Tag: CPM

  • Kerala | ಕಾರ್ಯಕ್ರಮದಲ್ಲಿ ಬಹಿರಂಗ ಟೀಕೆ- ಒಂದು ದಿನದ ಬಳಿಕ ಶವವಾಗಿ ಪತ್ತೆಯಾದ ಅಧಿಕಾರಿ

    Kerala | ಕಾರ್ಯಕ್ರಮದಲ್ಲಿ ಬಹಿರಂಗ ಟೀಕೆ- ಒಂದು ದಿನದ ಬಳಿಕ ಶವವಾಗಿ ಪತ್ತೆಯಾದ ಅಧಿಕಾರಿ

    ತಿರುವನಂತಪುರಂ: ಕೇರಳದ ಕಣ್ಣೂರು ಜಿಲ್ಲೆಯ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ (ADM) ನವೀನ್ ಬಾಬು (Naveen Babu) ತಮ್ಮ ಪಲ್ಲಿಕುನ್ನುನಲ್ಲಿರುವ ಮನೆಯಲ್ಲಿ ಮಂಗಳವಾರ (ಅ.15) ಶವವಾಗಿ ಪತ್ತೆಯಾಗಿದ್ದಾರೆ.

    ತಮ್ಮ ತವರೂರು ಪತ್ತನಂತಿಟ್ಟದಲ್ಲಿ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿ ಅಧಿಕಾರ ಸ್ವೀಕರಿಸಬೇಕಿದ್ದ ಹಿಂದಿನ ದಿನ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.ಇದನ್ನೂ ಓದಿ: ಬೆಂಗಳೂರಿನಲ್ಲಿ ಭಾರೀ ಮಳೆ – ಜನಜೀವನ ಅಸ್ತವ್ಯಸ್ತ, ಎಲ್ಲಿ ಏನಾಗಿದೆ?

    ಘಟನೆಯ ಹಿಂದಿನ ದಿನ ಮೃತ ನವೀನ್ ಬಾಬು ಅವರಿಗೆ ಸಹೋದ್ಯೋಗಿಗಳು ಬೀಳ್ಕೊಡುಗೆ ಸಮಾರಂಭ ಏರ್ಪಡಿಸಿದ್ದರು. ಈ ವೇಳೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಹಾಗೂ ಸಿಪಿಎಂ ನಾಯಕಿ ಪಿಪಿ ದಿವ್ಯಾ (PP Divya) ಆಹ್ವಾನವಿಲ್ಲದೇ ದಿಢೀರ್ ಕಾರ್ಯಕ್ರಮಕ್ಕೆ ಆಗಮಿಸಿದ್ದರು.

    ಈ ವೇಳೆ ಮಾತನಾಡಿದ ದಿವ್ಯಾ, ನವೀನ್ ಬಾಬು ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದರು. ಜೊತೆಗೆ ಹಲವು ತಿಂಗಳುಗಳಿಂದ ಚೆಂಗಲೈ ಪೆಟ್ರೋಲ್ ಪಂಪ್‌ಗೆ ಅನುಮತಿ ನೀಡಲು ಎಡಿಎಮ್ ಅವರು ವಿಳಂಬ ಮಾಡುತ್ತಿದ್ದಾರೆ ಎಂದು ಟೀಕಿಸಿ, ಬಹಿರಂಗವಾಗಿ ಮಾತನಾಡಿದ್ದರು.

    ಎಡಿಎಮ್ ಅವರ ದಿಢೀರ್ ವರ್ಗಾವಣೆ ಹಿಂದಿನ ಕಾರಣ ನನಗೆ ಗೊತ್ತಿದೆ. ಎರಡು ದಿನಗಳ ನಂತರ ಇನ್ನುಳಿದ ಮಾಹಿತಿಯನ್ನು ನೀಡುತ್ತೇನೆ ಎಂದು ಸುಳಿವು ನೀಡಿದ್ದರು. ಇದಾದ ಮಾರನೇ ದಿನ ನೇಣು ಬಿಗಿದ ಸ್ಥಿತಿಯಲ್ಲಿ ನವೀನ್ ಬಾಬು ಅವರ ಶವವಾಗಿ ಪತ್ತೆಯಾಗಿದ್ದು, ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

    ಸಿಪಿಎಂ ಸ್ಥಳೀಯ ಮುಖಂಡ ಮಲಯಾಳಪುಳ ಮೋಹನ್ ಸುದ್ದಿಗಾರರೊಂದಿಗೆ ಮಾತನಾಡಿ, ಬಾಬು ಅವರ ಕುಟುಂಬವು ಸಾಂಪ್ರದಾಯಿಕ ಕುಟುಂಬವಾಗಿದ್ದು, ಬಾಬು ಕುರಿತು ನನಗೆ ಬಹಳ ಹಿಂದಿನಿಂದಲೂ ತಿಳಿದಿದೆ. ಬಾಬು ಒಬ್ಬ ಪ್ರಾಮಾಣಿಕ ಅಧಿಕಾರಿಯಾಗಿದ್ದರು. ದಿವ್ಯಾ ಅವರ ಬಹಿರಂಗ ಟೀಕೆಯು ಬಾಬು ಅವರ ಸಾವಿಗೆ ಕಾರಣವಾಗಿದ್ದರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.ಇದನ್ನೂ ಓದಿ: ಸೈನ್ಯಕ್ಕೆ ಪ್ರಬಲ ಅಸ್ತ್ರ – ಅಮೆರಿಕದ MQ-9B ಪ್ರಿಡೆಟರ್ ಡ್ರೋನ್ ಒಪ್ಪಂದಕ್ಕೆ ಸಹಿ ಹಾಕಿದ ಭಾರತ

    ಸದ್ಯ ಈ ಪ್ರಕರಣ ಸಂಬಂಧ ತನಿಖೆ ನಡೆಯುತ್ತಿದೆ.

  • ಸಿಪಿಐಎಂ ನಾಯಕ ಸೀತಾರಾಮ್‌ ಯೆಚೂರಿ ನಿಧನ – ದೇಹದಾನ ಮಾಡಿದ ಕುಟುಂಬಸ್ಥರು

    ಸಿಪಿಐಎಂ ನಾಯಕ ಸೀತಾರಾಮ್‌ ಯೆಚೂರಿ ನಿಧನ – ದೇಹದಾನ ಮಾಡಿದ ಕುಟುಂಬಸ್ಥರು

    ನವದೆಹಲಿ: ಅನಾರೋಗ್ಯದಿಂದ ಬಳಲುತ್ತಿದ್ದ CPI(M) ಪ್ರಧಾನ ಕಾರ್ಯದರ್ಶಿ, ಹಿರಿಯ ರಾಜಕಾರಣಿ ಸೀತಾರಾಮ್ ಯೆಚೂರಿ (Sitaram Yechury) ನಿಧನರಾಗಿದ್ದಾರೆ. ನ್ಯುಮೋನಿಯಾದಿಂದ ಬಳಲುತ್ತಿದ್ದ ಅವರು ಆಗಸ್ಟ್ 19 ರಂದು ದೆಹಲಿಯ ಏಮ್ಸ್ ಆಸ್ಪತ್ರಗೆ ದಾಖಲಾಗಿದ್ದರು. ಬೋಧನೆ ಮತ್ತು ಸಂಶೋಧನಾ ಉದ್ದೇಶಗಳಿಗಾಗಿ ಸೀತಾರಾಮ್ ಯೆಚೂರಿ ಅವರ ದೇಹವನ್ನು ಕುಟುಂಬಸ್ಥರು ಆಸ್ಪತ್ರೆಗೆ ದಾನ ಮಾಡಿದ್ದಾರೆ ಎಂದು ಏಮ್ಸ್ ಹೇಳಿಕೆಯಲ್ಲಿ ತಿಳಿಸಿದೆ.

    ಆಗಸ್ಟ್ 12, 1952 ರಂದು ಚೆನ್ನೈನಲ್ಲಿ ಜನಿಸಿದ ಯೆಚೂರಿ ಅವರು ಭಾರತೀಯ ರಾಜಕೀಯದಲ್ಲಿ ಪ್ರಮುಖ ವ್ಯಕ್ತಿಯಾಗಿದ್ದರು. ಸಮ್ಮಿಶ್ರ ರಾಜಕೀಯಕ್ಕೆ ಅವರ ಕಾರ್ಯತಂತ್ರದ ವಿಧಾನ ಮಹತ್ವದಾಗಿದ್ದು, ಮಾರ್ಕ್ಸ್‌ವಾದದ ತತ್ವಗಳಿಗೆ ಅವರ ಅಚಲ ಬದ್ಧತೆಗೆ ಹೆಸರುವಾಸಿಯಾಗಿದ್ದರು. ಇದನ್ನೂ ಓದಿ: Paralympics 2024 | ಭಾರತೀಯ ಕ್ರೀಡಾಪಟುಗಳನ್ನು ಶ್ಲಾಘಿಸಿದ ಮೋದಿ

    1974ರಲ್ಲಿ ಎಸ್‌ಎಫ್‌ಐ ಮೂಲಕ ಯೆಚೂರಿಯವರ ರಾಜಕೀಯ ಪಯಣ ಆರಂಭವಾಯಿತು. ಅವರು ಶೀಘ್ರವಾಗಿ ಉನ್ನತ ಮಟ್ಟಕ್ಕೆ ಏರಿದರು. ಮೂರು ಬಾರಿ JNU ವಿದ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಷರಾದರು ಮತ್ತು ನಂತರ SFI ಯ ಅಖಿಲ ಭಾರತ ಅಧ್ಯಕ್ಷರಾದರು. 1984 ರಲ್ಲಿ, ಅವರು ಸಿಪಿಐ(ಎಂ) ಕೇಂದ್ರ ಸಮಿತಿಗೆ ಆಯ್ಕೆಯಾದರು ಮತ್ತು ಶಾಶ್ವತ ಆಹ್ವಾನಿತರಾದರು. 1992 ರ ಹೊತ್ತಿಗೆ, ಅವರು ಪಾಲಿಟ್‌ಬ್ಯೂರೊದ ಸದಸ್ಯರಾದರು.

    ಯೆಚೂರಿ ಅವರು 2005 ರಿಂದ 2017 ರವರೆಗೆ ಪಶ್ಚಿಮ ಬಂಗಾಳದಿಂದ ಸಂಸತ್ ಸದಸ್ಯರಾಗಿ, ರಾಜ್ಯಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದರು. ಪ್ರಕಾಶ್ ಕಾರಟ್ ಬಳಿಕ 2015 ರಲ್ಲಿ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿಯಾದರು ಮತ್ತು 2018 ಮತ್ತು 2022 ರಲ್ಲಿ ಎರಡು ಬಾರಿ ಸ್ಥಾನಕ್ಕೆ ಮರು ಆಯ್ಕೆಯಾದರು. ಇದನ್ನೂ ಓದಿ: ಕರ್ನಾಟಕ ಹರಿಸಿದ ಹೆಚ್ಚುವರಿ ನೀರು ಲೆಕ್ಕಕ್ಕೆ ಪರಿಗಣಿಸಲು ಸಾಧ್ಯವಿಲ್ಲ – ತಮಿಳುನಾಡು

    ಕಾಂಗ್ರೆಸ್ ಸಂಸದ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಸೀತಾರಾಮ್ ಯೆಚೂರಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಯೆಚೂರಿ ದೇಶದ ಬಗ್ಗೆ ಆಳವಾದ ತಿಳುವಳಿಕೆಯುಳ್ಳ ಭಾರತದ ಕಲ್ಪನೆಯ ರಕ್ಷಕ ಎಂದು ಕರೆದಿದ್ದಾರೆ. ಈ ದುಃಖದ ಸಮಯದಲ್ಲಿ ಅವರ ಕುಟುಂಬ, ಸ್ನೇಹಿತರು ಮತ್ತು ಅನುಯಾಯಿಗಳಿಗೆ ನನ್ನ ಪ್ರಾಮಾಣಿಕ ಸಂತಾಪಗಳು ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಯೆಚೂರಿ ಅವರ ನಿಧನ ರಾಷ್ಟ್ರ ರಾಜಕೀಯಕ್ಕೆ ತುಂಬಲಾರದ ನಷ್ಟ ಎಂದು ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

  • ಕರ್ನಾಟಕದಲ್ಲಿ ಕೆಂಪು ಬಾವುಟ ಹಾರಿಸಲಿದ್ದಾರೆ ಕೇರಳ ಸಿಎಂ

    ಕರ್ನಾಟಕದಲ್ಲಿ ಕೆಂಪು ಬಾವುಟ ಹಾರಿಸಲಿದ್ದಾರೆ ಕೇರಳ ಸಿಎಂ

    ಚಿಕ್ಕಬಳ್ಳಾಪುರ: ಇಲ್ಲಿನ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಸಿಪಿಎಂ ಕಸರತ್ತು ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯ್‌ ವಿಜಯನ್‌ ಅವರು ರಾಜ್ಯಕ್ಕೆ ಭೇಟಿ ನೀಡಿದ್ದು, ಬಾಗೇಪಲ್ಲಿಯಲ್ಲಿ ನಡೆಯುವ ಬೃಹತ್‌ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.

    ಬಾಗೇಪಲ್ಲಿ ಕ್ಷೇತ್ರದಲ್ಲಿ ಸಿಪಿಐಎಂನಿಂದ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ 2 ಬಾರಿ ಶಾಸಕರಾಗಿ ಆಯ್ಕೆಯಾಗಿ ರಾಜ್ಯದ ಗಮನ ಸೆಳೆದಿದ್ದರು. ಅವರ ನಿಧನರಾದ ನಂತರ ಕ್ಷೇತ್ರದಲ್ಲಿ ಸಿಪಿಎಂ ಅಸ್ತಿತ್ವವಿಲ್ಲದಂತಾಗುತ್ತಿತ್ತು. ಇದೀಗಾ ಮತ್ತೆ ಬಲ ಪಡಿಸಲು ಮುಂದಾಗಿರುವ ಸಿಪಿಐಎಂ ಪಕ್ಷ ಇಂದು ಬಾಗೇಪಲ್ಲಿಯಲ್ಲಿ ಸಮಾವೇಷ ನಡೆಸುವ ಮೂಲಕ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ. ಇದನ್ನೂ ಓದಿ: ಎಸ್‍ಟಿ ಮೀಸಲಾತಿಯನ್ನು ಶೇ.6 ರಿಂದ ಶೇ.10ಕ್ಕೆ ಹೆಚ್ಚಿಸುತ್ತೇವೆ: ಕೆಸಿಆರ್

     

    ಬಾಗೇಪಲ್ಲಿ ಪಟ್ಟಣದಲ್ಲಿ ಸಿಪಿಐಎಂ ಪಕ್ಷದ ನಾಯಕರು ರಾಜ್ಯಮಟ್ಟದ ರಾಜಕೀಯ ಸಮಾವೇಶ ಹಮ್ಮಿಕೊಂಡಿದ್ದಾರೆ. ಇದಕ್ಕಾಗಿ ಬಾಗೇಪಲ್ಲಿ ಪಟ್ಟಣದ ಪ್ರಮುಖ ರಸ್ತೆಗಳು, ಗಲ್ಲಿಗಳು ಕೆಂಬಾವೂಟದಿಂದ ಸಿಂಗರಿಸಿಕೊಂಡಿವೆ. ಸಮಾವೇಶದಲ್ಲಿ ಕೇರಳ ಸಿಎಂ ಪಿಣರಾಯ್ ವಿಜಯನ್ ಸೇರಿದಂತೆ ಪಕ್ಷದ ಕೇಂದ್ರ ನಾಯಕರು, ಕೇಂದ್ರದ ಪೊಲಿಟಿಕಲ್ ಬ್ಯೂರೋ ಸದಸ್ಯರಾದ ಎಂ.ಎ.ಬೇಬಿ, ಜಿವಿ.ರಾಘವುಲು, ಕೇಂದ್ರ ಸಮಿತಿ ಸದಸ್ಯ ಕೆ.ಎನ್.ಉಮೇಶ್, ರಾಜ್ಯ ಕಾರ್ಯದರ್ಶಿ ಬಸವರಾಜು ಸೇರಿದಂತೆ ಪಕ್ಷದ ಪ್ರಮುಖರು ಪಾಲ್ಗೊಳ್ಳಲಿದ್ದಾರೆ. ‌

     

    ಜಿ.ವಿ.ಶ್ರೀರಾಮರೆಡ್ಡಿ ಪಕ್ಷ ತೊರೆದು ನಿಧನರಾದ ನಂತರ ಪಕ್ಷದಲ್ಲಿ ಹೇಳಿಕೊಳ್ಳುವಂತಹ ಪ್ರಭಾವಿಗಳು ಇಲ್ಲ. ಆದರೆ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ 30 ಸಾವಿರಕ್ಕೂ ಹೆಚ್ಚು ಸಿಪಿಐಎಂ ಪಕ್ಷದ ಕಾರ್ಯಕರ್ತರಿದ್ದಾರೆ. ಇದರಿಂದ ಮತ್ತೇ ಸಿಪಿಐಎಂ ಪಕ್ಷದ ಬಾವುಟ ಹಾರಿಸಲು ಯೋಜನೆ ರೂಪಿಸಿರುವ ಸಿಪಿಐಎಂ ನಾಯಕರು, ಕಾರ್ಮಿಕರು, ದುಡಿಯುವ ವರ್ಗ ಸೇರಿದಂತೆ ದೀನದಲಿತರನ್ನು ಒಂದುಗೂಡಿಸಿ ಪಕ್ಷದತ್ತ ಸೆಳೆಯಲು ಮುಂದಾಗಿದ್ದಾರೆ.

    ರಾಜ್ಯಕ್ಕೆ ಆಗಮಿಸಿರುವ ಪಿಣರಾಯ್‌ ವಿಜಯನ್‌ ಅವರು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾದರು. ಈ ವೇಳೆ ಅಂತರರಾಜ್ಯ ಸಮಸ್ಯೆಗಳು ಹಾಗೂ ಹಿತಾಸಕ್ತಿಗಳ ಕುರಿತು ಚರ್ಚೆ ನಡೆಸಿದರು. ಇದನ್ನೂ ಓದಿ: ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕೆ ಯುಪಿ ಸಚಿವರಿಗೆ 500 ರೂ. ದಂಡ

    Live Tv
    [brid partner=56869869 player=32851 video=960834 autoplay=true]

  • ಕೇರಳದಲ್ಲಿ ಮತ್ತೆ ಬಿರುಗಾಳಿ ಎಬ್ಬಿಸಿದ ಲವ್‌ ಮ್ಯಾರೇಜ್‌ ಕೇಸ್‌

    ಕೇರಳದಲ್ಲಿ ಮತ್ತೆ ಬಿರುಗಾಳಿ ಎಬ್ಬಿಸಿದ ಲವ್‌ ಮ್ಯಾರೇಜ್‌ ಕೇಸ್‌

    ತಿರುವನಂತಪುರಂ: ಕೇರಳದ ಕೋಜಿಕ್ಕೋಡ್‍ನಲ್ಲೊಂದು ನಡೆದ ಲವ್ ಮ್ಯಾರೇಜ್ ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದೆ. ಡಿವೈಎಫ್‍ಐ ನಾಯಕ ಷಿಜಿನ್, ಅನ್ಯ ಧರ್ಮದ ಜ್ಯೋತ್ಸ್ನಾ ಮೇರಿ ಜೋಸೆಫ್‍ರನ್ನು ಪ್ರೀತಿಸಿ ಮದುವೆ ಆಗಿರುವುದು ವಿವಾದಕ್ಕೆ ಕಾರಣವಾಗಿದೆ.

    ಜ್ಯೋತ್ಸ್ನಾ ಮೇರಿ ಜೋಸೆಫ್ ಪೋಷಕರು ಇದು ಲವ್ ಜಿಹಾದ್ ಎಂದು ಆರೋಪಿಸಿ, ಮಿಸ್ಸಿಂಗ್ ಕೇಸ್ ದಾಖಲಿಸಿದ್ದಾರೆ. ಕೋರ್ಟ್‍ನಲ್ಲಿ ಹೇಬಿಯಸ್ ಕಾರ್ಪಸ್ ಕೂಡ ದಾಖಲಿಸಿದ್ರು. ಆದರೆ ಇದು ಕೋರ್ಟ್‍ನಲ್ಲಿ ವಜಾಗೊಂಡಿತ್ತು. ಈ ಪ್ರಕರಣ ಸುಖಾಂತ್ಯಕಂಡಿತ್ತು ಎನ್ನುವಾಗ ಈ ವಿವಾದಕ್ಕೆ ಈಗ ಸಿಪಿಎಂ ಮಾಜಿ ಶಾಸಕ ಜಾರ್ಜ್ ಎಂ. ಥಾಮಸ್ ತುಪ್ಪ ಸುರಿದಿದ್ದಾರೆ. ಲವ್ ಜಿಹಾದ್ ಎನ್ನುವುದು ನಿಜ. ಎಸ್‍ಡಿಪಿಐ, ಜಮಾತ್ ಎ ಇಸ್ಲಾಮಿಯಂತಹ ಸಂಸ್ಥೆಗಳು ಉನ್ನತ ಶಿಕ್ಷಣ ಮಾಡಿದ ಇತರೆ ಧರ್ಮೀಯ ಯುವತಿಯರನ್ನು ಟ್ರ್ಯಾಪ್ ಮಾಡುವಂತೆ ಪ್ರೋತ್ಸಾಹ ನೀಡುತ್ತಾರೆ. ಈ ಮೂಲಕ ಲವ್ ಜಿಹಾದ್‍ಗೆ ಉತ್ತೇಜನ ನೀಡುತ್ತಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಲಡ್ಡು ತಿನ್ನಿಸುವ ಮೂಲಕ ವೈವಾಹಿಕ ವಿವಾದ ಕೊನೆಗೊಳಿಸಿದ 70ರ ಹರೆಯ ದಂಪತಿ

    ಷಿಜಿನ್ ಮದುವೆ ವಿಚಾರವನ್ನು ಮೊದಲು ಪಕ್ಷದ ಮುಂದೆ ಇಡಬೇಕಿತ್ತು ಎಂದು ಅಸಮಾಧಾನ ಹೊರಹಾಕಿದ್ದು, ಷಿಜಿನ್ ಕೋಮು ಸೌಹಾರ್ದತೆಗೆ ಭಂಗ ಉಂಟು ಮಾಡಿದ ಕಾರಣ ಪಕ್ಷವು ಕ್ರಮಕ್ಕೆ ಮುಂದಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಇದು ಲವ್ ಜಿಹಾದ್ ಅಲ್ಲ ಎಂದು ಷಿಜಿನ್-ಜ್ಯೋತ್ಸ್ಯಾ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಮುಸ್ಲಿಂ ಮಹಿಳೆಯರಿಗೆ ಅತ್ಯಾಚಾರ ಬೆದರಿಕೆ ಹಾಕಿದ್ದ ಬಜರಂಗ ಮುನಿ ಅರೆಸ್ಟ್‌

  • ಅಂದು ಸಿಪಿಎಂ ಮುಖಂಡನಿಂದ ಹೊಟ್ಟೆಗೆ ತುಳಿತ, ಗರ್ಭಪಾತ – ಇಂದು ಕೇರಳ ಬಿಜೆಪಿ ಅಭ್ಯರ್ಥಿ

    ಅಂದು ಸಿಪಿಎಂ ಮುಖಂಡನಿಂದ ಹೊಟ್ಟೆಗೆ ತುಳಿತ, ಗರ್ಭಪಾತ – ಇಂದು ಕೇರಳ ಬಿಜೆಪಿ ಅಭ್ಯರ್ಥಿ

    ತಿರುನಂತಪುರಂ: ಗರ್ಭವತಿ ಆಗಿದ್ದಾಗ ಸಿಪಿಎಂ ಮುಖಂಡನಿಂದಾಗಿ ಮಗುವನ್ನು ಕಳೆದುಕೊಂಡಿದ್ದ ಮಹಿಳೆ ಈಗ ಕೇರಳ ಪಂಚಾಯತ್‌ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.

    ಜ್ಯೋತ್ಸ್ನಾ ಜೋಸ್‌ 2018ರ ಫೆಬ್ರವರಿಯಲ್ಲಿ ನಾಲ್ಕೂವರೆ ತಿಂಗಳ ಗರ್ಭಿಣಿಯಾಗಿದ್ದರು. ಈ ಸಮಯದಲ್ಲಿ ಗಲಾಟೆ ಪ್ರಕರಣದಲ್ಲಿ ಸಿಪಿಎಂ ಮುಖಂಡ ಥಾಂಬೆ ಹೊಟ್ಟೆಯ ಮೇಲೆ ಒದ್ದಿದ್ದ. ಈತನ ಕೃತ್ಯದಿಂದ ಜ್ಯೋತ್ಸ್ನಾ ಅವರಿಗೆ ಗರ್ಭಪಾತವಾಗಿತ್ತು. ಈಗ ಇವರು ಕಲ್ಲಿಕೋಟೆಯ ಬಾಲುಸ್ಸೆರಿ ಪಂಚಾಯತ್‌ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.

    ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿಎಲ್‌ ಸಂತೋಷ್‌ ಅವರು, ಸಿಪಿಎಂ ಆಡಳಿತಕ್ಕೆ ಕೊನೆ ಹಾಡಲು ಜ್ಯೋತ್ಸ್ನಾ ಅವರಿಗೆ ಬಿಜೆಪಿ ಟಿಕೆಟ್‌ ನೀಡಿದೆ ಎಂದು ಟ್ವೀಟ್‌ ಮಾಡಿದ್ದಾರೆ.

     

    ಅಂದು ಏನಾಗಿತ್ತು?
    ಜ್ಯೋತ್ಸ್ನಾ ಜೋಸ್‌ ಪತಿ ಮತ್ತು ಪಕ್ಕದ ಮನೆಯ ಪುರುಷನೋರ್ವನ ನಡುವೆ ಮಾತಿನ ಜಟಾಪಟಿ ನಡೆದಿತ್ತು. ಆಗ ಇನ್ನಿಬ್ಬರು ಪುರುಷರು ಅಲ್ಲಿಗೆ ಬಂದು ಹಲ್ಲೆ ನಡೆಸಿದ್ದರು. ಈ ವೇಳೆ ತಡೆಯಲು ಬಂದ ಜ್ಯೋತ್ಸ್ನಾ ಮೇಲೆ ಪುರುಷರಲ್ಲಿ ಒಬ್ಬನಾದ ಸ್ಥಳೀಯ ಸಿಪಿಎಂ ನಾಯಕ ಥಾಂಬೆ ಹೊಟ್ಟೆಗೆ ಒದ್ದಿದ್ದ.

    ಪರಿಣಾಮ ಜ್ಯೋತ್ಸ್ನಾಗೆ ಸ್ಥಳದಲ್ಲೇ ರಕ್ತಸ್ರಾವ ಆರಂಭವಾಯಿತು. ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಜ್ಯೋತ್ಸ್ನಾ ಅವರ ಆರೋಗ್ಯ ಗಂಭೀರವಾಗಿದ್ದ ಕಾರಣ ವೈದ್ಯರು ಅನಿವಾರ್ಯವಾಗಿ ಗರ್ಭಪಾತ ಮಾಡಿದ್ದರು.

    ಹೊಟ್ಟೆಗೆ ಒದ್ದು ಬಲವಂತದ ಗರ್ಭಪಾತಕ್ಕೆ ಕಾರಣನಾದ ಸ್ಥಳೀಯ ಸಿಪಿಎಂ ನಾಯಕನ ಗುರುತು ಬಹಿರಂಗ ಮಾಡದಂತೆ ತಮ್ಮ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಜ್ಯೋತ್ಸ್ನಾ ಕುಟುಂಬದವರು ಅಂದು ಆರೋಪಿಸಿದ್ದರು.

  • ದೀದಿಗೆ ಮತ್ತೆ ಶಾಕ್! ಟಿಎಂಸಿ, ಕಾಂಗ್ರೆಸ್, ಸಿಪಿಎಂನಿಂದ 107 ಶಾಸಕರು ಬಿಜೆಪಿಗೆ ಸೇರಲು ಸಿದ್ಧ

    ದೀದಿಗೆ ಮತ್ತೆ ಶಾಕ್! ಟಿಎಂಸಿ, ಕಾಂಗ್ರೆಸ್, ಸಿಪಿಎಂನಿಂದ 107 ಶಾಸಕರು ಬಿಜೆಪಿಗೆ ಸೇರಲು ಸಿದ್ಧ

    ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ತನ್ನ ಪ್ರಾಬಲ್ಯವನ್ನು ಮುಂದುವರಿಸಿದ್ದು, ತೃಣಮೂಲ ಕಾಂಗ್ರೆಸ್ (ಟಿಎಂಸಿ), ಕಾಂಗ್ರೆಸ್ ಹಾಗೂ ಸಿಪಿಎಂ ಪಕ್ಷಗಳಿಂದ 107 ಶಾಸಕರು ಬಿಜೆಪಿಗೆ ಸೇರಲಿದ್ದಾರೆ ಎಂಬ ಹೇಳಿಕೆಯನ್ನು ಬಿಜೆಪಿ ನಾಯಕ ಮುಕುಲ್ ರಾಯ್ ನೀಡಿದ್ದಾರೆ.

    ಕೋಲ್ಕತ್ತಾದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಸಿಕ್ಕ ಭಾರೀ ಬಹುಮತದ ಪರಿಣಾಮ ಪಶ್ಚಿಮ ಬಂಗಾಳದ ಅನೇಕ ಮುಖಂಡರು ಬಿಜೆಪಿ ಸೇರಲು ಬಯಸುತ್ತಿದ್ದಾರೆ. ಅಂತಹ ಶಾಸಕರ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಅವರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇವೆ ಎಂದು ತಿಳಿಸಿದ್ದಾರೆ.

    ಕಳೆದ ತಿಂಗಳು ಹಿಂದಷ್ಟೇ ಟಿಎಂಸಿಯ ಇಬ್ಬರು ಶಾಸಕರಾದ ಸುನಿಲ್ ಸಿಂಗ್ ಮತ್ತು ಬಿಸ್ವಾಜಿತ್ ದಾಸ್ ಬಿಜೆಪಿ ಸೇರಿದ್ದರು. ಮೇ 28ರಂದು ಟಿಎಂಸಿಯ 50ರಿಂದ 60 ಕೌನ್ಸಿಲರ್ ಗಳು, ಇಬ್ಬರು ಹಾಗೂ ಸಿಪಿಎಂನ ಓರ್ವ ಶಾಸಕ ಬಿಜೆಪಿಗೆ ಸೇರ್ಪಡೆಯಾಗಿದ್ದರು.

    ನವದೆಹಲಿಯಲ್ಲಿ ಜೂನ್ 18ರಂದು ತೃಣಮೂಲ ಕಾಂಗ್ರೆಸ್‍ನ ಶಾಸಕ ಸುನೀಲ್ ಸಿಂಗ್ ಹಾಗೂ 15 ಕೌನ್ಸಿಲರ್ ಗಳು ಬಿಜೆಪಿಗೆ ಸೇರ್ಪಡೆಯಾಗಿದ್ದರು. ಬಿಜೆಪಿಯ ಪಶ್ಚಿಮ ಬಂಗಾಳ ಉಸ್ತುವಾರಿ ಕೈಲಾಶ್ ವಿಜಯವರ್ಗೀ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು. ಈ ವೇಳೆ ಮಾತನಾಡಿದ್ದ ಕೈಲಾಶ್ ವಿಜಯವರ್ಗೀ ಅವರು, ನಮ್ಮ ಸಂಪರ್ಕದಲ್ಲಿ ಇನ್ನೂ ಕೆಲವು ಶಾಸಕರು ನಮ್ಮ ಸಂಪರ್ಕದಲ್ಲಿ ಇದ್ದಾರೆ ಎಂದು ಹೇಳಿದ್ದರು.

    ಈ ಬೆಳವಣಿಗೆ ಬೆನ್ನಲ್ಲೇ ಕೋಲ್ಕತ್ತಾದಲ್ಲಿ ನಡೆದ ಟಿಎಂಸಿ ಕೌನ್ಸಿಲರ್ ಗಳ ಸಭೆಯಲ್ಲಿ ಮಾತನಾಡಿದ್ದ ಟಿಎಂಸಿ ನಾಯಕಿ, ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರು, ತೃಣಮೂಲ ಕಾಂಗ್ರೆಸ್ (ಟಿಎಂಸಿ) ದುರ್ಬಲ ಪಕ್ಷವಲ್ಲ. ಒಬ್ಬರು ಪಕ್ಷ ಬಿಟ್ಟು ಹೋದರೆ 500 ಜನ ಸೇರ್ಪಡೆಯಾಗುತ್ತಾರೆ. ಹಣದ ಆಸೆಗಾಗಿ 15ರಿಂದ 20 ಕೌನ್ಸಿಲರ್ ಗಳು ಪಕ್ಷ ತೊರೆದರೆ ನಾನು ಹೆದರುವುದಿಲ್ಲ. ಶಾಸಕರು ಪಕ್ಷವನ್ನು ಬಿಟ್ಟು ಹೋಗಲು ಇಚ್ಛಿಸಿದರೆ ಬಿಟ್ಟು ಹೋಗಲಿ. ಪಕ್ಷದಲ್ಲಿ ಕಳ್ಳರನ್ನು ಇಟ್ಟುಕೊಳ್ಳಲು ನಾವು ಬಯಸುವುದಿಲ್ಲ ಎಂದು ಗುಡುಗಿದ್ದರು.

  • ಲೋಕಸಭಾ ಚುನಾವಣೆ – ಅತಿ ಹೆಚ್ಚು ಗೆಲುವು ಸಾಧಿಸಿದ ಪಕ್ಷಗಳು

    ಲೋಕಸಭಾ ಚುನಾವಣೆ – ಅತಿ ಹೆಚ್ಚು ಗೆಲುವು ಸಾಧಿಸಿದ ಪಕ್ಷಗಳು

    ಬೆಂಗಳೂರು: ಇಲ್ಲಿಯವರೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅತಿ ಹೆಚ್ಚಿನ ಸ್ಥಾನ ಗೆದ್ದರೆ ಬಿಜೆಪಿ ಎರಡನೇ ಸ್ಥಾನ ಪಡೆದಿದೆ.

    ಇಲ್ಲಿಯವರೆಗೆ ಒಟ್ಟು 7,705 ಚುನಾವಣೆಗಳ ಪೈಕಿ ಕಾಂಗ್ರೆಸ್ 3,745 ರಲ್ಲಿ ಗೆಲುವು ಸಾಧಿಸಿದ್ದು, 3,960 ರಲ್ಲಿ ಸೋತಿದೆ. ಬಿಜೆಪಿ 3,354 ಚುನಾವಣೆ ಎದುರಿಸಿದ್ದು ಇದರಲ್ಲಿ 1,268 ಚುನಾವಣೆಯನ್ನು ಗೆದ್ದುಕೊಂಡಿದ್ದರೆ 2,086 ಚುನಾವಣೆಯಲ್ಲಿ ಸೋತಿದೆ.

    ಸಿಪಿಎಂ ಒಟ್ಟು 914 ಚುನಾವಣೆ ಎದುರಿಸಿದ್ದು 358 ರಲ್ಲಿ ಗೆಲುವು ಕಂಡಿದ್ದರೆ, 556 ರಲ್ಲಿ ಸೋಲನ್ನು ಅನುಭವಿಸಿದೆ. ಸಿಪಿಐ 1,10 2 ಚುನಾವಣೆಯಲ್ಲಿ 203 ರಲ್ಲಿ ಗೆದ್ದು 899ರಲ್ಲಿ ಸೋತಿದೆ.

    ತಮಿಳುನಾಡಿನ ಡಿಎಂಕೆ 321 ಚುನಾವಣೆಯಲ್ಲಿ 144 ರಲ್ಲಿ ಗೆಲುವು ಕಂಡಿದ್ದರೆ 177 ರಲ್ಲಿ ಸೋಲನ್ನು ಅನುಭವಿಸಿದೆ. ಎಐಎಡಿಎಂಕೆ 237 ಚುನಾವಣೆಯಲ್ಲಿ 128 ನ್ನು ಗೆದ್ದುಕೊಂಡಿದ್ದು, 109 ರಲ್ಲಿ ಸೋಲನ್ನು ಅನುಭವಿಸಿದೆ.

    ಅತಿ ಹೆಚ್ಚು ಗೆಲುವು ಸಾಧಿಸಿದ ಪಕ್ಷಗಳು
    ಕಾಂಗ್ರೆಸ್
    ಒಟ್ಟು ಚುನಾವಣೆ -7,705
    ಗೆಲುವು – 3,745
    ಸೋಲು – 3,960
    ಶೇ. ಜಯ – 48.6%

    ಬಿಜೆಪಿ
    ಒಟ್ಟು ಚುನಾವಣೆ – 3,354
    ಗೆಲುವು – 1,268
    ಸೋಲು – 2,086
    ಶೇ. ಜಯ – 37.8%

    ಎಡಿಎಂಕೆ
    ಒಟ್ಟು ಚುನಾವಣೆ – 237
    ಗೆಲುವು – 128
    ಸೋಲು – 109
    ಶೇ. ಜಯ – 54.0%

    ಶಿರೋಮಣಿ ಅಕಾಲಿ ದಳ
    ಒಟ್ಟು ಚುನಾವಣೆ – 113
    ಗೆಲುವು – 54
    ಸೋಲು – 59
    ಶೇ. ಜಯ – 47.8%

    ಡಿಎಂಕೆ
    ಒಟ್ಟು ಚುನಾವಣೆ – 321
    ಗೆಲುವು – 144
    ಸೋಲು – 177
    ಶೇ. ಜಯ – 44.9%

    ಟಿಡಿಪಿ
    ಒಟ್ಟು ಚುನಾವಣೆ – 301
    ಗೆಲುವು – 129
    ಸೋಲು – 172
    ಶೇ. ಜಯ – 42.9%

    ಸಿಪಿಎಂ
    ಒಟ್ಟು ಚುನಾವಣೆ – 914
    ಗೆಲುವು – 358
    ಸೋಲು – 556
    ಶೇ. ಜಯ – 39.2%

    ಜನತಾ ಪಕ್ಷ
    ಒಟ್ಟು ಚುನಾವಣೆ – 1081
    ಗೆಲುವು – 336
    ಸೋಲು – 745
    ಶೇ. ಜಯ – 31.1%

    ಟಿಎಂಸಿ
    ಒಟ್ಟು ಚುನಾವಣೆ – 228
    ಗೆಲುವು – 63
    ಸೋಲು – 165
    ಶೇ.ಜಯ – 27.6%

     

    ಜನತಾ ದಳ
    ಒಟ್ಟು ಚುನಾವಣೆ – 943
    ಗೆಲುವು – 254
    ಸೋಲು – 689
    ಶೇ.ಜಯ – 26.9%

     

    ಆರ್‌ಜೆಡಿ
    ಒಟ್ಟು ಚುನಾವಣೆ – 293
    ಗೆಲುವು – 56
    ಸೋಲು – 237
    ಶೇ.ಜಯ – 19.1%

    ಸಿಪಿಐ
    ಒಟ್ಟು ಚುನಾವಣೆ -1,102
    ಗೆಲುವು – 203
    ಸೋಲು – 899
    ಶೇ. ಜಯ – 18.4%

  • ವಯನಾಡಿನಲ್ಲಿ ಸೋಲಿಸುತ್ತೇವೆ – ಕೇರಳದಲ್ಲಿ ರಾಹುಲ್ ಸ್ಪರ್ಧೆಗೆ ಸಿಪಿಎಂ ಭಾರೀ ವಿರೋಧ

    ವಯನಾಡಿನಲ್ಲಿ ಸೋಲಿಸುತ್ತೇವೆ – ಕೇರಳದಲ್ಲಿ ರಾಹುಲ್ ಸ್ಪರ್ಧೆಗೆ ಸಿಪಿಎಂ ಭಾರೀ ವಿರೋಧ

    ನವದೆಹಲಿ: ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೇರಳದ ವಯನಾಡುವಿನಿಂದ ಸ್ಪರ್ಧಿಸುತ್ತಿರುವುದಕ್ಕೆ ಭಾರತೀಯ ಕಮ್ಯುನಿಸ್ಟ್ ಪಾರ್ಟಿ ಮಾಕ್ರ್ಸಿಸ್ಟ್(ಸಿಪಿಎಂ) ಬಲವಾಗಿ ವಿರೋಧಿಸಿದೆ.

    ಸಿಪಿಎಂ ನೇತೃತ್ವದ ಎಲ್‍ಡಿಎಫ್ ಈಗಾಗಲೇ ವಯನಾಡುವಿನಲ್ಲಿ ಭಾರತೀಯ ಕಮ್ಯುನಿಸ್ಟ್ ಪಾರ್ಟಿಯ(ಸಿಪಿಐ) ಪಿ.ಪಿ ಸುನೀರ್‍ರನ್ನು ಲೋಕಸಮರಕ್ಕೆ ಕಣಕ್ಕಿಳಿಸಲಾಗಿದೆ. ಆದ್ರೆ ಈಗ ರಾಹುಲ್ ಗಾಂಧಿ ಈ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ವಿಷಯ ತಿಳಿಯುತ್ತಿದ್ದಂತೆ ಸಿಪಿಎಂ ನಾಯಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹಿರಿಯ ನಾಯಕ ಪ್ರಕಾಶ್ ಕಾರಟ್ ಅವರು ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿ, ರಾಹುಲ್ ಗಾಂಧಿಯನ್ನು ವಯನಾಡುವಿನಲ್ಲಿ ಸೋಲುವಂತೆ ಮಾಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪ್ರಕಾಶ್ ಕಾರಟ್ ಅವರು, ಕಾಂಗ್ರೆಸ್ ತಮ್ಮ ಸಾಮಥ್ರ್ಯವನ್ನು ಪ್ರದರ್ಶಿಸಲು ರಾಹುಲ್ ಅವರನ್ನು ವಯನಾಡುವಿನಿಂದ ಕಣಕ್ಕಿಳಿಸಿದೆ. ಬಿಜೆಪಿಯನ್ನು ಸೋಲಿಸಲು ನಾವು ಒಂದಾದರೆ ಕೇರಳದಲ್ಲಿ ನಮ್ಮ ವಿರುದ್ಧವೇ ರಾಹುಲ್ ಸ್ಪರ್ಧೆ ಮಾಡುತ್ತಿದ್ದಾರೆ. ಕೇರಳದಲ್ಲಿ ಬಿಜೆಪಿ ವಿರುದ್ಧವಾಗಿ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್(ಎಲ್‍ಡಿಎಫ್) ಕೆಲಸ ಮಾಡುತ್ತಿದೆ. ಹೀಗಾಗಿ ಕಾಂಗ್ರೆಸ್ ರಾಹುಲ್ ಗಾಂಧಿಯನ್ನು ಕೇರಳದಲ್ಲಿ ಸಿಪಿಎಂ ವಿರುದ್ಧ ನಿಲ್ಲಿಸುತ್ತಿದೆ ಎಂಬುದು ಸ್ಪಷ್ಟವಾಗುತ್ತಿದೆ. ಕಾಂಗ್ರೆಸ್ಸಿನ ಈ ನಿರ್ಧಾರವನ್ನು ನಾವು ವಿರೋಧಿಸುತ್ತೆವೆ. ಅಲ್ಲದೇ ರಾಹುಲ್‍ರನ್ನು ಈ ಚುನಾವಣೆಯಲ್ಲಿ ಸೋಲಿಸಲು ಶ್ರಮಿಸುತ್ತೇವೆ ಎಂದು ಕಿಡಿಕಾರಿದ್ದಾರೆ.

    ಇದರ ಜೊತೆಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಕೂಡ ಕಾಂಗ್ರೆಸ್ ನಿರ್ಧಾರವನ್ನು ಖಂಡಿಸಿದ್ದಾರೆ. ಕೇರಳದಲ್ಲಿ ರಾಹುಲ್ ಗಾಂಧಿ ಸ್ಪರ್ಧಿಸಿದರೆ ಅದು ಬಿಜೆಪಿ ವಿರುದ್ಧ ಆಗಲ್ಲ ಸಿಪಿಎಂ ವಿರುದ್ಧವಾಗಿದೆ. ಕೇರಳದಲ್ಲಿ ಕಾಂಗ್ರೆಸ್ಸನ್ನು ಸಿಪಿಎಂ ಮಣಿಸೋದು ಖಚಿತ ಎಂದು ಹೇಳಿದರು.

    ಕಳೆದ 2014ರ ಲೋಕಸಭಾ ಚುನಾವಣೆಯಲ್ಲಿ ವಯನಾಡುವಿನಲ್ಲಿ ಕಾಂಗ್ರೆಸ್ಸಿನಿಂದ ಎಂ.ಐ ಶಹನಾವಸ್ ಸ್ಪರ್ಧಿಸಿ 3,77,035 ಮತಗಳನ್ನು ಪಡೆದಿದ್ದರು. ಸಿಪಿಐನ ಸತ್ಯನ್ ವೋಕೆರಿ 3,56,165 ಮತಗಳನ್ನು ಗಳಿಸಿದ್ದರು. ಹಾಗೆಯೇ ಬಿಜೆಪಿಯ ಪಿ.ಆರ್ ರಸ್‍ಮಿಲ್‍ನಾಥ್ ಸ್ಪರ್ಧಿಸಿ 80,752 ಮತಗಳನ್ನು ಪಡೆದಿದ್ದರು. 2018ರ ನವೆಂಬರ್ 21 ರಂದು ಶಹನಾವಸ್ ಚೆನ್ನೈ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

  • ವೈರಲ್ ಆಯ್ತು ಕೇರಳ ಶಾಸಕಿಯ ರಾಮಾಯಣ ಪಠಣ: ವಿಡಿಯೋ ನೋಡಿ

    ವೈರಲ್ ಆಯ್ತು ಕೇರಳ ಶಾಸಕಿಯ ರಾಮಾಯಣ ಪಠಣ: ವಿಡಿಯೋ ನೋಡಿ

    ತಿರುವನಂತಪುರಂ: ಕೇರಳದ ಸಿಪಿಎಂ ಶಾಸಕಿಯೊಬ್ಬರು ರಾಮಾಯಣ ವಾಚನ ಮಾಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

    ಕೇರಳದಲ್ಲಿ ಬೆಳೆಯುತ್ತಿರುವ ಆರೆಸ್ಸೆಸ್ ಹಾಗೂ ಬಿಜೆಪಿಯ ಪ್ರಾಬಲ್ಯವನ್ನು ಎದುರಿಸಲು ಸಿಪಿಎಂ ಸೇರಿದಂತೆ ಎಡಪಂಥೀಯ ಸಂಘಟನೆಗಳು ರಾಮಾಯಣ ವಾಚನ ಮತ್ತು ರಾಮಾಯಣ ಕುರಿತ ವಿಚಾರ ಸಂಕಿರಣಗಳನ್ನು ಆಯೋಜಿಸಲು ಮುಂದಾಗಿರುವ ಬೆನ್ನಲ್ಲೇ ಶಾಸಕಿಯ ವಿಡಿಯೋ ಸಾಕಷ್ಟು ಸುದ್ದಿ ಮಾಡಿದೆ.

    ಕೇರಳದ ಕಾಯಂಕುಳಂ ವಿಧಾನಸಭಾ ಕ್ಷೇತ್ರದ ಶಾಸಕಿ ಯು. ಪ್ರತಿಭಾ ಹರಿ ಅವರು ಕರ್ಕಾಟಕ ಮಾಸದ ಆಚರಣೆಗಳ ಭಾಗವಾಗಿ ರಾಮಾಯಣ ವಾಚನ ಮಾಡುತ್ತಿರುವ ವೀಡಿಯೋ ಒಂದನ್ನು ತಮ್ಮ ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದರು. ಕೆಲವೇ ಗಂಟೆಗಳಲ್ಲಿ ಅದನ್ನು ಹಲವರು ಶೇರ್ ಮಾಡಿಕೊಂಡಿದ್ದಾರೆ. ಆ ವೀಡಿಯೋವನ್ನು 1.32 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ.

    ಸಾಮಾನ್ಯವಾಗಿ ಎಡಪಂಥೀಯ ವಿಚಾರಧಾರೆಯವರು ಲೆನಿನ್, ಮಾರ್ಕ್ಸ್ ಮುಂತಾದ ಕಮ್ಯುನಿಸ್ಟ್ ಸಿದ್ಧಾಂತಗಳನ್ನು ಓದುವುದು ಸಾಮಾನ್ಯ. ಆದರೆ ಸಿಪಿಎಂ ಶಾಸಕಿಯೊಬ್ಬರು ರಾಮಾಯಣ  ವಾಚಿಸಿದ್ದು ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ.

     

    https://www.youtube.com/watch?v=4yt2tO8BIbY

  • ಪಂಚಾಯತ್ ಚುನಾವಣೆಯಲ್ಲಿ ಹಿಂಸಾಚಾರ: 8 ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ- ಶಾಕಿಂಗ್ ವಿಡಿಯೋ ನೋಡಿ

    ಪಂಚಾಯತ್ ಚುನಾವಣೆಯಲ್ಲಿ ಹಿಂಸಾಚಾರ: 8 ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ- ಶಾಕಿಂಗ್ ವಿಡಿಯೋ ನೋಡಿ

    ಕೊಲ್ಕತ್ತಾ: ಪಂಚಾಯತ್ ಚುನಾವಣೆ ವೇಳೆ 10 ಕಡೆ ನಡೆದ ಘರ್ಷಣೆ ಹಿಂಸಾ ರೂಪ ಪಡೆದುಕೊಂಡಿದ್ದು, 20ಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

    ಮುಂಜಾನೆ ಪ್ರಾರಂಭವಾದ ಚುನಾವಣೆಯಲ್ಲಿ ವಿವಿಧ ಬೂತ್‍ಗಳಲ್ಲಿ ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ಘರ್ಷಣೆ ಉಂಟಾಗಿದ್ದು, ಪರಸ್ಪರ ಹೊಡೆದಾಡಿದ್ದಾರೆ. ನಂತರ ಇದು ಹಿಂಸಾ ಸ್ವರೂಪ ಪಡೆದುಕೊಂಡಿದೆ. ಪ್ರದೇಶವೊಂದರಲ್ಲಿ ನಡೆದ ಬಾಂಬ್ ದಾಳಿಯಲ್ಲಿ 20 ಜನ ಗಾಯಗೊಂಡಿವುದು ವರದಿಯಾಗಿದೆ.

     

    ಚುನಾವಣೆಗೂ ಮುನ್ನ 34%ರಷ್ಟು ಸ್ಥಾನಗಳಲ್ಲಿ ಅವಿರೋಧವಾಗಿ ಆಡಳಿತ ರೂಢ ತೃಣಮೂಲ ಕಾಂಗ್ರೆಸ್ ಸದಸ್ಯರು ಆಯ್ಕೆಯಾಗಿದ್ದರು. ಈ ಸಂಬಂಧ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿತ್ತು. ಈ ಬೆಳವಣಿಗೆ ನಂತರ ಪ್ರಾರಂಭವಾದ ಚುನಾವಣೆಯು ಹಿಂಸಾಚಾರ ಸ್ವರೂಪ ಪಡೆದುಕೊಂಡಿದೆ.

    ಘಟನೆಗೆ ಸಂಬಂಧಿಸಿದಂತೆ ಉತ್ತರದ 24 ಪರಗಣದಿಂದ ಹಾಗೂ ದಕ್ಷಿಣದ ಬುದ್ರ್ವಾನ್, ಕೋಚ್‍ಬೆಹರ್‍ನಿಂದ 24 ಪರಗಣಗಳಿಂದ ರಾಜ್ಯ ಚುನಾವಣೆ ಆಯೋಗವು ದೂರು ದಾಖಲಿಸಿಕೊಂಡಿದೆ.

    ಉತ್ತರ ಬಂಗಾಳದ ಕೊಚ್ಬೆಗಾರ್ ಜಿಲ್ಲೆಯ ಶುಕ್ತಾಬಾರಿ ಮತದಾನದ ಬೂತ್‍ನಲ್ಲಿ ನಡೆದ ಬಾಂಬ್ ದಾಳಿ ನಡೆದಿದ್ದು, ಒಬ್ಬ ಟಿಎಂಸಿ ಕಾರ್ಯಕರ್ತ, ಓರ್ವ ಮಹಿಳೆ ಸೇರಿದಂತೆ ಒಟ್ಟು 20 ಜನರು ಗಾಯಗೊಂಡಿದ್ದಾರೆ.

    ಗುಂಪೊಂದು ಉತ್ತರ ಬಂಗಾಳದ ಅಲಿಪುರ್ದಾರ್ ಬೂತ್ ಸುತ್ತ ಗೆರೆ ಏಳೆದಿದ್ದು, ಇದನ್ನು ದಾಟದಂತೆ ಮತದಾರರಿಗೆ ಸೂಚಿಸಿದೆ. ಅಲ್ಲದೇ ದಿನ್ಹಾಟ್‍ದಲ್ಲಿ ಎರಡು ಗುಂಪುಗಳ ನಡುವಿನ ಕಲಹದಿಂದಾಗಿ ಕೆಲವು ಮತದಾರಿಗೆ ಗಾಯವಾಗಿದೆ.

    ದಕ್ಷಿಣ ಪರಗಣದ ಭಾಂಗಾರ್‍ದಲ್ಲಿ ನಡೆದ ಘರ್ಷಣೆ ವೇಳೆ ಮಾಧ್ಯಮದ ವಾಹನಗಳಿಗೂ ಹಾನಿಯಾಗಿದೆ. ಬಿರ್ಪಾರಾದಲ್ಲಿ ಐದು ಜನ ಪತ್ರಕರ್ತರು ಗಾಯಗೊಂಡಿದ್ದಾರೆ. ಗುಂಪನ್ನು ಚದುರಿಸಲು ಪೊಲೀಸರು ಟ್ರಿಗರ್ ಗ್ಯಾಸ್ ಬಳಕೆ ಮಾಡಿದ್ದಾರೆ. ಬುದ್ರ್ವಾನ್ ನಲ್ಲಿ ಬಿಜೆಪಿ ಹಾಗೂ ಸಿಪಿಎಂ ಕಾರ್ಯಕರ್ತರು ಬಾಂಬ್ ಹಾಗೂ ದೊಣ್ಣೆ ಹಿಡಿದು ಮತದಾರರನ್ನು ಹೆದರಿಸಿದ್ದಾರೆ ಎಂದು ವರದಿಯಾಗಿದೆ.

    ಇತ್ತೀಚಿನ ವರದಿಯ ಪ್ರಕಾರ 8 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.