Tag: Crazy Star

  • ಕ್ರೇಜಿಸ್ಟಾರ್ ಮಗಳ ನಿಶ್ಚಿತಾರ್ಥದಲ್ಲಿ ಕಲಾವಿದರ ದಂಡು

    ಕ್ರೇಜಿಸ್ಟಾರ್ ಮಗಳ ನಿಶ್ಚಿತಾರ್ಥದಲ್ಲಿ ಕಲಾವಿದರ ದಂಡು

    ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ದ್ವಿತೀಯ ಪುತ್ರಿ ಗೀತಾಂಜಲಿ ಅವರ ನಿಶ್ಚಿತಾರ್ಥ ಕಾರ್ಯಕ್ರಮ ಇಂದು ಬೆಂಗಳೂರಿನ ಶರ್ಟಾನ್ ಹೋಟೇಲ್ ನಲ್ಲಿ ನಡಿಯಿತು.

    ರವಿಚಂದ್ರನ್ ಅವರ ಕ್ರಿಯೇಟಿವ್ ಆಲೋಚನೆಗಳಿಗೆ ತಕ್ಕಂತೆ ಮಗಳ ನಿಶ್ಚಿತಾರ್ಥದ ವೇದಿಕೆ ನಿರ್ಮಿಸಲಾಗಿತ್ತು. ಏಳು ಬಿಳಿ ಅಶ್ವದ ಕಾಸ್ಸೆಫ್ಟ್ ನಲ್ಲಿ ವೇದಿಕೆಯನ್ನು ಅಲಂಕರಿಸಲಾಗಿತ್ತು. ತಿಳಿ ಹಸಿರು ಮಿಶ್ರಿತ ಬಣ್ಣದ ಸೀರೆಯಲ್ಲಿ ರವಿಚಂದ್ರನ್ ಪುತ್ರಿ ಗೀತಾಂಜಲಿ ಮಿಂಚಿದ್ರೆ, ಕಡು ನೀಲಿ ಬಣ್ಣದ ಸೂಟ್ ನಲ್ಲಿ ರವಿ ಭಾವಿ ಅಳಿಯ, ಉದ್ಯಮಿ ಅಜಯ್ ಕಂಗೊಳಿಸುತ್ತಿದ್ದರು.

    ಖ್ಯಾತ ನಟನ ಮಗಳ ನಿಶ್ಚಿತಾರ್ಥಕ್ಕೆ ನಟಿ ಖುಷ್ಬು, ಹಂಸಲೇಖ, ಪುನೀತ್ ರಾಜ್‍ಕುಮಾರ್, ಜಗ್ಗೇಶ್, ದೊಡ್ಡಣ್ಣ , ಶ್ರೀಮುರುಳಿ, ಅಕುಲ್ ಬಾಲಾಜಿ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಭಾಗಿಯಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರವಿಚಂದ್ರನ್ ರೌಡಿಸಂಗೆ ಹಾರರ್ ಫ್ರೇಮ್?

    ರವಿಚಂದ್ರನ್ ರೌಡಿಸಂಗೆ ಹಾರರ್ ಫ್ರೇಮ್?

    ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ರಿಯಲ್ ಸ್ಟಾರ್ ಉಪೇಂದ್ರ ಒಂದಾಗಿದ್ದಾರೆ. ಓಂಪ್ರಕಾಶ್ ರಾವ್ ನಿರ್ದೇಶನದ ರವಿಚಂದ್ರ ಚಿತ್ರದಲ್ಲಿ ಅವರಿಬ್ಬರೂ ಒಟ್ಟಾಗಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಅದ್ಧೂರಿಯಾಗಿಯೇ ಮುಹೂರ್ತ ಸಮಾರಂಭವೂ ನಡೆದಿದೆ.

    ಕನ್ನಡದ ಮಟ್ಟಿಗೆ ಮಲ್ಟಿ ಸ್ಟಾರರ್ ಚಿತ್ರಗಳು ಅಪರೂಪ. ಈ ಹಿಂದೆ ಮುಕುಂದ ಮುರಾರಿ ಚಿತ್ರದಲ್ಲಿ ಉಪೇಂದ್ರ ಸುದೀಪ್ ಜೊತೆ ನಟಿಸಿದ್ದರಲ್ಲಾ. ಇದೀಗ ಉಪ್ಪಿ ಕ್ರೇಜಿಸ್ಟಾರ್ ಜೊತೆ ನಟಿಸಲು ಮುಂದಾಗಿದ್ದಾರೆ. ಹೀಗಿದ್ದ ಮೇಲೆ ಈ ಚಿತ್ರದ ಕಥೆಯ ಬಗ್ಗೆ, ಉಪ್ಪಿ ಮತ್ತು ರವಿಚಂದ್ರನ್ ಅವರ ಪಾತ್ರದ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಮೂಡದಿರುತ್ತಾ?

    ಈ ಚಿತ್ರ ಭಯಾನಕ ಡಾನ್ ಗಳಿಬ್ಬರ ಕಥೆ ಹೊಂದಿದೆಯಂತೆ. ಉಪೇಂದ್ರ ಮತ್ತು ರವಿಚಂದ್ರನ್ ಇಬ್ಬರೂ ಡಾನ್‍ಗಳಾಗಿ ಕಾಣಿಸಿಕೊಳ್ಳಲಿದ್ದಾರೆ. ಕಥೆ ಹೀಗಿರೋವಾಗ ಇದು ಪಕ್ಕಾ ಆಕ್ಷನ್ ಸಿನಿಮಾ ಎಂಬುದರಲ್ಲಿ ಯಾವುದೇ ಸಂದೇಹಗಳಿಲ್ಲ. ಆದರೆ ನಿರ್ದೇಶಕ ಓಂಪ್ರಕಾಶ್ ರಾವ್ ಈ ಮಾಸ್ ಕಥೆಯಲ್ಲಿಯೇ ಮೈ ನಡುಗಿಸುವಂಥಾ ಹಾರರ್ ಕಥಾನಕವನ್ನೂ ಸೇರಿಸಿದ್ದಾರಂತೆ. ಅದುವೇ ಈ ಚಿತ್ರದ ಅಸಲೀ ಸ್ಪೆಷಾಲಿಟಿ!

    ಪ್ರೇಮ ಕಥಾನಕಗಳಿಗೇ ಬ್ರ್ಯಾಂಡ್ ಆಗಿರುವವರು ಕ್ರೇಜಿಸ್ಟಾರ್ ರವಿಚಂದ್ರನ್. ಇತ್ತೀಚೆಗೆ ಅದರಾಚೆಗಿನ ಪಾತ್ರಗಳಲ್ಲಿ ನಟಿಸಿದ್ದರೂ ರವಿಚಂದ್ರನ್ ಅವರಿಗೆ ಹಳೇ ಇಮೇಜು ಇದ್ದೇ ಇದೆ. ಅಂಥಾ ರವಿಮಾಮ ಈ ಚಿತ್ರದಲ್ಲಿ ಡಾನ್ ಆಗಿ ಅಬ್ಬರಿಸಲಿದ್ದಾರೆಂದ ಮೇಲೆ ಯಾರಿಗಾದರೂ ಅಚ್ಚರಿದಾಯಕ ಕೌತುಕ ಕಾಡಿಯೇ ಕಾಡುತ್ತದೆ. ಇಂಥಾ ಸೂಕ್ಷ್ಮ ವಿಚಾರಗಳ ಮೂಲಕವೇ ಪ್ರೇಕ್ಷಕರನ್ನು ಸೆಳೆಯೋ ಕಲೆ ಅರಿತುಕೊಂಡಿರುವ ನಿರ್ದೇಶಕ ಓಂಪ್ರಕಾಶ್ ರಾವ್, ಈ ಚಿತ್ರದ ಮೂಲಕ ಮತ್ತೊಂದು ಗೆಲುವಿನ ಪರ್ವಕ್ಕೆ ನಾಂದಿ ಹಾಡೋ ಉತ್ಸಾಹದಿಂದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv