Tag: Crime Rate

  • ಮಹಿಳೆಯರಿಗೆ ಸುರಕ್ಷಿತವಲ್ಲ ರಾಷ್ಟ್ರ ರಾಜಧಾನಿ ದೆಹಲಿ

    ಮಹಿಳೆಯರಿಗೆ ಸುರಕ್ಷಿತವಲ್ಲ ರಾಷ್ಟ್ರ ರಾಜಧಾನಿ ದೆಹಲಿ

    ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದು, ಕೊರೊನಾ ಮತ್ತು ಲಾಕ್‍ಡೌನ್ ಮಧ್ಯೆಯೂ ಭಾರಿ ಪ್ರಮಾಣದಲ್ಲಿ ಅಪರಾಧ ಪ್ರಕರಣಗಳು ದಾಖಲಾಗಿವೆ.

    ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಬಿಡುಗಡೆ ಮಾಡಿರುವ ದತ್ತಾಂಶಗಳ ಪ್ರಕಾರ, ಬೆಂಗಳೂರು, ಮುಂಬೈ ಸೇರಿದಂತೆ ಇತರೆ ಮಹಾ ನಗರಗಳಿಗಿಂತಲೂ ದೆಹಲಿಯಲ್ಲಿ ಹೆಚ್ಚು ಪ್ರಕರಣ ದಾಖಲಾಗಿದ್ದು ಮಹಿಳೆಯರ ಸುರಕ್ಷಿತೆಯನ್ನು ಪ್ರಶ್ನೆ ಮಾಡುವಂತಾಗಿದೆ. ಇದನ್ನೂ ಓದಿ: ಟ್ರಾಫಿಕ್ ಸಿಗ್ನಲ್‍ನಲ್ಲಿ ಯುವತಿ ಫುಲ್ ಡ್ಯಾನ್ಸ್, ವೀಡಿಯೋ ವೈರಲ್- ಮುಂದೇನಾಯ್ತು?

    2019 ಮತ್ತು 2020 ರ ನಡುವೆ ಶೇ.18 ರಷ್ಟು ಪ್ರಕರಣಗಳು ಕೊರೊನಾ ಮತ್ತು ಲಾಕ್ಡೌನ್ ನಿಂದ ಕುಸಿದಿದ್ದರೂ 2020 ರಲ್ಲಿ ಒಟ್ಟು 2.4 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ದಿನವೊಂದಕ್ಕೆ 650 ಕ್ಕೂ ಹೆಚ್ಚು ಪ್ರಕರಣಗಳನ್ನು ದೆಹಲಿ ಪೊಲೀಸರು ದಾಖಲಿಸಿದ್ದಾರೆ. ಇತರೆ ಮಹಾ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಕಳೆದ ವರ್ಷ 19,964 ಮತ್ತು ಮುಂಬೈನಲ್ಲಿ 50,000 ಪ್ರಕರಣಗಳು ದಾಖಲಾಗಿವೆ ಎಂದು ಎನ್‌ಸಿಆರ್‌ಬಿ ಹೇಳಿದೆ.

    ದೆಹಲಿಯಲ್ಲಿ 2019 ರಲ್ಲಿ 5901 ಕಿಡ್ಯಾಪ್ ಪ್ರಕರಣಗಳು ದಾಖಲಾದರೆ 2020 ರಲ್ಲಿ 4062 ಪ್ರಕರಣಗಳು ದಾಖಲಾಗಿದೆ, 2019 ರಲ್ಲಿ 13395 ಮಹಿಳೆಯರ ಮೇಲೆ ದೌರ್ಜನ್ಯ ಆದ್ರೆ 2020 ರಲ್ಲಿ 10,093 ಪ್ರಕರಣಗಳು ದಾಖಲಾಗಿದೆ, 2019 ರಲ್ಲಿ 521 ಮಹಿಳೆಯರ ಕೊಲೆಯಾದ್ರೆ 2020 ರಲ್ಲಿ 472 ಮಹಿಳೆಯರ ಕೊಲೆಯಾಗಿದೆ. ಇದನ್ನೂ ಓದಿ: ಶೇ.100 ಎಫ್‍ಡಿಐಗೆ ಸರ್ಕಾರದ ಅನುಮತಿ ಬೇಕಿಲ್ಲ – ಟೆಲಿಕಾಂ ಕಂಪನಿಗಳಿಗೆ ಹಲವು ಕೊಡುಗೆ

    ಕಳೆದ ವರ್ಷ ರಾಷ್ಟ್ರ ರಾಜಧಾನಿಯಲ್ಲಿ 10,093 ಕ್ಕೂ ಹೆಚ್ಚು ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳು ದಾಖಲಾಗಿವೆ. ಮುಂಬೈ, ಪುಣೆ, ಗಾಜಿಯಾಬಾದ್, ಬೆಂಗಳೂರು ಅಥವಾ ಇಂದೋರ್ ನಲ್ಲಿ ದಾಖಲಾದ ಪ್ರಕರಣಗಳಿಗಿಂತ ಎರಡು ಪಟ್ಟು ಹೆಚ್ಚು ದೆಹಲಿಯಲ್ಲಿ ದಾಖಲಾಗಿದೆ.

     

  • ಸಿಲಿಕಾನ್ ಸಿಟಿಯಲ್ಲಿ ಈ ವರ್ಷ ರೇಪ್ ಪ್ರಕರಣಗಳೇ ಹೆಚ್ಚು

    ಸಿಲಿಕಾನ್ ಸಿಟಿಯಲ್ಲಿ ಈ ವರ್ಷ ರೇಪ್ ಪ್ರಕರಣಗಳೇ ಹೆಚ್ಚು

    ಬೆಂಗಳೂರು: ಮಹಿಳೆಯರ ಮೇಲಿನ ಅತ್ಯಾಚಾರ ಹೊರತು ಪಡಿಸಿ, ಬೇರೆಲ್ಲಾ ಕ್ರೈಂಗಳು ಸಿಲಿಕಾನ್ ಸಿಟಿಯಲ್ಲಿ ತಗ್ಗಿದಂತೆ ಕಾಣುತ್ತಿವೆ. 2019ರ ಜನವರಿಯಿಂದ ಕೊಲೆ, ದರೋಡೆ, ಸರಗಳ್ಳತನಗಳು ಗಣನೀಯವಾಗಿ ಇಳಿಕೆಯಾಗಿವೆ. ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಕಡಿಮೆ ಕ್ರೈಂಗಳು ವರದಿಯಾಗಿವೆ.

    ಸಿಲಿಕಾನ್ ಸಿಟಿಯಲ್ಲಿ ಈ ವರ್ಷ 183 ಕೊಲೆ, 31 ಡಕಾಯಿತಿ, 461 ದರೋಡೆ ಮತ್ತು 195 ಸರಗಳ್ಳತನ ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದು ತುಂಬಾ ಕಡಿಮೆ ಕ್ರೈಂ ರೇಟ್ ಆಗಿದೆ. ಆದರೆ ಉಡ್ತಾ ಪಂಜಾಬ್ ಸಿನಿಮಾ ಮಾದರಿಯಲ್ಲಿ ಉಡ್ತಾ ಬೆಂಗಳೂರು ಆಗಿದೇಯಾ ಎನ್ನುವ ಸಂಶಯ ಕಾಡುತ್ತಿದೆ.

    ಮಾದಕವ್ಯಸನಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಕಳೆದೆರಡು ವರ್ಷದಲ್ಲಿ ಕಂಡುಬಂದ ಪ್ರಕರಣಗಳಿಗಿಂತ ಹೆಚ್ಚು ಅಮಲಿನ ಪ್ರಕರಣಗಳು ಈ ಬಾರಿ ದಾಖಲಾಗಿದ್ದು, ಎನ್‍ಡಿಪಿಎಸ್ (ಮಾದಕವಸ್ತು ನಿಯಂತ್ರಣ ಕಾಯ್ದೆ) ಅಡಿ ಈ ವರ್ಷ ಬರೋಬ್ಬರಿ 700 ಪ್ರಕರಣ ದಾಖಲಾಗಿವೆ. 2017ರಲ್ಲಿ 354 ಪ್ರಕರಣ, 2018ರಲ್ಲಿ 286 ಕೇಸ್ ದಾಖಲಾಗಿದ್ರೆ ಈ ಬಾರಿ 700 ಎನ್‍ಡಿಪಿಎಸ್ ಪ್ರಕರಣಗಳು ದಾಖಲಾಗಿದ್ದು ಆಘಾತಕಾರಿ ವಿಚಾರವಾಗಿದೆ.

    ರಾಜ್ಯ ರಾಜಧಾನಿಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಇನ್ನೂ ನಿಂತಿಲ್ಲ. ಮಹಿಳೆಯರ ಮೇಲೆ ಎಗ್ಗಿಲ್ಲದೇ ದೌರ್ಜನ್ಯ ದಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ಅತ್ಯಾಚಾರದಂತಹ ಪ್ರಕರಣಗಳು ಸಹ ವಿಪರೀತ ಏರಿಕೆಯಾಗಿದ್ದು, ಈ ವರ್ಷ 132 ಅತ್ಯಾಚಾರ ಕೇಸ್, 712 ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ.

    ಲೈಂಗಿಕ ದೌರ್ಜನ್ಯ ಮತ್ತು ಪೋಕ್ಸೊ ದಂತಹ ಪ್ರಕರಣಗಳು ಕಡಿಮೆಯಾದರೂ ಅತ್ಯಾಚಾರಗಳ ಸಂಖ್ಯೆ ಜಾಸ್ತಿಯಾಗಿವೆ. ಮತ್ತೊಂದು ಆಘಾತಕಾರಿ ವಿಚಾರ ಅಂದ್ರೆ ಈ ವರ್ಷ ಬರೋಬ್ಬರಿ 10,000 ಕ್ಕಿಂತ ಹೆಚ್ಚು ಸೈಬರ್ ಕ್ರೈಂ ಪ್ರಕರಣಗಳು ದಾಖಲಾಗಿವೆ. ಆದರೆ ಕಳೆದ ವರ್ಷ ಇಂತಹ ಪ್ರಕರಣಗಳ ಸಂಖ್ಯೆ 5,000 ದಷ್ಟು ಮಾತ್ರ ಇತ್ತು. ಸೈಬರ್ ಕ್ರೈಂ ದ್ವಿಗುಣಗೊಂಡಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಹಿರಿಯ ಪೊಲೀಸರು ಹೇಳುತ್ತಿದ್ದಾರೆ.

  • ಅಪರಾಧ ನಗರಗಳ ಪಟ್ಟಿಯಲ್ಲಿ ಬೆಂಗ್ಳೂರಿಗೆ 2ನೇ ಸ್ಥಾನ ಸಿಕ್ಕಿದ್ದು ಯಾಕೆ: ರಾಮಲಿಂಗಾ ರೆಡ್ಡಿ ನಿಜವಾದ ಕಾರಣ ವಿವರಿಸಿದ್ರು

    ಅಪರಾಧ ನಗರಗಳ ಪಟ್ಟಿಯಲ್ಲಿ ಬೆಂಗ್ಳೂರಿಗೆ 2ನೇ ಸ್ಥಾನ ಸಿಕ್ಕಿದ್ದು ಯಾಕೆ: ರಾಮಲಿಂಗಾ ರೆಡ್ಡಿ ನಿಜವಾದ ಕಾರಣ ವಿವರಿಸಿದ್ರು

    ಬೆಂಗಳೂರು: ಟ್ರಾಫಿಕ್ ಪೊಲೀಸರು ಜಾಸ್ತಿ ಕಾರ್ಯಚರಣೆ ಮಾಡಿದ್ದ ಹಿನ್ನೆಲೆಯಲ್ಲಿ ದೇಶದಲ್ಲಿ ಅಪರಾಧ ಪ್ರಕರಣಗಳು ದಾಖಲಾದ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಎರಡನೇ ಸ್ಥಾನ ಪಡೆದಿದೆ ಎಂದು ಗೃಹಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.

    ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ ಬಿಡುಗಡೆಗೊಳಿಸಿದ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ ಬೆಂಗಳೂರು ಅತ್ಯಾಧಿಕ ಅಪರಾಧ ಪ್ರಕರಣ ದಾಖಲಾದ ನಗರ ಎಂಬ ವರದಿಯಾಗಿತ್ತು. ಆದರೆ ನಗರದಲ್ಲಿ ನಡೆಯುತ್ತಿರುವ ಅಪರಾಧ ಪ್ರಕರಣಗಳ ಅಂಕಿ ಅಂಶಗಳನ್ನು ಗಮನಿಸಿದ ಸಂದರ್ಭದಲ್ಲಿ ಕಳೆದ ಒಂದು ವರ್ಷದಲ್ಲಿ ಸುಮಾರು ಒಂದು ಸಾವಿರ ಪ್ರಕರಣಗಳು ಕಡಿಮೆಯಾಗಿವೆ ಎಂದು ಸ್ಪಷ್ಟಪಡಿಸಿದರು.

    ಶುಕ್ರವಾರ ರಾಮಲಿಂಗಾರೆಡ್ಡಿರವರು ಬೆಂಗಳೂರು ನಗರ ಸಿ.ಎ.ಆರ್ ಕೇಂದ್ರ ಘಟಕದಲ್ಲಿ ನಿರ್ಮಿಸುತ್ತಿರುವ 192 ಪೊಲೀಸ್ ವಸತಿಗೃಹಗಳ ಸಮುಚ್ಛಯದ ನಿರ್ಮಾಣಕ್ಕಾಗಿ ಇಂದು ಶಂಕುಸ್ಥಾಪನೆ ನಡೆಸಿದರು. ಈ ವೇಳೆ ಮಾಧ್ಯಮಗಳ ಪ್ರಶ್ನೆ ಕೇಳಿದಾಗ, ನೀವು ಈ ಪ್ರಶ್ನೆಯನ್ನು ಕೇಳುತ್ತೀರಿ ಎನ್ನುವ ಕಾರಣಕ್ಕಾಗಿ ನಾನು ತಯಾರಿ ಮಾಡಿಕೊಂಡೆ ಬಂದಿದ್ದೇನೆ ಎಂದು ಹೇಳಿ ತಮ್ಮ ಕೈಯಲ್ಲಿದ್ದ ಡೇಟಾವನ್ನು ನೀಡಲು ಆರಂಭಿಸಿದರು. (ಇದನ್ನೂ ಓದಿ:  ಜನ್ರಿಗೆ ಫೈನ್ ಹಾಕಿ ಸರ್ಕಾರಕ್ಕೆ ಕೋಟಿ ಕೋಟಿ ದುಡಿದು ಕೊಟ್ಟ ಬೆಂಗ್ಳೂರು ಟ್ರಾಫಿಕ್ ಪೊಲೀಸರು!)

    ಅಪರಾಧ ಪ್ರಕರಣಗಳಲ್ಲಿ ಕೊಲೆ, ಸುಲಿಗೆ, ದರೋಡೆ, ಸರಗಳ್ಳತನ, ಮನೆ ಕಳ್ಳತನ ಸೇರಿದಂತೆ 9 ವಿಭಾಗಗಳಾಗಿ ವಿಂಗಡಿಸಲಾಗಿದೆ. ಇದರಲ್ಲಿ 2015 ರಲ್ಲಿ ಸುಮಾರು 17,435 ಪ್ರಕರಣಗಳು ದಾಖಲಾಗಿದೆ. 2016 ರಲ್ಲಿ 16,797 ಪ್ರಕರಣಗಳು ದಾಖಲಾಗಿದೆ. ಆಂದರೆ ವಾರ್ಷಿಕವಾಗಿ ಸುಮಾರು ಒಂದು ಸಾವಿರ ಪ್ರಕರಣಗಳು ಕಡಿಮೆಯಾಗಿದೆ. ಆದರೆ ರಾಷ್ಟ್ರೀಯ ಅಪರಾಧ ದಾಖಲೆಗಳಲ್ಲಿ ನಗರ ಎರಡನೇ ಸ್ಥಾನ ಪಡೆದುಕೊಳ್ಳಲು ಪ್ರಮುಖ ಕಾರಣ ಟ್ರಾಫಿಕ್ ಸಂಬಂಧಿಸಿದಂತೆ ಐಪಿಸಿ 283ರ ಅಡಿ ದಾಖಲಾದ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದೆ. 2015 ರಲ್ಲಿ ಈ ಕುರಿತು ಕೇವಲ 3,502 ಪ್ರಕರಣಗಳು ಮಾತ್ರ ದಾಖಲಾಗಿದ್ದವು. 2016 ರಲ್ಲಿ 13,759 ಪ್ರಕರಣಗಳು ದಾಖಲಾಗಿದೆ. ಸುಮಾರು 10 ಸಾವಿರ ಪ್ರಕರಣಗಳ ಸಂಖ್ಯೆ ಟ್ರಾಫಿಕ್‍ನಲ್ಲಿ ಹೆಚ್ಚಳವಾಗಿದೆ. ನಗರ ಪೊಲೀಸರು ಹೆಚ್ಚು ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನು ನಗರದಲ್ಲಿ ಐಟಿ ಉದ್ಯಮಗಳು ಹೆಚ್ಚಾಗಿರುವುದರಿಂದ ಸೈಬರ್ ಪ್ರಕರಣಗಳು ಹೆಚ್ಚಾಗಿದೆ ಎಂದು ವಿವರಿಸಿದರು. ನಮ್ಮ ಪೊಲೀಸರು ಚೆನ್ನಾಗಿ ಕಾರ್ಯನಿರ್ವಹಿಸುತ್ತಾರೆ ಹೀಗಾಗಿ ನಾವು ನಮ್ಮ ಬೆನ್ನನ್ನು ತಟ್ಟಿಕೊಳ್ಳಬೇಕು ಎಂದು ತಿಳಿಸಿದರು.

    ರಾಷ್ಟ್ರೀಯ ಅಪರಾಧ ದಾಖಲೆ ವಿಭಾಗದ 2016ನೇ ವರದಿ ಪ್ರಕಾರ ದೇಶದ 19 ಮೆಟ್ರೊಪೊಲಿಟನ್ ನಗರಗಳಲ್ಲಿ ಅಪರಾಧ, ಹಿಂಸೆ, ಕೊಲೆ, ಲೈಂಗಿಕ ಕಿರುಕುಳ, ಅತ್ಯಾಚಾರ ಇತ್ಯಾದಿ ಘಟನೆಗಳ ಬಗ್ಗೆ ದಾಖಲಾದ ಪ್ರಕರಣದ ಆಧಾರದಲ್ಲಿ ಬೆಂಗಳೂರು ಎರಡನೇ ಸ್ಥಾನದಲ್ಲಿದೆ. ಅಲ್ಲದೇ ಮಹಿಳೆಯರು ಹಾಗೂ ಮಕ್ಕಳ ಮೇಲೆ ನಡೆಯುವ ಅಪರಾಧ ಪ್ರಕರಣಗಳಲ್ಲಿ ಮೂರನೇ ಸ್ಥಾನದಲ್ಲಿದೆ. ನಂತರದ ಸ್ಥಾನವನ್ನು ಮುಂಬೈ ನಗರ ಪಡೆದುಕೊಂಡಿದೆ.

    ಏನಿದುಐಪಿಸಿ ಸೆಕ್ಷನ್ 283?
    ಐಪಿಸಿ 283 ಪ್ರಕಾರ, ಸಾರ್ವಜನಿಕ ರಸ್ತೆ ಅತಿಕ್ರಮಣ ತಪ್ಪು. ಫುಟ್‍ಪಾತ್‍ನಲ್ಲಿ ಪಾರ್ಕಿಂಗ್ ಮಾಡೋದು ಅಪರಾಧ ಎಂದು ಪರಿಗಣಿಸಲಾಗುತ್ತದೆ. ಮನೆ ಮುಂದಿನ ರಸ್ತೆಯಲ್ಲಿ ವಾಹನ ನಿಲ್ಲಿಸುವುದು ಅಪರಾಧ. ಮನೆ ಎದುರಿನ ಫುಟ್‍ಪಾತ್ ಮೇಲೆ ಪಾರ್ಕಿಂಗ್ ಮಾಡೋದೂ ಅಪರಾಧ. ಪೊಲೀಸ್ ನವರು ಕಂಪ್ಲೇಂಟ್ ಹಾಕಿ ಎಫ್‍ಐಆರ್ ಹಾಕುತ್ತಾರೆ. ವಾಹನ ಸೀಝ್ ಮಾಡಿ ಎತ್ತಕೊಂಡು ಹೋಗ್ತಾರೆ. 90 ದಿನಗಳ ಒಳಗೆ ಚಾರ್ಜ್ ಶೀಟ್ ಹಾಕುತ್ತಾರೆ. ಅಪರಾಧ ಸಾಬೀತಾದ್ರೆ 200 ರೂ. ದಂಡ ಕಟ್ಟಬೇಕಾಗುತ್ತದೆ ಮತ್ತು ಆ ದಂಡವನ್ನ ಕೋರ್ಟಿನಲ್ಲೇ ಕಟ್ಟಬೇಕಾಗುತ್ತದೆ.

    https://www.youtube.com/watch?v=oh8lPilttTE