Tag: crime

  • ಉನ್ನತ ವ್ಯಾಸಂಗಕ್ಕೆ ತೆರಳಿದ್ದ ಹೈದರಾಬಾದ್ ಯುವತಿ ಲಂಡನ್‌ನಲ್ಲಿ ಭೀಕರ ಕೊಲೆ

    ಉನ್ನತ ವ್ಯಾಸಂಗಕ್ಕೆ ತೆರಳಿದ್ದ ಹೈದರಾಬಾದ್ ಯುವತಿ ಲಂಡನ್‌ನಲ್ಲಿ ಭೀಕರ ಕೊಲೆ

    ಲಂಡನ್: ಉನ್ನತ ವ್ಯಾಸಂಗಕ್ಕೆ ತೆರಳಿದ್ದ ಹೈದರಾಬಾದ್‌ನ (Hyderabad) ಯುವತಿಯನ್ನು ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಲಂಡನ್‌ನ ವೆಂಬ್ಲಿಯ (London) ನೀಲ್ಡ್ ಕ್ರೆಸೆಂಟ್‌ನಲ್ಲಿ ನಡೆದಿದೆ.

    ಉನ್ನತ ವ್ಯಾಸಂಗಕ್ಕಾಗಿ ಲಂಡನ್‌ಗೆ ತೆರಳಿದ್ದ ಕೋತಂ ತೇಜಸ್ವಿನಿ (27) ಯುವತಿಯನ್ನು ಮಂಗಳವಾರ ಬ್ರೆಜಿಲ್‌ನ ವ್ಯಕ್ತಿಯೊಬ್ಬ ವಸತಿಗೃಹದಲ್ಲಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ತೇಜಸ್ವಿನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಜೊತೆಗೆ 28 ವರ್ಷ ವಯಸ್ಸಿನ ಇನ್ನೊಬ್ಬ ಯುವತಿಗೂ ಚಾಕುವಿನಿಂದ ಇರಿದಿದ್ದು, ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ 24 ಮತ್ತು 23 ವರ್ಷದ ಇಬ್ಬರು ಆರೋಪಿಗಳನ್ನ ಬಂಧಿಸಲಾಗಿದೆ ಎಂದು ಮೆಟ್ರೋಪಾಲಿಟನ್ ಪೊಲೀಸರು (Metropolitan Police) ತಿಳಿಸಿದ್ದಾರೆ.

    ಈ ಕುರಿತು ಮಾಹಿತಿ ನೀಡಿರುವ ಹೈದರಾಬಾದ್ ಪೊಲೀಸ್ ಅಧಿಕಾರಿ ವಿ. ಸತ್ಯನಾರಾಯಣ, ತೇಜಸ್ವಿನಿ ಅವರ ಕುಟುಂಬ ಹೈದರಾಬಾದ್‌ನ ಚಂಪಾಪೇಟ್‌ನಲ್ಲಿ ವಾಸವಿದೆ. ತಂದೆ ಎಲೆಕ್ಟ್ರಿಕಲ್ ಕೆಲಸ ಮಾಡಿಕೊಂಡಿದ್ದು, ಸ್ವಂತ ಕೃಷಿ ಭೂಮಿಯನ್ನೂ ಹೊಂದಿದ್ದಾರೆ. ಆಕೆ ಇತ್ತೀಚೆಗೆ ಲಂಡನ್ನಿನಲ್ಲಿ ತನ್ನ ಎಂಎಸ್ಸಿ ಪದವಿ ಪೂರ್ಣಗೊಳಿಸಿದ್ದಳು. ಒಂದು ತಿಂಗಳ ಹಿಂದೆಯಷ್ಟೇ ಭಾರತಕ್ಕೆ ಭೇಟಿ ನೀಡಿದ್ದಳು. ಒಂದು ತಿಂಗಳ ಬಳಿಕ ಲಂಡನ್‌ಗೆ ಮರಳಿದ್ದಳು. ಈ ವರ್ಷದ ಮೇ ತಿಂಗಳಲ್ಲಿ ವಾಪಸ್ ಬರಬೇಕಿತ್ತು ಎಂದು ಪೋಷಕರು ತಿಳಿಸಿರುವುದಾಗಿ ಹೇಳಿದ್ದಾರೆ.

    ಬಂಧಿತ ಆರೋಪಿಯು ಮಾದಕ ವ್ಯಸನಿಯಾಗಿದ್ದು, ತೇಜಸ್ವಿನಿಯಿಂದ ಹಣ ವಸೂಲಿ ಮಾಡಲು ಯತ್ನಿಸಿದ್ದ. ಆಕೆ ನಿರಾಕರಿಸಿದಾಗ ಆತ ಚಾಕುವಿನಿಂದ ಇರಿದಿದ್ದಾನೆ ಎಂದು ತಿಳಿದುಬಂದಿದೆ ಈ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಹೇಳಿದ್ದಾರೆ.

    ಲಂಡನ್‌ನಿಂದ ಮರಳಿದ ಬಳಿಕ ಈ ವರ್ಷ ವಿವಾಹ ಆಗುತ್ತೇನೆ ಎಂದು ತೇಜಸ್ವಿನಿ ಪೋಷಕರಿಗೆ ಹೇಳಿದ್ದಳು. ತನ್ನ ಕೆಲಸಕ್ಕೂ ರಾಜೀನಾಮೆ ನೀಡಿದ್ದ ಆಕೆ, ಇನ್ನೊಂದು ತಿಂಗಳು ಕೆಲಸ ಮಾಡಿ ಬರುವುದಾಗಿ ಪೋಷಕರಿಗೆ ಹೇಳಿದ್ದಳು. ಅಷ್ಟರಲ್ಲೇ ದುರ್ಘಟನೆ ನಡೆದಿದೆ ಎಂದು ಪೋಷಕರು ಅಲವತ್ತುಕೊಂಡಿದ್ದಾರೆ.

    ಯುವತಿಯ ಪಾರ್ಥಿವ ಶರೀರವನ್ನು ಲಂಡನ್‌ನಿಂದ ಹೈದರಾಬಾದ್‌ಗೆ ತರಲು ಅಗತ್ಯ ವ್ಯವಸ್ಥೆ ಮಾಡುವಂತೆ ಮೃತಳ ಚಿಕ್ಕಪ್ಪ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ದಾಳಿ ಹಿಂದಿನ ಶಂಕಿತ ವ್ಯಕ್ತಿ ಪತ್ತೆ ಹಚ್ಚಲು ಸಾರ್ವಜನಿಕರ ಸಹಾಯ ಕೋರಲು ಮೆಟ್ರೋಪಾಲಿಟನ್ ಪೊಲೀಸರು ಬ್ರೆಜಿಲ್ ಪ್ರಜೆ ಕೆವೆನ್ ಚಿತ್ರವನ್ನು ಮಂಗಳವಾರ ಬಿಡುಗಡೆ ಮಾಡಿದ್ದಾರೆ. ಈ ಬಗ್ಗೆ ತನಿಖೆ ಮುಂದುವರಿದಿದೆ.

  • ಬೆಂಗ್ಳೂರಲ್ಲೂ ದೆಹಲಿ ಮಾದರಿಯ ಮರ್ಡರ್ – ಮಹಿಳೆಯನ್ನ ಕೊಂದು, ದೇಹ ಪೀಸ್ ಪೀಸ್ ಮಾಡಿದ ಹಂತಕರು

    ಬೆಂಗ್ಳೂರಲ್ಲೂ ದೆಹಲಿ ಮಾದರಿಯ ಮರ್ಡರ್ – ಮಹಿಳೆಯನ್ನ ಕೊಂದು, ದೇಹ ಪೀಸ್ ಪೀಸ್ ಮಾಡಿದ ಹಂತಕರು

    ಆನೇಕಲ್: ದೆಹಲಿಯಲ್ಲಿ ಶ್ರದ್ಧಾವಾಕರ್ (Shraddha Walker) ಹಾಗೂ ಮುಂಬೈನಲ್ಲಿ ಸರಸ್ವತಿ ವೈದ್ಯ ಹತ್ಯೆ ಪ್ರಕರಣದ ಮಾದರಿಯಲ್ಲೇ ಈಗ ಬೆಂಗಳೂರಿನಲ್ಲೊಂದು ಕೊಲೆ ಪ್ರಕರಣ ನಡೆದಿರುವುದು ಬೆಳಕಿಗೆ ಬಂದಿದೆ.

    ಬಿಹಾರದಿಂದ ಬೆಂಗಳೂರಿಗೆ (Bengaluru) ಬಂದಿದ್ದ ಯುವಕರು, ಆಸ್ತಿಗಾಗಿ ಮಹಿಳೆಯನ್ನ ಕೊಲೆ ಮಾಡಿ ದೇಹವನ್ನ ಪೀಸ್ ಪೀಸ್ ಮಾಡಿ ಎಸೆದು ಪರಾರಿಯಾಗಿರುವ ಘಟನೆ ಆನೇಕಲ್ ಉಪವಿಭಾಗದ ಬನ್ನೇರುಘಟ್ಟ ಪೋಲೀಸ್ ಠಾಣಾ (Bannerghatta Police Station) ವ್ಯಾಪ್ತಿಯಲ್ಲಿ ನಡೆದಿದೆ. ಆರೋಪಿಗಳ ಪೈಕಿ ಇಂದಲ್ ಕುಮಾರ್ (21) ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಮೃತ ಮಹಿಳೆಯನ್ನು ಗೀತಾ (54) ಎಂದು ಗುರುತಿಸಲಾಗಿದೆ.

    ಜೂನ್ 1ರಂದು ಮಹಿಳೆಯ ಮೃತದೇಹ ಪತ್ತೆಯಾಗಿತ್ತು. ಈ ಸಂಬಂಧ ತನಿಖೆ ಕೈಗೊಂಡಿದ್ದ ಬನ್ನೇರುಘಟ್ಟ ಪೊಲೀಸರು ಹಂತಕರನ್ನ ಪತ್ತೆಹಚ್ಚಲು ವಿಶೇಷ ತಂಡ ರಚನೆ ಮಾಡಿತ್ತು. ಪೊಲೀಸರ ಯಶಸ್ವಿ ಕಾರ್ಯಾಚರಣೆಯಿಂದ ಓರ್ವನ ಬಂಧನವಾಗಿದೆ. ಇದನ್ನೂ ಓದಿ: ದೇಶದ ಕೋಟ್ಯಂತರ ಜನ ಗಡ್ಡ ಬಿಟ್ಟಿದ್ದಾರೆ, ಅವರೆಲ್ಲ ಲಾಡೆನ್ ಆಗುತ್ತಾರಾ? – ಬಿಜೆಪಿಗೆ ಮನೋಜ್ ಝಾ ಪ್ರಶ್ನೆ

    ಏನಿದು ಕ್ರೈಂ ಸ್ಟೋರಿ?
    ಬಿಹಾರದಿಂದ ಬಂದಿದ್ದ ಯುವಕರು ಕೊಲೆಯಾದ ಮಹಿಳೆ (Women) ಗೀತಾ ಮನೆಯಲ್ಲೇ ಬಾಡಿಗೆಗೆ ಇದ್ದರು. ಕೊನೆಗೆ ಮನೆಯನ್ನು ತಮ್ಮ ಹೆಸರಿಗೇ ಮಾಡಿಕೊಡುವಂತೆ ಆಕೆಯನ್ನ ಒತ್ತಾಯಿಸಿದ್ದರು. ಅದಕ್ಕೆ ಒಪ್ಪದೇ ಇದ್ದದ್ದಕ್ಕೆ ಕೊಲೆ ಮಾಡಿದ್ದಾರೆ. ಈ ವಿಚಾರ ಹೊರಗೆ ತಿಳಿಯದಂತೆ ನೋಡಿಕೊಳ್ಳಲು ದೇಹವನ್ನ ತುಂಡರಿಸಿದ್ದಾರೆ. ಮೃತದೇಹದ ಭಾಗಗಳನ್ನ ತುಂಡು ತುಂಡಾಗಿ ಕತ್ತರಿಸಿ ಅಲ್ಲಲ್ಲಿ ಎಸೆದಿದ್ದಾರೆ. ಪ್ಲಾಸ್ಟಿಕ್ ಕವರ್‌ನಲ್ಲಿ ಕತ್ತರಿಸಿದ ಭಾಗಗಳನ್ನ ತುಂಬಿ ಬೇರೆಡೆಗೆ ಸಾಗಿಸಿದ್ದಾರೆ. ಇದನ್ನೂ ಓದಿ: ಕೆ.ಜಿಗೆ 2.75 ಲಕ್ಷಕ್ಕೆ ಮಾರಾಟವಾಯ್ತು ಜಗತ್ತಿನಲ್ಲೇ ದುಬಾರಿ ಮಾವಿನ ಹಣ್ಣು ‘ಮಿಯಾಝಾಕಿ’

    ಮಹಿಳೆಯನ್ನು ಕೊಲೆ ಮಾಡಿದ ನಂತರವೂ ಏನೂ ಆಗಿಲ್ಲವೆನ್ನುವಂತೆ ಆರೋಪಿಗಳು ಒಂದು ದಿನ ಕೆಲಸಕ್ಕೆ ತೆರಳಿದ್ದರು. ಅವರಲ್ಲಿಬ್ಬರು ಕಿರಾತಕರು ಶವದ ಮುಂದೆಯೇ ಕುಳಿತು ಊಟ ಮಾಡುತ್ತಿದ್ದರು. ಕೃತ್ಯ ನಡೆದ ಮೂರು ದಿನಗಳ ಬಳಿಕ ದುರ್ವಾಸನೆ ಬೀರುತ್ತಿದ್ದಂತೆ ಆತಂಕಗೊಂಡ ಆರೋಪಿಗಳು ಮನೆಯ ಹಿಂಭಾಗ ದೇಹದ ಭಾಗಗಳನ್ನ ಬಿಸಾಡಿ ಎಸ್ಕೇಪ್ ಆಗಿದ್ದಾರೆ. ಅದರಲ್ಲಿ ಮಹಿಳೆಯ ತಲೆ ಮತ್ತು ಒಂದು ಕೈ 1 ಕಿಮೀ ದೂರದಲ್ಲಿ ಪತ್ತೆಯಾದರೆ, ಬನ್ನೇರುಘಟ್ಟ ಬಯಲಾಜಿಕಲ್ ಪಾರ್ಕ್ ಅರಣ್ಯ ಪ್ರದೇಶದಲ್ಲಿ ರುಂಡ ಪತ್ತೆಯಾಗಿದೆ.

    ಕೃತ್ಯಕ್ಕೂ ಮುನ್ನ ಅತ್ಯಾಚಾರ ಆಗಿರುವ ಕುರಿತು ಪರಿಶೀಲನೆ ಸಹ ನಡೆಯುತ್ತಿದೆ. ಸದ್ಯದಲ್ಲೇ ಪೊಲೀಸರು ಮರಣೋತ್ತರ ಪರೀಕ್ಷೆ ವರದಿ ಪರಿಶೀಲನೆ ಮಾಡಲಿದ್ದಾರೆ. ಒಟ್ಟಿನಲ್ಲಿ ಈ ಕೊಲೆ ಮೇಲ್ನೋಟಕ್ಕೆ ಆಸ್ತಿ ವಿಚಾರಕ್ಕಾಗಿಯೇ ನಡೆದಿರುವುದು ಕಂಡುಬಂದಿದೆ. ಪ್ರಮುಖ ಆರೋಪಿಗಳಾದ ಪಂಕಜ್ ಕುಮಾರ್, ಸುಮೀತ್, ಉಳಿದ ಆರೋಪಿಗಳಿಗಾಗಿ ಬಲೆ ಬೀಸಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಹೇಳಿಕೆ ನೀಡಿದ್ದಾರೆ.

  • ಬೆಂಗ್ಳೂರಿನಲ್ಲಿ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ – 24 ಯುವತಿಯರ ರಕ್ಷಣೆ, 9 ಮಂದಿ ಅರೆಸ್ಟ್

    ಬೆಂಗ್ಳೂರಿನಲ್ಲಿ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ – 24 ಯುವತಿಯರ ರಕ್ಷಣೆ, 9 ಮಂದಿ ಅರೆಸ್ಟ್

    ಬೆಂಗಳೂರು: ವೇಶ್ಯಾವಾಟಿಕೆ ಅಡ್ಡೆ ಮೇಲೆ ಸಿಸಿಬಿ ಪೊಲೀಸರು (CCB Police) ದಾಳಿ ನಡೆಸಿದ್ದಾರೆ. 24 ಯುವತಿಯರನ್ನು ರಕ್ಷಣೆ ಮಾಡಿದ್ದು, 9 ಮಂದಿಯನ್ನು ಬಂಧಿಸಿರುವ ಘಟನೆ ಶನಿವಾರ ನಡೆದಿದೆ.

    ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣಾ (Jnanabharathi Police Station) ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಪತ್ನಿಯೊಂದಿಗೆ ಜಗಳ – ಬೀದಿಗಳಲ್ಲಿ ಆಕೆಯ ನಂಬರ್‌ನೊಂದಿಗೆ ಅಶ್ಲೀಲ ಪೋಸ್ಟರ್ ಹಚ್ಚಿದ ಆಸಾಮಿ

    ಆರೋಪಿಗಳು (Accused) ಕೆಲಸ ಕೊಡಿಸುವ ನೆಪದಲ್ಲಿ ಬೇರೆ ಬೇರೆ ರಾಜ್ಯಗಳಿಂದ ಯುವತಿಯರನ್ನ ಕರೆತಂದು ಅಪಾರ್ಟ್ಮೆಂಟ್ ನಲ್ಲಿಟ್ಟು ವೇಶ್ಯಾವಾಟಿಕೆ ನಡೆಸುತ್ತಿದ್ದರು. ಇದನ್ನೂ ಓದಿ: ಮದ್ವೆಯಾಗಿ ಮುಚ್ಚಿಟ್ಟಿದ್ದರು – ಡೆಡ್ಲಿ ಮರ್ಡರ್ ತನಿಖೆ ವೇಳೆ ಸ್ಫೋಟಕ ರಹಸ್ಯ ಬಯಲು

    ಈ ಕುರಿತು ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನ ಬಂಧಿಸಿದ್ದಾರೆ. 
  • ಉಪನ್ಯಾಸಕಿ ಮೇಲೆ ಲೈಂಗಿಕ ದೌರ್ಜನ್ಯ – ಪ್ರಾಂಶುಪಾಲ ಶರಣಪ್ಪ ಅಮಾನತು

    ಉಪನ್ಯಾಸಕಿ ಮೇಲೆ ಲೈಂಗಿಕ ದೌರ್ಜನ್ಯ – ಪ್ರಾಂಶುಪಾಲ ಶರಣಪ್ಪ ಅಮಾನತು

    ಬಳ್ಳಾರಿ: ಜಿಲ್ಲೆಯ ಪ್ರತಿಷ್ಠಿತ ಎಎಸ್‌ಎಂ ಮಹಿಳಾ ವಿದ್ಯಾಲಯದ (ASM Womens College) ಉಪನ್ಯಾಸಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ, ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಲೇಜು ಪ್ರಾಂಶುಪಾಲ (College Principal) ಶರಪ್ಪನನ್ನ ಸೇವೆಯಿಂದ ಅಮಾನತುಗೊಳಿಸಲಾಗಿದೆ.

    ಮಹಿಳಾ ವಿದ್ಯಾಲಯದ ಉಪನ್ಯಾಸಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದು ಮಾತ್ರವಲ್ಲದೇ, ಯಾರಿಗೂ ಹೇಳದಂತೆ ಬೆದರಿಕೆ ಕೂಡ ಹಾಕಿದ್ದ. ಇದರಿಂದ ನೊಂದ ಉಪನ್ಯಾಸಕಿ ನಗರದ ಮಹಿಳಾ ಪೊಲೀಸ್ ಠಾಣೆಗೆ (Women’s Police Station) ದೂರು ನೀಡಿ, ಕ್ರಮಕ್ಕೆ ಒತ್ತಾಯಿಸಿದ್ದರು. ಇದನ್ನೂ ಓದಿ: ಇತಿಹಾಸ ಹೇಳಿದ್ರೆ ಕಾಂಗ್ರೆಸ್‌ನವ್ರಿಗೆ ಮೈಯೆಲ್ಲಾ ಉರಿಯುತ್ತೆ, ಜನಕ್ಕೆ ಮೊದಲು ಗ್ಯಾರಂಟಿ ಕೊಡಿ – ಸೂಲಿಬೆಲೆ ತಿರುಗೇಟು

    ಈ ಬೆನ್ನಲ್ಲೇ ಘಟನೆ ಕುರಿತು ವೀರಶೈವ ವಿದ್ಯಾವರ್ಧಕ ಸಂಘದ ಕಚೇರಿಯಲ್ಲಿ ಅಧ್ಯಕ್ಷ ಆರ್. ರಾಮನಗೌಡ ಅವರ ಅಧ್ಯಕ್ಷತೆಯಲ್ಲಿ ತುರ್ತು ಕಾರ್ಯಕಾರಿ ಸಭೆ ನಡೆಸಿ ಶರಣಪ್ಪ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಧರಿಸಿತು. ಇದನ್ನೂ ಓದಿ: ಮದ್ವೆಯಾಗಿ ಮುಚ್ಚಿಟ್ಟಿದ್ದರು – ಡೆಡ್ಲಿ ಮರ್ಡರ್ ತನಿಖೆ ವೇಳೆ ಸ್ಫೋಟಕ ರಹಸ್ಯ ಬಯಲು

    ಕಾಲೇಜು ಉಪನ್ಯಾಸಕಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಕುರಿತು ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸ್ ವಿಚಾರಣೆ ಪೂರ್ತಿ ಆಗುವವರೆಗೂ ಶರಣಪ್ಪನನ್ನ ಅಮಾನತಿನಲ್ಲಿಡಲು ಆಡಳಿತ ಮಂಡಳಿ ನಿರ್ಧಾರ ಮಾಡಿದೆ. ಹಾಗಾಗಿ ಶುಕ್ರವಾರದಿಂದಲೇ (ಜೂನ್‌ 9) ಶರಣಪ್ಪನನ್ನ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.

  • ಮುಂಬೈ, ದೆಹಲಿಯಷ್ಟೇ ಅಲ್ಲ ಬೆಂಗ್ಳೂರಲ್ಲೂ ಹೆಚ್ಚಾಗ್ತಿದೆ ಲಿವಿಂಗ್ ರಿಲೇಷನ್ ಕೊಲೆ ಕೇಸ್

    ಮುಂಬೈ, ದೆಹಲಿಯಷ್ಟೇ ಅಲ್ಲ ಬೆಂಗ್ಳೂರಲ್ಲೂ ಹೆಚ್ಚಾಗ್ತಿದೆ ಲಿವಿಂಗ್ ರಿಲೇಷನ್ ಕೊಲೆ ಕೇಸ್

    ಬೆಂಗಳೂರು: ಮುಂಬೈ (Mumbai), ದೆಹಲಿಯಂತಹ (NewDelhi) ಮಹಾನಗರಗಳಲ್ಲಿ ಮಾತ್ರವಲ್ಲ ಬೆಂಗಳೂರಿನಲ್ಲೂ ಈಗ ಲಿವಿಂಗ್ ರಿಲೇಷನ್‌ಶಿಪ್ ಕೊಲೆ ಕೇಸ್‌ಗಳು (Living Relationship Murder Cases) ಹೆಚ್ಚಾಗಿ ದಾಖಲಾಗ್ತಿವೆ.

    ಲಿವಿಂಗ್ ರಿಲೇಷನ್‌ಶಿಪ್‌ನಲ್ಲೇ ಇರ್ತಾರೆ, ಜಗಳ ಮಾಡಿಕೊಂಡು ಕೊಲೆಯಾಗ್ತಾರೆ. ಅದೇ ರೀತಿ ಬೆಂಗಳೂರಿನಲ್ಲಿ ಕಳೆದ 8 ತಿಂಗಳಲ್ಲಿ ಕೇಸ್‌ಗಳು ದಾಖಲಾಗಿವೆ. ಎಲ್ಲಾ ಕೇಸ್‌ನಲ್ಲೂ ಮಾರಕಾಸ್ತ್ರ ಬಳಕೆಯಾಗಿದ್ದು, ಭೀಕರವಾಗಿ ಕೊಲೆಯಾಗಿರುವುದು ಕಂಡುಬಂದಿದೆ.

    ಕೇಸ್ ನಂ.1:

    ಬೆಂಗಳೂರಿನ ಅಶೋಕನಗರ ಠಾಣಾ ವ್ಯಾಪ್ತಿಯಲ್ಲಿ ಯುವತಿ ಕೌಸರ್ ಹಾಗೂ ಆರೋಪಿ ನದೀಪ್ ಪಾಷ 4 ವರ್ಷಗಳಿಂದ ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದರು. ಎಲ್ಲವೂ ಚೆನ್ನಾಗಿಯೇ ಇತ್ತು. ಈ ವೇಳೆ ಹುಟ್ಟುಹಬ್ಬಕ್ಕೆ ಬೆಳ್ಳಿ ಚೈನ್ ತಂದುಕೊಡದಿದ್ದಕ್ಕೆ ಕೌಸರ್ ಜಗಳ ತೆಗೆದು, ಇಬ್ಬರ ನಡುವೆ ವಾಗ್ವಾದ ಏರ್ಪಟ್ಟಿತ್ತು. ಈ ವೇಳೆ ನದೀಪ್ ಪಾಷಾ ಯುವತಿ ಕೌಸರ್‌ಳನ್ನ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿದ್ದ.

    ಕೇಸ್ ನಂ.2:

    ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದ ಯುವತಿ ಬೇರೊಬ್ಬನ ಜೊತೆ ಸ್ನೇಹ ಮಾಡಿದ್ದಕ್ಕೆ ಯುವತಿಯ ಪ್ರಿಯತಮ ಆತನನ್ನ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದ. ಆರೋಪಿ ವಿಕ್ಟರ್ ತನ್ನ ಪ್ರಿಯತಮೆಯೊಂದಿಗೆ ಕೆಲ ವರ್ಷಗಳಿಂದ ಅಮೃತಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ವಾಸವಿದ್ದ. ಆದ್ರೆ ಯುವತಿ ತನ್ನ ಸ್ನೇಹಿತ ಸುಲೇಮಾನ್ ಜೊತೆ ಸಲುಗೆಯಿಂದ ಇದ್ದಿದ್ದನ್ನು ನೋಡಿ ವಿಕ್ಟರ್, ಸುಲೇಮಾನ್‌ನನ್ನ ಭೀಕರವಾಗಿ ಕೊಲೆ ಮಾಡಿದ್ದ. ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೇಸ್ ದಾಖಲಾಗಿದೆ.

    ಕೇಸ್ ನಂ.3:

    ಮಾಜಿ ಪ್ರಿಯತಮೆಗೆ ಪದೇ ಪದೇ ಕರೆ ಮಾಡುತ್ತಿದ್ದಕ್ಕೆ ಆರೋಪಿ ಶ್ರೀಕಾಂತ್‌ನನ್ನು ಕೊಲೆ ಮಾಡಿದ್ದ ಘಟನೆ ಜ್ಞಾನಭಾರತಿ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಮಹಿಳೆಯೊಬ್ಬಳು ಮೊದಲು ಕೊಲೆಯಾದ ಶ್ರೀಕಾಂತ್ ಜೊತೆಗೆ ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದಳು. ನಂತರ ಅವನೊಂದಿಗೆ ಜಗಳವಾಡಿಕೊಂಡು ಬೇರ್ಪಟ್ಟು, ಅರುಣ್ ಕುಮಾರ್ ಜೊತೆಗಿದ್ದಳು. ಆದ್ರೆ ಶ್ರೀಕಾಂತ್ ಪದೇ ಪದೇ ಮಹಿಳೆಗೆ ಕರೆ ಮಾಡ್ತಿದ್ದರಿಂದ ಅರುಣ್ ಶ್ರೀಕಾಂತ್‌ನನ್ನ ಕೊಲೆ ಮಾಡಿಸಿದ್ದ. ಸಿಸಿಬಿ ಪೊಲೀಸರು ಆರೋಪಿಯನ್ನ ಬಂಧಿಸಿದ್ದರು.

    ಕೇಸ್ ನಂ.4:

    ತನ್ನನ್ನು ಮದುವೆಯಾಗುವಂತೆ ಒತ್ತಾಯಿಸಿದ್ದಕ್ಕೆ ಪ್ರಿಯತಮೆಯನ್ನ ಕೊಲೆ ಮಾಡಿದ್ದ ಘಟನೆ ಪರಪ್ಪನ ಅಗ್ರಹಾರ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಪ್ರಿಯತಮೆ ಸುನಿತಾ ಕೆಲ ವರ್ಷಗಳಿಂದ ಆರೋಪಿ ಪ್ರಿಯತಮ ಪ್ರಶಾಂತ್ ಜೊತೆಗೆ ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದಳು. ಸುನಿತಾ ಲಿವಿಂಗ್ ಸಾಕು ಮದುವೆಯಾಗು ಎಂದು ಒತ್ತಾಯಿಸಿದ್ದಕ್ಕೆ ಶ್ರೀಕಾಂತ್ ಆಕೆಯನ್ನ ಕತ್ತು ಹಿಸುಕಿ ಕೊಲೆ ಮಾಡಿದ್ದ.

    ಕೇಸ್ ನಂ.5:

    ತನ್ನ ಪ್ರಿಯತಮೆಯ ಮೇಲೆ ಅನುಮಾನಗೊಂಡು ರಾಡ್‌ನಿಂದ ಬಲವಾಗಿ ಹೊಡೆದು ಹತ್ಯೆ ಮಾಡಿದ್ದ ಘಟನೆ ರಾಮಮೂರ್ತಿ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ನೇಪಾಳ ಮೂಲದ ಕೃಷ್ಣಕುಮಾರಿ ಹಾಗೂ ಆರೋಪಿ ಸಂತೋಷ್ ಒಟ್ಟಿಗೇ ವಾಸಿಸುತ್ತಿದ್ದರು. ಆದ್ರೆ ಕೃಷ್ಣಕುಮಾರಿ ಮೇಲೆ ಅನುಮಾನಗೊಂಡಿದ್ದ ಸಂತೋಷ್ ಇದೇ ವಿಚಾರಕ್ಕೆ ಜಗಳ ತೆಗೆಯುತ್ತಿದ್ದ. ಕೊನೆಗೆ ಒಮ್ಮೆ ಜಗಳ ವಿಕೋಪಕ್ಕೆ ತಿರುಗಿ ಸಂತೋಷ್ ರಾಡ್‌ನಿಂದ ಬಲವಾಗಿ ಹೊಡೆದು ಕೃಷ್ಣಕುಮಾರಿಯನ್ನ ಕೊಲೆ ಮಾಡಿದ್ದ.

    ಕೇಸ್ ನಂ.6:

    ಅರ್ಪಿತ್ ಎಂಬ ಯುವಕ ತನ್ನೊಂದಿಗೆ ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿ ವಾಸಿಸುತ್ತಿದ್ದ ಆಕಾಂಕ್ಷ ಯುವತಿಯನ್ನ ಉಸಿರುಗಟ್ಟಿಸಿ ಕೊಲೆ ಮಾಡಿದ್ದ ಘಟನೆ ಜೀವನ್ ಭೀಮನಗರದಲ್ಲಿ ನಡೆದಿತ್ತು.

    ಕೇಸ್ ನಂ.7:

    ಅಕ್ರಮ ಸಂಬಂಧ ಹೊಂದಿರುವುದಾಗಿ ಶಂಕಿಸಿ ಅಯ್ಯಪ್ಪ ಎಂಬ ವ್ಯಕ್ತಿ ತನ್ನ ಪತ್ನಿಯ (ನಾಗರತ್ನ) ಗುಪ್ತಾಂಗಕ್ಕೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ ಘಟನೆ ಬಸವೇಶ್ವರ ನಗರದಲ್ಲಿ ನಡೆದಿತ್ತು.

  • ಕೋಪದಲ್ಲಿ ಅಜ್ಜಿ ಕೊಂದು, ಕೊರಿಯನ್ ವೆಬ್ ಸೀರಿಸ್‌ನಂತೆ ಹೆಣ ಸುಡಲು ಹೋಗಿ ಪೊಲೀಸರಿಗೆ ಸಿಕ್ಕಿಬಿದ್ದ

    ಕೋಪದಲ್ಲಿ ಅಜ್ಜಿ ಕೊಂದು, ಕೊರಿಯನ್ ವೆಬ್ ಸೀರಿಸ್‌ನಂತೆ ಹೆಣ ಸುಡಲು ಹೋಗಿ ಪೊಲೀಸರಿಗೆ ಸಿಕ್ಕಿಬಿದ್ದ

    ಮೈಸೂರು: ಕೋಪದಿಂದ ತಳ್ಳಿ ಅಜ್ಜಿಯನ್ನು ಕೊಂದ ಮೊಮ್ಮಗ ಕೊರಿಯನ್ ವೆಬ್ ಸೀರಿಸ್ ನೋಡಿ ಹೆಣ ಸುಟ್ಟು ಬಚಾವಾಗಲು ಯತ್ನಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

    ಮೈಸೂರಿನ ಗಾಯತ್ರಿಪುರಂ ನಿವಾಸಿ ಸುಲೋಚನ (75) ಮೃತ ಅಜ್ಜಿ. ಸುಪ್ರೀತ್ (23) ಅಜ್ಜಿ ಕೊಂದ ಮೊಮ್ಮಗ.

    ಹೆಣವನ್ನು ಪ್ಯಾಕ್ ಮಾಡಿ ಕಾರಿನಲ್ಲಿಟ್ಟುಕೊಂಡು ದಿನವಿಡೀ ಓಡಾಡಿದ್ದಾನೆ. ಅಜ್ಜಿ ಹೆಣ ಕಾರಿನಲ್ಲೇ ಇಟ್ಟುಕೊಂಡು ಮಿಸ್ಸಿಂಗ್ ಕಂಪ್ಲೆಂಟ್ ನೀಡಿದ್ದ. ನಂತರ ಮಾತಿನ ವರಸೆ ಬದಲಿಸಿ ಕಡೆಗೆ ಪೊಲೀಸರ ಮುಂದೆ ಸಿಕ್ಕಿಬಿದ್ದಿದ್ದಾನೆ. ಕೆಆರ್‌ಎಸ್ ಹಿನ್ನೀರಿನಲ್ಲಿ ಸುಟ್ಟ ಸ್ಥಿತಿಯಲ್ಲಿ ಮಹಿಳೆಯ ಶವ ಸಿಕ್ಕ ಪ್ರಕರಣ ಭೇದಿಸಿದ ಮೈಸೂರು ಪೊಲೀಸರಿಗೆ, ಸ್ವಂತ ಅಜ್ಜಿಯನ್ನು ಮೊಮ್ಮಗನೇ ಹತ್ಯೆ ಮಾಡಿರುವ ಬೆಚ್ಚಿಬೀಳಿಸುವ ಸಂಗತಿ ಬೆಳಕಿಗೆ ಬಂದಿದೆ.

    ಗುರುತು ಸಿಗದಂತೆ ಸುಟ್ಟ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿತ್ತು. ಮೇ 28 ರಂದು ಮನೆಯಲ್ಲಿ ಹೊಡೆದು ನಂತರ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದ ಯುವಕ. ಮೃತದೇಹದ ತಲೆ ಕೂದಲು ಹಾಗೂ ಕನ್ನಡಕದಿಂದ ಮೈಸೂರು ದಕ್ಷಿಣ ಠಾಣೆ ಪೊಲೀಸರು ತನಿಖೆ ನಡೆಸಿದ್ದರು.

    ನಜರ್‌ಬಾದ್ ಠಾಣೆಯಲ್ಲಿ ದಾಖಲಾಗಿದ್ದ ಮಿಸ್ಸಿಂಗ್ ಕಂಪ್ಲೆಂಟ್ ಜೊತೆಗೆ ಸಾಮ್ಯತೆ ಕಂಡ ಪೊಲೀಸರು ಆರೋಪಿ ಸುಪ್ರೀತ್‌ನನ್ನು ವಿಚಾರಣೆಗೆ ಒಳಪಡಿಸಿದಾಗ, ಅಜ್ಜಿ ಸುಲೋಚನ ಬೈಯುತ್ತಿದ್ದರು. ಹಾಗಾಗಿ ಹತ್ಯೆ ಮಾಡಿದೆ ಎಂದು ಹೇಳಿಕೆ ನೀಡಿದ್ದಾನೆ. ಅಜ್ಜಿಯನ್ನು ಹತ್ಯೆ ಮಾಡಿದ ಬಳಿಕ ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ, ರಟ್ಟಿನ ಬಾಕ್ಸ್‌ನಲ್ಲಿ ಹಾಕಿದ್ದ. ಕಾರಿನಲ್ಲಿ ಕೆಆರ್‌ಎಸ್ ಹಿನ್ನೀರು ಪ್ರದೇಶಕ್ಕೆ ಕೊಂಡೊಯ್ದು ಗುಂಡಿಯಲ್ಲಿ ಹಾಕಿ ಶವವನ್ನು ಸುಟ್ಟು ಹಾಕಿದ್ದಾನೆ. ಈ ಸಂಬಂಧ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ರಚಿಸಿದ್ದ ತನಿಖಾ ತಂಡ ಒಂದು ವಾರದಲ್ಲಿ ಪ್ರಕರಣ ಭೇದಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

  • ಪತ್ನಿಯನ್ನ ಕೊಲೆ ಮಾಡಿ, ಮಾತೇ ಆಡ್ತಿಲ್ಲ ಅಂತಾ ಗೋಳಾಡ್ತಿದ್ದ ಪತಿ – ಖತರ್ನಾಕ್‌ ಸಿಕ್ಕಿ ಬಿದ್ದದ್ದು ಹೇಗೆ?

    ಪತ್ನಿಯನ್ನ ಕೊಲೆ ಮಾಡಿ, ಮಾತೇ ಆಡ್ತಿಲ್ಲ ಅಂತಾ ಗೋಳಾಡ್ತಿದ್ದ ಪತಿ – ಖತರ್ನಾಕ್‌ ಸಿಕ್ಕಿ ಬಿದ್ದದ್ದು ಹೇಗೆ?

    ಬೆಂಗಳೂರು: ಪತ್ನಿಯನ್ನ ಕೊಲೆ ಮಾಡಿ ಆಕೆ ಮಾತೇ ಆಡ್ತಿಲ್ಲ ಅಂತಾ ಗೋಳಾಡುತ್ತಿದ್ದ ಪತಿ, ನಂತರ ಪೊಲೀಸರಿಗೆ ತಗಲಾಕಿಕೊಂಡಿರುವ ಘಟನೆ ಬೆಂಗಳೂರಿನ ಯಶವಂತಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ (Yeshwantpur Police) ನಡೆದಿದೆ.

    ಪ್ರಿಯಾ ಕೊಲೆಯಾದ ಮಹಿಳೆ (Women), ಶರತ್‌ ಕೊಲೆ ಆರೋಪಿಯಾಗಿದ್ದಾನೆ. ಪತ್ನಿಯನ್ನ ಕೊಲೆಗೈದ ಶರತ್‌ ನಂತರ ಪತ್ನಿ ಮಾತನಾಡ್ತಿಲ್ಲ ಅಂತಾ ಗೋಳಾಡುತ್ತಾ ಮೃತದೇಹವನ್ನ ಆಸ್ಪತ್ರೆಗೆ (Hospital) ಹೊತ್ತೊಯ್ದಿದ್ದಾನೆ. ಗಂಡನ ಗೋಳಾಟ ಕಂಡು ವೈದ್ಯರು ಮೊದಲು ಚಿಕಿತ್ಸೆ ನೀಡಲು ಮುಂದಾಗಿದ್ದಾರೆ. ತಪಾಸಣೆ ನಡೆಸಿದ ಬಳಿಕ ಮಹಿಳೆ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಪತ್ನಿ ಸಾವಿನ ವಿಚಾರ ತಿಳಿಯುತ್ತಿದ್ದಂತೆ ಕಣ್ಣೀರು ಹಾಕಿ ಪತಿ ಶರತ್‌ ಹೈಡ್ರಾಮ ಮಾಡಿದ್ದಾನೆ. ಇದನ್ನೂ ಓದಿ: ಒಡಿಶಾ ರೈಲು ಅಪಘಾತ; ಸಂಚಾರ ರದ್ದಾಗಿ ಬೆಂಗ್ಳೂರಲ್ಲೇ ನಿಂತ ಬೆಂಗಳೂರು-ಗುವಾಹಟಿ ರೈಲು

    ಯಶವಂತಪುರ ಪೊಲೀಸರು ಮೊದಲು ಇದನ್ನ ಅನುಮಾನಾಸ್ಪದ ಸಾವು ಎಂದು ಕೇಸ್‌ ದಾಖಲಿಸಿದ್ದರು. ಬಳಿಕ ತನಿಖೆಯಲ್ಲಿ ಗಂಡನ ಅಸಲಿ ಮುಖವಾಡ ಬಯಲಾಗಿದೆ. ಪತ್ನಿಯನ್ನ ತಾನೇ ಕೊಲೆ ಮಾಡಿ ಶವದೊಂದಿಗೆ ಆಸ್ಪತ್ರೆಗೆ ಬಂದು ನಾಟಕವಾಡಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಬ್ರಿಜ್‌ಭೂಷಣ್‌ ಬಂಧನಕ್ಕೆ ಜೂನ್‌ 9 ಗಡುವು – ಕುಸ್ತಿಪಟುಗಳ ಪ್ರತಿಭಟನೆಗೆ ರೈತಸಂಘ ಬೆಂಬಲ

    ಗಂಡ-ಹೆಂಡತಿ ನಡುವೆ ನಡೆದಿದ್ದೇನು?
    ಶರತ್‌ ಎಂಬಾತ ಮೊದಲೇ ಮದುವೆಯಾಗಿದ್ದರೂ ಪ್ರಿಯಾಳನ್ನ 2ನೇ ಮದುವೆಯಾಗಿದ್ದ. ಪ್ರಿಯಾ ಮೊದಲ ಪತ್ನಿ ಮನೆಗೆ ಹೋಗ್ತೀಯಾ ಅಂತಾ ಪದೇ ಪದೇ ಜಗಳವಾಡುತ್ತಿದ್ದಳು. ಇದೇ ವಿಚಾರಕ್ಕೆ ಆಗಾಗ್ಗೆ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. ಇಬ್ಬರ ನಡುವೆ ವಾಗ್ವಾದ ಶುರುವಾಗಿ ಶರತ್‌ ಪ್ರಿಯಾಳಿಗೆ ಥಳಿಸಿದ್ದಾನೆ. ಹೊಡೆದ ರಭಸಕ್ಕೆ ಕೆಳಗೆ ಬಿದ್ದು ಪ್ರಿಯಾ ಮೃತಪಟ್ಟಿದ್ದಾಳೆ. ನಂತರ ಶರತ್‌ ಈ ಪ್ರಕರಣವನ್ನ ಮುಚ್ಚಿಡಲು ಆಸ್ಪತ್ರೆಗೆ ಕರೆದೊಯ್ದು ನಾಟಕವಾಡಿದ್ದಾನೆ. ಎರಡು ದಿನಗಳ ಬಳಿಕ ಅಸಲಿ ಸಂಗತಿ ಬಯಲಾಗಿದೆ.

    ಶರತ್‌ ಹೈಡ್ರಾಮ ಕಂಡು ಮೊದಲೇ ಪೊಲೀಸರು ಅನುಮಾನಗೊಂಡಿದ್ದರು. ಮೃತದೇಹವನ್ನ ವೈದ್ಯರಿಂದ ಪರಿಶೀಲನೆ ನಡೆಸಿದಾಗ ಕುತ್ತಿಗೆ ಬಳಿ ಪಕ್ಕೆಲುಬು ಮುರಿದಿರುವುದು ಕಂಡುಬಂದಿತ್ತು. ಪ್ರಿಯಾ ಮೇಲೆ ಹಲ್ಲೆಯಾಗಿರುವುದಾಗಿಯೂ ವೈದ್ಯರು ತಿಳಿಸಿದ್ದರು. ಇದರಿಂದ ಕೊಲೆ ಮಾಡಿರುವುದು ಸ್ಪಷ್ಟವಾಗಿ ಯಶವಂತಪುರ ಪೊಲೀಸರು ಆರೋಪಿ ಶರತ್‌ನನ್ನ ಬಂಧಿಸಿ ಕೊಲೆ ಕೇಸ್‌ ದಾಖಲಿಸಿದ್ದಾರೆ. ತನಿಖೆ ಮುಂದುವರಿದಿದೆ.

  • 6 ದಿನಗಳಲ್ಲಿ ಮದ್ವೆಯಾಗಬೇಕಿದ್ದ ಯುವಕ ಮಸಣಕ್ಕೆ

    6 ದಿನಗಳಲ್ಲಿ ಮದ್ವೆಯಾಗಬೇಕಿದ್ದ ಯುವಕ ಮಸಣಕ್ಕೆ

    – ಕಣ್ಣಿಗೆ ಖಾರದ ಪುಡಿ ಎರಚಿ, ಕತ್ತು ಹಿಸುಕಿ ಕೊಲೆ

    ಹುಬ್ಬಳ್ಳಿ: ಇನ್ನೂ 6 ದಿನಗಳಲ್ಲಿ ಹಸೆಮಣೆ ಏರಬೇಕಿದ್ದ ಯುವಕ ಭೀಕರವಾಗಿ ಕೊಲೆಯಾಗಿ ಮಸಣಕ್ಕೆ ಸೇರಿದ ಘಟನೆ ಧಾರವಾಡ (Dharwad) ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಕಲಘಟಗಿ ತಾಲೂಕಿನ ಜಿನ್ನೂರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಯುವಕ ನಿಂಗಪ್ಪ ಬೂದಪ್ಪ ನವಲೂರ (28) ಕೊಲೆಯಾಗಿದ್ದಾನೆ (Murder). ಇದನ್ನೂ ಓದಿ: ಇಂದು ಕಾಂಗ್ರೆಸ್ ಗ್ಯಾರಂಟಿಗೆ ಗುಡ್‌ಫ್ರೈಡೇ; ಕುತೂಹಲ ಮೂಡಿಸಿದ ಸಚಿವ ಸಂಪುಟ ಸಭೆ – ಐದರ ಪೈಕಿ 3 ಫ್ರೀ ಸ್ಕೀಂ ಘೋಷಣೆ?

    ಮೃತ ಯುವಕನಿಗೆ ಜೂನ್‌ 7 ರಂದು ತಾವರಗೇರೆ ಗ್ರಾಮದ ಯುವತಿ ಜೊತೆ ಮದುವೆ (Marriage) ನಿಶ್ಚಿಯವಾಗಿತ್ತು. ನಿಂಗಪ್ಪ ತೋಟದ ಮನೆಯಲ್ಲಿದ್ದಾಗ ಮಧ್ಯರಾತ್ರಿ ದಾಳಿ ಮಾಡಿದ ದುಷ್ಕರ್ಮಿಗಳು ಕಣ್ಣಿಗೆ ಖಾರದ ಪುಡಿ ಎರಚಿ, ಕತ್ತು ಹಿಸುಕಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಇದನ್ನೂ ಓದಿ: ಆಡಳಿತ ಮಂಡಳಿಯವರು ಮಾಡಿದ ಸಾಲಕ್ಕೆ ಶಾಲೆಯನ್ನೇ ಸೀಜ್ ಮಾಡಿದ ಬ್ಯಾಂಕ್ ಸಿಬ್ಬಂದಿ!

    ಕೊಲೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ, ಸ್ಥಳಕ್ಕೆ ಕಲಘಟಗಿ ಪೊಲೀಸರ (Kalaghatagi Police) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಪ್ರಿಯಕರನಿಗೋಸ್ಕರ ಗಂಡನಿಗೇ ಸ್ಕೆಚ್‌ ಹಾಕಿ ಮುಗಿಸಿದ್ಲು ಕೋಲಾರದ ಖತರ್ನಾಕ್ ಲೇಡಿ

    ಪ್ರಿಯಕರನಿಗೋಸ್ಕರ ಗಂಡನಿಗೇ ಸ್ಕೆಚ್‌ ಹಾಕಿ ಮುಗಿಸಿದ್ಲು ಕೋಲಾರದ ಖತರ್ನಾಕ್ ಲೇಡಿ

    ಕೋಲಾರ: ಇತ್ತೀಚಿನ ದಿನಗಳಲ್ಲಿ ಅಕ್ರಮ ಸಂಬಂಧ ಪ್ರಕರಣಗಳು ವರದಿಯಾಗುತ್ತಿದ್ದು, ದಾಂಪತ್ಯ ಜೀವನದಲ್ಲಿ ಕಲಹ ಉಂಟಾಗಿ ಪ್ರಾಣಕ್ಕೆ ಕುತ್ತು ತರುತ್ತಿವೆ. ಅದೇ ರೀತಿ ಖತರ್ನಾಕ್‌ ಮಹಿಳೆಯೊಬ್ಬಳು ತನ್ನ ಪ್ರಿಯಕರನೊಂದಿಗೆ (Lovers) ಸೇರಿ ಪತಿಯನ್ನೇ ಮುಗಿಸಿದ್ದಾಳೆ. ಅಲ್ಲದೇ ಅದನ್ನು ಅಪಘಾತವೆಂದು (Accident) ಬಿಂಬಿಸಲು ಹೋಗಿ ಪೊಲೀಸರಿಗೆ ತಗಲಾಕಿಕ್ಕೊಂಡಿರುವ ಘಟನೆ ಕೋಲಾರ ತಾಲೂಕಿನಲ್ಲಿ ನಡೆದಿದೆ.

    ಕೋಲಾರ ತಾಲೂಕಿನ ಕನ್ನಘಟ್ಟ ಬಳಿ ಘಟನೆ ನಡೆದಿದ್ದು ಮೃತನ ಪತ್ನಿ ಸೌಮ್ಯಾ, ಆಕೆಯ ಪ್ರಿಯಕರ ಚೊಕ್ಕರೆಡ್ಡಪಲ್ಲಿ ಶ್ರೀಧರ್ ಮತ್ತವನ ಸ್ನೇಹಿತನನ್ನ ಪೊಲೀಸರು ಬಂಧಿಸಿದ್ದಾರೆ. ಕೊಲೆಯಾದ ಜಾನಪದ ಕಲಾವಿದ ಜನ್ನಘಟ್ಟ ಕೃಷ್ಣ ಮೂರ್ತಿ, ಸೌಮ್ಯಾಳ ಪತಿ. ಇದನ್ನೂ ಓದಿ: ರಾಜಕಾರಣ ಬದಿಗಿಟ್ಟು ಪುತ್ರನ ಮದುವೆಗೆ ಮುಖ್ಯಮಂತ್ರಿಯನ್ನು ಆಹ್ವಾನಿಸಿದ ಸುಮಲತಾ

    ಪ್ರಿಯಕರನಿಗಾಗಿ ಪತಿಗೆ ಸ್ಕೆಚ್‌:
    ಸೋಮವಾರ ರಾತ್ರಿ ಪ್ರಿಯಕರ ಮತ್ತವನ ಸ್ನೇಹಿತನ ಜೊತೆ ಸೇರಿದ ಆರೋಪಿ ಸೌಮ್ಯಾ ಪತಿಯನ್ನ ಹತ್ಯೆ ಮಾಡಿಸಿದ್ದಾಳೆ. ಬಳಿಕ ಎಸ್ಕೇಪ್‌ ಆಗಲು, ತನ್ನ ಪತಿ ಬೈಕ್‌ನಿಂದ ಬಿದ್ದು ಮೃತಪಟ್ಟಿದ್ದಾನೆ ಎಂದು ಬಿಂಬಿಸಿದ್ದಳು. ಆದ್ರೆ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಪೊಲೀಸರಿಗೆ ಅನುಮಾನ ಮೂಡಿತ್ತು. ಸೌಮ್ಯಾಳನ್ನ ವಿಚಾರಣೆಗೆ ಒಳಪಡಿಸಿದಾಗ ಬಣ್ಣ ಬಯಲಾಗಿ ತಗಲಾಕಿಕೊಂಡಿದ್ದಾಳೆ. ಆರೋಪಿಗಳನ್ನ ಕೋಲಾರ ಗ್ರಾಮಾಂತರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಐಪಿಎಸ್ ಅಧಿಕಾರಿ ಜೊತೆಗಿನ ಕಿರಿಕ್: ಬಾಲಯ್ಯನ ವಿಡಿಯೋ ಹಾಕಿ ಹಯಾತಿ ಟಾಂಗ್