Tag: cricket betting

  • ಪತಿಗೆ ಬೆಟ್ಟಿಂಗ್ ಚಟ- ನೇಣು ಬಿಗಿದ ಸ್ಥಿತಿಯಲ್ಲಿ ಪತ್ನಿಯ ಶವ ಪತ್ತೆ

    ಪತಿಗೆ ಬೆಟ್ಟಿಂಗ್ ಚಟ- ನೇಣು ಬಿಗಿದ ಸ್ಥಿತಿಯಲ್ಲಿ ಪತ್ನಿಯ ಶವ ಪತ್ತೆ

    ಹಾಸನ:  ಮನೆಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿಯೊಬ್ಬಳ ಶವ ಪತ್ತೆಯಾದ ಘಟನೆ ಹಾಸನ ಜಿಲ್ಲೆಯ ದೊಡ್ಡ ಮಂಡಿಗನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ತೇಜಸ್ವಿನಿ(28) ಮೃತ ಮಹಿಳೆ. ನಗರದ ದೊಡ್ಡ ಮಂಡಿಗನಹಳ್ಳಿ ಗ್ರಾಮದಲ್ಲಿ ತೇಜಸ್ವಿನಿ ಎಂಬ ಗೃಹಿಣಿಯ ಶವ ನಿನ್ನೆ ಮನೆಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇದೀಗ ಈಕೆಯ ಪತಿ ಮಧು ಮತ್ತು ಮನೆಯವರ ವಿರುದ್ಧ ಕೊಲೆ ಆರೋಪ ಕೇಳಿ ಬಂದಿದೆ.

    ಕ್ರಿಕೆಟ್ ಬೆಟ್ಟಿಂಗ್‍ಗೆ ದಾಸನಾಗಿದ್ದ ಗಂಡ ಮಧು ಲಕ್ಷಾಂತರ ಹಣ ಕಳೆದುಕೊಂಡಿದ್ದ. ಗಂಡನ ಬೆಟ್ಟಿಂಗ್ ಚಟ ಪ್ರಶ್ನೆ ಮಾಡಿದ್ದಕ್ಕೆ ಹಲ್ಲೆ ಮಾಡಿ ಕೊಂದು, ನೇಣು ಹಾಕಿದ್ದಾನೆ ಎಂದು ಮೃತ ತೇಜಸ್ವಿನಿ ಕುಟುಂಬದ ಸದಸ್ಯರು ಆರೋಪ ಮಾಡಿದ್ದಾರೆ.

    ಈ ಬಗ್ಗೆ ಮಾಹಿತಿ ನೀಡಿದ ಹಾಸನ ಎಸ್‍ಪಿ ಹರಿರಾಮ್ ಶಂಕರ್ ಅವರು, ದೊಡ್ಡಮಂಡಿಗನಹಳ್ಳಿಯ ತೇಜಸ್ವಿನಿ ಅವರ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತಳ ತಾಯಿ ಬೆಟ್ಟಿಂಗ್‍ನಿಂದ ಹಣ ಕಳೆದುಕೊಂಡ ಗಂಡನೇ ಕೊಲೆ ಮಾಡಿದ್ದಾನೆ. ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದ ಮಧು, ದುಡಿದ ಹಣವನ್ನು ಅಲ್ಲೇ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಜಗಳ ಆಗಿ ಕೊಲೆ ಆಗಿದೆ ಎಂದು ಮೃತಳ ಮನೆಯವರು ಆರೋಪಿಸಿದ್ದಾರೆ. ಇದನ್ನೂ ಓದಿ: ಸಮಯ ಸಂದರ್ಭ ಬಂದಾಗ ಏನು ಬೇಕಾದರೂ ಆಗಬಹುದು ಉ.ಕ ಪ್ರತ್ಯೇಕ ರಾಜ್ಯ ಕೂಗಿಗೆ ದನಿಗೂಡಿಸಿದ ಬಿಸಿ.ಪಾಟೀಲ್

    ತೇಜಸ್ವಿನಿ ಮನೆಯವರ ಆರೋಪಗಳನ್ನು ಅಲ್ಲಗಳೆದಿರುವ ಗಂಡನ ಮನೆಯವರು, ತೇಜಸ್ವಿನಿ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದಳು. ಆದರೆ ಗಂಡ ಕೆಲಸ ಬಿಡಿಸಿದ್ದ. ಈ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳುತ್ತಿದ್ದಾರೆ. ಈ ಎಲ್ಲ ಆರೋಪಕ್ಕೆ ಪೋಸ್ಟ್‌ಮಾರ್ಟಂ ವರದಿ ಬಂದ ನಂತರ ಉತ್ತರ ಸಿಗಲಿದೆ ಎಂದು ಎಸ್.ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ. ಇದನ್ನೂ ಓದಿ: ಅಬ್ಬರದ ಮಳೆ – ಮನೆಯ ಮೇಲೆ ಮರ ಬಿದ್ದು 6 ಜನರಿಗೆ ಗಾಯ

    Live Tv
    [brid partner=56869869 player=32851 video=960834 autoplay=true]

  • ಕ್ರಿಕೆಟ್ ಬೆಟ್ಟಿಂಗ್, ಕಾರ್ಡ್ಸ್‌ ಆಡಲು ಮನೆ ಕಳ್ಳತನ ಮಾಡುತ್ತಿದ್ದ ಕ್ರೇಜಿ ಕಳ್ಳ ಅರೆಸ್ಟ್

    ಕ್ರಿಕೆಟ್ ಬೆಟ್ಟಿಂಗ್, ಕಾರ್ಡ್ಸ್‌ ಆಡಲು ಮನೆ ಕಳ್ಳತನ ಮಾಡುತ್ತಿದ್ದ ಕ್ರೇಜಿ ಕಳ್ಳ ಅರೆಸ್ಟ್

    ಚಿಕ್ಕಮಗಳೂರು: ಕ್ರಿಕೆಟ್ ಬೆಟ್ಟಿಂಗ್ ಹಾಗೂ ಕಾರ್ಡ್ಸ್‌ ಆಡಲೆಂದೇ ಮನೆ ಕಳ್ಳತನ ಮಾಡುತ್ತಿದ್ದ ಕ್ರೇಜಿ ಕಳ್ಳನೊಬ್ಬನನ್ನು ನಗರದ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

    ಸಂತೋಷ್ (30) ಬಂಧಿತ ಆರೋಪಿ. ಈ ಕಿಲಾಡಿ ಕೇಡಿ ಅರ್ಧ ಕರ್ನಾಟಕದ ಖಾಕಿಗಳಿಗೆ ಬೇಕಾಗಿದ್ದಾನೆ. ಈತನ ಮೇಲೆ ಚಿಕ್ಕಮಗಳೂರು 6, ಮಂಡ್ಯ 2, ಹಾಸನ, ತುಮಕೂರು, ಮೈಸೂರಲ್ಲಿ ತಲಾ ಒಂದು ಪ್ರಕರಣಗಳಿವೆ. ರಾಮನಗರದಲ್ಲಿ ಬರೋಬ್ಬರಿ 18 ಪ್ರಕರಣಗಳಿದ್ದು, ಆರು ತಿಂಗಳ ಹಿಂದೆ ಈತ ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದನು.

    BRIBE

    ಆದರೂ ಸಹಿತ ಮತ್ತೆ ತನ್ನ ಹಳೇ ಚಾಳಿ ಮುಂದುವರಿಸಿದ್ದು ಶುಕ್ರವಾರ ಪೊಲೀಸರ ಅತಿಥಿಯಾಗಿದ್ದಾನೆ. ಈತ ಕೇವಲ ಕ್ರಿಕೆಟ್ ಬೆಟ್ಟಿಂಗ್ ಹಾಗೂ ಕಾರ್ಡ್ಸ್‌ ಆಡುವುದಕ್ಕೆ ಕಳ್ಳತನ ಮಾಡುತ್ತಿದ್ದನು. ಅವನೋಬ್ಬ ಮೋಜಿನ ಕಳ್ಳ. ಒಬ್ಬನೇ ಕಳ್ಳತನ ಮಾಡುತ್ತಿದ್ದ. ಕದ್ದ ದುಡ್ಡಲ್ಲಿ ಲಕ್ಷ-ಲಕ್ಷ ಕಾಡ್ರ್ಸ್ ಆಡುತ್ತಿದ್ದ. ಒಂದೂರಲ್ಲಿ ಕಳ್ಳತನ ಮಾಡಿದರೆ ಮತ್ತೊಂದು ಊರಲ್ಲಿ ಕಾರ್ಡ್ಸ್‌ ಆಡುತ್ತಿದ್ದ. ಬಳ್ಳಾರಿ, ರಾಯಚೂರಿನಲ್ಲಂತು ಎಲ್ಲರಿಗೂ ಈತ ಚಿರಪರಿಚಿತನಾಗಿದ್ದಾನೆ.

    ಕಳ್ಳತನ ಮಾಡಲು ಈತ ಒಬ್ಬನೇ ಹೋಗುತ್ತಿದ್ದ. ತನ್ನ ಜುಪಿಟರ್ ಬೈಕಿನಲ್ಲಿ ಒಂದು ರೌಂಡ್ ಹಾಕಿ ಯಾವ ಮನೆ ಬೀಗ ಹಾಕಿದೆ ಎಂದು ನೋಡಿಕೊಳ್ಳತ್ತಿದ್ದನು. ನಂತರ ಲಾಕ್ ಮುರಿದು ಸಲೀಸಾಗಿ ಕೆಲಸ ಮುಗಿಸಿಕೊಂಡು ಅದೇ ಬೈಕಿನ ಡಿಕ್ಕಿಯಲ್ಲಿ ಎಲ್ಲಾ ತುಂಬಿಕೊಂಡು ಹೋಗುತ್ತಿದ್ದ. ಕಳೆದ ತಿಂಗಳು ನಗರದ ದಂಟರಮಕ್ಕಿ, ಮೂಗ್ತಿಹಳ್ಳಿಯಲ್ಲಿ ಕಳ್ಳತನವಾಗಿತ್ತು. ಎರಡೂ ಕಳ್ಳತನ ಶೈಲಿ ಒಂದೇ ರೀತಿಯಲ್ಲಿತ್ತು. ಪೊಲೀಸರು ಫಿಂಗರ್ ಪ್ರಿಂಟ್ ಆಧಾರದ ಮೇಲೆ ಇವನ ಟ್ರಾಕ್ ರೆಕಾರ್ಡ್ ಬೆನ್ನತ್ತಿದಾಗ ಖಾಕಿಗಳ ಕೈಗೆ ಸಿಕ್ಕಿಬಿದ್ದಿದಾನೆ. ಅದು 52 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನ-ಬೆಳ್ಳಿ-ಹಣದ ಸಮೇತ.

    ಸಂತೋಷ್ ರಾತ್ರಿ ಫುಲ್ ಪಾರ್ಟಿ ಮಾಡುತ್ತಿದ್ದ, ಹಗಲಲ್ಲಿ ಮಾತ್ರ ಕಳ್ಳತನ ಮಾಡುತ್ತಿದ್ದ. ಕದ್ದ ಒಡವೆಗಳನ್ನು ಪರಿಚಿತ ಮಹಿಳೆಯರನ್ನು ಪುಸಲಾಯಿಸಿ ಅವರ ಕೈನಲ್ಲಿ ಅಡಮಾನವಿಡಿಸುತ್ತಿದ್ದ. ನಾನು ಹೋದರೆ ಕಳ್ಳ ಅಂತಾರೆ. ನೀವೇ ಕದ್ದಿದ್ದೀರಾ ಅಂತಾರೆ. ನಾನು ಗ್ಯಾಂಬ್ಲಿಂಗ್ ಆಡ್ತೀನಿ. ಕಾರ್ಡ್ಸ್‌ ಆಟದಲ್ಲಿ ಸೋತು ದುಡ್ಡಿಲ್ಲ ಅಂತ ಒಡವೆ ಅಡವಿಡುತ್ತಿದ್ದೇನೆ ಎಂದು ಮಹಿಳೆಯರ ದಾರಿ ತಪ್ಪಿಸುತ್ತಿದ್ದ.

    ಪ್ರಕರಣದ ಬೆನ್ನತ್ತಿದ್ದ ಕಾಫಿನಾಡ ಪೊಲೀಸರು ಇವನ ಹೆಜ್ಜೆ ಗುರುತುಗಳನ್ನ ಕಂಡು ದಂಗಾಗಿದ್ದಾರೆ. ಒಂದು ಕೇಸ್‍ನಲ್ಲಿ ಕರೆದುಕೊಂಡು ಹೋದರೆ ಮತ್ತೊಂದು ಕೇಸಲ್ಲಿ ಸಿಕ್ಕಿಬೀಳುತ್ತಿದ್ದ. ಒಂದು ಜ್ಯುವೆಲ್ಲರಿ ಶಾಪ್‍ಗೆ ಹೋದರೆ ಮತ್ತೆರಡರಲ್ಲಿ ಸಿಗುತ್ತಿದ್ದ. ಹೀಗೆ ನಗರದ ಕಳ್ಳತನ ಪ್ರಕರಣದ ಪತ್ತೆ ಹಚ್ಚಲು ಹೊರಟ ಪೊಲೀಸರಿಗೆ ಐದು ಜಿಲ್ಲೆಯ 11 ಕೇಸ್‍ಗಳಲ್ಲಿ ಸಿಕ್ಕಿಬಿದ್ದಿದ್ದಾನೆ.

    ಕ್ರಿಕೆಟ್ ಬೆಟ್ಟಿಂಗ್ ಆಡೋದರಲ್ಲಿ ಇವನು ಪಂಟರ್. ಬಾಂಗ್ಲಾ, ಪಾಕಿಸ್ತಾನ, ಶ್ರೀಲಂಕಾ, ಆಸ್ಟ್ರೇಲಿಯಾ, ಹುಡುಗಿಯರ ಮ್ಯಾಚ್ ಯಾವುದನ್ನೂ ಬಿಡುತ್ತಿರಲಿಲ್ಲ. ಕದ್ದ ದುಡ್ಡಲ್ಲಿ ಎಲ್ಲದಕ್ಕೂ ಲಕ್ಷ-ಲಕ್ಷ ಬೆಟ್ಟಿಂಗ್ ಕಟ್ಟುತ್ತಿದ್ದನು. ಆನ್‍ಲೈನ್ ಸೈಬರ್ ಮ್ಯಾಚ್ ಕೂಡ ಬಿಡದೇ ಬೆಟ್ಟಿಂಗ್ ಆಡುತ್ತಿದ್ದ. ಮೋಜಿಗೋಸ್ಕರವೇ ಕದ್ದು ಕಂಡವರ ದುಡ್ಡಲ್ಲಿ ಮಜಾ ಮಾಡುತ್ತಿದ್ದ. ಈತನನ್ನ ಕಾಫಿನಾಡ ಪೊಲೀಸರು ಬಂಧಿಸಿ ಜೈಲಿನಲ್ಲಿ ಮುದ್ದೆ ಮುರಿಯುಲು ಬಿಟ್ಟಿದ್ದಾರೆ.

  • ಕ್ರಿಕೆಟ್ ಬೆಟ್ಟಿಂಗ್ ದಂಧೆ-ಲಕ್ಷ ಲಕ್ಷ ಡೀಲ್ ಮಾಡಿದ್ರಾ ಸಿಸಿಬಿ ಪೊಲೀಸರು?

    ಕ್ರಿಕೆಟ್ ಬೆಟ್ಟಿಂಗ್ ದಂಧೆ-ಲಕ್ಷ ಲಕ್ಷ ಡೀಲ್ ಮಾಡಿದ್ರಾ ಸಿಸಿಬಿ ಪೊಲೀಸರು?

    ಮಂಗಳೂರು: ಕ್ರಿಕೆಟ್ ಬೆಟ್ಟಿಂಗ್ ದಂಧೆ ಹೆಸರಲ್ಲಿ ಉದ್ಯಮಿಗಳನ್ನು ಫಿಕ್ಸ್ ಮಾಡಿ ಲಕ್ಷ ಲಕ್ಷ ಡೀಲ್ ಮಾಡಿರುವ ಆರೋಪವನ್ನು ಸಿಸಿಬಿ ಪೊಲೀಸರು ಎದುರಿಸುತ್ತಿದ್ದಾರೆ.

    ಮುಂಬೈ ಮತ್ತು ಮಂಗಳೂರು ಉದ್ಯಮಿಗಳಿಂದ ಲಕ್ಷ ಲಕ್ಷ ಹಣವನ್ನು ಪಡೆದ ಆರೋಪ ಕೇಳಿಬಂದಿದೆ. ಇದೀಗ ಈ ವಿಚಾರ ಭಾರೀ ಚರ್ಚೆಗೆ ಕಾರಣವಾಗಿದೆ. ಉದ್ಯಮಿ ಕರುಣಾಕರ ಭಂಡಾರಿ ಎಂಬವರ ಮೇಲೆ ಬೆಟ್ಟಿಂಗ್ ವಿಚಾರದಲ್ಲಿ ಸಿಸಿಬಿ ದಾಳಿ ಮಾಡಿದ್ದರು. ಆಗ ಸಿಸಿಬಿ ಪಿಎಸ್‍ಐ ಕಬ್ಬಾಳ್ ರಾಜ್ 55 ಲಕ್ಷ ರೂ. ಪಡೆದಿದ್ದಾರೆ ಎಂದು ಆರೋಪ ಕೇಳಿಬಂದಿದೆ.

    ಉದ್ಯಮಿ ಕರುಣಾಕರ ಭಂಡಾರಿ ಮಾತ್ರವಲ್ಕದೇ ನನ್ನ ಮುಂಬೈ ಹೆಳೆಯರಿಬ್ಬರ ಮನೆಗೂ ಕ್ರಿಕೆಟ್ ಬೆಟ್ಟಿಂಗ್ ಹೆಸರಲ್ಲಿ ದಾಳಿ ಮಾಡಿದ್ದಾರೆ ಎಂದು ಉದ್ಯಮಿಗಳ ಆಪ್ತ ಲಕ್ಷ್ಮೀಶ್ ಹೇಳಿದ್ದಾರೆ. ಸುಳ್ಳು ಕೇಸ್ ಹಾಕಿ ಮಾನಮರ್ಯಾದೆ ತೆಗೆಯೋದಾಗಿ ಬೆದರಿಸಿದ್ದಾರೆ. ಒಬ್ಬರಿಂದ 35 ಲಕ್ಷ ಹಣ ಇನ್ನೊಬ್ಬರಿಂದ 25 ಲಕ್ಷ ಹಣವನ್ನು ಪಡೆದಿದ್ದಾರೆ. ಹರೀಶ್ ಮತ್ತು ವಿಶ್ವಾಸ್ ಎಂಬವರಿಗೆ ಬೆದರಿಸಿ ಲಕ್ಷ ಲಕ್ಷ ಹಣವನ್ನು ಪಡೆದಿದ್ದಾರೆ. ಎಲ್ಲರೂ ಪ್ರತಿಷ್ಠಿತ ವ್ಯಕ್ತಿಗಳಾಗಿದ್ದು, ಮರ್ಯಾದೆಗೆ ಹೆದರಿ ಹಣವನ್ನು ನೀಡಿದ್ದಾರೆ. ಇವರೆಲ್ಲ ಸಿಐಡಿ ಪೊಲೀಸರ ಎದುರು ಬಂದು ಮಾಹಿತಿ ಕೊಡಲು ಸಿದ್ಧರಿದ್ದಾರೆ ಎಂದು ಲಕ್ಷ್ಮೀಶ್ ಹೇಳಿದ್ದಾರೆ.

  • ವಿಷ ನೀಡಿ ತಾಯಿ, ಸೋದರಿಯನ್ನ ಚಿರನಿದ್ರೆಗೆ ಕಳಿಸಿದ ಎಂ.ಟೆಕ್ ವಿದ್ಯಾರ್ಥಿ

    ವಿಷ ನೀಡಿ ತಾಯಿ, ಸೋದರಿಯನ್ನ ಚಿರನಿದ್ರೆಗೆ ಕಳಿಸಿದ ಎಂ.ಟೆಕ್ ವಿದ್ಯಾರ್ಥಿ

    – ಕ್ರಿಕೆಟ್ ಬೆಟ್ಟಿಂಗ್‍ಗೆ ಹೋಯ್ತು ಎರಡು ಅಮಾಯಕ ಜೀವ

    ಹೈದರಾಬಾದ್: ಮನೆಯ ಮಗನೇ ವಿಷ ನೀಡಿ ತಾಯಿ ಮತ್ತು ಸೋದರಿಯನ್ನ ಕೊಲೆಗೈದ ಘಟನೆ ತೆಲಂಗಾಣದ ಮೆಡಚಲ್-ಮಲಕಾಜಗಿರಿಯಲ್ಲಿ ನಡೆದಿದೆ.

    23 ವರ್ಷದ ಸಾಯಿನಾಥ್ ರೆಡ್ಡಿ ತಾಯಿ ಮತ್ತು ಸೋದರಿಯನ್ನ ಚಿರನಿದ್ರೆಗೆ ಕಳುಹಿಸಿ ಕತ್ತಲೆ ಕೋಣೆ ಸೇರಿದ್ದಾನೆ. ಸುನಿತಾ (44) ಮತ್ತು ಅನುಜಾ (22) ಮೃತ ದುರ್ದೈವಿಗಳು. ಎಂ.ಟೆಕ್ ಎರಡನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ ಸಾಯಿನಾಥ್ ಕ್ರಿಕೆಟ್ ಬೆಟ್ಟಿಂಗ್ ದಾಸನಾಗಿದ್ದನು. ಇದೀಗ ಅದೇ ಕ್ರಿಕೆಟ್ ಬೆಟ್ಟಿಂಗ್ ಗಾಗಿ ತಂಗಿ, ತಾಯಿಯನ್ನ ಕೊಂದು ಜೈಲುಪಾಲಾಗಿದ್ದಾನೆ.

    ಹಣ, ಬಂಗಾರ ಕದ್ದ: ಸಾಯಿನಾಥ್ ತಾಯಿಗೆ ಗೊತ್ತಾಗದೇ ಅವರ ಖಾತೆಯಿಂದ ಸುಮಾರು 20 ಲಕ್ಷ ರೂ. ಡ್ರಾ ಮಾಡಿದ್ದಾನೆ. ಎಲ್ಲ ಹಣವನ್ನ ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ಹಾಕಿ ಸೋತು ಸುಣ್ಣವಾಗಿದ್ದಾನೆ. ಇಷ್ಟಕ್ಕೆ ಸುಮ್ಮನಾಗದ ಸಾಯಿನಾಥ್ ಮನೆಯಲ್ಲಿದ್ದ 150 ಗ್ರಾಂ ಚಿನ್ನ ಕದ್ದು ಅದನ್ನು ಜೂಜಿನಲ್ಲಿ ಸೋತಿದ್ದಾನೆ.

    ಇಬ್ಬರ ಕೊಲೆಗೆ ಪ್ಲಾನ್: ಇನ್ನು ಹಣ ಮತ್ತು ಚಿನ್ನ ಕದ್ದ ವಿಷಯ ಗೊತ್ತಾಗುತ್ತಲೇ ಸುನಿತಾ ಮತ್ತು ಅನುಜಾ ಶಾಕ್ ಆಗಿದ್ದರು. ಹಣ ಮತ್ತು ಚಿನ್ನ ತೆಗೆದುಕೊಂಡು ಬರುವಂತೆ ಸಾಯಿನಾಥ್ ಗೆ ಎಚ್ಚರಿಕೆ ಸಹ ನೀಡಿದ್ದರು. ಆದ್ರೆ ಜೂಜಾಟದಲ್ಲಿ ಎಲ್ಲವನ್ನ ಕಳೆದುಕೊಂಡಿದ್ದ ಸಾಯಿನಾಥ್, ತಂಗಿ ಮತ್ತು ತಾಯಿಯನ್ನ ಕೊಲ್ಲಲು ನಿರ್ಧರಿಸಿದ್ದರು. ಮನೆಯಲ್ಲಿ ಪದೇ ಪದೇ ಹಣದ ವಿಚಾರ ಪ್ರಸ್ತಾಪಿಸುತ್ತಿದ್ದರಿಂದ ಇಬ್ಬರನ್ನ ಚಿರನಿದ್ರೆಗೆ ಕಳುಹಿಸಲು ಸಾಯಿನಾಥ್ ಪ್ಲಾನ್ ಮಾಡಿಕೊಂಡಿದ್ದನು.

    ಊಟದಲ್ಲಿ ವಿಷ: ನವೆಂಬರ್ 23ರಂದು ಮಾಡಿದ ಅಡುಗೆಯಲ್ಲಿ ವಿಷ ಸೇರಿಸಿದ್ದಾನೆ. ವಿಷ ಮಿಶ್ರಿತ ಆಹಾರ ಸೇವಿಸಿದ ತಾಯಿ ಮತ್ತು ಸೋದರಿ ಅಸ್ವಸ್ಥಗೊಂಡಾಗ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ್ದಾನೆ. ಅನುಜಾ ನವೆಂಬರ್ 27ರಂದು ಮೃತರಾದ್ರೆ, ತಾಯಿ ಸುನಿತಾ ನವೆಂಬರ್ 28ರಂದು ಗಾಂಧಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

    ಮೂರು ವರ್ಷಗಳ ಹಿಂದೆ ಆರೋಪಿ ಸಾಯಿನಾಥ್ ತಂದೆ ಮೃತರಾಗಿದ್ದರು. ತಾಯಿ ಮತ್ತು ತಂಗಿ ಜೊತೆ ಸಾಯಿನಾಥ್ ವಾಸವಾಗಿದ್ದನು. ಆರೋಪಿ ಹಲವು ದಿನಗಳಿಂದ ಬೆಟ್ಟಿಂಗ್ ನಲ್ಲಿ ಭಾಗಿಯಾಗುತ್ತಿದ್ದನು. ಇದೇ ಬೆಟ್ಟಿಂಗ್ ಕುಟುಂಬದ ಲಕ್ಷಾಂತರ ರೂಪಾಯಿ ಸೋತಿದ್ದನು. ತಾಯಿ ಮತ್ತು ತಂಗಿ ಹಣ, ಚಿನ್ನ ಕೇಳಿದಾಗ ಇಬ್ಬರನ್ನ ಕೊಂದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

     

     

  • ಕ್ರಿಕೆಟ್ ಬೆಟ್ಟಿಂಗ್‍ನಲ್ಲಿ ತೊಡಗಿದ್ದ ಮೂವರ ಬಂಧನ

    ಕ್ರಿಕೆಟ್ ಬೆಟ್ಟಿಂಗ್‍ನಲ್ಲಿ ತೊಡಗಿದ್ದ ಮೂವರ ಬಂಧನ

    ಶಿವಮೊಗ್ಗ: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್‍ನಲ್ಲಿ ತೊಡಗಿದ್ದ ಮೂರು ಮಂದಿಯನ್ನು ಪೊಲೀಸರು ಬಂಧಿಸಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

    ಜಯನಗರ ಠಾಣೆ ಪೊಲೀಸರು ಖಚಿತ ಮಾಹಿತಿ ಮೇರೆಗೆ ತಿಲಕ್ ನಗರದ ಮೊಬೈಲ್ ಅಂಗಡಿಯೊಂದರ ಮೇಲೆ ದಾಳಿ ನಡೆಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿದ್ದಾರೆ. ಬಂಧಿತರಿಂದ 2.21 ಲಕ್ಷ ರೂ. ನಗದು ಹಾಗೂ 3 ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಗೂ ಬೆಟ್ಟಿಂಗ್‍ನಲ್ಲಿ ತೊಡಗಿದ್ದ ಅಂಗಡಿ ಮಾಲೀಕ ಅಜೇಯ (35), ಕಿರಣ್ (32), ಹಾಗೂ ಸಂದೀಪ್ (28) ಮೂವರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ತಿಳಿಸಿದ್ದಾರೆ.

  • ಕ್ರಿಕೆಟ್ ಬೆಟ್ಟಿಂಗ್ – ಉಪನ್ಯಾಸಕ ಸೇರಿ 6 ಮಂದಿ ಬಂಧನ

    ಕ್ರಿಕೆಟ್ ಬೆಟ್ಟಿಂಗ್ – ಉಪನ್ಯಾಸಕ ಸೇರಿ 6 ಮಂದಿ ಬಂಧನ

    ತುಮಕೂರು: ಆನ್‍ಲೈನ್ ಮೂಲಕ ಕ್ರಿಕೆಟ್ ಮತ್ತು ಕುದುರೆ ರೇಸ್ ಬೆಟ್ಟಿಂಗ್ ನಡೆಸುತ್ತಿದ್ದ 6 ಜನ ಆರೋಪಿಗಳ ಬಂಧಿಸಿ, 7.15 ಲಕ್ಷವನ್ನು ನಗರದ ಸಿಇಎನ್ ಠಾಣೆಯ ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ನಗರದ ಕ್ಯಾತ್ಸಂದ್ರ ಗಿರಿನಗರದ ಮಹಾಂತೇಶ್( 34), ಎಸ್‍ಐಟಿ ಬಡಾವಣೆಯ ರಾಜೇಶ್ (27), ಉಪ್ಪಾರಹಳ್ಳಿಯ ದಿಲೀಪ್‍ಕುಮಾರ್(23), ಎಸ್.ಎಸ್.ಪುರಂನ ಅರ್ಜುನ್ (23), ಕೆ.ಆರ್.ಬಡಾವಣೆಯ ಅಶ್ವಿನ್(22) ಹಾಗೂ ಬೆಂಗಳೂರಿನ ಶ್ರೀನಗರದ ಧನುಷ್ (21) ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿಯಾಗಿರುವ ಮಹಾಂತೇಶ್ ನಗರದ ಶ್ರೀದೇವಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಉಪನ್ಯಾಸಕನಾಗಿದ್ದ ಎಂದು ತಿಳಿದು ಬಂದಿದೆ.

    ಆರೋಪಿಗಳು ತುಮಕೂರು ನಗರ ವ್ಯಾಪ್ತಿಯ ಸಾರ್ವಜನಿಕರಿಂದ ಮೊಬೈಲ್ ಮುಖಾಂತರ ಲೋಟಸ್ ಎಂಬ ಅಪ್ಲಿಕೇಷನ್ ಮತ್ತು ಸ್ಪೆಕ್ಟಿಕ್ಯುಲರ್ ಎಂಬ ಆ್ಯಪ್‍ನಲ್ಲಿ ಕುದುರೆ ರೇಸ್ ಮತ್ತು ಕ್ರಿಕೆಟ್ ಬೆಟ್ಟಿಂಗ್ ಆಟಗಳಲ್ಲಿ ಹಣವನ್ನು ಪಣವಾಗಿ ಕಟ್ಟಿಸಿಕೊಳ್ಳುತ್ತಿದ್ದರು. ಈ ಮೂಲಕ ಹಲವು ಸಾರ್ವಜನಿಕರಿಗೆ ವಂಚಿಸುತ್ತಿದ್ದರು. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ ವಂಶಿಕೃಷ್ಣ ಅವರಿಗೆ ಬಂದ ಮಾಹಿತಿಯ ಮೇರೆಗೆ ಅವರು, ಸಿಇಎನ್ ಠಾಣೆಯ ಪೊಲೀಸ್ ಇನ್‍ಸ್ಪೆಕ್ಟರ್ ಹಾಗೂ ಸಿಬ್ಬಂದಿಯ ವಿಶೇಷ ತಂಡ ರಚಿಸಿ ಆರೋಪಿಗಳನ್ನು ಪತ್ತೆ ಹಚ್ಚಲು ನಿಯೋಜಿಸಿದ್ದರು.

    ಈ ತಂಡವು ಭಾನುವಾರ ಜೂಜಾಟ ನಡೆಯುತ್ತಿದ್ದ ನಗರದ ಬಿ.ಎಚ್ ರಸ್ತೆಯ ಐಶ್ವರ್ಯ ಲಾಡ್ಜ್ ರೂಂ ನಂ.7 ಮೇಲೆ ದಾಳಿ ಮಾಡಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಬಂಧಿತರಿಂದ ಜೂಜಾಟಕ್ಕೆ ಬಳಸಿದ್ದ 4 ಎಟಿಎಂ ಕಾರ್ಡ್‍ಗಳು, 6 ಮೊಬೈಲ್, 3 ಲೆಡ್ ಪೆನ್ನುಗಳು, 68,730 ನಗದು ಹಣ ಹಾಗೂ ವಹಿವಾಟಿನ ವಿವರ ಬರೆದುಕೊಳ್ಳುತ್ತಿದ್ದ 4 ರಿಜಿಸ್ಟರ್ ಪುಸ್ತಕಗಳು ವಶಪಡಿಸಿಕೊಳ್ಳಲಾಗಿದೆ. ಬಂಧನದ ವೇಳೆ ಆರೋಪಿಗಳು ತುಮಕೂರು ನಗರದ ಶಿರಾ ಗೇಟ್ ಆಕ್ಸಿಸ್ ಬ್ಯಾಂಕ್‍ನಲ್ಲಿ ಬಸವರಾಜು, ರಂಜಿತ್, ನಿತಿನ್ ಎಂಬುವವರ ಹೆಸರಿನಲ್ಲಿ 3 ಖಾತೆಗಳನ್ನು ತೆಗೆದು ಬೆಟ್ಟಿಂಗ್ ಹಣವನ್ನು ಈ ಖಾತೆಗಳಿಗೆ ಜಮಾ ಮಾಡುತ್ತಿದ್ದದ್ದು ಬೆಳಕಿಗೆ ಬಂದಿದೆ.

    ಈ ಖಾತೆಗಳಲ್ಲಿ ಜೂಜಾಟಕ್ಕೆ ಬಳಸಿದ್ದ ಒಟ್ಟು 6,47,132 ಹಣವನ್ನು ಬ್ಯಾಂಕ್ ಅಧಿಕಾರಿಗಳೊಂದಿಗೆ ಚರ್ಚಿಸಿ ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಹಾಲಿ ಬಂಧಿಸಿರುವ ರಾಜೇಶ್ ಎಂಬಾತನು ತಂಡದ ಪ್ರಮುಖ ವ್ಯಕ್ತಿಯಾಗಿದ್ದು, ಈತ ತಮಗೆ ಬಂದ ಹಣದಲ್ಲಿ ಶೇ 40 ರಷ್ಟು ಹಣವನ್ನು ಲೋಟಸ್, ಸ್ಪೆಕ್ಟಿಕ್ಯುಲಸ್ ಆ್ಯಪ್‍ಗಳನ್ನು ಸರಬರಾಜು ಮಾಡಿದ್ದ ಗಿರಿ ಅಲಿಯಾಸ್ ಯಲ್ಲಾಪುರ ಗಿರಿ, ದಯಾನಂದ ಹುಲಿಯೂರುದುರ್ಗ ಹಾಗೂ ಶಿರಾ ವಾಸಿ ಹರಿ ಎನ್ನುವವರುಗಳಿಗೆ ಸಂದಾಯ ಮಾಡುತ್ತಿರುವುದಾಗಿ ತಿಳಿದು ಬಂದಿದೆ. ಈ 3 ಜನ ಆರೋಪಿಗಳನ್ನು ಪತ್ತೆ ಮಾಡಲು ಪೊಲೀಸರು ಬಲೆ ಬೀಸಿದ್ದಾರೆ.

  • ಭಾರತ-ನ್ಯೂಜಿಲೆಂಡ್ ಪಂದ್ಯಕ್ಕೆ ಭರ್ಜರಿ ಬೆಟ್ಟಿಂಗ್- ಹತ್ತು ಜನ ಅರೆಸ್ಟ್

    ಭಾರತ-ನ್ಯೂಜಿಲೆಂಡ್ ಪಂದ್ಯಕ್ಕೆ ಭರ್ಜರಿ ಬೆಟ್ಟಿಂಗ್- ಹತ್ತು ಜನ ಅರೆಸ್ಟ್

    ಬೆಂಗಳೂರು: ಭಾರತ-ನ್ಯೂಜಿಲೆಂಡ್ ಟಿ20 ಪಂದ್ಯಕ್ಕೆ ಭರ್ಜರಿ ಬೆಟ್ಟಿಂಗ್ ನಡೆಸಿದ್ದ ಹತ್ತು ಜನರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

    ನವೀನ್, ಲಕ್ಷ್ಮಣ್ ದಾಸ್, ಚೇತನ್, ವೈಭವ್, ನಿತಿನ್, ಮಹಮ್ಮದ್ ಫಹಾದ್, ಪ್ರತೀಕ್, ಪವನ್, ಕಿಶನ್ ಮತ್ತು ಅರವಿಂದ್ ಬಂಧಿತ ಆರೋಪಿಗಳು. ಪೊಲೀಸರು ಬಂಧಿತರಿಂದ 87 ಸಾವಿರ ರೂ. ನಗದು ಸೇರಿದಂತೆ ಹತ್ತು ಮೊಬೈಲ್, ಬೆಟ್ಟಿಂಗ್‍ಗೆ ಉಪಯೋಗಿಸುತ್ತಿದ್ದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.  ಇದನ್ನೂ ಓದಿ: ಶೈನಿ, ಶಾರ್ದೂಲ್, ರಾಹುಲ್, ಪಾಂಡೆ ಕಮಾಲ್- ಸೂಪರ್ ಓವರಿನಲ್ಲಿ ಮತ್ತೆ ಭಾರತಕ್ಕೆ ಜಯ

    ನ್ಯೂಜಿಲೆಂಡ್‍ನಲ್ಲಿ ನಡೆಯುತ್ತಿರುವ ಟಿ20 ಸರಣಿಯ ನಾಲ್ಕೂ ಪಂದ್ಯಕ್ಕೂ ಭರ್ಜರಿ ಬೆಟ್ಟಿಂಗ್ ನಡೆದಿತ್ತು. ಅದರಲ್ಲೂ ಶುಕ್ರವಾರ ನಡೆಯುತ್ತಿದ್ದ ಸರಣಿಯ ನಾಲ್ಕನೇ ಪಂದ್ಯಕ್ಕೆ ಭಾರೀ ಪ್ರಮಾಣದಲ್ಲಿ ಬೆಟ್ಟಿಂಗ್ ನಡೆಯುತ್ತಿರುವ ಬಗ್ಗೆ ಬೆಂಗಳೂರು ಸಿಸಿಬಿ ಪೊಲೀಸರಿಗೆ ಖಚಿತ ಮಾಹಿತಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ ದಾಳಿ ನಡೆಸಿದ ಸಿಸಿಬಿ ಪೊಲೀಸರು, ನಗರದ ಹೈ ಫೈ ಏರಿಯಾ ಅಂತ ಕರೆಸಿಕೊಳ್ಳುವ ಲ್ಯಾವೆಲ್ಲಿ ರಸ್ತೆಯ ಪ್ರತಿಷ್ಠಿತ ಕ್ಲಬ್‍ವೊಂದರ ಮೇಲೆ ದಾಳಿ ನಡೆಸಿದ್ದರು. ಇದನ್ನೂ ಓದಿ: ಶಾರ್ದೂಲ್ ನೀಡಿದ ಬಾಲನ್ನು ವಿಕೆಟ್‍ಗೆ ಎಸೆದು ಪಂದ್ಯಕ್ಕೆ ರೋಚಕ ತಿರುವು ಕೊಟ್ಟ ಕೊಹ್ಲಿ: ವಿಡಿಯೋ

    ಭಾರತ-ನ್ಯೂಜಿಲೆಂಡ್ ವಿರುದ್ಧದ ನಾಲ್ಕನೇ ಟಿ20 ಪಂದ್ಯವು ಟೈ ಆಗಿ ಸೂಪರ್ ಓವರ್ ನಡೆದಿತ್ತು. ಈ ವೇಳೆ ಲಕ್ಷಾಂತರ ರೂ. ಬೆಟ್ಟಿಂಗ್ ನಡೆಸುತ್ತಿದ್ದ ಹತ್ತು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

  • ರಣಜಿ ಪಂದ್ಯಕ್ಕೂ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ನಾಲ್ವರ ಬಂಧನ

    ರಣಜಿ ಪಂದ್ಯಕ್ಕೂ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ನಾಲ್ವರ ಬಂಧನ

    -ಮೀಟರ್ ಬಡ್ಡಿಗೆ ಹಣ ಕೊಟ್ಟು ಆಸ್ತಿ ಕಬಳಿಸುತ್ತಿದ್ದ ಓರ್ವ ಅರೆಸ್ಟ್

    ಬೆಂಗಳೂರು: ಕ್ರಿಕೆಟ್ ಬೆಟ್ಟಿಂಗ್ ದಂಧೆ ಹಾಗೂ ಮೀಟರ್ ಬಡ್ಡಿ ಪ್ರತ್ಯೇಕ ಎರಡು ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಐದು ಜನ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂದಿದ್ದಾರೆ.

    ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಗುಡ್ಡೆ ಮಂಜ, ಗಣೇಶ್, ಗೋಪಾಲನ್ ಹಾಗೂ ವಿಧ್ಯಾದರ್ ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ದೇಶ, ವಿದೇಶದಲ್ಲಿ ನಡೆಯುವ ಅಂತಾರಾಷ್ಟ್ರೀಯ ಪಂದ್ಯಗಳಿಂದ ಹಿಡಿದು ರಣಜಿ ಪಂದ್ಯಗಳು ನಡೆಯುವಾಗಲೂ ಬೆಟ್ಟಿಂಗ್ ದಂಧೆಯನ್ನು ನಡೆಸುತ್ತಿದ್ದರು. ಅಷ್ಟೇ ಅಲ್ಲದೆ ಬೆಟ್ ಪ್ಲೇ, ಲೈನ್ ಸೇರಿದಂತೆ ಹಲವು ಆಪ್ ಗಳ ಮೂಲಕ ಬಾಲ್ ಟೂ ಬಾಲ್ ಬೆಟ್ಟಿಂಗ್ ಆಡುತ್ತಿದ್ದರು.

    ಆರೋಪಿಗಳ ಮೇಲೆ ಕಳೆದ ಮೂರು ತಿಂಗಳಿಂದ ನೀಗಾ ಇಡಲಾಗಿತ್ತು. ಬಳಿಕ ಅವರನ್ನು ಬಂಧಿಸಲಾಗಿದೆ. ಆರೋಪಿಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಪರ್ಕ ಹೊಂದಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

    ಮೀಟರ್ ಬಡ್ಡಿ ಆರೋಪಿ ಅರೆಸ್ಟ್:
    ಮೀಟರ್ ಬಡ್ಡಿ ಹೆಸರಲ್ಲಿ ಅಮಾಯಕರ ಜಮೀನುಗಳನ್ನ ಕಬಳಿಸುತ್ತಿದ್ದ ಆನೇಕಲ್ ಕೃಷ್ಣ ಎಂಬವನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಕಳೆದ ಹತ್ತು ವರ್ಷದಿಂದ ಪ್ರಜಾ ವಿಮೋಚನೆ ಎಂಬ ಚಳುವಳಿಯ ಅಧ್ಯಕ್ಷನಾಗಿ ಕೆಲಸ ಮಾಡಿಕೊಂಡಿದ್ದ. ಮೀಟರ್ ಬಡ್ಡಿಯನ್ನು ದಂಧೆಯಾಗಿಸಿಕೊಂಡು ಸಾಲ ಪಡೆದವರಿಂದ ಖಾಲಿ ಬಾಂಡ್‍ಗಳ ಮೇಲೆ ಸಹಿ ಹಾಕಿಸಿಕೊಳ್ಳುತ್ತಿದ್ದ.

    ಆರು ತಿಂಗಳಲ್ಲಿ ನಕಲಿ ದಾಖಲಾತಿ ಸೃಷ್ಟಿಸಿ ಸಾಲ ಪಡೆದವರ ಆಸ್ತಿಯನ್ನು ಕೃಷ್ಣ ಕಬಳಿಸುತ್ತಿದ್ದ. ಈತನಿಂದ ಅನೇಕರು ಶೋಷಣೆಗೆ ಹಾಗೂ ವಂಚನೆಗೆ ಒಳಗಾಗಿದ್ದಾರೆ. ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿರುವ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv