Tag: Crackers

  • ದೀಪಾವಳಿಯಲ್ಲಿ ಪಟಾಕಿ ಸಿಡಿಸುವುದರ ಮಹತ್ವವೇನು?

    ದೀಪಾವಳಿಯಲ್ಲಿ ಪಟಾಕಿ ಸಿಡಿಸುವುದರ ಮಹತ್ವವೇನು?

    ಹಿಂದೂಗಳ ಅತಿದೊಡ್ಡ ಹಬ್ಬವೆಂದರೆ ಅದು ಬೆಳಕಿನ ಹಬ್ಬ ದೀಪಾವಳಿ. ದೀಪಾವಳಿ ಹಬ್ಬದ ವೈಭವಕ್ಕೆ ಜನರು ಆಕರ್ಷಿತರಾಗುತ್ತಾರೆ ಅದರಲ್ಲಿ ಪಟಾಕಿ ಹಾರಿಸುವುದು ಒಂದು. ಅದು ಜನರಿಗೆ ದೀಪಾವಳಿಯನ್ನು ಮರುಕಳಿಸುವಲ್ಲಿ ಸಹಾಯಮಾಡುತ್ತದೆ. ಈ ಮೂಲಕ ದೀಪಾವಳಿಯ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ.

    ದೀಪಾವಳಿ ಹಬ್ಬವು ಕತ್ತಲೆಯ ಮೇಲೆ ಬೆಳಕಿನ ವಿಜಯ, ಕೆಟ್ಟದ್ದರ ಮೇಲೆ ಒಳ್ಳೆಯದು ಮತ್ತು ಅಜ್ಞಾನದ ಮೇಲೆ ಜ್ಞಾನವನ್ನು ಸಂಕೇತಿಸುತ್ತದೆ. ಇದು ಸಾವಿರಾರು ವರ್ಷಗಳ ಹಿಂದಿನ ಒಂದು ದೊಡ್ಡ ಆಚರಣೆಯಾಗಿದೆ. 14 ವರ್ಷಗಳ ವನವಾಸದ ನಂತರ ಶ್ರೀರಾಮನು ಅಯೋಧ್ಯೆಗೆ ಮರಳುವ ಸಂಕೇತವನ್ನು ಇದು ಸೂಚಿಸುತ್ತದೆ. ಗಿದೆ .

    ಹತ್ತು ತಲೆಯ ರಾಕ್ಷಸ ರಾಜ ರಾವಣನನ್ನು ಕೊಂದು ತನ್ನ ಪತ್ನಿ ಸೀತಾ ದೇವಿಯನ್ನು ಭಗವಾನ್ ರಾಮನು ವಿಜಯಶಾಲಿಯಾಗಿ ರಕ್ಷಿಸಿದನು . ಆದ್ದರಿಂದ ಈ ಹಬ್ಬವು ಕೆಟ್ಟದ್ದರ ಮೇಲೆ ಒಳ್ಳೆಯತನ ವಿಜಯವನ್ನು ಸಾಧಿಸುವುದನ್ನು ಪ್ರತಿನಿಧಿಸುತ್ತದೆ.

    ಈ ಹಬ್ಬದಂದು ಜನರು ನಡೆಸುವ ಪ್ರಮುಖ ಆಚರಣೆಯೆಂದರೆ ಲಕ್ಷ್ಮಿ ಪೂಜೆ. ಸಂಪತ್ತು ಮತ್ತು ಸಮೃದ್ಧಿಯ ದೈವಿಕ ಸಾಕಾರವಾದ ಲಕ್ಷ್ಮಿ ದೇವಿಯು ತನ್ನ ಭಕ್ತರ ಮನೆಗಳಿಗೆ ದಯೆಯಿಂದ ಭೇಟಿ ನೀಡುತ್ತಾಳೆ ಮತ್ತು ಭಕ್ತರಿಗೆ ಆಶೀರ್ವಾದ ಮತ್ತು ಅದೃಷ್ಟವನ್ನು ನೀಡುತ್ತಾಳೆ ಎಂದು ನಂಬಲಾಗಿದೆ.

    ಈ ಸಮಯದಲ್ಲಿ ಆಭರಣಗಳು ಮನೆ ಹಾಗೂ ರಸ್ತೆಗಳಲ್ಲಿ ಕೃತಕ ದೀಪಗಳು ಮತ್ತು ದೀಪಗಳಿಂದ ಬೆಳಗಿಸಲಾಗುತ್ತದೆ. ಹಬ್ಬಗಳ ಭಾಗವಾಗಿ ಪ್ರೀತಿಪಾತ್ರರ ಜೊತೆ ಪಟಾಕಿಗಳನ್ನು ಹಾರಿಸುವುದು ಇನ್ನೊಂದು ರೀತಿಯ ಸಂಭ್ರಮವಾಗಿದೆ.

    ಪಟಾಕಿ ಹಾರಿಸುವುದರ ಮಹತ್ವವೇನು?
    ಪಟಾಕಿ ಪ್ರದರ್ಶನ:
    ದೀಪಾವಳಿಯನ್ನು ಬೆಳಕಿನ ಹಬ್ಬ ಎಂದು ಕರೆಯಲಾಗುತ್ತದೆ. ಇದು ಅಪಾರವಾದ ಸಂತೋಷ ಮತ್ತು ಉಲ್ಲಾಸವನ್ನು ತರುತ್ತದೆ. ಈ ಉತ್ಸಾಹಭರಿತ ಆಚರಣೆಯನ್ನು ವ್ಯಾಖ್ಯಾನಿಸುವ ಆಚರಣೆಗಳಲ್ಲಿ, ಪಟಾಕಿ ಹಾರಿಸುವುದು ಕೂಡ ಒಂದು. ರಾತ್ರಯಾಗುತ್ತಿದ್ದಂತೆ ಆಕಾಶವನ್ನು ವಿಭಿನ್ನ ಶಬ್ದಗಳಿಂದ, ಬಣ್ಣಗಳಿಂದ ಬೆಳಗುತ್ತದೆ.

    AI Photo
    AI Photo

    ದೀಪಾವಳಿಯ ಸಮಯದಲ್ಲಿ ಪಟಾಕಿಗಳನ್ನು ಹಾರಿಸುವುದು ಶತಮಾನಗಳ ಹಿಂದಿನ ಅಭ್ಯಾಸ. ಪಟಾಕಿ ಸಿಡಿಸುವುದರಲ್ಲಿ ಹಬ್ಬದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕತೆಯನ್ನು ಆಳವಾಗಿ ಬೇರೂರಿದೆ. ಪಟಾಕಿಗಳು ಸಂಭ್ರಮದ ಸಂಕೇತವಾಗಿದೆ ಮತ್ತು ಆಚರಣೆಯ ಅವಿಭಾಜ್ಯ ಅಂಗವಾಗಿದೆ, ಕತ್ತಲೆಯ ಮೇಲೆ ಬೆಳಕಿನ ವಿಜಯ ಮತ್ತು ಕೆಟ್ಟದ್ದರ ಮೇಲೆ ಒಳ್ಳೆಯದನ್ನು ಪ್ರತಿನಿಧಿಸುತ್ತದೆ.

    ಪಟಾಕಿಗಳ ಸಿಡಿಸುವಿಕೆಯು ಭವ್ಯವಾದ ಆಚರಣೆಯನ್ನು ಪುನರಾವರ್ತಿಸುತ್ತದೆ. ಆಕಾಶವು ಬೆಳಕು ಮತ್ತು ಬಣ್ಣದಿಂದ ಉರಿಯುತ್ತದೆ. ಇದು ಸಂಭ್ರಮದ ಸೂಚಕವಾಗಿದೆ,

    ಲಕ್ಷ್ಮಿದೇವಿಯನ್ನು ಸ್ವಾಗತ
    ದೀಪಾವಳಿಯು ಸಂಪತ್ತು ಮತ್ತು ಸಮೃದ್ಧಿಯ ದೇವತೆಯಾದ ಲಕ್ಷ್ಮಿ ದೇವಿಗೆ ಸಮರ್ಪಿತವಾಗಿದೆ. ಈ ರಾತ್ರಿಯಲ್ಲಿ ದೇವಿ ಭೂಮಿಯನ್ನು ಸುತ್ತುತ್ತಾಳೆ, ಮನೆಗಳಿಗೆ ಭೇಟಿ ನೀಡುತ್ತಾಳೆ ಮತ್ತು ಅವಳನ್ನು ಪ್ರಕಾಶಮಾನವಾದ ಬೆಳಕಿನಿಂದ ಸ್ವಾಗತಿಸಲಾಗುತ್ತದೆ. ಅದಕ್ಕಾಗಿ ಪಟಾಕಿಯನ್ನು ಹಾರಿಸಲಾಗುವುದು. ದೀಪಗಳನ್ನು ಬೆಳಗಿಸುವುದು ಮತ್ತು ಪಟಾಕಿಗಳನ್ನು ಹಚ್ಚುವುದು ಅವಳನ್ನು ಸ್ವಾಗತಿಸಲು ಮತ್ತು ಮುಂಬರುವ ವರ್ಷದಲ್ಲಿ ಸಂಪತ್ತು ಮತ್ತು ಸಮೃದ್ಧಿಗಾಗಿ ಅವಳ ಆಶೀರ್ವಾದವನ್ನು ಪಡೆಯಲು ಒಂದು ಮಾರ್ಗವಾಗಿದೆ.

    ಸಾಂಸ್ಕೃತಿಕ ಆಚರಣೆಗಳು
    ಧಾರ್ಮಿಕ ಮತ್ತು ಐತಿಹಾಸಿಕ ಮಹತ್ವವನ್ನು ಮೀರಿ, ದೀಪಾವಳಿಯ ಸಮಯದಲ್ಲಿ ಪಟಾಕಿಗಳನ್ನು ಸಿಡಿಸುವುದು ಒಂದು ಸಾಂಸ್ಕೃತಿಕ ರೂಢಿಯಾಗಿದೆ, ಕುಟುಂಬಗಳು ಮತ್ತು ಸಮುದಾಯಗಳು ಒಟ್ಟಾಗಿ ಸೇರಿ ದೀಪಾವಳಿಯನ್ನು ಆಚರಿಸಲು ಒಂದು ಮಾರ್ಗವಾಗಿದೆ. ಆಕಾಶದಲ್ಲಿ ವರ್ಣರಂಜಿತ ಪ್ರದರ್ಶನಗಳು ಎಲ್ಲಾ ವಯಸ್ಸಿನ ಜನರನ್ನು ಒಟ್ಟಿಗೆ ತರುತ್ತವೆ, ಸಮುದಾಯಗಳ ನಡುವೆ ಉತ್ಸಾಹ ಮತ್ತು ಏಕತೆಯ ಭಾವವನ್ನು ಸೃಷ್ಟಿಸುತ್ತವೆ.

  • ಪಟಾಕಿ ಕಚ್ಚಿ ಕಾರ್ಯಕರ್ತರ ಸಂಭ್ರಮ- ಸಚಿವ ರಾಜಣ್ಣ ಕಣ್ಣಿಗೆ ಗಾಯ

    ಪಟಾಕಿ ಕಚ್ಚಿ ಕಾರ್ಯಕರ್ತರ ಸಂಭ್ರಮ- ಸಚಿವ ರಾಜಣ್ಣ ಕಣ್ಣಿಗೆ ಗಾಯ

    ತುಮಕೂರು: ಸಹಕಾರಿ ಸಚಿವ ಕೆ.ಎನ್ ರಾಜಣ್ಣ (Minister K N Rajanna) ಅವರ ಕಣ್ಣಿ (Eye) ಗೆ ಪಟಾಕಿ ಕಿಡಿ ಹಾರಿ ಗಾಯಗೊಂಡ ಘಟನೆ ಪಟ್ಟದ ಹುಚ್ಚಮಾಸ್ತಿಗೌಡ ವೃತ್ತದಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ.

    ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಕೆ.ಎನ್ ರಾಜಣ್ಣ ಅವರು ಇಂದು ಶಕ್ತಿ ಯೋಜನೆ (Shakti Yojana) ಗೆ ಚಾಲನೆ ನೀಡಲು ತುಮಕೂರಿನಿಂದ ಕುಣಿಗಲ್ ಮಾರ್ಗವಾಗಿ ಹಾಸನಕ್ಕೆ ತೆರಳುತ್ತಿದ್ದರು. ವಿಷಯ ತಿಳಿದ ಕೆಎನ್ ಆರ್ ಅಭಿಮಾನಿಗಳು ಹಿತೈಷಿಗಳು ಕಾಂಗ್ರೆಸ್ (Congress) ಕಾರ್ಯಕರ್ತರು ಕುಣಿಗಲ್ ಪಟ್ಟಣದ ಹುಚ್ಚಮಾಸ್ತಿಗೌಡ ಸರ್ಕಲ್ ಬಳಿ ಕಾರನ್ನು ತಡೆದು ಹೂಮಾಲೆ ಹಾಕಿ ಅಭಿನಂದಿಸಿದರು. ಬಳಿಕ ಸಮೀಪದಲ್ಲೇ ಪಟಾಕಿ ಸಿಡಿಸಿದರು. ಇದನ್ನೂ ಓದಿ: 14ರ ಹಿಂದೂ ಬಾಲಕಿ ಕಿಡ್ನ್ಯಾಪ್‌ ಮಾಡಿ ಇಸ್ಲಾಂಗೆ ಮತಾಂತರ – ಪೋಷಕರ ಜೊತೆ ಕಳುಹಿಸಲು ಪಾಕ್‌ ಕೋರ್ಟ್‌ ನಿರಾಕರಣೆ

    ಇತ್ತ ಯಾಕೋ ಸಚಿವರು ತಮ್ಮ ಕನ್ನಡಕವನ್ನೊಮ್ಮೆ ತೆಗೆದರು. ಇದೇ ವೇಳೆ ಪಟಾಕಿಯ ಕಿಡಿ ನೇರವಾಗಿ ಬಲಗಣ್ಣಿನತ್ತ ಹಾರಿದೆ. ಕೂಡಲೇ ಸಚಿವರನ್ನು ಎಂ.ಎಂ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ನೇತ್ರ ತಜ್ಞ ಡಾ.ರವಿಕುಮಾರ್ ಅವರಿಂದ ಚಿಕಿತ್ಸೆ ಕೊಡಿಸಲಾಯಿತು, ಬಳಿಕ ಅವರು ಹಾಸನಕ್ಕೆ ತೆರಳಿದರು.

     

  • ಬಹುಭಾಷಾ ಹಿರಿಯ ನಟಿ ವಿನಯ ಪ್ರಸಾದ್ ಮನೆ ದೋಚಿದ ಖದೀಮರು

    ಬಹುಭಾಷಾ ಹಿರಿಯ ನಟಿ ವಿನಯ ಪ್ರಸಾದ್ ಮನೆ ದೋಚಿದ ಖದೀಮರು

    ಬೆಂಗಳೂರು: ಬೆಳಕಿನ ಹಬ್ಬ ಈ ಬಾರಿ ಬೆಂಗಳೂರಿನ ಕೆಲವರ ಮನೆಯಲ್ಲಿ ಕತ್ತಲೆ ಆವರಿಸುವಂತೆ ಮಾಡಿದೆ. ದೀಪಾವಳಿ (Deepavali) ಹಬ್ಬದ ಪಟಾಕಿ ಸದ್ದಿನ ಭದ್ರತೆಯಲ್ಲಿ ಖ್ಯಾತ ಬಹುಭಾಷಾ ಹಿರಿಯ ನಟಿಯ ಮನೆ ಸೇರಿ ಹಲವು ಮನೆಗಳಲ್ಲಿ ಕಳ್ಳರು ಕೈಚಳಕ ತೋರಿದ್ದಾರೆ.

    ಹೌದು, ಬಹುಭಾಷಾ ಹಿರಿಯ ನಟಿ ವಿನಯಪ್ರಸಾದ್ (Vinaya Prasad) ಮನೆಯ ಬಾಗಿಲು ಮುರಿದು ಖದೀಮರು ಮನೆಯಲ್ಲಿದ್ದ ನಗದು ಹಾಗೂ ಬೆಲೆಬಾಳುವ ವಸ್ತುಗಳನ್ನ ದೋಚಿಕೊಂಡು ಹೋಗಿದ್ದಾರೆ. ದೀಪಾವಳಿ ಹಬ್ಬಕ್ಕೆ ಕುಟುಂಬ ಸಮೇತರಾಗಿ ಹಿರಿಯ ನಟಿ ವಿನಯ ಪ್ರಸಾದ್ ಅವರು, ತಮ್ಮ ಹುಟ್ಟೂರು ಉಡುಪಿಗೆ ಹೋಗಿದ್ದರು. ಊರಿಗೆ ಹೋಗಿರುವುದನ್ನು ಗಮನಿಸಿದ ಕಳ್ಳರು ದೀಪಾವಳಿ ಹಬ್ಬದ ದಿನ ಮನೆ ಬೀಗ ಮುರಿದು 7 ಸಾವಿರ ರೂಪಾಯಿ ನಗದು ದೋಚಿಕೊಂಡು ಹೋಗಿದ್ದಾರೆ.

    ವಿನಯ ಪ್ರಸಾದ್ ಕುಟುಂಬ ಹಬ್ಬ ಮುಗಿಸಿ ನಂದಿನಿ ಲೇಔಟ್‍ನಲ್ಲಿರುವ (Nandini Layout) ತಮ್ಮ ಮನೆಗೆ ಬಂದಾಗ ಕಳ್ಳತನ ಆಗಿರುವ ವಿಚಾರ ಬೆಳಕಿಗೆ ಬಂದಿದೆ. ಕಳ್ಳತನ ಸಂಬಂಧ ಸದ್ಯ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಕಳ್ಳರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಇದನ್ನೂ ಓದಿ: ಸಿಗರೇಟು ಸೇದೋಕೆ ಕಾರು ನಿಲ್ಲಿಸಿದ ಮಾಲೀಕ – 75 ಲಕ್ಷ ಹಣದೊಂದಿಗೆ ಚಾಲಕ ಎಸ್ಕೇಪ್

    POLICE JEEP

    ದೀಪಾವಳಿ ಹಬ್ಬದ ದಿನವೇ ಉತ್ತರ ವಿಭಾಗದ ನಾಲ್ಕೈದು ಠಾಣಾ ವ್ಯಾಪ್ತಿಯಲ್ಲಿ ಖದೀಮರು ಕಳ್ಳತನ ಮಾಡಿದ್ದಾರೆ. ಜೆಸಿ ನಗರ, ಮಲ್ಲೇಶ್ವರಂ, ಸುಬ್ರಹ್ಮಣ್ಯನಗರ, ರಾಜಗೋಪಾಲನಗರ ಠಾಣಾ ವ್ಯಾಪ್ತಿಯಲ್ಲಿ ಖದೀಮರು ತಮ್ಮ ಕರಾಮತ್ತನ್ನು ತೋರಿಸಿದ್ದಾರೆ. ಕಳ್ಳರು ಮನೆ ಮಾಲೀಕರು ಮನೆಯಲ್ಲಿ ಇಲ್ಲದೇ ಇರುವುದು ಮತ್ತು ದೀಪಾವಳಿ ಹಬ್ಬದಲ್ಲಿ ದೊಡ್ಡ ಮಟ್ಟದ ಪಟಾಕಿ ಹೊಡೆಯುವುದನ್ನೇ ಕಳ್ಳರು ಬಂಡವಾಳವಾನ್ನಾಗಿ ಮಾಡಿಕೊಂಡಿದ್ದಾರೆ. ಪಟಾಕಿ ಸದ್ದಿನ ನಡುವೆ ಮನೆಗಳ ಬೀಗ ಮುರಿಯುವ ಶಬ್ಧ ಆಚೇ ಬರದ ರೀತಿಯಲ್ಲಿ ನೋಡಿಕೊಂಡು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ.

    ಒಟ್ಟಾರೆ ದೀಪಾವಳಿ ಹಬ್ಬದ ಸಮಯದಲ್ಲಿ ಸರಣಿ ಮನೆಗಳ್ಳತನವಾಗಿರುವುದು ಉತ್ತರ ವಿಭಾಗದ ಪೊಲೀಸರ ನಿದ್ದೆಗೆಡಿಸಿದ್ದು ಕಳ್ಳತನವಾಗಿರುವ ರಾಜಗೋಪಾಲ ನಗರ, ಮಲ್ಲೇಶ್ವರಂ, ಜೆ.ಸಿ ನಗರ, ಸುಬ್ರಮಣ್ಯ ನಗರ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲಿಸಿಕೊಂಡು ಖದೀಮರ ಬೇಟೆಗೆ ಪೊಲೀಸರು ಇಳಿದಿದ್ದಾರೆ. ಇದನ್ನೂ ಓದಿ: ಶಾಸಕ ಬೆಲ್ಲದ್‌ ಹೆಸರಿನಲ್ಲಿ ಡೆತ್‌ನೋಟ್‌ ಬರೆದು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ

    Live Tv
    [brid partner=56869869 player=32851 video=960834 autoplay=true]

  • ಪಟಾಕಿ ಸಿಡಿತದಿಂದ ಹೈದರಾಬಾದ್‍ನಲ್ಲಿ 24 ಮಂದಿ ಕಣ್ಣಿಗೆ ಗಾಯ

    ಪಟಾಕಿ ಸಿಡಿತದಿಂದ ಹೈದರಾಬಾದ್‍ನಲ್ಲಿ 24 ಮಂದಿ ಕಣ್ಣಿಗೆ ಗಾಯ

    ಹೈದರಾಬಾದ್: ದೀಪಾವಳಿ ಹಬ್ಬದ (Diwali Celebrations) ಮೊದಲ ದಿನವೇ ಪಟಾಕಿ ಸಿಡಿತದಿಂದ ಸುಮಾರು 24 ಮಂದಿ ಕಣ್ಣಿಗೆ ಗಾಯವಾಗಿರುವ ಘಟನೆ ಹೈದರಾಬಾದ್‍ನ (Hyderabad) ಮೆಹದಿಪಟ್ನಂನಲ್ಲಿ (Mehdipatnam) ನಡೆದಿದೆ.

    ಮೆಹದಿಪಟ್ಟಣಂನಲ್ಲಿರುವ ಸರ್ಕಾರಿ ಸರೋಜಿನಿ ದೇವಿ ಕಣ್ಣಿನ ಆಸ್ಪತ್ರೆಯಲ್ಲಿ (Sarojini Devi Eye Hospital) ಮಕ್ಕಳು ಸೇರಿದಂತೆ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ದೀಪಾವಳಿ ಸಮಯದಲ್ಲಿ ನಿಷೇಧಿತ ಪಟಾಕಿಗಳನ್ನು ಮಾರಾಟ ಮಾಡುವ ವ್ಯಾಪಾರಿಗಳು ಮತ್ತು ಅಂಗಡಿಗಳ ಮೇಲೆ ತೆಲಂಗಾಣ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಟಿಎಸ್‍ಪಿಸಿಬಿ) ಇತ್ತೀಚೆಗಷ್ಟೇ ಕಠಿಣ ಕ್ರಮ ಕೈಗೊಂಡಿದೆ.

    ನಾಗರಿಕ ಮತ್ತು ಮಾಲಿನ್ಯ ಮಂಡಳಿ ನಿಯಮಗಳನ್ನು ಅನುಸಿಸದೇ ಇರುವವರನ್ನು ಗುರುತಿಸಲು ವಿಶೇಷ ತಂಡವನ್ನು ರಚಿಸಲಾಗಿದೆ. ಭಾರತ ಮತ್ತು ಪ್ರಪಂಚದಾದ್ಯಂತ ಅಕ್ಟೋಬರ್ 24 ರವರೆಗೂ ದೀಪಾವಳಿ ಹಬ್ಬವನ್ನು ಹಿಂದೂಗಳು ಸಂಪ್ರದಾಯಿಕವಾಗಿ ಆಚರಿಸುತ್ತಾರೆ. ಇದನ್ನೂ ಓದಿ: ಕೇತುಗ್ರಸ್ಥ ಸೂರ್ಯಗ್ರಹಣ – ಘಾಟಿಸುಬ್ರಮಣ್ಯ ದೇವಾಲಯ, ಶ್ರೀ ಭೋಗನಂದೀಶ್ವರನ ಆಲಯ ಬಂದ್

    ಪ್ರತಿ ದೀಪಾವಳಿ ಹಬ್ಬದಲ್ಲೂ ಆಂಧ್ರಪ್ರದೇಶದ ಜನತೆ ಸತ್ಯಭಾಮೆಯ ಮಣ್ಣಿನ ವಿಗ್ಹವನ್ನು ತಯಾರಿಸಿ, ಅದಕ್ಕೆ ಪ್ರಾರ್ಥನೆ ಸಲ್ಲಿಸಿ, ಆಶೀರ್ವಾದ ಪಡೆಯುತ್ತಾರೆ. ಬಳಿಕ ತಮ್ಮ ಪ್ರೀತಿ ಪಾತ್ರರೊಂದಿಗೆ ಸಂತೋಷದಿಂದ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಇದನ್ನೂ ಓದಿ: ಶಿವಮೊಗ್ಗ ಮತ್ತೆ ಉದ್ವಿಗ್ನ – ಹರ್ಷನ ಮನೆ ಮುಂದೆ ಲಾಂಗು, ಮಚ್ಚು ಹಿಡಿದು ಓಡಾಟ

    Live Tv
    [brid partner=56869869 player=32851 video=960834 autoplay=true]

  • ಶಬ್ಧಕ್ಕಿಂತಲೂ ಜೋರಾಗಿದೆ ಪಟಾಕಿ ದರ- ಹಬ್ಬದ ಸಂಭ್ರಮದಲ್ಲಿದ್ದವರು ಬೆಲೆ ಕೇಳಿ ಫುಲ್ ಸುಸ್ತು!

    ಶಬ್ಧಕ್ಕಿಂತಲೂ ಜೋರಾಗಿದೆ ಪಟಾಕಿ ದರ- ಹಬ್ಬದ ಸಂಭ್ರಮದಲ್ಲಿದ್ದವರು ಬೆಲೆ ಕೇಳಿ ಫುಲ್ ಸುಸ್ತು!

    ಬೆಂಗಳೂರು: ಕೊರೋನಾ (Corona Virus) ಬಳಿಕ ಅದ್ಧೂರಿ ದೀಪಾವಳಿಯ ಮೂಡ್‍ನಲ್ಲಿದ್ದ ಜನರಿಗೆ ಪಟಾಕಿ (Crackers) ದರ ಭರ್ಜರಿ ಶಾಕ್ ನೀಡಿದೆ. ಪಟಾಕಿ ಕೊಳ್ಳೋಕೆ ಅಂತಾ ಅಂಗಡಿಗೆ ಹೋದರೆ ಜೇಬಿಗೆ ಬೆಂಕಿ ಕಿಡಿ ಬಿದ್ದಂತಾಗಿದೆ.

    ದೇಶದಾದ್ಯಂತ ದೀಪಾವಳಿ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಕಳೆದ 2 ವರ್ಷದಿಂದ ಕಳೆಗುಂದಿದ್ದ ಹಬ್ಬದ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಇದರ ನಡುವೆ ಈ ಬಾರಿಯಾದರೂ ಅದ್ಧೂರಿ ಹಬ್ಬದ ಜೊತೆಗೆ ಪಟಾಕಿ ಹೊಡೆಯಬಹುದೆಂಬ ಖುಷಿಯಲ್ಲಿ ತಯಾರಿ ನಡೆಸಿದ್ದವರಿಗೆ ದರ ಏರಿಕೆ ಶಾಕ್ ಎದುರಾಗಿದೆ. ಇದನ್ನೂ ಓದಿ: ಊರಿಗೆ ಹೋಗಲಾರದೇ ಮೂಡಿತ್ತು ಬೇಸರ- ಕಾಲೇಜು ಕ್ಯಾಂಪಸ್‍ನಲ್ಲೇ ದೀಪಾವಳಿ ಸಡಗರ

    ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ರೆ ಈ ಬಾರಿ ಪಟಾಕಿ ದರ (Crackers Price) ತುಂಬಾನೇ ಕಾಸ್ಟ್ಲಿಯಾಗಿದೆ. ಕಾರಣ ಕಚ್ಚಾ ವಸ್ತುಗಳ ಬೆಲೆ ಏರಿಕೆ. ಇದರ ಜೊತೆಗೆ ಟ್ರಾನ್ಸ್ ಪೋರ್ಟ್ ಚಾರ್ಜ್ ಹೆಚ್ಚಳ, ಜಿಎಸ್‍ಟಿ ಸೇರಿದಂತೆ ಹಲವು ಕಾರಣಗಳು ದರ ಹೆಚ್ಚಳಕ್ಕೆ ಕಾರಣವಾಗಿದೆ. ಸದ್ಯ ಈ ಬಾರಿ ಹಬ್ಬದ ಮೇಲೆ ಪ್ರಭಾವ ಬೀರಿದ್ದು ಕಳೆದ ವರ್ಷದ ದರ ಮತ್ತು ಈ ವರ್ಷದ ದರಕ್ಕೆ ಸಾಕಷ್ಟು ವ್ಯತ್ಯಾಸವಿದೆ. ಕಳೆದ ಬಾರಿಗಿಂತ ಈ ಬಾರಿ ಬರೊಬ್ಬರಿ 40 ಶೇಕಡಾದಷ್ಟು ದರ ಏರಿಕೆಯಾಗಿದೆ.

    ಪಟಾಕಿ ದರ ಕೈ ಸುಡುತ್ತಿದ್ದರೂ ಕೆಲವರು ಬಿಂದಾಸ್ ಆಗಿ ಹಬ್ಬ ಆಚರಿಸಲು ಪ್ಲಾನ್ ಮಾಡಿದ್ದಾರೆ. 2 ವರ್ಷದ ಬಳಿಕ ಹಬ್ಬ ಮಾಡುತ್ತಿರುವ ಹಿನ್ನೆಲೆ ಬೆಲೆ ಬಗ್ಗೆ ಹೆಚ್ಚು ಗಮನ ಕೊಡ್ತಿಲ್ಲ. ಸದ್ಯ ಸ್ವಲ್ಪ ಹಣ ಹೆಚ್ಚಾದರೂ ಪರವಾಗಿಲ್ಲ ಸಂಭ್ರಮದಿಂದ ಹಬ್ಬ ಮಾಡೋಣ ಎಂದು ಕೆಲ ಗ್ರಾಹಕರು ಹೇಳುತ್ತಾರೆ.

    ಒಟ್ಟಾರೆ ಎಲ್ಲಾ ವಸ್ತುಗಳಂತೆ ಪಟಾಕಿ ದರ ಕಳೆದ ಬಾರಿಗಿಂತ ಹೆಚ್ಚಾಗೇ ಇದೆ. ಇದರ ಜೊತೆಗೆ ಜನ ಕೂಡ ಹಬ್ಬದ ಕಾರಣ ದರ ಏರಿಕೆಗೆ ಅಡ್ಜೆಸ್ಟ್ ಆದಂತೆ ಕಾಣುತ್ತಿದೆ.

  • ದೀಪಾವಳಿಯಲ್ಲಿ ನಿಷೇಧಿತ ಪಟಾಕಿ ಸಿಡಿಸಿದ್ರೆ 6 ತಿಂಗಳು ಜೈಲು ಶಿಕ್ಷೆ

    ದೀಪಾವಳಿಯಲ್ಲಿ ನಿಷೇಧಿತ ಪಟಾಕಿ ಸಿಡಿಸಿದ್ರೆ 6 ತಿಂಗಳು ಜೈಲು ಶಿಕ್ಷೆ

    ನವದೆಹಲಿ: ರಾಜಧಾನಿಯಲ್ಲಿ ದೀಪಾವಳಿಯಂದು (Diwali) ಪಟಾಕಿ ಸಿಡಿಸಿದರೆ ಆರು ತಿಂಗಳವರೆಗೆ ಜೈಲು ಶಿಕ್ಷೆ ಮತ್ತು 200 ರೂ. ದಂಡ ವಿಧಿಸಲಾಗುವುದು ಎಂದು ಪರಿಸರ ಸಚಿವ ಗೋಪಾಲ್ ರೈ ಹೇಳಿದ್ದಾರೆ.

    ದೆಹಲಿಯಲ್ಲಿ (New Delhi) ಪಟಾಕಿಗಳ ಉತ್ಪಾದನೆ, ಶೇಖರಣೆ ಮತ್ತು ಮಾರಾಟ ಮಾಡಿದರೆ 5,000 ರೂ. ವರೆಗೆ ದಂಡ ಮತ್ತು ಸ್ಫೋಟಕ ಕಾಯ್ದೆಯ ಸೆಕ್ಷನ್ 9 ಬಿ ಅಡಿಯಲ್ಲಿ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಸಚಿವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಕಾಶ್ಮೀರ ಪ್ರತ್ಯೇಕ ದೇಶ – ಶಾಲಾ ಪ್ರಶ್ನೆ ಪತ್ರಿಕೆಯಲ್ಲಿ ಉಲ್ಲೇಖಿಸಿದ್ದಕ್ಕೆ ವಿವಾದ

    ದೆಹಲಿ ಸರ್ಕಾರವು ಎಲ್ಲಾ ರೀತಿಯ ಪಟಾಕಿಗಳ ಉತ್ಪಾದನೆ, ಮಾರಾಟ ಮತ್ತು ಬಳಕೆಗೆ ಜನವರಿ 1 ರವರೆಗೆ ಸಂಪೂರ್ಣ ನಿಷೇಧ ವಿಧಿಸಿದೆ. ಇದು ಕಳೆದ ಎರಡು ವರ್ಷಗಳಿಂದ ಅನುಸರಿಸುತ್ತಿರುವ ಕ್ರಮವಾಗಿದೆ. ಅಕ್ಟೋಬರ್ 21 ರಂದು ಸಾರ್ವಜನಿಕ ಜಾಗೃತಿ ಅಭಿಯಾನವನ್ನು ಪ್ರಾರಂಭಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

    ನಿಷೇಧಾಜ್ಞೆ ಜಾರಿಗೊಳಿಸಲು 408 ತಂಡಗಳನ್ನು ರಚಿಸಲಾಗಿದೆ. ಸಹಾಯಕ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ 210 ತಂಡಗಳನ್ನು ರಚಿಸಿದ್ದರೆ, ಕಂದಾಯ ಇಲಾಖೆಯಿಂದ 165 ತಂಡಗಳು ಮತ್ತು ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿಯಿಂದ 33 ತಂಡ ರಚಿಸಲಾಗಿದೆ. ಇದನ್ನೂ ಓದಿ: ಎಐಸಿಸಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮಲ್ಲಿಕಾರ್ಜುನ ಖರ್ಗೆಗೆ ಮೋದಿ ವಿಶ್

    Live Tv
    [brid partner=56869869 player=32851 video=960834 autoplay=true]

  • ಪಟಾಕಿಗಳ ಉತ್ಪಾದನೆ, ಮಾರಾಟ ಮತ್ತು ಬಳಕೆಯ ಮೇಲಿನ ನಿಷೇಧ ವಿಸ್ತರಣೆ

    ಪಟಾಕಿಗಳ ಉತ್ಪಾದನೆ, ಮಾರಾಟ ಮತ್ತು ಬಳಕೆಯ ಮೇಲಿನ ನಿಷೇಧ ವಿಸ್ತರಣೆ

    ನವದೆಹಲಿ: ಹಬ್ಬ ಹರಿದಿನಗಳಲ್ಲಿ ಮಾಲಿನ್ಯವನ್ನು ತಡೆಗಟ್ಟಲು ಎಲ್ಲಾ ರೀತಿಯ ಪಟಾಕಿ ( Fire Crackers) ಗಳ ಉತ್ಪಾದನೆ, ಮಾರಾಟ ಮತ್ತು ಬಳಕೆಯ ಮೇಲಿನ ನಿಷೇಧವನ್ನು ಜನವರಿ 1 ರವರೆಗೆ ವಿಸ್ತರಿಸಲಾಗುವುದು ಎಂದು ದೆಹಲಿ ಪರಿಸರ ಸಚಿವ ಗೋಪಾಲ್ ರೈ (Gopal Rai) ಬುಧವಾರ ಘೋಷಿಸಿದ್ದಾರೆ.

    ಆನ್‍ಲೈನ್‍ (Online) ನಲ್ಲಿ ಪಟಾಕಿ ಮಾರಾಟಕ್ಕೂ ನಿಷೇಧವನ್ನು ವಿಸ್ತರಿಸಲಾಗಿದೆ ಎಂದು ರೈ ಟ್ವಿಟ್ ಮಾಡಿದ್ದಾರೆ. ಎಲ್ಲಾ ರೀತಿಯ ಪಟಾಕಿಗಳ ಉತ್ಪಾದನೆ, ಸಂಗ್ರಹಣೆ, ಮಾರಾಟ ಮತ್ತು ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇದರಿಂದ ಜನರ ಜೀವನವನ್ನು ಉಳಿಸಬಹುದು ಎಂದು ಗೋಪಾಲ್ ರೈ ತಿಳಿಸಿದ್ದಾರೆ.

    FIRE CRACKERS

    ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದನ್ನು ಖಚಿತಪಡಿಸಿಕೊಳ್ಳಲು ದೆಹಲಿ ಪೊಲೀಸ್, ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿ ಮತ್ತು ಕಂದಾಯ ಇಲಾಖೆಯೊಂದಿಗೆ ಕ್ರಿಯಾ ಯೋಜನೆಯನ್ನು ರೂಪಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ. ಇದನ್ನೂ ಓದಿ: ಬಿಎಸ್‌ವೈ, ಕುಟುಂಬದ ವಿರುದ್ಧ ಭ್ರಷ್ಟಾಚಾರ ಆರೋಪ – ಮರು ವಿಚಾರಣೆ ನಡೆಸುವಂತೆ ಹೈಕೋರ್ಟ್‌ ಆದೇಶ

    ಕಳೆದ ವರ್ಷ ಕೊರೊನಾ ವೈರಸ್ (Corona Virus) ಮತ್ತು ಹದಗೆಡುತ್ತಿರುವ ಗಾಳಿಯ ಗುಣಮಟ್ಟದಿಂದಾಗಿ ಹಬ್ಬದ ಸೀಸನ್‍ಗೂ ಮುಂಚಿತವಾಗಿ ರಾಷ್ಟ್ರ ರಾಜಧಾನಿಯಲ್ಲಿ “ಗ್ರೀನ್ ಕ್ರ್ಯಾಕರ್ಸ್” ಸೇರಿದಂತೆ ಪಟಾಕಿಗಳನ್ನು ಮಾರಾಟ ಮಾಡುವುದನ್ನು ಮತ್ತು ಸಿಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ದೆಹಲಿ ಸರ್ಕಾರ ಆದೇಶಿಸಿತ್ತು. ಪಟಾಕಿ ಸಿಡಿಸುವುದರ ವಿರುದ್ಧ ಜಾಗೃತಿ ಮೂಡಿಸಲು ಎಎಪಿ ‘ಪತಾಖೆ ನಹಿ ದಿಯೆ ಜಲಾವೋ’ ಅಭಿಯಾನವನ್ನೂ ಆರಂಭಿಸಿತ್ತು.

    Live Tv
    [brid partner=56869869 player=32851 video=960834 autoplay=true]

  • ಹಸಿರು ಪಟಾಕಿ ದರ ಭಾರೀ ಏರಿಕೆ

    ಹಸಿರು ಪಟಾಕಿ ದರ ಭಾರೀ ಏರಿಕೆ

    ಬೆಂಗಳೂರು: ದೀಪಾವಳಿಗೆ ಹಸಿರು ಪಟಾಕಿ ಬಳಕೆಗೆ ಮಾತ್ರ ಸರ್ಕಾರ ಅನುಮತಿ ನೀಡಿದ್ದು ದರ ಏರಿಕೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ.20-30 ರಷ್ಟು ದರ ಏರಿಕೆಯಾಗಿದೆ. ಈ ಮೂಲಕ ಪಟಾಕಿ ಪ್ರಿಯರಿಗೆ ಬಿಸಿ ತಟ್ಟಿದೆ.

    ಎಷ್ಟು ಏರಿಕೆಯಾಗಿದೆ?
    ಫ್ಲವರ್ ಪಾಟ್ಸ್ 150 ರೂ. ನಿಂದ 180 ರೂ.ಗೆ ಏರಿಕೆಯಾಗಿದ್ದರೆ ಭೂಚಕ್ರ 130 ರೂ. ನಿಂದ 155 ರೂ.ವರೆಗೆ ಏರಿಕೆಯಾಗಿದೆ. 300 ರೂ.ಗೆ ಸಿಗುತ್ತಿದ್ದ ಸ್ಕೈ ಶಾಟ್ಸ್ 450 ರೂ.ಗೆ ಏರಿಕೆಯಾಗಿದೆ. ಕಳೆದ ವರ್ಷ ಗ್ರೀನ್ ಬಾಂಬ್ ಬಾಕ್ಸ್‌ಗೆ 160 ರೂ. ಇದ್ದರೆ ಈಗ 185 ರೂ.ಗೆ ಏರಿಕೆಯಾಗಿದೆ. 500 ರೂ.ಗೆ ಸಿಗುತ್ತಿದ್ದ ಪಟಾಕಿ ಗಿಫ್ಟ್‌ ಬಾಕ್ಸ್‌ 700 ರೂ.ಗೆ ಏರಿಕೆಯಾಗಿದೆ.

    ಸುಪ್ರೀಂ ಆದೇಶ ಏನು?
    ಹಸಿರು ಪಟಾಕಿ ಮಾರಾಟಕ್ಕೆ ಸುಪ್ರೀಂ ಕೋರ್ಟ್‌ ನೀಡಿರುವ ಆದೇಶಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಪರವನಾಗಿದಾರರು ಸಂಬಂಧ ಪಟ್ಟ ಇಲಾಖೆ/ಪ್ರಾಧಿಕಾರ ನೀಡಿರುವ ಪರವಾನಗಿಯಲ್ಲಿ ನಿಗದಿಪಡಿಸಿರುವ ದಿನಾಂಕ ಮತ್ತು ಸ್ಥಳದಲ್ಲಿ ಅಂಗಡಿಗಳನ್ನು ಇಡಬೇಕು. ಒಂದು ಪಟಾಕಿ ಮಳಿಗೆಯಿಂದ ಮತ್ತೊಂದು ಪಟಾಕಿ ಮಳಿಗೆ 6 ಮೀಟರ್ ಅಂತರ ಇರಬೇಕು . ಪಟಾಕಿ ಮಳಿಗೆಗಳಲ್ಲಿ ಎರಡು ಕಡೆಯಿಂದ ಸರಾಗವಾಗಿ ಗಾಳಿಯಾಡುವಂತಿರಬೇಕು. ಸಾರ್ವಜನಿಕ ವಸತಿ ಸ್ಥಳಗಳಲ್ಲಿ ದೂರವಿರುವ ಮೈದಾನ ಅಥವಾ ಬಯಲು ಪ್ರದೇಶಗಳಲ್ಲಿ ಪಟಾಕಿ ಮಳಿಗೆಗಳನ್ನು ಸ್ಥಾಪಿಸಲು ಸಂಬಂಧ ಪಟ್ಟ ಇಲಾಖೆ ಮತ್ತು ಪ್ರಾಧಿಕಾರದ ಅನುಮತಿ ಪಡೆಯಬೇಕು. ಇದನ್ನೂ ಓದಿ: ತಾರೆಯರು ಒಗ್ಗಟ್ಟಾಗಿರೋಣ: ಎಲ್ಲ ನಟರಿರುವ ಫೋಟೊ ಹಂಚಿಕೊಂಡು ಜಗ್ಗೇಶ್‌ ಕರೆ 

    ಪ್ರತಿಯೊಂದು ಮಳಿಗೆಗಳಲ್ಲಿ ಪರವಾನಗಿಯನ್ನು ಪ್ರದರ್ಶಿಸುವಂತೆ ಅಂಟಿಸಬೇಕು. ಹಸಿರು ಪಟಾಕಿ ಮಾರಾಟ ಮಾಡುವ ಮಳಿಗೆಗಳ ಸುತ್ತಮುತ್ತ ಸ್ಯಾನಿಟೈಸ್‌ ಮಾಡಬೇಕು. ಮಳಿಗೆಳ ಬಳಿ ಮತ್ತು ಜನ 6 ಅಡಿ ಅಂತರ ಕಾಪಾಡಿಕೊಳ್ಳಬೇಕು. ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ಪ್ರಾಧಿಕಾರ, ಪಾಲಿಕೆ ಸರ್ಕಾರ ಹೊರಡಿಸಿರುವ ನಿಯಮಗಳನ್ನ ಪಾಲಿಸಬೇಕು. ರಾಷ್ಟ್ರೀಯ ನಿರ್ದೇಶನಗಳನ್ನು ಹಾಗೂ ರಾಜ್ಯ ಸರ್ಕಾರದ ಆದೇಶ ಉಲ್ಲಂಘಿಸುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ ಕ್ರಮ ಕೈಗೊಳ್ಳಲಾಗುತ್ತದೆ. ಇದನ್ನೂ ಓದಿ: ಅವನು ಇನ್ನೂ ನನ್ನ ಮಡಿಲಲ್ಲಿ, ಆಲೋಚನೆಗಳಲ್ಲಿ ಶಾಶ್ವತವಾಗಿದ್ದಾನೆ: ರಾಘವೇಂದ್ರ ರಾಜ್‍ಕುಮಾರ್

  • ದೀಪಾವಳಿಗೆ ಈ ಬಾರಿಯೂ ಆಗುತ್ತಾ ಪಟಾಕಿ ಬ್ಯಾನ್?

    ದೀಪಾವಳಿಗೆ ಈ ಬಾರಿಯೂ ಆಗುತ್ತಾ ಪಟಾಕಿ ಬ್ಯಾನ್?

    -ಹಸಿರು ಪಟಾಕಿಗಷ್ಟೇ ಸಿಗುತ್ತಾ ಅನುಮತಿ

    ಬೆಂಗಳೂರು: ಇನ್ನೇನು ಬೆಳಕಿನ ಹಬ್ಬ ದೀಪಾವಳಿ ಸಮೀಪಿಸುತ್ತಿದೆ. ಮನೆ ಮಂದಿಯೆಲ್ಲ ಹಬ್ಬವನ್ನು ಬರಮಾಡಿಕೊಳ್ಳಲು ಸಿದ್ಧತೆಯಲ್ಲಿ ತೊಡಗಿದ್ದಾರೆ. ಹಬ್ಬದ ಊಟ ಹೊಸ ಬಟ್ಟೆಗಳ ಸಂಭ್ರಮದ ಜೊತೆಗೆ ಮಕ್ಕಳು, ಯುವಜನರಿಗೆಲ್ಲ ದೀಪಾವಳಿ ಅಂದರೆ ಪಟಾಕಿ ಕ್ರೇಜ್ ಇದ್ದೆ ಇರುತ್ತದೆ. ಆದರೆ ಕಳೆದ ಬಾರಿ ಕೋವಿಡ್ ಹಿನ್ನಲೆ ಪಟಾಕಿ ಸಿಡಿಸುವುದನ್ನು ಬ್ಯಾನ್ ಮಾಡಿದ್ದ ಸರ್ಕಾರ ಹಸಿರು ಪಟಾಕಿಗಳಿಗೆ ಮಾತ್ರ ಒಪ್ಪಿಗೆ ಸೂಚಿಸಿತ್ತು. ಈ ಬಾರಿಯೂ ಇದೇ ಸಿದ್ಧತೆಯಲ್ಲಿದೆಯಾ ಎಂಬ ಬಗ್ಗೆ ಜನರು ಎದುರು ನೋಡುತ್ತಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಬಿಎಂಪಿ ಮುಖ್ಯಾಯುಕ್ತರಾದ ಗೌರವ್ ಗುಪ್ತ, ದೀಪಾವಳಿ ಸಂಭ್ರಮದ ಹಬ್ಬ. ಕೋವಿಡ್ ಹಿನ್ನಲೆ ಶಿಸ್ತುಬದ್ಧವಾಗಿ ಮಾಡಬೇಕಾಗುತ್ತದೆ. ಇದನ್ನು ಹೊರತು ಪಡಿಸಿ ಬೇರೆ ಮಾರ್ಗಸೂಚಿಗಳ ಬಗ್ಗೆ ತಯಾರು ಮಾಡಲು ಪಾಲಿಕೆ ಮಟ್ಟದಲ್ಲಿ ಸಿದ್ಧ ಇದ್ದೇವೆ. ಆದರೆ ಪ್ರತ್ಯೇಕ ನಿಯಮಗಳ ಬಗ್ಗೆ ಈಗಲೇ ಚಿಂತನೆ ನಡೆಸಿಲ್ಲ ಎಂದಿದ್ದಾರೆ.  ಇದನ್ನೂ ಓದಿ: ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಿಎಂ

    ಜೋರು ಶಬ್ದ ಮಾಡುವ, ವಾಯು ಮಾಲಿನ್ಯ ಮಾಡುವ ಪಟಾಕಿಗಳಿಗೆ ಎನ್‍ಜಿಟಿ ಈಗಾಗಲೇ ಬ್ರೇಕ್ ಹಾಕಿದೆ. ಪಟಾಕಿ ಕುರಿತಂತೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಮಾಡುವ ನಿಯಮಗಳನ್ನು ಸರ್ಕಾರ, ಬಿಬಿಎಂಪಿಯೂ ಪಾಲಿಸಬೇಕಾಗುತ್ತದೆ. ಹೀಗಾಗಿ ಬೇರೆ ಪಟಾಕಿಗಳ ಮಾರಟ ಖರೀದಿಗೆ ಬ್ರೇಕ್ ಬೀಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಅಗರ ಕೆರೆ ರಾಜಕಾಲುವೆಗಳು, ಸುತ್ತಲಿನ ಲೇಔಟ್ ಚರಂಡಿ ದುರಸ್ತಿಗೆ ಶೀಘ್ರ ಕ್ರಮ: ಬೊಮ್ಮಾಯಿ

  • ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪಟಾಕಿ ಸಂಪೂರ್ಣ ನಿಷೇಧ

    ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪಟಾಕಿ ಸಂಪೂರ್ಣ ನಿಷೇಧ

    ನವದೆಹಲಿ: ಪಟಾಕಿ ಸಂಗ್ರಹ, ಮಾರಾಟ ಮತ್ತು ಸಿಡಿಸುವುದನ್ನು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.

    ಇಂದು ಟ್ವಿಟ್ಟರ್ ಮೂಲಕ ಸರ್ಕಾರದ ನಿರ್ಧಾರ ತಿಳಿಸಿದ್ದು, ಮಾಲಿನ್ಯ ನಿಯಂತ್ರಣಕ್ಕೆ ಕಠಿಣ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ. ದೆಹಲಿಯಲ್ಲಿ ಮಾಲಿನ್ಯದ ಪ್ರಮಾಣ ತಗ್ಗಿಸುವ ಸಂಬಂಧ ಅರವಿಂದ್ ಕೇಜ್ರಿವಾಲ್, ಪರಿಸರ ಸಚಿವ ಗೋಪಾಲ್ ರಾಯ್ ಇಂದು ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಜೊತೆಗೆ ಸಭೆ ನಡೆಸಿದರು. ಸಭೆಯ ಬಳಿಕ ಪಟಾಕಿ ನಿಷೇಧಿಸಲು ತೀರ್ಮಾನಿಸಲಾಯಿತು. ಇದನ್ನೂ ಓದಿ: 10-14 ವಾರಗಳ ಅಂತರದಲ್ಲಿ ಕೋವಿಶೀಲ್ಡ್ ಲಸಿಕೆ ಪಡೆಯುವುದು ಉತ್ತಮ- ಅಧ್ಯಯನ ವರದಿ

    ಕಳೆದ ಮೂರು ವರ್ಷಗಳಿಂದ ರಾಷ್ಟ್ರ ರಾಜಧಾನಿಯಲ್ಲಿ ಮಾಲಿನ್ಯ ಪರಿಸ್ಥಿತಿ ನಿಯಂತ್ರಿಸುವ ದೃಷ್ಟಿಯಿಂದ ದೀಪಾವಳಿ ಸಂದರ್ಭದಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗುತ್ತಿದ್ದು, ಈ ನಿರ್ಧಾರದಿಂದ ಜನರ ಜೀವ ಉಳಿಸಬಹುದು ಎಂದು ಕೇಜ್ರಿವಾಲ್ ಹೇಳಿದ್ದಾರೆ. ಕಳೆದ ವರ್ಷ ವ್ಯಾಪಾರಿಗಳು ಪಟಾಕಿಗಳನ್ನು ಸಂಗ್ರಹಿಸಿದ ನಂತರ ಮಾಲಿನ್ಯದ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು ಸಂಪೂರ್ಣ ನಿಷೇಧವನ್ನು ತಡವಾಗಿ ವಿಧಿಸಲಾಯಿತು ಇದು ವ್ಯಾಪಾರಿಗಳಿಗೆ ನಷ್ಟವನ್ನು ಉಂಟುಮಾಡಿತು. ಈ ಬಾರಿ ಸಂಪೂರ್ಣ ನಿಷೇಧದ ದೃಷ್ಟಿಯಿಂದ, ಯಾವುದೇ ರೀತಿಯ ಶೇಖರಣೆಯನ್ನು ಮಾಡಬೇಡಿ ಎಂದು ಎಲ್ಲ ವ್ಯಾಪಾರಿಗಳಿಗೆ ಅವರು ಮನವಿ ಮಾಡಿದರು. ಇದನ್ನೂ ಓದಿ: ಹಬ್ಬದ ಸಂದರ್ಭದಲ್ಲಿ ಸರಣಿ ಸ್ಫೋಟಕ್ಕೆ ಸಂಚು- 6 ಉಗ್ರರ ಬಂಧನ

    ಪಂಜಾಬ್ ಹರಿಯಾಣ ಸೇರಿ ಸುತ್ತ ಮುತ್ತಲಿನ ರಾಜ್ಯಗಳಲ್ಲಿ ಸುಡುವ ಬೆಳೆ ತಾಜ್ಯದಿಂದಲೂ ದೆಹಲಿಯಲ್ಲಿ ಮಾಲಿನ್ಯವಾಗುತ್ತಿತ್ತು. ಇದನ್ನು ನಿಯಂತ್ರಣ ಮಾಡಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಬೆಳೆ ತಾಜ್ಯ ನಿರ್ವಹಣೆಗೆ ಕೇಂದ್ರ ಸರ್ಕಾರದ 496 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಕೇಜ್ರಿವಾಲ್ ಹೇಳಿದರು.