೆ. ಮೃತದೇಹದ ಮುಖ ಮತ್ತು ತಲೆ ಭಾಗದಲ್ಲಿ ರಕ್ತ ಬಂದಿರುವುದು ಹಾಗೂ ದೇಹದ ಹಲವು ಭಾಗಗಳಲ್ಲಿ ಗಾಯದ ಕಲೆಗಳು ಕಂಡುಬಂದಿದ್ದವು. ನಂತರ ಮೃತದೇಹ ಗುರುತಿಸಲು ಪೋಷಕರನ್ನು ಕರೆಸಿದ್ದಾರೆ. ಈ ವೇಳೆ ಅನುಮಾನಗೊಂಡ ಪೊಲೀಸರು ಪೋಷಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಬಳಿಕ ಗುಂಡಿಕ್ಕಿ ಕೊಂದ ರಹಸ್ಯ ಬಯಲಾಗಿದೆ. ಕೂಡಲೇ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.
ಮುಂಬೈ ಮೂಲದ ಶ್ರದ್ಧಾ ವಾಕರ್ ಹತ್ಯೆ ಪ್ರಕರಣ ಬಯಲಾದ ಬಳಿಕ ಉತ್ತರ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಮದುವೆ ನಂತರವೂ ಅಕ್ರಮ ಸಂಬಂಧ ಹೊಂದಿದ್ದಕ್ಕಾಗಿ ತನ್ನ ಮಾಜಿ ಪ್ರೇಯಸಿಯನ್ನ ಕೊಂದು 6 ತುಂಡುಗಳಾಗಿ ಕತ್ತರಿಸಿ ಬಾವಿಗೆ ಎಸೆದಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ಈಗ ಮತ್ತೊಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಶಿವಮೊಗ್ಗದ (Shivamogga) ತೀರ್ಥಹಳ್ಳಿಯಲ್ಲಿರುವ ಗೃಹ ಸಚಿವರ (Home Minister) ಮನೆಯ ಸುತ್ತಮುತ್ತಲೇ ಉಗ್ರರು ಅಡಗಿದ್ದಾರೆ ಎಂದು ಶ್ರೀರಾಮಸೇನೆ (Sri Ram Sena) ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Muthalik) ತಿಳಿಸಿದ್ದಾರೆ.
ಬೆಂಗಳೂರಿನಲ್ಲಿಂದು (Benagaluru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಫ್‌ಐ (PFI) ಸಂಘಟನೆ ಬ್ಯಾನ್ ಮಾಡಿದ್ರೂ, ಮಾನಸಿಕತೆ ಬ್ಯಾನ್ ಆಗಿಲ್ಲ. ಕರಾವಳಿ ಭಾಗದಲ್ಲಿ ಉಗ್ರರ ಕೃತ್ಯ ಹೆಚ್ಚಾಗುತ್ತಿದೆ. ಅಲ್ಲಿಗೆ ವಿಶೇಷ ಪಡೆಯ ಅಗತ್ಯ ಕರಾವಳಿ ಭಾಗಕ್ಕೆ ಅಗತ್ಯವಿದೆ. ಪಿಎಫ್‌ಐ ಮಾತ್ರವಲ್ಲ ಎಸ್‌ಡಿಪಿಐ (SDPI) ಕೂಡ ಬ್ಯಾನ್ ಆಗ್ಬೇಕು. ಇವರು ಬ್ಯಾನ್ ಆದ್ರೂ ಬಾಲ ಬಿಚ್ಚೋದು ಕಡಿಮೆಯಾಗಿಲ್ಲ. ಹೀಗಾಗಿ ಪೊಲೀಸರು (Police) ಇದನ್ನು ನಿರ್ಲಕ್ಷ್ಯ ಮಾಡಬಾರದು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಇಂಡೋನೆಷ್ಯಾದಲ್ಲಿ ಭೂಕಂಪ 40ಕ್ಕೂ ಅಧಿಕ ಸಾವು – 300ಕ್ಕೂ ಹೆಚ್ಚು ಮಂದಿಗೆ ಗಾಯ
ಮಂಗಳೂರಿನ ಈ ಪ್ರಕರಣ ಭಟ್ಕಳಕ್ಕೂ ಲಿಂಕ್ ಇದೆ. ತೀರ್ಥಹಳ್ಳಿ ಗೃಹ ಸಚಿವರ ಮನೆ ಸುತ್ತಮುತ್ತಲೇ ಉಗ್ರರು ಅಡಗಿ ಕುಳಿತಿದ್ದಾರೆ. ಗೃಹ ಮಂತ್ರಿಗಳ ತವರೇ ಉಗ್ರರ ಸೆಂಟರ್ ಆಗಿದೆ. ಈ ಹಿಂದೆ ಕಾಂಗ್ರೆಸ್ (Congress) ಅವಧಿಯಲ್ಲೂ ಹಿಂದೂ ಹುಡುಗಿಯ ಅತ್ಯಾಚಾರ, ಹತ್ಯೆಯಾಗಿದೆ. ಆ ಪ್ರಕರಣವನ್ನೂ ರೀ ಓಪನ್ ಮಾಡಿ ತನಿಖೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಮಹಾನಗರ ಪಾಲಿಕೆ ಚುನಾವಣೆ ಟಿಕೆಟ್ ಮಾರಾಟ – ಆಪ್ ವಿರುದ್ಧ ಬಿಜೆಪಿ ಗಂಭೀರ ಆರೋಪ
ಪಿಎಫ್‌ಐ (PFI) ನಿಷೇಧವಾದ್ರೂ ಅವ್ರ ಕುಕೃತ್ಯಕ್ಕೆ ಬ್ರೇಕ್ ಬಿದ್ದಿಲ್ಲ. ಮಂಗಳೂರಿನ ಬಾಂಬ್ ಬ್ಲಾಸ್ಟ್ (Bomb Blast) ಸಿಎಂ ಕಾರ್ಯಕ್ರಮ ಅಥವಾ ಆರ್‌ಎಸ್‌ಎಸ್ ಮಕ್ಕಳ ಕಾರ್ಯಕ್ರಮ ಗುರಿಯಾಗಿತ್ತೇ ಅನ್ನೋದನ್ನ ತನಿಖೆ ನಡೆಸಬೇಕು. ಈ ಪ್ರಕರಣವನ್ನು ಹಗುರವಾಗಿ ತೆಗೆದುಕೊಳ್ಳಬೇಡಿ ಎಂದು ಗೃಹ ಸಚಿವರಿಗೆ ಮನವಿ ಮಾಡಿದ್ದಾರೆ.
Live Tv
[brid partner=56869869 player=32851 video=960834 autoplay=true]
– ಕುಟುಂಬಸ್ಥರಿಂದ್ಲೇ ಗುರುತು ಪತ್ತೆ
– ಶಿವಮೊಗ್ಗದ ಪ್ರಕರಣದಲ್ಲೂ ಇದ್ದ
ಮಂಗಳೂರು: ಕುಕ್ಕರ್ ಬಾಂಬ್ ಬ್ಲಾಸ್ಟ್ (Cooker Blast) ಪ್ರಕರಣದಲ್ಲಿ ಗಾಯಗೊಂಡಿದ್ದ ವ್ಯಕ್ತಿ ತೀರ್ಥಹಳ್ಳಿಯ ಶಾರೀಕ್ (Shariq) ಜಾಗತಿಕ ನೆಟ್ ವರ್ಕ್ ಹೊಂದಿರೋ ಉಗ್ರ ಸಂಘಟನೆಯಿಂದ (Terrorist Groups) ಪ್ರಭಾವಿತನಾಗಿ ಕೃತ್ಯ ಎಸಗಿದ್ದಾನೆ ಎಂದು ಎಡಿಜಿಪಿ ಅಲೋಕ್‌ಕುಮಾರ್ (ADGP Alok Kumar) ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಿವಮೊಗ್ಗದಿಂದ ಪೊಲೀಸರು (Shivamogga) ಕರೆಸಿಕೊಂಡಿದ್ದ ಮಲತಾಯಿ ಶಬನಾ, ಸೋದರಿ ಆತಿಯಾ, ಚಿಕ್ಕಮ್ಮ ಯಾಸ್ಮಿನ್ ಅವರು ಶಾರೀಕ್‌ನನ್ನು ಗುರುತು ಹಿಡಿದಿದ್ದಾರೆ. ಈ ಹಿಂದೆ ಶಿವಮೊಗ್ಗದ ಕೇಸ್‌ನಲ್ಲಿ ಇವನು ಇದ್ದ. ಪೊಲೀಸರ ದಾಳಿ ವೇಳೆ ಶಾರೀಕ್ ಉಳಿದುಕೊಂಡಿದ್ದ ಮೈಸೂರಿನ ಮನೆಯಲ್ಲಿಯೂ ಸ್ಫೋಟಕ ವಸ್ತುಗಳು ಪತ್ತೆಯಾಗಿವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಗ್ರಾಮ ದೈವಗಳೇ ನಮ್ಮ ಊರನ್ನು ಕಾಪಾಡಿವೆ- ಕುಕ್ಕರ್ ಬ್ಲಾಸ್ಟ್ ಆದ ಆಟೋ ಚಾಲಕನ ಸಹೋದರನ ಮಾತು
ಕೊಯಮತ್ತೂರು, ತಮಿಳುನಾಡು (TamilNadu), ಕೇರಳ ಎಲ್ಲೆಡೆ ಸುತ್ತಾಡಿ ಮೈಸೂರಿಗೆ ಬಂದಿದ್ದ. ನಮಗೆ ಮತ್ತೆ ಅವನ ಫೋಟೋ ನೋಡಿ ಶಾರೀಕ್ ಅಂತಾ ಗೊತ್ತಾಗಿತ್ತು. ಆದರೂ ಅವರ ಮನೆಯವರನ್ನ ಕರೆಸಿ ಗುರುತು ಪತ್ತೆ ಮಾಡಿದ್ದೇವೆ. ಅವರ ಮಲತಾಯಿ ಶಬನಾ, ಸಹೋದರಿ ಆಫಿಯಾ, ತಾಯಿ ತಂಗಿ ಯಾಸ್ಮೀನ್ ಅವನ ಗುರುತು ಪತ್ತೆ ಮಾಡಿದ್ದಾರೆಂದು ತಿಳಿಸಿದ್ದಾರೆ. ಇದನ್ನೂ ಓದಿ: ಮಂಗಳೂರು ಬಾಂಬ್ ಬ್ಲಾಸ್ಟ್‌ಗೆ ನಿಷೇಧಿತ PFI ಲಿಂಕ್ – ಸರ್ಕಾರದ ವಿರುದ್ಧ ಸೇಡು ತೀರಿಸಿಕೊಳ್ಳಲು ಸ್ಕೆಚ್
ನಾವು ಅರಾಫತ್ ಆಲಿ ಮತ್ತು ಮತೀನ್ ಮನೆಯಲ್ಲಿ ಶೋಧ ನಡೆಸಿದ್ದೇವೆ. ಅವರ ಕುಟುಂಬ ಸದಸ್ಯರ ವಿಚಾರಣೆಯನ್ನೂ ನಡೆಸಿದ್ದೇವೆ. ಆದರೆ ಶಾರೀಕ್‌ಗೆ ಯಾರು ಫಂಡಿಂಗ್ ಮಾಡಿದ್ದಾರೆ ಅನ್ನೋದು ಗೊತ್ತಿಲ್ಲ. 2020ರಲ್ಲಿ ಮಂಗಳೂರಿನಲ್ಲಿ ಗೋಡೆ ಬರಹ ಪ್ರಕರಣ ದಾಖಲಾಗಿತ್ತು. ಅದರಲ್ಲಿ ಅವನ ಮೇಲೆ ಯುಎಪಿಎ ಆಕ್ಟ್ ನಡಿ ಕೇಸ್ ಆಗಿದೆ. ಎ1 ಆರೋಪಿ ಶಾರೀಕ್ ಆಗಿದ್ದ, ಆಗಲೇ ಮನೆಯವರು ಬುದ್ದಿ ಹೇಳಿದ್ದರಂತೆ. ಶಿವಮೊಗ್ಗದಲ್ಲಿ ಜಬೀವುಲ್ಲ ಕೇಸ್ ವಿಚಾರಣೆ ವೇಳೆ ಇವರ ಮಾಹಿತಿ ಗೊತ್ತಾಗಿತ್ತು. ಮುನೀರ್ ಬಂಧನ ಬಳಿಕ ಶಾಕೀರ್ ಟ್ರಯಲ್ ಬ್ಲಾಸ್ಟ್ ಮಾಡಿದ್ದು ಗೊತ್ತಾಗಿದೆ. ಆದರೆ ಇದ್ಯಾವ ವಿಚಾರವೂ ಮೈಸೂರು ಮನೆ ಮಾಲೀಕನಿಗೆ ಗೊತ್ತಿಲ್ಲ. ಮೊನ್ನೆ ಮೈಸೂರಿನಿಂದ ಮಡಿಕೇರಿ ಮಾರ್ಗವಾಗಿ ಬಸ್ ನಲ್ಲಿ ಮಂಗಳೂರಿಗೆ ಒಬ್ಬನೇ ಬಂದಿದ್ದಾನೆ. ನಾವು ಕೊಯಮತ್ತೂರು ಮತ್ತು ತಮಿಳುನಾಡು ಪೊಲೀಸರ ಜೊತೆ ಸಂಪರ್ಕ ಇದ್ದೇವೆ. ಕೊಯಮತ್ತೂರು ಸ್ಪೋಟಕ್ಕೆ ಸಂಪರ್ಕ ಇದೆಯಾ ಅನ್ನೋ ಬಗ್ಗೆ ಸ್ಪಷ್ಟವಾಗಿಲ್ಲ. ಆದರೆ ಕೊಯಮತ್ತೂರು ಮತ್ತು ತಮಿಳುನಾಡಿನ ಅಧಿಕಾರಿಗಳು ಇಲ್ಲಿಗೆ ಬಂದಿದ್ದಾರೆ ಆ ಸ್ಪೋಟ ಸಂಬಂಧ ಲಿಂಕ್ ಇದ್ಯಾ ಅನ್ನೋ ಬಗ್ಗೆಯೂ ತನಿಖೆ ಆಗುತ್ತೆ ಎಂದು ಹೇಳಿದ್ದಾರೆ.
ಈಗಾಗಲೇ ಶಾರೀಕ್ ಸಹೋದರಿಯ ವಿಚಾರಣೆಯೂ ಆಗಿದೆ. ಮೈಸೂರಿನಲ್ಲಿ ಅವನ ಜೊತೆ ಸಂಪರ್ಕ ಇದ್ದ ಇಬ್ಬರನ್ನ ವಶಕ್ಕೆ ಪಡೆದಿದ್ದೇವೆ. ಈ ಕೇಸ್ ನಲ್ಲಿ ಮೈನ್ ಹ್ಯಾಂಡ್ಲರ್ ಮಾಝ್ ಮುನೀರ್ ಇದ್ದಾನ ಗೊತ್ತಿಲ್ಲ, ಏಕೆಂದರೆ ಅವನು ಜೈಲ್ ನಲ್ಲಿ ಇದ್ದಾನೆ. ಅದಕ್ಕೆ ಮೊದಲು ಟ್ರಯಲ್ ಬ್ಲಾಸ್ಟ್ ಜೊತೆಯಾಗಿ ಮಾಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಶಾರೀಕ್ ಬಾಂಬ್ ಅನ್ನ ಸರಿಯಾಗಿ ಜೋಡಿಸಿರಲಿಲ್ಲ, ಅದರಲ್ಲಿ ಅವನು ಎಕ್ಸ್ ಪರ್ಟ್ ಆಗಿರಲೂ ಇಲ್ಲ. ಅರ್ಧಂಬರ್ಧ ಬಾಂಬ್ ತಯಾರಿಸಿದ್ದ, ಸರಿಯಾಗಿ ಮಾಡಿಲ್ಲ. ಮೈಸೂರಿನಲ್ಲಿ ಮೊಬೈಲ್ ತಯಾರಿ ಸಂಸ್ಥೆಯಲ್ಲಿ ಕೆಲಸ ಮಾಡ್ತಿದ್ದ ಶಾರಿಕ್, ಪೊಟ್ಯಾಸಿಯಮ್ ನೈಟ್ರೈಟ್, ಸೋಡಿಯಂ, ಅಮೋನಿಯಂ ನಂತಹ ಸ್ಪೋಟಕ ಇತ್ತು. ಇದಕ್ಕೆ ಕೆಲವೊಂದು ಐಟಮ್ ಆನ್ ಲೈನ್‌ನಲ್ಲಿ, ಕೆಲ ಐಟಂ ನೇರವಾಗಿ ಶಾಪ್ ನಲ್ಲಿ ತೆಗೊಂಡಿದ್ದಾನೆ. ಸಿಮ್ ಕಾರ್ಡ್ ಖರೀದಿಗಾಗಿ ಕೊಯಮತ್ತೂರು ಮೂಲದ ಒಬ್ಬರ ಆಧಾರ್ ಕಾರ್ಡ್ ಬಳಕೆ ಮಾಡಿದ್ದ. ಸದ್ಯ ಕಸ್ಟಡಿಯಲ್ಲಿ ನಾಲ್ಕು ಜನ ಇದ್ದಾರೆ. ಮೂವರು ವಶದಲ್ಲಿದ್ದು, ಒಬ್ಬನನ್ನ ಊಟಿಯಿಂದ ಕರೆ ತರ್ತಾ ಇದೀವಿ. ಇದು ಕರ್ನಾಟಕ ಪೊಲೀಸರ ಸ್ವತಂತ್ರ ತನಿಖೆ, ಆದರೆ ಕೇಂದ್ರ ತನಿಖಾ ದಳದ ಜೊತೆ ಸಂಪರ್ಕದಲ್ಲಿ ಇದ್ದೇವೆ ಎಂದು ವಿವರಿಸಿದ್ದಾರೆ.
ಸದ್ಯ ದೇವರ ದಯೆಯಿಂದ ದೊಡ್ಡ ಅನಾಹುತ ತಪ್ಪಿದೆ. ಮೂರು ತಿಂಗಳಿನಿಂದ ಕರಾವಳಿಯಲ್ಲಿ ಶಾಂತಿ ಇದೆ, ಬಾಂಬ್ ಬ್ಲಾಸ್ಟ್ ಆಗಿದ್ರೆ ಮತ್ತೆ ಕರಾವಳಿಯಲ್ಲಿ ತೊಂದರೆಯಾಗುತ್ತಿತ್ತು. ದೇವರ ದಯೆಯಿಂದ ತೊಂದರೆಯಾಗಿಲ್ಲ ಎಂದು ನಿಟ್ಟುಸಿರು ಬಿಟ್ಟಿದ್ದಾರೆ.
ಶಾರೀಕ್ ಪೂರ್ತಿ ಗುಣಮುಖ ಆಗುವ ಹಾಗೆ ಚಿಕಿತ್ಸೆ ನೀಡಲಾಗುತ್ತಿದೆ. ಆ ಬಳಿಕ ಆತನ ಹೆಚ್ಚಿನ ಮಾಹಿತಿ ಸಿಗಬಹುದು. ಅಲ್ಲಿವರೆಗೆ ಆಟೋ ಚಾಲಕನಿಗೂ ಚೇತರಿಸಿಕೊಳ್ಳಲೂ ಚಿಕಿತ್ಸೆ ನೀಡಲಾಗುತ್ತಿದೆ. ಅವರಿಗೆ ಪರಿಹಾರ ನೀಡಲು ಜಿಲ್ಲಾಡಳಿತಕ್ಕೆ ವಿನಂತಿಸಿದ್ದೇವೆ ಎಂದು ತಿಳಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
ಮಂಗಳೂರು: ನಗರದಲ್ಲಿ ಕುಕ್ಕರ್ ಬಾಂಬ್ ಬ್ಲಾಸ್ಟ್ (Cooker Bomb Blast) ಪ್ರಕರಣದ ಶಂಕಿತ ಆರೋಪಿ ಶಾರೀಕ್ ಗುರುತು ಪತ್ತೆ ಹಚ್ಚಲು ತಡರಾತ್ರಿ ಶಿವಮೊಗ್ಗದಿಂದ ಮಂಗಳೂರಿಗೆ (Mangaluru) ಆತನ ಪೋಷಕರನ್ನು ಪೊಲೀಸರು ಕರೆತಂದಿದ್ದಾರೆ. ತನಿಖೆ ತೀವ್ರಗೊಂಡಿದ್ದು, ಹಲವು ಸ್ಫೋಟಕ ಮಾಹಿತಿಗಳು ಹೊರಬರುತ್ತಿವೆ.
ಕುಕ್ಕರ್ ಬಾಂಬ್ ಬ್ಲಾಸ್ಟ್ (Cooker Blast) ಮಾಡಿದವರು ಯಾರು, ಏಕೆ? ಮಂಗಳೂರು ಟಾರ್ಗೆಟ್‌ಗೆ ಕಾರಣವೇನು? ಪೊಲೀಸ್ (Police) ವಶದಲ್ಲಿ ಇರೋ ಶಂಕಿತರ ಬಾಯ್ಬಿಟ್ಟ ಸತ್ಯವೇನು? ಮಂಗಳೂರಿನಲ್ಲಿ ಭಯ ಹುಟ್ಟಿಸಬೇಕು ಅನ್ನೋ ಮುಖ್ಯ ಅಜೆಂಡಾವಾಗಿತ್ತಾ? ಅನ್ನೋ ಹಲವು ಪ್ರಶ್ನೆಗಳಿಗೆ ಈಗ ಉತ್ತರ ಸಿಕ್ಕಿದೆ. ಇದನ್ನೂ ಓದಿ: ಮದುವೆಯಾದ್ಮೇಲೂ ಅಕ್ರಮ ಸಂಬಂಧ – ಮಾಜಿ ಪ್ರೇಯಸಿಯನ್ನ ಕತ್ತರಿಸಿ, ಅರೆಬೆತ್ತಲಾಗಿ ಬಿಸಾಡಿ ವಿಕೃತಿ
ನಮ್ಮ ಸಹವಾಸಕ್ಕೆ ಯಾರೂ ಬರಬಾರದು ಅನ್ನೋದು ಮುಖ್ಯ ಅಜೆಂಡಾವಾಗಿತ್ತು. ಪಿಎಫ್‌ಐ ಬ್ಯಾನ್ ಮಾಡಿದ ಕೋಪವೂ ಇತ್ತು ಶಂಕಿತರಿಗೆ ಇತ್ತು. ಇದಕ್ಕೆ ಸೇಡು ತೀರಿಸಿಕೊಳ್ಳುವ ಹುನ್ನಾರ ಇತ್ತೆಂದು ಹೇಳಲಾಗುತ್ತಿದೆ. ಇದಕ್ಕೆ ಮೂಲ ಕಾರಣಗಳನ್ನು ಪತ್ತಹೆಚ್ಚಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ (Shilpa Shetty) ಪತಿ ರಾಜ್ ಕುಂದ್ರಾ (Raj Kundra) ವಿರುದ್ಧ ಪೊಲೀಸರು (Police) ಸಲ್ಲಿಸಿದ್ದ ಚಾರ್ಜ್‌ಶೀಟ್‌ನಲ್ಲಿ ರಸಹ್ಯ ಮಾಹಿತಿ ಬಯಲಾಗಿದೆ.
ನಟಿ ರೂಪದರ್ಶಿಯರಾದ ಶೆರ್ಲಿನ್ ಚೋಪ್ರಾ, ಪೂನಂ ಪಾಂಡೆ (Poonam Pandey), ಚಿತ್ರ ನಿರ್ಮಾಪಕ ಮೀತಾ ಜುಂಜುನ್‌ವಾಲಾ ಹಾಗೂ ಕ್ಯಾಮೆರಾ ಮ್ಯಾನ್ ರಾಜು ದುಬೆ ಎಂಬವರು ಕುಂದ್ರಾ ಜೊತೆ ಸೇರಿಕೊಂಡು ಪಂಚತಾರಾ ಹೋಟೆಲ್‌ಗಳಲ್ಲಿ ಅಶ್ಲೀಲ ಸಿನಿಮಾಗಳನ್ನು (Cinema) ಚಿತ್ರಿಸುತ್ತಿದ್ದರು. ಇದನ್ನು ಹಣಕಾಸು ಲಾಭಕ್ಕೆ ಒಟಿಟಿ (OTT) ಪ್ಲಾಟ್‌ಫಾರ್ಮ್‌ಗಳು ಬಿಡುಗಡೆ ಮಾಡುತ್ತಿದ್ದವು. ಪೊಲೀಸರು (Police) ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಚಿನ್ನದ ವ್ಯಾಪಾರಿಗೆ ಪೊಲೀಸರಿಂದಲೇ ಧಮ್ಕಿ!
`ಪ್ರೇಮ್ ಪಗ್ಲಾನಿ’ ಎಂಬ ಅಶ್ಲೀಲ ವೆಬ್‌ಸೀರಿಸ್ ತಯಾರಿಸಿ, ಒಟಿಟಿಗೆ ಅಪ್‌ಲೋಡ್ ಮಾಡಲಾಗಿತ್ತು. ಪೂನಂ ಪಾಂಡೆ `ದಿ ಪೂನಂ ಪಾಂಡೆ’ ಎಂಬ ಸ್ವಂತ ಆ್ಯಪ್ ಹೊಂದಿದ್ದರು. ತನ್ನ ವೀಡಿಯೋ ಸೆರೆಹಿಡಿದು ಕುಂದ್ರಾ ಸಹಾಯದಿಂದ ಅದನ್ನು ಬಿಡುಗಡೆ ಮಾಡುತ್ತಿದ್ದರು.
2021ರ ಫೆಬ್ರವರಿಯಲ್ಲಿ ಮಧ್ ದ್ವೀಪದ ಬಂಗಲೆಯ ಮೇಲೆ ಪೊಲೀಸರು ದಾಳಿ ನಡೆಸಿದಾಗ ಕುಂದ್ರಾ ನಡೆಸುತ್ತಿದ್ದ ಅಶ್ಲೀಲ ಸಿನಿಮಾ ದಂಧೆ ಬಯಲಾಗಿತ್ತು. ಕುಂದ್ರಾ 100ಕ್ಕೂ ಹೆಚ್ಚು ಅಶ್ಲೀಲ ಸಿನಿಮಾಗಳನ್ನು ತಯಾರಿಸಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದರು. ಬಳಿಕ ಕುಂದ್ರಾ ಅವರನ್ನು ಪೊಲೀಸರು ಬಂಧಿಸಿದ್ದರು. 2 ತಿಂಗಳು ಜೈಲು ಬಳಿಕ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಿದ್ದರು.
Live Tv
[brid partner=56869869 player=32851 video=960834 autoplay=true]
ಕೋಲ್ಕತ್ತಾ: ತನ್ನ ತಾಯಿಯೊಂದಿಗೆ ಸೇರಿ ನೌಕಾಪಡೆಯ (Navy) ಮಾಜಿ ಅಧಿಕಾರಿಯನ್ನು ಕೊಂದು ಆತನ ಮೃತದೇಹವನ್ನು 6 ತುಂಡುಗಳಾಗಿ ಕತ್ತರಿಸಿ ಆತನ ಮಗನೇ ನೆರೆಹೊರೆಯಲ್ಲಿ ಬಿಸಾಡಿರುವ ಆಘಾತಕಾರಿ ಘಟನೆ ಪಶ್ಚಿಮ ಬಂಗಾಳದ (West Bengal) ಬರುಯಿಪುರದಲ್ಲಿ ನಡೆದಿದೆ. ಮೃತ ಅಧಿಕಾರಿ ಪತ್ನಿ ಹಾಗೂ ಮಗನನ್ನು ಪೊಲೀಸರು (Police) ಬಂಧಿಸಿದ್ದಾರೆ.
ಪೊಲೀಸರ ಪ್ರಕಾರ, ಪಾಲಿಟೆಕ್ನಿಕ್ ವಿದ್ಯಾರ್ಥಿಯಾಗಿದ್ದ (Polytechnic Student) ತನ್ನ ಮಗ ಹಾಗೂ ತಂದೆ ಉಜ್ವಲ್ ನಡುವೆ ಜಗಳವಾಗಿತ್ತು. ಈ ವೇಳೆ ಮಗ ತಂದೆಯನ್ನು ತಳ್ಳಿದಾಗ ಅಲ್ಲೇ ಇಟ್ಟಿದ್ದ ಕುಚಿಗೆ ತಲೆ ಹೊಡೆದುಕೊಂಡು ಪ್ರಜ್ಞೆ ತಪ್ಪಿದ್ದಾನೆ. ಬಳಿಕ ಮಗ ತಂದೆಯ ಕತ್ತು ಹಿಸುಕಿ ಕೊಂದಿದ್ದಾನೆ. ಕೊಂದ ನಂತರ ಹೆಂಡತಿ ಮತ್ತು ಮಗ ಮೃತದೇಹವನ್ನು ಸ್ನಾನದ ಗೃಹಕ್ಕೆ ಕೊಂಡೊಯ್ದಿದ್ದಾರೆ. ಆಮೇಲೆ ಮಗ ತನ್ನ ಕಾರ್ಪೆಂಟರಿ ಕ್ಲಾಸ್ ಕಿಟ್‌ಬ್ಯಾಗ್‌ನಿಂದ ಹೆಕ್ಸಾ (ಮಿನಿ ಗರಗಸ) ಬಳಸಿ ದೇಹವನ್ನು 6 ತುಂಡುಗಳಾಗಿ ಕತ್ತರಿಸಿ, ಮನೆಯಿಂದ ಸುಮಾರು 500 ಮೀ. ದೂರದಲ್ಲಿ ವಿವಿಧೆಡೆ ಎಸೆದು ಬಂದಿದ್ದಾನೆ. ಮಗ ಪ್ಲಾಸ್ಟಿಕ್‌ನಿಂದ ಸುತ್ತಿದ ದೇಹದ ಭಾಗಗಳನ್ನು 6 ಬಾರಿ ತೆಗೆದುಕೊಂಡು ಹೋಗಿ ಎಸೆದು ಬಂದಿದ್ದಾನೆ.
ಆ ಬಳಿಕ ಬುರುಯಿಪುರ್ ಠಾಣೆಗೆ ತೆರಳಿ ಕಾಣೆಯಾಗಿದ್ದಾರೆ ಅನ್ನೋ ಬಗ್ಗೆ ದೂರು ದಾಖಲಿಸಲು ಠಾಣೆಗೆ ತೆರಳಿದ್ದಾರೆ. ಈ ವೇಳೆ ಅವರ ನಡವಳಿಕೆಯಲ್ಲಿ ವ್ಯತ್ಯಾಸಗಳು ಕಂಡುಬಂದಿದೆ. ನವೆಂಬರ್ 15ರಂದು ನಾಪತ್ತೆಯಾದ ವೈಯಕ್ತಿಕ ಡೈರಿಯನ್ನು ಪರಿಶೀಲಿಸಿದಾಗ ತಾಯಿ ಮತ್ತು ಮಗ ಇಬ್ಬರ ಮೇಲೂ ಸಂಶಯ ವ್ಯಕ್ತವಾಗಿದೆ. ವಿಚಾರಣೆ ನಡೆಸಿದಾಗ ಅಂತಿಮವಾಗಿ ಮಗ ಅಪರಾಧ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಒಟ್ಟಿಗೆ ಕೂತು ಫಿಫಾ ವಿಶ್ವಕಪ್ ಪಂದ್ಯ ವೀಕ್ಷಿಸಲು 23 ಲಕ್ಷಕ್ಕೆ ಮನೆ ಖರೀದಿಸಿದ ಫುಟ್ಬಾಲ್ ಫ್ಯಾನ್ಸ್
ಉಜ್ವಲ್ ಚಕ್ರವರ್ತಿ ತನ್ನ ಮಗನಿಗೆ ಪರೀಕ್ಷಾ ಶುಲ್ಕಕ್ಕಾಗಿ 3 ಸಾವಿರ ಹಣ ಕೊಡಲು ನಿರಾಕರಿಸಿದ್ದರು. ಆಗ ಇಬ್ಬರ ನಡುವಿನ ಜಗಳದಲ್ಲಿ ಉಜ್ವಲ್ ಮಗನ ಕಪಾಳಕ್ಕೆ ಹೊಡೆದಿದ್ದಾರೆ. ಪ್ರತಿಕಾರವಾಗಿ ಮಗ ತಂದೆಯನ್ನು ತಳ್ಳಿದ್ದಾನೆ. ಈ ವೇಳೆ ತಲೆ ಕುರ್ಚಿಗೆ ಹೊಡೆದುಕೊಂಡು ಪ್ರಜ್ಞೆ ತಪ್ಪಿದ್ದಾರೆ. ಬಳಿಕ ಮಗ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
ಮಂಗಳೂರು: ಮಂಗಳೂರಿನಲ್ಲಿ (Mangaluru) ಆಟೋರಿಕ್ಷಾದಲ್ಲಿ ನಡೆದ ಸ್ಫೋಟ ಪ್ರಕರಣವನ್ನು ಕೇಂದ್ರ ಸರ್ಕಾರದ (Government Of India) ಸೂಚನೆ ಮೇರೆಗೆ ರಾಷ್ಟ್ರೀಯ ತನಿಖಾ ದಳ (NIA) ತನಿಖೆ ನಡೆಸಲಿದೆ. ಇದರ ಹಿಂದಿರುವ ಮೂಲಭೂತವಾದಿಗಳ ಜಾಡನ್ನು ಪತ್ತೆಹಚ್ಚಲು ಎನ್‌ಐಎ ನೆರವಾಗಲಿದೆ ಎಂದು ಬಿಜೆಪಿ (BJP) ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (NalinKumar Kateel) ಹೇಳಿದ್ದಾರೆ.
ಕೇಂದ್ರ ಸರಕಾರದ ಸೂಚನೆ ಮೇರೆಗೆ ರಾಷ್ಟ್ರೀಯ ತನಿಖಾ ದಳ (NIA) ಮಂಗಳೂರಿನ ಬಾಂಬ್ ಸ್ಫೋಟದ ತನಿಖೆ ನಡೆಸಲಿದ್ದು, ಇದರ ಹಿಂದಿರುವ ಮೂಲಭೂತವಾದಿಗಳ ಜಾಡನ್ನು ಪತ್ತೆಹಚ್ಚಲು ನೆರವಾಗಲಿದೆ.
ಬಾಂಬ್ ಸ್ಫೋಟದ ಹಿಂದೆ ಅಂತರಾಜ್ಯ ದೇಶದ್ರೋಹಿಗಳ ಕೈವಾಡ ಪತ್ತೆ ಹಚ್ಚಲು #NIA ಕಾರ್ಯತತ್ಪರವಾಗಿದೆ. ನಮ್ಮ ಉನ್ನತ ಪೊಲೀಸ್ ಅಧಿಕಾರಿಗಳು ಸಹಕರಿಸುತ್ತಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಕಟೀಲ್ ಅವರು, ಮೂಲಭೂತವಾದಿಗಳ ಇಂತಹ ಭಯೋತ್ಪಾದಕ ಕೃತ್ಯಕ್ಕೆ ಬೆಂಬಲ ನೀಡುವವರಿಗೂ ಹೆಡೆಮುರಿ ಕಟ್ಟಲು ನಮ್ಮ ಪೊಲೀಸ್ ವ್ಯವಸ್ಥೆ ಸನ್ನದ್ಧವಾಗಿದೆ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಗುಜರಾತ್‌ನಲ್ಲಿ ಬಿಜೆಪಿಯಿಂದ 7 ಬಂಡಾಯ ಶಾಸಕರು ಅಮಾನತು
ಮಂಗಳೂರಿನಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಭಯೋತ್ಪಾದಕ ಕೃತ್ಯ ನಡೆಸಲು ಪ್ರಯತ್ನಿಸುವವರ ಜನ್ಮ ಜಾಲಾಡಿ ಶಾಶ್ವತವಾಗಿ ಅವರು ನೆನಪಿಡುವ ಕ್ರಮ ಜರುಗಿಸಲಾಗುವುದು.
ಕರ್ನಾಟಕದಲ್ಲಿ ಭಯೋತ್ಪಾದಕ ಕೃತ್ಯ ಮಾಡುವ ಮೂಲಕ ರಾಜ್ಯಕ್ಕೆ ಕೆಟ್ಟ ಹೆಸರು ತರುವ ಮತಾಂಧರ ಪ್ರಯತ್ನ ಜಾರಿಯಾಗಲು ಬಿಡುವುದಿಲ್ಲ.
ಟ್ವೀಟ್‌ನಲ್ಲಿ ಏನಿದೆ?
ಮಂಗಳೂರಿನಲ್ಲಿ ಆಟೋರಿಕ್ಷಾದಲ್ಲಿ ನಡೆದ ಸ್ಫೋಟದ ಹಿಂದೆ ಮತೀಯ ಶಕ್ತಿಗಳು ಜಿಲ್ಲೆಯ ಶಾಂತಿ, ಸುವ್ಯವಸ್ಥೆ ಕದಡುವ ಪ್ರಯತ್ನ ಮಾಡಿರುವುದು ಮೇಲ್ನೋಟಕ್ಕೆ ಪತ್ತೆಯಾಗಿದೆ. ಮೂಲಭೂತವಾದಿಗಳ ಇಂತಹ ಭಯೋತ್ಪಾದಕ ಕೃತ್ಯಕ್ಕೆ ಬೆಂಬಲ ಅಥವಾ ನೆರವು ನೀಡುವವರಿಗೂ ಹೆಡೆಮುರಿ ಕಟ್ಟಲು ನಮ್ಮ ಪೊಲೀಸ್ ವ್ಯವಸ್ಥೆ ಸನ್ನದ್ಧವಾಗಿದೆ. ಇದನ್ನೂ ಓದಿ: ಬೇರೆಲ್ಲೋ ಸ್ಫೋಟವಾಗಬೇಕಿದ್ದ ಕುಕ್ಕರ್ ಬಾಂಬ್ ಹಂಪ್ಸ್ ಕಾರಣದಿಂದ ಆಟೋದಲ್ಲೇ ಬ್ಲಾಸ್ಟ್!
ದೇಶದ್ರೋಹಿ ಸಂಘಟನೆಗಳನ್ನು ಬ್ಯಾನ್ ಮಾಡಿದ ಬಳಿಕ ವಿಧ್ವಂಸಕ ಕೃತ್ಯಗಳನ್ನು ಮಾಡಿ ಬಾಲ ಬಿಚ್ಚಲು ಕೆಲವರು ಹೊರಟಿದ್ದಾರೆ. ಭಯೋತ್ಪಾದನೆಯ ವಿರುದ್ಧದ ನಮ್ಮ ಸಮರದಲ್ಲಿ ನಾಗರಿಕರ ಸಹಕಾರ ಮುಖ್ಯ. ಕರ್ನಾಟಕದಲ್ಲಿ ನಮ್ಮ ಪೊಲೀಸ್ ಇಲಾಖೆ ಮಂಗಳೂರಿನ ಸ್ಫೋಟದ ಮೂಲ ಪತ್ತೆಹಚ್ಚುವಲ್ಲಿ ನಿರತವಾಗಿದ್ದು, ಕೇಂದ್ರದಿಂದ ಅಗತ್ಯ ನೆರವು ನೀಡಲಾಗಿದೆ.
ದೇಶದ್ರೋಹಿ ಸಂಘಟನೆಗಳನ್ನು ಬ್ಯಾನ್ ಮಾಡಿದ ಬಳಿಕ ವಿಧ್ವಂಸಕ ಕೃತ್ಯಗಳನ್ನು ಮಾಡಿ ಬಾಲ ಬಿಚ್ಚಲು ಕೆಲವರು ಹೊರಟಿದ್ದಾರೆ.
ಭಯೋತ್ಪಾದನೆಯ ವಿರುದ್ಧದ ನಮ್ಮ ಸಮರದಲ್ಲಿ ನಾಗರಿಕರ ಸಹಕಾರ ಮುಖ್ಯ. ಕರ್ನಾಟಕದಲ್ಲಿ ನಮ್ಮ ಪೊಲೀಸ್ ಇಲಾಖೆ ಮಂಗಳೂರಿನ ಸ್ಫೋಟದ ಮೂಲ ಪತ್ತೆಹಚ್ಚುವಲ್ಲಿ ನಿರತವಾಗಿದ್ದು, ಕೇಂದ್ರದಿಂದ ಅಗತ್ಯ ನೆರವು ನೀಡಲಾಗಿದೆ.
ಮಂಗಳೂರಿನಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಭಯೋತ್ಪಾದಕ ಕೃತ್ಯ ನಡೆಸಲು ಪ್ರಯತ್ನಿಸುವವರ ಜನ್ಮ ಜಾಲಾಡಿ ಶಾಶ್ವತವಾಗಿ ಅವರು ನೆನಪಿಡುವ ಕ್ರಮ ಜರುಗಿಸಲಾಗುವುದು. ಕರ್ನಾಟಕದಲ್ಲಿ ಭಯೋತ್ಪಾದಕ ಕೃತ್ಯ ಮಾಡುವ ಮೂಲಕ ರಾಜ್ಯಕ್ಕೆ ಕೆಟ್ಟ ಹೆಸರು ತರುವ ಮತಾಂಧರ ಪ್ರಯತ್ನ ಜಾರಿಯಾಗಲು ಬಿಡುವುದಿಲ್ಲ.
ಕೇಂದ್ರ ಸರ್ಕಾರದ (Government Of India) ಸೂಚನೆ ಮೇರೆಗೆ ರಾಷ್ಟ್ರೀಯ ತನಿಖಾ ದಳ (NIA) ಮಂಗಳೂರಿನ ಬಾಂಬ್ ಸ್ಫೋಟದ (Mangaluru Bomb Blast) ತನಿಖೆ ನಡೆಸಲಿದ್ದು, ಇದರ ಹಿಂದಿರುವ ಮೂಲಭೂತವಾದಿಗಳ ಜಾಡನ್ನು ಪತ್ತೆಹಚ್ಚಲು ನೆರವಾಗಲಿದೆ. ಬಾಂಬ್ ಸ್ಫೋಟದ ಹಿಂದೆ ಅಂತರರಾಜ್ಯ ದೇಶದ್ರೋಹಿಗಳ ಕೈವಾಡ ಪತ್ತೆ ಹಚ್ಚಲು ಎನ್‌ಐಎ ಕಾರ್ಯತತ್ಪರವಾಗಿದೆ. ನಮ್ಮ ಉನ್ನತ ಪೊಲೀಸ್ ಅಧಿಕಾರಿಗಳು ಸಹಕರಿಸುತ್ತಿದ್ದಾರೆ ಎಂದು ವಿವರಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
ಮುಂಬೈ: ಆಸ್ಪತ್ರೆಗೆ ಗಂಡನ ಜೊತೆಗೆ ತಿಂಗಳ ಚಿಕಿತ್ಸೆಗೆ ಬಂದಿದ್ದ ಗರ್ಭಿಣಿ (Pregnant) ರಸ್ತೆ ಅಪಘಾತದಲ್ಲಿ (Road Accident) ದಾರುಣ ಸಾವಿಗೀಡಾದರು. ಕರಳುಬಳ್ಳಿ ಹೊತ್ತಿದ್ದ ಹೆಂಡತಿಯ ಸಾವನ್ನು ಕಣ್ಣೆದುರೆ ಕಂಡ ಪತಿ ಈ ದುಃಖದಿಂದ ತಾನೂ ವಿಷ ಸೇವಿಸಿ ಆತ್ಮಹತ್ಯೆ (Suicide) ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಪುಣೆಯ ಜುನ್ನಾರ್ ತಾಲೂಕಿನಲ್ಲಿ ನಡೆದಿದೆ.
ದೊಂಡಕರ್ವಾಡಿಯ ರಮೇಶ್ ನವನಾಥ್ ಕಂಸ್ಕರ್ (29) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಕಳೆದ ಎಂಟು ತಿಂಗಳ ಹಿಂದೆ ವಿದ್ಯಾ ಕಂಸ್ಕರ್ ನನ್ನು ವಿವಾಹವಾಗಿದ್ದರು (Marriage). ಆಕೆ ಗರ್ಭಿಣಿಯಾಗಿದ್ದು (Pregnant), ಕಳೆದ ವಾರ ಇಲ್ಲಿನ ನಾರಾಯಣ ಗಾಂವ್ ಆಸ್ಪತ್ರೆಗೆ (Hospital) ತಿಂಗಳ ಚಿಕಿತ್ಸೆಗೆ ಬಂದಿದ್ದರು. ಚಿಕಿತ್ಸೆ ಮುಗಿಸಿ ಗಂಡನ ಜೊತೆ ಮನೆಗೆ ಮರಳುತ್ತಿದ್ದ ವೇಳೆ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿದ್ದರಿಂದ ವಿದ್ಯಾ ಬೈಕ್‌ನಿಂದ ಕೆಳಗೆ ಇಳಿದರು. ಆಗ ಕಬ್ಬು ತುಂಬಿಕೊಂಡು ಬಂದ ಟ್ರ್ಯಾಕ್ಟರ್ ವಿದ್ಯಾ ಕಂಸ್ಕರ್‌ಗೆ ಡಿಕ್ಕಿ ಹೊಡೆದಿದೆ. ಟ್ರ್ಯಾಕ್ಟರ್ ಚಕ್ರಗಳು ತಲೆಯ ಮೇಲೆ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಸ್ಯಾಂಡಲ್‌ವುಡ್‌ಗೆ ಜ್ಯೂ.ಎನ್‌ಟಿಆರ್ ಎಂಟ್ರಿ: ಇಲ್ಲಿದೆ ಮಾಹಿತಿ
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಗಂಡನ ಕಿರುಕುಳದಿಂದ ಹೆಂಡತಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳು ಒಂದಿಲ್ಲೊಂದು ಬೆಳಕಿಗೆ ಬರುತ್ತಲೇ ಇವೆ. ಗಂಡಂದಿರ ದುರಭ್ಯಾಸ ಚಟಗಳಿಗೆ ಮಹಿಳೆಯರು (Women) ಬಲಿಯಾಗುತ್ತಿರುವುದನ್ನು ಕಾಣುತ್ತಲೇ ಇದ್ದೇವೆ. ಆದರೆ ಬೆಂಗಳೂರಿನಲ್ಲಿ ನಡೆದಿರುವ ಘಟನೆ ಇದಕ್ಕೆ ತದ್ವಿರುದ್ಧವಾಗಿದೆ. ಹೆಂಡತಿಯ ಹಣದ ದಾಹ ನೀಗಿಸಲಾಗದೇ ಬೇಸತ್ತ ಗಂಡ ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾನೆ.
ಹೆಂಡತಿಯ ಕಾಟ ತಾಳಲಾರದೆ ಡೆತ್‌ನೋಟ್ ಬರೆದಿಟ್ಟು ಪ್ರಾಣ ಕಳೆದುಕೊಂಡಿದ್ದಾನೆ. ಬೆಂಗಳೂರಿನ (Bengaluru) ಶ್ರೀನಗರ ಬಳಿಯ ಅವಳಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಮೃತರನ್ನು ಮಂಡ್ಯದ ನಾಗಮಂಗಲ ಮೂಲದ ಅಣ್ಣಯ್ಯ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಕೇಂದ್ರ, ರಾಜ್ಯ ಸರ್ಕಾರಗಳು ರೈತರ ಪಾಲಿಗೆ ಸತ್ತು ಹೋಗಿವೆ – ರೈತರ ಆಕ್ರೋಶ
ಬಾರ್ ಒಂದರಲ್ಲಿ ಕ್ಯಾಶಿಯರ್ ಆಗಿರುವ ಅಣ್ಣಯ್ಯ ಅವರು ಹೆಂಡತಿ ಕಾಟದಿಂದ ಬೇಸತ್ತು ಪ್ರಾಣ ಕಳೆದುಕೊಳ್ಳುತ್ತಿರುವುದಾಗಿ ಡೆತ್ ನೋಟ್‌ನಲ್ಲಿ (DeathNote) ಬರೆದಿಟ್ಟಿದ್ದಾರೆ.
ಅಣ್ಣಯ್ಯ ಅವರಿಗೆ ಐದು ವರ್ಷದ ಹಿಂದೆ ಉಮಾ ಎಂಬಾಕೆಯ ಜತೆ ಮದುವೆಯಾಗಿತ್ತು. ಮದುವೆ (Marriage) ಬಳಿಕ ಹಣದ ವಿಚಾರಕ್ಕೆ ಸಂಬಂಧಿಸಿ ಗಂಡ ಹೆಂಡತಿ ಮಧ್ಯೆ ಯಾವಾಗಲೂ ಜಗಳ ಆಗುತ್ತಿತ್ತು. ಎಷ್ಟು ದುಡಿದರೂ ಹೆಂಡತಿ ದುಡ್ಡು-ದುಡ್ಡು ಎನ್ನುತ್ತಾಳೆ. ನಾನು ಎಷ್ಟು ದುಡಿದರೂ ಸಾಕಾಗುವುದಿಲ್ಲ. ಜೀವನದಲ್ಲಿ ನೆಮ್ಮದಿಯೇ ಇಲ್ಲದಂತೆ ಅಗಿದೆ. ನನ್ನ ಸಾವಿಗೆ ನಾನೇ ಕಾರಣ ಎಂದು ಡೆತ್ ನೋಟ್‌ನಲ್ಲಿ ಅಣ್ಣಯ್ಯ ಬರೆದಿಟ್ಟಿದ್ದಾರೆ. ಇದನ್ನೂ ಓದಿ: ನಾನು ನಿನ್ನನ್ನ ಸುಮ್ಮನೆ ಬಿಡಲ್ಲ- ಶ್ರೀನಿವಾಸ್ ಪ್ರಸಾದ್‍ಗೆ ರಮೇಶ್ ತಿರುಗೇಟು
ಅಲ್ಲದೇ ದಯವಿಟ್ಟು ಜೀವನದಲ್ಲಿ ನಂಬಿಕೆ ಇಡಬಾರದು, ನನ್ನ ಸಾವಿಗೆ ನಾನೇ ಕಾರಣ. ನನ್ನ ಅಕ್ಕ ಹಾಗೂ ಕುಟುಂಬದವರು ದೇಹವನ್ನು ಮಣ್ಣುಮಾಡಬೇಕೆಂಬುದು ನನ್ನ ಕೊನೆಯ ಆಸೆ ಎಂದು ಬರೆದುಕೊಂಡಿದ್ದಾರೆ.
ಹನುಮಂತನಗರ ಪೊಲೀಸ್ ಠಾಣಾ (Police Station) ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು (Police) ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Live Tv
[brid partner=56869869 player=32851 video=960834 autoplay=true]