Tag: crime

  • ಕೊಲೆಗೈದು ಗೋಣಿ ಚೀಲದಲ್ಲಿ ಶವ ಹಾಕಿ ಎಸೆದು ಹೋಗಿದ್ದ ಆರೋಪಿಗಳು ಅರೆಸ್ಟ್

    ಕೊಲೆಗೈದು ಗೋಣಿ ಚೀಲದಲ್ಲಿ ಶವ ಹಾಕಿ ಎಸೆದು ಹೋಗಿದ್ದ ಆರೋಪಿಗಳು ಅರೆಸ್ಟ್

    ಕಾರವಾರ: ಹಣಕ್ಕಾಗಿ ವ್ಯಕ್ತಿಯೊಬ್ಬನನ್ನು ಕೊಲೆಗೈದು ಶವವನ್ನು ಗೋಣಿ ಚೀಲದಲ್ಲಿ ತುಂಬಿ ಎಸೆದು ಹೋಗಿದ್ದ ಮೂವರು ಆರೋಪಿಗಳನ್ನು ಬನವಾಸಿ (Banavas) ಪೊಲೀಸರು (Police) ಬಂಧಿಸಿದ್ದಾರೆ. ಆರೋಪಿಗಳು ಹಣಕ್ಕಾಗಿ ಕೊಲೆಗೈದು ಬಳಿಕ ಕೊರ್ಲಕಟ್ಟಾ – ವಡ್ಡಿನಕೊಪ್ಪ ರಸ್ತೆಯ ಅರಣ್ಯದಲ್ಲಿ ಶವವನ್ನು ಎಸೆದು ಹೋಗಿದ್ದರು.

    ಬಂಧಿತ ಆರೋಪಿಗಳನ್ನು ಹಾನಗಲ್‍ನ (Hangal) ಗೆಜ್ಜೆಹಳ್ಳಿಯ ಕಿರಣ್ ಸುರಳೇಶ್ವರ (23), ನಿರಂಜನ ಗೋವಿಂದಪ್ಪ ತಳವಾರ (19) ಹಾಗೂ ಗುಡ್ಡಪ್ಪ ಕೊಟಪ್ಪ ತಿಳುವಳ್ಳಿ (19) ಎಂದು ಗುರುತಿಸಲಾಗಿದೆ. ವಿಚಾರಣೆ ವೇಳೆ ಹಣಕ್ಕಾಗಿ ಕೊಲೆ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ: ಚೈತ್ರಾ ಡೀಲ್ ಕೇಸ್; ನನ್ನ ಹೆಸರು ಬಂದಿರೋದು ಬೇಸರವಾಗಿದೆ- ವಜ್ರದೇಹಿ ಮಠದ ಸ್ವಾಮೀಜಿ

    ಆರೋಪಿಗಳು ಅದೇ ಗ್ರಾಮದ ಅಶೋಕ್ ಉಪ್ಪಾರ್ (55) ಎಂಬಾತನನ್ನು ಮೂರು ದಿನಗಳ ಹಿಂದೆ ಕೊಲೆ ಮಾಡಿದ್ದರು. ಬಳಿಕ ಗುರುತು ಸಿಗದಂತೆ ಶವವನ್ನು ಗೋಣಿ ಚೀಲದಲ್ಲಿ ತುಂಬಿ ಅರಣ್ಯ ಪ್ರದೇಶದಲ್ಲಿ ಎಸೆದು ಹೋಗಿದ್ದರು. ಆರೋಪಿಗಳಿಂದ ಸ್ವಿಪ್ಟ್, ಕ್ರೇಟಾ ಕಾರ್ ಹಾಗೂ ಒಂದು ಬೈಕ್‍ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಶಿರಸಿ ಡಿಎಸ್‍ಪಿ ಕೆ.ಎಲ್.ಗಣೇಶ ಮಾರ್ಗದರ್ಶನದಲ್ಲಿ ಸಿ.ಪಿ.ಐ ರಾಮಚಂದ್ರ ನಾಯಕ್, ಬನವಾಸಿ ಠಾಣೆ ಪಿ.ಎಸ್.ಐ ಚಂದ್ರಕಲಾ ಪತ್ತಾರ, ಸುನೀಲ್ ಕುಮಾರ್ ಬಿ.ವೈ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಇದನ್ನೂ ಓದಿ: 3 ದಿನಗಳ ಆಸ್ಪತ್ರೆ ನಾಟಕ ಬಂದ್ – ಆಸ್ಪತ್ರೆಯಿಂದ ಚೈತ್ರಾ ಕುಂದಾಪುರ ಡಿಸ್ಚಾರ್ಜ್‌

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಎಗ್ ರೈಸ್ ತಿಂದು ಹಣ ಕೇಳಿದ್ದಕ್ಕೆ ಶುರುವಾದ ಜಗಳ – ಚಾಕುವಿನಿಂದ ಇರಿದು ಅಂಗಡಿ ಮಾಲೀಕನ ಕೊಲೆ

    ಎಗ್ ರೈಸ್ ತಿಂದು ಹಣ ಕೇಳಿದ್ದಕ್ಕೆ ಶುರುವಾದ ಜಗಳ – ಚಾಕುವಿನಿಂದ ಇರಿದು ಅಂಗಡಿ ಮಾಲೀಕನ ಕೊಲೆ

    ಬಾಗಲಕೋಟೆ: ಕುಡಿದ ನಶೆಯಲ್ಲಿ ಎಗ್ ರೈಸ್ (Egg Rice) ತಿಂದು ಹಣ ಕೇಳಿದ್ದಕ್ಕೆ ಜಗಳ ಶುರುವಾಗಿ ಎಗ್‌ರೈಸ್ ಅಂಗಡಿ ಮಾಲೀಕನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಬಾಗಲಕೋಟೆ (Bagalkot) ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಢ ಪಟ್ಟಣದಲ್ಲಿನ ಬಸ್ ನಿಲ್ದಾಣದ ಬಳಿ ರಾತ್ರಿ ಘಟನೆ ನಡೆದಿದೆ. ಗೈಬುಸಾಬ್ ಮುಲ್ಲಾ (29) ಕೊಲೆಯಾದ ವ್ಯಕ್ತಿಯಾದರೆ ಮಸ್ತಫಾ ಜಂಗಿ (22) ಕೊಲೆ ಮಾಡಿದ ಆರೋಪಿ. ಇದನ್ನೂ ಓದಿ: ಚಲಿಸುತ್ತಿದ್ದ ಕಾರಿನ ಟೈಯರ್ ಬ್ಲಾಸ್ಟ್ – ಅಪಘಾತದಲ್ಲಿ ಮೂವರು ಸಾವು

    ಮುಸ್ತಫಾ ಕುಡಿದ ನಶೆಯಲ್ಲಿ ಗೈಬುಸಾಬ್ ಮುಲ್ಲಾ ಅಂಗಡಿಗೆ ಬಂದು ಎಗ್ ರೈಸ್ ತಿಂದಿದ್ದ. ಬಳಿಕ ಗೈಬುಸಾಬ್ ಹಣ ಕೇಳಿದ್ದಕ್ಕೆ ಆತ ಕೊಡಲ್ಲ ಎಂದು ವಾದಿಸಿದ್ದ. ಇದಕ್ಕೆ ಇಬ್ಬರ ಮಧ್ಯೆ ಜಗಳ ಶುರುವಾಗಿ ಮುಸ್ತಫಾ ಚಾಕುವಿನಿಂದ ಇರಿದು ಗೈಬುಸಾಬ್‌ನ ಕೊಲೆ ಮಾಡಿದ್ದಾನೆ. ಇದನ್ನೂ ಓದಿ: ಮಹಿಳಾ ಸಂಘಟನೆಯಲ್ಲಿ ಹೆಂಡತಿ ಬ್ಯುಸಿ – ಬೇಸತ್ತ ಪತಿಯಿಂದ ಪತ್ನಿ, ಅತ್ತೆಯ ಭೀಕರ ಹತ್ಯೆ

    ಈ ಸಂಬಂಧ ಅಮೀನಗಢ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಹಿಳಾ ಸಂಘಟನೆಯಲ್ಲಿ ಹೆಂಡತಿ ಬ್ಯುಸಿ – ಬೇಸತ್ತ ಪತಿಯಿಂದ ಪತ್ನಿ, ಅತ್ತೆಯ ಭೀಕರ ಹತ್ಯೆ

    ಮಹಿಳಾ ಸಂಘಟನೆಯಲ್ಲಿ ಹೆಂಡತಿ ಬ್ಯುಸಿ – ಬೇಸತ್ತ ಪತಿಯಿಂದ ಪತ್ನಿ, ಅತ್ತೆಯ ಭೀಕರ ಹತ್ಯೆ

    ವಿಜಯಪುರ: ಸದಾ ಮಹಿಳಾ ಸಂಘಟನೆ ಕೆಲಸದಲ್ಲಿ ನಿರತಳಾಗಿ ಮನೆ ಹಾಗೂ ಮಕ್ಕಳನ್ನು ನಿರ್ಲಕ್ಷಿಸಿದ್ದ ಪತ್ನಿ ಹಾಗೂ ಅತ್ತೆಯನ್ನು ವ್ಯಕ್ತಿಯೋರ್ವ ಕೊಲೆಗೈದ (Murder) ಪ್ರಕರಣ ನಗರದ (Vijayapura) ನವಭಾಗ್ ಪ್ರದೇಶದಲ್ಲಿ ನಡೆದಿದೆ.

    ರೂಪಾ ಮೇತ್ರಿ (32) ಹಾಗೂ ಆಕೆಯ ತಾಯಿ ಕಲ್ಲವ್ವ (55) ಕೊಲೆಯಾದ ಮಹಿಳೆಯರು. ಕೊಲೆಗೈದ ಆರೋಪಿಯನ್ನು ಮಲ್ಲಿಕಾರ್ಜುನ ಮೇತ್ರಿ ಎಂದು ಗುರುತಿಸಲಾಗಿದೆ. ಆರೋಪಿ ಪತ್ನಿ, ಮೂವರು ಮಕ್ಕಳು ಹಾಗೂ ಅತ್ತೆಯೊಂದಿಗೆ ನವಭಾಗ್‍ನ ಭಗವಾನ್ ಎಂಬವರಿಗೆ ಸೇರಿದ ಮನೆಯಲ್ಲಿ ಆರು ತಿಂಗಳಿಂದ ಬಾಡಿಗೆಗೆ ಇದ್ದರು. ಹತ್ಯೆಯಾದ ರೂಪಾ ಹೆಚ್ಚಿನ ಸಮಯ ಮಹಿಳಾ ಸಂಘಟನೆ ಒಂದರ ಕೆಲಸದ ಮೇಲೆ ಮನೆಯಿಂದ ಹೊರಗೆ ಇರುತ್ತಿದ್ದಳು. ಇದೇ ಕಾರಣಕ್ಕೆ ಅವರಿಬ್ಬರ ನಡುವೆ ಆಗಾಗ ಜಗಳ ಸಹ ನಡೆಯುತ್ತಿತ್ತು ಎನ್ನಲಾಗಿದೆ. ಇದನ್ನೂ ಓದಿ: ನಿರ್ಮಾಣ ಹಂತದ ಕಟ್ಟಡದಿಂದ ಕಬ್ಬಿಣದ ಸರಳುಗಳ ಮೇಲೆ ಬಿದ್ದ ಯುವಕ!

    ಅಲ್ಲದೇ ಪತ್ನಿ, ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ, ಮನೆಯಲ್ಲಿ ಕೆಲಸ ಮಾಡುತ್ತಿರಲಿಲ್ಲ ಎಂದು ಆರೋಪಿ ಮಲ್ಲಿಕಾರ್ಜುನ ಹೇಳಿಕೊಂಡಿದ್ದಾನೆ. ಇದೇ ವಿಚಾರಕ್ಕೆ ಇಬ್ಬರು ಮಲಗಿದ್ದ ವೇಳೆ ಕಟ್ಟಿಗೆಯಿಂದ ತಲೆಗೆ ಹೊಡೆದು ಕೊಲೆಗೈದಿದ್ದಾನೆ. ಬಳಿಕ ಗಾಂಧಿಚೌಕ್ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.

    ಈ ಸಂಬಂಧ ಗಾಂಧಿಚೌಕ್ ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ವಂಚನೆ ಕೇಸಲ್ಲಿ ಚೈತ್ರಾ ಲಾಕ್; ಹರಕೆ ಈಡೇರಿತು ಅಂತ 101 ಈಡುಗಾಯಿ ಹೊಡೆದ ಮಲೆನಾಡಿಗರು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವ್ಯಸನ ಮುಕ್ತನಾಗಲು ಬಂದು ಲಕ್ಷಗಟ್ಟಲೆ ಹಣ ಎಗರಿಸಿದ ಭೂಪ!

    ವ್ಯಸನ ಮುಕ್ತನಾಗಲು ಬಂದು ಲಕ್ಷಗಟ್ಟಲೆ ಹಣ ಎಗರಿಸಿದ ಭೂಪ!

    ಮೈಸೂರು: ಮದ್ಯ ವ್ಯಸನದಿಂದ ಮುಕ್ತನಾಗಲು ಬಂದು 37.90 ಲಕ್ಷ ರೂ. ವಂಚಿಸಿರುವ ಪ್ರಕರಣ ಮೈಸೂರಿನಲ್ಲಿ (Mysuru) ನಡೆದಿದೆ. ವ್ಯಸನ ಮುಕ್ತ ಕೇಂದ್ರದ ಮಾಲೀಕರ ಅಕೌಂಟ್ ಹ್ಯಾಕ್ ಮಾಡಿ ಹಣ ಎಗರಿಸಿರುವುದು ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ.

    ಲಕ್ಷ ಲಕ್ಷ ವಂಚಿಸಿರುವ ಆರೋಪಿಯನ್ನು ಮಂಡ್ಯ ಮೂಲದ ವಿಶಾಲ್ ರಾಜ್ ಎಂದು ಗುರುತಿಸಲಾಗಿದೆ. ಆರೋಪಿ ಜೂ.17 ರಿಂದ ಜು.24ರ ವರೆಗೆ ನಿರಂತರವಾಗಿ 37.90 ಲಕ್ಷ ರೂ. ಹಣವನ್ನು (Money) ವರ್ಗಾವಣೆ ಮಾಡಿದ್ದಾನೆ. ಅನುಮಾನ ಬಂದು ಅಕೌಂಟ್ ಪರಿಶೀಲಿಸಿದ ವೇಳೆ ವಂಚನೆ ಬೆಳಕಿಗೆ ಬಂದಿದೆ. ಸಂಸ್ಥೆಯ ಹಳೆ ಅಕೌಂಟೆಂಟ್ ಗೋಕುಲ್ ರಾಜ್‍ನಿಂದ ನೆರವು ಪಡೆದು ವಂಚನೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ನಡು ರಸ್ತೆಯಲ್ಲೇ ಪತ್ನಿಯನ್ನು ಕೊಂದು ಪೊಲೀಸರಿಗೆ ಶರಣಾದ ಪತಿ

    ಆತ 2022 ರಲ್ಲಿ ಮದ್ಯ ವ್ಯಸನದಿಂದ ಮುಕ್ತನಾಗಲು ಮೈಸೂರಿನ ವ್ಯಸನ ಮುಕ್ತ ಕೇಂದ್ರಕ್ಕೆ ಬಂದಿದ್ದ. ಬಳಿಕ ಆತ ಮದ್ಯವನ್ನು ತ್ಯಜಿಸಿದ್ದ. ಇದಾದ ನಂತರ ಅಲ್ಲಿಯೇ ಕೆಲಸಕ್ಕೆ ಸೇರಿಕೊಂಡಿದ್ದ. ಆತನನ್ನು ಅಕೌಂಟೆಟ್ ಆಗಿ ನೇಮಿಸಲಾಗಿತ್ತು ಎಂದು ತಿಳಿದು ಬಂದಿದೆ.

    ಈ ಸಂಬಂಧ ಹೆಬ್ಬಾಳು ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ವಿಶಾಲ್ ರಾಜ್ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಇದನ್ನೂ ಓದಿ: ಪಿಎಸ್‍ಐ ಪುತ್ರನ ವ್ಹೀಲಿಂಗ್ ಪುಂಡಾಟಕ್ಕೆ ವೃದ್ಧ ಬಲಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪಿಎಸ್‍ಐ ಪುತ್ರನ ವ್ಹೀಲಿಂಗ್ ಪುಂಡಾಟಕ್ಕೆ ವೃದ್ಧ ಬಲಿ

    ಪಿಎಸ್‍ಐ ಪುತ್ರನ ವ್ಹೀಲಿಂಗ್ ಪುಂಡಾಟಕ್ಕೆ ವೃದ್ಧ ಬಲಿ

    ಮೈಸೂರು: ಪಿಎಸ್‍ಐ (PSI) ಪುತ್ರನೊಬ್ಬನ ವ್ಹೀಲಿಂಗ್ ಪುಂಡಾಟಕ್ಕೆ ವೃದ್ಧನೊಬ್ಬ ಬಲಿಯಾದ ಘಟನೆ ನಂಜನಗೂಡು (Nanjangud) ಪೊಲೀಸ್ (Police) ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಕರಣದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಬಂಧಿತ ಆರೋಪಿ ಮಹಿಳಾ ಪಿಎಸ್‍ಐ ಪುತ್ರ ಸೈಯದ್ ಐಮಾನ್ ಎಂದು ತಿಳಿದು ಬಂದಿದೆ. ಆರೋಪಿ ಬೈಕ್‍ನಲ್ಲಿ (Bike) ವ್ಹೀಲಿಂಗ್ ಮಾಡುತ್ತಾ ರಸ್ತೆಯಲ್ಲಿ ಹೋಗುತ್ತಿದ್ದ ವೃದ್ಧನಿಗೆ ಡಿಕ್ಕಿ ಹೊಡೆಸಿದ್ದ. ಪರಿಣಾಮ ವೃದ್ಧ ಗುರುಸ್ವಾಮಿ ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದರು. ಬಳಿಕ ಸ್ಥಳೀಯರು ಗಾಯಗೊಂಡಿದ್ದ ಆರೋಪಿ ಹಾಗೂ ವೃದ್ಧನ ಮೃತ ದೇಹವನ್ನು ಕೆಆರ್ ಆಸ್ಪತ್ರೆಗೆ ಸಾಗಿಸಿದ್ದರು. ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆರೋಪಿ ಸೈಯದ್ ಐಮಾನ್‍ನನ್ನು ನಂಜನಗೂಡು ಗ್ರಾಮಾಂತರ ಠಾಣೆಯ ಪೊಲೀಸರು ತಡರಾತ್ರಿ ಬಂಧಿಸಿದ್ದಾರೆ. ಇದನ್ನೂ ಓದಿ: ಮಹಿಳಾ ಪಿಎಸ್‍ಐ ಪುತ್ರನ ವ್ಹೀಲಿಂಗ್ ಪುಂಡಾಟ – ಪೊಲೀಸರ ಅತಿಥಿಯಾದ ಯುವಕ

    ಈ ಸಂಬಂಧ ಮೃತ ಗುರುಸ್ವಾಮಿ ಪುತ್ರ ಮಹದೇವಸ್ವಾಮಿ ದೂರು ದಾಖಲಿಸಿದ್ದಾರೆ. ದೂರಿನಲ್ಲಿ ಅಪಾಯಕಾರಿಯಾಗಿ ಬೈಕ್ ಚಲಾಯಿಸಿ ಡಿಕ್ಕಿ ಹೊಡೆಸಿ ತಂದೆಯ ಸಾವಿಗೆ ಆರೋಪಿ ಕಾರಣನಾಗಿದ್ದಾನೆ ಎಂದು ಉಲ್ಲೇಖಿಸಲಾಗಿದೆ. ದೂರಿನ ಅನ್ವಯ ಪೊಲೀಸರು ಆರೋಪಿಯ ವಿಚಾರಣೆಗೆ ಸಿದ್ಧತೆ ನಡೆಸಿದ್ದಾರೆ. ಪ್ರಕರಣದಲ್ಲಿ ಬಳಕೆಯಾದ ನಂಬರ್ ಇಲ್ಲದ ಬೈಕ್ ಒಂದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಪಿಎಸ್‍ಐ ಯಾಸ್ಮಿನ್ ತಾಜ್ ಅವರ ಪುತ್ರ ಸೈಯ್ಯದ್ ಐಮಾನ್‍ನನ್ನು ಈ ಹಿಂದೆ ಕೂಡ ಅಪಾಯಕಾರಿ ವ್ಹೀಲಿಂಗ್ ವಿಚಾರಕ್ಕೆ ಪೊಲೀಸರು ವಶಕ್ಕೆ ಪಡೆದು ದಂಡ ವಿಧಿಸಿ ತಿಳುವಳಿಕೆ ಹೇಳಿ ಕಳುಹಿಸಿದ್ದರು. ಇದನ್ನೂ ಓದಿ: ನಡು ರಸ್ತೆಯಲ್ಲೇ ಪತ್ನಿಯನ್ನು ಕೊಂದು ಪೊಲೀಸರಿಗೆ ಶರಣಾದ ಪತಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಡು ರಸ್ತೆಯಲ್ಲೇ ಪತ್ನಿಯನ್ನು ಕೊಂದು ಪೊಲೀಸರಿಗೆ ಶರಣಾದ ಪತಿ

    ನಡು ರಸ್ತೆಯಲ್ಲೇ ಪತ್ನಿಯನ್ನು ಕೊಂದು ಪೊಲೀಸರಿಗೆ ಶರಣಾದ ಪತಿ

    ಚಿಕ್ಕಬಳ್ಳಾಪುರ: ವ್ಯಕ್ತಿಯೊಬ್ಬ ನಡು ರಸ್ತೆಯಲ್ಲೇ ಪತ್ನಿಗೆ (Wife) ಚಾಕು ಇರಿದು ಹತ್ಯೆಗೈದು (Murder) ಬಳಿಕ ಪೊಲೀಸರಿಗೆ ಶರಣಾದ ಘಟನೆ ಗೌರಿಬಿದನೂರಿನ (Gauribidanur) ಅಲಕಾಪುರದಲ್ಲಿ ನಡೆದಿದೆ.

    ಶಹನಾಜ್ ಕೊಲೆಯಾದ ದುರ್ದೈವಿ, ಕೊಲೆಗೈದ ಆರೋಪಿಯನ್ನು ಅಂಜುಂ ಖಾನ್ ಎಂದು ಗುರುತಿಸಲಾಗಿದೆ. ಆರೋಪಿ ಲಾರಿ ಚಾಲಕನಾಗಿದ್ದು ಆತ ಮನೆಯಲ್ಲಿ ಇಲ್ಲದಿರುವಾಗ ಪತ್ನಿ ಬೇರೆ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಳು ಎಂದು ಆಗಾಗ ಗಲಾಟೆ ಮಾಡುತ್ತಿದ್ದ ಎನ್ನಲಾಗಿದೆ. ಇದೇ ಕಾರಣಕ್ಕೆ ಸಂಚು ರೂಪಿಸಿ ಕೊಲೆಗೈದಿದ್ದಾನೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಚಾಟಿಂಗ್ ವಿಚಾರದಲ್ಲಿ ಗಲಾಟೆ – ಯುವತಿ ಅನುಮಾನಾಸ್ಪದ ಸಾವು

    ಆರೋಪಿ ಪತ್ನಿಯನ್ನು ಗ್ರಾಮದ ಹೊರ ವಲಯಕ್ಕೆ ಕರೆದೊಯ್ದು ಚಾಕು ಇರಿದು ಹತ್ಯೆ ಮಾಡಿದ್ದಾನೆ. ಬಳಿಕ ಮೃತ ದೇಹವನ್ನು ನಡು ರಸ್ತೆಯಲ್ಲೇ ಬಿಟ್ಟು ಗೌರಿಬಿದನೂರು ಗ್ರಾಮಾಂತರ ಪೊಲೀಸ್ (Police) ಠಾಣೆಗೆ ಬಂದು ಶರಣಾಗಿದ್ದಾನೆ. ವಿಚಾರಣೆ ವೇಳೆ ಪೊಲೀಸರ ಬಳಿ ಪತ್ನಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಕೊಲೆಗೈದಿರುವುದಾಗಿ ಆರೋಪಿ ತಿಳಿಸಿದ್ದಾನೆ.

    ಘಟನೆ ಮಂಚೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಗೌರಿಬಿದನೂರು ಪೊಲೀಸರು ಆ ಠಾಣೆ ಪೊಲೀಸರಿಗೆ ಆರೋಪಿಯನ್ನು ಒಪ್ಪಿಸಿದ್ದಾರೆ. ಈ ಸಂಬಂಧ ಮಂಚೇನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬ್ರೆಜಿಲ್‍ನಲ್ಲಿ ವಿಮಾನ ಪತನ – 14 ಮಂದಿ ದುರ್ಮರಣ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚಾಟಿಂಗ್ ವಿಚಾರದಲ್ಲಿ ಗಲಾಟೆ – ಯುವತಿ ಅನುಮಾನಾಸ್ಪದ ಸಾವು

    ಚಾಟಿಂಗ್ ವಿಚಾರದಲ್ಲಿ ಗಲಾಟೆ – ಯುವತಿ ಅನುಮಾನಾಸ್ಪದ ಸಾವು

    ಬಾಗಲಕೋಟೆ: ಯುತಿಯೊಬ್ಬಳ ಮೃತದೇಹ ತಾಲೂಕಿನ ಶಿಗಿಕೇರಿ ಕ್ರಾಸ್‍ನ ಸೇತುವೆ ಬಳಿಯ ಪೊದೆಯಲ್ಲಿ ಸಿಕ್ಕಿದೆ. ಅನುಮಾನಾಸ್ಪದವಾಗಿ ಮೃತದೇಹ ಸಿಕ್ಕಿದ್ದು, ಯುವತಿಯ ಸಾವು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬ ಅನುಮಾನಕ್ಕೆ ಕಾರಣವಾಗಿದೆ.

    ಮೃತ ಯುವತಿಯನ್ನು ಇಳಕಲ್ಲ್‌ (Ilkal) ಮೂಲದ ಸುಮನ್ ಮನೋಹರ್ ಪತ್ತಾರ (22) ಎಂದು ಗುರುತಿಸಲಾಗಿದೆ. ಆಕೆ ನಗರದ ಹಾಸ್ಟೆಲ್‍ನಲ್ಲಿ ಇದ್ದುಕೊಂಡು 3ನೇ ವರ್ಷದ ಫಿಜಿಯೋಥೆರಪಿ ವ್ಯಾಸಂಗ ಮಾಡುತ್ತಿದ್ದಳು. ಎರಡು ದಿನಗಳ ಹಿಂದೆ ಹಾಸ್ಟೆಲ್‍ನಿಂದ ಹೊರಗೆ ಹೋಗಿದ್ದವಳು ವಾಪಸ್ ಆಗಿರಲಿಲ್ಲ ಎಂದು ತಿಳಿದು ಬಂದಿದೆ. ಬಳಿಕ ಆಕೆಯ ಪೋಷಕರು ಈ ಬಗ್ಗೆ ಬಾಗಲಕೋಟೆ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದನ್ನೂ ಓದಿ: ಚೈತ್ರಾ ಕೇಸ್‌ಗೂ, ನನಗೂ ಸಂಬಂಧವೇ ಇಲ್ಲ- ವಿಚಾರಣೆಗೆ ಸಿದ್ಧ ಅಂದ್ರು ಸುನಿಲ್ ಕುಮಾರ್

    ಇನ್ನೂ ಮೃತ ಸುಮನ್ ಸ್ನೇಹಿತೆಯ ಪ್ರಿಯಕರನೊಂದಿಗೆ ಚಾಟಿಂಗ್ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ. ಈ ವಿಷಯ ಸ್ನೇಹಿತೆಗೆ ಗೊತ್ತಾಗಿ ಇಬ್ಬರ ನಡುವೆ ಗಲಾಟೆಯಾಗಿತ್ತು ಎನ್ನಲಾಗಿದೆ.

    ಈ ಸಂಬಂಧ ಬಾಗಲಕೋಟೆ (Bagalkote) ಗ್ರಾಮೀಣ ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರಿನ ಅನ್ವಯ ಪ್ರಕರಣದ ಸೂಕ್ತ ತನಿಖೆ ನಡೆಸಲಾಗುವುದು ಎಂದು ಎಸ್ಪಿ ಅಮರನಾಥ್ ರೆಡ್ಡಿ ತಿಳಿಸಿದ್ದಾರೆ. ಇದನ್ನೂ ಓದಿ: ಬ್ರೆಜಿಲ್‍ನಲ್ಲಿ ವಿಮಾನ ಪತನ – 14 ಮಂದಿ ದುರ್ಮರಣ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹಣಕ್ಕಾಗಿ ಗರ್ಭಿಣಿ ಪತ್ನಿಯ ಕತ್ತನ್ನು ಬ್ಲೇಡ್‍ನಿಂದ ಕೂಯ್ದು ಕೊಲೆಗೈದ ಪತಿ

    ಹಣಕ್ಕಾಗಿ ಗರ್ಭಿಣಿ ಪತ್ನಿಯ ಕತ್ತನ್ನು ಬ್ಲೇಡ್‍ನಿಂದ ಕೂಯ್ದು ಕೊಲೆಗೈದ ಪತಿ

    ಮೈಸೂರು: ಹಣಕ್ಕಾಗಿ (Money) ಪೀಡಿಸಿ ಗರ್ಭಿಣಿ ಪತ್ನಿಯ ಕತ್ತನ್ನು ಬ್ಲೇಡ್‍ನಿಂದ ಕೂಯ್ದು ಕೊಲೆಗೈದ ಪ್ರಕರಣ ನಂಜನಗೂಡು (Nanjangud) ಸಮೀಪದ ಚಾಮಲಾಪುರ ಹುಂಡಿಯಲ್ಲಿ ನಡೆದಿದೆ.

    ಹತ್ಯೆಗೀಡಾದ ಮಹಿಳೆಯನ್ನು ಶೋಭಾ (26) ಎಂದು ಗುರುತಿಸಲಾಗಿದೆ. ಆಕೆಯ ಪತಿ ಮಂಜುನಾಥ್ (27) ಕೊಲೆಗೈದ ಆರೋಪಿಯಾಗಿದ್ದಾನೆ. ಆರೋಪಿ ಕುಡಿದು ಬಂದು ಹಣಕ್ಕಾಗಿ ಪೀಡಿಸಿದ್ದಾನೆ. ಬಳಿಕ ಮಹಿಳೆಯ ಕತ್ತನ್ನು ಸೀಳಿ ಕೊಲೆಗೈದಿದ್ದಾನೆ ಎಂದು ಆರೋಪಿಸಲಾಗಿದೆ. ಆತನನ್ನು ಪೊಲೀಸರು (Police) ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಹೆಂಡ್ತಿ ಕಾಟ- ಅಣ್ಣನಿಗೆ ಆಡಿಯೋ ಮೆಸೇಜ್ ಮಾಡಿ Metro ಎಂಜಿನಿಯರ್ ಸೂಸೈಡ್

    8 ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿ ಇಬ್ಬರೂ ಮದುವೆಯಾಗಿದ್ದರು. ದಂಪತಿಗೆ ಐದು ವರ್ಷದ ಗಂಡು ಮಗುವಿದೆ. ಶೋಭಾ ತುಂಬು ಗರ್ಭಿಣಿಯಾದ ಕಾರಣ ತವರು ಮನೆಗೆ ಹೋಗಿದ್ದರು. ಈ ವೇಳೆ ತವರು ಮನೆಯಿಂದ ಹಣ ತರುವಂತೆ ಆರೋಪಿ ಆಗಾಗ ಹೆಂಡತಿ ಜೊತೆ ಜಗಳ ಮಾಡುತ್ತಿದ್ದ. ಅಲ್ಲದೇ ಹೆರಿಗೆಯ ಆರೈಕೆಗಾಗಿ ತವರು ಮನೆಗೆ ಬಂದಿದ್ದ ಪತ್ನಿ ಮನೆಗೆ ಬರುತ್ತಿಲ್ಲವೆಂದು ಜಗಳ ತೆಗೆದು ಬ್ಲೇಡ್‍ನಿಂದ ಆಕೆಯ ಕುತ್ತಿಗೆ ಕೂಯ್ದಿದ್ದಾನೆ.

    ಕೂಡಲೇ ಶೋಭಾರನ್ನ ನಂಜನಗೂಡಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಆಕೆ ಮೃತಪಟ್ಟಿದ್ದಾಳೆ.

    ಈ ಸಂಬಂಧ ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಚೈತ್ರಾ ಕುಂದಾಪುರ ಡೀಲ್‌ ಪ್ರಕರಣಕ್ಕೆ ಟ್ವಿಸ್ಟ್‌ – ಸಲೂನ್‌ ಮಾಲೀಕನಿಗೆ ಬೆದರಿಕೆ ಕರೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪ್ರೇಮಿಗಳಿಗೆ ರೂಮ್ ಕೊಟ್ಟು ಖಾಸಗಿ ವೀಡಿಯೋ ಚಿತ್ರೀಕರಿಸಿ, ಬ್ಲಾಕ್‍ಮೇಲ್ – ಇಬ್ಬರು ಅರೆಸ್ಟ್

    ಪ್ರೇಮಿಗಳಿಗೆ ರೂಮ್ ಕೊಟ್ಟು ಖಾಸಗಿ ವೀಡಿಯೋ ಚಿತ್ರೀಕರಿಸಿ, ಬ್ಲಾಕ್‍ಮೇಲ್ – ಇಬ್ಬರು ಅರೆಸ್ಟ್

    ಬೆಂಗಳೂರು: ಪ್ರೇಮಿಗಳ ಖಾಸಗಿ ವೀಡಿಯೋ ಚಿತ್ರೀಕರಿಸಿ ಯುವತಿಗೆ ಬ್ಲಾಕ್‍ಮೇಲ್ (Blackmail) ಮಾಡಿ 1 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ಇಬ್ಬರನ್ನು ಪೊಲೀಸರು (Police) ಬಂಧಿಸಿದ್ದಾರೆ.

    ಬಂಧಿತ ಆರೋಪಿಗಳನ್ನು ನಯನಾ ಹಾಗೂ ಕಿರಣ್ ಎಂದು ಗುರುತಿಸಲಾಗಿದೆ. ಆರೋಪಿಗಳು ಕೆಂಗೇರಿ (Kengeri) ಮುಖ್ಯರಸ್ತೆಯಲ್ಲಿರುವ ಕೆಂಚನಾಪುರದಲ್ಲಿ ಶೆಟ್ಟಿ ಲಂಚ್ ಹೋಮ್ ಎಂಬ ಹೋಟೆಲ್ ಒಂದನ್ನು ನಡೆಸುತ್ತಿದ್ದರು. ಅದರಲ್ಲಿ ಪ್ರೇಮಿಗಳಿಗೆ ರೂಮ್ ಕೊಟ್ಟಿದ್ದರು. ಇದರಲ್ಲಿ ರಹಸ್ಯವಾಗಿ ಕ್ಯಾಮೆರಾ ಇರಿಸಿ ವೀಡಿಯೋ ಚಿತ್ರೀಕರಿಸಿಕೊಂಡಿದ್ದರು. ಇದನ್ನೂ ಓದಿ: ಚೈತ್ರಾ ಕುಂದಾಪುರ ಡೀಲ್‌ ಪ್ರಕರಣಕ್ಕೆ ಟ್ವಿಸ್ಟ್‌ – ಸಲೂನ್‌ ಮಾಲೀಕನಿಗೆ ಬೆದರಿಕೆ ಕರೆ

    ವಿಡಿಯೋವನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಆರೋಪಿ ಕಿರಣ್ ಯುವತಿಗೆ ವಾಟ್ಸಾಪ್ ಮಾಡಿದ್ದ. ಬಳಿಕ ಆರೋಪಿಗಳು ಹಣಕ್ಕಾಗಿ ಬೇಡಿಕೆ ಇಟ್ಟು, ಹಣ ಕೊಡದೇ ಇದ್ದರೆ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಹರಿಬಿಡುವುದಾಗಿ ಬೆದರಿಸಿದ್ದರು. ಅಲ್ಲದೇ ಸಂಬಂಧಿಗಳು ಹಾಗೂ ಸ್ನೇಹಿತರಿಗೆ ಕಳಿಸುವ ಬೆದರಿಕೆ ಹಾಕಿದ್ದರು.

    ಯುವತಿ ಆರೋಪಿ ನಯಾನಾಳ ಸಂಬಂಧಿ ಎಂದು ತಿಳಿದು ಬಂದಿದೆ. ಯುವತಿ ಎಂಬಿಎ ಪದವಿಧರೆಯಾಗಿದ್ದು ಆಕೆಯ ಸ್ನೇಹಿತನೊಂದಿಗೆ ಆಗಾಗ ಹೋಟೆಲ್‍ಗೆ ಬರುತ್ತಿದ್ದಳು. ಇದನ್ನೇ ದುರುಪಯೋಗಪಡಿಸಿಕೊಂಡ ಆರೋಪಿಗಳು ಹಣಕ್ಕಾಗಿ ವೀಡೀಯೋ ಚಿತ್ರಿಕರಿಸಿ ಬ್ಲಾಕ್‍ಮೇಲ್ ಮಾಡಿದ್ದಾರೆ.

    ಈ ಸಂಬಂಧ ಚಂದ್ರ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದನ್ನೂ ಓದಿ: ಹೆಂಡ್ತಿ ಕಾಟ- ಅಣ್ಣನಿಗೆ ಆಡಿಯೋ ಮೆಸೇಜ್ ಮಾಡಿ Metro ಎಂಜಿನಿಯರ್ ಸೂಸೈಡ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಿನ್ ಹೆಂಡ್ತಿ ನಂಬರ್ ಕೊಡು ಎಂದವನ ಮೇಲೆ ರೌಡಿಯಿಂದ ಹಲ್ಲೆ – ಒದೆ ತಿಂದವನ ಕಡೆಯವರಿಂದ ಮನೆ ಮುರಿದು ದಾಂಧಲೆ

    ನಿನ್ ಹೆಂಡ್ತಿ ನಂಬರ್ ಕೊಡು ಎಂದವನ ಮೇಲೆ ರೌಡಿಯಿಂದ ಹಲ್ಲೆ – ಒದೆ ತಿಂದವನ ಕಡೆಯವರಿಂದ ಮನೆ ಮುರಿದು ದಾಂಧಲೆ

    ಬೆಂಗಳೂರು: ಕುಡಿದ ಮತ್ತಿನಲ್ಲಿ‌ ಶುರುವಾಗಿದ್ದ ಜಗಳ ಮನೆಯನ್ನೆ ಧ್ವಂಸ ಮಾಡುವ ಹಂತಕ್ಕೆ ಬಂದಿದೆ.‌ ಹೆಂಡತಿ ನಂಬರ್ ಕೊಡು ಎಂದಿದ್ದಕ್ಕೆ ರೊಚ್ಚಿಗೆದ್ದ ರೌಡಿಶೀಟರ್ (Rowdy Sheeter) ರಸ್ತೆಯಲ್ಲಿಯೇ ಹಿಗ್ಗಾ ಮುಗ್ಗಾ ಥಳಿಸಿರುವ ಘಟನೆ ಚಂದ್ರಲೇಔಟ್ ಠಾಣಾ (Chandra Layout Police Station) ವ್ಯಾಪ್ತಿಯಲ್ಲಿ ನಡೆದಿದೆ.

    ರೌಡಿಶೀಟರ್ ಕೆಂಪೇಗೌಡ ಅಲಿಯಾಸ್‌ ಕೆಂಪ, ಸ್ನೇಹಿತ ರಮೇಶ್‌ನನ್ನೇ ಥಳಿಸಿದ್ದಾನೆ. ಸ್ನೇಹಿತರಾಗಿದ್ದ ಇಬ್ಬರೂ ಬಾರ್ ನಲ್ಲಿ‌ ಕುಡಿದು ಅಂಗಡಿ ಮುಂದೆ ಬಂದು ನಿಂತಿದ್ದಾರೆ.‌‌ ಈ‌‌ ವೇಳೆ ಕೆಂಪೇಗೌಡನಿಗೆ ನಿನ್ನ ಪತ್ನಿ ನಂಬರ್ ಕೊಡು ಎಂದು ರಮೇಶ್‌ ಕೇಳಿದ್ದಾನೆ. ಇದರಿಂದ ರೊಚ್ಚಿಗೆದ್ದ ಕೆಂಪೇಗೌಡ, ರಮೇಶ್‌ಗೆ ಕಪಾಳಕ್ಕೆ‌ ಹೊಡೆದು ಹೋಗಿದ್ದ. ನಂತರ ಹೊಯ್ಸಳ ನಗರದಲ್ಲಿರುವ ತನ್ನ ಮನೆಗೆ ವಾಪಸ್ ಆಗಿದ್ದ. ಇದನ್ನೂ ಓದಿ: ನಿಫಾ ವೈರಸ್ ಭೀತಿ – ರಾಜ್ಯದ ಗಡಿಯಲ್ಲಿ ಹೈ ಅಲರ್ಟ್, ಕಟ್ಟುನಿಟ್ಟಿನ ತಪಾಸಣೆಗೆ ಸರ್ಕಾರ ಸೂಚನೆ

    ರಾತ್ರಿ 11 ಗಂಟೆಗೆ ಹಲ್ಲೆ ವಿಚಾರವಾಗಿ ಪ್ರಶ್ನೆ ಮಾಡಲು ರಮೇಶ್ ಸಂಬಂಧಿಕರು ಮತ್ತು ಸ್ನೇಹಿತರು ಕೆಂಪನ ಮನೆ ಬಳಿ ಹೋಗಿದ್ದರು. ಮಂಜುನಾಥ್, ಜವರೇಗೌಡ, ಕೃಷ್ಣಮೂರ್ತಿ ಸೇರಿದಂತೆ 10ಕ್ಕೂ ಹೆಚ್ಚು ಜನರನ್ನ ಗುಂಪು ಕಟ್ಟಿಕೊಂಡು ರಮೇಶ್‌ ಹೋಗಿದ್ದಾನೆ. ಮನೆ ಬಳಿ ಬಂದು ಕಿರಿಕ್ ತೆಗೆದಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದು ಮತ್ತೆ ಗಲಾಟೆಯಾಗಿದೆ. ಗಲಾಟೆಯಲ್ಲಿ ಮಂಜುನಾಥ್, ಜವರೇಗೌಡ, ಕೃಷ್ಣಮೂರ್ತಿಗೆ ರೌಡಿ ಕೆಂಪ ಚಾಕುವಿನಿಂದ ಇರಿದಿದ್ದಾನೆ. ಇದರಿಂದ ರೊಚ್ಚಿಗೆದ್ದ ಗುಂಪಿನವರು ಕೆಂಪೇಗೌಡ ಮನೆ ಮೇಲೆ ಕಲ್ಲು ಎಸೆದು ಕಿಟಕಿ ಗಾಜುಗಳನ್ನ ಪುಡಿ‌-ಪುಡಿ ಮಾಡಿ, ಬಾಗಿಲು, ಗೇಟ್ ಮುರಿದು ಹಾಕಿದ್ದಾರೆ.

    ಘಟನೆ ಸಂಬಂಧ ಚಂದ್ರಲೇಔಟ್ ಪೊಲೀಸರು ರೌಡಿ ಕೆಂಪನನ್ನ ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ವಿಶ್ವನಾಥ್ ಜೀ ಅಲಿಯಾಸ್ ಚನ್ನನಾಯ್ಕ್ ಪತ್ನಿಗೆ ಬೆದರಿಕೆ ಹಾಕಿದ್ದ ಚೈತ್ರಾ ಕುಂದಾಪುರ!