Tag: Crab

  • ಕಲ್ಲಾಗಿ ಬದಲಾದ ಏಡಿ – ಅಘನಾಶಿನಿ ನದಿಯಲ್ಲಿ ವಿಸ್ಮಯ

    ಕಲ್ಲಾಗಿ ಬದಲಾದ ಏಡಿ – ಅಘನಾಶಿನಿ ನದಿಯಲ್ಲಿ ವಿಸ್ಮಯ

    ಕಾರವಾರ: ಕಲ್ಲಿನಲ್ಲಿ ಏಡಿ ಸಿಗೋದು ನೋಡಿರಬಹುದು. ಆದರೆ ಏಡಿಯೇ ಕಲ್ಲಾಗಿ ಸಿಕ್ಕರೆ ಇದು ಪ್ರಕೃತಿ ವಿಸ್ಮಯವಲ್ಲವೇ? ಹೌದು ಉತ್ತರ ಕನ್ನಡ (Uttara Kannada) ಜಿಲ್ಲೆಯ ಕುಮಟಾ ತಾಲೂಕಿನ ನುಸಿಕೋಟೆ ಬಳಿ ಮೀನುಗಾರರೊಬ್ಬರಿಗೆ ಕಲ್ಲಾಗಿ ರೂಪುಗೊಂಡ ಏಡಿಯ ದೇಹ ಸಿಕ್ಕಿದೆ. ಈ ಕಲ್ಲಾದ ಏಡಿ ನೂರಾರು ವರ್ಷಗಳ ಹಳೆಯ ಪಳೆಯುಳಿಕೆ ಇರಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.

    ಅಘನಾಶಿನಿ ನದಿಯಲ್ಲಿ (Aghanashini River) ಮೀನುಗಾರಿಕೆ ನಡೆಸುತಿದ್ದ ವೇಳೆ ಮೀನುಗಾರ ಈಶ್ವರ ಹರಿಕಂತ್ರ ಅವರಿಗೆ ಏಡಿ ಕಲ್ಲು (Crab Stone) ಸಿಕ್ಕಿದೆ. ಮೊದಲು ಇದು ಏಡಿ ಎಂದು ಕೈಯಲ್ಲಿ ಹಿಡಿದಾಗ ಸಾಮಾನ್ಯ ಏಡಿಯಂತೆ ಇರದೇ ಕಲ್ಲಿನಂತೆ ಸ್ಪರ್ಷ ಅನುಭವ ಆಗಿದೆ. ಹೀಗಾಗಿ ಈ ಏಡಿಯಲ್ಲಿ ವಿಶೇಷ ಏನೋ ಇದೆ ಎಂದು ಕಾರವಾರದ ಮೀನುಗಾರ ವಿನಾಯಕ ಹರಿಕಂತ್ರ ಎಂಬವರಿಗೆ ಅದನ್ನು ಕಳುಹಿಸಿ ಕೊಟ್ಟಿದ್ದಾರೆ. ಅವರು ಕಾರವಾರದ ಕಡಲ ಜೀವಶಾಸ್ತ್ರಜ್ಞರ ಗಮನಕ್ಕೆ ತಂದು ಹಸ್ತಾಂತರಿಸಿದ್ದಾರೆ. ಆಗಲೇ ತಿಳಿದಿದ್ದು ಈ ಏಡಿ ನದಿಯಲ್ಲಿ ನೂರಾರು ವರ್ಷಗಳು ಸವೆಸಿ ಕಲ್ಲಿನ ರೂಪ ಪಡೆದಿದೆ ಎಂದು.

    ಏಡಿ ಕಲ್ಲುಗಳು ಸಮಾನ್ಯವಾಗಿ ಬಂಡೆಕಲ್ಲುಗಳಿರುವ ಕಡಲ ತೀರದಲ್ಲಿ ಪತ್ತೆಯಾಗುತ್ತವೆ. ಆದರೆ ಸಿಹಿ ನೀರಿನ ಅಘನಾಶಿನಿ ನದಿಯಲ್ಲಿ ಕಾಣಸಿಕ್ಕಿದ್ದು ಅಪರೂಪವೆನ್ನುತ್ತಾರೆ ಕಡಲ ಜೀವಶಾಸ್ತ್ರಜ್ಞ ವಿಎನ್ ನಾಯಕ್. ಇದನ್ನೂ ಓದಿ: ಭಾರತವನ್ನು ಕಟ್ಟಲು ಯುವಜನರು ವಾರಕ್ಕೆ 70 ಗಂಟೆ ದುಡಿಯಬೇಕು: ನಾರಾಯಣ ಮೂರ್ತಿ

    ಏಡಿ ಕಲ್ಲು ಏಡಿಯ ಪಳಿಯುಳಿಕೆಯಾಗಿದೆ. ಇದು ನೂರು ವರ್ಷಗಳದ್ದು ಇರಬಹುದು. ಆದರೆ ಕಾರ್ಬನ್ ಡೇಟಿಂಗ್‌ಗೆ ಒಳಪಡಿಸದೇ, ಅದರ ನಿಖರ ಆಯಸ್ಸು ಎಷ್ಟು ಎಂದು ಹೇಳಲು ಆಗುವುದಿಲ್ಲ. ಹೀಗಾಗಿ ಕಡಲ ಜೀವಶಾಸ್ತ್ರಜ್ಞರ ಜೊತೆ ಇದೀಗ ಪುರಾತತ್ವ ಸಂಶೋಧಕರು ಸಹ ಈ ಏಡಿ ಹಿಂದೆ ಬಿದ್ದಿದ್ದು ಇದರ ನಿಜವಾದ ಆಯುಷ್ಯವನ್ನು ಹುಡುಕುವತ್ತ ಗಮನ ಹರಿಸಿದ್ದಾರೆ.


    ಒಟ್ಟಿನಲ್ಲಿ ಅಪರೂಪದ ಕಲ್ಲಾಗಿ ಪರಿವರ್ತನೆಗೊಂಡ ಏಡಿ ಪಳಯುಳಿಕೆ ಇದೀಗ ಸಂಶೋಧಕರಿಗೆ ಸಂಶೋಧನೆಯ ವಸ್ತುವಾಗಿದೆ. ಇದನ್ನೂ ಓದಿ: PublicTV Explainer: ಉಗುರಿಗೆ ಹೆದರಿದ ‘ಹೀರೋಸ್‌’; ವನ್ಯಜೀವಿ ಸಂರಕ್ಷಣಾ ಕಾಯ್ದೆ ಏನು ಹೇಳುತ್ತೆ? – ಅಪರಾಧಕ್ಕೆ ಶಿಕ್ಷೆ ಏನು?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಗಳಿಗೆ ಗಾಯ ಮಾಡಿದ್ದಕ್ಕೆ ಸೇಡು ತೀರಿಸಿಕೊಳ್ಳಲು ಜೀವಂತ ಏಡಿಯನ್ನೇ ತಿಂದ ವ್ಯಕ್ತಿ ಆಸ್ಪತ್ರೆ ಸೇರಿದ

    ಮಗಳಿಗೆ ಗಾಯ ಮಾಡಿದ್ದಕ್ಕೆ ಸೇಡು ತೀರಿಸಿಕೊಳ್ಳಲು ಜೀವಂತ ಏಡಿಯನ್ನೇ ತಿಂದ ವ್ಯಕ್ತಿ ಆಸ್ಪತ್ರೆ ಸೇರಿದ

    ಬೀಜಿಂಗ್: ಮಗಳಿಗೆ (Daughter) ಗಾಯ ಮಾಡಿದ್ದ ಏಡಿಯ (Crab) ವಿರುದ್ಧ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದ್ದ ತಂದೆಯೋರ್ವ (Father) ತೊಂದರೆಗೆ ಸಿಲುಕಿದ ಘಟನೆ ಚೀನಾದಲ್ಲಿ (China) ನಡೆದಿದೆ.

    ಚೀನಾದ ಝೆಜಿಯಾಂಗ್ (39) ಆಸ್ಪತ್ರೆಗೆ ಸೇರಿದ ವ್ಯಕ್ತಿ. ಈತನ ಮಗಳಿಗೆ ಏಡಿಯೊಂದು ಗಾಯ ಮಾಡಿತ್ತು. ಇದರಿಂದ ಕೋಪಗೊಂಡ ಝೆಜಿಯಾಂಗ್ ಆ ಜೀವಂತ ಏಡಿಯನ್ನೆ ತಿಂದಿದ್ದಾನೆ. ಆದರೆ 2 ತಿಂಗಳ ನಂತರ ಝೆಜಿಯಾಂಗ್‍ಗೆ ತೀವ್ರವಾದ ಬೆನ್ನುನೋವು ಪ್ರಾರಂಭವಾಗಿದೆ. ಈ ಹಿನ್ನೆಲೆಯಲ್ಲಿ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತು.

    ಈ ವೇಳೆ ಝೆಜಿಯಾಂಗ್‍ನನ್ನು ಪರೀಕ್ಷಿಸಿದ ವೈದ್ಯರು ಅಲರ್ಜಿಯಿಂದ ಈ ರೀತಿ ಆಗಿದೆ. ಈ ಹಿಂದೆ ಏನನ್ನಾದರೂ ಸೇವಿಸಿದ್ದೀರಾ ಎಂದು ಪ್ರಶ್ನಿಸಿದ್ದಾನೆ. ಆ ವೇಳೆ ಏಡಿ ತಿಂದಿರುವ ಬಗ್ಗೆ ಹೇಳಿಕೊಳ್ಳಲು ನಿರಾಕರಿಸಿದ್ದಾನೆ. ಆದರೆ ಆತನ ಪತ್ನಿ ಈ ವಿಷಯವನ್ನು ವೈದ್ಯರಿಗೆ ತಿಳಿಸಿದ್ದಾಳೆ. ಇದನ್ನೂ ಓದಿ: ಕರೆಂಟ್ ಬಿಲ್ ನೋಡಿ ಕೂಲಿ ಕಾರ್ಮಿಕ ಕಂಗಾಲು

    ಇದಾದ ಬಳಿಕ ಅವರನ್ನು ರಕ್ತ ಪರೀಕ್ಷೆಗೆ ಕಳುಹಿಸಲಾಯಿತು. ಅದರಲ್ಲಿ ಸಮಸ್ಯೆ ಇರುವುದು ಕಂಡುಬಂದಿದೆ. ನಂತರ ಅವರಿಗೆ ಸರಿಯಾದ ಚಿಕಿತ್ಸೆ ನೀಡಿ ಡಿಸ್ಚಾರ್ಜ್ ಮಾಡಲಾಯಿತು. ಇದನ್ನೂ ಓದಿ: ಭಾರತದ ಉಕ್ಕಿನ ಮನುಷ್ಯ ಎಂದೇ ಖ್ಯಾತಿಯಾಗಿದ್ದ ಟಾಟಾ ಸ್ಟೀಲ್ ಮಾಜಿ ವ್ಯವಸ್ಥಾಪಕ ನಿರ್ದೇಶಕ ಜೆಜೆ ಇರಾನಿ ನಿಧನ

    Live Tv
    [brid partner=56869869 player=32851 video=960834 autoplay=true]

  • ಕಾರವಾರದಲ್ಲಿ ಉದ್ದ ಕಣ್ಣಿನ ಅಪರೂಪದ ಏಡಿ ಪತ್ತೆ

    ಕಾರವಾರದಲ್ಲಿ ಉದ್ದ ಕಣ್ಣಿನ ಅಪರೂಪದ ಏಡಿ ಪತ್ತೆ

    ಕಾರವಾರ: ಮಾಜಾಳಿ ಕಡಲತೀರದಲ್ಲಿ ಉದ್ದ ಕಣ್ಣಿನ ಏಡಿಯೊಂದು ಪತ್ತೆಯಾಗಿದೆ.

    ಕಾರವಾರದ ಕಡಲಜೀವ ವಿಜ್ಞಾನ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಡಾ.ಶಿವಕುಮಾರ್ ಹರಗಿ ಈ ಏಡಿಯ ಕುರಿತಾದ ಮಾಹಿತಿ ಸಂಗ್ರಹಿಸಿದ್ದಾರೆ. ತನ್ನ ಶರೀರದ ಗಾತ್ರದಷ್ಟೇ ಉದ್ದವಾದ ಕಣ್ಣನ್ನು ಹೊಂದಿರುವ ಈ ಏಡಿಗೆ ಜಪಾನ್ ಮತ್ತು ದಕ್ಷಿಣ ಏಷ್ಯಾ ರಾಷ್ಟ್ರಗಳ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇದೆ. ಈ ಏಡಿಗಳನ್ನು ಅಲ್ಲಿ ಆಹಾರಕ್ಕಾಗಿ ಬಳಸುವ ಕಾರಣ ಬಹು ಮೌಲ್ಯವುಳ್ಳದ್ದೂ ಆಗಿದೆ. ಈ ವಿಶೇಷ ಏಡಿಯೂ ಮಾಜಾಳಿಯ ಮೀನುಗಾರ ಧನೇಶ್ ಸೈಲ್ ಪಟ್ಟೆ ಬಲೆಗೆ ಸಿಕ್ಕಿ ಬಿದ್ದಿದೆ. ಇದನ್ನೂ ಓದಿ: ಅಕ್ರಮ ಗಣಿ ಮಾಫಿಯಾಗೆ ಮಂಡ್ಯ ವ್ಯಕ್ತಿ ಬಲಿ – ಹೊಳೆನರಸೀಪುರ ಅರಣ್ಯದಲ್ಲಿ ಹೂತು ಹಾಕಿದ್ರಾ ಶವ? 

    ಸಮುದ್ರ ಮಟ್ಟ ಏರಿಕೆ: ಈ ನಾಲ್ಕು ಕರಾವಳಿ ನಗರಗಳಿಗೆ ಕಾದಿದೆ ಅಪಾಯ - Varthabharati

    ಎಲ್ಲೆಲ್ಲಿ ಸಿಗುತ್ತೆ?
    ಡಾ.ಶಿವಕುಮಾರ್ ಹರಗಿ ಅವರು ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ಕೊಟ್ಟಿದ್ದು, ಉಷ್ಣವಲಯ, ಸಮಶೀತೋಷ್ಣವಲಯದ ಸಾಗರದಲ್ಲಿ ಇವುಗಳು ಕಂಡುಬರುತ್ತವೆ. ಕೆಂಪು ಸಮುದ್ರ, ಹವಾಯಿ ದ್ವೀಪ, ಜಪಾನ್, ಆಸ್ಟ್ರೇಲಿಯಾ ಮತ್ತು ದಕ್ಷಿಣ ಏಷ್ಯಾ ದ್ವೀಪ ರಾಷ್ಟ್ರಗಳಲ್ಲಿ ಅತೀ ಹೆಚ್ಚಾಗಿ ಇವು ದೊರೆಯುತ್ತವೆ. ಭಾರತದ ಪೂರ್ವ ಕರಾವಳಿಯಲ್ಲೂ ಇವುಗಳು ಸಿಕ್ಕ ದಾಖಲೆಗಳಿವೆ. ಆದರೆ ಪಶ್ಚಿಮ ಕರಾವಳಿಯಲ್ಲಿ ಈ ಏಡಿ ಬಹಳ ಅಪರೂಪ ಎಂದರು.

    ಹಸಿರು ಬಣ್ಣಕ್ಕೆ ತಿರುಗಿದ ಕಡಲು, ಸುರತ್ಕಲ್ ಸಮುದ್ರ ತೀರದಲ್ಲಿ ಗೋಚರ –

    ವಿಶೇಷತೆ ಏನು?
    ಈಜಲು ಕಾಲಿನ ವ್ಯವಸ್ಥೆಗಳನ್ನು ಹೊಂದಿರುವ ಈ ಏಡಿ ಆರಾಮವಾಗಿ ಸಾಗರದಲ್ಲಿ ಈಜಬಲ್ಲದು. ಸಮುದ್ರದ ಮರಳಿನಲ್ಲಿ ಹೊಂಚು ಹಾಕಿ ಕುಳಿತು ಉದ್ದನೆಯ ದುರ್ಬಿನ್ ಮಾದರಿಯ ಕಣ್ಣಿನ ಮೂಲಕ ತನ್ನ ಬೇಟೆಯನ್ನು ಗುರುತಿಸಿ ಬೇಟೆಯಾಡುತ್ತವೆ. ಇದರ ವೈಜ್ಞಾನಿಕ ಹೆಸರು ‘ಸೂಡೊಪೊತಲಾಮಸ್ ವಿಜಿಲ್’ ಎಂದು ತಿಳಿಸಿದರು. ಇದನ್ನೂ ಓದಿ: ನಮ್ಮ ಮೇಲೆ ಅತ್ಯಾಚಾರ ನಿಲ್ಲಿಸಿ – ಕಾನ್ ಚಿತ್ರೋತ್ಸವದಲ್ಲಿ ಬೆತ್ತಲಾದ ಉಕ್ರೇನ್ ಮಹಿಳೆ 

  • ಪೂಜೆಗೆ ಬರುತ್ತೆ, ಪ್ರಸಾದ ತಿನ್ನುತ್ತೆ, ಕಣ್ಮರೆ ಆಗುತ್ತೆ-ಏನಿದು ಯೋಗಿಕೊಳ್ಳದ ಏಡಿ ಮಹಿಮೆ?

    ಪೂಜೆಗೆ ಬರುತ್ತೆ, ಪ್ರಸಾದ ತಿನ್ನುತ್ತೆ, ಕಣ್ಮರೆ ಆಗುತ್ತೆ-ಏನಿದು ಯೋಗಿಕೊಳ್ಳದ ಏಡಿ ಮಹಿಮೆ?

    ಬೆಳಗಾವಿ: ಈ ಭೂಮಂಡಲದಲ್ಲಿ ದೇವರು ಇದ್ದಾನೆಂದು ಮನುಷ್ಯ ಹೇಗೆ ನಂಬಿದ್ದಾನೋ ಅದರಂತೆ ವಿಸ್ಮಯಗಳು ಕೂಡ ನಡೆಯುತ್ತಿರುವುದು ಸತ್ಯ. ಗೋಕಾಕ್ ಪಟ್ಟಣದ ಯೋಗಿಕೊಳ್ಳದಲ್ಲಿರುವ ಏಡಿ ಸಹ ಪೂಜೆ ಸಮಯಕ್ಕೆ ಬಂದು ಪ್ರಸಾದ ತಿಂದು ಕ್ಷಣಾರ್ಧದಲ್ಲಿ ಮಾಯವಾಗುತ್ತದೆ.

    ಗೋಕಾಕ್ ಪಟ್ಟಣದ ಯೋಗಿಕೊಳ್ಳದಲ್ಲಿರುವ ನೂರಾರು ಅಡಿ ಎತ್ತರದ ಬಂಡೆಯ ಗೂಹೆಯೊಂದರಲ್ಲಿ ಗಂಗಾಮಾತೆ ನೆಲೆಸಿದ್ದಾಳೆ. ಗಂಗಾಮಾತೆಗೆ ಪ್ರತಿದಿನ ಪೂಜೆ ನಡೆಯುತ್ತದೆ. ಈ ಪೂಜಾ ಸಮಯದಲ್ಲಿ ವಿಶೇಷ ಅತಿಥಿಯಾಗಿ ಏಡಿ ಪ್ರತ್ಯಕ್ಷವಾಗುತ್ತೆ. ಪೂಜೆಯ ಪ್ರಸಾದ ತಿಂದು ನಂತರ ಕ್ಷಣಾರ್ಧದಲ್ಲಿ ಮಾಯವಾಗುತ್ತದೆ. ಗಂಗಾಮಾತೆಯ ಪೂಜಾ ವೇಳೆ ಏಡಿಯ ಈ ನಡೆಯನ್ನು ನೋಡಿ ಅರ್ಚಕರೇ ಬೆರಗಾಗಿದ್ದಾರೆ.

    ಪ್ರತಿದಿನ ಬೆಳಗ್ಗೆ ಮತ್ತು ಸಾಯಂಕಾಲ ಗಂಗಾಮಾತೆಗೆ ಪೂಜೆ ಸಲ್ಲಿಸುಲಾಗುತ್ತದೆ. ಪೂಜೆ ಸಮಯಕ್ಕೆ ಸರಿಯಾಗಿ ಕಾಣಿಸಿಕೊಳ್ಳುವ ಏಡಿ, ಪ್ರಸಾದ ಸೇವಿಸಿದ ಬಳಿಕ ಹೋಗುತ್ತದೆ. ಆದ್ರೆ ಅದು ಎಲ್ಲಿ ಹೋಗುತ್ತೆ ಎಂಬುದರ ಬಗ್ಗೆ ಗೊತ್ತಿಲ್ಲ. ಪೂಜೆ ಬಳಿಕ ಏಡಿ ಯಾರಿಗೂ ಕಾಣಲ್ಲ ಎಂದು ಯೋಗಿಕೊಳ್ಳಮಠ ಅರ್ಚಕ ಮಲ್ಲಯ್ಯ ಪೂಜಾರಿ ಹೇಳುತ್ತಾರೆ.

    ಈ ಗುಹೆಯೊಳಗೆ ಐನೂರು ವರ್ಷಗಳ ಹಳೆಯದಾದ ಮಲ್ಲಯ್ಯ ದೇವರ ಉದ್ಭವ ಮೂರ್ತಿ ಇದೆ. ಆದರೆ ಗಂಗಾದೇವತೆಯ ಪೂಜಾ ಸಮಯದ ವೇಳೆ ದಿನನಿತ್ಯ ಏಡಿ ಬರುವುದು ವಿಶೇಷವಾಗಿದೆ. ಸಹಜವಾಗಿ ಬೆಂಕಿ ಎಂದಾಕ್ಷಣ ಪ್ರಾಣಿ ಪಕ್ಷಿಗಳು ಭಯಪಡುವುದು ಸಹಜ. ಆದರೆ ಕರ್ಪೂರ ಹಚ್ಚಿ ದೀಪ ಬೆಳಗುತ್ತಿದ್ದಂತೆ ಏಡಿ ಬಂದು ದರ್ಶನ ಪಡೆಯುವುದು ವಿಸ್ಮಯಕಾರಿ. ಈ ವಿಸ್ಮಯ ನೋಡಲು ಭಕ್ತರು ಬೆಳ್ಳಂಬೆಳಗ್ಗೆ ಜಮಾಯಿಸಿರುತ್ತಾರೆ. ಒಟ್ಟಾರೆಯಾಗಿ ಗಂಗಾಮಾತೆಯ ಪೂಜೆಯ ವೇಳೆ ಈ ವಿಸ್ಮಯ ನೋಡಿ ಪವಾಡವೇ ಎಂದು ಜನರು ನಂಬಿದ್ದಾರೆ.

  • ಡ್ಯಾಮ್ ಒಡೆಯಲು ಏಡಿಗಳೇ ಕಾರಣವೆಂದಿದ್ದ ಸಚಿವರ ಮನೆ ಮುಂದೆ ಏಡಿ ಸುರಿದು ಪ್ರತಿಭಟನೆ

    ಡ್ಯಾಮ್ ಒಡೆಯಲು ಏಡಿಗಳೇ ಕಾರಣವೆಂದಿದ್ದ ಸಚಿವರ ಮನೆ ಮುಂದೆ ಏಡಿ ಸುರಿದು ಪ್ರತಿಭಟನೆ

    ಮುಂಬೈ: ಭಾರೀ ಮಳೆಗೆ ಮಹಾರಾಷ್ಟ್ರದ ರತ್ನಗಿರಿಯ ಕಿರು ಅಣೆಕಟ್ಟು ಒಡೆದ ಘಟನೆಗೆ ಏಡಿಗಳೇ ಕಾರಣವೆಂದು ಬೇಜವಾಬ್ದಾರಿ ಹೇಳಿಕೆ ನೀಡಿದ್ದ ಅಲ್ಲಿನ ಜಲಸಂಪನ್ಮೂಲ ಸಚಿವ ತಾನಾಜಿ ಸಾವಂತ್ ಅವರ ಮನೆ ಮುಂದೆ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ(ಎನ್‍ಸಿಪಿ) ಕಾರ್ಯಕರ್ತರು ಏಡಿ ಸುರಿದು ಪ್ರತಿಭಟನೆ ನಡೆಸಿದ್ದಾರೆ.

    ಡ್ಯಾಮ್ ಒಡೆದು ಸುಮಾರು 19 ಮಂದಿಯನ್ನು ಬಲಿಯಾಗಿ, 25ಕ್ಕೂ ಹೆಚ್ಚು ಮಂದಿ ಕಾಣೆಯಾಗಿದ್ದಾರೆ. ಆದರೆ ಈ ಬಗ್ಗೆ ಕ್ರಮ ತೆಗೆದುಕೊಳ್ಳುವ ಬದಲು ಉಡಾಫೆಯಿಂದ ಉತ್ತರಿಸಿದ ಸಚಿವರಿಗೆ ಉತ್ತರ ನೀಡಲು ಎನ್‍ಸಿಪಿ ಕಾರ್ಯಕರ್ತರು ನೂರಾರು ಜೀವಂತ ಏಡಿಗಳನ್ನೇ ಹಿಡಿದು ಚೀಲ, ಬಾಕ್ಸ್ ಗಳಲ್ಲಿ ತುಂಬಿಕೊಂಡು ಕಾರ್ಯಕರ್ತರು ತುಂಬಿಕೊಂಡು ಬಂದಿದ್ದರು. ಬಳಿಕ ಆ ಏಡಿಗಳನ್ನು ಸಾವಂತ್ ಅವರ ಮನೆಯ ಎದುರು ಸುರಿದು ಆಕ್ರೋಶ ವ್ಯಕ್ತಪಡಿಸಿದರು.

    ಜುಲೈ 2ರಂದು ಟಿವ್ರೆ ಕಿಂಡಿ ಡ್ಯಾಮ್ ಒಡೆದು ಭಾರೀ ಪ್ರಮಾಣದಲ್ಲಿ ಹಾನಿ ಉಂಟಾಗಿತ್ತು. ಡ್ಯಾಮ್ ಸುತ್ತಮುತ್ತಲ ಗ್ರಾಮದಲ್ಲಿ ಹಲವು ಮನೆಗಳು ನೀರಿನಲ್ಲಿ ತೇಲಿ ಹೋಗಿದ್ದವು. ಅಲ್ಲದೆ 19 ಮಂದಿ ಜೀವ ಕಳೆದುಕೊಂಡಿದ್ದರು. ಈ ಘಟನೆ ನಡೆಯುವ ಮುಂಚೆಯೇ ಅಣೆಕಟ್ಟೆ ಬಿರುಕು ಬಿಟ್ಟಿತ್ತು. ಈ ಬಗ್ಗೆ ನಾವು ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದೆವು. ಈ ಸ್ಥಿತಿ ಬರುವ ಮುಂಚೆಯೇ ಅಣೆಕಟ್ಟಿನ ದುರಸ್ಥಿ ಕಾರ್ಯ ಮಾಡಿದ್ದರೆ ಹಲವು ಜೀವಗಳು ಉಳಿಯುತ್ತಿದ್ದವು ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದರು.

    ಈ ಬಗ್ಗೆ ಮಹಾರಾಷ್ಟ್ರ ಸಿಎಂ ತನಿಖೆ ನಡೆಸಲು ಆದೇಶಿಸಿದ್ದು, ಅಣೆಕಟ್ಟಿನ ಬಗ್ಗೆ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾವುದು. ಜಿಲ್ಲಾಡಳಿತವನ್ನು ಸಂಪರ್ಕಿಸಿ ರಕ್ಷಣಾ ಕಾರ್ಯಾಚರಣೆ ಬಗ್ಗೆ ಹಾಗೂ ಜನರ ಸುರಕ್ಷತೆ ಬಗ್ಗೆ ಮಾಹಿತಿ ಪಡೆಯಲಾಗಿದೆ ಎಂದಿದ್ದರು. ಆದರೆ ಈ ನಡುವೆ ಸ್ಥಳಕ್ಕೆ ಪರಿಶೀಲನೆಗೆ ಬಂದಿದ್ದ ಸಚಿವ ಸಾವಂತ್, ಡ್ಯಾಮ್‍ನಲ್ಲಿ ಏಡಿಗಳು ಇರುವುದೇ ಈ ಅನಾಹುತಕ್ಕೆ ಕಾರಣ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ಸಾರ್ವಜನಿಕ ವಲಯದಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು.

    ಆ ನಂತರ ಕಳೆದ ವಾರ ಎನ್‍ಸಿಪಿ ನಾಯಕ ಜಿತೇಂದ್ರ ಅವಾದ್ ಅವರು ಏಡಿಯೊಂದನ್ನು ಕೈಯಲ್ಲಿ ಹಿಡಿದುಕೊಂಡು ಪೊಲೀಸ್ ಠಾಣೆಗೆ ಹೋಗಿ, ಇದನ್ನು ಬಂಧಿಸಿ ಎಂದಿದ್ದರು. ಅಲ್ಲದೆ ರಾಜ್ಯದಲ್ಲಿ ನಾಚಿಕೆಯಿಲ್ಲದ ಬಿಜೆಪಿ ನೇತೃತ್ವದ ಸರ್ಕಾರ ಇದೆ. ಸಚಿವ ಸಾವಂತ್ ಡ್ಯಾಮ್ ಗುತ್ತಿಗೆದಾರರನ್ನು ರಕ್ಷಿಸಲು ಈ ರೀತಿ ಉಡಾಫೆ ಹೇಳಿಕೆ ನೀಡುತ್ತಿದ್ದಾರೆ ಎಂದು ಕಿಡಿಕಾರಿದ್ದರು.

    ಇನ್ನೊಂದೆಡೆ ಕೊಲ್ಲಾಪುರದಲ್ಲಿ ಎನ್‍ಸಿಪಿ ಯುವ ಘಟಕದ ನಾಯಕ, ಏಡಿಗಳ ಮೇಲೆ ಕೊಲೆ ದೂರು ನೀಡಿದ್ದರು.

  • ವಿಡಿಯೋ: ಚಾಕು ಹಿಡಿದು ಚೆಫ್ ಗೆ ಚಮಕ್ ಕೊಟ್ಟ ಏಡಿ!

    ವಿಡಿಯೋ: ಚಾಕು ಹಿಡಿದು ಚೆಫ್ ಗೆ ಚಮಕ್ ಕೊಟ್ಟ ಏಡಿ!

    ಕೌಲಾಲಂಪುರ್: ಬಾಣಸಿಗನ ಜೊತೆ ಅಡುಗೆಮನೆಯಲ್ಲಿ ಏಡಿಯೊಂದು ಚಾಕು ಹಿಡಿದು ಕಾಳಗ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

    ಏಡಿ ತನ್ನ ಪ್ರಾಣ ಉಳಿಸಿಕೊಳ್ಳುವ ಸಲುವಾಗಿ ಬಾಣಸಿಗನ ಜೊತೆ ಹೋರಾಡಲು ಚಾಕು ಹಿಡಿದಿರೋದನ್ನ ಕಾಣಬಹುದು. ಏಡಿ ಕೆಚ್ಚೆದೆಯಿಂದ ತನ್ನ ಬಲ ಮತ್ತು ಎಡ ಉಗುರುಗಳ ನಡುವೆ ಆ ಕಡೆಯಿಂದ ಈಕಡೆಗೆ ಚಾಕುವನ್ನ ಬದಲಾಯಿಸುತ್ತದೆ.

    ಏಡಿ ಅಡುಗೆಮನೆ ತೊಟ್ಟಿಯ ಮೂಲೆಯಲ್ಲಿದ್ದು, ಶಸ್ತ್ರಾಸ್ತ್ರವನ್ನು ಹಿಡಿದು ತನ್ನ ರಕ್ಷಣೆಯನ್ನು ಮಾಡಿಕೊಳ್ಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಬಾಣಸಿಗ ಇನ್ನೊಂದು ಚಾಕು ಹಿಡಿದು ಅದಕ್ಕೆ ತಿವಿದರೂ ಏಡಿ ಹೋರಾಡುತ್ತದೆ. ಆದರೆ ಸ್ವಲ್ಪ ಸಮಯದ ನಂತರ ಏಡಿ ಶರಣಾಗತಿಯಾಗುವಂತೆ ಕೈಚೆಲ್ಲುತ್ತದೆ.

    ಈ ವಿಡಿಯೋ ಕಳೆದ ವಾರ ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡಿದ್ದು, ಈಗಾಗಲೇ ಸುಮಾರು 2 ಲಕ್ಷ ಕ್ಕೂ ಹೆಚ್ಚಿನ ವೀವ್ಸ್ ಕಂಡಿದೆ. ಕೊನೆಗೆ ಏಡಿಯ ಗತಿ ಏನಾಯಿತು ಎಂಬ ಬಗ್ಗೆ ವರದಿಯಗಿಲ್ಲ.

    https://www.youtube.com/watch?v=r7cO0Nl5zBQ

  • ಈ ಮನುಷ್ಯನ ಸಾಹಸ ನೋಡಿದ್ರೆ ನೀವು ಬೆಚ್ಚಿಬೀಳ್ತಿರಿ! ವಿಡಿಯೋ ನೋಡಿ

    ಈ ಮನುಷ್ಯನ ಸಾಹಸ ನೋಡಿದ್ರೆ ನೀವು ಬೆಚ್ಚಿಬೀಳ್ತಿರಿ! ವಿಡಿಯೋ ನೋಡಿ

    ಕ್ವೀನ್ಸ್ ಲ್ಯಾಂಡ್: ವನ್ಯಜೀವಿಗಳ ಜೊತೆ ಸಾಹಸ ಮಾಡೋದು ತುಂಬಾ ಕಷ್ಟ. ಈ ವನ್ಯಜೀವಿಗಳ ಅಧ್ಯಯನಕ್ಕೆ ಕೆಲವರು ತುಂಬಾ ತಲೆ ಕೆಡಿಸಿಕೊಂಡಿರುತ್ತಾರೆ. ಅಂತಹದರಲ್ಲಿ ಆಸ್ಟ್ರೇಲಿಯಾದ ವ್ಯಕ್ತಿಯೊಬ್ಬ ಧೈರ್ಯ ಮಾಡಿ ವಿಶೇಷ ಸಾಧನೆ ಮಾಡಿರುವ ವಿಡಿಯೋ ಈಗ ವೈರಲ್ ಆಗಿದೆ.

    ಹೌದು. ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್‍ದ ನಿವಾಸಿಯಾದ ವನ್ಯಜೀವಿ ಉತ್ಸಾಹಿ ಬ್ಯೂ ಗ್ರೀವ್ಸ್ ಎಂಬಾತನಿಗೆ ಸಮುದ್ರದ ದಂಡೆಯ ಬಳಿ ಒಂದು ಗುಂಡಿ ಕಾಣಿಸಿಕೊಂಡಿದೆ. ಆ ಗುಂಡಿಯಲ್ಲಿ ಏನೋ ಒಂದು ಜೀವಿ ಇರಬೇಕು ಎಂದು ಭಾವಿಸಿಕೊಂಡು ಇಣುಕಿ ನೋಡಿದ್ದಾನೆ. ನೋಡಿದಾಗ ಆ ಗುಂಡಿಯಲ್ಲಿ ದೊಡ್ಡ ಗಾತ್ರದ ಏಡಿವೊಂದು ಕಾಣಿಸಿಕೊಂಡಿದೆ.

    ಆ ಏಡಿಯನ್ನು ಹೇಗಾದ್ರೂ ಮಾಡಿ ಹಿಡಿಯಲೇಬೇಕು ಅಂತ ಯೋಚಿಸುತ್ತಾನೆ. ತನ್ನ ಕೈಯಲ್ಲಿದ್ದ ಒಂದು ಸ್ಟಿಕ್ ಬಳಸಿಕೊಂಡು ತನ್ನ ಜೀವವನ್ನೇ ಪಣಕ್ಕೆ ಇಟ್ಟು ಗುಂಡಿಯ ಒಳಗಡೆ ನುಗ್ಗುತ್ತಾನೆ. ಅರ್ಧ ದೇಹದೊಂದಿಗೆ ಗುಂಡಿಯ ಒಳಗಡೆ ಹೋಗಿ ದೊಡ್ಡ ಏಡಿಯನ್ನು ಹೊರ ತೆಗೆದಿದ್ದಾನೆ.

    ಈ ವಿಡಿಯೋವನ್ನು ಫೇಸ್‍ಬುಕ್ ಗೆ ಜೂನ್ 26 ರಂದು ಅಪ್ಲೋಡ್ ಮಾಡಿದ್ದು, 11 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಅಷ್ಟೇ ಅಲ್ಲದೇ 12 ಸಾವಿರಕ್ಕೂ ಅಧಿಕ ಮಂದಿ ಪೋಸ್ಟನ್ನು ಶೇರ್ ಮಾಡಿದ್ದಾರೆ.