Tag: crime

  • ಎಲ್ಲಾ ದೊಡ್ಡೋರ ಹೆಸರೆಲ್ಲ ಹೊರಗಡೆ ಬರುತ್ತೆ: ಚೈತ್ರಾ ಕುಂದಾಪುರ

    ಎಲ್ಲಾ ದೊಡ್ಡೋರ ಹೆಸರೆಲ್ಲ ಹೊರಗಡೆ ಬರುತ್ತೆ: ಚೈತ್ರಾ ಕುಂದಾಪುರ

    ಬೆಂಗಳೂರು: ಉದ್ಯಮಿ ಗೋವಿಂದ ಬಾಬು ಪೂಜಾರಿಯವರಿಗೆ ವಂಚಿಸಿ ಅರೆಸ್ಟ್ ಆಗಿರುವ ಚೈತ್ರಾ ಕುಂದಾಪುರ (Chaitra Kundapur) ರೋಚಕ ವಿಚಾರವನ್ನು ಬಹಿರಂಗ ಪಡಿಸಿದ್ದಾಳೆ. ಮಹಿಳಾ ಸಾಂತ್ವಾನ ಕೇಂದ್ರದಿಂದ ಸಿಸಿಬಿ (CCB) ಕಚೇರಿಗೆ ಕರೆ ತಂದ ವೇಳೆ ಸ್ವಾಮೀಜಿ ಬಂಧನದ ನಂತರ ದೊಡ್ಡವರ ಹೆಸರುಗಳು ಬಯಲಾಗಲಿದೆ ಎಂದಿದ್ದಾಳೆ.

    ಇಂದಿರಾ ಕ್ಯಾಂಟಿನ್ ಬಿಲ್ ವಿಚಾರವಾಗಿ ಈ ರೀತಿ ಷಡ್ಯಂತ್ರ ಮಾಡಿ ನನ್ನನ್ನು ಸಿಲುಕಿಸಿದ್ದಾರೆ ಎಂದು ಆಕೆ ಆರೋಪಿಸಿದ್ದಾಳೆ. ಎ ಒನ್ ಆರೋಪಿಯಾಗಿರಲಿ ನಾನು, ಆದರೂ ಮುಂದೆ ಸತ್ಯ ಹೊರ ಬರಲಿದೆ ಎಂದು ಹೇಳಿಕೊಂಡಿದ್ದಾಳೆ. ಈ ಮೂಲಕ ಸ್ವಾಮಿಜಿ ಅಭಿನವ ಹಾಲಾಶ್ರಿ ಬಂಧನದ ಬಳಿಕ ಪ್ರಕರಣದಲ್ಲಿ ಮತ್ತಷ್ಟು ವಿಚಾರಗಳು ಹೊರ ಬರಲಿವೆ ಎಂಬ ಸೂಚನೆ ನೀಡಿದ್ದಾಳೆ ಆರೋಪಿ ಚೈತ್ರಾ. ಇದನ್ನೂ ಓದಿ: ಸುಲಭವಾಗಿ ಸಿಕ್ಕ 50 ಲಕ್ಷಕ್ಕೆ ಚೈತ್ರಾ ಫಿದಾ – 3.5 ಕೋಟಿಗೆ ಶುರುವಾದ ಪ್ಲಾನ್ 5 ಕೋಟಿಗೆ ಏರಿದ್ದೇ ರೋಚಕ

    ಇದಕ್ಕೆ ಪ್ರತಿಕ್ರಿಯಿಸಿರುವ ಗೋವಿಂದ ಬಾಬು ಅವರು ಈ ಪ್ರಕರಣಕ್ಕೂ ಇಂದಿರಾ ಕ್ಯಾಂಟಿನ್ ಬಿಲ್ ವಿಚಾರಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಇದನ್ನೂ ಓದಿ: ಚೈತ್ರಾ ಕುಂದಾಪುರ ವಂಚನೆ ಬಯಲಾಗ್ತಿದ್ದಂತೆ ಬಿಜೆಪಿ ಟೀಕಿಸಿದ ಕಾಂಗ್ರೆಸ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಿಚ್ಛೇದಿತ ಪತ್ನಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ – ಆರೋಪಿಗೆ ಗುಂಡು ಹಾರಿಸಿ ಅರೆಸ್ಟ್

    ವಿಚ್ಛೇದಿತ ಪತ್ನಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ – ಆರೋಪಿಗೆ ಗುಂಡು ಹಾರಿಸಿ ಅರೆಸ್ಟ್

    ಕೋಲಾರ: ವಿಚ್ಛೇದಿತ ಪತ್ನಿಗೆ ಜೀವನ ನಿರ್ವಹಣೆ ಭತ್ಯೆ ನೀಡುವ ವಿಚಾರದಲ್ಲಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವುದು ಶ್ರೀನಿವಾಸಪುರದ ನಂಬಿಹಳ್ಳಿಯಲ್ಲಿ ನಡೆದಿದೆ.

    ಕೊಲೆಯಾದ (Murder) ಮಹಿಳೆಯನ್ನು ರಾಧ ಎಂದು ಗುರುತಿಸಲಾಗಿದೆ. ಆಕೆಯ ಮಾಜಿ ಪತಿ ನಾಗೇಶ್ ಕೊಲೆಗೈದ ಆರೋಪಿಯಾಗಿದ್ದಾನೆ. ಆತ ವಿಚ್ಛೇದಿತ ಪತ್ನಿ ರಾಧಳಿಗೆ 8 ಸಾವಿರ ರೂ. ಮಾಸಿಕ ಭತ್ಯೆ ನೀಡಬೇಕು ಎಂದು ನ್ಯಾಯಾಲಯ (Court) ವಿಚ್ಛೇದನ ನೀಡುವ ವೇಳೆ ತೀರ್ಪು ನೀಡಿತ್ತು. ಇದೇ ವಿಚಾರಕ್ಕೆ ಇಬ್ಬರ ನಡುವೆ ಆಗಾಗ ಗಲಾಟೆ ಸಹ ನಡೆಯುತ್ತಿತ್ತು. ಈಗ ಇಬ್ಬರ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಅಲ್ಲದೇ ರಾಧಳನ್ನು ಬಿಡಿಸಲು ಹೋದ ಆಕೆಯ ಸಹೋದರಿ ಹಾಗೂ ತಂದೆಯ ಮೇಲೂ ಮಚ್ಚಿನಿಂದ ಆರೋಪಿ ದಾಳಿ ನಡೆಸಿದ್ದಾನೆ. ಇದನ್ನೂ ಓದಿ: ರೈಲು ಪ್ರಯಾಣದ ವೇಳೆ 8 ಯುವಕರಿಗೆ ಮತ್ತು ಬರೋ ಚಾಕ್ಲೇಟ್ ನೀಡಿ ದರೋಡೆ

    ಆರೋಪಿ ಕೊಲೆಯ ಬಳಿಕ ಮನೆಯೊಂದರ ಒಳಗೆ ಅಡಗಿಕೊಂಡಿದ್ದ. ಒಳಗೆ ಬರುವ ಪ್ರಯತ್ನ ಮಾಡಿದರೆ ಸಿಲಿಂಡರ್‍ನಿಂದ ಗ್ಯಾಸ್ ಲೀಕ್ ಮಾಡಿ ಬೆಂಕಿ ಹಚ್ಚಿಕೊಳ್ಳುವ ಬೆದರಿಕೆ ಹಾಕಿದ್ದಾನೆ. ಆದರೂ ಪೊಲೀಸರು ಆತನ ಬಂಧನಕ್ಕೆ ಮುಂದಾಗಿದ್ದಾರೆ. ಈ ವೇಳೆ ಪೊಲೀಸರು ಮೇಲೂ ದಾಳಿ ನಡೆಸಿದ್ದು, ಆರೋಪಿಯ ಕಾಲು ಹಾಗೂ ಕೈಗೆ ಐದು ಸುತ್ತಿನ ಗುಂಡು ಹಾರಿಸಿ ಬಂಧಿಸಲಾಗಿದೆ. ಈ ವೇಳೆ ಉಂಟಾದ ಜನಜಂಗುಳಿಯನ್ನು ಚದುರಿಸಲು ಪೊಲೀಸರು ಅಶ್ರುವಾಯುವನ್ನು ಸಿಡಿಸಿದ್ದಾರೆ.

    ಕೋಲಾರ ಎಸ್ಪಿ ನಾರಾಯಣ್ ಸೇರಿದಂತೆ 10 ಜನ ಪೊಲೀಸರಿಗೆ ಈ ವೇಳೆ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ನಾಗೇಶ್‍ಗೂ ಸಹ ಚಿಕಿತ್ಸೆ ನೀಡಲಾಗುತ್ತಿದೆ.

    ಈ ಸಂಬಂಧ ಶ್ರೀನಿವಾಸಪುರ ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ: ಉದ್ಯಮಿಗೆ ವಂಚನೆ ಪ್ರಕರಣ – ಕೇಸ್‌ ದಾಖಲಾಗುತ್ತಿದ್ದಂತೆ ಸ್ವಾಮೀಜಿ ನಾಪತ್ತೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಾಲದ ಕಾಟಕ್ಕೆ ಬೇಸತ್ತು, ಪತ್ನಿಯನ್ನ ನೇಣುಹಾಕಿ ಕೊಂದು ತಾನೂ ಆತ್ಮಹತ್ಯೆ

    ಸಾಲದ ಕಾಟಕ್ಕೆ ಬೇಸತ್ತು, ಪತ್ನಿಯನ್ನ ನೇಣುಹಾಕಿ ಕೊಂದು ತಾನೂ ಆತ್ಮಹತ್ಯೆ

    ಬಳ್ಳಾರಿ: ಸಾಲದ (Loan) ಕಾಟಕ್ಕೆ ಬೇಸತ್ತು, ಪತ್ನಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಬಳ್ಳಾರಿಯ (Bellary) ಬಂಡಿಹಟ್ಟಿಯಲ್ಲಿ ನಡೆದಿದೆ.

    ನಗರದ ಆಂಜನೇಯ ದೇವಸ್ಥಾನ ಬಳಿ ನಿವಾಸಿಗಳಾದ ಈರಣ್ಣ (28) ತನ್ನ ಪತ್ನಿ ದುರ್ಗಮ್ಮಳನ್ನ (25) ನೇಣು ಹಾಕಿ ಕೊಂದು ತಾನೂ ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾನೆ. ಈರಣ್ಣನ ಈ ಕೆಟ್ಟ ನಿರ್ಧಾರದಿಂದ ರಾಕೇಶ್ ಎಂಬ 16 ತಿಂಗಳ ಮಗು ಅನಾಥವಾಗಿದೆ. ಇದನ್ನೂ ಓದಿ: ಕುಡಿದು ದೇಗುಲದ ಗೋಡೆಗೆ ಮೂತ್ರ ವಿಸರ್ಜಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಆಕ್ಸಿಡೆಂಟ್ ಮಾಡಿ ಬಾಲಕನ ಕೊಲೆ

    ಮೃತ ಈರಣ್ಣನಿಗೆ ಕುಡಿಯುವ ಚಟ ಇತ್ತು. ಅದಕ್ಕಾಗಿ ಪತ್ನಿ ಬಳಿ ಪದೇ ಪದೇ ಹಣ ಕೇಳುತ್ತಿದ್ದ. ಪತ್ನಿ ಅಲಲ್ಲಿ ಸಾಲ ಮಾಡಿ ಪತಿಗೆ ಹಣ ನೀಡಿದ್ದಳು. ಆದ್ರೆ ಹೆಂಡತಿ ಬಳಿ ಹಣ ಪಡೆದ ಪತಿ, ಈರಣ್ಣಾ ಕುಡಿದು ಹಾಳು ಮಾಡಿದ್ದಾನೆ. ಕೊನೆಗೆ ಸಾಲಗಾರರು ಮನೆಗೆ ಬಂದು ಹಣ ಕೇಳುತ್ತಾರೆ, ಎಲ್ಲಿಂದ ಹಣ ತಂದು ಕೊಡುತ್ತೀಯಾ ಎಂದು ಪತ್ನಿ ದುರ್ಗಮ್ಮ, ಪತಿಯ ಜೊತೆ ಜಗಳ ಮಾಡಿದ್ದಾಳೆ.‌ ಇದರಿಂದ ಭಯಪಟ್ಟು ಸಾಲಗಾರರ ಕಾಟ ತಪ್ಪಿಸಿಕೊಳ್ಳಲು ಪತ್ನಿಯನ್ನ ನೇಣು ಹಾಕಿ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಈ ಸಂಭಂದ ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ (Cowl Bazar Police Station) ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಗ್ಯಾಂಗ್ ರೇಪ್‌ಗೆ ಒಳಗಾಗಿ ತಪ್ಪಿಸಿಕೊಂಡ ಮಹಿಳೆ- ಬೆತ್ತಲಾಗಿ ಸಹಾಯಕ್ಕೆ ಅಂಗಲಾಚಿದ್ರೂ ಹುಚ್ಚಿ ಎಂದುಕೊಂಡ ಜನ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಿವಾಹಿತೆಯೊಂದಿಗೆ ಪ್ರೇಮ; ಮದುವೆ ಬೇಡವೆಂದು ಹಲ್ಲೆ ನಡೆಸಿದ ಪ್ರೇಮಿ ಜೈಲು ಪಾಲು – ಮುಂದೇನಾಯ್ತು?

    ವಿವಾಹಿತೆಯೊಂದಿಗೆ ಪ್ರೇಮ; ಮದುವೆ ಬೇಡವೆಂದು ಹಲ್ಲೆ ನಡೆಸಿದ ಪ್ರೇಮಿ ಜೈಲು ಪಾಲು – ಮುಂದೇನಾಯ್ತು?

    – ಜೈಲಿಂದಲೇ ಮಹಿಳೆಗೆ ಕೊಲೆ ಬೆದರಿಕೆ ಕರೆ

    ಬೆಂಗಳೂರು: ಇದು ಸಿನಿಮಾ ಶೈಲಿಯಂತೆ ಒನ್‌ ವೇ ಲವ್‌ ಸ್ಟೋರಿ (Love Storty). ಆದ್ರೆ ಕಥೆಯಲ್ಲಿ ಪ್ರೇಮಿಯೇ ವಿಲನ್‌ ಆಗಿದ್ದಾನೆ. ಜೈಲಿನಿಂದಲೇ ಪ್ರಿಯತಮೆಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ. ಇದರಿಂದ ಪರಪ್ಪನ ಅಗ್ರಹಾರ ಜೈಲು (Parappana Agrahara Jail) ಮತ್ತೆ ಅಕ್ರಮಗಳ ಅಡ್ಡೆಯಾಯ್ತಾ ಎಂಬ ಮಾತುಗಳು ಕೇಳಿಬರುತ್ತಿವೆ.

    ಇದು ಒಂಥರಾ ಒನ್‌ವೇ ಲವ್‌ಸ್ಟೋರಿ ಪತಿಯಿಂದ ದೂರವಾಗಿದ್ದ ಮಹಿಳೆಯ ಹಿಂದೆ ಬಿದ್ದ ಪಾಗಲ್ ಪ್ರೇಮಿ, ಪ್ರೀತಿ ಮಾಡುವಂತೆ ಆಕೆಯನ್ನ ಕಾಡತೊಡಗಿಸಿದ್ದ. ಶ್ರೀನಿವಾಸ ಎಂಬಾತ ಮಹಿಳೆಯ ಹಿಂದೆ ಬಿದ್ದು ಪ್ರೀತಿಸುವಂತೆ ಕಾಡತೊಡಗಿದ್ದ. ಪ್ರೀತಿಸದೇ ಇದ್ರೆ ಆ್ಯಸಿಡ್‌ ಹಾಕ್ತೀನಿ ಅಂತಾನೂ ಬೆದರಿಕೆ ಹಾಕಿದ್ದನಂತೆ. ಈಗಾಗಲೇ ಮದುವೆಯಾಗಿ ಗಂಡನಿಂದ ದೂರವಾಗಿದ್ದ ಮಹಿಳೆ, ಈತನ ಹುಚ್ಚುತನಕ್ಕೆ ಮನಸೋತು ಪ್ರೀತಿಗೆ ಸಮ್ಮತಿಸಿದ್ದಳು. ಇದನ್ನೂ ಓದಿ: ಮಣಿಪುರದಲ್ಲಿ ಮತ್ತೆ ಗುಂಡಿನ ದಾಳಿ – ಇಬ್ಬರು ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ

    ಕೆಲಕಾಲ ಇಬ್ಬರು ಪ್ರೀತಿಯ ಗುಂಗಲ್ಲಿ ತೇಲಾಡಿದ್ದಾರೆ. ಆದ್ರೆ ಮಹಿಳೆ ಮದುವೆ (Marriage) ವಿಚಾರ ತೆಗೆದಿದ್ದೇ ತಡ ಶ್ರೀನಿವಾಸ ಉಲ್ಟಾ ಹೊಡೆದಿದ್ದಾನೆ. ನಿನ್ನನ್ನ ಮದುವೆ ಆಗಲ್ಲ ಜೊತೆಯಲ್ಲೇ ಇರು ಸಾಕು ಅಂದಿದ್ದನಂತೆ. ಇದರೊಂದಿಗೆ ಶ್ರೀನಿವಾಸ ಮತ್ತು ಆತನ ತಾಯಿ ಸೇರ್ಕೊಂಡು ಮಹಿಳೆ ಮೇಲೆ ಹಲ್ಲೆ ಸಹ ನಡೆಸಿದ್ದಾರೆ. ಇದರಿಂದ ನೊಂದ ಮಹಿಳೆ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಶ್ರೀನಿವಾಸನನ್ನ ಜೈಲಿಗೆ ಕಳುಹಿಸಿದ್ದಾಳೆ. ಇದನ್ನೂ ಓದಿ: ಕತ್ತು ಸೀಳಿ ಗಗನಸಖಿ ಹತ್ಯೆಗೈದಿದ್ದ ಆರೋಪಿ – ಲಾಕಪ್‌ನಲ್ಲೇ ಪ್ಯಾಂಟ್‌ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ

    ಇತ್ತ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ಶ್ರೀನಿವಾಸ ಜೈಲಿನಲ್ಲಿದ್ದುಕೊಂಡೇ ಕರೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾನೆ ಅಂತಾ ಮಹಿಳೆ ಮತ್ತೊಂದು ಆರೋಪ ಮಾಡಿದ್ದಾರೆ. ಶ್ರೀನಿವಾಸ ಜೈಲಿನಿಂದಲೇ ವಾಟ್ಸಪ್ ಕರೆ ಮಾಡಿ ತನ್ನನ್ನ ನೋಡಲು ಜೈಲಿಗೆ ಬರಬೇಕು ಅಂತಾ ಧಮ್ಕಿ ಹಾಕಿದ್ದನಂತೆ. ನನ್ನನ್ನ ಜೈಲಿಗೆ ಹಾಕಿಸಿದ್ದೀಯಾ ಅಲ್ವಾ, ನೀನು ಜೈಲಿಗೆ ಬಾ ನನ್ನೊಟ್ಟಿಗೆ ಇರು, ಇಲ್ಲದಿದ್ದರೆ ಹೊರಗೆ ಬಂದು ಕೊಲೆ ಮಾಡ್ತೀನಿ ಅಂತ ಬೆದರಿಕೆ ಹಾಕಿರುವುದಾಗಿ ಮಹಿಳೆ ದೂರಿದ್ದಾಳೆ.

    ಇದೀಗ ಮತ್ತೆ ಆರೋಪಿ ವಿರುದ್ಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ದೂರು ದಾಖಲಿಸಿದ್ದು, ಇದರಿಂದ ಜೈಲಿನಲ್ಲಿ ಖೈದಿಗಳಿಗೆ ಮೊಬೈಲ್ ಆರಾಮಾಗಿ ಸಿಗ್ತಿದೆ ಅನ್ನೋದಕ್ಕೆ ಸಾಕ್ಷಿ ಸಿಕ್ಕಿಂತಾಗಿದೆ .

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹಣ ಕೊಡದಿದ್ದಕ್ಕೆ ಮಾವನ ಖಾಸಗಿ ಅಂಗ ಕತ್ತರಿಸಿ ಹತ್ಯೆಗೈದ ಸೊಸೆ!

    ಹಣ ಕೊಡದಿದ್ದಕ್ಕೆ ಮಾವನ ಖಾಸಗಿ ಅಂಗ ಕತ್ತರಿಸಿ ಹತ್ಯೆಗೈದ ಸೊಸೆ!

    ಗಾಂಧಿನಗರ: ವಿದೇಶಕ್ಕೆ ತೆರಳಲು 2 ಲಕ್ಷ ರೂ. ನೀಡಲು ನಿರಾಕರಿಸಿದ್ದಕ್ಕೆ ಮಹಿಳೆಯೊಬ್ಬಳು ತನ್ನ ಮಾವನ ಖಾಸಗಿ ಅಂಗವನ್ನೇ ಕತ್ತರಿಸಿ ಕೊಲೆಗೈದ ಪ್ರಕರಣ ಗುಜರಾತ್‌ನ (Gujarat) ಖೇಡಾದಲ್ಲಿ ನಡೆದಿದೆ.

    ಕೊಲೆಯಾದ ವ್ಯಕ್ತಿಯನ್ನು ಜಗದೀಶ್ ಶರ್ಮಾ (75) ಎಂದು ಗುರುತಿಸಲಾಗಿದೆ. ಆರೋಪಿ ಸೊಸೆಯನ್ನು ಪೊಲೀಸರು (Police) ಬಂಧಿಸಿದ್ದಾರೆ. ಆಕೆ ವಿಚಾರಣೆ ವೇಳೆ ಅಪರಾಧವನ್ನು ಒಪ್ಪಿಕೊಂಡಿದ್ದಾಳೆ. ತನಿಖೆ ವೇಳೆ ಆಕೆಯ ಮಾವ ತನ್ನೊಂದಿಗೆ ದೈಹಿಕ ಸಂಬಂಧ ಹೊಂದಿದ್ದ. ಇದಕ್ಕಾಗಿ ಹಣ ನೀಡುತ್ತಿದ್ದ ಎಂದು ಮಹಿಳೆ ಹೇಳಿದ್ದಾಳೆ. ಇದನ್ನೂ ಓದಿ: ಕ್ರಿಮಿನಲ್‌ ಕೇಸ್‌ ಇತ್ಯರ್ಥಕ್ಕೆ ಹಣ ಬೇಕು ಅಂತ ಕಿಡ್ನ್ಯಾಪ್‌ ಮಾಡಿದ್ದ ಆರೋಪಿಗಳು ಅರೆಸ್ಟ್‌

    ಬಳಿಕ ತಾನು ಫೇಸ್‌ಬುಕ್‌ನಲ್ಲಿ ಒಬ್ಬ ವ್ಯಕ್ತಿಯೊಂದಿಗೆ ಸ್ನೇಹ ಬೆಳೆಸಿ ವಿದೇಶಕ್ಕೆ ತೆರಳಲು ಬಯಸಿದ್ದೆ. ಇದಕ್ಕಾಗಿ ಮಾವನ ಬಳಿ ಹಣ ಕೇಳಿದ್ದೆ. ಆದರೆ ಹಣ ಕೊಡಲು ನಿರಾಕರಿಸಿದ್ದಕ್ಕೆ ಕೊಲೆ ಮಾಡಿದ್ದಾಗಿ ಮಹಿಳೆ ಹೇಳಿದ್ದಾಳೆ.

    ಸುಮಾರು ಮೂರು ದಿನಗಳಿಂದ ಜಗದೀಶ್ ಶರ್ಮಾ ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಆತನ ಹಿರಿಯ ಮಗ ಹುಡುಕಾಟ ನಡೆಸಿದಾಗ ಮೃತದೇಹ ಪತ್ತೆಯಾಗಿದೆ. ಬಳಿಕ ಆತ ಪೊಲೀಸರಿಗೆ ಮಾಹಿತಿ ನೀಡಿದ್ದ. ಇದಾದ ಮೇಲೆ ಮೃತದೇಹವನ್ನು ಪರೀಕ್ಷಿಸಿದ ವೇಳೆ ಖಾಸಗಿ ಅಂಗ ಕತ್ತರಿಸಿರುವುದು ಹಾಗೂ ತಲೆಗೆ ಬಲವಾಗಿ ಹೊಡೆದಿರುವುದು ಪತ್ತೆಯಾಗಿತ್ತು. ಇದನ್ನೂ ಓದಿ: ದೇವದುರ್ಗ ಉಪಕಾರಾಗೃಹದಿಂದ ಪರಾರಿಯಾಗಿದ್ದ ವಿಚಾರಣಾಧೀನ ಕೈದಿ ಬಂಧನ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಲಿವಿಂಗ್ ಪಾರ್ಟ್ನರ್ ಮೇಲೆ ಸಂಶಯ- ಯುವತಿಯಿಂದ ಯುವಕನ ಹತ್ಯೆ

    ಲಿವಿಂಗ್ ಪಾರ್ಟ್ನರ್ ಮೇಲೆ ಸಂಶಯ- ಯುವತಿಯಿಂದ ಯುವಕನ ಹತ್ಯೆ

    ಬೆಂಗಳೂರು: ಯುವತಿಯೊಬ್ಬಳು ಲಿವಿಂಗ್ ಟು ಗೆದರ್‌ನಲ್ಲಿದ್ದ ಸ್ನೇಹಿತನ ಮೇಲಿನ ಸಂಶಯದಿಂದಾಗಿ ಆತನನ್ನು ಹತ್ಯೆಗೈದ ಪ್ರಕರಣ ಹುಳಿಮಾವಿನಲ್ಲಿ (Hulimavu) ನಡೆದಿದೆ.

    ಬಂಧಿತ ಆರೋಪಿಯನ್ನು ಬೆಳಗಾವಿ ಮೂಲದ ರೇಣುಕಾ (34) ಎಂದು ಗುರುತಿಸಲಾಗಿದೆ. ಯುವತಿ ಕೇರಳ ಮೂಲದ ಜಾವಿದ್ (24) ಎಂಬಾತನ ಜೊತೆ ಆಪಾರ್ಟ್‍ಮೆಂಟ್ ಒಂದರಲ್ಲಿ ವಾಸವಾಗಿದ್ದಳು. ಇಬ್ಬರೂ ಪರಸ್ಪರ ಸಂಶಯದಿಂದ ಆಗಾಗ ಜಗಳವಾಡುತ್ತಿದ್ದರು ಎಂದು ತಿಳಿದು ಬಂದಿದೆ. ಇಬ್ಬರ ನಡುವೆ ಹಣಕಾಸಿನ ವ್ಯವಹಾರ ಸಹ ಇತ್ತು ಎನ್ನಲಾಗಿದೆ. ಇದೇ ವಿಚಾರಕ್ಕಾಗಿ ಆತನನ್ನು ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ವೃದ್ಧೆಯನ್ನು ಸೆಕ್ಸ್‌ಗೆ ಪೀಡಿಸಿದ್ದ ಆರೋಪ- ಯುವಕ ಅರೆಸ್ಟ್

    ಮೃತ ಜಾವಿದ್ ಮೊಬೈಲ್ ಸರ್ವಿಸ್ ಸೆಂಟರ್ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಮಡಿವಾಳದಲ್ಲಿ ಒಂದೇ ಏರಿಯಾದಲ್ಲಿ ವಾಸವಾಗಿದ್ದ ವೇಳೆ ಇಬ್ಬರಿಗೂ ಪರಿಚಯವಾಗಿತ್ತು. ಬಳಿಕ ಇಬ್ಬರೂ ವಸತಿ ಗೃಹ ಇಲ್ಲವೇ ಅಪಾರ್ಟ್‍ಮೆಂಟ್‍ನಲ್ಲಿ ಉಳಿದುಕೊಳ್ಳುತ್ತಿದ್ದರು. ಕೊಲೆ ನಡೆಯುವ ಮೂರು ದಿನದ ಹಿಂದೆ ಇಬ್ಬರು ಭೇಟಿಯಾಗಿದ್ದರು. ಬಳಿಕ ಹುಳಿಮಾವಿನ ಅಕ್ಷಯ ನಗರದ ಅಪಾರ್ಟ್‍ಮೆಂಟ್‍ಗೆ ಬಂದಿದ್ದರು.

    ಬಳಿಕ ಸೆ.5 ರಂದು ಇಬ್ಬರ ನಡುವೆ ಜಗಳ ನಡೆದಿತ್ತು. ಈ ವೇಳೆ ಆರೋಪಿ ಚಾಕುವಿನಿಂದ ಜಾವಿದ್‍ನ ಎದೆಗೆ ಇರಿದಿದ್ದಳು. ಬಳಿಕ ಅಲ್ಲಿನ ನಿವಾಸಿಗಳ ಜೊತೆ ಸೇರಿ ಆತನನ್ನು ಆಸ್ಪತ್ರೆಗೆ ಸೇರಿಸಿದ್ದಳು. ನಂತರ ಆಸ್ಪತ್ರೆಯಿಂದ ವಾಪಸ್ ಅಪಾರ್ಟ್‍ಮೆಂಟ್‍ಗೆ ತೆರಳಿ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಳು. ಈ ವೇಳೆ ಅಪಾರ್ಟ್‍ಮೆಂಟ್ ಸಿಬ್ಬಂದಿ ಡೋರ್ ಲಾಕ್ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು.

    ಈ ಸಂಬಂಧ ಹುಳಿಮಾವು ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಕಂದಾಯ ಇಲಾಖೆ ಮುಖ್ಯ ಕಾರ್ಯದರ್ಶಿ ಕಾರು ಡಿಕ್ಕಿ – ಬೈಕ್ ಸವಾರ ಸಾವು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 2.5 ಕೋಟಿ ರೂ.ಗೆ ಬೇಡಿಕೆ, ಕೊಡದಿದ್ದರೆ ಎನ್‍ಕೌಂಟರ್ ಬೆದರಿಕೆ – 9 ಪೊಲೀಸರು ಅರೆಸ್ಟ್

    2.5 ಕೋಟಿ ರೂ.ಗೆ ಬೇಡಿಕೆ, ಕೊಡದಿದ್ದರೆ ಎನ್‍ಕೌಂಟರ್ ಬೆದರಿಕೆ – 9 ಪೊಲೀಸರು ಅರೆಸ್ಟ್

    ದಿಸ್ಪುರ್: ಹಣ ಕೊಡದಿದ್ದರೆ ಜಿಹಾದಿಗಳೊಂದಿಗೆ ಸಂಬಂಧವಿದೆ ಎಂದು ಬಿಂಬಿಸಿ ಎನ್‍ಕೌಂಟರ್ ಮಾಡುವುದಾಗಿ ಉದ್ಯಮಿಗೆ ಬೆದರಿಕೆ ಒಡ್ಡಿದ ಆರೋಪದ ಮೇಲೆ ಅಸ್ಸಾಂನಲ್ಲಿ (Assam) 9 ಜನ ಪೊಲೀಸರನ್ನು (Police) ಬಂಧಿಸಲಾಗಿದೆ.

    ಪೊಲೀಸರು ನನ್ನನ್ನು ಅಕ್ರಮವಾಗಿ ಬಂಧಿಸಿ 2.5 ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಹಣ ನೀಡದಿದ್ದರೆ ಎನ್‍ಕೌಂಟರ್‌ನಲ್ಲಿ ಕೊಲ್ಲುತ್ತೇವೆ ಎಂದು ಪೊಲೀಸರು ಬೆದರಿಸಿದ್ದಾರೆ ಎಂದು ಉದ್ಯಮಿ ರಬಿಯುಲ್ ಇಸ್ಲಾಂ ಎಂಬುವವರು ಆರೋಪಿಸಿದ್ದಾರೆ. ಇದನ್ನೂ ಓದಿ: ಕೈದಿಗಳಿಗೆ ಸೇಬು, ಮೂಸಂಬಿ ಹಣ್ಣಿನಲ್ಲಿ ಗಾಂಜಾ ಸಪ್ಲೈ – ಮೂವರು ಅರೆಸ್ಟ್

    ಪೊಲೀಸ್ ಅಧಿಕಾರಿಗಳು ತಮ್ಮ ಮನೆಗೆ ಬಂದು ಏಕಾಏಕಿ ಡ್ರಗ್ಸ್ ಹಾಗೂ ಹಣದ ಬಗ್ಗೆ ಮಾತು ಶುರು ಮಾಡಿದರು. ನಂತರ ಪೊಲೀಸರು ನನ್ನ ಜೊತೆ ಇಬ್ಬರು ಸಂಬಂಧಿಕರನ್ನು ಭವಾನಿಪುರ ಪೊಲೀಸ್ ಠಾಣೆಗೆ ಕರೆದೊಯ್ಯುವ ಮೊದಲು ಗಂಟೆಗಳ ಕಾಲ ಹೊಡೆದಿದ್ದಾರೆ. ಬಳಿಕ ಠಾಣೆಯಲ್ಲಿ ಹಲವಾರು ಗಂಟೆಗಳ ಕಾಲ ಬಂಧಿಸಲಾಯಿತು. ಮರುದಿನ ಎಸ್‍ಪಿ ಅವರ ನಿವಾಸಕ್ಕೆ ಕರೆದೊಯ್ದು ಅಲ್ಲಿ ವಿಚಾರಣೆ ನಡೆಸಿದರು ಎಂದು ಉದ್ಯಮಿ ನೀಡಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ.

    ಬಳಿಕ ಡಿಟರ್ಜೆಂಟ್ ಕಾರ್ಖಾನೆ ಒಂದಕ್ಕೆ ಕರೆದೊಯ್ದು ಅಕ್ರಮ ಹಣ ಸಂಪಾದನೆ ಹಾಗೂ ಭಯೋತ್ಪಾದಕರೊಂದಿಗೆ ಸಂಪರ್ಕ ಹೊಂದಿರುವ ಆರೋಪ ಹೊರಿಸಿ ಎನ್‍ಕೌಂಟರ್ ಮಾಡುವ ಬೆದರಿಕೆ ಒಡ್ಡಲಾಗಿದೆ ಎಂದು ಉದ್ಯಮಿ ಆರೋಪಿಸಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಅಸ್ಸಾಂ ಸಿಐಡಿ 2014ರ ಬ್ಯಾಚ್ ಐಪಿಎಸ್ ಅಧಿಕಾರಿ ಸಿದ್ಧಾರ್ಥ ಬುರಗೋಹನ್ ಸೇರಿದಂತೆ ಒಂಬತ್ತು ಜನರನ್ನು ಬಂಧಿಸಲಾಗಿದೆ. ಸಿದ್ಧಾರ್ಥ ಅವರು ಎರಡು ದಿನಗಳ ಹಿಂದೆ ಅಸ್ಸಾಂ ಪೊಲೀಸ್ ಪ್ರಧಾನ ಕಚೇರಿಗೆ ವರ್ಗಾವಣೆಯಾಗುವವರೆಗೂ ಬಜಾಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದರು.

    ಉಪ ಪೊಲೀಸ್ ವರಿಷ್ಠಾಧಿಕಾರಿ ಪುಷ್ಕಲ್ ಗೊಗೊಯ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗಾಯತ್ರಿ ಸೋನೊವಾಲ್ ಮತ್ತು ಅವರ ಪತಿ ಸುಭಾಸ್ ಚಂದರ್, ಸಬ್ ಇನ್ಸ್‌ಪೆಕ್ಟರ್ ದೇಬಜಿತ್ ಗಿರಿ, ಕಾನ್‍ಸ್ಟೆಬಲ್ ಇಂಜಮಾಮುಲ್ ಹಸನ್, ಕಿಶೋರ್ ಬರುವಾ, ನಬೀರ್ ಅಹ್ಮದ್ ಮತ್ತು ದಿಪ್‍ಜಾಯ್ ಕಲಿತಾ ಬಂಧಿತ ಅಧಿಕಾರಿಗಳಾಗಿದ್ದಾರೆ. ಇದನ್ನೂ ಓದಿ: ಉದಯನಿಧಿ ಸ್ಟಾಲಿನ್‌ ತಲೆ ತಂದವರಿಗೆ 10 ಕೋಟಿ ಬಹುಮಾನ; ಅಯೋಧ್ಯೆಯ ಹಿಂದೂ ಧರ್ಮದರ್ಶಿ ಘೋಷಣೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೈದಿಗಳಿಗೆ ಸೇಬು, ಮೂಸಂಬಿ ಹಣ್ಣಿನಲ್ಲಿ ಗಾಂಜಾ ಸಪ್ಲೈ – ಮೂವರು ಅರೆಸ್ಟ್

    ಕೈದಿಗಳಿಗೆ ಸೇಬು, ಮೂಸಂಬಿ ಹಣ್ಣಿನಲ್ಲಿ ಗಾಂಜಾ ಸಪ್ಲೈ – ಮೂವರು ಅರೆಸ್ಟ್

    ಹಾಸನ: ಸೇಬು ಹಾಗೂ ಮೂಸಂಬಿ ಹಣ್ಣಿನ ಒಳಗೆ ಗಾಂಜಾ ಇಟ್ಟು ಕೈದಿಗಳಿಗೆ ಪೂರೈಸಲು ಯತ್ನಿಸಿದ ಮೂವರು ಆರೋಪಿಗಳನ್ನು ಹಾಸನ (Hassan) ಪೊಲೀಸರು (Police) ಬಂಧಿಸಿದ್ದಾರೆ.

    ಬಂಧಿತ ಆರೋಪಿಗಳನ್ನು ತರಕಾರಿ ವ್ಯಾಪಾರಿ ತಬ್ರೇಜ್ (28), ಗುಜರಿ ವ್ಯಾಪಾರಿ ವಾಸಿಂ (21) ಹಾಗೂ ರಕೀಬ್ ಎಂದು ಗುರುತಿಸಲಾಗಿದೆ. ಆರೋಪಿಗಳು ಜಿಲ್ಲಾ ಕಾರಾಗೃಹದಲ್ಲಿರುವ (Jail) ಕೈದಿಗಳಿಗೆ ಗಾಂಜಾ ಸಪ್ಲೈ ಮಾಡಲು ಪ್ಲ್ಯಾನ್ ಮಾಡಿ ಸೇಬು ಹಾಗೂ ಮೂಸಂಬಿ ಹಣ್ಣನ್ನು ಕೊರೆದು ಅದರೊಳಗೆ ಗಾಂಜಾ ಸೊಪ್ಪನ್ನು ಇಟ್ಟು ಸ್ಟಿಕ್ಕರ್ ಅಂಟಿಸಿದ್ದರು. ಬಳಿಕ ಹಣ್ಣುಗಳನ್ನು ಜೈಲಿನ ಹಿಂಬದಿಯಿಂದ ಕಾಂಪೌಂಡ್ ಒಳಗೆ ಎಸೆಯಲು ಹೊಂಚು ಹಾಕುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಡಿಎಂಕೆ ಮುಖಂಡನ ಮೇಲೆ ಹಲ್ಲೆ ನಡೆದಿದ್ದ ಹೋಟೆಲ್‍ನಲ್ಲಿ ವಿಶೇಷ ಪೂಜೆ

    ಹೊಂಚು ಹಾಕಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಮೂವರನ್ನು ಹಾಸನ ನಗರ ಠಾಣೆ ಸಿಪಿಐ ರೇವಣ್ಣ ಹಾಗೂ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಬಳಿಕ ಬ್ಯಾಗ್ ಪರಿಶೀಲಿಸಿದಾಗ ಗಾಂಜಾ ತುಂಬಿದ್ದ 3 ಸೇಬು ಮತ್ತು 2 ಮೂಸಂಬಿ ಹಣ್ಣು ಪತ್ತೆಯಾಗಿದೆ. ವಿಚಾರಣೆ ವೇಳೆ ಆರೋಪಿಗಳು ತಪ್ಪನ್ನು ಒಪ್ಪಿಕೊಂಡಿದ್ದಾರೆ.

    ಈ ಸಂಬಂಧ ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆಲ ದಿನಗಳ ಹಿಂದೆ ಜೈಲಿನ ಮೇಲೆ ದಾಳಿ ನಡೆಸಿದ್ದ ಪೊಲೀಸರು ಮೊಬೈಲ್ ಹಾಗೂ ಗಾಂಜಾ ವಶಪಡಿಸಿಕೊಂಡಿದ್ದರು. ದಾಳಿ ಬೆನ್ನಲ್ಲೇ ಜೈಲಿನ ನಾಲ್ವರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿತ್ತು. ಇದನ್ನೂ ಓದಿ: ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ಐಸಿಯು ವೈದ್ಯರ ಕೊರತೆ!

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗರ್ಭಿಣಿಗೆ ಥಳಿಸಿ ಬೆತ್ತಲೆ ಮೆರವಣಿಗೆ ಮಾಡಿದ ಪತಿ – ರಾಜಸ್ಥಾನದಲ್ಲಿ ಮಹಿಳೆಯರ ಸುರಕ್ಷತೆ ನಿರ್ಲಕ್ಷ್ಯ ಎಂದು ನಡ್ಡಾ ಟೀಕೆ

    ಗರ್ಭಿಣಿಗೆ ಥಳಿಸಿ ಬೆತ್ತಲೆ ಮೆರವಣಿಗೆ ಮಾಡಿದ ಪತಿ – ರಾಜಸ್ಥಾನದಲ್ಲಿ ಮಹಿಳೆಯರ ಸುರಕ್ಷತೆ ನಿರ್ಲಕ್ಷ್ಯ ಎಂದು ನಡ್ಡಾ ಟೀಕೆ

    ಜೈಪುರ: ರಾಜಸ್ಥಾನದ (Rajasthan) ಪ್ರತಾಪ್‌ಗಡ ಜಿಲ್ಲೆಯಲ್ಲಿ ಬುಡಕಟ್ಟು ಸಮುದಾಯದ ಗರ್ಭಿಣಿಯ ಮೇಲೆ ಆಕೆಯ ಪತಿಯೇ ಹಲ್ಲೆ ನಡೆಸಿ, ಹಳ್ಳಿಯ ಉದ್ದಗಲಕ್ಕೂ ಬೆತ್ತಲೆ ಮೆರವಣಿಗೆ (Women Naked Parades) ನಡೆಸಿದ ಅಮಾನವೀಯ ಘಟನೆ ಗುರುವಾರ ನಡೆದಿದೆ. ಘಟನೆಯಿಂದ ರಾಜಕೀಯ ವಲಯದಲ್ಲೂ ತೀವ್ರ ಚರ್ಚೆಗಳು ಶುರುವಾಗಿದ್ದು, ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಮುಗಿಬಿದ್ದಿವೆ.

    ವಿವಾಹಿತ ಮಹಿಳೆಯು ಪರಪುರುಷನೊಂದಿಗೆ ಸಂಬಂಧ ಹೊಂದಿದ್ದಳು ಅವನೊಂದಿಗೆ ವಾಸವಿದ್ದಳು ಅನ್ನೋ ಕಾರಣಕ್ಕೆ ಕೆರಳಿದ್ದ ಪತಿ ಈ ಕೃತ್ಯ ಎಸಗಿದ್ದಾನೆ. ಈ ಘಟನೆಯ ಕ್ರೌರ್ಯದ ವಿಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ಪತಿಯ ಮನೆಯ ಹೊರಗೆ ತನ್ನ 21 ವರ್ಷದ ಗರ್ಭಿಣಿಯ ಬಟ್ಟೆ ಕಳಚುವುದು ಮತ್ತು ನಗ್ನ ಮೆರವಣಿಗೆ ನಡೆಸುವುದು ವಿಡಿಯೋದಲ್ಲಿ ಕಾಣಿಸಿದೆ. ಆಕೆ ಸಹಾಯಕ್ಕಾಗಿ ಅಂಗಲಾಚುತ್ತಿದ್ದರೂ, ಯಾರೂ ನೆರವಿಗೆ ಮುಂದಾಗಿಲ್ಲ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

    ಮದುವೆಯಾಗಿದ್ದರೂ ಬೇರೊಬ್ಬ ಪುರುಷನ ಜತೆ ವಾಸಿಸುತ್ತಿರುವುದರಿಂದ ಕೋಪಗೊಂಡಿದ್ದ ಗಂಡ ಹಾಗೂ ಆತನ ಮನೆಯವರು ಆಕೆಯನ್ನು ಅಪಹರಿಸಿ, ತಮ್ಮ ಗ್ರಾಮಕ್ಕೆ ಕರೆತಂದಿದ್ದರು. ಅಲ್ಲಿ ಆಕೆಯನ್ನು ಅಮಾನುಷವಾಗಿ ಥಳಿಸಿ, ಬೆತ್ತಲಾಗಿಸಿ, ಮೆರವಣಿಗೆ ಮಾಡಲಾಗಿದೆ ಎಂದು ರಾಜಸ್ಥಾನ ಪೊಲೀಸ್ ಮಹಾ ನಿರ್ದೇಶಕ (ಡಿಜಿಪಿ) ಉಮೇಶ್ ಮಿಶ್ರಾ ಹೇಳಿದ್ದಾರೆ. ಇದನ್ನೂ ಓದಿ: ಪತ್ನಿಯನ್ನು ಥಳಿಸಿ ಬೆತ್ತಲೆ ಮೆರವಣಿಗೆ ಮಾಡಿದ ಪತಿ!

    ಈ ಮಹಿಳೆ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದಳು ಎನ್ನಲಾಗಿದೆ. ಸಂತ್ರಸ್ತೆಯ ಗಂಡ ಕನಾ ಮೀನ, ನಾತು ಮೀನ ಹಾಗೂ ವಿಲಿಯಾ ಮೀನ ಎಂಬ ಇನ್ನಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಗ್ರಾಮಕ್ಕೆ ದೌಡಾಯಿಸಿದ ಪೊಲೀಸರು, ಆರೋಪಿ ಪತಿಯನ್ನ ಬಂಧಿಸಲು 6 ತಂಡಗಳನ್ನು ರಚಿಸಿದ್ದರು. ಮುಖ್ಯ ಆರೋಪಿಯಾದ ಮಹಿಳೆಯ ಗಂಡನನ್ನ ಹಿಡಿಯಲು ಬೆನ್ನಟ್ಟಿದ್ದ ಸಂದರ್ಭದಲ್ಲಿ ಆತ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದು, ಕಾಲಿಗೆ ಗುಂಡೇಟು ತಗುಲಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

    ಆಗಸ್ಟ್ 31ರ ಸಂಜೆ 5 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಮಹಿಳೆ ಹಾಗೂ ಕನಾ ಮೀನನಿಗೆ ಕಳೆದ ವರ್ಷ ಮದುವೆಯಾಗಿತ್ತು. ಪಕ್ಕದ ಮನೆಯಾತನ ಜತೆ ಆಕೆ ಪರಾರಿಯಾಗಿದ್ದಳು ಎಂದು ಆರೋಪಿಸಿ ಆಕೆಯ ಪತಿ ಮತ್ತು ಕುಟುಂಬದ ಇತರರು ಹಲ್ಲೆ ನಡೆಸಿದ್ದರು. ಬಳಿಕ ಹಳ್ಳಿಯ ತುಂಬಾ ಬೆತ್ತಲೆ ಮೆರವಣಿಗೆ ನಡೆಸಿದ್ದರು. ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳದಂತೆ ಪ್ರತಾಪ್‌ಗಡ ಪೊಲೀಸರು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಸಹೋದರಿಯರ ಮೇಲೆ 10 ಜನರಿಂದ ಸಾಮೂಹಿಕ ಅತ್ಯಾಚಾರ- ಆರೋಪಿಗಳು ಅರೆಸ್ಟ್

    ಈ ಘಟನೆಯನ್ನ ಸಂಪೂರ್ಣವಾಗಿ ಖಂಡಿಸಿರುವ ರಾಜಸ್ಥಾನ ಸಿಎಂ ಅಶೋಕ್‌ ಗೆಹ್ಲೋಟ್‌, ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಸುಸಂಸ್ಕೃತ ಸಮಾಜದಲ್ಲಿ ಇಂತಹ ಅಪರಾಧಿಗಳಿಗೆ ಜಾಗವಿಲ್ಲ. ಆದಷ್ಟು ಬೇಕ ಈ ಆರೋಪಿಗಳನ್ನ ಕಟೆಕಟೆಯಲ್ಲಿ ನಿಲ್ಲಿಸಿ, ತ್ವರಿತ ನ್ಯಾಯಾಲಯದಲ್ಲಿಯೇ ಶಿಕ್ಷೆ ವಿಧಿಸಲಾಗುವುದು ಎಂದು ಹೇಳಿದ್ದಾರೆ.

    ಇನ್ನೂ ರಾಜಸ್ಥಾನ ಸರ್ಕಾರದ ವಿರುದ್ಧ ಕಿಡಿ ಕಾರಿಸುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ರಾಜಸ್ಥಾನದಲ್ಲಿ ಆಡಳಿತ ಪಕ್ಷ ತಮ್ಮ ಪಕ್ಷದ ಒಳಜಗಳಗಳನ್ನ ಪರಿಹರಿಸುವಲ್ಲಿ ನಿರತವಾಗಿದೆ. ಜನರೇ ಸರ್ಕಾರಕ್ಕೆ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

    ಮುಖ್ಯಮಂತ್ರಿಗಳು ಬಣ ಜಗಳಗಳನ್ನ ಇತ್ಯರ್ಥಗೊಳಿಸುವಲ್ಲಿ ನಿರತರಾಗಿದ್ದಾರೆ. ಉಳಿದ ಸಮಯದಲ್ಲಿ ದೆಹಲಿಗೆ ಬಂದು ರಾಜವಂಶಸ್ಥರನ್ನು ಸಮಾಧಾನಪಡಿಸುತ್ತಿದ್ದಾರೆ. ಇದರಿಂದ ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆಗೆ ಸಂಪೂರ್ಣ ನಿರ್ಲಕ್ಷ್ಯ ವಹಿಸಲಾಗುತ್ತಿದೆ. ಪ್ರತಿದಿನ ಮಹಿಳೆಯರ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಜನರೇ ಸರ್ಕಾರಕ್ಕೆ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇನ್ನೊಬ್ಬನ ಮೇಲೆ ದ್ವೇಷ ತೀರಿಸಿಕೊಳ್ಳಲು ಆತ್ಮೀಯ ಸ್ನೇಹಿತನನ್ನೇ ಕೊಂದ ಕಿರಾತಕ!

    ಇನ್ನೊಬ್ಬನ ಮೇಲೆ ದ್ವೇಷ ತೀರಿಸಿಕೊಳ್ಳಲು ಆತ್ಮೀಯ ಸ್ನೇಹಿತನನ್ನೇ ಕೊಂದ ಕಿರಾತಕ!

    ಮೈಸೂರು: ಸ್ನೇಹಿತನನ್ನೇ ಕೊಲೆ (Murder) ಮಾಡಿ ತಾನು ದ್ವೇಷಿಸುತ್ತಿದ್ದ ವ್ಯಕ್ತಿಯ ಮೇಲೆ ಆರೋಪ ಬರುವಂತೆ ಸಂಚು ರೂಪಿಸಿದ್ದ ಪ್ರಕರಣ ಹೆಚ್‍ಡಿ.ಕೋಟೆಯ ನೇರಳೆಹುಂಡಿಯಲ್ಲಿ ನಡೆದಿದೆ.

    ಕೊಲೆ ಮಾಡಿ ತಾನು ದ್ವೇಷಿಸುತ್ತಿದ್ದ ವ್ಯಕ್ತಿಯ ಮೇಲೆ ಅನುಮಾನ ಬರುವಂತೆ ಪ್ಲಾನ್ ಮಾಡಿದ ಕಿರಾತಕ ದಿನೇಶ್ ಎಂಬಾತ ಪೊಲೀಸರ ಅತಿಥಿಯಾಗಿದ್ದಾನೆ. ಈ ಮೊದಲು ಗೃಹಿಣಿಗೆ ಮೆಸೇಜ್ ಮಾಡಿದ್ದಕ್ಕೆ ಯುವಕನ ಕೊಲೆ ನಡೆದಿದೆ ಎನ್ನಲಾಗಿತ್ತು. ಆದರೆ ಪೊಲೀಸರ (Police) ತನಿಖೆಯಿಂದ ಹತ್ಯೆಯ ಕಾರಣ ಬಯಲಾಗಿದೆ. ಇದನ್ನೂ ಓದಿ: ಪತ್ನಿಯನ್ನು ಥಳಿಸಿ ಬೆತ್ತಲೆ ಮೆರವಣಿಗೆ ಮಾಡಿದ ಪತಿ!

    ಗ್ರಾಮದ ಭಾನುಪ್ರಕಾಶ್ ಎಂಬ ಯುವಕನ ಕೊಲೆಯಾಗಿತ್ತು. ಯುವಕನ ಕೊಲೆ ಸಂಬಂಧ 6 ಮಂದಿ ವಶಕ್ಕೆ ಪಡೆಯಲಾಗಿತ್ತು. ಕೊಲೆಯಾದ ಭಾನುಪ್ರಕಾಶ್ ಈ ಹಿಂದೆ ತನ್ನ ಹೆಂಡತಿಗೆ ಮೆಸೇಜ್ ಮಾಡಿದ್ದ ಎಂದು ಅದೇ ಗ್ರಾಮದ ಎನ್.ಪ್ರಕಾಶ್ ಎಂಬಾತ ಗಲಾಟೆ ಮಾಡಿದ್ದ. ಪ್ರಕಾಶ್ ಮೇಲೆ ಆರೋಪಿ ಮೊದಲಿಂದಲೂ ದ್ವೇಷ ಇಟ್ಟುಕೊಂಡಿದ್ದ. ಈ ದ್ವೇಷ ತೀರಿಸಿಕೊಳ್ಳಲು ಭಾನುಪ್ರಕಾಶ್‍ನನ್ನು ತಾನೇ ಕೊಲೆ ಮಾಡಿ ಆ ಕೊಲೆಯನ್ನು ಪ್ರಕಾಶ್ ಮಾಡಿದ್ದಾನೆ. ಕೊಲೆಗೆ ಪ್ರಕಾಶ್ ಹೆಂಡತಿಗೆ ಭಾನುಪ್ರಕಾಶ್ ಮೆಸೇಜ್ ಮಾಡಿದ್ದೇ ಕಾರಣ ಎಂದು ಬಿಂಬಿಸಿದ್ದ.

    ಆದರೆ ವಿಚಾರಣೆ ವೇಳೆ ಭಾನುಪ್ರಕಾಶ್ ಕೊಲೆ ಮಾಡಿದ್ದು ಆತನ ಸ್ನೇಹಿತ ದಿನೇಶ್ ಎಂಬುದು ಬಹಿರಂಗವಾಗಿದೆ. ದಿನೇಶ್ ತನ್ನ ಗೆಳೆಯ ಭೀಮ ಎಂಬಾತನ ಜೊತೆ ಸೇರಿ ಭಾನುಪ್ರಕಾಶ್‍ನನ್ನು ಕತ್ತು ಸೀಳಿ ಕೊಲೆ ಮಾಡಿದ್ದ. ಮೊಬೈಲ್ ಟವರ್ ಆಧಾರದ ಮೇಲೆ ಕೊಲೆ ಆರೋಪಿ ಪತ್ತೆಯಾಗಿದ್ದಾನೆ. ಕೊಲೆಗೆ ಆರೋಪಿ ದಿನೇಶ್ ಹಾಗೂ ಎನ್.ಪ್ರಕಾಶ್ ನಡುವಿನ ಹಳೆ ದ್ವೇಷವೇ ಕಾರಣ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಲವ್ ಫೈಲ್ಯೂರ್‌ನಿಂದ ಆತ್ಮಹತ್ಯೆಗೆ ಶರಣಾದ್ರಾ ಪೊಲೀಸ್ ಪೇದೆ?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]