ಜ್ಯುವೆಲರಿ ಶಾಪ್‌ನಲ್ಲಿ ಆಭರಣಗಳನ್ನ ನೋಡುತ್ತಿರುವಂತೆ ಮಹಿಳೆ ನಾಟಕವಾಡಿದ್ದಾಳೆ. ಸಿಬ್ಬಂದಿ ಕಣ್ತಪ್ಪಿಸಿ ನೆಕ್ಲೇಸನ್ನು ಬ್ಯಾಗ್‌ನಲ್ಲಿ ಹಾಕಿಕೊಂಡಿದ್ದಾಳೆ. ಮಹಿಳೆಯ ಮಹಿಳೆಯ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮೆಕ್ಸಿಕೋ: ವೇಗವಾಗಿ ಚಲಿಸುತ್ತಿದ್ದ ಬಸ್ 80 ಅಡಿ ಆಳದ ಕಂದಕಕ್ಕೆ ಉರುಳಿಬಿದ್ದ ಪರಿಣಾಮ 27 ಮಂದಿ ಸಾವನ್ನಪ್ಪಿದ್ದು, 17 ಮಂದಿ ಗಾಯಗೊಂಡಿರುವ ಘಟನೆ ಉತ್ತರ ಅಮೆರಿಕದ (North America) ಮೆಕ್ಸಿಕೋ ನಗರದಲ್ಲಿ (Mexico City) ನಡೆದಿದೆ. ಉರುಳಿಬಿದ್ದ ರಭಸಕ್ಕೆ ಬಸ್ ಸಂಪೂರ್ಣ ಬಸ್ ಛಿದ್ರ ಛಿದ್ರವಾಗಿದೆ.
ಘಟನೆಯಲ್ಲಿ ಗಾಯಗೊಂಡ 17 ಮಂದಿಯನ್ನ ವೈದ್ಯಕೀಯ ಚಿಕಿತ್ಸೆಗಾಗಿ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಗಾಯಗೊಂಡವರಲ್ಲಿ ಕನಿಷ್ಠ 6 ಮಂದಿ ಪ್ರಜ್ಞಾಹೀನರಾಗಿದ್ದರು, ಅವರನ್ನ ಆಸ್ಪತ್ರೆಗೆ ಸಾಗಿಸಿದಾಗ ಗಂಭೀರ ಸ್ಥಿತಿಯಲ್ಲಿರುವುದು ಕಂಡುಬಂದಿದೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸ್ಥಳೀಯ ಸಾರಿಗೆ ಸಂಸ್ಥೆಯೊಂದು ನಿರ್ವಹಿಸುತ್ತಿದ್ದ ಬಸ್ ರಾಜಧಾನಿ ಮೆಕ್ಸಿಕೋ ನಗರದಿಂದ ಹೊರಟು ಸ್ಯಾಂಟಿಯಾಗೊ ಡಿ ಯೊಸೊಂಡುವಾ ಪಟ್ಟಣಕ್ಕೆ ತೆರಳುತ್ತಿದ್ದ ವೇಳೆ ಮ್ಯಾಗ್ಡಲೇನಾ ಪೆನಾಸ್ಕೋ ಪಟ್ಟಣದಲ್ಲಿ ಅಪಘಾತ ಸಂಭವಿಸಿದೆ. ವಾಹನ ಚಾಲಕ ನಿಯಂತ್ರಣ ಕಳೆದುಕೊಂಡಿದ್ದರಿಂದಾಗಿ ಬಸ್ ಅಪಘಾತಕ್ಕೀಡಾಗಿದೆ (Mexico Bus Accident) ಹಿರಿಯ ಅಧಿಕಾರಿ ಜೀಸಸ್ ರೊಮೆರೊ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಭಾರತೀಯ-ಅಮೆರಿಕನ್ ಸಂಸದೆ ಚುಡಾಯಿಸಿದ ವ್ಯಕ್ತಿಗೆ 364 ದಿನಗಳ ಜೈಲು ಶಿಕ್ಷೆ
ಮೆಕ್ಸಿಕೋ ನಗರದಲ್ಲಿ ರಸ್ತೆ ಅಪಘಾತಗಳು ಸಾಮಾನ್ಯವಾಗಿಬಿಟ್ಟಿದೆ. ಅತಿಯಾದ ವೇಗ, ವಾಹನಗಳ ಕಳಪೆ ಗುಣಮಟ್ಟ ಹಾಗೂ ಚಾಲಕ ಮೇಲಿನ ಅತಿಯಾದ ಒತ್ತಡಗಳು ಅಪಘಾತಕ್ಕೆ ಕಾರಣವಾಗುತ್ತಿದೆ. ಬಹುತೇಕ ಕೆಲಸಕ್ಕೆ ಹೋಗುವ ಮಂದಿ ಬಸ್ ಮೇಲೆ ಅವಲಂಬಿತರಾಗಿದ್ದಾರೆ ಎಂದು ಸ್ಥಳೀಯ ಆಡಳಿತ ತಿಳಿಸಿದೆ. ಇದನ್ನೂ ಓದಿ: ಟೈಟಾನಿಕ್ ಅವಶೇಷ ನೋಡಲು ತೆರಳಿದ್ದ ಸಬ್‌ಮರ್ಸಿಬಲ್ ದುರಂತ ಅಂತ್ಯ – ಅಂದು ಏನಾಗಿರಬಹುದು?
ಮೈಸೂರು: ಪ್ರೀತಿಸುವಂತೆ (Love) ಹಿಂದೆ ಬಿದ್ದು ಕಿರುಕುಳ ನೀಡುತ್ತಿದ್ದ ಯುವಕನಿಂದ ಬೇಸತ್ತ ಯುವತಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆಯ ಇಲವಾಲ ಪೊಲೀಸ್ ಠಾಣಾ (Ilavala Police Station) ವ್ಯಾಪ್ತಿಯ ಗಣಗರಹುಂಡಿ ಗ್ರಾಮದಲ್ಲಿ ನಡೆದಿದೆ.
ಈ ಮಧ್ಯೆ ಮನೆಯವರು ಹರ್ಷಿತಾಗೆ ಮದುವೆ (Marriage) ನಿಶ್ಚಯ ಮಾಡಿ ಆಷಾಢ ನಂತರ ಮದುವೆ ದಿನಾಂಕ ಗೊತ್ತುಪಡಿಸಲು ನಿರ್ಧರಿಸಿದ್ದರು. ಈ ವಿಷಯ ತಿಳಿದ ನಂತರ ತನ್ನನ್ನು ಮದುವೆಯಾಗುವಂತೆ ಇನ್ನಷ್ಟು ಕಿರುಕುಳ ನೀಡಲು ಪ್ರಾರಂಭಿಸಿದ್ದ. ಶಿವು ಕಿರುಕುಳಕ್ಕೆ ಬೇಸತ್ತ ಹರ್ಷಿತ ಹುಳುಗಳನ್ನ ಸ್ವಚ್ಛಗೊಳಿಸಲು ಇಟ್ಟಿದ್ದ ಮಾತ್ರೆಗಳನ್ನ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಕೂಡಲೇ ಹರ್ಷಿತಾಳನ್ನ ಕೆ.ಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಹರ್ಷಿತಾ ಮೃತಪಟ್ಟಿದ್ದಾಳೆ. ಮಗಳ ಸಾವಿಗೆ ಶಿವು ಕಾರಣ ಎಂದು ಹರ್ಷಿತಾ ತಂದೆ ವೇಣುಗೋಪಾಲ್ ಇಲವಾಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಆರೋಪಿ ಶಿವುಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (New Delhi) ಭದ್ರತೆ ವಿಚಾರ ತೀವ್ರ ಚರ್ಚೆಯಾಗುತ್ತಿರುವ ಹೊತ್ತಲ್ಲೇ ಸರಣಿ ದರೋಡೆ ಪ್ರಕರಣಗಳು ವರದಿಯಾಗುತ್ತಿವೆ. ಇಂಡಿಯಾ ಗೇಟ್ ಕೂಗಳತೆ ದೂರದಲ್ಲಿರುವ ಪ್ರಗತಿ ಮೈದಾನ ಟನಲ್ ನಲ್ಲಿ (Pragati Maidan Tunnel) ನಡೆದ ದರೋಡೆ ಬಳಿಕ ಹಲವು ಲೂಟಿ ಪ್ರಕರಣಗಳು (Crime Case) ವರದಿಯಾಗುತ್ತಿವೆ.
#WATCH | A delivery agent and his associate were robbed at gunpoint of Rs 1.5 to Rs 2 lakh cash by a group of unknown assailants inside the Pragati Maidan Tunnel on June 24. Police registered a case and efforts are being made to apprehend the criminals: Delhi Police
ಇದಕ್ಕೂ ಮೊದಲು ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Indira Gandhi International Airport) ಹೊರಗಡೆ ಕಸ್ಟಮ್ ಅಧಿಕಾರಿಗಳಂತೆ ನಟಿಸಿ ಇಬ್ಬರು ವ್ಯಕ್ತಿಗಳು ಸೌದಿ ಅರೇಬಿಯಾದಿಂದ ವಾಪಸ್ಸಾದ ಪ್ರಯಾಣಿಕನಿಂದ 4 ಲಕ್ಷ ಮೌಲ್ಯದ ವಿದೇಶಿ ನೋಟುಗಳನ್ನ ಪಡೆದು ವಂಚಿಸಿದ್ದರು. ಇದನ್ನೂ ಓದಿ: ಏಕರೂಪ ನಾಗರಿಕ ಸಂಹಿತೆ ಜಾರಿಗೆ ತಯಾರಿ – ಮೋದಿ ಸರ್ಕಾರದ ವಿರುದ್ಧ ವಿಪಕ್ಷಗಳು ಕೆಂಡ
ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ (Lawrence Bishnoi) ಮತ್ತು ಗೋಲ್ಡಿ ಬ್ರಾರ್ ಹೆಸರಿನಲ್ಲಿ ಬೆದರಿಕೆ ಹಾಕಿ ಉದ್ಯಮಿಯಿಂದ 5 ಕೋಟಿ ಪಡೆದು ವಂಚಿಸಲಾಗಿದೆ. ಎಲ್ಲ ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದು ಸದ್ಯ ಪ್ರಗತಿ ಮೈದಾನ ಟನಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನ ಬಂಧಿಸಿದ್ದಾರೆ.
ಇದೇ ವಿಚಾರದಲ್ಲಿ ರಾಜಕಾರಣವೂ ಆರಂಭವಾಗಿದ್ದು ದೆಹಲಿಯಲ್ಲಿ ಕಾನೂನು ಸುವ್ಯವಸ್ಥೆ ನಿಯಂತ್ರಿಸುವ ಕೇಂದ್ರ ಸರ್ಕಾರ ಹಾಗೂ ಗೃಹ ಸಚಿವ ಅಮಿತ್ ಶಾ ವಿರುದ್ಧ ಸಿಎಂ ಅರವಿಂದ್ ಕೇಜ್ರಿವಾಲ್ ವಾಗ್ದಾಳಿ ನಡೆಸಿದ್ದಾರೆ. ನಿಮ್ಮ ಕೈಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸಾಧ್ಯವಾಗದಿದ್ದರೆ ನಮಗೆ ಕೊಡಿ ನಾವು ಮಾಡಿ ತೋರಿಸುತ್ತೇವೆ ಎಂದು ಸವಾಲ್ ಹಾಕಿದ್ದಾರೆ.
– ಹೂ ಬೆಳೆಯೋ ಪಾಟ್‌ಗಳಲ್ಲೇ ಗಾಂಜಾ ಬೆಳೆದು ಮಾರಾಟ
– ಟೇಬಲ್‌ಫ್ಯಾನ್ ಗಾಳಿಯಿಂದ ಗಾಂಜಾ ಒಣಗಿಸಿ ಪ್ಯಾಕ್ ಮಾಡ್ತಿದ್ರು
ಶಿವಮೊಗ್ಗ: ತಾವು ವಾಸವಿದ್ದ ಬಾಡಿಗೆ ಮನೆಯಲ್ಲೇ ಗಾಂಜಾ ಬೆಳೆದು ಮಾರಾಟ ಮಾಡುತ್ತಿದ್ದ ಐವರು MBBS ವಿದ್ಯಾರ್ಥಿಗಳನ್ನ ಶಿವಮೊಗ್ಗ ಗ್ರಾಮಾಂತರ ಪೊಲೀಸರು (Shivamogga Rural Police) ಬಂಧಿಸಿರುವ ಘಟನೆ ನಡೆದಿದೆ.
ಮನೆಯಲ್ಲೇ ಗಾಂಜಾ ಬೆಳೆಯುತ್ತಿದ್ರು:
ಅಬ್ದುಲ್ ಖಯ್ಯಂ, ವಿಘ್ನರಾಜ್ ಹಾಗೂ ಅರ್ಪಿತಾ ಶಿವಮೊಗ್ಗದ ಶಿವಗಂಗಾ ಲೇಔಟ್ ನಲ್ಲಿ ವಾಸಕ್ಕೆ ಬಾಡಿಗೆ ಮನೆ ಪಡೆದಿದ್ದರು. ಅದೇ ಮನೆಯಲ್ಲೇ ಹೂ ಬೆಳೆಯುವ ಪಾಟ್‌ಗಳಲ್ಲಿ ಗಾಂಜಾ ಬೆಳೆದು, ಅದನ್ನು ಟೇಬಲ್‌ಫ್ಯಾನ್ (Table Fan) ಗಾಳಿಯಿಂದ ಒಣಗಿಸಿ, ಪ್ಯಾಕೆಟ್ ಮಾಡಿ ಮಾರಾಟ ಮಾಡುತ್ತಿದ್ದರು. ಇವರ ಬಳಿ ಗಾಂಜಾ ಕೊಳ್ಳಲು ಪಾಂಡಿದೊರೈ ಹಾಗೂ ವಿನೋದ್ ಕುಮಾರ್ ಹೋಗಿದ್ದರು. ಇದನ್ನೂ ಓದಿ: KRS ನೀರಿನ ಮಟ್ಟ ಭಾರೀ ಕುಸಿತ – ಕುಡಿಯುವ ನೀರಿಗೆ ಶುರುವಾಗಿದೆ ಆತಂಕ
ಖಚಿತ ಮಾಹಿತಿ ಮೇರೆಗೆ ಶಿವಗಂಗಾ ಲೇಔಟ್ ನಿವಾಸದ ಮೇಲೆ ದಾಳಿ ನಡೆಸಿದ ಶಿವಮೊಗ್ಗ ಗ್ರಾಮಾಂತರ ಪೊಲೀಸರು ಆರೋಪಿಗಳಿಂದ 6 ಸಾವಿರ ರೂ. ಮೌಲ್ಯದ ಹಸಿ ಗಾಂಜಾ, 20 ಸಾವಿರ ರೂ. ಮೌಲ್ಯದ ಒಣ ಗಾಂಜಾ, 30 ಸಾವಿರ ರೂ. ಮೌಲ್ಯದ ಚರಸ್, ಸೀರಿಂಜ್‌ಗಳು, ಹುಕ್ಕಾ ಕೊಳವೆ, 6 ಟೇಬಲ್ ಫ್ಯಾನ್ ಸೇರಿದಂತೆ ಇತರೆ ವಸ್ತುಗಳನ್ನ ವಶಕ್ಕೆ ಪಡೆದಿದ್ದಾರೆ. ತನಿಖೆ ಮುಂದುವರಿದಿದೆ.
ಶಿವಮೊಗ್ಗಕ್ಕೆ MBBS ವ್ಯಾಸಂಗ ಮಾಡಲು ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಹಾಗೂ ಹೊರ ರಾಜ್ಯಗಳಿಂದಲೂ ವಿದ್ಯಾರ್ಥಿಗಳು ಆಗಮಿಸಿದ್ದರು. ಹೆತ್ತವರು ಸಹ ತಮ್ಮ ಮಕ್ಕಳು ಡಾಕ್ಟರ್ ಆಗುತ್ತಾರೆ ಎಂಬ ಕನಸು ಕಂಡಿದ್ದರು. ಶಿವಮೊಗ್ಗದ ಖಾಸಗಿ ಕಾಲೇಜಿಗೆ ಲಕ್ಷಾಂತರ ಹಣ ಕೊಟ್ಟು ಎಂಬಿಬಿಎಸ್ ಪದವಿಗೆ ಸೇರಿಸಿದ್ದರು. ಆದ್ರೆ ಈ ವಿದ್ಯಾರ್ಥಿಗಳು ತಾವು ವಾಸವಿದ್ದ ಮನೆಯಲ್ಲೇ ಗಾಂಜಾ ಬೆಳೆದು ಮಾರಾಟ ಮಾಡುತ್ತಿದ್ದರು. ಎಂಬಿಬಿಎಸ್ ಪದವಿ ಪಡೆದು ವೈದ್ಯರಾಗಬೇಕಿದ್ದ ವಿದ್ಯಾರ್ಥಿಗಳು ಈಗ ಪೊಲೀಸರ ಅತಿಥಿಯಾಗಿದ್ದಾರೆ.
ಚಿಕ್ಕಬಳ್ಳಾಪುರ: ಮನೆಯಲ್ಲೇ ಅನುಮಾನಾಸ್ಪದ ರೀತಿಯಲ್ಲಿ ನವವಿವಾಹಿತೆ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ನಗರದ (Chikkaballapur City) ಕಾರ್ಖಾನೆ ಪೇಟೆಯಲ್ಲಿ ನಡೆದಿದೆ.
ನವ ವಿವಾಹಿತೆ ತೇಜಸ್ವಿನಿ (20) ಮೃತಪಟ್ಟ ಗೃಹಿಣಿ. ಮನೆಯ ಕೊಠಡಿಯೊಂದರಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಸಾವಿಗೆ ಪತಿ ಲೋಹಿತ್ ನಿಂದ ವರದಕ್ಷಿಣೆ (Dowry) ಕಿರುಕುಳವೇ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ. ಇದನ್ನೂ ಓದಿ: ಟೈಟಾನಿಕ್ ಹಡಗಿನ ಅವಶೇಷ ನೋಡಲು ತೆರಳಿದ್ದ ವಿಶ್ವದ ಐವರು ಶ್ರೀಮಂತರ ದಾರುಣ ಸಾವು
ಘಟನಾ ಸ್ಥಳದಲ್ಲಿ ಮೃತ ತೇಜಸ್ವಿನಿ ತಂದೆ ಮಂಜುನಾಥ್ ಆಕ್ರಂದನ ಮುಗಿಲುಮುಟ್ಟಿದೆ. ಮಗಳನ್ನು ನೆನೆದು ತಂದೆ ಗೋಳಾಡುತ್ತಿದ್ದಾರೆ. ಘಟನಾ ಸ್ಥಳಕ್ಕೆ ಚಿಕ್ಕಬಳ್ಳಾಪುರ ಸಿಪಿಐ ರಾಜು ಹಾಗೂ ತಹಶೀಲ್ದಾರ್ ಗಣಪತಿ ಶಾಸ್ತ್ರೀ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಲಕ್ಷ, ಕೋಟಿ ಆದಾಯವಿದ್ದರೂ ಟ್ಯಾಕ್ಸ್ ಕಟ್ಟದ ಯೂಟ್ಯೂಬರ್ಸ್ – ಕೇರಳದ ಹಲವೆಡೆ ಐಟಿ ದಾಳಿ
FSAL ತಂಡದ ಸಿಬ್ಬಂದಿ ಸಹ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಂಡ ಲೋಹಿತ್ ಹಾಗೂ ಅವರ ಅಣ್ಣ ಗೋಪಿ ಚಿಕ್ಕಬಳ್ಳಾಪುರ ನಗರದಲ್ಲಿ ಚಂದ್ರು ಮಿಲ್ಟ್ರಿ ಹೋಟೆಲ್ ಮಾಲೀಕರಾಗಿದ್ದಾರೆ. ತೇಜಸ್ವಿನಿ ತಂದೆ ಮಂಜುನಾಥ್, ಲೋಹಿತ್ ಹಾಗೂ ಅವರ ಅಣ್ಣ ಗೋಪಿನಾಥ್ ವಿರುದ್ಧ ವರದಕ್ಷಿಣೆ ಕಿರುಕುಳದ ಆರೋಪ ಹೊರಿಸಿದ್ದಾರೆ.
ಸದ್ಯ ಪತಿ ಲೋಹಿತ್‌ನನ್ನ ಚಿಕ್ಕಬಳ್ಳಾಪುರ ನಗರ ಪೊಲೀಸರು (Chikkaballapur City Police) ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಪ್ಯಾರಿಸ್: ಅನುಮಾನಗೊಂಡು ತನ್ನ ಪತ್ನಿಗೆ (Wige) ಪ್ರತಿದಿನ ಡ್ರಗ್ಸ್ ಕೊಟ್ಟು ಬೇರೆ ಪುರುಷರಿಂದ ಅತ್ಯಾಚಾರ ಮಾಡಿಸುತ್ತಿದ್ದ ಘಟನೆ ಫ್ರಾನ್ಸ್‌ನಲ್ಲಿ (French) ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಇದು 10 ವರ್ಷಗಳ ಕಾಲ ಮುಂದುವರಿದಿದ್ದು, 92 ಅತ್ಯಾಚಾರ ಪ್ರಕರಣವನ್ನ ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 26 ರಿಂದ 53 ವರ್ಷದೊಳಗಿನ 59 ಪುರುಷರನ್ನ ಬಂಧಿಸಿದ್ದು, ಉಳಿದವರಿಗಾಗಿ ಬಲೆ ಬೀಸಿದ್ದಾರೆ. ಅವರಲ್ಲಿ ಅಗ್ನಿಶಾಮಕ ಸಿಬ್ಬಂದಿ, ಲಾರಿ ಚಾಲಕ, ಪಾಲಿಕೆ ಕೌನ್ಸಿಲರ್, ಬ್ಯಾಂಕ್‌ನಲ್ಲಿ IT ಉದ್ಯೋಗಿ, ಜೈಲು ಸಿಬ್ಬಂದಿ, ನರ್ಸ್ ಮತ್ತು ಪತ್ರಕರ್ತರೂ ಸೇರಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಡೊಮಿನಿಕ್, ಫ್ರಾಂಕೋಯಿಸ್ (ಮಹಿಳೆ ಹೆಸರು ಬದಲಿಸಲಾಗಿದೆ) ಮದುವೆಯಾಗಿ 50 ವರ್ಷ ಕಳೆದಿದ್ದು, ದಂಪತಿಗೆ 3 ಮಕ್ಕಳಿದ್ದಾರೆ. ಪತಿ ಡೊಮಿನಿಕ್ ವ್ಯಕ್ತಿ ಪ್ರತಿದಿನ ರಾತ್ರಿ ಹೆಂಡತಿಗೆ ಊಟದಲ್ಲಿ ಲೊರಾಜೆಪಮ್ ಆಂಟಿ-ಆಂಗ್ಲೇಶನ್ ಡ್ರಗ್ ಬೆರಸಿಕೊಡುತ್ತಿದೆ. ಆಕೆ ಅರೆ ಪ್ರಜ್ಞಾವಸ್ಥೆಗೆ ತಲುಪಿದ ನಂತರ ಬೇರೆ ಪುರುಷರನ್ನ ತನ್ನ ಮನೆಗೆ ಕರೆಸಿ ಹೆಂಡ್ತಿ ಮೇಲೆ ಅತ್ಯಾಚಾರ ಮಾಡಿಸುತ್ತಿದ್ದ. ಅದನ್ನು ತಾನೇ ವೀಡಿಯೋನಲ್ಲಿ ರೆಕಾರ್ಡ್ (Video Record) ಮಾಡಿಕೊಂಡು ಡ್ರೈವ್‌ನಲ್ಲಿ ಸೇವ್ ಮಾಡಿಕೊಳ್ಳುತ್ತಿದ್ದ ಎಂಬುದು ತಿಳಿದುಬಂದಿದೆ. 2011ರಿಂದ 2020ರ ಅವಧಿಯಲ್ಲಿ ಮಹಿಳೆ ಮೇಲೆ ಅತ್ಯಾಚಾರ ನಡೆದಿದೆ ಎಂದು ಪೊಲೀಸರ ತನಿಖೆಯಲ್ಲಿ (Police Investigation) ತಿಳಿದುಬಂದಿದೆ. ಇದನ್ನೂ ಓದಿ: ಮೈಸೂರಿನ ಶ್ರೀಗಂಧದ ಪೆಟ್ಟಿಗೆಯಲ್ಲಿ ಬೈಡನ್‌ಗೆ ಉಡುಗೊರೆ – ಮೋದಿ ಕೊಟ್ಟ ಗಿಫ್ಟ್ ಬಾಕ್ಸ್‌ನಲ್ಲಿ ಏನಿದೆ?
ತನಿಖಾಧಿಕಾರಿಗಳು ಹೇಳಿದ್ದೇನು?
ಪತಿ ಡೊಮಿನಿಕ್ ತನ್ನ ಹೆಂಡತಿ ಬೇಗನೆ ಎಚ್ಚರವಾಗದಂತೆ ನೋಡಿಕೊಳ್ಳಲು ಬರುವವರಿಗೆ ತಂಬಾಕು ಹಾಗೂ ಪರ್ಫ್ಯೂಮ್ ಬಳಸಬೇಡಿ ಅಂತಾ ಹೇಳಿದ್ದ. ತಕ್ಷಣ ತಾಪಮಾನ ಬದಲಾವಣೆ ತಪ್ಪಿಸಲು ಬಿಸಿನೀರಿನಲ್ಲಿ ಕೈತೊಳೆಯುವಂತೆ ಬರುವವರಿಗೆ ಹೇಳ್ತಿದ್ದ. ಅಡುಗೆ ಮನೆಯಲ್ಲಿ, ಸ್ನಾನಗೃಹದಲ್ಲಿ ಬಟ್ಟೆ ಬಿಚ್ಚಿಡುವುದನ್ನ ತಪ್ಪಿಸಿದ್ದ. ವಾಹನಗಳನ್ನು ತಮ್ಮ ಮನೆಯಿಂದ ಸ್ವಲ್ಪ ದೂರದಲ್ಲೇ ವಾಹನಗಳನ್ನು ನಿಲ್ಲಿಸುವಂತೆ ನೋಡಿಕೊಳ್ಳುತ್ತಿದ್ದ. ಸ್ಥಳೀಯರಿಗೆ ಅನುಮಾನ ಬರಬಾರದು ಅಂತಾ ಕತ್ತಲಲ್ಲೇ ಈ ಕೆಲಸ ಮಾಡಿಸುತ್ತಿದ್ದ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
ತನಿಖೆ ಸಂದರ್ಭದಲ್ಲಿ ಡೊಮಿನಿಕ್ ಅತ್ಯಾಚಾರ ವೀಡಿಯೋ ಮಾಡಿರುವ ಬಗ್ಗೆ ತಿಳಿದುಕೊಂಡರು. ಜೊತೆಗೆ ಬಟ್ಟೆ ಬದಲಾಯಿಸುತ್ತಿದ್ದ ಕೋಣೆಗಳಲ್ಲೂ ಸೀಕ್ರೆಟ್ ಕ್ಯಾಮೆರಾಗಳನ್ನಿಟ್ಟು ವೀಡಿಯೋ ರೆಕಾರ್ಡ್ ಮಾಡುತ್ತಿದ್ದ. ಈ ಬಗ್ಗೆ ಮಹಿಳೆಗೆ ತಿಳಿದ ನಂತರ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಳು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾಳೆ.
ಲಕ್ನೋ: ಮಾರ್ಕೆಟ್‌ಗೆ ಹೋಗಿ ತರಕಾರಿ ತಗೊಂಡು ಬರ್ತೀನಿ ಅಂತಾ ಹೋದ ನವವಿವಾಹಿತೆ (Newlu Married Women) ಮದುವೆಯಾದ ಒಂದೇ ವಾರಕ್ಕೆ ಗಂಡನನ್ನ ಬಿಟ್ಟು ಪ್ರಿಯಕರನೊಂದಿಗೆ ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದ (Uttar Pradeh) ಕಲಿಂಜರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೇ 31 ರಂದು ಮದುವೆಯಾಗಿದ್ದ (Marriage) ಮಹಿಳೆ ಒಂದೇ ವಾರಕ್ಕೆ ಗಂಡನನ್ನ ಬಿಟ್ಟು ಪರಾರಿಯಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ. ಕುಟುಂಬಸ್ಥರನ್ನು ಭೇಟಿ ಮಾಡಬೇಕೆಂಬ ನೆಪದಲ್ಲಿ ತವರು ಮನೆಗೆ ಬಂದಿದ್ದ ಆಕೆ, ಮನೆಗೆ ಸಾಮಾನು ತರ್ತೀನಿ ಅಂತಾ ಮಾರುಕಟ್ಟೆಗೆ ಹೋದವಳೇ ತನ್ನ ಪ್ರಿಯಕರನೊಂದಿಗೆ ಎಸ್ಕೇಪ್ ಆಗಿದ್ದಾಳೆ. ಜೊತೆಗೆ ತವರು ಮನೆಯಲ್ಲಿದ್ದ ಚಿನ್ನಾಭರಣವನ್ನೆಲ್ಲಾ ದೋಚಿಕೊಂಡು ಹೋಗಿದ್ದಾಳೆ ಎಂಬುದು ತಿಳಿದುಬಂದಿದೆ.
ಮಗಳು ಮನೆಗೆ ಬಾರದೇ ಇದ್ದಾಗ ಆತಂಕಕ್ಕೊಳಗಾದ ಪೋಷಕರು ಫೋನ್ ಮಾಡಿದ್ದಾರೆ. ಫೋನ್ ಸ್ವಿಚ್ ಆಫ್ ಆಗಿರುವುದು ಕಂಡು ಹುಡುಕಾಟ ನಡೆಸಿದ್ದಾರೆ. ನಂತರ ತನ್ನ ಪ್ರಿಯಕರನೊಂದಿಗೆ ಓಡಿ ಹೋಗಿರುವುದು ತಿಳಿದು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಕೇಸ್ ದಾಖಲಿಸಿಕೊಂಡ ಪೊಲೀಸರು (Police) ಮಹಿಳೆ ಹಾಗೂ ಆಕೆಯ ಗೆಳೆಯನಿಗಾಗಿ ತೀವ್ರ ಶೋಧ ಕಾರ್ಯ ಆರಂಭಿಸಿದ್ದಾರೆ. ಇದನ್ನೂ ಓದಿ: Indonesia Open 2023: ಐತಿಹಾಸಿಕ ಜಯ ತಂದ ಮೊದಲ ಭಾರತೀಯ ಜೋಡಿ, ಸಾತ್ವಿಕ್‌ಸಾಯಿರಾಜ್, ಚಿರಾಗ್‌ಗೆ ಪ್ರಶಸ್ತಿ
ಆ ದಿನ ನಡೆದಿದ್ದೇನು?
ಪರಾರಿಯಾದ ಮಹಿಳೆಗೆ ಕಳೆದ ಮೇ 31 ರಂದು ಮದುವೆ ಮಾಡಿಸಲಾಗಿತ್ತು. ಜೂನ್ 6 ರಂದು ತನ್ನ ತವರಿಗೆ ಮರಳಿದ್ದಳು. ಜೂನ್ 11ರಂದು ಮನೆಗೆ ಸಾಮಾನು ಖರೀದಿಸುವ ನೆಪದಲ್ಲಿ ಮಾರುಕಟ್ಟೆಗೆ ಹೋದ ಅವಳು ವಾಪಸ್ ಮನೆಗೆ ಬಂದಿರಲಿಲ್ಲ. ಸಂಜೆಯಾದರೂ ಮಗಳು ಮನೆಗೆ ಬಾರದಿದ್ದಾಗ ಆತಂಕಗೊಂಡ ಪೋಷಕರು ತೀವ್ರ ಹುಡುಕಾಟ ನಡೆಸಿದ್ದರು. ಇದನ್ನೂ ಓದಿ: ಭಾರತೀಯ ಸೇನೆಗಾಗಿ ಮಹಿಂದ್ರಾ ಗ್ರೂಪ್‍ನಿಂದ ನೂತನ ಶಸ್ತ್ರಸಜ್ಜಿತ ವಾಹನ ನಿರ್ಮಾಣ
ನಂತರ ಅವಳು ಪ್ರಿಯಕರನೊಂದಿಗೆ ಓಡಿ ಹೋಗಿರುವುದು ತಿಳಿದು ಬಂದಿತು. ಆಕೆ ಬರಿಗೈನಲ್ಲಿ ಓಡಿ ಹೋಗಿರಲಿಲ್ಲ. ಮನೆಯಲ್ಲಿದ್ದ ಚಿನ್ನಾಭರಣವನ್ನೂ ದೋಚಿಕೊಂಡು ಹೋಗಿದ್ದಳು. ಆ ಹುಡುಗ ಬೇರೆ ಯಾರೂ ಅಲ್ಲ ತನ್ನ ಸಹೋದರನ ಕಡೆಯ ಸಂಬಂಧಿಯಾಗಿದ್ದ. ಬಳಿಕ ಪೋಷಕರ ದೂರಿನ ಮೇರೆಗೆ ಕೇಸ್ ದಾಖಲಿಸಿಕೊಂಡ ಪೊಲೀಸರು ಓಡಿಹೋದ ಇಬ್ಬರಿಗಾಗಿ ಬಲೆ ಬೀಸಿದ್ದಾರೆ.
ಬೆಂಗಳೂರು: ವಾರಾಂತ್ಯದಲ್ಲಿ ಬೆಂಗಳೂರಿನ (Bengaluru) ವಿವಿಧೆಡೆ ಮಿಡ್‌ನೈಟ್ ಆಪರೇಷನ್ ನಡೆಸಿದ ಖಾಕಿ ಪಡೆ ಅನೈತಿಕ ಚಟುವಟಿಕೆಗಳಲ್ಲಿ ತೊಡಗಿದ್ದ ವಿದೇಶಿಗರನ್ನು ಸಿನಿಮಿಯ ರೀತಿಯಲ್ಲಿ ಬಂಧಿಸಿರುವ ಘಟನೆ ನಡೆಸಿದೆ.
ಎಂ.ಜಿ ರಸ್ತೆ, ಬ್ರಿಗೆಡ್ ರಸ್ತೆಯಲ್ಲಿ (Brigade Road) ದಾಳಿ ಮಾಡಿದ ಕೇಂದ್ರ ವಿಭಾಗದ ಪೊಲೀಸರು (Police) ಆಫ್ರಿಕನ್ ಪ್ರಜೆಗಳ ಆಟಟೋಪಕ್ಕೆ ಬ್ರೇಕ್ ಹಾಕಿದ್ದಾರೆ. ವೇಶ್ಯಾವಾಟಿಕೆ, ಡ್ರಗ್ಸ್ ದಂದೆ ಸೇರಿದಂತೆ ಅನೈತಿಕ ಚಟುವಟಿಕೆಗಳಲ್ಲಿ ಭಾಗಿಯಾದ ಶಂಕೆ ಹಿನ್ನೆಲೆಯಲ್ಲಿ ದಾಳಿ ನಡೆಸಿದ್ದು ಹಲವರನ್ನ ಬಂಧಿಸಲಾಗಿದೆ. ಇದನ್ನೂ ಓದಿ: ಹೆಡ್‍ಕಾನ್ಸ್ಟೇಬಲ್ ಮೇಲೆ ಟ್ರ್ಯಾಕ್ಟರ್ ಹರಿಸಿ ಕೊಲೆಗೈದಿದ್ದ ಆರೋಪಿ ಕಾಲಿಗೆ ಗುಂಡು ಹಾರಿಸಿದ ಪೊಲೀಸರು
ಎಂ.ಜಿ ರಸ್ತೆ, ಬ್ರಿಗೆಡ್ ರಸ್ತೆಯಲ್ಲಿ ನಿಂತು ಗ್ರಾಹಕರನ್ನ ಸೆಳೆಯುತ್ತಿದ್ದವರನ್ನ ಸಿನಿಮಿಯು ರೀತಿಯಲ್ಲಿ ಅಟ್ಟಾಡಿಸಿ ಖಾಕಿ ಪಡೆ ಲಾಕ್ ಮಾಡಿದೆ. ಒಟ್ಟು 55 ವಿದೇಶಿ ಪ್ರಜೆಗಳನ್ನ ಬಂಧಿಸಿದ್ದು, ಅವರಲ್ಲಿ 25ಕ್ಕೂ ಹೆಚ್ಚು ಮಂದಿ ಮಹಿಳೆಯರು (Foreign Women) ಇದ್ದಾರೆ. ಬಂಧಿಸಿದ ಬಳಿಕ ಆಫ್ರಿಕನ್ ಪ್ರಜೆಗಳಿಗೆ ಮೆಡಿಕಲ್ ಮತ್ತು ನಾರ್ಕೊಟಿಕ್ ಟೆಸ್ಟ್ ಮಾಡಿಸಲಾಗಿದೆ. ಇದನ್ನೂ ಓದಿ: 15 ದಿನಗಳ ಹಿಂದಷ್ಟೇ ಡಿವೋರ್ಸ್- ಪತ್ನಿಯನ್ನು ಕೊಲ್ಲಲು ಪಿಸ್ತೂಲ್ ಖರೀದಿಸಿ ಅರೆಸ್ಟ್ ಆದ!
ಆಫ್ರಿಕನ್ ಮಹಿಳೆಯರ ಹೈಡ್ರಾಮಾ:
ಪೊಲೀಸರು ವಶಕ್ಕೆ ಪಡೆಯುವ ವೇಳೆ ವಿದೇಶಿ ಯುವತಿಯರು ಭಾರೀ ಹೈಡ್ರಾಮಾ ಕ್ರಿಯೇಟ್ ಮಾಡಿದ್ದಾರೆ. ಮದ್ಯದ ನಶೆಯಲ್ಲಿ ಪಬ್‌ನಿಂದ ಹೊರ ಬರ್ತಿದ್ದಂತೆ ಕೆಲ ಯುವತಿಯರು ಖಾಕಿ ಜೊತೆಗೆ ಕಿರಿಕ್ ತೆಗೆದಿದ್ದಾರೆ. ಬಾಯಿ ಬಡಿದುಕೊಂಡು ಚೀರಾಟ ನಡೆಸಿದ್ದಾರೆ. ಕುಡಿದ ಅಮಲಿನಲ್ಲಿ ಕ್ಯಾಮೆರಾ ಚಿತ್ರೀಕರಣಕ್ಕೂ ಅಡ್ಡಿಪಡಿಸಿದ್ದಾರೆ. ಇನ್ನೂ ಕೆಲವರು ಪೊಲೀಸರು ಹತ್ತಿರ ಬರುತ್ತಿದ್ದಂತೆ ದಿಕ್ಕಾಪಾಲಾಗಿ ಓಡಲು ಯತ್ನಿಸಿದ್ದು, ಬೆರಳೆಣಿಕೆಯಷ್ಟು ಮಹಿಳೆಯರು ಎಸ್ಕೇಪ್ ಆಗಿದ್ದಾರೆ. ಉಳಿದ ಮಹಿಳೆಯರನ್ನ ಸಮಾಧಾನ ಮಾಡಿ ವಶಕ್ಕೆ ಪಡೆಯುವಷ್ಟರಲ್ಲಿ ಪೊಲೀಸರು ಹೈರಾಣಾಗಿದ್ದಾರೆ.
60 ಮಂದಿ ಖಾಕಿ ಪಡೆ ಕಾರ್ಯಾಚರಣೆ:
ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ ಗೌಡ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಕಾರ್ಯಚರಣೆಯಲ್ಲಿ ಓರ್ವ ಡಿಸಿಪಿ, ಇಬ್ಬರು ಎಸಿಪಿ, 6 ಮಂದಿ ಇನ್ಸ್ಪೆಕ್ಟರ್, 10 ಮಂದಿ ಪಿಎಸ್‌ಐ, 20 ಮಹಿಳಾ ಸಿಬ್ಬಂದಿ, 20 ಪುರುಷ ಸಿಬ್ಬಂದಿಯಿAದ ಯಶಸ್ವಿ ಕಾರ್ಯಾಚರಣೆ ನಡೆದಿದೆ. ಡಿಸಿಪಿ ಶ್ರೀನಿವಾಸಗೌಡ ನೇತೃತ್ವದ ತಂಡ ಏಕಕಾಲದಲ್ಲಿ ಮೂರು ಕಡೆಗಳಿಂದ ದಾಳಿ ನಡೆಸಿದೆ. ಎಂ.ಜಿ ರಸ್ತೆಯಿಂದ ಒಂದು ತಂಡ, ಚರ್ಚ್ ಸ್ಟ್ರೀಟ್ ನಿಂದ ಒಂದು ತಂಡ, ಬ್ರಿಗೇಡ್ ರಸ್ತೆ ಜಂಕ್ಷನ್ ನಿಂದ ಫೀಲ್ಡಿಗಿಳಿದು ಆಪರೇಷನ್ ನಡೆಸಿ, ವಿದೇಶಿಗರನ್ನ ಬಂಧಿಸುವಲ್ಲಿ ತಂಡ ಯಶಸ್ವಿಯಾಗಿದೆ.
ಲಕ್ನೋ: 24 ವರ್ಷದ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳು (Medical Student) ಹಾಸ್ಟೆಲ್ ರೂಮಿನಲ್ಲಿ ಸೀಲಿಂಗ್ ಫ್ಯಾನ್‌ಗೆ (Ceiling Fan) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಗಾಜಿಯಾಬಾದ್‌ನಲ್ಲಿ ನಡೆದಿದೆ.
3ನೇ ವರ್ಷದ MBBS ವಿದ್ಯಾರ್ಥಿನಿ ದಿವ್ಯ ಜ್ಯೋತಿ (24) ಆತ್ಮಹತ್ಯೆ ಮಾಡಿಕೊಂಡ ಯುವತಿ. ಈಕೆ ಕನೂಜ್ ಜಿಲ್ಲೆಯ ನಿವಾಸಿ. ಗಾಜಿಯಾಬಾದ್ ಮೋದಿನಗರ ಟೌನ್‌ನ ಸೂರ್ಯ ಕಾಲೊನಿಯಲ್ಲಿ ವಾಸವಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಉನ್ನತ ವ್ಯಾಸಂಗಕ್ಕೆ ತೆರಳಿದ್ದ ಹೈದರಾಬಾದ್ ಯುವತಿ ಲಂಡನ್‌ನಲ್ಲಿ ಭೀಕರ ಕೊಲೆ
ಜ್ಯೋತಿ ಸ್ನೇಹಿತೆ ದಿವ್ಯಜ್ಯೋತಿಯನ್ನ ಭೇಟಿ ಮಾಡಲು ರೂಮಿನ ಬಳಿ ತೆರಳಿದಾಗ ಬಾಗಿಲು ಮುಚ್ಚಿರುವುದು ಕಂಡುಬಂದಿದೆ. ಎಷ್ಟು ಬಾರಿ ಬಾಗಿಲು ಬಡಿದರೂ ಉತ್ತರವಿಲ್ಲ, ಜ್ಯೋತಿ ಮೊಬೈಲ್ ಸಂಖ್ಯೆಗೆ ಕರೆ ಮಾಡಿದರೂ ಆಕೆ ಉತ್ತರಿಸಲಿಲ್ಲ. ಇದರಿಂದ ಅನುಮಾನಗೊಂಡ ಸ್ನೇಹಿತರು ಕೂಡಲೇ ಮನೆ ಮಾಲೀಕರಿಗೆ ವಿಷಯ ತಿಳಿಸಿದ್ದಾರೆ. ಬಾಗಿಲು ಒಡೆದು ನೋಡಿದಾಗ ಜ್ಯೋತಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡಿರುವುದು ಪತ್ತೆಯಾಗಿದೆ. ಇದನ್ನೂ ಓದಿ: ಕಣ್ಣು ಕಿತ್ತು, ಕತ್ತು ಕೊಯ್ದು ನರ್ಸಿಂಗ್ ವಿದ್ಯಾರ್ಥಿನಿಯ ಕೊಲೆ – ಕರಾಳ ರಾತ್ರಿಯಲ್ಲಿ ನಡೆದಿದ್ದೇನು?
ಪೊಲೀಸರು ತಪಾಸಣೆ ನಡೆಸಿದಾಗ, ಲವ್ ಬ್ರೇಕಪ್ ಆಗಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಬರೆದಿರುವ ಡೆತ್ ನೋಟ್ ಪತ್ತೆಯಾಗಿದೆ. ನಂತರ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಡಿಸಿಪಿ ರವಿಕುಮಾರ್ ಮಾಹಿತಿ ನೀಡಿದ್ದಾರೆ.