Tag: Credit card

  • ಸ್ನೇಹಿತರ ಕ್ರೆಡಿಟ್ ಕಾರ್ಡ್‍ನಿಂದ ಲಕ್ಷ ಲಕ್ಷ ಸಾಲ – ಲೋನ್ ಕಟ್ಟು ಎಂದ್ರೆ ಲಾಸ್ಟ್ ಆಪ್ಷನ್ ಅಂತ ವಿಷ ಕುಡಿದ!

    ಸ್ನೇಹಿತರ ಕ್ರೆಡಿಟ್ ಕಾರ್ಡ್‍ನಿಂದ ಲಕ್ಷ ಲಕ್ಷ ಸಾಲ – ಲೋನ್ ಕಟ್ಟು ಎಂದ್ರೆ ಲಾಸ್ಟ್ ಆಪ್ಷನ್ ಅಂತ ವಿಷ ಕುಡಿದ!

    ವಿಜಯಪುರ: ವ್ಯಕ್ತಿಯೊಬ್ಬ 13 ಜನ ಸ್ನೇಹಿತರ ಕ್ರೆಡಿಟ್ ಕಾರ್ಡ್ (Credit Card) ಬಳಸಿ ಲಂಕ್ಷಾಂತರ ರೂ. ಸಾಲ (Loan) ಮಾಡಿ, ಸಾಲ ತೀರಿಸು ಎಂದಾಗ ವಿಡಿಯೋ ಮಾಡಿ ಕೀಟನಾಶಕ ಸೇವಿಸಿರುವುದು ವಿಜಯಪುರದಲ್ಲಿ (Vijayapura) ನಡೆದಿದೆ.

    ಆದರ್ಶ ನಗರದ ನಿವಾಸಿ ಶೋಭಿತ ಬಳ್ಳೊಳಗಿಡದ್ ಎಂಬಾತ ಗೆಳೆಯರ ಕ್ರೆಡಿಟ್ ಕಾರ್ಡ್ ಬಳಸಿ ದುಬಾರಿ ಬೆಲೆಯ ಮೊಬೈಲ್, ಗ್ಯಾಜೆಟ್ಸ್ ಖರೀದಿಸುತ್ತಿದ್ದ. ಹೀಗೆ ಗೆಳೆಯರ ಕ್ರೆಡಿಟ್ ಕಾರ್ಡ್ ಬಳಸಿ 50 ಲಕ್ಷ ರೂ. ಸಾಲ ಮಾಡಿದ್ದ. ಇದರಿಂದ ಸ್ನೇಹಿತರು ಸಾಲ ಕಟ್ಟುವಂತೆ ಆತನಿಗೆ ಹಾಗೂ ಆತನ ಕುಟುಂಬದವರಿಗೆ ಹೇಳಿದ್ದರು. ಇದನ್ನೂ ಓದಿ: ಅನಿರ್ದಿಷ್ಟಾವಧಿ ಲಾರಿ ಮುಷ್ಕರ | ರಸ್ತೆಗಿಳಿಯದ ಲಾರಿಗಳು – ಯಾವೆಲ್ಲಾ ಸೇವೆಯಲ್ಲಿ ವ್ಯತ್ಯಯ?

    ಇದೇ ವಿಚಾರಕ್ಕೆ ಆತ ವಿಡಿಯೋ ಮಾಡಿ, ಎಲ್ಲರ ಬಳಿ ಕ್ರೆಡಿಟ್ ಕಾರ್ಡ್ ಪಡೆದಿದ್ದೆ. ಈಗ ಎಲ್ಲರೂ ಮನೆಯವರಿಗೆ ಟಾರ್ಚರ್ ಮಾಡ್ತಿದ್ದಾರೆ. ನನ್ನಿಂದ ಯಾರಿಗೂ ಟಾರ್ಚರ್ ಆಗಬಾರದು. ಎಲ್ಲರೂ ಆರಾಮ್ ಆಗಿರಿ, ಇದು ನನಗೆ ಲಾಸ್ಟ್ ಆಪ್ಷನ್ ಎಂದು ಕ್ರಿಮಿನಾಶಕದ ಬಾಟೆಲ್ ತೋರಿಸಿದ್ದಾನೆ. ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

    ಈ ಸಂಬಂಧ ಶೋಭಿತನ ತಂದೆ, ಆದರ್ಶ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನಲ್ಲಿ 13 ಜನ ಗೆಳೆಯರ ಹೆಸರನ್ನು ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಬೆಂಗ್ಳೂರಲ್ಲಿ 5 ಕೋಟಿ ಮೌಲ್ಯದ ಮಾದಕ ವಸ್ತು ವಶ – ಇಬ್ಬರು ಅರೆಸ್ಟ್

  • ಇನ್ನು ಮುಂದೆ ಕ್ರೆಡಿಟ್‌ ಕಾರ್ಡ್‌ನಂತೆ ಯುಪಿಐ ಬಳಸಬಹುದು – ಇದು ಹೇಗೆ ಕೆಲಸ ಮಾಡುತ್ತೆ?

    ಇನ್ನು ಮುಂದೆ ಕ್ರೆಡಿಟ್‌ ಕಾರ್ಡ್‌ನಂತೆ ಯುಪಿಐ ಬಳಸಬಹುದು – ಇದು ಹೇಗೆ ಕೆಲಸ ಮಾಡುತ್ತೆ?

    ನವದೆಹಲಿ: ಇಲ್ಲಿಯವರೆಗೆ ಡೆಬಿಟ್‌ ಕಾರ್ಡ್‌ (Debit Card) ರೀತಿ ಯುಪಿಐ (UPI) ಕಾರ್ಯನಿರ್ವಹಿಸುತ್ತಿತ್ತು. ಆದರೆ ಇನ್ನು ಮುಂದೆ ಕ್ರೆಡಿಟ್‌ ಕಾರ್ಡ್‌ (Credit Card) ರೀತಿ ಯುಪಿಐ ಕಾರ್ಯನಿರ್ವಹಿಸಲಿದೆ.

    ಹೌದು. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಯುಪಿಐನಲ್ಲಿ ಕ್ರೆಡಿಟ್ ಕಾರ್ಡ್‌ ಫೀಚರ್‌ ಪರಿಚಯಿಸಲು ಸಿದ್ಧವಾಗಿದೆ.

    ಹೇಗೆ ಕೆಲಸ ಮಾಡುತ್ತೆ?
    ಈಗ ಯಪಿಐ ಬಳಸಿ ಯಾವುದಾದರು ವಸ್ತು ಖರೀದಿಸಿದರೆ ಕೂಡಲೇ ಬ್ಯಾಂಕ್‌ ಖಾತೆಯಿಂದ ಹಣ ಕಡಿತವಾಗುತ್ತದೆ. ಆದರೆ ಯುಪಿಐ ಕ್ರೆಡಿಡ್‌ ಕಾರ್ಡ್‌ನಲ್ಲಿ ತಕ್ಷಣ ಬ್ಯಾಂಕ್‌ ಖಾತೆಯಿಂದ ಹಣ ಕಡಿತವಾಗುವುದಿಲ್ಲ. ಹಣ ಬ್ಯಾಂಕ್‌ನಿಂದ ವರ್ಗಾವಣೆಯಾದರೂ  ತಿಂಗಳ ಕೊನೆಯಲ್ಲಿ ಇತ್ಯರ್ಥವಾಗಲಿದೆ. ಇದನ್ನೂ ಓದಿ: 200 ಅಡಿ ಆಳದ ಕಮರಿಗೆ ಉರುಳಿದ ಬಸ್ – ಇಬ್ಬರು ಸಾವು, 25 ಮಂದಿಗೆ ಗಾಯ

    ವಿಶೇಷತೆ ಏನು?
    ಈ ರೀತಿ ಹಣ ವರ್ಗಾವಣೆಯಾದರೆ ಗ್ರಾಹಕರಿಗೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ ಎಂದು ವರದಿಯಾಗಿದೆ. ಆನ್‌ಲೈನ್‌ ಶಾಪಿಂಗ್‌/ ಮಳಿಗೆಗಳು ಈ ಶುಲ್ಕವನ್ನು ಭರಿಸಬೇಕಾಗುತ್ತದೆ. ಇದು ಯುಪಿಐ ಕ್ರೆಡಿಟ್‌ ಕಾರ್ಡ್‌ ವಿಶೇಷತೆ.

    ಈಗ ಹೇಗೆ ನಡೆಯುತ್ತಿದೆ?
    ಬ್ಯಾಂಕ್‌ಗಳು ಗ್ರಾಹಕನ ಖಾತೆಯಲ್ಲಿರುವ ಬ್ಯಾಲೆನ್ಸ್‌ ಪರಿಗಣಿಸಿ ಕ್ರೆಡಿಟ್‌ ಕಾರ್ಡ್‌ ಬಳಕೆಗೆ ಹಣವನ್ನು ನಿಗದಿಪಡಿಸುತ್ತದೆ. ನಂತರ ನಿಗದಿ ಪಡಿಸಿದ ಸಮಯದ ಒಳಗಡೆ ಆ ಹಣವನ್ನು ಬ್ಯಾಂಕಿಗೆ ಗ್ರಾಹಕ ಪಾವತಿಸಬೇಕಾಗುತ್ತದೆ. ಇದನ್ನೂ ಓದಿ: ಅನಂತ್‌ ಅಂಬಾನಿ ಮದುವೆ ಸಮಾರಂಭದಲ್ಲಿ ದೀದಿ – ಹರಿದು ಬಂತು ರಾಜಕೀಯ ನಾಯಕರ ದಂಡು!

    ಡೆಬಿಟ್‌ ಕಾರ್ಡ್‌ಗೆ ಆಫರ್‌ ಇಲ್ಲ:
    ಸದ್ಯ ಡೆಬಿಟ್‌ ಕಾರ್ಡ್‌ ಹೊಂದಿವರಿಗೆ ಆಫರ್‌/ ರಿಯಾಯಿತಿಗಳು ಸಿಗುವುದಿಲ್ಲ. ಆದರೆ ಕ್ರೆಡಿಟ್‌ ಕಾರ್ಡ್‌ ಹೊಂದಿವರಿಗೆ ಹಲವು ಆಕರ್ಷಕ ರಿಯಾಯಿತಿಗಳು ಲಭ್ಯ ಇರುತ್ತವೆ. ಯುಪಿಐ ಪೇಮೆಂಟ್ಸ್‌ನಲ್ಲಿ ವಿಶ್ವದಲ್ಲೇ ಭಾರತ ಮೊದಲ ಸ್ಥಾನದಲ್ಲಿದೆ. ಒಂದು ವೇಳೆ ಯುಪಿಐನಲ್ಲಿ ಕ್ರೆಡಿಟ್‌ ಕಾರ್ಡ್‌ ವಿಶೇಷತೆ ಸೇರಿಸಿದಂತೆ ಯುಪಿಐ ವ್ಯವಹಾರ ಭಾರೀ ಪ್ರಮಾಣದಲ್ಲಿ ಏರಿಕೆಯಾಗಲಿದೆ.

    ಈಗಾಗಲೇ ಈ ಸೇವೆ ಲಭ್ಯವಿದೆ:
    ಬ್ಯಾಂಕ್‌ಗಳಾದ ಆಕ್ಸಿಸ್‌, ಹೆಚ್‌ಡಿಎಫ್‌ಸು, ಐಸಿಐಸಿಐ, ಇಂಡಿಯನ್‌ ಬ್ಯಾಂಕ್‌, ಪಿಎನ್‌ಬಿ ಬ್ಯಾಂಕ್‌ಗಳು ಈಗಾಗಲೇ ಈ ರೀತಿಯ ವಿಶೇಷತೆಯನ್ನು ನೀಡುತ್ತವೆ. ಯುಪಿಐ ರೂಪೇ ಕ್ರೆಡಿಟ್‌ ಕಾರ್ಡ್‌ ವರ್ಚುಯಲ್‌ ಆಗಿದ್ದು ಇದನ್ನು ಬಳಸಿ ಹಣವನ್ನು ತೆಗೆಯಲು ಸಾಧ್ಯವಿಲ್ಲ.

     

  • ಮೊಬೈಲ್‌ನಲ್ಲೇ ಕ್ರೆಡಿಟ್ ಕಾರ್ಡ್ ಮಾಡಿಕೊಡೋದಾಗಿ ನಂಬಿಸಿ 1.13 ಲಕ್ಷ ಪಂಗನಾಮ

    ಮೊಬೈಲ್‌ನಲ್ಲೇ ಕ್ರೆಡಿಟ್ ಕಾರ್ಡ್ ಮಾಡಿಕೊಡೋದಾಗಿ ನಂಬಿಸಿ 1.13 ಲಕ್ಷ ಪಂಗನಾಮ

    ಹಾಸನ: ಮೊಬೈಲ್‌ನಲ್ಲೇ ಕ್ರೆಡಿಟ್ ಕಾರ್ಡ್ (Mobile Credit Card) ಮಾಡಿಕೊಡುವುದಾಗಿ ನಂಬಿಸಿ ಕಣ್ಣೆದುರೇ ಚಾಲಾಕಿಯೊಬ್ಬ ಮೊಬೈಲ್‌ನಿಂದ (Mobile) ಹಣ ವರ್ಗಾವಣೆ ಮಾಡಿಕೊಂಡು ವಂಚಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಹಾಸನ ನಗರದ ಬಸಟ್ಟಿಕೊಪ್ಪಲು ನಿವಾಸಿ ಧರ್ಮಪ್ರಕಾಶ ಎಂಬುವವರು ಯೂನಿಯನ್ ಬ್ಯಾಂಕ್ (Union Bank) ಖಾತೆದಾರರಾಗಿದ್ದಾರೆ. ಬ್ಯಾಂಕ್ ಖಾತೆಗೆ (Bank Account) ತಮ್ಮ ಮೊಬೈಲ್ ಸಂಖ್ಯೆಯನ್ನು ಲಿಂಕ್ ಮಾಡಿಸಿದ್ದರು. ಇದನ್ನೂ ಓದಿ: ಪುಸ್ತಕದಲ್ಲಿ ಹಿಂದೂ ವಿರೋಧಿ ಉಲ್ಲೇಖ – ಲೇಖಕರು ಸೇರಿ ನಾಲ್ವರ ವಿರುದ್ಧ ಕೇಸ್

    ಕಳೆದ ಸೆಪ್ಟೆಂಬರ್ 9 ರಂದು ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ನಗರದ ಯೂನಿಯನ್ ಬ್ಯಾಂಕ್ (Union Bank) ಬಳಿ ಭೇಟಿಯಾಗಿ ಪರಿಚಯಸ್ಥನಂತೆ ಮಾತನಾಡಿದ್ದಾನೆ. ನಂತರ ತಾನು ಮೊಬೈಲ್‌ನಲ್ಲೇ ಕ್ರೆಡಿಟ್ ಕಾರ್ಡ್‌ಗಳನ್ನು ಇನ್‌ಸ್ಟಾಲ್‌ ಮಾಡಿಕೊಡುತ್ತೇನೆ ಎಂದು ನಂಬಿಸಿ ಧರ್ಮಪ್ರಕಾಶ್ ಮೊಬೈಲ್ ಪಡೆದು ಡಿಜಿಟಲ್ ದಾಖಲೆ ಹಾಗೂ ಮಾಹಿತಿಯನ್ನ ಅಪ್ಲೋಡ್ ಮಾಡಿದ್ದಾನೆ. ಇದನ್ನೂ ಓದಿ: ರಾಹುಲ್‌ ಏಕಾಂಗಿ ಹೋರಾಟ ವ್ಯರ್ಥ, ಶಕೀಬ್‌ ಆಲ್‌ರೌಂಡರ್‌ ಆಟ – ಬಾಂಗ್ಲಾದೇಶಕ್ಕೆ 1 ವಿಕೆಟ್‌ ರೋಚಕ ಜಯ

    ಸ್ವಲ್ಪ ಹೊತ್ತಿನ ನಂತರ ಮೊಬೈಲ್‌ನ್ನು ಧರ್ಮಪ್ರಕಾಶ್‌ಗೆ ವಾಪಸ್ ಕೊಟ್ಟಿದ್ದಾನೆ. ಆ ವೇಳೆ ಮೊಬೈಲ್ ಸ್ವಿಚ್ಡ್ಆಫ್ ಆಗಿದ್ದರಿಂದ ಮೊಬೈಲ್ ಅಂಗಡಿಗೆ ಹೋಗಿ ಪರಿಶೀಲಿಸಿದ್ದಾರೆ. ನಂತರವೇ ಮೊಬೈಲ್‌ನಲ್ಲಿದ್ದ ಸಿಮ್‌ನ್ನು ಅಪರಿಚಿತ ನಿಷ್ಕ್ರಿಯಗೊಳಿಸಿರುವುದು ಗೊತ್ತಾಗಿದೆ. ಕೂಡಲೇ ಬೇರೆ ಸಿಮ್ ತೆಗೆದುಕೊಂಡು ಮೊಬೈಲ್ ಪರಿಶೀಲಿಸಿದಾಗ ಬ್ಯಾಂಕ್ ಖಾತೆಯಿಂದ 1,13,800 ರೂ. ಗಳನ್ನು ಬೇರೆ ಖಾತೆಗೆ ವರ್ಗಾವಣೆ ಮಾಡಿಕೊಂಡಿರುವುದು ಗೊತ್ತಾಗಿದೆ.

    ಅಪರಿಚಿತ ವಂಚಕನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಧರ್ಮಪ್ರಕಾಶ್ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕ್ರೆಡಿಟ್‌, ಡೆಬಿಟ್‌ ಕಾರ್ಡ್‌ ಬಳಕೆದಾರರಿಗೆ ಜುಲೈ 1 ರಿಂದ ಸಿಗಲಿದೆ ಗುಡ್‌ನ್ಯೂಸ್‌

    ಕ್ರೆಡಿಟ್‌, ಡೆಬಿಟ್‌ ಕಾರ್ಡ್‌ ಬಳಕೆದಾರರಿಗೆ ಜುಲೈ 1 ರಿಂದ ಸಿಗಲಿದೆ ಗುಡ್‌ನ್ಯೂಸ್‌

    ನವದೆಹಲಿ: ಕ್ರೆಡಿಟ್‌ ಕಾರ್ಡ್‌, ಡೆಬಿಟ್‌ ಕಾರ್ಡ್‌ ಬಳಕೆದಾರರಿಗೆ ಗುಡ್‌ನ್ಯೂಸ್‌. ಜುಲೈ 1 ರಿಂದ ಕಂಪನಿಗಳು ಗ್ರಾಹಕರ ಕಾರ್ಡ್‌ ಡೇಟಾವನ್ನು ಸ್ಟೋರ್‌ ಮಾಡುವಂತಿಲ್ಲ.

    ಆರ್‌ಬಿಐ ಕಳೆದ ವರ್ಷ ಗ್ರಾಹಕರ ರಕ್ಷಣೆ ಸಂಬಂಧ ಡೆಬಿಟ್‌ ಕಾರ್ಡ್‌, ಕ್ರೆಡಿಟ್‌ ಕಾರ್ಡ್‌ ನಿಯಮವನ್ನು ರೂಪಿಸಿತ್ತು. ಈ ನಿಯಮದ ಪ್ರಕಾರ ಕಂಪನಿಗಳು ಗ್ರಾಹಕರ ಕಾರ್ಡ್‌ ಡೇಟಾವನ್ನು ಸಂರಕ್ಷಣೆ ಮಾಡುವಂತಿಲ್ಲ. ಈ ಟೋಕನೈಸೇಶನ್ ನಿಯಮ ಈ ವರ್ಷದ ಜುಲೈ 1 ರಿಂದ ಜಾರಿಗೆ ಬರಲಿದೆ.

    ದೇಶದ ಒಳಗಡೆ ಆನ್‌ಲೈನ್‌ ಮೂಲಕ ನಡೆಯುವ ಖರೀದಿಗೆ ಟೋಕನೈಸೇಷನ್‌ ನಿಯಮವನ್ನು ಆರ್‌ಬಿಐ ಕಡ್ಡಾಯ ಮಾಡಿದೆ. ಈ ನಿಯಮ ಜನವರಿ 1 ರಿಂದ ಜಾರಿಯಾಗಬೇಕಿತ್ತು. ಆದರೆ ಕಂಪನಿಗಳಿಗೆ 6 ತಿಂಗಳು ಕಾಲಾವಕಾಶ ವಿಸ್ತರಿಸಿದ್ದರಿಂದ ಜುಲೈನಿಂದ ಈ ನಿಯಮ ಜಾರಿಯಾಗುತ್ತಿದೆ.

    ಈ ನಿಯಮದ ಪ್ರಕಾರ ವ್ಯವಹಾರ ನಡೆದ ಬಳಿಕ ಗ್ರಾಹಕರ ಡೆಬಿಟ್‌, ಕ್ರೆಡಿಟ್‌ ಕಾರ್ಡ್‌ ಡೇಟಾಗಳನ್ನು ಡಿಲೀಟ್‌ ಮಾಡಬೇಕಾಗುತ್ತದೆ. ಇದನ್ನೂ ಓದಿ: ಎಲೋನ್ ಮಸ್ಕ್ ನಡವಳಿಕೆ ಮುಜುಗರ ತಂದಿದೆ ಎಂದ ಉದ್ಯೋಗಿಗಳನ್ನೇ ಕಂಪನಿಯಿಂದ ಕಿತ್ತೊಗೆದ ಸ್ಪೇಸ್‌ಎಕ್ಸ್

    RBI

    ಈ ಟೋಕನೈಸೇಷನ್‌ ನಿಯಮ ಕಡ್ಡಾಯವೇನಲ್ಲ. ಟೋಕನೈಸೇಷನ್‌ ನಿಯಮಕ್ಕೆ ಯಾರು ಅನುಮತಿ ನೀಡುವುದಿಲ್ಲವೋ ಆ ಗ್ರಾಹಕರು ವ್ಯವಹಾರ ನಡೆಯುವ ಮುನ್ನ ಕಾರ್ಡ್‌ನಲ್ಲಿರುವ ಹೆಸರು, ಕಾರ್ಡ್‌ ನಂಬರ್‌, ವ್ಯಾಲಿಡಿಟಿ, ಸಿವಿವಿ ಎಲ್ಲವನ್ನು ಎಂಟ್ರಿ ಮಾಡಿದ ಬಳಿಕ ವ್ಯವಹಾರ ಮಾಡಬೇಕಾಗುತ್ತದೆ.

    ಯಾರು ಕಾರ್ಡ್‌ ಟೋಕನೈಸೇಷನ್‌ ನಿಯಮಕ್ಕೆ ಒಪ್ಪಿಗೆ ನೀಡುತ್ತಾರೋ ಅವರು ಸಿವಿವಿ ಅಥವಾ ಒಟಿಪಿಯನ್ನು ದಾಖಲಿಸಿ ವ್ಯವಹಾರ ಮಾಡಬೇಕಾಗುತ್ತದೆ.

    Live Tv

  • ಬೋನಿ ಕಪೂರ್ ಕ್ರೆಡಿಟ್ ಕಾರ್ಡ್ ನಕಲು ಮಾಡಿ 3.82 ಲಕ್ಷ ರೂ. ವಂಚಿಸಿದ ಖದೀಮ

    ಬೋನಿ ಕಪೂರ್ ಕ್ರೆಡಿಟ್ ಕಾರ್ಡ್ ನಕಲು ಮಾಡಿ 3.82 ಲಕ್ಷ ರೂ. ವಂಚಿಸಿದ ಖದೀಮ

    ಮುಂಬೈ: ಬಾಲಿವುಡ್ ಖ್ಯಾತ ನಿರ್ಮಾಪಕ ಮತ್ತು ಉದ್ಯಮಿ ಬೋನಿ ಕಪೂರ್ ಅವರ ಕ್ರೆಡಿಟ್ ಕಾರ್ಡ್ ನಕಲು ಮಾಡಿ ಅಪರಿಚಿತ ವ್ಯಕ್ತಿಯೊಬ್ಬ 3.82 ಲಕ್ಷ ರೂ. ವಂಚಿಸಿದ್ದಾನೆ.

    Does Boney Kapoor ever not miss Sridevi? Namumkin hai, he says - Movies News

    ಆರೋಪಿಯ ವಿರುದ್ಧ ಐಪಿಸಿ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಬುಧವಾರ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಕಪೂರ್ ಆಪ್ತರೊಬ್ಬರು ದೂರು ದಾಖಸಿದ್ದಾರೆ. ದೂರಿನಲ್ಲಿ ಬೋನಿ ಕಪೂರ್ ಅವರ ಕ್ರೆಡಿಟ್ ಕಾರ್ಡ್ ನಕಲು ಮಾಡಲಾಗಿದೆ ಎಂದು ವಿವರಿಸಲಾಗಿದೆ.

    ದೂರಿನಲ್ಲಿ ಏನಿದೆ?
    ಈ ದೂರಿನಲ್ಲಿ, ಅಪರಿಚಿತ ವ್ಯಕ್ತಿ ಫೆಬ್ರವರಿ 9 ರಂದು ಕಪೂರ್ ಅವರ ವಿವರಗಳು ಮತ್ತು ಪಾಸ್‍ವರ್ಡ್ ಪಡೆಯುವ ಮೂಲಕ ಐದು ಬಾರಿ ಆನ್‍ಲೈನ್ ವಹಿವಾಟುಗಳನ್ನು ನಡೆಸಲು ಕ್ರೆಡಿಟ್ ಕಾರ್ಡ್ ಬಳಸಿದ್ದಾನೆ. ಮಾರ್ಚ್ 30 ರಂದು ತಮ್ಮ ಬ್ಯಾಂಕ್ ಕಾರ್ಯ ನಿರ್ವಾಹಕರು ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಗೆ ಕರೆ ಮಾಡಿದಾಗ ಕಪೂರ್ ಅವರಿಗೆ ವಂಚನೆಯ ಬಗ್ಗೆ ತಿಳಿದುಬಂದಿದೆ ಎಂದು ದೂರುದಾರರು ಪೊಲೀಸರಿಗೆ ತಿಳಿಸಿದ್ದಾರೆ.  ಇದನ್ನೂ ಓದಿ: ರೋಮಿಯೋನ ಭಾವನೆಗಳ ಕಥನ – ಡೈಲಾಗ್‍ನಲ್ಲಿ ಕಾಮಿಡಿ ಹೂರಣ 

    ಪ್ರಸ್ತುತ ತನಿಖೆ ಆರಂಭವಾಗಿದ್ದು, ಆರೋಪಿಯನ್ನು ಬಂಧಿಸುವ ಪ್ರಯತ್ನ ನಡೆಯುತ್ತಿದೆ ಎಂದು ಅಂಬೋಲಿ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.

  • ಆನ್‍ಲೈನ್ ಪಾವತಿ – ಮಹತ್ವದ ಬದಲಾವಣೆಗೆ ಮುಂದಾದ ಆರ್‌ಬಿಐ

    ಆನ್‍ಲೈನ್ ಪಾವತಿ – ಮಹತ್ವದ ಬದಲಾವಣೆಗೆ ಮುಂದಾದ ಆರ್‌ಬಿಐ

    ಮುಂಬೈ: ಆನ್‍ಲೈನ್ ಪಾವತಿಯಲ್ಲಾಗುತ್ತಿರುವ ಕೆಲ ವಂಚನೆ ಬಗ್ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ವಿಶೇಷ ಗಮನಹರಿಸಿದೆ. ಮುಂದಿನ ದಿನಗಳಲ್ಲಿ ಆನ್‍ಲೈನ್ ಕಾರ್ಡ್ ತಯಾರಕರು ಮತ್ತು ಬ್ಯಾಂಕ್‍ಗಳು ಮಾತ್ರ ಗ್ರಾಹಕರ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್‍ಗಳ ಮಾಹಿತಿಯನ್ನು ಸಂಗ್ರಹ ಮಾಡಿಟ್ಟುಕೊಳ್ಳಬಹುದು. ಹೊರತು ಪೇಮೆಂಟ್ ಆ್ಯಪ್, ಆನ್‍ಲೈನ್ ಶಾಪಿಂಗ್ ಪೋರ್ಟಲ್‍ಗಳು ಕಾರ್ಡ್ ಮಾಹಿತಿಯನ್ನು ಸಂಗ್ರಹ ಮಾಡುವಂತಿಲ್ಲ ಎಂದು ಸೂಚನೆ ನೀಡಿದೆ.

    ಕೆಲ ಪೇಮೆಂಟ್ ಆ್ಯಪ್, ಆನ್‍ಲೈನ್ ಶಾಪಿಂಗ್ ಪೋರ್ಟಲ್‍ಗಳು ತಮ್ಮ ಗ್ರಾಹಕರ ಕಾರ್ಡ್ ಮಾಹಿತಿಯನ್ನು ಸಂಗ್ರಹ ಮಾಡಿಕೊಂಡಿರುತ್ತದೆ. ಮುಂದಿನ ಬಾರಿ ಅವರು ವ್ಯವಹರಿಸುವಾಗ ಅವರು ಕಾರ್ಡ್ ಸಂಖ್ಯೆ ತಿಳಿಸಬೇಕೆಂದಿಲ್ಲ, ಬದಲಾಗಿ ಅವರ ಒಟಿಪಿ ಮತ್ತು ಪಾಸ್‍ವರ್ಡ್ ನೀಡಿದರೆ ಸುಲಭವಾಗಿ ವ್ಯವಹರಿಸಬಹುದಿತ್ತು. ಈ ನಿಯಮಕ್ಕೆ ಮುಂದಿನ ವರ್ಷ ಜನವರಿ 1ರ ಬಳಿಕ ಆರ್‌ಬಿಐ ಬ್ರೇಕ್ ಹಾಕಲಿದೆ. ಇದನ್ನೂ ಓದಿ: ಮಾರ್ಷಲ್‍ನನ್ನೇ ಕಾರಿನ ಬಾನೆಟ್ ಮೇಲೆ ಎಳೆದುಕೊಂಡು ಹೋದ ಚಾಲಕ


    ಆನ್‍ಲೈನ್ ಕಾರ್ಡ್ ತಯಾರಕರು ಮತ್ತು ಬ್ಯಾಂಕ್‍ಗಳು ಮಾತ್ರ ಗ್ರಾಹಕರ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್‍ಗಳ ಮಾಹಿತಿಯನ್ನು ಸಂಗ್ರಹ ಮಾಡಿಟ್ಟುಕೊಳ್ಳಬಹುದು. ಉಳಿದಂತೆ ಆನ್‍ಲೈನ್ ಶಾಪಿಂಗ್ ಪೋರ್ಟಲ್‍ಗಳು ತಮ್ಮ ಸರ್ವರ್‍ನಲ್ಲಿ ಸಂಗ್ರಹಮಾಡಿಟ್ಟುಕೊಂಡರೆ ಗ್ರಾಹಕರ ಡೇಟಾ ಸೋರಿಕೆಯಾಗಿ ವಂಚನೆ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಆರ್‌ಬಿಐ ಈ ಹೊಸ ನಿಯಮವನ್ನು ಜಾರಿಗೆ ತರಲು ನಿರ್ಧರಿಸಿದೆ. ಇದನ್ನೂ ಓದಿ: 6,50,000 ರೂ.ಗೆ ದೇವರ ತೆಂಗಿನಕಾಯಿ ಖರೀದಿಸಿದ ಭಕ್ತ!

  • ಎಟಿಎಂನಿಂದ ಪದೇ ಪದೇ ಹಣ ಡ್ರಾ ಮಾಡ್ತೀರಾ? ಹೊಸ ನಿಯಮಕ್ಕೆ ಎಸ್‍ಎಲ್‍ಬಿಸಿ ಚಿಂತನೆ

    ಎಟಿಎಂನಿಂದ ಪದೇ ಪದೇ ಹಣ ಡ್ರಾ ಮಾಡ್ತೀರಾ? ಹೊಸ ನಿಯಮಕ್ಕೆ ಎಸ್‍ಎಲ್‍ಬಿಸಿ ಚಿಂತನೆ

    ನವದೆಹಲಿ: ಎಟಿಎಂ ಕಾರ್ಡ್ ದುರ್ಬಳಕೆ ತಡೆಯುವ ಹಿನ್ನೆಲೆಯಲ್ಲಿ ದೆಹಲಿಯ ರಾಜ್ಯಮಟ್ಟದ ಬ್ಯಾಂಕರ್ಸ್ ಸಮಿತಿ (ಎಸ್‍ಎಲ್‍ಬಿಸಿ) ಹೊಸ ಚಿಂತನೆಗೆ ಮುಂದಾಗಿದೆ. ಈ ಸಮಿತಿ ಎರಡು ಎಟಿಎಂ ವ್ಯವಹಾರ ನಡುವೆ ಸಮಯ ನಿಗದಿಗೆ ಚಿಂತನೆ ನಡೆಸಿದೆ.

    ಒಂದು ವೇಳೆ ಎಸ್‍ಎಲ್‍ಬಿಸಿ ಸಮಿತಿಯ ಪ್ರಸ್ತಾವವನ್ನು ಬ್ಯಾಂಕ್ ಒಪ್ಪಿಕೊಂಡಲ್ಲಿ ಈ ಹೊಸ ನಿಯಮ ಜಾರಿಯಾಗುವ ಸಾಧ್ಯತೆಗಳಿವೆ. ಒಂದು ಎಟಿಎಂ ಕಾರ್ಡ್ ನ ಎರಡು ವ್ಯವಹಾರಗಳ ನಡುವೆ ಅಂದಾಜು 6 ರಿಂದ 12 ಗಂಟೆ ಸಮಯ ನಿಗದಿಗೆ ಸಮಿತಿ ಸಲಹೆ ನೀಡಿದೆ. ಅಂದ್ರೆ ಒಮ್ಮೆ ನೀವು ಎಟಿಎಂನಿಂದ ಹಣ ತೆಗೆದರೆ ಪುನಃ 6 ರಿಂದ 12 ಗಂಟೆವರೆಗೆ ಅದೇ ಕಾರ್ಡ್ ನಿಂದ ಡ್ರಾ ಮಾಡಲು ಸಾಧ್ಯವಾಗಲ್ಲ. ಈ ಬಗ್ಗೆ ಕೇವಲ ಚರ್ಚೆಗಳು ನಡೆದಿದ್ದು, ಕಾರ್ಯರೂಪಕ್ಕೆ ಬಂದಿಲ್ಲ.

    ಈ ಕುರಿತು ಪ್ರತಿಕ್ರಿಯಿಸಿರುವ ದೆಹಲಿಯ ಎಸ್‍ಎಲ್‍ಬಿಸಿ ಸಂಯೋಜಕರು ಮತ್ತು ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಎಂಡಿ, ಸಿಇಓ ಮುಕೇಶ್ ಕುಮಾರ್ ಜೈನ್, ಎಟಿಎಂನಲ್ಲಿ ಕಾರ್ಡ್ ದುರ್ಬಳಕೆ ಅಪರಾಧ ಪ್ರಕರಣಗಳು ಹೆಚ್ಚಾಗಿ ರಾತ್ರಿ ಮತ್ತು ಬೆಳಗಿನ ಜಾವದ ನಡುವೆಯೇ ಹೆಚ್ಚಾಗಿ ನಡೆದಿವೆ. ಈ ನಿಗದಿತ ಸಮಯದಲ್ಲಿ ಕಾರ್ಡ್ ದುರ್ಬಳಕೆ ಹೆಚ್ಚಾಗಿ ಕಂಡು ಬಂದಿದೆ. ಸಮಿತಿ ನಮ್ಮ ಮುಂದೆ ಪ್ರಸ್ತಾವವನ್ನು ಇಟ್ಟಿದ್ದು, ಕಳೆದ ಒಂದು ವಾರದಿಂದ 18 ಬ್ಯಾಂಕ್ ಗಳ ಪ್ರತಿನಿಧಿಗಳು ಚರ್ಚೆ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

    2018-19ರ ವೇಳೆ ದೆಹಲಿಯಲ್ಲಿ 179, ಮಹಾರಾಷ್ಟ್ರದಲ್ಲಿ 233 ಎಟಿಎಂ ವಂಚನೆ ಪ್ರಕರಣಗಳು ದಾಖಲಾಗಿವೆ. 2018-19ರ ಅವಧಿಯಲ್ಲಿ ಇದೂವರೆಗೂ ದೇಶದೆಲ್ಲಡೆ 980ಕ್ಕೂ ಅಧಿಕ ದೂರು ದಾಖಲಾಗಿವೆ. ಕಳೆದ ವರ್ಷ 911 ಪ್ರಕರಣಗಳು ದಾಖಲಾಗಿತ್ತು. ಇತ್ತೀಚೆಗೆ ಎಟಿಎಂ ಕಾರ್ಡ್ ಕ್ಲೋನಿಂಗ್ (ಬಳಕೆದಾರರ ಮಾಹಿತಿಯ ಕಳ್ಳತನ) ಪ್ರಕರಣಗಳು ಬೆಳಕಿಗೆ ಬಂದಿದ್ದು, ಇದರಲ್ಲಿ ವಿದೇಶಿ ಪ್ರಜೆಗಳು ಭಾಗಿಯಾಗಿರುವ ಶಂಕೆಗಳು ವ್ಯಕ್ತವಾಗಿವೆ.

    ಎಟಿಎಂನಿಂದ ಹೆಚ್ಚಿನ ಹಣ ಡ್ರಾ ಮಾಡುವಾಗ ಗ್ರಾಹಕರ ಮೊಬೈಲ್ ಗೆ ಸಂದೇಶ ಕಳುಹಿಸಿ, ಓಟಿಪಿ ನಂಬರ್ ಪಡೆಯುವ ವ್ಯವಸ್ಥೆ ರೂಪಿಸಲು ಸಹ ಚಿಂತಿಸಲಾಗಿದೆ. ಈ ರೀತಿಯ ವ್ಯವಸ್ಥೆಯಿಂದ ಡೆಬಿಟ್, ಕ್ರೆಡಿಟ್ ಕಾರ್ಡ್ ಗಳ ದುರ್ಬಳಕೆ ತಡೆಯಲು ಸಾಧ್ಯವಾಗಲಿದೆ. ಬೇರೆಯವರು ನಿಮ್ಮ ಕಾರ್ಡ್ ನಿಂದ ಹಣ ಡ್ರಾ ಮಾಡುತ್ತಿದ್ದರೆ, ಮೆಸೇಜ್ ಮೂಲಕ ಎಚ್ಚೆತ್ತುಕೊಳ್ಳಬಹುದು ಎಂದು ಮುಕೇಶ್ ಕುಮಾರ್ ಜೈನ್ ತಿಳಿಸಿದ್ದಾರೆ.

  • ಕ್ರೆಡಿಟ್ ಕಾರ್ಡ್ ಹೇಳ್ತು ಪತಿಯ ಅಕ್ರಮ ಸಂಬಂಧ

    ಕ್ರೆಡಿಟ್ ಕಾರ್ಡ್ ಹೇಳ್ತು ಪತಿಯ ಅಕ್ರಮ ಸಂಬಂಧ

    – ಮದ್ವೆಯಾದ ಮೂರೇ ದಿನಕ್ಕೆ ಹೋಟೆಲ್ ಬುಕ್

    ಅಹಮದಾಬಾದ್: ಕ್ರೆಡಿಟ್ ಕಾರ್ಡ್ ಮೂಲಕ ಪತಿಯ ಅಕ್ರಮ ಸಂಬಂಧ ಬಯಲಾದ ಘಟನೆ ಗುಜರಾತಿನ ಅಹಮದಾಬಾದ್‍ನಲ್ಲಿ ನಡೆದಿದೆ.

    ಪತಿ ಮದುವೆಯಾದ ಮೂರನೇ ದಿನಕ್ಕೆ ಕಚೇರಿಯ ಕೆಲಸದ ನಿಮಿತ್ತ ಹೊರ ಹೋಗುವುದಾಗಿ ಹೇಳಿದ್ದ. ಅದೇ ದಿನ ಕಚೇರಿಗೆ ತೆರಳದೇ ಹೋಟೆಲ್ ನಲ್ಲಿ ಮಹಿಳೆಯೊಂದಿಗೆ ರೂಮ್ ಬುಕ್ ಮಾಡಿ ವಾಸ್ತವ್ಯ ಹೂಡಿದ್ದನು. ಒಂದು ದಿನ ಪತಿಯ ಕ್ರೆಡಿಟ್ ಕಾರ್ಡ್ ಬಿಲ್ ಚೆಕ್ ಮಾಡುತ್ತಿರುವಾಗ ಹೋಟೆಲ್‍ನಲ್ಲಿ ಹಣ ಪಾವತಿಸಿದ ವಿಚಾರ ಪತ್ನಿಯ ಗಮನಕ್ಕೆ ಬಂದಿದೆ.

    ಈ ವಿಷಯವನ್ನು ಪತ್ನಿ ತನ್ನ ಸೋದರನಿಗೆ ತಿಳಿಸಿದ್ದಾಳೆ. ಸೋದರ ಪರಿಶೀಲನೆ ನಡೆಸಿದಾಗ ಹೋಟೆಲ್ ನಲ್ಲಿ ರೂಮ್ ಬುಕ್ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.

    ಪತಿಯ ಅಕ್ರಮ ಸಂಬಂಧ ವಿಷಯ ಖಾತ್ರಿಯಾಗುತ್ತಿದ್ದಂತೆ ಮಹಿಳೆ ತನ್ನ ಅತ್ತೆ-ಮಾವನಿಗೆ ತಿಳಿಸಿದ್ದಾಳೆ. ಆದ್ರೆ ಅತ್ತೆ-ಮಾವ ಮಗನನ್ನು ಸಮರ್ಥಿಸಿಕೊಂಡಿದ್ದಾರೆ. ಇದೇ ವಿಚಾರಕ್ಕೆ ಜಗಳ ನಡೆಯುತ್ತಿದ್ದಂತೆ ಪತಿ ಹಾಗೂ ಕುಟುಂಬಸ್ಥರು ವಿಚ್ಛೇಧನ ನೀಡುವಂತೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಮಹಿಳೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

  • ಐ ಫೋನ್ ಖರೀದಿದಾರರಿಗೆ ಸಿಹಿ ಸುದ್ದಿ

    ಐ ಫೋನ್ ಖರೀದಿದಾರರಿಗೆ ಸಿಹಿ ಸುದ್ದಿ

    ನವದೆಹಲಿ: ಆಪಲ್ ಐ ಫೋನ್ ಪ್ರಿಯರಿಗೆ ಫ್ಲಿಪ್ ಕಾರ್ಟ್ ತನ್ನ ಆಪಲ್ ವೀಕ್ ಮಾರಾಟದಲ್ಲಿ ಸಾಕಷ್ಟು ಕೊಡುಗೆಗಳನ್ನು ನೀಡುತ್ತಿದೆ.

    ಒಂದು ವಾರ ನಡೆಯುವ ಆಪಲ್ ವೀಕ್ ಮಾರಾಟ ಮೇ 27 ರಂದು ಕೊನೆಯಾಗಲಿದೆ. ಕೆಲವು ಐಫೋನ್ ಮಾದರಿಗಳು, ಮ್ಯಾಕ್ ಬುಕ್ ಏರ್, ಐಪಾಡ್, ಐಪಾಡ್ ಪ್ರೊ ಮತ್ತು ಆಪಲ್ ವಾಚ್ ಗಳ ಮೇಲೆ ಕ್ಯಾಶ್ ಬ್ಯಾಕ್ ಕೊಡುಗೆಯನ್ನು ಫ್ಲಿಪ್ ಕಾರ್ಟ್ ನೀಡುತ್ತಿದೆ.

    ಕ್ರೆಡಿಟ್ ಕಾರ್ಡ್ ಮತ್ತು ಇಎಂಐ ಮೂಲಕ ಹಣ ಪಾವತಿಸಿದಲ್ಲಿ ಶೇ10 ರಷ್ಟು ಕ್ಯಾಶ್ ಬ್ಯಾಕ್ ಕೊಡುಗೆಯನ್ನು ಐಸಿಐಸಿಐ ಬ್ಯಾಂಕ್ ನೀಡುತ್ತಿದೆ.

    ಆಪಲ್ ವೀಕ್ ಮಾರಾಟದ ಕೆಲವು ಪ್ರಾಡಕ್ಟ್ ಗಳ ದರಗಳು

    ಐ ಪೋನ್ 6(32 ಜಿಬಿ) – ನಿಖರ ಬೆಲೆ 29,500 ರೂ. – ಮಾರಾಟ ಬೆಲೆ 23,999 ರೂ.
    ಐ ಪೋನ್ 6 ಎಸ್(32 ಜಿಬಿ) – ನಿಖರ ಬೆಲೆ 40,000 ರೂ. – ಮಾರಾಟ ಬೆಲೆ 33,999 ರೂ.
    ಐ ಪೋನ್ ಎಸ್ ಇ(32 ಜಿಬಿ) – ನಿಖರ ಬೆಲೆ 26,000 ರೂ. – ಮಾರಾಟ ಬೆಲೆ 17,999 ರೂ.
    ಐ ಪೋನ್ 7(32 ಜಿಬಿ) – ನಿಖರ ಬೆಲೆ 49,000 ರೂ. – ಮಾರಾಟ ಬೆಲೆ 46,999 ರೂ.
    ಐ ಪೋನ್ ಎಕ್ಸ್(32 ಜಿಬಿ) – ನಿಖರ ಬೆಲೆ 89,000 ರೂ. – ಮಾರಾಟ ಬೆಲೆ 85,999 ರೂ.
    ಐ ಪೋನ್ 8 & 8 ಪ್ಲಸ್(32 ಜಿಬಿ) – ನಿಖರ ಬೆಲೆ 67,940 ರೂ. – ಮಾರಾಟ ಬೆಲೆ 62,999 ರೂ.
    ಏರ್ ಪಾಡ್ಸ್ ಮತ್ತು ಇಯರ್ ಪಾಡ್ಸ್ – ನಿಖರ ಬೆಲೆ 2,199 ರೂ. – ಮಾರಾಟ ಬೆಲೆ ಕನಿಷ್ಠ 1,899 ರೂ.
    ಆಪಲ್ ಐ ಪಾಡ್ಸ್ – ನಿಖರ ಬೆಲೆ 28,000 ರೂ. – ಮಾರಾಟ ಬೆಲೆ 21,900 ರೂ.
    ಆಪಲ್ ವಾಚ್ ಸೀರೀಸ್ ಕನಿಷ್ಠ 20,900 ರೂ.
    ಆಪಲ್ ಲ್ಯಾಪ್ ಟಾಪ್ – ನಿಖರ ಬೆಲೆ 57,990 ರೂ. – ಮಾರಾಟ ಬೆಲೆ 55,990 ರೂ.