Tag: Crazy Star Ravichandran

  • ಮದುವೆ ಡೇಟ್ ಫೈನಲ್: ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಮನೋರಂಜನ್

    ಮದುವೆ ಡೇಟ್ ಫೈನಲ್: ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಮನೋರಂಜನ್

    ಚಂದನವನದಲ್ಲಿ ಸಾಕಷ್ಟು ಸಿನಿಮಾಗಳ ಮೂಲಕ ಮೋಡಿ ಮಾಡಿರುವ ಸಾಹೇಬ ಜ್ಯೂನಿಯರ್ ಕ್ರೇಜಿಸ್ಟಾರ್ ಪುತ್ರ ಮನೋರಂಜನ್ ಹಸೆಮಣೆ ಏರಲು ಸಜ್ಜಾಗಿದ್ದಾರೆ. ತೆರೆಮರೆಯಲ್ಲಿ ಭರ್ಜರಿಯಾಗಿ ಮದುವೆಯ ತಯಾರಿ ನಡೆಯುತ್ತಿದೆ.

    ನಟ, ನಿರ್ದೇಶಕ, ನಿರ್ಮಾಪಕನಾಗಿ ಚಿತ್ರರಂಗದಲ್ಲಿ ಛಾಪೂ ಮೂಡಿಸಿರುವ ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ಕೂಡ ಚಿತ್ರರಂಗದಲ್ಲಿ ಕಮಾಲ್ ಮಾಡಿದವರು. ಈಗ ಗುರುಹಿರಿಯರು ನಿಶ್ಚಿಯಿಸಿದ ಸಂಗೀತಾ ಮದುವೆಯಾಗಲು ಮನೋರಂಜನ್ ರೆಡಿಯಾಗಿದ್ದಾರೆ. ಪರಸ್ಪರ ಒಪ್ಪಿಗೆಯ ಮೇರೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದನ್ನೂ ಓದಿ: 

    ಪರಸ್ಪರ ಅರ್ಥ ಮಾಡಿಕೊಂಡು ಹೊಸ ಬಾಳಿಗೆ ಕಾಲಿಡಲು ಸಂಗೀತಾ ಮತ್ತು ಮನೋರಂಜನ್ ಸಜ್ಜಾಗಿದ್ದಾರೆ. ಆಗಸ್ಟ್ 21ರಂದು ಮದುವೆ, ಆಗಸ್ಟ್ 20ಕ್ಕೆ ವಧುವಿನ ಕುಟುಂಬದ ಕಡೆಯಿಂದ ಆರತಕ್ಷತೆ, ಆಗಸ್ಟ್ 22ಕ್ಕೆ ಚಿತ್ರರಂಗದ ಸ್ನೇಹಿತರಿಗೆ ಆರತಕ್ಷತೆ ಏರ್ಪಡಿಸಲಾಗಿದೆ. ಒಟ್ನಲ್ಲಿ ಹಸೆಮಣೆ ಏರಲಿರುವ ಹೊಸ ಜೋಡಿಗೆ ಫ್ಯಾನ್ಸ್ ಶುಭಹಾರೈಸುತ್ತಿದ್ದಾರೆ.

    Live Tv

    [brid partner=56869869 player=32851 video=960834 autoplay=true]

  • ಕ್ರೇಜಿಸ್ಟಾರ್ ರವಿಚಂದ್ರನ್‌ಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ

    ಕ್ರೇಜಿಸ್ಟಾರ್ ರವಿಚಂದ್ರನ್‌ಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ

    ಕ್ರೇಜಿಸ್ಟಾರ್ ರವಿಚಂದ್ರನ್ ಕಲಾವಿದನಾಗಿ ಸಾಕಷ್ಟು ವರ್ಷಗಳಿಂದ ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ್ದಾರೆ. ಹಲವಾರು ಪಾತ್ರಗಳಿಂದ ಅಭಿಮಾನಿಗಳನ್ನು ರಂಜಿಸಿದ್ದಾರೆ. ನಟ ರವಿಚಂದ್ರನ್ ಅವರ ಸಾಧನೆಯನ್ನು ಗುರುತಿಸಿ ಇಂದು ಬೆಂಗಳೂರು ವಿಶ್ವವಿದ್ಯಾನಿಲಯದ ಚೊಚ್ಚಲ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿದರು.

    ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ನಟ ರವಿಚಂದ್ರನ್ ಸೇರಿದಂತೆ ಮೂವರಿಗೆ ಗೌರವ ಡಾಕ್ಟರೇಟ್ ಪ್ರಧಾನ ಮಾಡಿದರು. ಇನ್ನು 85ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ, ನಟ ರವಿಚಂದ್ರನ್ ಚಿತ್ರರಂಗಕ್ಕೆ ನೀಡಿರುವ ಕೊಡುಗೆಯನ್ನ ಗುರುತಿಸಿ ಗೌರವ ಡಾಕ್ಟರೇಟ್ ಪದವಿ ನೀಡಲಾಗಿದೆ. ಇದನ್ನು ಓದಿ:ಕೆಜಿಎಫ್-2 ರಿಲೀಸ್ ಫಿವರ್: ಫಸ್ಟ್ ಡೇ ಫಸ್ಟ್ ಶೋ ಟಿಕೆಟ್ ಬುಕ್ ಮಾಡಿದ ಯಶ್ ಮಹಿಳಾ ಫ್ಯಾನ್ಸ್

    ಇನ್ನು ಕಾರ್ಯಕ್ರಮದಲ್ಲಿ ಸಿನಿಮಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ವಿ. ರವಿಚಂದ್ರನ್, ಸಮಾಜ ಸೇವೆಗಾಗಿ ಎಂ. ಆರ್ ಜೈ ಶಂಕರ್, ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಡಾ.ಸತ್ಯನಾರಾಯಣ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗಿದೆ. ಇನ್ನು ಈ ವೇಳೆ ಕಾರ್ಯಕ್ರಮದಲ್ಲಿ ನಟ ರವಿಚಂದ್ರನ್ ಪತ್ನಿ ಸುಮತಿ, ಮಕ್ಕಳಾದ ವಿಕ್ರಮ್, ಮನೋರಂಜನ್, ಗೀತಾಂಜಲಿ, ಅಳಿಯ ಅಜಯ್ ಭಾಗಿಯಾಗಿದ್ದರು. ಈ ಸುದ್ದಿ ಕೇಳಿ ಕ್ರೇಜಿಸ್ಟಾರ್ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

  • ಪಡ್ಡೆಹುಲಿ ಟ್ರೈಲರ್ ಲಾಂಚ್ ಮಾಡಿದ್ರು ಚಾಲೆಂಜಿಂಗ್ ಸ್ಟಾರ್!

    ಪಡ್ಡೆಹುಲಿ ಟ್ರೈಲರ್ ಲಾಂಚ್ ಮಾಡಿದ್ರು ಚಾಲೆಂಜಿಂಗ್ ಸ್ಟಾರ್!

    ಎಮ್. ರಮೇಶ್ ರೆಡ್ಡಿ ನಿರ್ಮಾಣದ, ನಿರ್ಮಾಪಕ ಕೆ ಮಂಜು ಪುತ್ರ ಶ್ರೇಯಸ್ ನಾಯಕನಾಗಿ ಅಭಿನಯಿಸಿರುವ ಪಡ್ಡೆಹುಲಿ ಚಿತ್ರದ ಟ್ರೈಲರ್ ಲಾಂಚ್ ಆಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಪ್ರೀತಿಯಿಂದ ಈ ಟ್ರೈಲರ್ ಅನ್ನು ಅನಾವರಣಗೊಳಿಸಿ ಶುಭ ಕೋರಿದ್ದಾರೆ. ಹೀಗೆ ಯಜಮಾನನ ಕಡೆಯಿಂದ ಹೊರ ಬಂದಿರೋ ಈ ಟ್ರೈಲರ್ ನಿಜಕ್ಕೂ ಬೆರಗಾಗಿಸುವಂತಿದೆ!

    ಪಡ್ಡೆಹುಲಿ ಎಂಬ ಹೆಸರು ಕೇಳಿದಾಕ್ಷಣ ಇದು ಯುವ ಆವೇಗ ಹೊಂದಿರೋ ಮಾಸ್ ಸಿನಿಮಾ ಎಂಬ ನಿರ್ಧಾರಕ್ಕೆ ಬಂದಿದ್ದರು. ಆದರೆ ಅದು ಅರ್ಧ ಸತ್ಯ ಎಂಬುದನ್ನು ನಿರೂಪಸುತ್ತಲೇ ಈ ಟ್ರೈಲರ್ ಬೇರೆಯದ್ದೇ ಲೋಕವೊಂದನ್ನು ಎಲ್ಲರ ಮುಂದೆ ತೆರೆದಿಟ್ಟಿದೆ. ಪ್ರಧಾನವಾಗಿ ಹೇಳಬೇಕೆಂದರೆ ಪಡ್ಡೆಹುಲಿ ಪಕ್ಕಾ ಫ್ಯಾಮಿಲಿ ಎಂಟರ್ ಟೈನರ್. ಇದರೊಳಗೆ ಫ್ಯಾಮಿಲಿ ಸೆಂಟಿಮೆಂಟ್, ಪ್ರೀತಿ, ಮಾಸ್, ಕಾಮಿಡಿ ಸೇರಿದಂತೆ ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗಬಲ್ಲ ಸಕಲ ಅಂಶಗಳೂ ಇದ್ದಾವೆ. ಈ ವಿಚಾರವನ್ನ ಟ್ರೈಲರ್ ಸಾಕ್ಷೀಕರಿಸಿದೆ.

    ಗುರುದೇಶಪಾಂಡೆ ನಿರ್ದೇಶನದ ಈ ಚಿತ್ರದ ಟ್ರೈಲರ್ ನಲ್ಲಿ ಶ್ರೇಯಸ್ ಕಾಣಿಸಿಕೊಂಡಿರೋ ರೀತಿ ಎಂಥವರನ್ನೂ ಸೆಳೆಯುವಂತಿವೆ. ಅವರು ಮಾಸ್ ಸನ್ನಿವೇಶಗಳಲ್ಲಿ ಯಾವ ಥರ ವಿಜೃಂಭಿಸಿದ್ದಾರೆಂದರೆ, ಎಂಥವರೂ ಶಿಳ್ಳೆ ಹೊಡೆದು ಕನ್ನಡದ ಟೈಗರ್ ಶ್ರಾಫ್ ಅಂತ ಹೇಳಿ ಬಿಡುವಷ್ಟು ಚೆಂದಗೆ ಕಾಣಿಸಿಕೊಂಡಿದ್ದಾರೆ. ಶ್ರೇಯಸ್‍ಗೆ ಜೋಡಿಯಾಗಿ ನಿಶ್ವಿತಾ ನಾಯ್ಡು ಮುದ್ದುಮುದ್ದಾಗಿ ಕಾಣಿಸಿಕೊಂಡಿದ್ದಾರೆ.

    ವಿಶೇಷ ಅಂದ್ರೆ ಒಂದು ಕಾಲದಲ್ಲಿ ಜೋಡಿಯಾಗಿ ನಟಿಸಿದ್ದ ಸುಧಾರಾಣಿ ಮತ್ತು ಕ್ರೇಜಿಸ್ಟಾರ್ ರವಿಚಂದ್ರನ್ ಪಡ್ಡೆಹುಲಿಯಲ್ಲಿಯೂ ಜೋಡಿಯಾಗಿ ನಟಿಸಿದ್ದಾರೆ. ಅವರಿಲ್ಲಿ ಮತ್ತೊಂದು ಸಲ ಮೋಡಿ ಮಾಡೋ ಸೂಚನೆಗಳೂ ಕಾಣಿಸಿವೆ. ಒಟ್ಟಾರೆಯಾಗಿ ಈ ಟ್ರೈಲರ್ ಪಡ್ಡೆಹುಲಿಯ ಅಸಲೀ ಖದರ್ ಏನೆಂಬುದನ್ನ ಸ್ಪಷ್ಟವಾಗಿಯೇ ಜಾಹೀರು ಮಾಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕ್ರೇಜಿ ಪುತ್ರನ ‘ಚಿಲ್ಲಂ’ಗೆ ಜಗಪತಿ ಬಾಬು ಎಂಟ್ರಿ!

    ಕ್ರೇಜಿ ಪುತ್ರನ ‘ಚಿಲ್ಲಂ’ಗೆ ಜಗಪತಿ ಬಾಬು ಎಂಟ್ರಿ!

    ಬೆಂಗಳೂರು: ರವಿಚಂದ್ರನ್ ಪುತ್ರ ಮನೋರಂಜನ್ ನಟನೆಯ ಚಿಲ್ಲಂ ಚಿತ್ರ ತನ್ನ ತಾರಾಗಣದಿಂದಲೇ ಕ್ಯೂರಿಯಾಸಿಟಿ ಕೆರಳಿಸುತ್ತಾ ಸಾಗುತ್ತಿದೆ. ಈ ಬಾರಿ ಡಿಫರೆಂಟಾದ ಕಥಾ ಹಂದರದ ಮೂಲಕ ನೆಲೆ ನಿಲ್ಲುವ ತೀರ್ಮಾನ ಮಾಡಿರುವ ಮನೋರಂಜನ್ ಗೆ ಚಿಲ್ಲಂ ಚಿತ್ರದ ಬಗೆಗೆ ದಿನೇ ದಿನೇ ಹುಟ್ಟಿಕೊಳ್ಳುತ್ತಿರುವ ನಿರೀಕ್ಷೆಗಳು ಮತ್ತಷ್ಟು ಬಲ ತುಂಬಿವೆ.

    ಕೆಲ ದಿನಗಳ ಹಿಂದಷ್ಟೇ ರಾಘವೇಂದ್ರ ರಾಜ್ ಕುಮಾರ್ ಅವರು ಈ ಚಿತ್ರದ ತಾರಾಗಣ ಸೇರಿಕೊಂಡಿರೋ ಬಗ್ಗೆ ಭಾರೀ ಸುದ್ದಿಯಾಗಿತ್ತು. ಈಗ ಅದರ ಬೆನ್ನಲ್ಲಿಯೇ ತೆಲುಗಿನ ಖ್ಯಾತ ನಟ ಜಗಪತಿ ಬಾಬು ಚಿಲ್ಲಂ ಚಿತ್ರ ತಂಡ ಸೇರಿಕೊಂಡಿರುವ ಸುದ್ದಿ ಬಂದಿದೆ!

    ಜಗಪತಿ ಬಾಬು ಖದರ್ ಹೊಂದಿರೋ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ಕಥೆ ಮತ್ತು ತಮ್ಮ ಪಾತ್ರದ ಆವೇಗವನ್ನು ಕಂಡು ಖುಷಿಯಾಗಿಯೇ ಬಾಬು ಮನೋರಂಜನ್ ಜೊತೆ ನಟಿಸಲು ಒಪ್ಪಿಕೊಂಡಿದ್ದಾರಂತೆ. ಪ್ರತೀ ಪಾತ್ರಗಳಿಗೂ ಕೂಡಾ ಚಿತ್ರ ತಂಡ ಅಳೆದೂ ತೂಗಿ ಅದಕ್ಕೆ ಸೂಟು ಆಗುವಂಥಾ ನಟ ನಟಿಯರನ್ನೇ ಆಯ್ಕೆ ಮಾಡಿಕೊಳ್ಳುತ್ತಿದೆ. ಇನ್ನುಳಿದ ಒಂದಷ್ಟು ಪಾತ್ರಗಳಿಗೂ ಕೂಡಾ ಇಷ್ಟರಲ್ಲಿಯೇ ಆಯ್ಕೆ ಕಾರ್ಯ ಪೂರ್ಣ ಗೊಳ್ಳಲಿದೆಯಂತೆ.

    ಅಂತೂ ಚಿಲ್ಲಂ ಚಿತ್ರದ ಮೂಲಕ ಮನೋರಂಜನ್ ಅವರು ಚಿಂದಿ ಉಡಾಯಿಸುವಂಥಾ ಪಾತ್ರದಲ್ಲಿ ಈ ಸಲ ಪ್ರೇಕ್ಷಕರನ್ನು ಮುಖಾಮುಖಿಯಾಗಲಿದ್ದಾರೆ!