Tag: crime

  • ಅಜ್ಞಾತ ಸ್ಥಳಕ್ಕೆ ಎಳೆದೊಯ್ದು ಯುವತಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದ ಆರೋಪಿ ಬಂಧನ

    ಅಜ್ಞಾತ ಸ್ಥಳಕ್ಕೆ ಎಳೆದೊಯ್ದು ಯುವತಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದ ಆರೋಪಿ ಬಂಧನ

    ಧಾರವಾಡ: ಅಜ್ಞಾತ ಸ್ಥಳಕ್ಕೆ ಎಳೆದೊಯ್ದು ಯುವತಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.

    ಕಳೆದ ಅಕ್ಟೋಬರ್ 8 ರಂದು ಧಾರವಾಡ (Dharwad) ತಾಲೂಕಿನ ಸಲಕಿನಕೊಪ್ಪ ಗ್ರಾಮದ ಬಳಿ ಘಟನೆ ನಡೆದಿತ್ತು. ಯುವಕ ಹಾಗೂ ಯುವತಿ ಒಬ್ಬರನ್ನೊಬ್ಬರು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದು, ಇಬ್ಬರೂ ಸೇರಿ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಗೆ ಹೋಗಿದ್ದರು. ಈ ವೇಳೆ ಇಬ್ಬರ ನಡುವೆ ಜಗಳ ನಡೆದಿತ್ತು. ಜಗಳ ತಾರಕಕ್ಕೇರಿ ಆರೋಪಿ ಯುವಕ ಕಟರ್‌ನಿಂದ ಯುವತಿಗೆ ಇರಿದಿದ್ದ.

    ಬಿಬಿ ನಿಸ್ಬಾ ಡಂಬಳ (20) ಹಲ್ಲೆಗೊಳಗಾಗಿದ್ದ ಯುವತಿಯಾಗಿದ್ದು, ಆರೋಪಿ ಇಮಾಮಜಾಫರ್ ಯುವತಿಯ ಕುತ್ತಿಗೆ ಹಾಗೂ ಕೈಗೆ ಇರಿದಿದ್ದ. ಗಾಯಗೊಂಡ ಸ್ಥಿತಿಯಲ್ಲಿ ಯುವತಿ ಸ್ಥಳೀಯರಿಗೆ ಸಿಕ್ಕಿದ್ದು, ನಂತರ ಪೊಲೀಸರನ್ನು ಕರೆಸಿದ್ದಾರೆ. ಬಳಿಕ ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಕೆ ನೀಡಿದ ಮಾಹಿತಿ ಆಧಾರದ ಮೇಲೆ ಧಾರವಾಡ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ: ಭತ್ತದ ಬೆಳೆಯಲ್ಲಿ ಮೂಡಿ ಬಂದ ಅಪ್ಪು ಚಿತ್ರ – ವಿಭಿನ್ನ ಕಲೆ ಮೂಲಕ ಅಭಿಮಾನ ಮೆರೆದ ರೈತ

    ಧಾರವಾಡ ಕುರಬರ ಓಣಿಯ ನಿವಾಸಿಯಾಗಿರುವ ಬಿಬಿ ಹಾಗೂ ಇಮಾಮಜಾಫರ್ ಬಹಳ ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು. ಇತ್ತೀಚೆಗೆ ಬಿಬಿ ಬೇರೆ ಯುವಕನ ಜೊತೆ ಮೊಬೈಲ್‌ನಲ್ಲಿ ಮಾತನಾಡುವುದನ್ನು ಇಮಾಮಜಾಫರ್ ಗಮನಿಸಿದ್ದ. ಹೀಗಾಗಿ ಆಕೆಯನ್ನು ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗಿ ಕಟರ್‌ನಿಂದ ಮಾರಣಾಂತಿಕ ಹಲ್ಲೆ ಮಾಡಿದ್ದ. ಇದೀಗ ಶಹರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಯನ್ನು ಬಂಧಿಸಿ, ಜೈಲಿಗಟ್ಟಿದ್ದಾರೆ. ಇದನ್ನೂ ಓದಿ: Operation Ajay: ಇಸ್ರೇಲ್‌ನಿಂದ 230 ಮಂದಿ ಭಾರತೀಯರ ಆಗಮನ – ಕನ್ನಡಿಗರಿಗೆ ಟಿ.ಬಿ ಜಯಚಂದ್ರ ಆತ್ಮೀಯ ಸ್ವಾಗತ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪೊಲೀಸರ ಸೋಗಿನಲ್ಲಿ ವಾಹನ ತಪಾಸಣೆ – 50 ಲಕ್ಷ ರೂ. ಎಗರಿಸಿದ ಕಳ್ಳರು

    ಪೊಲೀಸರ ಸೋಗಿನಲ್ಲಿ ವಾಹನ ತಪಾಸಣೆ – 50 ಲಕ್ಷ ರೂ. ಎಗರಿಸಿದ ಕಳ್ಳರು

    ನವದೆಹಲಿ: ಟ್ರಾಫಿಕ್ ಪೊಲೀಸರಂತೆ (Police) ಬಂದ ಇಬ್ಬರು ವ್ಯಕ್ತಿಗಳು ಪಾನ್ ಮಸಾಲಾ ಕಂಪನಿಯ ಉದ್ಯೋಗಿಯೊಬ್ಬರ ಕಾರು ಪರಿಶೀಲನೆ ಮಾಡುವಂತೆ ನಟಿಸಿ 50 ಲಕ್ಷ ರೂ. ಹಣ ದೋಚಿದ ಘಟನೆ ದೆಹಲಿಯ (New Delhi) ಇಂದ್ರಪ್ರಸ್ಥದಲ್ಲಿ ನಡೆದಿದೆ.

    ಚಾಂದಿನಿ ಚೌಕ್ ಪ್ರದೇಶದ ಕುಚಾ ಘಾಸಿರಾಮ್ ಪ್ರದೇಶದಿಂದ ಕಂಪನಿಗೆ ಸೇರಬೇಕಾಗಿದ್ದ ಹಣವನ್ನು ತೆಗೆದುಕೊಂಡು ಹಿಂತಿರುಗುತ್ತಿದ್ದಾಗ ಈ ಘಟನೆ ನಡೆದಿದೆ. ಸಲೀಂ ಗಡ್ ಮೇಲ್ಸೇತುವೆ ಬಳಿ ಆತನನ್ನು ಟ್ರಾಫಿಕ್ ಪೊಲೀಸರಂತೆ ಇಬ್ಬರು ಅಡ್ಡಗಟ್ಟಿದ್ದಾರೆ. ಬಳಿಕ ಕಾರಿನಲ್ಲಿದ್ದ ಹಣದ ಬ್ಯಾಗ್‍ನ್ನು ಹೊತ್ತು ಬೈಕ್‍ನಲ್ಲಿ ಪರಾರಿಯಾಗಿದ್ದಾರೆ ಎಂದು ಪೊಲಿಸರು ತಿಳಿಸಿದ್ದಾರೆ. ಇದನ್ನೂ ಓದಿ: ಇಸ್ರೇಲ್ ನಮ್ಮ ಮೊದಲ ಟಾರ್ಗೆಟ್ ಅಷ್ಟೇ, ಇಡೀ ಜಗತ್ತನ್ನು ನಮ್ಮ ಕಾನೂನಿನ ವ್ಯಾಪ್ತಿಗೆ ತರುತ್ತೇವೆ: ಹಮಾಸ್‌ ಉದ್ಧಟತನ

    ಸಿಸಿಟಿವಿ ಪರಿಶೀಲನೆಯಲ್ಲಿ ಹಾಗೂ ಇಲ್ಲಿವರೆಗಿನ ತನಿಖೆಯಲ್ಲಿ ಆರೋಪಿಗಳು ಸಂಚಾರಿ ಪೊಲೀಸರಂತೆ ನಟಿಸಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಸಂಬಂಧ ಐಪಿಸಿ ಸೆಕ್ಷನ್ 419, 382/34ರ ಅಡಿಯಲ್ಲಿ ವಂಚನೆ ಹಾಗೂ ಕಳ್ಳತನ ಪ್ರಕರಣ ದಾಖಲಾಗಿದೆ. ಪ್ರಕರಣದ ತನಿಖೆಗೆ ವಿಶೇಷ ತಂಡವನ್ನು ಸಹ ನಿಯೋಜಿಸಲಾಗಿದೆ. ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಹಮಾಸ್ ದಾಳಿಯಿಂದ ಸಾವಿಗೀಡಾದ ಮಕ್ಕಳ ಚಿತ್ರ ಹಂಚಿಕೊಂಡ ಇಸ್ರೇಲ್ – ಶವಗಳ ಮೇಲೆ ಐಸಿಸ್ ಧ್ವಜ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೀದರ್‌ನಲ್ಲಿ 47 ಲಕ್ಷ ರೂ. ಮೌಲ್ಯದ ಗಾಂಜಾ ಜಪ್ತಿ – ನಾಲ್ವರು ಅರೆಸ್ಟ್

    ಬೀದರ್‌ನಲ್ಲಿ 47 ಲಕ್ಷ ರೂ. ಮೌಲ್ಯದ ಗಾಂಜಾ ಜಪ್ತಿ – ನಾಲ್ವರು ಅರೆಸ್ಟ್

    ಬೀದರ್: ಆಂದ್ರಪ್ರದೇಶದಿಂದ ಬೀದರ್ (Bidar) ಮಾರ್ಗವಾಗಿ ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಕಾರಿನಲ್ಲಿ ಸಾಗಿಸುತ್ತಿದ್ದ 47 ಲಕ್ಷ ರೂ.ಗೂ ಅಧಿಕ ಮೌಲ್ಯದ ಗಾಂಜಾವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಈ ವೇಳೆ ಕಾರಿನಲ್ಲಿದ್ದ ನಾಲ್ಕು ಜನ ಆರೋಪಿಗಳನ್ನು ಪೊಲೀಸರು (Police) ಬಂಧಿಸಿದ್ದಾರೆ.

    ಭಾಲ್ಕಿಯ ಹಾಲಿಹಿಪ್ಪರ್ಗಾ ಕ್ರಾಸ್ ಬಳಿ ವಾಹನ ತಪಾಸಣೆ ವೇಳೆ ಕಾರಿನಲ್ಲಿ 25 ಕೆಜಿ ಗಾಂಜಾ ಪತ್ತೆಯಾಗಿದೆ. ಅಲ್ಲದೇ ಗೊನ್ನಳಿ ಬಳಿಯ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ 22 ಕೆಜಿ ಗಾಂಜಾವನ್ನು ಜಪ್ತಿ ಮಾಡಲಾಗಿದೆ. ಒಟ್ಟಾರೆ ಜಪ್ತಿ ಮಾಡಲಾದ ಗಾಂಜಾ ಮೌಲ್ಯ 47 ಲಕ್ಷಕ್ಕೂ ಅಧಿಕ ಎಂದು ಅಂದಾಜಿಸಲಾಗಿದೆ. ಸಾಗಾಟಕ್ಕೆ ಬಳಸಿದ್ದ ಕಾರನ್ನು ಜಪ್ತಿ ಮಾಡಲಾಗಿದೆ. ಇದನ್ನೂ ಓದಿ: ಜೂಜು ಅಡ್ಡೆ ಮೇಲೆ ಪೊಲೀಸರ ದಾಳಿ – ತಪ್ಪಿಸಿಕೊಳ್ಳಲು ನದಿಗೆ ಹಾರಿದ ವ್ಯಕ್ತಿ ಸಾವು

    ನಾಲ್ಕು ಜನ ಆರೋಪಿಗಳನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಎಸ್ಪಿ ಚೆನ್ನಬಸವಣ್ಣ ಲಂಗೋಟಿ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಇದನ್ನೂ ಓದಿ: ಗಾಝಾ ನಗರಕ್ಕೆ ಇಸ್ರೇಲ್ ದಿಗ್ಬಂಧನ – ಅನ್ನ, ನೀರಿಗೂ ಪ್ಯಾಲೆಸ್ತೀನಿಯರ ಪರದಾಟ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಯುವತಿಯನ್ನು ಅಪಹರಿಸಿ ಚಾಕುವಿನಿಂದ ಹಲ್ಲೆ – ಅಜ್ಞಾತ ಸ್ಥಳದಲ್ಲಿ ಬಿಟ್ಟು ಹೋದ ಕಿಡಿಗೇಡಿಗಳು

    ಯುವತಿಯನ್ನು ಅಪಹರಿಸಿ ಚಾಕುವಿನಿಂದ ಹಲ್ಲೆ – ಅಜ್ಞಾತ ಸ್ಥಳದಲ್ಲಿ ಬಿಟ್ಟು ಹೋದ ಕಿಡಿಗೇಡಿಗಳು

    ಧಾರವಾಡ: ಯುವತಿಯೊಬ್ಬಳನ್ನು ಅಪಹರಿಸಿ ಚಾಕುವಿನಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಧಾರವಾಡ (Dharwad) ತಾಲೂಕಿನ ಸಲಕಿನಕೊಪ್ಪದಲ್ಲಿ ನಡೆದಿದೆ.

    ಯುವತಿಯ ಕುತ್ತಿಗೆ ಹಾಗೂ ಕೈಗೆ ಚಾಕುವಿನಿಂದ ಇರಿಯಲಾಗಿದೆ. ಬಳಿಕ ಆಕೆಯನ್ನು ನಿರ್ಜನ ಪ್ರದೇಶದಲ್ಲಿ ಬಿಟ್ಟು ಹೋಗಿದ್ದು, ಆಕೆ ಸ್ಥಳೀಯರ ಕಣ್ಣಿಗೆ ಕಾಣಿಸಿಕೊಂಡಿದ್ದಾಳೆ. ಬಳಿಕ ಸ್ಥಳೀಯರು ಪೊಲೀಸರಿಗೆ (Police) ಮಾಹಿತಿ ನೀಡಿದ್ದು, ಪೊಲೀಸರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದನ್ನೂ ಓದಿ: ಹಮಾಸ್ ರಾಕೆಟ್ ದಾಳಿಯಿಂದ ಕೇರಳದ ಶೀಜಾ ಆನಂದ್‍ಗೆ ಗಾಯ

    ಯುವತಿ ಕೊಟ್ಟ ಮಾಹಿತಿ ಪ್ರಕಾರ ಆಕೆ ಧಾರವಾಡದ ಕುರುಬರ ಬೀದಿಯ ನಿವಾಸಿಯಾಗಿದ್ದಾಳೆ. ಮಹಮ್ಮದ್ ಸಾದೀಕ್ ಎಂಬಾತ ಆಕೆಯನ್ನು ಅಪಹರಿಸಿದ್ದಾನೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಅಲ್ಲದೇ ಬೈಕ್‍ನಲ್ಲಿ ಕರೆದುಕೊಂಡು ಬಂದಿರುವುದಾಗಿ ತಿಳಿಸಿದ್ದಾಳೆ. ಬಳಿಕ ನನ್ನನ್ನು ಹಿಂದಿನಿಂದ ಹಿಡಿದು ಅಪಹರಿಸಿದ್ದು, ನನಗೆ ಇಲ್ಲಿಗೆ ಹೇಗೆ ಬಂದೆ ಎಂದು ತಿಳಿಯುತ್ತಿಲ್ಲ ಎಂದಿದ್ದಾಳೆ. ಅಲ್ಲದೇ ಯುವತಿ ಪದೇ ಪದೇ ಹೇಳಿಕೆ ಬದಲಿಸುತ್ತಿದ್ದಾಳೆ.

    ಈ ಸಂಬಂಧ ಧಾರವಾಡದ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಇದನ್ನೂ ಓದಿ: ನಾನು ‘ಹಿಟ್ ಅಂಡ್ ರನ್’ ಮಾಡಿಲ್ಲ: ನಟ ನಾಗಭೂಷಣ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾದ ಅಪ್ರಾಪ್ತ ಸಹೋದರಿಯರು

    ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾದ ಅಪ್ರಾಪ್ತ ಸಹೋದರಿಯರು

    ಜೈಪುರ್: ಕಿಡಿಗೇಡಿಗಳ ಕಿರುಕುಳದಿಂದ ಬೇಸತ್ತು ಇಬ್ಬರು ಅಪ್ರಾಪ್ತ ಸಹೋದರಿಯರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಜಸ್ಥಾನದ (Rajasthan) ಪ್ರತಾಪಗಡದಲ್ಲಿ ನಡೆದಿದೆ.

    ಬಾಲಕಿಯರು ಹಾಸ್ಟೆಲ್‍ನಲ್ಲಿದ್ದುಕೊಂಡು ವ್ಯಾಸಂಗ ಮಾಡುತ್ತಿದ್ದರು. ಇವರಿಗೆ ಅಪ್ರಾಪ್ತ ಸೇರಿದಂತೆ ಮೂವರು ಯುವಕರು ಕಿರುಕುಳ ನೀಡಿದ್ದಾರೆ. ಈ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು (Police) ಬಂಧಿಸಿದ್ದಾರೆ. ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಶಿವಮೊಗ್ಗದಲ್ಲಿ ಒಂದೇ ಕುಟುಂಬದ ಮೂವರು ಸಜೀವ ದಹನ

    ಬಾಲಕಿಯರು ವಿಷ ಸೇವಿಸಿದ ವಿಚಾರ ತಿಳಿದ ಬಳಿಕ ಅವರನ್ನು ಅಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ವೈದ್ಯರು ಈ ವೇಳೆ ಸಾವನ್ನಪ್ಪಿದ್ದಾರೆ ಎಂದು ಖಚಿತಪಡಿಸಿದ್ದಾರೆ. ಬಳಿಕ ಬಾಲಕಿಯರ ತಂದೆ ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಅನ್ವಯ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಈ ವಿಚಾರವಾಗಿ ರಾಜಸ್ಥಾನದ ಬಿಜೆಪಿ ಅಧ್ಯಕ್ಷ ಹಾಗೂ ವಿರೋಧ ಪಕ್ಷದ ನಾಯಕ ರಾಜೇಂದ್ರ ರಾಥೋಡ್, ಅಶೋಕ್ ಗೆಹ್ಲೋಟ್ ಅವರ ಸರ್ಕಾರವನ್ನು ತೀವ್ರವಾಗಿ ಟೀಕಿಸಿದ್ದಾರೆ. ಈ ಘಟನೆಯು ರಾಜ್ಯದ ಕಳಪೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಸೂಚಿಸುತ್ತದೆ ಎಂದು ಹೇಳಿಕೊಂಡಿದ್ದಾರೆ.

    ಅಲ್ಲದೇ ಅವರು ‘ಎಕ್ಸ್’ ಖಾತೆಯಲ್ಲಿ ಕಾಂಗ್ರೆಸ್‍ನ ಜಂಗಲ್ ರಾಜ್‍ನಲ್ಲಿ ಮಹಿಳೆಯರು ಮತ್ತು ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯಗಳು ಉತ್ತುಂಗದಲ್ಲಿದೆ. ಈ ಘಟನೆ ನಾಚಿಕೆಗೇಡಿನ ಸಂಗತಿಯಾಗಿದೆ. ಗೃಹ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ದೆಹಲಿ ಐಐಟಿ ವಾಶ್ ರೂಂನಲ್ಲಿ ವಿದ್ಯಾರ್ಥಿನಿಯರ ವೀಡಿಯೋ ಚಿತ್ರೀಕರಣ – ಸ್ವಚ್ಛತಾ ಸಿಬ್ಬಂದಿ ಬಂಧನ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕ್ಲಾಸ್‍ಮೇಟ್ ಜೊತೆ ಪ್ರೀತಿ – ಕುಟುಂಬಸ್ಥರಿಗೆ ಮಾಹಿತಿ ನೀಡಿದ ಶಿಕ್ಷಕನಿಗೆ ಗುಂಡೇಟು ನೀಡಿದ ವಿದ್ಯಾರ್ಥಿ

    ಕ್ಲಾಸ್‍ಮೇಟ್ ಜೊತೆ ಪ್ರೀತಿ – ಕುಟುಂಬಸ್ಥರಿಗೆ ಮಾಹಿತಿ ನೀಡಿದ ಶಿಕ್ಷಕನಿಗೆ ಗುಂಡೇಟು ನೀಡಿದ ವಿದ್ಯಾರ್ಥಿ

    ಲಕ್ನೋ: ವಿದ್ಯಾರ್ಥಿನಿಯೊಂದಿಗಿನ ಪ್ರೀತಿ ವಿಚಾರವನ್ನು ಕುಟುಂಬಸ್ಥರಿಗೆ ತಿಳಿಸಿದ್ದಕ್ಕೆ, ಅಪ್ರಾಪ್ತ ವಿದ್ಯಾರ್ಥಿಗಳು ಶಿಕ್ಷಕರೊಬ್ಬರ ಕಾಲಿಗೆ ಗುಂಡು ಹಾರಿಸಿದ ಘಟನೆ ಉತ್ತರ ಪ್ರದೇಶದ (Uttar Pradesh) ಆಗ್ರಾದಲ್ಲಿ (Agra) ನಡೆದಿದೆ. ಈ ಬಗ್ಗೆ ವಿದ್ಯಾರ್ಥಿಗಳು ವೀಡಿಯೋ ಒಂದನ್ನು ಹರಿಬಿಟ್ಟಿದ್ದು ನಾವು 40 ಬಾರಿ ಗುಂಡು ಹಾರಿಸಬೇಕಿತ್ತು. ಈಗ 39 ಬಾರಿ ಗುಂಡು ಹಾರಿಸುವುದು ಬಾಕಿ ಇದೆ ಎಂದು ಹೇಳಿಕೊಂಡಿದ್ದಾರೆ.

    ಗುಂಡು ಹಾರಿಸಿದ ವಿದ್ಯಾರ್ಥಿಗಳನ್ನು ತರುಣ್ ಮತ್ತು ಉತ್ತಮ್ ಎಂದು ಗುರುತಿಸಲಾಗಿದೆ. ವೀಡಿಯೋದಲ್ಲಿ ತಮ್ಮನ್ನು ಗ್ಯಾಂಗ್‍ಸ್ಟರ್‌ಗಳು ಎಂದು ಆರೋಪಿತ ವಿದ್ಯಾರ್ಥಿಗಳು ಬಿಂಬಿಸಿಕೊಂಡಿದ್ದಾರೆ. ಆರು ತಿಂಗಳ ನಂತರ ಮತ್ತೆ ಹಿಂದಿರುಗುತ್ತೇವೆ. ಆಗ ಮತ್ತೆ ಗುಂಡು ಹಾರಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಗಣಪತಿ ಕಟ್ಟೆಯಲ್ಲಿ ಹಸಿರು ಬಾವುಟ- ಸಮಯಪ್ರಜ್ಞೆ ಮೆರೆದ ಇನ್ಸ್‌ಪೆಕ್ಟರ್

    ಖಂಡೋಲಿ ಪಟ್ಟಣದ ಕೋಚಿಂಗ್ ಸೆಂಟರ್ ಹೊರಗೆ ಈ ಘಟನೆ ನಡೆದಿದೆ. ವಿದ್ಯಾರ್ಥಿಗಳು ತಮ್ಮ ಶಿಕ್ಷಕ ಸುಮಿತ್ ಎಂಬವರಿಗೆ ಗುಂಡು ಹಾರಿಸಿದ್ದಾರೆ. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಉಪ ಪೊಲೀಸ್ (Police) ಆಯುಕ್ತ ಸೋನಮ್ ಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

    ಆರೋಪಿತ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 307 (ಕೊಲೆ ಯತ್ನ) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಇದನ್ನೂ ಓದಿ: ಮುಂಬೈನಲ್ಲಿ ಭಾರೀ ಅಗ್ನಿ ಅವಘಡ – 6 ಮಂದಿ ಸಾವು, 40 ಮಂದಿಗೆ ಗಾಯ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇಸ್ಪೀಟ್ ಅಡ್ಡೆಯ ಮೇಲೆ ದಾಳಿ – 1.78 ಲಕ್ಷ ರೂ. ಜಪ್ತಿ

    ಇಸ್ಪೀಟ್ ಅಡ್ಡೆಯ ಮೇಲೆ ದಾಳಿ – 1.78 ಲಕ್ಷ ರೂ. ಜಪ್ತಿ

    ಬೀದರ್: ಇಸ್ಪೀಟ್ ಜೂಜು (Gambling) ಅಡ್ಡೆಯ ಮೇಲೆ ಪೊಲೀಸರು (Police) ದಾಳಿ ನಡೆಸಿ 1.78 ಲಕ್ಷ ರೂ. ನಗದು ಜಪ್ತಿ ಮಾಡಿದ ಪ್ರಕರಣ ಹುಮ್ನಾಬಾದ್ ಹೊರ ವಲಯದಲ್ಲಿ ನಡೆದಿದೆ. ಅಲ್ಲದೇ ಸ್ಥಳದಲ್ಲಿ ಇಸ್ಪೀಟ್ ಆಟದಲ್ಲಿ ತೊಡಗಿದ್ದ 18 ಜನ ಆರೋಪಿಗಳನ್ನು ಬಂಧಿಸಿದ್ದಾರೆ.

    ಖಚಿತ ಮಾಹಿತಿ ಮೇಲೆ ಪೊಲೀಸರು ಈ ದಾಳಿ ನಡೆಸಿದ್ದಾರೆ. ಆರೋಪಿಗಳು ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಆಡುತ್ತಿದ್ದರು. ಈ ಬಗ್ಗೆ ಮಾಹಿತಿ ಬಂದ ತಕ್ಷಣ ಪೊಲೀಸರು ದಾಳಿ ಮಾಡಿದ್ದಾರೆ. ಇದರಿಂದಾಗಿ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಅಲ್ಲದೇ ಅಪಾರ ಪ್ರಮಾಣದ ಹಣ ಕೂಡ ಜಪ್ತಿ ಮಾಡಲಾಗಿದೆ. ಇದನ್ನೂ ಓದಿ: ಶಿವಮೊಗ್ಗಕ್ಕೆ ಬಿಜೆಪಿ ಸತ್ಯಶೋಧನಾ ಸಮಿತಿ ಭೇಟಿ – ಆಸ್ಪತ್ರೆಯಲ್ಲಿ ಗಾಯಾಳುಗಳ ಆರೋಗ್ಯ ವಿಚಾರಿಸಿದ ನಾಯಕರು

    ಎಸ್ಪಿ ಚೆನ್ನಬಸವಣ್ಣ ಲಂಗೋಟಿ ಮಾರ್ಗದರ್ಶನದಲ್ಲಿ ಈ ದಾಳಿ ಮಾಡಲಾಗಿದೆ. ಈ ಸಂಬಂಧ ಹುಮ್ನಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಪತ್ನಿ ಕೊಲೆಗೈದು ಸೀರೆಯಿಂದ ಫ್ಯಾನಿಗೆ ನೇತಾಕಿದ ಕಿರಾತಕ!

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹೋಟೆಲ್ ಮಾಲೀಕನ ಮೇಲೆ ಹಲ್ಲೆ ಮಾಡಿ 1 ಲಕ್ಷ ರೂ. ದರೋಡೆ – ಆರೋಪಿಗಳು ಅರೆಸ್ಟ್

    ಹೋಟೆಲ್ ಮಾಲೀಕನ ಮೇಲೆ ಹಲ್ಲೆ ಮಾಡಿ 1 ಲಕ್ಷ ರೂ. ದರೋಡೆ – ಆರೋಪಿಗಳು ಅರೆಸ್ಟ್

    ಕೋಲಾರ: ಹೋಟೆಲ್ ಮಾಲೀಕನ ಮೇಲೆ ಮಾರಾಣಾಂತಿಕ ಹಲ್ಲೆ ಮಾಡಿ ಪರಾರಿಯಾಗಿದ್ದ ಆರೋಪಿಗಳನ್ನು ಪೊಲೀಸರು (Police) ಬಂಧಿಸಿದ್ದಾರೆ.

    ಬಂಧಿತರನ್ನು ಬೆಂಗಳೂರಿನ ಕೆಂಪೇಗೌಡ ನಗರದ ಮನೋಜ್ ಹಾಗೂ ಅಭಿಷೇಕ್ ಎಂದು ಗುರುತಿಸಲಾಗಿದೆ. ಆರೋಪಿಗಳು ಕೋಲಾರ (Kolar) ನಗರದ ಹೋಟೆಲ್ ಒಂದರ ಮಾಲೀಕ ನವೀನ್ ಶೆಟ್ಟಿ ಎಂಬವರ ಮೇಲೆ ಕಳೆದ ತಿಂಗಳು 17ರ ರಾತ್ರಿ ಅಡ್ಡಗಟ್ಟಿ ಹಲ್ಲೆ ಮಾಡಿದ್ದರು. ಬಳಿಕ ಅವರ ಬಳಿ ಇದ್ದ 1 ಲಕ್ಷ ರೂ. ಹಣ ದೋಚಿ ಪರಾರಿಯಾಗಿದ್ದರು. ಈ ವೇಳೆ ಮಧು ಎಂಬ ಆರೋಪಿಯನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಇನ್ನಿಬ್ಬರು ಪರಾರಿಯಾಗಿದ್ದರು. ಇದನ್ನೂ ಓದಿ: 10 ಸಾವಿರ ಕೊಟ್ಟು ಪತಿಯನ್ನು ಮಂಗಳೂರು ಬೀಚ್ ನೋಡಲು ಲವ್ವರ್ ಜೊತೆ ಕಳುಹಿಸಿ ಕೊಲೆಗೈದ್ಳು!

    ಮಾಲೀಕ ನವೀನ್ ಅವರು ಹೋಟೆಲ್ ಬಂದ್ ಮಾಡಿ ಹೋಗುವುದನ್ನು ಹಲವಾರು ದಿನಗಳಿಂದ ಮಧು ಗಮನಿಸಿದ್ದ. ಈ ಬಗ್ಗೆ ಕೆಲವು ದಿನಗಳಿಂದ ಕಣ್ಣಿಟ್ಟಿದ್ದ ಮಧು ತನ್ನ ಸ್ನೇಹಿತರ ಜೊತೆ ಸೇರಿ ದರೋಡೆ ಮಾಡುವ ಹೊಂಚು ಹಾಕಿದ್ದ ಎಂದು ತನಿಖೆ ವೇಳೆ ತಿಳಿದು ಬಂದಿದೆ.

    ಇದರಂತೆ ಆರೋಪಿಗಳು ಸೆ.17ರಂದು ನವೀನ್ ಅವರನ್ನು ಹಿಂಬಾಲಿಸಿದ್ದರು. ಬೈಕ್ ನಿಲ್ಲಿಸಿ ಗೇಟ್ ತೆರೆಯುತ್ತಿದ್ದಂತೆ ಹಣದ ಬ್ಯಾಗ್‍ಗೆ ಕೈ ಹಾಕಿದ್ದರು. ಈ ವೇಳೆ ನವೀನ್ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಅಷ್ಟರಲ್ಲೇ ಇದನ್ನು ನೋಡಿ ನವೀನ್ ಅವರ ಮಗ ಕಿರುಚಾಡಿದ್ದಾನೆ. ಕೋಡಲೇ ಅಕ್ಕಪಕ್ಕದವರು ಓರ್ವನನ್ನು ಹಿಡಿದಿದ್ದರು. ಹಲ್ಲೆಗೊಳಗಾದ ಹೋಟೆಲ್ ಮಾಲೀಕ ಕಣ್ಣನ್ನು ಕಳೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಮಾರ್ಬಲ್ ತುಂಬಿದ್ದ ಲಾರಿ ಪಲ್ಟಿ- ನಾಲ್ವರು ಕಾರ್ಮಿಕರು ಗಂಭೀರ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಾಲಕರಿಗೆ ಚಾಕ್ಲೇಟ್‌ ಆಸೆ ತೋರಿಸಿ ಅತ್ಯಾಚಾರ; ಹುಬ್ಬಳ್ಳಿಯಲ್ಲಿ ವಿಕೃತ ಸಲಿಂಗಕಾಮಿ ಬಂಧನ

    ಬಾಲಕರಿಗೆ ಚಾಕ್ಲೇಟ್‌ ಆಸೆ ತೋರಿಸಿ ಅತ್ಯಾಚಾರ; ಹುಬ್ಬಳ್ಳಿಯಲ್ಲಿ ವಿಕೃತ ಸಲಿಂಗಕಾಮಿ ಬಂಧನ

    ಹುಬ್ಬಳ್ಳಿ: ಕಾಮ ತೃಷೆಗಾಗಿ ಅಪ್ರಾಪ್ತ ಬಾಲಕರೊಂದಿಗೆ ಲೈಂಗಿಕ ಕ್ರಿಯೆ ನಡೆಸಿ, ಅದನ್ನು ವೀಡಿಯೋ ಮಾಡಿಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದ ಹುಬ್ಬಳ್ಳಿ (Hubballi) ಪ್ರತಿಷ್ಠಿತ ಹೋಟೆಲ್ ಕುಕ್‌ನನ್ನು (ಬಾಣಸಿಗ) ಸ್ಥಳೀಯರು ಹಿಡಿದು, ಥಳಿಸಿ ಪೊಲೀಸರಿಗೆ (Police) ಒಪ್ಪಿಸಿರುವ ಘಟನೆ ನಡೆದಿದೆ.

    ನಗರದ ಸಿದ್ಧಲಿಂಗೇಶ್ವರ ಕಾಲೋನಿಯಲ್ಲಿ ವಾಸವಿದ್ದ ಒಡಿಶಾ ಮೂಲದ ಕುಕ್, ನಗರದ ಪ್ರತಿಷ್ಠಿತ ಹೋಟೆಲೊಂದರಲ್ಲಿ (Hotel) ಕೆಲಸ ಮಾಡುತ್ತಿದ್ದ. ಸಲಿಂಗಕಾಮಿಯಾಗಿದ್ದ ಈತ ಅಪ್ರಾಪ್ತ ಮಕ್ಕಳನ್ನೇ ಟಾರ್ಗೆಟ್‌ ಮಾಡಿ ಹಣ ಮತ್ತು ಚಾಕ್ಲೇಟ್‌ ಆಸೆ ತೋರಿಸಿ ಲೈಂಗಿಕ ಕ್ರಿಯೆ ನಡೆಸಿ ವೀಡಿಯೋ ಮಾಡ್ತಿದ್ದ. ಬಳಿಕ ಅದೇ ವೀಡಿಯೋ ಇಟ್ಟುಕೊಂಡು ಮಕ್ಕಳಿಗೆ ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಲಿಂಗಾಯತ ವಿರೋಧಿ ಅಲ್ಲ; ಲಿಂಗಾಯತ ಅಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿದ ಬಸವರಾಜ ರಾಯರೆಡ್ಡಿ

    ಬಳಿಕ ಈತನ ಮೇಲೆ ಅನುಮಾನಗೊಂಡ ಸ್ಥಳೀಯರು ಕುಕ್‌ ಮನೆಗೆ ನುಗ್ಗಿ ಥಳಿಸಿ ಮೊಬೈಲ್‌ ಕಸಿದುಕೊಂಡಿದ್ದಾರೆ. ಮೊಬೈಲ್‌ ಪರಿಶೀಲನೆ ಮಾಡಿದಾಗ ಆತನ ನಿಜಮುಖ ಬಯಲಾಗಿದೆ. ಇದರಿಂದ ಕೋಪಗೊಂಡ ಸ್ಥಳೀಯರು ಆತನಿಗೆ ಮನಬಂದಂತೆ ಥಳಿಸಿ ಹುಬ್ಬಳ್ಳಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ಮುಸ್ಲಿಮರು ಹಿಂದೂ ಸಮಾಜವನ್ನ ಹೇಡಿ ಸಮಾಜ ಎಂದು ತೋರಿಸುವ ಪ್ರಯತ್ನ ಮಾಡ್ತಿದ್ದಾರೆ: ಚಕ್ರವರ್ತಿ ಸೂಲಿಬೆಲೆ

    ನಗರ ಪೊಲೀಸ್‌ ಠಾಣೆಯಲ್ಲಿ ಬಾಣಸಿಗನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗರ್ಭಿಣಿಯಾಗಿದ್ದಕ್ಕೆ ಅವಿವಾಹಿತೆಗೆ ಬೆಂಕಿ ಹಚ್ಚಿದ ಕುಟುಂಬಸ್ಥರು

    ಗರ್ಭಿಣಿಯಾಗಿದ್ದಕ್ಕೆ ಅವಿವಾಹಿತೆಗೆ ಬೆಂಕಿ ಹಚ್ಚಿದ ಕುಟುಂಬಸ್ಥರು

    ಲಕ್ನೋ: ಅವಿವಾಹಿತ ಯುವತಿಯೊಬ್ಬಳು ಗರ್ಭಿಣಿ ಎಂಬ ವಿಚಾರ ತಿಳಿದು ಆಕೆಯ ಕುಟುಂಬಸ್ಥರು ಬೆಂಕಿ ಹಚ್ಚಿದ ಪ್ರಕರಣ ಉತ್ತರ ಪ್ರದೇಶದ (Uttar Pradesh) ಹಾಪುರ್‌ನಲ್ಲಿ ನಡೆದಿದೆ. ಆಕೆಯ ದೇಹ 70% ಸುಟ್ಟು ಹೋಗಿದ್ದು, ಆಕೆಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು (Police) ತಿಳಿಸಿದ್ದಾರೆ.

    ಯುವತಿ ಅವಿವಾಹಿತಳಾಗಿದ್ದು ಆಕೆ ಅದೇ ಊರಿನ ಯುವಕನೊಂದಿಗೆ ದೈಹಿಕ ಸಂಬಂಧ ಹೊಂದಿದ್ದಳು. ಈ ವಿಚಾರವಾಗಿ ಯುವತಿಯ ತಾಯಿ ಹಾಗೂ ಸಹೋದರ ಯುವಕನೊಂದಿಗೆ ಗಲಾಟೆಯನ್ನು ಮಾಡಿದ್ದರು. ಬಳಿಕ ಯುವತಿ ಗರ್ಭಿಣಿ ಎಂಬ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಆಕೆಯನ್ನು ಸಮೀಪದ ಅರಣ್ಯಕ್ಕೆ ಕರೆದೊಯ್ದು ಪೆಟ್ರೋಲ್ ಎರಚಿ ಬೆಂಕಿ ಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕ ಬಂದ್ – ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ

    ಯುವತಿ ಗಂಭೀರ ಸ್ಥಿತಿಯಲ್ಲಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚಿನ ಚಿಕಿತ್ಸೆಗೆ ಉನ್ನತ ಆಸ್ಪತ್ರೆಗೆ ಆಕೆಯನ್ನು ರವಾನಿಸಲಾಗಿದೆ. ಆಕೆಗೆ ಬೇಕಾದ ಚಿಕಿತ್ಸೆಯನ್ನು ನೀಡಲು ಅಗತ್ಯ ನೆರವು ನೀಡಲಾಗುವುದು. ಅಲ್ಲದೇ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ತಾಯಿ ಮತ್ತು ಸಹೋದರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಬ್ಬರ ವಿಚಾರಣೆ ನಡೆಸಲಾಗುತ್ತಿದೆ. ಪ್ರಕರಣದ ವಿಚಾರವಾಗಿ ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಹಾಪುರ್‍ನ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜ್‍ಕುಮಾರ್ ಅಗರ್ವಾಲ್ ಹೇಳಿದ್ದಾರೆ. ಇದನ್ನೂ ಓದಿ: ಕನ್ನಡ ಹೋರಾಟಗಾರರು ಗೂಂಡಾಗಳಲ್ಲ, ಬಸ್‍ಗಳಿಗೆ ಬೆಂಕಿ ಹಾಕಿಲ್ಲ: ಪ್ರವೀಣ್ ಶೆಟ್ಟಿ ಕಿಡಿ