Tag: crash

  • ತುರ್ತು ಭೂಸ್ಪರ್ಶ ವೇಳೆ ಕಾರ್ಗೋ ವಿಮಾನ ಇಬ್ಬಾಗ

    ತುರ್ತು ಭೂಸ್ಪರ್ಶ ವೇಳೆ ಕಾರ್ಗೋ ವಿಮಾನ ಇಬ್ಬಾಗ

    ವಾಷಿಂಗ್ಟನ್: ಗುರುವಾರ ಕೋಸ್ಟ್ರಿಕಾದಲ್ಲಿ ತುರ್ತು ಭೂಸ್ಪರ್ಶದ ವೇಳೆ ಕಾರ್ಗೋ ವಿಮಾನವೊಂದು ತುಂಡಾಗಿರುವ ಘಟನೆ ನಡೆದಿದೆ. ಡಿಹೆಚ್‌ಎಲ್ ಕಾರ್ಗೋ ವಿಮಾನ ರನ್‌ವೇಯಿಂದ ಜಾರಿದ ಪರಿಣಾಮ ಮುರಿದು ಬಿದ್ದಿದೆ.

    ಘಟನೆ ಸಂಭವಿಸಿದ ವೇಳೆ ಸ್ಯಾನ್ ಜೋಸ್‌ನಲ್ಲಿರುವ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಮುಚ್ಚಲಾಯಿತು. ಘಟನೆ ವೇಳೆ ವಿಮಾನದಲ್ಲಿ ಇಬ್ಬರು ಸಿಬ್ಬಂದಿ ಇದ್ದರು. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಇಬ್ಬರನ್ನು ಆಸ್ಪತ್ರಗೆ ದಾಖಲಿಸಲಾಗಿದೆ. ಇದನ್ನೂ ಓದಿ: E-ಸೈಕಲ್ ಖರೀದಿಗೆ ಬಂಪರ್ ಆಫರ್ ಕೊಟ್ಟ ದೆಹಲಿ ಸರ್ಕಾರ : ಯಾರಿಗೆ ಸಿಗುತ್ತೆ?

    ಗುರುವಾರ ಬೆಳಗ್ಗೆ ವಿಮಾನ ಜುವಾಮ್ ಸಾಂತಾಮಾರಿಯಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗಿತ್ತು. ಇದಾದ 25 ನಿಮಿಷಗಳಲ್ಲಿ ವಿಮಾನದಲ್ಲಿ ತಾಂತ್ರಿಕ ವೈಫಲ್ಯ ಕಂಡುಬಂದಿತ್ತು. ಹೀಗಾಗಿ ವಿಮಾನವನ್ನು ಪೈಲಟ್‌ಗಳು ತುರ್ತು ಭೂಸ್ಪರ್ಶ ಮಾಡಲು ನಿರ್ಧರಿಸಿದರು. ಈ ಸಂದರ್ಭ ಘಟನೆ ನಡೆದಿದೆ. ಇದನ್ನೂ ಓದಿ: ಸ್ಪೇಸ್‌ ಎಕ್ಸ್‌ ರಾಕೆಟ್‌ ಮೂಲಕ ಕಾಫಿನಾಡು ಯುವಕನ ಶಕುಂತಲಾ ಉಪಗ್ರಹ ಉಡಾವಣೆ

     

  • ಅಮೆಜಾನ್ ಕಾಡಿನಲ್ಲಿ ಬೊಲಿವಿಯಾ ವಾಯುಪಡೆ ವಿಮಾನ ಪತನ – 6 ಮಂದಿ ಸಾವು

    ಅಮೆಜಾನ್ ಕಾಡಿನಲ್ಲಿ ಬೊಲಿವಿಯಾ ವಾಯುಪಡೆ ವಿಮಾನ ಪತನ – 6 ಮಂದಿ ಸಾವು

    ವಾಷಿಂಗ್ಟನ್: ಬೊಲಿವಿಯಾದ ವಾಯುಪಡೆಯ ವಿಮಾನ (Bolivian Airforce Plane) ಅಮೆಜಾನ್ ಅರಣ್ಯದಲ್ಲಿ ಪತನವಾಗಿದ್ದು, 6 ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ದಕ್ಷಿಣ ಅಮೆರಿಕಾದ ದೇಶ ಬೊಲಿವಿಯಾದ ಈಶಾನ್ಯದಲ್ಲಿರುವ ಬೆನಿ ಪ್ರದೇಶದ ಅಮೆಜಾನ್ ಕಾಡಿನಲ್ಲಿ ಶನಿವಾರ ಈ ದುರಂತ ನಡೆದಿದೆ. ಬೊಲಿವಿಯಾದ ಆರೋಗ್ಯ ಸಚಿವಾಲಯದ ಡೆಂಗ್ಯೂ-ಚಿಕೂನ್‍ಗುನ್ಯಾ ಕಾರ್ಯಕ್ರಮದ ನಾಲ್ವರು ಆರೋಗ್ಯಾಧಿಕಾರಿಗಳನ್ನು ರಿಬೆರಾಲ್ಟಾದಿಂದ ಕೋಬಿಜಾಗೆ ಕರೆದೊಯ್ಯಲಾಗುತ್ತಿತ್ತು. ಮಲೇರಿಯಾ ರೋಗ ಜಾಗೃತಿ ಮೂಡಿಸುವ ಜೊತೆಗೆ, ಮೌಲ್ಯಮಾಪನ ಕಾರ್ಯದಲ್ಲಿ ಇವರೆಲ್ಲ ತೊಡಗಿಸಿಕೊಂಡಿದ್ದರು. ನಾಲ್ವರೂ ಅಧಿಕಾರಿಗಳು ಮೃತಪಟ್ಟಿದ್ದಾರೆ. ಇದನ್ನೂ ಓದಿ: ದಕ್ಷಿಣ ಕನ್ನಡದಲ್ಲಿ ನಿಲ್ಲದ ಪುಂಡರ ಕುಚೇಷ್ಟೆ – ಕಾರಿನಲ್ಲಿ ಹೋಗ್ತಿದ್ದ ದಂಪತಿಗೆ ಅಡ್ಡಗಟ್ಟಿ ಧಮ್ಕಿ

    ವಿಮಾನ ಪತನದಲ್ಲಿ ಇಬ್ಬರು ಸೇನಾ ಪೈಲಟ್‍ಗಳು, ನಾಲ್ವರು ನಾಗರಿಕರು ಮೃತಪಟ್ಟಿದ್ದಾರೆ. ಈ ವಿಮಾನ ಅಮೆಜಾನ್ ಕಾಡಿನ (Amazon Forest) ದಟ್ಟವಾದ ಮರಗಳ ಮಧ್ಯೆ ಪತನವಾಗಿದ್ದು, ತಕ್ಷಣ ಬೆಂಕಿ ಹೊತ್ತಿಕೊಂಡು ಸಂಪೂರ್ಣ ಬೆಂಕಿಗಾಹುತಿಯಾಗಿದೆ. ವಿಮಾನ ಪತನವಾದ ಸ್ಥಳದ ಸಮೀಪದಲ್ಲೇ ಇದ್ದ ಅಗುವಾ ಡುಲ್ಸೆ ಎಂಬ ಸಮುದಾಯದ ನಿವಾಸಿಗಳು ವಿಮಾನಕ್ಕೆ ಹೊತ್ತಿಕೊಂಡಿದ್ದ ಬೆಂಕಿಯನ್ನು ನಂದಿಸಲು ಪ್ರಯತ್ನ ಪಟ್ಟರೂ ಫಲ ನೀಡಲಿಲ್ಲ ಎಂದು ಬೆನಿ ಪ್ರದೇಶದ ಪೊಲೀಸರು ಮಾಹಿತಿ ನೀಡಿದ್ದಾರೆ. ಸೇನಾ ವಿಮಾನ ಪತನಕ್ಕೆ (Plane Crash) ನೈಜ ಕಾರಣ  ಪತ್ತೆ ಹಚ್ಚಲು ತನಿಖೆ ನಡೆಯುತ್ತಿದೆ.

  • ಕುಸಿಯುತ್ತಿವೆ ಸೇತುವೆ ಕಲ್ಲುಗಳು- ಕೊಪ್ಪದ ಏಳೆಂಟು ಹಳ್ಳಿಯ ಜನರಲ್ಲಿ ಆತಂಕ

    ಕುಸಿಯುತ್ತಿವೆ ಸೇತುವೆ ಕಲ್ಲುಗಳು- ಕೊಪ್ಪದ ಏಳೆಂಟು ಹಳ್ಳಿಯ ಜನರಲ್ಲಿ ಆತಂಕ

    ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆ ಪ್ರಮಾಣ ಬಹುತೇಕ ತಗ್ಗಿದೆ. ಆಗಾಗ್ಗೆ ಮಲೆನಾಡಿನ ಅಲ್ಲಲ್ಲೇ ಐದತ್ತು ನಿಮಿಷಗಳ ಕಾಲ ಭಾರೀ ಮಳೆ ಸುರಿಯುತ್ತೆ. ಮತ್ತೆ ಬಿಡುವು ನೀಡುತ್ತಿದ್ದಾನೆ ವರುಣದೇವ. ಆದರೆ ಮಳೆ ಪ್ರಮಾಣ ಬಹುತೇಕ ತಗ್ಗಿದ್ದರೂ ಸೇತುವೆ ಶಿಥಿಲಾವಸ್ಥೆ ತಲುಪಿ ಗ್ರಾಮಗಳ ಸಂಪರ್ಕವನ್ನೇ ಕಳೆದುಕೊಳ್ಳುವ ಆತಂಕ ಮಲೆನಾಡಿಗರಲ್ಲಿ ಮನೆ ಮಾಡಿದೆ.

    ಜಿಲ್ಲೆಯ ಕೊಪ್ಪ ತಾಲೂಕಿನ ಶಾಂತಿಗ್ರಾಮ ಸೇತುವೆಯ ತಳಪಾಯದ ಒಂದೊಂದೇ ಕಲ್ಲುಗಳು ಕಳಚಿ ಬೀಳುತ್ತಿದ್ದು, ಸೇತುವೆ ಸಂಪೂರ್ಣ ಕುಸಿಯುವ ಭೀತಿ ನಿರ್ಮಾಣವಾಗಿದೆ. ನಿನ್ನೆಯಿಂದಲೂ ಸೇತುವೆಯ ಒಂದೊಂದೇ ಕಲ್ಲುಗಳು ಕಳಚಿ ಬೀಳುತ್ತಿವೆ. ಮಲೆನಾಡ ಜನವಸತಿ ಪ್ರದೇಶದಲ್ಲಿ ಮಳೆ ಪ್ರಮಾಣ ತಗ್ಗಿದ್ದರೂ ಘಟ್ಟ ಪ್ರದೇಶದಲ್ಲಿ ಮಳೆ ಸುರಿಯುತ್ತಿರುವುದರಿಂದ ಹಳ್ಳಕೊಳ್ಳಗಳು ಮೈದುಂಬಿ ಹರಿಯುತ್ತಿವೆ. ನೀರಿನ ವೇಗವಾದ ಹರಿವಿನಿಂದ ದಿನಕಳೆದಂತೆ ಸೇತುವೆಗಳು ದುರ್ಬಲಗೊಳ್ಳುತ್ತಿವೆ. ಇದನ್ನೂ ಓದಿ: ಜಿಲ್ಲೆಯಲ್ಲಿ 15 ದಿನದ ಹಿಂದೆ ಧಾರಾಕಾರ ಮಳೆ – ತೀರ್ಥಹಳ್ಳಿಯ ಕುರುವಳ್ಳಿ ಸಮೀಪ ಕುಸಿಯುತ್ತಿರುವ ಧರೆ

    ಶಾಂತಿಗ್ರಾಮದ ಈ ಸೇತುವೆ ಜಲಾವೃತಗೊಂಡರೆ ಕೊಗ್ರೆ-ಶಾಂತಿಗ್ರಾಮದ ಸಂಪರ್ಕ ಕೊಂಡಿಯೇ ಕಳಚಿ ಬಿದ್ದಂತೆ. ಮಳೆಯಿಂದ ಮನೆ, ರಸ್ತೆ, ಬೆಟ್ಟ-ಗುಡ್ಡಗಳ ಕುಸಿತದಿಂದ ಕಂಗಾಲಾಗಿರುವ ಜನ, ಇದೀಗ ಸೇತುವೆಯೂ ತನ್ನ ಸಾಮರ್ಥ್ಯ ಕಳೆದುಕೊಳ್ಳುತ್ತಿರುವುದರಿಂದ ಮತ್ತಷ್ಟು ಕಂಗಾಲಾಗಿದ್ದಾರೆ. ಈ ಸೇತುವೆ ಕುಸಿದು ಬಿದ್ದರೆ ಹೊರನಾಡು-ಶೃಂಗೇರಿ-ಕೊಗ್ರೆ ಗ್ರಾಮಕ್ಕೆ ಹತ್ತಾರು ಕಿ.ಮೀ. ಸುತ್ತಿಕೊಂಡು ಬರಬೇಕಾದ ಸ್ಥಿತಿ ನಿರ್ಮಾಣವಾಗಲಿದೆ.

    ಹತ್ತಾರು ಹಳ್ಳಿಗೆ ಸಂಪರ್ಕ ಕಲ್ಪಿಸುವ ಈ ಬೈಪಾಸ್ ರಸ್ತೆ ಸೇತುವೆ ಮುಖ್ಯ ಪಿಲ್ಲರ್ ನ ಒಂದು ಭಾಗದಿಂದ ಕುಸಿತ ಆರಂಭವಾಗಿದೆ. ಈ ಸೇತುವೆ ಕುಸಿದರೆ ಕೇವಲ ಕೊಗ್ರೆ-ಶಾಂತಿಪುರ ಗ್ರಾಮವಷ್ಟೆ ಅಲ್ಲದೆ ಬಿ.ಎಂ.ರೋಡ್, ಕೋಟೆತೋಟ, ಬೈರೇದೇವರು, ಹೆಗ್ಗಾರು ಕೂಡಿಗೆ ಸಂಪರ್ಕವೂ ಬಂದ್ ಆಗಲಿದೆ. ಹೀಗಾಗಿ ಕೂಡಲೇ ಅಧಿಕಾರಿಗಳು ಇತ್ತ ಗಮನ ಹರಿಸಿ ಕುಸಿತ ಈಗ ಆರಂಭವಾಗಿದೆ. ಈಗಲೇ ಅದಕ್ಕೊಂದು ಬಂದೋಬಸ್ತ್ ಮಾಡಿದರೆ ಸೇತುವೆ ಬಾಳಿಕೆ ಬರಬಹುದು. ಅಧಿಕಾರಿಗಳು ಸೇತುವೆಯನ್ನ ವೀಕ್ಷಿಸಿ ದುರಸ್ಥಿ ಮಾಡಬೇಕೆಂದು ಮಲೆನಾಡಿಗರು ಆಗ್ರಹಿಸಿದ್ದಾರೆ.

  • ಮಡಿಕೇರಿ, ಮಂಗಳೂರು ರಸ್ತೆ ದುರಸ್ತಿ – ಲಾರಿ ಚಾಲಕರ ಪರದಾಟ

    ಮಡಿಕೇರಿ, ಮಂಗಳೂರು ರಸ್ತೆ ದುರಸ್ತಿ – ಲಾರಿ ಚಾಲಕರ ಪರದಾಟ

    ಮಡಿಕೇರಿ: ರಸ್ತೆ ಕುಸಿತವಾದ ಹಿನ್ನೆಲೆಯಲ್ಲಿ ಮಡಿಕೇರಿ ಹಾಗೂ ಮಂಗಳೂರು ರಾಷ್ಟ್ರೀಯ ಹೆದ್ದಾರಿ 2 ನೇ ಮೊಣ್ಣಗೇರಿ ಬಳಿ ಭಾರೀ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದೆ.

    ಸಂಪಾಜೆ ಬಳಿ ರಸ್ತೆ ಕುಸಿದು ಪರಿಣಾಮದಿಂದ ಮೈಸೂರಿನಿಂದ ಮಂಗಳೂರಿಗೆ ತೆರಳುವ ಲಾರಿಗಳ ಸಂಚಾರಕ್ಕೆ ಅಡ್ಡಿಯಾಗಿದೆ. ವಾರಾಂತ್ಯದ  ಕರ್ಫ್ಯೂ ನಿಂದ ಹೊಟೇಲ್‍ಗಳು ಬಂದ್ ಅಗಿರುವುದರಿಂದ ಊಟ ತಿಂಡಿ ಇಲ್ಲದೆ ಲಾರಿ ಚಾಲಕರ ಪರದಾಟ ಮಾಡುವಂತಾಗಿದೆ.

    ರಸ್ತೆ ಕುಸಿದು ಲಾಕ್ ಆಗಿದ್ದ ಲಾರಿಗಳಿಗೆ ಕೆಲವು ಸಮಯದ ನಂತರ  ಮಡಿಕೇರಿ ಡಿವೈಎಸ್‍ಪಿ ದಿನೇಶ್ ಕುಮಾರ್  ಲಾರಿಗಳ ಸಂಚಾರಕ್ಕೆ ಅವಕಾಶ ಕೊಟ್ಟಿದ್ದಾರೆ.

    ಜೋಡುಪಾಲದಲ್ಲಿ ರಾಷ್ಟ್ರೀಯ ಹೆದ್ದಾರಿಯ ಒಂದು ಭಾಗ ಕುಸಿತವಾಗಿರುವ ಹಿನ್ನೆಲೆಯಲ್ಲಿ ದೂರದ ಊರಿಗಳಿಂದ ಬರುವ ಸರಕು ಸಾಗಣೆ ಮಾಡುವ ವಾಹನಗಳಿಗೆ ಇದೀಗ ಜಿಲ್ಲಾಡಳಿತ ನಿರ್ಬಂಧ ಹೇರಲಾಗಿದೆ.

  • ಖಾಸಗಿ ತರಬೇತಿ ವಿಮಾನ ಪತನ – ಆರು ಮಂದಿ ಬಚಾವ್

    ಖಾಸಗಿ ತರಬೇತಿ ವಿಮಾನ ಪತನ – ಆರು ಮಂದಿ ಬಚಾವ್

    ಲಕ್ನೋ: ಲ್ಯಾಂಡಿಂಗ್ ಸಮಯದಲ್ಲಿ ಚಕ್ರಕ್ಕೆ ವಿದ್ಯುತ್ ವಯರ್ ಸಿಕ್ಕಿಹಾಕಿಕೊಂಡ ಪರಿಣಾಮ ಖಾಸಗಿ ತರಬೇತಿ ವಿಮಾನ ಪತನಗೊಂಡಿದೆ. ಅದೃಷ್ಟವಶಾತ್ ವಿಮಾನದಲ್ಲಿದ್ದ 6 ಮಂದಿ ಕೂಡ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯ ಧಾನಿಪುರ ವಾಯುನೆಲೆಯಲ್ಲಿ ಈ ಅಪಘಾತ ಸಂಭವಿಸಿದೆ. ಇಂದು ಬೆಳಗ್ಗೆ ವಾಯುನೆಲೆಯಲ್ಲಿ ವಿಟಿ-ಎವಿವಿ ವಿಮಾನ ಲ್ಯಾಂಡಿಂಗ್ ಆಗುತ್ತಿದ್ದ ವೇಳೆ ಚಕ್ರಗಳಿಗೆ ವಿದ್ಯುತ್ ವಯರ್‌ಗಳು ಸಿಕ್ಕಿಹಾಕಿಕೊಂಡ ಪರಿಣಾಮ ವಿಮಾನ ಪತನವಾಗಿದೆ.

    ನಿರ್ವಹಣೆ ಸಂಬಂಧ ವಿಮಾನವನ್ನು ಧಾನಿಪುರದಲ್ಲಿ ಲ್ಯಾಂಡಿಂಗ್ ಮಾಡಲಾಗುತ್ತಿತ್ತು. ವಿಮಾನ ಪತನಗೊಂಡ ಬಳಿಕ ಅದರಲ್ಲಿ ಇದ್ದವರು ವಿಮಾನದಿಂದ ಹೇಗೋ ಹೊರಬಂದಿದ್ದಾರೆ. ನಂತರ ಕೆಲ ನಿಮಿಷಗಳಲ್ಲಿಯೇ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡು ಸುಟ್ಟುಹೋಗಿದೆ. ಈ ಬಗ್ಗೆ ತಿಳಿದ ತಕ್ಷಣ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ.

  • ಬ್ಯಾಂಕ್ ಛಾವಣಿ ಕುಸಿದು ಓರ್ವ ಸಾವು, 10 ಜನರಿಗೆ ಗಾಯ

    ಬ್ಯಾಂಕ್ ಛಾವಣಿ ಕುಸಿದು ಓರ್ವ ಸಾವು, 10 ಜನರಿಗೆ ಗಾಯ

    ಮುಂಬೈ: ಬ್ಯಾಂಕ್ ಅಫ್ ಮಹಾರಾಷ್ಟ್ರದ ಶಾಖೆಯೊಂದರ ಮೇಲ್ಛಾವಣಿ ಕುಸಿದು ಓರ್ವ ಮೃತಪಟ್ಟು, 10 ಜನ ಗಂಭೀರ ಗಾಯಗೊಂಡ ಘಟನೆ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ನಡೆದಿದೆ.

    ಬೆಳಗ್ಗೆ 11ಕ್ಕೆ ವ್ಯವಹಾರ, ವಹಿವಾಟು ಜೋರಾಗಿ ನಡೆಯುತಿತ್ತು. ಗ್ರಾಹಕರು ಹೆಚ್ಚಿದ್ದ ಸಂದರ್ಭದಲ್ಲೇ ಬ್ಯಾಂಕಿನ ಮೇಲ್ಛಾವಣಿ ಕುಸಿದಿದೆ ಎಂದು ಕರ್ಮಲಾ ಪೊಲೀಸ್ ಠಾಣೆಯ ತನಿಖಾಧಿಕಾರಿ ಶ್ರೀಕಾಂತ್ ಪದುಲೆ ಅವರು ತಿಳಿಸಿದ್ದಾರೆ.

    ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕಟ್ಟಡದ ಸುತ್ತಲಿನ ಪ್ರದೇಶ ಹಾನಿಯಾಗಿತ್ತು. ಇಂದು ಇದ್ದಕ್ಕಿದ್ದಂತೆ ಕಟ್ಟಡದ ಮೇಲ್ಛಾವಣಿ ಕುಸಿದು ಬಿದ್ದಿದ್ದು, ಹತ್ತಾರು ಗ್ರಾಹಕರು ಹಾಗೂ ಬ್ಯಾಂಕ್ ಸಿಬ್ಬಂದಿ ಸೇರಿದಂತೆ ಎಲ್ಲರಿಗೂ ಬಲೆ ಹಾಕಿದಂತಾಗಿತ್ತು.

    ಸಾವನ್ನಪ್ಪಿದವರನ್ನು ಪ್ರಶಾಂತ್ ಬಗಾಲ್(40) ಎಂದು ಗುರುತಿಸಲಾಗಿದ್ದು, ಕ್ಯಾಷ್ ಕೌಂಟರ್ ಬಳಿ ನಿಂತಿದ್ದಾಗ ಮೇಲ್ಛಾವಣಿ ಕುಸಿದು ಬಿದ್ದಿದೆ. ಕಟ್ಟದ ಅವಶೇಷದಡಿ ಸಿಲುಕಿಕೊಂಡಿದ್ದ 10 ಜನರನ್ನು ರಕ್ಷಿಸಲಾಗಿದ್ದು, ಗಂಭೀರ ಗಾಯಗೊಂಡಿದ್ದಾರೆ ಎಂದು ಶ್ರೀಕಾಂತ್ ಪದುಲೆ ತಿಳಿಸಿದ್ದಾರೆ.

    ಇನ್ನೂ 10 ಜನರು ಕಟ್ಟಡದ ಅವಶೇಷದ ಅಡಿಯಲ್ಲಿ ಸಿಲುಕಿರುವ ಸಾಧ್ಯತೆ ಇರುವುದರಿಂದ ರಕ್ಷಣಾ ಕಾರ್ಯ ನಡೆಯುತ್ತಿದೆ. ಬ್ಯಾಂಕ್ ಅಲ್ಲದೆ, ಮೊದಲ ಮಹಡಿ ಕ್ಲಿನಿಕ್‍ನಲ್ಲಿದ್ದ ಕೆಲವು ರೋಗಿಗಳೂ ಸಹ ಸಿಲುಕೊಂಡಿರುವ ಶಂಕೆ ಇದೆ.

  • ಸಮ್ಮಿಟ್ ಏರ್‌ಫ್ಲೈಟ್ ಪತನ- ಇಬ್ಬರ ದುರ್ಮರಣ, ಐವರಿಗೆ ಗಾಯ!

    ಸಮ್ಮಿಟ್ ಏರ್‌ಫ್ಲೈಟ್ ಪತನ- ಇಬ್ಬರ ದುರ್ಮರಣ, ಐವರಿಗೆ ಗಾಯ!

    ನವದೆಹಲಿ: ನೇಪಾಳದ ಟೆನ್ಜಿಂಗ್-ಹಿಲರಿ ವಿಮಾನ ನಿಲ್ದಾಣದಲ್ಲಿ ಬೆಳ್ಳಂಬೆಳಗ್ಗೆ ಸಮ್ಮಿಟ್ ಏರ್ ಫ್ಲೈಟ್ ಪತನಗೊಂಡಿದ್ದು, ಇಬ್ಬರು ಸಾವನ್ನಪ್ಪಿದ್ದು, ಐವರು ಗಾಯಗೊಂಡಿದ್ದಾರೆ.

    ಟೆನ್ಜಿಂಗ್-ಹಿಲರಿ ವಿಮಾನ ನಿಲ್ದಾಣದಲ್ಲಿ ನಿಲುಗಡೆ ಮಾಡಲ್ಪಟ್ಟ ಚಾಪರ್ ವಿಮಾನದೊಂದಿಗೆ ಸಮ್ಮಿಟ್ ಏರ್ ಫ್ಲೈಟ್ ಘರ್ಷಣೆಯಾಗಿತ್ತು. ಆದ್ದರಿಂದ ವಿಮಾನ ಪತನವಾಗಿರಬಹುದು ಎಂದು ಶಂಕಿಸಲಾಗಿದೆ. ಈ ಅಪಘಾತದಲ್ಲಿ ವಿಮಾನದಲ್ಲಿದ್ದ ಇಬ್ಬರು ಮೃತಪಟ್ಟಿದ್ದು, ಐವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

    ಆದ್ರೆ ವಿಮಾನದಲ್ಲಿ ಎಷ್ಟು ಮಂದಿ ಪ್ರಯಾಣಿಸುತ್ತಿದ್ದರು ಹಾಗೂ ವಿಮಾನ ಪತನವಾಗಲು ಕಾರಣವೇನು ಎಂಬ ನಿಖರ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

  • ಇಥಿಯೋಪಿಯಾ ವಿಮಾನ ದುರಂತ – ಭಾರತ ಮೂಲದ ನಾಲ್ವರ ಸಾವು

    ಇಥಿಯೋಪಿಯಾ ವಿಮಾನ ದುರಂತ – ಭಾರತ ಮೂಲದ ನಾಲ್ವರ ಸಾವು

    ಆಡಿಸ್ ಅಬಬಾ: ಇಥಿಯೋಪಿಯನ್ ಏರ್ ಲೈನ್ಸ್ ವಿಮಾನ ಪತನಗೊಂಡು 157 ಮಂದಿ ಮೃತಪಟ್ಟಿದ್ದು, ಇದರಲ್ಲಿ ನಾಲ್ವರು ಭಾರತೀಯರು ಕೂಡ ಸೇರಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ಇಥಿಯೋಪಿಯದ ರಾಜಧಾನಿ ಆಡಿಸ್ ಅಬಬಾದಿಂದ ಕೀನ್ಯಾದ ರಾಜಧಾನಿ ನೈರೋಬಿಯಗೆ ತೆರಳುತ್ತಿದ್ದಾಗ ಮಾರ್ಗ ಮಧ್ಯೆ ವಿಮಾನ ಪತನ ಆಗಿತ್ತು. ಈ ವಿಮಾನದಲ್ಲಿ ಪ್ರಯಾಣಿಸುತ್ತಿದ್ದವರಲ್ಲಿ 32 ದೇಶಗಳ ಪ್ರಯಾಣಿಕರಿದ್ದರು.

    ಇದರಲ್ಲಿ ಅತಿ ಹೆಚ್ಚು ಅಂದರೆ 32 ಮಂದಿ ಕೀನ್ಯಾ, ಕೆನಡಾ 18, ಇಥಿಯೋಪಿಯಾ 9, ಇಟಲಿ, ಅಮೆರಿಕ, ಚೀನಾ ದೇಶಗಳ ತಲಾ 8 ಮಂದಿ ಸೇರಿದ್ದಾರೆ ಎಂದು ಮಾಧ್ಯಮವೊಂದು ಮಾಹಿತಿ ವರದಿ ಮಾಡಿದೆ.

    ಉಳಿದಂತೆ ಇಂಗ್ಲೆಂಡ್‍ನ ಮತ್ತು ಫ್ರಾನ್ಸಿನ ತಲಾ 7 ಮಂದಿ ಹಾಗೂ ಈಜಿಪ್ಟ್ 6, ನೆದಲ್ರ್ಯಾಂಡ್ಸ್‍ನ 5, ಭಾರತ 4 ಮಂದಿ ಪ್ರಯಾಣಿಸುತ್ತಿದ್ದರು. ಇಥಿಯೋಪಿಯನ್ ಕಾಲಮಾನದ ಪ್ರಕಾರ ಬೆಳಗ್ಗೆ 8:38ಕ್ಕೆ ಟೇಕಾಫ್ ಆಗಿದ್ದ ವಿಮಾನ 8:44ಕ್ಕೆ ಸಂಪರ್ಕ ಕಳೆದುಕೊಂಡು ಅಪಘಾತಕ್ಕಿಡಾಗಿತ್ತು. 10:05 ಗಂಟೆಗೆ ವಿಮಾನ ನೈರೋಬಿಯಗೆ ತಲುಪಬೇಕಾಗಿತ್ತು. ಸದ್ಯ ಪ್ರಯಾಣಿಕರ ಸ್ನೇಹಿತರು, ಪೊಲೀಸರು ನೈರೋಬಿ ವಿಮಾನ ನಿಲ್ದಾಣದಲ್ಲೇ ಕಾದುಕುಳಿತ್ತಿದ್ದಾರೆ.

    ವಿಮಾನ ಅವಘಡದಲ್ಲಿ ಸಾವನ್ನಪ್ಪಿದ ಕುಟುಂಬಸ್ಥರಿಗೆ ಇಥಿಯೋಪಿಯನ್ ಪ್ರಧಾನಿ ಕಚೇರಿ ಟ್ವೀಟ್ ಮಾಡಿ ಸಂತಾಪ ಸೂಚಿಸಿದೆ. ಅಲ್ಲದೇ ರಕ್ಷಣಾ ಕಾರ್ಯ ಮುಂದುವರಿದಿದೆ ಎಂಬ ಮಾಹಿತಿ ನೀಡಿದ್ದಾರೆ. ಘಟನೆಯಲ್ಲಿ ಉಂಟಾಗಿರುವ ಸಾವು ನೋವಿನ ಬಗ್ಗೆ ಖಚಿತ ಮಾಹಿತಿ ಲಭಿಸಿಲ್ಲ. ಇಥಿಯೋಪಿಯಾ ಪೂರ್ವ ಆಫ್ರಿಕಾದ ಪ್ರಮುಖ ರಾಷ್ಟ್ರವಾಗಿದೆ. ವಿಮಾನ ಪತನಕ್ಕೆ ಕಾರಣ ಏನು ಎನ್ನುವುದು ತಿಳಿದು ಬಂದಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಟೇಕಾಫ್ ಆದ 6 ನಿಮಿಷಕ್ಕೆ ಪತನ : ವಿಮಾನ ದುರಂತಕ್ಕೆ 157 ಮಂದಿ ಬಲಿ

    ಟೇಕಾಫ್ ಆದ 6 ನಿಮಿಷಕ್ಕೆ ಪತನ : ವಿಮಾನ ದುರಂತಕ್ಕೆ 157 ಮಂದಿ ಬಲಿ

    ಆಡಿಸ್ ಅಬಬಾ: ಇಥಿಯೋಪಿಯನ್ ಏರ್ ಲೈನ್ಸ್ ವಿಮಾನ ಪತನಗೊಂಡು 157 ಮಂದಿ ಮೃತಪಟ್ಟಿದ್ದಾರೆ. ಇಥಿಯೋಪಿಯದ ರಾಜಧಾನಿ ಆಡಿಸ್ ಅಬಬಾದಿಂದ ಕೀನ್ಯಾದ ರಾಜಧಾನಿ ನೈರೋಬಿಯಗೆ ತೆರಳುತ್ತಿದ್ದಾಗ ಮಾರ್ಗ ಮಧ್ಯೆ ಅವಘಡ ಸಂಭವಿಸಿದೆ.

    ಆಡಿಸ್ ಅಬಬಾದಿಂದ 62 ಕಿ.ಮೀ ದೂರದಲ್ಲಿರುವ ಬಿಷೊಫ್ಟು ಬಳಿ ವಿಮಾನ ಪತನಗೊಂಡಿದೆ. ಇಥಿಯೋಪಿಯನ್ ಕಾಲಮಾನದ ಪ್ರಕಾರ ಬೆಳಗ್ಗೆ 8:38ಕ್ಕೆ ಟೇಕಾಫ್ ಆಗಿದ್ದ ವಿಮಾನ 8:44ಕ್ಕೆ ಸಂಪರ್ಕ ಕಳೆದುಕೊಂಡು ಅಪಘಾತಕ್ಕಿಡಾಗಿದೆ. ಒಟ್ಟು 33 ದೇಶದ ಪ್ರಯಾಣಿಕರು ಈ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು.

    ಈ ಬಗ್ಗೆ ಏರ್ ಲೈನ್ಸ್ ವಕ್ತಾರರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, 8 ಮಂದಿ ಸಿಬ್ಬಂದಿ 147 ಮಂದಿ ಪ್ರಯಾಣಿಕರಿದ್ದ ಬೋಯಿಂಗ್ 737-8 ಮ್ಯಾಕ್ಸ್ ಹೆಸರಿನ ವಿಮಾನ ಪತನವಾಗಿದೆ. ಬೆಳಗ್ಗೆ 8.40ರ ವೇಳೆಗೆ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ.

    ವಿಮಾನ ಅವಘದಲ್ಲಿ ಸಾವನ್ನಪ್ಪಿದ ಕುಟುಂಬಸ್ಥರಿಗೆ ಇಥಿಯೋಪಿಯನ್ ಪ್ರಧಾನಿ ಕಚೇರಿ ಟ್ವೀಟ್ ಮಾಡಿ ಸಂತಾಪ ಸೂಚಿಸಿದೆ. ಅಲ್ಲದೇ ರಕ್ಷಣಾ ಕಾರ್ಯ ಮುಂದುವರಿದಿದೆ ಎಂಬ ಮಾಹಿತಿ ನೀಡಿದ್ದಾರೆ. ಘಟನೆಯಲ್ಲಿ ಉಂಟಾಗಿರುವ ಸಾವು ನೋವಿನ ಬಗ್ಗೆ ಖಚಿತ ಮಾಹಿತಿ ಲಭಿಸಿಲ್ಲ. ಇಥಿಯೋಪಿಯಾ ಪೂರ್ವ ಆಫ್ರಿಕಾದ ಪ್ರಮುಖ ರಾಷ್ಟ್ರವಾಗಿದೆ. ವಿಮಾನ ಪತನಕ್ಕೆ ಕಾರಣ ಏನು ಎನ್ನುವುದು ತಿಳಿದು ಬಂದಿಲ್ಲ.

    ಇತ್ತ ಶನಿವಾರ ಕೊಲಂಬಿಯಾದ ಮೆಟಾ ಪ್ರದೇಶದಲ್ಲಿ ಶನಿವಾರ ಸಂಭವಿಸಿದ್ದ ವಿಮಾನ ಅವಘಡದಲ್ಲಿ 14 ಮಂದಿ ಸಾವನ್ನಪ್ಪಿದ್ದಾರೆ. ಕೊಲಂಬಿಯಾ ಸಿವಿಲ್ ಎರೋನಾಟಿಕ್ಸ್ ವಿಶೇಷ ಆಡಳಿತ ಮಂಡಳಿ ವಿಭಾಗ ಈ ಬಗ್ಗೆ ಮಾಹಿತಿ ನೀಡಿದ್ದು, ಪ್ರೊಪೆಲ್ಲರ್ ಪ್ಲೇನ್ ಡೌಗ್ಲಾನ್ ಡಿಸಿ-3 ವಿಮಾನವು ಸ್ಯಾನ್ ಜೋಸ್ ಡೆಲ್ ಗುವಿಯಾರೆ ಮತ್ತು ವಿಲ್ಲವಿಸೆನ್ಸಿಯೊ ನಗರಗಳ ನಡುವಿನ ಮೆಟಾ ಪ್ರದೇಶದಲ್ಲಿ ಪತನಗೊಂಡಿದೆ ಎಂದು ಸ್ಪಷ್ಟಪಡಿಸಿದ್ದಾರೆ. ವಿಮಾನ ಹಾರಾಟ ವೇಳೆ ಎಂಜಿನ್ ಫೇಲ್ ಆದ ಪರಿಣಾಮ ದುರ್ಘಟನೆ ನಡೆದಿದೆ ಎಂಬ ಮಾಹಿತಿ ಲಭಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ರೇಸ್ ಟ್ರ್ಯಾಕ್‍ನಿಂದಲೇ ಹೊರ ಹಾರಿತು 17ರ ಯುವತಿ ಡ್ರೈವ್ ಮಾಡ್ತಿದ್ದ ಕಾರ್-ವಿಡಿಯೋ ವೈರಲ್

    ರೇಸ್ ಟ್ರ್ಯಾಕ್‍ನಿಂದಲೇ ಹೊರ ಹಾರಿತು 17ರ ಯುವತಿ ಡ್ರೈವ್ ಮಾಡ್ತಿದ್ದ ಕಾರ್-ವಿಡಿಯೋ ವೈರಲ್

    ಮಕಾವ್: ಫಾರ್ಮುಲಾ ಥ್ರೀ ಮಕಾವ್ ಗ್ರ್ಯಾಂಡ್ ಪ್ರಿಕ್ಸ್ ರೇಸಿಂಗ್ ನಲ್ಲಿ 17ರ ಯುವತಿಯೊಬ್ಬಳು ಗಂಟೆಗೆ 274 ಕಿ.ಮೀ ವೇಗದಲ್ಲಿ ಕಾರನ್ನು ಕ್ರ್ಯಾಶ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಭಾನುವಾರ ಗೀಯಾ ಸರ್ಕ್ಯೂಟ್‍ನಲ್ಲಿ “ಫಾರ್ಮುಲಾ ಥ್ರೀ ಮಕಾವ್ ಗ್ರ್ಯಾಂಡ್ ಪ್ರಿಕ್ಸ್” ರೇಸಿಂಗ್ ಸ್ಪರ್ಧೆ ಆಯೋಜಿಸಲಾಗಿತ್ತು. ಈ ರೇಸಿಂಗ್‍ನಲ್ಲಿ ವಿಶ್ವದ ಪ್ರಖ್ಯಾತ ಮಹಿಳಾ ರೇಸರ್ ಗಳು ಭಾಗಿಯಾಗಿದ್ದರು. ಈ ರೇಸಿಂಗ್‍ನಲ್ಲಿ ಜರ್ಮನಿಯ 17 ವರ್ಷದ ಸೋಫಿಯಾ ಫ್ಲೋರ್ಸ್ಚ್ 270 ಕಿ.ಮೀ. ವೇಗದಲ್ಲಿ ಚಲಾಯಿಸುತ್ತಿದ್ದಾಗ, ಆಕೆಯ ಕಾರು ನಿಯಂತ್ರಣ ತಪ್ಪಿ ಮುಂದೆ ಹೋಗುತ್ತಿದ್ದ ಜಪಾನ್ ರೇಸರ್ ಷೋ ಟ್ಸುಬಾಯ್ ಅವರ ಕಾರಿಗೆ ಡಿಕ್ಕಿ ಹೊಡೆದು, ನಂತರ ಅದೇ ವೇಗದಲ್ಲಿ ಗಾಳಿಯಲ್ಲಿ ಹಾರಿ ಮುಂದಿದ್ದ ಬ್ಯಾರಿಕೇಡ್‍ಗೆ ಡಿಕ್ಕಿ ಹೊಡೆದಿದೆ.

    ಕಾರ್ ಹಾರಿ ಬಿದ್ದ ಪರಿಣಾಮ, ಸೋಫಿಯಾ ಪ್ರಜ್ಞಾಹೀನರಾಗಿದ್ದು, ಷೋ ಟ್ಸುಬಾಯ್ ಹಾಗೂ ಇಬ್ಬರು ಛಾಯಾಚಿತ್ರಗಾರರ ಸ್ಥಿತಿಯೂ ಗಂಭೀರವಾಗಿದೆ. ಕೂಡಲೇ ಎಚ್ಚೆತ್ತ ಫಾರ್ಮುಲಾ ರೇಸಿಂಗ್ ಸಿಬ್ಬಂದಿ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಸದ್ಯ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿರುವ ಬಗ್ಗೆ ಮಾಹಿತಿ ಲಭಿಸಿದೆ.

    ಸೋಫಿಯಾ ಚಲಾಯಿಸುತ್ತಿದ್ದ ಕಾರ್ ಹಾರಿ ಮುಂದಿರುವ ಬ್ಯಾರಿಕೇಡ್‍ಗೆ ಡಿಕ್ಕಿ ಹೊಡೆಯುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಅಲ್ಲದೇ ಇದೇ ಗೀಯಾ ಸರ್ಕ್ಯೂಟ್‍ನಲ್ಲಿ ಈ ಹಿಂದೆಯೂ ಇಂತಹ ಅವಘಡಗಳು ಸಂಭವಿಸಿ, ಮೂವರು ರೇಸರ್ ಗಳು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಪತ್ರಿಕೆ ವರದಿ ಮಾಡಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews