Tag: Cradle

  • ರಾಮ್ ಚರಣ್ ಪುತ್ರಿಗೆ 1 ಕೋಟಿ ರೂ. ಬೆಲೆಯ ಚಿನ್ನದ ತೊಟ್ಟಿಲು ನೀಡಿದ ಅಂಬಾನಿ

    ರಾಮ್ ಚರಣ್ ಪುತ್ರಿಗೆ 1 ಕೋಟಿ ರೂ. ಬೆಲೆಯ ಚಿನ್ನದ ತೊಟ್ಟಿಲು ನೀಡಿದ ಅಂಬಾನಿ

    ತೆಲುಗಿನ ಸ್ಟಾರ್ ನಟ ರಾಮ್ ಚರಣ್ ಮತ್ತು ಉಪಸಾನ ಪುತ್ರಿಗೆ ಜಗತ್ತಿನ ಅತೀ ಶ್ರೀಮಂತರ ಪಟ್ಟಿಯಲ್ಲಿರುವ ಭಾರತೀಯ ಮುಖೇಶ್ ಅಂಬಾನಿ (Mukesh Ambani) ಒಂದು ಕೋಟಿ ರೂಪಾಯಿ ಬೆಲೆಬಾಳುವ ಬಂಗಾರ ತೊಟ್ಟಿಲನ್ನು (Cradle) ಗಿಫ್ಟ್ ಆಗಿ ನೀಡಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದೆ. ರಾಮ್ ಚರಣ್ ಆಗಲಿ ಅಥವಾ ಅಂಬಾನಿಯಾಗಲಿ ಈ ಕುರಿತು ಯಾವುದೇ ಮಾಹಿತಿಯನ್ನು ನೀಡದೇ ಇದ್ದರೂ, ಸುದ್ದಿಯಂತೂ ವೈರಲ್ ಆಗಿದೆ.

    ಮಗಳಿಗೆ ಏನೆಲ್ಲ ಗಿಫ್ಟ್ ಗಳು ಬಂದಿವೆ ಎನ್ನುವ ಕುರಿತು ರಾಮ್ ಚರಣ್ ಸೋಷಿಯಲ್ ಮೀಡಿಯಾದಲ್ಲಿ ಹಾಕುವ ಮೂಲಕ ಅವರಿಗೊಂದು ಧನ್ಯವಾದಗಳನ್ನು ತಿಳಿಸುತ್ತಾ ಬಂದಿದ್ದಾರೆ. ಮಗಳಿಗಾಗಿ ಸಂಗೀತ ನೀಡಿದ್ದ ಆರ್.ಆರ್.ಆರ್ ಗಾಯಕನ ಕುರಿತು ಈ ಹಿಂದೆ ಅವರು ಬರೆದಿದ್ದರು. ಆದರೆ, ತೊಟ್ಟಿಲು ಗಿಫ್ಟ್ ಕುರಿತು ಯಾವುದೇ ಮಾಹಿತಿಯನ್ನು ರಾಮ್ ಚರಣ್ ಹಂಚಿಕೊಂಡಿಲ್ಲ. ಆದರೆ, ಬಂಗಾರದ ತೊಟ್ಟಿಲಂತೂ ಭಾರೀ ಸದ್ದು ಮಾಡುತ್ತಿದೆ.

    ಮಗಳಿಗೆ ಹೆಸರಿಟ್ಟ ಮೆಗಾಸ್ಟಾರ್ ಕುಟುಂಬ

    ಮೆಗಾಸ್ಟಾರ್ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಹತ್ತು ವರ್ಷದ ದಾಂಪತ್ಯ ಬದುಕಿನಲ್ಲಿ ಇದೀಗ ರಾಮ್ ಚರಣ್(Ram Charan)- ಉಪಾಸನಾ (Upasana) ಮೊದಲ ಮಗುವಿನ ಆಗಮನದ ಖುಷಿಯಲ್ಲಿದ್ದಾರೆ. ಇತ್ತೀಚಿಗಷ್ಟೇ ರಾಮ್ ಚರಣ್ ಅವರ ಪತ್ನಿ ಉಪಾಸನಾ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈಗ ಮೆಗಾಸ್ಟಾರ್ ಕುಟುಂಬದ ಕುಡಿಗೆ ನಾಮಕರಣ ಮಾಡಿದ್ದಾರೆ. ಈ ಕುರಿತ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ರಾಮ್ ಚರಣ್ ಪತ್ನಿ ಶೇರ್ ಮಾಡಿದ್ದಾರೆ. RRR ಹೀರೋ ಮಗಳಿಗೆ KKK ಹೆಸರು ನಾಮಕರಣ ಮಾಡಿದ್ದಾರೆ.

    ತೆಲುಗಿನ ಸ್ಟಾರ್ ನಟ ಚಿರಂಜೀವಿ (Megastar Chiranjeevi) ಪುತ್ರ ರಾಮ್ ಚರಣ್ ಅವರು ಮುದ್ದು ಮಗಳಿಗೆ ತಂದೆಯಾದ ಸಂಭ್ರಮದಲ್ಲಿದ್ದಾರೆ. ಉಪಾಸನಾ-ರಾಮ್ ಚರಣ್ ಹಲವು ವರ್ಷಗಳು ಪ್ರೀತಿಸಿ, ಮದುವೆಯಾಗಿದ್ರು. ಮದುವೆಯಾಗಿ 10 ವರ್ಷಗಳು ಕಳೆದರು ಮಕ್ಕಳಾಗಿರಲಿಲ್ಲ. ಮಕ್ಕಳು ಮಾಡಿಕೊಳ್ಳುವ ಯೋಜನೆಯನ್ನೇ ಮುಂದೂಡಿದ್ರು. ಇತ್ತೀಚಿಗೆ ಮನೆಗೆ ಮುದ್ದು ಮಗಳ ಆಗಮನವಾಯಿತು. ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ 30 ಸೆಕೆಂಡ್ ಲಿಪ್ ಲಾಕ್: ಕಣ್ಮುಚ್ಚಿಕೊಂಡ ಪೂಜಾ ಭಟ್

    RRR ಸೂಪರ್ ಸ್ಟಾರ್ ರಾಮ್ ಚರಣ್ ಅವರು ಮಗಳಿಗೆ ಕ್ಲಿನ್ ಕಾರ ಕೊನಿಡೆಲಾ(Klin Kaara Konidela) ಎಂದು ಭಿನ್ನವಾಗಿ ನಾಮಕರಣ ಮಾಡಿದ್ದಾರೆ. ನಾಮಕರಣದ ಫೋಟೋವನ್ನ ನಟನ ಪತ್ನಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಮಗುವಿನ ಈ ಹೆಸರನ್ನ ಲಲಿತ ಸಹಸ್ರನಾಮದಿಂದ ತೆಗೆದುಕೊಂಡ ಹೆಸರು ಆಧ್ಯಾತ್ಮಿಕ ಜಾಗೃತಿಯನ್ನು ಶಕ್ತಿಯನ್ನು ಸೂಚಿಸುತ್ತದೆ ಎಂದು ಚರಣ್ ಪತ್ನಿ ತಿಳಿಸಿದ್ದಾರೆ.

     

    ಕ್ಲಿನ್ ಕಾರ ಕೊನಿಡೆಲಾ ಎಂಬ ಭಿನ್ನ ಹೆಸರು ಅಭಿಮಾನಿಗಳ ಗಮನ ಸೆಳೆದಿದೆ. ಒಟ್ನಲ್ಲಿ ಜ್ಯೂ.ರಾಮ್ ಚರಣ್ ಮನೆಯ ಸಂಭ್ರಮದ ಫೋಟೋಗಳನ್ನ ನೋಡಿ ಅಭಿಮಾನಿಗಳು ಶುಭಕೋರುತ್ತಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರೆಡ್ಡಿ ಮೊಮ್ಮಗಳಿಗಾಗಿ ಕಲಘಟಗಿ ಬಣ್ಣದ ತೊಟ್ಟಿಲು ಸಿದ್ಧ

    ರೆಡ್ಡಿ ಮೊಮ್ಮಗಳಿಗಾಗಿ ಕಲಘಟಗಿ ಬಣ್ಣದ ತೊಟ್ಟಿಲು ಸಿದ್ಧ

    ಹುಬ್ಬಳ್ಳಿ: ದೇಶಾದ್ಯಂತ ಹೆಸರುವಾಸಿಯಾಗಿರುವ ಧಾರವಾಡ ಜಿಲ್ಲೆಯ ಕಲಘಟಗಿ ಬಣ್ಣದ ತೊಟ್ಟಿಲು ತನ್ನದೇ ಆದ ಮಹತ್ವವನ್ನು ಹೊಂದಿದೆ. ಇದೀಗ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಯವರ ಪುತ್ರಿ ಬ್ರಹ್ಮಣಿ ಮಗುವಿಗೆ ಕಲಘಟಗಿ ತೊಟ್ಟಿಲು ಸಿದ್ಧವಾಗುತ್ತಿದೆ. ಇದನ್ನೂ ಓದಿ: ಕಲಘಟಗಿ ತೊಟ್ಟಿಲಿನ ವಿಶೇಷತೆ ಏನು?

    ಕಲಘಟಗಿ ಕಲಾವಿದ ಮಾರುತಿ ಬಳಿಯೇ ಸುಮಾರು ಮೂರು ತಿಂಗಳಿನಿಂದ ತೊಟ್ಟಿಲು ತಯಾರಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ತೊಟ್ಟಿಲಿನಲ್ಲಿ ಕೃಷ್ಣನ ಬಾಲ ಲೀಲೆ ಮೂಡಿಬಂದಿರುವುದು ತೊಟ್ಟಿಲಿನ ಮೆರಗನ್ನು ಮತ್ತಷ್ಟು ಹೆಚ್ಚಿಸಿದೆ. ಕಲಘಟಗಿ ತೊಟ್ಟಿಲು ಕಲಾವಿದನ ಕೈ ಚಳಕದಿಂದ ನೋಡುಗರ ಕಣ್ಮನ ಸೆಳೆಯುತ್ತದೆ.

    ಹಾವೇರಿ ಜಿಲ್ಲೆಯ ವನಿತಾ ಗುತ್ತಲ ಎಂಬವರು ಜನಾರ್ದನ ರೆಡ್ಡಿ ಮೊಮ್ಮಗುವಿಗೆ ಈ ತೊಟ್ಟಿಲನ್ನು ನೀಡುತ್ತಿದ್ದಾರೆ. ಈಗಾಗಲೇ 40,000 ಮುಂಗಡ ರೂಪಾಯಿಯನ್ನು ನೀಡಲಾಗಿದ್ದು, ಉಳಿದ 50,000 ರೂ.ಹಣವನ್ನು ಇಂದು ಕೊಟ್ಟು ಬೆಂಗಳೂರಿಗೆ ತೆಗೆದುಕೊಂಡು ಹೋಗಲಿದ್ದಾರೆ.

    ಅಲ್ಲದೇ ಸಿನಿಮಾ ನಟರು ಕೂಡ ಕಲಘಟಗಿ ಬಣ್ಣದ ತೊಟ್ಟಿಲಿಗೆ ಮಾರು ಹೋಗಿದ್ದು, ಯಶ್-ರಾಧಿಕಾ ಪಂಡಿತ್ ಮಗುವಿಗೂ ಕಲಘಟಗಿ ತೊಟ್ಟಿಲನ್ನು ನೀಡಲಾಗಿದೆ. ರಾಜ್‍ಕುಮಾರ್ ಅವರ ಕುಟುಂಬಕ್ಕೆ ಇವರೇ ತೊಟ್ಟಿಲನ್ನು ನೀಡುವುದು.

  • ಯಶ್- ರಾಧಿಕಾ ಮಗಳಿಗೆ ಅಂಬಿ ತಾತನ ಗಿಫ್ಟ್ ರೆಡಿ

    ಯಶ್- ರಾಧಿಕಾ ಮಗಳಿಗೆ ಅಂಬಿ ತಾತನ ಗಿಫ್ಟ್ ರೆಡಿ

    ಬೆಳಗಾವಿ: ಕಲಿಯುಗದ ಕರ್ಣ ರೆಬೆಲ್ ಸ್ಟಾರ್ ಅಂಬರೀಶ್ ಅವರ ಕೊನೆಯಾಸೆ ನನಸಾಗಿದೆ. ಅಂಬಿ ಕನಸಿನಂತೆ ಯಶ್-ರಾಧಿಕಾ ಮಗಳಿಗೆ ಅಂಬಿ ತಾತನ ಗಿಫ್ಟ್ ರೆಡಿಯಾಗಿದ್ದು ಇಂದು ಬೆಂಗಳೂರು ತಲುಪಲಿದೆ.

    ಮಂಡ್ಯದ ಗಂಡು ದಿವಂಗತ ನಟ ಅಂಬರೀಶ್ ಅವರ ಕನಸು ನನಸಾಗಿದೆ. ನಟಿ ರಾಧಿಕಾ ಪಂಡಿತ್ ನಮ್ಮ ಮನೆಯ ಮಗಳು ಅವರ ಮಗುವಿನ ತೊಟ್ಟಿಲು ಶಾಸ್ತ್ರಕ್ಕೆ ನಮ್ಮ ಮನೆಯಿಂದಲೇ ತೊಟ್ಟಿಲು ಹೋಗಬೇಕು ಎಂಬುದು ಅಂಬರೀಶ್ ಅವರ ಆಸೆಯಾಗಿತ್ತು. ಅದರಂತೆ ರಾಧಿಕಾ-ಯಶ್ ಮಗಳಿಗಾಗಿ ಅಂಬಿ ಆರ್ಡರ್ ಮಾಡಿದ್ದ ತೊಟ್ಟಿಲು ಸಿದ್ಧಗೊಂಡಿದೆ. ಕಿತ್ತೂರು ಕಲ್ಮಠದಲ್ಲಿ ಹೆಣ್ಣು ಮಕ್ಕಳು ವಿಶೇಷ ಪೂಜೆ ಮಾಡಿ ತೊಟ್ಟಿಲನ್ನು ಬೆಂಗಳೂರಿಗೆ ಕಳುಹಿಸಿಕೊಟ್ಟಿದ್ದಾರೆ. ಈ ವಿಶೇಷ ತೊಟ್ಟಿಲು ಇಂದು ಅಂಬಿ ಮನೆ ತಲುಪಲಿದೆ.

    ಕಲಘಟಗಿಯ ಸಾಹುಕಾರ್ ಕುಟುಂಬದ ಗರಡಿಯಲ್ಲಿ ಟಿಕ್‍ವುಡ್‍ನಿಂದ ಈ ತೊಟ್ಟಿಲು ತಯಾರಿಸಲಾಗಿದೆ. ಸಾವಯವ ಬಣ್ಣದಿಂದ ಲೇಪನವಾದ ಪೇಂಟಿಂಗ್, ವಿಷ್ಣುವಿನ ದಶಾವತಾರವನ್ನು ತೊಟ್ಟಿಲಿನಲ್ಲಿ ಕೆತ್ತಲಾಗಿದೆ. ಈ ತೊಟ್ಟಿಲು ವಿಭಿನ್ನ ಡಿಸೈನ್‍ಗಳಿಂದ ಕೂಡಿದ್ದು ಪ್ರಾಚೀನ ಕಾಲದ ಶೈಲಿಯಲ್ಲಿ ತಯಾರಿಸಲಾಗಿದೆ. ಇಬ್ಬರು ಸೇರಿಕೊಂಡು ಮಾಡಿರುವ ಈ ತೊಟ್ಟಿಲಿಗೆ ಖರ್ಚಾಗಿದ್ದು 1 ಲಕ್ಷದ 20 ಸಾವಿರ ರೂಪಾಯಿ. ಅದೂ ಅಲ್ಲದೇ ನೂರು ವರ್ಷಗಳ ಕಾಲ ಈ ಬಣ್ಣಕ್ಕೆ ಏನೂ ಆಗುವುದಿಲ್ಲ ಎನ್ನುವುದು ವಿಶೇಷ.

    ಒಬ್ಬ ತಂದೆಗೆ ಮಗಳ ಕಾಳಜಿ ಎಷ್ಟಿರುತ್ತೆ ಅವಳ ಖುಷಿಗಾಗಿ ತಂದೆ ಏನೆಲ್ಲಾ ಮಾಡ್ತಾನೆ ಎಂಬುದನ್ನು ತಂದೆಯ ಸ್ಥಾನದಲ್ಲಿದ್ದುಕೊಂಡು ಅಂಬಿ ಮಾಡಿದ್ದು ನಿಜಕ್ಕೂ ಶ್ಲಾಘನೀಯ. ನಟಿ ರಾಧಿಕಾ ಮಗಳು ಈ ತೊಟ್ಟಿಲಲ್ಲಿ ಆಡಿ ನಲಿದು ಚೆನ್ನಮ್ಮನಂತಾಗಲಿ ಎಂಬುದು ಅಂಬಿ ಅಭಿಮಾನಿಗಳ ಆಸೆಯಾಗಿದೆ.

    https://www.youtube.com/watch?v=8O7gBadMmdI

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬರೋಬ್ಬರಿ 1 ಲಕ್ಷ ರೂ.ನಲ್ಲಿ ರೆಡಿ ಆಗ್ತಿದೆ ಯಶ್ ಮಗಳ ತೊಟ್ಟಿಲು- ತೊಟ್ಟಿಲಿನ ವಿಶೇಷತೆ ಏನು?

    ಬರೋಬ್ಬರಿ 1 ಲಕ್ಷ ರೂ.ನಲ್ಲಿ ರೆಡಿ ಆಗ್ತಿದೆ ಯಶ್ ಮಗಳ ತೊಟ್ಟಿಲು- ತೊಟ್ಟಿಲಿನ ವಿಶೇಷತೆ ಏನು?

    ಬೆಳಗಾವಿ: ರೆಬಲ್ ಸ್ಟಾರ್ ಅಂಬರೀಶ್ ಅವರ ಕೊನೆಯ ಆಸೆಯಂತೆ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಅವರ ಮಗಳಿಗೆ ಉಡುಗೊರೆ ನೀಡುವ ತೊಟ್ಟಿಲು ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ ತಯಾರಾಗುತ್ತಿದೆ.

    ಅಂಬರೀಶ್ ಅವರು ಯಶ್, ರಾಧಿಕಾ ಮಗುವಿಗಾಗಿ ಸ್ವತಃ ಫೋನ್ ಮಾಡಿ ತೊಟ್ಟಿಲು ಆರ್ಡರ್ ಮಾಡಿದ್ದರು. ತೊಟ್ಟಿಲು ತಯಾರಿಸಿ ಕೊಡುವಂತೆ ಬೆಳಗಾವಿ ಮೂಲದ ನಾರಾಯಣ್ ಕಲಾಲ ಅವರ ಜೊತೆ ಅಂಬಿ ಮಾತನಾಡಿದ್ದರು. ನಾರಾಯಣ್ ಕಲಾಲ ಅವರು ಕಲಘಟಗಿಯ ಮೂಲದ ಶ್ರೀಧರ್ ಸಾವುಕಾರ್ ಅವರಲ್ಲಿ  ತೊಟ್ಟಿಲಿಗೆ ಆರ್ಡರ್ ಮಾಡಿದ್ದರು. ಆದರೆ ಶ್ರೀಧರ್ ಅವರಿಗೆ ಈ ವಿಷಯ ಗೊತ್ತಿರಲಿಲ್ಲ. ಅಂಬಿ ನಿಧನದ ಬಳಿಕ ಈ ವಿಷಯ ಗೊತ್ತಾಗಿದೆ.

    ಈ ಬಗ್ಗೆ ನಾರಾಯಣ್ ಕಲಾಲ ಅವರು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿ, ಅಂಬರೀಶ್ ನಿಧನರಾಗುವ 8-9 ದಿನಗಳ ಹಿಂದೆ ಅವರು ನನ್ನ ಬಳಿ ಧಾರವಾಡ ಜಿಲ್ಲೆಯಲ್ಲಿ ಕಲಘಟಗಿಯಲ್ಲಿ ತೊಟ್ಟಿಲು ಮಾಡುತ್ತಾರಂತೆ ಅದು ಎಲ್ಲೋ ಎಂದು ಕೇಳಿದರು. ನನಗೂ ಇದರ ಬಗ್ಗೆ ವಿಶೇಷವಾಗಿ ಏನೂ ಗೊತ್ತಿರಲಿಲ್ಲ. ಹೌದು ಎಂದು ಹೇಳಿ ಬಳಿಕ ಬೇರೆಯವರ ಬಗ್ಗೆ ಕೇಳಿಕೊಳ್ಳೊಣ ಎಂದುಕೊಂಡೆ. ಆಗ ಅವರು ಯಶ್- ರಾಧಿಕಾಗೆ ಮಗು ಆಗುತ್ತೆ. ಹಾಗಾಗಿ ನಾನು ಒಂದು ತೊಟ್ಟಿಲು ಮಾಡಿಸಬೇಕು ಎಂದು ಹೇಳಿದರು. ನಾನು ಸರಿ ಅಣ್ಣ ಎಂದು ಹೇಳಿದೆ. ನಾನು ಕಲಘಟಗಿಯಲ್ಲಿ ತೊಟ್ಟಿಲಿನ ವಿಷಯದ ಬಗ್ಗೆ ಕೇಳಿಕೊಂಡು ಅವರಿಗೆ ಕರೆ ಮಾಡಿದ್ದಾಗ ಆರ್ಡರ್ ಮಾಡು ಎಂದು ಹೇಳಿದರು. ಇದನ್ನೂ ಓದಿ: ಯಶ್-ರಾಧಿಕಾ ಮಗುವಿಗೆ ಅಂಬಿ ರೆಡಿ ಮಾಡಿಸಿದ್ದರು ಭರ್ಜರಿ ಗಿಫ್ಟ್!

    ಹೆಣ್ಣು ಮಕ್ಕಳಿಗೆ ಮೊದಲ ಮಗುವಾದಾಗ ತವರು ಮನೆಯವರು ತೊಟ್ಟಿಲು ನೀಡುವ ಸಂಪ್ರದಾಯವಿದೆ. ಇದು ಅಂಬರೀಶ್ ಅವರಿಗೂ ಗೊತ್ತು. ಕೆಲವರ ಮನೆಯಲ್ಲಿ ಈ ಸಂಪ್ರದಾಯವಿರುತ್ತದೆ. ಕೆಲವರ ಮನೆಯಲ್ಲಿ ಇರುವುದಿಲ್ಲ. ಯಾರೋ ಕಲಘಟಗಿಯ ತೊಟ್ಟಿಲು ಬಗ್ಗೆ ಅಂಬರೀಶ್ ಅವರಲ್ಲಿ ಹೇಳಿದ್ದರಿಂದ ನಾನು ಅಲ್ಲಿ ಹೋಗಿ ವಿಚಾರಿಸಿದೆ. ಅಲ್ಲಿನ ತೊಟ್ಟಿಲಿಗೆ 600 ವರ್ಷಗಳ ಇತಿಹಾಸವಿದೆ ಎಂಬುದು ತಿಳಿಯಿತು. ಕಲಘಟಗಿಯಲ್ಲಿ ತೊಟ್ಟಿಲು ಮಾಡಬೇಕಾದರೆ ಅವರು ಧಾರ್ಮಿಕವಾಗಿ ಮಾಡುತ್ತಾರೆ. ತೊಟ್ಟಲಿನಲ್ಲಿ ಕಥೆಗಳಲ್ಲಿ ಬರುವ ಮುದ್ದು ಕೃಷ್ಣ ಆಟ, ಲೀಲೆಗಳನ್ನು ವಿವರಿಸುವ ಚಿತ್ರಗಳನ್ನು ಬಿಡಿಸಲಾಗುತ್ತದೆ. ಆ ಬಣ್ಣಕ್ಕೆ 100 ವರ್ಷ ಗ್ಯಾರೆಂಟಿ ಇರುತ್ತದೆ. ತೊಟ್ಟಿಲಿಗೆ ಬಣ್ಣ ಹಚ್ಚುವಾಗ ಅವರು ಸಾಧಾರಣ ಬಣ್ಣ ಹಚ್ಚುವುದಿಲ್ಲ. ಗಿಡಮೂಲಿಕೆ ಬಣ್ಣಗಳನ್ನು ತೊಟ್ಟಿಲಿಗೆ ಲೇಪನ ಮಾಡುತ್ತಾರೆ ಎಂದು ತಿಳಿಸಿದರು.

    ಈ ತೊಟ್ಟಿಲಿಗೆ ಸುಮಾರು 1 ಲಕ್ಷ ರೂ.ವಿರುತ್ತದೆ. ದರವನ್ನು ಕೇಳಿ ಯಶ್ ನೀವು ಹಣ ತೆಗೆದುಕೊಳ್ಳಬೇಕು ಎಂದು ಹೇಳಿದರು. ನಾನು ಹಣಕ್ಕಾಗಿ ಈ ಕೆಲಸ ಮಾಡುತ್ತಿಲ್ಲ. ಇದು ಅಂಬಿ ಅಣ್ಣನ ಆಸೆ. ಹಣದ ಬಗ್ಗೆ ನಾನು ಅಣ್ಣ ಮಾತನಾಡಿಲ್ಲ. ನೀವು ಹಣ ತೆಗೆದುಕೊಂಡಿಲ್ಲ ಅಂದರೆ ನನಗೆ ಮುಜುಗರ ಆಗುತ್ತೆ ಎಂದು ಯಶ್ ಹೇಳಿದರು. ಇದು ಅಣ್ಣ ಕೊಡುತ್ತಿರುವುದು. ಹಾಗಾಗಿ ದುಡ್ಡಿನ ವಿಚಾರವನ್ನು ಈ ವಿಷಯದಲ್ಲಿ ತರಬೇಡಿ ಎಂಂದು ತಿಳಿಸಿದೆ.

    ರಾಧಿಕಾ ಅವರ ಡೆಲಿವರಿ 9 ಅಥವಾ 10 ರಂದು ಆಗುತ್ತದೆ ಎಂದು ಯಶ್ ಪಿಎ ತಿಳಿಸಿದ್ದರು. ಈ ತೊಟ್ಟಿಲನ್ನು ಡಿಸೆಂಬರ್ 26 ರಂದು ಯಶ್ ಅವರಿಗೆ ನೀಡಬೇಕಿತ್ತು. ಆದರೆ ಡೆಲಿವರಿ ಡೇಟ್ ಮೊದಲೇ ರಾಧಿಕಾ ಅವರಿಗೆ ಮಗು ಆಗಿದ್ದ ಕಾರಣ 20ರ ಒಳಗಡೆ ತೊಟ್ಟಿಲು ನೀಡಬೇಕಿದೆ. ಹೀಗಾಗಿ ಈಗ ಹಗಲು ರಾತ್ರಿ ಎನ್ನದೇ ತೊಟ್ಟಿಲಿನ ಕೆಲಸ ನಡೆಯುತ್ತಿದೆ ಎಂದು ನಾರಾಯಣ್ ಕಲಾಲ ಪಬ್ಲಿಕ್ ಟಿವಿಗೆ ತಿಳಿಸಿದರು.

    https://www.youtube.com/watch?v=8O7gBadMmdI

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ತಾಯಿ ಚಾಮುಂಡಿ ದೇವಿಯ ಸನ್ನಿಧಾನದಲ್ಲಿ ಆದ್ಯವೀರ್ ತೊಟ್ಟಿಲು ಶಾಸ್ತ್ರ

    ತಾಯಿ ಚಾಮುಂಡಿ ದೇವಿಯ ಸನ್ನಿಧಾನದಲ್ಲಿ ಆದ್ಯವೀರ್ ತೊಟ್ಟಿಲು ಶಾಸ್ತ್ರ

    ಮೈಸೂರು: ಮೈಸೂರಿನ ರಾಜವಂಶಸ್ಥ ಯದುವೀರ್ ದಂಪತಿ ಕೆಲ ದಿನಗಳ ಹಿಂದೆ ಪುತ್ರನೊಂದಿಗೆ ಅರಮನೆಗೆ ಆಗಮಿಸಿದ್ದು, ಇಂದು ಚಾಮುಂಡಿ ಬೆಟ್ಟದಲ್ಲಿ ಶಾಸ್ತ್ರೋಕ್ತವಾಗಿ ತೊಟ್ಟಿಲು ಪೂಜೆ ನೆರವೇರಿದೆ.

    ಪುತ್ರನ ಜನನದ ನಂತರ ಯದುವೀರ್ ದಂಪತಿ ಚಾಮುಂಡಿ ದೇವಿಯ ದರ್ಶನ ಪಡೆದಿದ್ದು, ಕುಟುಂಬ ಸಮೇತ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದಾರೆ. ಚಾಮುಂಡಿ ಬೆಟ್ಟದಲ್ಲಿ ಮಗನ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ದೇವಾಲಯದ ಆವರಣದಲ್ಲಿ ಸಂಪಿಗೆ ಮರಕ್ಕೆ ಗಂಧದ ತೊಟ್ಟಿಲು ಕಟ್ಟಿ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿದರು.

    ಫೆ.25ರಂದು ಬೆಂಗಳೂರು ಅರಮನೆಯಲ್ಲಿ ಯದುವೀರ್ ಪುತ್ರನಿಗೆ ನಾಮಕರಣ ಕಾರ್ಯಕ್ರಮ ನೆರವೇರಿತ್ತು. ಆದ್ಯವೀರ್ ನರಸಿಂಹರಾಜ ಒಡೆಯರ್ ಎಂದು ಮಗುವಿಗೆ ನಾಮಕರಣ ಮಾಡಲಾಗಿತ್ತು. ನಂತರ ಮೈಸೂರು ಅರಮನೆಗೆ ಬಂದ ದಂಪತಿಗೆ ಅರಮನೆಯಲ್ಲಿದ್ದ ಮುತ್ತೈದೆಯರು ಆರತಿ ಬೆಳಗಿ ಸ್ವಾಗತ ಕೋರಿದ್ದರು. ಮಗನಿಗೆ ಆದ್ಯವೀರ್ ಎಂದು ನಾಮಕರಣ ಮಾಡಲು ಕಾರಣ ಕೇಳಿದಾಗ ಯದುವೀರ್ ಅವರು, ಆದ್ಯಾ ಎಂದರೆ ದುರ್ಗಿ, ಚಾಮುಂಡಿ ಎಂದರ್ಥ. ಮಗುವಿನ ಒಳಿತಿಗಾಗಿ ಆ ಹೆಸರು ಇಡಲಾಗಿದೆ ಎಂದು ತಿಳಿಸಿದ್ದರು.

    ಯದುವೀರ್ ದಂಪತಿ ಶೀಘ್ರದಲ್ಲೇ ಪುತ್ರನ ಜೊತೆ ದೇವಾಲಯಗಳಿಗೆ ಪ್ರವಾಸ ಮಾಡಲಿದ್ದಾರೆ.