Tag: CPC

  • ಲಂಕಾದಲ್ಲಿ ತೀವ್ರ ಬಿಕ್ಕಟ್ಟು – ಲೀಟರ್ ಪೆಟ್ರೋಲ್ 550, ಡೀಸೆಲ್ ಬೆಲೆ 460 ರೂ.ಗೆ ಏರಿಕೆ

    ಲಂಕಾದಲ್ಲಿ ತೀವ್ರ ಬಿಕ್ಕಟ್ಟು – ಲೀಟರ್ ಪೆಟ್ರೋಲ್ 550, ಡೀಸೆಲ್ ಬೆಲೆ 460 ರೂ.ಗೆ ಏರಿಕೆ

    ಕೊಲಂಬೊ: ಶ್ರೀಲಂಕಾದಲ್ಲಿ ಆರ್ಥಿಕ ಪರಿಸ್ಥಿತಿ ಕೈ ಮೀರುತ್ತಿದ್ದು ಎಲ್ಲ ಅಗತ್ಯ ವಸ್ತುಗಳ ಬೆಲೆ ಗಗನಮುಖಿಯಾಗುತ್ತಿವೆ. ಇಂಧನ ಬೆಲೆಯಂತೂ ರಾಕೆಟ್ ವೇಗದಲ್ಲಿ ಹೆಚ್ಚಾಗುತ್ತಿದೆ. ಕಳೆದ ಎರಡು ವಾರಗಳಲ್ಲಿ ಲಂಕಾ ಸರ್ಕಾರ ಮೂರು ಬಾರಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿದೆ.

    ಇದೀಗ ಮತ್ತೆ ಪೆಟ್ರೋಲ್ ಬೆಲೆ ಶೇ.22 ರಷ್ಟು ಹಾಗೂ ಡೀಸೆಲ್ ಬೆಲೆ ಶೇ.15ರಷ್ಟು ಏರಿಸಿದ್ದು, ಪ್ರತಿ ಲೀಟರ್ ಡೀಸೆಲ್ ಬೆಲೆ 460 ರೂ. ಹಾಗೂ ಪೆಟ್ರೋಲ್ ಬೆಲೆ 550 ರೂ.ಗೆ ತಲುಪಿದೆ. ಇದನ್ನೂ ಓದಿ: ನಾನೂ ಸೈನಿಕನಂತೆ ಹೋರಾಡಿದ್ದೆ – ಮನ್ ಕಿ ಬಾತ್‌ನಲ್ಲಿ 1975ರ ತುರ್ತು ಪರಿಸ್ಥಿತಿ ನೆನಪಿಸಿಕೊಂಡ ಮೋದಿ

    ಇಂದು ಮಧ್ಯಾಹ್ನ 2 ಗಂಟೆಯಿಂದಲೇ ಶ್ರೀಲಂಕಾದಲ್ಲಿ ಇಂಧನ ಬೆಲೆ ಏರಿಕೆಯಾಗಿದೆ ಎಂದು ಸಾರ್ವಜನಿಕ ವಲಯದ ಕಂಪನಿ ಸಿಲೋನ್ ಪೆಟ್ರೋಲಿಯಂ ಕಾರ್ಪೊರೇಷನ್ ತಿಳಿಸಿದೆ. ಲಂಕಾದ ಐಒಸಿ ಸಹ ಅದೇ ಪ್ರಮಾಣದಲ್ಲಿ ಬೆಲೆಯನ್ನು ಹೆಚ್ಚಿಸಿದೆ. ಇದನ್ನೂ ಓದಿ: ನೈಟ್‍ಕ್ಲಬ್‍ನಲ್ಲಿ 20 ಯುವಕರ ನಿಗೂಢ ಸಾವು

    ಕಳೆದ ವಾರ ಬರಬೇಕಿದ್ದ ತೈಲವು ಲಂಕಾವನ್ನು ತಲುಪಿಲ್ಲ. ಅಲ್ಲದೆ ಮುಂದಿನ ವಾರ ನಿಗದಿಪಡಿಸಿದ ಸರಕಗಳೂ ಸಹ ಬರುವುದಿಲ್ಲ ಈ ರೀತಿಯ ಬ್ಯಾಂಕಿಂಗ್ ಕಾರಣಗಳಿಂದಾಗಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿದೆ ಎಂದು ಲಂಕಾದ ಇಂಧನ ಸಚಿವರಾದ ಕಾಂಚನಾ ವಿಜೆಶೇಖರ ಹೇಳಿದ್ದಾರೆ.

    sri lanka diesel

    ವಿದೇಶಿ ವಿನಿಮಯ ಮಿತಿ ಕಡಿತ: ವಿದೇಶಿ ವಿನಿಮಯದ ತೀವ್ರ ಬಿಕ್ಕಟ್ಟನ್ನು ಎದುರಿಸುತ್ತಿರುವ ಶ್ರೀಲಂಕಾದಲ್ಲಿ, ಒಬ್ಬ ವ್ಯಕ್ತಿಯು ವೈಯಕ್ತಿಕವಾಗಿ ಇಡಬಹುದಾದ ವಿದೇಶಿ ವಿನಿಮಯದ ಮಿತಿಯನ್ನು ಕಡಿತಗೊಳಿಸಲಾಗಿದೆ. ಇದನ್ನೂ ಓದಿ: ಮಂಕಿಪಾಕ್ಸ್ ಜಾಗತಿಕ ಆರೋಗ್ಯ ತುರ್ತುಪರಿಸ್ಥಿತಿಯಲ್ಲ, ಆದರೆ ಹರಡುವ ಭೀತಿಯಿದೆ: WHO

    ಯುಸ್‌ನೊಂದಿಗೆ ಮಾತುಕತೆ: ಲಂಕಾದ ಆರ್ಥಿಕ ಬಿಕ್ಕಟ್ಟು ಪರಿಹರಿಸುವ ಸಲುವಾಗಿ ಅಗತ್ಯ ಶ್ರೀಲಂಕನ್ನರನ್ನು ಬೆಂಬಲಿಸಲು ಅಮೆರಿಕಾ ಅತ್ಯಂತ ಪರಿಣಾಮಕಾರಿ ಮಾರ್ಗಗಳನ್ನು ಅನ್ವೇಶಿಸಲು ಮಾತುಕತೆಗೆ ಕರೆದಿದೆ.

    ಅಮೆರಿಕವು ಕಳೆದ ಎರಡು ವಾರಗಳಲ್ಲಿ ಶ್ರೀಲಂಕಾಗೆ 158.75 ಮಿಲಿಯನ್ ಡಾಲರ್‌ಗಳಷ್ಟು ಹಣಕಾಸು ಒದಗಿಸಿದೆ. ದುರ್ಬಲ ವರ್ಗದವರ ಆಹಾರಕ್ಕಾಗಿ 47 ಮಿಲಿಯನ್ ಡಾಲರ್‌ಗಳನ್ನು ಸಂಗ್ರಹಿಸಲು ಈಗಾಗಲೇ ತುರ್ತು ಮನವಿಯನ್ನು ನೀಡಿದೆ ಎಂದು ರಾಯಭಾರಿ ಹೇಳಿದ್ದಾರೆ.

    Live Tv

  • ನಾನು ರಾಜಕೀಯ ಸೇರುತ್ತೇನೆ – ಆಕ್ಷನ್ ಹೀರೋ ಜಾಕಿ ಚಾನ್

    ನಾನು ರಾಜಕೀಯ ಸೇರುತ್ತೇನೆ – ಆಕ್ಷನ್ ಹೀರೋ ಜಾಕಿ ಚಾನ್

    ಬೀಜಿಂಗ್: ಹಾಲಿವುಡ್ ಖ್ಯಾತ ಆಕ್ಷನ್ ನಟ ಹಾಂಕಾಂಗ್ ಮೂಲದ ಜಾಕಿ ಚಾನ್ ರಾಜಕೀಯ ಸೇರುವುದಾಗಿ ಅಧಿಕೃತವಾಗಿ ತಿಳಿಸಿದ್ದಾರೆ.

    ಕಳೆದ ವಾರ ನಡೆದ ವಿಚಾರ ಸಂಕೀರಣದಲ್ಲಿ ಮಾತನಾಡಿದ ಅವರು, ಆಡಳಿತರೂಢ ಕಮ್ಯೂನಿಸ್ಟ್ ಪಾರ್ಟಿ ಆಫ್ ಚೀನಾ(ಸಿಪಿಸಿ)ಗೆ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ.

    ಜುಲೈ 1 ರಂದು ಪಕ್ಷದ ಶತಮಾನೋತ್ಸವ ಸಮಾರಂಭದಲ್ಲಿ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಅವರು ಮಾಡಿದ ಪ್ರಧಾನ ಭಾಷಣದ ಕುರಿತು ಅಭಿಪ್ರಾಯ ಹಂಚಿಕೊಳ್ಳುವ ಸಂದರ್ಭದಲ್ಲಿ ರಾಜಕೀಯ ಸೇರುವ ಬಗ್ಗೆ ಜಾಕಿ ಚಾನ್ ಮಾತನಾಡಿದರು. ಇದನ್ನೂ ಓದಿ : ರಾಜಕೀಯಕ್ಕೆ ನಾನು ಬರಲ್ಲ – ಸಂಘವನ್ನು ವಿಸರ್ಜಿಸಿದ ರಜನಿಕಾಂತ್

    ಚೀನಾ ಫಿಲ್ಮ್ ಅಸೋಸಿಯೇಷನ್‍ನ ಉಪಾಧ್ಯಕ್ಷರೂ ಆಗಿರುವ ಜಾಕಿ ಚಾನ್, ಸಿಪಿಸಿಯ ಹಿರಿಮೆಯನ್ನು ನಾನು ನೋಡಬಲ್ಲೆ. ಪಕ್ಷ ಹೇಳಿದ್ದನ್ನು ಮಾಡಿ ತೋರಿಸಿದೆ. 100 ವರ್ಷಗಳಿಗಿಂತಲೂ ಕಡಿಮೆ ಅವಧಿಯಲ್ಲಿ ತಾನು ನೀಡಿದ ಭರವಸೆಯನ್ನು ಕೆಲವೇ ದಶಕಗಳಲ್ಲಿ ಈಡೇರಿಸಿದೆ. ಹೀಗಾಗಿ ನಾನು ಸಿಪಿಸಿ ಸದಸ್ಯನಾಗಬೇಕೆಂಬ ಆಸೆಯಿದೆ ಎಂದು ಹೇಳಿದರು.

    2019ರಲ್ಲಿ ಮಾತನಾಡಿದ್ದ ಜಾಕಿ ಚಾನ್, ನಾನು ಅನೇಕ ದೇಶಗಳಿಗೆ ಭೇಟಿ ನೀಡಿದ್ದೇನೆ. ಇತ್ತೀಚಿನ ವರ್ಷಗಳಲ್ಲಿ ನಮ್ಮ ದೇಶವು ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ ಎಂದು ನಾನು ಹೇಳಬಲ್ಲೆ. ನಾನು ಹೋದ ಕಡೆ ಎಲ್ಲ ನಾನು ಚೈನೀಸ್ ಎಂದು ಹೇಳಲು ಹೆಮ್ಮೆ ಆಗುತ್ತಿದೆ. ಐದು ನಕ್ಷತ್ರಗಳ ಕೆಂಪು ಧ್ವಜವನ್ನು ಜಗತ್ತಿನ ಎಲ್ಲೆಡೆ ಗೌರವಿಸಲಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

    ಹಾಂಕಾಂಗ್ ಹೋರಾಟವನ್ನು ವಿರೋಧಿಸಿ ಈ ಹಿಂದೆ ಜಾಕಿ ಚಾನ್ ಮಾತನಾಡಿದ್ದರು. ಈ ಹೇಳಿಕೆಗೆ ಭಾರೀ ಟೀಕೆ ವ್ಯಕ್ತವಾಗಿತ್ತು. ಹಾಂಕಾಂಗ್ ಮತ್ತು ಚೀನಾ ನನ್ನ ಜನ್ಮಸ್ಥಳ ಮತ್ತು ನನ್ನ ಮನೆ ಇದ್ದಂತೆ. ಚೀನಾ ನನ್ನ ದೇಶ, ನಾನು ನನ್ನ ದೇಶವನ್ನು ಪ್ರೀತಿಸುತ್ತೇನೆ. ನನ್ನ ಮನೆಯನ್ನು ಪ್ರೀತಿಸುತ್ತೇನೆ. ಹಾಂಕಾಂಗ್‍ನಲ್ಲಿ ಶೀಘ್ರ ಶಾಂತಿ ನೆಲಸಬಹುದು ಎಂದು ಭಾವಿಸುತ್ತೇನೆ ಎಂದು ಎಂದು ಹೇಳಿದರು.

  • ಸುನಂದಾ ನಿಗೂಢ ಸಾವು: ತರೂರ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ

    ಸುನಂದಾ ನಿಗೂಢ ಸಾವು: ತರೂರ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ

    ನವದೆಹಲಿ: ಸುನಂದಾ ಪುಷ್ಕರ್ ನಿಗೂಢ ಸಾವಿನ ಪ್ರಕರಣದ ತನಿಖೆ ನಡೆಸಿದ ದೆಹಲಿಯ ವಿಶೇಷ ತನಿಖಾ ತಂಡದ ಪೊಲೀಸರು ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ಸಂಸದ ಶಶಿ ತರೂರ್ ವಿರುದ್ಧ ಚಾರ್ಜ್‍ಶೀಟ್ ಸಲ್ಲಿಸಿದ್ದಾರೆ.

    ಭಾರತೀಯ ದಂಡ ಸಂಹಿತೆಯ ಸೆಕ್ಷನ್ 306(ಆತ್ಮಹತ್ಯೆಗೆ ಕುಮ್ಮಕ್ಕು) ಸೆಕ್ಷನ್ 498 ಎ(ಮಹಿಳೆಯನ್ನು ಗಾಯಗೊಳಿಸುವುದು/ ಅಥವಾ ಪ್ರಾಣಾಪಾಯ ತಂದೊಡ್ಡುವುದು, ಅಥವಾ ಆತ್ಮಹತ್ಯೆಗೆ ಪ್ರಚೋದಿಸುವುದು) ಅಡಿಯಲ್ಲಿ ಪೊಲೀಸರು ಆರೋಪ ಪಟ್ಟಿಯನ್ನು ಸಲ್ಲಿಸಿದ್ದಾರೆ.

    ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಧರ್ಮೇಂದ್ರ ಸಿಂಗ್ ಮುಂದೆ ಸುಮಾರು 3000 ಪುಟಗಳ ಚಾರ್ಜ್‍ಶೀಟ್ ಸಲ್ಲಿಕೆಯಾಗಿದ್ದು, ಮೇ 24 ರಂದು ವಿಚಾರಣೆಗೆ ಬರಲಿದೆ.

    ಚಾರ್ಜ್‍ಶೀಟ್ ಸಲ್ಲಿಕೆಯಾದ ಬಳಿಕ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿರುವ ಶಶಿ ತರೂರ್, ತನಿಖಾ ವರದಿ ಅಸಮಂಜಸವಾಗಿದೆ. ಪುಷ್ಕರ್ ಅವರನ್ನು ಹತ್ತಿರದಿಂದ ಬಲ್ಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರೆ ನಂಬುವುದಿಲ್ಲ. 4 ವರ್ಷ ತನಿಖೆಯ ನಂತರ ದೆಹಲಿ ಪೊಲೀಸರು ಆತ್ಮಹತ್ಯೆ ಪ್ರಚೋದನೆಯ ಆರೋಪವನ್ನು ನನ್ನ ಮೇಲೆ ಹೊರಿಸಿದ್ದಾರೆ. ಇದು ಉದ್ದೇಶ ಪೂರಿತವಾಗಿದೆ. ಈ ಪ್ರಕರಣದಲ್ಲಿ ಯಾರ ವಿರುದ್ಧವು ಸಾಕ್ಷಿ ದೊರೆತಿಲ್ಲವೆಂದು 2017ರ ಅಕ್ಟೋಬರ್‍ನಲ್ಲಿ ಕಾನೂನು ಅಧಿಕಾರಿಗಳು ಹೈಕೋರ್ಟ್ ಗೆ ಹೇಳಿಕೆ ನೀಡಿದ್ದರು. ಆದರೆ ಆರು ತಿಂಗಳಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದೇನೆ ಎಂದು ಹೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಏನಿದು ಪ್ರಕರಣ ಏನು?
    ತಿರುವನಂತಪುರದ ಕಾಂಗ್ರೆಸ್ ಸಂಸದ ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್ 2014ರ ಜನವರಿಯಲ್ಲಿ ನಗರದ ಲೀಲಾ ಪ್ಯಾಲೆಸ್ ಹೋಟೆಲ್ ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದರು. ಮೊದಲಿಗೆ ಆತ್ಮಹತ್ಯೆ ಎಂದು ಪೊಲೀಸರು ಶಂಕಿಸಿದ್ದರು. ನಂತರ ನಿಗೂಢವಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿಯಲಾಯಿತು. ಏಮ್ಸ್ ಆಸ್ಪತ್ರೆಯಲ್ಲಿ ನಡೆದ ಮರಣೋತ್ತರ ಪರೀಕ್ಷೆಯಲ್ಲಿ ಸುನಂದಾ ದೇಹದಲ್ಲಿ ಗಾಯವಾಗಿರುವ ವಿಚಾರ ಬೆಳಕಿಗೆ ಬಂದಿತ್ತು. ಅತಿ ಹೆಚ್ಚು ಮಾತ್ರೆಗಳನ್ನು ಸೇವಿಸಿದ ಪರಿಣಾಮ ಸುನಂದಾ ಮೃತಪಟ್ಟಿದ್ದಾರೆ ಎಂದು ಮರಣೋತ್ತರ ಪರೀಕ್ಷೆಯ ವರದಿ ಹೇಳಿತ್ತು. 2014ರ ಜುಲೈನಲ್ಲಿ ಏಮ್ಸ್ ವೈದ್ಯ ಸುದೀರ್ ಗುಪ್ತಾ ಸುಳ್ಳು ವರದಿ ನೀಡುವಂತೆ ನಮ್ಮ ಮೇಲೆ ಒತ್ತಡ ಇತ್ತು ಹೇಳಿಕೆ ನೀಡಿದ್ದರು. 2014ರ ಅಕ್ಟೋಬರ್ 10ರಂದು ಸುನಂದಾ ಅವರನ್ನು ವಿಷಪ್ರಾಶಣ ಮಾಡಿ ಹತ್ಯೆ ಮಾಡಲಾಗಿದೆ ಎಂದು ಈ ಪ್ರಕರಣವನ್ನು ತನಿಖೆ ನಡೆಸಿದ ವೈದ್ಯಕೀಯ ತಂಡ ವರದಿ ನೀಡಿತ್ತು. 2015ರ ಜನವರಿಯಲ್ಲಿ ದೆಹಲಿ ಪೊಲೀಸರು ತರೂರ್ ವಿರುದ್ಧ ಎಫ್‍ಐಆರ್ ದಾಖಲಿಸಿದ್ದರು.

    ತರೂರ್ ನಿವಾಸದಲ್ಲಿದ್ದ ಮನೆ ಕೆಲಸ ಮಾಡುತ್ತಿದ್ದ ನರೈನ್ ಪೊಲೀಸ್ ವಿಚಾರಣೆ ವೇಳೆ ಸುನಂದಾ ಜೊತೆ ತರೂರ್ ನಿತ್ಯ ಗಲಾಟೆ ಮಾಡುತ್ತಿದ್ದರು. ಸುನಂದಾ ಮೃತಪಡುವ ಎರಡೂ ದಿನದ ಮೊದಲು ಇಬ್ಬರ ನಡುವೆ ಜಗಳ ನಡೆದಿತ್ತು. ಈ ವೇಳೆ ನಾನು ನಿಮ್ಮ ಎಲ್ಲ ವಿಚಾರಗಳನ್ನು ಮಾಧ್ಯಮಗಳಿಗೆ ತಿಳಿಸಿದರೆ ನಿಮ್ಮ ಜೀವನ ಅಂತ್ಯವಾಗುತ್ತದೆ ಎಂದು ಸುನಂದಾ ಪುಷ್ಕರ್ ಹೇಳಿದ್ದರು ಎಂದು ತಿಳಿಸಿದ್ದ. ಈ ಪ್ರಕರಣದಲ್ಲಿ ಬಿಜೆಪಿ ಮುಖಂಡ, ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರು ಪ್ರತಿವಾದಿಯಾಗಿದ್ದಾರೆ.