Tag: crime

  • ಮದುವೆ ಆಗಬೇಕಿದ್ದ ಹುಡುಗಿ ಕೈಕೊಟ್ಟು ಮತ್ತೊಬ್ಬನೊಂದಿಗೆ ಎಸ್ಕೇಪ್ – ಯುವಕ ಕಂಗಾಲು

    ಮದುವೆ ಆಗಬೇಕಿದ್ದ ಹುಡುಗಿ ಕೈಕೊಟ್ಟು ಮತ್ತೊಬ್ಬನೊಂದಿಗೆ ಎಸ್ಕೇಪ್ – ಯುವಕ ಕಂಗಾಲು

    – 5 ಲಕ್ಷ ಪಡೆದು ಪಂಗನಾಮ ಹಾಕಿದ ಖತರ್ನಾಕ್ ಅತ್ತೆ ವಿರುದ್ಧ ದೂರು

    ಬೆಂಗಳೂರು: ಅವರಿಬ್ಬರು ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ರು (Love). ಇಬ್ಬರ ಪ್ರೀತಿ ವಿಚಾರ ಗೊತ್ತಾಗಿ ಮನೆಯಲ್ಲಿ ಎಂಗೇಜ್ಮೆಂಟ್ ಕೂಡ ಮಾಡಿದ್ರು. ಮದುವೆ (Marriage) ಕೆಲ ದಿನಗಳಷ್ಟೇ ಬಾಕಿಯಿತ್ತು ಅನ್ನುವಷ್ಟರಲ್ಲಿ ಯುವತಿ ಮತ್ತೊಬ್ಬನ ಜೊತೆಗೆ ಎಸ್ಕೇಪ್ ಆಗಿದ್ದಾಳೆ. ಈ ಮಧ್ಯೆ ಮದುವೆ ಆಸೆಯಲ್ಲಿದ್ದ ಯುವಕ ಭಾವಿ ಅತ್ತೆಗೆ 5 ಲಕ್ಷ ಹಣ ಕೂಡ ಕೊಟ್ಟಿದ್ನಂತೆ. ಈಗ ಹುಡುಗಿನೂ ಇಲ್ಲ, ಹಣ ಇಲ್ಲದಂತಾಗಿ ಯುವಕ ಪೊಲೀಸ್ (Police) ಠಾಣೆ ಮೆಟ್ಟಿಲೇರಿದ್ದಾನೆ.

    ಹೌದು. ಬೆಂಗಳೂರು (Bengaluru) ಹೊರವಲಯದ ಅವಲಹಳ್ಳಿಯಲ್ಲಿ ಇಂಥದ್ದೊಂದು ವಿಚಿತ್ರ ಘಟನೆ ವರದಿಯಾಗಿದೆ. ಇಲ್ಲಿನ ವಾಸಿಯಾದ ಜೋಸೆಫ್ ಅನ್ನೋ ಯುವಕ ಕಳೆದ 2 ವರ್ಷಗಳಿಂದ ಕ್ಯಾತ್ರಿನ್ ಎಂಬ ಯುವತಿಯನ್ನ ಪ್ರೀತಿಸುತ್ತಿದ್ದ. ಆಕೆ ಕೂಡ ಜೋಸೆಫ್‌ನನ್ನ ಇಷ್ಟಪಟ್ಟಿದ್ದಳು. ಇಬ್ಬರ ವಿಚಾರ ಮನೆಯಲ್ಲಿ ಗೊತ್ತಾಗಿ, ಎಂಗೇಜ್ಮೆಂಟ್ ಕೂಡ ಮಾಡಿದ್ರು. ಮದುವೆಗೆ ಇನ್ನು ಎರಡು ತಿಂಗಳಷ್ಟೇ ಬಾಕಿಯಿತ್ತು. ಅಷ್ಟರಲ್ಲಿ ಮದುವೆಯಾಗಬೇಕಿದ್ದ ಹುಡುಗಿ ಮತ್ತೊಬ್ಬ ಹುಡುಗನ ಜೊತೆಗೆ ಎಸ್ಕೇಪ್ ಆಗಿ ಬೇರೊಂದು ಮದುವೆ ಆಗಿದ್ದಾಳೆ ಎಂದು ಹೇಳಲಾಗಿದೆ.

    ಬರೀ ಇಷ್ಟೇ ಆಗಿದ್ರೆ ಹೋಗಲಿ ಬಿಡಿ ಅನ್ನಬಹುದಿತ್ತು. ಆದ್ರೆ ಈ ಯುವಕ ಮದುವೆ ಆಗೋ ಖುಷಿಯಲ್ಲಿ ಭಾವಿ ಅತ್ತೆ ಸಲೇನಾ ಮೆರಿ ಅನ್ನೋರಿಗೆ 5 ಲಕ್ಷ ಹಣ ಕೊಟ್ಟಿದ್ದನಂತೆ. ಮದುವೆ ಖರ್ಚಿಗೆ ಬೇಕಾಗಬಹುದು ಆಮೇಲೆ ಕೊಡ್ತೀನಿ ಅಂದಿದ್ದರಂತೆ. ಹೇಗಿದ್ರೂ ಮದುವೆ ಮಾಡ್ತಿದ್ದಾರೆ ಅನ್ನೋ ಧೈರ್ಯದಲ್ಲಿ ಯುವಕ ಕೂಡ ಕಷ್ಟಪಟ್ಟು ಕೂಡಿಟ್ಟ ಹಣ ಕೊಟ್ಟಿದ್ದಾನೆ. ಆದ್ರೆ ಯಾವಾಗ ಯುವತಿ ಕೈ ಕೊಟ್ಟು ಬೇರೊಬ್ಬನ ಜೊತೆಗೆ ಎಸ್ಕೇಪ್ ಆದ್ಲೋ, ಭಾವಿ ಅತ್ತೆಯ ಬಳಿ ಹೋಗಿ ನನ್ನ ಹಣ ವಾಪಸು ಕೊಡಿ ಅಂತಾ ಕೇಳಿದ್ದಾನೆ.. ಅದಕ್ಕೆ ಆಯಮ್ಮ ನೀನ್ಯಾರೋ ನಂಗೆ ಗೊತ್ತೇ ಇಲ್ಲ. ಅದೇನ್ ಮಾಡ್ಕೋತಿಯೋ ಮಾಡ್ಕೋ ಅಂತಾ ಹೇಳಿದ್ದಾರೆ.

    ಅತ್ತ ಹುಡುಗಿನೂ ಇಲ್ಲ, ಕೊಟ್ಟ ಹಣವೂ ಇಲ್ಲದೇ ಕಂಗಾಲಾದ ಯುವಕ ಜೋಸೆಫ್ ಅವಲಹಳ್ಳಿ ಪೊಲೀಸ್ ಠಾಣೆಗೆ (Avalahalli Police Station) ದೂರು ನೀಡಿದ್ದಾನೆ. ಈ ಸಂಬಂಧ ಕೇಸ್ ದಾಖಲಿಸಿಕೊಂಡಿದ್ದು ವಿಚಾರಣೆ ನಡೆಸುತ್ತಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕುಡಿದ ವಿಚಾರ ತಂದೆ ಬಳಿ ಬಾಯ್ಬಿಟ್ಟಿದ್ದಕ್ಕೆ ಕೊಲೆಗೈದ ಆರೋಪಿಗಳು ಅರೆಸ್ಟ್

    ಕುಡಿದ ವಿಚಾರ ತಂದೆ ಬಳಿ ಬಾಯ್ಬಿಟ್ಟಿದ್ದಕ್ಕೆ ಕೊಲೆಗೈದ ಆರೋಪಿಗಳು ಅರೆಸ್ಟ್

    ಹಾಸನ: ಮದ್ಯ ಸೇವಿಸಿದ ವಿಚಾರವನ್ನು ತಂದೆಯ ಬಳಿ ಹೇಳಿದ ಕಾರಣಕ್ಕೆ ಸ್ನೇಹಿತನನ್ನೇ ಕೊಲೆಗೈದ ಇಬ್ಬರು ದುಷ್ಕರ್ಮಿಗಳನ್ನು ಹಾಸನ (Hassan) ಗ್ರಾಮಾಂತರ ಠಾಣೆ ಪೊಲೀಸರು (Police) ಬಂಧಿಸಿದ್ದಾರೆ.

    ಚಿಕ್ಕಗೇಣಿಗೆರೆ ಗ್ರಾಮದ ಪುನೀತ್ (22) ಹಾಗೂ ಯಶ್ವಂತ್ (18) ಬಂಧಿತ ಆರೋಪಿಗಳು. ಕಳೆದ ಜು.31 ರಂದು ಗ್ರಾಮದ ಹರೀಶ್ ಎಂಬುವರು ಹೊಸ ಮನೆಯ ಕೆಲಸ ಪೂರ್ಣಗೊಂಡ ವಿಚಾರಕ್ಕೆ ಕೆಲವರನ್ನು ಊಟಕ್ಕೆ ಕರೆದಿದ್ದರು. ಅದೇ ಊರಿನವರಾದ ಪುನೀತ್, ಯಶ್ವಂತ್ ಹಾಗೂ ಪ್ರಕಾಶ್ ಅಲ್ಲಿಗೆ ಹೋಗಿದ್ದರು. ಹೋಗುವ ಮುನ್ನ ಮೂವರೂ ಒಟ್ಟಿಗೆ ಮದ್ಯಪಾನ ಮಾಡಿ ಜೊತೆಯಲ್ಲೇ ಊಟ ಮಾಡಿಕೊಂಡು ವಾಪಾಸ್ ಆಗಿದ್ದರು. ಇದನ್ನೂ ಓದಿ: ಟ್ರಕ್‌ ಡಿಕ್ಕಿ ಹೊಡೆದು ನಜ್ಜುಗುಜ್ಜಾದ ಕಾರು – 22ರ ಯುವತಿ ದುರ್ಮರಣ

    ಪ್ರಕಾಶ್ ಮನೆಯಲ್ಲಿದ್ದಾಗ ಆರೋಪಿ ಪುನೀತ್‍ನ ತಂದೆ ರಂಗಸ್ವಾಮಿ, ಪ್ರಕಾಶ್‍ಗೆ ಕರೆ ಮಾಡಿ ನಿನ್ನ ಜೊತೆ ಪುನೀತ್ ಮದ್ಯ ಕುಡಿದಿದ್ದಾನಾ? ಎಂದು ಕೇಳಿದ್ದಾರೆ. ಮೊದಲಿಗೆ ಇಲ್ಲ ಎಂದಿದ್ದ ಪ್ರಕಾಶ್, ಒತ್ತಾಯ ಮಾಡಿದ್ದಕ್ಕೆ ನಿಜ ಹೇಳಿದ್ದ. ಇದೇ ವಿಚಾರಕ್ಕೆ ಪುನೀತ್ ಹಾಗೂ ಯಶ್ವಂತ್ ಪ್ರಕಾಶ್ ಮನೆ ಬಳಿ ತೆರಳಿ ಗಲಾಟೆ ಮಾಡಿದ್ದರು. ಬಳಿಕ ಆತನ ಮೇಲೆ ಹಲ್ಲೆ ನಡೆಸಿ ಆತನ ತಲೆಯನ್ನು ಗೋಡೆಗೆ ಗುದ್ದಿಸಿದ್ದರು.

    ಬಳಿಕ ಆತನನ್ನು ಕುಟುಂಬಸ್ಥರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಆ.1 ರಂದು ಸಂಜೆ ಆತ ಮೃತಪಟ್ಟಿದ್ದ. ಈ ಸಂಬಂಧ ಮೃತನ ಪತ್ನಿ ಹಾಸನ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ಆರಂಭಿಸಿದ್ದಾರೆ. ಇದನ್ನೂ ಓದಿ: ಪಬ್‌ಜಿ ಗೇಮ್‌ನಲ್ಲಿ ಹಣ ಕಳೆದುಕೊಂಡು ವಿದ್ಯಾರ್ಥಿ ಆತ್ಮಹತ್ಯೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪತಿ ಹತ್ಯೆಗೈದು ಶವದ ಮುಂದೆಯೇ ಪತ್ನಿ ಮೇಲೆ ಅತ್ಯಾಚಾರವೆಸಗಿದ!

    ಪತಿ ಹತ್ಯೆಗೈದು ಶವದ ಮುಂದೆಯೇ ಪತ್ನಿ ಮೇಲೆ ಅತ್ಯಾಚಾರವೆಸಗಿದ!

    ರಾಯ್ಪುರ್: ಪತ್ನಿ ಎದುರೇ ಪತಿಯನ್ನು ಕೊಲೆಗೈದು ಆಕೆಯ ಮೇಲೆ ಅತ್ಯಾಚಾರ ಎಸಗಿದ ಆರೋಪಿಯನ್ನು ಛತ್ತೀಸ್‍ಗಢದ (Chhattisgarh) ಪೊಲೀಸರು (Police) ಬಂಧಿಸಿದ್ದಾರೆ.

    ಕಾರ್ತಿಕ್ (21) ಬಂಧಿತ ಆರೋಪಿ. ಕಾರ್ತಿಕ್ ರಾತ್ರಿ ವೇಳೆ ಮನೆಯೊಂದಕ್ಕೆ ನುಗ್ಗಿ ಬಳಿಕ ಸುಖ್‍ಲಾಲ್ (42)ನನ್ನು ದೊಣ್ಣೆಯಿಂದ ಥಳಿಸಿ ಹತ್ಯೆಮಾಡಿದ್ದ. ನಂತರ ಸುಖ್‍ಲಾಲ್ ಪತ್ನಿಯನ್ನು ಬೆದರಿಸಿ ಅತ್ಯಾಚಾರವೆಸಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಸೆಲ್ಫಿ ಹುಚ್ಚು – ಕಾಲು ಜಾರಿ ನದಿಯಲ್ಲಿ ಕೊಚ್ಚಿಹೋಗಿ ವ್ಯಕ್ತಿ ಸಾವು

    ಆರೋಪಿ ಕಾರ್ತಿಕ್ ಜೊತೆ ಪತ್ನಿ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಮೃತ ಸುಖ್‍ಲಾಲ್ ಆಗಾಗ ಗಲಾಟೆ ಮಾಡುತ್ತಿದ್ದ ಎಂದು ತನಿಖೆ ವೇಳೆ ತಿಳಿದು ಬಂದಿದೆ. ಇದರಿಂದ ಆರೋಪಿ ಬೇಸತ್ತು ಆತನನ್ನು ಕೊಲೆ ಮಾಡಿದ್ದಾನೆ. ಬಳಿಕ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಕೃತ್ಯ ಎಸಗಿ ಬಳಿಕ ಅಲ್ಲಿಂದ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

    ಕಾರ್ತಿಕ್ ಇತ್ತೀಚೆಗೆ ರಾತ್ರಿ ವೇಳೆ ದಂಪತಿಯ ಮನೆಗೆ ತೆರಳಿದ್ದ. ಈ ವೇಳೆ ಸಹ ಪತ್ನಿ ಕಾರ್ತಿಕ್ ಜೊತೆ ಸಂಬಂಧ ಹೊಂದಿದ್ದಾಳೆಂದು ಶಂಕಿಸಿ ಸುಖಲಾಲ್ ಗಲಾಟೆ ಮಾಡಿದ್ದ. ಈ ವೇಳೆ ಇಬ್ಬರ ಜಗಳ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿತ್ತು. ಇಷ್ಟಾದರೂ ಅಲ್ಲಿಂದ ತೆರಳದ ಆರೋಪಿ ಮೃತನ ಪತ್ನಿಯನ್ನು ಬೆದರಿಸಿ ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ.

    ಈ ಸಂಬಂಧ ಮಹಿಳೆ ಅಂಬಿಕಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆತನ ವಿರುದ್ಧ ಐಪಿಸಿ ಸೆಕ್ಷನ್ ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಿದ್ದಾರೆ. ತನಿಖೆಯ ವೇಳೆ ಆರೋಪಿಯು ಕೃತ್ಯವನ್ನು ಒಪ್ಪಿಕೊಂಡಿದ್ದು, ಆತನನ್ನು ಜೈಲಿನಲ್ಲಿರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಹತಾಶೆಯಿಂದ ಹೆಚ್‌ಡಿಕೆ ಮಾತು: ಸಚಿವ ತಂಗಡಗಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಾಸ್ ಎಂದು ಕರೆಯದ್ದಕ್ಕೆ ಯುವಕನ ಮೇಲೆ ಪುಡಿರೌಡಿಗಳಿಂದ ಹಲ್ಲೆ

    ಬಾಸ್ ಎಂದು ಕರೆಯದ್ದಕ್ಕೆ ಯುವಕನ ಮೇಲೆ ಪುಡಿರೌಡಿಗಳಿಂದ ಹಲ್ಲೆ

    ಮಂಡ್ಯ: ಕ್ಷುಲ್ಲಕ ಕಾರಣಕ್ಕೆ ಯುವಕನ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಘಟನೆ ಮಂಡ್ಯದ (Mandya) ಹೊಳಲು ಗ್ರಾಮದಲ್ಲಿ ನಡೆದಿದೆ.

    ಮಾದ ಅಲಿಯಾಸ್ ಮಾದಪ್ಪ ಎಂಬಾತನನ್ನು ಬಾಸ್ ಎಂದು ಕರೆಯದೇ ಇರುವುದಕ್ಕೆ ಮಾದ ಹಾಗೂ ಆತನ ಸಹಚರರಾದ ಚಿಂಟು, ತರುಣ್, ಸುಶಾಂತ್ ಹಾಗೂ ಚಂದನ್ ಎಂಬುವವರು ಶಾರಂತ್ ಎಂಬ ಯುವಕನ ಬಳಿ ಗಲಾಟೆ ಮಾಡಿದ್ದಾರೆ. ಬಳಿಕ ಮಚ್ಚಿನಿಂದ ಹೊಡೆದು, ಡ್ರಾಗನ್‍ನಿಂದ ಚುಚ್ಚಿ ಹಲ್ಲೆ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಯುವಕನನ್ನು ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಸಿರಿಯಾ ಘರ್ಷಣೆಯಲ್ಲಿ ಐಸಿಸ್ ನಾಯಕ ಸಾವು

    ಈ ಹಿಂದೆ ಮಾದಪ್ಪನಿಗೆ ಬಾಸ್ ಎಂದು ಕರೆಯಬೇಕು ಎಂದು ಪುಡಿರೌಡಿಗಳು ಎಚ್ಚರಿಸಿದ್ದರು. ಇದಕ್ಕೆ ಶಾರಂತ್ ಅವನು ನನಗೆ ಯಾವ ಬಾಸ್ ಎಂದು ಹೇಳಿದ್ದ. ಇದೇ ವಿಚಾರಕ್ಕೆ ಗುರುವಾರ ಸ್ನೇಹಿತರೊಂದಿಗೆ ಹುಟ್ಟು ಹಬ್ಬ ಆಚರಿಸಿ ಗ್ರಾಮದ ಬಳಿ ಸ್ನೇಹಿತರೊಂದಿಗೆ ಮಾತನಾಡುತ್ತಿದ್ದ ವೇಳೆ ದುಷ್ಕರ್ಮಿಗಳು ಶಾರಂತ್ ಮೇಲೆ ದಾಳಿ ನಡೆಸಿದ್ದಾರೆ.

    ಈ ಸಂಬಂಧ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಲ್ಲೆ ನಡೆಸಿದ ದುಷ್ಕರ್ಮಿಗಳ ಬಂಧನಕ್ಕೆ ಪೊಲೀಸರು (Police) ಬಲೆ ಬೀಸಿದ್ದಾರೆ. ಇದನ್ನೂ ಓದಿ: ನಿಗೂಢವಾಗಿ ನಾಪತೆಯಾಗಿದ್ದ ಕಾಶ್ಮೀರದ ಯೋಧ ವಾರದ ಬಳಿಕ ಪತ್ತೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪತಿಯನ್ನ ಮಂಚಕ್ಕೆ ಕಟ್ಟಿಹಾಕಿ ಕೊಂದು, ಐದು ತುಂಡುಗಳಾಗಿ ಕತ್ತರಿಸಿ ಎಸೆದ ಪತ್ನಿ!

    ಪತಿಯನ್ನ ಮಂಚಕ್ಕೆ ಕಟ್ಟಿಹಾಕಿ ಕೊಂದು, ಐದು ತುಂಡುಗಳಾಗಿ ಕತ್ತರಿಸಿ ಎಸೆದ ಪತ್ನಿ!

    ಲಕ್ನೋ: ಉತ್ತರ ಪ್ರದೇಶದ (Uttar Pradesh) ಮಹಿಳೆಯೊಬ್ಬಳು ತನ್ನ ಪತಿಯನ್ನ ಮಂಚಕ್ಕೆ ಕಟ್ಟಿಹಾಕಿ ಕೊಂದು, 5 ತುಂಡುಗಳಾಗಿ ಕತ್ತರಿಸಿ ಬಿಸಾಡಿರುವ ಘಟನೆ ಉತ್ತರ ಪ್ರದೇಶದ ಪಿಲಿಭಿತ್‌ನಲ್ಲಿ ನಡೆದಿದೆ. ಬಳಿಕ ತನಿಖೆಯಲ್ಲಿ (Investigation) ತಾನೇ ಕೊಂದಿರುವುದಾಗಿ ತಪ್ಪೊಪ್ಪಿಕೊಂಡ ನಂತರ ಪೊಲೀಸರು ಬಂಧಿಸಿದ್ದಾರೆ.

    ಮೃತರನ್ನ ಗಜ್ರೌಲಾ ಪ್ರದೇಶದ ಶಿವನಗರ ನಿವಾಸಿ ರಾಮ್ ಪಾಲ್ (55) ಎಂದು ಗುರುತಿಸಲಾಗಿದೆ. ದುಲಾರೊ ದೇವಿ ಆರೋಪಿಯಾಗಿದ್ದಾಳೆ. ಇದನ್ನೂ ಓದಿ: ವಂದೇ ಭಾರತ್‌ ಎಕ್ಸ್‌ಪ್ರೆಸ್‌ನಲ್ಲಿ ನೀಡಿದ ಚಪಾತಿ ಊಟದಲ್ಲಿ ಜಿರಳೆ ಪತ್ತೆ – ಪ್ರಯಾಣಿಕ ಶಾಕ್‌!

    ರಾಮ್‌ಪಾಲ್‌ ಪತ್ನಿ ದುಲಾರೊ ದೇವಿ ಕೆಲ ದಿನಗಳಿಂದ ಪತಿಯ ಸ್ನೇಹಿತನೊಂದಿಗೆ ವಾಸವಿದ್ದಳು. ಕಳೆದ ಒಂದು ತಿಂಗಳ ಹಿಂದೆಯಷ್ಟೇ ಗ್ರಾಮಕ್ಕೆ ಹಿಂದಿರುಗಿದಾಗ ಪತಿ ಕಾಣೆಯಾಗಿರುವ ಬಗ್ಗೆ ಮಗನಿಗೆ ತಿಳಿಸಿದ್ದಾಳೆ. ನಂತರ ಮಗ ಪೊಲೀಸ್‌ ಠಾಣೆಗೆ (UP Police) ದೂರು ನೀಡಿದ್ದಾನೆ. ಕೇಸ್‌ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುವ ವೇಳೆ ಪತ್ನಿ ಮೇಲೆ ಅನುಮಾನಗೊಂಡು ವಿಚಾರಣೆಗೆ ಒಳಪಡಿಸಿದಾಗ ಸತ್ಯ ಬಾಯ್ಬಿಟ್ಟಿದ್ದಾಳೆ. ಇದನ್ನೂ ಓದಿ: ಸಾಲ ಮಾಡಿ ಲಾಟರಿ ಟಿಕೆಟ್ ಖರೀದಿಸಿದ ಪೌರಕಾರ್ಮಿಕ ಮಹಿಳೆಯರಿಗೆ 10 ಕೋಟಿ ರೂ. ಬಂಪರ್

    ಪತಿ ರಾತ್ರಿ ಮಲಗಿದ್ದಾಗ ಮಂಚಕ್ಕೆ ಕಟ್ಟಿಹಾಕಿ ಕೊಂದು, ಕೊಡಲಿಯಿಂದ ದೇಹದ ಭಾಗಗಳನ್ನ ಕತ್ತರಿಸಿ ಹತ್ತಿರದ ಕಾಲುವೆಯಲ್ಲಿ (Canal) ಬಿಸಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ನಂತರ ಪತ್ನಿಯನ್ನ ಬಂಧಿಸಿದ ಪೊಲೀಸರು ರಾಮ್‌ಪಾಲ್‌ ದೇಹದ ಭಾಗಗಳನ್ನ ಕಾಲುವೆಯಿಂದ ಹೊರತೆಗೆಯಲು ಕಾರ್ಯಚರಣೆ ನಡೆಸುತ್ತಿದ್ದಾರೆ. ಮೃತರ ರಕ್ತಸಿಕ್ತ ಬಟ್ಟೆ ಹಾಗೂ ಹಾಸಿಗೆ ಪತ್ತೆಯಾಗಿದ್ದು, ತನಿಖೆ ಮುಂದುವರಿದಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹುಡುಗಿಯರು ಪ್ರೀತಿ ಮಾಡ್ಬೇಡಿ ಪ್ಲೀಸ್ – ಪ್ರಿಯಕರನ ಕಿರುಕುಳಕ್ಕೆ ಬೇಸತ್ತು ಟೆಕ್ಕಿ ಆತ್ಮಹತ್ಯೆ!

    ಹುಡುಗಿಯರು ಪ್ರೀತಿ ಮಾಡ್ಬೇಡಿ ಪ್ಲೀಸ್ – ಪ್ರಿಯಕರನ ಕಿರುಕುಳಕ್ಕೆ ಬೇಸತ್ತು ಟೆಕ್ಕಿ ಆತ್ಮಹತ್ಯೆ!

    ಬೆಂಗಳೂರು: ಪ್ರಿಯಕರನ (Lover) ಹೆಸರು ಬರೆದಿಟ್ಟು ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಉತ್ತರ (Bengaluru North) ತಾಲೂಕಿನ ಕೆಂಪಾಪುರದಲ್ಲಿ ನಡೆದಿದೆ.

    ಬೆಂಗಳೂರಿನ ಐಟಿ ಕಂಪನಿಯೊಂದರಲ್ಲಿ (IT Company) ಕೆಲಸ ಮಾಡುತ್ತಿದ್ದ ಯುವತಿ ವಿದ್ಯಾಶ್ರೀ ಡೆತ್‌ನೋಟ್‌ನಲ್ಲಿ ಪ್ರಿಯಕರನ ಹೆಸರು, ಕಾರಣ ಬರೆದಿಟ್ಟು ಮನೆಯಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದನ್ನೂ ಓದಿ: ರೈಲ್ವೇ ಹಳಿ ಮೇಲೆ ಕುಸಿದ ಮಣ್ಣು – ಗೋವಾ, ಕರ್ನಾಟಕ ರೈಲು ಸಂಚಾರದಲ್ಲಿ ಇನ್ನೆರಡು ದಿನ ವ್ಯತ್ಯಯ

    ಆರೋಪಿ ಅಕ್ಷಯ್ ಹಾಗೂ ವಿದ್ಯಾಶ್ರೀ ಪರಸ್ಪರ ಪ್ರೀತಿಸುತ್ತಿದ್ದರು. ಪ್ರಿಯಕರ ತನ್ನಿಂದ ದೂರ ಹೋಗುತ್ತಿದ್ದಾನೆ ಅಂತಾ ಅನುಮಾನಗೊಂಡ ವಿದ್ಯಾಶ್ರೀ ಆತ್ಮಹತ್ಯೆ ಹಾದಿ ಹಿಡಿದಿದ್ದಾಳೆ. ಯುವತಿ ಮನೆಯಲ್ಲಿ ಬುಧವಾರ ಡೆತ್‌ನೋಟ್ ಪತ್ತೆಯಾದ ಬೆನ್ನಲ್ಲೇ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ನಂತರ ಆರೋಪಿ ಅಕ್ಷಯ್‌ನನ್ನ ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗಿದೆ. ಸದ್ಯ ಸೋಲದೇವನಹಳ್ಳಿ ಠಾಣೆಯಲ್ಲಿ (Soladevanahalli Police Station) ಕೇಸ್ ದಾಖಲಾಗಿದೆ. ಇದನ್ನೂ ಓದಿ: ಫ್ರೆಂಡ್ಸ್ ನಡುವಿನ ಘಟನೆಯನ್ನ ಎಲ್ಲಿಗೋ ತೆಗೆದುಕೊಂಡು ಹೋಗ್ಬೇಡಿ: ಉಡುಪಿ ಕೇಸ್ ಬಗ್ಗೆ ಪರಮೇಶ್ವರ್ ಪ್ರತಿಕ್ರಿಯೆ

    ಪ್ರಿಯಕರನ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ:
    ಮಾಡೆಲ್ ಸಹ ಆಗಿದ್ದ ವಿದ್ಯಾಶ್ರೀ ಮತ್ತು ಅಕ್ಷಯ್ ಕಳೆದ ಒಂದು ವರ್ಷದಿಂದ ಪ್ರೀತಿ ಮಾಡುತ್ತಿದ್ದರು. ಅಕ್ಷಯ್ ವಿದ್ಯಾ ಬಳಿ 1.76 ಲಕ್ಷ ಹಣ ಪಡೆದುಕೊಂಡಿದ್ದ. ಕೊಟ್ಟ ಹಣ ಕೇಳಿದ್ದಕ್ಕೆ ವಿದ್ಯಾ ಮತ್ತು ಆಕೆಯ ಕುಟುಂಬದವರನ್ನ ಅವಾಚ್ಯ ಶಬ್ಧಗಳಿಂದ ಬೈಯುತ್ತಿದ್ದ. ಇದರಿಂದ ಮಾನಸಿಕ ಖಿನ್ನತೆಗೆ ಒಳಗಾದ ವಿದ್ಯಾಶ್ರೀ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾಳೆ.

    ಮೀಸ್ ಆಂಧ್ರ ಕಾಂಪಿಟೇಷನ್ ನಲ್ಲಿ ವಿಜೇತಳಾಗಿದ್ದ ಮೃತ ವಿದ್ಯಾಶ್ರೀ ಬಸವೇಶ್ವರ ನಗರದಲ್ಲಿ ಜೀಮ್ ಟ್ರೈನರ್ ಆಗಿದ್ದ ಆರೋಪಿ ಅಕ್ಷಯ್‌ಗೆ ಹಣ ಕೊಟ್ಟಿದ್ದರ ಬಗ್ಗೆ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾಳೆ.

    ಡೆತ್‌ನೋಟ್‌ನಲ್ಲಿ ಏನಿದೆ?
    `ನನ್ನ ಸಾವಿಗೆ ಅಕ್ಷಯ್ ಕಾರಣ, ಅವನು ನನ್ನ ನಾಯಿ ಥರ ಟ್ರೀಟ್ ಮಾಡ್ತಿದ್ದಾನೆ. ನನಗೆ ಕೊಡಬೇಕಾದ 1 ಲಕ್ಷದ 76 ಸಾವಿರ ದುಡ್ಡು ಕೇಳಿದರೆ, ನನಗೆ ಹಾಗೂ ನನ್ನ ಕುಟುಂಬಗ್ಗೆ ಕೆಟ್ಟ ಕೆಟ್ಟ ಮಾತಿನಲ್ಲಿ ಬೈದು ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ಖಿನ್ನತೆಗೆ ಬದುಕಲು ಆಗುತ್ತಿಲ್ಲ. ದಿನೇ ದಿನೇ ನನಗೆ ತುಂಬಾ ಸ್ಟ್ರೆಸ್ ಆಗ್ತಿದೆ. ಅಮ್ಮ, ಗುರು ಮಾವ ನನ್ನನ್ನು ಕ್ಷಮಿಸಿ, ನನ್ನನ್ನು ಮರೆತುಬಿಡಿ.. ಎಲ್ಲಾ ಹುಡುಗಿಯರಿಗೆ ವಿನಂತಿ ಮಾಡುತ್ತೇನೆ ಯಾರೂ ಪ್ರೀತಿ ಮಾಡಬೇಡಿ… ಗುಡ್ ಬೈ ಟು ದಿಸ್ ವರ್ಲ್ಡ್’ ಅಂತಾ ಮೃತ ವಿದ್ಯಾಶ್ರೀ ಡೆತ್‌ನೋಟ್‌ನಲ್ಲಿ ಬರೆದಿದ್ದಾಳೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೆಂಗ್ಳೂರಿನ ಬಾಡಿಗೆ ಮನೆಯಲ್ಲಿದ್ದುಕೊಂಡೇ ಡ್ರಗ್ಸ್ ಸಪ್ಲೈ ಮಾಡ್ತಿದ್ದ ನೈಜೀರಿಯನ್ ಪ್ರಜೆ ಅರೆಸ್ಟ್!

    ಬೆಂಗ್ಳೂರಿನ ಬಾಡಿಗೆ ಮನೆಯಲ್ಲಿದ್ದುಕೊಂಡೇ ಡ್ರಗ್ಸ್ ಸಪ್ಲೈ ಮಾಡ್ತಿದ್ದ ನೈಜೀರಿಯನ್ ಪ್ರಜೆ ಅರೆಸ್ಟ್!

    ಬೆಂಗಳೂರು: ನಗರದಲ್ಲಿ ಬಾಡಿಗೆ ಮನೆಯಲ್ಲಿದ್ದುಕೊಂಡೇ (Rented House) ಅಕ್ರಮವಾಗಿ ಡ್ರಗ್ಸ್ ಸಪ್ಲೈ ಮಾಡ್ತಿದ್ದ ನೈಜೀರಿಯನ್ (Nigerian) ಪ್ರಜೆಯೊಬ್ಬ ಪೊಲೀಸರ ಅತಿಥಿಯಾಗಿದ್ದಾನೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಡ್ರಗ್ಸ್ (Drugs) ಸಪ್ಲೈ ಮಾಡುತ್ತಾ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಈತ ಕೊನೆಗೂ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾನೆ.

    ಮೋಸ್ಟ್ ವಾಂಟೆಡ್ ನೈಜೀರಿಯನ್ ಪ್ರಜೆ ಜಾನ್ ಬಂಧಿತ ಆರೋಪಿ. ಮನೆಯಲ್ಲಿದ್ದ ಸಿಲಿಂಡರ್ ತಳದಲ್ಲೇ ಡ್ರಗ್ಸ್ ಸ್ಟೋರೇಜ್ ಮಾಡಿದ್ದ ಕಿಲಾಡಿ, ಕಚ್ಚಾ ವಸ್ತುವಿನಿಂದ ಕ್ಲಾಸಿ ಡ್ರಗ್ಸ್ ತಯಾರಿಸಿ ಮಾರಾಟ ಮಾಡುತ್ತಿದ್ದ. ಕೊನೆಗೂ ಚಾಲಾಕಿಯನ್ನ ಬಂಧಿಸುವಲ್ಲಿ ವಿವಿ ಪುರಂ ಪೊಲೀಸರು ಯಶಸ್ವಿಯಾಗಿದ್ದಾರೆ. ಭರ್ಜರಿ ಬೇಟೆಯಾಡಿರುವ ಪೊಲೀಸರು 2 ಕೋಟಿ ಮೌಲ್ಯದ 1 ಕೆಜಿ ಎಂಡಿಎಂಎ ಡ್ರಗ್ಸ್ ಜಪ್ತಿ ಮಾಡಿದ್ದಾರೆ.

    ಆರ್.ಟಿ ನಗರ ಠಾಣಾ ವ್ಯಾಪ್ತಿಯಲ್ಲಿ ಬಾಡಿಗೆಮನೆ ಪಡೆದಿದ್ದ ಜಾನ್ ಖುದ್ದು ತಾನೇ ಡ್ರಗ್ಸ್ ತಯಾರಿಸುತ್ತಿದ್ದ. ಶುದ್ಧ ಕಚ್ಛಾವಸ್ತುಗಳನ್ನ ಬಳಸಿ ಎಂಡಿಎಂಎ ಪೌಡರ್ ತಯಾರಿಸಿ ಮಾರಾಟ ಮಾಡ್ತಿದ್ದ. ಅದನ್ನ ಮನೆಯಲ್ಲೇ ಸಿಲಿಂಡರ್ ಕೆಳಗೆ ಸ್ಟೋರೆಜ್ ಮಾಡಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದ ವಿವಿ ಪುರಂ ಪೊಲೀಸರು (VV Puram Police) ಏಕಾಏಕಿ ದಾಳಿ ನಡೆಸಿದ್ದಾರೆ.

    ಪೊಲೀಸರು ದಾಳಿ ಮಾಡುತ್ತಿದ್ದಂತೆ ಆರೋಪಿ ಡ್ರಗ್ಸ್ ಪ್ಯಾಕೆಟ್‌ಗಳನ್ನ ಬಾತ್‌ರೂಮಿನಲ್ಲಿ ಹಾಕಿ ಫ್ಲೆಷ್ ಮಾಡಿ ಎಸ್ಕೇಪ್ ಆಗೋದಕ್ಕೆ ಪ್ರಯತ್ನಿಸಿದ್ದಾನೆ. ಕಿಟಕಿ ಮೂಲಕ ಜಂಪ್ ಮಾಡಿ ಪೈಪ್ ಮೂಲಕ ಮಹಡಿಯಿಂದ ಇಳಿದು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಈ ವೇಳೆ ಚಾಣಾಕ್ಷತೆ ಮೆರೆದ ಪೊಲೀಸರು ಆರೋಪಿಯ ಎಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

    ಬಂಧನದ ಬಳಿಕ ಜಾನ್, ಅಕ್ರಮವಾಗಿ ಬೆಂಗಳೂರಿನಲ್ಲಿ ನೆಲೆಸಿ ಡ್ರಗ್ಸ್ ತಯಾರು ಮಾಡುತ್ತಿರೋದು ಬೆಳಕಿಗೆ ಬಂದಿದೆ. ಎಂಡಿಎಂಎ ತಯಾರು ಮಾಡಿ ಹೋಲ್‌ಸೇಲ್ ದರದಲ್ಲಿ ಮಾರಾಟ ಮಾಡ್ತಿದ್ದ. ಗೋವಾ ಹಾಗೂ ಮಹಾರಾಷ್ಟ್ರೀಯ ಕಡೆಯಿಂದ ಶುದ್ಧ ಕಚ್ಛಾ ವಸ್ತುಗಳನ್ನ ತರಿಸಿಕೊಂಡು ಎಂಡಿಎಂಎ ತಯಾರು ಮಾಡ್ತಿದ್ದ ಅನ್ನೋದು ಗೊತ್ತಾಗಿದೆ. ಇದನ್ನೂ ಓದಿ: ಸೋಶಿಯಲ್ ಮೀಡಿಯಾದಲ್ಲಿ ಹವಾ ಕ್ರಿಯೇಟ್ ಮಾಡಲು ಯುವಕರ ಹುಚ್ಚಾಟ – ಪೊಲೀಸರಿಂದ ತಕ್ಕ ಪಾಠ

    ಈ ಸಂಬಂಧ ಕೇಸ್ ದಾಖಲಿಸಿಕೊಂಡಿರುವ ವಿವಿ ಪುರಂ ಪೊಲೀಸರು ಆರೋಪಿಗೆ ಸೆಲಬ್ರಿಟೀಸ್ ಅಥವಾ ಪಾರ್ಟಿಗಳ ಸಂಪರ್ಕ ಇದೆಯಾ ಎಂಬುದರ ಬಗ್ಗೆ ತನಿಖೆ ತನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ: ಬ್ಯಾನರ್‌ ಕಟ್ಟುತ್ತಿದ್ದಾಗ ವಿದ್ಯುತ್‌ ಶಾಕ್‌ – ನಟ ಸೂರ್ಯನ ಅಭಿಮಾನಿಗಳು ಸಾವು!

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 2 ತಿಂಗಳ ಹಿಂದೆಯಷ್ಟೇ ಮದ್ವೆಯಾಗಿದ್ದ ಗೃಹಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ

    2 ತಿಂಗಳ ಹಿಂದೆಯಷ್ಟೇ ಮದ್ವೆಯಾಗಿದ್ದ ಗೃಹಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ

    ಹಾಸನ: ಎರಡು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ (Marriage) ಗೃಹಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ (Hassan) ಜಿಲ್ಲೆಯ ಸಕಲೇಶಪುರ ತಾಲೂಕಿನ ಬಂದಿಹಳ್ಳಿ ಗ್ರಾಮದಲ್ಲಿ ನಡೆದಿದೆ.

    ನಂದಿತಾ (23) ಮೃತಪಟ್ಟ ಗೃಹಿಣಿ. ತಾಲ್ಲೂಕಿನ ಬೆಳಗೋಡು ಹೋಬಳಿಯ ಕೂಡನಹಳ್ಳಿ ಗ್ರಾಮದ ಸೋಮಶೇಖರ್ ಜೊತೆ ಎರಡು ತಿಂಗಳ ಹಿಂದೆಯಷ್ಟೇ ನಂದಿತಾಳನ್ನ ಅದ್ಧೂರಿಯಾಗಿ ಮದುವೆ ಮಾಡಿಕೊಡಲಾಗಿತ್ತು. ಆದ್ರೆ ನಂದಿತಾ ಶನಿವಾರ ತನ್ನ ತವರು ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇದನ್ನೂ ಓದಿ: ನಿಮ್ಮ ಧ್ವನಿ, ನೋಟ ನನಗಿಷ್ಟ: ಟೈಗರ್ ಶ್ರಾಫ್ ಎಂಬ ಮನ್ಮಥನಿಗೆ ಹೂಬಾಣ ಬಿಟ್ಟ ದಿಶಾ

    ಸುದ್ದಿ ತಿಳಿದ ಕೂಡಲೇ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಮೃತ ದೇಹವನ್ನ ಪಟ್ಟಣದ ಸರ್ಕಾರಿ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಇದನ್ನೂ ಓದಿ: ಪಿಎಸ್‍ಐ ಹಗರಣ ನ್ಯಾಯಾಂಗ ತನಿಖೆ ಕಾಂಗ್ರೆಸ್‍ನ ದ್ವೇಷದ ರಾಜಕಾರಣ: ಬೊಮ್ಮಾಯಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೋಳಿ ರಕ್ತ ಗುಪ್ತಾಂಗಕ್ಕೆ ಹಚ್ಚಿಕೊಂಡು ಉದ್ಯಮಿ ವಿರುದ್ಧ ಸುಳ್ಳು ರೇಪ್‌ ಕೇಸ್‌ – ಕಿಲಾಡಿ ಲೇಡಿ ಗ್ಯಾಂಗ್‌ ಅರೆಸ್ಟ್‌

    ಕೋಳಿ ರಕ್ತ ಗುಪ್ತಾಂಗಕ್ಕೆ ಹಚ್ಚಿಕೊಂಡು ಉದ್ಯಮಿ ವಿರುದ್ಧ ಸುಳ್ಳು ರೇಪ್‌ ಕೇಸ್‌ – ಕಿಲಾಡಿ ಲೇಡಿ ಗ್ಯಾಂಗ್‌ ಅರೆಸ್ಟ್‌

    ಮುಂಬೈ: ಮಹಿಳೆಯೊಬ್ಬಳು (Women) ಕೋಳಿ ರಕ್ತ (Chicken Blood) ಬಳಸಿಕೊಂಡು 64 ವರ್ಷದ ಉದ್ಯಮಿ ವಿರುದ್ಧ ಸುಳ್ಳು ರೇಪ್‌ ಕೇಸ್‌ ದಾಖಲಿಸಿ ಈಗ ಪೊಲೀಸರಿಗೆ ತಗಲಾಕ್ಕೊಂಡಿರುವ ಘಟನೆ ಮುಂಬೈನಲ್ಲಿ (Mumbai) ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    2021ರ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು (Mumbai Police) ಸ್ಥಳೀಯ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದಾಗ ಕೇಸ್‌ ಬೆಳಕಿಗೆ ಬಂದಿದೆ. ವಿವಿಧ ಖಾಸಗಿ ಹುದ್ದೆಗಳಲ್ಲಿರುವ ಮೋನಿಕಾ ಭಗವಾನ್‌ ಅಲಿಯಾಸ್‌ ದೇವ್‌ ಚೌಧರಿ, ಅನಿಲ್‌ ಚೌಧರಿ ಅಲಿಯಾಸ್‌ ಆಕಾಶ್‌, ಲುಬ್ನಾ ವಜೀರ್‌ ಅಲಿಯಾಸ್‌ ಸಪ್ನಾ ಆರೋಪಿಗಳಾಗಿದ್ದಾರೆ.

    2019ರಲ್ಲಿ ಮೋನಿಕಾ ಮತ್ತು ಆಕೆಯ ಸಹಚರರು ಖಾಸಗಿ ವೀಡಿಯೋ ರೆಕಾರ್ಡ್‌ ಮಾಡಿದ್ದು, 64ರ ಉದ್ಯಮಿ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕುತ್ತಿದ್ದರು. ವೃದ್ಧನ ಬಳಿ ಎರಡು ವರ್ಷಗಳ ಅವಧಿಯಲ್ಲಿ 3.26 ಕೋಟಿ ಹಣ ವಸೂಲಿ ಮಾಡಿದರು. ಇದರಿಂದ ಬೇಸತ್ತಿದ್ದ ಉದ್ಯಮಿ 2021ರಲ್ಲಿ ಮಹಾರಾಷ್ಟ್ರದ ಸಹಾರ್‌ ಪೊಲೀಸ್‌ ಠಾಣೆಯಲ್ಲಿ ಮೋನಿಕಾ ಮತ್ತು ಆಕೆಯ ಸಹಚರರು ವಸೂಲಿ ಮಾಡಿರುವುದಾಗಿ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಅಪ್ಪು, ಶಿವಣ್ಣನ ಹೆಸರಲ್ಲೂ ವಂಚನೆ – ಬಗೆದಷ್ಟೂ ಬಯಲಾಗ್ತಿದೆ ಮಾಡೆಲ್ ನಿಶಾಳ ಕರಾಳ ಮುಖ!

    ಮುಂಬೈ ಗ್ಯಾಂಗ್‌ ಸ್ಕೆಚ್‌ ಹಾಕಿದ್ದೇ ರೋಚಕ?
    ಮೋನಿಕಾ ಮತ್ತವರ ಸಹಚರರ ಗ್ಯಾಂಗ್‌ ಸ್ಕೆಚ್‌ ಹಾಕಿದ್ದನ್ನು ಕಂಡು ಪೊಲೀಸರೇ ದಂಗಾಗಿದ್ದಾರೆ. ಹೌದು. 2019ರಲ್ಲಿ ಹೆಸರು ಬಹಿರಂಗಪಡಿಸದ ಉದ್ಯಮಿ ಮುಂಬೈನ ಏರ್‌ಪೋರ್ಟ್‌ನ ಪಂಚತಾರಾ ಹೋಟೆಲ್‌ನಲ್ಲಿ ತಂಗಿದ್ದರು. ಈ ವೇಳೆ ಸಪ್ನಾ ಮತ್ತು ಮೋನಿಕಾ ಪರಿಚಯವಾಗಿದ್ದಾರೆ. ನಂತರ ಅವರೊಂದಿಗೆ ರಾತ್ರಿ ಔತಣ ಕೂಟಕ್ಕೆ ಸೇರಬಹುದೇ ಅಂತಾ ಕೇಳಿದ್ದಾರೆ. ಉದ್ಯಮಿ ಒಪ್ಪಿಕೊಂಡ ನಂತರ ರಾತ್ರಿ ಅವರ ಕೊಠಡಿಯಲ್ಲೇ ಊಟಕ್ಕೆ ಸೇರಿದ್ದಾರೆ. ಇದನ್ನೂ ಓದಿ: ಬೇಗ ಬಂದುಬಿಡು ಸೀಮಾ, ಹೊಸ ಜೀವನ ಶುರು ಮಾಡೋಣ – ಸೌದಿಯಲ್ಲಿ ಮೊದಲ ಪತಿಯ ಗೋಳಾಟ

    ಊಟ ಮುಗಿದ ಸ್ವಲ್ಪ ಸಮಯದ ಬಳಿಕ ಸಪ್ನಾ ಕೆಲ ದಾಖಲೆಗಳನ್ನ ಹೋಟೆಲ್‌ ಲಾಭಿಯಲ್ಲಿ ಯಾರಿಗಾದ್ರೂ ಕೊಟ್ಟು ಬರುತ್ತೇನೆ ಅಂತಾ ರೂಮ್‌ ಬಾಗಿಲು ಹಾಕಿಕೊಂಡು ಹೊರಬಂದಿದ್ದಾಳೆ. ಅದೇ ಸಮಯಕ್ಕೆ ಮೋನಿಕಾ ವಾಶ್‌ರೂಮ್‌ ಒಳಗೆ ಹೋಗಿದ್ದಾಳೆ. ಸ್ವಲ್ಪ ಸಮಯದ ನಂತರ ಡೋರ್‌ ಬೆಲ್‌ ಸದ್ದು ಕೇಳಿ ಉದ್ಯಮಿ ಬಾಗಿಲು ತೆರೆಯಲು ಬಂದಿದ್ದಾನೆ. ಅದೇ ಸಮಯಕ್ಕೆ ಒಳಗಿದ್ದ ಮೋನಿಕಾ ಕಿಟಾರನೆ ಕಿರುಚಿಕೊಳ್ಳಲು ಶುರು ಮಾಡುತ್ತಿದ್ದಂತೆ, ಹೊರಗಿನಿಂದ ಬಂದ ಸಪ್ನಾ ವಿಡಿಯೋ ರೆಕಾರ್ಡ್‌ ಮಾಡಲು ಶುರು ಮಾಡಿದ್ದಾಳೆ. ವಾಶ್‌ ರೂಮ್‌ಗೆ ಹೋಗಿದ್ದ ಮೋನಿಕಾ ಕ್ಷಣ ಮಾತ್ರದಲ್ಲೇ ವಿವಸ್ತ್ರಳಾಗಿ ಬೆಡ್‌ಶೀಟ್‌ನಿಂದ ತನ ಮೈ ಮುಚ್ಚಿಕೊಂಡು ಕುಳಿತಿದ್ದದ್ದು ಕಂಡುಬಂದಿದೆ. ಅಲ್ಲದೇ ಬೆಡ್‌ಶೀಟ್‌ ಮೇಲೆ, ಆಕೆಯ ಗುಪ್ತಾಂಗ ಇತರ ಭಾಗಗಳಿಗೆ ರಕ್ತದ ಕಲೆಗಳಾಗಿರುವುದು ಕಂಡುಬಂದಿದೆ. ಇದನ್ನು ಕಂಡ ವೃದ್ಧ ಅಲ್ಲೇ ಶಾಕ್‌ ಆಗಿದ್ದಾನೆ.

    ಅದೇ ಸಮಯಕ್ಕೆ ಮತ್ತೊಬ್ಬ ಆರೋಪಿ ಅನಿಲ್‌ ಸಹ ಅಲ್ಲಿಗೆ ಬಂದಿದ್ದಾನೆ. 10 ಕೋಟಿ ಹಣ ಕೊಡದಿದ್ದರೆ ಈ ವೀಡಿಯೋವನ್ನ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಕೊನೆಗೆ ಉದ್ಯಮಿ 75 ಲಕ್ಷ ಕೊಡಲು ಒಪ್ಪಿದ್ದಾನೆ. ಆತನಿಂದ ಆಗಾಗ್ಗೆ ಬೆದರಿಕೆ ಹಾಕಿ 2 ವರ್ಷಗಳಲ್ಲಿ 3.26 ಕೋಟಿ ವಸೂಲಿ ಮಾಡಿದ್ದಾರೆ. 1 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕೂಡ ವಸೂಲಿ ಮಾಡಿದ್ದರು. ಇದರಿಂದ ಬೇಸತ್ತ ಉದ್ಯಮಿ 2021ರ ನವೆಂಬರ್‌ 17ರಂದು ಸಹರ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ಕೇಸ್‌ ದಾಖಲಿಸಿಕೊಂಡ ಪೊಲೀಸರು ಮತ್ತೊಮ್ಮೆ ಹಣ ಸುಲಿಗೆ ಮಾಡುವ ಸಮಯಕ್ಕೆ ದಾಳಿ ಮಾಡಿ ಬಂಧಿಸಿದ್ದಾರೆ.

    ತನಿಖೆ ವೇಳೆ ಮೋನಿಕಾ ಕೋಳಿ ರಕ್ತವನ್ನ ತಾನೇ ಗುಪ್ತಾಂಗಕ್ಕೆ ಹಚ್ಚಿಕೊಂಡಿದ್ದಾಳೆ, ಜೊತೆಗೆ ಬೆಡ್‌ಶೀಟ್‌ ಮೇಲೂ ಸುರಿದು ಬ್ಲ್ಯಾಕ್‌ ಮೇಲ್‌ ಮಾಡಿ ಹಣ ವಸೂಲಿ ಮಾಡಿರುವುದು ಸಾಬೀತಾಗಿದೆ. ಆರೋಪಿಗಳಿಂದ 49.35 ಲಕ್ಷ ರೂ. ವಶಕ್ಕೆ ಪಡೆದುಕೊಂಡಿದ್ದು, ಜೈಲಿಗಟ್ಟಲಾಗಿದೆ. ತನಿಖೆ ಮುಂದುವರಿದಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 12 ಮದುವೆ, 6 ಮಕ್ಕಳು – ವಿಧವೆಯರು, ಡಿವೋರ್ಸ್‌ ಪಡೆದ ಮಹಿಳೆಯರನ್ನೇ ಟಾರ್ಗೆಟ್‌ ಮಾಡ್ತಿದ್ದ ವಂಚಕ

    12 ಮದುವೆ, 6 ಮಕ್ಕಳು – ವಿಧವೆಯರು, ಡಿವೋರ್ಸ್‌ ಪಡೆದ ಮಹಿಳೆಯರನ್ನೇ ಟಾರ್ಗೆಟ್‌ ಮಾಡ್ತಿದ್ದ ವಂಚಕ

    – ಹೆಣ್ಣು ನೋಡೋಕೆ ಬಾಡಿಗೆಗೆ ತಂದೆ, ತಾಯಿ, ಅಕ್ಕ, ಅಣ್ಣರನ್ನು ಬುಕ್ ಮಾಡ್ತಿದ್ದ ಖತರ್‌ನಾಕ್

    ಮೈಸೂರು: ವಿಧವೆಯರು, ಡಿವೋರ್ಸ್‌ ಪಡೆದ ಮಹಿಳೆಯರನ್ನೇ ಟಾರ್ಗೆಟ್ ಮಾಡಿಕೊಂಡು ಬರೋಬರಿ 12 ಮದುವೆಯಾಗಿ 13 ನೇ ಮದುವೆಗೆ ಸಿದ್ಧವಾಗಿದ್ದ ವೇಳೆ ಪೊಲೀಸರಿಗೆ ಸಿಕ್ಕಿಬಿದ್ದ ಖತರ್‌ನಾಕ್ ವಂಚಕನ ಇನ್ನಷ್ಟು ವಿಷಯಗಳು ಈಗ ಬಯಲಾಗುತ್ತಿವೆ.

    ಬೆಂಗಳೂರು ಮೂಲದ 35 ವರ್ಷದ ಮಹೇಶ್ ಎಂಬ ಈ ಖತರ್‌ನಾಕ್ ವಂಚಕನನ್ನು ಮೈಸೂರು ಪೊಲೀಸರು ಮಂಗಳವಾರ ಬಂಧಿಸಿದ್ದರು. ವಿಚಾರಣೆ ವೇಳೆ ಇವನ ಇನ್ನಷ್ಟು ವಿಷಯಗಳು ಬಹಿರಂಗಗೊಂಡಿವೆ. ಮಹೇಶ್ ಓದಿರೋದು ಬರೀ 5 ನೇ ಕ್ಲಾಸ್. ಆದರೆ ಮಹಿಳೆಯರಿಗೆ ವಂಚಿಸುವಾಗ ನಾನು ಡಾಕ್ಟರ್, ಎಂಜಿನಿಯರ್ ಎಂದು ಪೋಸ್ ಕೊಟ್ಟಿದ್ದಾನೆ. ಇದನ್ನೂ ಓದಿ: ಮಕ್ಕಳಿಗೆ ವಿಷವುಣಿಸಿ ತಾನೂ ವಿಷ ಸೇವಿಸಿದ ತಾಯಿ!

    ಶಾದಿ ಡಾಟ್ ಕಾಂ ಮೂಲಕ ಮಹಿಳೆಯರ ಸಂಪರ್ಕ ಪಡೆದು ಅವರನ್ನು ಮದುವೆಯಾಗಿ, ಮಕ್ಕಳು ಮಾಡಿ, ನಗ-ನಾಣ್ಯ ದೋಚಿ ನಾಪತ್ತೆಯಾಗುತ್ತಿದ್ದ. ಆದರೆ ಮಾರ್ಯಾದೆಗೆ ಅಂಜಿ ಇವನ ವಿರುದ್ಧ ಕಂಪ್ಲೇಂಟ್ ಕೊಡಲು ಮಹಿಳೆಯರ ಹಿಂದೇಟು ಹಾಕಿದ್ದಾರೆ.

    ಮಹಿಳೆಯರನ್ನು ಮದ್ವೆಯಾಗುವಾಗ ತಲಾ 5 ಸಾವಿರ ಕೊಟ್ಟು ಬಾಡಿಗೆಗೆ ತಂದೆ-ತಾಯಿ, ಬಂಧು ಬಳಗವನ್ನು ಕರೆದುಕೊಂಡು ಹೋಗುತ್ತಿದ್ದ. ಒಂದೊಂದು ಮದುವೆಗೆ ಒಂದೊಂದು ಬಳಗ ಫಿಕ್ಸ್ ಮಾಡುತ್ತಿದ್ದ. ಒಟ್ಟು 12 ಮದುವೆ ಆಗಿದ್ದಾನೆ. ಈ ಪೈಕಿ 6 ಮಹಿಳೆಯರಿಗೆ ಮಕ್ಕಳನ್ನು ನೀಡಿದ್ದಾನೆ. ಇದನ್ನೂ ಓದಿ: ಆಟೋ ಚಾಲಕರ ನಿರ್ಲಕ್ಷ್ಯ ಆರೋಪ- ಬೇಡಿಕೆಗಳ ಈಡೇರಿಕೆಗೆ ಬಂದ್ ಎಚ್ಚರಿಕೆ ಕೊಟ್ಟ ಒಕ್ಕೂಟ

    ಸುಲಭವಾಗಿ ಹಣ ಗಳಿಸಬಹುದು ಎನ್ನುವ ಕಾರಣಕ್ಕೆ ಮದುವೆಯನ್ನು ಛಾಳಿ ಮಾಡಿಕೊಂಡ ಇವನು ವರ್ಷಕ್ಕೆ ಸರಾಸರಿ 20 ಲಕ್ಷ ರೂ. ಹಣ ಸಂಪಾದಿಸಿದ್ದ. ಹೀಗೆ ಸಂಪಾದಿಸಿದ ಹಣದಲ್ಲಿ ಶೋಕಿ ಮಾಡುತ್ತಿದ್ದ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]