Tag: cricket

  • ಒಂದೂವರೆ ದಿನದಲ್ಲಿ 22 ವಿಕೆಟ್ ಪತನ: ರೋಚಕ ಘಟ್ಟದಲ್ಲಿ ಟೆಸ್ಟ್

    ಒಂದೂವರೆ ದಿನದಲ್ಲಿ 22 ವಿಕೆಟ್ ಪತನ: ರೋಚಕ ಘಟ್ಟದಲ್ಲಿ ಟೆಸ್ಟ್

     

    ಪುಣೆ: ಮೊದಲ ದಿನ ಭಾರತೀಯ ಬೌಲರ್‍ಗಳು ಮೇಲುಗೈ. ಎರಡನೇ ದಿನ ಆಸ್ಟ್ರೇಲಿಯಾ ಬೌಲರ್‍ಗಳ ಮೇಲುಗೈ. ಒಂದೂವರೆ ದಿನದಲ್ಲೇ 22 ವಿಕೆಟ್ ಪತನ. ಇದು ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ  ಹೈಲೈಟ್ಸ್.

    ಮೊದಲ ದಿನ ಉಮೇಶ್ ಯಾದವ್ ಮತ್ತು ಜಯಂತ್ ಯಾದವ್ ಅಬ್ಬರಿಸಿದರೆ, ಎರಡನೇ ದಿನ ಸ್ವೀವ್ ಓ ಕೀಫ್ ಬೌಲಿಂಗ್‍ಗೆ ತತ್ತರಿಸಿದ ಭಾರತ 40.1 ಓವರ್‍ಗಳಲ್ಲಿ 105 ರನ್‍ಗಳಿಗೆ ಅಲೌಟ್ ಆಗಿದೆ.

    ಆರಂಭಿಕ ಆಟಗಾರ ಕೆಎಲ್ ರಾಹುಲ್ 64 ರನ್ (97 ಎಸೆತ, 10 ಬೌಂಡರಿ, 1ಸಿಕ್ಸರ್), ಅಜಿಂಕ್ಯಾ ರೆಹಾನೆ 13 ರನ್, ಮುರಳಿ ವಿಜಯ್ 10 ರನ್ ಬಾರಿಸಿದ್ದು ಹೊರತು ಪಡಿಸಿ ಯಾವೊಬ್ಬ ಆಟಗಾರ ಎರಡಂಕಿಯ ಗಡಿಯನ್ನು ದಾಟಲಿಲ್ಲ. 94 ರನ್ 3 ವಿಕೆಟ್ ಕಳೆದುಕೊಂಡು ಉತ್ತಮ ಸ್ಥಿತಿಯಲ್ಲಿದ್ದ ಭಾರತ ಭಾರತ 11 ರನ್‍ಗಳ ಅಂತರಲ್ಲಿ 7 ವಿಕೆಟ್ ಕಳೆದುಕೊಂಡಿತು. ನಾಯಕ ವಿರಾಟ್ ಕೊಹ್ಲಿ 2 ಬಾಲ್ ಎದುರಿಸಿ ಶೂನ್ಯ ರನ್‍ಗೆ ಔಟ್ ಆದರು.

    ಯಾರು ಎಷ್ಟು ರನ್?
    ಮುರಳಿ ವಿಜಯ್ 10, ಕೆಎಲ್ ರಾಹುಲ್ 64, ಚೇತೇಶ್ವರ ಪೂಜಾರಾ 6, ಕೊಹ್ಲಿ 0, ರಹಾನೆ 13, ಆರ್ ಅಶ್ವಿನ್1, ವೃದ್ಧಿಮಾನ್ ಸಹಾ 0, ರವೀಂದ್ರ ಜಡೇಜಾ 2, ಜಯಂತ್ ಯಾದವ್ 2, ಉಮೇಶ್ ಯಾದವ್ 4, ಇಶಾಂತ್ ಶರ್ಮ ಔಟಾಗದೇ 2ರನ್.

    ಯಾರಿಗೆ ಎಷ್ಟು ವಿಕೆಟ್?
    ಸ್ವೀವ್ ಓ’ ಕೀಫ್ 6 ವಿಕೆಟ್ ಗಳಿಸಿ ಮಿಂಚಿದರೆ, ಮಿಚೆಲ್ ಸ್ಟಾರ್ಕ್ 2 ವಿಕೆಟ್ ಗಳಿಸಿದರು. ಜೋಶ್ ಹೇಜಲ್‍ವುಡ್ ಮತ್ತು ನೇಥನ್ ಲಯಾನ್ ತಲಾ ಒಂದು ವಿಕೆಟ್ ಪಡೆದರು.

    ಇತರೇ 1 ರನ್: ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 6 ಲೆಗ್‍ಬೈ, 9 ನೋಬಾಲ್ ಎಸೆಯುವ ಮೂಲಕ 15 ಇತರೇ ರನ್ ನೀಡಿದರೆ, ಆಸ್ಟ್ರೇಲಿಯಾದ ಬೌಲರ್‍ಗಳು ಶಿಸ್ತುಬದ್ಧ ಬೌಲಿಂಗ್ ನಡೆಸಿ ನೋಬಾಲ್ ರೂಪದಲ್ಲಿ 1 ರನ್ ಮಾತ್ರ ನೀಡಿದ್ದಾರೆ.

    ಅರಂಭಿಕ ಕುಸಿತ: 155 ರನ್‍ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾದ ಆರಂಭಿಕ ಆಟಗಾರರಿಬ್ಬರು ಔಟಾಗಿದ್ದಾರೆ. ಡೇವಿಡ್ ವಾರ್ನರ್ ಮತ್ತು ಸ್ವೀವ್ ಸ್ಮಿತ್ ಅಶ್ವಿನ್ ಬೌಲಿಂಗ್‍ನಲ್ಲಿ ಎಲ್‍ಬಿಗೆ ಬಲಿಯಾಗಿದ್ದಾರೆ. ಇತ್ತೀಚಿನ ವರದಿ ಬಂದಾಗ ಆಸ್ಟ್ರೇಲಿಯಾ 16 ಓವರ್‍ಗಳಲ್ಲಿ 2 ವಿಕೆಟ್ ಕಳೆದುಕೊಂಡು 46 ರನ್ ಗಳಿಸಿದೆ.

    ಸಂಕ್ಷಿಪ್ತ ಸ್ಕೋರ್
    ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ 260 ರನ್ (94.5 ಓವರ್)
    ಭಾರತ ಮೊದಲ ಇನ್ನಿಂಗ್ಸ್ 105 ರನ್(40.1 ರನ್)

  • ಆರಂಭದ ಆಟಕ್ಕೆ ಸಿಕ್ಕಿದ್ದು 500 ರೂ. ಈಗ ಸೇಲ್ ಆಗಿದ್ದು 2.6 ಕೋಟಿಗೆ: ಇದು ಬೌಲರ್‍ನ ಸಾಧನೆಯ ಕಥೆ

    ಆರಂಭದ ಆಟಕ್ಕೆ ಸಿಕ್ಕಿದ್ದು 500 ರೂ. ಈಗ ಸೇಲ್ ಆಗಿದ್ದು 2.6 ಕೋಟಿಗೆ: ಇದು ಬೌಲರ್‍ನ ಸಾಧನೆಯ ಕಥೆ

    ನವದೆಹಲಿ: ಕ್ಲಬ್ ಮ್ಯಾಚ್‍ನಲ್ಲಿ ಅತ್ಯುತ್ತಮ ಬೌಲಿಂಗ್ ಸಾಧನೆ ಮಾಡಿದ್ದಕ್ಕೆ 500 ರೂ. ಸಿಕ್ಕಿತ್ತು. ಇದು ಕ್ರಿಕೆಟ್ ಆಡಿದ್ದಕ್ಕೆ ಆತನಿಗೆ ದೊರೆತ ಮೊದಲ ಹಣ. ಆದರೆ ಈಗ ಆ ಕ್ರಿಕೆಟಿಗ 2.6 ಕೋಟಿ ರೂ. ಸೇಲ್ ಆಗಿದ್ದಾನೆ.

    ಇದು ಹೈದರಾಬಾದ್ ಮೂಲದ ಮೊಹಮ್ಮದ್ ಸಿರಾಜ್ ಸಾಧನೆಯ ಕಥೆ. ಬೆಂಗಳೂರಿನಲ್ಲಿ ಐಪಿಎಲ್ 10ನೇ ಆವೃತ್ತಿಗಾಗಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಸಿರಾಜ್ ಅವರ ಮೂಲ ಬೆಲೆ 20 ಲಕ್ಷ ರೂ. ಇತ್ತು. ಆದರೆ ಬಿಡ್ ವೇಳೆ ಹೈದರಾಬಾದ್ ಸನ್ ರೈಸರ್ಸ್ 2.6 ಕೋಟಿ ರೂ. ನೀಡಿ ಖರೀದಿಸಿದೆ.

    ಹೈದರಾಬಾದ್ ತಂಡವನ್ನು ಖರೀದಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಮೊಹಮ್ಮದ್ ಸಿರಾಜ್ ತನ್ನ ಆರಂಭಿಕ ಕ್ರಿಕೆಟ್ ಜೀವನ ಹೇಗಿತ್ತು ಎನ್ನುವುದನ್ನು ಮೆಲುಕು ಹಾಕಿದ್ದಾರೆ.

    “ಕ್ಲಬ್ ಮ್ಯಾಚ್‍ನಲ್ಲಿ ನನ್ನ ಮಾವ ಕ್ಯಾಪ್ಟನ್ ಆಗಿದ್ದರು. 25 ಓವರ್ ಪಂದ್ಯದಲ್ಲಿ ನಾನು 20 ರನ್ ನೀಡಿ 9 ವಿಕೆಟ್ ಪಡೆದಿದೆ. ಆ ವೇಳೆ ಮಾವ ನನ್ನ ಸಾಧನೆಗೆ 500 ರೂ. ನೀಡಿದಾಗ ಬಹಳ ಸಂತೋಷವಾಗಿತ್ತು. ಆದರೆ ಇವತ್ತು ನನಗೆ 2.6 ಕೋಟಿ ರೂ. ಬಿಡ್ ಮಾಡಿದ್ದನ್ನು ಕೇಳಿ ಮಾತೇ ಹೊರಡುತ್ತಿಲ್ಲ” ಎಂದು ಪ್ರತಿಕ್ರಿಯಿಸಿದ್ದಾರೆ.

    “ನನ್ನ ತಂದೆ ಆಟೋ ರಿಕ್ಷಾ ಓಡಿಸುತ್ತಿದ್ದಾರೆ. ಆದರೆ ನನ್ನ ಕ್ರಿಕೆಟ್ ಜೀವನಕ್ಕೆ ಯಾವುದೇ ಹಣಕಾಸು ಸಮಸ್ಯೆ ಬಾರದಂತೆ ನೋಡಿಕೊಂಡಿದ್ದರು. ಬೌಲಿಂಗ್ ಶೂಗಳು ಬೆಲೆ ದುಬಾರಿಯಾಗಿದ್ದರೂ ಅತ್ಯುತ್ತಮ ಶೂವನ್ನು ನನಗೆ ನೀಡಿದ್ದರು. ಈಗ ನಾನು ಕುಟುಂಬಕ್ಕೆ ಒಂದು ಮನೆಯನ್ನು ಖರೀದಿಸಿ ಕೊಡಬೇಕು” ಎಂದು ಭಾವುಕರಾಗಿ ಹೇಳಿದರು.

    ಇದನ್ನೂ ಓದಿ: ಯಾರು, ಯಾವ ತಂಡಕ್ಕೆ, ಎಷ್ಟು ಹಣಕ್ಕೆ ಸೇಲ್: ಪೂರ್ಣ ಪಟ್ಟಿ ಓದಿ

    “ನನ್ನ ಪೋಷಕರು ಬಹಳ ಕಷ್ಟ ಪಟ್ಟಿದ್ದಾರೆ. ನನ್ನ ಕಿರಿಯ ಸಹೋದರ ಪ್ರಸಿದ್ಧ ಐಟಿ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದಾನೆ. ನನಗೆ ಓದುವುದರಲ್ಲಿ ಆಸಕ್ತಿ ಇಲ್ಲದ್ದನ್ನು ನೋಡಿದಾಗ ತಾಯಿ ಸಹೋದರನ ಉದಾಹರಣೆಯನ್ನು ನೀಡುತ್ತಿದ್ದರು. ಆದರೆ ಈಗ ಅವರು ನನ್ನ ಸಾಧನೆಯನ್ನು ನೋಡಿ ಹೆಮ್ಮೆ ಪಡುತ್ತಿದ್ದಾರೆ” ಎಂದು ತಿಳಿಸಿದರು.

    ಕ್ರಿಕೆಟ್ ಆಟವನ್ನು ಕಲಿತದ್ದು ಹೇಗೆ ಎಂದು ಕೇಳಿದ್ದಕ್ಕೆ, ಆರಂಭದಲ್ಲಿ ಟೆನ್ನಿಸ್ ಬಾಲ್‍ನಲ್ಲಿ ಆಡುವ ಮೂಲಕ ಸ್ವಯಂ ಕಲಿತುಕೊಂಡೆ. ನಂತರ ಹೈದರಬಾದ್ ಅಂಡರ್ 22 ತಂಡದಲ್ಲಿ ಆಡಿದೆ. ಇದಾದ ಬಳಿಕ ಮುಷ್ತಾಕ್ ಅಲಿ, ವಿಜಯ್ ಹಜಾರೆ ಟ್ರೋಫಿ, ರಣಜಿ ಪಂದ್ಯಗಳಲ್ಲಿ ಆಡಿದ ಬಳಿಕ ಭಾರತ ಎ ತಂಡದಲ್ಲಿ ಆಡಿದ್ದು ಐಪಿಎಲ್‍ನಲ್ಲಿ ಚೆನ್ನಾಗಿ ಆಡಿ ಟೀಂ ಇಂಡಿಯಾಗೆ ಸೇರಬೇಕು ಎನ್ನುವ ಕನಸನ್ನು ಇಟ್ಟುಕೊಂಡಿದ್ದಾರೆ ಸಿರಾಜ್.

    ಹೈದರಾಬಾದ್ ಸನ್ ರೈಸರ್ಸ್ ತಂಡದ ಬಗ್ಗೆ ಪ್ರತಿಕ್ರಿಯಿಸಿ, ವಿವಿಎಸ್ ಲಕ್ಷ್ಮಣ್ ಮತ್ತು ನಾಯಕ ಡೇವಿಡ್ ವಾರ್ನರ್ ಬಳಿ ನಾನು ಮತ್ತಷ್ಟು ಕಲಿಯುತ್ತೇನೆ ಎಂದು ಹೇಳಿ ತಮ್ಮ ಮಾತನ್ನು ಮೊಹಮ್ಮದ್ ಸಿರಾಜ್ ಮುಗಿಸಿದರು.

    ಇದನ್ನೂ ಓದಿ: ಆರ್‍ಸಿಬಿ 12 ಕೋಟಿ ನೀಡಿ ಟೈಮಲ್ ಮಿಲ್ಸ್ ಅವರನ್ನೇ ಖರೀದಿಸಿದ್ದು ಯಾಕೆ?

  • ಯಾರು, ಯಾವ ತಂಡಕ್ಕೆ, ಎಷ್ಟು ಹಣಕ್ಕೆ ಸೇಲ್: ಪೂರ್ಣ ಪಟ್ಟಿ ಓದಿ

    ಯಾರು, ಯಾವ ತಂಡಕ್ಕೆ, ಎಷ್ಟು ಹಣಕ್ಕೆ ಸೇಲ್: ಪೂರ್ಣ ಪಟ್ಟಿ ಓದಿ

    ಬೆಂಗಳೂರು: ಏಪ್ರಿಲ್ ತಿಂಗಳಲ್ಲಿ ನಡೆಯಲಿರುವ ಐಪಿಎಲ್ ಹತ್ತನೇ ಆವೃತ್ತಿಯ ಟೂರ್ನಿಗಾಗಿ ಒಟ್ಟು 352 ಆಟಗಾರರ ಪೈಕಿ 66 ಆಟಗಾರರನ್ನು ಫ್ರಾಂಚೈಸಿಗಳು ಖರೀದಿ ಮಾಡಿವೆ.

    ರಿಟ್ಜ್ ಕಾರ್ಲಟನ್ ಹೋಟೆಲ್‍ನಲ್ಲಿ ನಡೆದ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಇಂಗ್ಲೆಂಡಿನ ಬೆನ್ ಸ್ಟೋಕ್ಸ್ ಅತೀ ಹೆಚ್ಚು ಮೊತ್ತಕ್ಕೆ ಮಾರಾಟವಾಗಿದ್ದಾರೆ. 14.5 ಕೋಟಿ ರೂ.ಗೆ ಸ್ಟೋಕ್ಸ್ ಪುಣೆ ಪಾಲಾದರೆ, ಇಂಗ್ಲೆಂಡಿನ ಮತ್ತೊಬ್ಬ ಆಟಗಾರ ಟೈಮಲ್ ಮಿಲ್ಸ್ ಅವರನ್ನು 12 ಕೋಟಿ ನೀಡಿ ರಾಯಲ್ ಚಾಲೆಂಜರ್ಸ್ ಖರೀದಿಸಿದೆ. ಹೀಗಾಗಿ ಇಲ್ಲಿ ಯಾರು ಎಷ್ಟು ರೂ. ಮಾರಾಟವಾಗಿದ್ದಾರೆ ಎನ್ನುವ ಪೂರ್ಣ ಮಾಹಿತಿಯನ್ನು ನೀಡಲಾಗಿದೆ.

    ರಾಯಲ್ ಚಾಲೆಂಜರ್ಸ್ ಬೆಂಗಳೂರು
    ಟೈಮಲ್ ಮಿಲ್ಸ್ (ಇಂಗ್ಲೆಂಡ್) – 12 ಕೋಟಿ ರೂ.
    ಅನಿಕೇತ್ ಚೌಧರಿ (ಭಾರತ) – 2 ಕೋಟಿ. ರೂ.
    ಪವನ್ ನೇಗಿ (ಭಾರತ) – 1 ಕೋಟಿ ರೂ.
    ಪ್ರವೀಣ್ ದುಬೆ (ಭಾರತ) – 10 ಲಕ್ಷ ರೂ.
    ಬಿಲ್ಲಿ ಸ್ಟಾನ್ಲೇಕ್ (ಆಸ್ಟ್ರೇಲಿಯಾ) – 30 ಲಕ್ಷ ರೂ.
    ಮುಂಬೈ ಇಂಡಿಯನ್ಸ್
    ಕರಣ್ ಶರ್ಮಾ (ಭಾರತ) – 3.2 ಕೋಟಿ ರೂ.
    ಮಿಷೆಲ್ ಜಾನ್ಸನ್ (ಆಸ್ಟ್ರೇಲಿಯಾ) – 2 ಕೋಟಿ ರೂ.
    ಕೆ ಗೌತಮ್ (ಭಾರತ) – 2 ಕೋಟಿ ರೂ.
    ನಿಕೊಲಾಸ್ ಪೂರಣ್ (ವೆಸ್ಟ್ ಇಂಡೀಸ್) – 30 ಲಕ್ಷ ರೂ.
    ಅಸೇಲ ಗುಣರತ್ನೆ (ಶ್ರೀಲಂಕಾ) – 30 ಲಕ್ಷ ರೂ.
    ಸೌರಭ್ ತಿವಾರಿ (ಭಾರತ) – 30 ಲಕ್ಷ ರೂ.
    ಕುಲ್ವಂತ್ ಖೆಜ್ರೋಲಿಯಾ (ಭಾರತ) – 10 ಲಕ್ಷ ರೂ.

    ಸನ್ ರೈಸರ್ಸ್ ಹೈದರಾಬಾದ್
    ರಶೀದ್ ಖಾನ್ ಅರ್ಮಾನ್ (ಅಫ್ಘಾನಿಸ್ತಾನ) – 4 ಕೋಟಿ ರೂ.
    ಏಕಲವ್ಯ ದ್ವಿವೇದಿ (ಭಾರತ) – 75 ಲಕ್ಷ ರೂ.
    ಕ್ರಿಸ್ ಜೋರ್ಡಾನ್ (ಇಂಗ್ಲೆಂಡ್) – 50 ಲಕ್ಷ ರೂ.
    ಮೊಹಮ್ಮದ್ ನಬಿ (ಅಫ್ಘಾನಿಸ್ತಾನ) – 30 ಲಕ್ಷ ರೂ.
    ಬೆನ್ ಲಾಫ್ಲಿನ್ (ಆಸ್ಟ್ರೇಲಿಯಾ) – 30 ಲಕ್ಷ ರೂ.
    ತನ್ಮಯ್ ಅಗರವಾಲ್ (ಭಾರತ) – 10 ಲಕ್ಷ ರೂ.
    ಪ್ರವೀಣ್ ತಂಬೆ (ಭಾರತ) – 10 ಲಕ್ಷ ರೂ.

    ಗುಜರಾತ್ ಲಯನ್ಸ್
    ಜೇಸನ್ ರಾಯ್ (ಇಂಗ್ಲೆಂಡ್) – 1 ಕೋಟಿ ರೂ.
    ಬಸಿಲ್ ಥಂಪಿ (ಭಾರತ) – 85 ಲಕ್ಷ ರೂ.
    ಮನಪ್ರೀತ್ ಗೋನಿ (ಭಾರತ) – 60 ಲಕ್ಷ ರೂ.
    ನಾಥು ಸಿಂಗ್ (ಭಾರತ) – 50 ಲಕ್ಷ ರೂ.
    ಮುನಾಫ್ ಪಟೇಲ್ (ಭಾರತ) – ರು. 30 ಲಕ್ಷ ರೂ.
    ತೇಜಸ್ ಸಿಂಗ್ ಬರೋಕಾ (ಭಾರತ) – 10 ಲಕ್ಷ ರೂ.
    ಚಿರಾಗ್ ಸೂರಿ (ಭಾರತ) – 10 ಲಕ್ಷ ರೂ.
    ಶೆಲ್ಲಿ ಶೌರ್ಯ (ಭಾರತ) – 10 ಲಕ್ಷ ರೂ.
    ಶುಭಂ ಅಗರವಾಲ್ (ಭಾರತ) – 10 ಲಕ್ಷ ರೂ.
    ಪ್ರಥಮ್ ಸಿಂಗ್ (ಭಾರತ) – 10 ಲಕ್ಷ ರೂ.

    ರೈಸಿಂಗ್ ಪುಣೆ ಸೂಪರ್ ಜೈಂಟ್ಸ್
    ಬೆನ್ ಸ್ಟೋಕ್ಸ್ (ಇಂಗ್ಲೆಂಡ್) – 14.5 ಕೋಟಿ ರೂ.
    ಡ್ಯಾನಿಯೆಲ್ ಕ್ರಿಸ್ಟಿಯನ್ (ಆಸ್ಟ್ರೇಲಿಯಾ) – 1 ಕೋಟಿ ರೂ.
    ಲೋಕಿ ಫಗ್ರ್ಯೂಸನ್ (ನ್ಯೂಜಿಲೆಂಡ್) – 50 ಲಕ್ಷ
    ಜಯದೇವ್ ಉನದ್ಕತ್ (ಭಾರತ) – 30 ಲಕ್ಷ ರೂ.
    ರಾಹುಲ್ ಚಹಾರ್ (ಭಾರತ) – 10 ಲಕ್ಷ ರೂ.
    ಸೌರಭ್ ಕುಮಾರ್ (ಭಾರತ) – 10 ಲಕ್ಷ ರೂ.
    ಮಿಲಿಂದ್ ಟಂಡನ್ (ಭಾರತ) – 10 ಲಕ್ಷ ರೂ.
    ರಾಹುಲ್ ತ್ರಿಪಾಠಿ (ಭಾರತ) – 10 ಲಕ್ಷ ರೂ.

    ಕೊಲ್ಕತ್ತಾ ನೈಟ್ ರೈಡರ್ಸ್
    ಟ್ರೆಂಟ್ ಬೋಲ್ಟ್ (ನ್ಯೂಜಿಲೆಂಡ್) – 5 ಕೋಟಿ ರೂ.
    ಕ್ರಿಸ್ ವೋಕ್ಸ್ (ಇಂಗ್ಲೆಂಡ್) – 4.2 ಕೋಟಿ ರೂ.
    ನೇಥನ್ ಕೌಲ್ಟರ್ ನೈಲ್ (ಆಸ್ಟ್ರೇಲಿಯಾ) – 3.5 ಕೋಟಿ ರೂ.
    ರಿಶಿ ಧವನ್ (ಭಾರತ) – 55 ಲಕ್ಷ ರೂ.
    ರೌಮನ್ ಪಾವೆಲ್ (ವೆಸ್ಟ್ ಇಂಡೀಸ್) – 30 ಲಕ್ಷ ರೂ.
    ಆರ್ ಸಂಜಯ್ ಯಾದವ್ (ಭಾರತ) – 10 ಲಕ್ಷ ರೂ.
    ಇಶಾಂಕ್ ಜಗ್ಗಿ (ಭಾರತ) – 10 ಲಕ್ಷ ರೂ.
    ಸಯನ್ ಘೋಷ್ – 10 ಲಕ್ಷ ರೂ.

    ಕಿಂಗ್ಸ್ ಇಲೆವನ್ ಪಂಜಾಬ್
    ತಂಗರಸು ನಟರಾಜನ್ (ಭಾರತ) – 3 ಕೋಟಿ ರೂ.
    ವರುಣ್ ಆರೋನ್ (ಭಾರತ) – 2.8 ಕೋಟಿ ರೂ.
    ಇಯಾನ್ ಮಾರ್ಗನ್ (ಇಂಗ್ಲೆಂಡ್) – 2 ಕೋಟಿ ರೂ.
    ಮ್ಯಾಟ್ ಹೆನ್ರಿ (ನ್ಯೂಜಿಲೆಂಡ್) – 50 ಲಕ್ಷ ರೂ.
    ಮಾರ್ಟಿನ್ ಗುಪ್ಟಿಲ್ (ನ್ಯೂಜಿಲೆಂಡ್) – 50 ಲಕ್ಷ ರೂ.
    ಡ್ಯಾರೆನ್ ಸಮ್ಮಿ (ವೆಸ್ಟ್ ಇಂಡೀಸ್) – 30 ಲಕ್ಷ ರೂ.
    ರಾಹುಲ್ ತೆವಾತಿಯಾ (ಭಾರತ) – 25 ಲಕ್ಷ ರೂ.
    ರಿಂಕು ಸಿಂಗ್ (ಭಾರತ) – 10 ಲಕ್ಷ ರೂ.

    ಡೆಲ್ಲಿ ಡೇರ್ ಡೆವಿಲ್ಸ್
    ಕಾಗಿಸೋ ರಬಡ (ದಕ್ಷಿಣ ಆಫ್ರಿಕಾ) – 5 ಕೋಟಿ ರೂ.
    ಪ್ಯಾಟ್ರಿಕ್ ಜೇಮ್ಸ್ ಕುಮಿನ್ಸ್ (ಆಸ್ಟ್ರೇಲಿಯಾ) – 4.5 ಕೋಟಿ ರೂ.
    ಏಂಜಲೋ ಮ್ಯಾಥ್ಯೂಸ್ (ಶ್ರೀಲಂಕಾ) – 2 ಕೋಟಿ ರೂ.
    ಕೋರೆ ಆಂಡರ್ಸನ್ (ನ್ಯೂಜಿಲೆಂಡ್) – 1 ಕೋಟಿ ರೂ.
    ಮುರುಗನ್ ಅಶ್ವಿನ್ (ಭಾರತ) – 1 ಕೋಟಿ ರೂ.
    ಆದಿತ್ಯ ತಾರೆ (ಭಾರತ) – 25 ಲಕ್ಷ ರೂ.
    ಅಂಕೀತ್ ಬಾವನೆ (ಭಾರತ) – 10 ಲಕ್ಷ ರೂ.
    ನವದೀಪ್ ಸೈನಿ (ಭಾರತ) – 10 ಲಕ್ಷ ರೂ.
    ಶಶಾಂಕ್ ಸಿಂಗ್ (ಭಾರತ) – 10 ಲಕ್ಷ ರೂ.


     

  • ಪೂಮಾ ಜೊತೆ 100 ಕೋಟಿ ರೂ. ಡೀಲ್‍ಗೆ ಕೊಹ್ಲಿ ಸಹಿ

    ಪೂಮಾ ಜೊತೆ 100 ಕೋಟಿ ರೂ. ಡೀಲ್‍ಗೆ ಕೊಹ್ಲಿ ಸಹಿ

    ನವದೆಹಲಿ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಪೂಮಾದ ರಾಯಭಾರಿಯಾಗಿ ನೇಮಕವಾಗಿದ್ದು, ಬರೋಬ್ಬರಿ 110 ಕೋಟಿ ರೂಪಾಯಿಯ 8 ವರ್ಷಗಳ ಡೀಲ್‍ಗೆ ಸಹಿ ಹಾಕಿದ್ದಾರೆ.

    ಈ ಮೂಲಕ ಕೊಹ್ಲಿ 100 ಕೋಟಿ ರೂಪಾಯಿಗೂ ಹೆಚ್ಚಿನ ಮೊತ್ತದ ಬ್ರ್ಯಾಂಡ್‍ವೊಂದರ ಜಾಹಿರಾತು ಒಪ್ಪಂದಕ್ಕೆ ಸಹಿ ಹಾಕಿದ ಮೊದಲ ಭಾರತೀಯ ಕ್ರೀಡಾಪಟು ಎನಿಸಿಕೊಂಡಿದ್ದಾರೆ.

    ಪೂಮಾದಲ್ಲಿರುವ ಶ್ರೇಷ್ಠ ಅಥ್ಲೀಟ್‍ಗಳ ಪಟ್ಟಿಯ ಭಾಗವಾಗಿರುವುದು ನನ್ನ ಸೌಭಾಗ್ಯ. ಈಗಿನ ಉಸೇನ್ ಬೋಲ್ಟ್ ಮಾತ್ರವಲ್ಲದೆ ಪೀಲೆ, ಮರಡೋನಾ, ಥೈರಿ ಹೆನ್ರಿ ಮುಂತಾದವರೊಂದಿಗೆ ಈ ಬ್ರಾಂಡಿನ ಇತಿಹಾಸವಿದೆ. ನಾನು ಮತ್ತು ಪೂಮಾ ದೀರ್ಘಾವಧಿ ಸಹಭಾಗಿತ್ವಕ್ಕೆ ಒಪ್ಪಂದ ಮಾಡಿಕೊಂಡಿದ್ದೇವೆ. ಭಾರತೀಯ ಮಾರುಕಟ್ಟೆಯಲ್ಲಿ ಪೂಮಾ ಕಡಿಮೆ ಅವಧಿಯಲ್ಲಿ ಇಷ್ಟು ಜನಪ್ರಿಯತೆ ಗಳಿಸಿರೋದು ಮೆಚ್ಚುವಂತದ್ದು ಅಂತ ಕೊಹ್ಲಿ ಹೇಳಿದ್ದಾರೆ.

    ಕೊಹ್ಲಿ ಈ ಹಿಂದೆ ಪೂಮಾದ ಪ್ರತಿಸ್ಪರ್ಧಿ ಬ್ರಾಂಡ್ ಆದ ಅಡಿದಾಸ್ ಜೊತೆ ಒಪ್ಪಂದ ಮಾಡಿಕೊಂಡಿದ್ದರು. ಕಳೆದ ವರ್ಷ ಅಡಿದಾಸ್‍ನೊಂದಿಗಿನ ಒಪ್ಪಂದದ ಅವಧಿ ಮುಗಿದಿತ್ತು. ಇದಾದ ಬಳಿಕ ಇದೇ ಮೊದಲ ಬಾರಿಗೆ ಕ್ರೀಡಾ ಬ್ರ್ಯಾಂಡ್‍ವೊಂದಕ್ಕೆ ಕೊಹ್ಲಿ ಜಾಹಿರಾತು ನೀಡುತ್ತಿದ್ದು, ಮುಂದಿನ 8 ವರ್ಷಗಳ ಕಾಲ ಪೂಮಾದ ಗ್ಲೋಬಲ್ ಬ್ರಾಂಡ್ ಅಂಬಾಸಿಡರ್ ಆಗಿg

    2016ರ ಸೆಲಬ್ರಿಟಿ ಬ್ರಾಂಡ್ ವರದಿಯ ಪ್ರಕಾರ ಕೊಹ್ಲಿ 9.2 ಕೋಟಿ ಬ್ರಾಂಡ್ ಮೌಲ್ಯ ಹೊಂದಿದ್ದು, ಮೊದಲ ಸ್ಥಾನದಲ್ಲಿರುವ ಶಾರುಖ್ 13ಕೋಟಿ ಬ್ರಾಂಡ್ ಮೌಲ್ಯ ಹೊಂದಿದ್ದಾರೆ.

    ಕೊಹ್ಲಿ ಬಳಿಯಿರುವ ಬ್ರಾಂಡ್‍ಗಳು: ಪೆಪ್ಸಿ, ಆಡಿ, ಹರ್ಬಲ್ ಲೈಫ್, ಕೋಲ್ಗೇಟ್, ವಿಕ್ಸ್, ಬೂಸ್ಟ್, ಟಿಸ್ಸೂಟ್,ಯುಎಸ್‍ಎಲ್, ಟಿವಿಎಸ್, ಸ್ಮಾಷ್, ನಿತೇಶ್ ಎಸ್ಟೇಟ್ಸ್.

     

  • ಅಂತರಾಷ್ಟ್ರೀಯ ಕ್ರಿಕೆಟ್‍ಗೆ ಗುಡ್‍ಬೈ ಹೇಳಿದ ಶಾಹಿದ್ ಅಫ್ರಿದಿ

    ಅಂತರಾಷ್ಟ್ರೀಯ ಕ್ರಿಕೆಟ್‍ಗೆ ಗುಡ್‍ಬೈ ಹೇಳಿದ ಶಾಹಿದ್ ಅಫ್ರಿದಿ

    ಇಸ್ಲಾಮಾಬಾದ್: ಪಾಕಿಸ್ತಾನದ ಆಲ್ ರೌಂಡರ್ ಕ್ರಿಕೆಟ್ ಆಟಗಾರ ಶಾಹಿದ್ ಅಫ್ರಿದಿ ಎಲ್ಲ ಮಾದರಿಯ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಹೇಳಿದ್ದಾರೆ.

    ಭಾನುವಾರದಂದು ಅಫ್ರಿದಿ ಅಂತರಾಷ್ಟ್ರೀಯ ಕ್ರಿಕೆಟ್‍ನಿಂದ ನಿವೃತ್ತಿ ಹೊಂದುತ್ತಿರುವ ಬಗ್ಗೆ ಘೋಷಿಸಿದ್ರು. 36 ವರ್ಷದ ಅಫ್ರೀದಿ ಈಗಾಗಲೇ ಟೆಸ್ಟ್ ಕ್ರಿಕೆಟ್ ಹಾಗೂ ಏಕದಿನ ಪಂದ್ಯಗಳಿಂದ ನಿವೃತ್ತರಾಗಿದ್ರು.

    2016ರಲ್ಲಿ ಭಾರತದಲ್ಲಿ ನಡೆದ ಟಿ20 ವಿಶ್ವಕಪ್ ಕ್ರಿಕೆಟ್‍ನಲ್ಲಿ ಅಫ್ರಿದಿ ತಂಡದ ನಾಯಕತ್ವ ವಹಿಸಿದ್ರು. ಪಂದ್ಯಾವಳಿಯ ನಂತರ ನಾಯಕ ಸ್ಥಾನದಿಂದ ಕೆಳಗಿಳಿದಿದ್ರು.

    ಅಫ್ರಿದಿ 1996ರಲ್ಲಿ 37 ಬಾಲ್‍ಗಳಿಗೆ ಸೆಂಚುರಿ ಬಾರಿಸಿ ಅಭಿಮಾನಿಗಳ ಫೇವರೇಟ್ ಆಟಗಾರಾಗಿದ್ದರು. ಅಂದು ಅಫ್ರಿದಿ ನಿರ್ಮಿಸಿದ್ದ ಈ ವಿಶ್ವದಾಖಲೆಯನ್ನ ಮುಂದಿನ 18 ವರ್ಷಗಳವರೆಗೆ ಯಾರೂ ಮುರಿದಿರಲಿಲ್ಲ.(ನ್ಯೂಜಿಲ್ಯಾಂಡಿನ ಕೋರಿ ಆಂಡರ್‍ಸನ್ 2014ರಲ್ಲಿ 36 ಬಾಲ್‍ಗಳಿಗೆ ಸೆಂಚುರಿ ಬಾರಿಸಿ ಈ ದಾಖಲೆ ಮುರಿದರು. ನಂತರ ಎಬಿ ಡಿವಿಲ್ಲಿಯರ್ಸ್ 2015ರಲ್ಲಿ 31 ಬಾಲ್‍ಗಳಿಗೆ ಸೆಂಚುರಿ ಬಾರಿಸಿದ್ದು ಸದ್ಯದ ದಾಖಲೆಯಾಗಿದೆ.)

    ಅಫ್ರಿದಿ 523 ಅಂತರಾಷ್ಟ್ರೀಯ ಪಂದ್ಯಗಳನ್ನಾಡಿದ್ದು, 10,645 ರನ್ ಹಾಗೂ 540 ವಿಕೆಟ್‍ಗಳನ್ನ ಪಡೆದಿದ್ದಾರೆ. 27 ಟೆಸ್ಟ್ ಪಂದ್ಯಗಳನ್ನ ಆಡಿದ್ದು, 156 ಅತ್ಯಧಿಕ ಸ್ಕೋರ್‍ನೊಂದಿಗೆ ಒಟ್ಟು 1716 ರನ್ ಹಾಗೂ 48 ವಿಕೆಟ್‍ಗಳನ್ನ ಪಡೆದಿದ್ದಾರೆ. 398 ಏಕದಿನ ಪಂದ್ಯಗಳನ್ನ ಆಡಿದ್ದು, 124 ರನ್‍ಗಳ ಅತ್ಯಧಿಕ ಸ್ಕೋರ್‍ನೊಂದಿಗೆ ಒಟ್ಟು 8064 ರನ್ ಹಾಗೂ 395 ವಿಕೆಟ್‍ಗಳನ್ನ ಪಡೆದಿದ್ದಾರೆ. 98 ಟಿ20 ಪಂದ್ಯಗಳನ್ನಾಡಿ 1405 ರನ್ ಹಾಗೂ 97 ವಿಕೆಟ್‍ಗಳನ್ನ ಪಡೆದಿದ್ದಾರೆ.

     

  • ಇಂದು ನಡೆಯಲಿದೆ 357 ಕ್ರಿಕೆಟಿಗರ ಅದೃಷ್ಟ ಪರೀಕ್ಷೆ!

    ಇಂದು ನಡೆಯಲಿದೆ 357 ಕ್ರಿಕೆಟಿಗರ ಅದೃಷ್ಟ ಪರೀಕ್ಷೆ!

    ಬೆಂಗಳೂರು: ಐಪಿಎಲ್ ಸೀಸನ್ 10ರ ಹರಾಜು ಪ್ರಕ್ರಿಯೆ ಇಂದು ಬೆಂಗಳೂರಿನ ರಿಟ್ಜ್ ಕಾರ್ಲಟನ್ ಹೋಟೆಲ್‍ನಲ್ಲಿ ನಡೆಯಲಿದೆ. ಈ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 357 ಕ್ರಿಕೆಟಿಗರು ತಮ್ಮ ಅದೃಷ್ಟ ಪರೀಕ್ಷಿಸಿಕೊಳ್ತಿದ್ದು, ಇದರಲ್ಲಿ 227 ಮಂದಿ ಭಾರತೀಯ ಆಟಗಾರರೇ ಇದ್ದಾರೆ.

    ಉಳಿದಂತೆ 130 ಮಂದಿ ವಿದೇಶಿ ಆಟಗಾರರು ಹರಾಜಿಗೆ ಲಭ್ಯ ಇದ್ದಾರೆ. ಇದರಲ್ಲಿ ಅಫ್ಘಾನಿಸ್ತಾನದ ಐವರು ಆಟಗಾರರು ಹರಾಜಿಗೆ ಇರೋದು ಈ ಬಾರಿ ವಿಶೇಷ. ಐಪಿಎಲ್ ಫ್ರಾಂಚೈಸಿಗಳಿಗೆ ಬೇಕಾಗಿರೋದು 76 ಆಟಗಾರರು ಮಾತ್ರ. ಐಪಿಎಲ್‍ನ ಒಟ್ಟು 8 ಫ್ರಾಂಚೈಸಿಗಳು ಪಾಲ್ಗೊಳ್ಳುತ್ತಿದ್ದು, ಯಾರು ಯಾವ ತಂಡದ ಪಾಲಾಗಲಿದ್ದಾರೆ ಅನ್ನೊದು ಕುತೂಹಲ ಮೂಡಿಸಿದೆ. ಎಲ್ಲರ ಕಣ್ಣು ಇಂಗ್ಲೆಂಡ್‍ನ ಬೆನ್ ಸ್ಟೋಕ್ಸ್, ನ್ಯೂಜಿಲೆಂಡ್‍ನ ಗ್ರಾಂಡ್‍ಹೋಮ್, ಆಫ್ರಿಕಾದ ಕಾಗಿಸೋ ರಬಾಡಾ, ಇಮ್ರಾನ್ ತಾಹೀರ್, ಲಂಕಾದ ಅಸಿಲಾ ಗುಣರತ್ನೆ, ಭಾರತದ ಇಶಾಂತ್ ಶರ್ಮಾ ಮೇಲಿದೆ.

    ಇನ್ನು ಆಟಗಾರರನ್ನು ಕೊಳ್ಳಲು ಯಾವ ಯಾವ ಫ್ರಾಂಚೈಸಿ ಬಳಿ ಎಷ್ಟೆಷ್ಟು ಹಣ ಇದೆ ಅನ್ನೋದನ್ನು ನೋಡೋದಾದ್ರೆ,

    1. ಕಿಂಗ್ಸ್ ಇಲೆವೆನ್ ಪಂಜಾಬ್ – 23.35 ಕೋಟಿ
    2. ಡೆಲ್ಲಿ ಡೇರ್ ಡೆವಿಲ್ಸ್ – 21.5 ಕೋಟಿ
    3. ಸನ್ ರೈಸರ್ಸ್ ಹೈದ್ರಾಬಾದ್ – 20.9 ಕೋಟಿ
    4. ಕೊಲ್ಕೊತಾ ನೈಟ್ ರೈಡರ್ಸ್ – 19.75 ಕೋಟಿ
    5. ಜೈಸಿಂಗ್ ಪುಣೆ ಸೂಪರ್ ಜೈಂಟ್ಸ್ – 19.01 ಕೋಟಿ
    6. ಗುಜರಾತ್ ಲಯನ್ಸ್ – 14.35 ಕೋಟಿ
    7. ರಾಯಲ್ ಚಾಲೆಂಜರ್ಸ್ ಬೆಂಗಳೂರು – 12.82 ಕೋಟಿ
    8. ಮುಂಬೈ ಇಂಡಿಯನ್ಸ್ – 11.55 ಕೋಟಿ

  • ಐಪಿಎಲ್ 2017: ಪುಣೆ ನಾಯಕ ಸ್ಥಾನದಿಂದ ಧೋನಿಗೆ ಕೊಕ್, ಸ್ಮಿತ್‍ಗೆ ಮಣೆ

    ಐಪಿಎಲ್ 2017: ಪುಣೆ ನಾಯಕ ಸ್ಥಾನದಿಂದ ಧೋನಿಗೆ ಕೊಕ್, ಸ್ಮಿತ್‍ಗೆ ಮಣೆ

    ಪುಣೆ: ಐಪಿಎಲ್ 10ನೇ ಆವೃತ್ತಿಯಲ್ಲಿ ಪುಣೆ ತಂಡದ ನಾಯಕ ಸ್ಥಾನದಿಂದ ಧೋನಿ ಅವರನ್ನು ಕಿತ್ತುಹಾಕಲಾಗಿದ್ದು, ಆಸ್ಟ್ರೇಲಿಯಾದ ನಾಯಕ ಸ್ಟೀವ್ ಸ್ಮಿತ್ ತಂಡವನ್ನು ಮುನ್ನಡೆಸಲಿದ್ದಾರೆ.

    ಐಪಿಎಲ್ 2017ನೇ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆ ನಡೆಯುವ ಮುನ್ನಾ ದಿನ ಈ ಮಹತ್ವದ ಬೆಳವಣಿಗೆ ನಡೆದಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಪುಣೆ ಸೂಪರ್ ಜೈಂಟ್ಸ್ ಮಾಲೀಕ ಸಂಜಯ್ ಗೋಯಂಕಾ, ಧೋನಿ ನಾಯಕತ್ವದಿಂದ ಕೆಳಗಡೆ ಇಳಿಯಲಿಲ್ಲ. ಕಳೆದ ಆವೃತ್ತಿಯಲ್ಲಿ ನಮ್ಮ ತಂಡ ಉತ್ತಮ ಪ್ರದರ್ಶನ ನೀಡಲಿಲ್ಲ. ಹೀಗಾಗಿ ಕಿರಿಯ ಆಟಗಾರನ ನೇತೃತ್ವದಲ್ಲಿ ತಂಡವನ್ನು ಮುನ್ನಡೆಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

    ಐಪಿಎಲ್ 9ರ ಆವೃತ್ತಿಯ 14 ಪಂದ್ಯದಲ್ಲಿ ಪುಣೆ 5 ಪಂದ್ಯಗಳನ್ನು ಮಾತ್ರ ಗೆದ್ದುಕೊಂಡಿತ್ತು. ಧೋನಿ 12 ಇನ್ನಿಂಗ್ಸ್ ಒಂದು ಅರ್ಧಶತಕ ಸಹಿತ 284 ರನ್‍ಗಳಿಸಿದ್ದರು.

    ಐಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತ ನ್ಯಾ. ಲೋಧಾ ನೇತೃತ್ವದ ಸಮಿತಿ ಶಿಫಾರಸಿನಂತೆ ಐಪಿಎಲ್‍ನಿಂದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳನ್ನು 2 ವರ್ಷಗಳ ಅಮಾನತುಗೊಂಡಿತ್ತು. ಈ ಹಿನ್ನೆಲೆಯಲ್ಲಿ 2015ರವರೆಗೆ ಚೆನ್ನೈ ತಂಡವನ್ನು ಮುನ್ನಡೆಸಿದ್ದ ಧೋನಿ 2016ರ ಆವೃತ್ತಿಯಲ್ಲಿ ಪುಣೆ ತಂಡವನ್ನು ಮುನ್ನಡೆಸಿದ್ದರು.

    ಸತತ 8 ಆವೃತ್ತಿಯಲ್ಲಿ ಚೆನ್ನೈ ತಂಡವನ್ನು ಧೋನಿ ಮುನ್ನಡೆಸಿದ್ದರು. 2010 ಮತ್ತು 2011ರಲ್ಲಿ ಚೆನ್ನೈ ತಂಡ ಚಾಂಪಿಯನ್ ಆಗಿತ್ತು. 2008, 2012, 2013, 2015 ರಲ್ಲಿ ರನ್ನರ್ ಅಪ್ ಆಗಿತ್ತು.

  • ಗೌರವ ಡಾಕ್ಟರೇಟನ್ನು ಸಿದ್ಧಗಂಗಾ ಕಿರಿಯ ಶ್ರೀ ನಿರಾಕರಿಸಿದ್ದು ಯಾಕೆ?

    ಗೌರವ ಡಾಕ್ಟರೇಟನ್ನು ಸಿದ್ಧಗಂಗಾ ಕಿರಿಯ ಶ್ರೀ ನಿರಾಕರಿಸಿದ್ದು ಯಾಕೆ?

    ತುಮಕೂರು: ಇಲ್ಲಿನ ವಿಶ್ವ ವಿದ್ಯಾಲಯದ ಗೌರವ ಡಾಕ್ಟರೇಟ್ ಅನ್ನು ಸಿದ್ಧಗಂಗಾ ಮಠದ ಕಿರಿಯ ಶ್ರೀಗಳಾದ ಸಿದ್ಧಲಿಂಗ ಸ್ವಾಮೀಜಿ ನಿರಾಕರಿಸಿದ್ದಾರೆ.

    ವಿವಿಯ 10 ನೇ ಘಟಿಕೋತ್ಸವದ ಅಂಗವಾಗಿ ಇಬ್ಬರಿಗೆ ಡಾಕ್ಟರೇಟ್ ಪ್ರಧಾನ ಮಾಡಲು ವಿವಿ ಸಿಂಡಿಕೇಟ್ ನಿರ್ಧರಿಸಿತ್ತು. ಪವಾಡ ರಹಸ್ಯ ಬಯಲು ಖ್ಯಾತಿಯ ಹುಲಿಕಲ್ ನಟರಾಜ್ ಮತ್ತು ಧಾರ್ಮಿಕ ಕ್ಷೇತ್ರದಿಂದ ಸಿದ್ಧಲಿಂಗ ಸ್ವಾಮೀಜಿ ಅವರನ್ನು ಆಯ್ಕೆ ಮಾಡಲಾಗಿತ್ತು.

    ಈ ಇಬ್ಬರಿಗೆ ಡಾಕ್ಟರೇಟ್ ನೀಡಲು ರಾಜ್ಯಪಾಲ ವಿಆರ್ ವಾಲಾ ಅನುಮೋದನೆ ಕೂಡಾ ಮಾಡಿದ್ದರು. ಆದರೆ ಧಾರ್ಮಿಕ ಕ್ಷೇತ್ರದಲ್ಲಿ ಸಾಧಿಸುವುದು ಇನ್ನೂ ಬಹಳಷ್ಟಿದೆ ಎಂಬ ಕಾರಣ ನೀಡಿ, ಸಿದ್ಧಲಿಂಗ ಸ್ವಾಮೀಜಿ ಡಾಕ್ಟರೇಟ್ ಪಡೆಯದಿರಲು ನಿರ್ಧರಿಸಿದ್ದಾರೆ.

    ಇತ್ತೀಚೆಗೆ ಟೀಂ ಇಂಡಿಯಾದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರ ಕ್ರಿಕೆಟ್ ಸಾಧನೆಯನ್ನು ಗುರುತಿಸಿ ಬೆಂಗಳೂರು ವಿವಿ ಗೌರವ ಡಾಕ್ಟರೇಟ್ ನೀಡಲು ಮುಂದಾಗಿತ್ತು. ಆದರೆ ದ್ರಾವಿಡ್, ಕ್ರಿಕೆಟ್ ಆಡಿದ್ದಕ್ಕೆ ಡಾಕ್ಟರೇಟ್ ಪದವಿ ನೀಡುವುದು ಬೇಡ. ಕ್ರಿಕೆಟ್‍ಗೆ ಸಂಬಂಧಪಟ್ಟಂತೆ ಶೈಕ್ಷಣಿಕ ಪ್ರಬಂಧ ಮಂಡಿಸಿ ನಾನು ಡಾಕ್ಟರೇಟ್ ಪದವಿಯನ್ನು ಪಡೆಯುತ್ತೇನೆ ಎಂದು ವಿವಿಗೆ ತಿಳಿಸಿ ಗೌರವ ಡಾಕ್ಟರೇಟ್ ನಿರಾಕಸಿದ್ದರು.

  • 31 ರನ್‍ಗಳಿಸಿದ್ರೆ ಸೆಹ್ವಾಗ್ ದಾಖಲೆ ಮುರಿಯಲಿದ್ದಾರೆ ಕೊಹ್ಲಿ

    31 ರನ್‍ಗಳಿಸಿದ್ರೆ ಸೆಹ್ವಾಗ್ ದಾಖಲೆ ಮುರಿಯಲಿದ್ದಾರೆ ಕೊಹ್ಲಿ

    ಹೈದರಾಬಾದ್: ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಇನ್ನು 31 ರನ್ ಗಳಿಸಿದರೆ ವಿರೇಂದ್ರ ಸೆಹ್ವಾಗ್ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿಯಲಿದ್ದಾರೆ.

    ಇದೂವರೆಗೆ ವೀರೇಂದ್ರ ಸೆಹ್ವಾಗ್ 2004-05ರ ಅವಧಿಯಲ್ಲಿ 9 ಪಂದ್ಯಗಳಿಂದ 1105 ರನ್‍ಗಳಿಸಿದ್ದರು. ಈಗ ಕೊಹ್ಲಿ ಅಷ್ಟೇ ಪಂದ್ಯಗಳಿಂದ 1075 ರನ್‍ಗಳಿಸಿದ್ದಾರೆ.

    ಸೆಹ್ವಾಗ್ 4 ಶತಕ, ಮೂರು ಅರ್ಧ ಶತಕ ಹೊಡೆಯುವ ಮೂಲಕ ಈ ಸಾಧನೆ ಮಾಡಿದರೆ ಕೊಹ್ಲಿ 4 ಶತಕ 2 ಅರ್ಧಶತಕ ಹೊಡೆದಿದ್ದಾರೆ. 2016ರಲ್ಲಿ ಕೊಹ್ಲಿ ನ್ಯೂಜಿಲೆಂಡ್ ವಿರುದ್ಧ 3 ಪಂದ್ಯಗಳಿಂದ 309 ರನ್ ಬಾರಿಸಿದ್ದರೆ, ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳಿಂದ 655 ರನ್ ಹೊಡೆದಿದ್ದರು.

    ಈಗ ಬಾಂಗ್ಲಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ನಲ್ಲಿ ಅಜೇಯ 111 ರನ್(141 ಎಸೆತ, 12ಬೌಂಡರಿ) ಗಳಿಸಿದ್ದಾರೆ.

    ಉತ್ತಮ ಸ್ಥಿತಿಯಲ್ಲಿ ಭಾರತ:
    ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಆರಂಭದಲ್ಲೇ ಕೆಎಲ್ ರಾಹುಲ್ ವಿಕೆಟ್ ಕಳೆದುಕೊಂಡರೂ ಮೊದಲ ದಿನದ ಅಂತ್ಯಕ್ಕೆ 90 ಓವರ್‍ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 356 ರನ್‍ಗಳಿಸಿದೆ.

    ಮುರಳಿ ವಿಜಯ್ ಮತ್ತು ಚೇತೇಶ್ವರ ಪೂಜಾರ ಎರಡನೇ ವಿಕೆಟಿಗೆ 178 ರನ್‍ಗಳ ಜೊತೆಯಾಟವಾಡಿದರು. ಪೂಜಾರ 83 ರನ್( 177 ಎಸೆತ, 9 ಬೌಂಡರಿ) ಬಾರಿಸಿದರೆ ಮುರಳಿ ವಿಜಯ್ 108 ರನ್(160 ಎಸೆತ 12 ಬೌಂಡರಿ 1 ಸಿಕ್ಸರ್) ಹೊಡೆದು ಔಟಾದರು.

    130 ಎಸೆತದಲ್ಲಿ 16ನೇ ಶತಕ ಹೊಡೆದ ಕೊಹಿಗ್ಲೆ ರಹಾನೆ 45 ರನ್( 60 ಎಸೆತ, 7 ಬೌಂಡರಿ) ಹೊಡೆದು ಸಾಥ್ ನೀಡಿದ್ದಾರೆ.

     

  • ವಿಶ್ವದಲ್ಲೇ ಫಸ್ಟ್: ಟಿ20 ಕ್ರಿಕೆಟ್‍ನಲ್ಲಿ 300 ರನ್ ಬಾರಿಸಿ ಇತಿಹಾಸ ಸೃಷ್ಟಿಸಿದ ಮೋಹಿತ್

    ನವದೆಹಲಿ: ವಿಶ್ವದಲ್ಲೇ ಮೊದಲ ಬಾರಿಗೆ ಟಿ-20 ಕ್ರಿಕೆಟ್‍ನಲ್ಲಿ ತ್ರಿಶತಕ ಬಾರಿಸುವ ಮೂಲಕ ದೆಹಲಿಯ ಯುವ ಕ್ರಿಕಟರ್ ಅಸಾಮಾನ್ಯ ಸಾಧನೆ ಮಾಡಿದ್ದಾರೆ.

    ಮಂಗಳವಾರದಂದು ದೆಹಲಿಯ ಲಲಿತ್ ಪಾರ್ಕ್‍ನಲ್ಲಿ ನಡೆದ ಫ್ರೆಂಡ್ಸ್ ಪ್ರೀಮಿಯರ್ ಲೀಗ್ ಟ-20 ಮ್ಯಾಚ್‍ನಲ್ಲಿ ಮಾವಿ ಇಲೆವೆನ್ ತಂಡದ ಬ್ಯಾಟ್ಸ್ ಮನ್ ಮೋಹಿತ್ ಅಹ್ಲಾವತ್ 72 ಎಸೆತಗಳಲ್ಲಿ ಬರೋಬ್ಬರಿ 300 ರನ್ ಗಳಿಸಿ ಇತಿಹಾಸ ಬರೆದಿದ್ದಾರೆ. ಮೋಹಿತ್ 39 ಸಿಕ್ಸರ್ ಹಾಗೂ 14 ಬೌಂಡರಿ ಚಚ್ಚಿದ್ದಾರೆ.

    ಕೊನೆಯ ಓವರ್‍ನ ಕೊನೆಯ ಐದು ಎಸೆತದಲ್ಲಿ ಸತತ ಐದು ಸಿಕ್ಸರ್ ಹಾಗೂ ಕೊನೆಯ ಎರಡು ಓವರ್‍ನಲ್ಲಿ ಒಟ್ಟು 50 ರನ್ ಗಳಿಸಿದ ಮೋಹಿತ್ ತ್ರಿಬಲ್ ಸೆಂಚುರಿ ಪೂರ್ತಿ ಮಾಡಿದ್ರು. ಈ ಪಂದ್ಯದಲ್ಲಿ ಮಾವಿ ತಂಡ 20 ಓವರ್‍ಗಳಲ್ಲಿ 416 ರನ್ ಗಳಿಸ್ತು. ಮೋಹಿತ್ ತಂಡ 216 ರನ್‍ಗಳ ಅಂತರದಿಂದ ಗೆಲುವು ಸಾಧಿಸಿತು.

    ಫ್ರೆಂಡ್ಸ್ ಎಲೆವೆನ್ ತಂಡದ ವಿರುದ್ಧ ಆಡಿದ 21 ವರ್ಷದ ಮೋಹಿತ್, 2015ರಲ್ಲಿ ರಣಜಿ ಟ್ರೋಫಿಗಾಗಿ ಆಟವಾಡಿದ್ದರು. ದೆಹಲಿಗಾಗಿ ಮೂರು ಫಸ್ಟ್ ಕ್ಲಾಸ್ ಪಂದ್ಯಗಳನ್ನ ಆಡಿದ್ದು, ಅವುಗಲ್ಲಿ ಕೇವಲ 5 ರನ್ ಗಳಿಸಿದ್ದರು ಎಂದು ವರದಿಯಾಗಿದೆ.

    ಈ ಹಿಂದೆ ಇಂಗ್ಲೆಂಡ್‍ನ ಲಂಕಶೈರ್‍ನಲ್ಲಿ ನಡೆದ ಸ್ಥಳೀಯ ಟಿ20 ಲೀಗ್‍ನಲ್ಲಿ ಧನುಕಾ ಪತಿರಾನಾ ಎಂಬವರು 72 ಬಾಲ್‍ಗಳಿಗೆ 277 ರನ್ ಗಳಿಸಿದ್ದರು. ಶ್ರೀಲಂಕಾ ಮೂಲದ ಧನುಕಾ ಈ ಮ್ಯಾಚ್‍ನಲ್ಲಿ 29 ಸಿಕ್ಸರ್ ಹಾಗೂ 18 ಬೌಂಡರಿ ಬಾರಿಸಿದ್ದರು.