Tag: crime

  • ಮರಕ್ಕೆ ನೇಣು ಹಾಕಿಕೊಳ್ಳುವಾಗ ಪಂಚೆ ಹರಿದು, ಕೆಳಗೆ ಬಿದ್ದು ಯುವಕ ಸಾವು

    ಮರಕ್ಕೆ ನೇಣು ಹಾಕಿಕೊಳ್ಳುವಾಗ ಪಂಚೆ ಹರಿದು, ಕೆಳಗೆ ಬಿದ್ದು ಯುವಕ ಸಾವು

    ಚಿಕ್ಕಬಳ್ಳಾಪುರ: ಸರ್ಕಾರಿ ಪ್ರಾಥಮಿಕ ಶಾಲೆಯ (Government School) ಅವರಣದಲ್ಲಿ ಯುವಕನೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯಲ್ಲಿ ನಡೆದಿದೆ.

    ದೊಡ್ಡಬಳ್ಳಾಪುರ ನಗರದ ಭಗತ್ ಸಿಂಗ್ ಕ್ರೀಡಾಂಗಣದ ಬಳಿ ಘಟನೆ ನಡೆದಿದೆ. ಕರೇನಹಳ್ಳಿಯ ನಾಗೇಂದ್ರಪ್ರಸಾದ್ (25) ಮೃತಪಟ್ಟಿದ್ದು, ಸಾವಿನ ಬಗ್ಗೆ ಅನುಮಾನಗಳು ಹುಟ್ಟಿಕೊಂಡಿವೆ. ಇದನ್ನೂ ಓದಿ: ಮೆಟ್ರೋ ಪಿಲ್ಲರ್ ದುರಂತ – ಶನಿವಾರ BMRCL ಕೈ ಸೇರಲಿದೆ IISC ವರದಿ

    ಯುವಕ ಮರಕ್ಕೆ (Tree) ಪಂಚೆಕಟ್ಟಿ ನೇಣು ಬಿಗಿದುಕೊಳ್ಳಲು ಯತ್ನಿಸಿದ್ದಾನೆ. ಅಷ್ಟರಲ್ಲೇ ಪಂಚೆ ಹರಿದು ಯುವಕ ಕೆಳಗೆ ಬಿದ್ದು ತಲೆಗೆ ಗಂಭೀರ ಪೆಟ್ಟಾಗಿದೆ. ತಲೆಯಿಂದ ತೀವ್ರ ರಕ್ತ ಸ್ರಾವವಾಗಿ ಯುವಕ ಸ್ಥಳದಲ್ಲೇ ಸಾವನ್ನಪ್ಪಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: `ಈ ಇಬ್ಬರು ವೀರರನ್ನು ಸ್ಮರಿಸಲೇಬೇಕು’ – ರಿಷಬ್‌ ಪಂತ್ ಮೊದಲ ರಿಯಾಕ್ಷನ್

    ಮೃತನ ಸಂಬಂಧಿಕರು ಸ್ಥಳ ಆಗಮಿಸಿದ್ದು ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಆತ್ಮಹತ್ಯೆ (Suicide) ಮಾಡಿಕೊಳ್ಳುವ ಸಮಸ್ಯೆ ಏನೂ ಇರಲಿಲ್ಲ ಎಂದು ಹೇಳಿದ್ದಾರೆ. ಈ ಸಂಬಂಧ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪ್ರೇಮ ವೈಫಲ್ಯ – ಕಳೆನಾಶಕ ಸೇವಿಸಿ ಅಪ್ರಾಪ್ತೆ ಆತ್ಮಹತ್ಯೆ

    ಪ್ರೇಮ ವೈಫಲ್ಯ – ಕಳೆನಾಶಕ ಸೇವಿಸಿ ಅಪ್ರಾಪ್ತೆ ಆತ್ಮಹತ್ಯೆ

    ಚಿಕ್ಕಮಗಳೂರು: ಪ್ರೇಮ ವೈಫಲ್ಯದಿಂದ (Love Failure) ಅಪ್ರಾಪ್ತ ಬಾಲಕಿ ಕಳೆನಾಶಕ ಸೇವೆಸಿ ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಜಿಲ್ಲೆಯ ಕಳಸ ತಾಲೂಕಿನ ಜೋಗಿಕುಂಬ್ರಿ ಗ್ರಾಮದಲ್ಲಿ ನಡೆದಿದೆ.

    ಕಳಸ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿ (PUC Student) ದೀಪ್ತಿ (17) ಮೃತ ಬಾಲಕಿ. ಈಕೆ ಎಸ್.ಕೆ ಮೇಗಲ್ ಗ್ರಾಮದ ನಿತೇಶ್ ಎಂಬವನನ್ನ ಪ್ರೀತಿಸುತ್ತಿದ್ದಳು. ಆತ ವಂಚಿಸಿದ್ದಾನೆ ಎಂದು ಗೊತ್ತಾಗುತ್ತಿದ್ದಂತೆ, ಜನವರಿ 10ರಂದು ಕಾಲೇಜಿನಿಂದ ಮನೆಗೆ ಬಂದ ದೀಪ್ತಿ ಕಳೆನಾಶಕ ಸೇವಿಸಿದ್ದಾಳೆ. ಬಳಿಕ ಮನೆಯಲ್ಲಿದ್ದ ಅಪ್ಪ-ಅಮ್ಮನಿಗೆ ವಿಷಯ ತಿಳಿಸಿದ್ದಾಳೆ. ಇದನ್ನೂ ಓದಿ: ಮಂಗಳೂರು ಬೆಡಗಿಗೆ ಒಲಿಯುತ್ತಾ ಭುವನ ಸುಂದರಿ ಕಿರೀಟ?

    ಪೋಷಕರು ಕೂಡಲೇ ಕಳಸ ತಾಲೂಕು ಆಸ್ಪತ್ರೆಗೆ (Hospital) ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಎ.ಜೆ.ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ನಾಲ್ಕು ದಿನಗಳ ಕಾಲ ಸಾವು-ಬದುಕಿನ ಮಧ್ಯೆ ಹೋರಾಡಿದ ದೀಪ್ತಿ ಶನಿವಾರ ಸಂಜೆ ಸಾವನ್ನಪ್ಪಿದ್ದಾಳೆ. ಇದನ್ನೂ ಓದಿ: ವಿಮಾನದಲ್ಲಿ ವೃದ್ಧನಿಗೆ ರಕ್ತಸ್ರಾವ ಬೆನ್ನಲೇ ತುರ್ತು ಭೂಸ್ಪರ್ಶ – ಚಿಕಿತ್ಸೆ ಫಲಿಸದೇ ಸಾವು

    ಸಾಯುವ ಮುನ್ನ ಆಕೆ “ನಾನು ನಿತೇಶ್‌ನನ್ನ ಪ್ರೀತಿಸುತ್ತಿದ್ದೆ. ನಮ್ಮಿಬ್ಬರ ಮಧ್ಯೆ ಜಗಳದಿಂದಾಗಿ ನಾನು ಈ ತೀರ್ಮಾನಕ್ಕೆ ಬಂದಿದ್ದೇನೆ” ಎಂದು ಡೆತ್‌ನೋಟ್ ಬರೆದಿದ್ದಾಳೆ. ಆರಂಭದಲ್ಲಿ ಕುದುರೆಮುಖ ಪೊಲೀಸರು ದೂರು ಪಡೆಯಲು ನಿರಾಕರಿದ್ದಾರೆ. ಚಿಕ್ಕಮಗಳೂರು ಎಸ್ಪಿ ತರಾಟೆಗೆ ತೆಗೆದುಕೊಂಡ ನಂತರ ಕುದುರೆಮುಖ ಪೊಲೀಸರು ದೂರು ಸ್ವೀಕರಿಸಿದ್ದಾರೆ. ಆದರೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಿತೇಶ್‌ನನ್ನ ಬಂಧಿಸಿಲ್ಲ ಎಂದು ಬಾಲಕಿಯ ಪೋಷಕರು ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

    ನಿತೇಶ್ ವಿರುದ್ಧ ಕುದುರೆಮುಖ ಠಾಣೆಯಲ್ಲಿ ಪ್ರಕರಣ (FIR) ದಾಖಲಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆ – ಪತಿಯಿಂದಲೇ ಕೊಲೆಯಾದ ಶಂಕೆ

    ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆ – ಪತಿಯಿಂದಲೇ ಕೊಲೆಯಾದ ಶಂಕೆ

    ಬೆಂಗಳೂರು: ಇಲ್ಲಿನ ದೀಪಾಂಜಲಿ ನಗರದಲ್ಲಿ (Deepanjali Nagar) ಫ್ಯಾನಿಗೆ ನೇಣುಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆಯಾಗಿದೆ.

    ದೀಪಾಂಜಲಿ ನಗರದ ಮನೆಯೊಂದರಲ್ಲಿ ಘಟನೆ ನಡೆದಿದೆ. ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಝೈದಾ (22) ಶವ ಪತ್ತೆಯಾಗಿದ್ದು, ಪತಿಯಿಂದಲೇ ಪತ್ನಿ ಕೊಲೆಯಾಗಿರುವ ಶಂಕೆ ವ್ಯಕ್ಯವಾಗಿದೆ. ಇದನ್ನೂ ಓದಿ: ಬಾಯ್‌ಫ್ರೆಂಡ್ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳೋಕೆ ಮನೆಯ ಒಡವೆ ಕದ್ದ ಯುವತಿ ಅಂದರ್

    ಪತಿ ಸೈಫ್ ಅಲಿ ಪತ್ನಿ ಮೇಲೆ ಹಲ್ಲೆ ನಡೆಸಿ, ಕೈ ಕೊಯ್ದು, ನೇಣು ಬಿಗಿದಿದ್ದಾನೆ ಎಂದು ಝೈದಾ ಪೋಷಕರು ಆರೋಪಿಸಿದ್ದಾರೆ. ಇದನ್ನೂ ಓದಿ: ರಾಜಕಾರಣಿಗಳು ನಟಿಯರ ಬಟ್ಟೆ ಬಗ್ಗೆ ಕಾಮೆಂಟ್ ಮಾಡೋದು ಬಿಡಲಿ: ಸ್ವರಾ ಭಾಸ್ಕರ್

    ಕಳೆದ ಮೂರು ವರ್ಷಗಳ ಹಿಂದೆ ಸೈಫ್ ಅಲಿಯೊಂದಿಗೆ ಝೈದಾಳ ವಿವಾಹವಾಗಿತ್ತು. ಈ ಸಂಬಂಧ ಬ್ಯಾಟರಾಯನಪುರ ಪೊಲೀಸ್ (Police) ಠಾಣೆಯಲ್ಲಿ ಪತಿ ವಿರುದ್ಧ ಕೇಸ್ ದಾಖಲಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮಂಡ್ಯದಲ್ಲಿ ಮಲಗಿದ್ದಲ್ಲೇ ಒಂಟಿ ಮಹಿಳೆ ಸುಟ್ಟು ಕರಕಲು

    ಮಂಡ್ಯದಲ್ಲಿ ಮಲಗಿದ್ದಲ್ಲೇ ಒಂಟಿ ಮಹಿಳೆ ಸುಟ್ಟು ಕರಕಲು

    ಮಂಡ್ಯ: ಒಂಟಿ ಮಹಿಳೆಯ (Wpmen) ಮೃತದೇಹ ಮಲಗಿದ್ದಲ್ಲೇ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಮಂಡ್ಯ (Mandya) ಜಿಲ್ಲೆಯ ಮದ್ದೂರು ತಾಲೂಕಿನ ಮಾರಸಿಂಗನಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

    ಮೇಲ್ನೋಟಕ್ಕೆ ಇದು ಶಾರ್ಟ್ ಸರ್ಕ್ಯೂಟ್‌ನಂತೆ ಕಂಡುಬಂದಿತ್ತು. ಈ ಕುರಿತು ಪ್ರಾಥಮಿಕ ತನಿಖೆ ನಡೆಸಿದಾಗ ಮೃತರ ಚಿನ್ನಾಭರಣ ಸೇರಿ ಬೆಲೆ ಬಾಳುವ ವಸ್ತುಗಳು ಕಳುವಾಗಿದ್ದು, ಕೊಲೆ ಎಸಗಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಶಾಲಾ ಮಕ್ಕಳಿಗೆ ಎನ್‌ಇಪಿ ತರುವ ಬದಲು ಡ್ರಗ್ಸ್ ದಂಧೆ ತಡೆಯಲಿ: ಕುಮಾರಸ್ವಾಮಿ

    ಮಾರಸಿಂಗನಹಳ್ಳಿ ಗ್ರಾಮದ ಪ್ರೇಮಾ (42) ಎಂಬಾಕೆ ಮೃತಪಟ್ಟ ಮಹಿಳೆ. ಪ್ರೇಮಾಳ ಗಂಡ 10 ವರ್ಷಗಳ ಹಿಂದೆಯೇ ಅನಾರೋಗ್ಯದಿಂದ ಮೃತಪಟ್ಟಿದ್ದರು. ಒಬ್ಬನೇ ಮಗ ಹಾಗೂ ಸೊಸೆ ಬೆಂಗಳೂರಿನಲ್ಲಿ ವಾಸವಿದ್ದಾರೆ. ಹೀಗಾಗಿ ಪ್ರೇಮ ಊರಿನಲ್ಲಿ ಒಂಟಿಯಾಗಿ ವಾಸವಿದ್ದರು. ಇದನ್ನೂ ಓದಿ: ಮ್ಯೂಸಿಕ್‌ ಸೌಂಡ್‌ ಕಡಿಮೆ ಮಾಡಿ ಎಂದಿದ್ದಕ್ಕೆ ಸೇನಾಧಿಕಾರಿ ಕಾರಿಗೆ ಬೆಂಕಿ ಇಟ್ಟವರ ಹೋಟೆಲ್‌ಗೆ ಬಿತ್ತು ಬೀಗ

    ಶನಿವಾರ ಊರಿಗೆ ಬಂದಿದ್ದ ಮಗ ಸೊಸೆ ಸೋಮವಾರ ಬೆಳಿಗ್ಗೆಯಷ್ಟೇ ವಾಪಸ್ಸಾಗಿದ್ರು. ಮಂಗಳವಾರ ಬೆಳಿಗ್ಗೆ ಅಕ್ಕಪಕ್ಕದ ಮನೆಯವರು ಎಂದಿನಂತೆ ಎದ್ದು ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿದ್ದರು. ಈ ವೇಳೆ ಪ್ರೇಮಾ ಮನೆಯಿಂದ ದಟ್ಟ ಹೊಗೆ ಬರ್ತಿತ್ತು. ಬೆಂಕಿಯನ್ನು ನಂದಿಸಲು ಅಂತ ಒಳಗೆ ತೆರಳಿದವರಿಗೆ ಶಾಕ್ ಕಾದಿತ್ತು. ರೂಮಿನಲ್ಲಿ ಪ್ರೇಮ ಮಲಗಿದ್ದ ಮಂಚಕ್ಕೆ ಬೆಂಕಿ ಬಿದ್ದಿದ್ದು, ಅಷ್ಟರಲ್ಲಿ ಮೃತ ದೇಹ ಭಾಗಶಃ ಸುಟ್ಟು ಕರಕಲಾಗಿತ್ತು.

    ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರಿಗೆ ತನಿಖೆ (Police Investigation) ವೇಳೆ ಗೊಂದಲಗಳು ಎದುರಾಗಿತ್ತು. ಹಿಂದೊಮ್ಮೆ ಅದೇ ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿದ್ದರಿಂದ ಅದೇ ಸಮಸ್ಯೆ ಆಗಿರಬಹುದಾ ಅನ್ನೋ ಪ್ರಶ್ನೆ ಉದ್ಭವಿಸಿತ್ತು. ಬಳಿಕ ವಿಧಿವಿಜ್ಞಾನ ಪ್ರಯೋಗಾಲಯ ತಂಡ ಹಾಗೂ ಕೆಇಬಿ ಸಿಬ್ಬಂದಿಯೊಂದಿಗೆ ಸಮಾಲೋಚನೆ ನಡೆಸಿ ಕೆಲವು ಸಾಕ್ಷ್ಯಗಳನ್ನ ಕಲೆ ಹಾಕಿದ್ರು.

    ಮನೆಯ ಬೀರು ಬಾಗಿಲು ತೆರೆದಿತ್ತು. ಬಟ್ಟೆಗಳು ಚಲ್ಲಾಪಿಲ್ಲಿ ಆಗಿದ್ದವು. ಅದ್ರಲ್ಲಿದ್ದ ಸುಮಾರು 100 ಗ್ರಾಮ್ ಚಿನ್ನಾಭರಣ, ಒಂದು ಲ್ಯಾಪ್‌ಟಾಪ್ ಕಳುವಾಗಿದೆ. ಈ ಹಿನ್ನೆಲೆಯಲ್ಲಿ ಕೊಲೆ ಶಂಕೆ ವ್ಯಕ್ತವಾಗಿದೆ. ಸದ್ಯ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಪೊಲೀಸರು ವರದಿಗಾಗಿ ಕಾಯುತ್ತಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮದ್ವೆಗೆ ಮುಂಚೆನೇ ಮಗು- ಬಾತ್‌ರೂಂ ಕಿಟಕಿಯಿಂದ ಶಿಶು ಎಸೆದ 20ರ ಯುವತಿ!

    ಮದ್ವೆಗೆ ಮುಂಚೆನೇ ಮಗು- ಬಾತ್‌ರೂಂ ಕಿಟಕಿಯಿಂದ ಶಿಶು ಎಸೆದ 20ರ ಯುವತಿ!

    ನವದೆಹಲಿ: ಮದುವೆಯಾಗದೇ (Marriage) ಮಗುವಿಗೆ ಜನ್ಮ ನೀಡಿದ 20 ವರ್ಷದ ಯುವತಿ ಸಾಮಾಜಿಕ ಕಳಂಕಕ್ಕೆ ಹೆದರಿ ಅಪಾರ್ಟ್ಮೆಂಟ್‌ನ ಬಾತ್‌ರೂಮ್ ಕಿಟಕಿಯಿಂದ ಮಗುವನ್ನು ಎಸೆದು ಕೊಂದಿರುವ ಘಟನೆ ಪೂರ್ವ ದೆಹಲಿಯ ನ್ಯೂಅಶೋಕ್ ವಿಹಾರದಲ್ಲಿ ನಡೆದಿದೆ.

    ನೋಯ್ಡಾದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಯುವತಿ, ಸೋಮವಾರ ಮಗುವಿಗೆ ಜನ್ಮ ನೀಡಿದ್ದಾಳೆ. ನಂತರ ಸಾಮಾಜಿಕ ಕಳಂಕಕ್ಕೆ (Social Stigma) ಹೆದರಿ ಮಗುವನ್ನು ತಾನು ವಾಸಿಸುತ್ತಿದ್ದ ಜೈ ಅಂಬೆ ಅಪಾರ್ಟ್ಮೆಂಟ್‌ನ ಬಾತ್‌ರೂಮ್ ಕಿಟಕಿಯಿಂದ ಎಸೆದು ಕೊಂದಿದ್ದಾಳೆ. ಇದೀಗ ಪೊಲೀಸರಿಗೆ (Police) ಸಿಕ್ಕಿಬಿದ್ದಿದ್ದಾಳೆ. ಇದನ್ನೂ ಓದಿ: ಮುದ್ದಿನ ಶ್ವಾನ ಹುಡುಕಿಕೊಡಿ- 10 ಸಾವಿರ ಬಹುಮಾನ ಘೋಷಿಸಿದ ಕುಟುಂಬ!

    ಮಗು ರಸ್ತೆಯಲ್ಲಿ ಬಿದ್ದಿದ್ದನ್ನು ಕಂಡು ಸ್ಥಳೀಯರು ನೋಯ್ಡಾದ ಮೆಟ್ರೋ ಆಸ್ಪತ್ರೆಗೆ (Metro Hospital) ಕರೆದೊಯ್ದರು, ಹೆಚ್ಚಿನ ಚಿಕಿತ್ಸೆಗಾಗಿ ಎಲ್‌ಬಿಎಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅಷ್ಟರಲ್ಲಿ ಮಗು ಮೃತಪಟ್ಟಿದ್ದು. ನಂತರ ಶಿಶು ಪತ್ತೆಯಾದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸ್ ಉಪ ಆಯುಕ್ತ (ಪೂರ್ವ) ಅಮೃತ ಗುಗುಲೋತ್, ರಕ್ತದ ಕಲೆಗಳ ಜಾಡು ಹಿಡಿದು ಆರೋಪಿ ಯುವತಿಯನ್ನ ಬಂಧಿಸುವಲ್ಲಿ ಯಶಸ್ವಿಯಾದರು. ಇದನ್ನೂ ಓದಿ: ದಿಢೀರ್‌ ಉರುಳಿದ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್‌ – ತಾಯಿ, ಮಗು ದುರ್ಮರಣ

    ಬಳಿಕ ತನಿಖೆಯಲ್ಲಿ ತಾನು ಅವಿವಾಹಿತೆ, ಸಾಮಾಜಿಕ ಕಳಂಕಕ್ಕೆ ಹೆದರಿ ಮಗುವನ್ನು ಬಾತ್‌ರೂಮಿನ ಕಿಟಕಿಯಿಂದ ಎಸೆದಿದ್ದಾಗಿ ಒಪ್ಪಿಕೊಂಡಿದ್ದಾಳೆ. ಆರೋಪಿ ಯುವತಿ ವಿರುದ್ಧ ಐಪಿಸಿ (IPC) ಸೆಕ್ಷನ್ 302 (ಕೊಲೆ), 201 ಅಪರಾಧದ ಸಾಕ್ಷಿಗಳನ್ನು ಮರೆಮಾಚುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಯುವತಿಯನ್ನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಪೊಲೀಸರು ಕಣ್ಗಾವಲು ಇರಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಗಂಡನೊಂದಿಗೆ ಸೇರಿ ಪ್ರಿಯಕರನ ಹತ್ಯೆ – ಹೆಣದ ಜೊತೆಯೇ ತ್ರಿಬಲ್ ರೈಡಿಂಗ್

    ಗಂಡನೊಂದಿಗೆ ಸೇರಿ ಪ್ರಿಯಕರನ ಹತ್ಯೆ – ಹೆಣದ ಜೊತೆಯೇ ತ್ರಿಬಲ್ ರೈಡಿಂಗ್

    ಬೆಂಗಳೂರು: ಪ್ರಿಯಕರನಿಗಾಗಿ (Lover) ಗಂಡನನ್ನೇ ಮನೆ ಬಿಡಿಸಿದ್ದ ಪತ್ನಿ, ಕೊನೆಗೆ ಸುಪಾರಿ ಕೊಟ್ಟು ಪ್ರಿಯಕರನನ್ನೇ ಹತ್ಯೆ ಮಾಡಿದ್ದಾಳೆ. ಬಳಿಕ ಬೈಕ್‌ನಲ್ಲಿ ಕಿಲೋಮೀಟರ್ ದೂರ ಮೃತದೇಹ ಸಾಗಿಸಿ ಪೊಲೀಸರಿಂದ ಬಚಾವ್ ಆಗಲು ಪ್ಲಾನ್ ಮಾಡಿದ್ದ ಖತರ್ನಾಕ್ ದಂಪತಿ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾರೆ.

    ಹೊಸ ವರ್ಷದ ಮಾರನೇ ದಿನವೇ (ಜನವರಿ 2) ಪತಿ-ಪತ್ನಿ ಇಬ್ಬರೂ ಕೊಲೆ ಮಾಡಿ ಗುರುತು ಪತ್ತೆ ಆಗದಂತೆ ಮಾಡಿ, ಬೆಂಗಳೂರಿನಿಂದ ಶಿಕಾರಿಪುರಕ್ಕೆ ಹಾರಿದ್ದಾರೆ. ಆದ್ರೆ ಪೊಲೀಸರಿಂದ ಬಚಾವ್ ಆಗಿ ಹೋದ್ವಿ ಅಂದುಕೊಂಡು ಶಿವಮೊಗ್ಗ ಸುತ್ತುತ್ತಿದ್ದವರನ್ನು ಎಲೆಕ್ಟ್ರಾನಿಕ್‌ ಸಿಟಿ ಪೊಲೀಸರು (Electronic City Police) ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ರೀನಾ ಹಾಗೂ ಕೊಲೆಯಾದ ನಿಬಾಶೀಶ್ ಪಾಲ್ ನಡುವೆ ಅಕ್ರಮ ಸಂಬಂಧ ಇತ್ತು. ಹೆಂಡತಿಯ ಅಕ್ರಮ ಸಂಬಂಧ ಆಟ ನೋಡಲಾರದೇ ಪತಿ ಸ್ವಂತ ಊರು ಉತ್ತರಪ್ರದೇಶಕ್ಕೆ ಹೋಗಿದ್ದ. ಆ ನಂತರ ಹಣದ ಆಸೆಗೆ ಬಿದ್ದ ಮೃತ ನಿಬಾಶೀಶ್ ಪಾಲ್ ರೀನಾಳನ್ನ ವೇಶ್ಯಾವಾಟಿಕೆ ಮಾಡಿ ಹಣ ತಂದುಕೊಡುವಂತೆ ಪೀಡಿಸುತ್ತಿದ್ದ, ಚಿತ್ರಹಿಂಸೆ ಕೊಡಲು ಶುರು ಮಾಡಿದ್ದ. ಇದನ್ನೂ ಓದಿ: 15 ವರ್ಷದಿಂದ ಮನೆಗಳ್ಳತನ – ಫಿಂಗರ್ ಫ್ರಿಂಟ್‌ನಿಂದ ತಗಲಾಕಿಕೊಂಡ ಖತರ್ನಾಕ್ ನೇಪಾಳಿ ಗ್ಯಾಂಗ್

    ಪ್ರಿಯಕರನ ಕಿರುಕುಳ ತಾಳಲಾರದೇ ರೀನಾ ತನ್ನ ಗಂಡನನ್ನ ಉತ್ತರಪ್ರದೇಶದಿಂದ ಕರೆಸಿಕೊಂಡು ಪಾಲ್ ಕೊಲೆಗೆ ಮುಹೂರ್ತ ಫಿಕ್ಸ್ ಮಾಡಿದ್ದಾಳೆ. ಮೊದಲೇ ಕುದಿಯುತ್ತಿದ್ದ ಪತಿ ಗಂಗೇಶ್ ಹೆಂಡತಿಯೊಂದಿಗೆ ಸೇರಿ ಸೀರೆಯನ್ನ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದಾನೆ. ಬಳಿಕ ಯಾರಿಗೂ ಗೊತ್ತಾಗದೇ ಹಾಗೆ ಮಾಡಲು ಸ್ನೇಹಿತ ಬಿಜೋಯಿಸ್ ಸಹಾಯದಿಂದ ಹೆಣವನ್ನು ಬೈಕ್‌ನಲ್ಲಿ ಇಟ್ಟುಕೊಂಡು ಕಿಲೋಮೀಟರ್ ದೂರ ಸಾಗಿಸಿ ನಿರ್ಜನ ಪ್ರದೇಶದಲ್ಲಿ ಎಸೆದು ಬಂದಿದ್ದಾರೆ.

    ಬೈಕ್ ಮಧ್ಯದಲ್ಲಿ ಹೆಣ ಇಟ್ಟುಕೊಂಡು ಸಾಗಿಸೋ ವೀಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಪಬ್ಲಿಕ್ ಟಿವಿಗೆ (Public TV) ಲಭ್ಯವಾಗಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಪೊಲೀಸರು (Police) ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನ ಬಂಧಿಸಿದ್ದಾರೆ. ಇದನ್ನೂ ಓದಿ: ಗುಜರಿ ಸೇರುವ ಬಸ್‍ಗಳಿಂದ ಬಿಎಂಟಿಸಿಗೆ ಕೋಟಿ ಕೋಟಿ ರೂ. ಆದಾಯ

    ಘಟನೆ ಸಂಬಂಧ ದಂಪತಿ ರೀನಾ, ಗಂಗೇಶ್, ಸ್ನೇಹಿತ ಬಿಜೋಯ್‌ನನ್ನ ಎಲೆಕ್ಟ್ರಾನಿಕ್‌ ಸಿಟಿ ಪೊಲೀಸರು ಬಂಧಿಸಿ ತನಿಖೆಗೆ ಒಳಪಡಿಸಿದಾಗ ಕೊಲೆಯ ಹಿಂದಿನ ರಹಸ್ಯ ಬಯಲಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಹೆಂಡ್ತಿ ಸಹಾಯದಿಂದ ಪಕ್ಕದ ಮನೆ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ

    ಹೆಂಡ್ತಿ ಸಹಾಯದಿಂದ ಪಕ್ಕದ ಮನೆ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ

    ಧಾರವಾಡ: ತನ್ನ ಹೆಂಡತಿ ಸಹಾಯದಿಂದಲೇ ಪಕ್ಕದ ಮನೆ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಧಾರವಾಡ ತಾಲೂಕಿನ ಅಮ್ಮಿನ ಬಾವಿ ಗ್ರಾಮದಲ್ಲಿ ನಡೆದಿದೆ.

    ಕಾಮುಕ ಮೈಲಾರಪ್ಪ ಚಿಕ್ಕುಂಬಿ ಅದೇ ಗ್ರಾಮದ ತನ್ನ ಪಕ್ಕದ ಮನೆಯ 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈ ಕೃತ್ಯಕ್ಕೆ ಅವನ ಹೆಂಡತಿ ಲಕ್ಷ್ಮೀ ಕೂಡ ಸಹಾಯ ಮಾಡಿದ್ದಾಳೆ ಎಂದು ಆರೋಪಿಸಿ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ (Dharwad Rural Police) ಪೋಕ್ಸೊ ಕಾಯ್ದೆಯಡಿ (POCSO Act) ಕೇಸ್ ದಾಖಲಾಗಿದೆ. ಇದನ್ನೂ ಓದಿ: ಸಾಹಿತ್ಯ ಸಮ್ಮೇಳನ ವಿರೋಧಿಸಿ ಬೆಂಗಳೂರಲ್ಲಿ ಜನಸಾಹಿತ್ಯ ಸಮ್ಮೇಳನ: ಪ್ರೊ.ಪುರುಷೋತ್ತಮ್‌ ಬಿಳಿಮಲೆ

    ಮೈಲಾರಪ್ಪ ಚಿಕ್ಕುಂಬಿ ತನ್ನ ಪಕ್ಕದ ಮನೆಯಲ್ಲಿದ್ದ 17ರ ಬಾಲಕಿ ಮೇಲೆ ಲೈಂಗಿಕ ತೃಷೆ ತೀರಿಸಿಕೊಳ್ಳಲು ತನ್ನ ಮನೆಗೆ ಕರೆದುಕೊಂಡು ಬರುವಂತೆ ಪತ್ನಿ ಲಕ್ಷ್ಮೀಗೆ ಹೇಳಿದ್ದಾನೆ. ನಂತರ ಲಕ್ಷ್ಮೀ ಆ ಬಾಲಕಿಯನ್ನ ಪುಸಲಾಯಿಸಿ ತನ್ನ ಮನೆಗೆ ಕರೆದುಕೊಂಡು ಬಂದು ಲೈಂಗಿಕ ದೌರ್ಜನ್ಯ ಎಸಗಲು ಸಹಾಯ ಮಾಡಿದ್ದಾಳೆ. ಇದನ್ನೂ ಓದಿ: ಶೀಘ್ರವೇ ಸಂಪುಟ ವಿಸ್ತರಣೆ – ಈಶ್ವರಪ್ಪ, ರಮೇಶ್ ಜಾರಕಿಹೊಳಿ ಸಚಿವ ಸ್ಥಾನದ ಬಗ್ಗೆ ಸಿಎಂ ಸ್ಪಷ್ಟನೆ

    ಈ ವಿಷಯ ತಿಳಿದ ಸಂತ್ರಸ್ತ ಬಾಲಕಿಯ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸಂತ್ರಸ್ತೆ ಹೇಳಿಕೆ ಆಧರಿಸಿ ಆರೋಪಿಗಳ ವಿರುದ್ಧ ಪೋಕ್ಸೊ ಕೇಸ್ ದಾಖಲಿಸಲಾಗಿದೆ. ಸದ್ಯ ಪತಿ-ಪತ್ನಿ ಇಬ್ಬರೂ ಪರಾರಿಯಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ನಡೆಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಜೊಲ್ಲೆ ಒಡೆತನದ ಬ್ಯಾಂಕ್‌ಗೆ ಕನ್ನ – 20 ಲಕ್ಷ ನಗದು, 40 ಲಕ್ಷ ಚಿನ್ನಾಭರಣ ಕಳವು

    ಜೊಲ್ಲೆ ಒಡೆತನದ ಬ್ಯಾಂಕ್‌ಗೆ ಕನ್ನ – 20 ಲಕ್ಷ ನಗದು, 40 ಲಕ್ಷ ಚಿನ್ನಾಭರಣ ಕಳವು

    ಧಾರವಾಡ: ಸಚಿವೆ ಶಶಿಕಲಾ ಜೊಲ್ಲೆ (Shashikala Jolle) ಹಾಗೂ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಒಡೆತನದ ಶ್ರೀ ಬೀರೇಶ್ವರ ಸಹಕಾರಿ ಬ್ಯಾಂಕ್‌ನಲ್ಲಿ (Shri Beereshwar Co-Op Credit Society) ಜನವರಿ 1ರ ತಡರಾತ್ರಿ ಕಳ್ಳತನವಾಗಿದೆ.

    ಧಾರವಾಡದ (Dharwad) ಕೋರ್ಟ್ ವೃತ್ತದ ಬಳಿ ಇರುವ ಬ್ಯಾಂಕ್‌ಗೆ ಖದೀಮರು ನಿನ್ನೆ ಕನ್ನ ಹಾಕಿದ್ದಾರೆ. ಬ್ಯಾಂಕ್‌ನಲ್ಲಿದ್ದ ಸುಮಾರು 20 ಲಕ್ಷ ನಗದು ಹಾಗೂ 40 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದೊಯ್ದಿದ್ದಾರೆ. ಇದನ್ನೂ ಓದಿ: ಪಂಜಾಬ್‌ ಸಿಎಂ ಭಗವಂತ್‌ ಮಾನ್‌ ಮನೆ ಸಮೀಪ ಬಾಂಬ್‌ ಪತ್ತೆ – ಸ್ಥಳಕ್ಕೆ ದೌಡಾಯಿಸಿದ ಬಾಂಬ್‌ ನಿಷ್ಕ್ರಿಯ ದಳ 

    ಖದೀಮರು ತಮ್ಮ ಗುರುತು ಪತ್ತೆಯಾಗಬಾರದು ಎಂದು ಸಿಸಿಟಿವಿ (CCTV) ಹಾಗೂ ಬ್ಯಾಂಕ್‌ನಲ್ಲಿದ್ದ ದಾಖಲೆಗಳನ್ನೂ ಸುಟ್ಟು ಹಾಕಿದ್ದಾರೆ. ಸಿಸಿಟಿವಿಯ ಡಿವಿಆರ್ ಅನ್ನೂ ಹೊತ್ತೊಯ್ದಿದ್ದಾರೆ. ಇದನ್ನೂ ಓದಿ: ‘ವೀರ ಕಂಬಳ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ

    ಧಾರವಾಡದ ಶಹರ ಠಾಣೆ ಪೊಲೀಸರು ಹಾಗೂ ಎಸಿಪಿ ವಿಜಯಕುಮಾರ ತಳವಾರ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ದೂರು ದಾಖಲಿಸಿಕೊಂಡಿದ್ದಾರೆ. ಕಳ್ಳರಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • 3ನೇ ಮದುವೆಯಾದ್ರೂ 2ನೇ ಗಂಡನೊಂದಿಗೆ ಸಂಬಂಧ- ರೊಚ್ಚಿಗೆದ್ದು ಪತ್ನಿಯನ್ನೇ ಕೊಲೆಗೈದ ಮೂರನೇ ಪತಿ

    3ನೇ ಮದುವೆಯಾದ್ರೂ 2ನೇ ಗಂಡನೊಂದಿಗೆ ಸಂಬಂಧ- ರೊಚ್ಚಿಗೆದ್ದು ಪತ್ನಿಯನ್ನೇ ಕೊಲೆಗೈದ ಮೂರನೇ ಪತಿ

    ಲಕ್ನೋ: ತಾನು 3ನೇ ಮದುವೆಯಾಗಿದ್ರೂ (Marriage) 2ನೇ ಗಂಡನೊಂದಿಗೆ ಸಂಬಂಧ ಮುಂದುವರಿಸಿದ್ದಾಳೆ ಎಂದು ತನ್ನ ಪತ್ನಿಯನ್ನೇ ಕೊಲೆಗೈದಿರುವ (Murder) ಘಟನೆ ಗಾಜಿಯಾಬಾದ್‌ನಲ್ಲಿ (Ghaziabad) ನಡೆದಿದೆ.

    ಕೊಲೆ ಆರೋಪದ ಮೇಲೆ 3ನೇ ಪತಿಯನ್ನು ಪೊಲೀಸರು (Police) ಬಂಧಿಸಿದ್ದಾರೆ. ಬಳಿಕ ನಡೆದ ತನಿಖೆಯಲ್ಲಿ ಆಕೆ 3ನೇ ಮದುವೆಯಾಗಿದ್ದರೂ 2ನೇ ಗಂಡನೊಂದಿಗೆ ಸಂಬಂಧ ಹೊಂದಿದ್ದಳು. ಅದಕ್ಕಾಗಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಗಾಜಿಯಾಬಾದ್ ಪೊಲೀಸರು (Ghaziabad Police) ತಿಳಿಸಿದ್ದಾರೆ. ಇದನ್ನೂ ಓದಿ: ನಾನು ಫ್ಯೂಚರ್‌ನಲ್ಲಿ ಮದುವೆ ಆದರೆ ರಾಜಣ್ಣ ಥರ ಇರುತ್ತೀನಿ: ರೂಪೇಶ್ ಶೆಟ್ಟಿ

    ಏನಿದು ಘಟನೆ?: ಇದೇ ತಿಂಗಳ ಡಿಸೆಂಬರ್ 26ರಂದು ಗಾಜಿಯಾಬಾದ್‌ನ ಕಾಶ್ಕಿರಾಮ್ ಕಾಲೋನಿಯಲ್ಲಿ ಭವ್ಯ ಶರ್ಮಾ ಹೆಸರಿನ ಮಹಿಳೆ (Women) ಕೊಲೆಯಾಗಿತ್ತು. ಬಳಿಕ ಪತಿ ವಿನೋದ್ ಶರ್ಮಾನನ್ನ ಪೊಲೀಸರು ಬಂಧಿಸಿದ್ದರು. ವಿಚಾರಣೆ ನಡೆಸಿದಾಗ ಭವ್ಯ ಈಗಾಗಲೇ ಮೂರು ಮದುವೆಯಾಗಿದ್ದಳು ಎಂಬುದು ತಿಳಿದುಬಂದಿದೆ. ಯೋಗೇಂದ್ರ ಯಾದವ್ ಜೊತೆ ಬೇಬಿ ಎಂಬ ಹೆಸರಿನಲ್ಲಿ ಮೊದಲ ಮದುವೆಯಾಗಿದ್ದ ಭವ್ಯ ಈ ಸಂಬಂಧ ಮುರಿದುಕೊಂಡು ಅನೀಸ್ ಅನ್ಸಾರಿ ಜೊತೆ ಆಸಿಫಾ ಎಂಬ ಹೆಸರಿನಲ್ಲಿ 2ನೇ ಮದುವೆಯಾಗಿದ್ದಳು. ಕಳೆದ 5 ತಿಂಗಳ ಹಿಂದೆ ಈ ಸಂಬಂಧವನ್ನೂ ಕಡಿದುಕೊಂಡು ವಿನೋದ್ ಶರ್ಮಾನೊಂದಿಗೆ ಭವ್ಯ ಹೆಸರಿನಲ್ಲಿ ಮದುವೆಯಾಗಿದ್ದಳು.

    ಕೆಲ ದಿನಗಳ ವರೆಗೆ ಸಂಸಾರ ಚೆನ್ನಾಗಿಯೇ ಇತ್ತು. ವಿನೋದ್ ಶರ್ಮಾಗೆ ಮಕ್ಕಳಿಲ್ಲದ ಕಾರಣ 2ನೇ ಪತಿ ಅನೀಸ್ ಅನ್ಸಾರಿಯ ಮಗನನ್ನೇ ತನ್ನ ಮಗನೆಂದು ಭಾವಿಸಿದ್ದಳು. ಆಗಾಗ್ಗೆ ಮಗುವನ್ನು ನೋಡಿಕೊಂಡು ಬರುತ್ತಿದ್ದಳು. ಇದೇ ಡಿಸೆಂಬರ್ 24 ರಂದು ಇಂಧೋರ್‌ಗೆ ಹೋಗಿದ್ದ ಭವ್ಯ 2ನೇ ಪತಿಯೊಂದಿಗಿದ್ದುಕೊಂಡೇ 3ನೇ ಪತಿಗೆ ವೀಡಿಯೋ ಕಾಲ್‌ ಮಾಡಿದ್ದಳು. ಇದರಿಂದ ಸಿಟ್ಟಿಗೆದ್ದ ಪತಿ ಆಗಲೇ ಕೊಲೆಗೆ ಪ್ಲ್ಯಾನ್ ಮಾಡಿದ್ದಾನೆ. ಇದನ್ನೂ ಓದಿ: ತಾಯಿಗೆ ಸರ್ಪ್ರೈಸ್‌ ಕೊಡಲು ತೆರಳ್ತಿದ್ದಾಗಲೇ ದುರಂತ – ಪಂತ್ ಅಭಿಮಾನಿಗಳ ಆಕ್ರಂದನ

    ಬಳಿಕ ಆಕೆ ಮನೆಗೆ ಬಂದಾಗ ಮಗನನ್ನು ಹೊರಗೆ ಕಳುಹಿಸಿ ಹರಿತವಾದ ಚಾಕುವಿನಿಂದ ಚುಚ್ಚಿ-ಚುಚ್ಚಿ ಕೊಲೆ ಮಾಡಿದ್ದಾನೆ. ರಕ್ತದ ಕಲೆಗಳು ಕಾಣಬಾರದು ಅಂತಾ ಶುಚಿಗೊಳಿಸಿದ್ದಾನೆ. ಬಳಿಕ ಮಗ ಬಂದಾಗ ಭವ್ಯ ಮಲಗಿರೋದಾಗಿ ಹೇಳಿ ಸುಮ್ಮನಾಗಿಸಿದ್ದಾನೆ. ಒಂದು ದಿನವಾದ್ರೂ ಆಕೆ ಎಚ್ಚರವಾಗದ ಹಿನ್ನೆಲೆಯಲ್ಲಿ ಅಳಲು ಶುರು ಮಾಡಿದ್ದಾನೆ. ನಂತರ ಕೊಲೆಯಾಗಿರುವುದು ಗೊತ್ತಾಗಿ ಆತನನ್ನು ಬಂಧಿಸಿದ್ದಾರೆ ಎಂದು ಗಾಜಿಯಾಬಾದ್ ಪೊಲೀಸರು ಮಾಹಿತಿ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • 6 ವರ್ಷವಾದ್ರೂ ಮಕ್ಕಳಾಗಿಲ್ಲವೆಂದು ಪತ್ನಿಯ ಗುಪ್ತಾಂಗವನ್ನ ಬ್ಲೇಡ್‌ನಿಂದ ಕೊಯ್ದು ವಿಕೃತಿ!

    6 ವರ್ಷವಾದ್ರೂ ಮಕ್ಕಳಾಗಿಲ್ಲವೆಂದು ಪತ್ನಿಯ ಗುಪ್ತಾಂಗವನ್ನ ಬ್ಲೇಡ್‌ನಿಂದ ಕೊಯ್ದು ವಿಕೃತಿ!

    ಲಕ್ನೋ: ಮದುವೆಯಾಗಿ (Marriage) 6 ವರ್ಷ ಕಳೆದರೂ ಮಕ್ಕಳಾಗಿಲ್ಲ ಅಂತಾ ತನ್ನ ಪತ್ನಿಗೆ ಚಿತ್ರಹಿಂಸೆ ಕೊಟ್ಟು ವಿಕೃತಿ ಮೆರೆದಿರುವ ಘಟನೆ ಉತ್ತರಪ್ರದೇಶದ (Uttar Pradesh) ಲಕ್ನೋದಲ್ಲಿ ನಡೆದಿದೆ.

    ಪತ್ನಿಯೊಂದಿಗೆ ಅಸಹಜವಾಗಿ ವರ್ತಿಸಿರುವ ಪತಿ ಆಕೆಯ ಗುಪ್ತಾಂಗವನ್ನು ಬ್ಲೇಡ್‌ನಿಂದ ಕೊಯ್ದು ವಿಕೃತಿ ಮೆರೆದಿದ್ದಾನೆ. ಪತ್ನಿ ತೀವ್ರ ಗಾಯಗೊಂಡ ಬಳಿಕ ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಆರೋಪಿ ಪತಿಯನ್ನು ಲಕ್ನೋದ ಮೋಹನ್‌ಲಾಲ್‌ಗಂಜ್ ಪೊಲೀಸರು (Lucknow Police) ಬಂಧಿಸಿದ್ದಾರೆ. ಇದನ್ನೂ ಓದಿ: ಆಸ್ತಿ ವಿಚಾರಕ್ಕೆ ಯುವಕನ ಮೇಲೆ ಗುಂಡೇಟು – ಕ್ಷಣಮಾತ್ರದಲ್ಲಿ ತಪ್ಪಿದ ಅನಾಹುತ

    ಏನಿದು ಘಟನೆ?: ದಂಪತಿಗೆ ಮದುವೆಯಾಗಿ 6 ವರ್ಷಗಳಾದರೂ ಮಕ್ಕಳಿರಲಿಲ್ಲ. ಇದರಿಂದ ಸಿಟ್ಟಿಗೆದ್ದ ಪತಿ, ಪತ್ನಿಗೆ ಚಿತ್ರಹಿಂಸೆ ನೀಡಲು ಪ್ರಾರಂಭಿಸಿದ್ದ. ನಿನ್ನೆ ಮದ್ಯದ ಅಮಲಿನಲ್ಲಿದ್ದ ಪತಿ, ಆಕೆಯ ಮೇಲೆ ಅಸ್ವಾಭಾವಿಕವಾಗಿ ವರ್ತಿಸಿದ್ದಾನೆ. ಆಕೆ ವಿರೋಧಿಸಲು ಮುಂದಾದಾಗ ಆಕೆಯ ಗುಪ್ತಾಂಗ ಹಾಗೂ ಎದೆಯ ಭಾಗಕ್ಕೆ ಬ್ಲೇಡ್‌ನಿಂದ ಹಲ್ಲೆ ನಡೆಸಿದ್ದಾನೆ. ಪತಿಯ ಚಿತ್ರಹಿಂಸೆ ತಾಳಲಾರದೇ ಆಕೆ ತವರು ಮನೆಗೆ ಹೋಗಿದ್ದಾಳೆ. ಅಲ್ಲಿ ತನ್ನ ತಾಯಿಯೊಂದಿಗೆ ಘಟನೆ ಬಗ್ಗೆ ಹೇಳಿಕೊಂಡಿದ್ದಾಳೆ. ಬಳಿಕ ಆಕೆಯನ್ನು ಝಲ್ಕರಿ ಬಾಯಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಪತ್ನಿಯ ಸಹೋದರ ನೀಡಿದ ದೂರಿನ ಮೇರೆಗೆ ಕೇಸ್ (FIR) ದಾಖಲಿಸಿ ಕ್ರೂರಿ ಪತಿಯನ್ನ ಬಂಧಿಸಲಾಗಿದೆ. ಈ ಬಗ್ಗೆ ತನಿಖೆ ಮುಂದುವರಿಯುತ್ತಿದೆ ಎಂದು ದಕ್ಷಿಣ ವಲಯದ ಡಿಸಿಪಿ ರಾಹುಲ್ ರಾಜ್ ತಿಳಿಸಿದ್ದಾರೆ. ಇದನ್ನೂ ಓದಿ: ದೊಡ್ಮನೆಯಲ್ಲಿ ಹುಲಿವೇಷ: ಕುಣಿದು ಕುಪ್ಪಳಿಸಿದ ರೂಪೇಶ್ ಶೆಟ್ಟಿ

    Live Tv
    [brid partner=56869869 player=32851 video=960834 autoplay=true]