Tag: crane

  • Bengaluru | ರಿಪೇರಿ ಮಾಡುತ್ತಿದ್ದಾಗ ಕ್ರೇನ್ ತುಂಡಾಗಿ ಬಿದ್ದು ಐವರಿಗೆ ಗಾಯ – ಓರ್ವ ಗಂಭೀರ

    Bengaluru | ರಿಪೇರಿ ಮಾಡುತ್ತಿದ್ದಾಗ ಕ್ರೇನ್ ತುಂಡಾಗಿ ಬಿದ್ದು ಐವರಿಗೆ ಗಾಯ – ಓರ್ವ ಗಂಭೀರ

    ಬೆಂಗಳೂರು: ರಿಪೇರಿ ಮಾಡುತ್ತಿದ್ದ ವೇಳೆ ಕ್ರೇನ್ (Crane) ತುಂಡಾಗಿ ಬಿದ್ದ ಪರಿಣಾಮ ಐವರು ಗಾಯಗೊಂಡಿದ್ದು, ಓರ್ವ ಗಂಭೀರ ಗಾಯಗೊಂಡಿರುವ ಘಟನೆ ಬೆಂಗಳೂರು ಹೊರವಲಯದ ಮೇಡಹಳ್ಳಿ (Medahalli ) ಬಳಿ ನಡೆದಿದೆ.

    ಎಎಸ್ ಕ್ರೇನ್ ಸರ್ವೀಸ್ ವತಿಯಿಂದ ಅವಘಡ ಉಂಟಾಗಿದೆ. ಖಾಸಗಿ, ಜನ ವಸತಿ ಪ್ರದೇಶದಲ್ಲಿ ಕ್ರೇನ್ ರಿಪೇರಿ ಜಾಗವಿದ್ದು, ಕ್ರೇನ್ ರಿಪೇರಿ ಮಾಡುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಗಾಯಾಳುಗಳನ್ನು ಭಟ್ಟರಹಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಲೂಲೂ (30), ಕರ್ಬನ್ (19), ಇಲ್ಲಾಜ್ (38), ಸಮೀರ್ (28), ಶಾಮದೇವ್ (52) ಗಾಯಾಳುಗಳು. ಇದನ್ನೂ ಓದಿ: ಪಾಕಿಸ್ತಾನದ 58 ಸೈನಿಕರ ಹತ್ಯೆ, 30 ಮಂದಿಗೆ ಗಾಯ: ಅಫ್ಘಾನಿಸ್ತಾನ

    ಜನವಸತಿ ಪ್ರದೇಶದಲ್ಲಿ ಕ್ರೇನ್ ಸರ್ವಿಸ್ ಕಾರ್ಯ ಆರಂಭಿಸಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಹಲವು ಬಾರಿ ಪೊಲೀಸ್ ಠಾಣೆಗೆ ಹಾಗೂ ಬಿಬಿಎಂಪಿ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರೂ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಸ್ಥಳೀಯರು ಅಸಮಾಧಾನ ಹೊರಹಾಕಿದ್ದಾರೆ. ಘಟನೆ ಸಂಬಂಧ ಅವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಈ ಪ್ರತಾಪ್ ಸಿಂಹ ಯಾರ್ರೀ, ಅವರ ಆರೋಪ ಗಂಭೀರವಾಗಿ ತೆಗೆದುಕೊಳ್ಳಬೇಕಿಲ್ಲ: ಯತೀಂದ್ರ ಸಿದ್ದರಾಮಯ್ಯ

  • ವಿಜಯಪುರ | ಬೈಕ್ ಸವಾರನ ಮೇಲೆ ಕ್ರೇನ್ ಹರಿದು ಸ್ಥಳದಲ್ಲೇ ಸಾವು

    ವಿಜಯಪುರ | ಬೈಕ್ ಸವಾರನ ಮೇಲೆ ಕ್ರೇನ್ ಹರಿದು ಸ್ಥಳದಲ್ಲೇ ಸಾವು

    ವಿಜಯಪುರ: ಬೈಕ್ ಸವಾರನ ಮೇಲೆ ಕ್ರೇನ್ ಹರಿದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮುದ್ದೇಬಿಹಾಳ (Muddebihal) ತಾಲೂಕಿನ ನಾಲತವಾಡ ಪಟ್ಟಣದಲ್ಲಿ ನಡೆದಿದೆ.

    ಮೃತ ವ್ಯಕ್ತಿಯನ್ನು ರಾಯಚೂರು (Raichuru) ಜಿಲ್ಲೆಯ ಲಿಂಗಸಗೂರು (Lingasaguru) ತಾಲೂಕಿನ ನಾಗರಹಾಳ ಗ್ರಾಮದ ನಿವಾಸಿ ಶಿವಪುತ್ರಪ್ಪ ಭಜಂತ್ರಿ (40) ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಫ್ಯಾನ್ಸ್‌ಗೆ ಸಿಹಿಸುದ್ದಿ- ಹೊಸ ರಿಲೀಸ್ ಡೇಟ್ ಅನೌನ್ಸ್ ಮಾಡಿದ ‘ಪುಷ್ಪ 2’ ಟೀಮ್

    ಪಟ್ಟಣದ ಹೋಂಡಾ ಶೋರೂಂ ಬಳಿ ಮುದ್ದೇಬಿಹಾಳ-ನಾರಾಯಣಪುರ ರಾಜ್ಯ ಹೆದ್ದಾರಿಯಲ್ಲಿ ಘಟನೆ ನಡೆದಿದೆ. ಅಪಘಾತದ ಬಳಿಕ ಸ್ಥಳದಲ್ಲೇ ಕ್ರೇನ್ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ.

    ಸ್ಥಳಕ್ಕೆ ಮುದ್ದೇಬಿಹಾಳ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಸದ್ಯ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ (Muddebihal Police Station) ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಚನ್ನಪಟ್ಟಣದಲ್ಲಿ ನಂಬಿಕೆ ದ್ರೋಹಿಗಳಿಗೆ ಜನ ಪಾಠ ಕಲಿಸ್ತಾರೆ: ಬಿಎಸ್‌ವೈ

  • ಬೆಂಗಳೂರಿನ ನಡುರಸ್ತೆಯಲ್ಲಿ ಹೊತ್ತಿ ಉರಿದ ಬೃಹತ್ ಗಾತ್ರದ ಕ್ರೇನ್

    ಬೆಂಗಳೂರಿನ ನಡುರಸ್ತೆಯಲ್ಲಿ ಹೊತ್ತಿ ಉರಿದ ಬೃಹತ್ ಗಾತ್ರದ ಕ್ರೇನ್

    ಬೆಂಗಳೂರು: ನಡುರಸ್ತೆಯಲ್ಲಿ ಬೃಹತ್ ಗಾತ್ರದ ಕ್ರೇನ್ (Crane) ಒಂದು ಹೊತ್ತಿ ಉರಿದಿರುವ ಘಟನೆ ನಗರದ ಯಲಚೇನಹಳ್ಳಿ (Yelachenahalli) ಮೆಟ್ರೋ ಸ್ಟೇಷನ್ ಬಳಿ ರಾತ್ರಿ ನಡೆದಿದೆ.

    ರಸ್ತೆ ನಡುವೆಯೇ ಕ್ರೇನ್‌ಗೆ ಬೆಂಕಿ (Fire) ತಗುಲಿ ಹೊತ್ತಿ ಉರಿದಿದೆ. ಸ್ಥಳಕ್ಕೆ 2 ಅಗ್ನಿಶಾಮಕ ವಾಹನಗಳು ಆಗಮಿಸಿ, ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ.

    ವರ್ತೂರಿನಿಂದ ಬಿಡದಿಗೆ ತೆರಳುತ್ತಿದ್ದ ಕ್ರೇನ್ ಇದಾಗಿದ್ದು, ಆರಂಭದಲ್ಲಿ ಕ್ರೇನ್‌ನ ಮುಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಚಾಲಕ ಕ್ರೇನ್ ಅನ್ನು ರಸ್ತೆ ಪಕ್ಕ ನಿಲ್ಲಿಸಿದ್ದಾನೆ. ಬೆಂಕಿ ಜಾಸ್ತಿಯಾಗುತ್ತಿದ್ದಂತೆ ಕ್ರೇನ್‌ನಲ್ಲಿದ್ದ ಮೂವರು ಕೆಳಗೆ ಇಳಿದಿದ್ದಾರೆ. ತಕ್ಷಣ ವಾಹನ ಸಂಚಾರವನ್ನೂ ನಿರ್ಬಂಧಿಸಲಾಗಿದೆ. ಇದನ್ನೂ ಓದಿ: Breaking – ಮೆಟ್ರೋ ಹಸಿರು ಮಾರ್ಗದ ಸಂಚಾರದಲ್ಲಿ ಭಾರೀ ವ್ಯತ್ಯಯ

    ಕೇನ್‌ನ ಮುಂಭಾಗದಲ್ಲಿರುವ ಆಯಿಲ್ ಮತ್ತು ವೈರ್‌ನಿಂದ ಬೆಂಕಿಯ ಪ್ರಮಾಣ ಹೆಚ್ಚಾಗಿದೆ. ತಕ್ಷಣ ಸ್ಥಳೀಯರು, ಪೊಲೀಸರಿಂದ ಅಗ್ನಿಶಾಮಕ ದಳಕ್ಕೆ ಮಾಹಿತಿ ದೊರೆತಿದೆ. ತಕ್ಷಣ ಸ್ಥಳಕ್ಕೆ ಬಂದ 2 ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಂದಿಸಲಾಗಿದೆ.

    ಬೆಂಕಿ ಹೊತ್ತಿಕೊಂಡ ಸ್ಥಳದ ಪಕ್ಕದಲ್ಲೇ ಪೆಟ್ರೋಲ್ ಬಂಕ್ ಕೂಡಾ ಇತ್ತು. ಅದೃಷ್ಟವಶಾತ್ ಯಾವುದೇ ದುರ್ಘಟನೆ ಸಂಭವಿಸಿಲ್ಲ. ಇದನ್ನೂ ಓದಿ: ಶಿವಮೊಗ್ಗದಲ್ಲಿ ಸೆಕ್ಷನ್ 144 ಜಾರಿ – ವರ್ತಕರು, ಬಿಜೆಪಿ ಮುಖಂಡರು ವಿರೋಧ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಎಕ್ಸ್‌ಪ್ರೆಸ್ ವೇ ನಿರ್ಮಾಣದ ವೇಳೆ ಕ್ರೇನ್ ಕುಸಿದು 16 ಮಂದಿ ಕಾರ್ಮಿಕರು ದುರ್ಮರಣ

    ಎಕ್ಸ್‌ಪ್ರೆಸ್ ವೇ ನಿರ್ಮಾಣದ ವೇಳೆ ಕ್ರೇನ್ ಕುಸಿದು 16 ಮಂದಿ ಕಾರ್ಮಿಕರು ದುರ್ಮರಣ

    ಮುಂಬೈ: ಸಮೃದ್ಧಿ ಎಕ್ಸ್‌ಪ್ರೆಸ್ ವೇಯ (Samruddhi Expressway) ಮೂರನೇ ಹಂತದ ನಿರ್ಮಾಣದ ವೇಳೆ ಸೇತುವೆಯ ಚಪ್ಪಡಿಯ ಮೇಲೆ ಕ್ರೇನ್ (Crane) ಕುಸಿದು ಬಿದ್ದಿದ್ದು, 16 ಮಂದಿ ಕಾರ್ಮಿಕರು (Workers) ಸಾವನ್ನಪ್ಪಿದ ಘಟನೆ ಮಹಾರಾಷ್ಟ್ರದ (Maharashtra) ಥಾಣೆ (Thane) ಜಿಲ್ಲೆಯಲ್ಲಿ ನಡೆದಿದೆ.

    ಸೋಮವಾರ ಮಧ್ಯರಾತ್ರಿ 12 ಗಂಟೆಯ ವೇಳೆ ಘಟನೆ ನಡೆದಿದ್ದು, ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೊಬೈಲ್ ಗ್ಯಾಂಟ್ರಿ ಕ್ರೇನ್ ಅನ್ನು ಸೇತುವೆ ನಿರ್ಮಾಣದಲ್ಲಿ ಮತ್ತು ಹೆದ್ದಾರಿ ನಿರ್ಮಾಣ ಯೋಜನೆಗಳಲ್ಲಿ ಪ್ರಿಕಾಸ್ಟ್ ಬಾಕ್ಸ್‌ಗಳನ್ನು ಸ್ಥಾಪಿಸಲು ಬಳಸಲಾಗುತ್ತದೆ. ಇದನ್ನೂ ಓದಿ: ವಿಶ್ವ ಹಿಂದೂ ಪರಿಷತ್‌ ಮೆರವಣಿಗೆ ಮೇಲೆ ಕಲ್ಲು ತೂರಾಟ – ಹರಿಯಾಣದಲ್ಲಿ ಹಿಂಸಾಚಾರ, ಇಬ್ಬರು ಸಾವು

    ಮುಂಬೈನಿಂದ 80 ಕಿಲೋ ಮೀಟರ್ ದೂರದಲ್ಲಿರುವ ಶಹಪುರ್ ತೆಹಸಿಲ್ ಸರ್ಲಾಂಬೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಘಟನೆ ನಡೆದ ತಕ್ಷಣವೇ ಪೊಲೀಸರು, ಅಗ್ನಿಶಾಮಕ ದಳ ಮತ್ತು ಎನ್‌ಡಿಆರ್‌ಎಫ್ ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಗಾಯಗೊಂಡ ಮೂವರನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ. ಇದನ್ನೂ ಓದಿ: ಉಗ್ರ ಅಫ್ಸರ್ ಪಾಷಾ ಮಂಗಳೂರು ಸ್ಫೋಟದ ಮಾಸ್ಟರ್ ಮೈಂಡ್ – ಶಾರೀಕ್‌ಗೆ ಜೈಲಿನಲ್ಲೇ ತರಬೇತಿ

    ಮಂಗಳವಾರ ಮುಂಜಾನೆ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದ ಎಂಎಸ್‌ಆರ್‌ಡಿಸಿ ಸಚಿವ ದಾದಾ ಭೂಸೆ, ಅವಶೇಷಗಳ ಅಡಿಯಲ್ಲಿ ಇನ್ನಷ್ಟು ಮಂದಿ ಸಿಲುಕಿರುವ ಸಾಧ್ಯತೆ ಇದ್ದು, ರಕ್ಷಣಾ ಕಾರ್ಯ ಮುಂದುವರೆಯುತ್ತಿದೆ ಎಂದರು. ಅಧಿಕಾರಿಗಳ ಪ್ರಕಾರ ಕನಿಷ್ಟ ಆರು ಮಂದಿ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಚಲಿಸುತ್ತಿದ್ದ ರೈಲಿನಲ್ಲಿ ನಾಲ್ವರನ್ನು ಗುಂಡಿಕ್ಕಿ ಕೊಂದ ಆರ್‌ಪಿಎಫ್ ಪೇದೆ

    ಘಟನೆಯ ಕುರಿತು ಪ್ರಧಾನಿ ನರೇಂದ್ರ ಮೋದಿ (Narendra Modi) ಸಂತಾಪ ಸೂಚಿಸಿದ್ದು, ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ಮೃತಪಟ್ಟವರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಅಲ್ಲದೇ ಗಾಯಾಳುಗಳಿಗೆ ತಲಾ 50,000 ರೂ. ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಇದನ್ನೂ ಓದಿ: 5 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಹತ್ಯೆಗೈದ ಪಾಪಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದೇಗುಲ ಉತ್ಸವದ ವೇಳೆ ನೆಲಕ್ಕಪ್ಪಳಿಸಿದ ಕ್ರೇನ್ – ನಾಲ್ವರ ದುರ್ಮರಣ

    ದೇಗುಲ ಉತ್ಸವದ ವೇಳೆ ನೆಲಕ್ಕಪ್ಪಳಿಸಿದ ಕ್ರೇನ್ – ನಾಲ್ವರ ದುರ್ಮರಣ

    ಚೆನ್ನೈ: ದೇವಾಲಯದ ಉತ್ಸವದ (Temple Festival) ವೇಳೆ ಕ್ರೇನ್ (Crane) ಒಂದು ಕುಸಿದು ಬಿದ್ದು ನಾಲ್ವರು ದುರ್ಮರಣ ಹೊಂದಿರುವ ಘಟನೆ ತಮಿಳುನಾಡಿನಲ್ಲಿ (Tamil Nadu) ನಡೆದಿದೆ.

    ತಮಿಳುನಾಡಿನ ರಾಣಿಪೇಟೆಯಲ್ಲಿರುವ ದ್ರೌಪತಿ ದೇವಾಲಯದಲ್ಲಿ ಅಪಘಾತ ವರದಿಯಾಗಿದೆ. ಭಾನುವಾರ ಸಂಜೆ ಕ್ರೇನ್ ಕುಸಿದು ಬಿದ್ದಿದ್ದರಿಂದ ನೆರೆದಿದ್ದ ನಾಲ್ವರು ಸಾವನ್ನಪ್ಪಿದ್ದಾರೆ. 5 ಜನರು ಗಾಯಗೊಂಡಿದ್ದಾರೆ.

    ವರದಿಗಳ ಪ್ರಕಾರ, ಪೊಂಗಲ್ ಬಳಿಕ ನಡೆಯುವ ದ್ರೌಪತಿ ಅಮ್ಮನವರ ಹಬ್ಬದ ಅಂಗವಾಗಿ ಮೆರವಣಿಗೆ ನಡೆಸಲಾಗುತ್ತಿತ್ತು. ಈ ವೇಳೆ ದೇವಿಯ ವಿಗ್ರಹವನ್ನು ಹೊತ್ತಿದ್ದ ಕ್ರೇನ್ ಏಕಾಏಕಿ ಕುಸಿದು ಬಿದ್ದಿದೆ. ಕ್ರೇನ್ ನೆಲಕ್ಕಪ್ಪಳಿಸುತ್ತಿದ್ದಂತೆ ನೆರೆದಿದ್ದ ಭಕ್ತರು ಭಯಭೀತರಾಗಿ ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ. ಇದರ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲೂ ಹರಿದಾಡಿದೆ. ಇದನ್ನೂ ಓದಿ: ಅಜ್ಮೀರ್ ದರ್ಗಾಗೆ ರೆಡ್ಡಿ ಭೇಟಿ – ಕಾಂಗ್ರೆಸ್ ಪಾಳಯಕ್ಕೆ ಮರ್ಮಾಘಾತ

    ಕ್ರೇನ್‌ನ ಒಂದು ಭಾಗ ಎತ್ತರದ ಪ್ರದೇಶದಲ್ಲಿದ್ದು, ನೆಲದ ಅಸಮತೋಲನದಿಂದಲೇ ಅದು ಉರುಳಿ ಬಿದ್ದಿದೆ ಎನ್ನಲಾಗಿದೆ. ಘಟನೆ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಕ್ರೇನ್ ನಿರ್ವಾಹಕನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ರಾಣಿಪೇಟೆ ಜಿಲ್ಲಾಧಿಕಾರಿ ಭಾಸ್ಕರ ಪಾಂಡಿಯನ್ ತಿಳಿಸಿದ್ದಾರೆ.

    ದೇವಾಲಯದ ಉತ್ಸವದಲ್ಲಿ ಕ್ರೇನ್ ಬಳಸಲು ಯಾವುದೇ ಅನುಮತಿ ಅಥವಾ ಸೂಚನೆ ಇರಲಿಲ್ಲ. ಇದು ಖಾಸಗಿ ದೇವಾಲಯವಾಗಿದೆ ಎಂದು ಪಾಂಡಿಯನ್ ಹೇಳಿದ್ದಾರೆ. ಇದನ್ನೂ ಓದಿ: ಶೀಘ್ರದಲ್ಲಿ ತ್ರಿ ಸದಸ್ಯ ಪೀಠದಲ್ಲಿ ಹಿಜಬ್ ಪ್ರಕರಣದ ವಿಚಾರಣೆ ನಡೆಸಲಾಗುವುದು: ಸಿಜೆಐ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪಲ್ಟಿಯಾಗಿದ್ದ ಲಾರಿ ಎತ್ತಲು ಹೋದ ಕ್ರೇನ್ ಕೂಡ ಪಲ್ಟಿ!

    ಪಲ್ಟಿಯಾಗಿದ್ದ ಲಾರಿ ಎತ್ತಲು ಹೋದ ಕ್ರೇನ್ ಕೂಡ ಪಲ್ಟಿ!

    ರಾಯಚೂರು: ಹಳ್ಳದ ಸೇತುವೆ ಕುಸಿದು ಪಲ್ಟಿಯಾಗಿದ್ದ ಲಾರಿ ಎತ್ತಲು ಹೋಗಿ ಕ್ರೇನ್ ಪಲ್ಟಿಯಾದ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಮಲ್ಲದಗುಡ್ಡ ಬಳಿ ನಡೆದಿದೆ.

    ಅಕಾಲಿಕ ಮಳೆಯ ಹಿನ್ನೆಲೆ ನ.21ರಂದು ಲಾರಿ ಪಲ್ಟಿಯಾಗಿತ್ತು. ಇಂದು ಆ ಲಾರಿಯನ್ನ ತೆರವು ಮಾಡಲು ಹೋದ ಕ್ರೇನ್ ಸಹ ಪಲ್ಟಿಯಾಗಿದೆ. ಪರಿಣಾಮ ಕ್ರೇನ್ ಚಾಲಕನಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಬಿಜೆಪಿ ಏನು ಮಳೆ ನಿಲ್ಲಿಸೋಕೆ ಆಗುತ್ತಾ – ಈಶ್ವರಪ್ಪ ಬೇಜವಾಬ್ದಾರಿ ಹೇಳಿಕೆ

    ನಿನ್ನೆ ಲಾರಿ ಪಲ್ಟಿಯಾಗಿ 350 ಚೀಲ ಭತ್ತ ನೀರು ಪಾಲಾಗಿತ್ತು. ಸತತ ಮಳೆಯಿಂದ ಹಳ್ಳದ ಸೇತುವೆ ಕುಸಿತವಾಗಿ ಲಾರಿ ಪಲ್ಟಿ ಹೊಡೆದಿತ್ತು. ಮಲ್ಲದಗುಡ್ಡ ತೋರಣದಿನ್ನಿ ರಸ್ತೆಯಲ್ಲಿ ಲಾರಿ ಕುಸಿದು ಬಿದ್ದಿತ್ತು. ಭತ್ತದ ಚೀಲಗಳನ್ನ ಬೇರೆಡೆ ಸಾಗಿಸಿ, ಲಾರಿ ಮೇಲಕ್ಕೆ ಎತ್ತುವಾಗ ಘಟನೆ ನಡೆದಿದೆ. ಲಾರಿಯ ಭಾರಕ್ಕೆ ಮೇಲೆತ್ತುವಾಗ ಆಯಾತಪ್ಪಿ ಕ್ರೇನ್ ಪಲ್ಟಿ ಹೊಡೆದಿದೆ.

  • ನಮ್ಮ ಮೆಟ್ರೋ ಕಾಮಗಾರಿ ವೇಳೆ ಮತ್ತೊಂದು ಅವಾಂತರ – 40 ಅಡಿ ಎತ್ತರದಿಂದ ಕೆಳಗೆ ಬಿದ್ದ ಕ್ರೇನ್

    ನಮ್ಮ ಮೆಟ್ರೋ ಕಾಮಗಾರಿ ವೇಳೆ ಮತ್ತೊಂದು ಅವಾಂತರ – 40 ಅಡಿ ಎತ್ತರದಿಂದ ಕೆಳಗೆ ಬಿದ್ದ ಕ್ರೇನ್

    ಬೆಂಗಳೂರು: ನಗರದ ಸಿಲ್ಕ್ ಬೋರ್ಡ್ ಬಳಿಯ ನಮ್ಮ ಮೆಟ್ರೋ ಕಾಮಗಾರಿ ವೇಳೆ ಸಂಭವಿಸಬೇಕಾಗಿದ್ದ ಭಾರೀ ಅನಾಹುತ ತಪ್ಪಿದೆ.

    ನಮ್ಮ ಮೆಟ್ರೋ ಫೇಸ್ -2 ಕಾಮಗಾರಿ ವೇಳೆ ಸಿಬ್ಬಂದಿ ನಿರ್ಲಕ್ಷ್ಯದಿಂದಾಗಿ ಮೆಟ್ರೋ ಸಗ್ಮೆಂಟ್ಸ್ ಜೋಡಿಸುವ ಯಂತ್ರ ಅರ್ಧಕ್ಕೆ ತುಂಡಾಗಿ  ನಲವತ್ತು ಅಡಿ ಎತ್ತರದಿಂದ ಕ್ರೇನ್ ಕೆಳಗೆ ಬಿದ್ದಿದೆ. ಬೆಳಗ್ಗೆ 6:30ರ ಸುಮಾರಿಗೆ ಈ ಘಟನೆ ನಡೆದಿದ್ದು, ಭಾರೀ ಅನಾಹುದಿಂದ ನೂರಾರು ಮೆಟ್ರೋ ಕಾರ್ಮಿಕರು ಪಾರಾಗಿದ್ದಾರೆ. ಇದನ್ನೂ ಓದಿ: 14 ವರ್ಷದ ಬಳಿಕ ಬೆಂಕಿಪೊಟ್ಟಣದ ಬೆಲೆ ಏರಿಕೆ

    Namma Metro

    ಸಿಲ್ಕ್ ಬೋರ್ಡ್, ಕೆ ಆರ್ ಪುರಂ ಮಾರ್ಗವಾಗಿ ನಡೆಯುತ್ತಿರುವ ಮೆಟ್ರೋ ಕಾಮಗಾರಿ ಇದಾಗಿದ್ದು, ಲಾಂಚಿಂಗ್ ಗಾರ್ಡ್ ಎಂಬ ಬೃಹತ್ ಯಂತ್ರ ಆಯ ತಪ್ಪಿ ದಿಢೀರ್ ಕೆಳಗೆ ಬಿದ್ದಿದೆ. ಇದೀಗ ಯಂತ್ರವನ್ನು ಮೇಲೆತ್ತಲು ಕಾರ್ಮಿಕರು ಹರಸಾಹಸ ಪಡುತ್ತಿದ್ದಾರೆ. ಇದನ್ನೂ ಓದಿ: ಕುಮಾರಸ್ವಾಮಿ ಬ್ರದರ್ ಅಂತ ಕತ್ತು ಕೊಯ್ಯುತ್ತಾನೆ: ಜಮೀರ್ ಅಹ್ಮದ್

    ಸದ್ಯ ಈ ಅವಘಡ ಕುರಿತಂತೆ ಬಿಎಂಆರ್‌ಸಿಎಲ್, ಘಟನೆ ಮೆಕ್ಯಾನಿಕಲ್ ಫೇಲ್ಯೂರ್‌ನಿಂದ ಸಂಭವಿಸಿದ್ದು ಮತ್ತು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಇದೀಗ ಲಾಂಚಿಂಗ್ ಗರ್ಡರ್ ಅನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದೆ.

  • ವ್ಹೀಲ್‍ಚೇರ್‌ನಲ್ಲಿ ಭಿಕ್ಷೆ ಬೇಡ್ತಿದ್ದ ಅಂಗವಿಕಲ ತಾಯಿ-ಮಗನಿಗೆ ಕ್ರೇನ್ ಡಿಕ್ಕಿ

    ವ್ಹೀಲ್‍ಚೇರ್‌ನಲ್ಲಿ ಭಿಕ್ಷೆ ಬೇಡ್ತಿದ್ದ ಅಂಗವಿಕಲ ತಾಯಿ-ಮಗನಿಗೆ ಕ್ರೇನ್ ಡಿಕ್ಕಿ

    ದಾವಣಗೆರೆ: ಭಿಕ್ಷೆ ಬೇಡುತ್ತಿದ್ದ ಅಂಗವಿಕಲ ತಾಯಿ-ಮಗುವಿಗೆ ಕ್ರೇನ್ ಡಿಕ್ಕಿಯಾಗಿ ಇಬ್ಬರೂ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದ ಬಳಿ ನಡೆದಿದೆ.

    ಮೃತ ದುರ್ದೈವಿಗಳನ್ನು ಸಲೀಂ(10) ಮತ್ತು ರುಕ್ಸಾನ (40) ಎಂದು ಗುರುತಿಸಲಾಗಿದೆ. ತಾಯಿ- ಮಗ ವ್ಹೀಲ್ ಚೇರ್ ನಲ್ಲಿ ಕುಳಿತು ಭಿಕ್ಷೆ ಬೇಡುತ್ತಿದ್ದಾಗ ಈ ದುರ್ಘಟನೆ ನಡೆದಿದೆ.

    ಚನ್ನಗಿರಿಯಿಂದ ನಲ್ಲೂರಿಗೆ ಕ್ರೇನ್ ಬರುತ್ತಿತ್ತು. ಹೀಗೆ ಬಂದ ಕ್ರೇನ್ ಏಕಾಏಕಿ ವ್ಹೀಲ್ ಚೇರ್‍ಗೆ ಡಿಕ್ಕಿ ಹೊಡದಿದೆ. ಪರಿಣಾಮ ತಾಯಿ-ಮಗ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಈ ಸಂಬಂಧ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

  • ಕ್ರೇನ್‍ನಲ್ಲಿ ಚಾರ್ಮಾಡಿ ಘಾಟ್‍ಗೆ ಜೋತು ಬಿದ್ದು ದಾಖಲೆ ಪತ್ರಗಳನ್ನು ತಂದ ಆರೀಫ್

    ಕ್ರೇನ್‍ನಲ್ಲಿ ಚಾರ್ಮಾಡಿ ಘಾಟ್‍ಗೆ ಜೋತು ಬಿದ್ದು ದಾಖಲೆ ಪತ್ರಗಳನ್ನು ತಂದ ಆರೀಫ್

    – ಯುವಕನ ಕಾರ್ಯಕ್ಕೆ ಭಾರೀ ಮೆಚ್ಚುಗೆ

    ಚಿಕ್ಕಮಗಳೂರು: ಚಾರ್ಮಾಡಿ ಘಾಟ್‍ನಲ್ಲಿ ಮಗುಚಿ ಬಿದ್ದ ಪರಿಣಾಮ ಕಾರಿನಲ್ಲಿದ್ದ ಪ್ರಮುಖ ದಾಖಲೆ ಪತ್ರಗಳು ಹಾರಿ ಹೋಗಿದ್ದು, ಇವುಗಳನ್ನು ಸ್ಥಳೀಯ ಸ್ನೇಕ್ ಆರೀಫ್ ಎಂಬವರು ಮಾಲೀಕರಿಗೆ ವಾಪಸ್ ನೀಡಿ ಮಾನವೀಯತೆ ಮೆರೆದಿದ್ದಾರೆ.

    ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಭಾನುವಾರ ಬೆಳಗ್ಗೆ ರಸ್ತೆಯಲ್ಲಿ ಮಂಜು ಕವಿದಿದ್ದ ಕಾರಣ ಚಾಲಕನ ನಿಯಂತ್ರಣ ತಪ್ಪಿ ಸ್ವಿಫ್ಟ್ ಕಾರೊಂದು ಮಗುಚಿ ಬಿದ್ದಿತ್ತು. ಪರಿಣಾಮ ಕಾರಿನಲ್ಲಿದ್ದ ಐವರಿಗೂ ಸಣ್ಣ-ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದರು. ಈ ವೇಳೆ ಕಾರಿನಲ್ಲಿದ್ದ ಅಮೂಲ್ಯ ದಾಖಲೆಗಳು ಹಾರಿ ಹೋಗಿದ್ದವು.

    ಆ ದಾಖಲೆಗಳು ತುಂಬಾ ಮುಖ್ಯವಾಗಿರೋದು ಎಂದು ಕಾರಿನಲ್ಲಿದ್ದವರು ಗೋಗರೆದಾಗ ಚಾರ್ಮಾಡಿಯ ಆಪತ್ಫಾಂದವ ಎಂದೇ ಕರೆಸಿಕೊಳ್ಳುವ ಸ್ಥಳೀಯ ಸ್ನೇಕ್ ಆರೀಫ್, ಜೀವದ ಹಂಗು ತೊರೆದು ಕ್ರೇನ್ ಮೂಲಕ ನೇತಾಡಿಕೊಂಡು ಚಾರ್ಮಾಡಿಯ ಘಾಟಿಯ ಪ್ರಪಾತಕ್ಕೆ ಇಳಿದಿದ್ದಾರೆ. ಅಲ್ಲದೆ ಅಲ್ಲಿದ್ದ ದಾಖಲೆ ಪತ್ರಗಳನ್ನ ತಂದು ಕಾರಿನಲ್ಲಿದ್ದ ವ್ಯಕ್ತಿಗೆ ಹಿಂದಿರುಗಿಸಿ ಸಾಹಸ ಮೆರೆದಿದ್ದಾರೆ.

    ಆರೀಫ್ ಅವರ ಸಾಹಸಿ ಪ್ರವೃತ್ತಿಗೆ ಕಾರಿನಲ್ಲಿದ್ದವರು ಅಭಿನಂದನೆ ಸಲ್ಲಿಸಿದ್ದಾರೆ. ಈ ವೇಳೆ ಕಾರಿನಲ್ಲಿದ್ದ ದಾಖಲೆಗಳನ್ನ ಹುಡುಕಲು ಸ್ನೇಕ್ ಆರೀಫ್ ತೆಗೆದುಕೊಂಡ ರಿಸ್ಕ್ ಬಗ್ಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಮತ್ತೊಂದೆಡೆ ಇಂತಹ ರಿಸ್ಕ್ ಬೇಕಿತ್ತಾ ಎಂಬ ಮಾತುಗಳು ಕೇಳಿ ಬಂದಿವೆ. ಒಂದು ವೇಳೆ ಆರೀಫ್ ಜೀವಕ್ಕೆ ಹೆಚ್ಚು-ಕಮ್ಮಿಯಾಗಿದ್ರೆ ಜವಾಬ್ದಾರಿ ಯಾರು ಎಂಬ ಪರವಿರೋಧದ ಮಾತುಗಳು ಕೇಳಿ ಬಂದಿವೆ.

    ಆದರೆ ಕಾರಿನಿಂದ ಬಿದ್ದವರು ಯಾರೋ, ಡಾಕ್ಯುಮೆಂಟ್ ಕಳೆದು ಹೋಗಿದ್ದು ಯಾರದ್ದೋ. ಆದ್ರೆ ಅಪಘಾತವಾಗಿ ಎಲ್ಲರೂ ಗಾಬರಿಯಾಗಿದ್ದಾಗ ಅಮೂಲ್ಯವಾದ ದಾಖಲೆಗಳನ್ನ ಹುಡುಕೋದು ಚಾರ್ಮಾಡಿಯಂತಹ ಪ್ರಪಾತದ ಜಾಗದಲ್ಲಿ ಕಷ್ಟಸಾಧ್ಯವಲ್ಲ. ಕಷ್ಟವೇ ಸರಿ. ಆದರೆ ಜೀವದ ಹಂಗು ತೊರೆದು ದಾಖಲೆ ತಂದು ಕೊಟ್ಟ ಸ್ನೇಕ್ ಆರೀಫ್ ಸಾಹಸಕ್ಕೆ ಮೆಚ್ಚಲೇಬೇಕು.

  • ಸಮುದ್ರಕ್ಕೆ ಬಿದ್ದ ಟೆಂಪೋ – ಮೇಲಕ್ಕೆತ್ತಲು ಕ್ರೇನ್ ಬಳಕೆ

    ಸಮುದ್ರಕ್ಕೆ ಬಿದ್ದ ಟೆಂಪೋ – ಮೇಲಕ್ಕೆತ್ತಲು ಕ್ರೇನ್ ಬಳಕೆ

    ಉಡುಪಿ: ಮೀನು ಲೋಡ್ ಮಾಡಲು ಬಂದರಿಗೆ ಬಂದ ಗೂಡ್ಸ್ ಟೆಂಪೋ ನೀರಿನೊಳಗೆ ಬಿದ್ದ ಘಟನೆ ಉಡುಪಿಯ ಮಲ್ಪೆಯಲ್ಲಿ ನಡೆದಿದೆ.

    ಅರಬ್ಬಿ ಸಮುದ್ರದಲ್ಲಿ ಹಿಡಿದ ಮೀನನ್ನು ಮಲ್ಪೆ ಬಂದರಿನಲ್ಲಿ ಖಾಲಿ ಮಾಡಲಾಗುತ್ತದೆ. ಬೋಟ್‍ಗಳು ಲಂಗರು ಹಾಕುವ ಪಕ್ಕದಲ್ಲೇ ಗೂಡ್ಸ್ ಟೆಂಪೋ ತಂದು ನಿಲ್ಲಿಸಿ ಮೀನು ಖಾಲಿ ಮಾಡಲಾಗುತ್ತದೆ. ಎಂದಿನಂತೆ ಈ ಪ್ರಕ್ರಿಯೆ ನಡೆಯುತ್ತಿದ್ದಾಗ ನೀರಿನಲ್ಲಿ ಇದ್ದ ಬೋಟು ನಿಧಾನಕ್ಕೆ ಹಿಂದಕ್ಕೆ ಬಂದಿದೆ.

    ಮೀನು ಖಾಲಿ ಮಾಡುವ ಸಂದರ್ಭ ಗೂಡ್ಸ್ ಟೆಂಪೋವನ್ನು ಬೋಟಿಗೆ ಸಿಕ್ಕಿಸಲಾಗಿತ್ತು. ಟೆಂಪೋ ಹಿಂದಕ್ಕೆ ಹೋಗಿ, ನೀರಿಗೆ ಬಿದ್ದಿದೆ. ಅಲ್ಲದೇ ಟೆಂಪೋ ಸಂಪೂರ್ಣವಾಗಿ ಮುಳುಗಿದೆ. ಮುಳುಗಿದ್ದ ಟೆಂಪೋವನ್ನು ಕ್ರೇನ್‌ಗೆ ಸರಪಳಿಯಲ್ಲಿ ಕಟ್ಟಿ ಮೇಲಕ್ಕೆತ್ತಲಾಗಿದೆ.

    ವಿಠ್ಠಲ ಪೂಜಾರಿ ಎಂಬವರಿಗೆ ಸೇರಿದ ಟೆಂಪೋ ಇದಾಗಿದ್ದು, ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಟೆಂಪೋದ ಎಂಜಿನ್ ಒಳಗೆ ನೀರು ಹೋಗಿದ್ದು, ಸಾವಿರಾರು ರೂಪಾಯಿ ನಷ್ಟವಾಗಿದೆ.