Tag: crime

  • ಮದುವೆಗೆ ಹುಡುಗಿ ಹುಡುಕದ ತಾಯಿಯನ್ನು ಬಡಿದು ಕೊಂದ ಮಗ!

    ಮದುವೆಗೆ ಹುಡುಗಿ ಹುಡುಕದ ತಾಯಿಯನ್ನು ಬಡಿದು ಕೊಂದ ಮಗ!

    ಹೈದರಾಬಾದ್: ಮದುವೆಯಾಗಲು ಸೂಕ್ತ ಹೆಣ್ಣನ್ನು ಹುಡುಕಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ತಾಯಿಯನ್ನೇ ಕೊಲೆಗೈದ ಘಟನೆ ತೆಲಂಗಾಣದ (Telangana) ಸಿದ್ದಿಪೇಟೆಯಲ್ಲಿ ನಡೆದಿದೆ.

    ಕೊಲೆಗೆ ಸಂಬಂಧಿಸಿದಂತೆ ಮಹಿಳೆಯ ಮಗ ಹಾಗೂ ಇನ್ನೊಬ್ಬ ಸಂಬಂಧಿಯನ್ನು ಪೊಲೀಸರು (Police) ಬಂಧಿಸಿದ್ದಾರೆ. ಕೊಲೆಯ ಬಳಿಕ ಪೊಲೀಸರಿಗೆ ಅನುಮಾನ ಬರದಂತೆ ದರೋಡೆಗೆ ಯತ್ನಿಸಿ ಕೊಲೆಯಾದಂತೆ ಬಿಂಬಿಸಲು ಪ್ರಯತ್ನಿಸಿದ್ದಾರೆ. ಅಲ್ಲದೇ ಗುರುತು ಸಿಗದಂತೆ ಮಹಿಳೆಯ ಕತ್ತು ಸೀಳಿ ಕೈಕಾಲುಗಳನ್ನು ಕತ್ತರಿಸಿದ್ದಾರೆ. ಆದರೆ ಆರೋಪಿಯ ಸಹೋದರಿ ಈ ಬಗ್ಗೆ ಮಾಹಿತಿ ನೀಡಿದ್ದು ಬಂಧನಕ್ಕೆ ಸಹಕಾರಿಯಾಗಿದೆ. ಇದನ್ನೂ ಓದಿ: `ಆಲಮಟ್ಟಿ’ ಭರ್ತಿಯಾದ್ರೂ ಬಾಗಿನ ಅರ್ಪಿಸದ ಸಿಎಂ – ಮೈಸೂರಿಗೊಂದು, ಉತ್ತರ ಕರ್ನಾಟಕ ಭಾಗಕ್ಕೊಂದು ನೀತಿ ಎಂದು ಜನಾಕ್ರೋಶ

    ಮಹಿಳೆ ನೀಡಿದ ದೂರಿನಲ್ಲಿ ಆರೋಪಿಗಳು ಇಟ್ಟಿಗೆಯಿಂದ ಹಲ್ಲೆ ನಡೆಸಿ ತಾಯಿಯನ್ನು ಕೊಲೆಗೈದಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಈ ಬಗ್ಗೆ ತನಿಖೆಯ ಸಂದರ್ಭದಲ್ಲಿ ಆರೋಪಿಗಳು ಕೃತ್ಯವನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಸಂಬಂಧ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದ್ದು, ಈ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ. ಅಲ್ಲದೇ ಆರೋಪಿಗಳು ಈ ಹಿಂದೆ ಯಾವುದಾದರೂ ಕೃತ್ಯಗಳಲ್ಲಿ ಭಾಗಿಯಾಗಿರುವುದರ ಬಗ್ಗೆ ಸಹ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಚುನಾವಣಾ ಅಕ್ರಮ ಆರೋಪ – ಡೊನಾಲ್ಡ್ ಟ್ರಂಪ್ ಅರೆಸ್ಟ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಿಜೆಪಿ ಮುಖಂಡನಿಂದ ಶಿಷ್ಯನಿಗೆ ಚಾಕು ಇರಿತ – ಮಾಜಿ ಕಾರ್ಪೋರೇಟರ್ ವಿರುದ್ಧ ಎಫ್‍ಐಆರ್

    ಬಿಜೆಪಿ ಮುಖಂಡನಿಂದ ಶಿಷ್ಯನಿಗೆ ಚಾಕು ಇರಿತ – ಮಾಜಿ ಕಾರ್ಪೋರೇಟರ್ ವಿರುದ್ಧ ಎಫ್‍ಐಆರ್

    ಬೆಂಗಳೂರು: ತಾನೇ ಬೆಳಸಿದ್ದ ಶಿಷ್ಯನ ಮೇಲೆ ರಾಜಕೀಯ ನಾಯಕನೊಬ್ಬ ಹಗೆತನ ಸಾಧಿಸಿ ಚಾಕು ಇರಿದ ಘಟನೆ ನಗರದಲ್ಲಿ ನಡೆದಿದೆ.

    ಮಾತುಕತೆಗೆ ಎಂದು ಕರೆದು ಚಾಕು ಇರಿದು ಮಾಜಿ ಕಾರ್ಪೋರೇಟರ್ ತಲೆ ಮರೆಸಿಕೊಂಡಿದ್ದಾನೆ. ಬಿಜೆಪಿಯ (BJP) ಮುಖಂಡ ಬಿನ್ನಿಪೇಟೆ ವಾರ್ಡ್‍ನ ಮಾಜಿ ಕಾರ್ಪೋರೇಟರ್ ಬಿಟಿಎಸ್ ನಾಗರಾಜ್ ಎಂಬಾತ ಬಾಬು ಎಂಬುವವರಿಗೆ ಚಾಕು ಇರಿದಿದ್ದಾನೆ. ರಾಜಾಜಿನಗರ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಫ್ರೆಂಡ್ಸ್ ಕ್ಲಬ್ ಬಳಿ ಬಾಬು ಅವರನ್ನು ಕರೆಸಿಕೊಂಡು ಕೃತ್ಯ ಎಸಗಲಾಗಿದೆ. ಬಟನ್ ಚಾಕುವಿನಿಂದ ಹೊಟ್ಟೆಗೆ ಇರಿಯಲಾಗಿದ್ದು ಬಾಬು ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ಟೆಂಟ್ ನಡೆಸ್ತಿದ್ದವರು ಇಂದು 1,450 ಕೋಟಿ ಒಡೆಯರು, ಅನಧಿಕೃತ ಎಷ್ಟಿದೆಯೋ? – ಡಿಕೆ ಬ್ರದರ್ಸ್ ವಿರುದ್ಧ ಹೆಚ್‌ಡಿಕೆ ಕಿಡಿ

    ಬಾಬು ಎಂಬುವವರು ಬಿಟಿಎಸ್ ನಾಗರಾಜುವಿನ ಶಿಷ್ಯರಾಗಿದ್ದರು. ನಾಗರಾಜ್‌ನ ಎಲ್ಲಾ ಕೆಲಸಗಳನ್ನ ಬಾಬು ಅವರೇ ನೋಡಿಕೊಳ್ಳುತ್ತಿದ್ದರು. ಯಾವ ಕಾರಣದಿಂದ ಚಾಕು ಇರಿದಿದ್ದಾರೆ ಎಂಬುದು ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    ಪ್ರಕರಣ ಸಂಬಂಧ ಬಿಜೆಪಿ ಮುಖಂಡ ನಾಗರಾಜ್ ಮೇಲೆ ಮಾಗಡಿ ರೋಡ್ ಪೊಲೀಸ್ (Police) ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಆರೋಪಿಯ ಬಂಧನಕ್ಕೆ ಎರಡು ತಂಡಗಳನ್ನು ರಚಿಸಲಾಗಿದ್ದು, ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಭೀಕರ ಅಪಘಾತ – ವಾಣಿಜ್ಯ ತೆರಿಗೆಯ ಇಲಾಖೆಯ ಚಾಲಕ ಸಾವು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಿವಾಹೇತರ ಸಂಬಂಧ ಆರೋಪ – ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿದ ಗ್ರಾಮಸ್ಥರು

    ವಿವಾಹೇತರ ಸಂಬಂಧ ಆರೋಪ – ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿದ ಗ್ರಾಮಸ್ಥರು

    ದಿಸ್ಪುರ್: ವಿವಾಹೇತರ ಸಂಬಂಧದ ಆರೋಪದ ಮೇಲೆ ಓರ್ವ ಪುರುಷ ಹಾಗೂ ಯುವತಿಯನ್ನು ಗ್ರಾಮಸ್ಥರು ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿರುವ ಘಟನೆ ತ್ರಿಪುರಾದಲ್ಲಿ (Tripura) ನಡೆದಿದೆ. ಹಲ್ಲೆಯ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ವಿವಾಹಿತ ವ್ಯಕ್ತಿ ಅದೇ ಗ್ರಾಮದ 20 ವರ್ಷದ ಯುವತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎಂದು ಆರೋಪಿಸಲಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಗ್ರಾಮದ ಮುಖಂಡರು ಸೇರಿ ಇಬ್ಬರನ್ನು ವಿಚಾರಣೆ ನಡೆಸಿದ್ದಾರೆ. ಬಳಿಕ ಇದ್ದಕ್ಕಿದ್ದಂತೆ ಗಲಾಟೆ ಶುರು ಮಾಡಿ ಇಬ್ಬರನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿದ್ದಾರೆ. ಬಳಿಕ ಇಬ್ಬರ ಮೇಲೂ ಹಲ್ಲೆ ನಡೆಸಿದ್ದಾರೆ. ಇದನ್ನೂ ಓದಿ: ಜಮೀನಿನಲ್ಲಿ ಧರೆಗುರುಳಿದ ಚಾಲಕ ರಹಿತ ತಪಸ್ ವಿಮಾನ

    ಥಳಿತಕ್ಕೊಳಗಾದ ವ್ಯಕ್ತಿಗೆ ಈಗಾಗಲೇ ಮದುವೆಯಾಗಿದ್ದು ಇಬ್ಬರು ಮಕ್ಕಳಿದ್ದಾರೆ. ಯುವತಿ ಆಕೆಯ ಸೋದರ ಸಂಬಂಧಿ ಹಾಗೂ ಅತ್ತಿಗೆಯೊಂದಿಗೆ ವಾಸಿಸುತ್ತಿದ್ದಳು ಎಂದು ತಿಳಿದು ಬಂದಿದೆ. ವೈರಲ್ ಆಗಿರುವ ವೀಡಿಯೋದಲ್ಲಿ ಮಹಿಳೆಯೊಬ್ಬಳು ಯುವತಿಯ ಕೂದಲನ್ನು ಎಳೆದು ಹೊಡೆಯುತ್ತಿರುವುದು ಸೆರೆಯಾಗಿದೆ. ಅಲ್ಲದೇ ವ್ಯಕ್ತಿಯ ಮೇಲೂ ದಾಳಿ ಮಾಡಿದ್ದಾರೆ. ಹಲವಾರು ಜನ ಈ ಘಟನೆಯನ್ನು ನೋಡುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ.

    ಬಳಿಕ ಪೊಲೀಸರು (Police) ಮಧ್ಯ ಪ್ರವೇಶಿಸಿ ಇಬ್ಬರನ್ನು ಗ್ರಾಮಸ್ಥರಿಂದ ಬಿಡಿಸಿದ್ದಾರೆ. ಬಳಿಕ ಪ್ರಕರಣ ದಾಖಲಿಸಿಕೊಂಡು ಯುವತಿಯ ಸೋದರ ಸಂಬಂಧಿಯನ್ನು ಬಂಧಿಸಿದ್ದಾರೆ. ಅಲ್ಲದೇ ಆಕೆಯ ಅತ್ತಿಗೆ ಸಹ ಆರೋಪಿಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮಗಳಿಗೆ ನಿತ್ಯ ಕಿರುಕುಳ ಕೊಡುತ್ತಿದ್ದ ಅಳಿಯನನ್ನು ಪ್ರಶ್ನಿಸಿದ ಮಾವನೇ ಮಟಾಶ್!

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅನುಮಾನಾಸ್ಪದ ರೀತಿಯಲ್ಲಿ ಯುವತಿ ಸಾವು – ತಂದೆಯಿಂದಲೇ ಮರ್ಯಾದಾ ಹತ್ಯೆಯ ಆರೋಪ

    ಅನುಮಾನಾಸ್ಪದ ರೀತಿಯಲ್ಲಿ ಯುವತಿ ಸಾವು – ತಂದೆಯಿಂದಲೇ ಮರ್ಯಾದಾ ಹತ್ಯೆಯ ಆರೋಪ

    ಚಿಕ್ಕಬಳ್ಳಾಪುರ: ಆಗಸ್ಟ್ 14 ರಂದು 22 ವರ್ಷದ ಪದವಿ ವಿದ್ಯಾರ್ಥಿನಿ ಮನೆಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು ತಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಂದೆ ದೂರು ನೀಡಿದ್ದಾನೆ. ಆದರೆ ಸಂಬಂಧಿಕರು, ಇಲ್ಲ ಇದು ಕೊಲೆ. ನಮ್ಮ ಮನೆ ಮಗಳಿಗೆ ನ್ಯಾಯ ನೀಡಿ, ಆತ್ಮಕ್ಕೆ ಶಾಂತಿ ಕೊಡಿಸಿ ಎಂದು ಈಗ ಪೊಲೀಸರ ಮೊರೆ ಹೋಗಿದ್ದಾರೆ.

    ಮಗಳನ್ನೇ ತಂದೆ ಕೊಲೆ ಮಾಡಿರುವ ಆರೋಪ ಕೇಳಿ ಬಂದಿರೋದು ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಮಂಚೇನಹಳ್ಳಿ ಬಳಿಯ ವರವಣಿ ಗ್ರಾಮದಲ್ಲಿ. ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಯುವತಿ ಶೀಲಾ (22) ವರವಣಿ ಗ್ರಾಮದ ನಿವಾಸಿ. ಗ್ರಾಮದ ರವಿಶಂಕರ್ ಹಾಗೂ ಜಯಂತಮ್ಮ ದಂಪತಿಯ ಒಬ್ಬಳೇ ಮಗಳು. ಆದರೆ ಶೀಲಾ ಕಳೆದ ಆಗಸ್ಟ್ 14 ರಂದು ಮನೆಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಮೃತಳ ತಂದೆ ರವಿಶಂಕರ್, ತನ್ನ ಮಗಳು ಹುಷಾರಿಲ್ಲದ ಕಾರಣ ಕಾಲೇಜಿಗೆ ಹೋಗದೆ ಮನೆಯಲ್ಲಿಯೇ ಇದ್ದು ಅನಾರೋಗ್ಯದ ಹಿನ್ನೆಲೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ದೂರು ನೀಡಿದ್ದಾನೆ.

    ಈ ಸಂಬಂಧ ಐಪಿಸಿ ಸೆಕ್ಷನ್ 174 ಸಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡಿರುವ ಮಂಚೇನಹಳ್ಳಿ ಪೊಲೀಸರು ತನಿಖೆ ನಡೆಸಿದ್ದಾರೆ. ಆದರೆ ಈ ಮಧ್ಯೆ ಶೀಲಾ ಸಾವಿನ ಬಗ್ಗೆ ಸಂಬಂಧಿಕರಿಗೆ ಸಾಕಷ್ಟು ಅನುಮಾನಗಳು ಮೂಡಿವೆ. ಹೀಗಾಗಿ ಮೃತ ಶೀಲಾಳ ತಾಯಿ ಜಯಂತಮ್ಮನವರ ಸಹೋದರಿಯರು ಶೀಲಾ ಆತ್ಮಹತ್ಯೆ ಮಾಡಿಕೊಂಡಿಲ್ಲ, ಬದಲಾಗಿ ಆಕೆಯನ್ನು ತಂದೆಯೇ ಹಲ್ಲೆ ಮಾಡಿ ಕೊಲೆ ಮಾಡಿ ನೇಣು ಹಾಕಿದ್ದಾನೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

    ಮೃತ ಶೀಲಾ ತಾಯಿ ಜಯಂತಮ್ಮಳ ಸಹೋದರಿಯರು ಹೇಳೋ ಹಾಗೆ ಶೀಲಾಳ ತಂದೆ ರವಿಶಂಕರ್ ತಾಯಿ ಹಾಗೂ ಮಗಳಿಗೆ ವಿನಾಕಾರಣ ಕಿರುಕುಳ ಕೊಟ್ಟು ದೂರ ಮಾಡುತ್ತಿದ್ದರು. ಇನ್ನೂ ರವಿಶಂಕರ್ ಬೇರೊಬ್ಬರ ಜೊತೆ ಅನೈತಿಕ ಸಂಬಂಧ ಸಹ ಹೊಂದಿದ್ದು ಇದಕ್ಕೆ ಮಗಳು ಸದಾ ವಿರೋಧ ಮಾಡುತ್ತಿದ್ದಳು. ಇದರಿಂದ ಮಗಳನ್ನು ಕಂಡರೆ ತಂದೆಗೆ ಆಗುತ್ತಿರಲಿಲ್ಲ. ಇದನ್ನೂ ಓದಿ: ಮೈಸೂರಲ್ಲಿ ಚಾಕುವಿನಿಂದ ಇರಿದು ಯುವಕನ ಕೊಲೆ – ನಾಲ್ವರ ವಿರುದ್ಧ ಎಫ್‌ಐಆರ್

    ಇನ್ನೂ ಶೀಲಾ ಯಾರನ್ನೋ ಲವ್ ಮಾಡುತ್ತಿದ್ದಳು ಎನ್ನುವ ಅನುಮಾನದ ಮೇರೆಗೆ ಪದೇ ಪದೆ ಮಗಳಿಗೆ ಹೊಡೆಯೋದು ಬಡಿಯೋದು ಮಾಡಿ ಕಿರುಕುಳ ಸಹ ಕೊಡುತ್ತಿದ್ದ. ಇದೇ ವಿಚಾರದಲ್ಲಿ ಮಗಳು ಕದ್ದು ಮುಚ್ಚಿ ಫೋನ್ ಬಳಸುತ್ತಿದ್ದುದನ್ನು ಕಂಡು ಆಕೆಯ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ. ನಮಗೆ ನ್ಯಾಯ ಕೊಡಿಸಿ ಎಂದು ಮೃತಳ ಸಂಬಂಧಿಕರು ಈಗ ಚಿಕ್ಕಬಳ್ಳಾಪುರ ವಿಭಾಗದ ಡಿವೈಎಸ್‌ಪಿ ಮೊರೆ ಹೋಗಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳ ಕಚೇರಿಗೂ ಪತ್ರ ಬರೆದು ನ್ಯಾಯಕ್ಕಾಗಿ ಅಂಗಲಾಚಿದ್ದಾರೆ.

    ಪ್ರಕರಣ ಸಂಬಂಧ ಈಗಾಗಲೇ ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಾಗಿದ್ದು, ಶೀಲಾಳ ಮರಣೋತ್ತರ ಪರೀಕ್ಷಾ ವರದಿ ಹಾಗೂ ಎಫ್‌ಎಸ್‌ಎಲ್ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ. ಹೀಗಾಗಿ ವರದಿಯ ನಂತರ ಇದು ತಂದೆ ಹೇಳುವ ಹಾಗೆ ಆತ್ಮಹತ್ಯೆಯೋ ಇಲ್ಲ ಕೊಲೆಯೋ ಎಂಬುದು ಬಯಲಾಗಬೇಕಿದೆ. ಇದನ್ನೂ ಓದಿ: ಹಾವೇರಿಯಲ್ಲಿ ಮಕ್ಕಳ ಬಿಸಿಯೂಟಕ್ಕೆ ರೇಷನ್ ವ್ಯತ್ಯಯ – ಸ್ವಂತ ಹಣ ಬಳಸಿ ಶಿಕ್ಷಕರಿಂದ ರೇಷನ್ ಖರೀದಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೈಸೂರಲ್ಲಿ ಚಾಕುವಿನಿಂದ ಇರಿದು ಯುವಕನ ಕೊಲೆ – ನಾಲ್ವರ ವಿರುದ್ಧ ಎಫ್‌ಐಆರ್

    ಮೈಸೂರಲ್ಲಿ ಚಾಕುವಿನಿಂದ ಇರಿದು ಯುವಕನ ಕೊಲೆ – ನಾಲ್ವರ ವಿರುದ್ಧ ಎಫ್‌ಐಆರ್

    ಮೈಸೂರು: ಚಾಕುವಿನಿಂದ ಇರಿದು ಯುವಕನ ಹತ್ಯೆಗೈದಿರುವ ಘಟನೆ ಮೈಸೂರಿನ (Mysuru) ವಿದ್ಯಾನಗರ (Vidyanagar)  ಬಡಾವಣೆಯ 4ನೇ ಕ್ರಾಸ್‌ನಲ್ಲಿ ನಡೆದಿದೆ.

    ಮೈಸೂರಿನ ವಿದ್ಯಾನಗರ ನಿವಾಸಿ ಬಾಲರಾಜ್ (26) ಕೊಲೆಯಾದ ಯುವಕ. ಚಾಕುವಿನಿಂದ ಇರಿದು ಯುವಕನ ಕೊಲೆ ಮಾಡಲಾಗಿದೆ. ನಾಲ್ವರಿಂದ ಕೃತ್ಯ ನಡೆದಿರುವುದಾಗಿ ಆರೋಪಿಸಲಾಗಿದ್ದು, ಕೊಲೆಗೆ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ಇದನ್ನೂ ಓದಿ: ಹಾವೇರಿಯಲ್ಲಿ ಮಕ್ಕಳ ಬಿಸಿಯೂಟಕ್ಕೆ ರೇಷನ್ ವ್ಯತ್ಯಯ – ಸ್ವಂತ ಹಣ ಬಳಸಿ ಶಿಕ್ಷಕರಿಂದ ರೇಷನ್ ಖರೀದಿ

    ಘಟನೆಗೆ ಸಂಬಂಧಿಸಿದಂತೆ ಆರೋಪಿಗಳಾದ ತೇಜಸ್, ಸಂಜಯ್, ಕಿರಣ್ ಹಾಗೂ ಸಾಮ್ರಾಟ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ನಜರ್‌ಬಾದ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಸುಳ್ಳು ಜಾತಿ ಪ್ರಮಾಣಪತ್ರ ಪಡೆದು ಗ್ರಾ.ಪಂ. ಅಧಿಕಾರ ಅನುಭವಿಸಿದ ಮಹಿಳೆಗೆ 7 ವರ್ಷ ಜೈಲು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪತಿಯನ್ನ ಸ್ನಾನ ಮಾಡುವಂತೆ ಬಾತ್‌ರೂಮ್‌ಗೆ ಕಳುಹಿಸಿ, ಸ್ನೇಹಿತನೊಂದಿಗೆ ಪತ್ನಿ ಎಸ್ಕೇಪ್

    ಪತಿಯನ್ನ ಸ್ನಾನ ಮಾಡುವಂತೆ ಬಾತ್‌ರೂಮ್‌ಗೆ ಕಳುಹಿಸಿ, ಸ್ನೇಹಿತನೊಂದಿಗೆ ಪತ್ನಿ ಎಸ್ಕೇಪ್

    ಬೆಂಗಳೂರು: ಎರಡು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ (Marriage) ಪತ್ನಿ ಗಂಡನಿಗೆ ಕೈಕೊಟ್ಟು ಎಸ್ಕೇಪ್ ಆಗಿದ್ದಾಳೆ ಅಂತಾ ಪತಿ ಪೊಲೀಸ್ ಠಾಣೆಗೆ (RR Nagar Police Station) ದೂರು ನೀಡಿದ್ಧಾನೆ.

    ಬೆಂಗಳೂರಿನ (Bengaluru) ರಾಜರಾಜೇಶ್ವರಿನಗರದ ನಿವಾಸಿ ರಮೇಶ್ ಕಳೆದ ಎರಡು ತಿಂಗಳ ಹಿಂದೆ ಮದುವೆಯಾಗಿದ್ದರು. ಸಂಸಾರದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಇದನ್ನೂ ಓದಿ: ಘರ್‌ ವಾಪ್ಸಿ ಅಂತ ಮಾಡುವುದಕ್ಕೆ ಹೋದರೆ ಅರ್ಧ ಬಿಜೆಪಿ, ಅರ್ಧ ಜೆಡಿಎಸ್‌ ಖಾಲಿಯಾಗುತ್ತೆ: ಪ್ರಿಯಾಂಕ್‌ ಖರ್ಗೆ

    ಪತಿ ರಮೇಶ್ ಜೊತೆಗೆ ಚೆನ್ನಾಗಿಯೇ ಇದ್ದ ಪತ್ನಿ, ಇದೇ ಆಗಸ್ಟ್ 12ರಂದು ಬೆಳಗ್ಗೆ ಪತಿ ರಮೇಶ್‌ನನ್ನ ಸ್ನಾನ ಮಾಡುವಂತೆ ಬಾತ್ ರೂಮ್‌ಗೆ ಕಳುಹಿಸಿದ್ದಾಳೆ. ಪತಿ ಒಳಗೆ ಹೋದ ತಕ್ಷಣ ಪತ್ನಿ ಹೊರಗಿನಿಂದ ಬಾತ್‌ರೂಮ್ ಬಾಗಿಲು ಹಾಕಿಕೊಂಡು ಮನೆಯ ಬಾಗಿಲನ್ನೂ ಲಾಕ್ ಮಾಡ್ಕೊಂಡು ಎಸ್ಕೇಪ್ ಆಗಿದ್ದಾಳೆ.

    ನಂತರ ಪತಿ ರಮೇಶ್ ಆರ್.ಆರ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪತ್ನಿ ತನ್ನ ಸ್ನೇಹಿತ ಕಾರ್ತಿಕ್ ಜೊತೆಗೆ ಹೋಗಿದ್ದಾಳೆ ಅಂತಾ ದೂರಿನಲ್ಲಿ ತಿಳಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಾಪತ್ತೆಯಾಗಿರುವ ರಮೇಶ್ ಪತ್ನಿಗಾಗಿ ಹುಡುಕಾಟ ನಡೆಸಿದ್ದಾರೆ. ಇದನ್ನೂ ಓದಿ: 7 ಶಿಶುಗಳನ್ನ ಹತ್ಯೆ ಮಾಡಿದ್ದ ಬ್ರಿಟಿಷ್‌ ನರ್ಸ್‌ – ಭಾರತೀಯ ಮೂಲದ ವೈದ್ಯನಿಂದ ಸಿಕ್ಕಿಬಿದ್ದಳು ಹಂತಕಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆಸ್ತಿಗಾಗಿ ಪತಿಗೆ ಉಪ್ಪಿಟ್ಟಿನಲ್ಲಿ ವಿಷ ಬೆರೆಸಿದ ಪತ್ನಿ!

    ಆಸ್ತಿಗಾಗಿ ಪತಿಗೆ ಉಪ್ಪಿಟ್ಟಿನಲ್ಲಿ ವಿಷ ಬೆರೆಸಿದ ಪತ್ನಿ!

    ಬೆಳಗಾವಿ: ಪತಿಯ ಎರಡು ಎಕರೆ ಜಮೀನನ್ನು ತನ್ನ ಹೆಸರಿಗೆ ಮಾಡಿಕೊಳ್ಳುವ ಉದ್ದೇಶದಿಂದ ಮಹಿಳೆಯೊಬ್ಬಳು ಪತಿಗೆ ಉಪ್ಪಿಟ್ಟಿನಲ್ಲಿ ವಿಷ ಹಾಕಿ ಕೊಲೆಗೆ ಯತ್ನಿಸಿದ ಪ್ರಕರಣವನ್ನು ಸವದತ್ತಿಯ ಗೋರಾಬಾಳದಲ್ಲಿ ನಡೆದಿದೆ.

    ಸಾವಕ್ಕ (32) ಎಂಬಾಕೆ ಪತಿಗೆ ಆ.11ರ ಬೆಳಗ್ಗೆ ಉಪ್ಪಿಟ್ಟು ಮಾಡಿಕೊಟ್ಟಿದ್ದಳು. ಉಪ್ಪಿಟ್ಟು ತಿಂದ ಬಳಿಕ ನಿಂಗಪ್ಪ ಹಮಾನಿ (35) ತೀವ್ರ ಹೊಟ್ಟೆ ನೋವಿನಿಂದ ಬಳಿದ್ದಾನೆ. ಬಳಿಕ ಆತನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳಿಯ ( Hubballi) ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವೇಳೆ ವಿಷ ಆಹಾರ ಸೇವಿಸಿರುವ ವಿಚಾರವನ್ನು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಖಾಸಗಿ ವೀಡಿಯೋ ಬಹಿರಂಗ ಭೀತಿ – ಸ್ನೇಹಿತನನ್ನು ಕೊಲೆಗೈದ ಪಾತಕಿ

    ನಿಂಗಪ್ಪನಿಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ. ಆತನಿಗೆ ನೀಡಿದ್ದ ಉಪ್ಪಿಟ್ಟನ್ನು ತಿಂದ ಒಂದು ನಾಯಿ ಮತ್ತು ಒಂದು ಬೆಕ್ಕು ಸತ್ತುಹೋಗಿವೆ ಎಂದು ಜಿಲ್ಲಾ ಪೊಲೀಸ್ (Police) ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ತಿಳಿಸಿದ್ದಾರೆ.

    ನಿಂಗಪ್ಪ ಅವರ ತಂದೆ ಫಕೀರಪ್ಪ ನೀಡಿದ ದೂರಿನ ಅನ್ವಯ ಸಾವಕ್ಕ ಹಾಗೂ ಆಕೆಯ ಸಹೋದರ ಫಕೀರಪ್ಪ ಲಕ್ಷ್ಮಣ ಸಿಂಧೋಗಿ (30) ಎಂಬಾತನ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇದನ್ನೂ ಓದಿ: ಅಮೇಥಿಯಿಂದ ರಾಹುಲ್, ವಾರಣಾಸಿಯಿಂದ ಪ್ರಿಯಾಂಕಾ ಸ್ಪರ್ಧೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಖಾಸಗಿ ವೀಡಿಯೋ ಬಹಿರಂಗ ಭೀತಿ – ಸ್ನೇಹಿತನನ್ನು ಕೊಲೆಗೈದ ಪಾತಕಿ

    ಖಾಸಗಿ ವೀಡಿಯೋ ಬಹಿರಂಗ ಭೀತಿ – ಸ್ನೇಹಿತನನ್ನು ಕೊಲೆಗೈದ ಪಾತಕಿ

    ಚಿಕ್ಕೋಡಿ: ಖಾಸಗಿ ವೀಡಿಯೋ ವಿಚಾರ ಬಹಿರಂಗವಾಗುವ ಭೀತಿಯಲ್ಲಿ ಸ್ನೇಹಿತನನ್ನು ಚಾಕುವಿನಿಂದ ಇರಿದು ಕೊಲೆಗೈದ ಘಟನೆ ರಾಯಬಾಗದ (Raibagh) ಹಾರೂಗೇರಿ ಪಟ್ಟಣದ ಹೊರವಲಯದ ಬಡಬ್ಯಾಕೂಡ್‍ನಲ್ಲಿ ನಡೆದಿದೆ.

    ಅಕ್ಬರ್ ಜಮಾದಾರ್ (21) ಕೊಲೆಯಾದ ದುರ್ದೈವಿ. ಬಸ್ತವಾಡ ಹೊರವಲಯ ಅರಣ್ಯ ಪ್ರದೇಶದಲ್ಲಿ ಯುವಕನನ್ನು ಕೊಲೆ ಮಾಡಲಾಗಿದೆ. ಬಡಬ್ಯಾಕೂಡ್‍ನ ಮಹಾಂತೇಶ ಪೂಜಾರ್ (23) ಕೊಲೆಗೈದ ಆರೋಪಿಯಾಗಿದ್ದಾನೆ. ಕೊಲೆಯಾದ ಅಕ್ಬರ್ ಹಾಗೂ ಹಂತಕ ಮಹಾಂತೇಶ ಇಬ್ಬರೂ ಸ್ನೇಹಿತರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಆಸ್ಪತ್ರೆಗೆ ತೆರಳುವ ನಾಟಕವಾಡಿ ಸೇನೆಗೆ ಸಿಕ್ಕಿಬಿದ್ದ ಉಗ್ರರು

    ಆರೋಪಿ ಮಹಾಂತೇಶ್ ಯುವತಿಯೊಬ್ಬಳ ಜೊತೆಗಿನ ಖಾಸಗಿ ವೀಡಿಯೋವನ್ನು ತನ್ನದೇ ಮೊಬೈಲ್‍ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದ. ಹಣಕಾಸಿನ ವೈಷಮ್ಯದ ವಿಚಾರಕ್ಕೆ ಆ ಮೊಬೈಲ್‍ನ್ನು ಅಕ್ಬರ್ ಕಸಿದುಕೊಂಡಿದ್ದ. ಆದರೆ ವೀಡಿಯೋ ಎಲ್ಲಿ ಬಹಿರಂಗವಾಗುತ್ತದೆಯೋ ಎಂದು ಮಹಾಂತೇಶ್ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಗ್ರಾಮಸ್ಥರ ಮಾಹಿತಿ ಮೇರೆಗೆ ಆರೋಪಿ ಮಹಾಂತೇಶನನ್ನು ಹಾರೂಗೇರಿ ಪೊಲೀಸರು (Police) ಬಂಧಿಸಿದ್ದಾರೆ.

    ಮೃತ ಅಕ್ಬರ್ ಹಾಗೂ ಹಂತಕ ಮಹಾಂತೇಶ ಇಬ್ಬರೂ ಎಮ್ಮೆ ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದರು. ಈ ಹಿಂದೆ ಇಬ್ಬರ ವಿರುದ್ಧವೂ ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಒಂದು ವರ್ಷದಿಂದ ಇಬ್ಬರ ಮಧ್ಯೆ ಹಣಕಾಸು ವ್ಯವಹಾರದಲ್ಲಿ ಇಬ್ಬರ ನಡುವೆ ವೈಷಮ್ಯ ಮೂಡಿತ್ತು. ಈ ವಿಚಾರವಾಗಿ ಸಮೀಪದ ಅರಣ್ಯಕ್ಕೆ ಕರೆದೊಯ್ದು ಮದ್ಯಪಾನ ಮಾಡಿಸಿ ಹರಿತವಾದ ಆಯುಧರಿಂದ ಇರಿದು ಕೊಲೆ ಮಾಡಿದ್ದಾನೆ ಎಂದು ತನಿಖೆ ವೇಳೆ ತಿಳಿದು ಬಂದಿದೆ. ಪೊಲೀಸರು ಮೊಬೈಲ್ ಜಪ್ತಿ ಮಾಡಿದ್ದು, ಎಫ್‍ಎಸ್‍ಎಲ್‍ಗೆ ಕಳುಹಿಸಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮನೆ ಮುಂದೆಯೇ ಗಾಂಜಾ ಬೆಳೆದು ಪೊಲೀಸರ ಅತಿಥಿಯಾದ ಮಹಿಳೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಲಿವ್ ಇನ್ ಸಂಬಂಧಕ್ಕೆ ಅಡ್ಡಿಯಾಗಿದ್ದ ಪ್ರಿಯಕರನ ಅಪ್ರಾಪ್ತ ಮಗನ ಹತ್ಯೆ – ಖತರ್‌ನಾಕ್‌ ಲೇಡಿ ಅಂದರ್

    ಲಿವ್ ಇನ್ ಸಂಬಂಧಕ್ಕೆ ಅಡ್ಡಿಯಾಗಿದ್ದ ಪ್ರಿಯಕರನ ಅಪ್ರಾಪ್ತ ಮಗನ ಹತ್ಯೆ – ಖತರ್‌ನಾಕ್‌ ಲೇಡಿ ಅಂದರ್

    ನವದೆಹಲಿ: ಪ್ರಿಯಕರನೊಂದಿಗೆ ಸಂಬಂಧಕ್ಕೆ ಅಡ್ಡಿಯಾಗಿದ್ದ ಆತನ ಮಗನನ್ನು ಮಹಿಳೆಯೊಬ್ಬಳು ಹತ್ಯೆ ಮಾಡಿ ಪೊಲೀಸರ (Police) ಅತಿಥಿಯಾಗಿರುವ ಪ್ರಕರಣ ದೆಹಲಿಯಲ್ಲಿ ನಡೆದಿದೆ.

    ಬಂಧಿತ ಆರೋಪಿಯನ್ನು ಪೂಜಾ (24) ಎಂದು ಗುರುತಿಸಲಾಗಿದೆ. ಮಹಿಳೆ ಆ.10 ರಂದು ತನ್ನ ಪ್ರಿಯಕರನ 11 ವರ್ಷದ ಮಗ ಮಲಗಿದ್ದ ವೇಳೆ ಆತನ ಕತ್ತು ಹಿಸುಕಿ ಕೊಂದಿದ್ದಳು. ಬಳಿಕ ಆತನ ಮೃತ ದೇಹವನ್ನು ಹಾಸಿಗೆಯಲ್ಲಿ ಮುಚ್ಚಿಟ್ಟಿದ್ದಳು. ನಂತರ ಪರಾರಿಯಾಗಿದ್ದ ಆಕೆಯನ್ನು ದೆಹಲಿ ಕ್ರೈಂ ಬ್ರಾಂಚ್ ಪೊಲೀಸರು (Delhi Crime Branch) ಬಂಧಿಸಿದ್ದಾರೆ. ಇದನ್ನೂ ಓದಿ: ಬಟ್ಟೆ ವ್ಯಾಪಾರಿಯ ಹಣ ಎಗರಿಸಿದ್ದ ಆರೋಪಿ 24 ಗಂಟೆಯಲ್ಲಿ ಅರೆಸ್ಟ್

    ಮಹಿಳೆ ಜಿತೇಂದರ್ ಎಂಬಾತನ ಜೊತೆ ಲಿವ್-ಇನ್ (Live-In Relationship) ಸಂಬಂಧದಲ್ಲಿದ್ದಳು. ಆದರೆ ಈಗಾಗಲೇ ಮದುವೆಯಾಗಿದ್ದ ಜಿತೇಂದರ್ ಪತ್ನಿಗೆ ವಿಚ್ಛೇದನ ಕೊಡುವುದಾಗಿ ಹೇಳಿದ್ದ. ಆದರೆ ಇತ್ತೀಚೆಗೆ ಪತ್ನಿಗೆ ವಿಚ್ಛೇದನ ಕೊಡುವುದಿಲ್ಲ ಎಂದು ಆರೋಪಿಯ ಬಳಿ ವಾದಿಸಿದ್ದ. ಅಲ್ಲದೇ ಆರೋಪಿಯಿಂದ ಅಂತರ ಕಾಯ್ದುಕೊಂಡಿದ್ದ. ಇದರಿಂದ ಸಿಟ್ಟಾದ ಪೂಜಾ, ಮಗನ ಕಾರಣದಿಂದ ಪತ್ನಿಗೆ ಜಿತೇಂದರ್ ವಿಚ್ಛೇದನ ನೀಡುತ್ತಿಲ್ಲ ಎಂದು ಭಾವಿಸಿ ಆತನನ್ನು ಕೊಲೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿಯ ಬಂಧನಕ್ಕೆ ಸುಮಾರು 300 ಸಿಸಿ ಕ್ಯಾಮೆರಾಗಳನ್ನು ಪರಿಶೀಲನೆ ಮಾಡಲಾಗಿದೆ. ಆರೋಪಿ ಪದೇ ಪದೆ ಅಡಗು ತಾಣವನ್ನು ಬದಲಿಸುತ್ತಿದ್ದಳು. ಈ ಮೂಲಕ ಪೊಲೀಸರ ಕಣ್ಣನ್ನು ತಪ್ಪಿಸಿದ್ದಳು. ವಿಚಾರಣೆ ವೇಳೆ ಆಕೆ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮದುವೆಯಾದಾಗಿಂದಲೂ ಲೈಂಗಿಕ ಸಂಪರ್ಕ ಮುಂದೂಡುತ್ತಿದ್ದ ಪತಿ – ಸಲಿಂಗಿ ಗಂಡನಿಂದ ಬೇಸತ್ತು ಪೊಲೀಸ್‌ ಠಾಣೆ ಮೆಟ್ಟಿಲೇರಿದ ಟೆಕ್ಕಿ ಪತ್ನಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪ್ರೇಮಿಯೊಂದಿಗೆ ಸರಸವಾಡಲು ಸ್ಕೆಚ್ ಹಾಕಿ ಪತಿಯನ್ನೇ ಮುಗಿಸಿದ ಕೇಡಿ ಲೇಡಿ

    ಪ್ರೇಮಿಯೊಂದಿಗೆ ಸರಸವಾಡಲು ಸ್ಕೆಚ್ ಹಾಕಿ ಪತಿಯನ್ನೇ ಮುಗಿಸಿದ ಕೇಡಿ ಲೇಡಿ

    ಚಿಕ್ಕಮಗಳೂರು: ತನ್ನ ಪ್ರೇಮಿಯೊಂದಿಗೆ (Lover) ಸರಸವಾಡಲು ಪತ್ನಿಯೇ ಪತಿಯನ್ನ ಮುಗಿಸಿರುವ ಘಟನೆ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಕಡೂರು ತಾಲೂಕಿನಲ್ಲಿ ನಡೆದಿದೆ.

    ಪತಿ ನವೀನ್ (28) ಮೃತ ದುರ್ದೈವಿ, ಪತ್ನಿ ಪಾವನಾ ಬಂಧಿತ ಆರೋಪಿ. ಗಂಡನಿಗೆ ಊಟದಲ್ಲಿ ನಿದ್ರೆ ಮಾತ್ರೆ (Sleeping Tablet) ಹಾಕಿ ಜ್ಞಾನ ತಪ್ಪಿಸಿದ ಪಾವನಾ ಬಳಿಕ ಪ್ರೇಮಿಯ ಜೊತೆ ಬೈಕ್‌ನಲ್ಲಿ ಮೃತದೇಹವನ್ನ ತೆಗೆದುಕೊಂಡು ಹೋಗಿ ಕೆರೆಗೆ ಎಸೆದು ಬಂದಿದ್ದಾಳೆ. ಇದನ್ನೂ ಓದಿ: ಬಿಡುಗಡೆಗೂ ಮುನ್ನ ‘ಜವಾನ್’ ಚಿತ್ರದ ವಿಡಿಯೋ ಲೀಕ್: ಪೊಲೀಸ್ ಠಾಣೆ ಮೆಟ್ಟಿಲೇರಿದ ತಂಡ

    ಬಳಿಕ ಇದೊಂದು ಸಹಜ ಸಾವು ಅಂತಾ ಬಿಂಬಿಸಿ ನಾಟಕವಾಡಿದ್ದಾಳೆ. ಆಗಸ್ಟ್ 6ರಂದು ಯಗಟಿ ಕೆರೆ ಬಳಿ ನವೀನ್ ಮೃತದೇಹ ಪತ್ತೆಯಾಗಿದೆ. ನಂತರ ಇದು ಸಹಜ ಸಾವಲ್ಲ ಎಂದು ಪೋಷಕರು ದೂರು ನೀಡಿದ್ದಾರೆ. ಇದನ್ನೂ ಓದಿ: ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ಹೈಕೋರ್ಟ್ ತಡೆಯಾಜ್ಞೆ – ಗಲಭೆಗೆ ಯತ್ನಿಸಿದ 30 ಜನರ ವಿರುದ್ಧ ಎಫ್‍ಐಆರ್

    ಪೋಷಕರ ದೂರಿನ ಆಧಾರದ ಮೇರೆಗೆ ತನಿಖೆ ಕೈಗೊಂಡ ಪೊಲೀಸರಿಗೆ ಇದು ಸಹಜ ಸಾವಲ್ಲ ಅನ್ನೋದು ಖಾತ್ರಿಯಾಗಿದೆ. ಪತ್ನಿ ಮೇಲೆ ಅನುಮಾನಗೊಂಡು ವಿಚಾರಣೆಗೆ ಒಳಪಡಿಸಿದ್ದಾರೆ. ನಂತರ ಪಾವನಾ, ಸಂಜಯ್ ಎಂಬಾತನನ್ನ ಪ್ರೀತಿಸುತ್ತಿದ್ದಳು. ಸಂಜಯ್ ಜೊತೆ ಸೇರಿಸಲು ನವೀನ್ ಅಡ್ಡಗಾಲಾಗಿದ್ದರಿಂದ ಪತಿಯನ್ನ ಸ್ಕೆಚ್ ಹಾಕಿ ಮುಗಿಸಿದ್ದಾಳೆ ಅನ್ನೋ ಸತ್ಯ ತನಿಖೆಯಲ್ಲಿ ಬಯಲಾಗಿದೆ.