Tag: cowslaughter

  • ಮಣಿಪಾಲದಲ್ಲಿ ಗೂಳಿ ಮೇಲೆ ತಲ್ವಾರ್ ದಾಳಿ- ಚಿಂತಾಜನಕ ಸ್ಥಿತಿಯಲ್ಲಿ ಮೂಕ ಪ್ರಾಣಿ!

    ಮಣಿಪಾಲದಲ್ಲಿ ಗೂಳಿ ಮೇಲೆ ತಲ್ವಾರ್ ದಾಳಿ- ಚಿಂತಾಜನಕ ಸ್ಥಿತಿಯಲ್ಲಿ ಮೂಕ ಪ್ರಾಣಿ!

    ಉಡುಪಿ: ಅಕ್ರಮ ಕಸಾಯಿಖಾನೆಗೆ ಕೊಂಡೊಯ್ಯಲು ತಲವಾರಿನಿಂದ ಗೂಳಿಗೆ ಕಡಿದ ಘಟನೆ ಉಡುಪಿಯ ಮಣಿಪಾಲದಲ್ಲಿ ನಡೆದಿದೆ.

    ಎರಡು ದಿನಗಳ ಹಿಂದೆ ಕಸಾಯಿಖಾನೆಯ ಗುಂಪೊಂದು ಮಣಿಪಾಲದಲ್ಲಿ ಹೊರಿಯನ್ನು ಟೆಂಪೋದೊಳಗೆ ತುಂಬಿಸಲು ಯತ್ನಿಸಿತ್ತು. ಈ ಸಂದರ್ಭ ಗೂಳಿ ಸಹಕರಿಸದಿದ್ದಾಗ ದುಷ್ಕರ್ಮಿಗಳು ತಲ್ವಾರಿನಿಂದ ಕಡಿದಿದ್ದಾರೆ. ತೀವ್ರ ಸ್ವರೂಪದಲ್ಲಿ ಗಾಯಗೊಂಡು ಅಸ್ವಸ್ಥ ಸ್ಥಿತಿಯಲ್ಲಿ ಬಿದ್ದಿದ್ದ ಗೂಳಿಯನ್ನು ಸಮಾಜ ಸೇವಕ ನಿತ್ಯಾನಂದ ರಕ್ಷಿಸಿದ್ದಾರೆ.

    ಮಣಿಪಾಲ ವಿವಿಯ ವಿದ್ಯಾರ್ಥಿಗಳು ಈ ಮಾನವೀಯ ಕಾರ್ಯಕ್ಕೆ ಸಹಕಾರ ನೀಡಿದ್ದಾರೆ. ಮಣಿಪಾಲದ ಎಂ.ಐ.ಸಿ ಬಳಿ ಗೂಳಿಯೊಂದು ಮಾರಕಾಯುಧಗಳಿಂದ ಕಡಿದ ರೀತಿಯಲ್ಲಿ ಗಂಭೀರ ಸ್ವರೂಪದಲ್ಲಿ ಗಾಯಗೊಂಡು ರಸ್ತೆ ಬದಿಯಲ್ಲಿ ಒದ್ದಾಡುತ್ತಿತ್ತು. ಮಣಿಪಾಲ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಹಾಗೂ ಈ ಪರಿಸರದ ನಿವಾಸಿಗಳು ಹೋರಿಗೆ ಔಷದೋಪಚಾರ ಮಾಡಿದ್ದಾರೆ.

    ಹೋರಿಯು ಚಿಂತಾಜನಕ ಸ್ಥಿತಿಗೆ ತಲುಪಿದಾಗ ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ನೀಡಿ ಹೋರಿಯನ್ನು ರಕ್ಷಿಸುವಂತೆ ಫೋನ್ ಕರೆ ಮೂಲಕ ಕಾಲೇಜು ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ. ವಿದ್ಯಾರ್ಥಿಗಳ ಕರೆಗೆ ಸ್ಪಂದಿಸಿದ ನಿತ್ಯಾನಂದ, ವಿನಯಚಂದ್ರ ಹೋರಿಯ ರಕ್ಷಣೆಗೆ ಮುಂದಾದರು.

    ಹೋರಿಗೆ ಪ್ರಾಥಮಿಕ ಚಿಕಿತ್ಸೆಯನ್ನು ಡಾ. ಪ್ರಶಾಂತ್ ನೀಡಿದರು. ಸದ್ಯ ಬ್ರಹ್ಮಾವರದ ನೀಲಾವರ ಗೋ ಶಾಲೆಗೆ ಗೂಳಿಯನ್ನು ರವಾನಿಸಲಾಗಿದೆ. ಉಡುಪಿ ಅಗ್ನಿ ಶಾಮಕ ದಳ ಹಾಗೂ ಸಾರ್ವಜನಿಕ ನೆರವಿನಿಂದ ಹೊರಿಯನ್ನು ವಿನೋದ್ ನಾಯಕ್ ಇವರ ವಾಹನದಲ್ಲಿ ಉಚಿತವಾಗಿ ಸಾಗಿಸಲಾಯಿತು.

     

  • ಗೋಹತ್ಯೆ ಪರ ಇರೋರಿಗೆ ಡೈಲಾಗ್ ನಲ್ಲೇ ಟಾಂಗ್ ಕೊಟ್ಟ ನಟ ಜಗ್ಗೇಶ್

    ಗೋಹತ್ಯೆ ಪರ ಇರೋರಿಗೆ ಡೈಲಾಗ್ ನಲ್ಲೇ ಟಾಂಗ್ ಕೊಟ್ಟ ನಟ ಜಗ್ಗೇಶ್

    ಬೆಂಗಳೂರು: ಗೋಹತ್ಯೆ ಪರ ಇರುವವರಿಗೆ ನವರಸ ನಾಯಕ ನಟ ಜಗ್ಗೇಶ್ ತಮ್ಮ ಡೈಲಾಗ್‍ನಲ್ಲೇ ಟಾಂಗ್ ನೀಡಿದ್ದಾರೆ.

    ಹಿಂದೂಗಳ ಬಗ್ಗೆ ದೇವರು, ನಂಬಿಕೆ ಬಗ್ಗೆ ಮಾಧ್ಯಮಗಳಲ್ಲಿ ಗಂಟೆಗಟ್ಟಲೆ ಚರ್ಚೆ ಮಾಡ್ತಾರೆ. ಇದನ್ನ ಜನ ಕಣ್ಣು ಬಿಟ್ಟು ನೋಡ್ತಾರೆ. ಈ ಮನಸ್ಥಿತಿಯನ್ನು ಮೊದಲು ಜನ ಬದಲಿಸಿಕೊಳ್ಳಬೇಕು. ಭಗವದ್ಗೀತೆ ಎಲ್ಲಿದೆ, ದೇವರು ಎಲ್ಲಿದೆ. ಆದ್ರೂ ನಾವು ಗೋಮಾಂಸ ತಿನ್ನುತ್ತೇವೆ ಅಂತಾರೆ ಎಂದು ನಟ ಕಿಡಿಕಾರಿದ್ದಾರೆ.

    ಇದನ್ನೂ ಓದಿ: ಅನುಮತಿಯಿಲ್ಲದೇ ಸರ್ಕಾರಿ ಸಭಾಂಗಣದಲ್ಲಿ ಗೋಮಾಂಸ ಸೇವನೆ- ನೊಟೀಸ್ ಜಾರಿಗೆ ಡಿಸಿ ನಿರ್ಧಾರ

    ಬೇರೆ ಧರ್ಮದ ಬಗ್ಗೆ ಯಾರಾದ್ರು ಮಾತಾಡಿದ್ರೆ ದೊಡ್ಡ ಗಲಾಟೆಗಳೇ ನಡೆದು ಹೋಗುತ್ತವೆ. ಯಾರೊಬ್ಬರೂ ಬೇರೆ ಧರ್ಮದ ಬಗ್ಗೆ ಪ್ರಶ್ನೆ ಮಾಡುವುದಿಲ್ಲ. ಹಿಂದೂಗಳು ಮಾತ್ರ ಇಂದು ಕಲಬೆರೆಕೆಗಳು ಆಗಿದ್ದಾರೆ ಅಂತಾ ಗೋಮಾಂಸ ತಿನ್ನುವವರ ವಿರುದ್ಧ ಜಗ್ಗೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    https://www.youtube.com/watch?v=NhSD2P0Arr4