Tag: CP Yogeshwara

  • ಸಿಪಿವೈ ಬಾವ ನಾಪತ್ತೆ ಪ್ರಕರಣ – ಕಾರು ಪತ್ತೆ, ಕಿಡ್ನ್ಯಾಪ್ ಶಂಕೆಗೆ ಪುಷ್ಠಿ ನೀಡಿದ ರಕ್ತದ ಕಲೆ!

    ಸಿಪಿವೈ ಬಾವ ನಾಪತ್ತೆ ಪ್ರಕರಣ – ಕಾರು ಪತ್ತೆ, ಕಿಡ್ನ್ಯಾಪ್ ಶಂಕೆಗೆ ಪುಷ್ಠಿ ನೀಡಿದ ರಕ್ತದ ಕಲೆ!

    ರಾಮನಗರ: ಕಳೆದ ಕೆಲ ದಿನಗಳಿಂದ ನಾಪತ್ತೆಯಾಗಿರುವ (Missing) ಮಾಜಿ ಸಚಿವ ಸಿಪಿ ಯೋಗೇಶ್ವರ್ (CP Yogeshwara) ಅವರ ಬಾವ ಮಹದೇವಯ್ಯ (Mahadevaiah) ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಅವರ ಕಾರು (Car) ರಾಮಾಪುರದಲ್ಲಿ ಪತ್ತೆಯಾಗಿದೆ. ಕಾರಿನ ಹಿಂಭಾಗದಲ್ಲಿ ರಕ್ತದ ಮಾದರಿಯ ಕಲೆ ಕಾಣಿಸಿಕೊಂಡಿದ್ದು, ಮಹದೇವಯ್ಯ ಕಿಡ್ನ್ಯಾಪ್ ಮಾಡಿರುವ ಶಂಕೆಗೆ ಇನ್ನಷ್ಟು ಪುಷ್ಠಿ ದೊರೆತಿದೆ.

    ಡಿಸೆಂಬರ್ 1 ಶುಕ್ರವಾರ ತಡರಾತ್ರಿಯಿಂದ ಮಹದೇವಯ್ಯ ನಾಪತ್ತೆಯಾಗಿದ್ದಾರೆ. ಅವರ ಬ್ರೀಜ್ಜಾ ಕಾರು ಕೂಡಾ ಅಂದು ನಾಪತ್ತೆ ಆಗಿತ್ತು. ಇದೀಗ ಕಾರು ಪತ್ತೆಯಾಗಿದ್ದು, ಮಹದೇವಯ್ಯ ಸುಳಿವು ಮಾತ್ರ ದೊರೆತಿಲ್ಲ. ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ಮಹದೇವಯ್ಯ ಕೋರ್ಟ್‌ನಲ್ಲಿ ಹಲವು ಜಮೀನು ವ್ಯಾಜ್ಯ ನಡೆಸುತ್ತಿದ್ದರು. ಮಹದೇವಯ್ಯ ನಾಪತ್ತೆ ಹಿಂದೆ ಹಲವು ಅನುಮಾನ ಹುಟ್ಟಿಕೊಂಡಿದೆ. ಜಮೀನಿನ ವಿಚಾರಕ್ಕೆ ಮಹದೇವಯ್ಯ ಕಿಡ್ನಾಪ್ ಆಗಿರುವ ಶಂಕೆಯಿದೆ.

    ಇದೀಗ ರಾಮಾಪುರದಲ್ಲಿ ಪತ್ತೆಯಾಗಿರುವ ಕಾರನ್ನು ಫಾರೆನ್ಸಿಕ್ ಟೀಂ ಪರಿಶೀಲನೆ ನಡೆಸಿದೆ. ರಾಮನಗರದ ಪೊಲೀಸ್ ತನಿಖಾ ಟೀಂನಿಂದಲೂ ಕಾರಿನ ಪರಿಶೀಲನೆ ನಡೆದಿದೆ. ಸದ್ಯ ರಾಮಾಪುರ ಪೊಲೀಸ್ ಠಾಣೆಯಲ್ಲಿ ಕಾರನ್ನು ಇರಿಸಲಾಗಿದೆ. ತನಿಖಾ ತಂಡ ನಿನ್ನೆ ತಡರಾತ್ರಿ ಭೇಟಿ ಕೊಟ್ಟು ಪರಿಶೀಲನೆ ನಡೆಸಿದೆ. ಇದನ್ನೂ ಓದಿ: Mizoram Election Results: ZPMಗೆ ಮುನ್ನಡೆ – ಮಿಜೋರಾಂನಲ್ಲೂ ಕಾಂಗ್ರೆಸ್‌ಗೆ ಹಿನ್ನಡೆ

    ಕಾರು ಹನೂರು ತಾಲೂಕಿನ ರಾಮಾಪುರಕ್ಕೆ ಬಂದಿದ್ದು ಹೇಗೆ ಎನ್ನುವ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ. ಕಾರು ಬಂದಿರುವ ಮಾರ್ಗದ ಬಗ್ಗೆ ಸಿಸಿಟಿವಿ ಪರಿಶೀಲನೆ ನಡೆಸುತ್ತಿದ್ದಾರೆ. ಕಾರಿನ ಹಿಂಭಾಗದಲ್ಲಿ ರಕ್ತದ ಮಾದರಿ ಗುರುತು ಪತ್ತೆಯಾಗಿದ್ದು, ಕಾರನ್ನು ನಿಲ್ಲಿಸುವಾಗ ಕಂಪ್ಲೀಟ್ ಲಾಕ್ ಮಾಡಿ ನಿಲ್ಲಿಸಿದ್ದಾರೆ.

    ಮಹದೇವಯ್ಯ ಅನುಮಾನಾಸ್ಪದ ನಾಪತ್ತೆ ಪ್ರಕರಣ ಪೊಲೀಸರಿಗೆ ತಲೆನೋವೆನಿಸಿಕೊಂಡಿದೆ. 4 ವಿಶೇಷ ತಂಡಗಳಿಂದ ಮಹದೇವಯ್ಯಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ. ಮೊನ್ನೆ ಅನಾಮಿಕ ವ್ಯಕ್ತಿಯಿಂದ ಮಹದೇವಯ್ಯ ಫೋನ್ ರಿಸೀವ್ ಆಗಿತ್ತು. ಇದೀಗ ಅವರ ಫೋನ್ ಕಂಪ್ಲೀಟ್ ಸ್ವಿಚ್ ಆಫ್ ಆಗಿದೆ. ಇದನ್ನೂ ಓದಿ: ಪೊಲೀಸರ ಸರ್ಪಗಾವಲಿನಲ್ಲಿ ಬೆಳಗಾವಿ ಅಧಿವೇಶನ – ಭದ್ರತೆಗೆ 5,000 ಸಿಬ್ಬಂದಿ ನಿಯೋಜನೆ

  • ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ? – ಸಿಪಿವೈ ಸುಳಿವು

    ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ? – ಸಿಪಿವೈ ಸುಳಿವು

    ರಾಮನಗರ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ (Lok Sabha Election) ಬಿಜೆಪಿ (BJP) ಜೊತೆ ಜೆಡಿಎಸ್ (JDS) ಮೈತ್ರಿ ವಿಚಾರ ಕುರಿತು ಮಾಜಿ ಸಚಿವ ಸಿಪಿ ಯೋಗೇಶ್ವರ್ (CP Yogeshwara) ಅಚ್ಚರಿಯ ಹೇಳಿಕೆ ನೀಡಿದ್ದಾರೆ.

    ಈ ಕುರಿತು ರಾಮನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಸಂಸದರನ್ನು ಗೆಲ್ಲಿಸಬೇಕು ಎಂಬ ಲೆಕ್ಕಾಚಾರ ಹಾಕಿಕೊಂಡಿದ್ದೇವೆ. ಆದರೆ ಅಭ್ಯರ್ಥಿ ಆಯ್ಕೆ ವಿಚಾರ ಹೈಕಮಾಂಡ್‌ಗೆ ಬಿಟ್ಟಿದ್ದು. ಒಂದು ವೇಳೆ ಹೈಕಮಾಂಡ್ ಸ್ಪರ್ಧೆ ಮಾಡು ಎಂದರೆ ಮಾಡ್ತೀನಿ ಎಂದು ಯೋಗೇಶ್ವರ್ ತಿಳಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಶಾಸಕನ ಅಪ್ಪಿ ಗೆಲುವಿಗೆ ಶುಭಹಾರೈಸಿದ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ – ಗೌಪ್ಯ ಸಭೆ!

    ಒಂದಷ್ಟು ರಾಜಕೀಯ ಬದಲಾವಣೆ ಆಗಬೇಕು. ಮುಂದೆ ಒಂದಷ್ಟು ಬದಲಾವಣೆ ಜೊತೆಗೆ ಚುನಾವಣೆ ಎದುರಿಸುತ್ತೇವೆ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಬಿಜೆಪಿ ಮೈತ್ರಿ ಆಗಬಹುದು. ಇತ್ತೀಚಿನ ರಾಜಕೀಯ ಚರ್ಚೆ ಹಾಗೂ ಮಾಧ್ಯಮಗಳಲ್ಲಿ ಈ ಬಗ್ಗೆ ಚರ್ಚೆ ಆಗ್ತಿದೆ. ಹೀಗಾಗಿ ಮೈತ್ರಿ ಆಗಬಹುದು ಎಂದುಕೊಂಡಿದ್ದೇನೆ. ಈ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದು ಸಿಪಿ ಯೋಗೇಶ್ವರ್ ತಿಳಿಸಿದ್ದಾರೆ. ಇದನ್ನೂ ಓದಿ: ಅನ್ನಭಾಗ್ಯ ಯೋಜನೆಗಿಲ್ಲ ಕೇಂದ್ರದ ಅಕ್ಕಿ – ಆಶಾಭಾವನೆಯಿಂದ ಬಂದ ನಮಗೆ ಎರಡನೇ ಬಾರಿ ನಿರಾಸೆ: ಮುನಿಯಪ್ಪ

  • ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಂಡಿರುವುದು ಸತ್ಯ, ಈಗ ಮಾತಾಡಿದರೆ ಬೆಂಕಿ ಹಚ್ಚಿದಂತೆ: ಸಿ.ಪಿ ಯೋಗೇಶ್ವರ್

    ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಂಡಿರುವುದು ಸತ್ಯ, ಈಗ ಮಾತಾಡಿದರೆ ಬೆಂಕಿ ಹಚ್ಚಿದಂತೆ: ಸಿ.ಪಿ ಯೋಗೇಶ್ವರ್

    ನವದೆಹಲಿ: ರಾಜ್ಯ ವಿಧಾನಸಭೆ ಚುನಾವಣೆ ವೇಳೆ ಕೆಲವು ಕ್ಷೇತ್ರಗಳಲ್ಲಿ ನಮ್ಮ ಹಿರಿಯ ನಾಯಕರು ಹೊಂದಾಣಿಕೆ ಮಾಡಿಕೊಂಡಿರುವುದು ನಿಜ. ಇದರ ಅನುಭವ ನನಗೂ ಆಗಿದೆ. ಇದನ್ನು ಈಗ ಮಾತನಾಡಿದರೆ ನಾವು ಬೆಂಕಿ ಹಚ್ಚಿದಂತೆ ಆಗುತ್ತದೆ ಎಂದು ಮಾಜಿ ಸಚಿವ ಸಿ.ಪಿ ಯೋಗೇಶ್ವರ್ (CP Yogeshwara) ಹೇಳಿದ್ದಾರೆ.

    ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ.ಟಿ ರವಿ, ಸಂಸದ ಪ್ರತಾಪ್ ಸಿಂಹ ಬಳಿಕ ಹೊಂದಾಣಿಕೆ ರಾಜಕೀಯ ವಿರುದ್ಧ ಹರಿಹಾಯ್ದಿದ್ದಾರೆ. ನಮ್ಮ ಸರ್ಕಾರದ ಆಡಳಿತ ವ್ಯವಸ್ಥೆ ಸರಿಯಾಗಿರಲಿಲ್ಲ. ಮಂತ್ರಿಮಂಡಲ ವಿಸ್ತರಣೆ ಮಾಡಲಿಲ್ಲ, ಸಚಿವ ಸ್ಥಾನಗಳನ್ನು ಖಾಲಿ ಬಿಡಲಾಯಿತು ಆಂತರಿಕ ಬೇಗುದಿ ಇದರಿಂದ ಸೃಷ್ಟಿಯಾಯಿತು. ಅಭ್ಯರ್ಥಿಗಳ ಆಯ್ಕೆಯಲ್ಲೂ ಕೆಲವು ಕ್ಷೇತ್ರಗಳಲ್ಲಿ ಹೊಂದಾಣಿಕೆಯಾಗಿದೆ. ಇದರ ಜೊತೆಗೆ ಕಾಂಗ್ರೆಸ್‍ನ್ನು ಕಟ್ಟಿ ಹಾಕುವ ಪ್ರಯತ್ನ ನಡೆಯಲಿಲ್ಲ. ಇದು ಬಿಜೆಪಿ ಸೋಲಿಗೆ ಕಾರಣವಾಗಿದೆ. ಈ ಚರ್ಚೆ ಈಗ ಅನಗತ್ಯ, ಮುಂದಿನ ಚುನಾವಣೆ ಬಗ್ಗೆ ಯೋಚನೆ ಮಾಡಬೇಕು ಎಂದಿದ್ದಾರೆ. ಇದನ್ನೂ ಓದಿ: ಆಧುನಿಕ ಆರೋಗ್ಯ ಸಮಸ್ಯೆಗಳಿಗೆ ಯೋಗ ಮದ್ದು: ದಿನೇಶ್ ಗುಂಡೂರಾವ್

    ಬೆಂಗಳೂರು (Bengaluru) ಗ್ರಾಮಾಂತರ ಕ್ಷೇತ್ರಕ್ಕೆ ಅಭ್ಯರ್ಥಿಯಾಗುವ ಬಗ್ಗೆ ಮಾತನಾಡಿದ ಅವರು, ಲೋಕಸಭೆಗೆ ಸ್ಪರ್ಧೆ ಮಾಡಬೇಕು ಎನ್ನುವ ಯೋಚನೆ ಇದೆ. ಆದರೆ ಇನ್ನೂ ಅಂತಿಮವಾಗಿಲ್ಲ. ಅಂತಿಮವಾಗಿ ಪಕ್ಷ ತಿರ್ಮಾನ ಮಾಡಲಿದೆ. ನಾನು ದೆಹಲಿಯಲ್ಲಿ ಕೆಲವು ಪ್ರಮುಖ ನಾಯಕರನ್ನು ಭೇಟಿ ಮಾಡಿದ್ದೇನೆ ಈ ಬಗ್ಗೆಯೂ ಚರ್ಚೆ ಮಾಡಿದ್ದೇನೆ ಎಂದಿದ್ದಾರೆ.

    ಡಿ.ಕೆ ಸುರೇಶ್ ಚುನಾವಣಾ ರಾಜಕೀಯದ ಬಗ್ಗೆ ಯಾಕೆ ವೈರಾಗ್ಯದ ಮಾತುಗಳನ್ನು ಆಡಿದ್ದಾರೆ ಎಂಬುದು ಗೊತ್ತಿಲ್ಲ. ಅಷ್ಟು ಸುಲಭವಾಗಿ ರಾಜಕೀಯ ಬಿಡುವ ವ್ಯಕ್ತಿಯಲ್ಲ. ಅವರ ಹೇಳಿಕೆ ಹಿಂದೆ ಗೂಢಾರ್ಥ ಇದೆ. ಅವರ ಅಣ್ಣನನ್ನು ಸಿಎಂ ಮಾಡಲು ಪ್ರಯತ್ನಿಸಿರಬೇಕು ದೆಹಲಿಗಿಂತ ಕರ್ನಾಟಕದಲ್ಲಿ ಸಕ್ರಿಯಾಗಲು ನಿರ್ಧರಿಸಬೇಕು ಎನಿಸುತ್ತದೆ ಎಂದಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಪತ್ನಿಗೆ ಅನಾರೋಗ್ಯ ಆಸ್ಪತ್ರೆಗೆ ದಾಖಲು

  • ಕಿಂಗ್ ಮೇಕರ್ ಆಗುತ್ತೇನೆ ಎಂಬ ಅಹಂನಲ್ಲಿ ವಿದೇಶಕ್ಕೆ ಹಾರಿದ್ದ ಹೆಚ್‍ಡಿಕೆ : ಸಿಪಿ ಯೋಗೇಶ್ವರ್ ವ್ಯಂಗ್ಯ

    ಕಿಂಗ್ ಮೇಕರ್ ಆಗುತ್ತೇನೆ ಎಂಬ ಅಹಂನಲ್ಲಿ ವಿದೇಶಕ್ಕೆ ಹಾರಿದ್ದ ಹೆಚ್‍ಡಿಕೆ : ಸಿಪಿ ಯೋಗೇಶ್ವರ್ ವ್ಯಂಗ್ಯ

    ರಾಮನಗರ: ಕುಮಾರಸ್ವಾಮಿಯವರು (HD Kumaraswamy) ಚುನಾವಣೆ  (Election) ಮುಗಿದ ತಕ್ಷಣ ಕಿಂಗ್ ಮೇಕರ್ ಆಗುತ್ತೇನೆ ಎಂಬ ಅಹಂನಿಂದ ವಿದೇಶಕ್ಕೆ ಹಾರಿದ್ದರು. ಆದರೆ ಕರೆಯಲು ಯಾರೂ ಹೋಗದ ಕಾರಣ ಅವರೇ ವಾಪಾಸ್ ಬರಬೇಕಾಯಿತು ಎಂದು ಮಾಜಿ ಸಚಿವ ಸಿಪಿ ಯೋಗೇಶ್ವರ್ (CP yogeshwara) ವ್ಯಂಗ್ಯವಾಡಿದ್ದಾರೆ.

    ಚನ್ನಪಟ್ಟಣದಲ್ಲಿ (Channapatana) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿಯವರು ಚನ್ನಪಟ್ಟಣಕ್ಕೆ ಬರಬಾರದಿತ್ತು. ಅದಕ್ಕಾಗಿಯೇ ನಾನು ಸೋತಿದ್ದೇನೆ. ನನ್ನನ್ನು ಸೋಲಿಸಿದವರೂ ಸಹ ಸಂಪೂರ್ಣವಾಗಿ ಸೋತು ಹೋಗಿದ್ದಾರೆ. ಜೊತೆಗೆ ತಮ್ಮ ಮಗನನ್ನು ಸೋಲಿಸಿದ್ದಾರೆ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಧರ್ಮಗುರು ಹೆಂಡತಿಯನ್ನು ಹೇಗೆ ಕೊಂದ? – ಗೂಗಲ್ ಸರ್ಚ್‍ನಿಂದ ಸಿಕ್ಕಿಬಿದ್ದ ಅಪರಾಧಿಗೆ ಜೀವಾವಧಿ ಶಿಕ್ಷೆ

    ಚುನಾವಣೆಗಳು ಬರುತ್ತಲೇ ಇರುತ್ತವೆ. ನಾನು ಐದು ಬಾರಿ ಶಾಸಕನಾಗಿದ್ದೇನೆ. ನಾಲ್ಕು ಬಾರಿ ಸೋತಿದ್ದೇನೆ. ಜನ ಕಾಂಗ್ರೆಸ್‍ಗೆ (Congress) ಹೋಗಬೇಕಿತ್ತು, ಪಕ್ಷೇತರವಾಗಿ ಸ್ಪರ್ಧಿಸಬೇಕಿತ್ತು ಎಂದು ಮಾತನಾಡುತ್ತಿದ್ದಾರೆ. ಇದೇನು ಕೊನೆಯ ಚುನಾವಣೆಯಲ್ಲ. ನಾನು ಸೋತಿದ್ದರೂ ಜನರ ಮುಂದೆ ಬಂದಿದ್ದೇನೆ. ನನ್ನ ಗೆಲ್ಲಿಸಬೇಕೆಂದು ಶ್ರಮಪಟ್ಟವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದಿದ್ದಾರೆ.

    ಒಕ್ಕಲಿಗ ಜನಾಂಗದ ವ್ಯಕ್ತಿ ಮತ್ತೊಮ್ಮೆ ಮುಖ್ಯಮಂತ್ರಿ ಆಗುತ್ತಾರೆ ಎಂಬ ಅಂಧಾಭಿಮಾನದಿಂದ ಜನ ಮತ ನೀಡಿದ್ದರಿಂದ ನಾನು ಸೋತಿದ್ದೇನೆ. ಬಹುಮತ ಪಡೆದಿರುವ ಕಾಂಗ್ರೆಸ್ ಸರ್ಕಾರ ತೂಕದ ಸರ್ಕಾರವಾಗಿದೆ. ಬಹುತೇಕ ಹಿರಿಯರು ಗೆದ್ದಿದ್ದಾರೆ. ಸರಿದೂಗಿಸಿಕೊಂಡು ಹೋಗುವುದು ಕಷ್ಟಸಾಧ್ಯ. ಮುಂದಿನ ಐದು ವರ್ಷಗಳ ಕಾಲ ಈ ಸರ್ಕಾರ ಏನಾಗುತ್ತದೆಯೋ ಎಂಬುದನ್ನು ಹೇಳಲು ಆಗುವುದಿಲ್ಲ ಎಂದಿದ್ದಾರೆ.

    ನಾನು ಇನ್ನೂ ಮೂರು ವರ್ಷಕ್ಕೂ ಹೆಚ್ಚಿನ ಕಾಲ ವಿಧಾನ ಪರಿಷತ್ ಸದಸ್ಯನಾಗಿರುತ್ತೇನೆ. ನಾನು ಇಲ್ಲಿನ ಮಣ್ಣಿನ ಮಗ. ನಾನು ಇಲ್ಲಿಯೇ ಇರುತ್ತೇನೆ. ಯುಜಿಡಿ ಯಂತಹ ಹಲವಾರು ಅಭಿವೃದ್ಧಿ ಕೆಲಸಗಳನ್ನು ನಾನೇ ಮಾಡಬೇಕು. ನಮ್ಮ ಸೋಲನ್ನು ಈ ಮಹದೇಶ್ವರ ಸನ್ನಿಧಿಯಲ್ಲೇ ಮರೆತು ಬಿಡೋಣ ಎಂದು ಹೇಳಿದ್ದಾರೆ. ಇದನ್ನೂ ಓದಿ: ವಿದ್ಯುತ್‌ ಬಿಲ್‌ ನೀಡಲು ಬಂದ ಸಿಬ್ಬಂದಿಗೆ ಮಹಿಳೆ ಹಿಗ್ಗಾಮುಗ್ಗ ಕ್ಲಾಸ್‌

  • ರಾಮನಗರದಲ್ಲಿ ಘಟಾನುಘಟಿ ನಾಯಕರಿಂದ ನಾಮಪತ್ರ ಸಲ್ಲಿಕೆ – ಕುಬೇರರ ಆಸ್ತಿ ಎಷ್ಟಿದೆ ಗೊತ್ತಾ?

    ರಾಮನಗರದಲ್ಲಿ ಘಟಾನುಘಟಿ ನಾಯಕರಿಂದ ನಾಮಪತ್ರ ಸಲ್ಲಿಕೆ – ಕುಬೇರರ ಆಸ್ತಿ ಎಷ್ಟಿದೆ ಗೊತ್ತಾ?

    ರಾಮನಗರ: ಜಿಲ್ಲೆಯಲ್ಲಿ ಮಂಗಳವಾರ ನಾಮಪತ್ರ ಸಲ್ಲಿಕೆಯ ಭರಾಟೆ ಹೆಚ್ಚಾಗಿದೆ. ಘಟಾನುಘಟಿ ನಾಯಕರು ಆಯಾ ತಾಲೂಕುಗಳಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.

    ಕನಕಪುರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸಚಿವ ಆರ್.ಅಶೋಕ್ (R Ashoka), ಚನ್ನಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಸಚಿವ ಸಿ.ಪಿ ಯೋಗೇಶ್ವರ್ (CP Yogeshwara), ಮಾಗಡಿಯಲ್ಲಿ ಜೆಡಿಎಸ್ (JDS) ಅಭ್ಯರ್ಥಿಯಾಗಿ ಹಾಲಿ ಶಾಸಕ ಮಂಜುನಾಥ್ (Majunath) ಹಾಗೂ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಶಾಸಕ ಹೆಚ್.ಸಿ ಬಾಲಕೃಷ್ಣ (HC Balakrishna) ನಾಮಪತ್ರ ಸಲ್ಲಿಸಿದ್ರು. ನಾಮಪತ್ರ ಸಲ್ಲಿಕೆ ವೇಳೆ ಎಲ್ಲಾ ನಾಯಕರು ತಮ್ಮ ತಮ್ಮ ಆಸ್ತಿ ವಿವರಗಳನ್ನ ಚುನಾವಣಾ ಆಯೋಗಕ್ಕೆ (Election Commission) ಸಲ್ಲಿಸಿದ್ದಾರೆ. ಇದನ್ನೂ ಓದಿ: 1,214 ಕೋಟಿ ಆಸ್ತಿಯ ಒಡೆಯ ಡಿಕೆ ಶಿವಕುಮಾರ್‌- ಪತ್ನಿ, ಮಕ್ಕಳ ಬಳಿ ಎಷ್ಟು ಆಸ್ತಿಯಿದೆ?

    ಕನಕಪುರ ವಿಧಾನಸಭೆ ಕ್ಷೇತ್ರದಿಂದ ಸ್ಫರ್ಧೆ ಮಾಡ್ತಿರೋ ಬಿಜೆಪಿ ಅಭ್ಯರ್ಥಿ ಆರ್.ಅಶೋಕ್ ಬಿಎಸ್ಸಿ ಪದವೀಧರರಾಗಿದ್ದಾರೆ. ಅವರ ಒಟ್ಟು ಆಸ್ತಿ ಮೌಲ್ಯ 5.28 ಕೋಟಿ ರೂ., ಪತ್ನಿ ಆಸ್ತಿ ಮೌಲ್ಯ 11.50 ಕೋಟಿ ರೂ. ಹಾಗೂ ಅವಿಭಜಿತ ಕುಟುಂಬದ ಆಸ್ತಿ 70.38 ಕೋಟಿ ರೂ. ಇದೆ. ಅಶೋಕ್ ಅವರ ಒಟ್ಟು ಚರಾಸ್ತಿ 2.18 ಕೋಟಿ ರೂ., ಪತ್ನಿ ಹೆಸರಿನ ಚರಾಸ್ತಿ 1.16 ಕೋಟಿ ರೂ., ಅವಿಭಜಿತ ಕುಟುಂಬದ ಚರಾಸ್ತಿ 8.96ಕೋಟಿ ರೂ. ಇದೆ. ಆರ್. ಅಶೋಕ್ ಸ್ಥಿರಾಸ್ತಿ 3.10 ಕೋಟಿ ರೂ., ಪತ್ನಿ ಹೆಸರಿನ ಸ್ಥಿರಾಸ್ತಿ 10.44 ಕೋಟಿ ರೂ., ಅವಿಭಜಿತ ಕುಟುಂಬದ ಸ್ಥಿರಾಸ್ತಿ 61.42 ಕೋಟಿ ರೂ. ಇದೆ. ಅಶೋಕ್ ಹೆಸರಲ್ಲಿ ಒಟ್ಟು ಸಾಲ, 97.78 ಲಕ್ಷ ಹಾಗೂ ಪತ್ನಿ ಹೆಸರಲ್ಲಿ 64 ಲಕ್ಷ ಸಾಲ ಇದ್ದು, ಅವಿಭಜಿತ ಕುಟುಂಬದ ಸಾಲ 7.95 ಕೋಟಿ ರೂ. ಇರುವುದಾಗಿ ಘೋಷಿಸಿಕೊಂಡಿದ್ದಾರೆ. ಅಶೋಕ್ ವಾರ್ಷಿಕ ಆದಾಯ 18.44 ಲಕ್ಷ ರೂ. ಆಗಿದ್ದು ಆದಾಯ ಮೂಲ ಕೃಷಿ ಮತ್ತು ಬಾಡಿಗೆ ಎಂದು ತೋರಿಸಲಾಗಿದೆ. ಅಶೋಕ್ ಹೆಸರಿನಲ್ಲಿ 400 ಗ್ರಾಂ ಚಿನ್ನ ಹಾಗೂ 12 ಕೆಜಿ ಬೆಳ್ಳಿ ಇದೆ. ಪತ್ನಿ ಬಳಿ 617 ಗ್ರಾಂ ಚಿನ್ನ, 11 ಕೆ.ಜಿ ಬೆಳ್ಳಿ, 17.5ಲಕ್ಷ ಮೌಲ್ಯ ಡೈಮಂಡ್ ನೆಕ್ಲಸ್ ಇದೆ. 2 ಇನ್ನೋವಾ ಕಾರುಗಳನ್ನ ಆರ್.ಅಶೋಕ್ ಹೊಂದಿದ್ದಾರೆ. ಅಶೋಕ್ ವಿರುದ್ಧ ಎಸಿಬಿಯಲ್ಲಿ ಒಂದು ಪ್ರಕರಣ ದಾಖಲಾಗಿದ್ದು, ಮತ್ತೊಂದು ಪ್ರಕರಣ ನ್ಯಾಯಾಲಯದ ವಿಚಾರಣೆ ಹಂತದಲ್ಲಿದೆ. ಇದನ್ನೂ ಓದಿ: ಹೆಚ್‍ಡಿಡಿ ಮುಂದೆ ಗಳಗಳನೆ ಅತ್ತ ನಿಖಿಲ್ ಕುಮಾರಸ್ವಾಮಿ

    ಸಿ.ಪಿ.ಯೋಗೇಶ್ವರ್ ಆಸ್ತಿ ವಿವಿರ:
    ಯೋಗೇಶ್ವರ್ ಬಿಎಸ್‌ಸಿ ಪದವೀಧರ.
    ಒಟ್ಟು ಸ್ಥಿರಾಸ್ತಿ/ಚರಾಸ್ತಿ ಮೌಲ್ಯ: 30.68 ಕೋಟಿ
    ಯೋಗೇಶ್ಚರ್ ಒಟ್ಟು ಚರಾಸ್ತಿ‌ ಮೌಲ್ಯ: 5.09 ಕೋಟಿ
    ಪತ್ನಿ ಹೆಸರಲ್ಲಿ ಚರಾಸ್ತಿ ಮೌಲ್ಯ: 2.43 ಕೋಟಿ
    ಯೋಗೇಶ್ವರ್ ಸ್ಥಿರಾಸ್ತಿ ಮೌಲ್ಯ: 25.59 ಕೋಟಿ
    ಪತ್ನಿ ಹೆಸರಿನ ಸ್ಥಿರಾಸ್ತಿ ಮೌಲ್ಯ: 21.40 ಕೋಟಿ
    ಸಿಪಿವೈ ವಾರ್ಷಿಕ ಆದಾಯ: 41 ಲಕ್ಷ
    ಸಿಪಿವೈ ಒಟ್ಟು ಸಾಲ: 13.12 ಕೋಟಿ
    ಪತ್ನಿ ಹೆಸರಿನಲ್ಲಿರುವ ಸಾಲ: 3.20 ಕೋಟಿ
    ಸಿಪಿವೈ ಆದಾಯ ಮೂಲ: ಬಾಡಿಗೆ ಮತ್ತು ವ್ಯವಹಾರ
    ಸಾರ್ವಜನಿಕರು ಮತ್ತು ಇತರರಿಂದ ಪಡೆದಿರುವ 1 ಕೆಜಿ ಚಿನ್ನ, 50 ಕೆಜಿ ಬೆಳ್ಳಿ, 250 ಗ್ರಾಂ ಚಿನ್ನಾಭರಣ ಇದೆ.
    ಪತ್ನಿ ಬಳಿ 1.5ಕೆ.ಜಿ ಚಿನ್ನ ಹಾಗೂ 20 ಕೆಜಿ ಬೆಳ್ಳಿ ಇದೆ.
    ಸಿಪಿವೈ ಸ್ವಂತ ಕಾರು ಇಲ್ಲ ಎಂದು ಹೇಳಿಕೊಂಡಿದ್ದಾರೆ.
    ಯೋಗೇಶ್ವರ್ ವಿರುದ್ಧ 10 ಪ್ರಕರಣಗಳಿದ್ದು, ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ.

    ಹೆಚ್‌.ಸಿ ಬಾಲಕೃಷ್ಣ:
    ವಿದ್ಯಾರ್ಹತೆ: ಎಂಬಿಬಿಎಸ್ (ಅಪೂರ್ಣ ಪದವಿ)
    ಒಟ್ಟು ಆಸ್ತಿ ಮೌಲ್ಯ: 10.39 ಕೋಟಿ
    ಬಾಲಕೃಷ್ಣ ಸ್ಥಿರಾಸ್ತಿ: 9.93 ಕೋಟಿ
    ಪತ್ನಿ ಹೆಸರಲ್ಲಿ ಸ್ಥಿರಾಸ್ತಿ: 23.52 ಕೋಟಿ
    ಬಾಲಕೃಷ್ಣ ಒಟ್ಟು ಚರಾಸ್ತಿ: 46.75 ಲಕ್ಷ
    ಪತ್ನಿ ಹೆಸರಿನ ಚರಾಸ್ತಿ: 1.20 ಕೋಟಿ
    ಬಾಲಕೃಷ್ಣ ಒಟ್ಟು ಸಾಲ: 1.23 ಕೋಟಿ
    ಪತ್ನಿ ಹೆಸರಲ್ಲಿನಲ್ಲಿರುವ ಸಾಲ: 11.13 ಕೋಟಿ
    ವಾರ್ಷಿಕ ಆದಾಯ: 7.5 ಲಕ್ಷ
    ಆದಾಯ ಮೂಲ: ವ್ಯವಸಾಯ
    ಬಾಲಕೃಷ್ಣ ಬಳಿ ಸ್ವಂತ ಕಾರು ಇಲ್ಲ, ಪತ್ನಿ ಬಳಿ 3 ಕಾರು ಇದೆ.
    ಬಾಲಕೃಷ್ಣ 475 ಗ್ರಾಂ ಚಿನ್ನ ಹಾಗೂ 1.5 ಕೆಜಿ ಬೆಳ್ಳಿ‌, 70 ಎಕರೆಗೂ ಹೆಚ್ಚು ಕೃಷಿ ಭೂಮಿ ಹೊಂದಿದ್ದಾರೆ.
    ಪತ್ನಿ ಬಳಿ 1.113 ಕೆಜಿ ಚಿನ್ನ, 4 ಕೆಜಿ ಬೆಳ್ಳಿ ಇದೆ.
    ಇನ್ನೂ ಬಾಲಕೃಷ್ಣ ವಿರುದ್ಧ ಕುದೂರು, ರಾಮನಗರ ಗ್ರಾಮಾಂತರ ಠಾಣೆಗಳಲ್ಲಿ ಎರಡು ಪ್ರಕರಣ. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ, ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಸಂಬಂಧದ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿವೆ‌.

    ಎ.ಮಂಜುನಾಥ್ ಆಸ್ತಿ ವಿವರ:
    ಎ.ಮಂಜುನಾಥ್ ಬಿಬಿಎಂ ಪದವೀಧರ.
    ಒಟ್ಟು ಆಸ್ತಿ ಮೌಲ್ಯ: 10.65 ಕೋಟಿ
    ಮಂಜುನಾಥ್ ಚರಾಸ್ತಿ ಮೌಲ್ಯ: 1.02 ಕೋಟಿ.
    ಪತ್ನಿ ಹೆಸರಿನ ಚರಾಸ್ತಿ: 55 ಲಕ್ಷ
    ಮಂಜುನಾಥ್ ಸ್ಥಿರಾಸ್ತಿ: 9.45 ಕೋಟಿ
    ಪತ್ನಿ ಹೆಸರಿನಲ್ಲಿರುವ ಸ್ಥಿರಾಸ್ಥಿ: 10.88 ಕೋಟಿ
    ಮಂಜುನಾಥ್‌ ಹೆಸರಲ್ಲಿರುವ ಸಾಲ: 1.18 ಕೋಟಿ
    ಪತ್ನಿ ಹೆಸರಲ್ಲಿರುವ ಸಾಲ: 4.15 ಕೋಟಿ
    ವಾರ್ಷಿಕ ಆದಾಯ: 13.26 ಲಕ್ಷ
    ಪತ್ನಿ ಹೆಸರಲ್ಲಿ 3 ವೈನ್ ಸ್ಟೋರ್ ಇದೆ
    ಮಂಜುನಾಥ್‌ ಬಳಿ 250 ಗ್ರಾಂ ಚಿನ್ನ, 1 ಕೆಜಿ ಬೆಳ್ಳಿ ಹೊಂದಿದ್ದಾರೆ.
    ಪತ್ನಿ ಬಳಿ 400 ಗ್ರಾಂ ಚಿನ್ನ, 1.5 ಕೆಜಿ ಬೆಳ್ಳಿ ಇದೆ.
    ಮಂಜುನಾಥ್ ಹೆಸರಲ್ಲಿ 5 ಕಾರು, ಪತ್ನಿ ಹೆಸರಲ್ಲಿ 2 ಕಾರು ಇದೆ.
    ಅಲ್ಲದೇ ಮಂಜುನಾಥ್ ವಿರುದ್ಧ ಮಾಗಡಿ ಮತ್ತು ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದು, ನಾಯಾಲಯದಲ್ಲಿ ವಿಚಾರಣೆ ಹಂತದಲ್ಲಿವೆ.

  • ಶಾಲಾ ಮಕ್ಕಳ ಜೊತೆ ಕೂತು ಬಿಸಿಯೂಟ ಸವಿದ ಸಿಪಿವೈ

    ಶಾಲಾ ಮಕ್ಕಳ ಜೊತೆ ಕೂತು ಬಿಸಿಯೂಟ ಸವಿದ ಸಿಪಿವೈ

    ರಾಮನಗರ: ಗೊಂಬೆನಗಿರಿ ಚನ್ನಪಟ್ಟಣದಲ್ಲಿ (Channapatna) ಚುನಾವಣಾ (Assembly Elections) ಕಾವು ರಂಗೇರುತ್ತಿದೆ. ಜಿದ್ದಾಜಿದ್ದಿಯ ಕ್ಷೇತ್ರವಾಗಿರುವ ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಹಾಗೂ ಮಾಜಿ ಸಚಿವ ಸಿಪಿ ಯೋಗೇಶ್ವರ್ (CP Yogeshwara) ನಡುವೆ ಪೈಪೋಟಿ ಹೆಚ್ಚಾಗಿದೆ.

    ಕ್ಷೇತ್ರದಾದ್ಯಂತ ಸಿಪಿ ಯೋಗೇಶ್ವರ್ ಕಾಲ್ನಡಿಗೆಯಲ್ಲಿ ಸಂಚಾರ ಮಾಡುತ್ತಿದ್ದಾರೆ. ಸ್ವಾಭಿಮಾನಿ ಸಂಕಲ್ಪ ನಡಿಗೆ ಮೂಲಕ ಮನೆ ಮನೆಗೆ ತೆರಳಿ ಸಿಪಿವೈ ಮತಯಾಚನೆ ಮಾಡುತ್ತಿದ್ದಾರೆ. ಶುಕ್ರವಾರ ಚನ್ನಪಟ್ಟಣ ತಾಲೂಕಿನ ವಿರೂಪಸಂದ್ರ ಗ್ರಾಮದಲ್ಲಿ ಮತಯಾಚನೆ ಮಾಡಿದ ಸಿಪಿ ಯೋಗೇಶ್ವರ್ ಗ್ರಾಮದ ಸರ್ಕಾರಿ ಶಾಲಾ ಮಕ್ಕಳ ಜೊತೆ ಕೂತು ಮಧ್ಯಾಹ್ನದ ಬಿಸಿಯೂಟ ಸವಿದಿದ್ದಾರೆ. ಮಕ್ಕಳ ಜೊತೆ ಕೂತು ಪ್ರಾರ್ಥನೆ ಮಾಡಿ ಊಟ ಮಾಡಿದ್ದಾರೆ.

    ಶತಾಯಗತಾಯವಾಗಿ ಮಾಜಿ ಸಿಎಂ ಹೆಚ್‌ಡಿಕೆ ಅವರನ್ನು ಸೋಲಿಸಲು ಸಿಪಿವೈ ತಂತ್ರಗಾರಿಕೆ ರೂಪಿಸುತ್ತಿದ್ದಾರೆ. ಕುಮಾರಸ್ವಾಮಿ ಕ್ಷೇತ್ರಕ್ಕೆ ಬರುವುದಿಲ್ಲ, ನಾನು ಇಲ್ಲಿಯೇ ಇದ್ದು ನಿಮ್ಮ ಕಷ್ಟಗಳನ್ನು ಆಲಿಸುತ್ತೇನೆ ಎಂದು ಮತದಾರರ ಮನವೊಲಿಸುವ ಕೆಲಸ ಮಾಡುತ್ತಿದ್ದಾರೆ. ಇದನ್ನೂ ಓದಿ: ಕರ್ನಾಟಕಕ್ಕೆ 100 ರೂ. ನೀಡಿದರೆ, ದೇಶಕ್ಕೆ ಕರ್ನಾಟಕ ಸಾವಿರ ರೂ. ನೀಡಲಿದೆ: ತೇಜಸ್ವಿ ಸೂರ್ಯ

    ಕ್ಷೇತ್ರಕ್ಕೆ ನೀರಾವರಿ ಯೋಜನೆ ತಂದು ಕೆರೆ ಅಭಿವೃದ್ಧಿ ಮಾಡಿದರೂ ಕಳೆದ ಚುನಾವಣೆಯಲ್ಲಿ ಸೋಲಾಯಿತು. ಈ ಬಾರಿ ಕ್ಷೇತ್ರದ ಜನರು ಆಶೀರ್ವಾದ ಮಾಡಿ ಎಂದು ಭಾವನಾತ್ಮಕವಾಗಿ ಮತದಾರರ ಓಲೈಕೆಗೆ ಸಿಪಿವೈ ಮುಂದಾಗಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಕೋಲಾರ ಅಖಾಡಕ್ಕೆ ಸಿದ್ದು ಆಪ್ತ ಅಹಿಂದ ಟೀಂ ಎಂಟ್ರಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕುಟುಂಬ ರಾಜಕಾರಣ ಅನ್ನೋ ಪ್ರಶ್ನೆಯೇ ಇಲ್ಲ – ಬಿಜೆಪಿ, ಕಾಂಗ್ರೆಸ್‌ಗೆ ನಿಖಿಲ್ ತಿರುಗೇಟು

    ಕುಟುಂಬ ರಾಜಕಾರಣ ಅನ್ನೋ ಪ್ರಶ್ನೆಯೇ ಇಲ್ಲ – ಬಿಜೆಪಿ, ಕಾಂಗ್ರೆಸ್‌ಗೆ ನಿಖಿಲ್ ತಿರುಗೇಟು

    ರಾಮನಗರ: ಜಿಲ್ಲೆಯಲ್ಲಿ ಕುಟುಂಬ ರಾಜಕಾರಣ ಅನ್ನೋ ಪ್ರಶ್ನೆಯೇ ಇಲ್ಲ ಎಂದು ರಾಮನಗರ ಕ್ಷೇತ್ರದ ಚುನಾವಣಾ ಅಭ್ಯರ್ಥಿ ಹಾಗೂ ಹೆಚ್‌ಡಿಕೆ ಪುತ್ರ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಸ್ಪಷ್ಟಪಡಿಸಿದ್ದಾರೆ.

    `ಕುಮಾರಸ್ವಾಮಿ (HD Kumaraswamy) ಕುಟುಂಬದ ವಂಶಪಾರಂಪರ್ಯ ರಾಜಕಾರಣಕ್ಕೆ ಮುಂದಿನ ಚುನಾವಣೆಯಲ್ಲಿ (Election) ಜನತೆ ಅಂತ್ಯ ಹಾಡಲಿದ್ದಾರೆ’ ಎಂಬ ಎಂಎಲ್‌ಸಿ ಸಿ.ಪಿ ಯೋಗೇಶ್ವರ್ (CP Yogeshwara) ಹೇಳಿಕೆಗೆ ತಿರುಗೇಟು ನೀಡಿದ ನಿಖಿಲ್, ಹಿಂದೆ ರಾಮನಗರದಲ್ಲಿ ರಾಜು ಎಂಬವರಿಗೆ ಟಿಕೆಟ್ ನೀಡಿ ಶಾಸಕರಾಗಿ ಮಾಡಿದ್ವಿ. ಆದ್ರೆ ಅವರಿಗೆ ಕೃತಜ್ಞತೆಯೇ ಇಲ್ಲ. ಈಗ ಕಾಂಗ್ರೆಸ್ (Congress) ಸೇರಿಕೊಂಡಿದ್ದಾರೆ. ಚನ್ನಪಟ್ಟಣದಲ್ಲಿ ಸಿಂ.ಲಿಂ. ನಾಗರಾಜು ಎಂಬವರಿಗೆ ಟಿಕೆಟ್ ನೀಡಿದ್ದೆವು. ಸಿ.ಪಿ.ಯೋಗೇಶ್ವರ್ ಅವರಿಗೆ ಇದರ ಅರಿವು ಇಲ್ಲದಂತೆ ಕಾಣುತ್ತದೆ. ಬಿಜೆಪಿಯಲ್ಲಿ ಯಡಿಯೂರಪ್ಪ, ಈಶ್ವರಪ್ಪನವರ ಮಕ್ಕಳು ರಾಜಕೀಯದಲ್ಲಿದ್ದಾರೆ. ಡಿ.ಕೆ ಶಿವಕುಮಾರ್ (DK Shivakumar) ಅವರ ಮನೆಯಲ್ಲಿ ನಾಲ್ಕು ಜನ ಸದಸ್ಯರಿದ್ದಾರೆ. ಎಲ್ಲಾ ಪಕ್ಷದಲ್ಲೂ ಸಹ ಈ ವ್ಯವಸ್ಥೆ ಇದೆ. ಆದ್ರೆ ರಾಮನಗರದಲ್ಲಿ (Ramanagara) ಕುಟುಂಬ ರಾಜಕಾರಣ ಅನ್ನುವ ಪ್ರಶ್ನೆ ಇಲ್ಲ ಎಂದು ತಿರುಗೇಟು ನೀಡಿದ್ದಾರೆ.

    `ಜೆಡಿಎಸ್ (JDS) ಪಂಚರತ್ನ ಯಾತ್ರೆ ಫೇಲ್ಯೂರ್’ ಎಂಬ ಸಿಪಿವೈ ಹೇಳಿಕೆಗೆ ಪ್ರತಿಕ್ರಿಯಿಸಿ, ಸಿ.ಪಿ.ಯೋಗೇಶ್ವರ್ ಅವರಿಗೆ ಹತಾಶೆ ಉಂಟಾಗಿದೆ. ಹಣ ಕೊಟ್ರೂ ಸಹ ರಾಷ್ಟ್ರೀಯ ಪಕ್ಷಗಳಿಗೆ ಜನ ಸೇರುತ್ತಿಲ್ಲ. ಆದರೆ ಮಧ್ಯರಾತ್ರಿವರೆಗೂ ಜನ ಕುಮಾರಣ್ಣನ ಸ್ವಾಗತ ಮಾಡ್ತಿದ್ದಾರೆ. ಪಂಚರತ್ನ ಯೋಜನೆ ಬಗ್ಗೆ ಮಾಹಿತಿ ಪಡೆದುಕೊಳ್ತಿದ್ದಾರೆ. ಸಿಪಿವೈ 18 ವರ್ಷಗಳ ಕಾಲ ಚನ್ನಪಟ್ಟಣ ಶಾಸಕರಾಗಿದ್ದರು. ಆದ್ರೆ ಕ್ಷೇತ್ರದ ರಸ್ತೆಗಳ ಬಗ್ಗೆ ಗಮನ ಹರಿಸಿರಲಿಲ್ಲ. ಕುಮಾರಣ್ಣನ ಕಾಲದಲ್ಲಿ ಈಗ ಪ್ರತಿಯೊಂದು ರಸ್ತೆ ಬಹಳ ಅಚ್ಚುಕಟ್ಟಾಗಿದೆ. 130 ಕೆರೆಗಳು ತುಂಬಿವೆ. ಚನ್ನಪಟ್ಟಣ ಅಭಿವೃದ್ಧಿ ವಿಚಾರದಲ್ಲಿ ಯೋಗೇಶ್ವರ್ ಅವರಿಗೆ ಮಾಹಿತಿಯೇ ಇಲ್ಲ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ನಾನು ಕನಸಿನಲ್ಲೂ ಯೋಚನೆ ಮಾಡಿರಲಿಲ್ಲ: ನಿಖಿಲ್‌ ಕುಮಾರಸ್ವಾಮಿ

    ಪಂಚರತ್ನ ಯಾತ್ರೆ ತಡೆಯಲು ಕೋವಿಡ್ ನೆಪ:
    ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ ನಿಖಿಲ್, ಕೋವಿಡ್ ವಿಚಾರವಾಗಿ ಸರ್ಕಾರ ನಿಯಮ ಮಾಡಿದ್ರೆ ಎಲ್ಲರಿಗೂ ಅನ್ವಯವಾಗುವಂತಿರಬೇಕು. ಆದರೆ ಈ ಸರ್ಕಾರ ಪಂಚರತ್ನ ಯಾತ್ರೆ ತಡೆಯಲು ಕೋವಿಡ್ ನೆಪ ಹೇಳುತ್ತಿದೆ. ಬಿಜೆಪಿಯವರು ಸಹ ಸಂಕಲ್ಪಯಾತ್ರೆ ಮಾಡ್ತಿದ್ದಾರೆ. ಅದರಿಂದ ಏನೂ ಆಗೋದಿಲ್ವಾ? ಏನೇ ನಿಯಮ ಮಾಡಿದ್ರೂ ಅದು ಎಲ್ಲರಿಗೂ ಅನ್ವಯವಾಗಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: JDS ವಂಶಪಾರಂಪರ್ಯ ಶೀಘ್ರ ಅಂತ್ಯ – 2023ಕ್ಕೆ ಜನ ಬುದ್ದಿ ಕಲಿಸ್ತಾರೆ: ಸಿಪಿ ಯೋಗೇಶ್ವರ್

    Live Tv
    [brid partner=56869869 player=32851 video=960834 autoplay=true]

  • JDS ವಂಶಪಾರಂಪರ್ಯ ಶೀಘ್ರ ಅಂತ್ಯ – 2023ಕ್ಕೆ ಜನ ಬುದ್ದಿ ಕಲಿಸ್ತಾರೆ: ಸಿಪಿ ಯೋಗೇಶ್ವರ್

    JDS ವಂಶಪಾರಂಪರ್ಯ ಶೀಘ್ರ ಅಂತ್ಯ – 2023ಕ್ಕೆ ಜನ ಬುದ್ದಿ ಕಲಿಸ್ತಾರೆ: ಸಿಪಿ ಯೋಗೇಶ್ವರ್

    ರಾಮನಗರ: ಕುಮಾರಸ್ವಾಮಿ (HD Kumaraswamy) ಕುಟುಂಬದ ವಂಶಪಾರಂಪರ್ಯ ರಾಜಕಾರಣಕ್ಕೆ ಮುಂದಿನ ಚುನಾವಣೆಯಲ್ಲಿ ಜನತೆ ಅಂತ್ಯ ಹಾಡಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಸಿಪಿ ಯೋಗೇಶ್ವರ್ (CP Yogeshwara) ಟಾಂಗ್ ನೀಡಿದ್ದಾರೆ.

    ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಪಿವೈ, ಹೆಚ್‌ಡಿಕೆಯಿಂದ ಇಡೀ ಜಿಲ್ಲೆಯಲ್ಲಿ ಒಬ್ಬ ಜೆಡಿಎಸ್ (JDS) ಕಾರ್ಯಕರ್ತನಿಗೂ ಅನುಕೂಲ ಆಗಿಲ್ಲ. ಕಾರ್ಯಕರ್ತ, ಮುಖಂಡರಿಗೆ ಪಕ್ಷದಲ್ಲಿ ಒಂದು ಸ್ಥಾನಮಾನ ನೀಡಿಲ್ಲ. ಜಿಲ್ಲೆಯಲ್ಲಿ ಜೆಡಿಎಸ್‌ನಿಂದ ನೊಂದವರೇ ಹೆಚ್ಚು. ಕೇವಲ ಅಪ್ಪ-ಮಗ ಫೋಟೋ ಹಾಕಿಕೊಂಡು ಜಿಲ್ಲೆಯ ಜನರನ್ನು ಗುಲಾಮರ ರೀತಿ ನೋಡುತ್ತಿದ್ದಾರೆ. ಆದರೆ ಇದು 2023ರಲ್ಲಿ ನಡೆಯುವುದಿಲ್ಲ. ಜನರು ತಕ್ಕಪಾಠ ಕಲಿಸುತ್ತಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಸಿಪಿವೈ ಗುಡುಗಿದ್ದಾರೆ.

    ಚನ್ನಪಟ್ಟಣ ಕ್ಷೇತ್ರದಲ್ಲಿ 1,500 ಕೋಟಿ ರೂ. ಅನುದಾನ ತಂದಿರುವುದಾಗಿ ಕುಮಾರಸ್ವಾಮಿ ಹೇಳಿದ್ದು, ಈ ಎಲ್ಲಾ ಕಾಮಗಾರಿಯನ್ನು ಬೇನಾಮಿ ಹೆಸರಿನಲ್ಲಿ ತಾವೇ ನಡೆಸಿದ್ದಾರೆ. ಗುತ್ತಿಗೆದಾರರಿಂದ ದಂಧೆ ನಡೆಸಿ, ಆ ಪಾಪದ ಹಣವನ್ನು ಹೆಲಿಕಾಪ್ಟರ್‌ನಲ್ಲಿ ಹೂವಿನ ರೂಪದಲ್ಲಿ ಚೆಲ್ಲಿಸಿಕೊಳ್ಳುತ್ತಿದ್ದಾರೆ. ಕುಮಾರಸ್ವಾಮಿ ಬಗ್ಗೆ ಬಿಎಲ್ ಸಂತೋಷ್ ಹೇಳಿಕೆ ಸರಿಯಾಗಿಯೇ ಇದೆ. ಸಂತೋಷ್ ಜೀ ಅವರ ಬಗ್ಗೆ ವೈಯಕ್ತಿಕ ಟೀಕೆ ಸರಿಯಲ್ಲ ಎಂದರು. ಇದನ್ನೂ ಓದಿ: ಭಾರತದಲ್ಲಿ ಲಾಕ್‌ಡೌನ್‌ ಅಗತ್ಯವಿಲ್ಲ : IMA

    ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನಾ ವಿಚಾರದಲ್ಲಿ ಜೆಡಿಎಸ್ ಜನರ ದಿಕ್ಕು ತಪ್ಪಿಸುತ್ತಿದೆ. ಕುಮಾರಣ್ಣ ಸಾಲ ಮನ್ನಾ ಮಾಡುತ್ತಾರೆ, ಎಷ್ಟು ಬೇಕೋ ಅಷ್ಟು ಸಾಲ ತಗೊಳ್ಳಿ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಹೇಳಿರೋದು ಹಾಸ್ಯಾಸ್ಪದ. ಕಳೆದ ಬಾರಿಯೂ ಇವರ ಮಾತು ನಂಬಿಕೊಂಡು ಜನರ ಆಸ್ತಿ ಹರಾಜಾಯಿತು ಎಂದು ಸಿಪಿವೈ ಟೀಕಿಸಿದರು. ಇದನ್ನೂ ಓದಿ: ಬೆಂಗಳೂರು ವಿಶ್ವವಿದ್ಯಾಲಯ ಬಿಕಾಂ ಪಠ್ಯದಲ್ಲಿ ಪುನೀತ್ ರಾಜಕುಮಾರ್

    Live Tv
    [brid partner=56869869 player=32851 video=960834 autoplay=true]

  • ರಾಮನಗರದಿಂದ ಅಯೋಧ್ಯೆಗೆ ಬೆಳ್ಳಿ ಇಟ್ಟಿಗೆ ಅರ್ಪಣೆ

    ರಾಮನಗರದಿಂದ ಅಯೋಧ್ಯೆಗೆ ಬೆಳ್ಳಿ ಇಟ್ಟಿಗೆ ಅರ್ಪಣೆ

    ರಾಮನಗರ: ಅಯೋಧ್ಯೆ (Ayodhya) ರಾಮಮಂದಿರ (RamMandir) ನಿರ್ಮಾಣಕ್ಕೆ ರಾಮನಗರದಿಂದ ಬೆಳ್ಳಿ ಇಟ್ಟಿಗೆ ಅರ್ಪಿಸಲಾಗುತ್ತಿದೆ.

    ಬೆಳ್ಳಿ ಇಟ್ಟಿಗೆಗೆ ರಾಮನ ಭಕ್ತರಿಂದ ಇಂದು ವಿಶೇಷ ಪೂಜೆ ಸಲ್ಲಿಸಲಾಯಿತು. ಮಾಜಿ ಸಚಿವ ಸಿ.ಪಿ ಯೋಗೇಶ್ವರ್ (CP Yogeshwara) ಸಮ್ಮುಖದಲ್ಲಿ ರಾಮನಗರ ಕೆಂಗಲ್ ಆಂಜನೇಯ ದೇವಾಲಯ, ರಾಮದೇವರ ಬೆಟ್ಟದಲ್ಲಿ ಪೂಜೆ ಸಲ್ಲಿಸಲಾಯಿತು. ಇದನ್ನೂ ಓದಿ: ಪ್ರೀತಂಗೌಡ ನಮಗೆ ಅಣ್ಣನ ಸಮಾನ – ವೀಡಿಯೋವನ್ನು ತಿರುಚಿ ವೈರಲ್ ಮಾಡಿದ್ದಾರೆ: ಸ್ಥಳೀಯರ ಆಕ್ರೋಶ

    ಬಿಜೆಪಿ (BJP) ಮುಖಂಡ ಗೌತಮ್ ಗೌಡ ನೇತೃತ್ವದಲ್ಲಿ 150 ಮಂದಿ ಶ್ರೀರಾಮನ ಭಕ್ತರು ಅಯೋಧ್ಯೆಗೆ ಬೆಳ್ಳಿ ಇಟ್ಟಿಗೆ ಸಮರ್ಪಿಸಲು ನಿರ್ಧರಿಸಲಾಯಿತು. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಜೊತೆ ಹೆಜ್ಜೆ ಹಾಕಿದ ಪ್ರಿಯಾಂಕಾ ಗಾಂಧಿ ಮಗಳು

    2024ಕ್ಕೆ ರಾಮಮಂದಿರ ಪೂರ್ಣ: ಇತ್ತೀಚೆಗೆ ರಾಮಜನ್ಮಭೂಮಿಯ ಟ್ರಸ್ಟ್ನ ಟ್ರಸ್ಟಿಗಳಾದ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅವರು, ಅಯೋಧ್ಯೆಯ ರಾಮ ಮಂದಿರ ನಿರ್ಮಾಣದ ಪ್ರತಿಷ್ಠಾಪನಾ ಮಹೋತ್ಸವ 2024ರ ಮಕರ ಸಂಕ್ರಾಂತಿ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಹೇಳಿದ್ದರು.

    ಸಮಿತಿ ಸದಸ್ಯರೂ ಈ ಬಗ್ಗೆ ಮಾಹಿತಿ ನೀಡಿ, ಆಶಿಷ್ ಸೋಂಪುರ ಅವರು ಮಂದಿರದ ವಾಸ್ತುಶಿಲ್ಪಿಯಾಗಿದ್ದು, ನಿರ್ಮಾಣ ಸಮಿತಿಗೆ ನೃಪೇಂದ್ರ ಮಿಶ್ರಾ, ಪ್ರದೀಪ್ ಕುಮಾರ್ ಹಾಗೂ ಪ್ರೊ.ಗೋಪಾಲ ಕೃಷ್ಣನ್ ಇತರರು ಸದಸ್ಯರಿದ್ದಾರೆ. ಈಗಾಗಲೇ ಮಂದಿರದ ಇತರ ಭಾಗಗಳ ನಿರ್ಮಾಣ ಪ್ರಗತಿಯಲ್ಲಿದೆ. ರಾಜಸ್ಥಾನದ ಬನ್ಸಿ ಪಹಾಡ್‌ಪುರ ಜಿಲ್ಲೆಯಿಂದ ಮರಳುಗಲ್ಲುಗಳನ್ನು ತರಿಸಿಕೊಂಡು ಕೆತ್ತನೆ ಮಾಡಲಾಗುತ್ತಿದೆ. ಮಂದಿರದ ಮೇಲುಕಟ್ಟಡ ನಿರ್ಮಾಣಕ್ಕೆ 4.75 ಲಕ್ಷ ಕ್ಯೂಬಿಕ್ ಅಡಿ ಮರಳುಗಲ್ಲು ಬಳಸಲಾಗುತ್ತದೆ. ಗರ್ಭಗುಡಿಯ ಮೊದಲ ಮಹಡಿಯ ನಿರ್ಮಾಣವೂ ಬಹುತೇಕ ಪೂರ್ಣವಾಗಿದೆ ಎಂದು ತಿಳಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ಆನೆ ಆಮೇಲೆ, ಮೊದಲು ಮರಿಯಾನೆಯನ್ನು ಅರಗಿಸಿಕೊಳ್ಳಲಿ: ಯೋಗೇಶ್ವರ್‌ಗೆ ನಿಖಿಲ್ ಟಾಂಗ್

    ಆನೆ ಆಮೇಲೆ, ಮೊದಲು ಮರಿಯಾನೆಯನ್ನು ಅರಗಿಸಿಕೊಳ್ಳಲಿ: ಯೋಗೇಶ್ವರ್‌ಗೆ ನಿಖಿಲ್ ಟಾಂಗ್

    ರಾಮನಗರ: ವಿಧಾನಸಭಾ ಚುನಾವಣೆ ಸಮೀಪದ ಹಿನ್ನೆಲೆ ಚನ್ನಪಟ್ಟಣ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಜೆಡಿಎಸ್ (JDS) ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumarswamy) ಹಾಗೂ ಮಾಜಿ ಸಚಿವ ಸಿ.ಪಿ ಯೋಗೇಶ್ವರ್ (CP Yogeshwara) ನಡುವಿನ ವಾಕ್ಸಮರ ತಾರಕಕ್ಕೇರಿದೆ. ಅಂಬಾರಿಯನ್ನು ಆನೆ ಹೊರೋದು, ಮರಿಯಾನೆ ಹೊರಲ್ಲ ಎಂದಿದ್ದ ಸಿ.ಪಿ ಯೋಗೇಶ್ವರ್‌ಗೆ ನಿಖಿಲ್ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಆನೆ ಆಮೇಲೆ, ಮೊದಲು ಮರಿಯಾನೆಯನ್ನು ಜೀರ್ಣಿಸಿಕೊಳ್ಳಲಿ. ಇನ್ನು 6 ತಿಂಗಳು ಕಾದರೆ ಸಿ.ಪಿ ಯೋಗೀಶ್ವರ್ ಮಾಜಿ ಶಾಸಕರಾಗಿಯೇ ಉಳಿಯಲಿದ್ದಾರೆ ಎಂದು ಕಿಡಿಕಾರಿದ್ದಾರೆ.

    ನಗರದಲ್ಲಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ರಾಮನಗರ ಜಿಲ್ಲೆಯನ್ನಾಗಿ ಮಾಡಿದ್ದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ. ನಮ್ಮ ಜನರ ಸಂಕಷ್ಟ ಕೇಳುವುದಕ್ಕೆ ಯಾರ ಅಪ್ಪಣೆಯೂ ಬೇಕಿಲ್ಲ. ರಾಮನಗರ ಜಿಲ್ಲೆಯ ಜನರ ಜೊತೆಗೆ ಅವಿನಾಭಾವ ಸಂಬಂಧವಿದೆ. ಹೀಗಾಗಿ ಇಲ್ಲಿನ ಜನರ ಕಷ್ಟಸುಖದಲ್ಲಿ ನಾನು ಭಾಗಿಯಾಗುವೆ ಎಂದು ನಿಖಿಲ್ ಹೇಳಿದರು. ಇದನ್ನೂ ಓದಿ: ಸರ್ಕಾರಿ ನೌಕರರರಿಗೆ ಸಿಹಿ ಸುದ್ದಿ – 7ನೇ ವೇತನ ಆಯೋಗ ಜಾರಿ

    ಪ್ರಜಾಪ್ರಭುತ್ವದಲ್ಲಿ ಯಾರು ಎಲ್ಲಿ ಬೇಕಾದರೂ ಹೋಗಬಹುದು. ಚನ್ನಪಟ್ಟಣ ನಮ್ಮ ತಂದೆ ಪ್ರತಿನಿಧಿಸುವ ಕ್ಷೇತ್ರ. ನನಗೆ ನನ್ನ ಇತಿಮಿತಿಯ ಅರಿವು ಇದೆ. ಜೆಡಿಎಸ್ ಯುವ ಘಟಕದ ಜವಾಬ್ದಾರಿ ನನ್ನ ಮೇಲಿದೆ. ಪಕ್ಷ ಸಂಘಟನೆ ಮಾಡುವ ಜವಾಬ್ದಾರಿ ಕೊಟ್ಟಿದ್ದಾರೆ. ಜೊತೆಗೆ ಪಂಚರತ್ನ ಹೆಚ್.ಡಿ ಕುಮಾರಸ್ವಾಮಿ ಅವರ ಜನಪರ ಯೋಜನೆ. ರಾಜ್ಯದ ಎಲ್ಲಾ ಕಡೆ ಪಂಚರತ್ನ ಯಾತ್ರೆ ಸಂಚರಿಸಲಿದೆ. ಹೀಗಾಗಿ ಇಲ್ಲಿ ಕುಮಾರಸ್ವಾಮಿಯವರು ಹೆಚ್ಚು ತೊಡಗಿಸಿಕೊಳ್ಳಲು ಸಾಧ್ಯವಿಲ್ಲ. ಅವರ ಅನುಪಸ್ಥಿತಿಯಲ್ಲಿ ಇಲ್ಲಿನ ಜನರ ಜೊತೆಗೆ ನಿಲ್ಲುವೆ ಎಂದಿದ್ದಾರೆ.

    ಯೋಗೇಶ್ವರ್ ತಿರುಗೇಟು:
    ನಿಖಿಲ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿ.ಪಿ ಯೋಗೇಶ್ವರ್, ನಾಲ್ಕುವರೆ ವರ್ಷಗಳಿಂದ ನಿಖಿಲ್ ಕುಮಾರಸ್ವಾಮಿ ಎಲ್ಲಿದ್ರು? ಚುನಾವಣೆಗೆ 6 ತಿಂಗಳಿರುವಾಗ ಕ್ಷೇತ್ರಕ್ಕೆ ಬರುತ್ತಿದ್ದಾರೆ. ಕಾರ್ಯಕರ್ತರ ಮನೆಗೆ ಭೇಟಿ ನೀಡುತ್ತಿದ್ದಾರೆ. ಆದರೆ ಅವರಿಗೆ ಕ್ಷೇತ್ರದ ಮೇಲೆ ನಿಜವಾದ ಕಾಳಜಿ ಇಲ್ಲ. ಈಗ ಕ್ಷೇತ್ರಕ್ಕೆ ಬರುತ್ತಿರುವುದು ಪೊಲಿಟಿಕಲ್ ಗಿಮಿಕ್. ಚುನಾವಣೆ ದೃಷ್ಟಿಯಿಂದ ಕ್ಷೇತ್ರದಲ್ಲಿ ಓಡಾಟ ಮಾಡುತ್ತಿದ್ದಾರೆ. ಅವರ ಪಕ್ಷ ಸಂಘಟನೆಗೆ ನಮ್ಮ ಯಾವುದೇ ಅಭ್ಯಂತರ ಇಲ್ಲ. ಮುಂದೆ ನಾನು ಹಾಲಿ ಆಗಬೇಕಾ, ಮಾಜಿ ಆಗಬೇಕಾ ಎಂಬುದನ್ನು ಜನ ತೀರ್ಮಾನ ಮಾಡುತ್ತಾರೆ. ಅವರ ಹಾಗೆ ಕಲ್ಲು, ಮೊಟ್ಟೆ ಹೊಡೆಯುವ ಸಂಸ್ಕೃತಿ ನಮ್ಮದಲ್ಲ ಎಂದು ನಿಖಿಲ್ ಕುಮಾರಸ್ವಾಮಿಗೆ ಟಾಂಗ್ ನೀಡಿದ್ದಾರೆ. ಇದನ್ನೂ ಓದಿ: ನನ್ನ ತೇಜೋವಧೆ ಆಗ್ತಿದೆ – ವಿವಾದಿತ ಹೇಳಿಕೆಯನ್ನು ಹಿಂಪಡೆದ ಸತೀಶ್ ಜಾರಕಿಹೊಳಿ

    Live Tv
    [brid partner=56869869 player=32851 video=960834 autoplay=true]