Tag: Cricket Championship

  • ಐಸಿಸಿ ಟೆಸ್ಟ್ ಚಾಂಪಿಯನ್‍ಶಿಪ್ ವೇಳಾಪಟ್ಟಿ ಪ್ರಕಟ – ಟೀಂ ಇಂಡಿಯಾ ಮೊದಲ ಎದುರಾಳಿ ವೆಸ್ಟ್ ಇಂಡೀಸ್

    ಐಸಿಸಿ ಟೆಸ್ಟ್ ಚಾಂಪಿಯನ್‍ಶಿಪ್ ವೇಳಾಪಟ್ಟಿ ಪ್ರಕಟ – ಟೀಂ ಇಂಡಿಯಾ ಮೊದಲ ಎದುರಾಳಿ ವೆಸ್ಟ್ ಇಂಡೀಸ್

    ನವದೆಹಲಿ: ಐಸಿಸಿ ಬಹು ನಿರಿಕ್ಷೀತ ಟೆಸ್ಟ್ ಚಾಂಪಿಯನ್ ಶಿಪ್ ವೇಳಾಪಟ್ಟಿ ಬಿಡುಗಡೆಯಾಗಿದ್ದು, 2019 ರಿಂದ 2023 ರವರೆಗಿನ ಐಸಿಸಿ ಫ್ಯೂಚರ್ ಟೂರ್ ಪ್ರೋಗ್ರಾಂ ವೇಳಾಪಟ್ಟಿಯನ್ನು ಪ್ರಕಟಿಸಿದೆ.

    ಹಲವು ಬಾರಿ ಚರ್ಚೆಗೆ ಒಳಗಾಗಿದ್ದ ಟೆಸ್ಟ್ ಚಾಂಪಿಯನ್‍ಶಿಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ತಂಡವನ್ನು ಎದುರಿಸಲಿದೆ. ಅಲ್ಲದೇ ಸಾಂಪ್ರದಾಯಿಕ ವೈರಿಗಳಾದ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳು ನಡುವೆ ನಡೆಯುವ ಆ್ಯಶಸ್ ಸರಣಿಯೊಂದಿಗೆ ಐಸಿಸಿ ಟೆಸ್ಟ್ ಚಾಂಪಿಯನ್‍ಶಿಪ್ ಗೆ ಚಾಲನೆ ದೊರೆಯಲಿದೆ. ಪ್ರತಿ ತಂಡವು ಸಹ ಮನೆಯಂಗಳ ಹಾಗೂ ಹೊರಗಡೆ ಎರಡು ವರ್ಷದ ಅವಧಿಯಲ್ಲಿ 6 ಟೂರ್ನಿಗಳನ್ನು ಆಡಲಿದೆ. ಬಳಿಕ ಪಟ್ಟಿಯಲ್ಲಿ ಮೊದಲ ಎರಡು ಸ್ಥಾನಗಳು ಪಡೆದಿರುವ ತಂಡಗಳು ಫೈನಲ್ ಚಾಂಪಿಯನ್ ಪಂದ್ಯವನ್ನು ಆಡಲಿದೆ ಎಂದು ಐಸಿಸಿ ತಿಳಿಸಿದೆ.

    ಅಂತರಾಷ್ಟ್ರೀಯ ಕ್ರಿಕೆಟ್ ನಿಯಂತ್ರಣ ಮಂಡಳಿ 2018 ರಿಂದ 2021 ರವರೆಗೆ ನಡೆಯುಲ್ಲಿರುವ ಎಲ್ಲಾ ದ್ವಿಪಕ್ಷೀಯ ಅಂತರಾಷ್ಟ್ರೀಯ ಪುರುಷ ತಂಡಗಳ ಪಂದ್ಯಗಳಿಗೆ ಸಂಬಂಧಿಸಿದ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಐಸಿಸಿ ಬಿಡುಗಡೆ ಗೊಳಿಸಿರುವ ವೇಳಾಪಟ್ಟಿ ಪ್ರಕಾರ 2019 ಜುಲೈ 15 ರಿಂದ ಏಪ್ರಿಲ್ 30 ವರೆಗೂ ನಡೆಯಲಿರುವ ಟೆಸ್ಟ್ ಚಾಂಪಿಯನ್‍ಶಿಪ್ ನಲ್ಲಿ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿನ ಮೊದಲ 9 ತಂಡಗಳು ಭಾಗವಹಿಸಲಿದೆ. ಟೂರ್ನಿಯ ಬಳಿಕ ಟೀಂ ಇಂಡಿಯಾ 2020 ಜೂನ್ ನಲ್ಲಿ ಶ್ರೀಲಂಕಾದಲ್ಲಿ ನಡೆಯಲಿರುವ 13 ತಂಡಗಳ ಏಕದಿನ ಟೂರ್ನಿಯಲ್ಲಿ ಪಾಲ್ಗೊಳ್ಳಲಿದೆ. ವೇಳಾ ಪಟ್ಟಿಯಲ್ಲಿ ಸೂಚಿಸಿರುವಂತೆ ಪ್ರತಿ ತಂಡ ಮನೆಯಂಗಳ ಹಾಗೂ ಹೊರಗಡೆಯ ಎಂಟು ಸರಣಿಗಳಲ್ಲಿ ಭಾಗವಹಿಸಲಿದೆ.

    2023 ರಲ್ಲಿ ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್ ಗೆ ಐರ್ಲೆಂಡ್ ಸೇರಿದಂತೆ 13 ತಂಡಗಳು ಭಾಗವಹಿಸುವ ಟೂರ್ನಿಯನ್ನು ಮಾನದಂಡವಾಗಿ ಐಸಿಸಿ ನಿರ್ಧರಿಸಲಿದೆ. ಭಾರತ ಸೇರಿದಂತೆ ಏಳು ತಂಡಗಳು ನೇರ ಅರ್ಹತೆಯನ್ನ ಪಡೆಯಲಿದ್ದು, ಉಳಿದ ಐದು ತಂಡಗಳು ಅರ್ಹತಾ ಟೂರ್ನಿಯಲ್ಲಿ ಸ್ಪರ್ಧೆ ನಡೆಸಲಿದೆ.