Tag: crime

  • Gangwar: ಗುಂಡಿನ ದಾಳಿಗೆ ಪಂಜಾಬ್‌ ಮೂಲದ ಗ್ಯಾಂಗ್‌ಸ್ಟರ್‌ ಬಲಿ

    Gangwar: ಗುಂಡಿನ ದಾಳಿಗೆ ಪಂಜಾಬ್‌ ಮೂಲದ ಗ್ಯಾಂಗ್‌ಸ್ಟರ್‌ ಬಲಿ

    ಒಟ್ಟಾವ: ಮದುವೆ ಸಮಾರಂಭದಲ್ಲಿ ಅಪರಿಚಿತರು ನಡೆಸಿದ ಗುಂಡಿನ ದಾಳಿಗೆ ಪಂಜಾಬ್‌ ಮೂಲದ ಗ್ಯಾಂಗ್‌ಸ್ಟರ್‌ (Punjab Origin Gangster) ಬಲಿಯಾಗಿರುವ ಘಟನೆ ಕೆನಡಾದ (Canada) ವ್ಯಾಂಕೋವರ್‌ ನಗರದಲ್ಲಿ ನಡೆದಿದೆ.

    ತಡರಾತ್ರಿ ಸುಮಾರು 1:30ರ ವೇಳೆಗೆ ಗುಂಡಿನ ದಾಳಿ (Shotout) ನಡೆದಿದ್ದು, 28 ವರ್ಷದ ಅಮರ್‌ ಪ್ರೀತ್‌ (ಚುಕ್ಕಿ) ಬಲಿಯಾಗಿದ್ದಾನೆ. ಗ್ಯಾಂಗ್‌ಸ್ಟರ್‌ಗಳಾಗಿದ್ದ ಅಮರ್‌ ಪ್ರೀತ್‌ ಸಹೋದರರಾದ ಸಮ್ರಾ ಮತ್ತು ರವೀಂದರ್‌ ಇಬ್ಬರೂ ಮದುವೆ ಅತಿಥಿಗಳಾಗಿ ಬಂದಿದ್ದರು. ಇದೇ ಸಮಾರಂಭಕ್ಕೆ ಕೆಲವು ಅಪರಿಚಿತ ವ್ಯಕ್ತಿಗಳೂ ಸೇರಿದಂತೆ 60 ಮಂದಿ ಹಾಜರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: 5, 6 ವರ್ಷದ ಬಾಲಕಿಯರ ಮೇಲೆ ಸಂಬಂಧಿಕನಿಂದಲೇ ರೇಪ್‌ – ಆರೋಪಿ ಎಸ್ಕೇಪ್‌

    CRIME 2

    ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದು ಉದ್ದೇಶಿತ ಗ್ಯಾಂಗ್‌ ವಾರ್‌ ಆಗಿದೆ. ಆರೋಪಿಗಳ ಬಗ್ಗೆ ಸುಳಿವು ಸಿಕ್ಕಲ್ಲಿ ಸಹಾಯವಾಣಿ ಮೊ.ಸಂ. 6047172500ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಪೊಲೀಸರಿಂದ ತಪ್ಪಿಸಿಕೊಳ್ಳಲು ಚಿನ್ನದ ಸರ ನುಂಗಿದ- ಗಂಟಲಲ್ಲಿ ಸಿಲುಕಿ ಆಸ್ಪತ್ರೆಯಲ್ಲಿ ನರಳಾಡಿದ! 

    2022ರ ಆಗಸ್ಟ್‌ನಲ್ಲಿ ಕೆನಡಾ ಪೊಲೀಸರು ಗ್ಯಾಂಗ್‌ಸ್ಟರ್‌ಗಳೊಂದಿಗೆ ಸಂಪರ್ಕದಲ್ಲಿದ್ದ 11 ವ್ಯಕ್ತಿಗಳ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದರು. ಅವರಲ್ಲಿ ಅಮರ್‌ ಪ್ರೀತ್‌ ಮತ್ತು ಸಹೋದರ ರವೀಂದರ್‌ ಸೇರಿ 9 ಮಂದಿ ಪಂಜಾಬ್‌ ಮೂಲದವರು ಎಂದು ತಿಳಿಸಿದ್ದರು.

  • 5, 6 ವರ್ಷದ ಬಾಲಕಿಯರ ಮೇಲೆ ಸಂಬಂಧಿಕನಿಂದಲೇ ರೇಪ್‌ – ಆರೋಪಿ ಎಸ್ಕೇಪ್‌

    ಲಕ್ನೋ: ಮದುವೆ ಸಮಾರಂಭವೊಂದರಲ್ಲಿ (Marriage Party) ಇಬ್ಬರು ಬಾಲಕಿಯರ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿರುವ ಘಟನೆ ಲಕ್ನೋದ ಬಿಜ್ನೋರ್ ಗ್ರಾಮದಲ್ಲಿ ನಡೆದಿದೆ.

    ಶೆರ್ಕೋಟ್ ಪೊಲೀಸ್ ಠಾಣಾ (Sherkot police station) ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ʻಬರಾತ್‌ʼ ಮದುವೆ ಪಾರ್ಟಿಗೆ ತೆರಳಿದ್ದ ಬಾಲಕಿಯರ ಮೇಲೆ ಅತ್ಯಾಚಾರ ನಡೆದಿದ್ದು, ಸಂತ್ರರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಮಣಿಪುರ ಮತ್ತೆ ಧಗ ಧಗ – ಅಮಿತ್‌ ಶಾ ಭೇಟಿಗೆ ಮುನ್ನ ಮತ್ತೊಂದು ಅಟ್ಯಾಕ್‌, ಐವರ ಸಾವು

    ಲಕ್ನೋದ ಶೆರ್ಕೋಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಮದುವೆ ಪಾರ್ಟಿಯಲ್ಲಿ ಇಬ್ಬರು ಬಾಲಕಿಯರು ಡಿಜೆ ನುಡಿಸುವುದನ್ನ ಆನಂದಿಸುತ್ತಿದ್ದರು, ಇದ್ದಕ್ಕಿದ್ದಂತೆ ಕಣ್ಮರೆಯಾಗಿಬಿಟ್ಟರು. ತಕ್ಷಣ ಸ್ಥಳೀಯರೆಲ್ಲಾ ಬಾಲಕಿಯರನ್ನ ಹುಡುಕಲು ಪ್ರಾರಂಭಿಸಿದರು. ನಂತರ ಪಾರ್ಟಿ ನಡೆಯುತ್ತಿದ್ದ ಸ್ಥಳದಿಂದ ಸ್ವಲ್ಪ ದೂರದಲ್ಲೇ ಇದ್ದ ಕಾಡಿನಲ್ಲಿ ಅರೆಪ್ರಜ್ಞಾ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿತು. ಬಾಲಕಿಯರನ್ನು ಪತ್ತೆಹಚ್ಚಿದ ಪೊಲೀಸರು ತಕ್ಷಣವೇ ಅವರನ್ನ ಆಸ್ಪತ್ರೆಗೆ ದಾಖಲಿಸಿದರು. ಇದನ್ನೂ ಓದಿ: ಕುಡಿಯುವ ನೀರಿನ ಘಟಕದಲ್ಲಿ ಮೋರಿ ನೀರು ಪೂರೈಕೆ- ಜನರ ಆರೋಗ್ಯದಲ್ಲಿ ಏರುಪೇರು

    CRIME COURT

    ಈ ಕುರಿತು ಪ್ರತಿಕ್ರಿಯಿಸಿರುವ ಎಸ್ಪಿ ನೀರಜ್‌ ಕುಮಾರ್‌ ಜದೌನ್‌, ಸಂತ್ರಸ್ತ ಬಾಲಕಿಯರಲ್ಲಿ ಒಬ್ಬರಿಗೆ 6 ವರ್ಷ ಮತ್ತೊಬ್ಬರಿಗೆ 5 ವರ್ಷ ತುಂಬಿದೆ. ಮಕ್ಕಳನ್ನು ಅವರ ಸಂಬಂಧಿಕನೊಬ್ಬ ಅಪಹರಿಸಿ ಅತ್ಯಾಚಾರವೆಸಗಿದ್ದಾನೆ. ಆರೋಪಿ ವಿರುದ್ಧ ಐಪಿಸಿ ಸೆಕ್ಷನ್‌ ಮತ್ತು ಪೋಕ್ಸೊ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿ ನಾಪತ್ತೆಯಾಗಿದ್ದು, ಶೋಧ ಕಾರ್ಯ ಮುಂದುವರಿದಿದೆ ಎಂದು ತಿಳಿಸಿದ್ದಾರೆ.

  • The Kerala Story Effect: ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಗೆಳತಿಯಿಂದ ಪ್ರಿಯಕರನ ವಿರುದ್ಧ ರೇಪ್ ಕೇಸ್

    The Kerala Story Effect: ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಗೆಳತಿಯಿಂದ ಪ್ರಿಯಕರನ ವಿರುದ್ಧ ರೇಪ್ ಕೇಸ್

    ಭೋಫಾಲ್: ದಿ ಕೇರಳ ಸ್ಟೋರಿ ಸಿನಿಮಾ ನೋಡಿದ ಮಧ್ಯಪ್ರದೇಶದ (Madhya Pradesh) ಇಂದೋರ್‌ನ ಯುವತಿಯೊಬ್ಬಳು ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ (Live IN RelationShip) ತನ್ನ ಪ್ರಿಯಕರನ ವಿರುದ್ಧವೇ ಪೊಲೀಸರಿಗೆ ದೂರು ನೀಡಿರುವ ಘಟನೆ ನಡೆದಿದೆ.

    ಯುವತಿಯು ತನ್ನನ್ನು ಪ್ರೀತಿ ಹೆಸರಲ್ಲಿ ಟ್ರ್ಯಾಪ್‌ ಮಾಡಿ ಅತ್ಯಾಚಾರ ಎಸಗಿದ್ದಾನೆ. ಅಲ್ಲದೇ ತನ್ನ ಮತಾಂತರವಾಗುವಂತೆ (Conversion) ಒತ್ತಡ ಹೇರುತ್ತಿದ್ದಾನೆ ಎಂದು ದೂರು ನೀಡಿದ್ದಾಳೆ. ಯುವತಿ ನೀಡಿದ ದೂರಿನ ಮೇರೆಗೆ ಕೇಸ್ ದಾಖಲಿಸಿಕೊಂಡಿರುವ ಪೊಲೀಸರು, 23 ವರ್ಷದ ಯುವಕನನ್ನ ಬಂಧಿಸಿದ್ದಾರೆ.

    ಇತ್ತೀಚಿಗೆ ನಾವಿಬ್ಬರೂ `ದಿ ಕೇರಳ ಸ್ಟೋರಿ’ ಸಿನಿಮಾ (The Kerala Story Cinema) ನೋಡಿದ್ವಿ, ಇದಾದ ನಂತರ ನಮ್ಮ ನಡುವೆ ಭಿನ್ನಾಭಿಪ್ರಾಯ ಮೂಡಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಇದನ್ನೂ ಓದಿ: ಬ್ಯಾಂಕ್‌ಗಳಲ್ಲಿ ಶುರುವಾಯ್ತು ಪಿಂಕ್ ನೋಟ್ ವಿನಿಮಯ – RBI ಆದೇಶದ ವಿರುದ್ಧ ಹೈಕೋರ್ಟ್‌ಗೆ ಅರ್ಜಿ

    ಮಾಹಿತಿ ಪ್ರಕಾರ, ಆ ಯುವಕನ ಜೊತೆಯೇ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿ ಇದ್ದಿದ್ದಾಗಿ ದೂರುದಾರ ಯುವತಿ ತಿಳಿಸಿದ್ದಾಳೆ. ಅಂದ ಹಾಗೇ, ಆರೋಪಿ ಪ್ರಿಯಕರ 12ನೇ ತರಗತಿ ಪಾಸ್ ಆಗಿದ್ದು, ನಿರುದ್ಯೋಗಿಯಾಗಿದ್ದಾನೆ. ಸಂತ್ರಸ್ತ ಯುವತಿ ಸುಶಿಕ್ಷಿತಳಾಗಿದ್ದು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿ ಯುವಕನ ವಿರುದ್ಧ ಬಲವಂತ ಅಥವಾ ಮೋಸದಿಂದ ಮತಾಂತರ ಮಾಡುವುದನ್ನು ನಿಷೇಧಿಸುವ, ಮಧ್ಯಪ್ರದೇಶ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ-2021 ಹಾಗೂ IPC ಸೆಕ್ಷನ್‌ಗಳ ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ ಎಂದು ಖಜ್ರಾನಾ ಪೊಲೀಸ್ ಠಾಣೆಯ ಉಸ್ತುವಾರಿ ದಿನೇಶ್ ವರ್ಮಾ ತಿಳಿಸಿದ್ದಾರೆ. ಇದನ್ನೂ ಓದಿ: IT ಕ್ಷೇತ್ರದಲ್ಲಿ ಒಂದೇ ವರ್ಷಕ್ಕೆ 60 ಸಾವಿರ ಜಾಬ್‌ ಕಟ್‌

  • ಮಹಿಳೆಯರಿಗೆ ಬಳಸಿದ ಕಾಂಡೋಮ್, ಲೈಂಗಿಕ ಸಂದೇಶದ ಲೆಟರ್ ಪೋಸ್ಟ್ – ಯಾರು ಕಳಿಸಿದ್ದಾರೆ ಅನ್ನೋದೆ ಸಸ್ಪೆನ್ಸ್

    ಮಹಿಳೆಯರಿಗೆ ಬಳಸಿದ ಕಾಂಡೋಮ್, ಲೈಂಗಿಕ ಸಂದೇಶದ ಲೆಟರ್ ಪೋಸ್ಟ್ – ಯಾರು ಕಳಿಸಿದ್ದಾರೆ ಅನ್ನೋದೆ ಸಸ್ಪೆನ್ಸ್

    ಕ್ಯಾನ್ಬೆರಾ: ಖಾಸಗಿ ಶಾಲೆಯೊಂದರಲ್ಲಿ ವ್ಯಾಸಂಗ ಮಾಡಿದ್ದ ಸುಮಾರು 65 ಮಹಿಳೆಯರಿಗೆ ಬಳಸಿದ ಕಾಂಡೋಮ್ ಹಾಗೂ ಮೇಲ್‌ನಿಂದ ಬೆದರಿಕೆ ಸಂದೇಶ ಪತ್ರವನ್ನ ಕಳುಹಿಸಿರುವ ಘಟನೆ ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ನಡೆದಿದೆ.

    1990ರ ದಶಕದ ಉತ್ತರಾರ್ಧದಲ್ಲಿ ಮೆಲ್ಬೋರ್ನ್ ಬಳಿಯ ಕ್ಯಾಥೋಲಿಕ್ ಹೈಸ್ಕೂಲ್ ಕಿಲ್ಬ್ರೆಡಾ ಕಾಲೇಜ್ ಮೆಂಟೋನ್‌ನಲ್ಲಿ ವ್ಯಾಸಂಗ ಮಾಡಿದ ಸುಮಾರು 65 ಮಹಿಳೆಯರು ಕಳೆದ 2 ತಿಂಗಳಲ್ಲಿ ವಿಚಿತ್ರ ಮೇಲ್ ಸಂದೇಶವನ್ನ ಸ್ವೀಕರಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

    ಇದೊಂದು ಉದ್ದೇಶಿತ ಕೃತ್ಯ ಎಂದು ಕರೆಯಲಾಗಿದ್ದು, ಈ ಘಟನೆ ಹಿಂದಿರುವ ವ್ಯಕ್ತಿಯನ್ನ ಪತ್ತೆಮಾಡಲು ಆಸ್ಟ್ರೇಲಿಯಾ ಪೊಲೀಸರು ತನಿಖೆ ಆರಂಭಿಸಿದ್ದಾರೆ. 1999ರ ಶಾಲೆಯ ದಾಖಲಾತಿ ಪುಸ್ತಕದಿಂದ ಮಹಿಳೆಯರ ವಿಳಾಸ ಪಡೆದಿರುವುದಾಗಿ ವಿಕ್ಟೋರಿಯಾ ಪೊಲೀಸ್ ಡಿಟೆಕ್ಟಿವ್ ಸೀನಿಯರ್ ಸಾರ್ಜೆಂಟ್ ಗ್ರಾಂಟ್ ಲೂಯಿಸ್ ತಿಳಿಸಿದ್ದಾರೆ. ಇದನ್ನೂ ಓದಿ: ಮುಂಬೈ ದಾಳಿಯ ಆರೋಪಿ ತಹವ್ವುರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕ ಅನುಮತಿ

    ಈ ಕುರಿತು ಮಾತನಾಡಿರುವ ಗ್ರಾಂಟ್ ಲೂಯಿಸ್, ತನಿಖಾಧಿಕಾರಿಗಳು ಅಪರಾಧಿಗಳನ್ನ ಪತ್ತೆಹಚ್ಚಲು ಡಿಎನ್‌ಎ ಮತ್ತು ಕೈಬರಹದ ವಿಶ್ಲೇಷಣೆ ನಡೆಸುತ್ತಿದ್ದಾರೆ. ಸುಮಾರು 24 ವರ್ಷಗಳ ಹಿಂದೆಯೇ ಮಹಿಳೆಯರ ವಿಳಾಸವನ್ನು ಶಾಲೆಯ ದಾಖಲಾತಿ ಪುಸ್ತಕದಿಂದ ಪಡೆದುಕೊಂಡಿದ್ದಾರೆ. ಮಹಿಳೆಯರಿಗೆ ಕಳುಹಿಸಲಾದ ಪತ್ರಗಳು ಕೆಲವು ಕೈಬರಹ ಮತ್ತು ಕೆಲವು ಟೈಪ್ ಮಾಡಿದವುಗಳಾಗಿವೆ. ಆದ್ರೆ ಎಲ್ಲ ಪತ್ರಗಳೂ ಬೆದರಿಕೆಯ ಲೈಂಗಿಕ ಸಂದೇಶಗಳನ್ನು ಒಳಗೊಂಡಿವೆ ಎಂದು ತಿಳಿಸಿದ್ದಾರೆ.

    ಅಲ್ಲದೇ, ನಾವು ನಿಮ್ಮನ್ನು ಹುಡುಕೇ ಹುಡುಕುತ್ತೇವೆ. ನೀವು ಇದನ್ನು ಇಲ್ಲಿಗೇ ನಿಲ್ಲಿಸಿದರೆ ಒಳ್ಳೆಯದು ಎಂದು ಪೊಲೀಸರು ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ಬ್ರಿಜಿಡಿನ್ ಸಿಸ್ಟರ್ಸ್ ಎಂಬವರು 1904ರಲ್ಲಿ ಬಾಲಕಿಯರಿಗಾಗಿ ಸ್ವಾಯತ್ತ ಕ್ಯಾಥೋಲಿಕ್ ಶಾಲೆಯನ್ನ ಸ್ಥಾಪಿಸಿದರು.

    ಮೊದಲ ಘಟನೆಯು ಮಾರ್ಚ್ 20 ರಂದು ವರದಿಯಾಗಿತ್ತು. ಸೋಮವಾರ ಮತ್ತೊಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸಂತ್ರಸ್ತ ಮಳೆಯರಲ್ಲಿ ಒಬ್ಬರು ತಾನು ಶಾಲಾ ದಾಖಲಾತಿ ಪುಸ್ತಕದಲ್ಲಿ ದಾಖಲಿಸಲಾದ ಹೆಸರಿನಿಂದ ಗುರುತಿಸಿಕೊಂಡಿದ್ದಾಳೆ. ಆಕೆಯ ತಾಯಿ ಸಂದೇಶ ಪತ್ರವನ್ನ ನೋಡಿ ಆಘಾತಗೊಂಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಆ ನಿರ್ದೇಶಕ ಸಾಮರ್ಥ್ಯ ಪರೀಕ್ಷಿಸಿಕೊಳ್ಳಲು ತನ್ನೊಂದಿಗೆ ಮಲಗುವಂತೆ ಕೇಳಿದ್ದ – ಕರಾಳ ನೆನಪು ಬಿಚ್ಚಿಟ್ಟ ಫ್ರೆಂಚ್‌ ನಟಿ

    ಸಂತ್ರಸ್ತ ಮಹಿಳೆಯರಲ್ಲಿ ಒಬ್ಬರಾದ ಬ್ರೀ ಮಾತನಾಡಿ, ನಿಜಕ್ಕೂ ತುಂಬಾ ಅಸಹ್ಯಕರವಾದ ಸಂದೇಶವನ್ನು ಕಳುಹಿಸಲಾಗಿದೆ. ಅದು ಮೇಲ್‌ನಲ್ಲಿ ನಿರೀಕ್ಷಿಸುವ ವಿಷಯವೇ ಅಲ್ಲ. ನಾನು ಆ ರಾತ್ರಿ ನಿದ್ರೆಯೇ ಮಾಡಲಿಲ್ಲ. ನಮ್ಮ ಪೋಷಕರಲ್ಲಿ ಕೆಲವರಿಗೆ ಸಾಕಷ್ಟು ವಯಸ್ಸಾಗಿದೆ. ಕೆಲವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಕೆಲವು ಹುಡುಗಿಯರು ಪತ್ರ ನೋಡುತ್ತಿದ್ದಂತೆ ಅಸ್ವಸ್ಥರಾಗಿದ್ದಾರೆ. ನಮ್ಮ ವಿರುದ್ಧ ದ್ವೇಷ ಕಟ್ಟಿಕೊಳ್ಳಲು ಸಾಧ್ಯವೇ ಇಲ್ಲ. ಅಂತಹದ್ದರಲ್ಲಿ ಇದೆಲ್ಲಾ ಹೇಗೆ ಬಂತು ಅನ್ನೋದೇ ಅಚ್ಚರಿಯಾಗುತ್ತಿದೆ ಬ್ರೀ ಹೇಳಿದ್ದಾರೆ.

  • ಮೈಸೂರಿನಲ್ಲಿ ಮತ್ತೆ ಗ್ಯಾಂಗ್ ವಾರ್ – ಅವ್ವ ಮಾದೇಶ್ ಆಪ್ತನ ಬರ್ಬರ ಹತ್ಯೆ

    ಮೈಸೂರಿನಲ್ಲಿ ಮತ್ತೆ ಗ್ಯಾಂಗ್ ವಾರ್ – ಅವ್ವ ಮಾದೇಶ್ ಆಪ್ತನ ಬರ್ಬರ ಹತ್ಯೆ

    ಮೈಸೂರು: ನಗರದಲ್ಲಿ ಮತ್ತೆ ಗ್ಯಾಂಗ್‌ವಾರ್ (Gangwar) ಶುರುವಾಗಿದ್ದು, ರೌಡಿ ಶೀಟರ್ ಒಬ್ಬನ ಬರ್ಬರ ಹತ್ಯೆ ನಡೆದಿದೆ.

    ಒಂಟಿಕೊಪ್ಪಲಿನ ನಿವಾಸಿ ಚಂದ್ರಶೇಖರ್ ಅಲಿಯಾಸ್ ಚಂದು ಬರ್ಬರವಾಗಿ ಕೊಲೆಯಾಗಿದ್ದಾನೆ. ಈತ ಮಾಜಿ ನಗರ ಪಾಲಿಕೆ ಸದಸ್ಯ ಅವ್ವ ಮಾದೇಶ್ (Avva Madesh) ಆಪ್ತ ಎಂದು ತಿಳಿಬಂದಿದೆ. ಇದನ್ನೂ ಓದಿ: ಗರ್ಲ್‍ಫ್ರೆಂಡ್ ರೇಪ್ ಮಾಡಿ ಖಾಸಗಿ ಅಂಗಕ್ಕೆ ಚಿಲ್ಲಿ ಪೌಡರ್ ಹಾಕಿದ ವಿವಾಹಿತ!

    ಮಚ್ಚು ಲಾಂಗ್ ಹಿಡಿದುಕೊಂಡು ದ್ವಿಚಕ್ರ ವಾಹನದಲ್ಲಿ ಬಂದ 6 ಜನ ದುಷ್ಕರ್ಮಿಗಳು ಚಂದುನನ್ನ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾರೆ. ಇದನ್ನೂ ಓದಿ: ಆ ನಿರ್ದೇಶಕ ಸಾಮರ್ಥ್ಯ ಪರೀಕ್ಷಿಸಿಕೊಳ್ಳಲು ತನ್ನೊಂದಿಗೆ ಮಲಗುವಂತೆ ಕೇಳಿದ್ದ – ಕರಾಳ ನೆನಪು ಬಿಚ್ಚಿಟ್ಟ ಫ್ರೆಂಚ್‌ ನಟಿ

    ಹುಣಸೂರಿನಲ್ಲಿ ನಡೆದಿದ್ದ ಜೋಡಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಚಂದು, ಕೆಲ ದಿನಗಳ ಹಿಂದೆಯಷ್ಟೇ ಕೇಸ್ ಖುಲಾಸೆಯಾಗಿ ಜೈಲಿನಿಂದ ಬಿಡುಗಡೆಯಾಗಿದ್ದ.

    ಇದೀಗ ಚಂದು ಕೊಲೆಯಾಗಿದ್ದು, ಪಡುವಾರಳ್ಳಿಯ ದೇವು ಕೊಲೆಗೆ ಪ್ರತೀಕಾರ ತೀರಿಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಒಂಟಿಕೊಪ್ಪಲಿನಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.

  • ಪತಿಯನ್ನು ಕೊಂದು ಸ್ನೇಹಿತರಿಗೆ ಪಾರ್ಟಿ ಕೊಟ್ಟಿದ್ದ ಕಿಲ್ಲರ್ ಲೇಡಿ

    ಪತಿಯನ್ನು ಕೊಂದು ಸ್ನೇಹಿತರಿಗೆ ಪಾರ್ಟಿ ಕೊಟ್ಟಿದ್ದ ಕಿಲ್ಲರ್ ಲೇಡಿ

    ವಾಷಿಂಗ್ಟನ್: ಪತಿಯನ್ನು ಕೊಂದು ಸ್ನೇಹಿತರಿಗೆ ಪಾರ್ಟಿ ಕೊಟ್ಟಿದ್ದ ಕಿಲ್ಲರ್ ಲೇಡಿಯನ್ನು ಅಮೆರಿಕ ಪೊಲೀಸರು (US Police) ಬಂಧಿಸಿದ್ದಾರೆ.

    ಮೂಲಗಳ ಪ್ರಕಾರ, ತನ್ನ ಪತಿ ಎರಿಕ್ ರಿಚಿನ್ಸ್ ಸಾವಿನ ಮರುದಿನವೇ ಪತ್ನಿ ಮನೆಗೆ ಬೀಗ ಜಡಿದು, ದೊಡ್ಡ ಪಾರ್ಟಿ ಆಯೋಜಿಸಿ ಸ್ನೇಹಿತರನ್ನು (Friends Party) ಕರೆದಿದ್ದಳು. ತಾನೂ ಚೆನ್ನಾಗಿ ಕುಡಿದು ಕುಣಿದು ಕುಪ್ಪಳಿಸಿದ್ದಳು. ಇದನ್ನೂ ಓದಿ: ಹೋಟೆಲ್ ನಲ್ಲಿ ವೇಶ್ಯಾವಾಟಿಕೆ : ಖ್ಯಾತನಟಿ ಜೊತೆ ಮಾಡೆಲ್ ಬಂಧನ

    2022ರ ಮಾರ್ಚ್ 4ರಂದು ಕಾಮಾಸ್ ವಿಲ್ಲೋ ಕೋರ್ಟ್ನಲ್ಲಿರುವ ತನ್ನ ಮನೆಯಲ್ಲಿ ಪತಿ ಎರಿಕ್ ರಿಚಿನ್ಸ್‌ ವಿಷ ನೀಡಿ ಕೊಂದಿರುವ ಆರೋಪದ ಮೇಲೆ ಪತ್ನಿ ರಿಚಿನ್ಸ್ನನ್ನು ಕಳೆದವಾರ ಬಂಧಿಸಲಾಗಿತ್ತು. ಪತಿ ಸತ್ತ ಒಂದು ವರ್ಷದ ನಂತರ ?ಆರ್ ಯು ವಿತ್ ಮಿ?’ ಎಂಬ ಮಕ್ಕಳ ಪುಸ್ತಕವನ್ನೂ ಈಕೆ ಪ್ರಕಟಿಸಿದ್ದಳು. ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡಾಗ ಆಗುವ ಕಷ್ಟದ ಅನುಭವವನ್ನು ಸರಳವಾಗಿ ಮಕ್ಕಳಿಗೆ ತಿಳಿಸುವುದು. ಈ ಪುಸ್ತಕದ ಉದ್ದೇಶವಾಗಿತ್ತು.

    ಪೊಲೀಸರು ಸಾವಿನ ಕುರಿತು ವಿಚಾರಣೆ ನಡೆಸಿದಾಗ ಮೊದಲು ಉಲ್ಟಾ ಹೊಡೆದಿದ್ದ ಈಕೆ ನಂತರ ಪಾರ್ಟಿ ವೇಳೆ ವೋಡ್ಕಾ ಮಿಶ್ರಿತ ಪಾನೀಯಾ ಬೆರಸಿ ಕೊಟ್ಟಿದ್ದೆ ಎಂದು ಹೇಳಿದ್ದಳು. ಇದನ್ನೂ ಓದಿ: ಕೆಲಸದ ನೆಪದಲ್ಲಿ ಕರೆದೊಯ್ದು ಕಾರಿನಲ್ಲಿ ಕಿರುಕುಳ- ಬೈಕಲ್ಲಿ ಬಂದವ್ರಿಂದ ಮಹಿಳೆ ರಕ್ಷಣೆ

    CRIME 2

    ವೈದ್ಯಕೀಯ ಪರೀಕ್ಷೆಯಲ್ಲಿ ಮಿತಿಮೀರಿದ ಮದ್ಯ ಸೇವನೆಯಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿತ್ತು. ಫೆಂಟಾನಿಲ್ ಲಿಕ್ವಿಡ್ ಅನ್ನು 5 ಪಟ್ಟು ಹೆಚ್ಚಾಗಿ ಸೇವಿಸಿದ್ದಾರೆ ಎಂದು ವೈದ್ಯರು ಹೇಳಿದ್ದರು.

    ದಂಪತಿ ಔಷಧ ಮಳಿಗೆ ಪ್ರಾರಂಭಿಸಲು ಮುಂದಾಗಿದ್ದರು. ಅದಕ್ಕಾಗಿ ರಿಚಿನ್ಸ್ ಕೆಲವು ಔಷಧಗಳ ಬಗ್ಗೆ ಪ್ರಿಸ್ಕ್ರಿಪ್ಷನ್ ಕೇಳಿ, ಹೈಡ್ರೋಕೋಡೋನ್ ಸೇರಿ ಹಲವು ರೀತಿಯ ಮಾತ್ರೆಗಳನ್ನೂ ಪಡೆದಿದ್ದರು. ಫೆಬ್ರವರಿ 14ರಂದು ಪ್ರೇಮಿಗಳ ದಿನದ ಪ್ರಯುಕ್ತವಾಗಿ ದಂಪತಿ ಡಿನ್ನರ್ ಮಾಡಿದ್ದರು. ಅದೇ ದಿನ ಪತಿ ಆರೋಗ್ಯದಲ್ಲಿ ವ್ಯತ್ಯಾಸವಾಗಿ ಪತಿ ಸಾವನ್ನಪ್ಪಿದ್ದ. ಬಳಿಕ ತಾನೇ ಪೊಲೀಸರಿಗೆ ಕರೆ ಮಾಡಿ ನನ್ನ ಪತಿ ಕರೆಗೆ ಸ್ಪಂದಿಸುತ್ತಿಲ್ಲ ಎಂದು ರಿಚಿನ್ಸ್ ದೂರು ನೀಡಿದ್ದಳು. ಆದ್ರೆ ತನಿಖೆಯಲ್ಲಿ ಈಕೆಯ ಬಂಡವಾಳ ಬಯಲಾಗಿ ಬಂಧಿಸಲಾಗಿತ್ತು.

  • ತಲೆ ಮೇಲೆ ಕಲ್ಲು ಎತ್ತಿ ಹಾಕಿ ಮಹಿಳೆಯ ಭೀಕರ ಹತ್ಯೆ

    ತಲೆ ಮೇಲೆ ಕಲ್ಲು ಎತ್ತಿ ಹಾಕಿ ಮಹಿಳೆಯ ಭೀಕರ ಹತ್ಯೆ

    ಕಲಬುರಗಿ: ಮಹಿಳೆಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಕಲಬುರಗಿ (Kalaburagi) ಜಿಲ್ಲೆಯ ಜೇವರ್ಗಿ ತಾಲೂಕಿನ ಕುಕನೂರು (Kukanur) ಗ್ರಾಮದಲ್ಲಿ ನಡೆದಿದೆ.

    ಕುಕನೂರು ಗ್ರಾಮದ ಹೊರವಲಯದ ಜಮೀನಿನಲ್ಲಿ ಈ ಘಟನೆ ನಡೆದಿದ್ದು, ಗುರುಬಸಮ್ಮ ಹುಚ್ಚಡ (65) ಕೊಲೆಯಾದ ಮಹಿಳೆ. ಗುರುವಾರ ಬೆಳಗ್ಗೆ ಜಮೀನಿಗೆ ತೆರಳಿದ್ದ ಗುರುಬಸಮ್ಮ ಸಂಜೆಯಾದರೂ ವಾಪಸ್ ಮನೆಗೆ ಬಂದಿರಲಿಲ್ಲ. ಸಂಜೆ ವೇಳೆ ಇವರ ಕುಟುಂಬಸ್ಥರು ಜಮೀನಿಗೆ ತೆರಳಿ ನೋಡಿದಾಗ ಗುರುಬಸಮ್ಮ ಕೊಲೆಯಾಗಿ ಬಿದ್ದಿದ್ದರು. ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ ದುಷ್ಕರ್ಮಿಗಳು ಅವರ ಶವವನ್ನು ಜಮೀನಿನಲ್ಲೇ ಅರೆ ಬರೆಯಾಗಿ ಹೂತಿಟ್ಟು ಅಲ್ಲಿಂದ ಪರಾರಿಯಾಗಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್, ಜೆಡಿಎಸ್ ಮುಖಂಡರ ಮಧ್ಯೆ ಗಲಾಟೆ – ಕೈ ಮುಖಂಡನಿಗೆ ಚಾಕು

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಡ್ರಾಮಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಅಪಘಾತವಾಗಿ ಗಂಟೆ ಕಳೆದರೂ ಬಾರದ ಅಂಬುಲೆನ್ಸ್ – ನಡುರಸ್ತೆಯಲ್ಲೇ ನರಳಾಡಿ ಪ್ರಾಣ ಬಿಟ್ಟ ಯುವಕ

  • ಕರಿ ಜೊತೆಗೆ ಅನ್ನ ಮಾಡಿಲ್ಲ ಅಂತಾ ಪತ್ನಿಯನ್ನ ಹೊಡೆದು ಕೊಂದ ಪಾಪಿ ಗಂಡ

    ಕರಿ ಜೊತೆಗೆ ಅನ್ನ ಮಾಡಿಲ್ಲ ಅಂತಾ ಪತ್ನಿಯನ್ನ ಹೊಡೆದು ಕೊಂದ ಪಾಪಿ ಗಂಡ

    ಭುವನೇಶ್ವರ: ಕರಿ (Curry) ಜೊತೆಗೆ ಅನ್ನ (Cooking Rice) ಮಾಡಿಲ್ಲ ಅಂತಾ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನ ಹೊಡೆದೇ ಕೊಂದಿರುವ ಘಟನೆ ಒಡಿಶಾದ (Odisha) ಸಂಬಲ್‌ಪುರ ಜಿಲ್ಲೆಯಲ್ಲಿ ನಡೆದಿದೆ.

    ಜಮನಕಿರಾ ಪೊಲೀಸ್ ಠಾಣಾ ವ್ಯಾಪ್ತಿಯ ನುವಾಧಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಆರೋಪಿ ಪತಿ ಸನಾತನ ಧಾರುವಾ (40)ನನ್ನ ಬಂಧಿಸಲಾಗಿದೆ. ಮೃತ ಪತ್ನಿ ಪುಷ್ಪಾ (35) ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಫಿಶ್ ಫ್ರೈನಂತೆ ರುಚಿಕರ ಬಾಳೆಕಾಯಿ ರವಾ ಫ್ರೈ ಮಾಡಿ

    ದಂಪತಿಗೆ ಓರ್ವ ಮಗಳು ಹಾಗೂ ಒಬ್ಬ ಮಗನಿದ್ದು, ಮಗಳು ಕುಚಿಂದಾದಲ್ಲಿ ಮನೆಗೆಲಸ ಮಾಡುತ್ತಿದ್ದಾಳೆ. ಮಗ ಘಟನೆ ನಡೆದ ದಿನ ರಾತ್ರಿ ಮಲಗಲು ಸ್ನೇಹಿತನ ಮನೆಗೆ ಹೋಗಿದ್ದ ಎನ್ನಲಾಗಿದೆ. ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ‘ದಿ ಕೇರಳ ಸ್ಟೋರಿ’ ಪ್ರದರ್ಶನಕ್ಕೆ ನಿಷೇಧ

    ಏನಿದು ಘಟನೆ?
    ಧಾರುವಾ ಭಾನುವಾರ ಕೆಲಸ ಮುಗಿಸಿ ಮನೆಗೆ ಬಂದಿದ್ದ. ಆಗ ಪುಷ್ಪಾ ಕರಿಯನ್ನು ಮಾತ್ರ ಮಾಡಿದ್ದು, ಅದರ ಜೊತೆಗೆ ಅನ್ನ ಮಾಡಿರಲಿಲ್ಲ. ಇದೇ ವಿಚಾರಕ್ಕೆ ಇಬ್ಬರ ನಡುವೆ ವಾಗ್ವಾದ ನಡೆಯುತ್ತಿದ್ದಾಗ, ಪತಿ ಪುಷ್ಪಾಳ ಮೇಲೆ ಹಲ್ಲೆ ನಡೆಸಿ ಕೊಂದೇಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ತನ್ನ ಮಗ ಮನೆಗೆ ಹಿಂದಿರುಗಿದಾಗ ತಾಯಿ ಶವವಾಗಿ ಬಿದ್ದಿರುವುದು ಗೊತ್ತಾಗಿದೆ. ನಂತರ ಮಗ ಮಾಹಿತಿ ನೀಡಿದ್ದು, ಪೊಲೀಸರು ಬಂಧಿಸಿದ್ದಾರೆ. ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

  • ಮತ್ತೊಬ್ಬನನ್ನ ಮದ್ವೆಯಾಗಲು ಓಡಿಹೋದ 4 ಮಕ್ಕಳ ತಾಯಿ – ಮುಂದೇನಾಯ್ತು ನೋಡಿ…

    ಮತ್ತೊಬ್ಬನನ್ನ ಮದ್ವೆಯಾಗಲು ಓಡಿಹೋದ 4 ಮಕ್ಕಳ ತಾಯಿ – ಮುಂದೇನಾಯ್ತು ನೋಡಿ…

    ಪಾಟ್ನಾ: ಬಿಹಾರದ ಮಹಿಳೆಯೊಬ್ಬಳು (Bihar Women) ಮತ್ತೊಬ್ಬನನ್ನ ಮದುವೆಯಾಗಲು ತನ್ನ ನಾಲ್ಕು ಮಕ್ಕಳನ್ನು ಬಿಟ್ಟು ಓಡಿಹೋಗಿರುವ ಘಟನೆ ಬಿಹಾರದ (Bihar) ಮುಜಾಫರ್‌ಪುರದಲ್ಲಿ ನಡೆದಿದೆ.

    ಕತ್ರಾ ಪೊಲೀಸ್ ಠಾಣಾ (Katra Police Station) ವ್ಯಾಪ್ತಿಯಲ್ಲಿ ವಾಸವಿದ್ದ‌ ಅಮೋದ್ ಮಹತೋ ತನ್ನ ಪತ್ನಿ ಕಾಣೆಯಾಗಿರುವುದಾಗಿ ದೂರು ದಾಖಲಿಸಿದ್ದನು. ಬ್ಯಾಂಕ್‌ಗೆ ಹೋಗುವುದಾಗಿ ಹೇಳಿ ಹೋಗಿದ್ದ ಪತ್ನಿ, ಸಂಜೆಯಾದರೂ ವಾಪಸ್‌ ಮನೆಗೆ ಹಿಂದಿರುಗದಿದ್ದಾಗ ಪತಿ ಕಿಡ್ನ್ಯಾಪ್‌ ಆಗಿರುವುದಾಗಿ ದೂರು ದಾಖಲಿಸಿದ್ದಾನೆ. ಇದನ್ನೂ ಓದಿ:  ಕ್ರೇಜ್‌ಗಾಗಿ 300km ವೇಗದಲ್ಲಿ ಸೂಪರ್‌ ಬೈಕ್‌ ರೈಡಿಂಗ್‌ – ಯೂಟ್ಯೂಬರ್‌ ಸಾವು

    ಈ ಸಂಬಂಧ ಕೇಸ್‌ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ, ಆಕೆ ಮತ್ತೊಬ್ಬನೊಂದಿಗೆ ಓಡಿಹೋಗಿರುವುದು ಕಂಡುಬಂದಿದೆ. ವ್ಯಕ್ತಿಯೊಬ್ಬ ಆಕೆಗೆ ಮದುವೆಯ ಆಮಿಷ ಒಡ್ಡಿ ಕರೆದೊಯ್ದಿದ್ದಾನೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಒಂದು ಸೆಕೆಂಡ್‌ನಲ್ಲಿ ನಿನ್ನನ್ನು ಭಯೋತ್ಪಾದಕ ಅಂತ ಘೋಷಿಸುತ್ತೇನೆ – ಶಿಕ್ಷಕನಿಗೆ ಬಿಹಾರ ಪೊಲೀಸ್ ಬೆದರಿಕೆ

    ಸಂತ್ರಸ್ತೆಗೆ ನಾಲ್ಕು ಮಕ್ಕಳಿದ್ದಾರೆ. ಪತಿ ಅಮೋದ್‌ ಕೂಲಿ ಕೆಲಸ ಮಾಡಿಕೊಂಡು ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾನೆ. ಸದ್ಯ ಮಹಿಳೆಯನ್ನು ಪತ್ತೆಹಚ್ಚಲು ಪೊಲೀಸರು ಬಲೆ ಬೀಸಿದ್ದಾರೆ.

  • ಕುಡಿಯಲು ಹಣ ಕೊಡದಿದ್ದಕ್ಕೆ ಇಟ್ಟಿಗೆಯಿಂದ ತಲೆಗೆ ಹೊಡೆದು ತಂದೆಯನ್ನೇ ಕೊಂದ ಪಾಪಿ ಮಗ

    ಕುಡಿಯಲು ಹಣ ಕೊಡದಿದ್ದಕ್ಕೆ ಇಟ್ಟಿಗೆಯಿಂದ ತಲೆಗೆ ಹೊಡೆದು ತಂದೆಯನ್ನೇ ಕೊಂದ ಪಾಪಿ ಮಗ

    ಬೆಂಗಳೂರು: ಮದ್ಯಪಾನ (Liquor Drinking) ಮಾಡಲು ಹಣ ಕೊಡಲಿಲ್ಲ ಅನ್ನೋ ಕಾರಣಕ್ಕೆ ಮಗನೇ ತಂದೆಯನ್ನು ಕೊಲೆ ಮಾಡಿರುವ ಆಘಾತಕಾರಿ ಘಟನೆ ಬೆಂಗಳೂರಿನ ಗೋವಿಂದರಾಜನಗರ ಪೊಲೀಸ್ ಠಾಣಾ (Govindarajanagar Police Station) ವ್ಯಾಪ್ತಿಯಲ್ಲಿ ನಡೆದಿದೆ.

    ಸೆಕ್ಯೂರಿಟಿ ಗಾರ್ಡ್‌ ಆಗಿ ಕೆಲಸ ಮಾಡುತ್ತಿದ್ದ ಬಸವರಾಜು (60) ಕೊಲೆಯಾದ ವ್ಯಕ್ತಿ, ಆಟೋ ಚಾಲಕನಾಗಿದ್ದ ಮಗ ನೀಲಾಧರ ಕೊಲೆ ಆರೋಪಿಯಾಗಿದ್ದಾನೆ. ಇದನ್ನೂ ಓದಿ: ಆರಂಭಗೊಂಡ ಕೆಲವೇ ಗಂಟೆಗಳಲ್ಲಿ ವಂದೇ ಭಾರತ್ ಎಕ್ಸಪ್ರೆಸ್ ಅನ್ನು ವಿರೂಪಗೊಳಿಸಿದ ‘ಕೈ’ ಕಾರ್ಯಕರ್ತರು

    ಇಲ್ಲಿನ ಮಾರೇನಹಳ್ಳಿ ಪಿಎಸ್ ಬಡಾವಣೆಯ ಶೆಡ್‌ವೊಂದರಲ್ಲಿ ಕೊಲೆಯಾದ 15 ದಿನಗಳ ನಂತರ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಈ ಸಂಬಂಧ ಕೇಸ್‌ ದಾಖಲಿಸಿಕೊಂಡಿದ್ದ ಗೋವಿಂದರಾಜನಗರ ಪೊಲೀಸರು ತನಿಖೆ ನಡೆಸಿದಾಗ ಮಗನಿಂದಲೇ ಕೊಲೆಯಾಗಿರುವುದು ಪತ್ತೆಯಾಗಿದೆ. ಇದನ್ನೂ ಓದಿ: ಬಾಡಿಗೆ ವಾಹನದಲ್ಲಿ ಬರುತ್ತಿದ್ದ ಯೋಧರು – ದಾಳಿಗೆ ನಕ್ಸಲರಿಂದ 50 ಕೆಜಿ ಸುಧಾರಿತ IED ಬಳಕೆ

    ವಿಚಾರಣೆ ವೇಳೆ ನೀಲಾಧರ ತನ್ನ ತಂದೆ ಮದ್ಯಪಾನ ಮಾಡಲು ಹಣ ಕೊಡಲಿಲ್ಲ ಅನ್ನೋ ಕಾರಣಕ್ಕೆ ಇಟ್ಟಿಗೆಯಿಂದ ತಲೆಗೆ ಹೊಡೆದು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.