Tag: crime

  • ಕೂಡಿಬಾಳಲು ಒಪ್ಪಿಕೊಳ್ಳದ ಮಾಜಿ ಪತ್ನಿಗೆ HIV ರೋಗಿಯ ರಕ್ತ ಇಂಜೆಕ್ಟ್ ಮಾಡಿದ ಭೂಪ

    ಕೂಡಿಬಾಳಲು ಒಪ್ಪಿಕೊಳ್ಳದ ಮಾಜಿ ಪತ್ನಿಗೆ HIV ರೋಗಿಯ ರಕ್ತ ಇಂಜೆಕ್ಟ್ ಮಾಡಿದ ಭೂಪ

    – ಕ್ರೈಂ ಥ್ರಿಲರ್ ಟಿವಿ ಶೋ ನಿಂದ ಪ್ರೇರಣೆ
    – ತನಿಖೆ ವೇಳೆ ರೋಚಕ ರಹಸ್ಯ ಬಯಲು

    ನವದೆಹಲಿ: ಪ್ರತಿಷ್ಠಿತ ಟಿ.ವಿ ಕಾರ್ಯಕ್ರಮವೊಂದರಿಂದ (TV Show) ಪ್ರೇರಣೆ ಪಡೆದ ವ್ಯಕ್ತಿಯೊಬ್ಬ ತನ್ನೊಂದಿಗೆ ಕೂಡಿಬಾಳಲು ಒಪ್ಪಿಕೊಳ್ಳದ ಮಾಜಿ ಪತ್ನಿಗೆ ಹೆಚ್‌ಐವಿ ರೋಗಿಯ ರಕ್ತವನ್ನು ಇಂಜೆಕ್ಟ್ ಮಾಡಿರುವ ಘಟನೆ ಗುಜರಾತ್‌ನ (Gujarat) ಸೂರತ್‌ನಲ್ಲಿ  ನಡೆದಿದೆ.

    ಸಂತ್ರಸ್ತ ಮಹಿಳೆ ನೀಡಿದ ದೂರಿನ ಮೇರೆಗೆ ಆರೋಪಿಯನ್ನ ಸೂರತ್ ಪೊಲೀಸರು (Surat Police) ಬಂಧಿಸಿದ್ದಾರೆ. ಬಳಿಕ ತನಿಖೆಯಲ್ಲಿ ಆತ ಕ್ರೈಂ (Crime) ಥ್ರಿಲ್ಲಿಂಗ್ ಟಿವಿ ಶೋ ನಿಂದ ಪ್ರೇರಿತನಾಗಿದ್ದಾನೆ ಎಂಬುದು ತಿಳಿದುಬಂದಿದೆ. ಇದನ್ನೂ ಓದಿ: ಪೆರೋಲ್ ಪಡೆದು ಪರಾರಿಯಾದಾತ ತನ್ನದೇ ಸಾವಿನ ಕತೆ ಕಟ್ಟಿದ – 15 ವರ್ಷಗಳ ಬಳಿಕ ಮತ್ತೆ ಅಂದರ್

    ಸಂತ್ರಸ್ತ ಮಹಿಳೆ ಹಾಗೂ ಆರೋಪಿ (Accused) ಕಳೆದ 15 ವರ್ಷಗಳ ಹಿಂದೆ ಮದುವೆಯಾಗಿದ್ದರು. ಎಲ್ಲವೂ ಚೆನ್ನಾಗಿಯೇ ಇತ್ತು. ಆದ್ರೆ ಕಳೆದ 2 ತಿಂಗಳಿನಿಂದ ನಿರಂತರ ಜಗಳದಿಂದಾಗಿ ವಿಚ್ಛೇದನ ಪಡೆದು ಇಬ್ಬರೂ ದೂರವಾಗಿದ್ದರು. ಒಂಟಿ ಜೀವನದಿಂದ ಬೇಸತ್ತಿದ್ದ ಆರೋಪಿ ಪತಿ ಮತ್ತೆ ತನ್ನ ಸಂಗಾತಿಯೊಂದಿಗೆ ಕೂಡಿಬಾಳಲು ನಿರ್ಧರಿಸಿದ್ದನು. ಆದ್ರೆ ಇದಕ್ಕೆ ಮಹಿಳೆ ಒಪ್ಪಿಕೊಳ್ಳಲಿಲ್ಲ. ಹಾಗಾಗಿ ಆಕೆ ವಿರುದ್ಧ ಸೇಡು ತೀರಿಸಿಕೊಳ್ಳಲು ಕಳೆದ ಒಂದು ತಿಂಗಳಿನಿಂದ ಸ್ಕೆಚ್ ಹಾಕಿ ಭೇಟಿಯಾಗಲು ಕಾಯುತ್ತಿದ್ದನು. ಇದನ್ನೂ ಓದಿ: ರಚನಾ ದಶರಥ್ ಜೊತೆ ಎಂಗೇಜ್‌ಮೆಂಟ್ ಮಾಡಿಕೊಂಡ ಲೋಕೇಶ್ ಬಸವಟ್ಟಿ

    ಬಹುದಿನಗಳ ನಂತರ ಭಾನುವಾರ (ಡಿ.25) ಇಬ್ಬರೂ ಭೇಟಿಯಾಗಿದ್ದರು. ಇಬ್ಬರೂ ರೆಸ್ಟೋರೆಂಟ್ ಹೋಗಿ ಊಟ ಮಾಡಿ, ಶಾಪಿಂಗ್ ಸಹ ಮುಗಿಸಿದ್ದರು. ಸಂಜೆ ಸ್ವಲ್ಪ ಖಾಸಗಿ ಸಮಯ ಕಳೆಯೋದಕ್ಕಾಗಿ ಮೋರಾ ಭಾಗಲ್ ಪ್ರದೇಶದಲ್ಲಿ ಪ್ರತ್ಯೇಕ ಸ್ಥಳಕ್ಕೆ ತೆರಳಿದ್ದರು. ಈ ಸಮಯದಲ್ಲಿ ಮಾಜಿ ಪತಿ ಆಕೆಯ ಮನವೊಲಿಸಲು ಶತಾಯಗತಾಯ ಪ್ರಯತ್ನಿಸಿದ್ದಾನೆ. ಆದರೂ ಆಕೆ ಒಪ್ಪಿಕೊಳ್ಳದ ಮೇಲೆ, ತಬ್ಬಿಕೊಳ್ಳುವ ನೆಪದಲ್ಲಿ ಪೃಷ್ಠ ಭಾಗಕ್ಕೆ (ಹಿಂಬದಿಯ ಪಕ್ಕೆಯಿಂದ ಕೆಳಭಾಗ) ಹೆಚ್‌ಐವಿ ರೋಗಿಯ ರಕ್ತವನ್ನು ಇಂಜೆಕ್ಟ್ ಮಾಡಿದ್ದಾನೆ. ಸ್ವಲ್ಪ ಸಮಯದಲ್ಲೇ ಮಹಿಳೆ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದಾಳೆ. ಮರಳಿ ಪ್ರಜ್ಞೆ ಬಂದೊಡನೆ ವೈದ್ಯರಿಂದ ಮಾಹಿತಿ ಪಡೆದು ನಂತರ ಪೊಲೀಸರಿಗೆ ದೂರು ನೀಡಿದ್ದಾಳೆ. ಆರೋಪಿಯನ್ನು ಬಂಧಿಸಿ ತನಿಖೆಗೆ ಒಳಪಡಿಸಿದಾಗ ಆತನ ಪ್ಯಾಂಟ್ ಜೇಬಿನಲ್ಲಿ ರಕ್ತದ ಕಲೆ ಪತ್ತೆಯಾಗಿದೆ.

    ಥ್ರಿಲ್ಲರ್ ಟಿವಿ ಶೋ ಪ್ರೇರಣೆ: ಮಹಿಳೆಗೆ ಇಂಜೆಕ್ಟ್ ಮಾಡಲು ಒಂದು ತಿಂಗಳ ಹಿಂದೆಯೇ ಯೋಜಿಸಿದ್ದನು. ಒಂದು ಟಿವಿ ಶೋನಿಂದ ಪ್ರೇರಣೆ ಪಡೆದಿದ್ದನು. ಆ ಟಿವಿ ಶೋನಲ್ಲಿ `ವ್ಯಕ್ತಿಯೊಬ್ಬ ಹೆಣ್ಣು ನಾಯಿಗೆ ರಕ್ತವನ್ನು ಇಂಜೆಕ್ಟ್ ಮಾಡುತ್ತಾನೆ’ ಅದನ್ನು ನಾನೂ ನೋಡಿದ್ದೆ ಎಂದು ಆರೋಪಿ ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಸದ್ಯ ರಕ್ತ ಹೇಗೆ ಪಡೆದುಕೊಂಡನು ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಪೆರೋಲ್ ಪಡೆದು ಪರಾರಿಯಾದಾತ ತನ್ನದೇ ಸಾವಿನ ಕತೆ ಕಟ್ಟಿದ – 15 ವರ್ಷಗಳ ಬಳಿಕ ಮತ್ತೆ ಅಂದರ್

    ಪೆರೋಲ್ ಪಡೆದು ಪರಾರಿಯಾದಾತ ತನ್ನದೇ ಸಾವಿನ ಕತೆ ಕಟ್ಟಿದ – 15 ವರ್ಷಗಳ ಬಳಿಕ ಮತ್ತೆ ಅಂದರ್

    ಬೆಂಗಳೂರು: ಆತ ಓದಿದ್ದು 8ನೇ ಕ್ಲಾಸ್, ಮಾಡಿದ್ದು ಮರ್ಡರ್, ಆದರೆ ಫೇಮಸ್ ಆಗಿದ್ದು ಮಾತ್ರ ಚೆಸ್ ಆಟದಲ್ಲಿ. ಇದನ್ನೇ ಅಡ್ವಾಂಟೇಜ್ ಮಾಡಿಕೊಂಡ ಆರೋಪಿ ಪೆರೋಲ್ (Parole) ಕೇಸ್‌ನಲ್ಲಿ ಪರಾರಿಯಾಗಿ ಬಳಿಕ ತನ್ನದೇ ಸಾವಿನ ಕತೆ ಕಟ್ಟಿ 15 ವರ್ಷಗಳ ಬಳಿಕ ಮತ್ತೆ ಸಿಕ್ಕಿಬಿದ್ದಿದ್ದಾನೆ.

    ಕಣ್ಮುಚ್ಕೊಂಡೇ ಚೆಸ್ ಗೇಮ್ ಗೆಲ್ಲುತ್ತಿದ್ದ ಈತನ ಕತೆ ಕೇಳಿದರೆ ಒಂದು ಸಿನಿಮಾನೇ ಮಾಡಬಹುದು. ಜೈಲಿಗೆ (Jail) ಬಂದು, ಚೆಸ್ (Chess) ಕಲಿತು, ಎಸ್ಕೇಪ್ ಆದಮೇಲೂ ಪ್ಲಾನ್ ಹಾಕಿದ್ದು ದೊಡ್ಡ ಬ್ಯುಸಿನೆಸ್‌ಗೆ. ತ್ರಿಬಲ್ ರೋಲ್‌ನಲ್ಲಿ ಲೈಫ್ ಹ್ಯಾಂಡಲ್ ಮಾಡುತ್ತಿದ್ದ ಆರೋಪಿಯ ಹೆಸರು ಸುಹೇಲ್.

    ಪೆರೋಲ್ ಕೇಸ್‌ನಲ್ಲಿ ಪರಾರಿಯಾಗಿದ್ದ ಮಲ್ಟಿ ಟ್ಯಾಲೆಂಟೆಡ್ ಆರೋಪಿ ಸುಹೇಲ್‌ನನ್ನು 15 ವರ್ಷಗಳ ಬಳಿಕ ಮಡಿವಾಳ ಪೊಲೀಸರು ಬಂಧಿಸಿದ್ದಾರೆ. ಆತ ತನ್ನ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಎಂತಹ ಕಷ್ಟದ ಲೆವೆಲ್ ಚೆಸ್ ಆಟವಾದರೂ ಗೆದ್ದುಬಿಡುತ್ತಿದ್ದ. ಚಾಲಾಕಿ ಸುಹೇಲ್ 2000ದಲ್ಲಿ ಮಡಿವಾಳ ಲಿಮಿಟ್ಸ್ನಲ್ಲಿ ಮಾಜಿ ಯೋಧರೊಬ್ಬರ ಲಾರಿ ಡ್ರೈವರ್ ಆಗಿದ್ದ. ಆ ಸಂದರ್ಭ ಕೊಲೆ ಮಾಡಿ, ಡಕಾಯತಿ ಮಾಡಿದ್ದ. ಈ ಸಂಬಂಧ ಪೊಲೀಸರು ಐಪಿಸಿ ಸೆಕ್ಷನ್ 396 ಅಡಿ ಅರೆಸ್ಟ್ ಮಾಡಿ ಜೈಲಿಗೆ ತಳ್ಳಿದ್ದರು.

    ಆದರೆ ಸುಹೇಲ್ ಜೈಲಿನಲ್ಲಿ ಸುಮ್ಮನೆ ಇರುತ್ತಿರಲಿಲ್ಲ. ಯಾವಾಗಲೂ ತಲೆಗೆ ಕೆಲಸ ಕೊಡುತ್ತಿದ್ದ. 4 ಗೋಡೆಗಳ ಮಧ್ಯೆ ಇದ್ದು, 7 ವರ್ಷ ಚೆಸ್ ಆಟದಲ್ಲಿ ನಿಸ್ಸೀಮನಾಗಿದ್ದ. ಜೈಲಿಗೆ ತಳ್ಳಿದ್ದೇ ತಡ ಚೆಸ್ ಆಟದ ಕಲಿಕೆಗೆ ಮುಂದಾಗಿದ್ದ ಸುಹೇಲ್ ಪುಸ್ತಕ ಓದುವುದು, ಒಬ್ಬನೇ ಕೂತು ಚೆಸ್ ಆಡುವುದು, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಎದುರಾಳಿ ಇಲ್ಲದಿದ್ದರೂ ಎರಡೂ ಕಡೆ ಆಟವಾಡುತ್ತಿದ್ದ.

    2 ವರ್ಷದಲ್ಲಿ ಚೆಸ್ ಆಟ ಕಲಿತು ಪರ್ಫೆಕ್ಟ್ ಆಗಿದ್ದ ಸುಹೇಲ್, ಈತನ ಒಂಟಿ ಆಟ ನೋಡಿಯೇ ಜೈಲರ್‌ಗಳು ಬೆರಗಾಗಿದ್ದರು. ಈತನ ಟ್ಯಾಲೆಂಟ್ ನೋಡಿ ಜೈಲು ಎಸ್‌ಪಿ ಆತನನ್ನು ಚೆಸ್ ಟೂರ್ನಿಗಳಿಗೆ ಕಳಿಸೋಕೆ ಶುರು ಮಾಡಿದ್ದರು. ಅಂದಿನಿಂದ ಆಟ ಶುರು ಮಾಡಿದ್ದವ ಹಿಂದಿರುಗಿ ನೋಡೇ ಇಲ್ಲ. ಸತತ ದೊಡ್ಡ ದೊಡ್ಡ ಟೂರ್ನಮೆಂಟ್‌ಗಳಲ್ಲಿ ಸುಹೇಲ್ ಚೆಸ್ ಆಟ ಗೆದ್ದು ಬರುತ್ತಿದ್ದ. ಇದನ್ನೂ ಓದಿ: ರಾತ್ರಿ ಊಟ ಬಡಿಸಲು ನಿರಾಕರಿಸಿದ್ದಕ್ಕೆ ಪತ್ನಿಯನ್ನು ಕೊಡಲಿಯಿಂದ ಕೊಂದ ಪತಿ

    ಸುಹೇಲ್ 2007ರ ವರೆಗೂ ಟೂರ್ನಮೆಂಟ್ ಗೆದ್ದು ತಂದಿದ್ದ. ಅದೇ ನಂಬಿಕೆಯಲ್ಲಿ ಹಿರಿಯ ಅಧಿಕಾರಿಗಳ ಬಳಿ ಪೆರೋಲ್ ಕೇಳಿದ್ದ. ನನ್ನ ಹೆಂಡತಿ, ಮಕ್ಕಳನ್ನು ನೋಡಬೇಕು ಎಂದುಕೊಂಡು ಪೆರೋಲ್ ಪಡೆದು ಹೋದಾತ ವಾಪಾಸ್ ಬರಲೇ ಇಲ್ಲ. ವಾಪಸ್ ಬರುತ್ತಾನೆ ಎಂದು ಪೊಲೀಸರಿಗೆ ಸುಹೇಲ್ ಕೈ ಕೊಟ್ಟಿದ್ದ. ಈ ವೇಳೆ ತನ್ನ ಸ್ನೇಹಿತನ ಸಹಾಯ ಪಡೆದು, ತಾನು ಸತ್ತಿರುವುದಾಗಿ ಸೀನ್ ಕ್ರಿಯೇಟ್ ಮಾಡಿದ್ದ.

    ಸುಹೇಲ್ ಎಸ್ಕೇಪ್ ಆದ ಕೆಲ ತಿಂಗಳುಗಳ ನಂತರ ಹೆಣ್ಣೂರು ಲಿಮಿಟ್ಸ್‌ನಲ್ಲಿ ಒಂದು ಶವ ಸಿಕ್ಕಿತ್ತು. ಸುಹೇಲ್‌ಗೆ ಹೋಲಿಕೆಯಾಗುವಂತೆಯೇ ಇದ್ದ ಶವವಾಗಿದ್ದರಿಂದ ಈ ಬಗ್ಗೆ ಪೊಲೀಸರು ಸುಹೇಲ್ ಸ್ನೇಹಿತನನ್ನು ಕೇಳಿದ್ದರು. ಈ ವೇಳೆ ಆತನೂ ಇದು ಸುಹೇಲ್ ಶವ ಎಂದಿದ್ದ. ಅಲ್ಲಿಗೆ ಸುಹೇಲ್ ಸತ್ತುಹೋಗಿದ್ದಾನೆ ಎಂದು ಪೊಲೀಸರು ಭಾವಿಸಿದ್ದರು.‌ ಇದನ್ನೂ ಓದಿ: ವಿವಾಹಿತೆಯೊಂದಿಗೆ ಪ್ರೇಮ- ಹೋಟೆಲ್‌ನಲ್ಲಿ ರಾತ್ರಿ ತನ್ನೊಂದಿಗೆ ಇರಲು ನಿರಾಕರಿಸಿದ್ದಕ್ಕೆ ಕೊಲೆ

    ಇದೆಲ್ಲದರ ಬಳಿಕ ಕಳೆದ 15 ವರ್ಷಗಳಿಂದ ಸುಹೇಲ್ ಯಾರಿಗೂ ಗುರುತು ಸಿಗದಂತೆ ಜೀವನ ಸಾಗಿಸಿದ್ದ. ಆದರೆ ಇತ್ತೀಚೆಗೆ ಪೊಲೀಸರು ಚಿಕ್ಕಮಗಳೂರಿನ ಉಪ್ಪಿನಂಗಡಿ ಕಡೆ ಹೋಗಿದ್ದಾಗ ಕೊನೆಗೂ ಪತ್ತೆಯಾಗಿದ್ದಾನೆ. ಇದೀಗ ಚಾಲಾಕಿ ಸುಹೇಲ್‌ನನ್ನು ಪೊಲೀಸರು ಬಂಧಿಸಿ, ಜೈಲಿಗಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ವಿವಾಹಿತೆಯೊಂದಿಗೆ ಪ್ರೇಮ- ಹೋಟೆಲ್‌ನಲ್ಲಿ ರಾತ್ರಿ ತನ್ನೊಂದಿಗೆ ಇರಲು ನಿರಾಕರಿಸಿದ್ದಕ್ಕೆ ಕೊಲೆ

    ವಿವಾಹಿತೆಯೊಂದಿಗೆ ಪ್ರೇಮ- ಹೋಟೆಲ್‌ನಲ್ಲಿ ರಾತ್ರಿ ತನ್ನೊಂದಿಗೆ ಇರಲು ನಿರಾಕರಿಸಿದ್ದಕ್ಕೆ ಕೊಲೆ

    ಲಕ್ನೋ: ಹೋಟೆಲ್‌ನಲ್ಲಿ (Hotel) ಒಂದು ರಾತ್ರಿ ತನ್ನೊಂದಿಗೆ ಉಳಿಯಲು ನಿರಾಕರಿಸಿದ್ದಕ್ಕೆ ವಿವಾಹಿತ ಪ್ರೇಯಸಿಯನ್ನ ಹತ್ಯೆಗೈದಿರುವ ಘಟನೆ ಉತ್ತರಪ್ರದೇಶದ (UttarPradesh) ಗಾಜಿಯಾಬಾದ್‌ನಲ್ಲಿ ನಡೆದಿದೆ.

    ಪ್ರೇಯಸಿಯನ್ನು (Lover) ಹತ್ಯೆ ಮಾಡಿದ ಆರೋಪದ ಮೇಲೆ ಗಾಜಿಯಾಬಾದ್ ಪೊಲೀಸರು (Ghaziabad Police) ಆರೋಪಿಯನ್ನ (Accused) ಬಂಧಿಸಿದ್ದಾರೆ. ಬಾಗ್‌ಪತ್ ಮೂಲದ ಯುವತಿ ರಚನಾ ಮದುವೆಯಾಗಿದ್ದರೂ ಆಗಾಗ್ಗೆ ತನ್ನ ಪ್ರಿಯಕರ ಗೌತಮ್‌ನನ್ನು ಭೇಟಿಯಾಗುತ್ತಿದ್ದಳು ಎಂದು ಆಕೆಯ ಪತಿ ರಾಜ್‌ಕುಮಾರ್ ತಿಳಿಸಿದ್ದಾರೆ. ಇದನ್ನೂ ಓದಿ: ಭೀಕರ ಸುನಾಮಿಗೆ 60 ಮಂದಿ ಬಲಿ – 15 ಸಾವಿರ ವಿಮಾನಗಳ ಸಂಚಾರ ರದ್ದು

    ಸಂತ್ರಸ್ತೆ ಡಿಸೆಂಬರ್ 25ರ ಕ್ರಿಸ್‌ಮಸ್ ದಿನದಂದು ಗಾಜಿಯಾಬಾದ್ ಹೋಟೆಲ್‌ನಲ್ಲಿ (Hotel) ಆರೋಪಿಯನ್ನ ಭೇಟಿಯಾಗಿದ್ದಳು. ಬಳಿಕ ಬೇಗನೇ ಹೊರಡಬೇಕೆಂದು ಕೇಳಿಕೊಂಡಿದ್ದಾಳೆ. ಮರುದಿನ ಹೋಟೆಲ್ ಸಿಬ್ಬಂದಿ ರೂಮ್‌ಗೆ ಹೋಗಿ ನೋಡಿದಾಗ ಆಕೆ ಕೊಲೆಯಾದ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ. ತಕ್ಷಣವೇ ಅವರು ಪೊಲೀಸರಿಗೆ (Police) ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಸಿಸಿಟಿವಿ ಪರಿಶೀಲಿಸಿ, ಆರೋಪಿಯನ್ನ ಬಂಧಿಸಿದ್ದಾರೆ. ಇದನ್ನೂ ಓದಿ: ಮಗಳ ಅಶ್ಲೀಲ ವೀಡಿಯೋ ಪೋಸ್ಟ್ ಮಾಡಿದ್ದನ್ನು ಖಂಡಿಸಿದ್ದಕ್ಕೆ ಯೋಧನ ಹತ್ಯೆ

    ಬಳಿಕ ತನಿಖೆಯಲ್ಲಿ ತನಗೂ ಸಂತ್ರಸ್ತೆಗೂ ಕಳೆದ ಮೂರು ತಿಂಗಳಿಂದ ಸಂಬಂಧವಿತ್ತು ಎಂದು ಒಪ್ಪಿಕೊಂಡಿದ್ದಾನೆ. ಡಿಸೆಂಬರ್ 25 ರಂದು ಭೇಟಿಯಾದಾಗ ರಚನಾ ತನ್ನೊಂದಿಗೆ ರಾತ್ರಿ ಹೋಟೆಲ್‌ನಲ್ಲಿ ಉಳಿಯಲು ನಿರಾಕರಿಸಿದಳು. ಆದ್ದರಿಂದ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದೇನೆ ಎಂಬುದಾಗಿ ಗೌತಮ್ ಪೊಲೀಸರ ಬಳಿ ಒಪ್ಪಿಕೊಂಡಿದ್ದಾನೆ.

    Live Tv
    [brid partner=56869869 player=32851 video=960834 autoplay=true]

  • 26ನೇ ವಯಸ್ಸಿಗೆ 13 ಜಿಲ್ಲೆಗಳಲ್ಲಿ 21 ಮದುವೆ ಮಾಡಿಕೊಂಡ ರಣಧೀರನಿಗೆ ಕಂಟಕ!

    26ನೇ ವಯಸ್ಸಿಗೆ 13 ಜಿಲ್ಲೆಗಳಲ್ಲಿ 21 ಮದುವೆ ಮಾಡಿಕೊಂಡ ರಣಧೀರನಿಗೆ ಕಂಟಕ!

    ಚೆನ್ನೈ: ವಯಸ್ಸಾಗುತ್ತಿದ್ದರು ಇನ್ನೂ ಮದುವೆಯಾಗಿಲ್ಲ (Marriage) ಅನ್ನೋ ಹುಡುಗರು ಒಂದು ಕಡೆ. ಮತ್ತೊಂದು ಕಡೆ ಹುಡುಗಿ ಸಿಕ್ಕರೂ ಮದುವೆ ಆಗೋದು ಗ್ಯಾರಂಟಿ ಇರುವುದಿಲ್ಲ. ಎಷ್ಟೋ ಯುವಕರು (Youth) 35 ರಿಂದ 40ರ ಹರೆಯಕ್ಕೆ ಬಂದರೂ ಹೆಣ್ಣು ಸಿಗೋದು ಕಷ್ಟ. ಆದರೆ ಇಲ್ಲೊಬ್ಬ ಆಸಾಮಿ ತನ್ನ 26ನೇ ವಯಸ್ಸಿಗೇ 13 ಜಿಲ್ಲೆಗಳಲ್ಲಿ 21 ಯುವತಿಯರನ್ನು ವರಿಸುವ ಮೂಲಕ ನೆಟ್ಟಿಗರ ಹುಬ್ಬೇರಿರುವಂತೆ ಮಾಡಿದ್ದಾನೆ.

    ಹೌದು. ತಮಿಳುನಾಡಿನ (Tamil Nadu) ತಂಜಾವೂರು ಜಿಲ್ಲೆಯ ರಾಮನಪುಡಿ ಮೂಲದ ಕಾರ್ತಿಕ್ ರಾಜ (26) ಎಂಬ ಭೂಪನೇ 21 ಯುವತಿಯರನ್ನ ಮದುವೆಯಾಗಿ ಈಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಈ ವರ್ಷದ ಮಾರ್ಚ್ ತಿಂಗಳಲ್ಲಿ ಈತ ರಾಣಿ ಎಂಬಾಕೆಯನ್ನ ಮದುವೆಯಾಗಿದ್ದ (Marriage). ಆಗ ವಧುವಿನ ಕಡೆಯವರು ಕಾರ್ತಿಕ್‌ಗೆ 5 ಎಕರೆ ಭೂಮಿ, ಒಂದೂವರೆ ಲಕ್ಷ ಹಣ ಹಾಗೂ ಚಿನ್ನಾಭರಣಗಳನ್ನ ವರದಕ್ಷಿಣೆಯಾಗಿ ಕೊಟ್ಟಿದ್ದರು. ಆದರೆ ಕೆಲವೇ ದಿನಗಳಲ್ಲಿ ಕಾರ್ತಿಕ್ ಹಣದೊಂದಿಗೆ ಪರಾರಿಯಾಗಿದ್ದ, ಬಳಿಕ ಹುಡುಕಾಡಿದ್ದರೂ ಆತನ ಸುಳಿವು ಸಿಕ್ಕಿರಲಿಲ್ಲ. ಕೆಲ ದಿನಗಳ ಬಳಿಕ ಕಾರ್ತಿಕ್ ಸುಳಿವು ಸಿಕ್ಕ ನಂತರ ರಾಣಿ ಕುಟುಂಬ ಪೊಲೀಸ್ ಠಾಣೆಗೆ (Police Station) ದೂರು ನೀಡಿದ್ದರು.

    ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು ತೀವ್ರ ಶೋಧ ನಡೆಸಿ ಕಾರ್ತಿಕ್‌ನನ್ನು ಪತ್ತೆ ಹಚ್ಚಿ ಬಂಧಿಸಿದ್ದರು. ಬಳಿಕ ನಡೆದ ವಿಚಾರಣೆಯಲ್ಲಿ ಅನೇಕ ಶಾಕಿಂಗ್ ಸಂಗತಿಗಳನ್ನು ಆರೋಪಿ ಕಾರ್ತಿಕ್ ಬಾಯ್ಬಿಟ್ಟಿದ್ದಾನೆ. ಕಾರ್ತಿಕ್ ಈವರೆಗೆ ರಾಣಿ ಸೇರಿದಂತೆ ಒಟ್ಟು 21 ಯುವತಿಯರನ್ನ ಮದುವೆಯಾಗಿದ್ದಾನೆಂದು ತಿಳಿದುಬಂದಿದೆ. ಇದನ್ನೂ ಓದಿ: ಸಾಲ ವಂಚನೆ ಪ್ರಕರಣ – ವೀಡಿಯೋಕಾನ್ ಅಧ್ಯಕ್ಷ ವೇಣುಗೋಪಾಲ್ ಧೂತ್ ಬಂಧನ

    ಆರೋಪಿ ಕಾರ್ತಿಕ್ ರಾಜ ಐಷಾರಾಮಿ ಜೀವನಕ್ಕೆ ಒಗ್ಗಿಕೊಂಡಿದ್ದ. ಹಣ ಸಂಪಾದನೆಗಾಗಿ ಈ ಮಾರ್ಗವನ್ನು ಆಯ್ದುಕೊಂಡಿರುವುದು ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿದೆ. ಒಳ್ಳೆಯ ಉದ್ಯೋಗದಲ್ಲಿದ್ದೇನೆ ಎಂದು ಹೇಳಿದ್ರೆ ಜಾಸ್ತಿ ವರದಕ್ಷಿಣೆ ಕೊಡುತ್ತಾರೆ ಅಂತಾ ಸುಳ್ಳು ಹೇಳುತ್ತಿದ್ದನು. ತನ್ನ ಯೋಜನೆಯಂತೆ ಬೇರೆ ಬೇರೆ ಹೆಸರಿನ ಯುವತಿಯರನ್ನ ಮದುವೆಯಾಗುತ್ತಿದ್ದ. ಬಳಿಕ ಯಾವೊಬ್ಬ ಪತ್ನಿಯ ಜೊತೆಯೂ ಆತ ಕನಿಷ್ಠ ಪಕ್ಷ 5 ತಿಂಗಳು ಸಹ ಕಳೆಯುತ್ತಿರಲಿಲ್ಲ. ಮದುವೆಯ ಬಳಿಕ ಎಲ್ಲ ಹಣವನ್ನು ತೆಗೆದುಕೊಂಡು ಆರೋಪಿ ಪರಾರಿಯಾಗುತ್ತಿದ್ದ. ಎಲ್ಲವೂ ಮುಗಿದ ಮೇಲೆ ಬೇರೆ ಊರಿಗೆ ಹೋಗಿ ಬೇರೆ ಹುಡುಗಿಯ ಜೊತೆ ಮದುವೆ ಮಾಡಿಕೊಳ್ಳುತ್ತಿದ್ದ. ತಮಿಳುನಾಡಿನ 13 ಜಿಲ್ಲೆಗಳಲ್ಲಿ ಮದುವೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ. ಇದನ್ನೂ ಓದಿ: ತೈವಾನ್ ಮೇಲೆ ಮತ್ತೆ ಚೀನಾ ಕ್ಯಾತೆ – 71 ಯುದ್ಧ ವಿಮಾನಗಳಿಂದ ತಾಲೀಮು

    ಇದೀಗ ಕಾರ್ತಿಕ್ ರಾಜನ ಬಣ್ಣ ಬಯಲಾಗುತ್ತಿದ್ದಂತೆ ಆತ ಈ ಹಿಂದೆ ಮದುವೆಯಾಗಿದ್ದ 20 ಪತ್ನಿಯರು ಕೂಡ ಪೊಲೀಸರಿಗೆ ದೂರು ನೀಡಿದ್ದಾರೆ. ಸಂತ್ರಸ್ತರ ದೂರು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಕಾರ್ತಿಕ್ ರಾಜಾ ಬಳಿ ಆಡಿ ಕಾರು ಮಾತ್ರ ಇದೆ, ಚಿನ್ನ ಅಥವಾ ನಗದು ಏನೂ ಇಲ್ಲ ಎಂದು ಪೊಲೀಸರು ಕಂಡುಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರಸ್ತೆ ಬದಿ ಮಹಿಳೆ ಅನುಮಾನಾಸ್ಪದ ಸಾವು

    ರಸ್ತೆ ಬದಿ ಮಹಿಳೆ ಅನುಮಾನಾಸ್ಪದ ಸಾವು

    ರಾಮನಗರ: ಮಹಿಳೆಯೊಬ್ಬರು (Women) ರಸ್ತೆ ಬದಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ರಾಮನಗರ (Ramanagara) ಜಿಲ್ಲೆಯಲ್ಲಿ ನಡೆದಿದೆ.

    ಕನಕಪುರ (Kanakapura) ತಾಲ್ಲೂಕಿನ ಮಾರಣ್ಣ ದೊಡ್ಡಿಯ ರಸ್ತೆ ಬಳಿ ಮಹಿಳೆಯೊಬ್ಬರು ಶವವಾಗಿ ಪತ್ತೆಯಾಗಿದ್ದಾರೆ. ಮೃತ ಮಗಿಳೆ ಶೃತಿ (32) ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ತೋಟದ ಮನೆಗೆ ಹೋಗಲು ಅಡ್ಡಿಯಾಗಿದ್ದನೆಂದು ಗಂಡನನ್ನೇ ಕೊಲೆಗೈದ ಪತ್ನಿ

    ಕನಕಪುರ ಟೌನ್ ಕುರುಪೇಟೆ ಸೊಲ್ಲಾಪುರದಮ್ಮ ಬೀದಿ ನಿವಾಸಿ ಶೃತಿಯನ್ನ ಕೊಲೆ ಮಾಡಿ ರಸ್ತೆ ಬದಿ ಮೃತದೇಹ ಎಸೆದಿರುವ ಶಂಕೆ ವ್ಯಕ್ತವಾಗಿದೆ. ಸಾತನೂರು ಪೊಲೀಸರು (Sathanur Police) ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ ಫಿನಾಲೆಗೆ 6 ಸ್ಪರ್ಧಿಗಳ ಎಂಟ್ರಿ: ಕಾದಿದೆ ಮತ್ತೊಂದು ಶಾಕ್

    ಇತ್ತೀಚೆಗೆ ರಾಮನಗರ ಜಿಲ್ಲೆಯ ಕೆಂಪೇಗೌಡನ ದೊಡ್ಡಿ ಬಳಿ ದಶಪಥ ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿತ್ತು. ಈ ಬಗ್ಗೆ ಪೊಲೀಸರು ತನಿಖೆ ನಡೆಸಿದಾಗ ಹೆಂಡತಿಯೇ ತನ್ನ ಪ್ರಿಯಕರನೊಂದಿಗೆ ಸೇರಿ ಚನ್ನಪಟ್ಟಣ ತಾಲೂಕಿನ ರಾಮನರಸಿಂಹರಾಜಪುರ (ಕೃಷ್ಣಾಪುರ) ನಿವಾಸಿ ದೇಸೇಗೌಡನನ್ನು(45) ಕೊಲೆಗೈದಿರುವುದು ಸಾಬೀತಾಗಿತ್ತು. ಬಳಿಕ ಹೆಂಡತಿ ಹಾಗೂ ಪ್ರಿಯಕರನನ್ನ ಬಂಧಿಸಲಾಗಿತ್ತು.

    Live Tv
    [brid partner=56869869 player=32851 video=960834 autoplay=true]

  • ಯುವಕನಿಗೆ ಬೆದರಿಕೆ ಹಾಕಲು ಗ್ಯಾಂಗ್ ಕಟ್ಟಿಕೊಂಡು 450 ಕಿಮೀ ಬಂದ ಟಿಕ್‌ಟಾಕ್ ತಾರೆ

    ಯುವಕನಿಗೆ ಬೆದರಿಕೆ ಹಾಕಲು ಗ್ಯಾಂಗ್ ಕಟ್ಟಿಕೊಂಡು 450 ಕಿಮೀ ಬಂದ ಟಿಕ್‌ಟಾಕ್ ತಾರೆ

    ಗಾಂಧಿನಗರ: ಆಕೆ ಸ್ಪುರದ್ರೂಪಿ ಯುವತಿ. ಯಾವ ಚಲನಚಿತ್ರದ ನಟಿಗೂ ಕಮ್ಮಿ ಇರ್ಲಿಲ್ಲ. ಒಮ್ಮೆ ಯಾರಾದ್ರೂ ಆಕೆಯನ್ನು ನೋಡಿದ್ರೆ ನೋಡ್ತಾನೆ ಇರ್ಬೇಕು ಅನ್ನುವಷ್ಟು ಸುಂದರಿ. ಆದ್ರೆ ಇತ್ತೀಚಿನ ದಿನಗಳಲ್ಲಿ ಸ್ಟಾರ್ ಟಿಕ್‌ಟಾಕ್‌ಗಳಿಗೆ (TikTok) ಕಾಮೆಂಟ್ ಮಾಡುವ ಸಂದರ್ಭದಲ್ಲಿ ಯುವಕ-ಯುವತಿಯರ ನಡುವೆ ಜಗಳಗಳು ನಡೆಯುವುದು ಸಹಜ.

    ಆದ್ರೆ ಇಲ್ಲೊಬ್ಬಳು ಟಿಕ್‌ಟಾಕ್ (TikTok) ತಾರೆ ತನ್ನೊಂದಿಗೆ ಸೋಷಿಯಲ್ ಮೀಡಿಯಾದಲ್ಲಿ (Social Media) ಜಗಳವಾಡಿದ್ದ ಯುವಕನಿಗೆ ಬೆದರಿಕೆ ಹಾಕಲೆಂದೇ 450 ಕಿಮೀ ಪ್ರಯಾಣ ಬೆಳೆಸಿರುವ ಘಟನೆ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಮಸೀದಿ, ದೇವಸ್ಥಾನ ಕೆಡವೋದು ನೋವಿನ ಸಂಗತಿ.. ಆದ್ರೆ ಅನಿವಾರ್ಯ – ಸಿಎಂ

    ಸೂರತ್‌ನ ಟಿಕ್‌ಟಾಕ್ ತಾರೆ ಕೀರ್ತಿ ಪಟೇಲ್ (Kirti Patel) ತನ್ನ ಸಹಚರರೊಂದಿಗೆ ಗ್ಯಾಂಗ್ ಕಟ್ಟಿಕೊಂಡು ಬೆದರಿಕೆ ಹಾಕಲು 450 ಕಿಮೀ ತೆರಳಿದ್ದಾಳೆ. ಆದ್ರೆ ಸಮಯಕ್ಕೆ ಸರಿಯಾಗಿ ಸ್ಥಳಕ್ಕಾಗಮಿಸಿದ ಪೊಲೀಸರು (Bhesan Police Station) ಪರಿಸ್ಥಿತಿ ಕೈಮೀರುವ ಮುನ್ನವೇ ಕೀರ್ತಿ ಪಟೇಲ್ ಹಾಗೂ ಇತರ 9 ಮಂದಿ ಸಹಚರರನ್ನ ಬಂಧಿಸಿದ್ದಾರೆ. ಇದನ್ನೂ ಓದಿ: ಜನರು ಕೋವಿಡ್ ಗಂಭೀರವಾಗಿ ತೆಗೆದುಕೊಳ್ಳದಿದ್ರೆ ಸಾವಿನ ಸಂಖ್ಯೆ ತಡೆಯೋಕಾಗಲ್ಲ – ಆರಗ ಜ್ಞಾನೇಂದ್ರ

    ಕಾನೂನುಬಾಹಿರ ಸಭೆ, ಅಪರಾಧ ಕೃತ್ಯದ ಸಾಮಾನ್ಯ ಉದ್ದೇಶ, ಅವಮಾನ ಹಾಗೂ ಕ್ರಿಮಿನಲ್ ಬೆದರಿಕೆ ಆರೋಪಗಳ ಅಡಿಯಲ್ಲಿ ಟಿಕ್‌ಟಾಕ್ ತಾರೆಯನ್ನ ಬಂಧಿಸಲಾಗಿತ್ತು. ಆದ್ರೆ ಬಂಧಿಸಿದ ಕೆಲವೇ ಗಂಟೆಗಳಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ ಎಂದು ಭೇಸನ್ ಪೊಲೀಸ್ ಠಾಣಾಧಿಕಾರಿ ತಿಳಿಸಿದ್ದಾರೆ.

    ಕೀರ್ತಿ ಪಟೇಲ್ ಸೋಷಿಯಲ್ ಮೀಡಿಯಾದಲ್ಲಿ ತನಗೆ ಹೊಡೆಯುವುದಾಗಿ ಬೆದರಿಕೆ ಹಾಕಿದ್ದಳು. ಹಾಗಾಗಿ ಸೂರತ್‌ನಿಂದ ಭೇಸನ್‌ವರೆಗೆ ಬಂದಿದ್ದಳು ಎಂದು ಯುವಕ ಜಮನ್ ಭಯಾನಿ ಹೇಳಿದ್ದಾನೆ.

    ಕೀರ್ತಿ ಪಟೇಲ್ ಕಿರಿಕ್ ಇದೇ ಮೊದಲೇನಲ್ಲ. ಈ ಹಿಂದೆಯೂ ವಸ್ತಾçಪುರ ಪ್ರದೇಶದಲ್ಲಿ ಮಹಿಳೆಗೆ ಬೆದರಿಕೆ ಹಾಕಿದ್ದಕ್ಕಾಗಿ ಅಹಮದಾಬಾದ್ ಪೊಲೀಸರು ಆಕೆಯನ್ನ ಬಂಧಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ಪ್ರೀತಿ ನಿರಾಕರಿಸಿದ ಯುವತಿ – ನಡು ರಸ್ತೆಯಲ್ಲೇ ಕೊಂದ ಪಾಗಲ್ ಪ್ರೇಮಿ

    ಪ್ರೀತಿ ನಿರಾಕರಿಸಿದ ಯುವತಿ – ನಡು ರಸ್ತೆಯಲ್ಲೇ ಕೊಂದ ಪಾಗಲ್ ಪ್ರೇಮಿ

    ದಾವಣಗೆರೆ: ಬೆಣ್ಣೆ ನಗರಿ ದಾವಣಗೆರೆಯಲ್ಲಿ  (Davanagere) ಹಾಡಹಗಲೇ ಭೀಕರ ಕೊಲೆಗಳಾಗುತ್ತಿವೆ. ಇಂತಹ ದೃಶ್ಯಗಳನ್ನು ಕಂಡು ಜನರು ಬೆಚ್ಚಿ ಬಿದ್ದಿದ್ದಾರೆ. ತನ್ನ ಪಾಡಿಗೆ ಕೆಲಸಕ್ಕೆ ಹೋಗುತ್ತಿದ್ದ ಯುವತಿಯನ್ನ (Girl) ನಡು ರಸ್ತೆಯಲ್ಲಿ ತಡೆದು ನಿಲ್ಲಿಸಿ, ಮನಬಂದಂತೆ ಚುಚ್ಚಿ-ಚುಚ್ಚಿ ಕೊಂದಿರುವ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ.

    ದಾವಣಗೆರೆ ನಗರದ ಬಿ.ಜೆ ಬಡಾವಣೆಯ ಚರ್ಚ್ ಮುಂಭಾಗ ಯುವತಿಯನ್ನ ಕೊಂದಿರುವ ಪಾಗಲ್ ಪ್ರೇಮಿ, ಬಳಿಕ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ಸೇರಿದ್ದಾನೆ. ಇದನ್ನೂ ಓದಿ: ಐಪಿಎಲ್ ಮಿನಿ ಹರಾಜು ಹೈಲೈಟ್ಸ್ – ಸುತ್ತಿಗೆಯ ಹೊಡೆತಕ್ಕೆ ಕಾಯುತ್ತಿದ್ದಾನೆ 15ರ ಬಾಲಕ

    ಇಲ್ಲಿನ ವಿನೋಭ ನಗರದ ನಿವಾಸಿ ಚಾಂದ್ ಸುಲ್ತಾನಾ ದಾವಣಗೆರೆ ವಿವಿಯಲ್ಲಿ ಎಂಕಾಂ ಪದವಿ ಮುಗಿಸಿ ತೆರಿಗೆ ಸಲಹೆಗಾರರಾದ ಕೆ.ಮಹ್ಮದ್ ಭಾಷಾ ಅವರ ಬಳಿ ಸಿ.ಎ.ಗಾಗಿ ತೆರಬೇತಿ ಪಡೆಯುತ್ತಿದ್ದಳು. ಇದೇ ಕಚೇರಿಯಲ್ಲಿನ ಹುಡುಗನ ಜೊತೆಗೆ ಇತ್ತೀಚಿಗೆ ನಿಶ್ಚಿತಾರ್ಥ ಸಹ ಮಾಡಿಕೊಂಡಿದ್ದಳು. ಇದನ್ನೂ ಓದಿ: ‘ಪಠಾಣ್’ ಮತ್ತೊಂದು ಸಾಂಗ್ ರಿಲೀಸ್ : ಡ್ಯಾನ್ಸ್ ಮೆಚ್ಚಿಕೊಂಡ ಡಿಪ್ಪಿ-ಶಾರುಖ್ ಫ್ಯಾನ್ಸ್

    ಅಷ್ಟರಲ್ಲೇ ದುಷ್ಟ ಸಾದತ್ ಅಲಿಯಾಸ್ ಚಾಂದ್ ಫೀರ್ ಎಂಬವನು, ಚಾಂದ್ ಸುಲ್ತಾನಾಳನ್ನ ಮದುವೆಯಾಗಲು (Marriage) ಬಯಸಿದ್ದ. ಆದ್ರೆ ಕುಟುಂಬದ ಸದಸ್ಯರು ಹಾಗೂ ಸುಲ್ತಾನಾ ನಿರಾಕರಿಸಿ ಮತ್ತೊಬ್ಬ ಹುಡುಗನ ಜೊತೆಗೆ ನಿಶ್ಚಿತಾರ್ಥ ಮಾಡಿದ್ದರು. ಇದರಿಂದ ಸಾದತ್ ಕೋಪಗೊಂಡಿದ್ದಾನೆ. ಮರುದಿನ ಸುಲ್ತಾನ ತನ್ನ ಪಾಡಿಗೆ ಕೆಲಸಕ್ಕೆ ಹೋಗುತ್ತಿದ್ದಾಗ ಮಾತನಾಡಬೇಕು ಎಂದು ನಿಲ್ಲಿಸಿ, ನಟ್ಟ ನಡು ರಸ್ತೆಯಲ್ಲೇ ಚಾಕುವಿನಿಂದ ಚುಚ್ಚಿ-ಚುಚ್ಚಿ ಕೊಂದಿದ್ದಾನೆ.

    ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ ಚಾಂದ್ ಸುಲ್ತಾನ ಮನೆಗೆ ಒಬ್ಬಳೇ ಮಗಳು. ಹೇಗೋ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಕುಟುಂಬದವರಿಗೆ ಕೊಲೆಯ ವಿಚಾರ ತಿಳಿದು, ಕೊಲೆಗಾರನನ್ನ ಹುಡುಕಾಡುವಷ್ಟರಲ್ಲೇ ಸಾದತ್ ವಿಷ ಸೇವಿಸಿ ಸಿಟಿ ಸೆಂಟ್ರಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ. ಸದ್ಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಾನಸಿಕ ಕಿರುಕುಳಕ್ಕೆ ಬೇಸತ್ತು ತಾಯಿ, ಮಗ, ಸೊಸೆ ಆತ್ಮಹತ್ಯೆ

    ಮಾನಸಿಕ ಕಿರುಕುಳಕ್ಕೆ ಬೇಸತ್ತು ತಾಯಿ, ಮಗ, ಸೊಸೆ ಆತ್ಮಹತ್ಯೆ

    ಹಾವೇರಿ: ಒಂದೇ ಮನೆಯಲ್ಲಿ ಮೂವರು ನೇಣು ಬಿಗಿದುಕೊಂಡು ಆತ್ಮಹತ್ಯೆ (Suicide) ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ತಾಲೂಕಿನ ಅಗಡಿ ಗ್ರಾಮದಲ್ಲಿ ನಡೆದಿದೆ.

    ಮೃತರನ್ನು ಭಾರತಿ ಕಮಡೊಳ್ಳಿ (40), ಸೌಜನ್ಯ ಕಮಡೊಳ್ಳಿ (20) ಹಾಗೂ ಕಿರಣ ಕಮಡೊಳ್ಳಿ (22) ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಶ್ರದ್ಧಾ ಕೊಲೆ ಪ್ರಕರಣ – ಜಾಮೀನು ಅರ್ಜಿಯನ್ನು ವಾಪಸ್ ಪಡೆದ ಪೀಸ್ ಪೀಸ್ ಪ್ರೇಮಿ

    ಮೂರು ತಿಂಗಳ ಹಿಂದಷ್ಟೇ ಸೌಜನ್ಯ ಮತ್ತು ಕಿರಣನ ಮದುವೆಯಾಗಿತ್ತು (Marriage). ಮೃತ ಭಾರತಿ ಅವರ ಕಿರಿಯ ಪುತ್ರ ಅರುಣ (21) ಕಳೆದ ಕೆಲವು ದಿನಗಳಿಂದ ಗ್ರಾಮದ ಪುಟ್ಟಣ್ಣಶೆಟ್ಟಿ ಎಂಬವರ ಕುಟುಂಬದ ಯುವತಿಯನ್ನು ಪ್ರೀತಿಸುತ್ತಿದ್ದ (Love). ಕಳೆದ ಐದಾರು ದಿನಗಳಿಂದ ಅರುಣನ ಜೊತೆ ಯುವತಿಯೂ ನಾಪತ್ತೆಯಾಗಿದ್ದಳು. ಇದರಿಂದ ಯುವತಿ ಮನೆಯವರು ತಮ್ಮ ಮಗಳನ್ನು ಕರೆತರುವಂತೆ ಅರುಣನ ತಾಯಿ ಭಾರತಿ, ಹಿರಿಯ ಮಗ ಕಿರಣ ಮತ್ತು ಕಿರಣನ ಪತ್ನಿ ಸೌಜನ್ಯಳಿಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರು.

    ಯುವತಿ ಮನೆಯವರ ಮಾನಸಿಕ ಕಿರುಕುಳಕ್ಕೆ ಬೇಸತ್ತು ಮೂವರೂ ನೇಣಿಗೆ ಶರಣಾಗಿದ್ದಾರೆ. ಮೂವರ ಆತ್ಮಹತ್ಯೆಗೆ ಪುಟ್ಟಣ್ಣಶೆಟ್ಟಿ ಕುಟುಂಬದವರೇ ಕಾರಣ ಎಂದು ಮೃತ ಕಿರಣನ ತಂದೆ ವಿರುಪಾಕ್ಷಪ್ಪ ಆರೋಪಿಸಿದ್ದಾರೆ. ಸ್ಥಳಕ್ಕೆ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಹಾವೇರಿ ಗ್ರಾಮಾಂತರ ವಿಭಾಗದ ಪೊಲೀಸ್ ಠಾಣೆ (Haveri Rural Police) ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಪರಭಾಷೆಯಲ್ಲೂ ಶಿವರಾಜ್ ಕುಮಾರ್ ಬ್ಯುಸಿ : ಎರಡು ತಮಿಳು, ಒಂದು ತೆಲುಗು ಚಿತ್ರದಲ್ಲಿ ನಟನೆ

    Live Tv
    [brid partner=56869869 player=32851 video=960834 autoplay=true]

  • ಆ್ಯಪ್‌ಗಳಲ್ಲಿ ಸಾಲ ಪಡೆವ ಮುನ್ನ ಹುಷಾರ್ – ಸಾಲ ತೀರಿಸಿದ್ರೂ ಕಿರುಕುಳ, ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ

    ಆ್ಯಪ್‌ಗಳಲ್ಲಿ ಸಾಲ ಪಡೆವ ಮುನ್ನ ಹುಷಾರ್ – ಸಾಲ ತೀರಿಸಿದ್ರೂ ಕಿರುಕುಳ, ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ

    ಚಿಕ್ಕಬಳ್ಳಾಪುರ: ಆನ್‌ಲೈನ್ ಆ್ಯಪ್‌ಗಳಲ್ಲಿ (Online App) ಸಾಲ ಪಡೆದ ವ್ಯಕ್ತಿಯೊಬ್ಬ ಕಿರುಕುಳ ತಾಳಲಾರದೆ ಆತ್ಮಹತ್ಯೆಗೆ (Suicide) ಯತ್ನಿಸಿರುವ ಘಟನೆ ನಗರದಲ್ಲಿ ನಡೆದಿದೆ.

    ನಗರದ ನಿವಾಸಿ ಕಾರ್ ಮೆಕ್ಯಾನಿಕ್ ಬಾಬಾಜಾನ್ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಈತ ಲೈವ್ ಇನ್ ಕ್ರೆಡಿಟ್, ಎಂಪೈರ್ ಕ್ರೆಡಿಟ್, ಹ್ಯೂಗೋ ಲೋನ್, ಪೇವಿ ಇಂಡಿಯಾ, ಕಾಯಿನ್ ಪಾರ್ಕ್, ಕ್ಯಾಷ್ ಲೆಂಟ್ ಆಪ್ ಗಳಲ್ಲಿ ತಲಾ 5 ಸಾವಿರದಂತೆ 30 ಸಾವಿರ ಲೋನ್ (Loan) ಪಡೆದಿದ್ದ. ಇದನ್ನೂ ಓದಿ: ಶಬರಿಮಲೆ ಹಾದಿಯಲ್ಲಿ ಈ ಬಾರಿ 23 ಮಂದಿ ಹೃದಯಾಘಾತದಿಂದ ಸಾವು

    ಲೋನ್ ಪಡೆದು ಮರು ಪಾವತಿ ಮಾಡಿದ್ರೂ ಮರಳಿ ಖಾತೆಗೆ ಹಣ ಹಾಕಿ, ಬಡ್ಡಿ ಕಟ್ಟುವಂತೆ ಪೀಡಿಸುತ್ತಿದ್ದರು. ಅಲ್ಲದೇ ಬಡ್ಡಿ ಕಟ್ಟಿಲ್ಲ ಅಂತಾ ಬಾಬಾಜಾನ್ ಫೋಟೋವನ್ನ ಅಶ್ಲೀಲವಾಗಿ ಎಡಿಟ್ ಮಾಡಿದ್ದು, ಅಶ್ಲೀಲ ಬರಹಗಳನ್ನ ಬರೆದು ಬಾಬಾಜಾನ್ ಸಂಬಂಧಿಕರು, ಸ್ನೇಹಿತರಿಗೆ ಕಳುಹಿಸಿದ್ದಾರೆ.

    ಇಷ್ಟು ಸಾಲದು ಅಂತಾ ಫೋನ್ ಮಾಡಿ ಹಣ ಕಟ್ಟುವಂತೆ ಪದೇ-ಪದೇ ಟಾರ್ಚರ್ ಕೊಟ್ಟಿದ್ದಾರೆ. ಇದರಿಂದ ಮನನೊಂದ ಬಾಬಾಜಾನ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ (Hospital) ದಾಖಲಿಸಲಾಗಿದೆ. ಇದನ್ನೂ ಓದಿ: ಬಾಯ್‌ಫ್ರೆಂಡ್ ಜೊತೆಗಿನ ರೊಮ್ಯಾಂಟಿಕ್ ಫೋಟೋ ಹಂಚಿಕೊಂಡ ಶ್ರುತಿ ಹಾಸನ್

    ಸದ್ಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಾಬಾಜಾನ್ ಚೇತರಿಸಿಕೊಂಡಿದ್ದಾನೆ. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಯಾವುದೇ ಪ್ರಕರಣ ದಾಖಲಾಗಿಲ್ಲ.

    Live Tv
    [brid partner=56869869 player=32851 video=960834 autoplay=true]

  • ಓವೈಸಿ ಪಕ್ಷದ ನಾಯಕನ ಕಚೇರಿಯಲ್ಲೇ ವಿದ್ಯಾರ್ಥಿ ಕೊಲೆ

    ಓವೈಸಿ ಪಕ್ಷದ ನಾಯಕನ ಕಚೇರಿಯಲ್ಲೇ ವಿದ್ಯಾರ್ಥಿ ಕೊಲೆ

    ಹೈದರಾಬಾದ್: ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (AIMIM) ಪಕ್ಷದ ಸ್ಥಳೀಯ ಕಾರ್ಪೋರೇಟರ್ ಕಚೇರಿಯಲ್ಲಿ ವಿದ್ಯಾರ್ಥಿಯೊಬ್ಬನ ಹತ್ಯೆಯಾಗಿದೆ (Murder).

    ಹೈದರಾಬಾದ್‌ನ ಲಲಿತಾಬಾಗ್ ಪ್ರದೇಶದಲ್ಲಿರುವ ಕಚೇರಿಯಲ್ಲಿ ಕೊಲೆ ನಡೆದಿದೆ. ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ ಬಳಿಕ ಕಾರ್ಪೊರೇಟರ್ ಸಂಬಂಧಿ 22 ವರ್ಷದ ವಿದ್ಯಾರ್ಥಿ (Student) ಮುರ್ತಾಜಾ ಅನಸ್ ಎಂದು ಗುರುತಿಸಿದ್ದಾರೆ. ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಿದರೂ ಬದುಕುಳಿಯಲಿಲ್ಲ.

    CRIME 2

    ಇತ್ತೀಚೆಗೆ ಅಸಾದುದ್ದೀನ್ ಓವೈಸಿ (Asaduddin Owaisi), 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ತಮ್ಮ ಪಕ್ಷ ಪ್ರತಿನಿಧಿಸುವುದಾಗಿ ಹೇಳಿದ್ದರು. ಕರ್ನಾಟದ 13 ಕ್ಷೇತ್ರಗಳಲ್ಲಿ ಎಐಎಂಐಎಂ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದು ಘೋಷಿಸಿದ್ದರು.

    Live Tv
    [brid partner=56869869 player=32851 video=960834 autoplay=true]