Tag: crime

  • ರಿಸೆಪ್ಷನ್‍ಗೂ ಮುನ್ನ ನವದಂಪತಿ ಶವವಾಗಿ ಪತ್ತೆ

    ರಿಸೆಪ್ಷನ್‍ಗೂ ಮುನ್ನ ನವದಂಪತಿ ಶವವಾಗಿ ಪತ್ತೆ

    ರಾಯ್‍ಪುರ್: ಆರತಕ್ಷತೆಗೂ ಮುನ್ನವೇ ನವದಂಪತಿಗಳು (couple) ಶವವಾಗಿ ಪತ್ತೆಯಾದ ಘಟನೆ ರಾಯ್‍ಪುರ್‍ನ, ತ್ರಿಕ್ರಪಾರ ಪೊಲೀಸ್ ಠಾಣಾ ವ್ಯಾಪ್ತಿಯ ಬ್ರಿಜ್‍ನಗರದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ದೇಹದ ಮೇಲೆ ಬಲವಾದ ಇರಿತದ ಗಾಯಗಳಾಗಿದ್ದು, ಇಬ್ಬರ ನಡುವೆ ಜಗಳವಾಗಿ ಪತಿ ಚಾಕುವಿನಿಂದ  ಇರಿದು ಕೊಲೆಗೈದಿದ್ದಾನೆ (Murder). ನಂತರ ಆತ್ಮಹತ್ಯೆ (Suicide) ಮಾಡಿಕೊಂಡಿರುವ ಬಗ್ಗೆ ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬಿಜೆಪಿಯಿಂದ ಪ್ರಣಾಳಿಕೆ ರಚನಾ ಕಾರ್ಯ ಚುರುಕು; ಜನರಿಂದ ಸಲಹೆ ಸಂಗ್ರಹಕ್ಕೆ ಚಾಲನೆ

    ಅಸ್ಲಾಂ (24) ಹಾಗೂ ಕಹ್ಕಶಾ ಬಾನೊ (22) ಭಾನುವಾರವಷ್ಟೇ ವಿವಾಹವಾಗಿದ್ದರು. ಮಂಗಳವಾರ ರಾತ್ರಿ ಆರತಕ್ಷತೆ ನಡೆಯಬೇಕಿತ್ತು. ಕಾರ್ಯಕ್ರಮಕ್ಕೆ ತಯಾರಾಗುತ್ತಿದ್ದಾಗ ವಧುವಿನ ಕಿರುಚಾಟದ ಧ್ವನಿ ಕೇಳಿ ವರನ ತಾಯಿ ಅಲ್ಲಿಗೆ ಹೋಗಿದ್ದಾರೆ. ಕೊಠಡಿ ಒಳಗಿನಿಂದ ಲಾಕ್ ಆಗಿತ್ತು. ಕುಟುಂಬದ ಸದಸ್ಯರು ಕರೆದರೂ ಪ್ರತಿಕ್ರಿಯೆ ಬರದಿದ್ದಾಗ, ಕಿಟಕಿಯಿಂದ ನೋಡಿದ್ದಾರೆ. ಆಗ ಇಬ್ಬರೂ ಪ್ರಜ್ಞಾಹೀನವಾಗಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡು ಪೊಲೀಸರಿಗೆ ತಿಳಿಸಿದ್ದಾರೆ.

    ಬಾಗಿಲು ಒಡೆದು ಒಳಗೆ ತೆರಳಿದ ಪೊಲೀಸರು (Police) ಮೃತ ದೇಹಗಳನ್ನು ಶವ ಪರೀಕ್ಷೆಗೆ ಕಳುಹಿಸಿ, ಚಾಕುವನ್ನು (Knife)  ವಶಕ್ಕೆ ಪಡೆದಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.  ಇದನ್ನೂ ಓದಿ: ರಾಜ್ಯದಲ್ಲಿ ಕೋವಿಡ್‌ನಿಂದ ಮೃತರಾದ ಕುಟುಂಬಕ್ಕೆ 446 ಕೋಟಿ ಪರಿಹಾರ ನೀಡಲಾಗಿದೆ: ಆರ್ ಅಶೋಕ್

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಐಫೋನ್‌ಗೆ ಕೊಡಲು ಹಣವಿಲ್ಲದೇ ಡೆಲಿವರಿ ಬಾಯ್ ಕತ್ತು ಕೊಯ್ದು ಕೊಲೆ

    ಐಫೋನ್‌ಗೆ ಕೊಡಲು ಹಣವಿಲ್ಲದೇ ಡೆಲಿವರಿ ಬಾಯ್ ಕತ್ತು ಕೊಯ್ದು ಕೊಲೆ

    ಹಾಸನ: ಬುಕ್ ಮಾಡಿದ್ದ ಐಫೋನ್‌ಗೆ (iPhone) ಕೊಡಲು ಹಣವಿಲ್ಲದೆ ಡೆಲಿವೆರಿ ಬಾಯ್‌ನ ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ಹಾಸನ (Hassan) ಜಿಲ್ಲೆ ಅರಸೀಕೆರೆ ಪಟ್ಟಣದ ಅಂಚೆಕೊಪ್ಪಲಿನಲ್ಲಿ ನಡೆದಿದೆ.

    ಫೆಬ್ರವರಿ 11 ರಂದು ಅಂಚೆಕೊಪ್ಪಲು ಸಮೀಪದ ರೈಲ್ವೆ ಟ್ರ‍್ಯಾಕ್ ಬಳಿ ಸುಟ್ಟ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆಯಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಅರಸೀಕೆರೆ ನಗರ ಪೊಲೀಸರು (Arsikere City Police) ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಆಸ್ತಿ ವಿಷಯಕ್ಕೆ ರೈತನ ಮೇಲೆ ಮಾರಣಾಂತಿಕ ಹಲ್ಲೆ – ಸ್ವಾಮೀಜಿ, ಬೆಂಬಲಿಗರ ಮೇಲೆ ಎಫ್‌ಐಆರ್

    ಕೊಲೆ ಆರೋಪಿ ಹೇಮಂತ್ ದತ್ತ (20) ಸಿಕ್ಕಿಬಿದ್ದಿದ್ದು, ಹೇಮಂತ್ ನಾಯ್ಕ (23) ಕೊಲೆಯಾದ ಯುವಕ ಎಂದು ಗುರುತಿಸಲಾಗಿದೆ. ಆರೋಪಿ ಹೇಮಂತ್ ದತ್ತ ಕೊಲೆ ಮಾಡಿ ಮೃತದೇಹವನ್ನು ನಾಲ್ಕು ದಿನ ಮನೆಯಲ್ಲೇ ಇಟ್ಟುಕೊಂಡಿದ್ದ. ಸದ್ಯ ಈ ಘಟನೆ ಅರಸೀಕೆರೆ ಪಟ್ಟಣದ ಜನರನ್ನು ಬೆಚ್ಚಿಬೀಳಿಸಿದೆ.

    ಏನಿದು ಘಟನೆ?
    ಮೃತ ಹೇಮಂತ್ ನಾಯ್ಕ ಇ-ಕಾರ್ಟ್ ಎಕ್ಸ್‌ಪ್ರೆಸ್‌ ನಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಆರೋಪಿ ಹೇಮಂತ್ ದತ್ತ ಇತ್ತೀಚೆಗೆ ಫ್ಲಿಪ್‌ಕಾರ್ಟ್‌ನಲ್ಲಿ (Flipkart) 46 ಸಾವಿರ ಮೌಲ್ಯದ ಸೆಕೆಂಡ್ ಹ್ಯಾಂಡ್ ಐಫೋನ್ ಬುಕ್ ಮಾಡಿದ್ದ. ಇದರಿಂದ ಹೇಮಂತ್ ನಾಯ್ಕ ಫೆಬ್ರವರಿ 7ರಂದು ಅರಸೀಕೆರೆ ಪಟ್ಟಣದ, ಲಕ್ಷ್ಮೀಪುರ ಬಡಾವಣೆಯಲ್ಲಿರುವ ಹೇಮಂತ್ ದತ್ತ ಮನೆಗೆ ಐಫೋನ್ ಡೆಲಿವರಿ ಕೊಡಲು ಬಂದಿದ್ದ. ಅಲ್ಲಿಗೆ ಬಂದೊಡನೆ ಹೇಮಂತ್ ದತ್ತ ಐಫೋನ್ ಬಾಕ್ಸ್‌ ಅನ್ನು ಪನ್ ಮಾಡುವಂತೆ ಹೇಳಿದ್ದ. ಅದಕ್ಕೆ ನಾಯ್ಕ ಓಪನ್ ಮಾಡಲು ಆಗಲ್ಲ. ಮಾಡಿದ್ರೆ ಹಿಂದಿರುಗಿಸಿಲು ಸಾಧ್ಯವಿಲ್ಲ, 46 ಸಾವಿರ ಹಣ ಕೊಡಿ ಎಂದು ಕೇಳಿದ್ದ.

    ನಂತರ ಹೇಮಂತ್ ದತ್ತ ಇಲ್ಲೇ ಕುಳಿತುಕೊ ಹಣ ಕೊಡುತ್ತೇನೆ ಎಂದು ಹೇಳಿ ಹೋಗಿದ್ದ. ಬಳಿಕ ಕೊಡಲು ಹಣವಿಲ್ಲದೇ ಮನೆಯೊಳಗೆ ಕುಳಿತು ಮೊಬೈಲ್ ನೋಡುತ್ತಿದ್ದ ಹೇಮಂತ್ ನಾಯ್ಕನನ್ನ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದ. ನಾಲ್ಕು ದಿನಗಳಾದರೂ ಮೃತದೇಹವನ್ನು ಮನೆಯಲ್ಲೇ ಇಟ್ಟುಕೊಂಡಿದ್ದ. ಫೆ.11 ರಂದು ಗೋಣಿಚೀಲದಲ್ಲಿ ಹೆಣ ತುಂಬಿಕೊಂಡು ಬೈಕ್‌ನಲ್ಲಿ ತೆಗೆದುಕೊಂಡು ಹೋಗಿ ಅಂಚೆಕೊಪ್ಪಲು ರೈಲ್ವೆ ಬ್ರಿಡ್ಜ್ ಬಳಿ ಪೆಟ್ರೋಲ್, ಸೀಮೆಎಣ್ಣೆ ಸುರಿದು ಮೃತದೇಹ ಸುಟ್ಟು ಹಾಕಿದ್ದ. ಈ ಸಂಬಂಧ ಅರಸೀಕೆರೆ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

    ಇದೇ ವೇಳೆ ಫೆ.7 ರಂದು ಕೆಲಸಕ್ಕೆ ಹೋಗಿದ್ದ ಸಹೋದರ ಮನೆ ಬಾರದ ಹಿನ್ನೆಲೆಯಲ್ಲಿ ಫೆ.8 ರಂದು ಹೇಮಂತ್ ನಾಯ್ಕ ಸಹೋದರ ಮಂಜ ನಾಯ್ಕ ಅರಸೀಕೆರೆ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಅನ್ವಯ ತನಿಖೆ ಆರಂಭಿಸಿದ ಪೊಲೀಸರು ಕೊನೆಗೂ ಪ್ರಕರಣ ಭೇದಿಸಿ, ಬೆಚ್ಚಿಬೀಳಿಸುವ ಸಂಗತಿಯನ್ನು ಬಯಲಿಗೆಳೆದಿದ್ದಾರೆ. ಇದನ್ನೂ ಓದಿ: ಕಾರಿನಲ್ಲಿ ಹೋಗುತ್ತಿದ್ದಾಗ ತನ್ನ ಅಜ್ಜಿಗೆ ಗುಂಡು ಹಾರಿಸಿದ 6ರ ಬಾಲಕಿ – ವೃದ್ಧೆ ಸಾವು

    ಆರೋಪಿ ಹೇಮಂತ್ ದತ್ತನನ್ನ ಬಂಧಿಸಿ ವಿಚಾರಣೆ ನಡೆಸಿದಾಗ, ಐಫೋನ್‌ಗೆ ಕೊಡಲು ಹಣವಿಲ್ಲದೇ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ತಿಳಿಸಿದ್ದಾರೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕಾರಿನಲ್ಲಿ ಹೋಗುತ್ತಿದ್ದಾಗ ತನ್ನ ಅಜ್ಜಿಗೆ ಗುಂಡು ಹಾರಿಸಿದ 6ರ ಬಾಲಕಿ – ವೃದ್ಧೆ ಸಾವು

    ಕಾರಿನಲ್ಲಿ ಹೋಗುತ್ತಿದ್ದಾಗ ತನ್ನ ಅಜ್ಜಿಗೆ ಗುಂಡು ಹಾರಿಸಿದ 6ರ ಬಾಲಕಿ – ವೃದ್ಧೆ ಸಾವು

    ವಾಷಿಂಗ್ಟನ್: ಆರು ವರ್ಷದ ಬಾಲಕಿಯೊಬ್ಬಳು ತನ್ನ ಅಜ್ಜಿಗೆ ಗುಂಡು ಹಾರಿಸಿದ ಪರಿಣಾಮ ವೃದ್ಧೆ ಮೃತಪಟ್ಟಿರುವ ಘಟನೆ ಅಮೆರಿಕದ (USA) ಫ್ಲೋರಿಡಾದಲ್ಲಿ ನಡೆದಿದೆ.

    ಚಲಿಸುತ್ತಿದ್ದ ಕಾರಿನ (Car) ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಬಾಲಕಿ ತನ್ನ 57 ವರ್ಷದ ಅಜ್ಜಿಗೆ ಗುಂಡು ಹಾರಿಸಿದ್ದಾಳೆ (US Gun Shoots) ಎಂದು ಫ್ಲೋರಿಡಾ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: RCB ನಾಯಕಿಯಾಗಿ ಸ್ಮೃತಿ ಮಂದಾನ ಆಯ್ಕೆ – ಕೊಹ್ಲಿ ವಿಶೇಷ ಸಂದೇಶ ಏನು?

    6 ವರ್ಷದ ಮೊಮ್ಮಗಳು ವಾಹನದ ಹಿಂಭಾಗದ ಸೀಟಿನಲ್ಲಿ ಬಂದೂಕು ಹಿಡಿದುಕೊಂಡು ಕೂತಿದ್ದಾಗ ಆಕಸ್ಮಿಕವಾಗಿ ಒಂದು ಗುಂಡು ಹಾರಿಸಿದ್ದಾಳೆ. ಇದರಿಂದ ಕಾರು ಓಡಿಸುತ್ತಿದ್ದ ತನ್ನ ಅಜ್ಜಿಯ ಬೆನ್ನಿಗೆ ಗುಂಡೇಟು ತಗುಲಿದೆ. ಆದರೂ ಅಜ್ಜಿ ಸುಧಾರಿಸಿಕೊಳ್ಳುತ್ತಲೇ ತುರ್ತು ಸಹಾಯವಾಣಿ ಸಂಖ್ಯೆ 911ಗೆ ಕರೆ ಮಾಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಸಹಾಯವಾಣಿ ಸಿಬ್ಬಂದಿ ಆಕೆಯನ್ನು ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ ಎಂದು ಉತ್ತರ ಬಂದರು ಪೊಲೀಸರು ತಿಳಿಸಿದ್ದಾರೆ.

    ಈ ಬಗ್ಗೆ ತನಿಖೆ ಪ್ರಾರಂಭಿಸಿದ್ದು, ಬಾಲಕಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಮಕ್ಕಳ ರಕ್ಷಣಾ ಕೇಂದ್ರದ ಅಧಿಕಾರಿಗಳು ಮಗುವಿನ ವಿಚಾರಣೆ ನಡೆಸಿದ್ದಾರೆ. ಬಳಿಕ ನಡೆದ ತನಿಖೆಯಲ್ಲಿ ಇದೊಂದು ಆಕಸ್ಮಿಕ ಘಟನೆ ಎಂಬುದು ತಿಳಿದುಬಂದಿದೆ. ಇದನ್ನೂ ಓದಿ: ಭಿನ್ನಮತ ಸ್ಫೋಟ – ಬಿಜೆಪಿಗೆ ಮಾಜಿ ಶಾಸಕ ಕಿರಣ್ ಕುಮಾರ್ ಗುಡ್‌ಬೈ

    ಈ ಘಟನೆ ಬಗ್ಗೆ ಪೊಲೀಸ್ ಮುಖ್ಯಸ್ಥ ಟಾಡ್ ಗ್ಯಾರಿಸನ್ ವಿಷಾದ ವ್ಯಕ್ತಪಡಿಸಿದ್ದಾರೆ. ಇದು ಬಂದೂಕು ಸುರಕ್ಷತೆಯ ಪ್ರಾಮುಖ್ಯತೆಗೆ ದುರದೃಷ್ಟಕರ ಉದಾಹರಣೆಯಾಗಿದೆ. ಮಕ್ಕಳ ಕೈಗೆ ಬಂದೂಕು ಸಿಗದಂತೆ ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದ್ದಾರೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನವ್ಯಶ್ರೀ ವಿಡಿಯೋ ಲೀಕ್ ಕೇಸ್ – ಚಾರ್ಜ್ ಶೀಟ್ ನಲ್ಲಿ ಕುಮಾರಕೃಪಾದ ರಹಸ್ಯ ಬಯಲು

    ನವ್ಯಶ್ರೀ ವಿಡಿಯೋ ಲೀಕ್ ಕೇಸ್ – ಚಾರ್ಜ್ ಶೀಟ್ ನಲ್ಲಿ ಕುಮಾರಕೃಪಾದ ರಹಸ್ಯ ಬಯಲು

    ಬೆಂಗಳೂರು: ಕಾಂಗ್ರೆಸ್ (Congress) ಕಾರ್ಯಕರ್ತೆ ನವ್ಯಶ್ರೀ ರಾವ್ (Navyashree R Rao) ಖಾಸಗಿ ವೀಡಿಯೋ (Private Video) ಲೀಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಗ್ರೌಂಡ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ.

    ತೋಟಗಾರಿಕೆ ಇಲಾಖೆ (Horticulture Department) ಸಹಾಯಕ ನಿರ್ದೇಶಕ ರಾಜ್‌ಕುಮಾರ್ ಟಾಕಳೆ ಮತ್ತು ಇತರ ಆರೋಪಿಗಳ ವಿರುದ್ಧ ಕೇಸ್ ದಾಖಲಾಗಿದೆ. A.1 ಆರೋಪಿಯಾಗಿ ರಾಜಕುಮಾರ್ ಟಾಕಳೆ, A.2 ಆರೋಪಿಯಾಗಿ ಖಾಸಗಿ ಪತ್ರಿಕೆಯೊಂದರ ಪತ್ರಕರ್ತ ಸೇರಿ 6 ಮಂದಿ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಲಾಗಿದೆ. ಇದನ್ನೂ ಓದಿ: ಕಿಡ್ನಾಪ್ ಮಾಡಿ ಗಣೇಶಪುರದ ಮಾವಿನ ತೋಪಿನಲ್ಲಿ ಕೂಡಿಹಾಕಿದ್ದ: ನವ್ಯಶ್ರೀ

    ಸಲ್ಲಿಕೆಯಾಗಿರುವ ಚಾರ್ಜ್ ಶೀಟ್ ನಲ್ಲಿ ಕುಮಾರಕೃಪಾದ ಕರ್ಮಕಾಂಡ ಬಯಲಾಗಿದೆ. ಸುಮಾರು ಒಂದೂವರೆ ವರ್ಷ ಕುಮಾರಕೃಪಾದ ರೂಮಿನ ಬೀಗ ನವ್ಯಶ್ರೀ ಬಳಿಯೇ ಇತ್ತು. ಆಕೆಯನ್ನ ತನ್ನ ಹೆಂಡತಿ ಎಂದು ಅಲ್ಲಿಗೆ ಕರೆದೊಯ್ದಿದ್ದ ರಾಜಕುಮಾರ್ (Rajkumar Takale) ಆಕೆಯ ವೀಡಿಯೋ ಮಾಡಿ ಬಹಿರಂಗ ಮಾಡಿದ್ದಾನೆ ಎನ್ನಲಾಗಿದೆ. ಇದನ್ನೂ ಓದಿ: ನಾನು ಕಷ್ಟಕ್ಕೆ ಸ್ಪಂದಿಸಿ ಮನೆಯಲ್ಲಿ ಇಟ್ಕೋತೀನಿ ಅಂದಿದ್ದೆ – ಆದ್ರೆ ನವ್ಯಶ್ರೀ 50ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ರು: ಟಾಕಳೆ ಆರೋಪ

    ವೀಡಿಯೋ ರಿಲೀಸ್ ಮಾಡಿದ ಬಳಿಕ ಆಕೆ ನನಗೆ ಗೊತ್ತೇ ಇಲ್ಲ, ಆಕೆ ನನ್ನ ಹೆಂಡತಿ ಅಲ್ಲ, ಆಕೆಯೇ ವೀಡಿಯೋ ಮಾಡಿಕೊಂಡು ಬ್ಲಾಕ್ ಮೇಲ್ ಮಾಡ್ತಿದ್ದಾಳೆ ಎಂದು ಆರೋಪಿಸಿದ್ದಾನೆ. ಒಂದು ವೇಳೆ ರಾಜ್‌ಕುಮಾರ್ ಆಕೆ ತನ್ನ ಹೆಂಡತಿ ಅಲ್ಲ ಅನ್ನೋದಾದ್ರೆ ಗೆಸ್ಟ್ಹೌಸ್ ಬೀಗ ನವ್ಯಶ್ರೀಗೆ ಯಾಕೆ ಕೊಟ್ಟರು? ಇಲ್ಲಿ ರಾಜ್‌ಕುಮಾರ್ ಟಾಕಳೆ ಪ್ರೀ ಪ್ಲಾನ್ ಮಾಡಿಕೊಂಡಿರುವುದಾಗಿ ಚಾರ್ಜ್‌ಶೀಟ್‌ ನಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಟಾಕಳೆ ವಿರುದ್ಧ ಕೈ ಕಾರ್ಯಕರ್ತೆ ಅತ್ಯಾಚಾರ ಆರೋಪ – ನವ್ಯಶ್ರೀ ವೈದ್ಯಕೀಯ ತಪಾಸಣೆಗೆ ಕರೆದೊಯ್ದ ಪೊಲೀಸ್

    ಅಲ್ಲದೇ ರಾಜ್‌ಕುಮಾರ್ 2022ರ ಜುಲೈ 14ರಂದು ವೀಡಿಯೋ ರಿಲೀಸ್ ಮಾಡಿದ್ದ. ಆದರೆ ಜುಲೈ 12ರಂದೇ ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾಗಿತ್ತು. ಹಾಗಾಗಿ ಪತ್ರಕರ್ತನ ಜೊತೆ ಸೇರಿ ಕೃತ್ಯ ಎಸಗಿದ್ದಾನೆ. ಈ ಹಿನ್ನೆಲೆಯಲ್ಲಿ ಪತ್ರಕರ್ತನನ್ನೂ ಎ2 ಆರೋಪಿಯಾಗಿ ಪರಿಗಣಿಸಲಾಗಿದೆ. ಜೊತೆಗೆ 2020 ಡಿಸೆಂಬರ್ 18 ರಿಂದ 2021 ಜುಲೈವರೆಗೆ ನವ್ಯಶ್ರೀ ಕುಮಾರಕೃಪಾದಲ್ಲಿದ್ದರು ಎಂದು ಚಾರ್ಜ್ಶೀಟ್‌ನಲ್ಲಿ ತಿಳಿಸಲಾಗಿದೆ.

    ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕನಾಗಿದ್ದ ರಾಜಕುಮಾರ ಟಾಕಳೆ ಜವಳಿ ಸಚಿವ ಶ್ರೀಮಂತ್ ಪಾಟೀಲ್‌ರ ವಿಶೇಷ ಕರ್ಥವ್ಯಾಧಿಕಾರಿಯೂ ಆಗಿದ್ದ. ಅದರ ಐಡಿ ಕಾರ್ಡ್ ಬಳಿಸಿಕೊಂಡು ಕುಮಾರಕೃಪದಲ್ಲಿ ರೂಂ ಕೀ ಪಡೆದುಕೊಳ್ಳುತ್ತಿದ್ದ ಎಂದು ಚಾರ್ಜ್‌ಶೀಟ್‌ ನಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಅರ್ಧರಾತ್ರಿಯಲ್ಲಿ ಅತೃಪ್ತ ಶಾಸಕರ ಬಗ್ಗೆ ಕೈ ನಾಯಕರಿಗೆ ಮಾಹಿತಿ ಕೊಡ್ತಿದೆ – ಮುಂಬೈ ರಹಸ್ಯ ಬಿಚ್ಚಿಟ್ಟ ನವ್ಯಶ್ರೀ

    ಏನಿದು ಕೇಸ್?
    ಬೆಳಗಾವಿ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಾಜಕುಮಾರ ಟಾಕಳೆ ವಿರುದ್ಧ ಅತ್ಯಾಚಾರ, ಕಿಡ್ನಾಪ್, ಗರ್ಭಪಾತ, ಮೋಸ, ಮಹಿಳೆ ಮೇಲೆ ಹಲ್ಲೆ, ಅವಾಚ್ಯವಾಗಿ ನಿಂದಿಸುವುದು, ಜೀವ ಬೆದರಿಕೆ, ಗೌರವಕ್ಕೆ ಧಕ್ಕೆ ಹಾಗೂ ಖಾಸಗೀತನಕ್ಕೆ ಧಕ್ಕೆ ಆರೋಪ ಹಾಗೂ ಖಾಸಗಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿರುವ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತೆ ನವ್ಯಶ್ರೀ ವಿವಿಧ ಸೆಕ್ಷನ್ ಬೆಳಗಾವಿ ಎಪಿಎಂಸಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಆಧಾರ ಮೇಲೆ ಕೇಸ್ ದಾಖಲಾಗಿತ್ತು.

    ಇದಕ್ಕೆ ಪ್ರತಿಯಾಗಿ ನವ್ಯಶ್ರೀ ಅವರ ಕಷ್ಟಕ್ಕೆ ಸ್ಪಂದಿಸಿ ನಾನು ಮನೆಯಲ್ಲಿ ಇಟ್ಟುಕೊಳ್ಳುತ್ತೇನೆ ಅಂದಿದ್ದೆ. ಆದ್ರೆ ನವ್ಯಶ್ರೀ ಕಳೆದ 4 ವರ್ಷಗಳಿಂದ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ. 50 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ರು, ಈಗಾಗಲೇ 2 ಲಕ್ಷ ಹಣವನ್ನೂ ಪಡೆದಿದ್ದಾರೆ ಎಂದು ಪ್ರತಿದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ನವ್ಯಶ್ರೀಯನ್ನೂ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕಾಮುಕ ಟೆಕ್ಕಿ ಮೊಬೈಲ್‌ನಲ್ಲಿ ತನ್ನ ಪ್ರಿಯತಮೆಯದ್ದೂ ಸೇರಿ 208 ಖಾಸಗಿ ವೀಡಿಯೊಗಳು ಪತ್ತೆ..!

    ಕಾಮುಕ ಟೆಕ್ಕಿ ಮೊಬೈಲ್‌ನಲ್ಲಿ ತನ್ನ ಪ್ರಿಯತಮೆಯದ್ದೂ ಸೇರಿ 208 ಖಾಸಗಿ ವೀಡಿಯೊಗಳು ಪತ್ತೆ..!

    ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ (Social Media) ಯುವತಿಯರ ಪರಿಚಯ ಮಾಡಿಕೊಂಡು ವಂಚನೆ ಮಾಡಿರೋ ಪ್ರಕರಣದ ತನಿಖೆ (Investigation) ವೇಳೆ ಮತ್ತಷ್ಟು ಸ್ಫೋಟಕ ಮಾಹಿತಿಗಳು ಬಯಲಾಗಿವೆ.

    ಆರೋಪಿ ಕನ್ನಪಲ್ಲಿ ದಿಲ್ಲಿ ಪ್ರಸಾದ್‌ನ ನಿಜ ಬಣ್ಣ ಬಯಲಾಗಿದ್ದು, ಆರೋಪಿ ಮೊಬೈಲ್‌ನಲ್ಲಿ (Mobile) ಯುವತಿಯರ 208 ಖಾಸಗಿ ವೀಡಿಯೋಗಳು (Private Video) ಪತ್ತೆಯಾಗಿವೆ. ಅದರಲ್ಲಿ ಪ್ರಸಾದ್ ತಾನೇ ವೀಡಿಯೋ ಕಾಲ್ ಮಾಡಿ ರೆಕಾರ್ಡ್ ಮಾಡಿದ್ದಾನೆ ಎನ್ನಲಾದ 60 ವೀಡಿಯೋಗಳು ಇವೆ ಎಂದು ಪೊಲೀಸರು ತಿಳಿಸಿದ್ದಾರೆ. 

    ಇನ್ಸ್ಟಾಗ್ರಾಮ್‌ (Instagram) ಮೂಲಕ ಯುವತಿಯರನ್ನ ಪರಿಚಯ ಮಾಡಿಕೊಳ್ಳುತ್ತಿದ್ದ ಆಸಾಮಿ ನಂತರ ತನ್ನ ಅವಶ್ಯಕತೆಗಳನ್ನು ಪೂರೈಸುವಂತೆ ಬ್ಲಾಕ್‌ಮೇಲ್ ಮಾಡ್ತಿದ್ದ. ತನ್ನ ಪ್ರಿಯತಮೆ ಹಾಗೂ 6 ಯುವತಿಯರನ್ನ ಲೈಂಗಿಕ ಕ್ರಿಯೆಗಾಗಿ ಬಳಸಿಕೊಂಡಿದ್ದಾನೆ. ಲೈಂಗಿಕವಾಗಿ ಬಳಸಿಕೊಂಡ ನಂತರ ಯುವತಿಯರನ್ನ ಅವಾಯ್ಡ್ ಮಾಡಲು ಮುಂದಾಗಿದ್ದಾನೆ ಅನ್ನೋದು ತನಿಖೆಯಲ್ಲಿ ಗೊತ್ತಾಗಿದೆ. ಇದನ್ನೂ ಓದಿ: ವಿಡಿಯೋ ಕಾಲ್ ಮಾಡಿ ಹೆಂಡತಿ ತೋರಿಸದಿದ್ದಕ್ಕೆ ಸ್ನೇಹಿತನಿಗೆ ಚಾಕು ಇರಿತ

    ಪ್ರಚೋದನೆ ಮಾಡ್ತಿದ್ದ: ಟೆಕ್ಕಿ ಕಾಮುಕ ಯುವತಿಯರಿಗೆ ಸೆಕ್ಸ್ ವೀಡಿಯೋಗಳನ್ನ ಕಳುಹಿಸಿ ಅದೇ ರೀತಿ ವೀಡಿಯೋ ಮಾಡಿ ಕಳಿಸುವಂತೆ ಪ್ರಚೋದಿಸುತ್ತಿದ್ದ. ವಿವಿಧ ಆಂಗಲ್‌ನಲ್ಲಿ ವೀಡಿಯೋ ಕಳಿಸಲು ಹೇಳ್ತಿದ್ದ. ವೀಡಿಯೊ ಕಳಿಸದಿದ್ರೆ ಸೋಷಿಯಲ್ ಮೀಡಿಯಾದಲ್ಲಿ ನಗ್ನ ಫೋಟೋ, ವೀಡಿಯೋ ಹಾಕುವುದಾಗಿ ಬ್ಲಾಕ್ ಮೇಲ್ ಮಾಡ್ತಿದ್ದ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಪಾಗಲ್ ಪ್ರೇಮಿ ಕಾಟಕ್ಕೆ ಬೇಸತ್ತು UP ಮೂಲದ ದಂತ ವೈದ್ಯೆ ಆತ್ಮಹತ್ಯೆ

    ಇನ್ಸ್ಟಾಗ್ರಾಮ್‌ ನಲ್ಲಿ ಯುವತಿಯ ಹೆಸರಲ್ಲಿ ಅಕೌಂಟ್ ತೆರೆದು ಕೆಲಸ ಕೊಡಿಸುವುದಾಗಿ ವಂಚಿಸುತ್ತಿದ್ದ ಟೆಕ್ಕಿ ಪ್ರಸಾದ್, ತಾನು ಕೆಲಸ ಗಿಟ್ಟಿಸಲು ಮೈ ಮಾರಿಕೊಂಡಿದ್ದೇನೆ ಎಂದು ಹೇಳಿ ನಂಬಿಸ್ತಿದ್ದ. ಯುವತಿಯರ ರೀತಿ ಚಾಟ್ ಮಾಡಿ ನಗ್ನ ವೀಡಿಯೋ ಕಳಿಸಿಕೊಂಡು ಲೈಂಗಿಕ ಕ್ರಿಯೆಗೆ ಆಹ್ವಾನ ನೀಡ್ತಿದ್ದ. ಓಯೋ ರೂಂ ಗೆ ಕರೆಸಿ ಬಲವಂತವಾಗಿ ಅತ್ಯಾಚಾರ ಮಾಡಿರೋದು ಸೌತ್ ಈಸ್ಟ್ ಸೆನ್ ಪೊಲೀಸರ ವಿಚಾರಣೆಯಲ್ಲಿ ಗೊತ್ತಾಗಿದ್ದು, ತನಿಖೆ ಮುಂದುವರಿದಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ವಿಡಿಯೋ ಕಾಲ್ ಮಾಡಿ ಹೆಂಡತಿ ತೋರಿಸದಿದ್ದಕ್ಕೆ ಸ್ನೇಹಿತನಿಗೆ ಚಾಕು ಇರಿತ

    ವಿಡಿಯೋ ಕಾಲ್ ಮಾಡಿ ಹೆಂಡತಿ ತೋರಿಸದಿದ್ದಕ್ಕೆ ಸ್ನೇಹಿತನಿಗೆ ಚಾಕು ಇರಿತ

    ಬೆಂಗಳೂರು: ವಿಡಿಯೋ ಕಾಲ್ (Video Call) ಮಾಡಿ ತನ್ನ ಹೆಂಡತಿಯನ್ನ ತೋರಿಸದಿದ್ದಕ್ಕೆ ಸಹೋದ್ಯೋಗಿಯೊಬ್ಬ ಸ್ನೇಹಿತನಿಗೆ ಚಾಕು ಇರಿದಿರುವ ವಿಚಿತ್ರ ಘಟನೆ ಬೆಂಗಳೂರಿನಲ್ಲಿ ಹೆಚ್.ಎಸ್.ಆರ್ ಲೇಔಟ್ ಪೊಲೀಸ್ ಠಾಣಾ (HSR Layout Police Station) ವ್ಯಾಪ್ತಿಯಲ್ಲಿ ನಡೆದಿದೆ.

    ಲೆನಿನ್ ಕಲೆಕ್ಷನ್ ಗಾರ್ಮೆಂಟ್ಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ರಾಜೇಶ್ ಮಿಶ್ರಾ ತನ್ನ ಪತ್ನಿಯೊಂದಿಗೆ ಫೋನ್‌ನಲ್ಲಿ ಮಾತಾಡುತ್ತಿದ್ದ. ಈ ವೇಳೆ ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ಸುರೇಶ್ ಎಂಬಾತ ಅಲ್ಲಿಗೆ ಬಂದಿದ್ದ. ರಾಜೇಶ್ ಮಿಶ್ರಾ ಫೋನ್ ನಲ್ಲಿ ಮಾತಾಡುತ್ತಿದ್ದನ್ನು ನೋಡಿ, ವಿಡಿಯೋ ಕಾಲ್ ಮಾಡು, ನಿನ್ನ ಹೆಂಡತಿಯನ್ನು (Wife) ನೋಡ್ಬೇಕು ಅಂದಿದ್ದಾನೆ. ಇದನ್ನೂ ಓದಿ: Budget 2023: ಮನೆ ಕಟ್ಟೋರಿಗೆ ಗುಡ್‌ ನ್ಯೂಸ್‌ – ಪ್ರಧಾನಮಂತ್ರಿ ಆವಾಸ್ ಯೋಜನೆಗಾಗಿ 79,000 ಕೋಟಿ ಅನುದಾನ

    ಇದರಿಂದ ಕೋಪಗೊಂಡ ರಾಜೇಶ್ ಮಿಶ್ರಾ, ಸುರೇಶ್ ಜೊತೆಗೆ ಮಾತಿನ ಚಕಮಕಿ ನಡೆಸಿದ್ದಾನೆ. ಮಾತು ವಿಕೋಪಕ್ಕೆ ತಿರುಗಿ ಇಬ್ಬರ ನಡುವೆ ಗಲಾಟೆ ನಡೆದಿದೆ. ಈ ವೇಳೆ ಸುರೇಶ್ ರಾಜೇಶ್ ಮಿಶ್ರಾಗೆ ಚಾಕು ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡ ರಾಜೇಶ್ ಮಿಶ್ರಾನನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: 50 ಸಾವಿರ ವರ್ಷಕ್ಕೊಮ್ಮೆ ಗೋಚರಿಸುವ ವಿಸ್ಮಯ – ಬೆಂಗಳೂರಲ್ಲಿ ಗೋಚರಿಸಲಿಲ್ಲ ಹಸಿರು ಧೂಮಕೇತು

    ಹೆಚ್.ಎಸ್.ಆರ್ ಲೇಔಟ್ ಪೊಲೀಸರು ಆರೋಪಿ ಸುರೇಶ್ ನನ್ನ ಬಂಧಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕುಡಿದ ಮತ್ತಿನಲ್ಲಿ ಹೆಂಡತಿ, ಮಕ್ಕಳ ಮೇಲೆ ರಾಕ್ಷಸ ಕೃತ್ಯ – 6ರ ಬಾಲಕ ಬಲಿ

    ಕುಡಿದ ಮತ್ತಿನಲ್ಲಿ ಹೆಂಡತಿ, ಮಕ್ಕಳ ಮೇಲೆ ರಾಕ್ಷಸ ಕೃತ್ಯ – 6ರ ಬಾಲಕ ಬಲಿ

    ಹುಬ್ಬಳ್ಳಿ: ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಹೆಂಡತಿ ಹಾಗೂ ಮಕ್ಕಳ ಮೇಲೆ ಮಾರಕಾಸ್ತ್ರಗಳಿಂದ ಭೀಕರವಾಗಿ ಹಲ್ಲೆ ಮಾಡಿದ್ದು, ಇದರಿಂದ 6 ವರ್ಷದ ತನ್ನ ಮಗನೇ (Son) ಸಾವನ್ನಪ್ಪಿದ್ದ. ಕುಡಿದ ನಶೆ ಇಳಿದ ಬಳಿಕ ವ್ಯಕ್ತಿ ತನ್ನ ಕೃತ್ಯಕ್ಕೆ ಪಶ್ಚಾತ್ತಾಪ ಪಟ್ಟು ನೇಣಿಗೆ ಶರಣಾಗಿರುವ ಘಟನೆ ಹುಬ್ಬಳ್ಳಿ (Hubballi) ತಾಲೂಕಿನ ಸುಳ್ಳ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಫಕ್ಕೀರಪ್ಪ ಮಾದರ ಬುಧವಾರ ಬೆಳಗಿನ ಜಾವ 4 ಗಂಟೆಯ ಸುಮಾರಿಗೆ ಏಕಾಏಕಿ ಮನೆಯಲ್ಲಿನ ಟಿವಿ ಸೌಂಡ್ ಜಾಸ್ತಿ ಮಾಡಿ ಕೊಡಲಿಯಿಂದ ತನ್ನ ಹೆಂಡತಿ ಮುದಕವ್ವನ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾನೆ. ಗಂಡ ಹಲ್ಲೆ ಮಾಡುತ್ತಿದ್ದಂತೆ ಮುದಕವ್ವ ಜೋರಾಗಿ ಕಿರುಚಾಡಲು ಶುರು ಮಾಡಿದ್ದಾಳೆ. ಇದರಿಂದ ಮನೆಯಲ್ಲಿ ಮಲಗಿದ್ದ ಮೂವರು ಮಕ್ಕಳು ಎದ್ದು ಅಳಲು ಪ್ರಾರಂಭಿಸಿದ್ದರು. ಅಲ್ಲದೆ ತಾಯಿಯನ್ನು ಹಲ್ಲೆಯಿಂದ ಬಿಡಿಸಿಕೊಳ್ಳಲು ಪ್ರಯತ್ನ ಮಾಡಿದ್ದಾರೆ. ಆದರೆ ಮಕ್ಕರು ಅಡ್ಡ ಬಂದಿದ್ದಕ್ಕೆ ಕೆರಳಿದ ಫಕೀರಪ್ಪ ಶ್ರಾವಣಿ (8), ಶ್ರೇಯಸ್ (6) ಹಾಗೂ ಸೃಷ್ಟಿ (4) ಮೇಲೆ ಕೈಯಲ್ಲಿದ್ದ ಕೊಡಲಿಯಿಂದ ಹಲ್ಲೆ ನಡೆಸಿದ್ದಾನೆ.

    ಫಕ್ಕೀರಪ್ಪ ತನ್ನ ಹೆಂಡತಿ ಮತ್ತು ಮೂವರು ಮಕ್ಕಳ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಪರಿಣಾಮ ಒಂದು ಕಡೆ ಹೆಂಡತಿ, ಮತ್ತೊಂದು ಕಡೆ ಮೂವರು ಮಕ್ಕಳು ಅರೆ ಪ್ರಜ್ಞಾ ಸ್ಥಿತಿಯಲ್ಲಿ ಬಿದ್ದಿದ್ದರು. ಕೃತ್ಯ ಎಸಗಿ ಸ್ವಲ್ಪ ಹೊತ್ತು ಸುಧಾರಿಸಿಕೊಂಡ ಫಕೀರಪ್ಪನಿಗೆ ಬಳಿಕ ತಾನು ಮಾಡಿದ ತಪ್ಪಿನ ಅರಿವಾಗಿ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಶಂಕಿಸಲಾಗಿದೆ.

    ಬೆಳ್ಳಂಬೆಳಗ್ಗೆ 6 ಗಂಟೆಯ ಸುಮಾರಿಗೆ ಫಕೀರಪ್ಪನ ಮನೆಯಿಂದ ಬರುತ್ತಿದ್ದ ಟಿವಿ ಶಬ್ದ ಕೇಳಿ ಅಕ್ಕ-ಪಕ್ಕದ ಮನೆಯವರು ಬಾಗಿಲು ಬಡಿದಿದ್ದಾರೆ. ಆದರೆ ಯಾರು ಕೂಡಾ ಬಾಗಿಯಲು ತೆರೆಯದ ಹಿನ್ನೆಲೆ ನೆರೆಹೊರೆಯವರು ಬಾಗಿಲು ಮುರಿದಾಗ ಘಟನೆ ಬೆಳಕಿಗೆ ಬಂದಿದೆ. ತಕ್ಷಣ ಗ್ರಾಮಸ್ಥರು ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೂರು ಮಕ್ಕಳು ಹಾಗೂ ಮುದಕವ್ವನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಜೆಡಿಎಸ್ ಮಾಡಿದ ತಪ್ಪಿನಿಂದ ಬಿಜೆಪಿ ಮೇಲೆ ರಾಜ್ಯದ ಜನರಿಗೆ ಸಿಂಪತಿ ಬಂತು: ಜಮೀರ್

    ALCOHOL

    ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೂವರು ಮಕ್ಕಳ ಪೈಕಿ 6 ವರ್ಷದ ಶ್ರೇಯಸ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ತಾಯಿ ಮುದಕವ್ವ ಮತ್ತು ಇನ್ನೂ 2 ಮಕ್ಕಳ ಪರಿಸ್ಥಿತಿ ಚಿಂತಾಜನಕವಾಗಿದೆ.

    ಫಕೀರಪ್ಪ ಮತ್ತು ಮುದಕವ್ವ ಮದುವೆಯಾಗಿ 10 ವರ್ಷಗಳಾಗಿದ್ದು, ಫಕೀರಪ್ಪ ತನ್ನ ಹೆಂಡತಿ ನಡತೆ ಮೇಲೆ ಅನುಮಾನಪಡುತ್ತಿದ್ದ ಎನ್ನಲಾಗಿದೆ. ಇದೇ ಕಾರಣಕ್ಕಾಗಿ ಆತ ವಿಪರೀತವಾಗಿ ಕುಡಿದು ಮಾನಸಿಕ ಖಿನ್ನತೆಗೆ ಒಳಗಾಗಿದ್ದ. ಆಗಾಗ ಈ ವಿಚಾರವಾಗಿ ತನ್ನ ಹೆಂಡತಿ ಜೊತೆಗೆ ಜಗಳ ಮಾಡುತ್ತಿದ್ದ. ಆದರೆ ಇದೀಗ ಜಗಳ ಅತಿರೇಕಕ್ಕೆ ತೆರಳಿ ಈ ಕೃತ್ಯ ನಡೆದಿದೆ ಎಂಬ ಅನುಮಾನ ಮೂಡಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಹುಬ್ಬಳ್ಳಿ ಗ್ರಾಮೀಣ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ: ಎಲ್ಲವನ್ನೂ ಕೊಟ್ಟಿರುವ ಬಿಜೆಪಿ ಬಿಡುವ ಮಾತೇ ಇಲ್ಲ – ಸಚಿವ ನಾರಾಯಣಗೌಡ ಸ್ಪಷ್ಟನೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ವೃದ್ಧ ಮಹಿಳೆಯರನ್ನೇ ರೇಪ್ ಮಾಡಿ, ಕೊಲೆ ಮಾಡ್ತಿದ್ದ 20ರ ಯುವಕ- ಸೈಕೋ ಕಿಲ್ಲರ್ ಅರೆಸ್ಟ್

    ವೃದ್ಧ ಮಹಿಳೆಯರನ್ನೇ ರೇಪ್ ಮಾಡಿ, ಕೊಲೆ ಮಾಡ್ತಿದ್ದ 20ರ ಯುವಕ- ಸೈಕೋ ಕಿಲ್ಲರ್ ಅರೆಸ್ಟ್

    ಲಕ್ನೋ: ಕಳೆದ 50 ದಿನಗಳಲ್ಲಿ ನಾಲ್ವರು ವೃದ್ಧ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿದ್ದ 20 ವರ್ಷದ ಯುವಕನನ್ನ ಪೊಲೀಸರು (Police) ಬಂಧಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ (Uttar Pradesh) ನಡೆದಿದೆ.

    ಮೃತ ಮಹಿಳೆಯರು (Women) 50 ರಿಂದ 65 ವರ್ಷ ವಯಸ್ಸಿನವರು ಹಾಗೂ ಉತ್ತರ ಪ್ರದೇಶದ ಅಯೋಧ್ಯೆ (Ayodhya) ಹಾಗೂ ಬಾರಾಬಂಕಿ ಜಿಲ್ಲೆಗಳಿಗೆ ಸೇರಿದವರು. ಆರೋಪಿ ಅಮರೇಂದ್ರ (20) ಎಂದು ಗುರುತಿಸಿದ್ದು, ಅಯೋಧ್ಯೆಯ ಮಾವಾಯಿ ಪೊಲೀಸ್ ಠಾಣಾ (Mawai Police Station)  ವ್ಯಾಪ್ತಿಯಲ್ಲಿ ಬಂಧಿಸಲಾಗಿದೆ. ಉನ್ಹೌನಾ ಗ್ರಾಮಸ್ಥರ ಗುಂಪೊಂದು `ಸೈಕೋ’ ಕಿಲ್ಲರ್‌ನನ್ನ ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಬಳಿಕ ಪೊಲೀಸರು ಬಂಧಿಸಿದ್ದಾರೆ ಎಂದು ಅಯೋಧ್ಯೆ ಹೆಚ್ಚುವರಿ ಎಸ್‌ಪಿ ಅತುಲ್ ಕುಮಾರ್ ಸೋಂಕರ್ ತಿಳಿಸಿದ್ದಾರೆ.

    ಉನ್ಹೌನಲ್ಲಿ (Unhauna) 5ನೇ ಮಹಿಳೆಯನ್ನ ಅತ್ಯಾಚಾರ ಮಾಡಲು ಪ್ರಯತ್ನಿಸುತ್ತಿದ್ದಾಗ ಯುವಕನನ್ನ ಸ್ಥಳೀಯರು ಸೆರೆಹಿಡಿಸಿದ್ದಾರೆ. ಬಳಿಕ ಮಾವಾಯಿ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ರೆಬೆಲ್ ಯತ್ನಾಳ್‍ಗೆ ಹೈಕಮಾಂಡ್ ಮತ್ತೆ ಮಾಫಿ- ಓನ್ಲಿ ವಾರ್ನಿಂಗ್, ನೋ ಆಕ್ಷನ್

    ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ಅಮರೇಂದ್ರ ಇತರ ನಾಲ್ವರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ. ನಿರ್ಜನ ಪ್ರದೇಶದಲ್ಲಿ ಮಹಿಳೆಯರು ಒಂಟಿಯಾಗಿ ಕಂಡಾಗೆಲ್ಲಾ ಅಪರಾಧ ಎಸಗಿದ್ದಾಗಿ ಹೇಳಿದ್ದಾನೆ.

    ತನಿಖೆ ಬಳಿಕ ಆರೋಪಿ ಅಮರೇಂದ್ರ ಯಾವುದೇ ಸ್ಪಷ್ಟ ಉದ್ದೇಶ ಹೊಂದಿಲ್ಲ. ಲೈಂಗಿಕ ಉದ್ದೇಶದಿಂದ ಅತ್ಯಾಚಾರ ಎಸಗಿ ಮಹಿಳೆಯರನ್ನು ಕೊಂದಿರುವುದು ಸ್ಪಷ್ಟವಾಗಿದೆ. ಆರೋಪಿ ವಿರುದ್ಧ ಲೈಂಗಿಕ ದೌರ್ಜನ್ಯ, ಕೊಲೆ ಪ್ರಕರಣಗಳ ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ. ಇದನ್ನೂ ಓದಿ: Plane Crash: ಬೆಂಕಿ ಕಾಣಿಸಿಕೊಂಡು ಪತನಗೊಂಡ ಚಾರ್ಟರ್ಡ್ ವಿಮಾನ – ಪೈಲಟ್‍ಗಾಗಿ ಹುಡುಕಾಟ

    ಸೈಕೋ ಕಿಲ್ಲರ್ ಕಥೆಯೇ ರೋಚಕ: 2022ರ ಡಿಸೆಂಬರ್ 5 ರಂದು ಮೊದಲ ಮಹಿಳೆಯ ಕೊಲೆ ಬಹಿರಂಗವಾಯಿತು. ಮಾವಾಯಿಯ ಖುಶೆಟಿ ಗ್ರಾಮದ 60 ವರ್ಷದ ಮಹಿಳೆ ಬೆಳಗ್ಗೆ ಮನೆಯಿಂದ ಹೋದ ನಂತರ ಹಿಂದಿರುಗಲಿಲ್ಲ. ಮರುದಿನ ಆಕೆಯ ಬೆತ್ತಲೆ ದೇಹವು ಮುಖ ಮತ್ತು ತಲೆಯ ಮೇಲೆ ಗಾಯದ ಗುರುತುಗಳೊಂದಿಗೆ ಪೊಲೀಸರಿಗೆ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿ ಕತ್ತು ಹಿಸುಕಿ ಕೊಲೆ ಮಾಡಿರುವುದು ಗೊತ್ತಾಗಿತ್ತು.

    CRIME COURT

    ಇದಾದ ನಂತರ ಡಿಸೆಂಬರ್ 17 ರಂದು ಇಬ್ರಾಹಿಂಬಾದ್ ಗ್ರಾಮದ ಹೊಲವೊಂದರಲ್ಲಿ 62 ವರ್ಷದ ಮಹಿಳೆಯ ಮೃತದೇಹ ಇದೇ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ನಂತರ ಡಿ.29 ರಂದು 55 ವರ್ಷದ, ಡಿಸೆಂಬರ್ 29 ರಂದು ಥಥರ್ಹಾ ಗ್ರಾಮದಿಂದ ಮಹಿಳೆಯೊಬ್ಬರು ಕಾಣೆಯಾಗಿದ್ದರು. ಮರುದಿನ ಹೊಲದಲ್ಲಿ ಬೆತ್ತಲೆ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಎಲ್ಲ ಕೊಲೆಗಳೂ ಒಂದೇ ಮಾದರಿಯಲ್ಲಿ ಇತ್ತೆಂದು ಗುರುತಿಸಲಾಗಿತ್ತು. ನಂತರ ಪೊಲೀಸ್ ಇಲಾಖೆ ಶೀಘ್ರವೇ ಹಂತಕನನ್ನು ಹಿಡಿಯಲು 6 ವಿಶೇಷ ತಂಡಗಳನ್ನು ರಚಿಸಿತ್ತು. ಕೊನೆಗೆ ಸಾರ್ವಜನಿಕರ ಗುಂಪೊಂದರ ಸಹಾಯದಿಂದ ಪೊಲೀಸರು ಕಾಮುಕ ಹಂತಕನನ್ನ ಬಂಧಿಸಿದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮದುವೆಯಾದ ಮೂರೇ ತಿಂಗಳಲ್ಲಿ ಕಾನ್ಸ್ಟೇಬಲ್‌ ಪತ್ನಿ ಸಾವು

    ಮದುವೆಯಾದ ಮೂರೇ ತಿಂಗಳಲ್ಲಿ ಕಾನ್ಸ್ಟೇಬಲ್‌ ಪತ್ನಿ ಸಾವು

    ಲಕ್ನೋ: ಮೂರು ತಿಂಗಳ ಹಿಂದೆಯಷ್ಟೆ ಮದುವೆಯಾಗಿದ್ದ (Marriage) ಕಾನ್ಸ್ಟೇಬಲ್‌ ಪತ್ನಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಕುಶಿನಗರದಲ್ಲಿ (Uttar Pradesh Kushinagar) ನಡೆದಿದೆ.

    ಕುಶಿನಗರದ ಕಾಸ್ಯ ಪೊಲೀಸ್ ಠಾಣೆಯ (Kasia Police Station) ಭೈಂಷಾ ಗ್ರಾಮದ ಮನೆಯೊಂದರಲ್ಲಿ ಮುಚ್ಚಿದ ಕೊಠಡಿಯಲ್ಲಿ ಮೃತದೇಹ ಪತ್ತೆಯಾಗಿದೆ. ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ, ತನಿಖೆ (Investigation) ಆರಂಭಿಸಿದ್ದಾರೆ.

    ಕಳೆದ ಮೂರು ತಿಂಗಳ ಹಿಂದೆಯಷ್ಟೇ ಪೊಲೀಸ್ ಕಾನ್ಸ್ಟೇಬಲ್ ರೋಷನ್ ರೈ, ಪೊಲೀಸ್ ವರಿಷ್ಠಾಧಿಕಾರಿ ಒತ್ತಡಕ್ಕೆ ಮಣಿದು ತನ್ನ ಗೆಳತಿಯನ್ನ ವಿವಾಹವಾಗಿದ್ದ. ಇದೀಗ ಆಕೆ ಸಾವನ್ನಪ್ಪಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಪತಿಯೇ ಆಕೆಯನ್ನು ಕೊಂದಿರುವುದಾಗಿ ಯುವತಿ ಪೋಷಕರು ಅರೋಪಿಸಿದ್ದಾರೆ. ಇದನ್ನೂ ಓದಿ: 50 ಕೋಟಿ ಮೌಲ್ಯದ ಫ್ಲಾಟ್‌, 2.17 ಕೋಟಿಯ ಕಾರು, 80 ಲಕ್ಷದ ಬೈಕ್ – ರಾಹುಲ್ ದಂಪತಿಗೆ ದುಬಾರಿ ಉಡುಗೊರೆ

    ಏನಿದು ಲವ್‌ಸ್ಟೋರಿ?
    ಕಾಸ್ಯ ಪೊಲೀಸ್ ಠಾಣೆಗೆ ಕಾನ್‌ಸ್ಟೆಬಲ್ ರೋಷನ್ ರೈ ನಿಯೋಜನೆಗೊಂಡಿದ್ದ ಸಮಯದಲ್ಲಿ ಜಾಲತಾಣದ (Social Media) ಮೂಲಕ ಯುವತಿಯೊಬ್ಬಳ ಪರಿಚಯ ಮಾಡಿಕೊಂಡಿದ್ದ. ನಂತರ ಆಕೆಯನ್ನು ಸಂಪರ್ಕಿಸಿ ಪ್ರೀತಿಸಲು ಶುರು ಮಾಡಿದ್ದ. ಆಕೆಯೊಂದಿಗೆ ಲಿವ್ ಇನ್ ರಿಲೇಶನ್ ಶಿಪ್‌ನಲ್ಲಿ (Live In RelationShip) ವಾಸಿಸುತ್ತಿದ್ದ. ಮದುವೆಯಾಗುವುದಾಗಿ ನಂಬಿಸಿ, ಆಕೆಯನ್ನ ದೈಹಿಕವಾಗಿ ಬಳಸಿಕೊಂಡು ಸಂಪರ್ಕ ಕಡಿದುಕೊಳ್ಳಲು ಯತ್ನಿಸುತ್ತಿದ್ದ. ಅದಕ್ಕಾಗಿ ಜಥಾನ್ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಿಸಿಕೊಂಡಿದ್ದ. ಇದರಿಂದ ಬೇಸತ್ತಿದ್ದ ಯುವತಿ ಪೊಲೀಸ್ ವರಿಷ್ಠಾಧಿಕಾರಿ ಧವಳ್ ಜೈಸ್ವಾಲ್ ಅವರಿಗೆ ಎಲ್ಲ ವಿಷಯ ತಿಳಿಸಿದ್ದಳು. ಬಳಿಕ ಎಸ್ಪಿ ತಾವೇ ಮುಂದೆ ನಿಂತು ಇಬ್ಬರಿಗೂ ಮದುವೆ ಮಾಡಿಸಿದ್ದರು.

    ಮೂರು ತಿಂಗಳ ಹಿಂದೆ ದೇವಸ್ಥಾನವೊಂದರಲ್ಲಿ ಇಬ್ಬರಿಗೂ ಮದುವೆ ಮಾಡಿಸಲಾಗಿತ್ತು. ಕೆಲ ದಿನಗಳವರೆಗೆ ಸಂಸಾರ ಚೆನ್ನಾಗಿಯೇ ಇತ್ತು. ಇದೀಗ ಮುಚ್ಚಿದ ಕೊಣೆಯೊಂದರಲ್ಲಿ ಕಾನ್ಸ್ಟೇಬಲ್‌ ಪತ್ನಿ ಶವವಾಗಿ ಪತ್ತೆಯಾಗಿರುವುದು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ. ಸಾವಿಗೆ ನಿಖರ ಕಾರಣ ಏನೆಂಬುದು ಇನ್ನೂ ತಿಳಿದುಬಂದಿಲ್ಲ. ಈ ಬಗ್ಗೆ ಕೇಸ್ ದಾಖಲಿಸಿಕೊಂಡಿರುವ ಕಾಸ್ಯ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ: ಮೋದಿ ಹೇಳೋದು ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತೆ: ಬಿಕೆ ಹರಿಪ್ರಸಾದ್ ಕಿಡಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕಬಾಬ್ ಪೀಸ್ ಕಡಿಮೆ ಕೊಟ್ಟಿದ್ದಕ್ಕೆ ಹೋಟೆಲ್ ಮಾಲೀಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಪುಂಡರು

    ಕಬಾಬ್ ಪೀಸ್ ಕಡಿಮೆ ಕೊಟ್ಟಿದ್ದಕ್ಕೆ ಹೋಟೆಲ್ ಮಾಲೀಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಪುಂಡರು

    ಬೆಂಗಳೂರು: ನಗರದಲ್ಲಿ ದಿನೇ ದಿನೇ ಪುಡಿರೌಡಿಗಳ ಅಟ್ಟಹಾಸ ಹೆಚ್ಚಾಗುತ್ತಿದ್ದು, ಬಡಪಾಯಿಗಳ ಮೇಲೆ ದುರ್ವರ್ತನೆ ತೋರುತ್ತಿದ್ದಾರೆ. ಕಳೆದ ತಿಂಗಳಷ್ಟೇ ಬೇಕರಿಯಲ್ಲಿ ಯುವಕರ ಮೇಲಿನ ಹಲ್ಲೆ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಘಟನೆ ನಡೆದಿದೆ.

    ಕೋಣನಕುಂಟೆಯ ಮಾಲ್ಗುಡಿ ನಾಟಿ ಸ್ಟೈಲ್ ಹೋಟೆಲಿಗೆ ನುಗ್ಗಿದ ಪುಂಡರು ಮಾಲೀಕನಿಗೆ (Hotel Manager) ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಾಲೀಕ ಬಾಬಣ್ಣ, ಬುಧವಾರ ರಾತ್ರಿ 11 ಗಂಟೆ ವೇಳೆಗೆ 4 ಜನ ಪುಂಡರು ಕಬಾಬ್ (Kebab) ಬೇಕು ಎಂದು ಬಂದಿದ್ರು. ನಮ್ಮ ಹುಡುಗರು ಕಬಾಬ್ ಪಾರ್ಸೆಲ್ ಕೊಟ್ಟಿದ್ದರು. ಬಿಲ್ 120 ರೂ. ಆಗಿದ್ದು, ಆದರೆ ಅವರು 90 ರೂ. ಮಾತ್ರ ಕೊಟ್ಟು ಹಣ ಕಡಿಮೆಯಿದೆ ಮೊತ್ತೊಮ್ಮೆ ಬಂದು ಕೊಡುತ್ತೇವೆ ಎಂದು ಹೇಳಿ ಹೋಗಿದ್ದರು.

    ಆದರೆ ವಾಪಸ್ ಬಂದ ಪುಂಡರು ಕಬಾಬ್ ಪೀಸ್ ಕಡಿಮೆ ಕೊಟ್ಟಿದ್ದೀರಾ ಎಂದು ನಮ್ಮ ಹುಡುಗರ ಮೇಲೆ ಹಲ್ಲೆ ಮಾಡೋಕೆ ಮುಂದಾಗಿದ್ದರು. ನಾನು ಮಧ್ಯೆ ಪ್ರವೇಶಿಸಿದೆ. ಈ ವೇಳೆ ಅವರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ನನ್ನ ತುಟಿ ಹಾಗೂ ತಲೆಯಲ್ಲಿ ರಕ್ತ ಬರುವ ರೀತಿಯಲ್ಲಿ ಹೊಡೆದಿದ್ದಾರೆ ಎಂದು ಬಾಬಣ್ಣ ತಿಳಿಸಿದ್ದಾರೆ. ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ- ಮತ್ತಿಬ್ಬರ ಪತ್ತೆಗೆ 10 ಲಕ್ಷ ಬಹುಮಾನ ಘೋಷಣೆ

    ಆರೋಪಿಗಳು ನಮ್ಮ ಹೋಟೆಲ್ ಮುಂದಿನ ರಸ್ತೆಯಲ್ಲೇ ವಾಸವಿದ್ದಾರೆ. ಯಾವಾಗಲೂ ಗಾಂಜಾ ಹೊಡೆದುಕೊಂಡು ಓಡಾಡುತ್ತಾರೆ. ಅಂದು ಅವರು ಗಾಂಜಾ ಮತ್ತಿನಲ್ಲೇ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

    ಘಟನೆ ಕುರಿತು ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಪುಂಡರು ಹೋಟೆಲ್ ಮಾಲೀಕನ ಮೇಲೆ ಹಲ್ಲೆ ನಡೆಸಿರುವ ವೀಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಉಗ್ರರ ಜೊತೆ ಸಂಪರ್ಕ, ಭಾರತದಲ್ಲಿ ಶಾಂತಿ ಕದಡಲು ಸಂಚು- ಬೆಂಗಳೂರಿನ ಇಬ್ಬರ ವಿರುದ್ಧ NIA ಚಾರ್ಜ್‌ಶೀಟ್‌ ಸಲ್ಲಿಕೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k