Tag: crime

  • ಲಿಫ್ಟ್‌ಗೆ ಸಿಲುಕಿ 26ರ ಯುವಕ ಸಾವು

    ಲಿಫ್ಟ್‌ಗೆ ಸಿಲುಕಿ 26ರ ಯುವಕ ಸಾವು

    ಬೆಂಗಳೂರು: ಲಿಫ್ಟ್‌ಗೆ (Lift) ಸಿಲುಕಿ ಉತ್ತರಪ್ರದೇಶದ (UP) ಮೂಲದ ಯುವಕ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ.

    ಇಲ್ಲಿನ ಜೆ.ಸಿ ರಸ್ತೆಯ ಭರತ್‌ ಸರ್ಕಲ್‌ ಬಳಿ ಘಟನೆ ನಡೆದಿದ್ದು, ಯುಪಿ ಮೂಲದ ವಿಕಾಸ್‌ (26) ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲೊಂದು ಖತರ್ನಾಕ್ ಜೋಡಿ – ಬಾಯ್‌ಫ್ರೆಂಡ್ ಜೊತೆಗೂಡಿ ಬೈಕ್‌ ಕಳ್ಳತನಕ್ಕಿಳಿದಿದ್ದ ಯುವತಿ

    ಆಟೋಮೊಬೈಲ್‌‌ನಲ್ಲಿ (Automobile) ಕೆಲಸ ಮಾಡುತ್ತಿದ್ದ ವಿಕಾಸ್‌ ಲಿಫ್ಟ್‌ಗೆ ಸಿಲುಕಿ ಸಾವನ್ನಪ್ಪಿದ್ದಾರೆ. ಈ ಸಂಬಂಧ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: 1 ಕೆಜಿ ಗಾಂಜಾ ಕಳ್ಳಸಾಗಣೆ ಆರೋಪ – ಭಾರತ ಮೂಲದ ವ್ಯಕ್ತಿಯನ್ನು ಗಲ್ಲಿಗೇರಿಸಿದ ಸಿಂಗಾಪುರ

  • ಸಿಲಿಕಾನ್ ಸಿಟಿಯಲ್ಲೊಂದು ಖತರ್ನಾಕ್ ಜೋಡಿ – ಬಾಯ್‌ಫ್ರೆಂಡ್ ಜೊತೆಗೂಡಿ ಬೈಕ್‌ ಕಳ್ಳತನಕ್ಕಿಳಿದಿದ್ದ ಯುವತಿ

    ಸಿಲಿಕಾನ್ ಸಿಟಿಯಲ್ಲೊಂದು ಖತರ್ನಾಕ್ ಜೋಡಿ – ಬಾಯ್‌ಫ್ರೆಂಡ್ ಜೊತೆಗೂಡಿ ಬೈಕ್‌ ಕಳ್ಳತನಕ್ಕಿಳಿದಿದ್ದ ಯುವತಿ

    ಬೆಂಗಳೂರು: ಪ್ರೀತಿ, ಪ್ರೇಮದ ಜೊತೆಗೆ ಕಳ್ಳತನ, ಮೋಜು, ರಾಯಲ್‌ ಲೈಫ್‌ಗಾಗಿ ಪ್ರಿಯಕರನೊಂದಿಗೆ (Lovers) ಖುದ್ದು ತಾನೇ ಫೀಲ್ಟಿಗಿಳಿದು ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಜೋಡಿ ಕೊನೆಗೂ ಪೊಲೀಸರ (Bengaluru Police) ಬಲೆಗೆ ಬಿದ್ದಿದೆ.

    ಪ್ರೀತಿ, ಪ್ರೇಮದ ಜೊತೆಗೆ ಬೈಕ್‌ ಕದಿಯುವುದನ್ನೇ ವೃತ್ತಿ ಮಾಡಿಕೊಂಡಿದ್ದ ಆರೋಪಿ ಮುರುಗಾ ಮತ್ತು ಆತನ ಪ್ರೇಯಸಿಯನ್ನ ಮಲೇಶ್ವರಂ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ವಿವಾಹಿತೆಗೆ ಪ್ರಿಯಕರನಿಂದ ಬ್ಲ್ಯಾಕ್‌ಮೇಲ್ – ಮೊಬೈಲ್‌ನಲ್ಲಿ ವೀಡಿಯೋ ಆನ್ ಮಾಡಿ ಮಹಿಳೆ ನೇಣಿಗೆ ಶರಣು

    ಬೈಕ್‌ ಕಳ್ಳತನ ಮಾಡುತ್ತಿದ್ದ ಈ ಪ್ರೇಮಿಗಳು, ಅಲ್ಪ ಸ್ವಲ್ಪ ಹಣಕ್ಕೆ ಮಾರಾಟ ಮಾಡ್ತಿದ್ರು. ನಂತರ ಮಾದಕವಸ್ತು ಸೇವಿಸಿ ಮೋಜು ಮಾಡುತ್ತಿದ್ದರು. ಒಮ್ಮೆ ಮುರುಗಾ ಬೈಕ್‌ (Bike) ಕದ್ದರೆ, ಇನ್ನೊಮ್ಮೆ ಪ್ರೇಯಸಿ ಬೈಕ್‌ ಕದಿಯುತ್ತಿದ್ದಳು. ಮುರುಗನ ಪ್ರೀತಿಯಲ್ಲಿ ಬಿದ್ದು, ಯುವತಿಯೂ ಕಳ್ಳತನಕ್ಕೆ ಸಾಥ್ ಕೊಟ್ಟಿದ್ದಳು. ಇದನ್ನೂ ಓದಿ: ರ‍್ಯಾಪಿಡೋ ಬೈಕ್‌ ಸವಾರನಿಂದ ಲೈಂಗಿಕ ಕಿರುಕುಳ – ಬೇಸತ್ತ ಯುವತಿ ಬೈಕ್‌ನಿಂದ ಜಂಪ್‌

    ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಎಂಡಿಎಂಎ, ಗಾಂಜಾ ಸೇವಿಸೋಕೆ ಕಳ್ಳತನವನ್ನೇ ಕಸುಬಾಗಿ ಮಾಡಿಕೊಂಡಿದ್ದ ಈ ಇಬ್ಬರು ಆರೋಪಿಗಳ ವಿರುದ್ಧ ಶ್ರೀರಾಂಪುರ, ಮಲ್ಲೇಶ್ವರಂ ಸೇರಿ ಹಲವು ಠಾಣೆಗಳಲ್ಲಿ ಕೇಸ್‌ ದಾಖಲಾಗಿತ್ತು. ಇದೀಗ ಬೆಂಗಳೂರು ಮಲ್ಲೇಶ್ವರಂ ಪೊಲೀಸರು ಇವರಿಬ್ಬರನ್ನ ಬಂಧಿಸಿದ್ದಾರೆ.

    ಬಂಧಿತ ಆರೋಪಿಗಳಿಂದ 3 ಬೈಕ್‌ ಹಾಗೂ ಮೊಬೈಲ್‌ ಫೋನ್‌ಗಳನ್ನ ವಶಪಡಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.

  • ಪಾಕ್‌ನಲ್ಲಿ ಭೀಕರ ಸ್ಫೋಟ – 12 ಮಂದಿ ಪೊಲೀಸರ ದಾರುಣ ಸಾವು, 40ಕ್ಕೂ ಹೆಚ್ಚು ಮಂದಿಗೆ ಗಾಯ

    ಪಾಕ್‌ನಲ್ಲಿ ಭೀಕರ ಸ್ಫೋಟ – 12 ಮಂದಿ ಪೊಲೀಸರ ದಾರುಣ ಸಾವು, 40ಕ್ಕೂ ಹೆಚ್ಚು ಮಂದಿಗೆ ಗಾಯ

    ಇಸ್ಲಾಮಾಬಾದ್‌: ಪಾಕಿಸ್ತಾನದ (Pakistan) ಸ್ವಾತ್‌ನ ಭಯೋತ್ಪಾದನಾ ನಿಗ್ರಹ ಕಚೇರಿಯಲ್ಲಿ (Counter Terrorism Department) ನಡೆದ ಭೀಕರ ಸ್ಫೋಟದಲ್ಲಿ ಕನಿಷ್ಠ 12 ಮಂದಿ ಪೊಲೀಸರು ಮೃತಪಟ್ಟಿದ್ದು. 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

    ಸದ್ಯ ಘಟನಾ ಸ್ಥಳದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ ಎಂದು ಖೈಬರ್ ಪುಂಖ್ಯಾ ಪ್ರಾಂತ್ಯದ ಪೊಲೀಸ್‌ ಮಹಾನಿರೀಕ್ಷಕ ಅಖ್ತರ್‌ ಹಯಾತ್ ಖಾನ್ ಹೇಳಿದ್ದಾರೆ. ಇದನ್ನೂ ಓದಿ: ಕುಡಿದ ಅಮಲಿನಲ್ಲಿ ಸಹ ಪ್ರಯಾಣಿಕನ ಮೇಲೆ ಮೂತ್ರ ವಿಸರ್ಜನೆ – American Airlines ನಲ್ಲಿ ಮತ್ತೊಂದು ಕೇಸ್‌

    ಘಟನೆ ಕುರಿತು ಮಾತನಾಡಿರುವ ಭಯೋತ್ಪಾದನಾ ನಿಗ್ರಹ ಇಲಾಖೆ (CTD) ಡಿಐಜಿ ಖಾಲಿದ್ ಸೊಹೈಲ್, ಪೊಲೀಸ್ ಠಾಣೆಯ ಮೇಲೆ ಯಾವುದೇ ಬಾಂಬ್ ದಾಳಿ ಅಥವಾ ಗುಂಡಿನ ದಾಳಿ ನಡೆದಿಲ್ಲ. ಇದು ಆತ್ಮಹತ್ಯಾ ದಾಳಿಯೂ ಅಲ್ಲ. ಮದ್ದುಗುಂಡುಗಳು ಮತ್ತು ಶೆಲ್‌ಗಳನ್ನು ಸಂಗ್ರಹಿಸಿದ್ದ ಸ್ಥಳದಲ್ಲಿ ಸ್ಫೋಟ ಸಂಭವಿಸಿದೆ. ಹೊರತಾಗಿ ಪೊಲೀಸ್‌ ಠಾಣೆಯ ಮೇಲೆ ಯಾವುದೇ ದಾಳಿ ನಡೆದಿಲ್ಲ ಎಂದು ತಿಳಿಸಿದ್ದಾರೆ.

    ಸ್ಫೋಟಕ್ಕೆ ನಿಖರ ಕಾರಣ ಏನೆಂಬುದರ ಕುರಿತು ತನಿಖೆ ನಡೆಯುತ್ತಿದೆ. ಬಾಂಬ್‌ ನಿಷ್ಕ್ರಿಯ ದಳಗಳು‌ ಸ್ಥಳಕ್ಕೆ ಧಾವಿಸಿ ತಪಾಸಣೆ ನಡೆಸುತ್ತಿವೆ. ಕುಸಿದ ಕಟ್ಟಡ ಅತ್ಯಂತ ಹಳೆಯದಾಗಿತ್ತು. ಹಾಗಾಗಿ ಸಿಬ್ಬಂದಿಯನ್ನ ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ ಎಂದು ಸಿಟಿಡಿ ಡಿಐಜಿ ತಿಳಿಸಿದ್ದಾರೆ. ಇದನ್ನೂ ಓದಿ: ಇಬ್ಬರು ಅಂತರರಾಜ್ಯ ಸರಗಳ್ಳರು ಅರೆಸ್ಟ್ – ಸಿನಿಮೀಯ ರೀತಿಯಲ್ಲಿ ಹೆಡೆಮುರಿ ಕಟ್ಟಿದ ಖಾಕಿ ಟೀಂ

    ಜಿಲ್ಲಾ ಪೊಲೀಸ್ ಅಧಿಕಾರಿ ಶಫಿ ಉಲ್ಲಾ ಗಂಡಾಪುರ (DPO) ಈ ಸ್ಫೋಟವನ್ನು ‘ಆತ್ಮಹತ್ಯಾ ದಾಳಿ’ ಎಂದು ಹೇಳಿದ್ದರು.

  • ಇಬ್ಬರು ಅಂತರರಾಜ್ಯ ಸರಗಳ್ಳರು ಅರೆಸ್ಟ್ – ಸಿನಿಮೀಯ ರೀತಿಯಲ್ಲಿ ಹೆಡೆಮುರಿ ಕಟ್ಟಿದ ಖಾಕಿ ಟೀಂ

    ಇಬ್ಬರು ಅಂತರರಾಜ್ಯ ಸರಗಳ್ಳರು ಅರೆಸ್ಟ್ – ಸಿನಿಮೀಯ ರೀತಿಯಲ್ಲಿ ಹೆಡೆಮುರಿ ಕಟ್ಟಿದ ಖಾಕಿ ಟೀಂ

    ಬೆಂಗಳೂರು: ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ ನಡೆಸಿ ಬಹುದಿನಗಳಿಂದ ಸರಗಳ್ಳತನ (Chain Snatching) ಮಾಡುತ್ತಿದ್ದ ಕುಖ್ಯಾತ ಅಂತರರಾಜ್ಯ ಸರಗಳ್ಳರನ್ನ ಬೆಂಗಳೂರಿನ (Bengaluru) ಗಿರಿನಗರದ ಪೊಲೀಸರು (Girinagar Police) ಬಂಧಿಸಿದ್ದಾರೆ.

    ಸೈಯದ್ ಬಾಷ (34), ಶೇಕ್ ಅಯೂಬ್ (32) ಬಂಧಿತ ಆರೋಪಿಗಳಾಗಿದ್ದು, 6 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ 2 ದ್ವಿಚಕ್ರ ವಾಹನಗಳನ್ನ ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಕೊಚ್ಚಿಯಲ್ಲಿ ಭಾರತದ ಮೊದಲ ವಾಟರ್ ಮೆಟ್ರೋ ಸೇವೆ – ಇಂದು ಪ್ರಧಾನಿ ಮೋದಿ ಚಾಲನೆ

    ಪೊಲೀಸರ ಕಾರ್ಯಾಚರಣೆ ಹೇಗಿತ್ತು ಗೊತ್ತಾ?
    ಆಂಧ್ರಪ್ರದೇಶ (Andhra Pradesh) ಮೂಲದ ಕಳ್ಳರು ಬಸ್‌ನಲ್ಲಿ ಬೆಂಗಳೂರಿಗೆ ಬರುತ್ತಿದ್ದರು. ನಂತರ ಇಲ್ಲಿ ಬೈಕ್ ಕಳ್ಳತನ ಮಾಡಿ, ಕದ್ದ ಬೈಕ್‌ನಲ್ಲೇ ಸರಗಳ್ಳತನ ಮಾಡುತ್ತಿದ್ದರು. ಆಮೇಲೆ ಬೈಕ್ ಬಿಟ್ಟು ಆಟೋ ಮೂಲಕ ಕೆ.ಆರ್ ಪುರಂಗೆ ತಲುಪಿ ಅಲ್ಲಿಂದ ಬಸ್ ಮೂಲಕ ಮತ್ತೆ ಆಂಧ್ರಕ್ಕೆ ತಲುಪುತ್ತಿದ್ದರು. ಅಷ್ಟೇ ಅಲ್ಲ ಸರಗಳ್ಳತನ ಮಾಡಿ ಕೂಡಲೇ ಬಟ್ಟೆ ಬದಲಿಸುತ್ತಿದ್ದ ಖದೀಮರು, ಸಿಸಿಟಿಯಲ್ಲಿ ಚಹರೆ ಗೊತ್ತೇ ಆಗದಂತೆ ಎಸ್ಕೇಪ್ ಆಗುತ್ತಿದ್ದರು. ಇದನ್ನೂ ಓದಿ: ಹೃದಯ-ಶ್ವಾಸಕೋಶ ವೈಫಲ್ಯವೇ ಚೀತಾ ಸಾವಿಗೆ ಕಾರಣ: ವೈದ್ಯರ ಸ್ಪಷ್ಟನೆ

    ನಂತರ ಆರೋಪಿಗಳನ್ನ ಸೆರೆಹಿಡಿಯಲು ಪಕ್ಕಾ ಸ್ಕೆಚ್ ಹಾಕಿದ ಖಾಕಿ ಪಡೆ ಸಿನಿಮೀಯ ರೀತಿಯಲ್ಲಿ ಆರೋಪಿಗಳಿಗೆ ಹೆಡೆಮುರಿಕಟ್ಟುವಲ್ಲಿ ಯಶಸ್ವಿಯಾಗಿದೆ. ಕೇಸ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಗಿರಿನಗರ ಪೊಲೀಸರಿಗೆ, ಸಿಸಿಟಿವಿ ಪರಿಶೀಲಿಸಿದಾಗ ಕದ್ದ ಬೈಕ್ ಪತ್ತೆಯಾಗಿತ್ತು. ಇದರಿಂದ ಕದ್ದ ಬೈಕ್‌ಗೆ ಜಿಪಿಎಸ್ ಅಳವಡಿಸಿ, ಪ್ರತಿದಿನ ಜಿಪಿಎಸ್ ಮೇಲೆ ನಿಗಾ ವಹಿಸಿದ್ದರು. 20 ದಿನಗಳ ಬಳಿಕ ಮತ್ತೆ ಬೆಂಗಳೂರಿಗೆ ಬಂದಿದ್ದ ಆರೋಪಿಗಳು ಕದ್ದ ಬೈಕ್‌ನಲ್ಲೇ ಫೀಲ್ಡಿಗಿಳಿದಿದ್ದರು. ಕೂಡಲೇ ಜಿಪಿಎಸ್ ಟ್ರ್ಯಾಕ್‌ ಮಾಡಿ, ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

  • ಮದುವೆಯಾಗುವಂತೆ ಕೇಳಿದ್ದಕ್ಕೆ ಲಿವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿದ್ದ ಗೆಳತಿಯನ್ನ ಕೊಂದೇಬಿಟ್ಟ – ಮುಂದೇನಾಯ್ತು?

    ಮದುವೆಯಾಗುವಂತೆ ಕೇಳಿದ್ದಕ್ಕೆ ಲಿವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿದ್ದ ಗೆಳತಿಯನ್ನ ಕೊಂದೇಬಿಟ್ಟ – ಮುಂದೇನಾಯ್ತು?

    ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದೆ. ಲಿವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿದ್ದ (Live In Relationship) 25ರ ಮಹಿಳೆಯನ್ನ ಕತ್ತು ಹಿಸುಕಿ ಕೊಲೆಗೈದು, ಆಕೆಯ ಮೃತದೇಹವನ್ನು ಮನೆಯಿಂದ 12 ಕಿಮೀ ದೂರದಲ್ಲಿ ಎಸೆದಿರುವ ಘಟನೆ ಈಶಾನ್ಯ ದೆಹಲಿಯಲ್ಲಿ ನಡೆದಿದೆ.

    ಇದೇ ಏಪ್ರಿಲ್‌ 12ರ ತಡರಾತ್ರಿ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಮಹಿಳೆಯ (Women) ದೇಹದಲ್ಲಿ ಯಾವುದೇ ಗಾಯದ ಗುರುತುಗಳು ಕಂಡುಬಂದಿರಲಿಲ್ಲ, ಮರಣೋತ್ತರ ಪರೀಕ್ಷೆಯ ನಂತರ ಸಾವಿಗೆ ನಿಖರ ಕಾರಣ ತಿಳಿದುಬಂದಿದೆ ಎಂದು ಉಪಪೊಲೀಸ್‌ ಆಯುಕ್ತ ಜಾರ್ಜ್‌ ಟರ್ಕಿ ತಿಳಿಸಿದ್ದಾರೆ. ಇದನ್ನೂ ಓದಿ: AisaCup: ಕೊನೆಗೂ ಭಾರತದ ಎದುರು ಮಂಡಿಯೂರಿದ ಪಾಕ್‌ – ICCಗೆ ಕಳಿಸಿರೋ ಪ್ರಸ್ತಾವನೆಯಲ್ಲಿ ಏನಿದೆ?

    ಏನಿದು ಘಟನೆ?
    ರೋಹಿತಾ (25) ಎಂಬ ಮಹಿಳೆ, ವಿನೀತ್‌ ಎಂಬವನ ಜೊತೆ ಲಿವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿ ವಾಸಿಸುತ್ತಿದ್ದಳು. ಕಳೆದ 4 ವರ್ಷಗಳ ಹಿಂದೆ ಇವರಿಬ್ಬರು ಮನೆ ಬಿಟ್ಟು ಓಡಿಹೋಗಿದ್ದರು. ನಂತರ ರೋಹಿತಾ, ವಿನೀತ್‌ಗೆ ಮದುವೆಯಾಗುವಂತೆ (Marriage) ಒತ್ತಾಯಿಸುತ್ತಿದ್ದಳು. ಇದೇ ವಿಷಯಕ್ಕಾಗಿ ಇವರಿಬ್ಬರ ನಡುವೆ ಜಗಳ ನಡೆದಿತ್ತು. ಏಪ್ರಿಲ್‌ 12 ರಂದು ಸಹ ಜಗಳವಾಡಿದ್ದರು, ಈ ವೇಳೆ ಮಾತಿಗೆ ಮಾತು ಬೆಳೆದು, ವಿನೀತ್‌, ರೋಹಿತಾಳನ್ನ ಕತ್ತುಹಿಸುಕಿ ಕೊಲೆ ಮಾಡಿದ್ದಾನೆ. ನಂತರ ತನ್ನ ಸ್ನೇಹಿತನ ಸಹಾಯದಿಂದ ಶವ ಎಸೆದು ಬಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಗೋಧ್ರಾ ರೈಲು ಬೋಗಿ ಸುಟ್ಟ ಪ್ರಕರಣ – 8 ದೋಷಿಗಳಿಗೆ ಸುಪ್ರೀಂ ಕೋರ್ಟ್ ಜಾಮೀನು

    ಮೃತದೇಹ ಪತ್ತೆಯಾದ ನಂತರ ಅರೋಪಿಗಳನ್ನ ಪತ್ತೆಹಚ್ಚಲು 50ಕ್ಕೂ ಹೆಚ್ಚು ಪೊಲೀಸರನ್ನೊಳಗೊಂಡ ವಿಶೇಷ ತಂಡವನ್ನ ರಚಿಸಲಾಗಿತ್ತು. ಶವ ಪತ್ತೆಯಾದ ಸ್ಥಳದಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನ ಪರಿಶೀಲಿಸಿದಾಗ ಬೈಕ್‌ನಲ್ಲಿ ಇಬ್ಬರು ಪುರುಷರು ಮೃತದೇಹ ಎಸೆದು ಹೋಗಿರುವುದು ಕಂಡುಬಂದಿತ್ತು. ವೀಡಿಯೋದಲ್ಲಿ ಒಬ್ಬ ವ್ಯಕ್ತಿ ತನ್ನ ಭುಜದ ಮೇಲೆ ಮೃತದೇಹ ಹೊತ್ತುಕೊಂಡು ಹೋಗುತ್ತಿದ್ದನು, ಈ ವೇಳೆ ಆರೋಪಿಯ ಸಹೋದರಿ ಪಾರುಲ್‌, ಅವನ ಹಿಂದೆ ಹೋಗುತ್ತಿದ್ದಳು. ಅಲ್ಲದೇ ತನ್ನ ಸ್ಕಾಫ್‌ನಿಂದ ಶವವನ್ನ ಮರೆಮಾಚಲು ಸಹಾಯ ಮಾಡಿದ್ದಳು ಎಂಬುದು ಗೊತ್ತಾಯಿತು. ಆಕೆಯನ್ನು ವಿಚಾರಣೆಗೆ ಒಳಪಡಿಸಿದಾಗ ಸತ್ಯ ಒಪ್ಪಿಕೊಂಡಳು.

    ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಶವ ಸಾಗಿಸಿದ್ದ ಬೈಕ್‌ ವಶಪಡಿಸಿಕೊಂಡಿದ್ದಾರೆ. ಜೊತೆಗೆ ಆರೋಪಿಗಳಿಗೆ ಸಹಕರಿಸಿದ್ದ ಎರಡು ಮಕ್ಕಳ ತಾಯಿ ಪಾರುಲ್‌ ಎಂಬಾಕೆಯನ್ನ ಬಂಧಿಸಲಾಗಿದೆ. ವಿನೀತ್‌ ಹಾಗೂ ಸ್ನೇಹಿತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

    ವಿನೀತ್ ಮತ್ತು ಅವನ ತಂದೆ 2019 ರಲ್ಲಿ ಉತ್ತರ ಪ್ರದೇಶದ ಬಾಗ್‌ಪತ್‌ನಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾರೆ. ಆದ್ರೆ ಆರೋಪಿ ವಿನೀತ್‌ ಕಳೆದ ವರ್ಷ ನವೆಂಬರ್‌ನಿಂದ ಜಾಮೀನಿನ ಮೇಲೆ ಹೊರಗಿದ್ದ.

  • ಪ್ರೇಯಸಿಯ ಬರ್ತ್‌ಡೇ ಕೇಕ್ ಕತ್ತರಿಸಿ ಬಳಿಕ ಕತ್ತನ್ನೂ ಕೊಯ್ದ ಪಾಗಲ್ ಪ್ರೇಮಿ

    ಪ್ರೇಯಸಿಯ ಬರ್ತ್‌ಡೇ ಕೇಕ್ ಕತ್ತರಿಸಿ ಬಳಿಕ ಕತ್ತನ್ನೂ ಕೊಯ್ದ ಪಾಗಲ್ ಪ್ರೇಮಿ

    ಬೆಂಗಳೂರು: ಪ್ರೇಯಸಿಯ ಹುಟ್ಟುಹಬ್ಬವನ್ನು (Birthday) ಕೇಕ್ ಕತ್ತರಿಸುವ ಮೂಲಕ ಅದ್ದೂರಿಯಾಗಿ ಆಚರಿಸಿದ ಬಳಿಕ ಪಾಗಲ್ ಪ್ರಿಯಕರ (Lover) ಆಕೆಯ ಕತ್ತನ್ನು ಕೊಯ್ದು ಹತ್ಯೆ (Murder) ನಡೆಸಿರುವ ವಿಚಿತ್ರ ಘಟನೆ ಬೆಂಗಳೂರಿನ (Bengaluru) ಲಗ್ಗೆರೆಯಲ್ಲಿ ನಡೆದಿದೆ.

    ನವ್ಯ (25) ಕೊಲೆಯಾದ ಯುವತಿಯಾಗಿದ್ದು, ಆಕೆಯ ಪ್ರಿಯಕರ ಪ್ರಶಾಂತ್ ಹತ್ಯೆ ಮಾಡಿದ್ದಾನೆ. ಯುವತಿ ಬೇರೊಬ್ಬನ ಜೊತೆ ಚಾಟ್ ಮಾಡುತ್ತಿದ್ದಳು ಎಂಬ ಅನುಮಾನದ ಹಿನ್ನೆಲೆ ಪ್ರಶಾಂತ್ ಕೃತ್ಯ ಎಸಗಿದ್ದಾನೆ.

    ನವ್ಯ ಪೊಲೀಸ್ ಇಲಾಖೆಯ ಆಂತರಿಕ ಭದ್ರತಾ ವಿಭಾದಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದಳು. ನವ್ಯ ಹಾಗೂ ಪ್ರಶಾಂತ್ ಇಬ್ಬರು ಕನಕಪುರ ಮೂಲದವರಾಗಿದ್ದು, ದೂರದ ಸಂಬಂಧಿಗಳಾಗಿದ್ದರು. ಮಾತ್ರವಲ್ಲದೇ ಇಬ್ಬರೂ ಕಳೆದ 6 ವರ್ಷಗಳಿಂದ ಪ್ರೀತಿಸುತ್ತಿದ್ದರು.

    ಕಳೆದ ಮಂಗಳವಾರ ನವ್ಯ ಹುಟ್ಟುಹಬ್ಬ ಇತ್ತು. ಅಂದು ಆಕೆ ಬ್ಯುಸಿ ಇದ್ದ ಕಾರಣ ಪ್ರಶಾಂತ್ ಶುಕ್ರವಾರ ಹುಟ್ಟುಹಬ್ಬವನ್ನು ಆಚರಿಸಲು ಯೋಜಿಸಿದ್ದ. ಅದರಂತೆಯೇ ಶುಕ್ರವಾರ ರಾತ್ರಿ ಬರ್ತ್‌ಡೇ ಸೆಲೆಬ್ರೇಷನ್ ಮಾಡಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದ. ಇದನ್ನೂ ಓದಿ: ಜಪಾನ್ ಪ್ರಧಾನಿ ಭಾಷಣದ ವೇಳೆ ಸ್ಫೋಟ

    ಪ್ರೇಯಸಿಯ ಹುಟ್ಟುಹಬ್ಬದ ಕೇಕ್ ಕತ್ತರಿಸಿದ ಬಳಿಕ ಪ್ರಶಾಂತ್ ಆಕೆಯ ಕತ್ತನ್ನು ಕೊಯ್ದು ಹತ್ಯೆ ಮಾಡಿದ್ದಾನೆ. ಘಟನೆ ಬಗ್ಗೆ ತಿಳಿದ ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ. ಮೃತ ಯುವತಿಯ ಶವವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ರಾಜಗೋಪಾಲನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕಾಂಗ್ರೆಸ್‌ ಅಭ್ಯರ್ಥಿ ಬಾಬುರಾವ್‌ ಚಿಂಚನಸೂರ್‌ ಕಾರು ಅಪಘಾತ – ಮಾಜಿ ಸಚಿವ ಆಸ್ಪತ್ರೆಗೆ ದಾಖಲು

  • ಗಂಡನನ್ನ ಬಿಟ್ಟು ಮತ್ತೊಬ್ಬನನ್ನ ಮದುವೆಯಾದ್ಳು, ಅವನಿಂದಲೇ ಕೊಲೆಯಾದ್ಳು

    ಗಂಡನನ್ನ ಬಿಟ್ಟು ಮತ್ತೊಬ್ಬನನ್ನ ಮದುವೆಯಾದ್ಳು, ಅವನಿಂದಲೇ ಕೊಲೆಯಾದ್ಳು

    ಆನೇಕಲ್: ಮದುವೆಯಾಗಿದ್ದರೂ (Marriage) ಗಂಡನಿಂದ ದೂರವಾಗಿದ್ದ ವಿವಾಹಿತೆಯೊಬ್ಬಳು ಮತ್ತೊಬ್ಬನನ್ನ ಮದುವೆಯಾಗಿ ರಾಜರೋಷವಾಗಿ ಓಡಾಡಿಕೊಂಡಿದ್ದಳು. ಕೊನೆಗೆ ಅವನಿಂದಲೇ ಕೊಲೆಯಾಗಿರುವ ಘಟನೆ ಆನೇಕಲ್ ತಾಲೂಕಿನ ಹೆಬ್ಬಗೋಡಿ (Hebbagodi) ವ್ಯಾಪ್ತಿಯಲ್ಲಿ ನಡೆದಿದೆ.

    ಬೆಂಗಳೂರು ನಗರ ಜಿಲ್ಲೆಯ ಆನೇಕಲ್ (Anekal) ತಾಲೂಕಿನ ಹೆಬ್ಬಗೋಡಿ ವ್ಯಾಪ್ತಿಯ ಸಿಂಗೇನ ಅಗ್ರಹಾರ ನಿರ್ಜನ ಪ್ರದೇಶದಲ್ಲಿ ಸುಟ್ಟ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದ್ದು, ಮಂಜುಳಾ (32) ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಕೊನೆಯದ್ದು ಅಂತ 92ನೇ ವಯಸ್ಸಿನಲ್ಲಿ ಪ್ಲಾನ್‌ ಮಾಡಿದ್ದ 5ನೇ ಮದುವೆ ರದ್ದುಪಡಿಸಿದ ಮುರ್ಡೋಕ್

    ಕೆಲ ದಿನಗಳ ಹಿಂದೆಯಷ್ಟೇ ಮಂಜುಳಾ ಕಾಣೆಯಾಗಿರುವ ಬಗ್ಗೆ ದೂರು ದಾಖಲಾಗಿತ್ತು. ಇತ್ತೀಚೆಗೆ 2ನೇ ಪತಿ ನಾರಾಯಣ ಜೊತೆ ಹೊರಗೆ ಹೋಗಿದ್ದ ಮಂಜುಳಾ ಮತ್ತೆ ವಾಪಸ್ ಬಂದಿರಲಿಲ್ಲ. ಇದರಿಂದ ಅನುಮಾನಗೊಂಡಿದ್ದ ಕುಟುಂಬಸ್ಥರು ಹೆಬ್ಬಗೋಡಿ ಠಾಣೆಯಲ್ಲಿ (Hebbagodi Police) ದೂರು ದಾಖಲಿಸಿದ್ದರು. ನಿರ್ಜನ ಪ್ರದೇಶದಲ್ಲಿ ಸುಟ್ಟ ಸ್ಥಿತಿಯಲ್ಲಿ ಮೃತದೇಹ ದೊರೆತಾಗ ಗುರುತು ಪತ್ತೆಗಾಗಿ ಮಂಜುಳಾ ತಂಗಿ ಲಕ್ಷ್ಮಿಯನ್ನ ಕರೆಸಲಾಗಿತ್ತು. ಆಕೆ ಕಿವಿಯೋಲೆ, ಕೊರಳಲ್ಲಿದ್ದ ಸರ ನೋಡಿ ಗುರುತು ಪತ್ತೆಹಚ್ಚಿದ್ದಾರೆ. ಇದನ್ನೂ ಓದಿ: ಶೀಘ್ರವೇ ಬರಲಿದೆ ವಾಟ್ಸಪ್ ಚಾಟ್ ಲಾಕ್ ಮಾಡೋ ಹೊಸ ಫೀಚರ್

    ಮದುವೆಯಾಗಿದ್ದರೂ ಸಲುಗೆ ಬೆಳೆಸಿದ್ದ ಮಂಜುಳಾ: ಕಳೆದ 10 ವರ್ಷಗಳ ಹಿಂದೆ ಇಲ್ಲಿನ ಸಂಪಿಗೆನಗರದ ನಿವಾಸಿ ನಾರಾಯಣಪ್ಪ ಹಾಗೂ ಮಂಜುಳಾ ನಡುವೆ ಸ್ನೇಹ ಬೆಳೆದಿತ್ತು. ಮದುವೆಯಾಗಿದ್ದರೂ ಗಂಡನಿಂದ ದೂರವಾಗಿದ್ದ ಮಂಜುಳಾ ರಾಜಾರೋಷವಾಗಿ ನಾರಾಯಣಪ್ಪ ಜೊತೆಗೆ ಸಲುಗೆಯಿಂದ ಓಡಾಡಿಕೊಂಡಿದ್ದಳು. ಹಲವು ಬಾರಿ ಇವರಿಬ್ಬರ ಮಧ್ಯೆ ಕಿರಿಕ್‌ ಆದಾಗ ಠಾಣೆಯಲ್ಲೇ ನಾರಾಯಣಪ್ಪ ಮದುವೆ ಆಗಿದ್ದ. ಕೆಲ ದಿನಗಳವರೆಗೆ ಎಲ್ಲವೂ ಚೆನ್ನಾಗಿಯೇ ಇತ್ತು. ಆ ನಂತರ ದುಡ್ಡು ಕೊಡುವಂತೆ ನಾರಾಯಣಪ್ಪ, ಮಂಜುಳಾ ಜೊತೆ ಕಿರಿಕ್‌ ಮಾಡುತ್ತಿದ್ದ. ಅಲ್ಲದೇ ನಿನ್ನನ್ನ ಸುಟ್ಟುಹಾಕಿಬಿಡುತ್ತೇನೆ ಎಂದು ಸಂಬಂಧಿಕರ ಮಧ್ಯೆಯೇ ಬೆದರಿಕೆ ಹಾಕಿದ್ದ.

    ಕಳೆದ ಮಾರ್ಚ್‌ 29 ರಂದು ನಾರಾಯಣಪ್ಪ ಆಕ್ಟೀವಾದಲ್ಲಿ ಮಂಜುಳಾಳನ್ನ ಕರೆದುಕೊಂಡು ಹೋಗಿದ್ದನು, ಇದೇ ವೇಳೆ ಆಕೆಯನ್ನ ಕೊಲೆ ಮಾಡಿ, ನಿರ್ಜನ ಪ್ರದೇಶದಲ್ಲಿ ಸುಟ್ಟುಹಾಕಿದ್ದಾನೆ ಎನ್ನಲಾಗಿದೆ. ಕೆಲ ಗಂಟೆಗಳ ಬಳಿಕ ತಾನೊಬ್ಬನೆ ಮನೆಗೆ ಹಿಂದಿರುಗಿದ್ದಾನೆ ಎಂದು ತಿಳಿದುಬಂದಿದೆ. ಈಗಾಗಲೇ ನಾರಾಯಣಪ್ಪನನ್ನ ಬಂಧಿಸಿರುವ ಹೆಬ್ಬಗೋಡಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

  • ಮದ್ಯದ ಬಾಟ್ಲಿ, ಕಲ್ಲಿನಿಂದ ಜಜ್ಜಿ ವ್ಯಕ್ತಿಯ ಬರ್ಬರ ಕೊಲೆ

    ಬೀದರ್: ಮದ್ಯದ ಬಾಟ್ಲಿ ಹಾಗೂ ಕಲ್ಲಿನಿಂದ ಜಜ್ಜಿ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ (Murder) ಮಾಡಿದ ಘಟನೆ ಬೀದರ್ (Bidar) ಜಿಲ್ಲೆ ಚಿಟ್ಟಗುಪ್ಪ (Chittaguppa) ತಾಲೂಕಿನ ಉಡಬಾಳು ಗ್ರಾಮದಲ್ಲಿ ನಡೆದಿದೆ.

    ರಾಜೆಪ್ಪ ಪುಂಡಲೀಕ (55) ಕೊಲೆಯಾದ ದುರ್ದೈವಿ. ಈತ ಉಡಬಾಳು ಗ್ರಾಮದಲ್ಲಿ ಹಲಿಗೆ ಬಾರಿಸುವ ಕೆಲಸ ಮಾಡುತ್ತಿದ್ದು, ಸಾರಾಯಿ ಕುಡಿಯುವ ಚಟಕ್ಕೆ ದಾಸನಾಗಿದ್ದ ಎಂದು ತಿಳಿದು ಬಂದಿದೆ. ಈತನನ್ನು ಬರ್ಬರವಾಗಿ ಕೊಲೆಗೈದು ಆರೋಪಿಗಳು ಪರಾರಿಯಾಗಿದ್ದಾರೆ. ಇದನ್ನೂ ಓದಿ: SSLC ಪರೀಕ್ಷಾ ಕೇಂದ್ರದಲ್ಲಿ ನಕಲು – ಮುಖ್ಯೋಪಾಧ್ಯಾಯ ಸೇರಿ 15 ಸಿಬ್ಬಂದಿ ಅಮಾನತು 

    ಉಡಬಾಳ ಗ್ರಾಮದ ಹೊರ ವಲಯದ ಸ್ಮಶಾನ ಭೂಮಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಕೊಲೆಗೆ ನಿಖರವಾದ ಕಾರಣ ಇನ್ನೂ ತಿಳಿದು ಬಂದಿಲ್ಲ. ಸ್ಥಳಕ್ಕೆ ಚಿಟ್ಟಗುಪ್ಪ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಮೃತರ ಪತ್ನಿ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಒಟ್ಟು 22.79 ಕೋಟಿ ನಗದು, 1,52 ಕೋಟಿ ಮೌಲ್ಯದ ಲಿಕ್ಕರ್ ವಶ

  • ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆ – ಕೊಲೆ ಆರೋಪ

    ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆ – ಕೊಲೆ ಆರೋಪ

    ಬೆಂಗಳೂರು: ಇಲ್ಲಿನ ಪೂರ್ಣಪ್ರಜ್ಞಾ ಬಡಾವಣೆಯ ಮನೆಯೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವಿವಾಹಿತ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಪತ್ನಿಯ ಕುಟುಂಬಸ್ಥರು ಪತಿಯೇ ಕೊಲೆಗೈದು ನೇಣು ಹಾಕಿದ್ದಾನೆ ಎಂದು ಆರೋಪಿಸಿದ್ದಾರೆ.

    ರಶ್ಮಿ (32) ಮೃತ ಮಹಿಳೆ. ಮಂಡ್ಯ (Mandya) ಮೂಲದ ರಶ್ಮಿ ಕಳೆದ 10 ವರ್ಷಗಳ ಹಿಂದೆ ಶ್ರೀರಂಗಪಟ್ಟಣ ಮೂಲದ ಅರವಿಂದ್ ಎಂಬಾತನೊಂದಿಗೆ ವಿವಾಹವಾಗಿದ್ದರು. ದಂಪತಿಗೆ 5 ವರ್ಷದ ಗಂಡು ಮಗು ಇದೆ. ಇದನ್ನೂ ಓದಿ: 10 ರೂ.ನ 30 ನೋಟು ಎಣಿಸಲು ಸಾಧ್ಯವಾಗದ ವರ- ಮದುವೆ ಕ್ಯಾನ್ಸಲ್ ಮಾಡಿದ ವಧು

    ಅರವಿಂದ್ ಖಾಸಗಿ ಕಂಪನಿಯಲ್ಲಿ ಇಂಜಿನಿಯರ್ (Engineer) ಆಗಿ, ರಶ್ಮಿ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಪತಿಯ ಕುಟುಂಬಸ್ಥರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದರೆ, ಪತ್ನಿಯ ಕುಟುಂಬಸ್ಥರು ಕೊಲೆ ಆರೋಪ ಹೊರಿಸಿದ್ದಾರೆ. ಇದನ್ನೂ ಓದಿ: ಶನಿವಾರದಿಂದ ಎಕ್ಸ್‌ಪ್ರೆಸ್‌ವೇ ಸಂಚಾರ ಮತ್ತಷ್ಟು ದುಬಾರಿ – 22% ಟೋಲ್ ದರ ಹೆಚ್ಚಳ

    ಸ್ಥಳಕ್ಕೆ ಭೇಟಿ ನೀಡಿರುವ ಸುಬ್ರಮಣ್ಯಪುರ ಪೊಲೀಸರು (Subramanyapura Police) ಪರಿಶೀಲನೆ ನಡೆಸಿದ್ದಾರೆ. ಬಳಿಕ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

  • ನೇಣು ಬಿಗಿದುಕೊಂಡು ವಿಲೇಜ್ ಅಕೌಂಟೆಂಟ್ ಆತ್ಮಹತ್ಯೆ

    ನೇಣು ಬಿಗಿದುಕೊಂಡು ವಿಲೇಜ್ ಅಕೌಂಟೆಂಟ್ ಆತ್ಮಹತ್ಯೆ

    ಆನೇಕಲ್: ವಿಲೇಜ್ ಅಕೌಂಟೆಂಟ್ (ಗ್ರಾಮ ಲೆಕ್ಕಿಗರು) ಆಗಿ ಕೆಲಸ ಮಾಡುತ್ತಿದ್ದ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು (Bengaluru) ಹೊರವಲಯ ಆನೇಕಲ್ (Anekal) ಪಟ್ಟಣದ ಮುನಿ ವೀರಪ್ಪ ಗಲ್ಲಿಯಲ್ಲಿ ನಡೆದಿದೆ.

    ಶ್ರೀನಿವಾಸ್ ರೆಡ್ಡಿ ಅವರ ಮನೆಯಲ್ಲಿ ವಾಸವಿದ್ದ ಆಲಿಯ ಅಂಜುಮ್ ಅಣ್ಣಿಗೇರಿ (22) ಮೃತ ಯುವತಿ. ಈಕೆ ಸರ್ಜಾಪುರ ನಾಡಕಚೇರಿಯಲ್ಲಿ ವಿಲೇಜ್ ಅಕೌಂಟೆಂಟ್ (VA) ಆಗಿ ಕೆಲಸ ನಿರ್ವಹಿಸುತ್ತಿದ್ದರು. ಇದನ್ನೂ ಓದಿ: ಯುಪಿ ಪೊಲೀಸರಿಂದ ಹತ್ಯೆಯಾಗುವ ಭಯವಿದೆ – ಬಂಧನದಲ್ಲಿರುವ ಮಾಜಿ ಸಂಸದ ಅತಿಕ್ ಅಹಮ್ಮದ್

    ಆನೆಕಲ್‌ ಪಟ್ಟಣದಲ್ಲಿ ತನ್ನ ಅಣ್ಣನೊಂದಿಗೆ ವಾಸವಿದ್ದರು. ಅಣ್ಣ ಕೆಲಸದ ಮೇಲೆ ಬಳ್ಳಾರಿಗೆ ಹೋಗಿದ್ದನು. ಈ ವೇಳೆ ಮನೆಯಲ್ಲಿ ಒಂಟಿಯಾಗಿದ್ದ ಆಲಿಯಾ ಭಾನುವಾರ ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಇದನ್ನೂ ಓದಿ: 4 ಮಕ್ಕಳೊಂದಿಗೆ ಬಾವಿಗೆ ಹಾರಿದ ಮಹಿಳೆ – ಸಾವಿಗೆ ಹೆದರಿ ಹಿರಿಯ ಮಗಳೊಂದಿಗೆ ಮೇಲೆ ಬಂದ್ಲು

    ಆನೇಕಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ, ತನಿಖೆ ಮುಂದುವರಿದಿದೆ.