Tag: Cricket Team

  • ಗುರುವಾರ ಟೀಂ ಇಂಡಿಯಾ ಆಟಗಾರರನ್ನು ಭೇಟಿಯಾಗಲಿರುವ ಪ್ರಧಾನಿ ಮೋದಿ

    ಗುರುವಾರ ಟೀಂ ಇಂಡಿಯಾ ಆಟಗಾರರನ್ನು ಭೇಟಿಯಾಗಲಿರುವ ಪ್ರಧಾನಿ ಮೋದಿ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಜುಲೈ 4 ರಂದು ಬೆಳಗ್ಗೆ 11 ಗಂಟೆಗೆ ಟಿ20 ವಿಶ್ವಕಪ್ ವಿಜೇತ ಭಾರತ ತಂಡವನ್ನು ಭೇಟಿಯಾಗಿ ಅಭಿನಂದಿಸಲಿದ್ದಾರೆ.

    ಭಾರೀ ಮಳೆಯಿಂದಾಗಿ ಟೀಂ ಇಂಡಿಯಾ (Team India) ಎಲ್ಲಾ ಆಟಗಾರರು, ಬಿಸಿಸಿಐ ಅಧಿಕಾರಿಗಳು ಮತ್ತು ಸಹಾಯಕ ಸಿಬ್ಬಂದಿ ಬಾರ್ಬಡೋಸ್‌ನಲ್ಲಿ (Barbados) ಸಿಲುಕಿಕೊಂಡರು. ಅಂತಿಮವಾಗಿ ತಂಡವು ಬಾರ್ಬಡೋಸ್‌ನಿಂದ ವಿಶೇಷ ಏರ್ ಇಂಡಿಯಾ ವಿಮಾನದಲ್ಲಿ ಹೊರಟಿದ್ದು, ಮತ್ತು ನಾಳೆ ಮುಂಜಾನೆ ರಾಷ್ಟ್ರ ರಾಜಧಾನಿಯನ್ನು ತಲುಪಲಿದ್ದಾರೆ.

    ವಿಶ್ವಕಪ್‌ ಗೆದ್ದ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು, ರೋಹಿತ್ ಶರ್ಮಾ (Rohit Sharma) ಮತ್ತು ವಿರಾಟ್ ಕೊಹ್ಲಿ (Virat Kohli) ಸೇರಿದಂತೆ ಟೀಂ ಇಂಡಿಯಾ ಆಟಗಾರರೊಂದಿಗೆ ಮಾತನಾಡಿದ್ದರು. ಇದರ ಫೋಟೋಗಳನ್ನು ಕೂಡ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿತ್ತು. ಇದೀಗ ಅವರನ್ನು ಖುದ್ದು ಭೇಟಿಯಾಗಿ ಐತಿಹಾಸಿಕ ಹಾಗೂ ಸ್ಮರಣೀಯ ವಿಜಯಕ್ಕಾಗಿ ಅಭಿನಂದಿಸಲಿದ್ದಾರೆ.

    ಬೆರಿಲ್ ಚಂಡಮಾರುತದಿಂದಾಗಿ ಬಾರ್ಬಡೋಸ್ ಮತ್ತು ಕೆರಿಬಿಯನ್‌ನಲ್ಲಿ ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಬಂದ್‌ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ತಂಡವು ಹೋಟೆಲ್‌ನಲ್ಲಿ ಉಳಿದುಕೊಂಡಿತ್ತು. ಇದನ್ನೂ ಓದಿ: ಟಿ20 ವಿಶ್ವಕಪ್ ಗೆದ್ದ ಟೀಮ್ ಇಂಡಿಯಾಗೆ ಲೋಕಸಭೆಯಿಂದ ಅಭಿನಂದನೆ

    ರೋಹಿತ್ ಶರ್ಮಾ ಮತ್ತು ಅವರ ಟೀಂ ಅಂತಿಮವಾಗಿ 7 ರನ್‌ಗಳಿಂದ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಜೂನ್ 29 ರಂದು ಗೆದ್ದ T20 ವಿಶ್ವಕಪ್ ಟ್ರೋಫಿಯೊಂದಿಗೆ ಮನೆಗೆ ಮರಳುತ್ತಿದ್ದಾರೆ. ವಿರಾಟ್ ಕೊಹ್ಲಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. 59 ಎಸೆತಗಳಲ್ಲಿ 76 ರನ್‌ ಹೊಡೆದ ವಿರಾಟ್‌ ಕೊಹ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ ಜಸ್‌ಪ್ರೀತ್‌ ಬುಮ್ರಾ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.

    ಕಳೆದ ವರ್ಷ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ODI ವಿಶ್ವಕಪ್‌ನ ಫೈನಲ್‌ನಲ್ಲಿ  ಆಸ್ಟ್ರೇಲಿಯಾ ವಿರುದ್ಧ ಭಾರತ ಸೋಲು ಕಂಡಿತ್ತು. ಈ ವೇಳೆ ಸ್ವತಃ ಪ್ರಧಾನಿಯವರೇ ಡ್ರೆಸ್ಸಿಂಗ್‌ ರೂಂಗೆ ತೆರಳಿ ಆಟಗಾರರನ್ನು ಸಮಾಧಾನ ಪಡಿಸಿದ್ದರು.

  • ದಕ್ಷಿಣ ಆಫ್ರಿಕಾ ತಂಡ ಉಳಿದಿದ್ದ ಹೋಟೆಲಿನಲ್ಲಿಯೇ ಕನಿಕಾ ವಾಸ್ತವ್ಯ

    ದಕ್ಷಿಣ ಆಫ್ರಿಕಾ ತಂಡ ಉಳಿದಿದ್ದ ಹೋಟೆಲಿನಲ್ಲಿಯೇ ಕನಿಕಾ ವಾಸ್ತವ್ಯ

    ಮುಂಬೈ: ಕೊರೊನಾ ಸೋಂಕಿಗೆ ಒಳಗಾಗಿರುವ ಬಾಲಿವುಡ್ ಗಾಯಕಿ ಕನಿಕಾ ಕಪೂರ್ ಉಳಿದುಕೊಂಡಿದ್ದ ಹೋಟೆಲಿನಲ್ಲಿಯೇ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ವಾಸ್ತವ್ಯ ಹೂಡಿತ್ತು.

    ಲಕ್ನೋ ನಗರದ ಫೈವ್ ಸ್ಟಾರ್ ಹೋಟೆಲಿನಲ್ಲಿ ಮಾರ್ಚ್ 14 ರಿಂದ 16ರವರೆಗೆ ಉಳಿದುಕೊಂಡಿದ್ದರು. ಎರಡನೇ ಏಕದಿನ ಪಂದ್ಯ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾ ತಂಡದ ಎಲ್ಲ ಸದಸ್ಯರು ಪ್ರತ್ಯೇಕ ಕೋಣೆಗಳಲ್ಲಿಯೇ ಉಳಿದುಕೊಂಡಿದ್ದರು. ಕೊರೊನಾ ಆತಂಕದಿಂದ ಪಂದ್ಯ ರದ್ದಾಗಿದ್ದರಿಂದ ತಂಡದ ಸದಸ್ಯರು ತಮ್ಮ ದೇಶಕ್ಕೆ ಹಿಂದಿರುಗಿದ್ದಾರೆ. ಕನಿಕಾ ಸಹ ಅದೇ ಹೋಟೆಲಿನಲ್ಲಿ ಉಳಿದುಕೊಂಡಿರುವ ವಿಷಯ ಬಹಿರಂಗಗೊಳ್ಳುತ್ತಿದ್ದಂತೆ ಕ್ರಿಕೆಟ್ ಅಭಿಮಾನಿಗಳು ಆತಂಕಕ್ಕೊಳಗಾಗಿದ್ದಾರೆ.

    ಮಾರ್ಚ್ 14ರಿಂದ 16ರವರೆಗೆ ಹೋಟೆಲಿನಲ್ಲಿ ಉಳಿದುಕೊಂಡಿದ್ದ ಕನಿಕಾ, ಅಲ್ಲಿಯ ಲಬಿಯಲ್ಲಿ ಊಟ ಸಹ ಮಾಡಿದ್ದರು. ಜೊತೆಗೆ ಹೋಟೆಲಿನಲ್ಲಿ ಅನೇಕರನ್ನು ಭೇಟಿಯಾಗಿದ್ದರು. ಈ ಸಂಬಂಧ ಉತ್ತರ ಪ್ರದೇಶದ ಆರೋಗ್ಯ ಇಲಾಖೆ ಹೋಟೆಲಿನಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಪರಿಶೀಲನೆ ನಡೆಸುತ್ತಿದೆ. ಸಿಸಿಟಿವಿ ದೃಶ್ಯಗಳ ಮೂಲಕ ಕನಿಕಾ ಭೇಟಿ ಮಾಡಿದ ಜನರನ್ನು ಪತ್ತೆ ಹಚ್ಚುವ ಕೆಲಸಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ. ಕನಿಕಾ ನಿವಾಸದ ಪರಿಸರದಲ್ಲಿ ವಾಸವಾಗಿರುವ ಸುಮಾರು 22 ಸಾವಿರ ಜನರನ್ನು ಥರ್ಮಲ್ ಸ್ಕ್ರೀನಿಂಗ್ ಮಾಡಿ, ಮುಂಜಾಗೃತ ಕ್ರಮಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

    ಮಾರ್ಚ್ 9ರಂದ ಲಂಡನ್ ನಿಂದ ಹಿಂದಿರುಗಿದ್ದ ಕನಿಕಾ, ಲಕ್ನೋ ನಗರದ ಅಪಾರ್ಟ್ ಮೆಂಟಿನಲ್ಲಿ ಉಳಿದುಕೊಂಡಿದ್ದರು. ಇಲ್ಲಿ ಒಟ್ಟು 700 ಕುಟುಂಬಗಳು ವಾಸವಾಗಿವೆ. ಮಾರ್ಚ್ 15ರಂದು ತಾಜ್ ಹೋಟೆಲಿನಲ್ಲಿ ಕಾಂಗ್ರೆಸ್ ಮಾಜಿ ಸಂಸದ ಜಿತಿನ್ ಪ್ರಸಾದ್ ಸಂಬಂಧಿ ಆದೇಶ್ ಸೇಠ್ ಪಾರ್ಟಿ ಆಯೋಜಿಸಿದ್ದರು. ಈ ಪಾರ್ಟಿಯಲ್ಲಿ ಹಲವು ರಾಜಕಾರಣಿಗಳು ಸೇರಿದಂತೆ ಕನಿಕಾ ಕಪೂರ್ ಭಾಗಿಯಾಗಿದ್ದರು. ಇದರಲ್ಲಿ 45 ಜನರದ್ದು ನೆಗಟಿವ್ ರಿಪೋರ್ಟ್ ಬಂದಿದ್ದು, ಮೂವರನ್ನು ಐಸೋಲೇಶನ್ ನಲ್ಲಿರಿಸಲಾಗಿದೆ.

  • ನ್ಯೂಜಿಲೆಂಡ್‍ನ 2 ಮಸೀದಿಗಳಲ್ಲಿ ಗುಂಡಿನ ದಾಳಿ- ಕ್ರಿಕೆಟ್ ಟೀಂ ಬಚಾವ್

    ನ್ಯೂಜಿಲೆಂಡ್‍ನ 2 ಮಸೀದಿಗಳಲ್ಲಿ ಗುಂಡಿನ ದಾಳಿ- ಕ್ರಿಕೆಟ್ ಟೀಂ ಬಚಾವ್

    ವೆಲ್ಲಿಂಗ್‍ಟನ್: ನ್ಯೂಜಿಲೆಂಡ್‍ನ ಕ್ರಿಸ್ಟ್ ಚರ್ಚ್ ನಗರದ 2 ಮಸೀದಿಗಳಲ್ಲಿ ಗುಂಡಿನ ದಾಳಿ ನಡೆದಿದ್ದು, ಬಾಂಗ್ಲಾದೇಶದ ಕ್ರಿಕೆಟ್ ಟೀಂ ಪ್ರಾಣಾಪಾಯದಿಂದ ಪಾರಾಗಿದೆ.

    ಬಾಂಗ್ಲಾದೇಶದ ಕ್ರಿಕೆಟ್ ತಂಡ ಶನಿವಾರ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಪಂದ್ಯ ಆಡಬೇಕಿತ್ತು. ಬಾಂಗ್ಲಾದೇಶದ ಕ್ರಿಕೆಟ್ ಆಟಗಾರರು ನಮಾಜ್ ಮಾಡಲು ಹೋಟೆಲ್‍ನಿಂದ ಹಾಗ್ಲೇ ಓವೆಲ್ ಸ್ಟೇಡಿಯಂ ಬಳಿಯಿರುವ ಮಸೀದಿಗೆ ಹೊರಟ್ಟಿದ್ದರು. ಈ ವೇಳೆ ಅಲ್ಲಿ ಗುಂಡಿನ ದಾಳಿ ನಡೆದಿದೆ. ಘಟನೆಯಲ್ಲಿ 6 ಮಂದಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗುತ್ತಿದ್ದು, ಓರ್ವ ಮುಸುಕುಧಾರಿಯನ್ನು ವಶಕ್ಕೆ ಪಡೆಯಲಾಗಿದೆ.

    ಈ ಬಗ್ಗೆ ಬಾಂಗ್ಲಾದೇಶದ ಕ್ರಿಕೆಟ್ ಬೋರ್ಡ್ ತನ್ನ ಟ್ವಿಟ್ಟರಿನಲ್ಲಿ, “ನ್ಯೂಜಿಲೆಂಡ್‍ನ ಕ್ರೈಸ್ಟ್ ಚರ್ಚ್ ನಲ್ಲಿರುವ ಬಾಂಗ್ಲಾದೇಶ ಕ್ರಿಕೆಟ್ ತಂಡದ ಎಲ್ಲ ಆಟಗಾರರು ಗುಂಡಿನ ದಾಳಿ ಘಟನೆ ನಡೆದ ನಂತರ ಸುರಕ್ಷಿತವಾಗಿ ಹೋಟೆಲ್‍ಗೆ ತೆರಳಿದ್ದಾರೆ. ಬಾಂಗ್ಲಾದೇಶದ ಕ್ರಿಕೆಟ್ ತಂಡದ ಜೊತೆ ನಾವು ಸಂಪರ್ಕದಲ್ಲಿದ್ದೇವೆ” ಎಂದು ಟ್ವೀಟ್ ಮಾಡಿದೆ.

    ಈ ಘಟನೆ ನಡೆದ ನಂತರ ಆಟಗಾರರು ಭಯಗೊಂಡಿದ್ದರು. ಆದರೆ ಈಗ ಅವರು ಕ್ಷೇಮವಾಗಿದ್ದಾರೆ. ಘಟನೆಯ ಸ್ವಲ್ಪ ಹೊತ್ತಿನ ನಂತರ ಬಾಂಗ್ಲಾದೇಶದ ಕಂಡಿಶಿಂಗ್ ಕೋಚ್ ಮರಿಯೋ ವಿಲ್ಲಾವರಾಯೇನ್ ಅಲ್ಲಿನ ಮಾಧ್ಯಮಗಳಿಗೆ ತಿಳಿಸಿದ್ದಾರೆ.

    ಬಾಂಗ್ಲಾದೇಶದ ಆಟಗಾರರು ಗುಂಡಿನ ದಾಳಿ ಶಬ್ಧ ಕೇಳಿದ್ದಾರೆ ಹೊರತು ಅದನ್ನು ನೋಡಲಿಲ್ಲ. ಗುಂಡಿನ ದಾಳಿಯ ಶಬ್ಧ ಕೇಳುತ್ತಿದ್ದಂತೆ ಸ್ಟೇಡಿಯಂನಲ್ಲಿದ್ದ ಅವರು ಅಲ್ಲಿಂದ ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ ಎಂದು ಮರಿಯೋ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv