Tag: Crackers

  • ದೀಪಾವಳಿಗೆ ತಯಾರಾಯ್ತು ಚಾಕಲೇಟ್ ಪಟಾಕಿ

    ದೀಪಾವಳಿಗೆ ತಯಾರಾಯ್ತು ಚಾಕಲೇಟ್ ಪಟಾಕಿ

    ಬೆಂಗಳೂರು: ಬೆಳಕಿನ ಹಬ್ಬ ಬಂತೆಂದರೆ ಎಲ್ಲೆಲ್ಲೂ ಪಟಾಕಿಗಳ ಸದ್ದು ಜೋರಾಗಿ ಇರುತ್ತೆ. ಆದರೆ ಈ ಬಾರಿ ದೀಪಾವಳಿಗೆ ಚಾಕಲೇಟ್ ಪಟಾಕಿಗಳನ್ನು ತಯಾರಿಸಲಾಗಿದೆ.

    ದೀಪಾವಳಿ ಎಂದು ಹೇಳಿದ ತಕ್ಷಣ ಎಲ್ಲರ ಕಣ್ಮುಂದೆ ಬರುವುದು ಪಟಾಕಿಗಳು. ಅದರಲ್ಲೂ ಮಕ್ಕಳು ಪಟಾಕಿ ಹೊಡೆದು ಸಂಭ್ರಮಿಸುವ ಪರಿಯೇ ಬೇರೆ. ಆದರೆ ಸುಪ್ರೀಂ ಕೋರ್ಟ್ ಪರಿಸರಕ್ಕೆ ಹಾನಿಕಾರಕವಾದ ಪಟಾಕಿಗಳನ್ನು ಬಳಸಬಾರದು ಎಂದು ಆದೇಶ ನೀಡಿದೆ. ಇದನ್ನೂ ಓದಿ: ದೀಪಾವಳಿಗೆ ಸ್ವೀಟ್ ಪಟಾಕಿ ತಯಾರಿಸಿದ ವ್ಯಾಪಾರಿಗಳು

    ಇದೇ ಮೊದಲ ಬಾರಿಗೆ ಬೆಂಗಳೂರಿನ ಆಬ್ರಿ ಸಂಸ್ಥೆಯೊಂದು ಚಾಕಲೇಟ್ ಪಟಾಕಿಗಳನ್ನು ತಯಾರು ಮಾಡಿದೆ. ಪಟಾಕಿ ಹೊಡೆದು ಪರಿಸರಕ್ಕೆ ಹಾನಿ ಮಾಡುವ ಬದಲು ಚಾಕಲೇಟ್ ಮಾದರಿಯ ಪಟಾಕಿಯಿಂದ ಹಬ್ಬ ಮಾಡಿ ಎಂದು ಹೇಳಿದೆ. ಚಾಕಲೇಟ್ ಎಂದರೆ ಎಲ್ಲರಿಗೂ ಇಷ್ಟವಾಗುತ್ತೆ.

    ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಇಷ್ಟಪಡುವ ಚಾಕಲೇಟ್ ಈಗ ಪಟಾಕಿ ಮಾದರಿಯಲ್ಲಿ ಲಗ್ಗೆ ಇಟ್ಟಿದ್ದು, ಎಲ್ಲರೂ ಫಿದಾ ಆಗಿದ್ದಾರೆ. ಗ್ರಾಹಕರು ಕೂಡ ಹಬ್ಬಕ್ಕೆ ತಮ್ಮ ಪ್ರೀತಿ ಪಾತ್ರರಿಗೆ ಈ ಚಾಕಲೇಟ್ ಅನ್ನು ಉಡುಗೊರೆಯಾಗಿ ಕೊಟ್ಟು ಪರಿಸರ ಸ್ನೇಹಿ ಹಬ್ಬ ಆಚರಿಸಿ ಎಂದು ಸಂದೇಶ ನೀಡುತ್ತಿದ್ದಾರೆ.

    ಪರಿಸರ ಸ್ನೇಹಿ ಚಾಕಲೇಟ್ ಪಟಾಕಿಯಿಂದ ವಾಯು ಮಾಲಿನ್ಯವಾಗಲಿ, ಶಬ್ದ ಮಾಲಿನ್ಯವಾಗಲಿ ಆಗುವುದಿಲ್ಲ.

  • ಬೆಂಗ್ಳೂರಲ್ಲಿ ನಕಲಿ ಪಟಾಕಿ ಹಾವಳಿ- ಡಿಸ್ಕೌಂಟ್ ಹೆಸ್ರಲ್ಲಿ ಗ್ರಾಹಕರ ಕಣ್ಣಿಗೆ ಮಣ್ಣು

    ಬೆಂಗ್ಳೂರಲ್ಲಿ ನಕಲಿ ಪಟಾಕಿ ಹಾವಳಿ- ಡಿಸ್ಕೌಂಟ್ ಹೆಸ್ರಲ್ಲಿ ಗ್ರಾಹಕರ ಕಣ್ಣಿಗೆ ಮಣ್ಣು

    ಬೆಂಗಳೂರು: ಸಿಲಿಕಾನ್ ಸಿಟಿಗೆ ನಕಲಿ ಪಟಾಕಿಗಳು ಲಗ್ಗೆ ಇಟ್ಟಿವೆ. ಡಿಸ್ಕೌಂಟ್ ನಲ್ಲಿ ಸಿಗುವ ಈ ಪಟಾಕಿಯನ್ನ ಕೊಂಡರೆ ಅಪಾಯ ಕಟ್ಟಿಟ್ಟಬುತ್ತಿ. 3 ಸಾವಿರ ರೂ. ಬೆಲೆ ಹಾಕಿ 300 ರೂ.ಗೆ ಮಾರಾಟ ಮಾಡುತ್ತಾರೆ. ಈ ನಕಲಿ ಪಟಾಕಿಗಳ ರಹಸ್ಯ ಪಬ್ಲಿಕ್ ಟಿವಿ ಸ್ಟಿಂಗ್ ನಲ್ಲಿ ಬಯಲಾಗಿದೆ.

    ಹೌದು. ದೀಪಾವಳಿ ಹಬ್ಬ ಅಂದರೆ ದೀಪಗಳ ಜೊತೆಗೆ ಪಟಾಕಿಗಳ ಭರಾಟೆ. ಹಲವರು ದೀಪಾವಳಿಗೆ ದೀಪ ಹಚ್ತಾರೋ ಇಲ್ವೋ ಗೊತ್ತಿಲ್ಲ. ಆದರೆ ಪಟಾಕಿ ಮಾತ್ರ ಭರ್ಜರಿಯಾಗಿ ಹೊಡೀತಾರೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಬಂಡಲ್ ಬಂಡಲ್ ಪಟಾಕಿ ತಂದು ಸಿಡಿಸೋ ಹುಚ್ಚು. ಕೆಲವರಂತೂ ಹೆಚ್ಚು ಹೆಚ್ಚು ಪಟಾಕಿ ತಂದು ಸಿಡಿಸೋ ಆಸಲಿ ಭರ್ಜರಿ ಡಿಸ್ಕೌಂಟ್ ಇರೋ ಕಡೆ ಮುಖ ಮಾಡುತ್ತಾರೆ. ಪಟಾಕಿ ಮಾರಾಟಗಾರರು ಕೂಡ ಇಂಥವರನ್ನೇ ಟಾರ್ಗೆಟ್ ಮಾಡುತ್ತಾರೆ. ನಕಲಿ ಪಟಾಕಿಗಳನ್ನ ಡಿಸ್ಕೌಂಟ್ ರೇಟಲ್ಲಿ ಮಾರಿ ಮೋಸ ಮಾಡುತ್ತಾರೆ.

    ಡಮ್ಮಿ ಪಟಾಕಿಗಳನ್ನು ಶೇ.70 ರಿಂದ 80ರಷ್ಟು ಡಿಸ್ಕೌಂಟ್ ದರದಲ್ಲಿ ಸೇಲ್ ಮಾಡುತ್ತಾರೆ. 3000 ಸಾವಿರ ರೂ. ಎಂಆರ್‍ಪಿ ಹಾಕಿ, ಅದನ್ನು ಕೇವಲ 300 ರೂಪಾಯಿಗೆ ಮಾರಾಟ ಮಾಡುತ್ತಾರೆ.

    ಪ್ರತಿನಿಧಿ: ಎಷ್ಟು ಇದು? ಇದರ ಎಲ್ಲಾ ಐಟಂ ಇರ್ತಾವಾ?
    ಶಾಪ್ ಮಾಲೀಕರು: ಹೂಂ ಇರ್ತಾವೆ ಸರ್. ಬರೀ 300 ರೂಪಾಯಿ ಅಷ್ಟೇ?
    ಪ್ರತಿನಿಧಿ : ಮತ್ತೆ ಇದರಲ್ಲಿ 2200 ರೂ. ಅಂತ ಹಾಕಿದ್ದೀರಾ?
    ಶಾಪ್ ಮಾಲೀಕರು: ಅದು ಹಾಕಿರ್ತೀವಿ ಅಷ್ಟೇ..
    ಪ್ರತಿನಿಧಿ: ಇಷ್ಟು ಕಡಿಮೆಗೆ ಹೇಗೆ?
    ಶಾಪ್ ಮಾಲೀಕರು: 250ರೂ. ಕೊಟ್ಟು ತಗೋಳಿ ಸರ್..

    ಪ್ರತಿನಿಧಿ: ಇದು 3350 ರೂ. ಹಾಕಿದ್ದೀರಾ ಇದು ಹೇಗೆ..?
    ಶಾಪ್ ಮಾಲೀಕ: ಇದಕ್ಕೆ ಬರೀ 350 ಕೊಡಿ ಸರ್
    ಪ್ರತಿನಿಧಿ: ಏನ್ರೀ ಮೂರು ಸಾವಿರ ಹಾಕಿ ಬರೀ 350 ರೂ.ಗೆ ಕೊಡ್ತಾ ಇದ್ದೀರಾ?
    ಶಾಪ್ ಮಾಲೀಕ: 70% ಡಿಸ್ಕೌಂಟ್ ಸರ್

    ಪ್ರತಿನಿಧಿ: ಜಾಸ್ತಿ ರೇಟ್ ನೋಡಿ ನಮಗೆ ಭಯ ಆಯ್ತು
    ಶಾಪ್ ಮಾಲೀಕ: ಡಿಸ್ಕೌಂಟ್ ಇದೆ ತಗೋಳಿ ಸರ್
    ಪ್ರತಿನಿಧಿ: ಇಷ್ಟೊಂದು ಕಡಿಮೆಗೆ ಕೊಡುತ್ತೀರಾ ಚೆನ್ನಾಗಿದ್ದಾವ ಇಲ್ವಾ..?
    ಶಾಪ್ ಮಾಲೀಕ: ಚೆನ್ನಾಗಿ ಇದ್ದಾವೆ. ಈ ಬಾಕ್ಸ್ ಒಳಗಡೆ 23 ಐಟಂ ಬರುತ್ತಾರೆ
    ಪ್ರತಿನಿಧಿ: ಏನು ಚೆನ್ನಾಗಿ ಇರ್ತಾವೋ…

    ಇಲ್ಲಿ ಈ ರೀತಿ ಜಾಸ್ತಿ ರೇಟ್ ಹಾಕಿ ಕಡಿಮೆ ರೇಟ್‍ಗೆ ನಕಲಿ ಪಟಾಕಿಗಳನ್ನ ಸೇಲ್ ಮಾಡುತ್ತಾರೆ. ಆದರೆ ಪ್ರತಿಷ್ಠಿತ ಕಂಪನಿಗಳ ಬ್ರಾಂಡ್‍ನ ಇದೇ ಮಾದರಿ ಬಾಕ್ಸ್ 800 ರೂ. ಅಂತ ಹೇಳುತ್ತಾರೆ. ಅಲ್ಲಿ 300, ಇಲ್ಲಿ 800 ಯಾಕೆ ಅಂದರೆ ಅದು ಡಮ್ಮಿ ಇದು ಸ್ಟಾಂಡರ್ಡ್ ಅಂತ ಅವರ ಬಾಯಲ್ಲೇ ಉತ್ತರ ಬರುತ್ತೆ.

    ಪ್ರತಿನಿಧಿ: ಎಷ್ಟು ಸರ್ ಬಾಕ್ಸ್?
    ಶಾಪ್ ಮಾಲೀಕ: 800 ರೂ. ಸರ್
    ಪ್ರತಿನಿಧಿ: ಅಷ್ಟೋಂದಾ ಸರ್..?
    ಶಾಪ್ ಮಾಲೀಕ: ಸ್ಟಾಂಡರ್ಡ್ ಸರ್ ಇದು
    ಪ್ರತಿನಿಧಿ: ಮತ್ತೆ ಇದೇ ಬಾಕ್ಸ್ 300 ರೂ. ಕೊಡ್ತಾರೆ

    ಶಾಪ್ ಮಾಲೀಕ: ಇದು ಸ್ಟಾಂಡರ್ಡ್
    ಪ್ರತಿನಿಧಿ: ಇದು ಸ್ಟಾಂಡರ್ಡ್..? ಅದು ಡಮ್ಮಿನಾ ಹಾಗಾದ್ರೆ..?
    ಶಾಪ್ ಮಾಲೀಕ: ಹು ತಗೊಂಡು ನೋಡಿ.. ನಿಮಗೆ ಗೊತ್ತಾಗುತ್ತೆ

    ಹೀಗೆ ಮೂರು ಸಾವಿರ, ನಾಲ್ಕು ಸಾವಿರ ರೇಟ್ ಹಾಕಿ ಬರೀ 300, 200 ರೂಪಾಯಿಗೆ ಮಾರಾಟ ಮಾಡುತ್ತಾರೆ ಅಂದರೆ ಜನರನ್ನು ಎಷ್ಟರ ಮಟ್ಟಿಗೆ ಯಾಮಾರಿಸುತ್ತಾರೆ ಎಂಬುದನ್ನು ಅರಿತುಕೊಳ್ಳಬೇಕಾಗಿದೆ. ಒಟ್ಟಿನಲ್ಲಿ ಡಿಸ್ಕೌಂಟ್‍ನಲ್ಲಿ ಸಿಗುತ್ತದೆ ಎಂದು ಡಮ್ಮಿ ಪಟಾಕಿನಾ ತಗೊಂಡು ಹೋಗಿ ಅಪಾಯ ಮೈ ಮೇಲೆ ಎಳೆದು ಕೊಳ್ಳುವ ಮೊದಲು ಎಚ್ಚರವಹಿಸಿ.

  • ಗಣೇಶ ಉತ್ಸವ ನೋಡಲು ಹೋದ ಯುವತಿ ಪಟಾಕಿಗೆ ಬಲಿ

    ಗಣೇಶ ಉತ್ಸವ ನೋಡಲು ಹೋದ ಯುವತಿ ಪಟಾಕಿಗೆ ಬಲಿ

    ತುಮಕೂರು: ಗಣೇಶ ಉತ್ಸವ ನೋಡಲು ಹೋದ ಯುವತಿ ಪಟಾಕಿಗೆ ಮೃತಪಟ್ಟ ಘಟನೆ ತುಮಕೂರು ಜಿಲ್ಲೆ ತಿಪಟೂರು ನಗರದಲ್ಲಿ ನಡೆದಿದೆ.

    ಸಿತಾರ(21) ಪಟಾಕಿಗೆ ಬಲಿಯಾದ ಯುವತಿ. ಸಿತಾರ ತುರುವೇಕೆರೆ ತಾಲೂಕಿನ ಅಮ್ಮ ಸಂದ್ರದ ಹಡವನಹಳ್ಳಿ ಗ್ರಾಮದವಳಾಗಿದ್ದು, ಜಿಲ್ಲೆಯ ತಿಪಟೂರು ನಗರದಲ್ಲಿ ಈ ದುರಂತ ಸಂಭವಿಸಿದೆ. ಪ್ರತಿ ವರ್ಷ ತಿಪಟೂರು ಗಣೇಶ ಉತ್ಸವ ನಡೆಯುತ್ತದೆ.

    ಭಾನುವಾರ ರಾತ್ರಿ ಗಣೇಶ ಉತ್ಸವ ನೋಡಲು ಸಿತಾರ ಹೋಗಿದ್ದಾಗ ಅಲ್ಲಿ ಪಟಾಕಿ ಹೊಡೆಯುತ್ತಿದ್ದರು. ಪಟಾಕಿ ಹೊಡೆಯುವ ವೇಳೆ ಸಿತಾರ ತಲೆ ಮೇಲೆ ಸರಪಟಾಕಿ ಬಿದ್ದಿದೆ. ಹೆಚ್ಚಿನ ಚಿಕಿತ್ಸೆ ಬೆಂಗಳೂರಿಗೆ ತೆರಳುವಾಗ ಸಿತಾರ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಧ್ಯರಾತ್ರಿ ಪಟಾಕಿ ಹೊಡೆದ ಇಬ್ಬರ ಮೇಲೆ ಪ್ರಕರಣ ದಾಖಲು

    ಮಧ್ಯರಾತ್ರಿ ಪಟಾಕಿ ಹೊಡೆದ ಇಬ್ಬರ ಮೇಲೆ ಪ್ರಕರಣ ದಾಖಲು

    ಮುಂಬೈ: ಸುಪ್ರೀಂ ಕೋರ್ಟ್ ಆದೇಶವನ್ನು ಮೀರಿ ಮಧ್ಯರಾತ್ರಿ ಪಟಾಕಿ ಹೊಡೆದ ಆರೋಪದ ಮೇಲೆ ಇಬ್ಬರು ಅನಾಮಿಕ ವ್ಯಕ್ತಿಗಳ ಮೇಲೆ ಮಹಾರಾಷ್ಟ್ರದ ಮನ್ಖರ್ಡ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

    ಮನ್ಖರ್ಡ್‍ನಲ್ಲಿ ಇಬ್ಬರು ವ್ಯಕ್ತಿಗಳು ಪಟಾಕಿಯನ್ನು ಸಿಡಿಸಿ ಮಂಗಳವಾರ ತಡರಾತ್ರಿ ಸಂಭ್ರಮಾಚರಣೆ ಮಾಡಿದ್ದರು. ಇದನ್ನು ಗಮನಿಸಿದ ಆರ್‌ಟಿಐ ಕಾರ್ಯಕರ್ತ ಶಖೀಲ್ ಅಹಮ್ಮದ್ ಶೇಖ್ ಸುಪ್ರೀಂ ಆದೇಶವನ್ನು ಮೀರಿ, ಇಬ್ಬರು ವ್ಯಕ್ತಿಗಳು ಮಧ್ಯರಾತ್ರಿ ಪಟಾಕಿ ಹೊಡೆದಿದ್ದಾರೆಂದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದರು.

    ಸುಪ್ರೀಂ ಆದೇಶದ ಉಲ್ಲಂಘನೆ ಮೇರೆಗೆ ಪೊಲೀಸರು ಇಬ್ಬರು ಅನಾಮಿಕ ವ್ಯಕ್ತಿಗಳ ವಿರುದ್ಧ ಐಪಿಸಿ ಸೆಕ್ಷನ್ 188ರ(ಸರ್ಕಾರಿ ಆದೇಶ ಉಲ್ಲಂಘನೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ಸುಪ್ರೀಂ ಕೋರ್ಟ್‍ನ ತೀರ್ಪಿನ ನಂತರ ಪಟಾಕಿ ಹೊಡೆಯುವ ಸಂಬಂಧಕ್ಕೆ ದೇಶದಲ್ಲೇ ಇದೇ ಮೊದಲ ದೂರೆಂದು ಪೊಲೀಸರು ತಿಳಿಸಿದ್ದಾರೆ.

    ಸುಪ್ರೀಂ ಹೇಳಿದ್ದು ಏನು?
    ಅಕ್ಟೋಬರ್ 23ರಂದು ಸುಪ್ರೀಂ ಕೋರ್ಟಿನ ನ್ಯಾ. ಎ. ಕೆ ಸಿಕ್ರಿ ನೇತೃತ್ವದ ದ್ವಿಸದಸ್ಯ ಪೀಠ ದೇಶಾದ್ಯಂತ ಸಂಪೂರ್ಣವಾಗಿ ಪಟಾಕಿಯನ್ನು ನಿಷೇಧಿಸಲು ಸಾಧ್ಯವಿಲ್ಲ. ಅಲ್ಲದೇ ಸುರಕ್ಷಿತ ಹಾಗೂ ಗ್ರೀನ್ ಪಟಾಕಿಗಳ ಉತ್ಪಾದನೆ ಹಾಗೂ ಮಾರಾಟ ಮುಂದುವರಿಸಬಹುದು. ಪಟಾಕಿಗಳನ್ನು ರಾತ್ರಿ 8 ರಿಂದ ರಾತ್ರಿ 10 ವರೆಗೆ ಮಾತ್ರ ಹೊಡೆಯಬೇಕೆಂದು ಆದೇಶ ನೀಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಾಕೆಟ್ ಪಟಾಕಿಯಿಂದ ಫರ್ನೀಚರ್ ಗೋದಾಮು ಭಸ್ಮವಾಯ್ತು!

    ರಾಕೆಟ್ ಪಟಾಕಿಯಿಂದ ಫರ್ನೀಚರ್ ಗೋದಾಮು ಭಸ್ಮವಾಯ್ತು!

    ಬೆಂಗಳೂರು: ಪಟಾಕಿಯೊಂದು ಸಿಡಿದ ಪರಿಣಾಮ ಫರ್ನೀಚರ್ ತುಂಬಿದ್ದ ಗೋದಾಮಿಗೆ ಬೆಂಕಿ ತಗುಲಿ, ಸಂಪೂರ್ಣ ಕಟ್ಟಡ ಹೊತ್ತಿ ಉರಿದ ಘಟನೆ ಆನೇಕಲ್ ತಾಲೂಕಿನ ಚಂದಾಪುರದ ಬನಹಳ್ಳಿಯಲ್ಲಿ ನಡೆದಿದೆ.

    ದೀಪಾವಳಿ ಹಬ್ಬದ ಸಂಭ್ರಮಾಚರಣೆಯಲ್ಲಿ ಸ್ಥಳೀಯರು ಹಚ್ಚಿದ್ದ ಪಟಾಕಿಯೊಂದು, ಫರ್ನೀಚರ್ ತುಂಬಿದ್ದ ಗೋದಾಮಿಗೆ ತಗುಲಿದೆ. ಪರಿಣಾಮ ಸಂಪೂರ್ಣ ಕಟ್ಟಡಕ್ಕೆ ಬೆಂಕಿ ವ್ಯಾಪಿಸಿದೆ. ಕಟ್ಟಡದಲ್ಲಿ ಮರದ ವಸ್ತುಗಳೇ ಹೆಚ್ಚಾಗಿ ಸಂಗ್ರಹಿಸಿದ್ದರಿಂದ ಅಗ್ನಿಯ ಕೆನ್ನಾಲಿಗೆ ತೀವ್ರತೆಯನ್ನು ಪಡೆದುಕೊಂಡಿದೆ.

    ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ 2 ಅಗ್ನಿಶಾಮಕ ವಾಹನ ಹಾಗೂ ಸಿಬ್ಬಂದಿ ಬೆಂಕಿಯನ್ನು ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಸ್ಥಳೀಯರ ಮಾಹಿತಿಯ ಪ್ರಕಾರ ರಾಕೆಟ್ ಪಟಾಕಿಯೊಂದು, ಗೋದಾಮಿನ ಮೇಲೆ ಸಂಗ್ರಹಿಸಿಟ್ಟಿದ್ದ ಸ್ಪಾಂಜ್‍ಗೆ ತಗುಲಿದ್ದರಿಂದ ಇಡೀ ಕಟ್ಟಡಕ್ಕೆ ಬೆಂಕಿ ವ್ಯಾಪಿಸಿದೆ.

    ಫರ್ನೀಚರ್ ಗೋದಾಮು ಕೇರಳ ಮೂಲದ ಶಾಜಿ ಎಂಬವರಿಗೆ ಸೇರಿದ್ದಾಗಿದೆ. ಘಟನೆ ಸಂಬಂಧ ಸೂರ್ಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಧ್ಯರಾತ್ರಿ ಪಟಾಕಿ ಹೊಡೆದ ಇಬ್ಬರ ಮೇಲೆ ಪ್ರಕರಣ ದಾಖಲು

    ಮಧ್ಯರಾತ್ರಿ ಪಟಾಕಿ ಹೊಡೆದ ಇಬ್ಬರ ಮೇಲೆ ಪ್ರಕರಣ ದಾಖಲು

    ಮುಂಬೈ: ಸುಪ್ರೀಂ ಕೋರ್ಟ್ ಆದೇಶವನ್ನು ಮೀರಿ ಮಧ್ಯರಾತ್ರಿ ಪಟಾಕಿ ಹೊಡೆದ ಆರೋಪದ ಮೇಲೆ ಇಬ್ಬರು ಅನಾಮಿಕ ವ್ಯಕ್ತಿಗಳ ಮೇಲೆ ಮಹಾರಾಷ್ಟ್ರದ ಮನ್ಖರ್ಡ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

    ಮಂಗಳವಾರ ತಡರಾತ್ರಿ ಮನ್ಖರ್ಡ್ ನಲ್ಲಿ ಇಬ್ಬರು ವ್ಯಕ್ತಿಗಳು ಪಟಾಕಿಯನ್ನು ಸಿಡಿಸಿ ಸಂಭ್ರಮಾಚರಣೆ ಮಾಡಿದ್ದರು. ಇದನ್ನು ಗಮನಿಸಿದ ಆರ್‌ಟಿಐ ಕಾರ್ಯಕರ್ತ ಶಖೀಲ್ ಅಹಮ್ಮದ್ ಶೇಖ್ ಸುಪ್ರೀಂ ಆದೇಶವನ್ನು ಮೀರಿ, ಇಬ್ಬರು ವ್ಯಕ್ತಿಗಳು ಮಧ್ಯರಾತ್ರಿ ಪಟಾಕಿ ಹೊಡೆದಿದ್ದಾರೆಂದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದರು.

    ಸುಪ್ರೀಂ ಆದೇಶದ ಉಲ್ಲಂಘನೆ ಮೇರೆಗೆ ಪೊಲೀಸರು ಇಬ್ಬರು ಅನಾಮಿಕ ವ್ಯಕ್ತಿಗಳ ವಿರುದ್ಧ ಐಪಿಸಿ ಸೆಕ್ಷನ್ 188ರ(ಸರ್ಕಾರಿ ಆದೇಶ ಉಲ್ಲಂಘನೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ಸುಪ್ರೀಂ ಕೋರ್ಟ್‍ನ ತೀರ್ಪಿನ ನಂತರ ಪಟಾಕಿ ಹೊಡೆಯುವ ಸಂಬಂಧಕ್ಕೆ ದೇಶದಲ್ಲೇ ಇದೇ ಮೊದಲ ದೂರೆಂದು ಪೊಲೀಸರು ತಿಳಿಸಿದ್ದಾರೆ.

    ಸುಪ್ರೀಂ ಹೇಳಿದ್ದೇನು? 
    ಅಕ್ಟೋಬರ್ 23ರಂದು ಸುಪ್ರೀಂ ಕೋರ್ಟಿನ ನ್ಯಾ. ಎ. ಕೆ ಸಿಕ್ರಿ ನೇತೃತ್ವದ ದ್ವಿಸದಸ್ಯ ಪೀಠ ದೇಶಾದ್ಯಂತ ಸಂಪೂರ್ಣವಾಗಿ ಪಟಾಕಿಯನ್ನು ನಿಷೇಧಿಸಲು ಸಾಧ್ಯವಿಲ್ಲ. ಆದರೆ ಸುರಕ್ಷಿತ ಹಾಗೂ ಗ್ರೀನ್ ಪಟಾಕಿಗಳ ಉತ್ಪಾದನೆ ಹಾಗೂ ಮಾರಾಟ ಮುಂದುವರಿಸಬಹುದು. ಅಲ್ಲದೇ ಪಟಾಕಿಗಳನ್ನು ರಾತ್ರಿ 8 ರಿಂದ ರಾತ್ರಿ 10 ವರೆಗೆ ಮಾತ್ರ ಹೊಡೆಯಬೇಕೆಂದು ಆದೇಶ ನೀಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹಬ್ಬವೆಂದು ಆತುರದಲ್ಲಿ ಪಟಾಕಿ ಹೊಡೆಯೋರೇ ಹುಷಾರ್..!

    ಹಬ್ಬವೆಂದು ಆತುರದಲ್ಲಿ ಪಟಾಕಿ ಹೊಡೆಯೋರೇ ಹುಷಾರ್..!

    ಬೆಂಗಳೂರು: ದೀಪಾವಳಿ ಸಂಭ್ರಮದಲ್ಲಿ ಪಟಾಕಿ ಹೊಡೆಯುವ ಆತುರದಲ್ಲಿರೊರಿಗೆ ಪಾಲಿಕೆ ಶಾಕ್ ನೀಡಲಿದೆ. ಪಟಾಕಿ ತ್ಯಾಜ್ಯ ನೀವೇ ಕ್ಲಿನ್ ಮಾಡಬೇಕು. ಇಲ್ಲವಾದ್ರೆ ಕ್ರಿಮಿನಲ್ ಕೇಸ್ ಬೀಳುತ್ತದೆ. ಹೈಕೋರ್ಟ್ ಸೂಚನೆಯಿಂದ ಕಸ ಎಸೆಯುವವರ ವಿರುದ್ಧ ಕಠಿಣ ಕ್ರಮಕ್ಕೆ ಪಾಲಿಕೆ ಮುಂದಾಗಿದೆ. ಹೀಗಾಗಿ ಪಟಾಕಿ ತ್ಯಾಜ್ಯ ಇದ್ರೆ ಕ್ರಿಮಿನಲ್ ಕೇಸ್ ದಾಖಲಿಸಲು ಪಾಲಿಕೆ ದೀಪಾವಳಿಯ ರಜೆ ಪಡೆಯದೇ ಕೆಲಸ ಮಾಡ್ತಿದೆ.

    ಹೌದು, ದೀಪಾವಳಿ ಹಬ್ಬದ ಪ್ರಯುಕ್ತ ಪಟಾಕಿ ಹೊಡೆದ್ಮೇಲೆ ಅದರ ತ್ಯಾಜ್ಯವನ್ನು ನೀವೇ ಶುಚಿಗೊಳಿಸಬೇಕು. ಪೌರಕಾರ್ಮಿಕರು ಕ್ಲೀನ್ ಮಾಡ್ತಾರೆ ಅಂತ ಕಾಯುವಂತಿಲ್ಲ. ಒಂದು ವೇಳೆ ನಿಮ್ಮ ಮನೆ ಮುಂದೆ ಪಟಾಕಿ ತ್ಯಾಜ್ಯ ಇದ್ರೆ ಪೌರಕಾರ್ಮಿಕರೇ ದೂರು ಕೊಡ್ತಾರೆ. ಬಳಿಕ ಪಾಲಿಕೆ ಅಧಿಕಾರಿಗಳು ನಿಮ್ಮ ಮಾಹಿತಿಯನ್ನ ಪೊಲೀಸ್ ಇಲಾಖೆಗೆ ಕೊಡ್ತಾರೆ. ಹೀಗಾಗಿ ಪಟಾಕಿ ತ್ಯಾಜ್ಯದ ಬಗ್ಗೆ ಎಚ್ಚರ ಸಾರ್ವಜನಿಕರೇ ಎಚ್ಚರ ಅಂತ ಪಾಲಿಕೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

    ನಾಡಿಗೆಲ್ಲಾ ದೀಪಾವಳಿಯ ಸಂಭ್ರಮ, ಆದ್ರೆ ಬಿಬಿಎಂಪಿ ಅಧಿಕಾರಿಗಳು ಮಾತ್ರ ಕಸ ಸ್ವಚ್ಛತೆಯಲ್ಲಿ ತೊಡಗಿಕೊಂಡಿದ್ದಾರೆ. ಹೈಕೋರ್ಟ್ ಚಾಟಿ ಬೀಸಿರುವ ಹಿನ್ನೆಲೆಯಲ್ಲಿ ನೆಮ್ಮದಿ ಕಳೆದುಕೊಂಡಿರುವ ಪಾಲಿಕೆಯ ಘನ ತ್ಯಾಜ್ಯ ನಿರ್ವಹಣಾ ಅಧಿಕಾರಿಗಳು ಕಸ ನಿರ್ವಹಣೆ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ. ಆಯುಕ್ತ ಮಂಜುನಾಥ್ ಪ್ರಸಾದ್ ಸೇರಿದಂತೆ, ಆರೋಗ್ಯಾಧಿಕಾರಿಗಳು ಹಾಗೂ ಎಂಜಿನಿಯರ್ಸ್ ರಸ್ತೆ ರಸ್ತೆಗಳನ್ನೂ ಪರಿಶೀಲನೆ ನಡೆಸಿ ಕಸ ರಾಶಿ ಬೀಳದಂತೆ ಎಚ್ಚರಿಕೆ ವಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬೆಂಗ್ಳೂರಲ್ಲಿ ಪಟಾಕಿ ಸಿಡಿತಕ್ಕೆ ಇಬ್ಬರ ಬಾಳಲ್ಲಿ ಅಂಧಾಕಾರ..!

    ಬೆಂಗ್ಳೂರಲ್ಲಿ ಪಟಾಕಿ ಸಿಡಿತಕ್ಕೆ ಇಬ್ಬರ ಬಾಳಲ್ಲಿ ಅಂಧಾಕಾರ..!

    – 10ಕ್ಕೂ ಹೆಚ್ಚು ಮಂದಿಗೆ ಗಾಯ

    ಬೆಂಗಳೂರು: ಕತ್ತಲೆಯಿಂದ ಬೆಳಕಿನೆಡೆಗೆ ದೀಪಾವಳಿ. ಆದ್ರೆ ಈ ದೀಪಾವಳಿ ಬೆಳಕಿನ ಹಬ್ಬದ ಸಮಯದಲ್ಲಿ ಮೊದಲನೇ ದಿನವೇ ನಗರದಲ್ಲಿ ಇಬ್ಬರು ಮಕ್ಕಳ ಪಾಲಿಗೆ ಶಾಶ್ವತ ಅಂಧಕಾರವನ್ನ ತಂದೊಡ್ಡಿದೆ.

    ದೀಪಾವಳಿ ಹಬ್ಬದ ಖಷಿಯಲ್ಲಿ ಪಟಾಕಿ ಸಿಡಿಸಲು ಹೋಗಿ ಮಂಗಳವಾರ ಸುಮಾರು 10 ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ಡಿಜೆ ಹಳ್ಳಿಯ 13 ವರ್ಷದ ಸಹೀದಾ ಬಾನು ಎಂಬ ಏಳನೇ ತರಗತಿ ವಿದ್ಯಾರ್ಥಿನಿಗೆ ಪಟಾಕಿ ತಗಲಿ ಒಂದು ಕಣ್ಣಿಗೆ ತೀವ್ರಪೆಟ್ಟಾಗಿ ದೃಷ್ಟಿ ಕಳೆದುಕೊಂಡಿದೆ. ಬೊಮ್ಮನಹಳ್ಳಿಯಲ್ಲಿ ಮನೆಯ ಮುಂದೆ ಪಟಾಕಿ ಸಿಡಿಸೋದನ್ನ ನೋಡುತ್ತ ನಿಂತಿದ್ದ ಆರು ವರ್ಷದ ಬಾಲಕಿ ದಿವ್ಯಾಗೆ ರಸ್ತೆಯಲ್ಲಿಟ್ಟಿದ್ದ ಪಟಾಕಿ ಸಿಡಿದು ಎಡಕಣ್ಣಿನ ರೆಟಿನಾಗೆ ತೀವ್ರ ಪೆಟ್ಟಾಗಿದೆ.

    ಇಬ್ಬರು ಬಾಲಕಿಯರನ್ನು ಮಿಂಟೊ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ವೈದ್ಯರು ಗಾಯಗೊಂಡ ಮಕ್ಕಳಿಗೆ ರಾತ್ರಿಯೇ ಆಪರೇಷನ್ ನಡೆಸಿ ಹೆಚ್ಚಿನ ಚಿಕಿತ್ಸೆ ನೀಡ್ತಿದ್ದಾರೆ. ನೆನ್ನೆ ಒಂದೇ ದಿನ ಪಟಾಕಿ ಸಿಡಿದು ಗಾಯಗೊಂಡವರ ಪೈಕಿ ಮಿಂಟೊ ಕಣ್ಣಿನ ಆಸ್ಪತ್ರೆಯಲ್ಲಿ 7 ಹಾಗೂ ನಾರಾಯಣ ನೇತ್ರಾಲಯದಲ್ಲಿ ಮೂವರು ಚಿಕಿತ್ಸೆ ಪಡೆದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ತಲೆ ಮೇಲೆ ಸಿಡಿಯಿತು ಪಟಾಕಿ – ಮೆದುಳು ಹೊರಬಂದು ಬಾಲಕ ಸ್ಥಳದಲ್ಲೇ ಸಾವು

    ತಲೆ ಮೇಲೆ ಸಿಡಿಯಿತು ಪಟಾಕಿ – ಮೆದುಳು ಹೊರಬಂದು ಬಾಲಕ ಸ್ಥಳದಲ್ಲೇ ಸಾವು

    ಬೆಂಗಳೂರು: ಪಟಾಕಿ ಸ್ಫೋಟಕ್ಕೆ 12 ವರ್ಷದ ಬಾಲಕ ಬಲಿಯಾಗಿರುವ ಘಟನೆ ನಗರದ ಹಲಸೂರಿನ ಕೇಂಬ್ರಿಡ್ಜ್ ಲೇಔಟ್‍ನಲ್ಲಿ ನಡೆದಿದೆ.

    ಧನುಷ್ ಸಾವನ್ನಪ್ಪಿದ ಬಾಲಕ. ಭಾನುವಾರ ರಾತ್ರಿ ಸುಮಾರು 9 ಗಂಟೆಗೆ ಕೇಂಬ್ರಿಡ್ಜ್ ಲೇಔಟ್ ನಲ್ಲಿರುವ ಲೂರ್ದ್ ಚರ್ಚಿನ ಆವರಣದಲ್ಲಿ ಪಟಾಕಿ ಸಿಡಿಸುವ ವೇಳೆ ಬಾಲಕ ಮೃತಪಟ್ಟಿದ್ದಾನೆ.

    ಪ್ರತಿ ಹೊಸ ವರ್ಷದ ಎರಡನೇ ಭಾನುವಾರ ಚರ್ಚ್ ನಲ್ಲಿ ಪಟಾಕಿ ಸಿಡಿಸುವ ಕಾರ್ಯಕ್ರಮ ಆಯೋಜನೆ ಆಗುತ್ತಿದ್ದು, ಸಾವಿರಾರು ಜನ ಭಾಗವಹಿಸುತ್ತಾರೆ. ಧನುಷ್ ಪ್ರತಿ ವರ್ಷ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದು ಈ ವರ್ಷವೂ ಕೂಡ ಪಟಾಕಿ ಸಿಡಿಸುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ.

    ಧನುಷ್ ತಲೆ ಮೇಲೆ ಪಟಾಕಿ ಬಿದ್ದ ಪರಿಣಾಮ ಮೆದುಳು ಹೊರಬಂದಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಧನುಷ್ ತ್ಯಾಗರಾಜನಗರ ನಿವಾಸಿಯಾಗಿದ್ದು, ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಅತೀ ಹೆಚ್ಚು ಪಟಾಕಿ ಮಾರಾಟವಾಗ್ತಿದ್ದ ಮಂಗ್ಳೂರಲ್ಲಿ ಈಗ ಬಿಸಿನೆಸ್ ಡೆಲ್

    ಅತೀ ಹೆಚ್ಚು ಪಟಾಕಿ ಮಾರಾಟವಾಗ್ತಿದ್ದ ಮಂಗ್ಳೂರಲ್ಲಿ ಈಗ ಬಿಸಿನೆಸ್ ಡೆಲ್

    ಮಂಗಳೂರು: ದೀಪಾವಳಿ ಬಂದರೆ ಪಟಾಕಿ ಪ್ರಿಯರಿಗೆ ಗಮ್ಮತ್ತೇ ಗಮ್ಮತ್ತು. ಎಲ್ಲೆಡೆ ಪಟಾಕಿ ಸದ್ದು, ಗಿರಗಿಟ್ಲೆ ತಿರುಗೋ ನೆಲಚಕ್ರ ಹೊತ್ತಿಸಿ ಆಡುವ ಮಕ್ಕಳು. ಆದರೆ ಮಂಗಳೂರಿನಲ್ಲಿ ಪಟಾಕಿ ಸಂಭ್ರಮ ಈ ಬಾರಿ ತುಂಬಾನೇ ಕಮ್ಮಿಯಾಗಿದೆ. ಹೀಗಾಗಿ ಪಟಾಕಿ ಮಾರಾಟದ ಅಂಗಡಿಗಳಿಗೆ ಬೇಜಾನ್ ಲಾಸ್ ಆಗಿದೆ.

    ಹೀಗೆ ಸಾಲು ಸಾಲಾಗಿರೋ ಪಟಾಕಿ ಅಂಗಡಿಗಳಲ್ಲಿ ಹೆಚ್ಚಿನವರು ಧೂಳು ಹೊಡೆಯುತ್ತಿದ್ದಾರೆ. ಈ ಸಾರಿ ಪಟಾಕಿ ಬಿಸಿನೆಸ್ ಲಗಾಡಿ ಹೋಯ್ತು ಎಂದು ತಲೆಗೆ ಕೈ ಹೊತ್ತುಕೊಂಡವರು ಇದ್ದಾರೆ. ಹೌದು. ಈ ಬಾರಿ ದೀಪಾವಳಿಗೆ ಪಟಾಕಿಯ ಮೆರುಗು ಮರೆಯಾಗಿದೆ. ಹಿಂದಿನಂತೆ ಪಟಾಕಿಯ ಚಿತ್ತಾರವಂತೂ ನೋಡೋಕೆ ಸಿಗುತ್ತಿಲ್ಲ. ಅತೀ ಹೆಚ್ಚು ಪಟಾಕಿ ಮಾರಾಟಕ್ಕೆ ಹೆಸರಾಗಿದ್ದ ಮಂಗಳೂರು ನಗರದಲ್ಲಿ ಅರ್ಧಕ್ಕರ್ಧ ಬಿಸಿನೆಸ್ ಡೌನ್ ಆಗಿದೆಯಂತೆ. ನೋಟ್ ಬ್ಯಾನ್ ಮತ್ತು ಜನರಲ್ಲಿ ಪಟಾಕಿಯಿಂದ ಪರಿಸರ ನಾಶವಾಗುತ್ತಿದೆಯೆಂಬ ಜಾಗೃತಿ ಬಂದಿದ್ದರಿಂದ ಹಿಂದಿಗಿಂತ ವ್ಯಾಪಾರ ತುಂಬಾನೇ ಕಮ್ಮಿಯಾಗಿದೆ ಎಂದು ಮಾರಾಟಗಾರರು ಹೇಳುತ್ತಿದ್ದಾರೆ.

    ಈ ಬಾರಿ ದೆಹಲಿ ನಗರ ವ್ಯಾಪ್ತಿಯಲ್ಲಿ ಪಟಾಕಿ ನಿಷೇಧ ಮಾಡಿದ್ದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇನ್ನೊಂದೆಡೆ ಪರಿಸರ ಹೋರಾಟಗಾರರು ಕೂಡ ಜಾಲತಾಣದಲ್ಲಿ ಪಟಾಕಿ ವಿರುದ್ಧ ಅಭಿಯಾನ ನಡೆಸಿದ್ದರು. ಇವೆಲ್ಲದರ ಪರಿಣಾಮ ಪಟಾಕಿಯ ಮಾರಾಟದ ಮೇಲಾಗಿದ್ದು, ಸ್ವತಃ ಜನರೇ ಖರೀದಿಗೆ ಬರುತ್ತಿಲ್ಲ. ಇದರಿಂದಾಗಿ ದೀಪಾವಳಿಯ ಮೊದಲ ದಿನವೇ ಭರ್ಜರಿ ವ್ಯಾಪಾರ ನಿರೀಕ್ಷಿಸಿದ್ದ ವ್ಯಾಪಾರಸ್ಥರು ಬಿಸಿನೆಸ್ ಡಲ್ ಆಗಿದ್ದರಿಂದ ಸೊರಗಿದ್ದಾರೆ.

    ಇದರ ಜೊತೆ ಮಂಗಳೂರು ಮಹಾನಗರ ಪಾಲಿಕೆ ಮತ್ತು ಪೊಲೀಸರು ಪಟಾಕಿ ಮಾರಾಟಕ್ಕೆ ನಿಯಂತ್ರಣ ಹೇರಿದ್ದರಿಂದ ವ್ಯಾಪಾರ ಮತ್ತಷ್ಟು ಕಷ್ಟವಾಗಿದೆಯಂತೆ. ಕೆಲವರಂತೂ 20 ವರ್ಷಗಳಿಂದ ಪಟಾಕಿ ವ್ಯಾಪಾರ ನಡೆಸುತ್ತಿದ್ದವರಿಗೆ ಇದೇ ಮೊದಲ ಬಾರಿಗೆ ವ್ಯಾಪಾರದಲ್ಲಿ ಡಲ್ ಹೊಡೆದಿದೆ. ಹೊಸ ವರ್ಷ ಹಾಗೂ ಇತರೆ ಸಮಾರಂಭಗಳಿಗೆ ಸಿಕ್ಕಾಪಟ್ಟೆ ಪಟಾಕಿ ಹೊಡೆಯೋದನ್ನು ವಿರೋಧಿಸದವರು ಕೇವಲ ದೀಪಾವಳಿ ಹಬ್ಬದ ಪಟಾಕಿಗೆ ವಿರೋಧ ವ್ಯಕ್ತಪಡಿಸಿರೋದು ಸರಿಯಲ್ಲ ಎಂಬ ಮಾತು ಕೇಳಿಬರುತ್ತಿದೆ. ವರ್ಷಕ್ಕೊಮ್ಮೆ ಹಬ್ಬದ ಹೆಸರಲ್ಲಿ ಸಿಡಿಸೋ ಪಟಾಕಿಗೆ ಸರ್ಕಾರ ನಿಯಂತ್ರಣ ಹೇರಬಾರದು ಎಂದು ವ್ಯಾಪಾರಸ್ಥರು ಹೇಳುತ್ತಿದ್ದಾರೆ.