Tag: cowpea curry

  • ಅಲಸಂಡೆ ಕಾಳಿನ ಸಾರು ಅನ್ನದ ಜೊತೆಗೆ ಸೂಪರ್

    ಅಲಸಂಡೆ ಕಾಳಿನ ಸಾರು ಅನ್ನದ ಜೊತೆಗೆ ಸೂಪರ್

    ನಾವು ತಿನ್ನುವ ಆಹಾರ ರುಚಿಯಾಗಿ ಮತ್ತು ಆರೋಗ್ಯವಾಗಿ ಇರಬೇಕು ಎಂದು ನಾವು ಬಯಸುತ್ತೇವೆ. ಕಡಿಮೆ ಕ್ಯಾಲೋರಿಯ, ರುಚಿಕರವಾದ ಆಹಾರವನ್ನು ತಿನ್ನ ಬಯಸುವುದಾದರೆ ಈ ಅಲಸಂಡೆ ಕಾಳಿನ ಸಾರು ಮಾಡಬಹುದು. ಸುಲಭವಾಗಿ ಮಾಡುವ ವಿಧಾನ ಈ ಕೆಳಗಿನಂತಿದೆ.

    ಬೇಕಾಗುವ ಸಾಮಗ್ರಿಗಳು:
    * ಅಲಸಂಡೆ ಕಾಳು -1 ಕಪ್
    * ಈರುಳ್ಳಿ 1
    * ಕ್ಯಾರೆಟ್ 2
    * ಬೆಳ್ಳುಳ್ಳಿ- 4-5 ಎಸಳು
    * ಶುಂಠಿ – ಸ್ವಲ್ಪ
    * ಟೊಮೆಟೊ -1
    * ಜೀರಿಗೆ- 1 ಚಮಚ
    * ಅರಿಶಿಣ ಪುಡಿ -ಅರ್ಧ ಚಮಚ
    * ಮೆಣಸಿನ ಪುಡಿ- ಅರ್ಧ ಚಮಚ
    * ಪಲಾವ್ ಎಲೆ- 1
    * ತುಪ್ಪ- 1 ಚಮಚ
    * ರುಚಿಗೆ ತಕ್ಕ ಉಪ್ಪು
    * ನಿಂಬೆ ರಸ ಸ್ವಲ್ಪ
    * ಕೊತ್ತಂಬರಿ ಸೊಪ್ಪು- ಸ್ವಲ್ಪ ಇದನ್ನೂ ಓದಿ:  ನಾಲಿಗೆ ಚಪ್ಪರಿಸಿ ತಿನ್ನುವ ಶುಂಠಿ ಉಪ್ಪಿನಕಾಯಿ ಮಾಡುವ ವಿಧಾನ

    ಮಾಡುವ ವಿಧಾನ:
    * ಅಲಸಂದೆ ಕಾಳನ್ನು ರಾತ್ರಿಯಲ್ಲಿ ನೆನೆ ಹಾಕಬೇಕು. ನಂತರ ಅಲಸಂದೆ ಕಾಳು ಮತ್ತು ಕ್ಯಾರೆಟ್ ಸ್ವಲ್ಪ ಉಪ್ಪು ಹಾಕಿ ಬೇಯಿಸಬೇಕು.
    * ಬಾಣಲೆಗೆ ತುಪ್ಪ ಹಾಕಬೇಕು. ತುಪ್ಪ ಬಿಸಿಯಾದಾಗ ಜೀರಿಗೆ, ಕತ್ತರಿಸಿದ ಈರುಳ್ಳಿ ಹಾಕಿ ಸ್ವಲ್ಪ ಕಂದು ಬಣ್ಣ ಬರುವವರೆಗೆ ಹುರಿಯಬೇಕು.

    * ನಂತರ ಬೆಳ್ಳುಳ್ಳಿ, ಶುಂಠಿ, ಪಲಾವ್ ಎಲೆ ಹಾಕಿ ಸ್ವಲ್ಪ ಹುರಿದು, ಟೊಮೆಟೊ ಹಾಕಿ ಮೆತ್ತಗಾಗುವವರೆಗೆ ಹುರಿಯಬೇಕು.
    * ಚಿಟಿಕೆಯಷ್ಟು ಇಂಗು, ಬೇಯಿಸಿದ ಅಲಸಂಡೆ, ಕ್ಯಾರೆಟ್, ಉಪ್ಪು, ಅರಿಶಿಣ ಪುಡಿ, ಖಾರದ ಪುಡಿ ಹಾಕಿ ಕುದಿಸಬೇಕು. ನಂತರ ಸ್ವಲ್ಪ ನಿಂಬೆ ರಸ ಹಿಂಡಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಅಲಸಂದೆ ಕರಿ ಸಿದ್ಧವಾಗುತ್ತದೆ.