Tag: crime

  • ವಿಜಯದಶಮಿ ವೇಳೆ ಪಲ್ಲಕ್ಕಿ ತಡೆದು ಅಲ್ಲಾ ಹು ಅಕ್ಬರ್ ಘೋಷಣೆ ಕೂಗಿದ ಕಿಡಿಗೇಡಿಗಳು

    ವಿಜಯದಶಮಿ ವೇಳೆ ಪಲ್ಲಕ್ಕಿ ತಡೆದು ಅಲ್ಲಾ ಹು ಅಕ್ಬರ್ ಘೋಷಣೆ ಕೂಗಿದ ಕಿಡಿಗೇಡಿಗಳು

    ಹಾವೇರಿ: ವಿಜಯದಶಮಿ (Vijayadashami) ದಿನದಂದು ದೇವರ ಪಲ್ಲಕ್ಕಿ ಕೊಂಡೊಯ್ಯುವ ವೇಳೆ ಕೆಲವು ಕಿಡಿಗೇಡಿಗಳು ತಡೆದು ಅಲ್ಲಾ ಹು ಅಕ್ಬರ್ ಘೋಷಣೆ ಕೂಗಿದ ಘಟನೆ ಹಾನಗಲ್‍ನಲ್ಲಿ ನಡೆದಿದೆ.

    ಐತಿಹಾಸಿಕ ಹಾನಗಲ್ (Hangal) ತಾರಕೇಶ್ವರ ದೇವರ (Tarakeshwara Temple) ಬನ್ನಿ ಮುಡಿಯುವ ಪಲ್ಲಕ್ಕಿ ಉತ್ಸವದ ವೇಳೆ ಈ ಘಟನೆ ನಡೆದಿದೆ. ಹಾನಗಲ್ ನಗರದ ಗ್ರಾಮದೇವಿ ಪಾದಗಟ್ಟಿ ಸರ್ಕಲ್‍ನಿಂದ ಕಾಶ್ಮೀರಿ ದರ್ಗಾ ಮಾರ್ಗವಾಗಿ ಪಲ್ಲಕ್ಕಿ ಹೊರಟಿತ್ತು. ಬಳಿಕ ವಾಪಸ್ ತಾರಕೇಶ್ವರ ದೇವಸ್ಥಾನಕ್ಕೆ ಸಾಗುವ ವೇಳೆ ಶಾಂತಯುತವಾಗಿ ಸಾಗುತ್ತಿದ್ದ ಮೆರವಣಿಗೆಯನ್ನು ತಡೆದು ಈ ಘೋಷಣೆ ಕೂಗಿದ್ದಾರೆ. ಇದನ್ನೂ ಓದಿ: ಭಾರತವನ್ನು ಕಟ್ಟಲು ಯುವಜನರು ವಾರಕ್ಕೆ 70 ಗಂಟೆ ದುಡಿಯಬೇಕು: ನಾರಾಯಣ ಮೂರ್ತಿ

    ಈ ವೇಳೆ ದರ್ಗಾ ಬಳಿ ಬಂದಾಗ ಪಲ್ಲಕ್ಕಿ ತಡೆಯೋ ಅಗತ್ಯ ಏನಿತ್ತು? ಎಂದು ಹಿಂದೂ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಪೊಲೀಸರು ಬಂದು ಪರಿಸ್ಥಿತಿ ಶಾಂತಗೊಳಿಸಿದ್ದಾರೆ.

    ಈ ಕುರಿತು ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ. ಹಾನಗಲ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಘಟನೆಯ ವೀಡಿಯೋ ಈಗ ವೈರಲ್ ಆಗಿದ್ದು ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇದನ್ನೂ ಓದಿ: PublicTV Explainer: ಉಗುರಿಗೆ ಹೆದರಿದ ‘ಹೀರೋಸ್‌’; ವನ್ಯಜೀವಿ ಸಂರಕ್ಷಣಾ ಕಾಯ್ದೆ ಏನು ಹೇಳುತ್ತೆ? – ಅಪರಾಧಕ್ಕೆ ಶಿಕ್ಷೆ ಏನು?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹಣಕಾಸಿನ ವಿಚಾರದಲ್ಲಿ ಗಲಾಟೆ – ಸ್ನೇಹಿತನ ಕೊಲೆಯಲ್ಲಿ ಅಂತ್ಯ

    ಹಣಕಾಸಿನ ವಿಚಾರದಲ್ಲಿ ಗಲಾಟೆ – ಸ್ನೇಹಿತನ ಕೊಲೆಯಲ್ಲಿ ಅಂತ್ಯ

    ಮೈಸೂರು: ಹಣಕಾಸಿನ ವಿಚಾರಕ್ಕೆ ಸ್ನೇಹಿತನನ್ನೇ ಕೊಲೆಗೈದ (Murder) ಘಟನೆ ಮೈಸೂರಿನಲ್ಲಿ (Mysuru) ನಡೆದಿದೆ.

    ಆಸಿಫ್ ಅಲಿಯಾಸ್ ಬಿಲ್ಲಾ ಆಸಿಫ್ (36) ಕೊಲೆಯಾದವನು. ಆತನ ಸ್ನೇಹಿತ ಸಲೀಂ ಪಾಷಾ ಕೊಲೆ ಆರೋಪಿಯಾಗಿದ್ದಾನೆ. ಗಲಾಟೆಯಲ್ಲಿ ಆರೋಪಿಗೂ ಗಾಯಗಳಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ನಕಲಿ ಹುಲಿ ಉಗುರು ಧರಿಸದಂತೆ ಈಶ್ವರ್ ಖಂಡ್ರೆ ಮನವಿ – ಸರ್ಕಾರಕ್ಕೆ ಮರಳಿಸಲು ಅವಕಾಶಕ್ಕೆ ಚಿಂತನೆ

    ಆಸಿಫ್ ಹಾಗೂ ಆರೋಪಿಯ ನಡುವೆ ಬೀಡಿ ಕಾಲೋನಿಯ ಬಳಿ ಹಣಕಾಸಿನ ವಿಚಾರದದಲ್ಲಿ ಗಲಾಟೆ ನಡೆದಿದೆ. ಈ ವೇಳೆ ಗಲಾಟೆ ಗಂಭೀರ ಸ್ವರೂಪಕ್ಕೆ ತಿರುಗಿ ಆಸಿಫ್ ತಲೆಗೆ ನೀಲಗಿರಿ ಮರದ ಪಟ್ಟಿಯಿಂದ ಸಲೀಂ ಹೊಡೆದಿದ್ದಾನೆ. ಕೂಡಲೇ ಆತನನ್ನು ಕೆ.ಆರ್ ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಿದ್ದಾರೆ. ಆತ ಮಾರ್ಗ ಮಧ್ಯೆ ಸಾವಿಗೀಡಾಗಿದ್ದಾನೆ.

    ಈ ಸಂಬಂಧ ಉದಯಗಿರಿ ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಬಿದ್ದ ಕಾರು – ಚಾಲಕ ಸ್ಥಳದಲ್ಲೇ ಸಾವು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗರ್ಭದಲ್ಲಿರುವುದು ಹೆಣ್ಣು ಮಗು ಎಂದು ತಿಳಿದು ಪತ್ನಿಯನ್ನು ಹತ್ಯೆಗೈದ ಪತಿ

    ಗರ್ಭದಲ್ಲಿರುವುದು ಹೆಣ್ಣು ಮಗು ಎಂದು ತಿಳಿದು ಪತ್ನಿಯನ್ನು ಹತ್ಯೆಗೈದ ಪತಿ

    ಪಟ್ನಾ: ಪತ್ನಿ (Wife) ಹೆಣ್ಣು ಮಗುವಿಗೆ ಜನ್ಮ ನೀಡಲಿದ್ದಾಳೆ ಎಂದು ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮೂಲಕ ತಿಳಿದ ಬಳಿಕ ಆಕೆಯನ್ನು ಪತಿ ಹಾಗೂ ಅತ್ತೆ ಸೇರಿ ಹಲ್ಲೆ ಮಾಡಿ ಹತ್ಯೆ ಮಾಡಿದ ಘಟನೆ ಬಿಹಾರದಲ್ಲಿ ನಡೆದಿದೆ.

    ಮೃತ ಮಹಿಳೆಗೆ ಈಗಾಗಲೇ ಒಂದು ಹೆಣ್ಣು ಹಾಗೂ ವಿಕಲಚೇತನ ಗಂಡು ಮಗುವಿದ್ದು, ಮತ್ತೆ ಹೆಣ್ಣು ಮಗುವಿಗೆ ಜನ್ಮ ನೀಡುತ್ತಾಳೆ ಎಂದು ಹತ್ಯೆ ಮಾಡಲಾಗಿದೆ. ಹತ್ಯೆ ಮಾಡಿದ ಬಳಿಕ ಆಕೆ ಆತ್ಮಹತ್ಯೆ ಮಾಡಿಕೊಂಡಂತೆ ಬಿಂಬಿಸಲು ನೇಣು ಬಿಗಿಯಲಾಗಿದೆ ಎಂದು ಆರೋಪಿಸಲಾಗಿದೆ. ಘಟನೆಯ ನಂತರ ಆಕೆಯ ಪತಿ ಉದಯ್ ಚೌಹಾಣ್ ಹಾಗೂ ಆತನ ತಾಯಿ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ರಾಷ್ಟ್ರಪಕ್ಷಿ ನವಿಲು ಮಾಂಸ ಭಕ್ಷಣೆಗೆ ಮುಂದಾಗಿದ್ದ ಮೂವರ ಬಂಧನ

    ಮಕ್ಕಳು ಅಳುವುದನ್ನು ನೋಡಿ ಸ್ಥಳೀಯರು ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಬಳಿಕ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು (Police) ಸ್ಥಳವನ್ನು ಪರಿಶೀಲನೆ ನಡೆಸಿ, ಮೃತದೇಹವನ್ನು ಪರಿಕ್ಷೆಗೆ ಕಳಿಸಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದಾರೆ.

    ಮೃತಳ ಸಹೋದರಿ ಈ ಬಗ್ಗೆ ದೂರು ದಾಖಲಿಸಿದ್ದು, ಸ್ಕ್ಯಾನಿಂಗ್‍ನಲ್ಲಿ ಗರ್ಭದಲ್ಲಿ ಹೆಣ್ಣು ಮಗು ಇರುವುದು ಪತ್ತೆಯಾಗಿತ್ತು. ಇದರಿಂದ ಆಕೆಯನ್ನು ಹತ್ಯೆ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಹೇಮ ಮಾಲಿನಿಯೇ ನೃತ್ಯ ಮಾಡುವಂತೆ ಮಾಡಿದೆ- ವಿವಾದಕ್ಕೀಡಾದ ನರೋತ್ತಮ್ ಮಿಶ್ರಾ ಹೇಳಿಕೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮದುವೆಯಾಗಲು ನಿರಾಕರಿಸಿದ ಪ್ರಿಯಕರನನ್ನು ಕೊಡಲಿಯಿಂದ ಕೊಚ್ಚಿ ಕೊಲೆಗೈದ ಯುವತಿ

    ಮದುವೆಯಾಗಲು ನಿರಾಕರಿಸಿದ ಪ್ರಿಯಕರನನ್ನು ಕೊಡಲಿಯಿಂದ ಕೊಚ್ಚಿ ಕೊಲೆಗೈದ ಯುವತಿ

    ರಾಂಚಿ: ಯುವತಿಯೊಬ್ಬಳು ಮದುವೆಯಾಗಲು ನಿರಾಕರಿಸಿದ ಪ್ರಿಯಕರನನ್ನು ಮಲಗಿದ್ದಾಗ ಕೊಡಲಿಯಿಂದ ಕೊಚ್ಚಿ ಕೊಲೆಗೈದ ಘಟನೆ ಜಾರ್ಖಂಡ್‌ನ (Jharkhand) ಕೊಲ್ಹುವಾ ಎಂಬಲ್ಲಿ ನಡೆದಿದೆ.

    ಕೊಲೆಗೈದ ಯುವತಿಯನ್ನು ಅಂಜಲಿ (20) ಎಂದು ಗುರುತಿಸಲಾಗಿದೆ. ಧರ್ಮನ್ ಓರಾನ್ (24) ಕೊಲೆಯಾದ ಯುವಕ ಎಂದು ತಿಳಿದು ಬಂದಿದೆ. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇತ್ತೀಚೆಗೆ ಮದುವೆ ವಿಚಾರ ಬಂದಾಗ ಯುವಕ ನಿರಾಕರಿಸಿದ್ದ. ಇದೇ ಕಾರಣಕ್ಕೆ ಯುವತಿ ಆತನನ್ನು ಕೊಲೆಗೈದಿದ್ದಾಳೆ. ಇದನ್ನೂ ಓದಿ: ಕಾರಿನಲ್ಲಿದ್ದ ಬಾಲಕಿಯನ್ನು ಹೊರಗೆಳೆದು ತುಳಿದ ಆನೆ

    ಅಂಜಲಿ ಕೊಲೆಗೆ ಯೋಜನೆ ರೂಪಿಸಿ ಮಾತನಾಡುವ ನೆಪ ಹೇಳಿ ಧರ್ಮನ್‍ನನ್ನು ನಿರ್ಜನ ಪ್ರದೇಶಕ್ಕೆ ಕರೆಸಿದ್ದಳು. ಸ್ವಲ್ಪ ಹೊತ್ತು ಹರಟೆ ಹೊಡೆದ ನಂತರ ಧರ್ಮನ್ ನೆಲದ ಮೇಲೆ ನಿದ್ರೆಗೆ ಜಾರಿದ್ದಾನೆ. ಈ ವೇಳೆ ಮೊದಲೇ ತಂದಿಟ್ಟಿದ್ದ ಕೊಡಲಿಯಿಂದ ಆತನನ್ನು ಹತ್ಯೆಗೈದಿದ್ದಳು. ಬಳಿಕ ಶವವನ್ನು ಪೊದೆಯಲ್ಲಿ ಮುಚ್ಚಿಟ್ಟು ಪರಾರಿಯಾಗಿದ್ದಳು.

    ಪೊಲೀಸರು (Police) ಆರೋಪಿಯನ್ನು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಮಹಿಳೆಯ ಹಸ್ತಕ್ಷೇಪದಿಂದ ಇಕ್ಕಟ್ಟಿಗೆ ಸರ್ಕಾರ – ದೇವರಗುಡ್ಡದ ಐತಿಹಾಸಿಕ ಕಾರ್ಣಿಕ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಣಿಪುರದಲ್ಲಿ ಓರ್ವ ಉಗ್ರ ಅರೆಸ್ಟ್ – ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

    ಮಣಿಪುರದಲ್ಲಿ ಓರ್ವ ಉಗ್ರ ಅರೆಸ್ಟ್ – ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

    ಇಂಫಾಲ್: ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಹೊಂದಿದ್ದ ಓರ್ವ ಉಗ್ರನನ್ನು ಮಣಿಪುರದ (Manipur) ಪೊಲೀಸರು (Police) ಬಂಧಿಸಿದ್ದಾರೆ. ಆತನ ಬಳಿಯಿದ್ದ 1,200ಕ್ಕೂ ಹೆಚ್ಚು ಕಾರ್ಟ್ರಿಡ್ಜ್‌ಗಳು ಮತ್ತು 68 ಲ್ಯಾಥೋಡ್ ಬಾಂಬ್‍ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಇಂಫಾಲ್‍ನ ಬಳಿ ಟ್ರಾಫಿಕ್ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ, ಒಂದು ಕಾರನ್ನು ತಡೆದಿದ್ದಾರೆ. ಈ ವೇಳೆ ಆತ ಕಾರು ನಿಲ್ಲಿಸದೇ ಪರಾರಿಯಾಗಲು ಯತ್ನಿಸಿದ್ದಾನೆ. ಬಳಿಕ ಪೊಲೀಸರು ಆತನ ಕಾರನ್ನು ಹಿಂಬಾಲಿಸಿ ತಡೆದು ಪರಿಶೀಲನೆ ನಡೆಸಿದಾಗ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಪತ್ತೆಯಾಗಿದೆ. ಇದನ್ನೂ ಓದಿ: ರೇವಣ್ಣ ಆಪ್ತನ ಕಿಡ್ನ್ಯಾಪ್ ಯತ್ನ ಕೇಸ್ – ಇನ್ಸ್‌ಪೆಕ್ಟರ್‌ಗೆ ಭೂಗತ ಪಾತಕಿ ಲಿಂಕ್

    7.62 ಎಂಎಂ ಕಾರ್ಟ್ರಿಡ್ಜ್‌ನ 573 ಸುತ್ತುಗಳು ಮತ್ತು 5.56 ಎಂಎಂ 294 ಸುತ್ತುಗಳು, ಜೊತೆಗೆ 40 ಎಂಎಂ ಲ್ಯಾಥೋಡ್ ಸ್ಫೋಟಕಗಳನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತ ವ್ಯಕ್ತಿಯನ್ನು ಉಗ್ರಗಾಮಿ ಎಂದು ಗುರುತಿಸಲಾಗಿದೆ. ಆತನ ಹೆಸರನ್ನು ಪೊಲೀಸರು ಬಹಿರಂಗಪಡಿಸಿಲ್ಲ.

    ಆರೋಪಿಯನ್ನು ವಿಚಾರಣೆ ನಡೆಸಲಾಗುತ್ತಿದೆ. ಅಲ್ಲದೇ ಪತ್ತೆಯಾದ ವಸ್ತುಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಒಂದೂವರೆ ಸಾವಿರ ರೂ.ಗಾಗಿ ಮಗನಿಂದ ತಂದೆಯ ಬರ್ಬರ ಹತ್ಯೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರೇವಣ್ಣ ಆಪ್ತನ ಕಿಡ್ನ್ಯಾಪ್ ಯತ್ನ ಕೇಸ್ – ಇನ್ಸ್‌ಪೆಕ್ಟರ್‌ಗೆ ಭೂಗತ ಪಾತಕಿ ಲಿಂಕ್

    ರೇವಣ್ಣ ಆಪ್ತನ ಕಿಡ್ನ್ಯಾಪ್ ಯತ್ನ ಕೇಸ್ – ಇನ್ಸ್‌ಪೆಕ್ಟರ್‌ಗೆ ಭೂಗತ ಪಾತಕಿ ಲಿಂಕ್

    ಬೆಂಗಳೂರು: ಹೆಚ್.ಡಿ ರೇವಣ್ಣ (H.D Revanna) ಆಪ್ತ ಅಶ್ವಥ್ ನಾರಾಯಣ್ ಗೌಡನ ಅಪಹರಣ ಯತ್ನ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಐಎಸ್‍ಡಿ ಇನ್ಸ್‌ಪೆಕ್ಟರ್ (Inspector) ಅಶೋಕ್ ಭೂಗತ ಪಾತಕಿ ಬಾಂಬೆ ರವಿ ಜೊತೆ ಸಂಪರ್ಕದಲ್ಲಿರುವುದು ಬೆಳಕಿಗೆ ಬಂದಿದೆ.

    ಬಾಂಬೆ ರವಿ ಹಾಗೂ ಆತನ ಸಹಚರರನ್ನು ಬಳಸಿಕೊಂಡು ಹಫ್ತಾ ವಸೂಲಿ, ಬಡ್ಡಿ ವ್ಯವಹಾರ ಹಾಗೂ ಬೆದರಿಕೆ ಹಾಕಿರುವ ಆರೋಪ ಕೂಡ ಇನ್ಸ್‌ಪೆಕ್ಟರ್ ಅಶೋಕ್ ವಿರುದ್ಧ ಕೇಳಿ ಬಂದಿದೆ. ರೇವಣ್ಣ ಆಪ್ತನ ಅಪಹರಣ ಯತ್ನ ಪ್ರಕರಣದಲ್ಲಿ ಲೊಕೇಷನ್ ಸೇರಿದಂತೆ ಪ್ರತಿ ವಿಚಾರದಲ್ಲೂ ಆರೋಪಿಗಳಿಗೆ ಇನ್ಸ್‌ಪೆಕ್ಟರ್ ಸಹಾಯ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಅಲ್ಲದೇ ನಿರ್ಮಾಪಕ ಉಮಾಪತಿ ಗೌಡ ಹಾಗೂ ಉದ್ಯಮಿ ದೀಪಕ್ ಗೌಡ ಹತ್ಯೆಗೆ ಸಂಚು ರೂಪಿಸಿದ್ದ ಪ್ರಕರಣದಲ್ಲೂ ಇನ್ಸ್‌ಪೆಕ್ಟರ್ ಪಾತ್ರ ಇರುವ ಶಂಕೆ ಇದೆ. ಇದನ್ನೂ ಓದಿ: ನಾವೆಲ್ಲ ಗೆಲ್ಲುವುದು ಮೋದಿ ಹೆಸರಿಂದ, ಮೋದಿಯೇ ನಮ್ಮ ದೇವರು: ಪ್ರತಾಪ್ ಸಿಂಹ

    ಉಮಾಪತಿ ಗೌಡ ಕೇಸಲ್ಲಿ ಅರೆಸ್ಟ್ ಆಗಿದ್ದ ರೌಡಿ ಶೀಟರ್ ಸಂತು ಹಾಗೂ ಕರಿಯಾ ರಾಜೇಶ್ ಆರೋಪಿ ಅಶೋಕ್‍ಗೆ ಹುಟ್ಟುಹಬ್ಬದ ಶುಭಾಶಯದ ಸ್ಟೇಟಸ್ ಹಾಕಿಕೊಂಡಿದ್ದರು. ಅಲ್ಲದೇ ಇನ್ಸ್‌ಪೆಕ್ಟರ್‌ಗೆ ಪ್ರಮೋಷನ್ ಆದಾಗ ಸಹ ಸೋಷಿಯಲ್ ಮೀಡಿಯಾದಲ್ಲಿ ಹಾಕಿಕೊಂಡಿದ್ದರು. ಇದೇ ಕಾರಣಕ್ಕೆ ಈ ಪ್ರಕರಣಗಳಲ್ಲಿ ಆತನ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ.

    ಈ ಹಿಂದೆ ಸಿಸಿಬಿಯಲ್ಲಿ (CCB) ಇನ್ಸ್‌ಪೆಕ್ಟರ್ ಆಗಿದ್ದ ಅಶೋಕ್, ರೌಡಿಗಳ ಜೊತೆ ಲಿಂಕ್ ಬೆಳೆಸಿಕೊಂಡು ಸಮಾಜಘಾತುಕ ಶಕ್ತಿಗಳ ಜೊತೆ ಸೇರಿಕೊಂಡಿದ್ದಾರೆ ಎಂದು ಆರೋಪ ಕೇಳಿ ಬಂದಿದೆ. ಇದನ್ನೂ ಓದಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಲಗೈ ಬಂಟ ಬರ್ಬರ ಹತ್ಯೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಗರಸಭಾ ಸದಸ್ಯನ ಹತ್ಯೆಗೆ ಯತ್ನ – ಮೂವರು ವಶಕ್ಕೆ

    ನಗರಸಭಾ ಸದಸ್ಯನ ಹತ್ಯೆಗೆ ಯತ್ನ – ಮೂವರು ವಶಕ್ಕೆ

    ಚಿಕ್ಕಬಳ್ಳಾಪುರ: ಚಿಂತಾಮಣಿಯ (Chintamani) ನಗರಸಭಾ ಸದಸ್ಯನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಪೊಲೀಸರು (Police) ವಶಕ್ಕೆ ಪಡೆದಿದ್ದಾರೆ.

    ಪೊಲೀಸರು ವಶಕ್ಕೆ ಪಡೆದ ಆರೋಪಿಗಳನ್ನು ಜಾನ್, ದಿನೇಶ್ ಹಾಗೂ ಅರುಣ್ ಎಂದು ಗುರುತಿಸಲಾಗಿದೆ. ಅ.13 ರಂದು ಆರೋಪಿಗಳು ಆಗ್ರಹಾರ ಮುರುಳಿ ಎಂಬವರ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿ ಹತ್ಯೆಗೆ ಯತ್ನಿಸಿದ್ದರು. ಬಳಿಕ ತೀವ್ರ ಗಾಯಗೊಂಡಿದ್ದ ನಗರಸಭಾ ಸದಸ್ಯನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ ಪ್ರಾಣಾಪಾಯದಿಂದ ಪಾರಾಗಿರುವ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ತರಬೇತಿ ವಿಮಾನ ಪತನ – ಇಬ್ಬರೂ ಪೈಲಟ್ ಗಂಭೀರ

    ಇದೇ ವಿಚಾರವಾಗಿ ಚಿಂತಾಮಣಿ ನಗರ ಬಂದ್ ಸಹ ಮಾಡಲಾಗಿತ್ತು. ಈಗ ಪೊಲೀಸರು ಮೂವರನ್ನ ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ಬಳಿಕವಷ್ಟೇ ಹತ್ಯೆ ಯತ್ನಕ್ಕೆ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಬೊಮ್ಮಾಯಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ ಮೋದಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಕ್ರಮ ಮರಳು ದಂಧೆ ಪ್ರಶ್ನಿಸಿದ್ದಕ್ಕೆ ಮಾರಣಾಂತಿಕ ಹಲ್ಲೆ – ನದಿಗೆ ಎಸೆಯಲು ಪ್ಲಾನ್

    ಅಕ್ರಮ ಮರಳು ದಂಧೆ ಪ್ರಶ್ನಿಸಿದ್ದಕ್ಕೆ ಮಾರಣಾಂತಿಕ ಹಲ್ಲೆ – ನದಿಗೆ ಎಸೆಯಲು ಪ್ಲಾನ್

    ಯಾದಗಿರಿ: ಅಕ್ರಮ ಮರಳು ದಂಧೆಯನ್ನು (Illegal Sand Trade) ಪ್ರಶ್ನಿಸಿದ ಇಬ್ಬರು ವ್ಯಕ್ತಿಗಳನ್ನು ಅಪಹರಿಸಿ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಶಹಾಪುರದ (Shahapur) ವಿಭೂತಳ್ಳಿ ಬಳಿ ನಡೆದಿದೆ.

    ರಾಜು ನಡಿಹಾಳ್ ಹಾಗೂ ಶರಣಗೌಡ ಹಯ್ಯಾಳ ಹಲ್ಲೆಗೊಳಗಾದವರು. ರೌಡಿ ಶೀಟರ್ ವಿಜಯ ರಾಠೋಡ್ ಹಾಗೂ ಇತರರಿಂದ ಅಪಹರಣ ನಡೆದಿದೆ ಎಂದು ಆರೋಪಿಸಲಾಗಿದೆ. ವಿಜಯ ರಾಠೋಡ್ ಗ್ರಾಮ ಪಂಚಾಯ್ತಿ ಸದಸ್ಯನಾಗಿದ್ದು, ಸಚಿವ ಶರಣಬಸಪ್ಪ ದರ್ಶನಾಪೂರ ಬೆಂಬಲಿಗ ಎಂಬ ಮಾತುಗಳು ಕೇಳಿ ಬಂದಿವೆ. ಇದನ್ನೂ ಓದಿ: ಜಿಂಕೆ ತಪ್ಪಿಸಲು ಹೋಗಿ ಕಾರು ಅಪಘಾತ: ಮೂವರು ಗಂಭೀರ

    ಆರೋಪಿಗಳು ಇಬ್ಬರನ್ನೂ ಕಾರಿನಲ್ಲಿ ಅಪಹರಿಸಿ ಡಿಕ್ಕಿಯೊಳಗೆ ಹಾಕಿ, ರಾಡ್‍ನಿಂದ ಹಲ್ಲೆ ನಡೆಸಿದ್ದಾರೆ. ಬಳಿಕ ಇಬ್ಬರನ್ನೂ ಜೀವಂತವಾಗಿ ನದಿಗೆ ಎಸೆಯಲು ಸಂಚು ರೂಪಿಸಿದ್ದರು ಎನ್ನಲಾಗಿದೆ. ಸ್ಥಳೀಯರು ಗಮನಿಸಿದ್ದರಿಂದ ಇಬ್ಬರನ್ನೂ ಬಿಟ್ಟು ಹೋಗಿದ್ದಾರೆ. ಹಲ್ಲೆಗೊಳಗಾದ ಇಬ್ಬರನ್ನೂ ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಪ್ರಕರಣದ ಎ1 ಆರೋಪಿ ಬಸುರೆಡ್ಡಿ ಮಲ್ಲಾಬಾದ್ ಎಂಬಾತ ಕೃಷ್ಣಾ ನದಿಯಲ್ಲಿ ಅಕ್ರಮ ಮರಳು ದಂಧೆ ಮಾಡುತ್ತಿದ್ದ. ಇದನ್ನು ರಾಜು ಹಾಗೂ ಶರಣಗೌಡ ಪ್ರಶ್ನಿಸಿದ್ದರು. ಇದೇ ಕಾರಣಕ್ಕೆ ಬಸುರೆಡ್ಡಿಯ ಸ್ನೇಹಿತನಾದ ವಿಜಯ ರಾಠೋಡ್ ಹಾಗೂ ಆತನ ಸಹಚರರು ಅಪಹರಿಸಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

    ಇದರಲ್ಲಿ ಶರಣಗೌಡ ಸ್ಥಿತಿ ಚಿಂತಾಜನಕವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಮುಂದುವರೆದಿದೆ. ರಾಜುವಿನ ಎರಡೂ ಕಾಲುಗಳಿಗೆ ಬಲವಾದ ಪೆಟ್ಟು ಬಿದ್ದಿದೆ. ಘಟನೆ ನಡೆದು ನಾಲ್ಕು ದಿನಗಳ ನಂತರ ರಾಜುವಿನ ತಂದೆ ಬಸಯ್ಯ ಗುತ್ತೇದಾರ ನೀಡಿರುವ ದೂರಿನ ಮೇಲೆ ಶಹಾಪುರ ಪೊಲೀಸ್ ಠಾಣೆಯಲ್ಲಿ ವಿಜಯ ರಾಠೋಡ್, ಬಸುರೆಡ್ಡಿ, ಮಲ್ಲಿಕಾರ್ಜುನ, ಸೇರಿದಂತೆ ಏಳು ಜನ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಹಮಾಸ್ ಉಗ್ರರ ಕಾರ್ಯತಂತ್ರವನ್ನೇ ಅನುಸರಿಸಿದ ಇಸ್ರೇಲ್ – ಇಂದು ಇಬ್ಬರು ಒತ್ತೆಯಾಳುಗಳ ರಿಲೀಸ್‌ಗೆ ಸಿದ್ಧತೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸ್ವಿಸ್ ಮಹಿಳೆಯನ್ನು ದೆಹಲಿಗೆ ಕರೆಸಿ ಹತ್ಯೆ ಮಾಡಿದ ಸ್ನೇಹಿತ

    ಸ್ವಿಸ್ ಮಹಿಳೆಯನ್ನು ದೆಹಲಿಗೆ ಕರೆಸಿ ಹತ್ಯೆ ಮಾಡಿದ ಸ್ನೇಹಿತ

    ನವದೆಹಲಿ: ಸ್ವಿಟ್ಜರ್ಲೆಂಡ್‌ನ (Switzerland) ಮಹಿಳೆಯೊಬ್ಬಳನ್ನು (Woman) ತನ್ನ ದೇಶದಿಂದ ದೆಹಲಿಗೆ (Delhi) ಕರೆಸಿಕೊಂಡು ಕೈಕಾಲು ಕಟ್ಟಿ ಹತ್ಯೆಗೈದ ಘಟನೆ ನಡೆದಿದೆ.

    ಹತ್ಯೆಗೊಳಗಾದ ಮಹಿಳೆಯನ್ನು ಲೀನಾ ಬರ್ಗರ್ ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುಪ್ರೀತ್ ಸಿಂಗ್ ಎಂಬಾತನನ್ನು ಪೊಲೀಸರು (Police) ಬಂಧಿಸಿದ್ದಾರೆ. ಆರೋಪಿ ಸ್ವಿಟ್ಜರ್ಲೆಂಡ್‌ಗೆ ತೆರಳಿದ್ದಾಗ ಮಹಿಳೆಯನ್ನು ಭೇಟಿಯಾಗಿದ್ದು, ಬಳಿಕ ಇಬ್ಬರೂ ಸ್ನೇಹಿತರಾಗಿದ್ದರು. ಇದನ್ನೂ ಓದಿ: ಅಬ್ಬಬ್ಬಾ! ಬ್ಲೌಸ್‌ನಲ್ಲೂ ಚಿನ್ನ ಸಾಗಾಟ – ಬೆಂಗ್ಳೂರು ಏರ್ಪೋರ್ಟ್‌ನಲ್ಲಿ ಸಿಕ್ಕಿಬಿದ್ದ ಮಹಿಳೆ ಅಂದರ್‌

    ಮಹಿಳೆಯನ್ನು ಭೇಟಿಯಾಗಲು ಆರೋಪಿ ಆಗಾಗ ಸ್ವಿಟ್ಜರ್ಲೆಂಡ್‌ಗೆ ತೆರಳುತ್ತಿದ್ದ. ಆಕೆಗೆ ಬೇರೆ ವ್ಯಕ್ತಿಯೊಂದಿಗೆ ಸಂಬಂಧವಿದೆ ಎಂದು ಶಂಕಿಸಿ ಆರೋಪಿ ಆಕೆಯನ್ನು ಹತ್ಯೆ ಮಾಡಿದ್ದಾನೆ. ಮಹಿಳೆಯ ಹತ್ಯೆಗೆ ಸಂಚು ರೂಪಿಸಿ ಭಾರತಕ್ಕೆ ಬರುವಂತೆ ಆಕೆಯನ್ನು ಕರೆಸಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿದ್ದಾರೆ.

    ಮಹಿಳೆ ಅ.11 ರಂದು ಭಾರತಕ್ಕೆ ಬಂದಿದ್ದರು. ಐದು ದಿನಗಳ ಬಳಿಕ ಆಕೆಯನ್ನು ತನ್ನ ರೂಮಿಗೆ ಕರೆದುಕೊಂಡು ಹೋಗಿದ್ದಾನೆ. ಬಳಿಕ ಅವಳ ಕೈ ಮತ್ತು ಕಾಲುಗಳನ್ನು ಕಟ್ಟಿ ಕೊಲೆ ಮಾಡಿದ್ದಾನೆ. ಸ್ವಲ್ಪ ದಿನ ಮೃತ ದೇಹವನ್ನು ಕಾರಿನಲ್ಲಿ ಇರಿಸಿಕೊಂಡಿದ್ದ. ದುರ್ವಾಸನೆ ಬಂದ ಬಳಿಕ ಪ್ಲಾಸ್ಟಿಕ್ ಬ್ಯಾಗ್‍ನಲ್ಲಿ ಹಾಕಿ ರಸ್ತೆಯ ಬದಿಯಲ್ಲಿ ಎಸೆದು ಹೋಗಿದ್ದ. ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ವಾಹನದ ನೋಂದಣಿ ಸಂಖ್ಯೆ ಪಡೆದು ನಂತರ ದೆಹಲಿ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ.

    ಆರೋಪಿಯ ಮನೆಯಲ್ಲಿ 2.25 ಕೋಟಿ ರೂ. ಹಾಗೂ ಎರಡು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದನ್ನೂ ಓದಿ: ಸಾಮಾಜಿಕ ಬಹಿಷ್ಕಾರದಿಂದ ಮನನೊಂದು ವ್ಯಕ್ತಿ ಆತ್ಮಹತ್ಯೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಒಳಗೆ ಬರಬೇಡ ಎಂದ ಪತಿಯನ್ನು ಬಡಿದು ಕೊಂದ ಪತ್ನಿ!

    ಒಳಗೆ ಬರಬೇಡ ಎಂದ ಪತಿಯನ್ನು ಬಡಿದು ಕೊಂದ ಪತ್ನಿ!

    ಮಂಡ್ಯ: ಮನೆಯ ಒಳಗೆ ಬರಬೇಡ ಎಂದಿದ್ದಕ್ಕೆ ಪತಿಯನ್ನು ಆತನ ಪತ್ನಿ (Wife) ಹಾಗೂ ಮಗ ಸೇರಿಕೊಂಡು ಹತ್ಯೆಗೈದ ಘಟನೆ ಮದ್ದೂರಿನ (Maddur) ಚಾಪುರದೊಡ್ಡಿ ಗ್ರಾಮದಲ್ಲಿ ನಡೆದಿದೆ.

    ಮೃತನನ್ನು ಉಮೇಶ್ (45) ಎಂದು ಗುರುತಿಸಲಾಗಿದೆ. ಮೃತನ ಪತ್ನಿ ಸವಿತಾ ಹಾಗೂ ಮಗ ಶಶಾಂಕ್ ಹತ್ಯೆಗೈದ ಆರೋಪಿಗಳಾಗಿದ್ದಾರೆ. ಕಳೆದ ಮೂರು ತಿಂಗಳಿಂದ ಸವಿತಾ ಪತಿಯನ್ನು ತೊರೆದು ಬೆಂಗಳೂರಿನಲ್ಲಿ ಮಗನ ಜೊತೆ ವಾಸವಾಗಿದ್ದಳು. ಗುರುವಾರ ರಾತ್ರಿ ಪಿತೃಪಕ್ಷ ಹಬ್ಬಕ್ಕೆಂದು ಊರಿಗೆ ಬಂದಿದ್ದ ವೇಳೆ ಈ ಘಟನೆ ನಡೆದಿದೆ. ಇದನ್ನೂ ಓದಿ: ಪರಶುರಾಮ ಮೂರ್ತಿ ಫೈಬರ್ ಅಲ್ಲ ಕಂಚು- ಬಿಜೆಪಿಯಿಂದ ವೀಡಿಯೋ ಬಿಡುಗಡೆ

    ಪತ್ನಿ ಮನೆಗೆ ಮರಳಿ ಬಂದಾಗ ಉಮೇಶ್ ಮನೆಯ ಒಳಗೆ ಬರದಂತೆ ತಡೆದಿದ್ದಾನೆ. ಈ ವೇಳೆ ಇಬ್ಬರ ನಡುವೆ ಜಗಳ ನಡೆದಿದೆ. ಬಳಿಕ ಸವಿತಾ ಮಗನನ್ನು ಬೆಂಗಳೂರಿನಿಂದ ಕರೆಸಿಕೊಂಡಿದ್ದಾಳೆ. ಇಬ್ಬರು ಸೇರಿಕೊಂಡು ರೀಪ್‍ನಿಂದ ಉಮೇಶ್ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಉಮೇಶ್ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಬಳಿಕ ಆರೋಪಿಗಳು ಪರಾರಿಯಾಗಿದ್ದಾರೆ.

    ಈ ಸಂಬಂಧ ಬೆಸಗರಹಳ್ಳಿ ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬೇಲೂರು ಚೆನ್ನಕೇಶವ ದೇವಾಲಯ ಪಾರ್ಕಿಂಗ್ ವಿಚಾರದಲ್ಲಿ ಗಲಾಟೆ – ಮಹಿಳೆ ಮೇಲೆ ಹಲ್ಲೆಗೈದ ಸಿಬ್ಬಂದಿ