Tag: CPL

  • 500 ಟಿ20 ಪಂದ್ಯವಾಡಿ ದಾಖಲೆ ಬರೆದ ಬ್ರಾವೋ

    500 ಟಿ20 ಪಂದ್ಯವಾಡಿ ದಾಖಲೆ ಬರೆದ ಬ್ರಾವೋ

    ಬಾಸೆಟೆರ್ರೆ: 500 ಟಿ-20 ಪಂದ್ಯವಾಡಿದ ವಿಶ್ವದ ಎರಡನೇ ಆಟಗಾರ ಎಂಬ ವಿಶ್ವ ದಾಖಲೆಗೆ ವೆಸ್ಟ್ ಇಂಡೀಸ್ ಕ್ರಿಕೆಟ್ ಆಟಗಾರ ಡ್ವೇನ್ ಬ್ರಾವೋ ಭಾಜರಾಗಿದ್ದಾರೆ.

    37 ವರ್ಷದ ಈ ದೈತ್ಯ ಆಟಗಾರ, ನಿನ್ನೆ ನಡೆದ ಕೆರೆಬಿಯನ್ ಲೀಗ್ ನ ಫೈನಲ್ ಪಂದ್ಯವನ್ನು ಆಡುವ ಮೂಲಕ ಈ ವಿಶ್ವದಲ್ಲೇ 500 ಟಿ-20 ಪಂದ್ಯವಾಡಿದ ಎರಡನೇ ಆಟಗಾರ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.

    ಮೊದಲ ಸ್ಥಾನವನ್ನು ಅವರದೇ ದೇಶದ ಮತ್ತೊಬ್ಬ ಸ್ಟಾರ್ ಆಟಗಾರ ಕೀರೊನ್ ಪೊಲಾರ್ಡ್ ಅವರಿಸಿಕೊಂಡಿದ್ದಾರೆ. ತಮ್ಮ ದೇಶಕ್ಕಾಗಿ ಅಷ್ಟೇ ಅಲ್ಲದೆ ಎಲ್ಲಾ ದೇಶದ ಫ್ರಾಂಚೈಸಿ ಟಿ-20 ಲೀಗ್ ನಲ್ಲಿ ಆಡಿರುವ ಬ್ರಾವೋ ಉತ್ತಮ ಆಟಗಾರ ಎಂದು ಗುರುತಿಸಿಕೊಂಡಿದ್ದಾರೆ. ಇದನ್ನೂ ಓದಿ: ಅಂತರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಫೀಲ್ಡಿಂಗ್ ಮಾಡಿದ ಶ್ವಾನಕ್ಕೆ ಐಸಿಸಿ ಪುರಸ್ಕಾರ..!

    2006ರಲ್ಲಿ ಟಿ-20 ಪಂದ್ಯಕ್ಕೆ ಪಾದರ್ಪಣೆ ಮಾಡಿದ ಬ್ಯಾವೋ, 2010ರಲ್ಲಿ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದಾರೆ. 2017ರ ಬಳಿಕ ಏಕದಿನ ಕ್ರಿಕೆಟ್ ನಲ್ಲೂ ಕೂಡ ಭಾಗವಹಿಸಿಲ್ಲ. ಆದರೆ ಟಿ-20 ಕ್ರಿಕೆಟ್ ನಲ್ಲಿ ಮಾತ್ರ ಅಬ್ಬರಿಸುತ್ತಾ ತಮ್ಮ ಬೇಡಿಕೆಯನ್ನು ಹೆಚ್ಚಿಸಿಕೊಂಡಿದ್ದಾರೆ.  ಇದನ್ನೂ ಓದಿ: ಐಪಿಎಲ್ ನಿಯಮಿತ ಪ್ರೇಕ್ಷಕರಿಗೆ ಗ್ಯಾಲರಿ ಪ್ರವೇಶ ಪಡೆಯಲು ಅನುಮತಿ

    ಸಿಪಿಎಲ್ ಫೈನಲ್ ಪಂದ್ಯಕ್ಕೂ ಮುನ್ನ 499 ಟಿ 20 ಪಂದ್ಯವಾಡಿದ್ದ ಬ್ರಾವೋ ಒಟ್ಟು 6566 ರನ್ ಕಲೆ ಹಾಕಿದ್ದಾರೆ. ಬ್ಯಾಟಿಂಗ್ ಮಾತ್ರವಲ್ಲದೆ ಬೌಲಿಂಗ್ ನಲ್ಲಿಯು ಮಿಂಚಿರುವ ಬ್ರಾವೋ ಬರೋಬ್ಬರಿ 540 ವಿಕೆಟ್ ಉರುಳಿಸಿದ್ದಾರೆ. ಆಟದ ಜೊತೆ ಪ್ರೇಕ್ಷರಿಕೆ ಮೈದಾನದಲ್ಲಿ ವಿಶಿಷ್ಟ ಡ್ಯಾನ್ಸ್ ಮೂಲಕ ರಂಜಿಸುವ ಬ್ರಾವೋ ಪ್ರಸ್ತುತ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಆಡುತ್ತಿದ್ದಾರೆ.

  • ಕ್ರಿಕೆಟ್ ಅಂಗಳಕ್ಕೆ ಕಾಲಿಟ್ಟ ಸ್ಮಾರ್ಟ್ ಬಾಲ್

    ಕ್ರಿಕೆಟ್ ಅಂಗಳಕ್ಕೆ ಕಾಲಿಟ್ಟ ಸ್ಮಾರ್ಟ್ ಬಾಲ್

    ಲಂಡನ್: ಕ್ರಿಕೆಟ್ ಜನಪ್ರಿಯತೆ ಹೆಚ್ಚಾಗುತ್ತಿದ್ದಂತೆ ಹೊಸ ಹೊಸ ತಂತ್ರಜ್ಞಾನ ಕ್ರಿಕೆಟ್ ಲೋಕದಲ್ಲಿ ಕಾಣ ಸಿಗುತ್ತಿದೆ. ಇದಕ್ಕೆ ಹೊಸ ಸೇರ್ಪಡೆ ಎಂಬಂತೆ ಇದೀಗ ಸ್ಮಾರ್ಟ್ ಬಾಲ್ ಕ್ರಿಕೆಟ್ ಅಂಗಳಕ್ಕೆ ಕಾಲಿಟ್ಟಿದೆ.

    ಸ್ಮಾರ್ಟ್ ಬಾಲ್ ಎಂದರೇನು?
    ಕ್ರಿಕೆಟ್‍ನಲ್ಲಿ ಬಳಸುವ ಬಾಲ್ ಇದೀಗ ಹೊಸ ಸ್ಪರ್ಶದೊಂದಿಗೆ ಸ್ಮಾರ್ಟ್ ಬಾಲ್ ಆಗಿದೆ. ಸಾಂಪ್ರದಾಯಿಕವಾಗಿ ಬಳಸುವ ಬಾಲ್‍ಗೆ ತಂತ್ರಜ್ಞಾನವನ್ನು ಅಳವಡಿಕೆ ಮಾಡಿ ಸ್ಮಾರ್ಟ್ ಬಾಲ್ ಆಗಿ ಮಾರ್ಪಡಿಸಲಾಗಿದೆ. ಈ ಬಾಲ್‍ಗಳಲ್ಲಿ ಎಲೆಕ್ಟ್ರಾನಿಕ್ ಮೈಕ್ರೋ ಚಿಪ್ ಅಳವಡಿಕೆ ಮಾಡಲಾಗಿದ್ದು, ಅದರೊಳಗೆ ಇರುವ ಸೆನ್ಸರ್‍ ಗಳು ವಿವಿಧ ದತ್ತಾಂಶಗಳನ್ನು ಸಂಗ್ರಹಿಸುವ ಕಾರ್ಯ ಮಾಡುತ್ತದೆ. ಸ್ಮಾರ್ಟ್ ಬಾಲ್ ಸಂಗ್ರಹಿಸುವ ವಿವಿಧ ಮಾಹಿತಿಯನ್ನು ಸ್ಮಾರ್ಟ್ ಫೋನ್, ಟ್ಯಾಬ್ಲೆಟ್, ಕಂಪ್ಯೂಟರ್ ಮತ್ತು ಲ್ಯಾಪ್‍ಟಾಪ್‍ಗಳಲ್ಲಿ ವೀಕ್ಷಿಸಬಹುದಾಗಿದೆ. ಇದಲ್ಲದೆ ಇದಕ್ಕಾಗಿ ವಿಶೇಷ ಅಪ್ಲಿಕೇಷನ್(ಆ್ಯಪ್) ಕೂಡ ಹೊರತರಲಾಗಿದೆ. ಇದನ್ನೂ ಓದಿ: ತಾಲಿಬಾನಿಗಳ ಮುಂದಿನ ಪ್ರಧಾನಿ ಅಫ್ರಿದಿ – ನೆಟ್ಟಿಗರಿಂದ ಫುಲ್ ಟ್ರೋಲ್

    ಕ್ರೀಡಾ ತಂತ್ರಜ್ಞಾನ ಸಂಸ್ಥೆಯಾದ ಸ್ಟೋಟ್ರ್ಸ್ ಕೋರ್ ತನ್ನ ಅತ್ಯುನ್ನತ ತಂತ್ರಜ್ಞಾನದೊಂದಿಗೆ ಕುಕಾಬುರಾ ಸಹಯೋಗದಲ್ಲಿ ಈ ಸ್ಮಾರ್ಟ್ ಬಾಲ್ ಅಭಿವೃದ್ಧಿ ಪಡಿಸಿದೆ. ಸ್ಮಾರ್ಟ್ ಬಾಲ್ ಉಳಿದ ಚೆಂಡಿನಂತೆ ಇರಲಿದ್ದು, ಚೆಂಡಿನ ಒಳಗೆ ಸ್ಮಾರ್ಟ್ ಚಿಪ್ ಒಂದನ್ನು ಮಾತ್ರ ಅಳವಡಿಸಲಾಗುತ್ತದೆ. ಇದನ್ನು ಹೊರತು ಪಡಿಸಿ ಈ ಚೆಂಡಿನ ಗಾತ್ರ, ತೂಕಗಳಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಕುಕಾಬುರಾ ಸಂಸ್ಥೆ ತಿಳಿಸಿದೆ. ಇದನ್ನೂ ಓದಿ: ಎಸ್‍ಜಿ ಚೆಂಡಿನ ವಿರುದ್ಧ ಅಶ್ವಿನ್ ಅಸಮಾಧಾನ – 1 ಎಸ್‍ಜಿ ಚೆಂಡಿಗೆ ಎಷ್ಟು ರೂ.? ಯಾವ ದೇಶದಲ್ಲಿ ಯಾವ ಬಾಲ್ ಬಳಕೆಯಿದೆ?

    ಈ ಸ್ಮಾರ್ಟ್ ಬಾಲ್‍ನ ಒಳಗೆ ಇರುವ ಸ್ಮಾರ್ಟ್ ಚಿಪ್ ಬೌಲರ್ ಎಸೆಯುವ ಚೆಂಡು ಬೌನ್ಸ್ ಆಗುವ ಮುನ್ನ ಚೆಂಡಿನ ವೇಗ, ಬೌನ್ಸ್ ಆದ ಬಳಿಕ ಚೆಂಡಿನ ವೇಗ, ಸ್ಪಿನ್ ಬೌಲರ್ ಎಸೆದ ಬಾಲ್ ಎಷ್ಟರ ಮಟ್ಟಿಗೆ ತಿರುವು ಪಡೆದುಕೊಂಡಿದೆ ಮತ್ತು ಚೆಂಡಿನ ಮೇಲೆ ಬೌಲರ್‍ನ ಶಕ್ತಿಯ ಪ್ರಯೋಗವನ್ನು ಕೇವಲ ಐದು ಸೆಕೆಂಡುಗಳಲ್ಲಿ ತಿಳಿದುಕೊಳ್ಳಲು ಸಹಾಯವಾಗುವಂತೆ ಅಭಿವೃದ್ಧಿ ಪಡಿಸಲಾಗಿದೆ. ಒಂದು ಗಂಟೆ ಚಾರ್ಜ್ ಮಾಡಿದರೆ 30 ಗಂಟೆಗಳ ಕಾಲ ಬಳಸಬಹುದಾಗಿದೆ. ಸರಾಸರಿ 300 ಕಿಮೀ. ವೇಗದವರೆಗೂ ಯಾವುದೇ ತೊಂದರೆಗಳಿಲ್ಲದೆ ಈ ಬಾಲ್‍ನ್ನು ಬಳಸಬಹುದಾಗಿದೆ. ಇದನ್ನೂ ಓದಿ: ವಿಶೇಷ ಅತಿಥಿಯನ್ನು ಹಿಡಿದುಕೊಂಡು ಪೃಥ್ವಿ ಶಾ ಪ್ರಯಾಣ

    ಈಗಾಗಲೇ ಸ್ಮಾರ್ಟ್‍ಗಳನ್ನು ಕೆರಿಬಿಯನ್ ಪ್ರೀಮಿಯರ್ ಲೀಗ್‍ನಲ್ಲಿ ಪ್ರಯೋಗ ಮಾಡಲು ತಯಾರಿಗಳು ನಡೆದಿದ್ದು ಇಲ್ಲಿ ಯಶಸ್ವಿಯಾದರೆ ಮುಂದೆ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಸ್ಮಾರ್ಟ್ ಬಾಲ್‍ಗಳನ್ನು ಕಾಣಬಹುದಾಗಿದೆ.

  • 48ನೇ ವಯಸ್ಸಿನಲ್ಲಿ ಸಿಪಿಎಲ್ ಟೂರ್ನಿಗೆ ಪಾದಾರ್ಪಣೆ – ದಾಖಲೆ ಬರೆದ ತಾಂಬೆ

    48ನೇ ವಯಸ್ಸಿನಲ್ಲಿ ಸಿಪಿಎಲ್ ಟೂರ್ನಿಗೆ ಪಾದಾರ್ಪಣೆ – ದಾಖಲೆ ಬರೆದ ತಾಂಬೆ

    ನವದೆಹಲಿ: ಭಾರತದ ದೇಶೀಯ ಕ್ರಿಕೆಟ್ ಆಟಗಾರ ಪ್ರವೀಣ್ ತಾಂಬೆಯವರು ತಮ್ಮ 48ನೇ ವಯಸ್ಸಿನಲ್ಲಿ ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ಟೂರ್ನಿಗೆ ಪಾದಾರ್ಪಣೆ ಮಾಡಿದ್ದಾರೆ.

    ಸಿಪಿಎಲ್-2020 ಕೊರೊನಾ ವೈರಸ್ ಕಾರಣದಿಂದ ಮುಂದಕ್ಕೆ ಹೋಗಿತ್ತು. ಆದರೆ ಸಿಪಿಎಲ್‍ನ 8ನೇ ಅವೃತ್ತಿ ಅಗಸ್ಟ್ 18ರಿಂದ ಆರಂಭವಾಗಿದೆ. 2013ರಲ್ಲಿ ಅಧಿಕೃತವಾಗಿ ಆರಂಭಗೊಂಡ ಈ ಟೂರ್ನಿಯಲ್ಲಿ ಪ್ರಪಂಚದ ವಿವಿಧ ದೇಶದ ಕ್ರಿಕೆಟ್ ಆಟಗಾರರು ಭಾಗವಹಿಸುತ್ತಾರೆ. ಆದರೆ ಇಲ್ಲಿಯವರೆಗೂ ಯಾವೊಬ್ಬ ಭಾರತೀಯ ಕ್ರಿಕೆಟ್ ಆಟಗಾರನೂ ಈ ಟೂರ್ನಿಯಲ್ಲಿ ಆಡಿರಲಿಲ್ಲ.

    ಆದರೆ ಕೇವಲ ಐಪಿಎಲ್ ಮತ್ತು ದೇಶೀಯ ಟೂರ್ನಿಯಲ್ಲಿ ಗುರುತಿಸಿಕೊಂಡ ಲೆಗ್ ಸ್ಪಿನ್ನರ್ ಪ್ರವೀಣ್ ತಾಂಬೆಯವರು, ಮೊಟ್ಟ ಮೊದಲನೇ ಬಾರಿಗೆ ಸಿಪಿಎಲ್ ಟೂರ್ನಿಯಲ್ಲಿ ಭಾಗವಹಿಸಿದ್ದಾರೆ. ಈ ಮೂಲಕ ಭಾರತದಿಂದ ಸಿಪಿಎಲ್ ಟೂರ್ನಿಗೆ ಪಾದಾರ್ಪಣೆ ಮಾಡಿದ ಮೊದಲ ಭಾರತೀಯ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. ಪ್ರವೀಣ್ ತಾಂಬೆಯವರು ಐಪಿಎಲ್‍ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರವಾಗಿ ಆಡಲಿದ್ದಾರೆ.

    ಭಾರತದ ಮೊದಲ ಆಟಗಾರ ಸಿಪಿಎಲ್‍ನಲ್ಲಿ ಭಾಗವಹಿಸುತ್ತಿರುವ ಬಗ್ಗೆ ಟ್ವೀಟ್ ಮಾಡಿರುವ ಸಿಪಿಎಲ್ ಟೂರ್ನಿ ಆಡಳಿತ ಮಂಡಳಿ, ಸಿಪಿಎಲ್‍ಗೆ ನಿಮಗೆ ಸುಸ್ವಾಗತ ಭಾರತ. 48 ವರ್ಷದ ಪ್ರವೀಣ್ ತಾಂಬೆಯವರನ್ನು ಮೊದಲ ಬಾರಿಗೆ ಹೀರೋ ಸಿಪಿಎಲ್‍ನಲ್ಲಿ ನೋಡಲು ನಾವು ಸಂತೋಷಪಡುತ್ತೇವೆ ಎಂದು ಬರೆದುಕೊಂಡಿದೆ. ಸಿಪಿಎಲ್‍ನಲ್ಲಿ ತಾಂಬೆ ಟ್ರಿನ್‍ಬಾಗೊ ನೈಟ್ ರೈಡರ್ಸ್ ಪರವಾಗಿ ಆಡಲಿದ್ದಾರೆ.

    ಪ್ರವೀಣ್ ವಿಜಯ್ ತಾಂಬೆಯವರು ಭಾರತೀಯ ದೇಶೀಯ ಕ್ರಿಕೆಟಿಗರಾಗಿದ್ದು, ತಮ್ಮ 41ನೇ ವಯಸ್ಸಿನಲ್ಲಿ ಐಪಿಎಲ್‍ಗೆ ಪಾದಾರ್ಪಣೆ ಮಾಡಿದ್ದರು. 2013ರ ಮೇನಲ್ಲಿ ನಡೆದ ದೆಹಲಿ ಡೇರ್ ಡೆವಿಲ್ಸ್ ವಿರುದ್ಧ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಪರವಾಗಿ ಮೊದಲ ಪಂದ್ಯವನ್ನು ಆಡಿದ್ದರು. ಈ ಮೂಲಕ ಐಪಿಎಲ್ ಆಡಿದ ಅತ್ಯಂತ ಹಿರಿಯ ಆಟಗಾರ ಎನಿಸಿಕೊಂಡಿದ್ದರು. ಐಪಿಎಲ್‍ನಲ್ಲಿ 33 ಪಂದ್ಯಗಳನ್ನು ಆಡಿರುವ ತಂಬೆ 28 ವಿಕೆಟ್ ಗಬಳಿಸಿದ್ದಾರೆ. ಸದ್ಯ ನ್ಯೂ ಬಾಂಬೆಯ ಡಿವೈ ಪಾಟೀಲ್ ಸ್ಪೋಟ್ರ್ಸ್ ಅಕಾಡೆಮಿ ಬಿ ತಂಡದ ನಾಯಕರಾಗಿದ್ದಾರೆ.

  • ನಿಯಮ ಉಲ್ಲಂಘಿಸಿದ್ದಕ್ಕೆ ಬಿಸಿಸಿಐ ಕ್ಷಮೆ ಕೋರಿದ ದಿನೇಶ್ ಕಾರ್ತಿಕ್

    ನಿಯಮ ಉಲ್ಲಂಘಿಸಿದ್ದಕ್ಕೆ ಬಿಸಿಸಿಐ ಕ್ಷಮೆ ಕೋರಿದ ದಿನೇಶ್ ಕಾರ್ತಿಕ್

    ಮುಂಬೈ: ಕೇಂದ್ರ ಗುತ್ತಿಗೆ ನಿಯಮ ಉಲ್ಲಂಘನೆ ಮಾಡಿದ್ದಾರೆಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನೀಡಿದ್ದ ನೋಟಿಸ್‍ಗೆ ಟೀಂ ಇಂಡಿಯಾ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಉತ್ತರಿಸಿದ್ದು, ತಪ್ಪಿಗೆ ಕ್ಷಮೆಯಾಚಿಸಿದ್ದಾರೆ.

    ಇಂಡಿಯನ್ ಪ್ರೀಮಿಯರ್ ಲೀಗ್‍ನಲ್ಲಿ ದಿನೇಶ್ ಕಾರ್ತಿಕ್ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡದ ನಾಯಕರಾಗಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ವೆಸ್ಟ್ ಇಂಡೀಸ್‍ನಲ್ಲಿ ನಡೆಯುತ್ತಿರುವ ಕೆರಿಬಿಯನ್ ಪ್ರೀಮಿಯರ್ ಲೀಗ್‍ನಲ್ಲಿ ಕೆಕೆಆರ್ ಮಾಲೀಕತ್ವದ ಟ್ರಿನ್ಬಾಗೊ ನೈಟ್ ರೈಡರ್ಸ್ (ಟಿಕೆಆರ್) ತಂಡದ ಡ್ರೆಸಿಂಗ್ ರೂಮ್‍ನಲ್ಲಿ ದಿನೇಶ್ ಕಾರ್ತಿಕ್ ಕಾಣಿಸಿಕೊಂಡಿದ್ದರು. ಅಷ್ಟೇ ಅಲ್ಲದೆ ಅದೇ ಟಿಕೆಆರ್ ತಂಡದ ಜೆರ್ಸಿ ಧರಿಸಿದ್ದರು. ಇದನ್ನು ಗಮನಿಸಿದ್ದ ಬಿಸಿಸಿಐ ಕೇಂದ್ರ ಗುತ್ತಿಗೆ ನಿಯಮ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಶೋಕಾಸ್ ನೋಟಿಸ್ ನೀಡಿತ್ತು. ಜೊತೆಗೆ ಒಂದು ವಾರದೊಳಗೆ ಉತ್ತರ ನೀಡಬೇಕೆಂದು ಸೂಚನೆ ನೀಡಿತ್ತು.

    ನೋಟಿಸ್‍ಗೆ ಪ್ರತಿಕ್ರಿಯೆ ನೀಡಿರುವ ದಿನೇಶ್ ಕಾರ್ತಿಕ್ ತಮ್ಮಿಂದಾದ ತಪ್ಪಿಗೆ ನಾಲ್ಕು ಕಾರಣಗಳನ್ನು ನೀಡಿ ಬಿಸಿಸಿಐ ಕ್ಷಮೆಯಾಚಿಸಿದ್ದಾರೆ. ಟಿಕೆಆರ್ ನ ಕೋಚ್ ಬ್ರೆಂಡನ್ ಮೆಕಲಮ್ ಮನವಿ ಮೇರೆಗೆ ಪಂದ್ಯ ವೀಕ್ಷಿಸಲು ತೆರಳಿದ್ದೆ. ಜೊತೆಗೆ ಅವರು ಕೆಕೆಆರ್‍ನ ನೂತನ ಕೋಚ್ ನ್ಯೂಜಿಲೆಂಡ್ ಮಾಜಿ ನಾಯಕ ಹೇಳಿದ್ದರಿಂದ ಟಿಕೆಆರ್ ಜೆರ್ಸಿ ಧರಿಸಿದ್ದೆ ಎಂದು ಸ್ಪಷ್ಟಪಡಿಸಿದ್ದಾರೆ.

    ಬಿಸಿಸಿಐ ಅನುಮತಿ ಪಡೆಯದೇ ಕೆರಿಬಿಯನ್ ಪ್ರೀಮಿಯರ್ ಲೀಗ್‍ನಲ್ಲಿ ಕಾಣಿಸಿಕೊಂಡಿದ್ದಕ್ಕೆ ಬೇಶರತ್ ಕ್ಷಮೆಯಾಚಿಸುತ್ತೇನೆ. ನಾನು ಟಿಕೆಆರ್ ತಂಡದ ಯಾವುದೇ ಚಟುವಟಿಕೆಗಳಲ್ಲಿ ಪಾಲ್ಗೊಂಡಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತನೆ. ಅಷ್ಟೇ ಅಲ್ಲದೆ ಟಿಕೆಆರ್ ತಂಡದ ಉಳಿದ ಯಾವುದೇ ಪಂದ್ಯಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ದಿನೇಶ್ ಕಾರ್ತಿಕ್, ಕ್ಷಮಾಪಣ ಪತ್ರದಲ್ಲಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.