Tag: Creamy Shrimp Pasta

  • ವೀಕೆಂಡ್‌ಗೆ ಮಾಡಿ ಕ್ರೀಮಿ ಸಿಗಡಿ ಪಾಸ್ತಾ

    ವೀಕೆಂಡ್‌ಗೆ ಮಾಡಿ ಕ್ರೀಮಿ ಸಿಗಡಿ ಪಾಸ್ತಾ

    ತ್ತೀಚಿನ ಮಕ್ಕಳು ಹಾಗೂ ಯುವ ಜನರು ಚೀಸ್ ಹಾಕಲಾದ ಖಾದ್ಯಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಪಿಜ್ಜಾ, ಬರ್ಗರ್ ಎಂದರೆ ಈಗಿನ ಮಕ್ಕಳಿಗೆ ಪಂಚಪ್ರಾಣ. ಈ ವೀಕೆಂಡ್‌ನಲ್ಲಿ ಮಕ್ಕಳು ಮನೆಯಲ್ಲೇ ಇರೋವಾಗ ಹೊರಗಿನ ತಿಂಡಿಗಳಿಗೆ ಹಠ ಹಿಡಿಯೋದು ಎಲ್ಲೆಡೆ ಇದ್ದೇ ಇದೆ. ಈ ದಿನ ಮಕ್ಕಳಿಗೆ ಇಷ್ಟವಾಗುವ ಒಂದು ರೆಸಿಪಿಯನ್ನು ಮನೆಯಲ್ಲಿ ಮಾಡಿ ನೋಡಿ. ಚೀಸಿ ಅಥವಾ ಕ್ರೀಮಿ ಸಿಗಡಿ ಪಾಸ್ತಾವನ್ನು (Creamy Shrimp Pasta) ಹೇಗೆ ಮಾಡೋದು ಎಂದು ನಾವು ನಿಮಗೆ ಹೇಳಿಕೊಡುತ್ತೇವೆ.

    ಬೇಕಾಗುವ ಪದಾರ್ಥಗಳು:
    ನಿಮ್ಮ ಆಯ್ಕೆಯ ಪಾಸ್ತಾ – 500 ಗ್ರಾಂ
    ಉಪ್ಪಿಲ್ಲದ ಬೆಣ್ಣೆ – ಅರ್ಧ ಟೀಸ್ಪೂನ್
    ಸಿಪ್ಪೆ ತೆಗೆದು ಸ್ವಚ್ಛಗೊಳಿಸಿದ ಸಿಗಡಿ – 500 ಗ್ರಾಂ
    ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
    ಹೆವಿ ಕ್ರೀಮ್ – 2 ಕಪ್
    ತುರಿದ ಚೀಸ್ – ಅರ್ಧ ಕಪ್
    ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
    ನಿಂಬೆ ಹಣ್ಣು – 1
    ಉಪ್ಪು – ರುಚಿಗೆ ತಕ್ಕಷ್ಟು
    ಕರಿ ಮೆಣಸಿನಪುಡಿ – ಅಗತ್ಯಕ್ಕೆ ತಕ್ಕಂತೆ ಇದನ್ನೂ ಓದಿ: ಐದೇ ಸಾಮಾಗ್ರಿ ಸಾಕು – ಮೊಟ್ಟೆಯಿಂದ ಮಾಡಿ ಈ ರುಚಿಕರ ತಿಂಡಿ

    ಮಾಡುವ ವಿಧಾನ:
    * ಮೊದಲಿಗೆ ಪಾಸ್ತಾವನ್ನು ಉಪ್ಪಿನೊಂದಿಗೆ ಬೇಯಿಸಿಕೊಂಡು, ನೀರನ್ನು ಬಸಿದು ಪಕ್ಕಕ್ಕಿಡಿ.
    * ಒಂದು ದೊಡ್ಡ ಪ್ಯಾನ್ ತೆಗೆದುಕೊಂಡು, ಅದರಲ್ಲಿ ಬೆಣ್ಣೆ ಹಾಕಿ, ಕರಗಿದ ಬಳಿಕ ಸಿಗಡಿಯನ್ನು ಹಾಕಿ ಹುರಿದುಕೊಳ್ಳಿ.
    * ಸಿಗಡಿ ಗರಿಗರಿಯಾದ ಬಳಿಕ ಅದನ್ನು ಬೇರೊಂದು ಪಾತ್ರೆಗೆ ವರ್ಗಾಯಿಸಿ.
    * ಈಗ ಅದೇ ಪ್ಯಾನ್‌ಗೆ ಹೆವಿ ಕ್ರೀಮ್ ಹಾಕಿ, ಬಿಸಿ ಮಾಡಿ. ಅದು ಕುದಿಯದಂತೆ ತಡೆಯಲು ಕೈಯಾಡಿಸುತ್ತಿರಿ.
    * ಅದಕ್ಕೆ ಕೊತ್ತಂಬರಿ ಸೊಪ್ಪು, ಉಪ್ಪು, ಕರಿ ಮೆಣಸಿನಪುಡಿ ಹಾಕಿ ಮಿಶ್ರಣ ಮಾಡಿ.
    * ಬಳಿಕ ಬೇಯಿಸಿದ ಸಿಗಡಿ ಹಾಗೂ ಪಾಸ್ತಾವನ್ನು ಸೇರಿಸಿ, ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ.
    * ಈಗ ಉರಿಯನ್ನು ಆಫ್ ಮಾಡಿ, ಅದಕ್ಕೆ ನಿಂಬೆ ರಸ ಹಾಗೂ ತುರಿದ ಚೀಸ್ ಸೇರಿಸಿ.
    * ಇದೀಗ ಕ್ರೀಮಿ ಸಿಗಡಿ ಪಾಸ್ತಾ ತಯಾರಾಗಿದ್ದು, ಸವಿಯಲು ಮಕ್ಕಳಿಗೆ ನೀಡಿ. ಇದನ್ನೂ ಓದಿ: ಬಾಯಲ್ಲಿ ನೀರೂರಿಸೋ ಚಿಕನ್ ಚೌ ಮಿನ್ ರೆಸಿಪಿ